Saturday, January 18, 2025
Homeಯಕ್ಷಗಾನಯಕ್ಷ ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ ಅಸ್ತಂಗತ 

ಯಕ್ಷ ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ ಅಸ್ತಂಗತ 

ಅಭಿನವ ನಾಗವರ್ಮ, ಯಕ್ಷ ಛಂದೋಬ್ರಹ್ಮ ಹೀಗೆ ಹತ್ತು ಹಲವು ಬಿರುದುಗಳನ್ನು ಪಡೆದಿದ್ದ ಯಕ್ಷಗಾನ ಛಂದಸ್ಸಿನ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ‘ಯಕ್ಷ  ಛಂದೋಂಬುಧಿ’ ಕೃತಿಯನ್ನು ಯಕ್ಷ ಲೋಕಕ್ಕೆ ಕೊಡುಗೆಯಾಗಿ ನೀಡಿದ ಮಹಾನ್ ಯಕ್ಷಗಾನ ವಿದ್ವಾಂಸ ಡಾ. ಶಿಮಂತೂರು ನಾರಾಯಣ ಶೆಟ್ಟಿ  ನಿಧನರಾಗಿದ್ದಾರೆ. ನಿವೃತ್ತ ಶಿಕ್ಷಕರೂ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿದ್ದ ಇವರು ಪಾರ್ತಿಸುಬ್ಬ ಪ್ರಶಸ್ತಿ, ತಲ್ಲೂರು  ಕನಕ ಅಣ್ಣಯ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದರು. ತಾನು ಶಾಲಾ ದಿನಗಳಲ್ಲಿ ಓದುತ್ತಿರುವಾಗಲೇ ‘ಕಟೀಲು ಕ್ಷೇತ್ರ ಮಹಾತ್ಮೆ’ ಎಂಬ ಅದ್ಭುತ ಪ್ರಸಂಗವನ್ನು ಬರೆದ ಇವರು ಆಮೇಲೆ ಸಾಧನೆಯತ್ತಲೇ ಮುಖ ಮಾಡಿದವರು.  ಯಕ್ಷಗಾನ ಛಂದೋಂಬುಧಿ, ಕನ್ನಡದ ಅನರ್ಘ್ಯ ಛಂದೋ ರತ್ನಗಳು, ವಿ-ಚಿತ್ರಾ ತ್ರಿಪದಿ, ದೇಸೀ ಛಂದೋಬಂಧಗಳ ಪುದುವಟ್ಟು ಎಂಬ ನಾಲ್ಕು ಯಕ್ಷಗಾನ ಛಂದಸ್ಸಿನ ಕೃತಿಗಳನ್ನು ರಚಿಸಿದ್ದ ಇವರು ಹಲವಾರು ಪ್ರಸಂಗಗಳನ್ನು ರಚಿಸಿದ್ದರು. ಛಂದಸ್ಸಿನ ಬಗ್ಗೆಯೂ ಯಕ್ಷಗಾನ ಬಗ್ಗೆಯೂ ಹೀಗೆಯೇ ಎಂದು ಸ್ಪಷ್ಟ ನಿರ್ದೇಶನ ಕೊಡಬಲ್ಲ ಶ್ರೀ ನಾರಾಯಣ ಶೆಟ್ಟಿಯವರ ಅಗಲಿಕೆ ಯಕ್ಷಗಾನ ಕ್ಷೇತ್ರಕ್ಕೂ ಸಾಹಿತ್ಯ ಕ್ಷೇತ್ರಕ್ಕೂ ಒಂದು ತುಂಬಲಾರದ ನಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರನ್ನು ಕಳಕೊಂಡು ಇಂದು ಕನ್ನಡ ಸಾರಸ್ವತ ಲೋಕ ಮತ್ತು ಕಲಾಪ್ರಪಂಚ ಬಡವಾಗಿದೆ. ಯಕ್ಷರಂಗದಲ್ಲಿ ಹಲವಾರು ಮಂದಿ ಶಿಷ್ಯರನ್ನು ಹೊಂದಿದ್ದ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಅಭಿಮಾನಿಗಳಿಗೂ ಕುಟುಂಬದವರಿಗೂ ಮತ್ತು ಇಡೀ ಕಲಾಕ್ಷೇತ್ರಕ್ಕೂ ಆ ಭಗವಂತನು ದಯಪಾಲಿಸಲಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments