Saturday, August 29, 2026
Home Blog Page 354

ಬಡಗುತಿಟ್ಟಿನ ಅಪ್ರತಿಮ ಪುಂಡುವೇಷಧಾರಿಯಾಗಿದ್ದ ಅಶೋಕ ಭಟ್ ಸಿದ್ಧಾಪುರ

ಶ್ರೀ ಅಶೋಕ್ ಭಟ್ ಅವರು 1961ನೇ ಇಸವಿ ಡಿಸೆಂಬರ್ ಹದಿನೇಳರಂದು ಈ ಲೋಕದ ಬೆಳಕನ್ನು ಕಂಡವರು. ಇವರು ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಹೊನ್ನೆಗುಂಡಿ. ಶ್ರೀ ತಿಮ್ಮಣ್ಣ ಭಟ್ಟ ಮತ್ತು ಶ್ರೀಮತಿ ಯಶೋದಾ ದಂಪತಿಗಳ ಪುತ್ರರಿವರು. ಕೃಷಿ ಕುಟುಂಬದಲ್ಲಿ ಜನನ. ಬಾಲ್ಯದಲ್ಲಿ ಬಡತನದ ಬೇಗೆಯನ್ನು ಉಂಡಿದ್ದರು. ತಂದೆ ತಿಮ್ಮಣ್ಣ ಭಟ್ಟರು ಕೃಷಿಕರು. ಅಲ್ಲದೆ ನಾಟಕ ಮತ್ತು ಯಕ್ಷಗಾನ ಕಲಾವಿದರಾಗಿದ್ದರು. ಖ್ಯಾತ ಕಲಾವಿದ ಶಿರಳಗಿ ಶ್ರೀ ತಿಮ್ಮಪ್ಪ ಹೆಗಡೆಯವರು ಅಶೋಕ ಭಟ್ಟರಿಗೆ ತಾಯಿಯ ಕಡೆಯಿಂದ ಬಂಧುಗಳೇ ಆಗಿದ್ದರು. ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಗೋಡೆ ಶ್ರೀ ನಾರಾಯಣ ಹೆಗಡೆಯವರು ಅಶೋಕ ಭಟ್ಟರ ಸೋದರಮಾವ. ಸ್ತ್ರೀಪಾತ್ರಧಾರಿ ಶಿರಳಗಿ ಶ್ರೀ ಭಾಸ್ಕರ ಜೋಷಿಯವರು, ದೊಡ್ಡಪ್ಪನ ಮಗ ಅಣ್ಣ. ಹೀಗೆ ತಂದೆಯ ಕಡೆಯಿಂದಲೂ, ತಾಯಿಯ ಕಡೆಯಿಂದಲೂ ಅಶೋಕ ಭಟ್ಟರಿಗೆ ಯಕ್ಷಗಾನದ ನಂಟು ರಕ್ತವಾಗಿಯೇ ಬಂದಿತ್ತು. ಬಂಧುಗಳೆಲ್ಲಾ ಕಲಾವಿದರೂ, ಯಕ್ಷಗಾನಾಸಕ್ತರೂ ಆಗಿದ್ದರು.

ಶ್ರೀ ಅಶೋಕ ಭಟ್ ಸಿದ್ಧಾಪುರ ಅವರು ಪಾತ್ರೋಚಿತವಾಗಿ ಅಭಿನಯಿಸುವ ಕಲೆಯನ್ನು ಸಿದ್ಧಿಸಿಗೊಂಡವರು. 1980ನೆಯ ಇಸವಿಯಿಂದ ತೊಡಗಿ ಸುಮಾರು ಮೂವತ್ತೊಂಬತ್ತು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಸವ್ಯಸಾಚಿಯಾಗಿ, ಅತ್ಯುತ್ತಮ ಪೋಷಕ ಪಾತ್ರಧಾರಿಯಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ತೆರೆದು ಕಾಣಿಸಿಕೊಳ್ಳುವ ಸ್ವಭಾವವನ್ನು ಹೊಂದಿದವರಲ್ಲ. ಪ್ರಚಾರದಿಂದ ಯಾವತ್ತೂ ಬಲುದೂರ ಉಳಿಯುತ್ತಾರೆ. ತನ್ನ ಪ್ರತಿಭಾ ವ್ಯವಹಾರದಿಂದಲೇ ರಂಗದಲ್ಲಿ ಅಭಿನಯಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಾತ್ರವನ್ನು ಧರಿಸಿ ರಂಗಪ್ರವೇಶಿಸಿದ ತಕ್ಷಣ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕಲೆಯು ಇವರಿಗೆ ಕರಗತ. ಕಲಾಬದುಕನ್ನು ಹಳ್ಳಿಯಿಂದ ಆರಂಭಿಸಿದರೂ ಕೊಂಡದಕುಳಿಯವರ ತಂಡದ ಸದಸ್ಯನಾಗಿ ಸಿಂಗಾಪುರ್, ದುಬಾೈ, ಕುವೈಟ್, ಶಾರ್ಜಾಗಳಲ್ಲಿ ತನ್ನ ಪ್ರತಿಭೆಯನ್ನು ಮೆರೆಸಿದವರು.

ಅಶೋಕ ಭಟ್ಟರು ಓದಿದ್ದು ಎಸ್.ಎಸ್.ಎಲ್.ಸಿ. ವರೆಗೆ. 5ನೇ ತರಗತಿ ವರೆಗೆ ಸಿದ್ಧಾಪುರ ಶಾಲೆಯಲ್ಲಿ. 7ನೇ ತರಗತಿ ವರೆಗೆ ತಲವಾಟ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಸಿದ್ಧಾಪುರದ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ. ಸಿದ್ಧಾಪುರ ತಾಲೂಕಿನ ಕೊಳಗಿ, ಶಿರಳಗಿ, ಹಣಜೀಬೈಲು ಮೊದಲಾದ ಗ್ರಾಮಗಳ ಮನೆ ಮಂದಿಗಳೆಲ್ಲಾ ಕಲಾವಿದರೂ, ಕಲಾಭಿಮಾನಿಗಳೇ ಆಗಿದ್ದು, ಅಶೋಕ ಭಟ್ಟರು ಯಕ್ಷಗಾನದ ವಾತಾವರಣದಲ್ಲೇ ಬೆಳೆಯುವಂತಾಗಿತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಪ್ರದರ್ಶನಗಳನ್ನು ನೋಡುತ್ತಿದ್ದರು. ಸಹಜವಾಗಿ ಕಲಾಸಕ್ತಿಯು ಮೊಳಕೆಯೊಡೆದಿತ್ತು. ವೇಷ ಮಾಡುವ ಅವಕಾಶವೂ ಇತ್ತು. ಆದರೂ ಸರಿಯಾಗಿ ಕಲಿಯದೆ ರಂಗವೇರಬಾರದು ಎಂಬ ವಿಚಾರವನ್ನು ತಿಳಿದಿದ್ದರು. ಕಲಿತೇ ವೇಷ ಮಾಡುವೆನೆಂಬ ನಿರ್ಣಯವನ್ನು ಮಾಡಿದ್ದರು.

ಅಶೋಕ ಭಟ್ಟರ ಈ ನಿರ್ಧಾರವು, ಯಕ್ಷಗಾನ ಕಲಾವಿದನಾಗಲು ಬಯಸುವವನಿಗೆ, ‘ಅಭ್ಯಾಸವನ್ನು ಮಾಡದೆಯೇ ರಂಗವೇರುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಡಿ’ ಎಂಬ ಸಂದೇಶವನ್ನು ಸಾರುತ್ತದೆ. ಪ್ರದರ್ಶನಗಳನ್ನು ನೋಡಿ ಮನೆಗೆ ಬಂದು ಗೆಳೆಯರ ಜತೆ ಕುಣಿಯುವ ಅಭ್ಯಾಸವೂ ರೂಢಿಯಾಗಿತ್ತು. ಅದೂ ಮುಖಕ್ಕೆ ಬಣ್ಣ ಬಳಿದು. ಅಮ್ಮನ ಸೀರೆ, ಅಡಿಕೆ ಮರದ ಹಾಳೆ ಮೊದಲಾದ ವಸ್ತುಗಳನ್ನು ವೇಷಭೂಷಣಗಳಾಗಿ ಬಳಸಿಕೊಳ್ಳುತ್ತಿದ್ದರು. ಹತ್ತಿರವೆಲ್ಲೂ ತರಬೇತಿ ಕೇಂದ್ರವಿಲ್ಲದ ಕಾರಣ ನಾಟ್ಯ ಕಲಿಯಲು ಅವಕಾಶವಾಗಿರಲಿಲ್ಲ. ಹೈಸ್ಕೂಲು ವಿದ್ಯಾರ್ಜನೆಯ ನಂತರ ಸಿದ್ಧಾಪುರ ಸಮೀಪದ ಹಾಳದಕಟ್ಟಾ ವೇದಪಾಠ ಶಾಲೆಯನ್ನು ಸೇರಿ ಮಂತ್ರ ಕಲಿತಿದ್ದರು. ಯಕ್ಷಗಾನ ಕಲಾವಿದನಾಗಿಯೇ ಸಿದ್ಧ ಎಂಬ ಛಲವಿತ್ತು. ಕುಣಿತ ಕಲಿಯುವುದಕ್ಕಾಗಿ ಉಡುಪಿ ಯಕ್ಷಗಾನ ಕಲಿಕಾ ಕೇಂದ್ರದತ್ತ ಸಾಗಿದರು. ಕೋಟ ಶಿವರಾಮ ಕಾರಂತರು ಸಂದರ್ಶಕರಾಗಿದ್ದರು. ಕಲಿಕಾಸಕ್ತರಾಗಿ ಇನ್ನೂರರಷ್ಟು ಮಂದಿಗಳು ಬಂದಿದ್ದರೂ ಅವರಲ್ಲಿ ಹತ್ತು ಮಂದಿಗಳನ್ನು ಮಾತ್ರ ಆಯ್ಕೆ ಮಾಡುತ್ತಿದ್ದರು.

ಅಶೋಕ ಭಟ್ಟರು ಆಯ್ಕೆಯಾಗಿದ್ದರು. ಕಲಿಕಾ ಕೇಂದ್ರದಲ್ಲಿ ಹೇರಂಜಾಲು ಶ್ರೀ ವೆಂಕಟರಮಣ ಗಾಣಿಗರಿಂದ ನಾಟ್ಯವನ್ನು ಅಭ್ಯಸಿಸಿದರು. ಆಗ ನೀಲಾವರ ಶ್ರೀ ರಾಮಕೃಷ್ಣಯ್ಯ ಹಾಗೂ ಕೋಟ ಶ್ರೀ ಮಹಾಬಲ ಕಾರಂತರು ಕೇಂದ್ರದ ಹಿಮ್ಮೇಳ ಗುರುಗಳಾಗಿದ್ದರು. ತರಬೇತಿಯ ಅವಧಿ ಒಂದು ವರ್ಷ. ಗೆಜ್ಜೆ ಕಟ್ಟುವುದು, ನಾಟ್ಯ, ಬಣ್ಣಗಾರಿಕೆ, ಮಾತಿಗಾರಿಕೆ, ಅಭಿನಯ, ಕಿರೀಟವೇಷ ಕಟ್ಟುವುದು ಹೀಗೆ ಎಲ್ಲಾ ವಿಚಾರಗಳ ಬಗ್ಗೆ ತರಬೇತಿ ಕೊಡುತ್ತಿದ್ದರು. ತರಬೇತಿಯೆಂದರೆ ಹೀಗೆಯೇ ಇರಬೇಕು. ಇದುವೇ ಪರಿಪೂರ್ಣ ತರಬೇತಿ ಎನಿಸಲ್ಪಡುತ್ತದೆ. ಕಲಿಕಾ ಕೇಂದ್ರದ ತರಬೇತಿಯ ಸಂದರ್ಭ ನಾಲ್ಕು ಪ್ರದರ್ಶನಗಳು ನಡೆದಿತ್ತು. ಇವರು ಬಾಲಗೋಪಾಲರಾಗಿ ರಂಗಪ್ರವೇಶ ಮಾಡಿದ್ದರು. ಅಶೋಕ ಭಟ್ಟರು ಉಡುಪಿ ಕಲಿಕಾ ಕೇಂದ್ರದ 1978-1979ನೇ ಸಾಲಿನ ವಿದ್ಯಾರ್ಥಿ. ಪ್ರಭಾಕರ ಹೆಗಡೆ ಹಣಜೀಬೈಲು ಮತ್ತು ಕೇಶವ ಶೆಟ್ಟಿಗಾರ್ ಕಿನ್ನಿಗೋಳಿ ಕಲಿಕಾ ಕೇಂದ್ರದಲ್ಲಿ ಸಹಪಾಠಿಗಳಾಗಿದ್ದರು. ಅಶೋಕ ಭಟ್ಟರೂ, ಕೇಂದ್ರದ ಸಹಪಾಠಿ ಪ್ರಭಾಕರ ಹೆಗಡೆಯವರೂ ಸಾಲಿಗ್ರಾಮ ಮೇಳದಲ್ಲಿ ಜತೆಯಾಗಿಯೇ ತಿರುಗಾಟ ಮಾಡಿದವರು. ಕೇಶವ ಶೆಟ್ಟಿಗಾರ್ ತೆಂಕಿನಲ್ಲಿ ಪುಂಡು ಮತ್ತು ಸ್ತ್ರೀಪಾತ್ರಧಾರಿಗಳಾಗಿ ಒಳ್ಳೆಯ ಹೆಸರನ್ನು ಗಳಿಸಿದ್ದರು. ಕೆಲವು ವರ್ಷಗಳ ಹಿಂದೆ ಅವರು ನಮ್ಮನ್ನಗಲಿ ಅವ್ಯಕ್ತ ಲೋಕದತ್ತ ಸಾಗಿದ್ದರು. ತರಬೇತಿಯು ಮುಗಿದ ಬಳಿಕ ಯಕ್ಷಗಾನವನ್ನೇ ವೃತ್ತಿಯನ್ನಾಗಿ ಸ್ವೀಕರಿಸುವ ಮನ ಮಾಡಿದ್ದರು. ಮೇಳದ ತಿರುಗಾಟ ನಡೆಸುವುದೆಂಬ ನಿರ್ಣಯವನ್ನೂ ಕೈಗೊಂಡರು.

ವೃತ್ತಿಕಲಾವಿದನಾಗಿ ಸಿದ್ಧಾಪುರ ಅಶೋಕ ಭಟ್ಟರ ಮೊದಲ ತಿರುಗಾಟ ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ- ಕೆರೆಮನೆ ಈ ಮೇಳದಲ್ಲಿ. ಈ ತಂಡದಲ್ಲಿ ಆರು ವರ್ಷಗಳ ತಿರುಗಾಟ ನಡೆಸಿದ್ದರು. ಮೊದಲ ವರ್ಷ ಪೀಠಿಕಾ ಸ್ತ್ರೀವೇಷ ಮತ್ತು ಪ್ರಸಂಗಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುವ ಅವಕಾಶವಾಗಿತ್ತು. ಕಲಾವಿದನಾಗಿ ಅಶೋಕ ಭಟ್ಟರ ಕ್ಷಿಪ್ರ ಬೆಳವಣಿಗೆಯನ್ನು ಮೇಳದ ಆಡಳಿತವು ಗುರುತಿಸಿತ್ತು. 3ನೇ ವರ್ಷ ವೃಷಕೇತ, ಪ್ರದ್ಯುಮ್ನ ಮೊದಲಾದ ಪಾತ್ರಗಳನ್ನು ಮಾಡುವ ಅವಕಾಶವು ಸಿಕ್ಕಿತ್ತು. ಮೂರನೆಯ ವರ್ಷ ಅಭಿಮನ್ಯು, ಬಭ್ರುವಾಹನ, ಕಂಸವಧೆ ಪ್ರ್ರಸಂಗದ ಶ್ರೀಕೃಷ್ಣ ಮೊದಲಾದ ವೇಷಗಳನ್ನು ನಿರ್ವಹಿಸಿದರು. ಶಂಭು ಹೆಗಡೆಯವರ ಸಂಚಾಲಕತ್ವ. ಅಪರೂಪಕ್ಕೆ ಶಿವರಾಮ ಹೆಗಡೆಯವರೂ ಬರುತ್ತಿದ್ದರಂತೆ. ನೆಬ್ಬೂರು, ಕೆಪ್ಪೆಕೆರೆ ಸುಬ್ರಾಯ ಭಾಗವತರು, ಪ್ರಭಾಕರ ಭಂಡಾರಿ, ಸತ್ಯನಾರಾಯಣ ಭಂಡಾರಿ, ಕೆರೆಮನೆ ಮಹಾಬಲ ಹೆಗಡೆ, ಗೋಡೆ ನಾರಾಯಣ ಹೆಗಡೆ, ದಂಟಕಲ್ ಗಣಪತಿ ಹೆಗಡೆ, ಕುಂಜಾಲು ರಾಮಕೃಷ್ಣ, ಕೊಕ್ಕಡ ಈಶ್ವರ ಭಟ್, ಬೆಳಿಯೂರು ಕೃಷ್ಣಮೂರ್ತಿ ಮೊದಲಾದವರು ಸಹ ಕಲಾವಿದರಾಗಿದ್ದರು.

ಆಗ ಬಿಳಿಯೂರು ಅವರು ಪುಂಡುವೇಷಗಳಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದರು. ಶ್ರೇಷ್ಠ ಕಲಾವಿದರ ಒಡನಾಟವು ಅಶೋಕ ಭಟ್ಟರಿಗೆ ಕಲಾವಿದನಾಗಿ ಬೆಳೆಯಲು ಅನುಕೂಲವಾಗಿತ್ತು. ಶಂಭು ಹೆಗಡೆಯವರ ಭೀಷ್ಮ, ಸುಧನ್ವ, ಕಂಸನ ಪಾತ್ರಗಳಿಗೆ ಕ್ರಮವಾಗಿ ಅಭಿಮನ್ಯು, ಕುವಲೆ, ಶ್ರೀಕೃಷ್ಣನಾಗಿ ಅಭಿನಯಿಸಿದ್ದರು. ಶಂಭು ಹೆಗಡೆಯವರಿಂದ ಪ್ರಶಂಸೆಯೂ ಸಿಕ್ಕಿತ್ತು. ಕಂಸವಿವಾಹ-ವಧೆ ಪ್ರಸಂಗದ ಆಸ್ತಿಪ್ರಾಸ್ತಿಯರಾಗಿ ಕಸೆವೇಷಗಳನ್ನೂ ಮಾಡಿದ್ದರು. ಶಂಭು ಹೆಗಡೆಯವರು ಇಡಗುಂಜಿ ಮೇಳವನ್ನು ನಿಲ್ಲಿಸಿದಾಗ ಬಿ. ವಿ. ಶೆಟ್ಟರು ಅಮೃತೇಶ್ವರೀ ಮೇಳವನ್ನು ಪುನರಚಿಸಲು ಪ್ರಯತ್ನಿಸಿದ್ದರು. ಅವರಿಗೆ ಮೇಳದ ನಿರ್ವಹಣೆಯ ವಿಚಾರದಲ್ಲಿ ಪಳ್ಳಿ ಸೋಮನಾಥ ಹೆಗ್ಡೆಯವರ ಸಹಕಾರವೂ ಇತ್ತು. ಅಮೃತೇಶ್ವರೀ ಮೇಳದಲ್ಲಿ ಮೂರು ತಿಂಗಳು ತಿರುಗಾಟ ನಡೆದಾಗ ಶಿರಳಗಿ ತಿಮ್ಮಪ್ಪ ಹೆಗಡೆ ಮತ್ತು ಅಶೋಕ ಭಟ್ಟರನ್ನೂ ಪಳ್ಳಿ ಸೋಮನಾಥ ಹೆಗಡೆಯವರು ಸಾಲಿಗ್ರಾಮ ಮೇಳಕ್ಕೆ ಕರೆಸಿಕೊಂಡಿದ್ದರು. ಆ ವರುಷದಿಂದ ತೊಡಗಿ ನಿರಂತರ ಹದಿನಾಲ್ಕೂವರೆ ವರ್ಷಗಳ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ.
                       

ಅಮೃತೇಶ್ವರೀ ಮೇಳವೂ ಸೇರಿದಂತೆ ಈ ಸಂದರ್ಭಗಳಲ್ಲಿ ಜಿ. ಆರ್. ಕಾಳಿಂಗ ನಾವಡ, ಶಬರಾಯರು, ರಾಮಕೃಷ್ಣ ಮಂದರ್ತಿ, ಶಂಕರ ಭಾಗವತ, ವಾಸುದೇವ ಸಾಮಗ, ಚಿಟ್ಟಾಣಿ, ಜಲವಳ್ಳಿ, ಯಾಜಿ, ಐರೋಡಿ, ಅರಾಟೆ, ರಾಮನಾೈರಿ, ಮುಖ್ಯಪ್ರಾಣ, ಶಿರಳಗಿ ಭಾಸ್ಕರ ಜೋಷಿ, ಕೊಂಡದಕುಳಿ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಗುಡಿಗಾರ, ತೀರ್ಥಹಳ್ಳಿ ಗೋಪಾಲಾಚಾರ್, ಧರ್ಮಸ್ಥಳ ರತ್ನಾಕರ, ಶಶಿಕಾಂತ ಶೆಟ್ಟಿ, ರಾಜೀವ ಶೆಟ್ಟಿ ಮೊದಲಾದವರ ಒಡನಾಟ ಸಿಕ್ಕಿತ್ತು. ತೀರ್ಥಹಳ್ಳಿ ಗೋಪಾಲಾಚಾರ್ ಅವರು ಪ್ರಧಾನ ಪುಂಡುವೇಷಕ್ಕೆ. ಅಶೋಕ ಭಟ್ಟರದು 3ನೇ ಪುಂಡುವೇಷ.

‘‘ಶಂಭು ಹೆಗಡೆಯವರಂತೆ, ಕಾಳಿಂಗ ನಾವಡರೂ ನಾನು ಕಲಾವಿದನಾಗಿ ಬೆಳೆಯಲು ಕಾರಣರು. ಈರ್ವರೂ ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದಾರೆ. ಶಂಭು ಹೆಗಡೆಯವರು ಯಕ್ಷಗಾನವು ಹೀಗೆಯೇ ಇರಬೇಕೆಂದು ಹೇಳುತ್ತಿದ್ದರು. ಪ್ರೌಢ ಸಂಭಾಷಣೆಗಳನ್ನು ಸಹಕಲಾವಿದರಿಂದ ನಿರೀಕ್ಷಿಸುತ್ತಿದ್ದರು. ಅಸಭ್ಯತೆಯನ್ನು ಸಹಿಸುತ್ತಿರಲಿಲ್ಲ. ಅವರೇ ನಮಗೆ ಆದರ್ಶರು. ಅವರು ಸಾಗಿದ ದಾರಿಯೇ ನಮಗೆ ಅನುಸರಣೀಯವು. ಎಲ್ಲಾ ತರದ ವೇಷಗಳನ್ನು ಮಾಡಲು ಕಾಳಿಂಗ ನಾವಡರು ಕಾರಣರು. ಭಯಗೊಂಡರೆ ಧೈರ್ಯ ತುಂಬಿ ಪ್ರೋತ್ಸಾಹಿಸುತ್ತಿದ್ದರು. ಆಗುವುದಿಲ್ಲ ಎಂದು ಕುಳಿತರೆ ಹೇಗೆ? ಪ್ರಯತ್ನ ಮಾಡು. ಆಗುತ್ತದೆ. ನಾನಿದ್ದೇನೆ ಎಂದು ಹೇಳಿ ಉತ್ಸಾಹವನ್ನು ತುಂಬುತ್ತಿದ್ದರು. ಖಳ ನಾಯಕ, ನಾಯಕ, ಸ್ತ್ರೀಪಾತ್ರ, ಹಾಸ್ಯಪಾತ್ರಗಳನ್ನು ನನ್ನಿಂದ ಕಾಳಿಂಗ ನಾವಡರು ಮಾಡಿಸಿದರು.’’ ಶಂಭು ಹೆಗಡೆಯವರಿಗೆ ಮತ್ತು ಕಾಳಿಂಗ ನಾವಡರಿಗೆ ಇದು ಅಶೋಕ ಭಟ್ಟರ ಗೌರವದ ನುಡಿಗಳು.

ಗೋಪಾಲ ಆಚಾರ್ಯರು, ಪೆರ್ಡೂರು ಮೇಳಕ್ಕೆ ಸೇರಿದಾಗ ಅವರು ಧರಿಸುವ ಪಾತ್ರಗಳನ್ನು ಕೊರತೆಯಾಗದಂತೆ ನಿರ್ವಹಿಸಿ ಅಶೋಕ ಭಟ್ಟರು ಮೇಳಕ್ಕೆ ಆಪದ್ಬಾಂಧವರಾಗಿದ್ದರು. ಪುಂಡುವೇಷಗಳಲ್ಲಿ ಅಭಿಮನ್ಯು, ಬಭ್ರುವಾಹನ, ಶ್ರೀಕೃಷ್ಣ ಮೊದಲಾದ ಪಾತ್ರಗಳು ಹೆಸರನ್ನು ಕೊಟ್ಟಿತ್ತು. ಚೈತ್ರಪಲ್ಲವಿ ಪ್ರಸಂಗದಲ್ಲಿ ಕರಿಹುಡುಗಿ ಎಂಬ ಪಾತ್ರವು ಒಳ್ಳೆಯ ಹೆಸರನ್ನು ತಂದಿತ್ತಲ್ಲದೆ ಆ ವರ್ಷ ನೂರ ಐವತ್ತಕ್ಕೂ ಹೆಚ್ಚಿನ ಪ್ರದರ್ಶನ ಗಳನ್ನು ಕಂಡಿತ್ತು. ಸಾಲಿಗ್ರಾಮ ಮೇಳಕ್ಕೆ ಶೇಣಿ ಗೋಪಾಲಕೃಷ್ಣ ಭಟ್ಟರು ಅತಿಥಿ ಕಲಾವಿದರಾಗಿ ಬಂದಿದ್ದಾಗ ಅವರ ಕೈಲಾಸ ಶಾಸ್ತ್ರಿಗೆ ರಾಣಿಯಾಗಿ ಅಭಿನಯಿಸಿದ್ದರು. ಶೇಣಿಯವರೊಂದಿಗೆ ಹಲವಾರು ಬಾರಿ ವೇಷ ಮಾಡುವ ಅವಕಾಶವು ಸಿಕ್ಕಿತ್ತು. ರಾಮದಾಸ ಸಾಮಗರೊಂದಿಗೆ ತಾಳಮದ್ದಳೆಯಲ್ಲಿ ಅರ್ಥ ಹೇಳಲು ಅವಕಾಶ ಸಿಕ್ಕಿತ್ತು. ಸಾಲಿಗ್ರಾಮ ಮೇಳದ ತನ್ನ ಹದಿನೈದನೇ ತಿರುಗಾಟದ ಸಂದರ್ಭ- ಉಜಿರೆಯಲ್ಲಿ ‘ಧರ್ಮಸಂಕ್ರಾಂತಿ’ ಪ್ರಸಂಗ ನಡೆಯುತ್ತಿತ್ತು. ಕುಣಿಯುತ್ತಾ ಇರುವಾಗ ರಂಗದಲ್ಲಿ ಜಾರಿಬಿದ್ದು ಸೊಂಟನೋವು ಆರಂಭವಾಗಿತ್ತು. ಡಿಸ್ಕ್ ಸಮಸ್ಯೆಯಿಂದಾಗಿ ತಿರುಗಾಟವನ್ನು ನಿಲ್ಲಿಸಬೇಕಾಗಿ ಬಂದಿತ್ತು.
                     

ಅಶೋಕ ಭಟ್ಟರೊಂದಿಗೆ ಲೇಖಕ ರವಿಶಂಕರ್ ವಳಕ್ಕುಂಜ 

ಆರೋಗ್ಯ ಸಮಸ್ಯೆಯಿಂದ ಮೇಳದ ವ್ಯವಸಾಯದಿಂದ ದೂರವಾದ ಮೇಲೆ ಬಿಳಿಯೂರು ಕೃಷ್ಣಮೂರ್ತಿಯವರ ಜತೆ ಸೇರಿ ಸಾಗರದಲ್ಲಿ ಹೋಟೆಲ್ ಉದ್ಯಮವನ್ನು ನಡೆಸಿದ್ದರು. ಮೂರು ವರ್ಷಗಳ ಕಾಲ ಹೋಟೆಲ್ ನಡೆಸಿ ಬಳಿಕ ಗೋಕರ್ಣ ಬಸ್ ನಿಲ್ದಾಣದ ಬಳಿ ಸ್ಟೇಶನರಿ ಅಂಗಡಿಯನ್ನು ಓರ್ವನೇ ನಡೆಸಿದ್ದರು. ಈ ಸಂದರ್ಭಗಳಲ್ಲಿ ಅತಿಥಿ ಕಲಾವಿದನಾಗಿ ತೆರಳಿ ಕುಣಿತ ಕಡಿಮೆ ಇರುವ ವೇಷಗಳನ್ನು ಮಾಡುತ್ತಿದ್ದರು. 2000ನೇ ಇಸವಿಯಲ್ಲಿ ಶೈಲಜಾ ಅವರ ಜತೆ ವಿವಾಹ. ಅಶೋಕ ಭಟ್ಟರ ಪತ್ನಿ ಶ್ರೀಮತಿ ಶೈಲಜಾ ಪ್ರಸ್ತುತ ಶಿಕಾರಿಪುರದಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸೊರಬ ತಾಲೂಕು ಮುಟುಗುಪ್ಪೆಯ ಶ್ರೀ ಸೀತಾರಾಮ ರಾವ್ ಮತ್ತು ಭವಾನಿ ದಂಪತಿಗಳ ಪುತ್ರಿ.

ಅಶೋಕ ಭಟ್ಟರು 2004ರಲ್ಲಿ ಶಿರಸಿಯಲ್ಲಿ ಮೊಬೈಲ್ ಕ್ಯಾಂಟೀನ್ ನಡೆಸಿದ್ದರು. ಸರಳ, ಸಜ್ಜನರಾದ ಇವರು ಸಹನಾಗುಣವುಳ್ಳವರು. ಹೊಂದಾಣಿಕೆಯ ಸ್ವಭಾವ. ಎಲ್ಲಾ ವೇಷಗಳನ್ನು ಮಾಡಬಲ್ಲವರು. ಹಾಗಾಗಿ ಇವರು ಎಲ್ಲರಿಗೂ ಬೇಕು. ಕರೆಬಂದ ಎಲ್ಲಾ ತಂಡಗಳಲ್ಲೂ ಭಾಗವಹಿಸುತ್ತಾರೆ. ವೀರಾಂಜನೇಯ ಯಕ್ಷಗಾನ ಮಂಡಳಿ ಬಂಗಾರಮಕ್ಕಿ, ಪೂರ್ಣಚಂದ್ರ ಕಲಾಪ್ರತಿಷ್ಠಾನ ಕೊಂಡದಕುಳಿ, ಯಾಜಿ ಮಿತ್ರಮಂಡಳಿ, ಕಲಾಧರ ಯಕ್ಷಗಾನ ಬಳಗ ಜಲವಳ್ಳಿ, ನಾಟ್ಯಶ್ರೀ ಕಲಾತಂಡ ಶಿವಮೊಗ್ಗ ಇವರು ಭಾಗವಹಿಸುವ ಪ್ರಮುಖ ತಂಡಗಳು. ಅಶೋಕ ಭಟ್ಟರು ಸ್ವಪ್ರತಿಷ್ಠೆಗಾಗಿ ಹಪಹಪಿಸಿದವರಲ್ಲ. ಪ್ರದರ್ಶನ ಚೆನ್ನಾಗಿ ಆಗಬೇಕೆಂಬ ಮನೋಭಾವನೆಯನ್ನು ಹೊಂದಿದವರು. 2000ನೇ ಇಸವಿಯಲ್ಲಿ ಚಪ್ಪರಮನೆ ಶ್ರೀಧರ ಹೆಗಡೆ, ಶಂಕರ ಭಾಗವತ, ದಂಟಕಲ್ ಸತೀಶ ಹೆಗಡೆ, ಸಂಜಯ ಬಿಳಿಯೂರು ಇವರೊಂದಿಗೆ ಸೇರಿ ಸ್ನೇಹ ಬಳಗ- ಶಿರಸಿ ಎಂಬ ಸಂಸ್ಥೆಯ ಹುಟ್ಟಿಗೂ ಕಾರಣರಾಗಿದ್ದರು. ಈ ತಂಡವು ಯಕ್ಷದೃಶ್ಯ-ಲಾಸ್ಯ-ಹಾಸ್ಯ ಎಂಬ ತಲೆಬರಹದಡಿ ಬೆಂಗಳೂರು ಮೈಸೂರು ಮೊದಲಾದ ಕಡೆ ಅನೇಕ ಪ್ರದರ್ಶನಗಳನ್ನು ನೀಡಿತ್ತು. ಈ ಸಂಸ್ಥೆಯು ಈಗಲೂ ಕಾರ್ಯಾ ಚರಿಸುತ್ತಿದೆ.

ಸಿಂಗಾಪುರದಲ್ಲಿ ಅಟ್ಟೆ ಕಟ್ಟುವ ಪ್ರಾತ್ಯಕ್ಷಿಕೆಯೊಂದರಲ್ಲಿ   

ಸಿದ್ಧಾಪುರದಲ್ಲಿ ‘ಕಲಾಸಿಂಚನ’ ಎಂಬ ತಂಡವನ್ನು ರಚಿಸಿದ್ದು ಸದ್ರಿ ತಂಡವು ಈಗಲೂ ಪ್ರದರ್ಶನಗಳನ್ನು ನೀಡುತ್ತಿದೆ. ಹಣಜೀಬೈಲು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ರಚನೆಗೆ ಕಾರಣಕರ್ತರಾದವರಲ್ಲಿ ಅಶೋಕ ಭಟ್ಟರೂ ಒಬ್ಬರು. ಶಾಲಾ ಮಕ್ಕಳಿಗೆ ಮತ್ತು ಮಹಿಳಾ ತಂಡಗಳಿಗೆ ತರಬೇತಿಯನ್ನು ನೀಡಿ ಪ್ರದರ್ಶನಗಳನ್ನು ಕೊಡಿಸಿದ್ದಾರೆ. ತಂಡವಲ್ಲದೆ ವ್ಯಕ್ತಿಗತವಾಗಿಯೂ ಅನೇಕರಿಗೆ ತರಬೇತಿ ನೀಡಿ ಅವರಿಂದ ವೇಷಗಳನ್ನು ಮಾಡಿಸಿದ್ದಾರೆ. ಉಪ್ಪಿನಕುದ್ರುವಿನ ಶ್ರೀ ರಾಜಶೇಖರ ಹಂದೆಯವರು ಮತ್ತು ಶ್ರೀ ಸುಧಾಕರ ರಾವ್ ಹೆಗ್ಗೋಡು ಇವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ, ಹೆಗ್ಗೋಡು ಕೇಡಲಸರದ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿಯ ಪ್ರದರ್ಶನಗಳಲ್ಲೂ ಅಶೋಕ ಭಟ್ಟರು ಭಾಗವಹಿಸುತ್ತಾರೆ. ರಾಜಶೇಖರ ಹಂದೆಯವರು ನೈಜೀರಿಯಾದಲ್ಲಿ ಉದ್ಯೋಗಿಯಾಗಿದ್ದು, ಶ್ರೀ ಸುಧಾಕರ ರಾಯರ ಜತೆ ಸೇರಿ ವರ್ಷಕ್ಕೆ ಅನೇಕ ಪ್ರದರ್ಶನಗಳನ್ನು ಏರ್ಪಡಿಸುವ ಮಹನೀಯರುಗಳು.

ಈರ್ವರೂ ಯಕ್ಷಗಾನ ಕಲೆಯನ್ನು ಮತ್ತು ಕಲಾವಿದರನ್ನು ಅತ್ಯಂತ ಗೌರವಿಸುವವರು. ಪ್ರದರ್ಶನಗಳನ್ನು ನಡೆಸುವುದರ ಜತೆಗೆ ವರ್ಷಕ್ಕೆ ಹತ್ತಾರು ಕಲಾವಿದರನ್ನು ಸನ್ಮಾನಿಸಿ ಗೌರವಿಸುವ ಗುಣವನ್ನೂ ಹೊಂದಿದ್ದಾರೆ. ಇವರಿಬ್ಬರೂ ಕಲಾಸಂಘಟಕರು, ಕಲಾಪೋಷಕರಾಗಿ ಗುರುತಿಸಿಕೊಂಡಿರುತ್ತಾರೆ. ಡಿಸೆಂಬರ್ ಜನವರಿ ತಿಂಗಳಲ್ಲಿ ಇವರು ಅನೇಕ ಪ್ರದರ್ಶನಗಳನ್ನು ನಡೆಸಿ, ಕಲಾವಿದರನ್ನು ಸನ್ಮಾನಿಸುವುದು, ಗೌರವನಿಧಿ ಸಮರ್ಪಣೆ ಮೊದಲಾದ ಕಲಾ, ಸಮಾಜಮುಖೀ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಕಾರ್ಯಕ್ರಮಗಳಲ್ಲಿ ಅಶೋಕ ಭಟ್ಟರು ಖಾಯಂ ಆಗಿ ಭಾಗವಹಿಸುತ್ತಾರೆ. ಶ್ರೀ ಅಶೋಕ್ ಭಟ್ ಸಿದ್ಧಾಪುರ, ಶೈಲಜಾ ದಂಪತಿಗಳ ಪುತ್ರ  ಚಿ| ಅಪೂರ್ವ ಸಿದ್ಧಾಪುರ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ.

ರವಿಶಂಕರ್ ವಳಕ್ಕುಂಜ

ಮೇಳಗಳ ಇಂದಿನ (01.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (01.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಸಂಪಿಗೆ ಮಾವಿನಕಟ್ಟೆ – ಕಂಸ ವಿವಾಹ, ಕರ್ಣಾರ್ಜುನ 
ಕಟೀಲು ಒಂದನೇ ಮೇಳತೆಂಕ ಎಕ್ಕಾರು, ಪೆರ್ಮುದೆ 
ಕಟೀಲು ಎರಡನೇ ಮೇಳ ಮಾರ್ಲರಮನೆ, ಸೂರಿಂಜೆ 
ಕಟೀಲು ಮೂರನೇ ಮೇಳಜೋಡುಕಟ್ಟೆ, ತೆಕ್ಕಾರು ವಯಾ ಬಾಜಾರು, ಉಪ್ಪಿನಂಗಡಿ 
ಕಟೀಲು ನಾಲ್ಕನೇ ಮೇಳ ಪಾಲ್ಯ ಹೌಸ್, ಪೆರಾಜೆ, ಬುಡೋಳಿ, ಬಂಟ್ವಾಳ 
ಕಟೀಲು ಐದನೇ ಮೇಳ ಕಟೀಲು ಕ್ಷೇತ್ರ ರಥಬೀದಿ 
ಕಟೀಲು ಆರನೇ ಮೇಳಮುಲ್ಲಕಾಡು, ಕಾವೂರು ಮಂಗಳೂರು 

ಮಂದಾರ್ತಿ ಒಂದನೇ ಮೇಳ ಗರಡಿಹಿತ್ಲು ಗುಜ್ಜಾಡಿ, ಬ್ರಹ್ಮಬಂಟರ ಗರಡಿಯಲ್ಲಿ 
ಮಂದಾರ್ತಿ ಎರಡನೇ ಮೇಳ ಕರಿಮನೆ ಸಾದಗಲ್, ನಿಲ್ಸ್ ಕಲ್ 
ಮಂದಾರ್ತಿ ಮೂರನೇ ಮೇಳ ಕುರುಬಲಮಕ್ಕಿ ಅಮವಾಸೆಬೈಲು 
ಮಂದಾರ್ತಿ ನಾಲ್ಕನೇ ಮೇಳ ಹೊರಳಿಜೆಡ್ಡು, ರಟ್ಟಾಡಿ 
ಮಂದಾರ್ತಿ ಐದನೇ ಮೇಳ ಹಾಲಾಡಿ 
ಶ್ರೀ ಹನುಮಗಿರಿ ಮೇಳ ಯಕ್ಷೇಶ್ವರಿ ದೇವಸ್ಥಾನ, ಮಸ್ಕಿ ನಾವುಂದ – ಶುಕ್ರನಂದನೆ 
ಶ್ರೀ ಸಾಲಿಗ್ರಾಮ ಮೇಳಮಂಕಿ ಅಮ್ಮ ಹೋಟೆಲ್ ಬಳಿ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಪೆರ್ಡೂರು ಮೇಳಕೋಣಿಯಲ್ಲಿ ಬಯಲಾಟ – ಅಹಂ ಬ್ರಹ್ಮಾಸ್ಮಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ನಾವುಂದ, ಬಡಾಕೇರಿ ಜೋಯಿಸರಬೆಟ್ಟು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಕಳಿ ಹಡಬೈಲ್ 
ಶ್ರೀ ಪಾವಂಜೆ ಮೇಳ ನಿಡ್ಡೋಡಿ,ಅರಿಯಾಳ ಬಾಕಿಮಾರು ಗದ್ದೆ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಅಂಬಾಗಿಲು ಉಡುಪಿ – ಕಲ್ಯಾಣ ಕುಂಕುಮ 
ಕಮಲಶಿಲೆ ಮೇಳ ‘ಎ’ಶ್ರೀ ಮಹಾಗಣಪತಿ ದೇವಸ್ಥಾನ, ಹುಯ್ಯಾರು, ಹೈಕಾಡಿ 
ಕಮಲಶಿಲೆ ಮೇಳ ‘ಬಿ’ಚಾತಾಲು, ಮೇಲ್ಗದ್ದೆ 
ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರ ಬಪ್ಪನಾಡು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ

ಶ್ರೀ ಅಮೃತೇಶ್ವರೀ ಮೇಳಬೊಬ್ಬರ್ಯ ಹಳೆಯಮ್ಮ ಮತ್ತು ಪರಿವಾರ ದೈವಸ್ಥಾನ ಕೊಮೆ, ತೆಕ್ಕಟ್ಟೆ 
ಶ್ರೀ ಬೋಳಂಬಳ್ಳಿ ಮೇಳ ಸಿದ್ಧಾಪುರ, ವಾರಾಹಿ ರಸ್ತೆ 
ಶ್ರೀ ಸೌಕೂರು ಮೇಳಕೊಂಗಳ್ಳಿಮನೆ ಮಾಂಕಾಳಿ ಗರಡಿ – ನೂತನ ಪ್ರಸಂಗ 
ಶ್ರೀ ಹಾಲಾಡಿ ಮೇಳದುರ್ಗಾಪರಮೇಶ್ವರಿ ದೇವಸ್ಥಾನ ರಂಗನಹಿತ್ಲು, ಚರ್ಚ್ ರೋಡ್ ಕುಂದಾಪುರ – ಮೂರೂರು ಕ್ಷೇತ್ರ ಮಹಾತ್ಮೆ 
ಶ್ರೀ ಬೆಂಕಿನಾಥೇಶ್ವರ ಮೇಳ  ಮಂಚಿಕೆರೆ ಮಣಿಪಾಲ ಅಲೆವೂರು ರಸ್ತೆ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದ ಮುಂಭಾಗ – ಸತ್ಯೊದ ಸ್ವಾಮಿ ಕೊರಗಜ್ಜ 
ಶ್ರೀ ಮಡಾಮಕ್ಕಿ ಮೇಳಸಚ್ಚರಿಪೇಟೆ – ದೇವಿ ಶ್ರೀದೇವಿ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಉಳ್ಳೂರು – ನೂತನ ಪ್ರಸಂಗ 
ಶ್ರೀ ಹಿರಿಯಡಕ ಮೇಳಬಜಗೋಳಿ ದಿಡಿಂಬೀರಿ  ಶ್ರೀ ಅಯ್ಯಪ್ಪ ಮಂದಿರದ ಬಳಿ – ಮಾಯೊದ ಅಜ್ಜೆ 
ಶ್ರೀ ಶನೀಶ್ವರ ಮೇಳ ಮುಕ್ಕೋಡ, ನೆರಳಕಟ್ಟೆ  
ಶ್ರೀ ಸಿಗಂದೂರು ಮೇಳಹೊಸಕುಳಿ, ಹೊನ್ನಾವರ 
ಶ್ರೀ ನೀಲಾವರ ಮೇಳ ಆನೆ ಗಣಪತಿ ದೇವಸ್ಥಾನ, ಅಂಬಾಗಿಲು, ಉಪ್ಪುಂದ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ ಕುರುವಳ್ಳಿ 
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ಸಂಕದಹೊಳೆ 
ಶ್ರೀ ಮೇಗರವಳ್ಳಿ ಮೇಳ ಮೇಗರವಳ್ಳಿ ಅರೆಕಲ್ಲು – ಶ್ರೀ ದೇವಿ ಮಹಾತ್ಮೆ 

ಅಂದದ ನಾಟ್ಯ, ಸೊಗಸಾದ ದಿಗಿಣಗಳ ಪುಂಡುವೇಷಧಾರಿ ವಿನೋದ್ ರೈ ಸೊರಕೆ 

ಪುತ್ತೂರು ತಾಲೂಕು ಬನ್ನೂರು ಆನೆಮಜಲು ಶ್ರೀ ವಿನೋದ್ ರೈಗಳ ಹುಟ್ಟೂರು. ಶ್ರೀ ನಾರಾಯಣ ರೈ, ಶ್ರೀಮತಿ ಸರಸ್ವತಿ ನಾರಾಯಣ ರೈ ದಂಪತಿಗಳಿಗೆ ಮಗನಾಗಿ 1968 ಮಾರ್ಚ್ 15ರಂದು ಜನಿಸಿದರು. ಹಾರಾಡಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ವನ್ನು ಪೂರೈಸಿದರು. ಎಳವೆಯಲ್ಲೇ ಯಕ್ಷಗಾನದಲ್ಲಿ ಇವರಿಗೆ ಅಪಾರ ಆಸಕ್ತಿ.

ಶಾಲಾ ವಿದ್ಯಾರ್ಥಿಯಾಗಿದ್ದಾಗ ರಜಾದಿನಗಳಲ್ಲಿ ಆಸುಪಾಸಿನಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು. ಅದು ನನಗೆ ಕಲಾವಿದನಾಗಿ ರೂಪುಗೊಳ್ಳುವುದಕ್ಕೆ ಅನುಕೂಲವಾಯಿತು. ನೋಡಿ ಕಲಿಯುವುದು ಬಹಳಷ್ಟಿದೆ. ನೋಡುವ, ಕೇಳುವ, ಓದುವ, ಪ್ರಶ್ನಿಸುವ ಗುಣಗಳು ಕಲಾವಿದನಲ್ಲಿರಬೇಕು. ಸಹನೆ ಬೇಕು. ವಿನಯವೂ ಬೇಕು. ಯಾವಾತನು ಸದಾ ನೋಡುತ್ತಾ, ಕೇಳುತ್ತಾ ಪ್ರಶ್ನಿಸುತ್ತಾನೋ ಅವನ ಬುದ್ಧಿಯು ಸೂರ್ಯನ ಕಿರಣಗಳಿಂದ ಪ್ರಚೋದಿಸಲ್ಪಟ್ಟ ಕಮಲಪುಷ್ಪದಂತೆ ಅರಳುತ್ತದೆ ಎಂಬುದು ಶ್ರೀ ವಿನೋದ್ ರೈ ಅಭಿಪ್ರಾಯ.

ಶ್ರೀ ವಿನೋದ್ ರೈ ಸೊರಕೆ ಉತ್ತಮ ಪುಂಡುವೇಷಧಾರಿಗಳಲ್ಲಿ ಒಬ್ಬರು. ರಂಗದಲ್ಲಿ ಅಂದದ ನಾಟ್ಯ, ಹಿತಮಿತವಾದ ಮಾತುಗಳಿಂದ, ಸೊಗಸಾದ ದಿಗಿಣ. ತೆಂಕುತಿಟ್ಟಿನ ಹೆಸರಾಂತ ಹಾಸ್ಯಗಾರರಾದ ಶ್ರೀ ಪುತ್ರಕಳ ತಿಮ್ಮಪ್ಪ ಶೆಟ್ಟರಿಂದ ಶ್ರೀ ವಿನೋದ್ ರೈಗಳು ಮೊದಲು ನಾಟ್ಯವನ್ನು ಕಲಿತುದು. ಪುತ್ರಕಳ ತಿಮ್ಮಪ್ಪ ಹಾಸ್ಯಗಾರರು ಆಗ ಕುಂಬ್ರದಲ್ಲಿ (ಶ್ರೀರಾಮ ಯಕ್ಷಗಾನ ಮಂಡಳಿ) ನಾಟ್ಯ ತರಗತಿ ನಡೆಸುತ್ತಿದ್ದರು. ಶ್ರೀ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕಟೀಲು ಮೂರನೇ ಮೇಳ ಆರಂಭವಾದಾಗ ವಿನೋದ್ ರೈಗಳು ಮೇಳಕ್ಕೆ ಸೇರಿದರು. ಆಗ ಮೇಳದ ಭಾಗವತರಾಗಿದ್ದವರು ಶ್ರೀ ಸರಪಾಡಿ ಶಂಕರನಾರಾಯಣ ಕಾರಂತರು. ಮೊದಲು ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದ್ದ ಕಾರಂತರು ಅಲ್ಲಿ ಆಡುತ್ತಿದ್ದ ಪ್ರಸಂಗಗಳನ್ನು ಕಟೀಲು ಮೇಳದಲ್ಲೂ ಆಡುವ ಮನ ಮಾಡಿದರು. ಪ್ರಸಂಗಗಳ ಮಾಹಿತಿ ಸಿಗಲು ಇದು ನನಗೆ ಪ್ರಯೋಜನವಾಯಿತು ಎಂದು ವಿನೋದ್ ರೈಗಳು ಅಂದಿನ ದಿನಗಳನ್ನು ನೆನಪಿಸುತ್ತಾರೆ.
             

ತದನಂತರ ಶ್ರೀ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ ಮತ್ತು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ನಾಟ್ಯ ಕಲಿತು ಗುರುದ್ವಯರ ಮೆಚ್ಚುಗೆಗೆ ಪಾತ್ರರಾದರು. ಕಟೀಲು ಮೇಳದಲ್ಲಿ ನಿರಂತರ ಆರು ವರ್ಷ ತಿರುಗಾಟ ನಡೆಸಿ, ಶ್ರೀ ಕುರಿಯ ಗಣಪತಿ ಶಾಸ್ತ್ರಿ, ಶ್ರೀ ನಿಡ್ಲೆ ನರಸಿಂಹ ಭಟ್, ಶ್ರೀ ದಿವಾಣ ಭೀಮ ಭಟ್ಟ, ಕೇದಗಡಿ ಗುಡ್ಡಪ್ಪ ಗೌಡ ಮೊದಲಾದವರ ನಿರ್ದೇಶನದಲ್ಲಿ ಪಕ್ವರಾದರು. ಸಹಕಲಾವಿದರಾಗಿ ಶ್ರೀ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಶ್ರೀ ಉಮೇಶ್ ಹೆಬ್ಬಾರ್ ಮೊದಲಾದವರ ಒಡನಾಟವೂ ವಿನೋದರಿಗೆ ಸಿಕ್ಕಿತ್ತು.

ಬಾಲಗೋಪಾಲ, ಪೀಠಿಕಾ ಸ್ತ್ರೀವೇಷಗಳನ್ನು ಪೂರ್ವರಂಗದಲ್ಲಿ ನಿರ್ವಹಿಸುತ್ತಾ, 3ನೇ ತಿರುಗಾಟದಲ್ಲಿ ಅಭಿಮನ್ಯು, ಚಂಡಮುಂಡರು, ಬಭ್ರುವಾಹನ ಮೊದಲಾದ ಪಾತ್ರಗಳನ್ನು ಮಾಡುವ ಭಾಗ್ಯ ಇವರಿಗೆ ಒದಗಿತು. 4ನೇ ವರುಷ ಪುಂಡುವೇಷದ ಸ್ಥಾನವೂ ಒಲಿಯಿತು. ಆದರೆ ಅನಿವಾರ್ಯ ಕಾರಣಗಳಿಂದ ಕೆಲಸಮಯ ವೃತ್ತಿಜೀವನದಿಂದ ಶ್ರೀ ವಿನೋದರು ದೂರ ಉಳಿಯಬೇಕಾಗಿ ಬಂತು. ಮತ್ತೆ ಪುತ್ತೂರು ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಕಾಂತಾವರ ಮೇಳದಲ್ಲಿ 2 ವರುಷ ತಿರುಗಾಟ ಮಾಡಿ ಪ್ರಸಿದ್ಧ ಕಲಾವಿದ ಶ್ರೀ ಡಿ. ಮನೋಹರ ಕುಮಾರ್ ಸಂಚಾಲಕರಾಗಿದ್ದ ಕದ್ರಿ ಮೇಳದಲ್ಲಿ 12 ವರ್ಷ ಕಲಾಸೇವೆಯನ್ನು ಮಾಡಿ ಅವರ ಪ್ರೀತಿಗೂ ಪಾತ್ರರಾದರು.

ಶ್ರೀ ಕಿಶನ್ ಹೆಗ್ಡೆಯವರ ಮಂಗಳಾದೇವಿ ಮೇಳದಲ್ಲಿ 1 ವರ್ಷ, ಪುತ್ತೂರು ಮೇಳ 1 ವರ್ಷ, ತಿರುಗಾಟ ನಡೆಸಿದ ಶ್ರೀ ವಿನೋದ್ ರೈಗಳು ಪ್ರಸ್ತುತ 13 ವರ್ಷಗಳಿಂದ ಬೆಂಕಿನಾಥೇಶ್ವರ, ಬಾಚಕೆರೆ, ಕೊಲ್ಲಂಗಾನ, ದೇಂತಡ್ಕ  ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ. ಸುದರ್ಶನ, ಅಭಿಮನ್ಯು, ಬಭ್ರುವಾಹನ, ಪರಶುರಾಮ, ಚಂಡಮುಂಡರು, ಲಕ್ಷ್ಮಣ, ಇಂದ್ರಜಿತು, ಹಿರಣ್ಯಾಕ್ಷ ಮೊದಲಾದ ಅನೇಕ ಪಾತ್ರಗಳು ಇವರಿಗೆ ಪ್ರಸಿದ್ಧಿಯನ್ನು ಕೊಟ್ಟವು. ಶ್ರೀ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರ ಜತೆಗಾರನಾಗಿ ಪಾತ್ರ ನಿರ್ವಹಿಸುತ್ತಿದ್ದುದು ವಿಶೇಷ ಅನುಭವ ಎಂದು ವಿನೋದ್ ರೈಗಳು ಹೇಳುತ್ತಾರೆ.

ಬನ್ನೂರು ಆನೆಮಜಲು ಎಂಬಲ್ಲಿ ಜನಿಸಿದರೂ ಪ್ರಸ್ತುತ ಪುತ್ತೂರು ತಾಲೂಕು ಸರ್ವೆ ಗ್ರಾಮದ ಸೊರಕೆ ಎಂಬಲ್ಲಿ ವಾಸವಾಗಿರುವ ಕಾರಣ ಇವರು ವಿನೋದ್ ರೈ ಸೊರಕೆ ಎಂದೇ ಕರೆಸಿ ಕೊಳ್ಳುತ್ತಿದ್ದಾರೆ. ಪತ್ನಿ ಸುಜಾತ, ಮನೀಶ್ ರೈ, ಧನೀಶ್ ರೈ (10ನೇ ತರಗತಿ, 6ನೇ ತರಗತಿ) ಎಂಬ ಇಬ್ಬರು ಪುತ್ರರು.

ಲೇಖನ: ರವಿಶಂಕರ್ ವಳಕ್ಕುಂಜ

ಕಂಸ-ಕಂಸ-ಕಂಸ ಯಕ್ಷಗಾನಕ್ಕೆ ಕದ್ರಿ ರಾಜಾಂಗಣದಲ್ಲಿ ಅಪಾರ ಜನಸ್ತೋಮ – ಯಲಗುಪ್ಪ, ಜನ್ಸಾಲೆ, ರವೀಂದ್ರ ದೇವಾಡಿಗರಿಗೆ ಸನ್ಮಾನ 

ನಿನ್ನೆ 30.01.2021ರಂದು ಮಂಗಳೂರಿನ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ನಡೆದ, ‘ರಂಗಸ್ಥಳ ಮಂಗಳೂರು’ ಆಯೋಜಿಸಿದ ಪೆರ್ಡೂರು ಮೇಳದ  ಕಂಸ-ಕಂಸ-ಕಂಸ ಯಕ್ಷಗಾನಕ್ಕೆ ಪ್ರೇಕ್ಷಕರು ಕಿಕ್ಕಿರಿದ ಸಂಖ್ಯೆಯಲ್ಲಿ ಆಗಮಿಸಿದ್ದರು (ಫೋಟೋ ನೋಡಿ).

ಈ ಸಂದರ್ಭ ಖ್ಯಾತ ಸ್ತ್ರೀ ವೇಷಧಾರಿ ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಭಾಗವತ ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಹಾಸ್ಯಗಾರ ಶ್ರೀ ರವೀಂದ್ರ ದೇವಾಡಿಗರನ್ನು ‘ರಂಗಸ್ಥಳ ಮಂಗಳೂರು’ ವತಿಯಿಂದ ಸನ್ಮಾನಿಸಲಾಯಿತು 

ಬಿ.ಸಿ. ರೋಡಿನಲ್ಲಿ ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿಯವರಿಗೆ ಸನ್ಮಾನ 

ಯಕ್ಷಮಿತ್ರರು ಕೈಕಂಬ, ಬಿ.ಸಿ. ರೋಡ್ ಇವರ ವತಿಯಿಂದ ದಿನಾಂಕ 29. 01. 2021ರಂದು ನಡೆದ ಶ್ರೀ ಕೋದಂಡರಾಮ ಕೃಪಾಶ್ರಿತ ಯಕ್ಷಗಾನ ಮಂಡಳಿಯ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ, ಪ್ರಸ್ತುತ ಹಲವಾರು ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ಕಲಾ ಸೇವೆ ಸಲ್ಲಿಸುತ್ತಿರುವ  ಶ್ರೀ ಪೆರ್ಲ ಜಗನ್ನಾಥ ಶೆಟ್ಟಿ ಅವರನ್ನು ಯಕ್ಷಮಿತ್ರರು ಕೈಕಂಬ, ಬಿ.ಸಿ. ರೋಡ್ ಇವರು ಸನ್ಮಾನಿಸಿದರು.

ಫೋಟೋ ಕೃಪೆ: ಶ್ಯಾಮಕುಮಾರ ತಲೆಂಗಳ 

ಸನ್ಮಾನಕ್ಕೆ ಉತ್ತರಿಸುತ್ತಾ ಯಕ್ಷಗಾನದ ಆಗುಹೋಗುಗಳ ಬಗ್ಗೆ ಹಾಗೂ ತನ್ನ ಹಿಂದಿನ ಕಲಾ ಜೀವನದ ಬಗ್ಗೆ ಪೆರ್ಲ ಜಗನ್ನಾಥ ಶೆಟ್ಟಿಯವರು ಪ್ರಾಮಾಣಿಕವಾಗಿ ತನ್ನ ಮನದಾಳವನ್ನು ಪ್ರೇಕ್ಷಕರೆದುರು ತೆರೆದಿಟ್ಟರು. 

ಬಣ್ಣದ ವೇಷ, ಎದುರು ವೇಷ ಎರಡನ್ನೂ ಮಾಡಬಲ್ಲ ಕಲಾವಿದ ಶ್ರೀ ಹರೀಶ್ ಶೆಟ್ಟಿ ಮಣ್ಣಾಪು 

ಇಂತಹುದೇ ವೇಷ ಎಂದು ಬ್ರಾಂಡ್ ಆಗದ ಕಲಾವಿದರು ನಮ್ಮ ನಡುವೆ ಹಲವಾರು ಮಂದಿ ಇದ್ದಾರೆ. ಒಂದು ವೇಳೆ ಬ್ರಾಂಡ್ ಆದರೂ ಬೇರೆ ವೇಷಗಳನ್ನೂ ನಿರ್ವಹಿಸುವ ಸಾಮರ್ಥ್ಯ ಇರುವ ಕಲಾವಿದರೂ ಇದ್ದಾರೆ. ಧರ್ಮಸ್ಥಳ ಮೇಳದ ಕಲಾವಿದ ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅಂತಹವರಲ್ಲಿ ಒಬ್ಬರು. ಪ್ರಸ್ತುತ ಬಣ್ಣದ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದರೂ ಹರೀಶ್ ಶೆಟ್ಟಿಯವರು ಎದುರು ವೇಷ ಅಥವಾ ಕಿರೀಟ ವೇಷ, ಪೀಠಿಕೆ ವೇಷಗಳನ್ನೂ ಮಾಡುತ್ತಾರೆ.

ಎಲ್ಲಾ ರೀತಿಯ ವೈವಿಧ್ಯಮಯ ಬಣ್ಣದ ವೇಷಗಳನ್ನು ನಿರ್ವಹಿಸುವ ಹರೀಶ್ ಶೆಟ್ಟಿ ಮಣ್ಣಾಪು ಹಿರಣ್ಯಾಕ್ಷನ ಪಾತ್ರವನ್ನೂ ಮಾಡುತ್ತಾರೆ. ವಿಶ್ವಾಮಿತ್ರ ಮೇನಕೆಯಲ್ಲಿ ರಾಜಾ ಕೌಶಿಕನ ಪಾತ್ರವನ್ನೂ ನಿರ್ವಹಿಸುತ್ತಾರೆ. ದೇವೇಂದ್ರನ ಪಾತ್ರವನ್ನೂ ಮಾಡಬಲ್ಲರು. ಬಣ್ಣದ ವೇಷಧಾರಿಯೊಬ್ಬರು ಈ ರೀತಿಯ ಪಾತ್ರಗಳನ್ನೂ ಮಾಡುವವರು ಬಹಳ ಅಪರೂಪ. ಇಂತಹವರ ಸಂಖ್ಯೆ ಕೇವಲ ಬೆರೆಳೆಣಿಕೆಯಲ್ಲಿ ಮಾತ್ರ. ಇತ್ತೀಚಿಗೆ ಒಂದೆರಡು ತಿಂಗಳುಗಳ ಹಿಂದೆ ವಿವಾಹಿತರಾದ ಹರೀಶ್ ಶೆಟ್ಟಿ ಮಣ್ಣಾಪು ಅವರಿಗೆ ವೈವಾಹಿಕ ಜೀವನದ ಶುಭ ಹಾರೈಕೆಗಳು.

ಭಜನಾ ಸಂಕೀರ್ತನೆಯಲ್ಲಿ ಕ್ರಾಂತಿಯ ಅಲೆಯನ್ನೇ ಎಬ್ಬಿಸಿದ ‘ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್’

ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್(ರಿ) ಎಂಬುದು ಆಸ್ತಿಕ ಬಾಂಧವರೆಲ್ಲರಿಗೂ ಪರಿಚಿತವಾದ ಹೆಸರು. ದೇವರ ಭಜನೆ ಹಾಡುಗಳ ಗಾಯನ ಪ್ರಪಂಚದಲ್ಲಿ ಈ ಟ್ರಸ್ಟ್ ಕ್ರಾಂತಿಯನ್ನೇ ಎಬ್ಬಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. 

ಕಾಟುಕುಕ್ಕೆ ಎಂದ ಕೂಡಲೇ ನಮಗೆ ನೆನಪಾಗುವುದು ಅಪ್ರತಿಮ ಗಾಯಕ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ಹೆಸರು. ಅವರ ಹಾಡುಗಳನ್ನು ಕೇಳದ ಕನ್ನಡಿಗ ಸಂಗೀತ ಪ್ರೇಮಿಗಳಿರಲಿಕ್ಕಿಲ್ಲ. ಅಂತಹ ಗಾಯಕರೊಬ್ಬರು ತಮ್ಮ ಭಜನಾ ಸಂಕೀರ್ತನೆಗಳಿಗೂ ನಾಡಿನಾದ್ಯಂತ ಹೆಸರನ್ನು ಗಳಿಸಿದ್ದಾರೆ.  

ಮಧ್ವಾಧೀಶ ಶ್ರೀ ವಿಠಲ ದಾಸ ನಾಮಾಂಕಿತ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ಮಾರ್ಗದರ್ಶನದೊಂದಿಗೆ ಇಂದು ಹಲವಾರು ಭಜನಾ ಸಂಘಗಳು ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಕೊಡುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ  ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್ ನ ತಂಡಗಳ ಭಜನಾ  ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.  ‘ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್’ ನ  ಸುಮಾರು 130ಕ್ಕೂ ಹೆಚ್ಚು ಭಜನಾ ತಂಡಗಳು ಭಜನಾ ಗಾಯನದ ಪ್ರಸ್ತುತಿಯನ್ನು ಮಾಡುತ್ತಿವೆ. 

ಇತ್ತೀಚೆಗೆ ಅಂದರೆ  ಜ.14ರಿಂದ ಜ.17ರ ತನಕ ಸಿದ್ಧಾಪುರ ಬಾನ್ಕುಳಿಯಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಗೋವುಗಳ ವಿಹಂಗಮ ತಾಣ ಗೋಸ್ವರ್ಗದಲ್ಲಿ ನಡೆದ ‘ಗೋದಿನ’ ಮತ್ತು ‘ಆಲೆಮನೆ ಹಬ್ಬ’ದ ಸಂದರ್ಭದಲ್ಲಿ ಕಾಟುಕುಕ್ಕೆ ಭಜನಾ ಚ್ಯಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಗೋಸಂಕೀರ್ತನ ಕಾರ್ಯಕ್ರಮ ವಿಶಿಷ್ಟವಾಗಿ ಜರಗಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಮೇಳಗಳ ಇಂದಿನ (31.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (31.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕೂರಾಡಿ ಬಾಟ್ ಮಕ್ಕಿ ವಾಸವಿ ನಿಲಯದ ಮುಂಭಾಗ – ಕನಕಾಂಗಿ ಕಲ್ಯಾಣ, ಅಗ್ರಪೂಜೆ 
ಕಟೀಲು ಒಂದನೇ ಮೇಳದುರ್ಗಾ ಕಾಂಪ್ಲೆಕ್ಸ್, ಪೊಲೀಸ್ ಸ್ಟೇಷನ್ ಬಳಿ, ಬಜಪೆ 
ಕಟೀಲು ಎರಡನೇ ಮೇಳ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ಬಳಿ, ಕಲ್ಯಾ, ಕಾರ್ಕಳ 
ಕಟೀಲು ಮೂರನೇ ಮೇಳಬಡಗಬೆಳ್ಳೂರು, ಬಂಟ್ವಾಳ 
ಕಟೀಲು ನಾಲ್ಕನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಐದನೇ ಮೇಳ ಕೊಲ್ಯ, ಸಜಿಪ ಬಂಟ್ವಾಳ 
ಕಟೀಲು ಆರನೇ ಮೇಳಪಡುಬೊಂಡಂತಿಲ ವಯಾ ನೀರುಮಾರ್ಗ, ಮಂಗಳೂರು 

ಮಂದಾರ್ತಿ ಒಂದನೇ ಮೇಳ ಕಡೆಕಾರ್, ಉಡುಪಿ 
ಮಂದಾರ್ತಿ ಎರಡನೇ ಮೇಳ ಹೆದ್ದನಬೇರು, 74ನೇ ಉಳ್ಳೂರು 
ಮಂದಾರ್ತಿ ಮೂರನೇ ಮೇಳ ನಾಲೂರು 
ಮಂದಾರ್ತಿ ನಾಲ್ಕನೇ ಮೇಳ ತತ್ತರಮಕ್ಕಿ, ಮುಂಡಾಡಿ, ಕಾಡೂರು – ಕಮಲಶಿಲೆ ಮೇಳದೊಂದಿಗೆ ಕೂಡಾಟ 
ಮಂದಾರ್ತಿ ಐದನೇ ಮೇಳ ದೊಡ್ಡಜೆಡ್ಡು ಹೆನ್ನಾಬೈಲು, ಹೊಸಂಗಡಿ 
ಶ್ರೀ ಹನುಮಗಿರಿ ಮೇಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಹಳ್ಳೆಪಳ್ಳಿ, ಮಾಳ – ಶುಕ್ರನಂದನೆ 
ಶ್ರೀ ಸಾಲಿಗ್ರಾಮ ಮೇಳತೆಕ್ಕಟ್ಟೆ ಮಲ್ಯಾಡಿ ಶ್ರೀ ನಂದಿಕೇಶ್ವರ ಸಪರಿವಾರ ದೇವಸ್ಥಾನ – ಬಯಲಾಟ – ನೂತನ ಪ್ರಸಂಗ 
ಶ್ರೀ ಪೆರ್ಡೂರು ಮೇಳಶ್ರೀ ಪಟ್ಟಾಭಿರಾಮ ಭಜನಾ ಮಂಡಳಿ, ಮಟ್ಟುಕಟಪಾಡಿ – ಬಯಲಾಟ – ಅಹಂ ಬ್ರಹ್ಮಾಸ್ಮಿ

ಶ್ರೀ ಸುಂಕದಕಟ್ಟೆ ಮೇಳ ನೆಲ್ಲಿಕಾರು ಶಾಲಾ ವಠಾರ – ಕೋಟಿ ಚೆನ್ನಯ್ಯ 
ಶ್ರೀ ದೇಂತಡ್ಕ ಮೇಳಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಜಾತ್ರೆ ಪ್ರಯುಕ್ತ – ಬ್ರಹ್ಮ ಬೈದೆರ್ 
ಶ್ರೀ ಮಾರಣಕಟ್ಟೆ ಮೇಳ ‘ಎ’ನಾಡ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಉಪ್ಪುಂದ 
ಶ್ರೀ ಪಾವಂಜೆ ಮೇಳ ಪೆರ್ಮಂಕಿ ಹೊಸಮನೆ – ಶ್ರೀ ದೇವಿ ಮಹಾತ್ಮೆ  
ಶ್ರೀ ಹಟ್ಟಿಯಂಗಡಿ ಮೇಳಕುತ್ಪಾಡಿ ರಾಮಕೃಷ್ಣ ಭಜನಾ ಮಂದಿರ – ಕಲ್ಯಾಣ ಕುಂಕುಮ 
ಕಮಲಶಿಲೆ ಮೇಳ ‘ಎ’ಕಾಡೂರು – ಮಂದಾರ್ತಿ ಮೇಳದೊಂದಿಗೆ ಕೂಡಾಟ 
ಕಮಲಶಿಲೆ ಮೇಳ ‘ಬಿ’ಕಂಬದಕೋಣಿ

ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರ ಬಪ್ಪನಾಡು – ಪಾರ್ವತಿ ಸ್ವಯಂವರ 
ಶ್ರೀ ಸಸಿಹಿತ್ಲು ಭಗವತೀ ಮೇಳ ಹಳೆಯಂಗಡಿ ಮಾತಾ ರೆಸಿಡೆನ್ಸಿ ಮುಂಭಾಗ – ರಂಗಸ್ಥಳ 
ಶ್ರೀ ಅಮೃತೇಶ್ವರೀ ಮೇಳಹಳೇ ಹುಣ್ಸೇಹಾಡಿ, ಬೇಳೂರು 
ಶ್ರೀ ಬೋಳಂಬಳ್ಳಿ ಮೇಳ ಶಂಕರನಾರಾಯಣ ಮೂಕಾಂಬಿಕಾ ಹೋಟೆಲ್ ಬಳಿ 
ಶ್ರೀ ಸೌಕೂರು ಮೇಳಕೋಣಿ ಬೊಬ್ಬರ್ಯ ದೇವಸ್ಥಾನ – ಕಾಮಿತಾರ್ಥ ಪ್ರದಾಯಿನಿ
ಶ್ರೀ ಹಾಲಾಡಿ ಮೇಳಭದ್ರಮಹಾಂಕಾಳಿ ದೇವಸ್ಥಾನ ಹಾರ್ಯಾಡಿ, ಹೆಸ್ಕುತ್ತೂರು – ಚೆಲುವೆ ಚಿತ್ರಾವತಿ 
ಶ್ರೀ ಬೆಂಕಿನಾಥೇಶ್ವರ ಮೇಳ  ಕೊಕ್ಕರ್ಣೆ ಚೆಗ್ರಿಬೆಟ್ಟು ರಾಜು ಪೂಜಾರಿ ಮನೆ ವಠಾರ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳತಲ್ಲೂರು ಕೂಡ್ಲು ಗುಡ್ಡೆಯಂಗಡಿ ಬೊಬ್ಬರ್ಯ ದೇವಸ್ಥಾನ ವಠಾರ  – ಶ್ರೀ ದೇವಿ ಮಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳಬೈಂದೂರು ಶಿರೂರು ಕಡ್ಕೆ ಶ್ರೀ ಧೀರೇಶ್ವರ ದೇವಸ್ಥಾನದ ವಠಾರ – ನೂತನ ಪ್ರಸಂಗ  
ಶ್ರೀ ಹಿರಿಯಡಕ ಮೇಳಹಾವಂಜೆ – ಮಾಯೊದ ಅಜ್ಜೆ 
ಶ್ರೀ ಶನೀಶ್ವರ ಮೇಳ ಹರಳಿಮನೆ ಹೆಂಗವಳ್ಳಿ 
ಶ್ರೀ ಸಿಗಂದೂರು ಮೇಳಭಟ್ಕಳ ಹೆಬ್ಳೆ, ಭಟ್ಗಾಣಿ, ಹೊಣ್ಗಾಣಿ ಜಟ್ಟಿಗೇಶ್ವರ ದೇವಸ್ಥಾನ ಹೊನ್ನಗದ್ದೆ
ಶ್ರೀ ನೀಲಾವರ ಮೇಳ ಕುಂಜಾನುಗುಡ್ಡೆ ನಾಗಬನ ವಠಾರ 
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ  
ಶ್ರೀ ಮೇಗರವಳ್ಳಿ ಮೇಳ ಕೆಂದಳ ಬೈಲ್ ರೈಸ್ ಮಿಲ್ ಬಳಿ – ಕುಶಲವ, ಚಿತ್ರಾಕ್ಷಿ ಕಲ್ಯಾಣ 

ಕುಂದಾಪುರದಲ್ಲಿ ಇಂದು(30.01.2021) ‘ಶ್ರೀರಾಮ ನಿರ್ಯಾಣ’ ತಾಳಮದ್ದಳೆ ಲೈವ್ 

ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ, ಕಲಾಕ್ಷೇತ್ರ ಕುಂದಾಪುರ ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ಕಲಾಮಂದಿರ, ಬೋರ್ಡ್ ಹೈಸ್ಕೂಲ್, ಕುಂದಾಪುರದಲ್ಲಿ  ನಡೆಯುತ್ತಿರುವ ಈ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ಇಂದು 30.01.2021 ಶನಿವಾರ 5 ಘಂಟೆಗೆ  ‘ ಶ್ರೀರಾಮ ನಿರ್ಯಾಣ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ತಾಳಮದ್ದಳೆಯ ನೇರಪ್ರಸಾರ ಕಲಾಕ್ಷೇತ್ರ ಕುಂದಾಪುರದ ಫೇಸ್ಬುಕ್ ಮತ್ತು ಯೂ ಟ್ಯೂಬ್ ಚಾನೆಲಿನಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ. 

ನೇರಪ್ರಸಾರದ ಲಿಂಕ್ ಕೆಳಗಡೆ ಇದೆ. 

ಮೇಳಗಳ ಇಂದಿನ (30.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (30.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕೊಕ್ಕರ್ಣೆ – ಸುದರ್ಶನ ವಿಜಯ, ಇಂದ್ರಜಿತು ಕಾಳಗ 
ಕಟೀಲು ಒಂದನೇ ಮೇಳಕಟೀಲು ಕ್ಷೇತ್ರದ ರಥಬೀದಿ 
ಕಟೀಲು ಎರಡನೇ ಮೇಳ ವೈಕುಂಠ ಭವನ. ಕೆನರಾ ಹೈಸ್ಕೂಲ್ ಮೈನ್ ಬಳಿ, ಡೊಂಗರಕೇರಿ, ಮಂಗಳೂರು 
ಕಟೀಲು ಮೂರನೇ ಮೇಳಕೈಕಂಬ 
ಕಟೀಲು ನಾಲ್ಕನೇ ಮೇಳ ಬೊಳ್ಳೊಳ್ಳಿಮಾರುಗುತ್ತು, ಶಾಂತಿನಗರ, ಕಾವೂರು 
ಕಟೀಲು ಐದನೇ ಮೇಳ ಚೈತನ್ಯ, ಕುತ್ಯಾಳ ಹೌಸ್, ಪಡುವನ್ನೂರು,ಈಶ್ವರಮಂಗಲ 
ಕಟೀಲು ಆರನೇ ಮೇಳಮಲ್ಲಿಕಟ್ಟೆ ಕದ್ರಿ ಮಾರ್ಕೆಟ್ ಬಳಿ 
ಮಂದಾರ್ತಿ ಒಂದನೇ ಮೇಳ ಹೋರ್ ಗುಂಡಿ, ಕಕ್ಕುಂಜೆ 
ಮಂದಾರ್ತಿ ಎರಡನೇ ಮೇಳ ನೆಲ್ಲಿಕಟ್ಟೆ, ಕಾವ್ರಾಡಿ 
ಮಂದಾರ್ತಿ ಮೂರನೇ ಮೇಳ ಉಳುವಳ್ಳಿ ಘಂಡಘಟ್ಟ, ಶೃಂಗೇರಿ 
ಮಂದಾರ್ತಿ ನಾಲ್ಕನೇ ಮೇಳ ಆಶೀರ್ವಾದ ನಿಲಯ, ಕೋಡಿ ಕನ್ಯಾನ 
ಮಂದಾರ್ತಿ ಐದನೇ ಮೇಳ ಸುಳುಗೋಡು, ಯಡೂರು  
ಶ್ರೀ ಹನುಮಗಿರಿ ಮೇಳ ಬೆಳ್ವೆ ಗಜಾನನ ಕ್ಯಾಶ್ಯೂಸ್ ಇಂಡಸ್ಟ್ರೀಸ್ ಮುಂಭಾಗದಲ್ಲಿ – ಶ್ರೀ ರಾಮ ಕಾರುಣ್ಯ 
ಶ್ರೀ ಸಾಲಿಗ್ರಾಮ ಮೇಳಸಂಜೆ 5 ಘಂಟೆಗೆ ಕುಮಟಾ ಗ್ರಾಮ ವಕ್ಕಲಿಗರ ಸಭಾಭವನ – ಶಶಿಪ್ರಭಾ, ವೀರಮಣಿ ಹಾಗೂ ರಾತ್ರಿ 10 ಘಂಟೆಗೆ ಗೋಪಾಡಿ ಚಿಕ್ಕು ಅಮ್ಮ ದೇವಸ್ಥಾನ – ದಕ್ಷ ಯಜ್ಞ, ದ್ರೌಪದಿ ಪ್ರತಾಪ 
ಶ್ರೀ ಪೆರ್ಡೂರು ಮೇಳಕದ್ರಿ ರಾಜಾಂಗಣ – ಕಂಸ, ಕಂಸ, ಕಂಸ
ಶ್ರೀ ಮಾರಣಕಟ್ಟೆ ಮೇಳ ‘ಎ’ಕಂಚಿಕಾನ್, ಬಿಜೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ನಾವುಂದ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಸಾಸ್ತಾನ 
ಶ್ರೀ ಪಾವಂಜೆ ಮೇಳ ಬಾಳಿಕೆ ಕೋರ್ದಬ್ಬು ದೈವಸ್ಥಾನ ವಠಾರ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಮಾಣೈ ಬೆಳ್ಕಲ್ಗುಡ್ಡೆ – ದಿವ್ಯ ಸನ್ನಿಧಿ 
ಕಮಲಶಿಲೆ ಮೇಳ ‘ಎ’ಹೆಂಗವಳ್ಳಿ
ಕಮಲಶಿಲೆ ಮೇಳ ‘ಬಿ’ಶಂಕರನಾರಾಯಣ 
ಶ್ರೀ ಬಪ್ಪನಾಡು ಮೇಳಸುಬ್ರಹ್ಮಣ್ಯನಗರ ಶಾಲಾ ಮೈದಾನ, ಉಡುಪಿ ಪುತ್ತೂರು – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ಮರಕಡ ಬಸ್ ನಿಲ್ದಾಣದ ಬಳಿ – ನಾಗ ತಂಬಿಲ
ಶ್ರೀ ಅಮೃತೇಶ್ವರೀ ಮೇಳಶ್ರೀ ಕ್ಷೇತ್ರದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ ಸಿದ್ದಾಪುರ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಮುಕ್ಕೋಡು – ಸೌಕೂರು ದುರ್ಗಾಪರಮೇಶ್ವರೀ ಮಹಾತ್ಮೆ 
ಶ್ರೀ ಹಾಲಾಡಿ ಮೇಳಯಳಂತೂರು, ಅಬ್ಬಿಮನೆ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 
ಶ್ರೀ ಬೆಂಕಿನಾಥೇಶ್ವರ ಮೇಳ  ಬಜಾಲ್, ಕುಡ್ತಡ್ಕ – ಸತ್ಯೊದ ಸ್ವಾಮಿ ಕೊರಗಜ್ಜ 
ಶ್ರೀ ಮಡಾಮಕ್ಕಿ ಮೇಳಕಾಸನಮಕ್ಕಿ – ಶ್ರೀ ದೇವಿ ಮಂಕಾಳಿ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕಟಪಾಡಿ ಸುಭಾಸ್ ನಗರ ಕುರ್ಕಾಲ್ ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರ – ಪ್ರಚಂಡ ಪಂಜುರ್ಲಿ 
ಶ್ರೀ ಹಿರಿಯಡಕ ಮೇಳತೋಡಾರು ಪಡು ಪೇರಳಕಟ್ಟೆ – ಹಿರಿಯಡಕ ಕ್ಷೇತ್ರ ಮಹಾತ್ಮೆ 
ಶ್ರೀ ಶನೀಶ್ವರ ಮೇಳ ಮಾರ್ಡಿ ಶಾಲಾ ವಠಾರ  
ಶ್ರೀ ಸಿಗಂದೂರು ಮೇಳದೇವಲ್ಕುಂದ ಅಮೃತ ಕಾಂಪ್ಲೆಕ್ಸ್ ವಠಾರ 
ಶ್ರೀ ನೀಲಾವರ ಮೇಳ ಶ್ರೀ ನಾಗ ಜಟ್ಟಿಗೇಶ್ವರ ದೈವಸ್ಥಾನ, ಉಪ್ಪುಂದ, ಅರೆಹಾಡಿ 
ಶ್ರೀ ಮೇಗರವಳ್ಳಿ ಮೇಳ ನಾಲೂರು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ – ಪೌರಾಣಿಕ ಪ್ರಸಂಗ