Saturday, January 18, 2025
Homeಪುಸ್ತಕ ಮಳಿಗೆಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಪ್ರಸಂಗ ಮಾಲಿಕೆ 

ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಪ್ರಸಂಗ ಮಾಲಿಕೆ 

ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಪ್ರಸಂಗ ಮಾಲಿಕೆ ಎಂಬ  ಈ ಕೃತಿಯು ಪ್ರಕಟವಾಗಿ ಓದುಗರ ಕೈ ಸೇರಿದ್ದು 1998ರಲ್ಲಿ. ಪ್ರಕಾಶಕರು ಪದವೀಧರ ಯಕ್ಷಗಾನ ಸಮಿತಿ ಮುಂಬಯಿ. ಈ ಸಂಸ್ಥೆಯು ಪ್ರಕಟಿಸಿದ ಹದಿನೆಂಟನೇ ಪ್ರಸಂಗ ಸಂಪುಟವಿದು. ಸಂಪಾದಕರು ಶ್ರೀ ಎಚ್.ಬಿ.ಎಲ್.ರಾವ್ ಅವರು. ಶ್ರೀ ಭಾಸ್ಕರ ಹೊಸಬೆಟ್ಟು ಇದರ ಉಪಸಂಪಾದಕರು. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಶ್ರೀ ತಾಳ್ತಜೆ ವಸಂತಕುಮಾರ ಅವರು.  ಪದವೀಧರ ಯಕ್ಷಗಾನ ಸಮಿತಿ ಮುಂಬಯಿಯ ಯಕ್ಷಗಾನ ಕಲಾ ಸಂಬಂಧೀ ಚಟುವಟಿಕೆಗಳನ್ನು ಡಾ.  ತಾಳ್ತಜೆ ವಸಂತಕುಮಾರರು ತಮ್ಮ ಮುನ್ನುಡಿ ಲೇಖನದಲ್ಲಿ ಶ್ಲಾಘಿಸಿದ್ದಾರೆ.  ಶ್ರೀ ಎಚ್.ಬಿ.ಎಲ್.ರಾಯರು ತಮ್ಮ ಸಂಪದಕೀಯ ಬರಹದಲ್ಲಿ ಸಹಕರಿಸಿದ ಎಲ್ಲರನ್ನೂ ನೆನಪಿಸಿಕೊಂಡಿರುತ್ತಾರೆ.

ಇನ್ನೂರಕ್ಕೂ ಹೆಚ್ಚು ಪುಟಗಳಿಂದ ಕೂಡಿದ ಪುಸ್ತಕ ಇದು. ಒಟ್ಟು ಆರು ಪ್ರಸಂಗಗಳನ್ನು ನೀಡಲಾಗಿದೆ. ಶ್ರೀ ಗುರುನಾರಾಯಣಸ್ವಾಮಿ ಚರಿತ್ರೆ (ಅಗರಿ ಶ್ರೀನಿವಾಸ ಭಾಗವತ ವಿರಚಿತ), ಭುವನ ಭಾಗ್ಯ (ಅಮೃತ ಸೋಮೇಶ್ವರ ವಿರಚಿತ), ಸತ್ಯಂ ವದ-ಧರ್ಮಂ ಚರ (ಎಂ. ನಾರ್ಣಪ್ಪ ಉಪ್ಪೂರ), ಮಾತಂಗ ಕನ್ಯೆ (ಬಿ. ಪುರುಷೋತ್ತಮ ಪೂಂಜ) ರಾಜಕುಮಾರಿ ನಂದಿನಿ ಚರಿತೆ (ಭಾಸ್ಕರ ಹೊಸಬೆಟ್ಟು), ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ (ವೇದಮೂರ್ತಿ ಮಧುಸೂದನ ಭಟ್ಟ, ಕಬ್ಬಿನಾಲೆ), ಆರು ಮಂದಿ ಕವಿಗಳ ಆರು ಪ್ರಸಂಗಗಳನ್ನು ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಮಾಲಿಕೆ ಎಂಬ ಕೃತಿಯಾಗಿ ಮುದ್ರಿಸಲಾಗಿದ್ದು, ಇದು ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರನ್ನು ನೆನಪಿಸಿ ಗೌರವಿಸಿದಂತಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments