Saturday, January 18, 2025
Homeಯಕ್ಷಗಾನಯಕ್ಷಗಾನ ಸಂಘಟಕ ಪದ್ಮನಾಭ ಕಟೀಲ್ ಗೆ ಮಾತೃವಿಯೋಗ 

ಯಕ್ಷಗಾನ ಸಂಘಟಕ ಪದ್ಮನಾಭ ಕಟೀಲ್ ಗೆ ಮಾತೃವಿಯೋಗ 

ಸುಪ್ರಸಿದ್ಧ ಶ್ರದ್ಧಾಕೇಂದ್ರ, ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿ ಕಟೀಲಿಗೆ ಸಮೀಪವಿರುವ ಮಚ್ಚಾರು ಶ್ರೀದೇವಿ ನಿಲಯದಲ್ಲಿ ನೆಲೆಸಿದ್ದ ಶ್ರೀಮತಿ ಶ್ಯಾಮಲಾ ಪೂಜಾರಿಯವರು ಸೆಪ್ಟೆಂಬರ್ 18ರಂದು ದೈವಾಧೀನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.  ಮೃತ ಶ್ಯಾಮಲಾ ಪೂಜಾರಿಯವರು ತನ್ನ ಪತಿ ಹಾಗೂ ಮೂವರು ಪುತ್ರರನ್ನು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ. ಯಕ್ಷಗಾನ ಸಂಘಟಕ ಹಾಗೂ ದುಬೈಯಲ್ಲಿ ಉದ್ಯಮಿಯಾಗಿರುವ ಪದ್ಮನಾಭ ಕಟೀಲ್ ಅವರು ಶ್ಯಾಮಲಾ ಪೂಜಾರಿಯವರ ಪುತ್ರ. ಈ ಮನೆ ಮೊದಲಿನಿಂದಲೂ ತಮ್ಮ ದೈವಭಕ್ತಿ ಮತ್ತು ಕಲಾಸೇವೆಗಳಿಗೆ ಹೆಸರಾಗಿದ್ದು ಶ್ಯಾಮಲಾ ಪೂಜಾರಿಯವರು ಕಟೀಲು ಶ್ರೀ ದೇವಿಯ ಭಕ್ತರಾಗಿದ್ದುದು ಮಾತ್ರವಲ್ಲದೆ ಪ್ರತಿ ವರ್ಷಗಳಲ್ಲಿಯೂ ಸೇವಾರೂಪವಾಗಿ ಕಟೀಲು ಹಾಗೂ ಧರ್ಮಸ್ಥಳ ಮೇಳಗಳ ಯಕ್ಷಗಾನವನ್ನು ಆಡಿಸುತ್ತಾ ಬರುತ್ತಿದ್ದರು. ಅಲ್ಲದೆ ಯಕ್ಷಗಾನ ಕಲಾವಿದರಿಗೆ ಗೌರವಧನ ಸಹಿತ ಸನ್ಮಾನಕಾರ್ಯಗಳನ್ನು ನಡೆಸುತ್ತ ಬರುತ್ತಿದ್ದರು. ಶ್ಯಾಮಲಾ ಪೂಜಾರಿ ಅವರ ಪುತ್ರ ಪದ್ಮನಾಭ ಕಟೀಲ್ ಅವರು ದುಬೈಯಲ್ಲಿ ಉದ್ಯಮಿಯಾಗಿರುವುದು ಮಾತ್ರವಲ್ಲದೆ ಉತ್ತಮ ಯಕ್ಷಗಾನ ಸಂಘಟಕರೆಂದು ಹೆಸರುವಾಸಿಯಾಗಿದ್ದಾರೆ. ನಿರಂತರ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪದ್ಮನಾಭ ಕಟೀಲ್ ಅವರು ಕಲೆಗೆ ಅಪರಿಮಿತ ಪ್ರೋತ್ಸಾಹವನ್ನು ನೀಡುವ ಕಲಾಪ್ರೇಮಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments