‘ಕೃಷ್ಣ ಸ್ಮರಣ’ ಎಂಬ ಈ ಕೃತಿಯು ದಿ| ಕೆರೇಕೈ ಕೃಷ್ಣ ಭಟ್ಟರ ಸಂಸ್ಮರಣ ಗೌರವ ಗ್ರಂಥವು. ಈ ಗ್ರಂಥವು 2009ರಲ್ಲಿ ಪ್ರಕಟವಾಗಿತ್ತು. ಪ್ರಕಾಶಕರು ದಿ| ಕೆರೇಕೈ ಕೃಷ್ಣ ಭಟ್ಟ ಸಂಸ್ಮರಣ ಸಮಿತಿ, ಶಿರಸಿ. ಸಂಪಾದಕರು ಶ್ರೀ ಎಸ್. ಪಿ. ಶೆಟ್ಟಿ. ದಿ| ಕೆರೇಕೈ ಕೃಷ್ಣ ಭಟ್ಟರು ಹಿರಿಯ ಖ್ಯಾತ ತಾಳಮದ್ದಳೆ ಅರ್ಥಧಾರಿಗಳು. ಅಲ್ಲದೆ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಶ್ರೀಯುತರ ಕುರಿತಾಗಿ ಹೀಗೊಂದು ಸಂಸ್ಮರಣಾ ಗೌರವ ಗ್ರಂಥವು ಪ್ರಕಟವಾದುದು ಅತ್ಯಂತ ಸಂತೋಷದ ವಿಚಾರವು.
ಸಂಪಾದಕ ಶ್ರೀ ಎಸ್.ಪಿ. ಶೆಟ್ಟರು ಬರಹದಲ್ಲಿ ಕೆರೇಕೈ ಅವರು ಕಲಾ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡಿದ ಮಹನೀಯರೆಂಬುದನ್ನು ತಿಳಿಸಿರುತ್ತಾರೆ. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ರಾಮಚಂದ್ರಾಪುರ ಮಠ, ಶ್ರೀ ಮದೆಡನೀರು ಮಠ, ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠಾಧೀಶರು, ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗಡೆ, ಶ್ರೀ ಕ್ಷೇತ್ರ ಹೊರನಾಡಿನ ಜಿ. ಭೀಮೇಶ್ವರ ಜೋಶಿ, ಇವರುಗಳ ಅನುಗ್ರಹ ಸಂದೇಶಗಳನ್ನು ನೀಡಲಾಗಿದ್ದು ಬಳಿಕ ಇಪ್ಪತ್ಮೂರು ಛಾಯಾಚಿತ್ರಗಳನ್ನು ನೀಡಿರುತ್ತಾರೆ.
ಈ ಸಂಸ್ಮರಣಾ ಗೌರವ ಗ್ರಂಥವು ಮೂರು ಭಾಗಗಳಿಂದ ಕೂಡಿದೆ. ಭಾಗ ಒಂದು – ಒಲವು. ಅರ್ಥಗಾರಿಕೆ ಅಂದು-ಇಂದು. ಇಲ್ಲಿ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ, ಕಬ್ಬಿನಾಲೆ ವಸಂತ ಭಾರದ್ವಾಜ, ಕೆ.ಎಂ.ರಾಘವ ನಂಬಿಯಾರ್, ಲಕ್ಷ್ಮೀಶ ತೋಳ್ಪಾಡಿ, ಎಂ. ಪ್ರಭಾಕರ ಜೋಶಿ, ಕಾಶ್ಯಪ ಪರ್ಣಕುಟಿ, ತೆಕ್ಕಟ್ಟೆ ಆನಂದ ಮಾಸ್ತರ್, ಕೃಷ್ಣ ಗಣಪತಿ ಭಟ್ಟ ಇವರುಗಳ ಲೇಖನಗಳಿವೆ. ಭಾಗ ಎರಡು – ಬದುಕು. ಇಲ್ಲಿ ಕೆರೇಕೈ ಉಮಾಕಾಂತ ಭಟ್ಟ, ಮತ್ತು ಎಂ.ಎ. ಹೆಗಡೆ ಸಿದ್ದಾಪುರ ಇವರ ಲೇಖನಗಳಿವೆ.
ಭಾಗ ಮೂರು – ನೆನಪು – ಇಲ್ಲಿ ಅಂಬಾತನಯ ಮುದ್ರಾಡಿ, ಮಹಾಬಲ ಹೆಗಡೆ ಕೆರೆಮನೆ, ಹರಿದಾಸ ರಾಮದಾಸ ಸಾಮಗ, ಕೆರೆಮನೆ ಶಂಭು ಹೆಗಡೆ, ಹೊಸಬಾಳೆ ಸೀತಾರಾಮ ರಾವ್, ವಿ. ತಿ. ಶೀಗೇಹಳ್ಳಿ, ಹೊಸ್ತೋಟ ಮಂಜುನಾಥ ಭಾಗವತ, ರಾಮಕೃಷ್ಣ ಜೋಶಿ ಮೈಸೂರು, ಅನಂತ ಶಿವರಾಮ ಹೆಗಡೆ ಕಾಗೇರಿ, ಮೊಣಕಾಲ್ಮೂರು ಶ್ರೀನಿವಾಸ ಮೂರ್ತಿ, ಶಾ. ಮಂ. ಕೃಷ್ಣರಾಯ, ಲಕ್ಷ್ಮೀನಾರಾಯಣ ಹೆಗಡೆ, ,ಜಯರಾಮ ಹೆಗಡೆ, ಎನ್. ಪಿ. ಗಾಂವಕರ, ಎಸ್.ಆರ್.ದೇಸಾಯಿ, ಎಸ್.ಪಿ.ಶೆಟ್ಟಿ, ಸವಿತಾ ಭಟ್ಟ ಉಡುಪಿ, ಶೈಲಜಾ ಹೆಗಡೆ, ಹರಿದಾಸ ನಿವಣೆ ಗಣೇಶ ಭಟ್ಟ, ರಮಾನಂದ ಬನಾರಿ, ಅನಂತ ಶರ್ಮ ಭುವನಗಿರಿ, ಕಡತೋಕ ಮಂಜುನಾಥ ಭಾಗವತ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ನೆಬ್ಬೂರು ನಾರಾಯಣ ಭಾಗವತ, ಗೋಪಾಲಕೃಷ್ಣ ನಾಯಕ ಹುಬ್ಬಳ್ಳಿ, ದಿವಾಕರ ಹೆಗಡೆ, ಎ. ಜಿ. ಗೋಪಾಲಕೃಷ್ಣ, ಮೋಹನ ಭಾಸ್ಕರ ಹೆಗಡೆ, ಟಿ.ಎಂ. ಸುಬ್ಬರಾಯ, ಜಬ್ಬಾರ್ ಸಮೋ, ನಾರಾಯಣ ಯಾಜಿ ಸಾಲೇಬೈಲು, ಕದ್ರಿ ನವನೀತ ಶೆಟ್ಟಿ, ಎಂ. ಎನ್. ಹೆಗಡೆ ಹಳವಳ್ಳಿ, ಕೆ.ಜಿ. ಭಟ್ಟ ದಮನಬೈಲ್, ಎಚ್.ಬಿ.ಎಲ್.ರಾವ್ ಮುಂಬಯಿ ಇವರುಗಳ ಲೇಖನಗಳನ್ನು ನೀಡಲಾಗಿದೆ.
ದಿ| ಕೆರೇಕೈ ಕೃಷ್ಣ ಭಟ್ಟರ ಸುಪುತ್ರ ವಿದ್ವಾನ್ ಶ್ರೀ ಕೆರೇಕೈ ಉಮಾಕಾಂತ ಭಟ್ಟರು ವಾಗ್ಮಿಗಳಾಗಿ, ಸಂಸ್ಕೃತ ಭಾಷಾ ಕೋವಿದರಾಗಿ, ಲೇಖಕರಾಗಿ, ಶ್ರೇಷ್ಠ ಅರ್ಥಧಾರಿಯಾಗಿ, ಸರಳ ಸಜ್ಜನರಾಗಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದು ನಮಗೆಲ್ಲಾ ಸಂತಸವನ್ನು ಕೊಡುವ ವಿಚಾರವು.
ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ