ಯಾವುದೇ ಒಂದು ಕಲೆಯು ಬೆಳೆದು ಬರಬೇಕಾದರೆ ಅದನ್ನು ಉಳಿಸಿ ಬೆಳೆಸುವ ಕೈಗಳು ಸಾವಿರಾರು ಇರಬೇಕಾಗುತ್ತದೆ. ಅದು ಪರೋಕ್ಷವಾಗಿಯೂ ಇರಬಹುದು. ಇನ್ನು ಕೆಲವು ಪ್ರತ್ಯಕ್ಷವಾಗಿಯೂ ಇರಬಹುದು. ಉತ್ಸಾಹ, ಆಸಕ್ತಿ, ಪ್ರೋತ್ಸಾಹ, ಪೋಷಕತ್ವ, ಪ್ರಾಯೋಜಕತ್ವ, ಸಂಘಟನೆ, ಅಧ್ಯಯನ, ಪ್ರಸಾರ, ವೀಕ್ಷಣೆ, ಭಾಗವಹಿಸುವಿಕೆ, ಅನುದಾನ, ಸಂಶೋಧನೆ ಮೊದಲಾದುವುಗಳೆಲ್ಲಾ ಒಂದು ಕಲೆಯ ಬೆಳವಣಿಗೆಯಲ್ಲಿ ಪಾಲು ಪಡೆಯುವ ಪ್ರಮುಖ ಅಂಶಗಳು.
ಇದನ್ನೂ ಓದಿ: ಸುಣ್ಣಂಬಳ ವಿಶ್ವೇಶ್ವರ ಭಟ್ – ಮಿತಭಾಷಿಯ ಸಹೃದಯತೆ (ಶೇಣಿ, ಸುಣ್ಣಂಬಳ ತಾಳಮದ್ದಳೆ ವೀಡಿಯೋ)
ಅದರಂತೆ ಕಲೆಯ ಪ್ರಸರಣ ಎಂಬುದು ಇಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಯಾವುದೇ ಕಲೆಯ ಪ್ರಸಿದ್ಧಿಯು ಹೆಚ್ಚಾಗಿ ಪ್ರಚಾರ ಮತ್ತು ಪ್ರಸರಣವನ್ನು ಅವಲಂಬಲಿಸಿದೆ. ಪ್ರಚಾರಕ್ಕಾಗಿ ಮತ್ತು ಸುದ್ದಿ ಪ್ರಸಾರಣಕ್ಕಾಗಿ ನಾವು ಪತ್ರಿಕೆಗಳನ್ನು ಅವಲಂಬಿಸಿದರೆ ದೃಶ್ಯ ಮತ್ತು ಧ್ವನಿಮುದ್ರಣದ ಪ್ರಸಾರಕ್ಕಾಗಿ ದೃಶ್ಯಮಾಧ್ಯಮಗಳಾದ ಟಿವಿ ಚಾನೆಲ್ ಗಳು, ಆಕಾಶವಾಣಿಗಳನ್ನು ಅವಲಂಬಿಸುತ್ತೇವೆ.
(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? )
ಆದರೆ ಇತ್ತೀಚಿಗೆ ಕೆಲವು ವರ್ಷಗಳಿಂದ ಸಾಮಾಜಿಕ ಜಾಲ ತಾಣಗಳು ಈ ದೆಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಇದೆ. ಸುದ್ದಿ ಪ್ರಸಾರದ ಜೊತೆಗೆ ಆಡಿಯೋ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಯಕ್ಷಗಾನವೂ ಸೇರಿದಂತೆ ಹಲವಾರು ಕಲೆಗಳ ಪ್ರದರ್ಶನದ ಸಂಪೂರ್ಣ ಪ್ರದರ್ಶನಗಳು ಯು ಟ್ಯೂಬ್, ಫೇಸ್ಬುಕ್ ಮೊದಲಾದ ಜಾಲತಾಣಗಳಲ್ಲಿ ನೋಡಲು ನಮಗೆ ಸಿಗುತ್ತವೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ದೇಶ ವಿದೇಶಗಳಲ್ಲಿ ನೆಲೆಸಿದ್ದರೂ ಭಾರತೀಯ ನೆಲದಲ್ಲಿ ಪ್ರದರ್ಶನಗೊಳ್ಳುತ್ತಿರುವ ಕಲೆಯ ಕಂಪನ್ನು ಆಸ್ವಾದಿಸಬಹುದು.(ಕೊರೋನಾ ಬಾಧಿತ ಈ ಕಾಲಘಟ್ಟದಲ್ಲಿಯಂತೂ ನೇರ ಪ್ರಸಾರಗಳದ್ದೇ ಕಾರುಬಾರು) ಈ ರೀತಿ ಯಕ್ಷಗಾನದ ಪ್ರದರ್ಶನಗಳು ನಡೆಯುವಲ್ಲಿಗೆ ಹೋಗಿ ದೃಶ್ಯಾವಳಿಗಳಲ್ಲಿ ಸೆರೆ ಹಿಡಿದು ತಮ್ಮ ಯು ಟ್ಯೂಬ್ ಚಾನೆಲ್ ಗಳಲ್ಲಿ ಪ್ರಸಾರ ಮಾಡುತ್ತಾ ಕಲೆಯ ಕಂಪನ್ನು ಪ್ರಸಾರ ಮಾಡಿ ತನ್ಮೂಲಕ ಈ ಕಲೆಯ ಬೆಳೆವಣಿಗೆಗೆ ಕಾರಣರಾದ ಹಲವು ಮಂದಿ ನಮ್ಮೊಡನೆ ಇಂದು ಇದ್ದಾರೆ. ಅವರಲ್ಲಿ ಕೋಂಗೋಟ್ ಶ್ರೀ ರಾಧಾಕೃಷ್ಣ ಭಟ್ ಅವರದು ಒಂದು ಪ್ರಮುಖವಾದ ಹೆಸರು.

ಹೆಚ್ಚಾಗಿ ಯಕ್ಷಗಾನ ನಡೆಯುವ ಸ್ಥಳಗಳಿಗೆ ಹೋಗಿ ದೃಶ್ಯಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಅದನ್ನು ಯು ಟ್ಯೂಬ್ ಚಾನೆಲ್ ಗೆ ಅಪ್ಲೋಡ್ ಮಾಡಿ ತನ್ನ ಕಲಾ ಪ್ರಸರಣದ ಕಾಯಕವನ್ನು ನಿಸ್ವಾರ್ಥತೆಯಿಂದ ನಡೆಸುತ್ತಾ ಇದ್ದಾರೆ. ರಾಧಾಕೃಷ್ಣ ಭಟ್ ಅವರಿಗೆ ಯಕ್ಷಗಾನ ಕಲೆಯ ಮೇಲೆ ಇನ್ನಿಲ್ಲದ ಪ್ರೀತಿ ಅವರ ಹಿರಿಯರಲ್ಲಿ ಯಕ್ಷಗಾನ ಆಸಕ್ತಿಯೂ ಇತ್ತು ಎನ್ನುವುದನ್ನು ಅವರು ಹೇಳುತ್ತಿದ್ದರು. ಅಲ್ಲದೆ ಮೂಲ ಮನೆಯಲ್ಲಿ ಹಿಮ್ಮೇಳದ ವಾದನಗಳು ಇದ್ದುವು.
(ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)
ಆದುದರಿಂದ ತಲೆಮಾರಿನ ಹಿಂದೆ ಅವರ ಕುಟುಂಬದಲ್ಲಿಯೂ ಕಲೆಯ ಆಸಕ್ತಿಯುಳ್ಳವರಿದ್ದರು ಎಂದು ತಿಳಿಯಬಹುದು. ರಾಧಾಕೃಷ್ಣ ಭಟ್ಟರ KRK Bhat Chitramoola ಎಂಬ ಯು ಟ್ಯೂಬ್ ಚಾನೆಲ್ ಇದೆ. ಅದರಲ್ಲಿ ಸುಮಾರು 4,900ಕ್ಕೂ ಮಿಕ್ಕಿ ವೀಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ಅವರ ಚಾನೆಲನ್ನು Subscribe ಅದವರ ಸಂಖ್ಯೆ ಸುಮಾರು 83,000ಕ್ಕೆ ಸಮೀಪ. ಅತಿ ಹೆಚ್ಚು ಯಕ್ಷಗಾನ ವೀಡಿಯೊಗಳನ್ನೇ ಇದರಲ್ಲಿ ಅಪ್ಲೋಡ್ ಮಾಡಿದ್ದಾರೆ.ಈ ಚಾನೆಲ್ ನ ವೀಡಿಯೋ ಒಂದನ್ನು ಕೆಳಗೆ ಕೊಡಲಾಗಿದೆ.
ಇವರ ಪತ್ನಿ ಶ್ರೀಮತಿ ಉಮಾ ಆರ್. ಕೆ. ಭಟ್ ಕೂಡಾ ಕಲಾಸಕ್ತೆ. ಮತ್ತು ಯಕ್ಷಗಾನ ಕಲೆಯ ವಾತಾವರಣದ ನಡುವೆಯೇ ಬೆಳೆದವರು. ಅವರು ಕೂಡಾ ಹೆಚ್ಚಾಗಿ ಯಕ್ಷಗಾನ ಪ್ರದರ್ಶನಗಳಿಗೆ ಪತಿಯ ಜೊತೆಯಲ್ಲಿಯೇ ಹೋಗುತ್ತಾರೆ. ದಂಪತಿಗಳೀರ್ವರೂ ಜೊತೆಯಾಗಿಯೇ ಯಕ್ಷಗಾನ ಪ್ರದರ್ಶನಗಳನ್ನು ಆಸ್ವಾದಿಸುತ್ತಾರೆ. ಮಾತ್ರವಲ್ಲದೆ ಶ್ರೀಮತಿ ಉಮಾ ಆರ್. ಕೆ. ಭಟ್ ಕೂಡಾ ವಿಡಿಯೋ ಚಿತ್ರೀಕರಣದಲ್ಲಿ ಸಿದ್ಧಹಸ್ತರು ಮತ್ತು ಛಾಯಾಗ್ರಹಣದಲ್ಲಿಯೂ ಪರಿಣತಿಯನ್ನು ಪಡೆದಿದ್ದಾರೆ.
ಇವರ ಹೆಸರಿನಲ್ಲಿಯೂ ಒಂದು ಯು ಟ್ಯೂಬ್ ಚಾನೆಲ್ ಇದೆ. ಈ ಚಾನೆಲ್ Uma RK Bhat Chitramoola ಎಂಬ ಹೆಸರಿನಲ್ಲಿ ಸುಮಾರು 60,000ಕ್ಕೂ ಮಿಕ್ಕಿ Subscribers ನ್ನು ಹೊಂದಿದೆ. ಈ ವರೆಗೆ ಸುಮಾರು 3,830 ಕ್ಕೂ ಹೆಚ್ಚು ವೀಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಈ ಚಾನೆಲ್ ನ ವೀಡಿಯೋ ಒಂದನ್ನು ಕೆಳಗೆ ಕೊಡಲಾಗಿದೆ.
ದಂಪತಿಗಳ ಯಕ್ಷಗಾನಾಸಕ್ತಿಯನ್ನು ಮೆಚ್ಚಲೇ ಬೇಕು. ಈ ಮೂಲಕ ಅವರು ಯಕ್ಷಗಾನ ಕಲೆಯ ಪ್ರಚಾರ ಮತ್ತು ಪ್ರಸಾರವನ್ನು ಒಂದು ಹವ್ಯಾಸವಾಗಿಯೂ ಒಂದು ಸೇವೆಯಾಗಿಯೂ ಮಾಡುತ್ತಿದ್ದಾರೆ. ಈ ಯು ಟ್ಯೂಬ್ ವೀಡಿಯೋಗಳಿಂದ ಸ್ವಲ್ಪ ಮಟ್ಟಿನ ಆದಾಯ ಬರುವುದು ನಿಜವಾದರೂ ಅಷ್ಟೇ ಖರ್ಚುವೆಚ್ಚಗಳಿವೆ ಎಂದು ರಾಧಾಕೃಷ್ಣ ಭಟ್ಟರು ಹೇಳುತ್ತಾರೆ. ಸ್ವಂತ ಖರ್ಚಿನಲ್ಲಿ ಯಕ್ಷಗಾನ ನಡೆಯುವ ಊರುಗಳಿಗೆ ಸ್ವಂತ ವಾಹನದಲ್ಲಿ ತೆರಳಬೇಕು. ಪ್ರಯಾಣದ ಖರ್ಚು ಮತ್ತು ಇತರ ಖರ್ಚುಗಳನ್ನು ಲೆಕ್ಕ ಹಾಕುವಾಗ ಆದಾಯಕ್ಕಿಂತ ಖರ್ಚಿನ ತಕ್ಕಡಿಯೇ ಕೆಳಗೆ ನಿಲ್ಲುತ್ತದೆ ಎಂಬುದು ಅವರ ಅಭಿಪ್ರಾಯ. ಅದೂ ಅಲ್ಲದೆ ಚಾನೆಲ್ ಪ್ರಾರಂಭಿಸಿದ ಒಂದೆರಡು ವರ್ಷಗಳ ವರೆಗೆ ಹೆಚ್ಚು ಕಡಿಮೆ ಶೂನ್ಯ ಆದಾಯವೇ ಇರುತ್ತದೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಆದರೂ ಅವರು ಕಲಾಸಕ್ತಿಯಿಂದ ಈ ಕಾಯಕವನ್ನು ಮುಂದುವರಿಸುತ್ತಿದ್ದಾರೆ. ಇಂದು ದೇಶ ವಿದೇಶಗಳಲ್ಲಿ ಈ ಎರಡು ಚಾನೆಲ್ ಗಳಿಗೆ ಲಕ್ಷಾಂತರ ವೀಕ್ಷಕರಿದ್ದಾರೆ. ಈ ಸಾಧನೆಯನ್ನು ಮಾಡಬೇಕಾದರೆ ಇದರ ಹಿಂದೆ ದಂಪತಿಗಳ ಅಪಾರ ಪರಿಶ್ರಮ ಮತ್ತು ತಮ್ಮ ಅಮೂಲ್ಯವಾದ ಸಮಯದ ವ್ಯಯ ಅಡಗಿದೆ. ತಮ್ಮ ನಿಸ್ವಾರ್ಥ ಕಾಯಕದ ಪರಿಶ್ರಮಕ್ಕೋಸ್ಕರ ದಂಪತಿಗಳೀರ್ವರನ್ನೂ ಹಲವಾರು ಕಡೆ ಸನ್ಮಾನಿಸಿ ಗೌರವಿಸಲಾಗಿದೆ.

