Thursday, March 12, 2026
Home Blog Page 332

ಕುರಿಯ ವಿಠಲ ಶಾಸ್ತ್ರಿ, ನೆಡ್ಲೆ ನರಸಿಂಹ ಭಟ್, ಕರವೋಳು ದೇರಣ್ಣ ಶೆಟ್ಟಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ

ಕುರುಡು ಪದವು ಉಪ್ಪಳದ ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯು ಪ್ರತಿವರ್ಷದಂತೆ ಈ ಬಾರಿ ಪದ್ಯಾಣದ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಯಕ್ಷಗಾನದ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರಾದ ಕುರಿಯ ವಿಠಲ ಶಾಸ್ತ್ರಿ, ನೆಡ್ಲೆ ನರಸಿಂಹ ಭಟ್, ಕರವೋಳು ದೇರಣ್ಣ ಶೆಟ್ಟಿಯವರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಇತ್ತೀಚೆಗೆ ಸಂಘಟಿಸಿತು.

ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆಯವರಿಗೆ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾ ಪ್ರಶಸ್ತಿ, ತೆಂಕು ಬಡಗಿನ ಖ್ಯಾತ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ ಅವರಿಗೆ ಕರೋಳು ದೇರಣ್ಣ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ, ಯಕ್ಷ ಛಾಂದಸ, ಪ್ರಸಂಗ ಕವಿ ಗಣೇಶ ಕೊಲೆಕಾಡಿ ಅವರಿಗೆ ನೆಡ್ಲೆ ನರಸಿಂಹ ಭಟ್ ಸಂಸ್ಮರಣ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು.

ವೇದಮೂರ್ತಿ ಮುಗುಳಿ ತಿರುಮಲೇಶ್ವರ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಯೋಗೀಶ್ ರಾವ್ ಚಿಗುರುಪಾದೆ ಸಂಸ್ಮರಣ ಭಾಷಣ ಮಾಡಿದರು. ನಿವೃತ್ತ ಪ್ರಾಧ್ಯಾಪಕ, ತಾಳಮದ್ದಳೆ ಅರ್ಥಧಾರಿ ಜಿ. ಕೆ. ಭಟ್ ಸೇರಾಜೆ ಅಭಿನಂದನಾ ಮಾತುಗಳನ್ನಾಡಿದರು.ಸತೀಶ್ ಆಳ್ವ ಇರಾ, ಸೇರಾಜೆ ಸತ್ಯನಾರಾಯಣ ಭಟ್ ಶುಭಾಶಂಸನೆಗೈದರು. ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ, ಸಾಹಿತಿ ಜನಾರ್ದನ ಹಂದೆ ಮಂಗಳೂರು ಉಪಸ್ಥಿತರಿದ್ದರು.

ಕುರಿಯ ಗೋಪಾಲಕೃಷ್ಣ ಶಾಸ್ತ್ರಿ ಸ್ವಾಗತಿಸಿದರು. ಸೇರಾಜೆ ಶ್ರೀನಿವಾಸ ಭಟ್ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಮೊದಲು ವಿದ್ಯಾ ಜಯರಾಂ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಮತ್ತು ಬಳಿಕ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಲಲಿತ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ಭಕ್ತ ಸುಧನ್ವ ಮತ್ತು ಭಾರ್ಗವ ವಿಜಯ – ‘ಶ್ರೀ ದುರ್ಗಾ ಸೇವಾ ಸಂಘ ಕನ್ಯಾನ’ ವತಿಯಿಂದ ಮಾರ್ಚ್ 18ಕ್ಕೆ ಕಟೀಲು ಮೇಳದ ಆಟ 

 ‘ಶ್ರೀ ದುರ್ಗಾ ಸೇವಾ ಸಂಘ ಕನ್ಯಾನ’ ಇವರ ವತಿಯಿಂದ 18.03.2021ನೇ ಗುರುವಾರ ಕನ್ಯಾನದ ಶ್ರೀ ಸರಸ್ವತಿ ವಿದ್ಯಾಲಯದ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಕಲಾ ಮಂಡಳಿಯವರಿಂದ ರಾತ್ರಿ 9.30ಕ್ಕೆ ಸರಿಯಾಗಿ  ‘ಭಕ್ತ ಸುಧನ್ವ ಮತ್ತು ಭಾರ್ಗವ ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ರಾತ್ರಿ 8.30 ಘಂಟೆಗೆ ಚೌಕಿ ಪೂಜೆ ಮತ್ತು ಆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. 

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಏಪ್ರಿಲ್ ತಿಂಗಳಿನಲ್ಲಿ ಭಾರತಕ್ಕೆ ಭೇಟಿ (UK PM Boris Johnson will visit India in April)

ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಏಪ್ರಿಲ್ ತಿಂಗಳಿನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಬ್ರಿಟನ್ ಗೆ ಅವಕಾಶಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಏಪ್ರಿಲ್ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರ ಕಚೇರಿ ಸೋಮವಾರ ತಿಳಿಸಿದೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಯುನೈಟೆಡ್ ಕಿಂಗ್‌ಡಂಗೆ ಅವಕಾಶಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಏಪ್ರಿಲ್ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರ ಕಚೇರಿ ಸೋಮವಾರ ತಿಳಿಸಿದೆ.

ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ನಿರ್ಗಮಿಸಿದ ನಂತರ ಇದು ಅವರ ಮೊದಲ ಪ್ರಮುಖ ಅಂತರರಾಷ್ಟ್ರೀಯ ಪ್ರವಾಸವಾಗಿದೆ. ಗಣರಾಜ್ಯೋತ್ಸವದಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು ಆದರೆ ಯುಕೆ ನಲ್ಲಿ COVID-19 ಪ್ರಕರಣಗಳು ಹೆಚ್ಚಾಗಿದ್ದರಿಂದ ಮತ್ತು ಹೊಸ ಒತ್ತಡ ಹರಡಿದ್ದರಿಂದ ಯೋಜನೆಗಳನ್ನು ರದ್ದುಗೊಳಿಸಲಾಯಿತು. ಉಭಯ ದೇಶಗಳ ನಡುವಿನ ವ್ಯಾಪಾರ ಮಾತುಕತೆಯನ್ನು ಚುರುಕುಗೊಳಿಸುವ ಪ್ರಯತ್ನಗಳ ಭಾಗವಾಗಿ ಜಾನ್ಸನ್ ಜನವರಿ ಪ್ರವಾಸವನ್ನು ಯೋಜಿಸಿದ್ದರು.

ಮೇಳಗಳ ಇಂದಿನ (16.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (16.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಮೃಗವಧೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ =  = ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಥಬೀದಿ 

ಕಟೀಲು ಎರಡನೇ ಮೇಳ ==  ಮಾಡೂರು ಕೋಟೆಕಾರ್   

ಕಟೀಲು ಮೂರನೇ ಮೇಳ= ಪಡುಬಾಳಿಕೆಮನೆ ಕೆಂಜಾರು, ಪೇಜಾವರ ಮಠದ ಬಳಿ 

ಕಟೀಲು ನಾಲ್ಕನೇ ಮೇಳ  == ‘ಸಮೀಕ್ಷ’, ಕಾರ್ನಾಡು ಮುಲ್ಕಿ  

ಕಟೀಲು ಐದನೇ ಮೇಳ ==  ಮಾರ್ನಬೈಲು 

ಕಟೀಲು ಆರನೇ ಮೇಳ == ‘ ‘ಶ್ರೀ ದೇವಿ ನಿಲಯ’ ಬಾರೆಬೆಟ್ಟು ಕೊಳ್ನಾಡು 

ಮಂದಾರ್ತಿ ಒಂದನೇ ಮೇಳ  ==  ಕೂಡ್ಲಿ ಬಾರ್ಕೂರು – ಕೂಡಾಟ 

ಮಂದಾರ್ತಿ ಎರಡನೇ ಮೇಳ   ==  ಕುದ್ರುವಾಣಿ ಕುಳ್ಳುಂಡೆ  ಸಿಂಗನಬಿದ್ರೆ 

ಮಂದಾರ್ತಿ ಮೂರನೇ ಮೇಳ  ==   ಬೆಳ್ಯಾಡಿ ಮಕ್ಕಿಮನೆ ಸೇನಾಪುರ ಬಂಟ್ವಾಡಿ 

ಮಂದಾರ್ತಿ ನಾಲ್ಕನೇ ಮೇಳ   ==  ಹೆಗ್ಗೋಡು ಹೊನ್ನೇಸರ ಸಾಗರ  

ಮಂದಾರ್ತಿ    ಐದನೇ ಮೇಳ  ==  ಆವಿನಹಳ್ಳಿ ಸಾಗರ 

ಶ್ರೀ ಹನುಮಗಿರಿ ಮೇಳ  ==  ವಡ್ಡರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ – ಬಪ್ಪನಾಡು ಕ್ಷೇತ್ರ ಮಹಾತ್ಮೆ (ರಾತ್ರಿ 9.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕೊಪ್ಪ ಹುಲುಮಕ್ಕಿ – ಕಾರ್ತವೀರ್ಯ, ಜ್ವಾಲಾ ಪ್ರತಾಪ, ವೀರ ಅಭಿಮನ್ಯು  

ಶ್ರೀ ಪೆರ್ಡೂರು ಮೇಳ == ಪೆರ್ಡೂರು – ಸಂಪೂರ್ಣ ಶ್ರೀ ದೇವಿ ಮಹಾತ್ಮೆ   

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬೆಳ್ಮಾರ್ ಹೌಸ್, ಆರೂರು ಉಡುಪಿ  

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬಾಳೆಹಿತ್ಲು ಚಾವಡಿಮನೆ ಬಾಳಿಕೆರೆ ದೇವಲ್ಕುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಎಲ್ಲೂರು ಬಾಳ್ಕೊಡ್ಲು ಗೋಳಿಹೊಳೆ 

ಶ್ರೀ ಪಾವಂಜೆ ಮೇಳ  ==  ನೆಲ್ಯಾಡಿ – ಮಾನಿಷಾದ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ತಾಳಗುಪ್ಪ – ದಿವ್ಯ ಸನ್ನಿಧಿ  

ಕಮಲಶಿಲೆ ಮೇಳ ‘ಎ‘ = ಜನಾರ್ದನ ದೇವಸ್ಥಾನದ ಹತ್ತಿರ, ಕೂಡ್ಲಿ ಬಾರ್ಕೂರು 

ಕಮಲಶಿಲೆ ಮೇಳ ‘ಬಿ‘ ==  ಗಂಗನಕೊಡಿಗೆ ಕಂಚಿನಕೆರೆ ಕಳಸ  

ಶ್ರೀ ಬಪ್ಪನಾಡು ಮೇಳ == ಕೆಂಚನೂರು ತಲಗದ್ದೆ ಕುಂದಾಪುರ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ == ಕೊಯಿಕಾಡಿ ಕೆಳಹೆಬ್ಬಾಗಿಲುಮನೆ ಮೊಳಹಳ್ಳಿ 

ಶ್ರೀ ಬೋಳಂಬಳ್ಳಿ ಮೇಳ==  ಮಡಿಕಲ್ ಉಪ್ಪುಂದ  

ಶ್ರೀ ಸೌಕೂರು ಮೇಳ ==  ಗುಲ್ವಾಡಿ ತಾತಯ್ಯನಮಠ – ಮೇಘ ಮಯೂರಿ  

ಶ್ರೀ ಹಾಲಾಡಿ ಮೇಳ == ಮೂಗಿನಗುಡಿ ಈಶ್ವರ ದೇವಸ್ಥಾನ ಕಾನಮನೆ ಮಳಲಿ – ಭಸ್ಮಾಸುರ ಮತ್ತು ಪೌರಾಣಿಕ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ನಿಟ್ಟೆ ಕೆಮ್ಮಣ್ಣು ದುರ್ಗಾಪರಮೇಶ್ವರಿ ದೇವಸ್ಥಾನದ ಬಯಲು ರಂಗಮಂಟಪ  – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ದೇವಂಗಿ ಆದಿಶಕ್ತಿ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ರಾಜಾ ನಗರದ ರಕ್ತೇಶ್ವರಿ ಬನ – ಸಿರಿವಂತ ಶಿವರಾಯ   

ಶ್ರೀ ಹಿರಿಯಡಕ ಮೇಳ == ಕಲ್ಲಮುಂಡ್ಕೂರು ದೈಲಬೆಟ್ಟು – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ ==  ಉಮಾಮಹೇಶ್ವರಿ ದೇವಸ್ಥಾನ ಮುತ್ತೂರ್ ಗ್ರಾಮ, ಹೊಸನಗರ 

ಶ್ರೀ ಸಿಗಂದೂರು ಮೇಳ == ಸಿದ್ಧಾಪುರ ಬೆತ್ತಬೈಲು 

ಶ್ರೀ ನೀಲಾವರ ಮೇಳ  == ಹೆರಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಕೆಸ್ತೂರು   

ಶ್ರೀ ಮೇಗರವಳ್ಳಿ ಮೇಳ == ಹುಂಬಾಗಿಲು ಹೊನ್ನವಳ್ಳಿ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ

1ರಿಂದ 5ನೆಯ ತರಗತಿಗಳನ್ನು ನಡೆಸಿದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ – ಶಿಕ್ಷಣ ಸಚಿವ ಶ್ರೀ ಎಸ್. ಸುರೇಶ್ ಕುಮಾರ್

ಸರಕಾರ 6ನೆಯ ತರಗತಿ ಹಾಗೂ ಆರರಿಂದ ಮೇಲಿನ ತರಗತಿಗಳನ್ನು ಮಾತ್ರ ಆರಂಭಿಸಲು ಅನುಮತಿ ನೀಡಿರುವುದರಿಂದ 1ರಿಂದ 5ನೆಯ ತರಗತಿಗಳನ್ನು ನಡೆಸಿದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶ್ರೀ ಎಸ್ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. 

ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ನಿರ್ದೇಶನದ ಪ್ರಕಾರ  ಸರಕಾರ 6ನೆಯ ತರಗತಿ ಹಾಗೂ ಆರರಿಂದ ಮೇಲಿನ ತರಗತಿಗಳನ್ನು ಮಾತ್ರ ಆರಂಭಿಸಲು ಅನುಮತಿ ನೀಡಿದೆ. ಆದರೆ ಕೆಲವು ಶಿಕ್ಷಣ ಸಂಸ್ಥೆಗಳು  1ರಿಂದ 5ನೆಯ ತರಗತಿಗಳನ್ನು ಅನಧಿಕೃತವಾಗಿ ನಡೆಸುತ್ತಿವೆ ಎಂದು ದೂರುಗಳು ಬರುತ್ತಿವೆ.

ಈ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಗಳು ಬರುತ್ತಿವೆ. ಆದುದರಿಂದ ಅಂತಹಾ ಶಾಲೆಗಳ ವಿರುದ್ಧ ಸೂಕ್ತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿಕ್ಷಣ ಸಚಿವರು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

1ರಿಂದ 5ನೆಯ ತರಗತಿಗಳನ್ನು ಅನಧಿಕೃತವಾಗಿ ನಡೆಸುತ್ತಿರುವ  ಶಿಕ್ಷಣ ಸಂಸ್ಥೆಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವ ಸುರೇಶ್ ಕುಮಾರ್ ಅವರು ಇಲಾಖಾ ಆಯುಕ್ತರುಗಳಿಗೆ ಸೂಚಿಸಿದ್ದಾರೆ. 

ಬಾಟ್ಲಾ ಹೌಸ್ ಎನಕೌಂಟರ್ – ಅಪರಾಧಿ ಆರಿಜ್ ಖಾನ್ ಗೆ ಮರಣದಂಡನೆ (Batla House Encounter Case – Death Sentence To Convict Ariz Khan)

ದೆಹಲಿ ಕೋರ್ಟ್ ಬಾಟ್ಲಾ ಹೌಸ್ ಎನ್ಕೌಂಟರ್ ಪ್ರಕರಣದಲ್ಲಿ ಅರಿಜ್ ಖಾನ್ ಅವರನ್ನು ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿದೆ.    ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರನ್ನು ಹತ್ಯೆಗೈದ ಪಾತಕ ಕೃತ್ಯಕ್ಕಾಗಿ ದೆಹಲಿಯ ಸಾಕೆಟ್ ಕೋರ್ಟ್ ಸೋಮವಾರ ಬಟ್ಲಾ ಹೌಸ್ ಎನ್‌ಕೌಂಟರ್ ಅಪರಾಧಿ ಅರಿಜ್ ಖಾನ್ ಅವರಿಗೆ ಮರಣದಂಡನೆ ವಿಧಿಸಿದೆ. 

ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರನ್ನು ಕೊಂದು ಹೆಡ್ ಕಾನ್‌ಸ್ಟೆಬಲ್‌ಗಳಾದ ಬಲ್ವಂತ್ ಸಿಂಗ್ ಮತ್ತು ರಾಜ್‌ಬೀರ್ ಸಿಂಗ್ ಅವರನ್ನು ಗಾಯಗೊಳಿಸಿದ ಕೃತ್ಯಕ್ಕಾಗಿ ದೆಹಲಿಯ ಸಾಕೆಟ್ ಕೋರ್ಟ್ ಸೋಮವಾರ ಬಟ್ಲಾ ಹೌಸ್ ಎನ್‌ಕೌಂಟರ್ ಅಪರಾಧಿ ಮತ್ತು ಭಾರತೀಯ ಮುಜಾಹಿದ್ದೀನ್ ಭಯೋತ್ಪಾದಕ ಅರಿಜ್ ಖಾನ್ ಅವರಿಗೆ ಮರಣದಂಡನೆ ವಿಧಿಸಿದೆ.

ಮರಣದಂಡನೆ ವಿಧಿಸುವಾಗ ‘ಅಪರೂಪದ ಅಪರೂಪದ ಪ್ರಕರಣ’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಯಾದವ್ ಅವರು ಮೃತ ಇನ್ಸ್‌ಪೆಕ್ಟರ್ ಶರ್ಮಾ ಅವರ ಕುಟುಂಬಕ್ಕೆ 10 ಲಕ್ಷ ರೂ. ದಂಡ ಪಾವತಿಸಲೂ ಆದೇಶಿಸಿದ್ದಾರೆ.  

ಏನಿದು ಬಟ್ಲಾ ಹೌಸ್ ಎನ್ಕೌಂಟರ್ ? : 13 ಸೆಪ್ಟೆಂಬರ್ 2008 ರಂದು, ಐದು ಸರಣಿ ಬಾಂಬ್ ಸ್ಫೋಟಗಳು ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿತ್ತು ಮತ್ತು ಇದರಲ್ಲಿ 30 ಮಂದಿ ಗಾಯಗೊಂಡರು, ಜೈಪುರ, ಅಹಮದಾಬಾದ್ ಮತ್ತು ಬೆಂಗಳೂರಿನಲ್ಲಿ ಇದೇ ರೀತಿಯ ಸ್ಫೋಟಗಳು ಸಂಭವಿಸಿವೆ.

ವರದಿಗಳ ಪ್ರಕಾರ, ದೆಹಲಿಯ ಘಫರ್ ಮಾರುಕಟ್ಟೆಯಲ್ಲಿ ನಡೆದ ಮೊದಲ ಬಾಂಬ್ ಸ್ಫೋಟದ ಹತ್ತು ನಿಮಿಷಗಳ ನಂತರ, ಸ್ಫೋಟದ ಜವಾಬ್ದಾರಿಯನ್ನು ಭಾರತೀಯ ಮುಜಾಹಿದ್ದೀನ್ ವಹಿಸಿಕೊಂಡಿತ್ತು ಎಂದು ವರದಿಯಾಗಿದೆ. ಒಂದು ವಾರದ ನಂತರ, ದೆಹಲಿಯಲ್ಲಿ ಮುಜಾಹಿದ್ದೀನ್ ಕಾರ್ಯಕರ್ತರ ಸ್ಥಳದ ಬಗ್ಗೆ ದೆಹಲಿ ಪೊಲೀಸರಿಗೆ ಗುಜರಾತ್ ಪೊಲೀಸರಿಂದ ಗುಪ್ತಚರ ಮಾಹಿತಿ ದೊರಕಿತು, ಇದು ಸೆಪ್ಟೆಂಬರ್ 19, 2008 ರಂದು ಬಟ್ಲಾ ಹೌಸ್‌ನಲ್ಲಿ ಸಶಸ್ತ್ರ ದಾಳಿಗೆ ಕಾರಣವಾಯಿತು.  

ಹಿರಿಯ ಕಥಕ್ಕಳಿ ಕಲಾವಿದ ಚೆಮ್ಮಂಚೇರಿ ಕುಂಞಿರಾಮನ್ ನಾಯರ್ ನಿಧನ 

ಹಿರಿಯ ಕಥಕ್ಕಳಿ ಘಾತಕ ಗುರು ಚೆಮ್ಮಂಚೇರಿ ಕುಂಞಿರಾಮನ್ ನಾಯರ್ ಅವರು ಕೊಯಿಲಾಂಡಿಯ ಹತ್ತಿರದ ಚೆಲಿಯಾದಲ್ಲಿರುವ ನಿವಾಸದಲ್ಲಿ ಸೋಮವಾರ ಮುಂಜಾನೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.  

ಅವರಿಗೆ 105 ವರ್ಷ ವಯಸ್ಸಾಗಿತ್ತು.  ಕೇರಳದ ಕಥಕ್ಕಳಿ ಕಲಾ ಪ್ರಕಾರಕ್ಕೆ ಅವರು ನೀಡಿದ ಅದ್ಭುತ ಕೊಡುಗೆಯನ್ನು ಗುರುತಿಸಿ 2017 ರಲ್ಲಿ ಅವರನ್ನು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 

ಕಥಕ್ಕಳಿ ಪ್ರದರ್ಶನದ ವೇದಿಕೆಯಲ್ಲಿ ಅವರ ಭಗವಾನ್ ಕೃಷ್ಣ ಮತ್ತು ಕುಚೇಲಾ ಪಾತ್ರ ಚಿತ್ರಣವು ಯಾವಾಗಲೂ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿತ್ತು. ಅವರ ಕೊನೆಯ ಗಮನಾರ್ಹ ಸಾರ್ವಜನಿಕ ಕಥಕ್ಕಳಿ ಕಲಾ ಪ್ರದರ್ಶನವು ಅವರ 100 ನೇ ವಯಸ್ಸಿನಲ್ಲಿ ಆಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ತನ್ನ 14ನೆಯ ವಯಸ್ಸಿನಲ್ಲಿಯೇ ಕಥಕ್ಕಳಿಯೊಂದಿಗೆ ನಂಟು ಬೆಸೆದಿದ್ದ ಅವರು ಸುಮ್ಮಾರು ಒಂಬತ್ತು ದಶಕಗಳ ವರೆಗೆ ತನ್ನ ಕಲಾಯಾನವನ್ನು ಮುಂದುವರಿಸಿದ್ದು ಅದ್ಭುತ ಸಾಧನೆಯಾಗಿತ್ತು. ಅವರು 1945ರಲ್ಲಿ ನಾಟ್ಯ ಕಲಾಲಯಂ ಎಂಬ ನೃತ್ಯ ಶಾಲೆಯನ್ನು ಸ್ಥಾಪಿಸಿದ್ದರು. 
 

ಕೇರಳ ಸಂಗೀತ ನಾಟಕ ಅಕಾಡೆಮಿ ಮತ್ತು ಕೇರಳ ಕಲಾಮಂಡಲಂ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಮಾನ್ಯತೆಗಳನ್ನು ಪಡೆದರು. ಅವರ ಕಥಕ್ಕಳಿ ಪ್ರದರ್ಶನದ ಒಂದು ವೀಡಿಯೊ ನೋಡಿ  

ಮೇಳಗಳ ಇಂದಿನ (15.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (15.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಬೆಜ್ಜವಳ್ಳಿ ಸಂತೆ ಮೈದಾನ – ಪಾರಿಜಾತ, ನರಕಾಸುರ ಮೋಕ್ಷ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ =  = ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರ 

ಕಟೀಲು ಎರಡನೇ ಮೇಳ ==  ಮಾಡೋಡಿ, ಉಳಿ, ಬಂಟ್ವಾಳ  

ಕಟೀಲು ಮೂರನೇ ಮೇಳ= ಕಿನ್ನಿಲಚ್ಚಿಲು ಹೌಸ್, ಕೊಡೆತ್ತೂರು, ನಡುಗೋಡು 

ಕಟೀಲು ನಾಲ್ಕನೇ ಮೇಳ  == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಿಯ್ಯಾರು, ಕಾರ್ಕಳ 

ಕಟೀಲು ಐದನೇ ಮೇಳ ==  ಬಜಾಲ್, ಅಳಪೆ, ಕಾವು 

ಕಟೀಲು ಆರನೇ ಮೇಳ == ‘ ಮುಲಾರ ಕೋಣಾಜೆ ಶ್ರೀ ಗೋಪಾಲಕೃಷ್ಣ ಮಂದಿರದ ಬಳಿ   

ಮಂದಾರ್ತಿ ಒಂದನೇ ಮೇಳ  ==  ಸಂಜೀವಿನಿ ನಿಲಯ ಕೋಣಿಮನೆ ಉಪ್ಪಿನಕುದ್ರು 

ಮಂದಾರ್ತಿ ಎರಡನೇ ಮೇಳ   ==  ಹಿರೇತೋಟ ಬೆಜ್ಜವಳ್ಳಿ 

ಮಂದಾರ್ತಿ ಮೂರನೇ ಮೇಳ  ==   ಕಾರೇಬೈಲು ಶಂಕರನಾರಾಯಣ 

ಮಂದಾರ್ತಿ ನಾಲ್ಕನೇ ಮೇಳ   ==  ಶಾರದಾಪುರ ಯಡಜಗಳೆಮನೆ ಸಾಗರ – ಕೂಡಾಟ 

ಮಂದಾರ್ತಿ    ಐದನೇ ಮೇಳ  ==  ಶಾರದಾಪುರ ಯಡಜಗಳೆಮನೆ ಸಾಗರ – ಕೂಡಾಟ 

ಶ್ರೀ ಹನುಮಗಿರಿ ಮೇಳ  ==   ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪೊಸ್ರಾಲು – ಶುಕ್ರನಂದನೆ (ರಾತ್ರಿ 8ರಿಂದ)

ಶ್ರೀ ಸಾಲಿಗ್ರಾಮ ಮೇಳ == ಆರಗ ಕಲಾನಾಥೇಶ್ವರ ದೇವಸ್ಥಾನ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಪೆರ್ಡೂರು ಮೇಳ == ಅಂಪಾರು – ಅಹಂ ಬ್ರಹ್ಮಾಸ್ಮಿ  

ಶ್ರೀ ಸುಂಕದಕಟ್ಟೆ ಮೇಳ  ==  ಕಿನ್ನಿಗೋಳಿ ಗುತ್ತಕಾಡು ಶಾಂತಿನಗರ – ಸರ್ಪ ಸಂಬಂಧ  

ಶ್ರೀ ದೇಂತಡ್ಕ ಮೇಳ == ಸುಳ್ಯಪದವು – ಶ್ರೀ ವನದುರ್ಗಾ ಮಹಾತ್ಮೆ  (ಕಾಲಮಿತಿ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಉಪ್ಲಾಡಿ ತೆಂಕಬೆಟ್ಟು ವಡ್ಡರ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಳಿ, ಕೆರೆಕೊಡ್ಲು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಅಡಿಗದ್ದೆಮನೆ, ಮೆಕ್ಕೆ, ಜಡ್ಕಲ್ 

ಶ್ರೀ ಪಾವಂಜೆ ಮೇಳ  ==  ವಿಷ್ಣುಮೂರ್ತಿ ದೈವಸ್ಥಾನ,ತಿರುವಾಲೆ, ಇರಾ – ಇಂದ್ರಜಿತು, ಪಾರಿಜಾತ, ನರಕಾಸುರ  (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಸಂಡಳ್ಳಿ – ಸಂಪೂರ್ಣ ನಾಗಶ್ರೀ 

ಕಮಲಶಿಲೆ ಮೇಳ ‘ಎ‘ = ಹೆನ್ನಾಬೈಲು

ಕಮಲಶಿಲೆ ಮೇಳ ‘ಬಿ‘ ==  ತೋಟದಮನೆ ತುಮಕೂರು – ಶ್ರೀ ದೇವಿ ಮಹಾತ್ಮೆ 

ಶ್ರೀ ಬಪ್ಪನಾಡು ಮೇಳ == ಅರ್ಜುನಕೋಡಿ ದರ್ಕಾಸ್ – ಬಂಗಾರ್ ಬಾಲೆ(ತುಳು)

ಶ್ರೀ ಅಮೃತೇಶ್ವರೀ ಮೇಳ == ಕ್ಯಾದ್ರಿಕೆರೆ ಹರ್ತಟ್ಟು  

ಶ್ರೀ ಬೋಳಂಬಳ್ಳಿ ಮೇಳ==  ಸೇನೇಶ್ವರ ದೇವಸ್ಥಾನ ಬೈಂದೂರು – ಪದ್ಮಾವತಿ. ಮೀನಾಕ್ಷಿ 

ಶ್ರೀ ಸೌಕೂರು ಮೇಳ ==  ಹಟ್ಟಿಕುದ್ರು ಶ್ರೀ ಮಹಾಗಣಪತಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಬಾಣಾವರ ಕೆ.ಬಿ ಸರ್ಕಲ್ – ಪಾಪಣ್ಣ ವಿಜಯ, ಗುಣ ಸುಂದರಿ 

ಶ್ರೀ ಬೆಂಕಿನಾಥೇಶ್ವರ ಮೇಳ  == ಇರ್ವತ್ತೂರು ಕೊಳಕೆ ಕುಕ್ಕಿಂತಾಯ ಕೊಡಮಣಿತ್ತಾಯ ಗರಡಿ ಮುಂಭಾಗ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಕಗ್ಲಿ ಅರಳ ಸುರುಳಿ – ಜಾಂಬವತಿ ಕಲ್ಯಾಣ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ನಗರ ಕಾರಣಗಿರಿ – ಪ್ರಚಂಡ ಪಂಜುರ್ಲಿ  

ಶ್ರೀ ಹಿರಿಯಡಕ ಮೇಳ == ಮೂಡಬಿದ್ರೆ ಕಲ್ಲಬೆಟ್ಟು – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ ==  ಮುತ್ತೇಶ್ವರ ಗ್ರಾಮ ತೀರ್ಥಹಳ್ಳಿ 

ಶ್ರೀ ಸಿಗಂದೂರು ಮೇಳ == ಕೆಸರಕೊಪ್ಪ, ಕೋಣನಬಿಡ್ಕಿ ಶಾಲಾ ವಠಾರ 

ಶ್ರೀ ನೀಲಾವರ ಮೇಳ  == ಸಚ್ಚಿ ಕಾಂಪ್ಲೆಕ್ಸ್ ಬಳಿ ಬನ್ನೇರಳೆಕಟ್ಟೆ – ದೈವ  ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಸಂಕ್ಲಾಪುರ 

ಶ್ರೀ ಮೇಗರವಳ್ಳಿ ಮೇಳ == ಕಡ್ತೂರು ವೀರಭದ್ರೇಶ್ವರ ದೇವಸ್ಥಾನ – ನೂತನ ಪ್ರಸಂಗ 

ಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು (ಭಾಗ – 4)

ಮಾಸ್ತರರ ಗುರುಮನೆ ಕಂಡೆತ್ತೋಡಿ. ಹೊಳೆಯ ಒಂದು ತೀರದಲ್ಲಿದ್ದ ಕೀರಿಕ್ಕಾಡು ಮನೆಯಿಂದ ಮತ್ತೊಂದು ತೀರದಲ್ಲಿ ಕಂಡೆತ್ತೋಡಿ ಗುರು ಮನೆ ಕಾಣಿಸುತ್ತಿತ್ತು. ಮಾಸ್ತರರಿಗೆ ಆ ಮನೆ ಒಂದು ಕಲಿಕಾ ಕೇಂದ್ರವೇ ಆಗಿತ್ತು. ಗುರುಗಳಾದ ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರ ಸಂಗ್ರಹಗಳಲ್ಲಿದ್ದ ಪುಸ್ತಕಗಳನ್ನು ಓದುತ್ತಿದ್ದರು. ಅವರಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು.

ಕೀರಿಕ್ಕಾಡಿನಿಂದ ಬನಾರಿಗೆ ಬಂದು ನೆಲೆಸಿದ ಮೇಲೂ ಕಂಡೆತ್ತೋಡಿಗೆ ಮಾಸ್ತರರು ಆಗಾಗ ಹೋಗುತ್ತಿದ್ದರಂತೆ. ಹಾಗಿತ್ತು ಗುರು ಶಿಷ್ಯರ ಸಂಬಂಧ. ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರ ಪುತ್ರ ಶ್ರೀಧರ ಕೇಕುಣ್ಣಾಯರೂ ತಾಳಮದ್ದಳೆ ಅರ್ಥಧಾರಿಯಾಗಿದ್ದರು.            ಉಕ್ಕಿನಡ್ಕ‌ ವಸಿಷ್ಠಾಶ್ರಮ ಸಂಸ್ಕೃತ ಪಾಠಶಾಲೆಯ ತಾಳಮದ್ದಳೆಯ ಸಂದರ್ಭದಲ್ಲಿ ಪ್ರಾರಂಭವಾದ ಕೀರಿಕ್ಕಾಡು‌ – ಶೇಣಿಯವರ ಗುರು ಶಿಷ್ಯ ಸಂಬಂಧ ನಿರಂತರ ಮುಂದೆ ಸಾಗಿತ್ತು.

ಜೊತೆಯಾಗಿ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಉಕ್ಕಿನಡ್ಕ‌ ಎಂಬ ಊರು ಇವರಿಗೆಂದಲ್ಲ, ಹಲವಾರು ಕಲಾವಿದರಿಗೆ ಒಂದು ನಿಲ್ದಾಣವೇ ಆಗಿತ್ತು. ಅಲ್ಲೊಂದು ಉಪಾಹಾರ ಗೃಹವನ್ನು ವಳಕ್ಕುಂಜ ರಾಮ ಭಟ್ಟರು ನಡೆಸುತ್ತಿದ್ದರು. ಶೇಣಿಯವರೂ ರಾಮ ಭಟ್ಟರೂ ಒಂದೇ ಕುಟುಂಬಸ್ಥರು. ರಾಮ ಭಟ್ಟರಿಗೆ ಶೇಣಿಯವರೆಂದರೆ ಬಲು ಪ್ರೀತಿ. ಶೇಣಿಯವರೂ ರಾಮ ಭಟ್ಟರೂ ಆತ್ಮೀಯರಾಗಿದ್ದರು. ಕಲೆ ಮತ್ತು ಕಲಾವಿದರನ್ನು ಪ್ರೀತಿಸಿ ಗೌರವಿಸುವ ಗುಣ ರಾಮ ಭಟ್ಟರದು. ಅವರ ಉಪಾಹಾರ ಗೃಹವು ಕಲಾವಿದರ ಹಸಿವು ತೃಷೆಗಳನ್ನು ತಣಿಸುವ ಮನೆಯಾಗಿತ್ತು.

ಅಲ್ಲಿ ಕಲಾವಿದರೆಲ್ಲಾ ಒಟ್ಟು ಸೇರಿ ನಡೆದೇ ತಾಳಮದ್ದಳೆ ನಡೆಯುವ ಸ್ಥಳಕ್ಕೆ‌ ಹೋಗುತ್ತಿದ್ದರಂತೆ. ರಾಮ ಭಟ್ಟರು ಅವರ ಜೊತೆಗೆ ಹೋಗುತ್ತಿದ್ದರು. ಕೀರಿಕ್ಕಾಡು ಪರಿಸರದ ಕಲಾಸಕ್ತರಿಗೆ ತಮ್ಮ ಶಿಷ್ಯ ಕಡಾರು ನಾರಾಯಣ ಭಟ್ಟರಿಂದ ನಾಟ್ಯ ತರಬೇತಿಯನ್ನು ಮಾಸ್ತರ್ ವಿಷ್ಣು ಭಟ್ಟರು ಕೊಡಿಸಿದರು. ತನ್ನ ತಮ್ಮ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟರಿಗೂ ಅರ್ಥಗಾರಿಕೆ ಕಲಿಸಿ ತಾಳಮದ್ದಳೆ ಕ್ಷೇತ್ರಕ್ಕೆ ಪ್ರವೇಶ ಮಾಡುವಂತೆ ಪ್ರಚೋದಿಸಿದರು.

ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟರು ಅತ್ಯುತ್ತಮ ಅರ್ಥಧಾರಿಯಾಗಿದ್ದರು. ಮಾಸ್ತರರಂತೆ ಪ್ರತಿಫಲಾಪೇಕ್ಷೆಯಿಲ್ಲದೆ ಕಲಾಸೇವೆ ಮಾಡಿದ್ದರು. ಕೂಟಗಳಲ್ಲಿ ಅವರು ಬಹಳ ಬೇಡಿಕೆಯ ಕಲಾವಿದರಾಗಿದ್ದರು. ರಾತ್ರಿ ತಾಳಮದ್ದಳೆ. ಬೆಳಗ್ಗೆ ನಡೆದೇ ಸಾಗಿ ಬಂದು ಶಾಲೆಯಲ್ಲಿ ಮಕ್ಕಳಿಗೆ ಪಾಠ. ಸಾಹಿತ್ಯ ಸೇವೆ,  ಮನೆ ನಿರ್ವಹಣೆ ಹೀಗೆ ನಿರಂತರ ಚುರುಕಾದ ಚಟುವಟಿಕೆ. ನಿದ್ದೆಯಿಲ್ಲದೆ ಕಳೆದ ದಿನಗಳನೇಕ. ಯಕ್ಷಗಾನ ಕಲೆಯನ್ನು ತನ್ನ ಉಸಿರೆಂದೇ ಸ್ವೀಕರಿಸಿದ್ದರು.

ಕಲೆಯ ಹೊರತಾದ ಬದುಕನ್ನು ಮಾಸ್ತರ್ ವಿಷ್ಣು ಭಟ್ಟರು ಕನಸಿನಲ್ಲಿಯೂ ಕಲ್ಪಿಸಿಕೊಂಡಿರಲಿಲ್ಲ. ಯಕ್ಷಗಾನದ ಜೊತೆಗಿನ ನಂಟು ಅಷ್ಟು ತೀವ್ರವಾಗಿತ್ತು. ಕೀರಿಕ್ಕಾಡಿನಲ್ಲಿರುವಾಗ ಭಾಗವತರಾದ ನಡುಮನೆ ಜತ್ತಪ್ಪ ರೈಗಳು ಮಾಸ್ತರರ ಆತ್ಮೀಯರಾಗಿದ್ದರು. ಹಳೆಯ ಕಾಲದ ಒಳ್ಳೆಯ ಭಾಗವತರಾಗಿದ್ದ ನಡುಮನೆ ಶ್ರೀ ಜತ್ತಪ್ಪ ರೈಗಳು ವೃತ್ತಿ ಕಲಾವಿದರಾಗಿಯೂ ಪ್ರಸಿದ್ಧರು. ಉತ್ತಮ ಕೃಷಿಕರೂ ಆಗಿದ್ದ ಮಾಸ್ತರರು ಜೀವನ ನಿರ್ವಹಣೆಯ ಉದ್ದೇಶದಿಂದ ಕೀರಿಕ್ಕಾಡಿನಿಂದ ಹೊರಟು ದೇಲಂಪಾಡಿಯ ಬನಾರಿಗೆ ಹೋಗಿ ನೆಲೆಸುವ ತೀರ್ಮಾನವನ್ನು ಮಾಡಿದರು.

ಕೀರಿಕ್ಕಾಡು ಸ್ಥಳವನ್ನು ವಿಕ್ರಯಿಸಿ 1943 ರಲ್ಲಿ ಬನಾರಿಗೆ ನಡೆದೇ ಬಂದಿದ್ದರು. ಶಾಲೆಯ ಅಧ್ಯಾಪಕ ವೃತ್ತಿಯನ್ನು ತಮ್ಮನಾದ ಕೀರಿಕ್ಕಾಡು ಗೋಪಾಲಕೃಷ್ಣ ಭಟ್ಟರಿಗೆ ವಹಿಸಿ ಬಂದಿದ್ದರು. ಕೀರಿಕ್ಕಾಡು ಗೋಪಾಲಕೃಷ್ಣ ಭಟ್ ಅವರ ಪುತ್ರರಾದ ಗಣೇಶ ಶರ್ಮ ಕೀರಿಕ್ಕಾಡು ವೃತ್ತಿ ಕಲಾವಿದರು. ಮಾಸ್ತರ್ ವಿಷ್ಣು ಭಟ್ಟರು ಪತ್ನಿ ಮತ್ತು ಇಬ್ಬರು ಪುತ್ರರ ಜೊತೆಗೆ ಹುಟ್ಟೂರಿಗೆ ವಿದಾಯ ಹೇಳಿ 1943 ಮಾರ್ಚ್ ತಿಂಗಳಲ್ಲಿ ಬನಾರಿಗೆ ಬಂದಾಗ ಪರಿಸರದ ಜನರೆಲ್ಲಾ ಅತ್ಯಂತ ಸಂತೋಷಪಟ್ಟಿದ್ದರು. ನಮಗೂ ಯಕ್ಷಗಾನ ಕಲಿಯಬೇಕು, ಕಲಿಸಿ ಕೊಡಿ ಎಂಬ ಬೇಡಿಕೆಯನ್ನೂ ಮುಂದಿಟ್ಟರು.

ಕೀರಿಕ್ಕಾಡಿನಂತೆ ಸಂಪರ್ಕ ವ್ಯವಸ್ಥೆಗಳಿಲ್ಲದೆ ತೀರಾ ಹಿಂದುಳಿದ ಪ್ರದೇಶವಾಗಿತ್ತು ಬನಾರಿ. ಒಣ ಭೂಮಿಯನ್ನು ಶ್ರಮ ವಹಿಸಿ, ಬೆವರಿಳಿಸಿ ದುಡಿದು ಕೃಷಿ ಯೋಗ್ಯ ಪ್ರದೇಶವನ್ನಾಗಿ ಮಾಡಿದರು. ಜೊತೆಗೆ ಕಲಾಸೇವೆ. ಊರಿನ ಮಂದಿಗಳ ಪ್ರೀತಿಯ ಕೋರಿಕೆಯನ್ನು ಸ್ವೀಕರಿಸಿ ಯಕ್ಷಗಾನ ತರಬೇತಿಯನ್ನು ನೀಡುವ ಮನ ಮಾಡಿದರು.

ಮಾಸ್ತರರ ಆಗಮನದಿಂದ ದೇಲಂಪಾಡಿಯ ಚಿತ್ರಣವೇ ಬದಲಾಗಿತ್ತು. ಜಾತಿ ಬೇಧವಿಲ್ಲದೆ ಕಲಿಕಾಸಕ್ತರೆಲ್ಲರನ್ನೂ ತನ್ನ ಮನೆಗೆ ಕರೆದು ಕುಳ್ಳಿರಿಸಿ ಪ್ರತಿಫಲಾಪೇಕ್ಷೆಯಿಲ್ಲದೆ ಹೇಳಿಕೊಟ್ಟರು. ಶಿಸ್ತಿನಿಂದ ಬದುಕನ್ನು ನಡೆಸಬೇಕೆಂಬ ನಿಯಮವನ್ನು ಪಾಠ ಆರಂಭಿಸುವ ಮೊದಲೇ ಹೇಳಿದ್ದರು.

ಲಕ್ಷ್ಮೀನಾರಾಯಣ ಕಲ್ಲೂರಾಯ, ಕೇದಗಡಿ ಗುಡ್ಡಪ್ಪ ಗೌಡ, ಅಣ್ಣಯ್ಯ ಭಂಡಾರಿ, ಕಂಪನಾರಾಯಣ ರೈ, ಗುತ್ತು ನಾರಾಯಣ ರೈ, ಕೆ.ವಿ. ನಾರಾಯಣ ರೈ, ಯಂ. ಬಿ.ಗೋವಿಂದಯ್ಯ, ಮುದಿಯಾರು ರಾಮಪ್ಪ ಗೌಡ, ಕೃಷ್ಣ ಮನೋಳಿತ್ತಾಯ, ಮೈಯಾಳಮೇಘನಾಥ ರೈ, ಬಂದಿಯಡ್ಕ ಮಹಾಲಿಂಗ ಗೌಡ, ಬೆಳ್ಳಿಪ್ಪಾಡಿ ಕುಂಞಣ್ಣ ರೈ, ಬನದಮೂಲೆ ಸೇಸಪ್ಪ ಗೌಡ, ಮೊದಲ ವರ್ಷದ ಶಿಷ್ಯಂದಿರಾಗಿ ಮಾಸ್ತರರ ಕೈಯಿಂದ ಯಕ್ಷಗಾನವನ್ನು ಕಲಿತವರು. 

ಲೇಖನ: ರವಿಶಂಕರ್ ವಳಕ್ಕುಂಜ

ಭಾರತೀಯ ಕಲೆಗಳಿಗೆ ಮನಸೋತ ವಿದೇಶಿಯರು –  ಈ ವೀಡಿಯೋ ನೋಡಿ (Foreigners are attracted by Indian art and culture)

ಭಾರತದ ಸಂಸ್ಕೃತಿ ಎಂಬುದು ವಿದೇಶಿಯರಿಗೆ ಅದ್ಭುತ, ಸೋಜಿಗಗಳ ವಿಚಾರ. ಭಾರತದ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿವಿಧ ಕಲೆಗಳ ಬಗ್ಗೆ ವಿದೇಶಿಯರು ಕುತೂಹಲದ ದೃಷ್ಟಿ ಬೀರುತ್ತಿರುವುದು ಇಂದು ನಿನ್ನೆಯ ವಿಚಾರವೇನಲ್ಲ. ಭಾರತದ ಅನೇಕ ಕಲಾಪ್ರಾಕಾರಗಳನ್ನು ಅಭ್ಯಸಿಸಿ ಅದರಲ್ಲಿ ಭಾರತೀಯರಿಗಿಂತಲೂ ಹೆಚ್ಚಿನ ನೈಪುಣ್ಯವನ್ನು, ಸಾಧನೆಯನ್ನು ಪ್ರದರ್ಶಿಸಿದ್ದರೇನೋ ಎಂಬ ಸಂಶಯವನ್ನು ತಾಳುವಂತೆ ಮಾಡಿದ ವಿದೇಶಿಯರು ಹಲವಾರು ಮಂದಿ ಇದ್ದಾರೆ. 

ಸಂಗೀತ, ಭರತನಾಟ್ಯ, ಉತ್ತರ ಭಾರತದ ವಿವಿಧ ನತ್ಯಪ್ರಾಕಾರಗಳು, ಕಥಕ್ಕಳಿ, ಕೂಚುಪುಡಿ, ಒಡಿಸ್ಸಿ, ಹೀಗೆ ಹಲವಾರು ಕಲೆಗಳನ್ನು ವಿದೇಶಿಯರು ಅಭ್ಯಸಿಸಿ ಸಾಧನೆ ಮಾಡಿದ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. 

ಯಕ್ಷಗಾನವನ್ನು ಕೂಡಾ ಹಲವಾರು ವಿದೇಶಿಯರು ಕಲಿತಿದ್ದಾರೆ. ಅದರ ಬಗ್ಗೆ ಸಂಶೋಧನೆಯನ್ನೂ ನಡೆಸಿದ್ದಾರೆ. ಈ ವೀಡಿಯೋದಲ್ಲಿ ವಿದೇಶಿ ಕಲಾವಿದರು ಭರತನಾಟ್ಯ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. 

1.07.2017ರಂದು  ರಿಗಾ ರಥಯಾತ್ರೆಯ ಸಂದರ್ಭದಲ್ಲಿ (ಲಾಟ್ವಿಯಾ),  ಗೌರಾ ನಟರಾಜ್ ದಾಸ್ (ಅಲೆಕ್ಸ್ ಫರ್ಡಾಕ್) ಮತ್ತು ಪದ್ಮಿನಿ ಶ್ರೀದೇವಿ (ಲಾರಿಸಾ ಪೊಡ್ಸ್ಕೋಚಾಯಾ) ಅವರು ಥಿಲ್ಲಾನಾ ಬೃಂದಾವನಿ ಪ್ರದರ್ಶನ ನೀಡಿದರು.  ಶ್ರೀಮತಿ ನರ್ಮದಾ ಅವರ ನೃತ್ಯ ಸಂಯೋಜನೆ.