Saturday, January 18, 2025
Homeಪುಸ್ತಕ ಮಳಿಗೆಕಲಾತರಂಗ... ಕಲಾಂತರಂಗ - ವಿದುಷಿ ಅನುಪಮಾ ರಾಘವೇಂದ್ರ

ಕಲಾತರಂಗ… ಕಲಾಂತರಂಗ – ವಿದುಷಿ ಅನುಪಮಾ ರಾಘವೇಂದ್ರ

ಗಡಿನಾಡ ಕಲಾವಿದೆ ವಿದುಷಿ ಅನುಪಮಾ ರಾಘವೇಂದ್ರ ಅವರ ಅಂಕಣ ಬರಹಗಳ ಸಂಕಲನವೇ ಈ  ‘ಕಲಾತರಂಗ… ಕಲಾಂತರಂಗ’ ಎಂಬ ಹೊತ್ತಗೆಯು.  ಭರತನಾಟ್ಯ ಕಲಾವಿದೆ, ಶಿಕ್ಷಕಿಯಾಗಿ ಕಲಾಸೇವೆಯನ್ನು ಮಾಡುತ್ತಿರುವ ಇವರು ಕನ್ನಡ ಸಾಹಿತ್ಯ ಕ್ಷೇತ್ರದತ್ತಲೂ ಒಲವನ್ನು ತೋರಿ ಉತ್ತಮ ಲೇಖಕಿಯಾಗಿಯೂ ಗುರುತಿಸಿಕೊಂಡರು. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಎಡನೀರು ಸಮೀಪದ ಉಡುಪುಮೂಲೆ ಎಂಬಲ್ಲಿ ವಾಸ. ಗೃಹಣಿಯಾಗಿದ್ದುಕೊಂಡು ಮನೆವಾರ್ತೆಯನ್ನೂ, ಕಲಾಸೇವೆಯನ್ನೂ, ಸಾಹಿತ್ಯಸೇವೆಯನ್ನೂ ಜತೆಯಾಗಿ ನಡೆಸುತ್ತಾ ಮುನ್ನಡೆಯುತ್ತಿದ್ದಾರೆ. ವಿದುಷಿ ಅನುಪಮಾ ಅವರ ಈ ಸಾಹಸಕ್ಕೆ ಅವರ ಪತಿ ಶ್ರೀ ರಾಘವೇಂದ್ರ ಅವರ ಬೆಂಬಲ ಪ್ರೋತ್ಸಾಹವಿದೆ. ಅಂಕಣ ಬರಹಗಳನ್ನು ಬರೆಯಲು ಪ್ರೇರೇಪಿಸಿದವರು ಶ್ರೀ ಹರೀಶ್. ಕೆ. ಆದೂರು. ಅವರು ತಮ್ಮ ವಾರ್ತೆ.ಕಾಂ ನಲ್ಲಿ ಕಲಾಸಂಬಂಧೀ ಲೇಖನಗಳನ್ನು ಬರೆಯಲು ಅವಕಾಶ ನೀಡಿದ್ದರು. ಪರಿಣಾಮ ಪ್ರತಿ ಶುಕ್ರವಾರ ಭೂಮಿಕಾ ಅಂಕಣದಲ್ಲಿ ವಿದುಷಿ ಅನುಪಮಾ ರಾಘವೇಂದ್ರರ ಲೇಖನಿಯಿಂದ ಸಿದ್ಧಗೊಂಡ ಬರಹಗಳು ಪ್ರಕಟವಾಗಿತ್ತು. ಇವರ ಅಂಕಣ ಬರಹಗಳು  ‘ಕಲಾತರಂಗ… ಕಲಾಂತರಂಗ’  ಎಂಬ ಪುಸ್ತಕದ ರೂಪದಲ್ಲಿ ಪ್ರಕಟವಾದುದು ಅಭಿನಂದನೀಯವಾದುದು.

ವಿದುಷಿ ಅನುಪಮಾ ರಾಘವೇಂದ್ರ ಅವರ ಈ ಪುಸ್ತಕವು 2017ನೇ ಇಸವಿಯಲ್ಲಿ ಪ್ರಕಟವಾಗಿದ್ದು ಪ್ರಕಾಶಕರು ಭೂಮಿಕಾ ಪ್ರತಿಷ್ಠಾನ, ಉಡುಪುಮೂಲೆ. ಲೇಖಕ, ಕಲಾವಿದ, ಸಂಘಟಕರಾದ ಶ್ರೀ ನಾ. ಕಾರಂತ ಪೆರಾಜೆಯವರು ‘ಕಲೆಗೆ ದನಿಯಾದ ಕೃತಿ’ ಎಂಬ ಶೀರ್ಷಿಕೆಯಡಿ ಮುನ್ನುಡಿ ಲೇಖನವನ್ನು ಬರೆದು ಶುಭ ಹಾರೈಸಿದ್ದಾರೆ. ಲೇಖಕಿ ವಿದುಷಿ ಅನುಪಮಾ ರಾಘವೇಂದ್ರ ಅವರು ‘ಅಂತರಾಳದ ಮಾತು’ ಎಂಬ ಶೀರ್ಷಿಕೆಯಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಇದು ಒಟ್ಟು ನೂರಾ ಎಂಬತ್ತನಾಲ್ಕು ಪುಟಗಳುಳ್ಳ ಪುಸ್ತಕ. ವಿದುಷಿ ಅನುಪಮಾ ಅವರ ಮೊದಲ ಕೃತಿ. ಒಟ್ಟು ನಲುವತ್ತೆರಡು ಲೇಖನಗಳಿವೆ. ಕಲೆ ಕಳೆಯೇ?, ನಾನೇರುವೆತ್ತರಕೆ ನೀನೇರು, ಕಲಾವಿದನಲ್ಲೇ ಒಂದು ಕಲೆ,ಆಧ್ಯಾತ್ಮಮೂರ್ತಿ ನಟರಾಜ, ಕಲೆಯಲ್ಲೂ ಆಧ್ಯಾತ್ಮಿಕತೆ ಶೈಲಿ – ಸಂಪ್ರದಾಯ, ಗುರುವಿನ ಗುಲಾಮನಾಗುವ ತನಕ, ಬೆರಕೆ-ಕಲಬೆರಕೆ, ಆಧುನಿಕತೆಯ ಕಬಂಧ ಬಾಹು, ಕಾಲಾಯ ತಸ್ಮೈ ನಮಃ, ಅಥಾತೋ ಬ್ರಹ್ಮ ಜಿಜ್ಞಾಸಾ, ಗೃಹಣೀ ಗೃಹಮುಚ್ಯತೇ, ಎರಡು ದೋಣಿಯಲಿ ಕಾಲಿಟ್ಟಂತೆ, ಒಳಗಣ್ಣಿನಿಂದ ನೋಡು, ಸ್ತ್ರೀ ಪಾತ್ರದಲ್ಲಿ ಪುರುಷ, ಕಲಾವಿದ ಲಕ್ಷಣ, ಅಂಗಸಾಧನೆಯಿಂದ ಕಲಾ ಪರಿಪಕ್ವತೆ, ನವೋ ನವೋನ್ಮೇಷ ಶಾಲಿನೀ ಪ್ರತಿಭಾ, ಕಲೆ ಕಲಾವಿದ ಮನಸ್ಥಿತಿ, ಸೌಂದರ್ಯೋಪಾಸನೆ, ಭೂಭವತಿ-ಭಾವ, ರಸೋ ವೈಸಃ, ನಾಯಿಕಾ ನಾಯಕ ಭಾವ, ನೃತ್ತ-ನೃತ್ಯ-ನಾಟ್ಯ-ನರ್ತನ, ನೃತ್ಯರೂಪಕ-ನೃತ್ಯನಾಟಕ, ಅಭ್ಯಾಸಾನುಗತಾ ವಿದ್ಯಾ, ಆಹಾರ್ಯೋ ಹಾರ ಕೇಯೂರ, ನೂಪುರ ನಿನಾದ, ರಂಗಮಂಟಪ, ಓಸರಿಸಿದ ಜವನಿಕೆ, ಹಿಮ್ಮೇಳ, ಧ್ವನಿವರ್ಧಕ, ದೀಪಾಲಂಕಾರ, ಕಲೆಗಾಗಿ ಅಕ್ಷರ ಕ್ರಾಂತಿ, ಇತಿಹಾಸ ಕಲೆಯ ಸಂಕ್ರಮಣ ಘಟ್ಟ, ಕರ್ನಾಟಕದಲ್ಲಿ ನೃತ್ಯದ ಹೆಜ್ಜೆಗಳು, ಕಲಾಲೋಕದಲ್ಲಿ ದಾಸಸಾಹಿತ್ಯ, ಕಲಾಲೋಕಕ್ಕೆ ವಿದೇಶಿಯರ ಕೊಡುಗೆ, ವಿದೇಶಿ ನೆಲದಲ್ಲಿ ಭಾರತೀಯ ಕಲೆ, ಪರೀಕ್ಷೆ-ನಿರೀಕ್ಷೆ, ವಿಮರ್ಶೆ-ಹೀಗೊಂದು ವಿಮರ್ಶೆ ಎಂಬ ಲೇಖನಗಳನ್ನು ಒಳಗೊಂಡ ಪುಸ್ತಕ ಇದು. ವಿದುಷಿ ಅನುಪಮಾ ರಾಘವೇಂದ್ರರಿಂದ ಕಲಾ ಸೇವೆಯೂ, ಸಾಹಿತ್ಯ ಸೇವೆಯೂ ನಿರಂತರವಾಗಿ ನಡೆಯಲಿ ಎಂಬ ಹಾರೈಕೆ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments