Sunday, September 20, 2026
Home Blog Page 349

ಕವಿ, ಸಾಹಿತಿ ‘ಮುನಿಸು ತರವೆ’ ಖ್ಯಾತಿಯ ಸುಬ್ರಾಯ ಚೊಕ್ಕಾಡಿ ಅವರಿಗೆ ಈ ಬಾರಿಯ ‘ಮಾಸ್ತಿ ಪ್ರಶಸ್ತಿ’

ಪ್ರಸಿದ್ಧ ಸಾಹಿತಿ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿನಲ್ಲಿ ನೀಡಲಾಗುವ ‘ಮಾಸ್ತಿ ಪ್ರಶಸ್ತಿ’ಗೆ ಕನ್ನಡದ ಪ್ರಸಿದ್ಧ ಕವಿ, ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿ ಅವರು ಆಯ್ಕೆಯಾಗಿದ್ದಾರೆ.

ಶ್ರೀ ಸುಬ್ರಾಯ ಚೊಕ್ಕಾಡಿ ಅವರು ತನ್ನ ನವಿರಾದ ಕಾವ್ಯ ಶೈಲಿಯಿಂದ ಕನ್ನಡ ಸಾರಸ್ವತ ಲೋಕದಲ್ಲಿ ಮನೆಮಾತಾಗಿದ್ದರೂ ಅವರ ಹೆಸರು ಕೇಳಿದೊಡನೆ ಜನರಿಗೆ ಫಕ್ಕನೆ ನೆನಪಾಗುವುದು ಅವರ ‘ಮುನಿಸು ತರವೆ ಮುಗುದೆ, ಹಿತವಾಗಿ ನಗಲು ಬಾರದೆ’ ಎಂಬ ಜನಪ್ರಿಯ ಕವನ. 

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಯು ಈ ಬಾರಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಮಂದಿ ಗಣ್ಯರಿಗೆ ನೀಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಲ್ಲಿ ಸುಬ್ರಾಯ ಚೊಕ್ಕಾಡಿ (ಕಾವ್ಯ), ಸಂಧ್ಯಾ ಎಸ್.ಪೈ (ಶಿಶು ಸಾಹಿತ್ಯ), ಎಸ್.ಆರ್.ವಿಜಯಶಂಕರ (ವಿಮರ್ಶೆ), ಪುರುಷೋತ್ತಮ ಬಿಳಿಮಲೆ (ಸಂಶೋಧನೆ), ಕೇಶವರೆಡ್ಡಿ ಹಂದ್ರಾಳ (ಕಥೆ), ಸ.ರಘುನಾಥ (ಸೃಜನಶೀಲ) ಒಳಗೊಂಡಿದ್ದಾರೆ. ಪ್ರಶಸ್ತಿಯು ತಲಾ ರೂ. 25,000/- ನಗದು, ಮಾಸ್ತಿ ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿದೆ.

ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಮಾರ್ಚ್ 27ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು  ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಏರಿಕೆ – ಸತತ 9ನೇ ದಿನವೂ ಬೆಲೆಯಲ್ಲಿ ಹೆಚ್ಚಳ 

ತೈಲ ಸಂಸ್ಥೆಗಳು ಬುಧವಾರ ಕೂಡ ತೈಲ ಬೆಲೆಯನ್ನು ಏರಿಕೆ ಮಾಡಿದ್ದು, ಸತತ 9ನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ದರವು ಏರಿಕೆಯನ್ನು ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 25 ಪೈಸೆ ಹೆಚ್ಚಾಗಿ 89.54 ರೂಪಾಯಿಗೆ ಏರಿದೆ.

ಡೀಸೆಲ್ ದರವು ಕೂಡ ಲೀಟರ್‌ಗೆ 25 ಪೈಸೆ ಏರಿಕೆಗೊಂಡು 79.95 ರೂಪಾಯಿ ತಲುಪಿದೆ.  ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್ ಮತ್ತು ರೂಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ.

ಎಲ್ಲಾ ದಿನವೂ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಸರ್ಕಾರಿ ತೈಲ ಸಂಸ್ಥೆಗಳು ಪ್ರಕಟಿಸುತ್ತವೆ. ಪೆಟ್ರೋಲ್, ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ದೇಶದ ಪ್ರಮುಖ ನಾಲ್ಕು  ನಗರಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಕೆಳಗೆ ಕೊಡಲಾಗಿದೆ. 

ಬೆಂಗಳೂರು –  ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17: 92.54 (26 ಪೈಸೆ ಏರಿಕೆ) ಫೆಬ್ರವರಿ 16: 92.28 ಫೆಬ್ರವರಿ 15: 88.99 ಫೆಬ್ರವರಿ 14-  88.73ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17-  84.75 (26 ಪೈಸೆ ಏರಿಕೆ) ಫೆಬ್ರವರಿ 16-  84.49 ಫೆಬ್ರವರಿ 15 –  79.35 ಫೆಬ್ರವರಿ 14 – 79.06

ನವದೆಹಲಿ-  ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17 – 89.54 (25 ಪೈಸೆ ಏರಿಕೆ) ಫೆಬ್ರವರಿ 19 – 89.29 ಫೆಬ್ರವರಿ 15: 88.99 ಫೆಬ್ರವರಿ 14 – 88.73 ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17 – 79.95 (25 ಪೈಸೆ ಏರಿಕೆ) ಫೆಬ್ರವರಿ 16 – 79.70 ಫೆಬ್ರವರಿ 15 – 79.35 ಫೆಬ್ರವರಿ 14 – 79.06

ಮುಂಬೈ – ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17 – 96.00 (25 ಪೈಸೆ ಏರಿಕೆ) ಫೆಬ್ರವರಿ 16 – 95.75 ಫೆಬ್ರವರಿ 15 – 95.46 ಫೆಬ್ರವರಿ 14 – 95.21 ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17 – 86.98 (26 ಪೈಸೆ ಏರಿಕೆ) ಫೆಬ್ರವರಿ 16 – 86.72 ಫೆಬ್ರವರಿ 15 – 86.34 ಫೆಬ್ರವರಿ 14 – 86.04


ಚೆನ್ನೈ – ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17 – 91.68 (16 ಪೈಸೆ ಏರಿಕೆ) ಫೆಬ್ರವರಿ 16 – 91.45 ಫೆಬ್ರವರಿ 15 – 91.19 ಫೆಬ್ರವರಿ 14 – 90.96 ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17 – 85.01 (18 ಪೈಸೆ ಏರಿಕೆ) ಫೆಬ್ರವರಿ 16 – 84.77 ಫೆಬ್ರವರಿ 15 – 84.44 ಫೆಬ್ರವರಿ 14 – 84.1

ಮೇಳಗಳ ಇಂದಿನ (17.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (17.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬೊಮ್ಲಾಪುರ ಸಮೀಪ ಹೊಲಗೋಡು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ = ಬಂಡಾರಿಂಜ ಮನೆ, ಅಡ್ಯಾರು 

ಕಟೀಲು ಎರಡನೇ ಮೇಳ ==   ಮಾಣಿಬೆಟ್ಟುಗುತ್ತು ಹೌಸ್, ಮೂಳೂರು, ಗುರುಪುರ 

ಕಟೀಲು ಮೂರನೇ ಮೇಳ= ಗಾಣದಮೂಲೆ ಬಜತ್ತೂರು,ವಯಾ ನೆಲ್ಯಾಡಿ, ಉಪ್ಪಿನಂಗಡಿ 

ಕಟೀಲು ನಾಲ್ಕನೇ ಮೇಳ  == ಕೆಂಜಾರು ಕಾಣ, ಜೋಗಟ್ಟೆ 

ಕಟೀಲು ಐದನೇ ಮೇಳ == ಇನ್ನಂಜೆ, ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರ 

ಕಟೀಲು ಆರನೇ ಮೇಳ == ಏಳಿಂಜೆ ಕೋಂಜಾಲಗುತ್ತು ಮನೆಯಲ್ಲಿ 

ಮಂದಾರ್ತಿ ಒಂದನೇ ಮೇಳ  ==  ಚಂಗಾರು, ಹುಂಚಿಕೊಪ್ಪ, ಕೆಂದಾಳಬೈಲು 

ಮಂದಾರ್ತಿ ಎರಡನೇ ಮೇಳ   ==   ಸುಮತಿ ಫಾರಂ ಹತ್ತಿರ, ಚಾಂತಾರು, ಬ್ರಹ್ಮಾವರ 

ಮಂದಾರ್ತಿ ಮೂರನೇ ಮೇಳ  ==  ಹೆದ್ದೇರಿ ನಿವಾಸ, ಮಲೆಬೆಟ್ಟು, ಶಿವಪುರ, ಹೆಬ್ರಿ 

ಮಂದಾರ್ತಿ ನಾಲ್ಕನೇ ಮೇಳ   ==  ಮಂಚಿ ಪಡುಮನೆ, ಕುಕ್ಕೆಕಟ್ಟೆ ಜಂಕ್ಷನ್, ಮಂಚಿ 

ಮಂದಾರ್ತಿ    ಐದನೇ ಮೇಳ  ==  ಹೊಸಗದ್ದೆಬೈಲು, ಸೂರಾಲು, ಕೊಕ್ಕರ್ಣೆ 

ಶ್ರೀ ಹನುಮಗಿರಿ ಮೇಳ  ==  ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್, ನಯನಾಡು – ಮಹಾಕಲಿ ಮಗಧೇಂದ್ರ 

ಶ್ರೀ ಸಾಲಿಗ್ರಾಮ ಮೇಳ == ನೀಲಾವರ ಮಹಿಷಮರ್ಧಿನಿ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ (ರಾತ್ರಿ 7ರಿಂದ ಕಾಲಮಿತಿ)

ಶ್ರೀ ಸುಂಕದಕಟ್ಟೆ ಮೇಳ  ==  ಎಲ್ಟೇಲ್ ಸತ್ಯನಾರಾಯಣ ಸೇವಾ ಸಮಿತಿ – ಸರ್ಪ ಸಂಬಂಧ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಾಕ್ತೋಟ ಉಪ್ಪುಂದರ ಮನೆ, ಉಳ್ಳೂರು -11

ಶ್ರೀ ಮಾರಣಕಟ್ಟೆ ಮೇಳ ‘ಬಿ == ನೈಕಂಬ್ಳಿ, ಗುಡಿಮನೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ದೇವಿ ನಿಲಯ, ಗೋರ್ಕಲ್, ಕಾಲ್ತೋಡು 

ಶ್ರೀ ಪಾವಂಜೆ ಮೇಳ  ==  ಮಿತ್ರಸಮಾಜ, ಪುತ್ತೂರು – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ಕಿರಿಮಂಜೇಶ್ವರ 

ಕಮಲಶಿಲೆ ಮೇಳ ‘ಬಿ‘ == ಕಗ್ಗನಕೊಡ್ಲು, ಆರ್ಡಿ 

ಶ್ರೀ ಬಪ್ಪನಾಡು ಮೇಳ == ಶಾಂತಿನಗರ ಗುತ್ತಕಾಡು ಶಾಲಾ ವಠಾರ – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ == ‘ಚಿತ್ತಾರಿ ನಾಗಬ್ರಹ್ಮ ಸಪರಿವಾರ ದೇವಸ್ಥಾನ, ಮಣೂರು 

ಶ್ರೀ ಸೌಕೂರು ಮೇಳ == ಗುಲ್ವಾಡಿ ಗೋಪಾಲಕೃಷ್ಣ ದೇವಸ್ಥಾನ – ರಕ್ತ ಸಂಬಂಧ 

ಶ್ರೀ ಹಾಲಾಡಿ ಮೇಳ == ಮರ್ಲುಚಿಕ್ಕು ದೇವಸ್ಥಾನ, ಹಾಲಾಡಿ – ಅಬ್ಬರದ ಬೊಬ್ಬರ್ಯೆ  

ಶ್ರೀ ಬೆಂಕಿನಾಥೇಶ್ವರ ಮೇಳ  == ಸಂಪ್ಯ ಆರ್ಯಾಪು ಅಮ್ಮನವರ ದೇವಸ್ಥಾನ  – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಆವರ್ಸೆ ಆನೆಗುಂಡಿ ಆದಿಶಕ್ತಿ ಮಹಾಕಾಳಿ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ ==ಜನ್ನಾಡಿ ಮಣಿಗೆರೆ ಶಾಲಾ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಮೂಡಬಿದ್ರೆ, ಪುತ್ತಿಗೆ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಯಡ್ತರೆ ವಠಾರ 

ಶ್ರೀ ಸಿಗಂದೂರು ಮೇಳ == ನಾವುಂದ ಮಸ್ಕಿ ಹಾಯ್ಗುಳಿ ಮನೆ ವಠಾರ 

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಯಕ್ಷಗಾನ ಪ್ರದರ್ಶನ ಇರುವುದಿಲ್ಲ. 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಶೃಂಗೇರಿ, ವೈಕುಂಠಪುರ 

ಶ್ರೀ ಮೇಗರವಳ್ಳಿ ಮೇಳ ==  ಮಂಡಗದ್ದೆ ಶಾರದೆ ನಿಲಯ – ಕುಲದೈವ ಪಂಜುರ್ಲಿ 

ರವಿಚಂದ್ರನ್ ಅಶ್ವಿನ್:  ಟೆಸ್ಟ್ ಕ್ರಿಕೆಟಿನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಭಾರತದ ಬೌಲರ್ 

ಭಾರತದ ಸ್ಪಿನ್ನರ್  ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟಿನಲ್ಲಿ ಹೊಸ ವಿಶ್ವದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಈಗ ನಡೆಯುತ್ತಿರುವ ಇಂಗ್ಲೆಂಡ್ ಎದುರಿನ ಎರಡನೆಯ ಟೆಸ್ಟ್ ನ ಎರಡನೆಯ ದಿನದ ಆಟದಲ್ಲಿ ಅವರು ಈ ದಾಖಲೆಯನ್ನು ಸ್ಥಾಪಿಸಿದ್ದಾರೆ.

200 ಎಡಗೈ ದಾಂಡಿಗರನ್ನು ಔಟ್ ಮಾಡುವ ಮೂಲಕ, ಈ ಸಾಧನೆ ಮಾಡಿದ ಜಗತ್ತಿನ ಏಕೈಕ ಬೌಲರ್ ಎಂಬ ಖ್ಯಾತಿಗೆ ಅಶ್ವಿನ್ ಪಾತ್ರರಾದರು. 

ಈ ವರೆಗೆ ಶ್ರೀಲಂಕಾದ ಓಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ಭಾರತ ರವಿಚಂದ್ರನ್ ಅಶ್ವಿನ್ ಇತ್ತೀಚಿಗೆ ಮುರಿದಿದ್ದರು.   ಮುರಳೀಧರನ್ 191 ಎಡಗೈ ದಾಂಡಿಗರನ್ನು ಔಟ್ ಮಾಡಿದ್ದರು.

ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಎಡಗೈ ಬ್ಯಾಟ್ಸ್​ಮನ್​ಗಳನ್ನು ಔಟ್ ಮಾಡಿದ ಬೌಲರುಗಳ ಪಟ್ಟಿಯಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್(186), ಆಸ್ಟ್ರೇಲಿಯಾ ವೇಗಿ ಗ್ಲೆನ್ ಮೆಕ್​ಗ್ರಾಥ್ (172), ಆಸ್ಟ್ರೇಲಿಯಾ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್(172) ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ (167) ಇದ್ದಾರೆ.

ಎಡಗೈ ಬ್ಯಾಟ್ಸ್ ಮನ್​ಗಳಾದ ಬೆನ್ ಸ್ಟೋಕ್ಸ್ ಮತ್ತು ಸ್ಟುವರ್ಟ್ ಬ್ರಾಡ್ ಅವರ ವಿಕೆಟ್ ಪಡೆಯುವ ಮೂಲಕ ಆರ್. ಅಶ್ವಿನ್ ಈ ಸಾಧನೆ ಮಾಡಿದ್ದಾರೆ. 

ಬಡಗಿನ ಬೆಡಗು – 50ಕ್ಕೂ ಹೆಚ್ಚು ತಿರುಗಾಟದ ರಾಜಹಾಸ್ಯ ಖ್ಯಾತಿಯ ಹಳ್ಳಾಡಿ ಜಯರಾಮ ಶೆಟ್ಟಿ 

ಇತ್ತೀಚೆಗಿನ ದಿನಗಳಲ್ಲಿ ಹಾಸ್ಯ ಪಾತ್ರವು ಅಪಹಾಸ್ಯಕ್ಕೆ ಒಳಗಾಗುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ನಮಗೆ ಅಳಿದುಹೋದ ಹಲವಾರು ಖ್ಯಾತ ಹಾಸ್ಯ ಕಲಾವಿದರ ಪಾತ್ರಗಳು ಮತ್ತು ಪ್ರತಿಭೆಯ ನೆನಪುಗಳು ಮನದಲ್ಲಿ ಹಾದುಹೋದರೆ ಅಚ್ಚರಿಯೇನಿಲ್ಲ.

ಸಭ್ಯತೆಯ ಎಲ್ಲೆಯನ್ನು ಮೀರದೆ ಹಲವಾರು ಕಲಾವಿದರು ಗಂಭೀರತೆಯಿಂದ ತಾನು ನಗದೇ ಇನ್ನೊಬ್ಬರನ್ನು ನಕ್ಕುನಗಿಸಿದ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ. ಈಗಲೂ ಅಂತಹ ಹಾಸ್ಯ ಕಲಾವಿದರು ನಮ್ಮ ನಡುವೆ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಬಡಗುತಿಟ್ಟಿನ ಹಾಸ್ಯ ಕಲಾವಿದರ ಯಾದಿಯಲ್ಲಿ ರಾಜಹಾಸ್ಯ ಖ್ಯಾತಿಯ ಹಾಸ್ಯ ಚಕ್ರವರ್ತಿ ಹಳ್ಳಾಡಿ ಜಯರಾಮ ಶೆಟ್ಟಿಯವರದು ಪ್ರಮುಖ ಹೆಸರು.

ತನ್ನ ಪ್ರಸಿದ್ಧಿಯಿಂದ ತಾನು ಬೆಳೆದ ಊರಾದ ‘ಹಳ್ಳಾಡಿ’ಯನ್ನೇ ತನ್ನ ಹೆಸರಿನೊಂದಿಗೆ ಗುರುತಿಸುವಂತೆ ಮಾಡಿದ ಸಾಧಕ ಕಲಾವಿದ. ವಿಟ್ಲ ಗೋಪಾಲಕೃಷ್ಣ ಜೋಷಿ, ಕುಂಜಾಲು ರಾಮಕೃಷ್ಣ, ಸಾಲ್ಕೋಡು ಗಣಪತಿ ಹೆಗಡೆ, ಹಾಲಾಡಿ ಕೊರ್ಗು ಹಾಸ್ಯಗಾರ್ ಮೊದಲಾದವರು ಹಾಕಿಕೊಟ್ಟ ಸಭ್ಯತೆಯ ಗೆರೆಯನ್ನು ದಾಟದಿದ್ದರೂ ತನ್ನದೇ ಶೈಲಿಯಿಂದ ಸುಸಂಸ್ಕೃತವಾದ ಹಾಸ್ಯದಿಂದ ಹಾಸ್ಯ ಚಕ್ರವರ್ತಿ ಎಂದು ಕರೆಸಿಕೊಂಡರು. 

ಹಳ್ಳಾಡಿಯವರು ಪ್ರೇಕ್ಷಕರು ನಗಬೇಕೆಂದು ಏನಾದರೂ ಮಾತನಾಡುವವರಲ್ಲ. ಆದರೆ ಇವರ ಮಾತುಗಳನ್ನು ಕೇಳಿದಾಗ ನಗದ ಪ್ರೇಕ್ಷಕರಿಲ್ಲ. ಇವರ ಮಾತುಗಳಲ್ಲಿ ತನ್ನದೇ ಆದ ಕುಂದಾಪುರ ಕನ್ನಡದ ಶಬ್ದಗಳನ್ನು ಧಾರಾಳವಾಗಿ ಕೇಳಬಹುದು. ಹಳ್ಳಾಡಿಯರದು ಯಕ್ಷಗಾನ ರಂಗದಲ್ಲಿ ನಿರಂತರ 50 ವರ್ಷಗಳಿಗೂ ಮೇಲ್ಪಟ್ಟ ಕಲಾ ವ್ಯವಸಾಯ. 

ಕುಂದಾಪುರ ತಾಲೂಕಿನ ಶಿರಿಯಾರ ಸಮೀಪದ ಹಳ್ಳಾಡಿ ಎಂಬಲ್ಲಿ 1956ರಲ್ಲಿ ಅಣ್ಣಪ್ಪ ಶೆಟ್ಟಿ ಮತ್ತು ಅಕ್ಕಮ್ಮ ಶೆಡ್ತಿ ಪುತ್ರನಾಗಿ ಜನಿಸಿದರು.  ಐದನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ ತನ್ನ 12ನೇ ವಯಸ್ಸಿನಲ್ಲಿಯೇ ಮೇಳದ ತಿರುಗಾಟ ಪ್ರಾರಂಭಿಸಿ ತನ್ನ  ಕಲಾಜೀವನದಲ್ಲಿ ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲ ವೃತ್ತಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.  

ಪೆರ್ಡೂರು, ಕಮಲಶಿಲೆ, ಮುಲ್ಕಿ ಮುಂತಾದ ಮೇಳಗಳಲ್ಲಿ ಸೇವೆಸಲ್ಲಿಸಿದ ಇವರು ಸಾಲಿಗ್ರಾಮ ಮೇಳದಲ್ಲಿ ದೀರ್ಘಕಾಲ ಅಂದರೆ 25 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸಾಲಿಗ್ರಾಮ ಮೇಳದಲ್ಲಿ ಬೆಳಿಯೂರು ಕೃಷ್ಣಮೂರ್ತಿಯವರೊಂದಿಗೆ ಹಳ್ಳಾಡಿಯವರು ನಿರ್ವಹಿಸಿದ ಜೋಡಿ ಹಾಸ್ಯ ಪಾತ್ರಗಳು ತುಂಬಾ ಪ್ರಸಿದ್ಧಿಯನ್ನು ಪಡೆದಿತ್ತು.

ಕೆಲವು ವರ್ಷಗಳ ಹಿಂದಿನ ವರೆಗೂ ಬಳ್ಕೂರು ಕೃಷ್ಣಯಾಜಿಯವರೊಂದಿಗಿನ ಹಳ್ಳಾಡಿಯವರ ಜೋಡಿ ವೇಷಗಳು ತುಂಬಾ ಜನಮೆಚ್ಚುಗೆಯನ್ನು ಪಡೆದಿತ್ತು. ಪರಂಪರೆಯ ಹಾಸ್ಯಪಾತ್ರಗಳ ಹೆಜ್ಜೆಗಾರಿಕೆ ಮತ್ತು ಶ್ರುತಿಬದ್ಧ ಮಾತುಗಾರಿಕೆಗೆ ಹೆಸರಾದ ಹಳ್ಳಾಡಿ ಜಯರಾಮ ಶೆಟ್ಟಿಯವರು ತೆಂಕು ತಿಟ್ಟಿನ ಕುಂಬಳೆ ಮೇಳದಲ್ಲೂ ಕೆಲಸಮಯ ತಿರುಗಾಟ ಮಾಡಿದ್ದರು. 

ಮೇಳಗಳ ಇಂದಿನ (16.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (16.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಳಗೋಡು, ಅರಳಸುರುಳಿ  – ಹನುಮೋದ್ಭವ, ಚೂಡಾಮಣಿ, ಲಂಕಾದಹನ 

ಕಟೀಲು ಒಂದನೇ ಮೇಳ = ಶ್ರೀ ರಾಜರಾಜೇಶ್ವರಿ ಭಕ್ತವೃಂದ, ಪೊಳಲಿ 

ಕಟೀಲು ಎರಡನೇ ಮೇಳ ==   ಕೆರೆಕಂಡ, ಬಾಜಾವು, ಕುತ್ತೆತ್ತೂರು 

ಕಟೀಲು ಮೂರನೇ ಮೇಳ= ನೂಚಿಲ ಸುಬ್ರಹ್ಮಣ್ಯ 

ಕಟೀಲು ನಾಲ್ಕನೇ ಮೇಳ  == ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವಠಾರ, ಮಂಗಳೂರು 

ಕಟೀಲು ಐದನೇ ಮೇಳ == ಮುರತ್ತಮೇಲುಮನೆ, ಭಟ್ರಕೋಡಿ, ಕಿನ್ನಿಗೋಳಿ 

ಕಟೀಲು ಆರನೇ ಮೇಳ == ಪಡು-ಮೂಡುಕೊಣಾಜೆ, ವಯಾ ಮೂಡುಬಿದ್ರಿ 

ಮಂದಾರ್ತಿ ಒಂದನೇ ಮೇಳ  ==  ತೆಂಗಿನಬಾಳು, ಮಾವಿನಕೊಡ್ಲು, ಕುಳ್ಳುಂಜೆ, ಶಂಕರನಾರಾಯಣ     

ಮಂದಾರ್ತಿ ಎರಡನೇ ಮೇಳ   ==   ಗುಡ್ಡೆಯಂಗಡಿ, ದೇವಸ್ಥಾನಬೆಟ್ಟು, ಬೇಳೂರು 

ಮಂದಾರ್ತಿ ಮೂರನೇ ಮೇಳ  ==  ನಿಂಜೂರು ಮಿಟ್ರಬೈಲು, ಪಳ್ಳಿಬೈಲೂರು 

ಮಂದಾರ್ತಿ ನಾಲ್ಕನೇ ಮೇಳ   ==  ಜೆಡ್ಡಿನಮನೆ ಗಾವಳಿ, ಹಳ್ಳಾಡಿ, ಹರ್ಕಾಡಿ 

ಮಂದಾರ್ತಿ    ಐದನೇ ಮೇಳ  ==  ಚಗ್ರಿಬೆಟ್ಟು, ಬೈದೆಬೆಟ್ಟು  

ಶ್ರೀ ಹನುಮಗಿರಿ ಮೇಳ  ==  ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸ್ವರ್ಣಮುಖಿ ರಂಗಮಂಟಪದಲ್ಲಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ಕೋಟ ಗಾಂಧಿ ಮೈದಾನ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಸುಂಕದಕಟ್ಟೆ ಮೇಳ  ==  ಪೆರ್ನೆ ಪಜೀರು – ಶ್ರೀ ದೇವಿ ಲಲಿತೋಪಾಖ್ಯಾನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಯರುಕೋಣೆ, ದೊಡ್ಮನೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮಾರಿಕಾಂಬ ನಗರ, ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==  ಮನವಳಿಕೆಗುತ್ತು, ಆಲಂಕಾರು, ಕಡಬ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ ‘ಎ‘ = ಶ್ರೀ ಬ್ರಹ್ಮಯಕ್ಷೀ ಪರಿವಾರ ದೈವಸ್ಥಾನ, ಚನ್ಮನೆ, ಕೆರಾಡಿ 

ಕಮಲಶಿಲೆ ಮೇಳ ‘ಬಿ‘ == ಆರ್ಪಾಲು, ಕಮಲಶಿಲೆ 

ಶ್ರೀ ಅಮೃತೇಶ್ವರೀ ಮೇಳ == ‘ಶೇವಧಿ’ ಕೋಟ 

ಶ್ರೀ ಸೌಕೂರು ಮೇಳ == ಹೊಸೂರು ಕದಳಿ ಕೆಳಾಅರೆಕಲ್ಲು – ಪುಷ್ಪ ಚಂದನ, ರತ್ನಾವತಿ ಕಲ್ಯಾಣ 

ಶ್ರೀ ಹಾಲಾಡಿ ಮೇಳ == ರತ್ನಗಿರಿ ನರಸಿಂಹ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  == ಬಜಾಲ್ – ನಾಗರಪಂಚಮಿ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಪೆರ್ಡೂರು – ಪಾಪಣ್ಣ ವಿಜಯ, ಗುಣಸುಂದರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ವಕ್ವಾಡಿ ಗೋಳಿಹಾಡಿ ಶ್ರೀ ನಂದಿಕೇಶ್ವರ- ಶ್ರೀ ಪಂಜುರ್ಲಿ ದೈವಸ್ಥಾನದ ಬಳಿ – ನೂತನ ಪ್ರಸಂಗ 

ಶ್ರೀ ಹಿರಿಯಡಕ ಮೇಳ == ನಾಯಕವಾಡಿ, ಗುಜ್ಜಾಡಿ ಮಾತೃನಿಲಯ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಚಿತ್ತೇರಿ ಮಹಾಗಣಪತಿ ದೇವಸ್ಥಾನ, ಯಡೂರು, ಅಜ್ರಿ 

ಶ್ರೀ ಸಿಗಂದೂರು ಮೇಳ == ಬೈಂದೂರು ಯೋಜನಾನಗರ 

ಶ್ರೀ ನೀಲಾವರ ಮೇಳ  == ಶ್ರೀ ಜಟ್ಟಿಗೇಶ್ವರ ಸಪರಿವಾರ ದೇವಸ್ಥಾನ, ಶ್ರೀ ಕ್ಷೇತ್ರ ಹೊನ್ನೆಕಳಿ, ಕಂಬದಕೋಣೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಬುಕ್ಕಿಹೊಳೆ 

ಶ್ರೀ ಮೇಗರವಳ್ಳಿ ಮೇಳ ==  ಆಂದಿನಿ ಶ್ರೀ ರಕ್ತೇಶ್ವರಿ ದೇವಸ್ಥಾನ – ರಕ್ತೇಶ್ವರಿ ಕ್ಷೇತ್ರ ಮಹಾತ್ಮೆ 

ಬಿ.ಸಿ. ರೋಡಿನಲ್ಲಿ ನಡೆದ ‘ಶ್ರೀಕೃಷ್ಣ ತುಲಾಭಾರ’ ಯಕ್ಷಗಾನದ ಭಾಗ – 5, ವೀಡಿಯೊ (ಹನುಮಗಿರಿ ಮೇಳ)

ಬಿ.ಸಿ. ರೋಡ್  ಹೋಟೆಲ್ ರಂಗೋಲಿ ಆವರಣದಲ್ಲಿ  ಹನುಮಗಿರಿ ಮೇಳದವರಿಂದ ಪ್ರದರ್ಶಿತವಾದ ‘ಶ್ರೀಕೃಷ್ಣ ತುಲಾಭಾರ’ ಯಕ್ಷಗಾನದ ಭಾಗ – 5, (ಹೋಟೆಲ್ ರಂಗೋಲಿಯ ಹೊರಾಂಗಣ, ಬಿ.ಸಿ. ರೋಡ್ – ಶ್ರೀಕೃಷ್ಣ ತುಲಾಭಾರ, ಶೂರ್ಪನಖ ವಿವಾಹ, ಅಹಿರಾವಣ ಮಹಿರಾವಣ)

ಭಾಗವತರು:ಶ್ರೀ ಚಿನ್ಮಯ ಕಲ್ಲಡ್ಕ ಚೆಂಡೆ:ಶ್ರೀ ಚೈತನ್ಯಕೃಷ್ಣ ಪದ್ಯಾಣ ಮದ್ದಳೆ:ಶ್ರೀ ಶ್ರೀಧರ ವಿಟ್ಲ,

ಚಕ್ರತಾಳ:ಶ್ರೀ ವಸಂತ ಪ್ರಸಂಗ:ಶ್ರೀಕೃಷ್ಣ ತುಲಾಭಾರ – ಶೂರ್ಪನಖ ವಿವಾಹ – ಅಹಿರಾವಣ, ಮಹಿರಾವಣ

ಶ್ರೀಕೃಷ್ಣ : ಶ್ರೀ ವಾಸುದೇವ ರಂಗಾ ಭಟ್ ಸತ್ಯಭಾಮೆ : ಶ್ರೀ ಸಂತೋಷ್ ಕುಮಾರ್ ಹಿಲಿಯಾಣ ದೇವೇಂದ್ರ: ಶ್ರೀ ಪ್ರಸಾದ್ ಸವಣೂರು.

ಇಂದು ಪುತ್ತೂರು ಸಮೀಪದ  ಇರ್ದೆ ಉಪ್ಪಳಿಗೆಯಲ್ಲಿ ಕಟೀಲು ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಆಟ 

ಶ್ರೀ ವಿಷ್ಣುಮೂರ್ತಿ ಬಯಲಾಟ ಸೇವಾ ಸಮಿತಿ ಆಯೋಜಿಸುತ್ತಿರುವ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಪುತ್ತೂರು ಸಮೀಪದ ಇರ್ದೆ ಉಪ್ಪಳಿಗೆಯಲ್ಲಿ ಇಂದು ರಾತ್ರಿ 9.30ಕ್ಕೆ ಸರಿಯಾಗಿ ನಡೆಯಲಿದೆ.

ಕಟೀಲು ಮೂರನೆಯ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ.

ಕಳೆದ ಕೆಲವು ವರ್ಷಗಳಿಂದ ಶ್ರೀ ವಿಷ್ಣುಮೂರ್ತಿ ಬಯಲಾಟ ಸೇವಾ ಸಮಿತಿಯು ಕಟೀಲು ಮೇಳದ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುತ್ತಿದೆ. 

ಪುತ್ತೂರು ಸಮೀಪದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇಂದು (15.01.2021) ದೈವಗಳ ಕೋಲ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ 

ಸಾಂದರ್ಭಿಕ ಚಿತ್ರ 

ಪುತ್ತೂರು ಸಮೀಪದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇಂದು (15.01.2021) ದೈವಗಳ ಕೋಲ ಜರಗಲಿರುವುದು.

ಸಂಧ್ಯಾ ಕಾಲಕ್ಕೆ ದೈವಗಳ ಭಂಡಾರ  ತೆಗೆಯುವ ವಿಧಿವಿಧಾನಗಳನ್ನು ಪೂರೈಸಿದ ನಂತರ ದೈವಗಳ ಕೋಲಕ್ಕೆ ಚಾಲನೆ ಸಿಗಲಿದೆ.

ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಭಜನಾ ಕಾರ್ಯಕ್ರಮದ ನಂತರ  ‘ಏಳು ಸತ್ಯೊಲು’  ಎಂಬ ತುಳು ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.

ರಾತ್ರಿ ದರ್ಶನ ಬಲಿ, ಬಟ್ಟಲು ಕಾಣಿಕೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಆ ಬಳಿಕ ಉಳ್ಳಾಕುಲು, ಹುಲಿಭೂತ, ಕೊಡಮಣಿತ್ತಾಯ, ಪಂಜುರ್ಲಿ ದೈವಗಳ ನೇಮ ನಡೆಯಲಿದೆ. 

ಇಂದು ಪುತ್ತೂರಿನ ಪಾಂಗ್ಲಾಯದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 25ನೆಯ ಪ್ರತಿಷ್ಠಾಪನಾ ವರ್ಧಂತ್ಯುತ್ಸವ – ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ

ಸಾಂದರ್ಭಿಕ ಚಿತ್ರ 

ಪುತ್ತೂರಿನ ಪಾಂಗ್ಲಾಯದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 25ನೆಯ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಇಂದು ನಡೆಯುತ್ತಿದೆ.

ಈ ವರ್ಧಂತ್ಯುತ್ಸವದ ಪ್ರಯುಕ್ತ ಇಂದು 15.02.2021ನೇ ಸೋಮವಾರ ಸಂಜೆ 6 ಘಂಟೆಯಿಂದ ದೀಪಾರಾಧನೆ, ರಂಗಪೂಜೆ ಮತ್ತು ಅಮ್ಮನವರ ದರ್ಶನ ಸೇವೆ ನಡೆಯಲಿದೆ.

ಇಂದು ರಾತ್ರಿ 7 ಘಂಟೆಗೆ ಭಂಡಾರ ತೆಗೆಯುವ ಕಾರ್ಯಕ್ರಮ ಜರಗಲಿರುವುದು. ರಾತ್ರಿ 10 ಘಂಟೆಗೆ ವರ್ಷಾವಧಿ ನಡೆಯುವ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ.