Saturday, August 29, 2026
Home Blog Page 350

‘ಶ್ರೀಕೃಷ್ಣ ತುಲಾಭಾರ’ ಯಕ್ಷಗಾನ ವೀಡಿಯೊದ ಭಾಗ – 4 (ಹನುಮಗಿರಿ ಮೇಳ)

ಬಿ.ಸಿ. ರೋಡ್  ಹೋಟೆಲ್ ರಂಗೋಲಿ ಆವರಣದಲ್ಲಿ  ಹನುಮಗಿರಿ ಮೇಳದವರಿಂದ ಪ್ರದರ್ಶಿತವಾದ ‘ಶ್ರೀಕೃಷ್ಣ ತುಲಾಭಾರ’ ಯಕ್ಷಗಾನದ ಭಾಗ – 4, (ಹೋಟೆಲ್ ರಂಗೋಲಿಯ ಹೊರಾಂಗಣ, ಬಿ.ಸಿ. ರೋಡ್ – ಶ್ರೀಕೃಷ್ಣ ತುಲಾಭಾರ, ಶೂರ್ಪನಖ ವಿವಾಹ, ಅಹಿರಾವಣ ಮಹಿರಾವಣ)

ಭಾಗವತರು:ಶ್ರೀ ಚಿನ್ಮಯ ಕಲ್ಲಡ್ಕ ಚೆಂಡೆ:ಶ್ರೀ ಚೈತನ್ಯಕೃಷ್ಣ ಪದ್ಯಾಣ ಮದ್ದಳೆ:ಶ್ರೀ ಶ್ರೀಧರ ವಿಟ್ಲ,

ಚಕ್ರತಾಳ:ಶ್ರೀ ವಸಂತ ಪ್ರಸಂಗ:ಶ್ರೀಕೃಷ್ಣ ತುಲಾಭಾರ – ಶೂರ್ಪನಖ ವಿವಾಹ – ಅಹಿರಾವಣ, ಮಹಿರಾವಣ

ಶ್ರೀಕೃಷ್ಣ : ಶ್ರೀ ವಾಸುದೇವ ರಂಗಾ ಭಟ್ ಸತ್ಯಭಾಮೆ : ಶ್ರೀ ಸಂತೋಷ್ ಕುಮಾರ್ ಹಿಲಿಯಾಣ ದೇವೇಂದ್ರ: ಶ್ರೀ ಪ್ರಸಾದ್ ಸವಣೂರು.

ಹನುಮಗಿರಿ ಮೇಳದವರ ‘ಶ್ರೀಕೃಷ್ಣ ತುಲಾಭಾರ’ ಯಕ್ಷಗಾನದ ಭಾಗ – 3 ವೀಡಿಯೊ 

ಬಿ.ಸಿ. ರೋಡ್  ಹೋಟೆಲ್ ರಂಗೋಲಿ ಆವರಣದಲ್ಲಿ  ಹನುಮಗಿರಿ ಮೇಳದವರಿಂದ ಪ್ರದರ್ಶಿತವಾದ ‘ಶ್ರೀಕೃಷ್ಣ ತುಲಾಭಾರ’ ಯಕ್ಷಗಾನದ ಭಾಗ – 3, (ಹೋಟೆಲ್ ರಂಗೋಲಿಯ ಹೊರಾಂಗಣ, ಬಿ.ಸಿ. ರೋಡ್ – ಶ್ರೀಕೃಷ್ಣ ತುಲಾಭಾರ, ಶೂರ್ಪನಖ ವಿವಾಹ, ಅಹಿರಾವಣ ಮಹಿರಾವಣ)

ಭಾಗವತರು:ಶ್ರೀ ಚಿನ್ಮಯ ಕಲ್ಲಡ್ಕ ಚೆಂಡೆ:ಶ್ರೀ ಚೈತನ್ಯಕೃಷ್ಣ ಪದ್ಯಾಣ ಮದ್ದಳೆ:ಶ್ರೀ ಶ್ರೀಧರ ವಿಟ್ಲ,

ಚಕ್ರತಾಳ:ಶ್ರೀ ವಸಂತ ಪ್ರಸಂಗ:ಶ್ರೀಕೃಷ್ಣ ತುಲಾಭಾರ – ಶೂರ್ಪನಖ ವಿವಾಹ – ಅಹಿರಾವಣ, ಮಹಿರಾವಣ

ಶ್ರೀಕೃಷ್ಣ : ಶ್ರೀ ವಾಸುದೇವ ರಂಗಾ ಭಟ್ ಸತ್ಯಭಾಮೆ : ಶ್ರೀ ಸಂತೋಷ್ ಕುಮಾರ್ ಹಿಲಿಯಾಣ   ದೇವೇಂದ್ರ: ಶ್ರೀ ಪ್ರಸಾದ್ ಸವಣೂರು.

ಮೇಳಗಳ ಇಂದಿನ (14.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (14.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಸಂಪೆಕಟ್ಟೆ ಶಾಲಾ ಮೈದಾನ  – ಮಾನಿಷಾದ, ಕುಶಲವ 

ಕಟೀಲು ಒಂದನೇ ಮೇಳ = ಕೊಳತ್ತಮಜಲು, ಬಡಗಬೆಳ್ಳೂರು, ಬಂಟ್ವಾಳ  

ಕಟೀಲು ಎರಡನೇ ಮೇಳ == ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರ  

ಕಟೀಲು ಮೂರನೇ ಮೇಳ= ನೇರಳಕಟ್ಟೆ ವಯಾ ಮಾಣಿ, ಬಂಟ್ವಾಳ 

ಕಟೀಲು ನಾಲ್ಕನೇ ಮೇಳ  == ತೋಟಮನೆ, ಪಾವಂಜೆ, ಹಳೆಯಂಗಡಿ 

ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ (1)

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ (2)

ಮಂದಾರ್ತಿ ಒಂದನೇ ಮೇಳ  ==  ದೀಪೋತ್ಸವ 

ಮಂದಾರ್ತಿ ಎರಡನೇ ಮೇಳ   ==   ದೀಪೋತ್ಸವ   

ಮಂದಾರ್ತಿ ಮೂರನೇ ಮೇಳ  ==  ದೀಪೋತ್ಸವ

ಮಂದಾರ್ತಿ ನಾಲ್ಕನೇ ಮೇಳ   ==  ದೀಪೋತ್ಸವ

ಮಂದಾರ್ತಿ    ಐದನೇ ಮೇಳ  ==  ದೀಪೋತ್ಸವ

ಶ್ರೀ ಹನುಮಗಿರಿ ಮೇಳ  ==  ಶ್ರೀ ಕಿರಾತೇಶ್ವರಸ್ವಾಮಿ ಮುಡಿಪಿನ್ನಾರ್ ದೈವಸ್ಥಾನ, ಮುಡಿಪು – ಶುಕ್ರನಂದನೆ (ಸಂಜೆ 5.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ಪೌರಾಣಿಕ ಪ್ರಸಂಗ 

ಶ್ರೀ ಪೆರ್ಡೂರು ಮೇಳ == ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಳ್ತೂರು – ಅಹಂ ಬ್ರಹ್ಮಾಸ್ಮಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನಾಯಿರಿಬೆಟ್ಟು ನಾಗೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==  ಆಶ್ರಿತ ಕೇಟರರ್ಸ್, ಹೊಯಿಗೆಗುಡ್ಡೆ ಪಡುಪಣಂಬೂರು -ಶ್ರೀ ದೇವಿ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ ==  ಬಲರಾಮ ದೇವಸ್ಥಾನ, ವಡಭಾಂಡೇಶ್ವರ – ದಿವ್ಯ ಸನ್ನಿಧಿ (ರಾತ್ರಿ 8ರಿಂದ)

ಕಮಲಶಿಲೆ ಮೇಳ ‘ಎ‘ = ಗಾಣದಜೆಡ್ಡು, ಉಳ್ಳೂರು – 74

ಕಮಲಶಿಲೆ ಮೇಳ ‘ಬಿ‘ == ಬಾಸ್ ಬೈಲು, ಬಿದ್ಕಲ್ ಕಟ್ಟೆ 

ಶ್ರೀ ಬಪ್ಪನಾಡು ಮೇಳ == ಕಮಲ ನಿವಾಸ, ಹರಿಯಪ್ಪ ಸಾಲ್ಯಾನ್ ಮನೆ ವಠಾರ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಧ್ವ (ಕಾರಿಂಜ) – ರಂಗಸ್ಥಳ (ರಾತ್ರಿ 9ರಿಂದ)

ಶ್ರೀ ಅಮೃತೇಶ್ವರೀ ಮೇಳ == ಚರ್ಚ್ ರೋಡ್, ಗಂಗೊಳ್ಳಿ 

ಶ್ರೀ ಬೋಳಂಬಳ್ಳಿ ಮೇಳ== ನೀರ್ಗದ್ದೆ, ಬೈಂದೂರು – ನಾಗ ಸುನೇತ್ರೆ (ರಾತ್ರಿ 8 ಘಂಟೆಗೆ 

ಶ್ರೀ ಸೌಕೂರು ಮೇಳ == ಕೆಂಚನೂರು ಸ್ವಾಮಿ ಮನೆ ವಠಾರ – ಸೌಕೂರು ಶ್ರೀ ದುರ್ಗಾಪರಮೇಶ್ವರಿ ಮಹಾತ್ಮೆ  

ಶ್ರೀ ಹಾಲಾಡಿ ಮೇಳ == ಹೊಸಮಕ್ಕಿ ಕಕ್ಕುಂಜೆ – ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ತ್ರಾಸಿ ಮೂವಾಡಿ ಚೌಡೇಶ್ವರಿ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ಆರ್ಡಿ ಬೆಣಗಲ್ ಬ್ರಹ್ಮಸ್ಥಾನ – ಶ್ರೀ ಮಹಾಶಕ್ತಿ ಮಂತ್ರದೇವತೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ – ನಾಗಮಂಡಲ (ಕಾಲಮಿತಿ ರಾತ್ರಿ 7ರಿಂದ)

ಶ್ರೀ ಹಿರಿಯಡಕ ಮೇಳ == ಕೊಕ್ರಾಡಿ ಶಾಲಾ ಬಳಿ (ಪೊನ್ನೆಜಾಲು) – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಕೆಳಸಂಕ, ಕೆರೆಗದ್ದೆ, ಅಮಾಸೆಬೈಲ್ 

ಶ್ರೀ ಸಿಗಂದೂರು ಮೇಳ == ಇಡೂರು ಮೇಲ್ ಬೆಣ್ಕಲ್ 

ಶ್ರೀ ನೀಲಾವರ ಮೇಳ  == ಮೊಳಹಳ್ಳಿ ಪಂಚಾಯತ್ ವಠಾರ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಗರ್ತಿಕೆರೆ 

ಶ್ರೀ ಮೇಗರವಳ್ಳಿ ಮೇಳ ==  ಗುಡ್ಡೆಕೊಪ್ಪ – ನಾಗಶ್ರೀ 

“ಪುರಂದರದಾಸರ ಕೃತಿಗಳಿಗೆ ಸಾರ್ವಕಾಲಿಕ ಮೌಲ್ಯವಿದೆ” – 13ನೇ ವರ್ಷದ ಶ್ರೀ ಪುರಂದರದಾಸರ ಆರಾಧನೋತ್ಸವದಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ 

ದಾಸವರೇಣ್ಯ ಶ್ರೀ ಪುರಂದರದಾಸರ ಕೀರ್ತನೆಗಳು ಧಾರ್ಮಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಕಾಲಿಕ ಮೌಲ್ಯ ಪಡೆದಿವೆ ಎಂದು ಎಡನೀರು ಶ್ರೀ ಮಠದ  ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ನುಡಿದರು.

ಪೂಜ್ಯ ಶ್ರೀಗಳವರು ದಿನಾಂಕ 11-02-2021 ನೇ ಗುರುವಾರದಂದು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ 13ನೇ ವರ್ಷದ ಶ್ರೀ ಪುರಂದರದಾಸರ ಆರಾಧನೋತ್ಸವದಲ್ಲಿ ಆಶೀರ್ವಚನ ನೀಡಿದರು. ಶ್ರೀ ಸುಬ್ರಾಯ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಮಧುಸೂದನ ಪುಣಿಂಚಿತ್ತಾಯ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಪುರಂದರದಾಸರ ಆರಾಧನೆಯನ್ನು ಆಸ್ತಿಕ ಶ್ರದ್ಧಾಳುಗಳ ಉಪಸ್ಥಿತಿಯಲ್ಲಿ ಕಳೆದ ಸುಮಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಭಜನಾ ಗುರು, ಸಂಕೀರ್ತನಾ ಸಾಧಕರೂ ಆದ ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಅವರ ಕೆಲಸ ಕಾರ್ಯಗಳನ್ನು ಶ್ರೀಗಳು ಮುಕ್ತಕಂಠದಿಂದ ಶ್ಲಾಘಿಸಿದರು.

ಧಾರ್ಮಿಕ ಕ್ಷೇತ್ರದ ಗಣ್ಯರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಬಳಿಕ ವೇದಿಕೆಯಲ್ಲಿ ಪೂಜ್ಯ ಶ್ರೀಗಳು ಬಂದ  ಭಜಕರಿಗೆ ಭಗವದ್ಭಕ್ತ ಸಮೂಹಕ್ಕೆ ಮಂತ್ರಾಕ್ಷತೆ ನೀಡಿ  ಹರಸಿ ಆಶೀರ್ವಚನವನ್ನಿತ್ತರು.
13ನೇ ವರ್ಷದ ‘ಶ್ರೀ ಪುರಂದರದಾಸರ ಆರಾಧನಾ ಉತ್ಸವ’ ಹಾಗೂ ಲೋಕ ಕಲ್ಯಾಣಾರ್ಥವಾಗಿ ನಡೆದ ‘ಶ್ರೀ ಮದ್ಭಾಗವತ ಸಪ್ತಾಹ’ದ ಶುಭ ಸಮಯದಲ್ಲಿ ಮೊದಲಿಗೆ ಕಾರ್ಯಕ್ರಮದ ಯಶಸ್ಸಿಗೆ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಲಾಯಿತು.

ತದನಂತರ  ಶ್ರೀ ಪುರಂದರ ದಾಸರ ವೇದಿಕೆಯ ಮುಂಭಾಗ  ಪ್ರಧಾನ ಅರ್ಚಕರು, ವೇದಮೂರ್ತಿ ಬ್ರಹ್ಮ ಶ್ರೀ ರಾಮಭಟ್ ನೀರ್ಚಾಲು – ಕಾಟುಕುಕ್ಕೆ , ಭಜನಾ ಗುರುಗಳು, ಹಾಗೂ ಪ್ರಮುಖರಿಂದ  ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ದಾಸ ವೇದಿಕೆಯಲ್ಲಿ  ನೂತನ ಭಜನಾ ಮಂಡಳಿ ಅವರಿಗೆ ದಾಸರ ಕೀರ್ತನೆಗಳನ್ನು  ಹಾಡುವ ಅವಕಾಶ ಕಲ್ಪಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀಗಳಿಂದ ನೃತ್ಯ ಗುರು ಭಜನಾಕರ ಶ್ರೀ ರಮೇಶ್ ಕಲ್ಮಾಡಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. 

ವೇದಿಕೆಯಲ್ಲಿದ್ದ ಗಣ್ಯರು ದಾಸರ ಆರಾದನೆ ಹಾಗೂ ಶ್ರೀ ಮದ್ಭಾಗವತ  ಪ್ರವಚನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ನಂತರ ಭಜನಾ ಗುರುಗಳಿಂದ ದಾಸ ಶ್ರೇಷ್ಠರ ಸಮೂಹ ಗಾಯನವೂ ನಡೆಯಿತು.

ಆ ನಂತರ ರಾಜ್ಯ ಮಟ್ಟದ ವಿಜೇತ ತಂಡ, ಕುಂದಾಪುರದ ಕುಣಿತ ಭಜನಾ ತಂಡದವರಿಂದ ಹೊಸಬಗೆಯ ಕುಣಿತ  ಭಜನೆಯ ಪ್ರಾತ್ಯಕ್ಷಿಕೆಯನ್ನು  ಕಣ್ತುಂಬಿಕೊಂಡೆವು.  ಭೋಜನದ ವಿರಾಮದ ನಂತರ  ವೇದಮೂರ್ತಿ ಬ್ರಹ್ಮ ಶ್ರೀ ರಾಮ ಭಟ್ಟ ಅವರಿಂದ ಭಾಗವತ  ಪಾರಾಯಣ ಪ್ರವಚನದ ಕೊನೆಯ ದಿನದ ಪ್ರವಚನ ನಡೆಯಿತು. 

ಮೇಳಗಳ ಇಂದಿನ (13.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (13.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮಾರಣಕಟ್ಟೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ = ಕೋಡಿಕಲ್ಲು, ಮಂಗಳೂರು 

ಕಟೀಲು ಎರಡನೇ ಮೇಳ == ವಾಮಂಜೂರು, ಪರಾರಿ 

ಕಟೀಲು ಮೂರನೇ ಮೇಳ= ಬಡಕ್ ಬೈಲು, ವಯಾ ಪೊಳಲಿ 

ಕಟೀಲು ನಾಲ್ಕನೇ ಮೇಳ  == ಕುಂಜತ್ ಬೈಲು, ಮಂಗಳೂರು 

ಕಟೀಲು ಐದನೇ ಮೇಳ == ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರದಲ್ಲಿ 

ಮಂದಾರ್ತಿ ಒಂದನೇ ಮೇಳ  ==  ರಥೋತ್ಸವ 

ಮಂದಾರ್ತಿ ಎರಡನೇ ಮೇಳ   ==  ರಥೋತ್ಸವ 

ಮಂದಾರ್ತಿ ಮೂರನೇ ಮೇಳ  ==  ರಥೋತ್ಸವ 

ಮಂದಾರ್ತಿ ನಾಲ್ಕನೇ ಮೇಳ   ==  ರಥೋತ್ಸವ 

ಮಂದಾರ್ತಿ ಐದನೇ ಮೇಳ  ==  ರಥೋತ್ಸವ 

ಶ್ರೀ ಹನುಮಗಿರಿ ಮೇಳ  ==  ಕಟ್ಟಣಿಗೆ ಶ್ರೀ ಅಶ್ವಥನಾರಾಯಣಕಟ್ಟೆ, ಇರುವೈಲು – ಶ್ರೀ ಶನೀಶ್ವರ ಮಹಾತ್ಮೆ (ರಾತ್ರಿ 8ರಿಂದ)

ಶ್ರೀ ಸಾಲಿಗ್ರಾಮ ಮೇಳ == ಹಿರೇಬಂಡಾಡಿ ಶಾಖೆಪುರ ಮೈದಾನ – ಭೀಷ್ಮ ವಿಜಯ, ಶ್ರೀನಿವಾಸ ಕಲ್ಯಾಣ 

ಶ್ರೀ ಪೆರ್ಡೂರು ಮೇಳ == ಗಜಾನನ ಕ್ಯಾಶ್ಯೂಸ್ ಇಂಡಸ್ಟ್ರೀಸ್ ಮುಂಭಾಗ, ಬೆಳ್ವೆ – ರಾಮ ರಾಘವ ರಘುರಾಮ 

ಶ್ರೀ ದೇಂತಡ್ಕ ಮೇಳ == ಮಾಡತ್ತಡ್ಕ – ಚತುರ್ಜನ್ಮ

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಯಡೇರಿ, ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಮಂಡಕಟ್ಟು, ತೊಪ್ಲು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕೊಡೆಪಾಲ್, ಹಾಡಿಮನೆ, ಜಡ್ಕಲ್ 

ಶ್ರೀ ಪಾವಂಜೆ ಮೇಳ  ==  ಜಪ್ಪು ಮಜಿಲ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ, ಇಂದಿರಾನಗರ, ವಾರಂಬಳ್ಳಿ – ಬ್ರಹ್ಮಕಪಾಲ ಮತ್ತು ಚಂದ್ರಾವಳಿ ವಿಲಾಸ (ಕಾಲಮಿತಿ ರಾತ್ರಿ 7.30ರಿಂದ)

ಕಮಲಶಿಲೆ ಮೇಳ ‘ಎ‘ = ಎಳೇರಿ 

ಕಮಲಶಿಲೆ ಮೇಳ ‘ಬಿ‘ == ಜಂಪದ ಕುವೇರಿ, ಕೊಳಗೀರಿ 

ಶ್ರೀ ಬಪ್ಪನಾಡು ಮೇಳ == ಕೋಡಿಕೆರೆ ಮೈದಾನ – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಕಿನ್ನಿಬೆಟ್ಟು – ಕಂಚೀಲ್ದ ಪರಕೆ 

ಶ್ರೀ ಅಮೃತೇಶ್ವರೀ ಮೇಳ == ಕುಂಜಿಗುಡಿ, ಕಾರ್ಕಡ 

ಶ್ರೀ ಬೋಳಂಬಳ್ಳಿ ಮೇಳ== ಜೈನ ಜಟ್ಟಿಗೇಶ್ವರ, ಅಡಿಗದ್ದೆ, ಬಾಡ, ಬೈಂದೂರು 

ಶ್ರೀ ಸೌಕೂರು ಮೇಳ == ಜಪ್ತಿ ಕೈಲ್ ಕೆರೆ ವಜ್ರವರ್ಣ ನಿಲಯ – ಅಭಿಮನ್ಯು, ರುದ್ರಕೋಪ  

ಶ್ರೀ ಹಾಲಾಡಿ ಮೇಳ == ಶ್ರೀ ಮಾರಿಕಾಂಬಾ ಮತ್ತು ನಂದಿಕೇಶ್ವರ ಸಹಪರಿವಾರ ದೇವಸ್ಥಾನ ಸಬ್ಲಾಡಿ – ಅಬ್ಬರದ ಬೊಬ್ಬರ್ಯೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ಓಂತಿಬೆಟ್ಟು ಬಸ್ ಸ್ಟಾಂಡ್ ಬಳಿ – ಮಹಿಮೆದ ಮಂತ್ರದೇವತೆ

ಶ್ರೀ ಮಡಾಮಕ್ಕಿ ಮೇಳ == ಕುಕ್ಕುಡೆ, ಕೀರ್ತಿನಗರ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಸ್ರೂರು ಆನಗಳ್ಳಿ ರಸ್ತೆ, ರೈಲ್ವೆ ಬ್ರಿಜ್ ಬಳಿ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಮಂಗಳತೇರು ಶ್ರೀ ದೇವಿ ಮಹಾಮಾಯಿ ಕ್ಷೇತ್ರ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಮೂಡುವಾಯಿನ ಮನೆ, ಹಡವು, ಪಡುಕೋಣೆ – ಶ್ರೀ ಶನೀಶ್ವರ ಕ್ಷೇತ್ರ ಮಹಾತ್ಮೆ 

ಶ್ರೀ ಸಿಗಂದೂರು ಮೇಳ == ಕೋಡಿ (ಕುಂದಾಪುರ)

ಶ್ರೀ ನೀಲಾವರ ಮೇಳ  == ನೀಲಾವರ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಸಾಗರ ತಾಲೂಕು ಅಡ್ದೇರಿ 

ಶ್ರೀ ಮೇಗರವಳ್ಳಿ ಮೇಳ ==  ತೀರ್ಥಹಳ್ಳಿ ಚಿತ್ರನಗದ್ದೆ – ಮಧುರ ಮನಸ್ವಿ 

ಯಕ್ಷಗಾನದ ಮಹತ್ ಗ್ರಂಥಗಳಲ್ಲಿ ಸ್ವಾರಸ್ಯಕರವಾದ ವಿಚಾರಗಳು – ತಾಳಮದ್ದಳೆ ಮೊದಲೋ ಬಯಲಾಟ ಮೊದಲೋ? (ಡಾ. ಪಾದೇಕಲ್ಲು ವಿಷ್ಣು ಭಟ್ಟರ ‘ಯಕ್ಷಗಾನಾಧ್ಯಯನ’ದಿಂದ)

“ತಾಳಮದ್ದಳೆಯೆಂಬುದು ಬಯಲಾಟದ ಇನ್ನೊಂದು ರೂಪ. ಬಯಲಾಟದಿಂದ ಆಹಾರ್ಯವನ್ನೂ ನೃತ್ಯವನ್ನೂ ಕಳೆದುಳಿದ ಸ್ವರೂಪವೇ ತಾಳಮದ್ದಳೆ. ತಾಳಮದ್ದಳೆ ಮೊದಲು ಹುಟ್ಟಿಕೊಂಡಿತೋ ಬಯಲಾಟ ಮೊದಲು ಹುಟ್ಟಿಕೊಂಡಿತೋ ಎಂಬ ಬಗ್ಗೆ ವಿದ್ವಾಂಸರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.

ಈಗ ನಮಗೆ ಯಾವುದೋ ಒಂದು ರೂಪದಲ್ಲಿ ಕಾಣಸಿಕ್ಕುವ ಜನಪದ ಕಲೆಗಳ ಆದಿರೂಪ ಮತ್ತು ಉಗಮಕಾಲವನ್ನು ಖಚಿತವಾಗಿ ಕಂಡುಕೊಳ್ಳುವುದು ಸಾಧ್ಯವಾಗದ ಸಂಗತಿ. ಒಂದು ಕಲಾರೂಪದಿಂದ ಇನ್ನೊಂದು ಕಲಾರೂಪವು ಹುಟ್ಟಿಕೊಂಡಿತೆಂದು ಭಾವಿಸುವುದು ಅಸಾಧ್ಯವಲ್ಲವಾದರೂ ಯಕ್ಷಗಾನದ ಸಂದರ್ಭದಲ್ಲಿ ಬಯಲಾಟ ಮತ್ತು ತಾಳಮದ್ದಳೆ ಎರಡೂ ಪರಂಪರಾಗತವಾಗಿ ಉಳಿದುಕೊಂಡು ಬಂದಿವೆಯೆಂಬುದರಿಂದ ಎರಡೂ ಬೇರೆಬೇರೆಯಾಗಿಯೇ ಗೌರವಿಸಲ್ಪಡುವ ಅಥವಾ ಗುರುತಿಸಲ್ಪಡುವ ಖಚಿತ ಕಲಾರೂಪಗಳೆಂಬುದನ್ನು ಹೇಳಲೇಬೇಕಾಗುತ್ತದೆ.

ಇವೆರಡರಲ್ಲಿ ಒಂದರಿಂದ ಇನ್ನೊಂದು ಹುಟ್ಟಿರಬಹುದಾದರೂ ಒಂದು ಇನ್ನೊಂದನ್ನು ಬದಿಗೆ ತಳ್ಳಿಲ್ಲ. ಹೇಗಿದ್ದರೂ ಬಯಲಾಟವು ಈ ಕಲೆಯ ಪರಿಪೂರ್ಣರೂಪ. ತಾಳಮದ್ದಳೆಯು ಆಂಶಿಕರೂಪವೇ ಆದರೂ ಬಯಲಾಟದಂತೆಯೇ ಇದೂ ಪರಿಣಾಮಕಾರಿಯಾದ ಕಲೆಯೇ ಆಗಿದೆ. ತನ್ನದೇ ಆದ ಒಂದು ಸ್ವಸಂಪೂರ್ಣಸ್ವರೂಪ ಇದಕ್ಕಿದೆ. (ಡಾ. ಪಾದೇಕಲ್ಲು ವಿಷ್ಣು ಭಟ್ಟರ ‘ಯಕ್ಷಗಾನಾಧ್ಯಯನ’ ಗ್ರಂಥದ ೭೯ನೇ ಪುಟದಲ್ಲಿ)

ಮೃದು ಮನಸಿನ ಮೃದಂಗ ವಾದಕ ದಿ| ಶ್ರೀ ಎಂ. ಪ್ರಭಾಕರ ಗೋರೆ

ಯಕ್ಷಗಾನ ಕಲೆಯ ಹಿಮ್ಮೇಳ ಎಂಬ ವಿಭಾಗದಲ್ಲಿ ‘ಮದ್ದಳೆಗಾರ’ ಎಂಬ ಸ್ಥಾನವು ಶ್ರೇಷ್ಠವಾದುದು. ಭಾಗವತರ ಜತೆಗೂಡಿ ಪ್ರದರ್ಶನ ಗೆಲುವಿಗೆ ಮದ್ದಳೆಗಾರರು ಕಾರಣರಾಗುತ್ತಾರೆ. ಭಾಗವತನು ಅನನುಭವಿಯಾಗಿದ್ದರೂ ಮದ್ದಳೆಗಾರನು ಅನುಭವಿಯಾಗಿದ್ದರೆ ಪ್ರದರ್ಶನವು ಸೋಲದೆ ಯಶಸ್ವಿಯಾಗುವುದನ್ನು ನಾವು ಕಾಣುತ್ತೇವೆ.

ತನ್ನ ವಾದನದಲ್ಲಿ ಭಾಗವತರ ಹಾಡುಗಳನ್ನು ಅನುಸರಿಸುತ್ತಾ ಜತೆಗೆ ವೇಷಧಾರಿಗಳಿಗೆ ಉತ್ಸಾಹ ತುಂಬುತ್ತಾ ಮದ್ದಳೆಗಾರರು ಪ್ರದರ್ಶನದ ಗೆಲುವಿಗೆ ಕಾರಣರಾಗುತ್ತಾರೆ. ಪ್ರಸಂಗ ಮಾಹಿತಿ, ನಡೆ, ವೇಷಗಳ ಸ್ವಭಾವ, ಅದನ್ನರಿತು ವಾದ್ಯಗಳನ್ನು ನುಡಿಸುವ ಕಲೆಗಳನ್ನು ತಿಳಿದ ಮದ್ದಳೆಗಾರರು ಯಶಸ್ವೀ ಪ್ರದರ್ಶನಗಳಿಗೆ ತಮ್ಮ ಕೊಡುಗೆಗಳನ್ನು ನೀಡುತ್ತಾರೆ. ಖಂಡಿತವಾಗಿಯೂ ಕಲಾಭಿಮಾನಿಗಳು ಈ ಮದ್ದಳೆಗಾರ ಎಂಬ ಸ್ಥಾನವನ್ನು ಗುರುತಿಸುತ್ತಾರೆ. ಗೌರವಿಸುತ್ತಾರೆ.

ಯಕ್ಷಗಾನದಲ್ಲಿ ಚೆಂಡೆ ಮದ್ದಲೆಗಳನ್ನು ನುಡಿಸುವ ಕಲಾವಿದರನ್ನು ‘ಮದ್ದಳೆಗಾರರು’ ಎಂದು ಕರೆಯುತ್ತಾರೆ. ಸ್ಥಾನಕ್ಕೆ ಸಂಬಂಧಿಸಿ ಗೌರವದ ಸಂಭೋದನೆ ಇದು. ಎಲ್ಲಾ ಹಾಡುಗಳಿಗೂ ಮದ್ದಳೆ ಎಂಬ ವಾದ್ಯೋಪಕರಣವು ಬೇಕೇ ಬೇಕು. ಆದರೆ ಚೆಂಡೆಯು ಹಾಗಲ್ಲ. “ಒಡ್ಡೋಲಗದ ಪದ್ಯಗಳಲ್ಲಿ, ಯುದ್ಧದ ಸಂದರ್ಭಗಳಲ್ಲಿ, ಭಾಗವತರು ಏರು ಪದ್ಯಗಳನ್ನು ಎತ್ತಿಕೊಂಡಾಗ  ಬಾರಿಸಬೇಕು.  ಸಂದರ್ಭಗಳಲ್ಲಿ ಚೆಂಡೆಯನ್ನು ಬದಿಗೆ ಇರಿಸಲಾಗುತ್ತದೆ”. ಇದು ಖ್ಯಾತ ಮದ್ದಳೆಗಾರ, ಗುರು ಶ್ರೀ ಬಿ. ಗೋಪಾಲಕೃಷ್ಣ ಕುರುಪ್ ಅವರ ಮಾತುಗಳು. (ಚೆಂಡೆ ಮದ್ದಲೆಗಳ ನಡುವೆ ಎಂಬ ತನ್ನ ಆತ್ಮಕಥನದಲ್ಲಿ) ಎಲ್ಲೆಂದರಲ್ಲಿ ಚೆಂಡೆ ಬಾರಿಸಬಾರದು ಎಂಬ ಧ್ವನಿಯು ಶ್ರೀ ಗೋಪಾಲಕೃಷ್ಣ ಕುರುಪ್ ಅವರ ಮಾತುಗಳಲ್ಲಿ ಅಡಗಿದೆ.

ಮದ್ದಳೆ ಎಂಬ ವಾದ್ಯವು ಹಾಗಲ್ಲ. ಅದು ಪ್ರದರ್ಶನದುದ್ದಕ್ಕೂ, ಆರಂಭದಿಂದ ಮಂಗಲದ ತನಕ ಇರುತ್ತದೆ. ಹೀಗೆ ಯಕ್ಷಗಾನ ಕ್ಷೇತ್ರದಲ್ಲಿ ಮದ್ದಳೆಗಾರರಾಗಿ ಕಲಾಸೇವೆಯನ್ನು ಮಾಡಿ ಖ್ಯಾತರಾದವರು ಅನೇಕ ಕಲಾವಿದರು.  ದಿ|  ಎಂ. ಪ್ರಭಾಕರ ಗೋರೆ ಅವರಲ್ಲೊಬ್ಬರು. ತೆಂಕುತಿಟ್ಟಿನ ಪ್ರಸಿದ್ದ ಮೃದಂಗವಾದಕರಾಗಿದ್ದ ಶ್ರೀ ಎಂ. ಪ್ರಭಾಕರ ಗೋರೆ ಅವರದ್ದು ಸುಮಾರು ಮೂವತ್ತೆರಡು ವರ್ಷಗಳ ಕಲಾಸೇವೆ.

ಅವರ ಹುಟ್ಟೂರು ಕಾರ್ಕಳ ತಾಲೂಕಿನ ಬಜಗೋಳಿಯ ಸಮೀಪದ ಮಲೆಬೆಟ್ಟು ಎಂಬಲ್ಲಿ. ಶ್ರೀ ಶಂಕರ ಗೋರೆ ಮತ್ತು ಶ್ರೀಮತಿ ಉಮಾ ಗೋರೆ ದಂಪತಿಗಳ ಪುತ್ರನಾಗಿ 1959ನೇ  ನವೆಂಬರ್ 4ರಂದು ಜನನ. ಬಾಲ್ಯದಲ್ಲಿ ಯಕ್ಷಗಾನಾಸಕ್ತರಾಗಿದ್ದರು. ಪರಿಸರಿದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ಇವರ ಮನೆತನದ ಹಿರಿಯರಾಗಿದ್ದ ಶ್ರೀ ಅಗಳಿ ಕೃಷ್ಣ ಹೆಬ್ಬಾರರು ಭಾಗವತರಾಗಿದ್ದರು. ಮನೆಯವರೆಲ್ಲರೂ ಕಲಾಸಕ್ತರಾಗಿದ್ದರು. ಹಾಗಾಗಿ ಪ್ರಭಾಕರ ಗೋರೆ ಅವರಿಗೆ ಕಲಾಸಕ್ತಿಯು ರಕ್ತಗತವಾಗಿತ್ತು.

ಓದಿದ್ದು ಪಿಯುಸಿ ವರೆಗೆ. ಹತ್ತನೇ ತರಗತಿ ವರೆಗೆ ಮಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ಶಾಲೆಯಲ್ಲಿ. ಪಿಯುಸಿ ವಿದ್ಯಾರ್ಜನೆ ಉಜಿರೆ ಕಾಲೇಜಿನಲ್ಲಿ. ಉಜಿರೆ ಕಾಲೇಜಿನ ವಿದ್ಯಾರ್ಥಿಯಾಗಿರುವಾಗ ತಬಲಾ ವಾದನ ಕ್ರಮವನ್ನು ಕಲಿತಿದ್ದರು. ಅಲ್ಲದೆ ರಜಾದಿನಗಳಲ್ಲಿ ಶ್ರೀ ನಾರಾಯಣ ಭಿಡೆ ಅವರಿಂದ ಯಕ್ಷಗಾನ ಮದ್ದಳೆ ವಾದನವನ್ನು ಕಲಿಯುತ್ತಿದ್ದರು. ಊರ, ಪರವೂರ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಅನುಭವಗಳನ್ನು ಪಡೆದುಕೊಂಡರು.

ಮೃದಂಗ ಮತ್ತು ತಬಲಾ ಎರಡರಲ್ಲೂ ನುರಿತವರಾಗಿ ಶಾಸ್ತ್ರೀಯ ಸಂಗೀತಗಾರಿಕೆಗೂ ಮೃದಂಗ ನುಡಿಸಬಲ್ಲವರಾಗಿದ್ದರು. ಈ ಎಲ್ಲಾ ವಿಚಾರಗಳೂ ಮುಂದೆ ಮೇಳದ ತಿರುಗಾಟಕ್ಕೆ ಅನುಕೂಲವಾಗಿ ಪರಿಣಮಿಸಿತ್ತು. ಇವರು ಮೊದಲು ತಿರುಗಾಟ ನಡೆಸಿದ್ದು ಕರ್ನಾಟಕ ಮೇಳದಲ್ಲಿ. ಆಗ ಮದ್ದಳೆಗಾರರಾಗಿದ್ದವರು ಕಾಂಚನ ನಾರಾಯಣ ಭಟ್ಟರು. ದಾಮೋದರ ಮಂಡೆಚ್ಚರ ಮತ್ತು ದಿನೇಶ ಅಮ್ಮಣ್ಣಾಯರ ಭಾಗವತಿಕೆ. ಈ ಎಲ್ಲರ ಗರಡಿಯಲ್ಲಿ ಶ್ರೀ ಪ್ರಭಾಕರ ಗೋರೆ ಅವರು ಪಕ್ವರಾದವರು.

ಶ್ರೀ ದಾಮೋದರ ಮಂಡೆಚ್ಚರಿಗೆ ಅನೇಕ ವರ್ಷಗಳ ಕಾಲ ಮೃದಂಗವಾದನದಲ್ಲಿ ಸಾಥಿಯಾಗಿ ತಿರುಗಾಟ ನಡೆಸಿದ್ದರು. ಬಳಿಕ ಅನೇಕ ವರ್ಷಗಳ ಕಾಲ ಶ್ರೀ ದಿನೇಶ ಅಮ್ಮಣ್ಣಾಯರ ಜತೆ ವ್ಯವಸಾಯ. ಕರ್ನಾಟಕ ಮೇಳ ತಿರುಗಾಟ ನಿಲ್ಲಿಸಿದ ಬಳಿಕ ಎಡನೀರು, ಕಾಟಿಪಳ್ಳ ಮತ್ತು ಮಂಗಳಾದೇವಿ ಮೇಳದಲ್ಲೂ ವ್ಯವಸಾಯ ನಡೆಸಿದ್ದರು. ಕರ್ನಾಟಕ ಮೇಳದಲ್ಲಿ ಇವರು ಮೃದಂಗವಾದಕರಾಗಿ ಹೊಳೆದು ಕಾಣಿಸಿಕೊಂಡಿದ್ದರು.

ಶ್ರೀ ದಾಮೋದರ ಮಂಡೆಚ್ಚರು ಮತ್ತು ಶ್ರೀ ದಿನೇಶ ಅಮ್ಮಣ್ಣಾಯರ ಹಾಡುಗಳನ್ನು ಅನುಸರಿಸಿ ನುಡಿಸಾಣಿಕೆಯಲ್ಲಿ ತನ್ನ ಕೈಚಳಕವನ್ನು ತೋರುತ್ತಾ ಪ್ರದರ್ಶನಗಳ ಗೆಲುವಿಗೆ ಸಹಕಾರಿಯಾಗಿದ್ದರು. 1986ರಲ್ಲಿ ವಿವಾಹ. ಶ್ರೀ ಎಂ. ಪ್ರಭಾಕರ ಗೋರೆ ಅವರ ಪತ್ನಿ ಪ್ರತಿಭಾ ಗೋರೆ. ಶ್ರೀ ಎಂ. ಪ್ರಭಾಕರ ಗೋರೆ ಅವರು 1978ರಿಂದ ತೊಡಗಿ 2011ರ ವರೆಗೆ ವೃತ್ತಿ ಜೀವನದಲ್ಲಿ ಸಕ್ರಿಯರಾಗಿದ್ದರು. ಇವರು ಉತ್ತಮ ಕೃಷಿಕರೂ ಆಗಿದ್ದರು.

2011, ಮೇ 9ರಂದು ಉಡುಪಿಯ ಇಂದ್ರಾಳಿ ಎಂಬಲ್ಲಿ ನಡೆದ ರಸ್ತೆ ಅಫಘಾತದಲ್ಲಿ ಶ್ರೀ ಎಂ.ಪ್ರಭಾಕರ ಗೋರೆ ಅವರು ಕಲಾಭಿಮಾನಿಗಳನ್ನಗಲಿ ಕಲಾಮಾತೆಯ ಪಾದವನ್ನು ಸೇರಿಕೊಂಡಿದ್ದರು. ಸರಳ, ಸಜ್ಜನ, ಮೃದು ಮನಸಿನ ಮೃದಂಗವಾದಕರಾಗಿದ್ದ ಶ್ರೀಯುತರು ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಶ್ರೀ ಎಂ.ಪ್ರಭಾಕರ ಗೋರೆ ಮತ್ತು ಶ್ರೀಮತಿ ಪ್ರತಿಭಾ ಗೋರೆ ದಂಪತಿಗಳಿಗೆ ಈರ್ವರು ಪುತ್ರರು.

ಹಿರಿಯ ಪುತ್ರ ಶ್ರೀ ನಾಗರಾಜ್ ಗೋರೆ ಅವರು ಕೊಳಲು ವಾದನ, ತಬಲಾ ಕಲಿತು ನುಡಿಸುತ್ತಿದ್ದಾರೆ. ಕೇರಳದಲ್ಲಿ ಪೂಜಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರಿಯ ಪುತ್ರ ಶ್ರೀ ಪೃಥ್ವಿರಾಜ್ ಗೋರೆ ಕೃಷಿ ಮತ್ತು ಸ್ವಂತ ವ್ಯವಹಾರ ನಡೆಸುತ್ತಿದ್ದಾರೆ. ಯಕ್ಷಗಾನ ಮದ್ದಳೆ ವಾದನವನ್ನು ಕಲಿತಿರುತ್ತಾರೆ. ಶ್ರೀಮತಿ ಪ್ರತಿಭಾ ಪ್ರಭಾಕರ ಗೋರೆ  ಅವರು ಕಿರಿಯ ಪುತ್ರನೊಂದಿಗೆ ಕಾರ್ಕಳದ ಮಲೆಬೆಟ್ಟು ಮನೆಯಲ್ಲಿ ವಾಸಿಸುತ್ತಿದ್ದಾರೆ. 

ಲೇಖಕ: ರವಿಶಂಕರ್ ವಳಕ್ಕುಂಜ 

ಮೇಳಗಳ ಇಂದಿನ (12.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಗೋಳಿಹೊಳೆ ಮಾವಿನಮನೆ – ಶಬರಿಮಲೆ ಅಯ್ಯಪ್ಪ 

ಕಟೀಲು ಒಂದನೇ ಮೇಳ = ಮುರ, ಬಜಪೆ, ಮಂಗಳೂರು 

ಕಟೀಲು ಎರಡನೇ ಮೇಳ == ಕಟೀಲು ಕ್ಷೇತ್ರ (2)

ಕಟೀಲು ಮೂರನೇ ಮೇಳ=  ಭಂಡಸಾಲೆ, ಪೆರಾಡಿ 

ಕಟೀಲು ನಾಲ್ಕನೇ ಮೇಳ  == ಕಟೀಲು ಕ್ಷೇತ್ರ (1)

ಕಟೀಲು ಐದನೇ ಮೇಳ ==  ರಾಯಿ, ಕೊಯಿಲ, ಅರಳಕೊಯ್ಲು, ಬಂಟ್ವಾಳ 

ಕಟೀಲು ಆರನೇ ಮೇಳ == ಬೋರುಗುಡ್ಡೆ, ವಾಲ್ಪಾಡಿ ವಯಾ ಶಿರ್ತಾಡಿ 

ಮಂದಾರ್ತಿ ಆರು  ಮೇಳಗಳು   ==  ವಾರ್ಷಿಕ ಮಹೋತ್ಸವ , ಕುಂಭ ಸಂಕ್ರಮಣ 

ಶ್ರೀ ಹನುಮಗಿರಿ ಮೇಳ  ==  ಮುಚ್ಚೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಚಂದ್ರಾವಳಿ, ಮಾಯಾ ಮಾರುತೇಯ 

ಶ್ರೀ ಸುಂಕದಕಟ್ಟೆ ಮೇಳ  ==  ರಾಮಕುಂಜ ಉರ್ಕ ಪರಿಮಳ ನಿಲಯ – ಶ್ರೀ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮಾವಿನತೊಪ್ಲು, ಇಡೂರು ಕುಂಜ್ಞಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬೇಲೆಮನೆ, ಶಿರೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮೇಲ್ ಹೊಸಿಮನೆ, ಕೆರಾಡಿ 

ಶ್ರೀ ಪಾವಂಜೆ ಮೇಳ  ==  ಅಂಡಿಂಜೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ == ಮಾರ್ಗೋಳಿ ಬಸ್ರೂರು 

ಕಮಲಶಿಲೆ ಮೇಳ ‘ಎ‘ = ಉಪ್ಪಿನಕುದ್ರು 

ಕಮಲಶಿಲೆ ಮೇಳ ‘ಬಿ’ == ಆಚಾರ್ ಬೆಟ್ಟು ದೇವಸ್ಥಾನ, ದೊಡ್ಡೋಣಿ ರಸ್ತೆ, ಕೋಟೇಶ್ವರ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಿ.ಸಿ. ರೋಡ್ ಪದ್ಮ ಕಾಂಪ್ಲೆಕ್ಸ್ ಹಿಂದುಗಡೆ – ಶ್ರೀ ಭಗವತಿ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ == ಮಂಡಾಡಿ ಹುಣ್ಸೆಮಕ್ಕಿ  

ಶ್ರೀ ಸೌಕೂರು ಮೇಳ == ಬೇಳೂರು ಮಹಾಲಿಂಗೇಶ್ವರ ರಸ್ತೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಹೆರಂಜಾಲು – ವೀರ ಅಭಿಮನ್ಯು ಮತ್ತು ನೂತನ ಪ್ರಸಂಗ (ಕಾಲಮಿತಿ)

ಶ್ರೀ ಬೆಂಕಿನಾಥೇಶ್ವರ ಮೇಳ  == ಕೆಂಜೂರು ಗರಡಿ ಜಡ್ಡು ಬ್ರಹ್ಮಬೈದರ್ಕಳ ಗರಡಿ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಮುಟ್ಲುಪಾಡಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉದ್ಯಾವರ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ – ಮಾಯದ ಗೆಜ್ಜೆ  

ಶ್ರೀ ಹಿರಿಯಡಕ ಮೇಳ == ಸವಣಾಲ್ ಮಂಜರಬೆಟ್ಟು – ಮಾಯೊದ ಅಜ್ಜೆ (ತುಳು ಕಾಲಮಿತಿ)

ಶ್ರೀ ಶನೀಶ್ವರ ಮೇಳ == ಭಟ್ರಹಾಡಿ 

ಶ್ರೀ ಸಿಗಂದೂರು ಮೇಳ == ಬಾಂಡ್ಯಕುಕ್ಕೆ ಶಾಲಾ ಆವರಣ 

ಶ್ರೀ ನೀಲಾವರ ಮೇಳ  == ಬ್ರಹ್ಮಾವರ ಇಂದಿರಾನಗರ 

ಶ್ರೀ ಮಂಗಳಾದೇವಿ ಮೇಳ == ಅಸೈಗೋಳಿ ಶ್ರೀ ಕೊರಗ ತನಿಯ ಸನ್ನಿಧಾನ – ಸ್ವಾಮಿ ಕೊರಗಜ್ಜ ಮಹಾತ್ಮೆ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಮುಡುಬ 

ಶ್ರೀ ಮೇಗರವಳ್ಳಿ ಮೇಳ ==  ಹೆಬ್ರಿ – ಮಧುರ ಮನಸ್ವಿ 

ಖ್ಯಾತ ಯಕ್ಷಗಾನ ವೇಷಧಾರಿ, ನಿವೃತ್ತ ಉಪನ್ಯಾಸಕ ಶ್ರೀ ಕೆ.ವಿ.ಸುಬ್ರಾಯ ಅಸ್ತಂಗತ 

ಒಂದು ಕಾಲದಲ್ಲಿ ತೆಂಕುತಿಟ್ಟು ಯಕ್ಷಗಾನದ ಉತ್ತಮ ವೇಷಧಾರಿಯೆಂದು ಗುರುತಿಸಲ್ಪಟ್ಟಿದ್ದ ಹಾಗೂ ಅಳಿಕೆ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದ ಶ್ರೀ  ಕೆ.ವಿ.ಸುಬ್ರಾಯ, ಅಳಿಕೆ ಅವರು ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಈಚೆಗೆ ಕೆಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿದ್ದ  ಅವರು ಆಳಿಕೆಯ ತಮ್ಮ ಸ್ವಗೃಹದಲ್ಲಿ ತಮ್ಮ ಕೊನೆಯುಸಿರನ್ನೆಳೆದರು. 

ಕೆ.ವಿ. ಸುಬ್ರಾಯರು ತೆಂಕುತಿಟ್ಟಿನ ಉತ್ತಮ ವೇಷಧಾರಿಯಾಗಿ ಜನಪ್ರಿಯರಾದವರು. ಇವರ ಕಿರಿಯ ಸಹೋದರ ಶ್ರೀ ಕೆ.ವಿ ಗಣಪಯ್ಯ ಆಲಜೆ ಅವರು ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿಯಾಗಿದ್ದು ಈಗ ಕಲಾಕ್ಷೇತ್ರದಿಂದ ನಿವೃತ್ತಿಯಾಗಿದ್ದಾರೆ. ಅಣ್ಣ ತಮ್ಮಂದಿರಿಬ್ಬರೂ ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ವ್ಯವಸಾಯ ಮತ್ತು ಹೆಸರು ಮಾಡಿದವರು. ಕೆ.ವಿ ಸುಬ್ರಾಯರು ಪ್ರಬುದ್ಧ ವಯಸ್ಸಿಗೆ ಬಂದ ಮೇಲೆ ಪ್ರಖ್ಯಾತ ಯಕ್ಷಗಾನ ಕಲಾವಿದ, ವೇಷಧಾರಿ ಶ್ರೀ ಕದ್ರಿ ವಿಷ್ಣು ಅವರ ಪ್ರಭಾವಕ್ಕೆ ಒಳಗಾಗಿದ್ದರು.

ಅವರಿಂದ ಪ್ರಭಾವಿತರಾಗಿ ತಾನೂ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದ್ದರು. ವೃತ್ತಿರಂಗದಲ್ಲಿದ್ದುಕೊಂಡೇ ಅಂದರೆ ಕಾಲೇಜು ಉಪನ್ಯಾಸಕ ವೃತ್ತಿಯ ಜೊತೆಯಲ್ಲಿಯೇ ಒಳ್ಳೆಯ ಯಕ್ಷಗಾನದ ವೇಷಧಾರಿಯಾಗಿಯೂ ಪ್ರಸಿದ್ಧರಾದವರು. ಯಕ್ಷಗಾನದ ಮಾತೆತ್ತಿದಾಗಲೆಲ್ಲಾ ಕದ್ರಿ ವಿಷ್ಣು ಅವರ ಗುಣಗಾನ ಮಾಡುತ್ತಿದ್ದ ಕೆ.ವಿ.ಸುಬ್ರಾಯರು ಕದ್ರಿ ವಿಷ್ಣು ಅವರಿಂದ ಯಕ್ಷಗಾನದ ಸಾಕಷ್ಟು ಸೂಕ್ಷ್ಮ ವಿಷಯಗಳನ್ನು ಅರ್ಥ ಮಾಡಿ ಕಲಿತುಕೊಂಡವರು. ಕೆ.ವಿ.ಸುಬ್ರಾಯ ಅವರ ದೇವೇಂದ್ರ, ರಕ್ತಬೀಜ, ಇಂದ್ರಜಿತು, ಅರ್ಜುನ, ಅತಿಕಾಯ ಮೊದಲಾದ ಪಾತ್ರಗಳು ಪ್ರಸಿದ್ಧಿಯನ್ನು ಪಡೆದಿತ್ತು ಮತ್ತು ಇಂದಿಗೂ ಹಿರಿಯ ಪ್ರೇಕ್ಷಕರ ಮನಸ್ಸಿನಲ್ಲಿ ಹಸಿರಾಗಿ ಉಳಿದಿವೆ.

 

ಶ್ರೀ ಸುಬ್ರಾಯ ದೇವಸ್ಥಾನ, ಕಾಟುಕುಕ್ಕೆಯಲ್ಲಿ ಶ್ರೀ ಪುರಂದರದಾಸ ಆರಾಧನೋತ್ಸವದ ಪ್ರಯುಕ್ತ ಭಜನೆ

ಶ್ರೀ ಸುಬ್ರಾಯ ದೇವಸ್ಥಾನ, ಕಾಟುಕುಕ್ಕೆ ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ, ಕಾಟುಕುಕ್ಕೆ 5-2-2021ನೇ ಶುಕ್ರವಾರದಿಂದ ತೊಡಗಿ 11.02.2021 ವರೆಗೆ ನಡೆಯುತ್ತಿರುವ ವರ್ಷದ ಶ್ರೀ ಪುರಂದರದಾಸ ಆರಾಧನೋತ್ಸವದಲ್ಲಿ ಭಾಗವತ ಸಪ್ತಾಹದ ನಾಲ್ಕನೇ ದಿನ 8-2-2021ನೇ ಸೋಮವಾರ ‘ಶ್ರೀಮಾತಾ ಮಹಿಳಾ ಭಜನಾ ಮಂಡಳಿ’ ಬದಿಯಡ್ಕ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮುಂಜಾನೆ ಭಾಗವತ ಪೂಜೆಯ ಬಳಿಕ ಭಾಗವತ ಪಾರಾಯಣ ಪ್ರಾರಂಭ. ಅಪರಾಹ್ಣದ ಪ್ರವಚನದ ನಡುವಿನ ಬಿಡುವಿನಲ್ಲಿ ಭಜನಾ ಗುರುಗಳ ಜೊತೆಗೆ ಗೋವಿಂದಗಾನವೂ ನೆರವೇರಿತು. 4ನೇ ದಿನದ ಪ್ರವಚನದಲ್ಲಿ ಮನ್ವಂತರಗಳು, ಗಜೇಂದ್ರಮೋಕ್ಷ, ಸಮುದ್ರಮಥನ, ವಾಮನಾವತಾರ, ಭಕ್ತ ಅಂಬರೀಶ ಈ ಕಥಾಭಾಗಗಳ ಹೃದ್ಯ ನಿರೂಪಣೆ ನಡೆಯಿತು. ಸಂಜೆ ಕೀರ್ತನೆಗಳ ಗಾಯನದ ಬಳಿಕ ಮಂಗಳಾರತಿಯೊಂದಿಗೆ ದಿನದ ಕಾರ್ಯಕ್ರಮಗಳು ಸಂಪನ್ನಗೊಂಡವು.