ಹಾಸ್ಯರತ್ನ ನಯನ ಕುಮಾರ್ – ಸಂಕ್ಷಿಪ್ತ ಮಾಹಿತಿ ಹೆಸರು: ನಯನ ಕುಮಾರ್ ( ಬಾಲ್ಯದ ಹೆಸರು ನಾರಾಯಣ ಭಟ್) ಜನನ: 1948ನೇ ಇಸವಿಯಲ್ಲಿ ಜನನ ಸ್ಥಳ: ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಡಾಲುಮೇರ್ಕಳ ಗ್ರಾಮದ ಎಡಕ್ಕಾನ ಎಂಬಲ್ಲಿ ತಂದೆ ತಾಯಿ: ತಂದೆ ಶ್ರೀ ವೆಂಕಟ್ರಮಣ ಭಟ್ . ತಾಯಿ ಶ್ರೀಮತಿ ಪರಮೇಶ್ವರೀ ಅಮ್ಮ ಪತ್ನಿ: ಶ್ರೀಮತಿ ಸೀತಾ
ಯಕ್ಷಗಾನ ಗುರುಗಳು: ಪ್ರಸಿದ್ಧ ಮದ್ದಳೆಗಾರರಾಗಿದ್ದ ನೆಡ್ಲೆ ನರಸಿಂಹ ಭಟ್ಟರಿಂದ ಮದ್ದಳೆವಾದನ ಕಲಿಕೆ, ಕಟೀಲು ಮೇಳದ ಒಂದು ವರ್ಷದ ತಿರುಗಾಟದ ನಂತರ ಅಧ್ಯಾಪಕರಾದ ವಿಟ್ಲ ವಿಠಲ ಶೆಟ್ಟರಿಂದ ಶಾಸ್ತ್ರೀಯ ನಾಟ್ಯವನ್ನು ಕಲಿತು ಇದನ್ನೇ ಯಕ್ಷಗಾನಕ್ಕೆ ಅಳವಡಿಸಿಕೊಂಡರು. ನಯನ ಕುಮಾರರ ಅಜ್ಜ ಅಂಗ್ರಿ ನಾರಾಯಣ ಭಾಗವತರು. (ಅಣ್ಣಯ್ಯ ಭಾಗವತರು). ಬಂಧುಗಳೂ, ಮನೆಯವರೂ ಕಲಾವಿದರಾಗಿದ್ದರು. ನಯನ ಕುಮಾರರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿತ್ತು. ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : 1977ರಲ್ಲಿ ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರಿ ರಸಿಕರತ್ನ ಜೋಷಿಯವರ ಶಿಷ್ಯನಾಗಿ ಕಲಿಕೆ ಮತ್ತು ಪೆರುವಡಿ ನಾರಾಯಣ ಭಟ್ಟರಿಂದಲೂ ಮಾರ್ಗದರ್ಶನ. ಹಾಗೂ ಇತರ ಹಿರಿಯ ಕಲಾವಿದರಿಂದ ಮಾರ್ಗದರ್ಶನ.
ಅನುಭವ: ಕಟೀಲು ಮೇಳದಲ್ಲಿ ಒಂದು ವರ್ಷ ತಿರುಗಾಟ. ಬಳಿಕ ಸುಂಕದಕಟ್ಟೆ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಸೇವೆ. ನಿತ್ಯವೇಷದ ತನಕ ಮದ್ದಳೆ ಬಾರಿಸಿ ನಂತರ ಹಾಸ್ಯದ ಎಲ್ಲಾ ಪಾತ್ರ ನಿರ್ವಹಣೆ. 1977ರಿಂದ ಸತತ 27 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ.
ಇಷ್ಟಪಡುತ್ತಿದ್ದ ಪಾತ್ರಗಳು: ಬಾಹುಕ, ಗುಹ, ಬೇಹಿನಚರ, ನಾರದ, ಸಂಜಯ ಮುಂತಾದ ಹಾಸ್ಯ ಹಾಗೂ ಗಂಭೀರ ಪಾತ್ರಗಳು.
ಮಕ್ಕಳು: ಹಿರಿಯ ಪುತ್ರಿ ರೇಖಾ ವಿವಾಹಿತೆ. ಪುತ್ರ ಉದಯ ವೆಂಕಟೇಶ ಪುತ್ತೂರಿನಲ್ಲಿ ವಾಸ (ಹಣಕಾಸು ಸಂಸ್ಥೆ ಉದ್ಯೋಗಿ). ಕಿರಿಯ ಪುತ್ರಿ ಕವಿತಾ ವಿವಾಹಿತೆ. ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: 2004ರಲ್ಲಿ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಮಹೋತ್ಸವದ ಸನ್ಮಾನ, ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಸನ್ಮಾನ, ಮುಂಬಯಿ ಕನ್ನಡ ಸಂಘದ ಮರಣೋತ್ತರ ಪ್ರಶಸ್ತಿ ಅಲ್ಲದೆ ಅನೇಕ ಸಂಘ ಸಂಸ್ಥೆಗಳ ಸನ್ಮಾನ, ದೆಹಲಿಯ ಕನ್ನಡ ಸಂಘದ ‘ರಸಿಕರತ್ನ’ ಎಂಬ ಬಿರುದು, 1994ರಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಧರ್ಮಸ್ಥಳ ಮೇಳದ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ‘ನರಕಾಸುರ ಮೋಕ್ಷ’ ಪ್ರದರ್ಶನದಲ್ಲಿ ರಾಷ್ಟ್ರಪತಿಗಳಿಂದ ಸಹಕಲಾವಿದರೊಂದಿಗೆ ಸನ್ಮಾನ.
ಹೊರನಾಡಿನಲ್ಲಿ ನಯನ ಕುಮಾರ್: ಅಬುದಾಭಿ, ಸೌದಿ, ಕುವೈಟ್, ದುಬಾಯಿ, ಜರ್ಮನಿ ಅಲ್ಲದೆ ಭಾರತದ ದೆಹಲಿ, ಮುಂಬಯಿ, ಬೆಂಗಳೂರು ಮೊದಲಾದ ನಗರಗಳಲ್ಲಿ ಯಕ್ಷಗಾನ ಪ್ರದಶನಗಳಲ್ಲಿ ಭಾಗವಹಿಸಿದ ಖ್ಯಾತಿ, ಅಲ್ಲಗೆ ಆಕಾಶವಾಣಿ ಮತ್ತು ದೂರದರ್ಶನದ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಯಕ್ಷಗಾನದಲ್ಲಿ ತಿರುಗಾಟ ಮಾಡುವ ಮೊದಲು ಬೆಂಗಳೂರಿನ ಮಾ| ಹಿರಣ್ಣಯ್ಯ ಅವರ ನಾಟಕ ತಂಡದಲ್ಲಿ ನಟನಾಗಿ ಅವರ ಮೆಚ್ಚುಗೆ ಗಳಿಸಿದ್ದರು. ನಿರ್ವಹಿಸಿದ ಪಾತ್ರಗಳು: ಎಲ್ಲಾ ಹಾಸ್ಯ ಪಾತ್ರಗಳು ಮತ್ತು ಬಾಹುಕ, ನಾರದ, ಸಂಜಯ ಇತ್ಯಾದಿ ಹಾಸ್ಯಗಾರರು ನಿರ್ವಹಿಸುವ ಪಾತ್ರಗಳು.
ವಿಶೇಷತೆಗಳು: ಇವರ ಪಾತ್ರ ಗಳಿರುವ 200ಕ್ಕೂ ಮಿಕ್ಕಿ ಧ್ವನಿಸುರುಳಿಗಳು ಬಿಡುಗಡೆಗೊಂಡಿವೆ. ಹೆಚ್ಚಿನ ಪ್ರಸಂಗಗಳಲ್ಲಿ ಒಂದು ರಾತ್ರಿಯಲ್ಲಿ ಎಂಟು, ಹತ್ತರಷ್ಟು ಪಾತ್ರಗಳನ್ನು ನಿರ್ವಹಿಸಿದ್ದೂ ಇದೆ. ಅದು ಹಲವಾರು ಬಾರಿ. ಅತಿ ವೇಗವಾಗಿ ಬಣ್ಣಗಾರಿಕೆ ಮಾಡಿ, ವೇಷಭೂಷಣ ಧರಿಸಿ ರಂಗ ಪ್ರವೇಶ ಮಾಡುವುದರಲ್ಲಿ ಎತ್ತಿದ ಕೈ.
ನಿಧನ: ನವಂಬರ್ 8, 2005ರಂದು ನಿಧನರಾದರು. ತಮ್ಮ ಕಲಾ ಜೀವನದ ಕೊನೆಯ ದಿನಗಳಲ್ಲಿ ಅನಾರೋಗ್ಯ ಪೀಡಿತರಾಗಿದ್ದ ಅವರು ಯಕ್ಷಗಾನದಿಂದ ಅನಿವಾರ್ಯ ನಿವೃತ್ತಿ ಪಡೆದಿದ್ದರು. ಎಲ್ಲರನ್ನೂ ನಗಿಸಿದ ನಯನ ಕುಮಾರ್ ತನ್ನ 58ನೆಯ ವಯಸ್ಸಿನಲ್ಲಿಯೇ ವಿಧಿವಶರಾದದ್ದು ಯಕ್ಷಗಾನ ರಂಗದ ಒಂದು ದೊಡ್ಡ ದುರಂತ.
ಲೇಖನ: ಮನಮೋಹನ್ ವಿ.ಎಸ್.