Saturday, August 29, 2026
Home Blog Page 79

ಸಿರಿಬಾಗಿಲು ಸಾಂಸ್ಕೃತಿಕ ಭವನ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ- ಪೂಜ್ಯ ಎಡನೀರು ಶ್ರೀಗಳಿಂದ


ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ದ ಬೃಹತ್ ಯೋಜನೆಯಾದ ಸಾಂಸ್ಕೃತಿಕ ಭವನವನ್ನು ಡಿಸೆಂಬರ್ 26 ರಂದು ಮಂಗಳವಾರ ರಾಜರ್ಷಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಯ ಗೊಳಿಸಲಿದ್ದಾರೆ.

ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಯನ್ನು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀಮದ್ ಎಡನೀರು ಮಠದಲ್ಲಿ ಬಿಡುಗಡೆ ಗೊಳಿಸಿದರು.ಗಡಿನಾಡು ಕಾಸರಗೋಡಿಗೆ ಸಾಂಸ್ಕೃತಿಕ ಭವನವು ಮುಂದಿನ ದಿನಗಳಲ್ಲಿ ದೊಡ್ಡ ಕೊಡುಗೆಯಾಗಲಿದೆ.

ಸಂಪೂರ್ಣ ಯಶಸ್ವಿ ಯಾಗಿ ನಡೆಯಲಿ ಎಂದು ಹಾರೈಸಿ ದರು. ಲೋಕಾರ್ಪಣಾ ಕಾರ್ಯಕ್ರಮ ದ ಸ್ವಾಗತ ಸಮಿತಿಯ ಸಂಚಾಲಕರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ. ರಂಗ ನಿರ್ದೇಶಕ ಮೂರ್ತಿ ದೇರಾಜೆ, ಕನ್ನಡ ಗ್ರಾಮದ ಶಿವರಾಮ ಕಾಸರಗೋಡು, ಕವಿ ರಾಧಾಕೃಷ್ಣ ಉಳಿಯತ್ತಡ್ಕ, ಶ್ಯಾಮ್ ಕುಂಚಿನಡ್ಕ, ರಾಜಾರಾಮ ರಾವ್ ಮಿಯಪದವು, ಶ್ರೀಮುಖ ಯಸ್. ಅರ್ ಮಯ್ಯ, ಶ್ರೀರಾಜ ಮಯ್ಯ ಉಪಸ್ಥಿತರಿದ್ದು. ಲೋಕಾರ್ಪಣೆಯ ಕಾರ್ಯಕ್ರಮ ಕ್ಕೆ ಗಣ್ಯಾತಿಗಣ್ಯರ ಗಡಣವೇ ಸಿರಿಬಾಗಿಲಿಗೆ ಆಗಮಿಸಲಿದ್ದಾರೆ.

26 ರಂದು ಸಂಜೆ 7 ರಿಂದ ಶ್ರೀ ಧರ್ಮಸ್ಥಳ ಮೇಳದವರ ನಂದಿ ನಂದಿನಿ ಯಕ್ಷಗಾನ ಬಯಲಾಟ ಪಡೆಯಲಿದೆ.

ಹುಲಿ ದಾಳಿಗೆ ವ್ಯಕ್ತಿ ಬಲಿ, ಅರ್ಧ ತಿಂದ ಶವ ಪತ್ತೆ

ವಯನಾಡಿನ ವಾಕೇರಿಯಲ್ಲಿ ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕೂಡಲ್ಲೂರು ಮೂಲದ ಪ್ರಜೀಶ್ (36) ಎಂದು ಗುರುತಿಸಲಾಗಿದೆ.

ಹುಲ್ಲು ಕಡಿಯಲು ಹೋಗಿದ್ದ ಪ್ರಜೀಶ್ ನನ್ನು ಹುಡುಕುತ್ತಿದ್ದ ಆತನ ಸಹೋದರನಿಗೆ ಶವ ಪತ್ತೆಯಾಗಿದೆ. ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ.

ಸೂಚನೆ ಮತ್ತು ಸ್ಥಳೀಯರ ಪ್ರಕಾರ, ಹುಲಿ ಬಲಿಯಾದವರ ಮೇಲೆ ದಾಳಿ ಮಾಡಿ, ದೇಹವನ್ನು ತೆಗೆದುಕೊಂಡು ನಂತರ ಅದನ್ನು ಬಿಟ್ಟು ಹೋಗಿದೆ.


ಅರ್ಧ ತಿಂದ ಶವ ಪತ್ತೆಯಾಗಿದೆ. ಈ ಪ್ರದೇಶವು ಅರಣ್ಯ ಗಡಿ ವಲಯವಾಗಿದೆ.

ಒಡಿಶಾ, ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸಂಸದರ ಆವರಣದಲ್ಲಿ ತೆರಿಗೆ ದಾಳಿ ಮುಂದುವರಿಕೆ; ಹೆಚ್ಚಿನ ನಗದು ವಶ


ಜಾರ್ಖಂಡ್‌ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಆವರಣದಲ್ಲಿ ನಗದು ಸಾಗಿಸುತ್ತಿದ್ದ ಮೂರು ಹೆಚ್ಚುವರಿ ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಾರ್ಖಂಡ್ ಮತ್ತು ಒಡಿಶಾದಲ್ಲಿ ಆತನಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಬುಧವಾರದಿಂದ ತೆರಿಗೆ ದಾಳಿಗಳು ನಡೆಯುತ್ತಿವೆ.


ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಆವರಣದಲ್ಲಿ ಶನಿವಾರವೂ ತೆರಿಗೆ ದಾಳಿ ಮುಂದುವರೆದಿದೆ, ಇದುವರೆಗೆ 200 ಕೋಟಿಗೂ ಹೆಚ್ಚು ಲೆಕ್ಕವಿಲ್ಲದ ನಗದು ಪತ್ತೆಯಾಗಿದೆ. ಬುಧವಾರ (ಡಿಸೆಂಬರ್ 6) ದಾಳಿ ಆರಂಭವಾಗಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ, ಆದಾಯ ತೆರಿಗೆ ತಂಡಗಳು ರಾಂಚಿಯ ಧೀರಜ್ ಸಾಹು ಅವರ ಆವರಣದಿಂದ ಇನ್ನೂ ಮೂರು ಬ್ಯಾಗ್‌ಗಳನ್ನು ವಶಪಡಿಸಿಕೊಂಡರೆ,

ಆ ಪ್ರದೇಶಗಳಲ್ಲಿನ ಮದ್ಯದ ಕಾರ್ಖಾನೆಗಳ ನಿರ್ವಹಣೆಯ ಉಸ್ತುವಾರಿ ವಹಿಸಿದ್ದ ಬಂಟಿ ಸಾಹು ಒಬ್ಬನ ಮನೆಯಿಂದ ಸುಮಾರು 19 ಚೀಲಗಳ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಒಡಿಶಾದಲ್ಲಿ ದಾಳಿಗಳು ನಡೆಯುತ್ತಿದ್ದವು

9ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸುವ ಗ್ಯಾಂಗ್‌ನ ಪ್ಲಾನ್ ವಿಫಲ : ಆರೋಪಿಗಳು ಪೋಲೀಸ್ ವಶದಲ್ಲಿ

ಮತ್ತೊಂದು ಆಘಾತಕಾರಿ ಘಟನೆಯಲ್ಲಿ, ಪತ್ತನಂತಿಟ್ಟದಿಂದ 9 ನೇ ತರಗತಿಯ ವಿದ್ಯಾರ್ಥಿಯನ್ನು ಅಪಹರಿಸುವ ಗ್ಯಾಂಗ್‌ನ ಯೋಜನೆಯನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

ಪತ್ತನಂತಿಟ್ಟ ಕೊಡುಮೋನ್‌ನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ಗೆಳೆಯ ಮತ್ತು ಸ್ನೇಹಿತರನ್ನು ಒಳಗೊಂಡ ತಂಡವು ಯುವತಿಯೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ, ಎಳಂತೂರು ಬಳಿ ಇದ್ದಕ್ಕಿದ್ದಂತೆ, ಇಂಜಿನ್ ತೊಂದರೆಯಿಂದ ವಾಹನವು ನಿಂತಿತು.

ಹುಡುಗಿ ಕಾಣೆಯಾಗಿರುವ ಬಗ್ಗೆ ಕುಟುಂಬದವರು ದೂರು ನೀಡಿದ ನಂತರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಅನುಮಾನಾಸ್ಪದವಾಗಿ ರಸ್ತೆಬದಿಯಲ್ಲಿ ಆಟೋವನ್ನು ಗಮನಿಸಿದ್ದಾರೆ.

ನಂತರದ ತನಿಖೆಯಲ್ಲಿ ನಾಲ್ವರನ್ನು ಬಂಧಿಸಲಾಯಿತು. ಎಳವುಂತಿಟ್ಟ ಮೂಲದ ಅರುಣ್, ಬಿಜು, ಅಜಿ ಶಶಿ ಮತ್ತು ಅಭಿಷೇಕ್ ಬಂಧಿತ ಆರೋಪಿಗಳು.

ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು (ದೇರಾಜೆ ಸಂಸ್ಮರಣ ಗ್ರಂಥ)

‘ರಸಋಷಿ’ ಎಂದೇ ಖ್ಯಾತರಾದ ದೇರಾಜೆ ಸೀತಾರಾಮಯ್ಯನವರನ್ನು ನಾವೆಲ್ಲರೂ ತಿಳಿದಿದ್ದೇವೆ. ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆಗಳು ಅನುಪಮವಾದುವು. ಅವರು ರಚಿಸಿದ ‘ಶ್ರೀರಾಮಚರಿತಾಮೃತಂ’ ಮತ್ತು ‘ಶ್ರೀಮನ್ಮಹಾಭಾರತ ಕಥಾಮೃತಂ’ ಎಂಬ ಎರಡು ಕೃತಿಗಳು ಖ್ಯಾತಿಯನ್ನು ಪಡೆದಿವೆ. ಆಕರ ಗ್ರಂಥಗಳಾಗಿ ಪರಿಣಮಿಸಿವೆ. ಓದುಗರ ಕೈಯಲ್ಲಿ ಇರಲೇಬೇಕಾದ ಕೃತಿಗಳಿವು.

ಕವಿಯಾಗಿ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿ, ಸಮಾಜಸೇವಕರಾಗಿ ಶ್ರೀಯುತರು ಖ್ಯಾತರು. ಇವರ ಕುರಿತಾದ ಸಂಸ್ಮರಣ ಗ್ರಂಥ ‘ ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು’ ಎಂಬ ಈ ಕೃತಿಯು ಇತ್ತೀಚಿಗೆ ಎಡನೀರು ಮಠದಲ್ಲಿ ಬಿಡುಗಡೆಗೊಂಡು ಓದುಗರ ಕೈಸೇರಿತು.

ಈ ಕೃತಿಯ ಪ್ರಕಾಶಕರು ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿ, ‘ಗೋಕುಲ’, ಲಕ್ಷ್ಮೀನಗರ, ಬಿಜೈ, ಮಂಗಳೂರು. ಈ ಸಮಿತಿಯ ಅಧ್ಯಕ್ಷರು ಶ್ರೀ ಜಿ.ಕೆ. ಭಟ್ ಸೇರಾಜೆ. ಆರುನೂರ ಅರುವತ್ತೆಂಟು ಪುಟಗಳನ್ನು ಹೊಂದಿದ ಈ ಪುಸ್ತಕದ ಬೆಲೆ ರೂಪಾಯಿ 950/-.

ಈ ಕೃತಿಯ ಸಂಪಾದಕರು ಶ್ರೀ ಕೆ. ಶ್ರೀಕರ ಭಟ್ ಮರಾಠೆ, ಜೆ.ಕೆ ಭಟ್ ಸೇರಾಜೆ, ಎಸ್. ಎನ್. ಪಂಜಾಜೆ, ಮೂರ್ತಿ ದೇರಾಜೆ ಮತ್ತು ಇಂದಿರಾಜಾನಕಿ ಎಸ್. ಶರ್ಮ.  ದೇರಾಜೆಯವರನ್ನು ಮಹನೀಯರು ಮೆಚ್ಚಿಕೊಂಡ ಬಗೆಯನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಖ್ಯಾತ ಬರಹಗಾರರು ದೇರಾಜೆಯವರ ಬಗೆಗೆ ಬರೆದ 221 ಲೇಖನಗಳು ಈ ಕೃತಿಯಲ್ಲಿ ಇವೆ.

ದೇರಾಜೆ ಸೀತಾರಾಮಯ್ಯನವರು ಬರೆದ ಕೃತಿಗಳು, ಲೇಖನಗಳು, ದೇರಾಜೆ ಸ್ಮೃತಿ ಗೌರವ, ದೇರಾಜೆ ನೆನಪು ಕಾರ್ಯಕ್ರಮಗಳು, ದೇರಾಜೆ ಸೀತಾರಾಮಯ್ಯನವರ ಜೀವನದ ಪ್ರಮುಖ ಘಟನೆಗಳ ವಿವರಗಳನ್ನೂ ನೀಡಿರುತ್ತಾರೆ. ಫೋಟೋ ಆಲ್ಬಮ್ ಕೂಡಾ ಇದೆ.

ಈ ಕೃತಿಯ ವಿತರಕರು ಜ್ಞಾನಗಂಗಾ ಪ್ರಕಾಶನ, ಪುತ್ತೂರು. ಫೋನ್ ನಂಬರ್ 9480451560 ಮತ್ತು 9663964631. ಈ ಶ್ರೇಷ್ಠ ಕೃತಿಗೆ ಶುಭಾಶಯಗಳು. 

ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ 

ನಾಳೆ (ಡಿಸೆಂಬರ್ 9) ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮೂಲಮೃತ್ತಿಕಾ ಪ್ರಸಾದ ತೆಗೆಯುವ ಮತ್ತು ವಿತರಿಸುವ ಕಾರ್ಯಕ್ರಮ – ಪವಿತ್ರ ಮತ್ತು ರೋಗನಿವಾರಕ ‘ಮೂಲಮೃತ್ತಿಕಾ ಪ್ರಸಾದ’ದ  ವಿಶೇಷತೆ ಏನು? – ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ 

ನಾಳೆ (ಡಿಸೆಂಬರ್ 9) ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪವಿತ್ರವಾದ ಮತ್ತು ಸರ್ವರೋಗ ನಿವಾರಕ ಎಂದು ನಂಬಲಾದ ‘ಮೂಲಮೃತ್ತಿಕಾ ಪ್ರಸಾದ’ ತೆಗೆಯುವ ಮತ್ತು ವಿತರಿಸುವ ಕಾರ್ಯಕ್ರಮ ನಡೆಯಲಿದೆ. ಆನಂತರ ಭಕ್ತಾದಿಗಳಿಗೆ ಮೂಲಮೃತ್ತಿಕಾ ಪ್ರಸಾದ ವಿತರಣೆಯೂ ನಡೆಯಲಿದೆ. 

ಡಿಸೆಂಬರ್ 9ರ ಶನಿವಾರ  ‘ಮೂಲಮೃತ್ತಿಕಾ ಪ್ರಸಾದ’ ತೆಗೆಯುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ನಾಳೆ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಗುವುದು.  ದೇವಸ್ಥಾನದಲ್ಲಿ ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪುಣ್ಯಕಾರ್ಯಕ್ರಮ ಇರುವುದರಿಂದ ಆ ದಿನ ಅಂದರೆ ನಾಳೆ ಬೆಳಗ್ಗಿನಿಂದ ಮಧ್ಯಾಹ್ನ 2 ಘಂಟೆಯವರೆಗೆ ದೇವರ ದರ್ಶನ ಮತ್ತು ಇತರ ಸೇವೆಗಳಿಗೆ ಅವಕಾಶ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.  

ಅತ್ಯಂತ ಪುರಾತನವಾದ ಕುಕ್ಕೆ ಸನ್ನಿಧಿಯಲ್ಲಿ ಈ ಪ್ರಸಾದವನ್ನು ವರ್ಷಕ್ಕೊಂದು ಬಾರಿ ಮಾತ್ರ ತೆಗೆಯಲಾಗುವುದು. ಅದೂ ಈ ಜಾತ್ರಾ ಸಮಯದಲ್ಲಿ ಮಾತ್ರ.

 ‘ಮೂಲಮೃತ್ತಿಕಾ ಪ್ರಸಾದ’ಕ್ಕೆ ಅತ್ಯಂತ ವಿಶೇಷತೆ ಹಾಗೂ ಮಹತ್ವವಿದೆ.  ‘ಮೂಲಮೃತ್ತಿಕಾ ಪ್ರಸಾದ’ ಎಂದರೆ ನಾಗದೇವರ ಹುತ್ತದಿಂದ ತೆಗೆಯುವ ಮಣ್ಣು. ಮೃತ್ತಿಕಾ ಎಂದರೆ ಭೂಮಿತಾಯಿ, ಭೂಮಿ ಅಥವಾ ಮಣ್ಣು ಎಂದರ್ಥ. ಹುತ್ತದಿಂದ ತೆಗೆಯುವ ಮಣ್ಣು ಆದ್ದರಿಂದ ಈ ಹೆಸರು ಬಂದಿದೆ.

ಇದು ಅತ್ಯಂತ ಪಾವಿತ್ರ್ಯತೆಯನ್ನು ಹೊಂದಿದ ನಾಗದೇವರ ಪ್ರಸಾದವಾಗಿರುತ್ತದೆ. ಈ ಪ್ರಸಾದವು ಹಲವು ರೋಗಗಳನ್ನು ಗುಣಪಡಿಸುವ ಔಷಧೀಯ ಗುಣವುಳ್ಳ ಹುತ್ತದ ಪ್ರಸಾದ. ಸಂತಾನಹೀನತೆ, ಚರ್ಮರೋಗ ಮೊದಲಾದ ಹಲವು ವ್ಯಾಧಿಗಳಿಗೆ ಈ ಪ್ರಸಾದವು ಒಂದು ದಿವ್ಯ ಔಷಧಿಯಾಗಿ ಪರಿಣಮಿಸುತ್ತದೆ ಎಂದು ಶ್ರೀ ಕ್ಷೇತ್ರದ ಅಸಂಖ್ಯ ಭಕ್ತರ ನಂಬಿಕೆ ಮತ್ತು ಅನಿಸಿಕೆಯಾಗಿದೆ. ಈ ಮೂಲಪ್ರಸಾದವನ್ನು ಲಕ್ಷಾಂತರ ಜನರು ಸ್ವೀಕರಿಸಿ, ಸೇವಿಸಿ ಅದರಿಂದ ಹಲವಾರು ರೋಗಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ.

ಸರ್ಪಸಂಸ್ಕಾರ ಪೂಜಾ ಸೇವೆ – ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದಿನಿಂದ (ಡಿಸೆಂಬರ್ 8) ಡಿಸೆಂಬರ್ 24ರ ವರೆಗೆ ಸರ್ಪಸಂಸ್ಕಾರ ಸೇವೆ ಇಲ್ಲ – ಕಾರಣವೇನು ಗೊತ್ತೇ?

ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದಿನಿಂದ (ಡಿಸೆಂಬರ್ 8) ಡಿಸೆಂಬರ್ 24ರ ವರೆಗೆ ಸರ್ಪಸಂಸ್ಕಾರ ಸೇವೆ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. 

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 10-12-2023ರಿಂದ 24-12-2023ರ ವರೆಗೆ ನಡೆಯಲಿದೆ.  ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ದ್ವಾದಶಿಯ ದಿನವಾದ ಆದಿತ್ಯವಾರ 10-12-2023ರಿಂದ 24-12-2023ರ ದ್ವಾದಶಿಯ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.

ಈ ಕಾರಣದಿಂದ ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಸೇವೆ ನಡೆಯುವುದಿಲ್ಲ. ಸರ್ಪಸಂಸ್ಕಾರ ಸೇವೆಯು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾಗಿದೆ. ಉಳಿದಂತೆ ಹೆಚ್ಚಿನೆಲ್ಲಾ ಸೇವೆಗಳು ಯಥಾಪ್ರಕಾರ ನಡೆಯಲಿವೆ.

ಆದರೆ ಚೌತಿ, ಪಂಚಮಿ, ಷಷ್ಠಿ ಮತ್ತು ಲಕ್ಷದೀಪೋತ್ಸವದ ದಿನಗಳಲ್ಲಿ ಕೆಲವೊಂದು ಸೇವೆಗಳು ನಡೆಯುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಈ ದಿನಗಳಲ್ಲಿ ಅಂದರೆ ಡಿಸೆಂಬರ್ 12,16,17 ರಂದು ರಾತ್ರಿ ಪ್ರಾರ್ಥನೆ ಸೇವೆ ಇರುವುದಿಲ್ಲ ಮತ್ತು ಚಂಪಾಷಷ್ಠಿ ದಿನವಾದ ಡಿಸೆಂಬರ್ 18ರಂದು ಮಧ್ಯಾಹ್ನದ ಪ್ರಾರ್ಥನೆ ಸೇವೆ ಮತ್ತು ಆಶ್ಲೇಷ ಬಲಿ, ನಾಗಪ್ರತಿಷ್ಠೆ ಪೂಜಾ ಸೇವೆಗಳು ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಡಿಸೆಂಬರ್ 12,16,18 ಮತ್ತು ಡಿಸೆಂಬರ್ 24 (ಕೊಪ್ಪರಿಗೆ ಇಳಿಯುವ ದಿನ) ದೇವರ ಮಹಾಭಿಷೇಕ ಸೇವೆ ಇರುವುದಿಲ್ಲ ಮತ್ತು  10-12-2023ರಿಂದ 24-12-2023ರ ವರೆಗೆ ಸಾಯಂಕಾಲದ ಆಶ್ಲೇಷ ಬಲಿ ಸೇವೆಯು ನಡೆಯುವುದಿಲ್ಲ.

ಡಿಸೆಂಬರ್ 9ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪುಣ್ಯಕಾರ್ಯಕ್ರಮ ಇರುವುದರಿಂದ ಆದಿನ ಅಂದರೆ ನಾಳೆ ಬೆಳಗ್ಗಿನಿಂದ ಮಧ್ಯಾಹ್ನ 2 ಘಂಟೆಯವರೆಗೆ ದೇವರ ದರ್ಶನ ಮತ್ತು ಇತರ ಸೇವೆಗಳಿಗೆ ಅವಕಾಶ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.  

2 ಘಂಟೆಯ ನಂತರ ಕೆಲವೊಂದು ಸೇವೆಗಳನ್ನು ನಡೆಸಲು ಅವಕಾಶವಿದೆ. ಭಕ್ತಾದಿಗಳ ಸಹಕಾರವನ್ನು ಆಡಳಿತ ಮಂಡಳಿಯು ಕೋರಿದೆ. 

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಕ್ರೀಡೋತ್ಸವ-2023-24

ಬಾಲ್ಯದಿಂದಲೇ ಕ್ರೀಡಾ ಮನೋಭಾವ ಮೂಡಿಸಿಕೊಂಡು ಸದೃಢ ಶರೀರ ಬೆಳೆಸಿಕೊಳ್ಳುವುದು ಮಗುವಿನ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ. ಜೆ. ಶೆಟ್ಟಿ ಹೇಳಿದರು.

ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಕ್ರೀಡೋತ್ಸವ-2023-24 ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂತಹ ಚಟುವಟಿಕೆಗಳಿಂದ ಮಗುವಿನ ನೈಜ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶಿವಪ್ರಕಾಶ್. ಎಂ ಹಾಗೂ ಸದಸ್ಯರಾದ ಶ್ರೀಮತಿ ಮಾಲಾ ಮಹೇಶ್ ಶುಭ ಹಾರೈಸಿದರು.

ಸಹಶಿಕ್ಷಕಿ ಶ್ರೀಮತಿ ವಿದ್ಯಾ ಸರಸ್ವತಿ ಸ್ವಾಗತಿಸಿ, ಶ್ರೀಮತಿ ಕವಿತಾ ಸತೀಶ್ ವಂದಿಸಿದರು. ಶ್ರೀಮತಿ ಸಹನಾ ಪೈ ಕಾರ್ಯಕ್ರಮ ನಿರೂಪಿಸಿದರು.

ಶಾಲಾ ಮುಖ್ಯೋಪಾಧ್ಯಾಯರುಗಳ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಹಶಿಕ್ಷಕರ ಸಹಕಾರದಲ್ಲಿ ಪೂರ್ವ ಪ್ರಾಥಮಿಕದಿಂದ 4ನೇ ತರಗತಿವರೆಗಿನ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಸಿ, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಾಲಾ ಆಡಳಿತ ಮಂಡಳಿ ಸದಸ್ಯರು ಮತ್ತು ಪೋಷಕ ಬಂಧುಗಳು ಉಪಸ್ಥಿತರಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಪ್ರಶಸ್ತಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ದಕ್ಷಿಣ ಹಾಗೂ ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ

ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ, ಬಂಟ್ಸ್ ಹಾಸ್ಟೆಲ್, ಮಂಗಳೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ ಗಳಿಸಿರುತ್ತಾರೆ.

ಪ್ರೌಢ ಶಾಲಾ ವಿಭಾಗದಲ್ಲಿ 8ನೇ ತರಗತಿಯ ಕುಮಾರಿ ಸುಪ್ರಜಾ ರಾವ್ ( ಉಪನ್ಯಾಸಕ ದಂಪತಿ ಶ್ರೀ ಪ್ರಶಾಂತ್ ರಾವ್ ಮತ್ತು ಶ್ರೀಮತಿ ಸುಮನಾ.ಕೆ ಇವರ ಪುತ್ರಿ) ಜನಪದ ಗೀತೆಯಲ್ಲಿ ದ್ವಿತೀಯ ಸ್ಥಾನ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿಯ ನಾಗಾಭೂಷಣ ಕಿಣಿ(ಕೆಮ್ಮಾಯಿ ಶ್ರೀ ನಾಗರಾಜ್ ಕಿಣಿ ಮತ್ತು ನಮೃತ ಕಿಣಿ ದಂಪತಿ ಪುತ್ರ) ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ,

7ನೇ ತರಗತಿಯ ಸಿರಿ ಹಿಳ್ಳೆಮನೆ (ಹಿಂಗಾರು, ಪಂಜಳ ಶ್ರೀ ಶಿವಕುಮಾರ ಹಿಳ್ಳೆಮನೆ ಮತ್ತು ಡಾ.ಸಹನಾ ಹಿಳ್ಳೆಮನೆ ದಂಪತಿ ಪುತ್ರಿ) ಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನ,

7ನೇ ತರಗತಿಯ ಅವನಿ.ಎಸ್.ವಿ(ಸಂಪ್ಯ ಶ್ರೀ ವಿಘ್ನೇಶ್ವರ ಭಟ್.ಎಸ್ ಮತ್ತು ಶ್ರೀಮತಿ ಸುಪರ್ಣಾ.ಕೆ ದಂಪತಿ ಪುತ್ರಿ) ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ಲೋಕಾರ್ಪಣೆ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇದರ ಸಾಂಸ್ಕೃತಿಕ ಭವನದ ಲೋಕಾರ್ಪಣೆಯ ಕಾರ್ಯಕ್ರಮ ಡಿಸೆಂಬರ್ 26ರಂದು ಮಂಗಳೂರು ಮದ್ಯಾಹ್ನ ಜರಗಲಿದೆ.

ಪೂಜ್ಯ ಖಾವಂದರಾದ ರಾಜರ್ಷಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಾಂಸ್ಕೃತಿಕ ಭವನವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ.

ಈ ಕಾರ್ಯಕ್ರಮದ ಪ್ರಯುಕ್ತ ಇಂದು ಜರಗಿದ ಪೂರ್ವಭಾವಿ ಸಭೆಯಲ್ಲಿ ಅನೇಕ ಗಣ್ಯರು ಬಂದು ಸಲಹೆ ಸೂಚನೆ ಇತ್ತರು. ಪ್ರಸ್ತುತ ಸಭೆಯಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಎಲ್ಲರೂ ಕಾರ್ಯಕ್ರಮದ ಸಂದರ್ಭದಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು. ಊರ ಪರವೂರ ಗಣ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.