Sunday, March 15, 2026
Home Blog Page 113

ಮಂಗಳೂರು ಪಂಪ್‌ವೆಲ್‌ನ ಲಾಡ್ಜ್‌ನಲ್ಲಿ ಪುರುಷನ ನಗ್ನ ಮೃತದೇಹ ಪತ್ತೆ – ಸ್ವಲ್ಪ ಸಮಯದ ಮೊದಲು ಕೊಠಡಿಗೆ ಬಂದಿದ್ದ ಮಹಿಳೆ  

0

ಮಂಗಳೂರು ಪಂಪ್‌ವೆಲ್‌ನ ಲಾಡ್ಜ್‌ನಲ್ಲಿ ಪುರುಷನ ಶವ ಬೆತ್ತಲೆ ಸ್ಥಿತಿಯಲ್ಲಿ ಕಂಡುಬಂದಿದೆ. ಸಾವಿಗೂ ಸ್ವಲ್ಪ ಸಮಯದ ಮೊದಲು ಬುರ್ಖಾ ಧರಿಸಿದ ಮಹಿಳೆಯೊಬ್ಬರು ಕೊಠಡಿಗೆ ಬಂದಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ.

ಇಲ್ಲಿನ ಪಂಪ್‌ವೆಲ್‌ನಲ್ಲಿರುವ ಲಾಡ್ಜ್‌ನಲ್ಲಿ ಮಂಗಳವಾರ ಡಿ.13ರಂದು ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಕಾಸರಗೋಡು ಮೂಲದ ಅಬ್ದುಲ್ ಕರೀಂ (56) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಪಂಪ್‌ವೆಲ್‌ನಲ್ಲಿರುವ ಪದ್ಮಶ್ರೀ ಲಾಡ್ಜ್‌ನಲ್ಲಿ ಅಬ್ದುಲ್ ಕರೀಂ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲಿ ಕೆಲವು ಮಾತ್ರೆಗಳೂ ಪತ್ತೆಯಾಗಿವೆ.

ಸಾವಿಗೂ ಮೊದಲು ಮಹಿಳೆಯೊಬ್ಬರು ಮೃತ ವ್ಯಕ್ತಿಯನ್ನು ಭೇಟಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.

ಮಹಿಳೆ ಜೊತೆಗಿರುವಾಗ ಸಾವು ಸಂಭವಿಸಿದೆಯೇ ಅಥವಾ ಆಮೇಲೆ ಸಾವು ಸಂಭವಿಸಿದೆಯೇ ಎಂದು ತನಿಖೆಯಿಂದ ತಿಳಿಯಲಿದೆ.

“ಇಳೆಯಣ್ಣನ ಕತೆ” ಯಕ್ಷಗಾನ ಪ್ರದರ್ಶನ

9-12-2022 ರಂದು ಸೀಮಾ ಶುಲ್ಕ, ಬೆಂಗಳೂರು ವಲಯ (customs, bangalore zone) ಸೀಮಾ ಶುಲ್ಕ ಕಾಯಿದೆ 1962, 60 ರ ಸಂಭ್ರಮಾಚರಣೆಯಲ್ಲಿ ಯಕ್ಷದೇಗುಲ ಬೆಂಗಳೂರು ತಂಡದವರಿಂದ ಬಹು ಜನರ ಅಪೇಕ್ಷೆ ಮೇರೆಗೆ 1500ಕ್ಕೂ ಹೆಚ್ಚು ಪ್ರದರ್ಶನ ಕಂಡ “ಇಳೆಯಣ್ಣನ ಕತೆ” ಯಕ್ಷಗಾನ ಪ್ರದರ್ಶನ ನಡೆಯಿತು.

ಹಿರಿಯ ರಂಗಕರ್ಮಿ ಗೋಪಾಲ ಕೃಷ್ಣ ನಾಯರಿ ಯವರು ಹಿಂದಿಯ  “ಏಕ್ ಚಿಟ್ಟಿ” ಕಿರು ನಾಟಕವನ್ನು ಕನ್ನಡಕ್ಕೆ ಇಳೆಯಣ್ಣನ ಕತೆ ಎನ್ನುವ ಯಕ್ಷಗಾನ ಪ್ರಸಂಗವಾಗಿ ರಚಿಸಿದರು.

ಪ್ರಸಂಗವನ್ನು ಕೆ.ಮೋಹನ್ ನಿರ್ದೇಶಿಸಿ ಈಗ 1500 ಕ್ಕೂ ಹೆಚ್ಚು ಪ್ರದರ್ಶನ ಕಂಡು ನೂರಾರು ಕಲಾವಿದರು ಈ ಪ್ರಸಂಗದಲ್ಲಿ ವೇಷ ಮಾಡಿರುವುದು ಹೆಮ್ಮೇಯ ವಿಚಾರ. ನಿನ್ನೆಯ ಕಾರ್ಯಕ್ರಮ customs ವಿಚಾರದ ಬಗ್ಗೆ ನಡೆದಿದ್ದು, ಪ್ರಿಯಾಂಕ ಕೆ  ಮೋಹನ್ ನಿರ್ದೇಶನ ನೀಡಿ,ಸುದರ್ಶನ ಉರಾಳರು ಸಂಯೋಜನೆ ಮಾಡಿದರು.

ಕಲಾವಿದರಾಗಿ ಸುಬ್ರಹ್ಮಣ್ಯ ಹೊಳ್ಳ, ಕಾರ್ತಿಕ ದಾರೇಶ್ವರ, ಶ್ರೀಧರ,ವಿಶ್ವನಾಥ ಶೆಟ್ಟಿ, ಶಶಾಂಕ ಕಾಶಿ, ಬಾಲಕೃಷ್ಣ ಭಟ್, ತಮ್ಮಣ್ಣ ಗಾಂವ್ಕರ್, ಶ್ರೀವತ್ಸ ಇನ್ನೀತರು ಭಾಗವಹಿಸಿದರು.

“ರಾವಣ ವಧೆ” – ಯಕ್ಷಗಾನ

ಹನುಮಜ್ಜಯಂತಿ ಯ ಪ್ರಯುಕ್ತ ಇತ್ತೀಚಿಗೆ 11.12.2022 ರಂದು ಜಯನಗರದ ಅಶೋಕ ಪಿಲ್ಲರ್ ನ “ಶ್ರೀ ರಾಮ ಸೇವಾ ಟ್ರಸ್ಟ್” ನಲ್ಲಿ ಬೆಂಗಳೂರಿನ “ಯಕ್ಷ ಕಲಾ ಅಕಾಡೆಮಿ (ರಿ)”ಯವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ “ರಾವಣ ವಧೆ” ಎಂಬ ಯಕ್ಷಗಾನ ಪ್ರಸಂಗ ನೆರವೇರಿತು

ಕಾಸರಗೋಡು ಸುಬ್ರಾಯ ಪಂಡಿತರಿಂದ ವಿರಚಿಸಲ್ಪಟ್ಟ ರಾವಣ ವಧೆಯ, “ಮುಂದೆ ರವಿ ತಾ ಪಶ್ಚಿಮಾಂಬುಧಿ” ಎಂಬ ಪದ್ಯಕ್ಕೆ ರಾವಣನ ಒಡ್ಡೋಲಗದಿಂದ ಕಥಾನಕ ಆರಂಭಗೊಂಡಿತು.

ರಣಕಣದ ವಾರ್ತಾ ವಾಹಕ (ಕೃಷ್ಣ ಶಾಸ್ತ್ರಿ) ರಣದ ವರ್ತಮಾನವನ್ನು ಹೇಳಿದಾಗ ಮಂಡೋದರಿಯ ಗೃಹವನ್ನು ಪ್ರವೇಶಿಸಿ “ಹರನೇ ಶಂಕರ ಪಾರ್ವತಿ ವರನೇ” ಪದ್ಯಕ್ಕೆ ವ್ಯಥಿಸುತ್ತಿರುವ ಸಂದರ್ಭದಲ್ಲಿ ಮಂಡೋದರಿಯ ಪ್ರವೇಶ. ಮಂಡೋದರಿಯ ಪಾತ್ರದಲ್ಲಿ ಪ್ರವೀಣ ಚಂದ್ರ ಕುತ್ಪಾಡಿ ಯವರು ಇನ್ನು ಬಿಡು ಬಿಡು ಛಲವ, ಸಾಕೋರ್ವ ಮಗ ವಿರೂಪಾಕ್ಷ ವಿಶೇಷವಾಗಿ “ಅಳಲಿದಳು ಬೇಡಕಟ” ಪದ್ಯಕ್ಕೆ ತಮ್ಮ ಸುದೀರ್ಘವಾದ ನಾಲ್ಕು ದಶಕಗಳ ಅಭಿನಯದ ಅನುಭವವನ್ನು ಧಾರೆ ಎರೆದು, ಪ್ರೇಕ್ಷಕರ ಕಣ್ಣಂಚು ತೀವಗೊಂಡದ್ದು ಸುಳ್ಳಲ್ಲ.

ಮಾತಲಿಯಾಗಿ ಯುವ ಪ್ರತಿಭೆ ನಾಗೇಶ್ ಗೀಜಗಾರ್ ತಮ್ಮ ವೈವಿಧ್ಯಮಯ ನಾಟ್ಯಗಳಿಂದ ಜನಮನ ಗೆದ್ದರು. ವಿಭೀಷಣನಾಗಿ ಶಶಿಕಾಂತ್ ಆಚಾರ್ಯ ತಮ್ಮ ಆಳ್ತನ, ವೇಷಗಾರಿಕೆಯಿಂದ ರಂಜಿಸಿದರು. ರಾಮನ ಪಾತ್ರದಲ್ಲಿ ತಮ್ಮ ಎಂದಿನ ಮಟಪಾಡಿ ಶೈಲಿಯ ಚುರುಕಿನ ಹೆಜ್ಜೆಯ, ಶೃತಿ ಬದ್ಧ ಮಾತಿನಲ್ಲಿ ಗುರು ಕೃಷ್ಣಮೂರ್ತಿ ತುಂಗರು ಪ್ರೇಕ್ಷಕರನ್ನು ರಂಜಿಸಿದರು.

ತಮ್ಮವರನ್ನು ಕಳೆದುಕೊಂಡ ನೋವು, ಹಿಂದಿನ ಜನ್ಮದ ನೆನಪು, ರಾಮನ ಮೇಲಿನ ದ್ವೇಷಗಳನ್ನು ತೋರ್ಪಡಿಸುವಲ್ಲಿ ಮಾಹಿತಿ ತಂತ್ರಜ್ಞ ರವಿ ಮಡೋಡಿಯವರು ತಮ್ಮ ರಸಾಭಿನಯ, ಸಾಹಿತ್ಯ ಪಾರಮ್ಯದಲ್ಲಿ ಯಶ ಪಡೆದರು. ಮೇಲಾಗಿ ಕಂಡನು ದಶವದನ ಪದ್ಯಕ್ಕೆ ತಮ್ಮ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಿದರು. ಶ್ರೀಮತಿ ಲತಾ ಹೊಳ್ಳ, ರಿತೇಶ್ ರಾವಣನ ಎಡಬಲದಲ್ಲಿದ್ದರೆ, ಶ್ರೀ ರಮೇಶ್ ಮಟಪಾಡಿ, ಶ್ರೀ ನಿಧಿ ಎಂ ಎಸ್, ಸದಾಶಿವ, ಮಂಜುನಾಥ್ ಭಟ್ ವೇಷಭೂಷಣದಲ್ಲಿ ಸಹಕರಿಸಿದರು.

ಹಿಮ್ಮೇಳದಲ್ಲಿ ಯುವ ಪ್ರತಿಭೆ ಕುಮಾರಿ ಚಿತ್ಕಲಾ ಕೆ ತುಂಗ, ಮದ್ದಲೆಯಲ್ಲಿ ಹಿರಿಯರಾದ ಶ್ರೀ ಎ ಪಿ ಫಾಟಕ್, ಚಂಡೆಯಲ್ಲಿ ಮತ್ತೋರ್ವ ಯುವ ಪ್ರತಿಭೆ ಮನೋಜ್ ಆಚಾರ್ಯ ತಮ್ಮ ಕಲಾ ಪ್ರೌಢಿಮೆಯನ್ನು ತೋರಿದರು.

ಈ ಪ್ರದರ್ಶನಕ್ಕೆ ಹಿರಿಯ ಅನುಭವೀ ಗುರು ಕೃಷ್ಣಮೂರ್ತಿ ತುಂಗರ ನಿರ್ದೇಶನ ಗೋಪುರಕ್ಕೆ ಕಳಶವಿಟ್ಟಂತಿತ್ತು.

ಯಕ್ಷಾಂಗಣ ದಶಮಾನ ಸಡಗರ – ತಾಳಮದ್ದಳೆ ಸಪ್ತಾಹ 2022 – “ಯಕ್ಷಾಂಗಣ ಶತಮಾನ ಕಾಣಲಿ”: ಶಾಸಕ ಡಿ. ವೇದವ್ಯಾಸ ಕಾಮತ್

0

 

ಮಂಗಳೂರು: ‘ನಮ್ಮ ಸನಾತನ ಸಂಸ್ಕೃತಿ – ಸಂಪ್ರದಾಯಗಳನ್ನು ವಿವಿಧ ಕಥಾನಕಗಳ ಮೂಲಕ ಜನಮಾನಸಕ್ಕೆ ಮುಟ್ಟಿಸುವ ಸುಸಂಸ್ಕೃತ ಕಲೆ ಯಕ್ಷಗಾನ. ಅದರಲ್ಲೂ ತಾಳಮದ್ದಳೆ ಪ್ರಕಾರದಲ್ಲಿ ಪೌರಾಣಿಕ ಕಥೆಗಳೊಂದಿಗೆ ಕಲಾವಿದರು ವಿವರಿಸಿ ಹೇಳುವ ಜೀವನ ಮೌಲ್ಯಗಳು ಹಲವಾರಿವೆ.

ಅದನ್ನು ನುಡಿ ಹಬ್ಬದ ರೂಪದಲ್ಲಿ ಪ್ರತಿ ವರ್ಷ ನಡೆಸುವ ಯಕ್ಷಾಂಗಣವು ತನ್ನ ದಶಮಾನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಮುಂದೆ ಅದು ಶತಮಾನ ಕಾಣುವಂತಾಗಲಿ’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.

             ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ‘ಯಕ್ಷಾಂಗಣ ಮಂಗಳೂರು’ ಇದರ ದಶಮಾನೋತ್ಸವ ಪ್ರಯುಕ್ತ ಮಂಗಳೂರು ವಿ.ವಿ.ಡಾ.ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಜರಗಿದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022’ ಹತ್ತನೇ ವರ್ಷದ ನುಡಿ ಹಬ್ಬ ಸಮಾರೋಪ ಸಮಾರಂಭದಲ್ಲಿ ಕಲಾವಿದರನ್ನು ಗೌರವಿಸಿ ಅವರು ಮಾತನಾಡಿದರು.

         ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಕಿಶೋರ್ ಕೊಟ್ಟಾರಿ ಅತಿಥಿಗಳಾಗಿ ಶುಭ ಹಾರೈಸಿದರು.

         ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಮಹಿಳಾ ಕಾರ್ಯದರ್ಶಿ ಸುಮಾ ಪ್ರಸಾದ್ ವಂದಿಸಿದರು. ಜೊತೆ ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ನಿವೇದಿತಾ ಎನ್.ಶೆಟ್ಟಿ, ಅರುಣ ಎಸ್. ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉಪ್ಪಿನಂಗಡಿಯಲ್ಲಿ ಕುಂಬಳೆ ಸುಂದರ ರಾಯರಿಗೆ ನುಡಿ ನಮನ

0

ಮಲಯಾಳ ಮಾತೃಭಾಷೆಯಾಗಿದ್ದರೂ ಕನ್ನಡದಲ್ಲಿ ಅಪೂರ್ವ ವಾಗ್ಮಿಯಾಗಿ ಮಿಂಚಿದ ಕುಂಬಳೆ ಸುಂದರ ರಾಯರು ಆಟ ಮತ್ತು ತಾಳಮದ್ದಳೆಯಲ್ಲಿ ತನ್ನದೇ ಶೈಲಿಯ ಕಲಾವಿದನಾಗಿ ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗಿದ್ದಾರೆಂದು ಮಾಣಿ ಬಾಲವಿಕಾಸ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ರವೀಂದ್ರ ದರ್ಬೆ ತಿಳಿಸಿದರು. 

ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ವತಿಯಿಂದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿದ ಕುಂಬಳೆ ಸುಂದರ ರಾಯರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. 

ನಿವೃತ್ತ ಶಿಕ್ಷಕ ಕಲಾವಿದ ಗೋಪಾಲ್ ಶೆಟ್ಟಿ ಕಳೆಂಜ ನುಡಿ ನಮನ ಸಲ್ಲಿಸಿ, ಕುಂಬ್ಳೆ ಅವರು ತನ್ನ ಅಲ್ಪ ಶಾಲಾ ಶಿಕ್ಷಣದ ಹಿನ್ನೆಲೆಯಲ್ಲಿ ಯಕ್ಷಗಾನದ ಆಸಕ್ತಿಯಿಂದ ಅಧ್ಯಯನಶೀಲರಾಗಿ ದೈವದತ್ತವಾದ ಮಾತುಗಾರಿಕೆಯ ಶಕ್ತಿಯಿಂದ ಎಲ್ಲಾ ವಯೋಮಾನದ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆಂದು  ತಿಳಿಸಿದರು. 

ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಮಾತನಾಡಿ ತೆಂಕು ಮತ್ತು ಬಡಗಿನ ಸುಮಾರು 600 ಕ್ಕೂ ಹೆಚ್ಚು ಕಲಾವಿದರ ಮಾಹಿತಿಗಳನ್ನು ಒಳಗೊಂಡ ಯಕ್ಷೋಪಾಸಕರು ಎಂಬ ಎರಡು ಸಂಪುಟದ ಪ್ರಕಟಣೆ, ವಿದ್ಯಾರ್ಥಿ ಯಕ್ಷಗಾನ ಸಂಭ್ರಮ, ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಗಾನ ಸಂಘಗಳಿಗೆ ನೆರವು ನೀಡುವ ಮೂಲಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಹರಿರಾಮಚಂದ್ರ, ಕಿಶೋರ್ ಮೂಡಾಯಿರು, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಪಾತಾಳ ಅಂಬಾ ಪ್ರಸಾದ್, ಸತೀಶ ಶಿರ್ಲಾಲು ,ಪದ್ಮನಾಭ ಕುಲಾಲ್, ಹರೀಶ್ ಆಚಾರ್ಯ ಬಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್  ಉಪ್ಪಿನಂಗಡಿ ಸ್ವಾಗತಿಸಿ ಉಪನ್ಯಾಸಕ ಗುಡ್ಡಪ್ಪ ಬಲ್ಯ ವಂದಿಸಿದರು. ಸಂಜೀವ ಪಾರೆಂಕಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಧನ್ವ ಮೋಕ್ಷ ತಾಳಮದ್ದಳೆ ಜರಗಿತು.

ಕೋಳ್ಯೂರು ರಾಮಚಂದ್ರ ರಾಯರಿಗೆ ಕೀರಿಕ್ಕಾಡು ಪ್ರಶಸ್ತಿ

ಯಕ್ಷಗಾನದ ಮಹಾನ್ ಸಾಧಕ ಗುರು ಪ್ರಸಂಗಕರ್ತೃ ಅರ್ಥಧಾರಿ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸಂಸ್ಮರಣಾರ್ಥ ಕೊಡಲಾಗುತ್ತಿರುವ 2022ರ ಸಾಲಿನ ಕೀರಿಕ್ಕಾಡು ಪ್ರಶಸ್ತಿಗೆ ಸುಪ್ರಸಿದ್ಧ ಸ್ತ್ರೀ ಪಾತ್ರಧಾರಿ ಕೋಳ್ಯೂರು ರಾಮಚಂದ್ರ ರಾಯರು ಆಯ್ಕೆಯಾಗಿದ್ದಾರೆ.

ಕೋಳ್ಯೂರು ಎಂಬ ಹೆಸರಿನಿಂದಲೇ ಯಕ್ಷಗಾನ ವಲಯದಲ್ಲಿ ಮನೆಮಾತಾಗಿ ನೆಲೆನಿಂತಿರುವ ರಾಮಚಂದ್ರ ರಾಯರು ಸುದೀರ್ಘ ಕಾಲ ಶ್ರೇಷ್ಠ ಪಾತ್ರಧಾರಿಯಾಗಿ ರಂಗದಲ್ಲಿ ಮೆರೆದವರು. ಕೂಟಗಳಲ್ಲಿಯೂ ಭಾಗವಹಿಸಿದವರು.

‘90ರ ತಾರುಣ್ಯ’ದಲ್ಲಿ ಈಗಲೂ ಗರತಿಯ ವೇಷದಲ್ಲಿ ಸಾರ್ಥಕ್ಯವನ್ನು ತಂದುಕೊಡಬಲ್ಲ ಕಲಾವಂತಿಕೆಯನ್ನು ಹೊಂದಿದವರು. ಅವರ ಪರಿಪಕ್ವವೂ ಮೌಲಿಕವೂ ಆದ ಸಾಧನೆಯನ್ನು ಪರಿಗಣಿಸಿ ಕೀರಿಕ್ಕಾಡು ಪ್ರಶಸ್ತಿಯನ್ನು ಪ್ರದಾನ ಮಾಡಿ ದಿನಾಂಕ 25-12-2022 ಆದಿತ್ಯವಾರ ನಡೆಯಲಿರುವ 78ನೆಯ ವಾರ್ಷಿಕೋತ್ಸವದಂದು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು ಎಂದು ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ರಮಾನಂದ ಬನಾರಿ ಮಂಜೇಶ್ವರ, ಅಧ್ಯಕ್ಷರು, ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ) ದೇಲಂಪಾಡಿ, ಅಂಚೆ: ಪಂಜಿಕಲ್ಲು 671543, ಕಾಸರಗೋಡು ಜಿಲ್ಲೆ ಮೊಬೈಲ್: 9446297226

ಇಂದು ಆಟ ಎಲ್ಲೆಲ್ಲಿ? (12-12-2022, ಸೋಮವಾರ)

ಮೇಳಗಳ ಇಂದಿನ (12.12.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ತಂತ್ರಾಡಿ ಬಾಯಾರ್ ಬೆಟ್ಟಿನ ಶ್ರೀ ಲಕ್ಷ್ಮಿ ನಿಲಯದ ವಠಾರದಲ್ಲಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರದಲ್ಲಿ ಮಹಾಲಕ್ಷ್ಮಿ ಸದನ 

ಕಟೀಲು ಎರಡನೇ ಮೇಳ == ಲಲಿತಾನಿವಾಸ, ಆದ್ಯಪಾಡಿ ಬಜಪೆ ಮುರನಗರದಲ್ಲಿ 

ಕಟೀಲು ಮೂರನೇ ಮೇಳ== ಶ್ರೀ ಮಹಮ್ಮಾಯೀ ದೇವಸ್ಥಾನ ಮೂರುಕಾವೇರಿ 

ಕಟೀಲು ನಾಲ್ಕನೇ ಮೇಳ  == ರವಿ ನಿವಾಸ, ಎರ್ಮಾಳು ತೆಂಕ ವಯಾ ಪಡುಬಿದ್ರಿ 

ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರದಲ್ಲಿ ಸರಸ್ವತಿ ಸದನ 

ಕಟೀಲು ಆರನೇ ಮೇಳ == ಅನುಗ್ರಹ ಹೌಸ್, ಎ. ಎಲ್. ಎನ್ ಲೇಔಟ್ ಎಕ್ಕಾರು ಗುಡ್ಡೆಸಾನದ ಬಳಿ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ  

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ರತ್ನಗಿರಿ ಶೇರ್ಡಿ ಕಕ್ಕಂಜೆ  

ಹನುಮಗಿರಿ ಮೇಳ == ಶ್ರೀ ಬಡಗು ಮಹಾಗಣಪತಿ ದೇವಸ್ಥಾನ ಆಲಂಗಾರು ಮೂಡಬಿದಿರೆ – ಶ್ರೀಮತಿ ಪರಿಣಯ, ಉಷಾ ಪರಿಣಯ

ಶ್ರೀ ಪೆರ್ಡೂರು ಮೇಳ == ಯಡಾಡಿ ಮತ್ಯಾಡಿ ಅರುಣ್ ಕುಮಾರ್ ಹೆಗ್ಡೆ ಮನೆ ವಠಾರ – ಸುಧನ್ವ, ಸುದರ್ಶನ, ಕನಕಾಂಗಿ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಬೆಳ್ಳಾಡಿ ಹುಣ್ಸೆಡಿ ಮನೆ, ಸೇನಾಪುರ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಬೆಳ್ಳಾಡಿ ಹುಣ್ಸೆಡಿ ಮನೆ, ಸೇನಾಪುರ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ವಾಲ್ತೂರು ಮೇಲ್ ಜೋರ್ ಮಕ್ಕಿ ಮನೆ – ಮಾರಣಕಟ್ಟೆ ಮತ್ತು ಸೌಕೂರು ಮೇಳಗಳ ಜೋಡಾಟ 

ಶ್ರೀ ಪಾವಂಜೆ ಮೇಳ == ವಿಷ್ಣುಮೂರ್ತಿ ದೇವಸ್ಥಾನ ಕಳಂಜ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಹೊಸ್ಮೆಂದು ಯಳಬೇರು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಗುಡ್ಡಿ ಶಾಲೆ ವಠಾರ, ಪಾರಂಪಳ್ಳಿ ಪಡುಕೆರೆ 

ಶ್ರೀ ಸೌಕೂರು ಮೇಳ == ವಾಲ್ತೂರು ಮೇಲ್ ಜೋರ್ ಮಕ್ಕಿ ಮನೆ – ಮಾರಣಕಟ್ಟೆ ಮತ್ತು ಸೌಕೂರು ಮೇಳಗಳ ಜೋಡಾಟ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ನೀರ್ಚಾಲು ಶಾಲಾ ವಠಾರ – ನಾಗರಪಂಚಮಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹೊರ್ಲಾಳಿ ಶ್ರೀ ಚಿತ್ತೇರಿ ದೇವಸ್ಥಾನ ವಠಾರ – ಮಂತ್ರ ಮಾಂಗಲ್ಯ 

ಶ್ರೀ ಹಿರಿಯಡಕ ಮೇಳ == ಅಂಜಾರು ಮಠದ ಬಳಿ – ಮಂತ್ರದ ಮಾಂಗಲ್ಯ (ತುಳು)

ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ ಉಪ್ಪುಂದ

ಶ್ರೀ ನೀಲಾವರ ಮೇಳ  == ಕುಂಜಾಲು ಆರೂರು ಕ್ರಾಸ್ ರಿಕ್ಷಾ ಸ್ಟಾಂಡ್ ಬಳಿ – ರಕ್ತ ನೈವೇದ್ಯ 

ಶ್ರೀ ಹಟ್ಟಿಯಂಗಡಿ ಮೇಳ == ಕುಂಭಾಶಿ ಕೊರವಡಿ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಶ್ರೀ ದೇವಿ ದೇವಸ್ಥಾನ ಉದಯನಗರ – ಗಗನ ತಾರೆ 

ಶ್ರೀ ಬೋಳಂಬಳ್ಳಿ ಮೇಳ== ಗುಡಿ ಮಹಾಲಿಂಗೇಶ್ವರ ದೇವಸ್ಥಾನ ಕಾಲ್ತೋಡು – ಯಮಲೀಲೆ 

ಶ್ರೀ ಬಪ್ಪನಾಡು ಮೇಳ == ಪಂಜುರ್ಲಿ ಭಂಡಾರದ ಮನೆ, ಬೊಂಡಾಲ – ಶ್ರೀ ದೇವಿ ಮಹಾತ್ಮೆ 

ಶ್ರೀ ಗೆಜ್ಜೆಗಿರಿ ಮೇಳ == ಬೆಳುವಾಯಿ – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ 

ವಿ.ಸೂ: ದಿನನಿತ್ಯದ ಆಟದ ವಿವರಗಳನ್ನು ಮಾಹಿತಿಗಳು ಲಭ್ಯವಿದ್ದಲ್ಲಿ ಮಾತ್ರ ಪ್ರಕಟಿಸಲಾಗುವುದು. 

ಮನೆಗೆ ನುಗ್ಗಿ ಯುವತಿಯನ್ನು ಅಪಹರಿಸಿದ 100ಕ್ಕೂ ಹೆಚ್ಚು ಪುರುಷರು, ಕುಟುಂಬದವರ ಮೇಲೆ ಹಲ್ಲೆ | ವೀಡಿಯೊ

0

ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ಶುಕ್ರವಾರ 24 ವರ್ಷದ ಮಹಿಳೆಯನ್ನು ಆಕೆಯ ಮನೆಯಿಂದ ಅಪಹರಿಸಲಾಗಿದೆ, ನಂತರ 100 ಕ್ಕೂ ಹೆಚ್ಚು ಪುರುಷರು ಆಕೆಯ ಮನೆಗೆ ನುಗ್ಗಿ ಬಲವಂತವಾಗಿ ಕರೆದೊಯ್ದಿದ್ದಾರೆ.

ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ಶುಕ್ರವಾರ 24 ವರ್ಷದ ಮಹಿಳೆಯನ್ನು ಆಕೆಯ ಮನೆಯಿಂದ ಅಪಹರಿಸಲಾಗಿದೆ ಎಂದು ಹೇಳಲಾಗಿದ್ದು, ಕನಿಷ್ಠ 100 ಪುರುಷರು ಆಕೆಯ ಮನೆಗೆ ನುಗ್ಗಿ ಬಲವಂತವಾಗಿ ಕರೆದೊಯ್ದಿದ್ದಾರೆ.

ವೈಶಾಲಿ ಎಂದು ಗುರುತಿಸಲಾದ ಮಹಿಳೆಯ ಪೋಷಕರ ಪ್ರಕಾರ, ಸುಮಾರು 100 ಪುರುಷರು ಅವರ ಮನೆಗೆ ನುಗ್ಗಿ ತಮ್ಮ ಮನೆಯನ್ನು ಧ್ವಂಸಗೊಳಿಸಿದ ನಂತರ ಬಲವಂತವಾಗಿ ಮಗಳನ್ನು ಕರೆದೊಯ್ದಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪುರುಷರು ಮಹಿಳೆಯ ಸಂಬಂಧಿಕರಿಗೆ ಥಳಿಸುವ ದೃಶ್ಯ ಕಂಡು ಬರುತ್ತಿದೆ.

ಈ ಸಂಬಂಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ತೆಲಂಗಾಣದಲ್ಲಿ ಮಹಿಳೆಯನ್ನು ಅಪಹರಿಸಲು ಮನೆಗೆ ನುಗ್ಗಿದ 100ಕ್ಕೂ ಹೆಚ್ಚು ಪುರುಷರು, ಕುಟುಂಬದವರ ಮೇಲೆ ಹಲ್ಲೆ | ವೀಡಿಯೊ

ನಿನ್ನೆ ಕಾಡಾನೆ ದಾಳಿಗೆ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಕೊಯಮತ್ತೂರು| ಗುಡಲೂರಿನಲ್ಲಿ ನಿನ್ನೆ ಕಾಡಾನೆ ದಾಳಿಗೆ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ

ತಮಿಳುನಾಡಿನ ಕೊಯಮತ್ತೂರು ಸಮೀಪದ ಗುಡಲೂರಿನಲ್ಲಿ ನಿನ್ನೆ ಕಾಡಾನೆ ದಾಳಿಗೆ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಯಕ್ಷಾಂಗಣ ಹೊಸ ಪ್ರಯೋಗದಲ್ಲಿ ಇತಿಹಾಸದ ಪುನರ್ಮನನ
ಸಪ್ತಾಹದಲ್ಲಿ ರಂಜಿಸಿದ ‘ಸ್ವಾತಂತ್ರ್ಯ ವಿಜಯ’ ತಾಳಮದ್ದಳೆ


ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಮಂಗಳೂರು ವಿವಿ ಡಾ. ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ್ದ ದಶಮಾನ ಸಡಗರದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದಲ್ಲಿ ಯಕ್ಷಾಂಗಣವು ಒಂದು ಹೊಸ ಪ್ರಯೋಗದ ಮೂಲಕ ಪ್ರಜ್ಞಾವಂತರ ಗಮನ ಸೆಳೆದಿದೆ.


ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಗಾಗಿ ಸಿದ್ಧಪಡಿಸಿದ್ದ ‘ಕ್ರಾಂತಿ ಕಹಳೆ’ ಮತ್ತು ‘ಸ್ವಾತಂತ್ರ್ಯ ವಿಜಯ’ ಎಂಬ ಕಿರು ಪ್ರಸಂಗಗಳನ್ನು ಪ್ರಸ್ತುತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಲುವಾಗಿ ‘ಸ್ವರಾಜ್ಯ ಸ್ವಾತಂತ್ರ್ಯ ವಿಜಯ’ ಎಂಬ ಪೂರ್ಣಾವಧಿ ತಾಳಮದ್ದಳೆ ರೂಪದಲ್ಲಿ ಪ್ರಯೋಗಿಸಿ ಅದು ಇತಿಹಾಸದ ಪುನರ್ಮನನ ಮಾಡಿದ ಸಾಧನೆಗೆ ಸಾಕ್ಷಿಯಾಗಿದೆ.


ಕಥಾ ಸಾರ :
ಭಾರತದ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸವನ್ನಾಧರಿಸಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಸಂಯೋಜಿಸಿದ್ದ ಕಥಾ ಹಂದರಕ್ಕೆ ಡಾ.ದಿನಕರ ಎಸ್. ಪಚ್ಚನಾಡಿ ಪದ್ಯಗಳನ್ನು ರಚಿಸಿದ್ದು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿ ತಂಡ ಅವುಗಳನ್ನು ಎರಡು ಕಂತುಗಳಲ್ಲಿ ಮಂಗಳೂರು ಬಾನುಲಿ ಕೇಂದ್ರ ಮೂಲಕ ಈ ಹಿಂದೆ ರೇಡಿಯೋ ಪ್ರಸಾರ ಮಾಡಿತ್ತು.


ವಿದೇಶೀ ಪೋರ್ಚುಗೀಸರೊಡನೆ ಹೋರಾಡಿದ ಪ್ರಪ್ರಥಮ ಸ್ವಾತಂತ್ರ್ಯ ಸೇನಾನಿ ಉಳ್ಳಾಲದ ಅಬ್ಬಕ್ಕ ರಾಣಿಯ ಪ್ರವೇಶದೊಂದಿಗೆ ಆರಂಭವಾಗುವ ಈ ಪ್ರಸಂಗದಲ್ಲಿ ಮೈಸೂರಿನ ಕದನ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ವಂಗ ಭಂಗ – ಚಳುವಳಿ, ಜಲಿಯನ್ ವಾಲಾಬಾಗ್ ದುರಂತ, ಆಜಾದ್ – ಭಗತ್ ಸಿಂಗ್ ಬಲಿದಾನ, ಗಾಂಧಿ ಯುಗ, ಸತ್ಯಾಗ್ರಹ, ಸ್ವದೇಶೀ ಆಂದೋಲನ ಹಾಗೂ ಅಂತಿಮವಾಗಿ ಸ್ವಾತಂತ್ರ್ಯ ಘೋಷಣೆಯ ವರೆಗಿನ ಘಟನೆಗಳನ್ನು ಪ್ರಸ್ತುತ ‘ಸ್ವರಾಜ್ಯ ಸ್ವಾತಂತ್ರ್ಯ ವಿಜಯ’ ಪ್ರಸಂಗದಲ್ಲಿ ಆಯ್ದುಕೊಳ್ಳಲಾಗಿದೆ.


ಭಾಗವಹಿಸಿದ ಕಲಾವಿದರು :
ಇದೇ 2022 ನವಂಬರ್ 25 ರಂದು ಸಾಕಷ್ಟು ರಂಜನೀಯವಾಗಿ ಹಾಗೂ ಅಷ್ಟೇ ಬೋಧಪ್ರದವಾಗಿ ಜರಗಿದ ಈ ಐತಿಹಾಸಿಕ ತಾಳಮದ್ದಳೆಯಲ್ಲಿ ಭಾಗವತರಾಗಿ ಅಮೃತ ಅಡಿಗ, ಚಂಡೆ-ಮದ್ದಳೆಗಳಲ್ಲಿ ಮಯೂರ್ ನಾಯಗ ಮತ್ತು ಕೌಶಲ್ ರಾವ್ ಪುತ್ತಿಗೆ ಭಾಗವಹಿಸಿದ್ದರು.


ಭಾಸ್ಕರ ರೈ ಕುಕ್ಕುವಳ್ಳಿ (ಗಾಂಧೀಜಿ/ಭಗತ್ ಸಿಂಗ್), ಮಹಾಬಲ ಶೆಟ್ಟಿ ಕೂಡ್ಲು (ಬಾಲಗಂಗಾಧರ ತಿಲಕ್), ಜಿ.ಕೆ.ಭಟ್ ಸೇರಾಜೆ (ತಾತ್ಯಾ ಟೋಪೆ), ಗಣರಾಜ ಕುಂಬಳೆ (ಬಹದ್ದೂರ್ ಶಾ/ ಚಂದ್ರಶೇಖರ ಆಜಾದ್), ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು (ರಾಣಿ ಅಬ್ಬಕ್ಕ/ ವಿದ್ಯಾವತಿ), ಸರಪಾಡಿ ಅಶೋಕ್ ಶೆಟ್ಟಿ (ಸುಭಾಷ್ ಚಂದ್ರ ಬೋಸ್/ ಟಿಪ್ಪು ಸುಲ್ತಾನ್), ಉಮೇಶ್ ಆಚಾರ್ಯ ಗೇರುಕಟ್ಟೆ (ವಿಪಿನ್ ಚಂದ್ರ ಪಾಲ್/ ಮೌಂಟ್ ಬ್ಯಾಟನ್), ಸದಾಶಿವ ಆಳ್ವ ತಲಪಾಡಿ (ಜವಾಹರ್ ಲಾಲ್ ನೆಹರು/ಕಾರ್ನವಾಲೀಸ್), ಎಂ.ಎಂ.ಸಿ. ರೈ ( ಪೋರ್ಚುಗೀಸ್ ನೊರೋನ್ಹಾ/ ಬ್ರಿಟಿಷ್ ಅಧಿಕಾರಿ) ಮತ್ತು ಹರಿಶ್ಚಂದ್ರ ನಾಯಗ (ಬ್ರಿಟಿಷ್ ಸೈನಿಕ) ಅರ್ಥಧಾರಿಗಳಾಗಿದ್ದರು.