Tuesday, March 17, 2026
Home Blog Page 132

ಹಿಂದೂ ವಿದ್ಯಾರ್ಥಿಗೆ “ಅಲ್ಲಾ ಹು ಅಕ್ಬರ್” ಎಂದು ಹೇಳುವಂತೆ ತೀವ್ರವಾಗಿ ಥಳಿಸಿದ ಮುಸ್ಲಿಂ ವಿದ್ಯಾರ್ಥಿಗಳು, ಹೈದರಾಬಾದ್ ನ ಶಂಕರಪಲ್ಲಿಯ ICFAI ಬಿಸಿನೆಸ್ ಸ್ಕೂಲ್‌ನಲ್ಲಿ ಘಟನೆ- ವೀಡಿಯೋ ವೈರಲ್, ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿರುವ ಪೋಲೀಸರು

0

ವೈರಲ್ ವೀಡಿಯೊವೊಂದರಲ್ಲಿ, ಹೈದರಾಬಾದ್‌ನ ಖಾಸಗಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಹಿಮಾಂಕ್ ಬನ್ಸಾಲ್ ಎಂದು ಗುರುತಿಸಲಾದ ಇನ್ನೊಬ್ಬ ವಿದ್ಯಾರ್ಥಿಯನ್ನು ಥಳಿಸುತ್ತಿರುವುದನ್ನು ಕಾಣಬಹುದು. ವಿದ್ಯಾರ್ಥಿಗಳು “ಅಲ್ಲಾ ಹು ಅಕ್ಬರ್” ಎಂದು ಹೇಳುವಂತೆ ಒತ್ತಾಯಿಸುವುದನ್ನು ವೀಡಿಯೊದಲ್ಲಿ ಕೇಳಬಹುದು. ವಿದ್ಯಾರ್ಥಿಗಳು “ಅವರ ಸಿದ್ಧಾಂತವನ್ನು ಸರಿಪಡಿಸುತ್ತೇನೆ, ಹೊಡೆಯೋಣ” ಎಂದು ಹೇಳುವುದನ್ನು ಕೇಳಬಹುದು. ಅವನು ಕೋಮಾಗೆ ಹೋಗಿದ್ದಾನೆ” ಎಂದು ವೀಡಿಯೊದಲ್ಲಿ ಹೇಳಲಾಗಿದೆ.

ಸಂತ್ರಸ್ತನ ದೂರಿನ ಪ್ರಕಾರ ಈ ಘಟನೆ ನವೆಂಬರ್ 1 ರಂದು ಶಂಕರಪಲ್ಲಿಯ ICFAI ಬಿಸಿನೆಸ್ ಸ್ಕೂಲ್‌ನಲ್ಲಿ ನಡೆದಿದೆ. ನಿನ್ನೆ ಪ್ರಕರಣ ದಾಖಲಿಸಿಕೊಂಡಿದ್ದು, ಸಂತ್ರಸ್ತನ ದೂರಿನ ಮೇರೆಗೆ ಪೊಲೀಸರು ಆರೋಪಿಯ ವಿರುದ್ಧ ಕೊಲೆ ಯತ್ನ ಸೆಕ್ಷನ್ 307 ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಐಪಿಸಿ ಸೆಕ್ಷನ್ 323, 450 ಮತ್ತು 506 ರ ಅಡಿಯಲ್ಲಿ ರ ್ಯಾಗಿಂಗ್ ಆರೋಪವನ್ನು ದಾಖಲಿಸಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಆರೋಪಿಯನ್ನು ಅಮಾನತು ಮಾಡಿದೆ. ಸಂಸ್ಥೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಪೊಲೀಸ್ ವರದಿಯ ಪ್ರಕಾರ, , “ಅವನ ಮುಖದ ಮೇಲೆ ಗುದ್ದುವುದು, ಕಪಾಳಮೋಕ್ಷ ಮಾಡುವುದು, ಕಿಬ್ಬೊಟ್ಟೆಯ ಭಾಗಗಳಲ್ಲಿ ಒದೆಯುವುದು, ಅವನ ಜನನಾಂಗಗಳನ್ನು ಮುಟ್ಟುವುದು ಮತ್ತು ಕೆಲವರು ರಾಸಾಯನಿಕಗಳನ್ನು ತಿನ್ನುವಂತೆ ಒತ್ತಾಯಿಸಿದರು. ಒಬ್ಬ ವಿದ್ಯಾರ್ಥಿ, ರೀವಾ (3ನೇ ವರ್ಷದ ಬಿಬಿಎ ವಿದ್ಯಾರ್ಥಿ, ಐಬಿಎಸ್ ಹೈದರಾಬಾದ್) ಎಂಬಾತ ತನ್ನ ಜನನಾಂಗವನ್ನು ಅವನ ಬಾಯಿಗೆ ಹಾಕಲು ಪ್ರಯತ್ನಿಸಿದನು.

ಅವರ ಬಟ್ಟೆ ಹರಿದು, ಬೆತ್ತಲೆಯಾಗಿಸಲು ಯತ್ನಿಸಿದರು ಮತ್ತು ಸಾಯುವವರೆಗೂ ಸೋಲಿಸಿ ಎಂಬ ಘೋಷಣೆಯೊಂದಿಗೆ ಒಬ್ಬರ ನಂತರ ಒಬ್ಬರಂತೆ ಹೊಡೆಯುತ್ತಿದ್ದರು. ಹಿಮಾಂಕ್ , ಅಪಾರವಾದ ಆಘಾತದಿಂದಾಗಿ ಅವನ ಮನಸ್ಸಿನಲ್ಲಿ ಆತ್ಮಹತ್ಯೆಯ ಆಲೋಚನೆಗಳು ಮತ್ತು ಕಳೆದ ಮೂರು ರಾತ್ರಿಗಳಿಂದ ಅವನು ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಮತ್ತು ದುಃಖವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಪದವಿ ಕಾರ್ಯಕ್ರಮದ ಅಡಿಯಲ್ಲಿ ತಮ್ಮ ಕಾನೂನಿನ ಮೊದಲ ಸೆಮಿಸ್ಟರ್‌ನಲ್ಲಿದ್ದಾರೆ ಎಂದು ಅವರು ಹೇಳಿದರು,

ಅವರ ಪೋಷಕರು ಅವನಿಗಾಗಿ ಅಳುವುದನ್ನು ನೋಡಲು ಅಸಹನೀಯವಾಗಿದೆ. ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಎಫ್‌ಐಆರ್,” ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಲೇಜನ್ನು ಟೀಕಿಸಿದ್ದಾರೆ.

“#ICFAI ಕೂಡ ಜವಾಬ್ದಾರರಾಗಬೇಕಲ್ಲವೇ. ಅವರ ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ಇಲ್ಲಿ ಕಾರ್ಯನಿರ್ವಹಿಸಲು ವಿಫಲವಾಗಿದೆ. ನಿರ್ವಹಣೆಯಿಂದ ಯಾವುದೇ ಕ್ರಮವಿಲ್ಲ, ”ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟ್ವೀಟ್ ಮಾಡಿ, “ಹೈಮಾಂಕ್ ಬನ್ಸಾಲ್ ಹೈದರಾಬಾದಿನಲ್ಲಿ ಕಲಿಯುತ್ತಿರುವಾಗ, ಕ್ಯಾಂಪಸ್‌ನಲ್ಲಿ ಬೇರೆ ಧರ್ಮದ ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿ, “ಅಲ್ಲಾ ಹು ಅಕ್ಬರ್” ಎಂದು ಜಪಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಈ ವಿಷಯವನ್ನು ಯಾವುದೇ ಮಾಧ್ಯಮ ವರದಿ ಮಾಡುತ್ತಿಲ್ಲ.”

ಮತ್ತೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ, “ಈ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.

ಸಹೋದರ ಮೊಬೈಲ್‌ ಪಾಸ್ ವರ್ಡ್ ಬದಲಿಸಿದ್ದಕ್ಕಾಗಿ 19ರ ಯುವತಿ ಆತ್ಮಹತ್ಯೆ

0


ಒಮ್ಮೊಮ್ಮೆ ಮೊಬೈಲ್‌ ಎಂಬ ಗೀಳಿಗೆ ಅಂಟಿಕೊಳ್ಳುವ ಈಗಿನ ಯುವಕ ಯುವತಿಯರು ಆ ‌ಚಟದಿಂದ ಹೊರಬರಲಾರದೆ ಚಡಪಡಿಸುತ್ತಿರುವುದನ್ನು ಕಾಣಬಹುದು.

ಇಲ್ಲೊಂದು ಪ್ರಕರಣ ಅದೇ ರೀತಿ ನಡೆದಿದೆ. ಮಾತ್ತವಲ್ಲದೆ ಈ ಮೊಬೈಲ್‌ ಚಟ ಯುವತಿಯ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಯುವತಿ ತನ್ನ ತಮ್ಮ (ಕಿರಿಯ ಸಹೋದರ) ಮೊಬೈಲ್ ಓಪನ್ ಮಾಡುವ ಪಾಸ್ ವರ್ಡ್ ಬರಲಿಸಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಘಟನೆ ನಡೆದದ್ದು ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯಲ್ಲಿ. ಇಲ್ಲಿಯ ನಿವಾಸಿ 19 ವರ್ಷದ ಯುವತಿ ರುಚಿತಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಹುಡುಗಿ.

ಆಕೆಗೆ ಅತಿಯಾಗಿ ಮೊಬೈಲ್‌ ಬಳಸುವ ಚಾಳಿ ಅಂಟಿಕೊಂಡಿತ್ತು. ಅದನ್ಮು ಬಿಡಿಸಲು ಆಕೆಯ ತಮ್ಮ ಆಕೆಗೆ ಪ್ರತಿದಿನ ಬುದ್ಧಿ ಹೇಳುತ್ತಿದ್ದ. ಆದರೆ ಆಕೆ ಕೇಳಿರಲಿಲ್ಲ.

ಕೊನೆಗೆ ಆಕೆಯ ಅಭ್ಯಾಸವನ್ನು ಬಿಡಿಸಲು ಮೊಬೈಲ್ ತೆರೆಯುವ ಪಾಸ್ ವರ್ಡ್ ಕೋಡನ್ನು ಬದಲಾವಣೆ ಮಾಡಿದ್ದ. ಇದನ್ನು ತಿಳಿದ ಆಕೆ ಹೊಸ ಪಾಸ್ ವರ್ಡ್ ಹೇಳುವಂತೆ ತಮ್ಮನನ್ನು ಒತ್ತಾಯಿಸಿದಳು. ಆದರೆ ಆತ ಹೇಳಿರಲಿಲ್ಲ.

ಇದರಿಂದ ಜಗಳ ಮಾಡಿಕೊಂಡ ಆಕೆ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ದೊಡ್ಡಬಳ್ಳಾಪುರ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಕೃಪಾಲ್.ಪಿ.ಕೆ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಕೃಪಾಲ್.ಪಿ.ಕೆ ರಾಷ್ಟ್ರಮಟ್ಟಕ್ಕೆ ಆಯ್ಕೆ.


ವಿದ್ಯಾಭಾರತಿ ಕರ್ನಾಟಕ, ಹಾಗೂ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಇವರ ಜಂಟಿ ಆಶ್ರಯದಲ್ಲಿ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 13, 14ರಂದು ಕರ್ನಾಟಕ ಆಂಧ್ರ ಪ್ರದೇಶ್ ತೆಲಂಗಣ ರಾಜ್ಯ ವನ್ನು ಒಳಗೊಂಡ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಕೃಪಾಲ್.ಪಿ.ಕೆ (ಕೆಮ್ಮಾಯಿ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 600 ಮೀಟರ್-ದ್ವಿತೀಯ ಸ್ಥಾನ ಪಡೆದುಕೊಂಡಿದ್ದು,

ನವೆಂಬರ್ 19ರಿಂದ 23ರವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾನೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಡಾ. ಕೃಷ್ಣಮೂರ್ತಿ ಸಾವಿನ ಹಿಂದೆ ಕಾಣದ ಕೈಗಳ ಹಿಂದಿನ ಕೆಲವು ರಹಸ್ಯಗಳು – ಬದಿಯಡ್ಕ ಪೊಲೀಸರ ನಿರ್ಲಕ್ಷ್ಯ? ಪೋಲೀಸರು ಮೊದಲೇ ದೂರು ಸ್ವೀಕರಿಸಿ ಹುಡುಕಿದ್ದರೆ ಡಾಕ್ಟರ್ ಸಾಯುವ ಮೊದಲೇ ಸಿಗುತ್ತಿದ್ದರೇ? ಕೊಲೆಗೆ ಭೂಗತ ಮಾಫಿಯಾ ಜಗತ್ತಿನ ನಂಟು?

0

ಬದಿಯಡ್ಕದ ಡೆಂಟಲ್ ಕ್ಲಿನಿಕ್ ನ ಡಾ. ಕೃಷ್ಣಮೂರ್ತಿ ಅವರದ್ದು ಆತ್ಮಹತ್ಯೆ ಅಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂಬ ಮಾತುಗಳು ಕೇಳಿಬರುವ ಹಿನ್ನೆಲೆಯಲ್ಲಿ ಪೋಲೀಸರು ಆ ನಿಟ್ಟಿನಲ್ಲಿ ತನಿಖೆಯನ್ನು ಕೇಂದ್ರೀಕರಿಸುವ ಅಗತ್ಯವಿದೆ. ನಾಪತ್ತೆ ಪ್ರಕರಣವನ್ನೇ ದಾಖಲಿಸಲು ಮೀನಮೇಷ ಎಣಿಸಿದ್ದ ಪೊಲೀಸರು ಈಗ ಮೈ ಕೊಡವಿ ಕಾರ್ಯತತ್ಪರರಾಗಬೇಕಾಗಿದೆ.

ಘಟನೆಯ ಸೂಕ್ಷ್ಮ ವಿವರ:
ನವಂಬರ್ ಎಂಟು ಡಾಕ್ಟರ್ ಪಾಲಿಗೆ ಕರಾಳ‌ದಿನವಾಗಿತ್ತು. ಆ ದಿನ‌ ಮುಸ್ಲಿಂ ಮಹಿಳೆ ಹಲ್ಲು ಕೀಳಲು ಬಂದಾಗ ಡಾಕ್ಟರ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮುಸ್ಲಿಮ್ ಕುಟುಂಬದ ಆರೋಪ. ಮರುದಿನ ಗೂಂಡಾಗಳ ಗುಂಪು ಕಟ್ಟಿ ಕೊಂಡು ಬಂದ ಅವರು ಡಾಕ್ಟರರ ಬಳಿ 10 ಲಕ್ಷದ ಹಣದ ಬೇಡಿಕೆಯನ್ನು ಇರಿಸಿತು ಎಂದು ಹೇಳಲಾಗುತ್ತಿದೆ.

ಅದಕ್ಕೆ ಡಾಕ್ಟರ್ ಸಮ್ಮತಿಯನ್ನು ನೀಡಲಿಲ್ಲ. ಆಗ ಆ ಗುಂಪು ಪೋಲಿಸ್ ದೂರು ನೀಡುವ ಬೆದರಿಕೆ ಹಾಕಿತು. ಮತ್ತು ಡಾಕ್ಟರ್ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಸ್ಥಳೀಯರು ತಡೆದರು ಎಂದು ವರದಿಗಳು ಹೇಳುತ್ತವೆ.

ಈ ಘಟನೆಗಳಿಂದ ತೀವ್ರ ಮನನೊಂದ ದಂತವೈದ್ಯರು ತನ್ನ ಬೈಕನ್ನೇರಿ ಹೊರಟಿದ್ದಾರೆ. ಆದರೆ ಆಸ್ಪತ್ರೆಯ ಸಿಬ್ಬಂದಿ ತಿಳಿದುಕೊಂಡಂತೆ ಅವರು ಮನೆಗೆ ಹೋಗಿರಲಿಲ್ಲ. ಆಮೇಲೆ ಡಾಕ್ಟರ್ ಮೃತದೇಹ ಕುಂದಾಪುರ ಸಮೀಪದ ಹಟ್ಟಿಯಂಗಡಿ ತಲ್ಲೂರು ಕಾಡು ಅಜ್ಜಿಮನೆ ಎಂಬಲ್ಲಿ ರೈಲ್ವೆ ಹಳಿಗಳಲ್ಲಿ ಛಿದ್ರಛಿದ್ರವಾದ ಸ್ಥಿತಿಯಲ್ಲಿ ದೊರಕಿತು.


ಒಂದು ವರದಿಯ ಪ್ರಕಾರ ಡಾಕ್ಟರ್ ಕೃಷ್ಣಮೂರ್ತಿ ಅವರು ಬೈಕ್ ಹತ್ತಿ ಹೋದ ದಿನವೇ ಅಂದರೆ ನವೆಂಬರ್ 8ರಂದು ಅವರ ಪತ್ನಿ ದೂರು ನೀಡಲು ಬದಿಯಡ್ಕ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ಆಗ ಪೋಲಿಸರು ದೂರು ಸ್ವೀಕರಿಸಿರಲಿಲ್ಲ. ಪೋಲೀಸರಿಗೆ ಅದಕ್ಕೆ ಕಾರಣಗಳಿರಬಹುದು.

ಆ ದಿನವೇ ದೂರು ಸ್ವೀಕರಿಸಿ ಹುಡುಕಿದ್ದರೆ ಡಾಕ್ಟರ್ ಜೀವಂತವಾಗಿರುವ ಸಾಧ್ಯತೆಗಳು ಇದ್ದುವು.


ಮುಸ್ಲಿಂ ಗೂಂಡಾಗಳು ಡಾಕ್ಟರ್ ಕ್ಲಿನಿಕ್ ಒಳಗೆ ನುಗ್ಗಿ ಅವರ ಮೈಮೇಲೆ ಕೈಹಾಕಿದ್ದು ಪೋಲೀಸರಿಗೆ ಆದಿನ ಗೊತ್ತೇ ಇರಲಿಲ್ಲ ಎಂಬುದು ಸತ್ಯವಲ್ಲ. ನೂರಿನ್ನೂರು ಮೀಟರ್ ಗಳ ಪಕ್ಕವೇ ಪೊಲೀಸ್ ಠಾಣೆ ಇರುವಾಗ ಇದು ಖಂಡಿತಾ ಅವರ ಗಮನಕ್ಕೆ ಬಂದಿರುತ್ತದೆ.

ಆದರೆ ಅವರು ಯಾರಾದರೂ ದೂರು ಕೊಡುವ ವರೆಗೆ ಕಾಯುವ ಬದಲು ಸ್ಥಳಕ್ಕೆ ತಾವೇ ಆಗಮಿಸಿ ತನಿಖೆ ಮಾಡಬೇಕಾಗಿತ್ತು. ಸ್ವಯಂಪ್ರೇರಿತ ಕೇಸು ದಾಖಲಿಸಿ ಡಾಕ್ಟರ್ ಹೆಚ್ಚು ದೂರ ಹೋಗುವ ಮೊದಲೇ ಅವರನ್ನು ಕರೆತರುವ ಸಾಧ್ಯತೆ ಇತ್ತು. ಹೋಗಲಿ, ಅದೇ ದಿನ ಕಾಣೆಯಾದ ಬಗ್ಗೆ ಕೊಟ್ಟ ದೂರನ್ನಾದರೂ ಸ್ವೀಕರಿಸಬಹುದಿತ್ತು.


ಮುಸ್ಲಿಂ ಗೂಂಡಾಗಳು ಮೈಮೇಲೆ ಕೈಮಾಡಿದ ಮೇಲೆ ಡಾಕ್ಟರ್ ಮಾನಸಿಕವಾಗಿ ಕುಗ್ಗಿದ್ದರು. ಇದರಿಂದಾಗಿ ಅವರು ಸ್ಥಳ ಬಿಟ್ಟು ತೆರಳಿದ್ದರು.


ಇನ್ನು ಡಾಕ್ಟರ್ ಮೇಲೆ ಹಲ್ಲೆ ನಡೆಸಲು ಇರುವ ಕಾರಣಗಳು:
ಹಿಂದೂ ಸಂಘಟನೆಗಳು ಇದೊಂದು ವ್ಯವಸ್ಥಿತ ಲ್ಯಾಂಡ್ ಜಿಹಾದ್ ಮಾಫಿಯಾ ಎಂದು ಆರೋಪಿಸಿವೆ. ಡಾಕ್ಟರ್ ನ್ಮು ಸಮಸ್ಯೆಯಲ್ಲಿ ಸಿಲುಕಿಸಲೆಂದೇ ಮುಸ್ಲಿಂ ಮಹಿಳೆಯನ್ನು ಕಳುಹಿಸಿ ದೂರು ಕೊಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಇನ್ನೂ ಕೆಲವು ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತವೆ.


1. ಹಣ ದೋಚುವ ಯತ್ನ – ಡಾಕ್ಟರ್ ಬಳಿ ಹಣ ಇರಬಹುದು ಎಂಬ ಭಾವನೆಯಿಂದ ಜಿಹಾದಿಗಳು ಹಣ ದೋಚಲು ಈ ಉಪಾಯವನ್ಮು ಅನುಸರಿಸಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.


2. ಲ್ಯಾಂಡ್ ಜಿಹಾದ್ – ಮೊದಲೇ ಹೇಳಿದಂತೆ ಡಾಕ್ಟರರ ಜಾಗದ ಅಂದರೆ ಅವರ ಕ್ಲಿನಿಕ್ ಇರುವ ಜಾಗ ಮತ್ತು ಮನೆ ಇರುವ ಜಾಗದ ಮೇಲೆ ಕಾಸರಗೋಡು ಪರಿಸರದ ಭಾರೀ ಕುಳಗಳಿಗೆ ಕಣ್ಣಿತ್ತು. ಇದೇ ಹೌದೆಂದಾದರೆ ಈ ಪ್ರಕರಣಕ್ಕೆ ಭೂಗತ ಜಗತ್ತಿನ ನಂಟಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ.


3. ಹನಿಟ್ರ್ಯಾಪ್ – ಆರೋಪಿಗಳಿಗೆ ಈ ಉದ್ದೇಶ ಇದ್ದಿರುವ ಸಾಧ್ಯತೆಯೂ ಅಲ್ಲಗಳೆಯಲಾಗುವುದಿಲ್ಲ. ಡಾಕ್ಟರ್ ಇದಕ್ಕೆ ಅವಕಾಶ ಕೊಡದೆ ಇದ್ದುದರಿಂದ ಅವರಿಗೆ ಬೆದರಿಕೆ ಹಾಕಿರಬಹುದು ಎಂದು ಹೇಳಲಾಗುತ್ತಿದೆ.


4. ಏಳಿಗಯನ್ನು ಸಹಿಸದ ಕೆಲವು ವ್ಯಕ್ತಿಗಳು – ದಂತವೈದ್ಯರಾಗಿ ಕೃಷ್ಣಮೂರ್ತಿ ಯವರ ಏಳಿಗೆ, ಪ್ರಸಿದ್ಧಿಯನ್ನು ಸಹಿಸದೆ ಅವರನ್ಮು ಹಾಗೂ ಅವರ ಹಲ್ಲಿನ ಆಸ್ಪತ್ರೆಯನ್ನು ಹೇಗಾದರೂ ಮಾಡಿ ಬದಿಯಡ್ಕದಿಂದ ಸ್ಥಳಾಂತರಿಸಬೇಕೆಂಬ ಹುನ್ನಾರ ತೆರೆಯ ಮರೆಯಲ್ಲಿ ನಡೆಯುತ್ತಿತ್ತು ಎಂದೂ ಹೇಳಲಾಗುತ್ತಿದೆ. ಅದರಲ್ಲೂ ಅವರ ಡೆಂಟಲ್ ಕ್ಲಿನಿಕ್ ಕೆಲವರಿಗೆ ನುಂಗಲಾರದ ತುತ್ತಾಗಿತ್ತೇ ಎಂಬ ಸಂಶಯ ವ್ಯಕ್ತಪಡಿಸಲಾಗುತ್ತಿದೆ.


ಹೀಗೆ ಹಲವಾರು ಕೋನಗಳಿಂದ ತನಿಖೆ ನಡೆಸಬೇಕಾದ‌ ಅಗತ್ಯವಿದೆ.
ಮುಂದಿನ ‌ದಿನಗಳಲ್ಲಿ ತನಿಖೆ ಯಾವ ರೀತಿಯಲ್ಲಿ ಸಾಗುತ್ತದೆ ಎಂದು ಕಾದು ನೋಡಬೇಕಿದೆ.

ಜಿಹಾದಿಗಳ ಸಂಚಿಗೆ ಬಲಿಯಾದ ಡಾಕ್ಟರ್ ಕೃಷ್ಣಮೂರ್ತಿ ನೆನಪಿಗಾಗಿ ಅವರ ಆಸ್ಪತ್ರೆಯ ಸಮೀಪದ ಟ್ಯಾಕ್ಸಿ ಸ್ಟ್ಯಾಂಡ್ ಗೆ ಡಾಕ್ಟರ್ ಹೆಸರು

0

ಇತ್ತೀಚಿಗೆ ಮೂರು ದಿನಗಳ ಹಿಂದೆ ಮುಸ್ಲಿಂ ಜಿಹಾದಿಗಳ ಸಂಚಿಗೆ ಬಲಿಯಾದ, ಕಾಸರಗೋಡಿನ ಬದಿಯಡ್ಕದಲ್ಲಿ ಸಹಸ್ರಾರು ರೋಗಿಗಳ ಸೇವೆ ಮಾಡಿದ ಜನಾನುರಾಗಿ ದಂತವೈದ್ಯ ಡಾ.ಕೃಷ್ಣಮೂರ್ತಿಯವರಿಗೆ ನಿನ್ನೆ ಗೌರವ ಸಲ್ಲಿಸಲಾಗಿದೆ.

ನಿನ್ನೆ ಅವರ ಅಂತ್ಯಕ್ರಿಯೆ ಬದಿಯಡ್ಕದಲ್ಲಿ ನಡೆಯಿತು. ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸಾವಿರಾರು ಜನರು ಸೇರಿದ್ದರು

ನಂತರ ನಡೆದ ಪ್ರತಿಭಟನಾ ಸಮಯದಲ್ಲಿ ಕೂಡಾ ವೈದ್ಯರ ಅಭಿಮಾನಿಗಳು ಹೇರಳ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಡಾಕ್ಟರ್ ಕೃಷ್ಣಮೂರ್ತಿಯವರ ಸವಿನೆನಪಿಗಾಗಿ ಡಾಕ್ಟರ್ ಕ್ಲಿನಿಕ್ ಬಳಿಯ ಟ್ಯಾಕ್ಸಿ ಸ್ಟ್ಯಾಂಡ್ ಅನ್ನು ಡಾ.ಕೃಷ್ಣಮೂರ್ತಿ ಸ್ಮಾರಕ ಟ್ಯಾಕ್ಸಿ ಸ್ಟ್ಯಾಂಡ್, ಬದಿಯಡ್ಕ ಎಂದು ಹೆಸರಿಸಲಾಗಿದೆ.

ವೈದ್ಯರನ್ನು ಎಲ್ಲರೂ ಗೌರವಿಸುತ್ತಿದ್ದರು, ಆದರೆ ಅವರು ಜಿಹಾದಿಗಳ ಕುತಂತ್ರಕ್ಕೆ ಬಲಿಯಾಗಿದ್ದರು.

ಶ್ರೀ ಶನೀಶ್ವರ ಮಹಾತ್ಮೆ – ಇಂದು ಧರ್ಮಸ್ಥಳ ಮೇಳದ ಆಟ, ಶ್ರೀ ಕ್ಷೇತ್ರದ ಯೂಟ್ಯೂಬ್ ಲಿಂಕ್

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ 11.11.2022 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ.


ಸಂಜೆ ಗಂಟೆ 7ರಿಂದ 12 ರ ತನಕ ಶ್ರೀ ಶನೀಶ್ವರ ಮಹಾತ್ಮೆ
ಎಂಬ ಸೇವೆ ಬಯಲಾಟ ಜರುಗಲಿದೆ.


ಇಂದಿನ ಸೇವಾಕರ್ತರು

  • ಶ್ರೀ ದಯಾನಂದ ಶೆಟ್ಟಿ ಮತ್ತು ಮನೆಯವರು ತಂತ್ರಾಡಿ ಮೂಡುಜೆಡ್ಡು, ಅಮ್ಮಶ್ರೀ ನಿಲಯ, ಮಂದಾರ್ತಿ ಉಡುಪಿ ತಾಲೂಕು
  • ಶ್ರೀ ದಿನೇಶ್ ಭಂಡಾರ್ಕರ್,ವಿ ಜ್ಹೋನ್ ಇಂಟೀರಿಯರ್ಸ್ & ಎಸ್ಟೋರಿಯರ್ಸ್, ಬನಶಂಕರಿ 3ನೇ ಹಂತ ಬೇಂಗಳೂರು

ಬದಿಯಡ್ಕದ ಡಾ. ಕೃಷ್ಣಮೂರ್ತಿ ಮೃತ್ಯು ಪ್ರಕರಣ – ಪೋಲೀಸರಿಗೆ ಕಗ್ಗಂಟಾದ ಪ್ರಕರಣ – ಆಸ್ಪತ್ರೆಗೆ ಬಂದು ಗೂಂಡಾಗಿರಿ‌ ನಡೆಸಿದ ಐವರು ಮುಸ್ಲಿಂ ಮುಖಂಡರ ಬಂಧನ – ಸುವ್ಯವಸ್ಥಿತ ರೀತಿಯ ಲ್ಯಾಂಡ್‌ ಜಿಹಾದ್ ಶಂಕೆ – ಆತ್ಮಹತ್ಯೆ ಮಾಡಿಕೊಳ್ಳಲು ಅಷ್ಟು ದೂರದ ನಿರ್ಜನ ‌ಪ್ರದೇಶಕ್ಕೆ ಹೇಗೆ ಹೋದರು?

0

ಬದಿಯಡ್ಕದ ಡಾ. ಕೃಷ್ಣಮೂರ್ತಿ ಮೃತ್ಯು ಪ್ರಕರಣದಲ್ಲಿ ವ್ಯವಸ್ಥಿತ ಲ್ಯಾಂಡ್ ಜಿಹಾದ್ ಲಕ್ಷಣಗಳು ಕಾಣಿಸುತ್ತವೆ. ಇದು ಮೇಲ್ನೋಟಕ್ಕೆ ಪೋಲೀಸರಿಗೆ ಕಗ್ಗಂಟಾದ ಪ್ರಕರಣ ಎಂದು ಭಾವಿಸಲಾಗಿದೆ. ಆದರೂ ಇದರ ಪ್ರಕರಣವನ್ನು ಪರಿಶೀಲಿಸಿದಾಗ ಇದರಲ್ಲಿ ಹಲವಾರು ನಿಗೂಢ ಅನುಮಾನದ ಛಾಯೆ ಕಾಣಿಸುತ್ತದೆ. ಪೋಲೀಸರು ಆತ್ಮಹತ್ಯೆ ಗೆ ಕುಮ್ಮಕ್ಕು ನೀಡಿದ ಪ್ರಕರಣ ದಾಖಲಿಸಿದ್ದರು. ಆದ ಇದು ನಿಜವಾಗಿಯೂ ಆತ್ಮಹತ್ಯೆಯೇ ಅಥವಾ ಇನ್ನೇನಾದರೂ ಕಾರಣದಿಂದ ಅವರು ಸಾವನ್ನಪ್ಪಿದರೇ?

ಆಸ್ಪತ್ರೆಗೆ ಬಂದು ಗೂಂಡಾಗಿರಿ‌ ನಡೆಸಿದ ಐವರು ಮುಖಂಡರ ಬಂಧನವಾಗಿದೆ..ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತು ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತು ಪದಾಧಿಕಾರಿ ಮುಹಮ್ಮದ್ ಹನೀಫ ಯಾನೆ ಅನ್ವರ್,  ಕುಂಬ್ಡಾಜೆ ನಿವಾಸಿ ಅಶ್ರಫ್,ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್  ಎಂಬವರ ಬಂದನವಾಗಿದೆ. ಪೋಲೀಸರು ಬಂಧಿಸಿದ ಐವರೂ ವ್ಯಕ್ತಿಗಳು ಬದಿಯಡ್ಕ ಆಸುಪಾಸಿನ‌ ಪ್ರಭಾವಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಇದೊಂದು ಸುವ್ಯವಸ್ಥಿತ ರೀತಿಯ ಲ್ಯಾಂಡ್‌ ಜಿಹಾದ್ ಎಂದು ಶಂಕ ವ್ಯಕ್ತಪಡಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಅಷ್ಟು ದೂರದ ನಿರ್ಜನ ‌ಪ್ರದೇಶಕ್ಕೆ ಹೇಗೆ ಹೋದರು? ಎಂಬುದು ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

ನವಂಬರ್ ಎಂಟು ಡಾಕ್ಟರ್ ಪಾಲಿಗೆ ಕರಾಳ‌ದಿನವಾಗಿತ್ತು. ಆ ದಿನ‌ ಮುಸ್ಲಿಂ ಮಹಿಳೆ ಹಲ್ಲು ಕೀಳಲು ಬಂದಾಗ ಡಾಕ್ಟರ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮುಸ್ಲಿಮ್ ಕುಟುಂಬದ ಆರೋಪ. ಮರುದಿನ ಗೂಂಡಾಗಳ ಗುಂಪು ಕಟ್ಟಿ ಕೊಂಡು ಬಂದ ಅವರು ಡಾಕ್ಟರರ ಬಳಿ 10 ಲಕ್ಷದ ಹಣದ ಬೇಡಿಕೆಯನ್ನು ಇರಿಸಿತು ಎಂದು ಹೇಳಲಾಗುತ್ತಿದೆ. ಅದಕ್ಕೆ ಡಾಕ್ಟರ್ ಸಮ್ಮತಿಯನ್ನು ನೀಡಲಿಲ್ಲ. ಆಗ ಆ ಗುಂಪು ಪೋಲಿಸ್ ದೂರು ನೀಡುವ ಬೆದರಿಕೆ ಹಾಕಿತು. ಮತ್ತು ಡಾಕ್ಟರ್ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಸ್ಥಳೀಯರು ತಡೆದರು ಎಂದು ವರದಿಗಳು ಹೇಳುತ್ತವೆ.

ಈ ಘಟನೆಗಳಿಂದ ತೀವ್ರ ಮನನೊಂದ ದಂತವೈದ್ಯರು ತನ್ನ ಬೈಕನ್ನೇರಿ ಹೊರಟಿದ್ದಾರೆ. ಆದರೆ ಆಸ್ಪತ್ರೆಯ ಸಿಬ್ಬಂದಿ ತಿಳಿದುಕೊಂಡಂತೆ ಅವರು ಮನೆಗೆ ಹೋಗಿರಲಿಲ್ಲ. ಡಾಕ್ಟರ್ ಪತ್ನಿ ಬದಿಯಡ್ಕ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದರು. ಮುಸ್ಲಿಂ ಮಹಿಳೆಯ ಗುಂಪಿನವರು ಕೂಡಾ ಡಾಕ್ಟರ್ ಮೇಲೆ ದೂರ. ನೀಡಿದ್ದರು. ಅದರ ಪ್ರಕಾರ ಪೋಲೀಸರು ಡಾಕ್ಟರ್ ಮೇಲೆಯೇ ಪ್ರಕರಣ ದಾಖಲಿಸಿದ್ದರು!

ಆಮೇಲೆ ಡಾಕ್ಟರ್ ಮೃತದೇಹ ಕುಂದಾಪುರ ಸಮೀಪದ ಹಟ್ಟಿಯಂಗಡಿ ತಲ್ಲೂರು ಕಾಡು ಅಜ್ಜಿಮನೆ ಎಂಬಲ್ಲಿ ದೊರಕಿತು. ಮೃತದೇಹವನ್ನು ಮೃತರ ಪತ್ನಿ, ಮಗಳು, ಕಾಂಪೌಂಡರ್ ಪರಮೇಶ್ವರ್, ಮೃತರ ಸಹೋದರ ಪುತ್ತೂರಿನ ಡಾ.ರಾಮಮೋಹನ್ ಮೊದಲಾದವರು ಗುರುತಿಸಿದರು. ಅದೆಲ್ಲವೂ ಈಗ ಇತಿಹಾಸ.

ಡಾಕ್ಟರರ ಅಂತ್ಯಕ್ರಿಯೆ ಇಂದು ನಡೆದಿದೆ. ಬದಿಯಡ್ಕದಲ್ಲಿ ಹರತಾಳ, ಪ್ರತಿಭಟನೆಗಳು ನಡೆದವು. ಆದರೆ ಇಲ್ಲಿ ತಾರ್ಕಿಕವಾದ ಈಗ ಉತ್ತರ ಸಿಗದ ಅನೇಕ ಪ್ರಶ್ನೆಗಳಿವೆ.

ಮುಸ್ಲಿಂ ಗುಂಪಿನ ಒಂದು ಹೇಳಿಕೆಯನ್ನು ಆಧರಿಸಿ ಬದಿಯಡ್ಕ ಪೋಲೀಸರು ಡಾಕ್ಟರರ ಮೇಲೆಯೇ ಕೇಸು ದಾಖಲಿಸಿದ್ದು ಯಾಕೆ? ಯಾರ ಒತ್ತಡದಿಂದ?

ಪೋಲೀಸರು ಲ್ಯಾಂಡ್ ಜಿಹಾದ್ ಮಾಫಿಯಾ ಬಗ್ಗೆ ತನಿಖೆ ನಡೆಸುತ್ತಿದ್ದಾರೆಯೇ? ಡಾಕ್ಟರ್ ಅವರ ಜಾಗದ ಬಗ್ಗೆ ಅವರಿಗೆ ಬರುತ್ತಿದ್ದ ನಿರಂತರ ಕರೆಗಳು ಮತ್ತು ಕಿರುಕುಳ ಪೋಲೀಸರ ಗಮನಕ್ಕೆ ಬಂದಿದೆಯೇ? ಅದಕ್ಕೆ ಅವರು ಕೈಗೊಳ್ಳುವ ಕ್ರಮಗಳೇನು?

ಮುಸ್ಲಿಮರು ದೂರು ನೀಡುವ ಮೊದಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ನೋಡಿದರೆ ಇದು ಒಂದು ಹನಿಟ್ರಾಪ್ ಮಾಡುವ ಯತ್ಮವೇ?

ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣದಿಂದ ಮೃತದೇಹ ಸಿಕ್ಕಿದ ಸ್ಥಳಕ್ಕೆ 10-12 ಕಿಲೋಮೀಟರ್ ದೂರವಿದೆ. ಅಲ್ಲಿಯವರೆಗೆ ರಾತ್ರಿ ಸಮಯದಲ್ಲಿ ಡಾಕ್ಟರ್ ರೈಲು ಹಳಿಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವೇ?

ಬಸ್ಸಿನಲ್ಲಿ ಬಂದು ತಲ್ಲೂರಿನಲ್ಲಿ ಇಳಿದರೂ ತನಗೆ ಅಪರಿಚಿತವಾದ ಈ ಜಾಗಕ್ಲೆ ರೈಲು ಹಳಿಯಲ್ಲಿಯೇ 3 ಕಿಲೋಮೀಟರ್ ನಡೆದುಕೊಂಡು ಬಂದರೇ?

ಹಾಗಾದರೆ ಡಾಕ್ಟರ್ ತಾವೇ ರೈಲಿನಡಿಗೇ ಬಿದ್ದರೇ ಅಥವಾ ಅವರನ್ನು ಕೊಂದು ರೈಲು ಹಳಿಗೆ ಎಸೆಯಲಾಯಿತೇ ಎಂದು ಪೋಸ್ಟ್‌ ಮಾರ್ಟಂ ವರದಿ ‌ಬಂದ ಬಳಿಕ ತಿಳಿಯಲಿದೆ.

ಕಾಣೆಯಾಗಿ ಕೇಸು ದಾಖಲಿಸಿದ್ದು ಕೇರಳದಲ್ಲಿ. ಮೃತದೇಹ ಸಿಕ್ಲಿದ್ದು ಕರ್ನಾಟಕದಲ್ಲಿ. ಹಾಗಾದರೆ ಇದು ತನಿಖೆಗೆ ತೊಡಕಾಗಿ ಪರಿಣಮಿಸಲಿದೆಯೇ? ಉದ್ದೇಶಪೂರ್ವಕವಾಗಿ ಈ ರೀತಿ ಯಾರಾದರೂ ಮಾಡಿರಬಹುದೇ?

ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಹಿಂದೂ ಸಂಘಟನೆಗಳು ಇದೊಂದು ವ್ಯವಸ್ಥಿತ ಲ್ಯಾಂಡ್ ಜಿಹಾದ್ ಮಾಫಿಯಾ ಎಂದು ಆರೋಪಿಸಿವೆ. ಡಾಕ್ಟರ್ ನ್ಮು ಸಮಸ್ಯೆಯಲ್ಲಿ ಸಿಲುಕಿಸಲೆಂದೇ ಮುಸ್ಲಿಂ ಮಹಿಳೆಯನ್ನು ಕಳುಹಿಸಿ ದೂರು ಕೊಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಪೋಲೀಸರು ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸುತ್ತಾರೆಯೇ ಎಂದ ಕಾದುನೋಡಬೇಕಾಗಿದೆ.

ಅಫ್ಘಾನ್ ಮಹಿಳೆಯರು ಜಿಮ್‌ಗಳಿಗೆ ಪ್ರವೇಶಿಸುವಂತಿಲ್ಲ – ಮಹಿಳೆಯರಿಗೆ ಉದ್ಯಾನವನಗಳನ್ನು ನಿಷೇಧಿಸಿದ ನಂತರ ತಾಲಿಬಾನ್ ಹೊಸ ಆದೇಶ

0

ಆಫ್ಘನ್ ಮಹಿಳೆಯರು ಈಗ ಜಿಮ್‌ಗಳಿಗೆ ಪ್ರವೇಶಿಸುವಂತಿಲ್ಲ. ಬುಧವಾರ ಕಾಬೂಲ್‌ನಲ್ಲಿ ಅಫ್ಘಾನ್ ಮಹಿಳೆಯರನ್ನು ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಂದ ನಿಷೇಧಿಸಿದ ನಂತರ, ತಾಲಿಬಾನ್ ಈಗ ಅವರಿಗೆ ಹೊಸ ಆದೇಶವನ್ನು ಹೊರಡಿಸಿದೆ

.

ಅಫ್ಘಾನಿಸ್ತಾನದ ಮಹಿಳೆಯರು ಇನ್ನು ಮುಂದೆ ಜಿಮ್‌ಗಳನ್ನು ಬಳಸುವುದಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಕಾಬೂಲ್‌ನ ಅಧಿಕಾರಿಯೊಬ್ಬರ ಪ್ರಕಾರ, ತಾಲಿಬಾನ್‌ಗಳು ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು ಮಹಿಳೆಯರು ಜಿಮ್‌ಗಳನ್ನು ಬಳಸುವುದನ್ನು ನಿಷೇಧಿಸುತ್ತಿದ್ದಾರೆ, ಅವರು ಒಂದು ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡರು.

ಪ್ರಚಾರ ಸಚಿವಾಲಯದ ವಕ್ತಾರರು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ಗೆ ಜನರು ಲಿಂಗ ಪ್ರತ್ಯೇಕತೆಯ ಆದೇಶಗಳನ್ನು ನಿರ್ಲಕ್ಷಿಸುತ್ತಿರುವ ಕಾರಣ ನಿಷೇಧವನ್ನು ಪರಿಚಯಿಸಲಾಗಿದೆ ಮತ್ತು ಮಹಿಳೆಯರು ಅಗತ್ಯವಿರುವ ಶಿರಸ್ತ್ರಾಣ ಅಥವಾ ಹಿಜಾಬ್ ಅನ್ನು ಧರಿಸಿಲ್ಲ ಎಂದು ಹೇಳಿದರು. ಸದ್ಗುಣ ಮತ್ತು ವೈಸ್ ಸಚಿವಾಲಯದ ತಾಲಿಬಾನ್ ನೇಮಕಗೊಂಡ ವಕ್ತಾರರಾದ ಮೊಹಮ್ಮದ್ ಅಕೆಫ್ ಮೊಹಜರ್ ಪ್ರಕಾರ, “ಜಿಮ್‌ಗಳು ಮತ್ತು ಉದ್ಯಾನವನಗಳನ್ನು ಬಳಸುವ ಮಹಿಳೆಯರ ಮೇಲಿನ ನಿಷೇಧವು ಈ ವಾರ ಜಾರಿಗೆ ಬಂದಿದೆ.”

ಕಳೆದ 15 ತಿಂಗಳುಗಳಲ್ಲಿ ಮಹಿಳೆಯರಿಗೆ ಉದ್ಯಾನವನಗಳು ಮತ್ತು ಜಿಮ್‌ಗಳನ್ನು ಮುಚ್ಚುವುದನ್ನು ತಪ್ಪಿಸಲು ತಾಲಿಬಾನ್ “ಅತ್ಯುತ್ತಮ ಪ್ರಯತ್ನಿಸಿದೆ” ಎಂದು ಅವರು ಹೇಳಿದರು, ಪುರುಷ ಮತ್ತು ಮಹಿಳೆಯರ ಪ್ರವೇಶಕ್ಕಾಗಿ ಪ್ರತ್ಯೇಕ ದಿನಗಳನ್ನು ಆದೇಶಿಸಿದ್ದಾರೆ. ಆದರೆ, ದುರದೃಷ್ಟವಶಾತ್, ಆದೇಶಗಳನ್ನು ಪಾಲಿಸಲಾಗಿಲ್ಲ ಮತ್ತು ನಿಯಮಗಳನ್ನು ಉಲ್ಲಂಘಿಸಲಾಗಿದೆ ಮತ್ತು ನಾವು ಮಹಿಳೆಯರಿಗೆ ಉದ್ಯಾನವನಗಳು ಮತ್ತು ಜಿಮ್‌ಗಳನ್ನು ಮುಚ್ಚಬೇಕಾಯಿತು,

“ಹೆಚ್ಚಿನ ಸಂದರ್ಭಗಳಲ್ಲಿ, ನಾವು ಉದ್ಯಾನವನಗಳಲ್ಲಿ ಪುರುಷರು ಮತ್ತು ಮಹಿಳೆಯರಿಬ್ಬರನ್ನು ಒಟ್ಟಿಗೆ ನೋಡಿದ್ದೇವೆ ಮತ್ತು ದುರದೃಷ್ಟವಶಾತ್, ಹಿಜಾಬ್ ಅನ್ನು ಗಮನಿಸಲಾಗಿಲ್ಲ. ಆದ್ದರಿಂದ ನಾವು ಮತ್ತೊಂದು ನಿರ್ಧಾರಕ್ಕೆ ಬರಬೇಕಾಯಿತು ಮತ್ತು ಸದ್ಯಕ್ಕೆ ನಾವು ಮಹಿಳೆಯರಿಗೆ ಎಲ್ಲಾ ಉದ್ಯಾನವನಗಳು ಮತ್ತು ಜಿಮ್‌ಗಳನ್ನು ಮುಚ್ಚಲು ಆದೇಶಿಸಿದ್ದೇವೆ.
ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಜಿಮ್‌ಗಳನ್ನು ಮಹಿಳೆಯರು ಇನ್ನೂ ಬಳಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಮೊಹಮ್ಮದ್ ಅಕೆಫ್ ಮೊಹಾಜರ್ ಹೇಳಿದರು.

ಮಹಿಳೆಯರಿಗಾಗಿ ಅಫ್ಘಾನಿಸ್ತಾನದಲ್ಲಿ ಯುಎನ್ ವಿಶೇಷ ಪ್ರತಿನಿಧಿ ಅಲಿಸನ್ ಡೇವಿಡಿಯನ್ ನಿಷೇಧವನ್ನು ಖಂಡಿಸಿದರು. “ಇದು ತಾಲಿಬಾನ್‌ನ ಮುಂದುವರಿದ ಮತ್ತು ವ್ಯವಸ್ಥಿತವಾಗಿ ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ಅಳಿಸಿಹಾಕುವ ಮತ್ತೊಂದು ಉದಾಹರಣೆಯಾಗಿದೆ” ಎಂದು ಅವರು ಹೇಳಿದರು

. “ಮಹಿಳೆಯರು ಮತ್ತು ಹುಡುಗಿಯರಿಗೆ ಎಲ್ಲಾ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮರುಸ್ಥಾಪಿಸಲು ನಾವು ತಾಲಿಬಾನ್‌ಗೆ ಕರೆ ನೀಡುತ್ತೇವೆ” ಎಂದು ಅವರು ಹೇಳಿದರು. ತಾಲಿಬಾನ್ 2021 ರಲ್ಲಿ ಅಧಿಕಾರಕ್ಕೆ ಏರಿತು. ಅವರು ಮಧ್ಯಮ ಶಾಲೆ ಮತ್ತು ಪ್ರೌಢಶಾಲೆಯಿಂದ ಹುಡುಗಿಯರನ್ನು ನಿಷೇಧಿಸಿದ್ದಾರೆ ಮತ್ತು ಸಾರ್ವಜನಿಕವಾಗಿ ತಲೆಯಿಂದ ಟೋ ವರೆಗೆ ಬಟ್ಟೆಗಳನ್ನು ಧರಿಸಲು ಆದೇಶಿಸಿದ್ದಾರೆ.

13.11.2022ರ ಆದಿತ್ಯವಾರ ದೇಲಂಪಾಡಿಯಲ್ಲಿ “ಯಕ್ಷ ಕಲಾರವ”

13.11.2022ರ ಆದಿತ್ಯವಾರ ದೇಲಂಪಾಡಿಯಲ್ಲಿ “ಯಕ್ಷ ಕಲಾರವ”

13.11.2022ರ ಆದಿತ್ಯವಾರ ದೇಲಂಪಾಡಿಯಲ್ಲಿ “ವಿಶ್ವವಿನೋದ ಯಕ್ಷ ಕಲಾರವ” ಕಾರ್ಯಕ್ರಮ ನಡೆಯಲಿದೆ.

ಯಕ್ಷಗಾನ ಪ್ರಸಂಗಕರ್ತರು, ಭಾಗವತರು ಮತ್ತು ಯಕ್ಷಗಾನ ಗುರುಗಳಾದ ಶ್ರೀ ವಿಶ್ವವಿನೋದ ಬನಾರಿಯವರ ಅಭಿನಂದನಾ ಸಮಾರಂಭ  “ವಿಶ್ವವಿನೋದ ಯಕ್ಷ ಕಲಾರವ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆ ದಿನವಿಡೀ ಹಮ್ಮಿಕೊಳಲಾಗಿದೆ.

ಪೂರ್ವಾಹ್ನ 8 ಘಂಟೆಯಿಂದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನ ಆರಂಭವಾಗಲಿರುವ ಈ ಕಾರ್ಯಕ್ರಮ ವಿವಿಧ ರೀತಿಯ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳನ್ನು ಒಳಗೊಂಡಿದೆ.

ಕಾರ್ಯಕ್ರಮದ ಎಲ್ಲಾ ವಿವಿಚಾರಗಳಿಗಾಗಿ ಮೇಲಿನ ಚಿತ್ರವನ್ನು ನೋಡಿ. 

ಕುತ್ತಿಗೆಗೆ ಸುತ್ತಿಕೊಂಡ ಹೆಬ್ಬಾವು – ರಕ್ಷಿಸಿದ ಮಗ ಮತ್ತು ಆತನ ಸ್ನೇಹಿತರು 

0

ಕುಡುಕನೊಬ್ಬ ತನ್ನ ಕುತ್ತಿಗೆಗೆ ಹೆಬ್ಬಾವನ್ನು ಸುತ್ತಿಕೊಂಡಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಅವನ ಮಗ ಮತ್ತು ಸ್ನೇಹಿತರು ವ್ಯಕ್ತಿಯ ರಕ್ಷಣೆಗೆ ಬಂದರು.

ಕುಡಿತದ ಅಮಲಿನಲ್ಲಿ ತಾನೇನು ಮಾಡುತ್ತಿದ್ದೇನೆ ಎಂಬುದ ಅರಿವು ಮನುಷ್ಯನಿಗೆ ಇರುವುದಿಲ್ಲ. ಅದು ಅವನ ಜೀವಕ್ಕೆ ಅಪಾಯವಾದಾಗ ಮಾತ್ರ ತಿಳಿಯುತ್ತದೆ.

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. ಜಾರ್ಖಂಡ್‌ನ ಗರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಪರಿಹಾರ ಪಂಚಾಯತ್‌ನ ಕಿಟಾಸೋಟಿ ಖುರ್ದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೇ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ವೀಡಿಯೊದಲ್ಲಿ, ಬಿರ್ಜಲಾಲ್ ರಾಮ್ ಭುಯಾನ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ಹೆಬ್ಬಾವಿನ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವಾಸ್ತವವಾಗಿ, ಅವರು ಕುಡಿದ ಸ್ಥಿತಿಯಲ್ಲಿ ತನ್ನ ಕುತ್ತಿಗೆಗೆ ಸರೀಸೃಪವನ್ನು ಸುತ್ತಿಕೊಂಡರು ಮತ್ತು ನಂತರ ಅದನ್ನು ಹೊರಹಾಕಲು ಹೆಣಗಾಡುತ್ತಿದ್ದರು.

ಬಿರ್ಜಲಾಲ್‌ನ ಮಗ ಮತ್ತು ಅವನ ಸ್ನೇಹಿತರು ಅವನನ್ನು ರಕ್ಷಿಸಲು ಮತ್ತು ಹೆಬ್ಬಾವಿನ ಬಿಗಿಯಾದ ಹಿಡಿತದಿಂದ ಬಿಡಿಸಲು ಪ್ರಯತ್ನಿಸಿದರು. ಬಿರ್ಜಲಾಲನ ಮಗ ತನ್ನ ಕೊರಳಿಗೆ ಸುತ್ತಿಕೊಂಡಿದ್ದ ಹೆಬ್ಬಾವನ್ನು ತೆಗೆದು ತಂದೆಯ ಪ್ರಾಣ ಉಳಿಸಿದ.

ಘಟನೆಯಲ್ಲಿ ಬಿರ್ಜಲಾಲ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಗ್ರಾಮದಲ್ಲಿಯೇ ಚಿಕಿತ್ಸೆ ನೀಡಲಾಗಿದೆ.