Thursday, November 21, 2024
Homeಪುಸ್ತಕ ಮಳಿಗೆಸಂಜ್ಞಾರ್ಥ ತತ್ವಕೋಶ - ವಿದ್ವಾನ್ ಡಿ. ವಿ. ಹೊಳ್ಳ, ಕುಂದಾಪುರ 

ಸಂಜ್ಞಾರ್ಥ ತತ್ವಕೋಶ – ವಿದ್ವಾನ್ ಡಿ. ವಿ. ಹೊಳ್ಳ, ಕುಂದಾಪುರ 

ವಿದ್ವಾನ್ ಡಿ. ವಿ. ಹೊಳ್ಳ, ಕುಂದಾಪುರ  ಇವರು ರಚಿಸಿದ ಸಂಜ್ಞಾರ್ಥ ತತ್ವಕೋಶವು ಸಾಹಿತ್ಯ ಕ್ಷೇತ್ರಕ್ಕೊಂದು ಅತ್ಯುತ್ತಮ ಕೊಡುಗೆ. ಇದು ಈ ಪುಸ್ತಕದ ಮೂರನೆಯ ಮುದ್ರಣ. ವಿಟ್ಲದ ಸದಭಿರುಚಿ ಪ್ರಕಾಶನವು ಈ ಪುಸ್ತಕದ ಪ್ರಕಾಶಕರು. ಮೊದಲು ಮುದ್ರಿತವಾದದ್ದು 1953ರಲ್ಲಿ. ದ್ವಿತೀಯ ಮುದ್ರಣ 1974 ರಲ್ಲಿ ನಡೆದಿತ್ತು. ಮೊದಲ ಮುದ್ರಣದ ಪುಸ್ತಕಕ್ಕೆ ಘನ ವಿದ್ವಾಂಸರಾಗಿದ್ದ ಮಂಜೇಶ್ವರ ಗೋವಿಂದ ಪೈಗಳು ಮುನ್ನುಡಿ ಬರೆದಿದ್ದರು. 2016 ರಲ್ಲಿ ನಡೆದ ಮೂರನೆಯ ಮುದ್ರಣದ ಪ್ರಕಾಶಕರು ಶ್ರೀಮತಿ ಎಸ್ . ಎನ್ . ಭಟ್ಟ, ಸದಭಿರುಚಿ ಪ್ರಕಾಶನ, ವಿಟ್ಲ ಇವರು. ಈ ಪುಸ್ತಕದ ಅಧಿಕೃತ ಮಾರಾಟಗಾರರು ಸದಭಿರುಚಿಯ ಶ್ರೀ ಶಂಕರ ಕುಳಮರ್ವ. ಇವರ ಸಂಪರ್ಕ ಸಂಖ್ಯೆ 9535623603. ಈ ಮೂರನೆಯ ಮುದ್ರಣಕ್ಕೆ ಶ್ರೀ ಎಂ. ಅನಂತಕೃಷ್ಣ ಹೆಬ್ಬಾರ್ ಅವರು ಮುನ್ನುಡಿಯನ್ನು ಬರೆದಿರುತ್ತಾರೆ. ಸದಭಿರುಚಿ ಪ್ರಕಾಶನದ ವತಿಯಿಂದ ಶ್ರೀ ಶಂಕರ ಕುಳಮರ್ವ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಹಕರಿಸಿದ ಸರ್ವರಿಗೂ ಕೃತಜ್ಞರಾಗಿದ್ದಾರೆ. ಕೃತಿ ಕರ್ತೃ ಪರಿಚಯ ಶೀರ್ಷಿಕೆಯಡಿಯಲ್ಲಿ ಲೇಖಕ ದೇಲಂಪಾಡಿ ವಿಷ್ಣು ಹೊಳ್ಳರ (ಡಿ. ವಿ. ಹೊಳ್ಳ) ಪರಿಚಯವನ್ನು ನೀಡಿದ್ದು, ಅವರು ರಚಿಸಿದ ಯಕ್ಷಗಾನ ಪ್ರಸಂಗಗಳ ಬಗ್ಗೆಯೂ ತಿಳಿಸಿದ್ದು ಶ್ಲ್ಯಾಘನೀಯ. ಕೃತಿ ಕರ್ತೃ ಪರಿಚಯ ಮಾಡಿದವರು ಡಾ। ಉಪ್ಪಂಗಳ ಶಂಕರನಾರಾಯಣ ಭಟ್ಟರು. ‘ನನ್ನ ಚಿಕ್ಕಪ್ಪ’ ಎಂಬ ತಲೆಬರಹದಡಿಯಲ್ಲಿ ಖ್ಯಾತ ಭಾಗವತರಾದ ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ತಮ್ಮ ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿದ್ದಾರೆ. ಅಲ್ಲದೆ ಮೊದಲ ಮುದ್ರಣಕ್ಕೆ ಮಂಜೇಶ್ವರ ಗೋವಿಂದ ಪೈಗಳು ಬರೆದ ಮುನ್ನುಡಿ ಲೇಖನವನ್ನೂ, ಎರಡನೇ ಮುದ್ರಣದ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾಗಿದ್ದ ಶ್ರೀ ಪಿ. ರಂಗನಾಥ ಶೆಣೈ ಅವರ ಶುಭಹಾರೈಕೆ ಲೇಖನವನ್ನೂ ಕೃತಿ ಕರ್ತರ ಪರಿಚಯ ಎಂಬ ಶೀರ್ಷಿಕೆಯಡಿಯಲ್ಲಿ ಖ್ಯಾತ ಕವಿ ಕಯ್ಯಾರ ಕಿಂಞಣ್ಣ ರೈಗಳು ಬರೆದ ಲೇಖನವನ್ನೂ, ವೈ ಸೀತಾರಾಮ ಭಟ್ಟರ ಲೇಖನವನ್ನೂ ಈ ಪುಸ್ತಕದಲ್ಲಿ ನಮಗೆ ಓದಬಹುದು. ಕಡೆಂಗೋಡ್ಲು ಶಂಕರ ಭಟ್ಟ , ಎಂ. ಆರ್. ಶ್ರೀನಿವಾಸ ಮೂರ್ತಿ ಮತ್ತು ಸಿ.ಕೆ. ನಾಗರಾಜ ರಾಯರ ಶುಭ ಹಾರೈಕೆ ರೂಪದ ಬರಹಗಳೂ ಇವೆ. ಶ್ರೀ ಡಿ. ವಿ. ಹೊಳ್ಳರ ಸಂಜ್ಞಾರ್ಥ ತತ್ವಕೋಶ ಹೊತ್ತಗೆಯು ಒಟ್ಟು 238 ಪುಟಗಳಿಂದ ಕೂಡಿದ್ದು ಬಹು ಉಪಯೋಗೀ ಪುಸ್ತಕ. ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಅತ್ಯುತ್ತಮ ಕೊಡುಗೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments