Monday, September 21, 2026
Home Blog Page 80

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಕ್ರೀಡೋತ್ಸವ-2023-24

ಬಾಲ್ಯದಿಂದಲೇ ಕ್ರೀಡಾ ಮನೋಭಾವ ಮೂಡಿಸಿಕೊಂಡು ಸದೃಢ ಶರೀರ ಬೆಳೆಸಿಕೊಳ್ಳುವುದು ಮಗುವಿನ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ. ಜೆ. ಶೆಟ್ಟಿ ಹೇಳಿದರು.

ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಕ್ರೀಡೋತ್ಸವ-2023-24 ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂತಹ ಚಟುವಟಿಕೆಗಳಿಂದ ಮಗುವಿನ ನೈಜ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶಿವಪ್ರಕಾಶ್. ಎಂ ಹಾಗೂ ಸದಸ್ಯರಾದ ಶ್ರೀಮತಿ ಮಾಲಾ ಮಹೇಶ್ ಶುಭ ಹಾರೈಸಿದರು.

ಸಹಶಿಕ್ಷಕಿ ಶ್ರೀಮತಿ ವಿದ್ಯಾ ಸರಸ್ವತಿ ಸ್ವಾಗತಿಸಿ, ಶ್ರೀಮತಿ ಕವಿತಾ ಸತೀಶ್ ವಂದಿಸಿದರು. ಶ್ರೀಮತಿ ಸಹನಾ ಪೈ ಕಾರ್ಯಕ್ರಮ ನಿರೂಪಿಸಿದರು.

ಶಾಲಾ ಮುಖ್ಯೋಪಾಧ್ಯಾಯರುಗಳ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಹಶಿಕ್ಷಕರ ಸಹಕಾರದಲ್ಲಿ ಪೂರ್ವ ಪ್ರಾಥಮಿಕದಿಂದ 4ನೇ ತರಗತಿವರೆಗಿನ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಸಿ, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಾಲಾ ಆಡಳಿತ ಮಂಡಳಿ ಸದಸ್ಯರು ಮತ್ತು ಪೋಷಕ ಬಂಧುಗಳು ಉಪಸ್ಥಿತರಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಪ್ರಶಸ್ತಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ದಕ್ಷಿಣ ಹಾಗೂ ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ

ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ, ಬಂಟ್ಸ್ ಹಾಸ್ಟೆಲ್, ಮಂಗಳೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ ಗಳಿಸಿರುತ್ತಾರೆ.

ಪ್ರೌಢ ಶಾಲಾ ವಿಭಾಗದಲ್ಲಿ 8ನೇ ತರಗತಿಯ ಕುಮಾರಿ ಸುಪ್ರಜಾ ರಾವ್ ( ಉಪನ್ಯಾಸಕ ದಂಪತಿ ಶ್ರೀ ಪ್ರಶಾಂತ್ ರಾವ್ ಮತ್ತು ಶ್ರೀಮತಿ ಸುಮನಾ.ಕೆ ಇವರ ಪುತ್ರಿ) ಜನಪದ ಗೀತೆಯಲ್ಲಿ ದ್ವಿತೀಯ ಸ್ಥಾನ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿಯ ನಾಗಾಭೂಷಣ ಕಿಣಿ(ಕೆಮ್ಮಾಯಿ ಶ್ರೀ ನಾಗರಾಜ್ ಕಿಣಿ ಮತ್ತು ನಮೃತ ಕಿಣಿ ದಂಪತಿ ಪುತ್ರ) ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ,

7ನೇ ತರಗತಿಯ ಸಿರಿ ಹಿಳ್ಳೆಮನೆ (ಹಿಂಗಾರು, ಪಂಜಳ ಶ್ರೀ ಶಿವಕುಮಾರ ಹಿಳ್ಳೆಮನೆ ಮತ್ತು ಡಾ.ಸಹನಾ ಹಿಳ್ಳೆಮನೆ ದಂಪತಿ ಪುತ್ರಿ) ಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನ,

7ನೇ ತರಗತಿಯ ಅವನಿ.ಎಸ್.ವಿ(ಸಂಪ್ಯ ಶ್ರೀ ವಿಘ್ನೇಶ್ವರ ಭಟ್.ಎಸ್ ಮತ್ತು ಶ್ರೀಮತಿ ಸುಪರ್ಣಾ.ಕೆ ದಂಪತಿ ಪುತ್ರಿ) ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ಲೋಕಾರ್ಪಣೆ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇದರ ಸಾಂಸ್ಕೃತಿಕ ಭವನದ ಲೋಕಾರ್ಪಣೆಯ ಕಾರ್ಯಕ್ರಮ ಡಿಸೆಂಬರ್ 26ರಂದು ಮಂಗಳೂರು ಮದ್ಯಾಹ್ನ ಜರಗಲಿದೆ.

ಪೂಜ್ಯ ಖಾವಂದರಾದ ರಾಜರ್ಷಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಾಂಸ್ಕೃತಿಕ ಭವನವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ.

ಈ ಕಾರ್ಯಕ್ರಮದ ಪ್ರಯುಕ್ತ ಇಂದು ಜರಗಿದ ಪೂರ್ವಭಾವಿ ಸಭೆಯಲ್ಲಿ ಅನೇಕ ಗಣ್ಯರು ಬಂದು ಸಲಹೆ ಸೂಚನೆ ಇತ್ತರು. ಪ್ರಸ್ತುತ ಸಭೆಯಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಎಲ್ಲರೂ ಕಾರ್ಯಕ್ರಮದ ಸಂದರ್ಭದಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು. ಊರ ಪರವೂರ ಗಣ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಗೆಳತಿಯನ್ನು ಕೊಂದು ಶವದ ಚಿತ್ರವನ್ನು ವಾಟ್ಸಾಪ್ ಸ್ಟೇಟಸ್ ಆಗಿ ಪೋಸ್ಟ್ ಮಾಡಿದ ವ್ಯಕ್ತಿ

ಗೆಳತಿಯನ್ನು ಕೊಂದು ಶವದ ಚಿತ್ರವನ್ನು ವಾಟ್ಸಾಪ್ ಸ್ಟೇಟಸ್ ಆಗಿ ಪೋಸ್ಟ್ ಮಾಡಿದ ವ್ಯಕ್ತಿ
ದಂಪತಿ ನಡುವೆ ಜಗಳ ನಡೆದಿದ್ದು, ವ್ಯಕ್ತಿ ಮಹಿಳೆಯ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಆಕೆಯ ದೇಹದ ಚಿತ್ರವನ್ನು ವಾಟ್ಸಾಪ್ ಸ್ಟೇಟಸ್ ಆಗಿ ಪೋಸ್ಟ್ ಮಾಡಿದ್ದಾರೆ.


ಚೆನ್ನೈನ ಹೋಟೆಲ್‌ವೊಂದರಲ್ಲಿ 20 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಗೆಳೆಯ ಕೊಂದಿದ್ದಾನೆ ಎಂದು ಆರೋಪಿಸಿ, ನಂತರ ಮೃತದೇಹದ ಚಿತ್ರವನ್ನು ತನ್ನ ವಾಟ್ಸಾಪ್ ಕಥೆಯನ್ನಾಗಿ ಪೋಸ್ಟ್ ಮಾಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆಶಿಕ್ ಎಂದು ಗುರುತಿಸಲಾದ ಆರೋಪಿಯ ವಾಟ್ಸಾಪ್ ಸ್ಟೇಟಸ್ ಅನ್ನು ಸಂತ್ರಸ್ತೆಯ ಸ್ನೇಹಿತರು ಗಮನಿಸಿದ ನಂತರ ಕೊಲೆ ಬೆಳಕಿಗೆ ಬಂದಿದೆ.

ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅಧಿಕಾರಿಗಳು ಇಬ್ಬರೂ ತಂಗಿದ್ದ ಹೋಟೆಲ್ ಕೋಣೆಯಲ್ಲಿ ಆಕೆ ಶವವನ್ನು ಕಂಡುಕೊಂಡಿದ್ದಾರೆ.


ಯುವತಿ ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ಐದು ವರ್ಷಗಳಿಂದ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ನಗರದಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದು ಒಟ್ಟಿಗೆ ವಾಸವಾಗಿದ್ದರು.


ಸಂತ್ರಸ್ತೆ ಮೂರು ದಿನ ಕಾಲೇಜ್ ತರಗತಿಗಳನ್ನು ತಪ್ಪಿಸಿಕೊಂಡಾಗ, ಆಕೆಯ ಸ್ನೇಹಿತರು ಆಕೆಯ ಬಗ್ಗೆ ವಿಚಾರಿಸಿದರು ಮತ್ತು ಆಕೆಯ ಗೆಳೆಯ ಆಶಿಕ್ ಚೆನ್ನೈಗೆ ಬಂದಿದ್ದಾರೆ ಎಂದು ತಿಳಿದುಕೊಂಡರು, ಹೋಟೆಲ್ ರೂಮ್ ಬುಕ್ ಮಾಡಿದ್ದ ಮತ್ತು ಆಶಿಕ್ ಅವಳನ್ನು ಕರೆದುಕೊಂಡು ಹೋಗಿದ್ದ.

ಆದರೆ, ಆಶಿಕ್‌ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಮಹಿಳೆಯ ನಿರ್ಜೀವ ದೇಹದ ಚಿತ್ರವನ್ನು ಕಂಡು ಅವರು ಆಘಾತಕ್ಕೊಳಗಾಗಿದ್ದಾರೆ.

ಚೆನ್ನೈ ಪೊಲೀಸರು ಹುಡುಕಾಟ ಆರಂಭಿಸಿದ್ದು, ಖಾಸಗಿ ಹೋಟೆಲ್‌ನಲ್ಲಿ ಶವ ಪತ್ತೆಯಾಗಿದೆ. ತಂಡವು ಆಶಿಕ್ ಬಂಧನಕ್ಕೆ ಕಾರಣವಾದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸಹ ಟ್ರ್ಯಾಕ್ ಮಾಡಿದೆ.

ವಿಚಾರಣೆ ವೇಳೆ ಆರೋಪಿಯು ತಾನು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿರುವುದಾಗಿ ಮಹಿಳೆ ಆರೋಪಿಸಿದ್ದರಿಂದ ಪರಸ್ಪರ ಜಗಳ ನಡೆದಿದೆ ಎಂದು ತಿಳಿಸಿದ್ದಾರೆ. ಇದರಿಂದ ಕೆರಳಿದ ಆಶಿಕ್ ತನ್ನ ಟೀ ಶರ್ಟ್ ನಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಈ ಜೋಡಿ ಮಗುವನ್ನು ಸಹ ಹೊಂದಿದ್ದರು, ಅವರು ದತ್ತು ತೆಗೆದುಕೊಳ್ಳಲು ಬಿಟ್ಟುಕೊಟ್ಟಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಅವರ ವಿಸ್ತರಣೆಯ ಕುರಿತು, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಏನು ಹೇಳಿದ್ದಾರೆ ನೋಡಿ

ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಅವರ ವಿಸ್ತರಣೆಯ ಕುರಿತು, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಏನು ಹೆಳಿದ್ದಾರೆ ?

ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಅವರು “ನಾನು ಇನ್ನೂ ಯಾವುದಕ್ಕೂ ಸಹಿ ಮಾಡಿಲ್ಲ, ನಾನು ಪೇಪರ್ಸ್ ಪಡೆದ ನಂತರ ನಾವು ನೋಡುತ್ತೇವೆ…” ಎಂದು ಹೇಳಿದ್ದಾರೆ.

https://x.com/ANI/status/1730214852583624987?s=20

https://x.com/ANI/status/1730214852583624987?s=20

ಪುತ್ತೂರಿನಲ್ಲಿ ಹನುಮಗಿರಿ ಮೇಳದವರಿಂದ ಎರಡು ದಿನಗಳಲ್ಲಿ ಎರಡು ಯಕ್ಷಗಾನ ಬಯಲಾಟ – ಕಾಯಕಲ್ಪ ಮತ್ತು ಇಂದ್ರಪ್ರಸ್ಥ

0

ಪುತ್ತೂರಿನಲ್ಲಿ ಹನುಮಗಿರಿ ಮೇಳದವರಿಂದ ಎರಡು ದಿನಗಳಲ್ಲಿ ಎರಡು ಯಕ್ಷಗಾನ ಬಯಲಾಟ ನಡೆಯಲಿದೆ.

ಕಾಯಕಲ್ಪ ಮತ್ತು ಇಂದ್ರಪ್ರಸ್ಥ ಎಂಬ ಎರಡು ಪ್ರಸಂಗಗಳನ್ನು ಹನುಮಗಿರಿ ಮೇಳದ ಕಲಾವಿದರು ಪ್ರದರ್ಶಿಸಲಿದ್ದಾರೆ.

ದಿನಾಂಕ 04-12-2023ನೇ ಸೋಮವಾರ ‘ಕಾಯಕಲ್ಪ’ ಮತ್ತು ದಿನಾಂಕ 05-12-2023ನೇ ಮಂಗಳವಾರ ‘ಇಂದ್ರಪ್ರಸ್ಥ’ ಎಂಬ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವರಗಳಿಗೆ ಚಿತ್ರವನ್ನು ನೋಡಿ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 10-12-2023ರಿಂದ 24-12-2023ರ ವರೆಗೆ

0

ಇತಿಹಾಸ ಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 10-12-2023ರಿಂದ 24-12-2023ರ ವರೆಗೆ ನಡೆಯಲಿದೆ.

ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ದ್ವಾದಶಿಯ ದಿನವಾದ ಆದಿತ್ಯವಾರ 10-12-2023ರಿಂದ 24-12-2023ರ ದ್ವಾದಶಿಯ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.

10.12.2023ರ ಆದಿತ್ಯವಾರ ಕೊಪ್ಪರಿಗೆ ಏರುವುದು ಮತ್ತು ಅದೇ ದಿನ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ನಡೆಯುತ್ತದೆ.

ಹದಿನೈದು ದಿನಗಳ ಅಭೂತಪೂರ್ವ ಜಾತ್ರೋತ್ಸವದಲ್ಲಿ ಒಂಭತ್ತನೆಯ ದಿನ ಅಂದರೆ ದಿನಾಂಕ 18.12.2023 ನೇ ಸೋಮವಾರ ಪ್ರಾತಃಕಾಲ ಚಂಪಾಷಷ್ಟಿ ಮಹಾ ರಥೋತ್ಸವ ನಡೆಯಲಿದೆ.

ಕಾರ್ಯಕ್ರಮದ ವಿವರಗಳಿಗೆ ಆಮಂತ್ರಣ ಪತ್ರಿಕೆಯ ಚಿತ್ರಗಳನ್ನು ನೋಡಿ.

ರಣದೀಪ್ ಹೂಡಾ ಮತ್ತು ಲಿನ್ ಲೈಶ್ರಾಮ್ ಅವರ ಇಂದು ಮಣಿಪುರದ ಇಂಫಾಲ್‌ನಲ್ಲಿ ನಡೆದ ಸಾಂಪ್ರದಾಯಿಕ ಮೈತಿ ವಿವಾಹ

0

ನಟರಾದ ರಣದೀಪ್ ಹೂಡಾ ಮತ್ತು ಲಿನ್ ಲೈಶ್ರಾಮ್ ಅವರು ಇಂದು ಮಣಿಪುರದ ಇಂಫಾಲ್‌ನಲ್ಲಿ ಸಾಂಪ್ರದಾಯಿಕ ಮೈತಿ ವಿವಾಹ ಸಮಾರಂಭದಲ್ಲಿ ಮದುವೆಯಾಗುತ್ತಿದ್ದಾರೆ.

ಇಂಫಾಲ್‌ನಲ್ಲಿರುವ ಚುಮ್‌ತಾಂಗ್ ಶಾನಪುಂಗ್ ರೆಸಾರ್ಟ್‌ನಿಂದ ಮದುವೆಯ ಆಚರಣೆಗಳು ನಡೆಯುತ್ತಿರುವ ದೃಶ್ಯಗಳನ್ನು ನೋಡಬಹುದು.

https://x.com/ANI/status/1729844750688149879?s=20

https://x.com/ANI/status/1729838671065477305?s=20

ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಗೆ ಹಲವು ಪ್ರಶಸ್ತಿ

0

ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಗೆ ಹಲವು ಪ್ರಶಸ್ತಿ:

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ನೆಲ್ಲಿಕಟ್ಟೆ, ಪುತ್ತೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ, ಇದರ ಜಂಟಿ ಆಶ್ರಯದಲ್ಲಿ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ, ಇಲ್ಲಿ ದಿನಾಂಕ 23-11-2023 ರಂದು ನಡೆಯಿತು.

ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರು ಭಾಗವಹಿಸಿದ್ದು, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಜನಪದಗೀತೆ ಸ್ಪರ್ಧೆಯಲ್ಲಿ ಶ್ರೀಮತಿ ರೇಷ್ಮಾ.ಟಿ ದ್ವಿತೀಯ ಸ್ಥಾನ, ಪ್ರೌಢಶಾಲಾ ವಿಭಾಗದ ಬೋಧನೋಪಕರಣ ತಯಾರಿಕಾ ಸ್ಪರ್ಧೆಯಲ್ಲಿ ಶ್ರೀಮತಿ ರೇಖಾ ಆಚಾರ್ಯ ದ್ವಿತೀಯ ಸ್ಥಾನ,

ಪ್ರಾಥಮಿಕ ಶಾಲಾ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಶ್ರೀಮತಿ ಸೌಮ್ಯಕುಮಾರಿ ತೃತೀಯ ಸ್ಥಾನ, ಮತ್ತು ಪ್ರಾಥಮಿಕ ಶಾಲಾ ವಿಭಾಗದ ಬೋಧನೋಪಕರಣ ತಯಾರಿಕಾ ಸ್ಪರ್ಧೆಯಲ್ಲಿ ಕು.ಅಕ್ಷತಾ.ಜಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬಳ್ಕೂರು ಕೃಷ್ಣಯಾಜಿಗೆ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ – ಸಾಲಿಗ್ರಾಮ ಮೇಳದ 56ನೇ ವರ್ಷದ ತಿರುಗಾಟಕ್ಕೆ ಚಾಲನೆ ಮತ್ತು 20 ನೇ ವರ್ಷದ ಪ್ರಶಸ್ತಿ ಪ್ರದಾನ

0

ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಪ್ರದಾನ

ಕಲೆ ನಿಂತ ನೀರಲ್ಲ ಕಾಲಗತಿಯೊಂದಿಗೆ ನಿರಂತರ ಪರಿಷ್ಕರಣೆಗೊಳ್ಳುತ್ತಿರುತ್ತದೆ. ಆದರೆ ಕಲೆಯ ಅಂತಸತ್ತ್ವದ ಅರಿವು ಕಲಾವಿದನಿಗಿರಬೇಕಾಗುತ್ತದೆ. ಕಲೆಯನ್ನೆ ಬದುಕಾಗಿಸಿಕೊಂಡವರು   ಇದನ್ನು ಅರ್ಥೈಸಿ ಕೊಳ್ಳುವುದು ಒಳಿತು. ಯಾವುದೇ ಕಲಾವಿದನಿಗಿಂತ ಯಕ್ಷಗಾನ ಕಲೆ ಮತ್ತು ಮೇಳ ಶ್ರೇಷ್ಠ. ನನ್ನ ಐದು ದಶಕದ ಕಲಾಯಾನದಲ್ಲಿ ಮುವತ್ತನಾಲ್ಕು ವರ್ಷ ಶ್ರೀ ಸಾಲಿಗ್ರಾಮ ಮೇಳದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ 

ಅದಕ್ಕೆ ಅವಕಾಶ ಮಾಡಿಕೊಟ್ಟ ಅಂದಿನ ಮತ್ತು ಇಂದಿನ ಯಜಮಾನರಿಗೆ ನಾನು ಆಭಾರಿ ಎಂದು ಹಿರಿಯ ಕಲಾವಿದ ಬಳ್ಕೂರು ಕೃಷ್ಣ ಯಾಜಿ ನುಡಿದರು. 

ಅವರು ಶುಕ್ರವಾರ ಗುರುಪ್ರಸಾದಿತ ಯಕ್ಷಗಾನ ಮಂಡಳಿಯ ಐವತ್ತಾರನೆ ವರ್ಷದ ತಿರುಗಾಟದ ಪ್ರಥಮ ದೇವರ ಸೇವೆ ಆಟದ ರಂಗದಲ್ಲಿ ಹಮ್ಮಿಕೊಂಡ ಇಪ್ಪತ್ತನೇ ವರ್ಷದ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಉಡುಪಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಮಾತನಾಡಿ ಇಂದು ಕಲೆ ಕಲಾವಿದರಿಗೆ ಅವಕಾಶಗಳ ಕೊರತೆ ಇಲ್ಲ ಆದರೆ ಈ ಸಂಕ್ರಮಣದ ಕಾಲಘಟ್ಟದಲ್ಲಿ ಟೆಂಟ್ ಮೇಳ ನಡೆಸುವುದು ಸವಾಲಿನ ಕೆಲಸ.‌ ಆದರೆ ಸಾಲಿಗ್ರಾಮ ಮೇಳ ಐವತ್ತೈದು ವರ್ಷಗಳನ್ನು ಪೂರೈಸಿ ಮುಂದಿನ ತಿರುಗಾಟಕ್ಕೆ ಅಣಿಯಾಗುತ್ತಿರುವುದು ಪ್ರಶಂಸನೀಯ ಎಂದು ಶುಭ ಹಾರೈಸಿದರು.

 

ಸಭಾಧ್ಯಕ್ಷತೆಯನ್ನು ವಹಿಸಿದ ಸಾಲಿಗ್ರಾಮ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್. ಕಾರಂತ ಮಾತನಾಡಿ ನಮ್ಮೂರಿನ ಇತಿಹಾಸ ಪ್ರಸಿದ್ಧ ಮೇಳವಾದ ಸಾಲಿಗ್ರಾಮ ಮೇಳ ಯಶಸ್ವಿಯಾಗಿ ತಿರುಗಾಟ ಮುಂದುವರಿಸಲು ಯಜಮಾನರು ಕಲಾವಿದರು ಮಾತ್ರವಲ್ಲದೆ ಯಕ್ಷಾಭಿಮಾನಿಗಳೂ ಶ್ರಮಿಸಬೇಕು.

ದೇವಸ್ಥಾನದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಅಲ್ಕದೇ ಮೇಳದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಮಾದರಿ ಕೆಲಸ ಎಂದು ನುಡಿದರು.

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಐರೋಡಿ ಜಗದೀಶ ಕಾರಂತ ಅಭಿನಂದನಾ ನುಡಿಗಳನ್ನಾಡಿದ ಪ್ರೊ. ಎಸ್. ವಿ. ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಕೃತಜ್ಞತೆ ಸಲ್ಲಿಸಿದರು ಉಪನ್ಯಾಸಕ ರಾಘವೇಂದ್ರ ತುಂಗ ಸ್ವಾಗತಿಸಿ ನಿರೂಪಿಸಿದರು ಯಕ್ಷ ಸಂಘಟಕ ಸುದರ್ಶನ ಉರಾಳ ಯಕ್ಷ ಕವಿ ನಂದೀಶ ಶೆಟ್ಟಿ ಸಹಕರಿಸಿದರು