ಯಕ್ಷಗಾನದ ಭೀಷ್ಮರೆಂದೇ ಖ್ಯಾತರಾದ ಹರಿದಾಸ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಆತ್ಮ ಚರಿತ್ರೆ ‘ಯಕ್ಷಗಾನ ಮತ್ತು ನಾನು’ ಮೊತ್ತ ಮೊದಲು ಪ್ರಕಟವಾಗಿ ಓದುಗರ ಕೈ ಸೇರಿದ್ದು 1981ರಲ್ಲಿ. ಇದು ದ್ವಿತೀಯ ಮುದ್ರಣ. 2006ರಲ್ಲಿ. ಈ ಆತ್ಮಚರಿತ್ರೆಯ ಪ್ರಕಾಶಕರು ಕಲ್ಕೂರ ಪ್ರಕಾಶನ ಮಂಗಳೂರು. 1981ರಲ್ಲಿ ನಡೆದ ಮೊದಲ ಮುದ್ರಣದ ಪ್ರಕಾಶಕರು ಪುತ್ತೂರಿನ ಕನ್ನಡ ಸಂಘ. ಈ ವಿಚಾರವನ್ನು ಪ್ರಕಾಶಕರಾದ ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರ ಅವರು ತಮ್ಮ ‘ಪ್ರಕಾಶಕರ ಮಾತು’ ಎಂಬ ಲೇಖನದಲ್ಲಿ ತಿಳಿಸಿರುತ್ತಾರೆ. ಅಲ್ಲದೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಮಹನೀಯರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.
ಈ ಕೃತಿಯು ಒಟ್ಟು ಇನ್ನೂರ ನಲುವತ್ತೆರಡು ಪುಟಗಳಿಂದ ಕೂಡಿದೆ. ಶ್ರೀ ಶೇಣಿಯವರು ಬರೆದ ‘ಮೊದಲ ಮಾತು’ ಎಂಬ ಶೀರ್ಷಿಕೆಯಡಿಯ ಲೇಖನದಿಂದ ಆರಂಭಗೊಳ್ಳುವ ಆತ್ಮಚರಿತ್ರೆಯು ಪರಿಸರ, ಹೊಸ ಬಯಕೆಯ ಒಕ್ಕಲು, ಯಕ್ಷಲೋಕದ ಹಾದಿಯಲ್ಲಿ, ಸಂಚಾಲಕ ಮತ್ತು ನಟನಾಗಿ, ವಿವೇಚನೆ-ನಿವೇದನೆ ಎಂಬ ವಿಭಾಗಗಳಿಂದ ಕೂಡಿದೆ. ಬಳಿಕ ಶ್ರೀ ಈಶ್ವರಯ್ಯ, ಶ್ರೀ ಹಾ.ಮಾ. ನಾಯಕ,ಇವರುಗಳ ಪ್ರಕಟಿತ ಲೇಖನಗಳನ್ನು ನೀಡಲಾಗಿದೆ. ಬಳಿಕ ಶ್ರೀ ಶೇಣಿಯವರ ಮೊಮ್ಮಗ ಶೇಣಿ ಬಾಲಮುರಳಿಕೃಷ್ಣ ಅವರ ‘ಬರೆಯುವ ಮುನ್ನ’ ಎಂಬ ಲೇಖನವಿದೆ. ಬಳಿಕ ಸುಮಾರು ನಲುವತ್ತೈದು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಲಾಗಿದೆ.
ಬಳಿಕ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಬರೆದ ಆತ್ಮಚರಿತ್ರೆ’ ಮತ್ತು ‘ನನ್ನವರೇ’ ಎಂಬ ಲೇಖನಗಳನ್ನು ನೀಡಿರುತ್ತಾರೆ. ಬಳಿಕ ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರರು ಬರೆದ ‘ವಿದ್ವಾನ್ ಸರ್ವತ್ರ ಪೂಜ್ಯತೇ.. ಪರ್ಯಾಯ ಪದ ಶೇಣಿ’ ಎಂಬ ಲೇಖನವನ್ನೂ ಶೇಣಿ ಬಾಲಮುರಳಿಕೃಷ್ಣ ಅವರು ಬರೆದ ‘ಬರೆದ ಅನಂತರ’ ಎಂಬ ಬರಹಗಳನ್ನೂ ನೀಡಲಾಗಿದೆ. ಅಲ್ಲದೆ ಶೇಣಿಯವರು ನಿರ್ವಹಿಸಿದ ಹಲವಾರು ಪಾತ್ರಗಳ ಕಪ್ಪು ಬಿಳುಪಿನ ಚಿತ್ರಗಳನ್ನೂ ಹಿರಿಯ ಒಡನಾಡಿ ಕಲಾವಿದರ ಚಿತ್ರಗಳನ್ನೂ ಕೊಡಲಾಗಿದೆ.
ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ
ಪುಸ್ತಕ ಪರಿಚಯ ಮಾಹಿತಿ ನೀಡುವಾಗ ಪುಸ್ತಕದ ಲಭ್ಯತೆ ಹಾಗೂ ದೊರಕುವ ಸ್ತಳ ನೀಡ ಬೇಕೆಂದು ವಿನಂತಿ.
ಸರ್ ನನಗೆ ಯಕ್ಷಗಾನ ಮತ್ತು ನಾನು ಪುಸ್ತಕ ಖರೀದಿ ಮಾಡಬೇಕಿತ್ತು ಎಲ್ಲಿ ಸಿಗಬಹುದು
Nava Karnataka Publications, Balamatta Mangalore