Saturday, January 18, 2025
Homeಪುಸ್ತಕ ಮಳಿಗೆನಾವರಿಯದ ದೇರಾಜೆ - ಸೀತಾರಾಮಯ್ಯನವರ ಸಾಧನೆಯ ಬೆಳಕು (Navariyada Deraje Seethramayyanavara sadhaneya Belaku)

ನಾವರಿಯದ ದೇರಾಜೆ – ಸೀತಾರಾಮಯ್ಯನವರ ಸಾಧನೆಯ ಬೆಳಕು (Navariyada Deraje Seethramayyanavara sadhaneya Belaku)

‘ ನಾವರಿಯದ ದೇರಾಜೆ ಸೀತಾರಾಮಯ್ಯನವರ ಸಾಧನೆಯ ಬೆಳಕು’ ಎಂಬ ಈ ಹೊತ್ತಗೆಯ ಲೇಖಕರು ಶ್ರೀ ಪ್ರಸಾದ್ ರಕ್ಷಿದಿ. ಇದು ದ್ವಿತೀಯ ಮುದ್ರಣವಾಗಿದ್ದು, ಮೊದಲೊಮ್ಮೆ ಕಾಂತಾವರ ಕನ್ನಡ ಸಂಘದವರಿಂದ ಮುದ್ರಿಸಲ್ಪಟ್ಟಿತ್ತು. (2014ರಲ್ಲಿ) ದ್ವಿತೀಯ ಮುದ್ರಣವೂ 2014 ರಲ್ಲಿಯೇ ನಡೆದಿತ್ತು. ದ್ವಿತೀಯ ಮುದ್ರಣದ ಪ್ರಕಾಶಕರು ಜ್ಞಾನಗಂಗಾ ಪ್ರಕಾಶನ, ಪುತ್ತೂರು. ಶ್ರೀ ಪ್ರಕಾಶ್ ಕೊಡೆಂಕಿರಿ ಅವರು ‘ಪ್ರಕಾಶಕರ ಮಾತು’ ಎಂಬ ಬರಹದಲ್ಲಿ ‘ನಾವರಿಯದ ದೇರಾಜೆ’ ಎಂಬ ಪುಸ್ತಕವು ಸೆಪ್ಟೆಂಬರ್ 2014ರಂದು ಕಾಂತಾವರ ಕನ್ನಡ ಸಂಘದವರಿಂದ ಪ್ರಕಟವಾಗಿತ್ತು. ಪ್ರತಿಗಳು ಮುಗಿದಿದ್ದು, ಬಹು ಬೇಡಿಕೆ ಇರುವುದರಿಂದ ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನದವರ ಅಪೇಕ್ಷೆಯಂತೆ ಮರು ಮುದ್ರಿಸುತ್ತಿದ್ದೇವೆ. ಲೇಖಕರಾದ ಶ್ರೀ ಪ್ರಸಾದ್ ರಕ್ಷಿದಿಯವರು ‘ಮೊದಲ ಮಾತು’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ದೇರಾಜೆಯವರ ಬಗೆಗೆ ಬರೆಯಲು ಅವಕಾಶ ಸಿಕ್ಕಿದ ಸನ್ನಿವೇಶ, ದೇರಾಜೆಯವರ ವಿಚಾರಗಳನ್ನು ಸಂಗ್ರಹಿಸಲು ಅವರು ಪಟ್ಟ ಪ್ರಯತ್ನ, ಆಗ ಉಂಟಾದ ಅನುಭವಗಳನ್ನು ಶ್ರೀ ಪ್ರಸಾದ್ ರಕ್ಷಿದಿಯವರು ತಮ್ಮ ‘ಮೊದಲ ಮಾತು’ ಬರಹದಲ್ಲಿ ತಿಳಿಸಿದ್ದಾರೆ. ಬಳಿಕ ಶ್ರೀ ದೇರಾಜೆಯವರು ಆರ್ತರನ್ನು ರಕ್ಷಿಸುವ ಕರುಣಾಮಯಿಯಾಗಿ, ಯಶಸ್ವೀ ಕೃಷಿಕರಾಗಿ, ಸಮಾಜ ಸೇವಕರಾಗಿ, ಯಕ್ಷಗಾನ ಕಲಾವಿದರಾಗಿ, ಸಂಘಟಕರಾಗಿ, ಧಾರ್ಮಿಕ ಮುಖಂಡರಾಗಿ, ಶ್ರೇಷ್ಠ ಸಾಹಿತಿಯಾಗಿ ಸಮಾಜಕ್ಕೆ ಸಲ್ಲಿಸಿದ ಅನುಪಮ ಕೊಡುಗೆಗಳನ್ನು ಶ್ರೀ ಪ್ರಸಾದ್ ರಕ್ಷಿದಿ ಅವರು ಓದುಗರಿಗೆ ಮನಮುಟ್ಟುವಂತೆ ವಿವರಿಸಿದ್ದಾರೆ. ಚೊಕ್ಕಾಡಿ, ಬೆಳ್ಳಾರೆ, ಬೆಳ್ತಂಗಡಿ, ವಿಟ್ಲ, ಎಂಬ ನಾಲ್ಕು ವಿಭಾಗಗಳನ್ನು ಮಾಡಿ ‘ನಾವರಿಯದ ದೇರಾಜೆ’ ಎಂಬ ಪುಸ್ತಕವನ್ನು ಶ್ರೀ ಪ್ರಸಾದ್ ರಕ್ಷಿದಿಯವರು ಬರೆದಿರುತ್ತಾರೆ. ಇವು ನಾಲ್ಕು ಶ್ರೀ ದೇರಾಜೆಯವರು ಬೇರೆ ಬೇರೆ ಕಾಲಘಟ್ಟಗಳಲ್ಲಿ ವಾಸಿಸಿದ್ದ ಸ್ಥಳಗಳು. ಸುಮಾರು ಮೂವತ್ತಕ್ಕೂ ಹೆಚ್ಚು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ಶ್ರೀ ದೇರಾಜೆಯವರು ಬರೆದ ಕೃತಿಗಳ ವಿವರಗಳನ್ನೂ ನೀಡಲಾಗಿದೆ. ಶ್ರೀ ದೇರಾಜೆಯವರ ಕುರಿತು ಶ್ರೀ ಪ್ರಸಾದ್ ರಕ್ಷಿದಿಯವರು ಬರೆದ ನಲುವತ್ತನಾಲ್ಕು ಪುಟಗಳ ಉತ್ತಮ ಹೊತ್ತಗೆಯಿದು.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments