ಕಾಂತಾವರದ ಯಕ್ಷದೇಗುಲದ ಹದಿನೆಂಟನೆಯ ಯಕ್ಷೋಲ್ಲಾಸದ ಉದ್ಘಾಟನಾ ಸಮಾರಂಭವನ್ನು ಸಾಣೂರಿನ ವೇ. ಮೂ. ಶ್ರೀರಾಮ ಭಟ್ಟರು ಉದ್ಘಾಟಿಸಿದರು.
ಜೊತೆಗೆ ಯಕ್ಷಗಾನದ ನಾಟ್ಯಾಭ್ಯಾಸ ಮಾಡಿ ನೂರಾರು ವೇಷಗಳನ್ನು ಮಾಡುತ್ತಾ ಬಾಲ ಕಲಾವಿದರಾಗಿ ಬೆಳೆದಿರುವ , ಹತ್ತನೇ ಮತ್ತು ಪಿ ಯು ಸಿಯಲ್ಲಿ ಮೊನ್ನೆ ನಡೆದ ಶೈಕ್ಷಣಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಒಂಬತ್ತು ವಿದ್ಯಾರ್ಥಿಗಳಿಗೆ ಅತಿಥಿಗಳ ಸಮ್ಮುಖ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಗ್ರಾಮದ ಪಂಚಾಯತ್ ಪಿ ಡಿ ಓ ರಮೇಶ್ ಎಸ್, ಜಿ.ಪಂ ಸದಸ್ಯರಾದ ಶ್ರೀಮತಿ ದಿವ್ಯಶ್ರೀ ಜಿ. ಅಮೀನ್, ತಾ.ಪಂ ಸದಸ್ಯ ಪ್ರವೀಣ್ ಕೋಟ್ಯಾನ್, ಗೋವಾ ಉದ್ಯಮಿ ಬೇಲಾಡಿ ಅಶೋಕಾನಂದ ಶೆಟ್ಟಿ , ಕಾರ್ಕಳದ ವಿಜಯ ಶೆಟ್ಟಿ, , ಬಾರಡಿ ಪ್ರಕಾಶ್ ಆರ್. ಪೂಜಾರಿ , ಪ್ರಾಂಶುಪಾಲ ಬೇಬಿ ಕೆ ಈಶ್ವರಮಂಗಲ , ಅಧ್ಯಾಪಕ ಶಿವಸುಭ್ರಮಣ್ಯ ಭಟ್, ಬೆಳುವಾಯಿ ಕೆನರಾ ಬ್ಯಾಂಕಿನ ಮುಖ್ಯ ಪ್ರಬಂದಕ ಮನೋಹರ ನಾಯಕ್ , ಪಂ. ಮಾಜಿ ಅದ್ಯಕ್ಷರಾದ ಜಯ ಎಸ್ ಕೋಟ್ಯಾನ್, ರಾಜೇಶ್ ಕೋಟ್ಯಾನ್ ಬೆಳುವಾಯಿಯ ಎಂ ದೇವಾನಂದ ಭಟ್ಟರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಾದ್ಯಕ್ಷ ಮಹಾವೀರ ಪಾಂಡಿಯವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು. ನಂತರ ಕಲಾವಿದ ಗಣೇಶ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಸಂಯೋಜಿಸಿದ ಮಹಾಭಾರತದೊಳಗಣ “ಯುಗಧರ್ಮ” ಯಕ್ಷಗಾನ ಕಾರ್ಕಳ ತಾಲೂಕಿನ ವೃತ್ತಿ ನಿರತ ಕಲಾವಿದರಿಂದ ಜಾಲತಾಣದ ಮೂಲಕ ನೇರ ಪ್ರಸಾರದಲ್ಲಿ ಆಡಿತೋರಿಸಲಾಯಿತು.