Sunday, September 20, 2026
Home Blog Page 351

ಖ್ಯಾತ ಯಕ್ಷಗಾನ ವೇಷಧಾರಿ, ನಿವೃತ್ತ ಉಪನ್ಯಾಸಕ ಶ್ರೀ ಕೆ.ವಿ.ಸುಬ್ರಾಯ ಅಸ್ತಂಗತ 

ಒಂದು ಕಾಲದಲ್ಲಿ ತೆಂಕುತಿಟ್ಟು ಯಕ್ಷಗಾನದ ಉತ್ತಮ ವೇಷಧಾರಿಯೆಂದು ಗುರುತಿಸಲ್ಪಟ್ಟಿದ್ದ ಹಾಗೂ ಅಳಿಕೆ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದ ಶ್ರೀ  ಕೆ.ವಿ.ಸುಬ್ರಾಯ, ಅಳಿಕೆ ಅವರು ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಈಚೆಗೆ ಕೆಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿದ್ದ  ಅವರು ಆಳಿಕೆಯ ತಮ್ಮ ಸ್ವಗೃಹದಲ್ಲಿ ತಮ್ಮ ಕೊನೆಯುಸಿರನ್ನೆಳೆದರು. 

ಕೆ.ವಿ. ಸುಬ್ರಾಯರು ತೆಂಕುತಿಟ್ಟಿನ ಉತ್ತಮ ವೇಷಧಾರಿಯಾಗಿ ಜನಪ್ರಿಯರಾದವರು. ಇವರ ಕಿರಿಯ ಸಹೋದರ ಶ್ರೀ ಕೆ.ವಿ ಗಣಪಯ್ಯ ಆಲಜೆ ಅವರು ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿಯಾಗಿದ್ದು ಈಗ ಕಲಾಕ್ಷೇತ್ರದಿಂದ ನಿವೃತ್ತಿಯಾಗಿದ್ದಾರೆ. ಅಣ್ಣ ತಮ್ಮಂದಿರಿಬ್ಬರೂ ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ವ್ಯವಸಾಯ ಮತ್ತು ಹೆಸರು ಮಾಡಿದವರು. ಕೆ.ವಿ ಸುಬ್ರಾಯರು ಪ್ರಬುದ್ಧ ವಯಸ್ಸಿಗೆ ಬಂದ ಮೇಲೆ ಪ್ರಖ್ಯಾತ ಯಕ್ಷಗಾನ ಕಲಾವಿದ, ವೇಷಧಾರಿ ಶ್ರೀ ಕದ್ರಿ ವಿಷ್ಣು ಅವರ ಪ್ರಭಾವಕ್ಕೆ ಒಳಗಾಗಿದ್ದರು.

ಅವರಿಂದ ಪ್ರಭಾವಿತರಾಗಿ ತಾನೂ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದ್ದರು. ವೃತ್ತಿರಂಗದಲ್ಲಿದ್ದುಕೊಂಡೇ ಅಂದರೆ ಕಾಲೇಜು ಉಪನ್ಯಾಸಕ ವೃತ್ತಿಯ ಜೊತೆಯಲ್ಲಿಯೇ ಒಳ್ಳೆಯ ಯಕ್ಷಗಾನದ ವೇಷಧಾರಿಯಾಗಿಯೂ ಪ್ರಸಿದ್ಧರಾದವರು. ಯಕ್ಷಗಾನದ ಮಾತೆತ್ತಿದಾಗಲೆಲ್ಲಾ ಕದ್ರಿ ವಿಷ್ಣು ಅವರ ಗುಣಗಾನ ಮಾಡುತ್ತಿದ್ದ ಕೆ.ವಿ.ಸುಬ್ರಾಯರು ಕದ್ರಿ ವಿಷ್ಣು ಅವರಿಂದ ಯಕ್ಷಗಾನದ ಸಾಕಷ್ಟು ಸೂಕ್ಷ್ಮ ವಿಷಯಗಳನ್ನು ಅರ್ಥ ಮಾಡಿ ಕಲಿತುಕೊಂಡವರು. ಕೆ.ವಿ.ಸುಬ್ರಾಯ ಅವರ ದೇವೇಂದ್ರ, ರಕ್ತಬೀಜ, ಇಂದ್ರಜಿತು, ಅರ್ಜುನ, ಅತಿಕಾಯ ಮೊದಲಾದ ಪಾತ್ರಗಳು ಪ್ರಸಿದ್ಧಿಯನ್ನು ಪಡೆದಿತ್ತು ಮತ್ತು ಇಂದಿಗೂ ಹಿರಿಯ ಪ್ರೇಕ್ಷಕರ ಮನಸ್ಸಿನಲ್ಲಿ ಹಸಿರಾಗಿ ಉಳಿದಿವೆ.

 

ಶ್ರೀ ಸುಬ್ರಾಯ ದೇವಸ್ಥಾನ, ಕಾಟುಕುಕ್ಕೆಯಲ್ಲಿ ಶ್ರೀ ಪುರಂದರದಾಸ ಆರಾಧನೋತ್ಸವದ ಪ್ರಯುಕ್ತ ಭಜನೆ

ಶ್ರೀ ಸುಬ್ರಾಯ ದೇವಸ್ಥಾನ, ಕಾಟುಕುಕ್ಕೆ ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ, ಕಾಟುಕುಕ್ಕೆ 5-2-2021ನೇ ಶುಕ್ರವಾರದಿಂದ ತೊಡಗಿ 11.02.2021 ವರೆಗೆ ನಡೆಯುತ್ತಿರುವ ವರ್ಷದ ಶ್ರೀ ಪುರಂದರದಾಸ ಆರಾಧನೋತ್ಸವದಲ್ಲಿ ಭಾಗವತ ಸಪ್ತಾಹದ ನಾಲ್ಕನೇ ದಿನ 8-2-2021ನೇ ಸೋಮವಾರ ‘ಶ್ರೀಮಾತಾ ಮಹಿಳಾ ಭಜನಾ ಮಂಡಳಿ’ ಬದಿಯಡ್ಕ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮುಂಜಾನೆ ಭಾಗವತ ಪೂಜೆಯ ಬಳಿಕ ಭಾಗವತ ಪಾರಾಯಣ ಪ್ರಾರಂಭ. ಅಪರಾಹ್ಣದ ಪ್ರವಚನದ ನಡುವಿನ ಬಿಡುವಿನಲ್ಲಿ ಭಜನಾ ಗುರುಗಳ ಜೊತೆಗೆ ಗೋವಿಂದಗಾನವೂ ನೆರವೇರಿತು. 4ನೇ ದಿನದ ಪ್ರವಚನದಲ್ಲಿ ಮನ್ವಂತರಗಳು, ಗಜೇಂದ್ರಮೋಕ್ಷ, ಸಮುದ್ರಮಥನ, ವಾಮನಾವತಾರ, ಭಕ್ತ ಅಂಬರೀಶ ಈ ಕಥಾಭಾಗಗಳ ಹೃದ್ಯ ನಿರೂಪಣೆ ನಡೆಯಿತು. ಸಂಜೆ ಕೀರ್ತನೆಗಳ ಗಾಯನದ ಬಳಿಕ ಮಂಗಳಾರತಿಯೊಂದಿಗೆ ದಿನದ ಕಾರ್ಯಕ್ರಮಗಳು ಸಂಪನ್ನಗೊಂಡವು.

ಈ ದಿನದ ಎಲ್ಲಾ ಮೇಳಗಳ ಯಕ್ಷಗಾನ ಪ್ರದರ್ಶನಗಳ ವಿವರ – (11.02.2021)

ಇಂದಿನ (11.02.2021) ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಂಬದಕೋಣೆ ಹೊನ್ನೆಕಳೆ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಆವರಣ – ಚಕ್ರವ್ಯೂಹ, ಭಾರ್ಗವ ವಿಜಯ 

ಕಟೀಲು ಒಂದನೇ ಮೇಳ = ಕಟೀಲು ಕ್ಷೇತ್ರ (2)

ಕಟೀಲು ಎರಡನೇ ಮೇಳ == ಹಲೆಕ್ಕಿಮನೆ ಮುರತ್ತಂಗಡಿ, ಸಾಣೂರು, ಕಾರ್ಕಳ 

ಕಟೀಲು ಮೂರನೇ ಮೇಳ= ‘ದುರ್ಗಾಪ್ರಸಾದ್’ ಹೊಸಮನೆ ವಾಲ್ಪಾಡಿ ವಯಾ ಶಿರ್ತಾಡಿ, ಮೂಡಬಿದ್ರೆ 

ಕಟೀಲು ನಾಲ್ಕನೇ ಮೇಳ  == ಕೂರಿಯಾಳ, ಸರಪಾಡಿ, ಬಂಟ್ವಾಳ 

ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ (1)

ಕಟೀಲು ಆರನೇ ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ

ಮಂದಾರ್ತಿ ಒಂದನೇ ಮೇಳ  ==  ನೇರಂಬಳ್ಳಿ ಕೋಟೇಶ್ವರ 

ಮಂದಾರ್ತಿ ಎರಡನೇ ಮೇಳ   ==  ಸಪ್ತಬೇಳಾರು, ನಂಚಾರು 

ಮಂದಾರ್ತಿ ಮೂರನೇ ಮೇಳ  ==  ಉದ್ದಾಲುಗುಡ್ಡೆ, ಬಾರ್ಕೂರು 

ಮಂದಾರ್ತಿ ನಾಲ್ಕನೇ ಮೇಳ   ==  ಅಂಗಡಿಮನೆ, ಹಳ್ಳಾಡಿ, ಹರ್ಕಾಡಿ 

ಮಂದಾರ್ತಿ ಐದನೇ ಮೇಳ  == ಚಲ್ಲಮಕ್ಕಿ, ಗುಂಡ್ಮಿ, ಸಾಸ್ತಾನ

ಶ್ರೀ ಹನುಮಗಿರಿ ಮೇಳ  ==  ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಉಜಿರೆ – ಶುಕ್ರನಂದನೆ 

ಶ್ರೀ ಪೆರ್ಡೂರು ಮೇಳ == ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ, ಬಡಾಕೇರಿ – ಅಹಂ ಬ್ರಹ್ಮಾಸ್ಮಿ 

ಶ್ರೀ ಸುಂಕದಕಟ್ಟೆ ಮೇಳ  == ಆದ್ಯಪಾಡಿ – ಶ್ರೀ ದೇವಿ ಪಂಚಾಮೃತ 

ಶ್ರೀ ಮಾರಣಕಟ್ಟೆ ಮೇಳ ‘ಎ== ಹಳೆಮನೆ, ಕುಳ್ಳಂಬಳ್ಳಿ ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಶ್ರೀ ಮಹಾಲಕ್ಷ್ಮಿ’, ಉಪ್ಪುಂದ ಅರೆಹಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೊಸೂರು, ಅಂಗಡಿಮನೆ, ಗೋತೆ 

ಶ್ರೀ ಪಾವಂಜೆ ಮೇಳ  ==  ಬಜಪೆ ಕೇಂದ್ರ ಮೈದಾನ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ನಂದಿಕೇಶ್ವರ ದೇವಸ್ಥಾನ ಆಚಾರ್ ಬೆಟ್ಟು , ಹಟ್ಟಿಕುದ್ರು 

ಕಮಲಶಿಲೆ ಮೇಳ ‘ಎ= ಶ್ರೀ ರಾಮ ಸ್ವಾಮಿ ಮಠದ ಹತ್ತಿರ, ದಾಕುಹಿತ್ಲು, ಗಂಗೊಳ್ಳಿ 

ಕಮಲಶಿಲೆ ಮೇಳ ‘ಬಿ’ == ಬೆಳಾಣ, ಮೇಕೋಡು 

ಶ್ರೀ ಅಮೃತೇಶ್ವರೀ ಮೇಳ == ಪಾರಂಪಳ್ಳಿ ಪಡುಕರೆ 

ಶ್ರೀ ಬೋಳಂಬಳ್ಳಿ ಮೇಳ== ಗುಡ್ಡೆ ಅಂಗಡಿ 

ಶ್ರೀ ಸೌಕೂರು ಮೇಳ == ಹಾಲಾಡಿ ತಟ್ಟುವಟ್ಟು ವಾಸುದೇವ ಜೋಯಿಸರ ಮನೆ ಬಳಿ – ಹಳನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಶ್ರೀ ನಾಗ ದೇವಸ್ಥಾನ, ಬಟ್ಟೆಕುದ್ರು, ಹಕ್ಲಾಡಿ – ನೂತನ ಪ್ರಸಂಗ

ಶ್ರೀ ಬೆಂಕಿನಾಥೇಶ್ವರ ಮೇಳ  == ಜೋಡುಕಟ್ಟೆ ಗುಡ್ಡೆಯಂಗಡಿ ಹಿರಿಯಡ್ಕ – ಮಹಿಮೆದ ಮಂತ್ರದೇವತೆ

ಶ್ರೀ ಮಡಾಮಕ್ಕಿ ಮೇಳ == ಕಂಗಿಬೆಟ್ಟು ಡೈರಿ ವಠಾರ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪಾಂಡೇಶ್ವರ ಮೂಡುಹಡು ಶ್ರೀ ಬೊಬ್ಬರ್ಯ ಕಲಾವೇದಿಕೆ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಬೆಳ್ತಂಗಡಿ ಕಂಬರ್ಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಾಯೊದ ಅಜ್ಜೆ (ತುಳು ಕಾಲಮಿತಿ)

ಶ್ರೀ ಶನೀಶ್ವರ ಮೇಳ == ತೆಂಕಬೈಲು ಶಾಲಾ ವಠಾರ 

ಶ್ರೀ ಸಿಗಂದೂರು ಮೇಳ == ಶ್ರೀ ಕ್ಷೇತ್ರದಲ್ಲಿ

ಶ್ರೀ ನೀಲಾವರ ಮೇಳ  == ಬಿದ್ಕಲ್ ಕಟ್ಟೆ ಪೇಟೆಯಲ್ಲಿ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಬೆಜ್ಜವಳ್ಳಿ 

ಶ್ರೀ ಮೇಗರವಳ್ಳಿ ಮೇಳ ==  ಗುಡ್ಡೆಕೇರಿ ಶ್ರೀ ಮಹಾಗಣಪತಿ ದೇವಸ್ಥಾನ – ನಾಗಶ್ರೀ  

ಮೇಳಗಳ ಇಂದಿನ (11.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (11.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕಂಬದಕೋಣೆ ಹೊನ್ನೆಕಳೆ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಆವರಣ – ಚಕ್ರವ್ಯೂಹ, ಭಾರ್ಗವ ವಿಜಯ 
ಕಟೀಲು ಒಂದನೇ ಮೇಳಕಟೀಲು ಕ್ಷೇತ್ರ (2)
ಕಟೀಲು ಎರಡನೇ ಮೇಳ ಹಲೆಕ್ಕಿಮನೆ ಮುರತ್ತಂಗಡಿ, ಸಾಣೂರು, ಕಾರ್ಕಳ 
ಕಟೀಲು ಮೂರನೇ ಮೇಳ‘ದುರ್ಗಾಪ್ರಸಾದ್’ ಹೊಸಮನೆ ವಾಲ್ಪಾಡಿ ವಯಾ ಶಿರ್ತಾಡಿ, ಮೂಡಬಿದ್ರೆ 
ಕಟೀಲು ನಾಲ್ಕನೇ ಮೇಳ ಕೂರಿಯಾಳ, ಸರಪಾಡಿ, ಬಂಟ್ವಾಳ 
ಕಟೀಲು ಐದನೇ ಮೇಳ ಕಟೀಲು ಕ್ಷೇತ್ರ (1)
ಕಟೀಲು ಆರನೇ ಮೇಳಮೂಡಬಿದ್ರೆ ಸ್ವರಾಜ್ ಮೈದಾನ
ಮಂದಾರ್ತಿ ಒಂದನೇ ಮೇಳ ನೇರಂಬಳ್ಳಿ ಕೋಟೇಶ್ವರ 
ಮಂದಾರ್ತಿ ಎರಡನೇ ಮೇಳ ಸಪ್ತಬೇಳಾರು, ನಂಚಾರು 
ಮಂದಾರ್ತಿ ಮೂರನೇ ಮೇಳ ಉದ್ದಾಲುಗುಡ್ಡೆ, ಬಾರ್ಕೂರು 
ಮಂದಾರ್ತಿ ನಾಲ್ಕನೇ ಮೇಳ ಅಂಗಡಿಮನೆ, ಹಳ್ಳಾಡಿ, ಹರ್ಕಾಡಿ 
ಮಂದಾರ್ತಿ ಐದನೇ ಮೇಳ ಚಲ್ಲಮಕ್ಕಿ, ಗುಂಡ್ಮಿ, ಸಾಸ್ತಾನ 

ಶ್ರೀ ಹನುಮಗಿರಿ ಮೇಳ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಉಜಿರೆ – ಶುಕ್ರನಂದನೆ 
ಶ್ರೀ ಪೆರ್ಡೂರು ಮೇಳಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ, ಬಡಾಕೇರಿ – ಅಹಂ ಬ್ರಹ್ಮಾಸ್ಮಿ 
ಶ್ರೀ ಸುಂಕದಕಟ್ಟೆ ಮೇಳ ಆದ್ಯಪಾಡಿ – ಶ್ರೀ ದೇವಿ ಪಂಚಾಮೃತ 
ಶ್ರೀ ಮಾರಣಕಟ್ಟೆ ಮೇಳ ‘ಎ’ಹಳೆಮನೆ, ಕುಳ್ಳಂಬಳ್ಳಿ ಕೆರಾಡಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’‘ಶ್ರೀ ಮಹಾಲಕ್ಷ್ಮಿ’, ಉಪ್ಪುಂದ ಅರೆಹಾಡಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಹೊಸೂರು, ಅಂಗಡಿಮನೆ, ಗೋತೆ 
ಶ್ರೀ ಪಾವಂಜೆ ಮೇಳ ಬಜಪೆ ಕೇಂದ್ರ ಮೈದಾನ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಶ್ರೀ ನಂದಿಕೇಶ್ವರ ದೇವಸ್ಥಾನ ಆಚಾರ್ ಬೆಟ್ಟು , ಹಟ್ಟಿಕುದ್ರು 
ಕಮಲಶಿಲೆ ಮೇಳ ‘ಎ’ಶ್ರೀ ರಾಮ ಸ್ವಾಮಿ ಮಠದ ಹತ್ತಿರ, ದಾಕುಹಿತ್ಲು, ಗಂಗೊಳ್ಳಿ 
ಕಮಲಶಿಲೆ ಮೇಳ ‘ಬಿ’ಬೆಳಾಣ, ಮೇಕೋಡು 
ಶ್ರೀ ಅಮೃತೇಶ್ವರೀ ಮೇಳಪಾರಂಪಳ್ಳಿ ಪಡುಕರೆ 

ಶ್ರೀ ಬೋಳಂಬಳ್ಳಿ ಮೇಳ ಗುಡ್ಡೆ ಅಂಗಡಿ 
ಶ್ರೀ ಸೌಕೂರು ಮೇಳಹಾಲಾಡಿ ತಟ್ಟುವಟ್ಟು ವಾಸುದೇವ ಜೋಯಿಸರ ಮನೆ ಬಳಿ – ಹಳನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಹಾಲಾಡಿ ಮೇಳಶ್ರೀ ನಾಗ ದೇವಸ್ಥಾನ, ಬಟ್ಟೆಕುದ್ರು, ಹಕ್ಲಾಡಿ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ  ಜೋಡುಕಟ್ಟೆ ಗುಡ್ಡೆಯಂಗಡಿ ಹಿರಿಯಡ್ಕ – ಮಹಿಮೆದ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳಕಂಗಿಬೆಟ್ಟು ಡೈರಿ ವಠಾರ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಸಾಸ್ತಾನ ಪಾಂಡೇಶ್ವರ ಮೂಡುಹಡು ಶ್ರೀ ಬೊಬ್ಬರ್ಯ ಕಲಾವೇದಿಕೆ – ಸರ್ಪ ಶಪಥ 
ಶ್ರೀ ಹಿರಿಯಡಕ ಮೇಳಬೆಳ್ತಂಗಡಿ ಕಂಬರ್ಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಾಯೊದ ಅಜ್ಜೆ (ತುಳು ಕಾಲಮಿತಿ)
ಶ್ರೀ ಶನೀಶ್ವರ ಮೇಳ ತೆಂಕಬೈಲು ಶಾಲಾ ವಠಾರ 
ಶ್ರೀ ಸಿಗಂದೂರು ಮೇಳಶ್ರೀ ಕ್ಷೇತ್ರದಲ್ಲಿ
ಶ್ರೀ ನೀಲಾವರ ಮೇಳ ಬಿದ್ಕಲ್ ಕಟ್ಟೆ ಪೇಟೆಯಲ್ಲಿ 
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ಬೆಜ್ಜವಳ್ಳಿ 
ಶ್ರೀ ಮೇಗರವಳ್ಳಿ ಮೇಳ ಗುಡ್ಡೆಕೇರಿ ಶ್ರೀ ಮಹಾಗಣಪತಿ ದೇವಸ್ಥಾನ – ನಾಗಶ್ರೀ  

ಅಮೆರಿಕಾದ ಪ್ರಖ್ಯಾತ ಗಾಯಕಿ ಮೇರಿ ವಿಲ್ಸನ್ ನಿಧನ (Well known American vocalist Mary Wilson passes away)

ಅಮೆರಿಕಾದ ಪ್ರಖ್ಯಾತ ಗಾಯಕಿ ಮೇರಿ ವಿಲ್ಸನ್ ನಿಧನರಾಗಿದ್ದಾರೆ. ಅವರು ಫೆಬ್ರವರಿ 8ರಂದು ನಿಧನ ಹೊಂದಿದರು.ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಇಬ್ಬರು ಸಹ ಗಾಯಕಿಯರ (ಫ್ಲಾರೆನ್ಸ್ ಬಲ್ಲಾರ್ಡ್, ಡಯಾನಾ ರೋಸ್) ಜೊತೆ ಸೇರಿ 1960ರಲ್ಲಿ ‘ದ ಸುಪ್ರೀಮ್ಸ್’ ಇನ್ನು ಮಹಿಳಾ ಗಾಯನ ಸಂಸ್ಥೆಯನ್ನು ಸ್ಥಾಪಿಸಿದ್ದರು.

ಫ್ಲಾರೆನ್ಸ್ ಬಲ್ಲಾರ್ಡ್, ಮೇರಿ ವಿಲ್ಸನ್, ಡಯಾನಾ ರೋಸ್

ಅದು ಅಮೆರಿಕದಾದ್ಯಂತ ಭಾರೀ ಜನಪ್ರಿಯತೆಯನ್ನು ಪಡೆದಿತ್ತು. ಮೇರಿ ವಿಲ್ಸನ್ ಪಾಶ್ಚತ್ಯ ಸಂಗೀತ ಮತ್ತು ಗಾಯನದಲ್ಲಿ ಸುಪ್ರಸಿದ್ಧ ಹೆಸರು. ಜಗತ್ತಿನಾದ್ಯಂತ ಆಕೆಗೆ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದರು.

ಮೇಳಗಳ ಇಂದಿನ (10.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (10.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಉಪ್ಪುಂದ, ಅಂಬಾಗಿಲು – ಮಾನಿಷಾದ, ಕುಶಲವ 
ಕಟೀಲು ಒಂದನೇ ಮೇಳಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ಕುಕ್ಕಾಜೆ 
ಕಟೀಲು ಎರಡನೇ ಮೇಳ ಕಟೀಲು ಕ್ಷೇತ್ರ (1)
ಕಟೀಲು ಮೂರನೇ ಮೇಳಸಾಮೆಗುಳಿ, ಉರುವಾಲು, ಬೆಳ್ತಂಗಡಿ 
ಕಟೀಲು ನಾಲ್ಕನೇ ಮೇಳ ಕಟೀಲು ಕ್ಷೇತ್ರ (2)  
ಕಟೀಲು ಐದನೇ ಮೇಳ 4ನೇ ಮೈಲುಗಲ್ಲು, ಬಂಗ್ರಕೂಳೂರು, ಮಂಗಳೂರು 
ಕಟೀಲು ಆರನೇ ಮೇಳಪಂಜಿನಡ್ಕ ಹೌಸ್, ಮುಲ್ಕಿ 

ಮಂದಾರ್ತಿ ಒಂದನೇ ಮೇಳ ವಿಶಾಲಾಕ್ಷಿ ನಿಲಯ, ಗೋಳಿಬೆಟ್ಟು, ಕೆದೂರು – ಐದು ಮೇಳಗಳ ಕೂಡಾಟ
ಮಂದಾರ್ತಿ ಎರಡನೇ ಮೇಳ ವಿಶಾಲಾಕ್ಷಿ ನಿಲಯ, ಗೋಳಿಬೆಟ್ಟು, ಕೆದೂರು – ಐದು ಮೇಳಗಳ ಕೂಡಾಟ
ಮಂದಾರ್ತಿ ಮೂರನೇ ಮೇಳ ವಿಶಾಲಾಕ್ಷಿ ನಿಲಯ, ಗೋಳಿಬೆಟ್ಟು, ಕೆದೂರು – ಐದು ಮೇಳಗಳ ಕೂಡಾಟ
ಮಂದಾರ್ತಿ ನಾಲ್ಕನೇ ಮೇಳ ವಿಶಾಲಾಕ್ಷಿ ನಿಲಯ, ಗೋಳಿಬೆಟ್ಟು, ಕೆದೂರು – ಐದು ಮೇಳಗಳ ಕೂಡಾಟ
ಮಂದಾರ್ತಿ ಐದನೇ ಮೇಳ ವಿಶಾಲಾಕ್ಷಿ ನಿಲಯ, ಗೋಳಿಬೆಟ್ಟು, ಕೆದೂರು – ಐದು ಮೇಳಗಳ ಕೂಡಾಟ
ಶ್ರೀ ಹನುಮಗಿರಿ ಮೇಳ ನೆಕ್ಕರಡ್ಕ ಪಳಿಕೆ, ಹತ್ಯಡ್ಕ – ದಮಯಂತಿ ಪುನಃ ಸ್ವಯಂವರ, ಗದಾಯುದ್ಧ, ರಕ್ತರಾತ್ರಿ 
ಶ್ರೀ ಪೆರ್ಡೂರು ಮೇಳಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ, ಕಡಬ – ವಾಲಿಮೋಕ್ಷ, ಶಶಿಪ್ರಭಾ 
ಶ್ರೀ ಸುಂಕದಕಟ್ಟೆ ಮೇಳ ಬಡಗಬೆಳ್ಳೂರು ತಂಬಡಗುಡ್ಡೆ – ಶಬರಿಮಲೆ ಅಯ್ಯಪ್ಪ
ಶ್ರೀ ಮಾರಣಕಟ್ಟೆ ಮೇಳ ‘ಎ’ಕಾನ್ಕಿ, ಬೂರುಮರದ ಹಕ್ಲುಮನೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಶ್ರೀ ದುರ್ಗಾ ಯಕ್ಷೇಶ್ವರಿ ದೇವಸ್ಥಾನ ಜಕ್ಕನಕಟ್ಟೆ, ಮರವಂತೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ ಶ್ರೀ ಶಾಸ್ತಾವು ದೇವಸ್ಥಾನ, ಕುಬಣೂರು – ಶಿವಪ್ರಭಾ ಪರಿಣಯ 
ಕಮಲಶಿಲೆ ಮೇಳ ‘ಎ’ಕೌರಿಹಕ್ಲು, ಆಗುಂಬೆ 
ಕಮಲಶಿಲೆ ಮೇಳ ‘ಬಿ’ಬೊಬ್ಬರ್ಯ ದೇವಸ್ಥಾನ, ಕಬ್ಬಿನಾಲೆ 

ಶ್ರೀ ಅಮೃತೇಶ್ವರೀ ಮೇಳಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳಹೆನ್ನಾಬೈಲ್ – ಹಳನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಹಾಲಾಡಿ ಮೇಳಶೇಡಿಮನೆ, ಸಬ್ಲಾಡಿ, ಹಟ್ಟಿಯಂಗಡಿ – ಹಾಲಾಡಿ ಕ್ಷೇತ್ರ ಮಹಾತ್ಮೆ 
ಶ್ರೀ ಬೆಂಕಿನಾಥೇಶ್ವರ ಮೇಳ  ಉದ್ಯಾವರ ಶ್ರೀ ಶಂಭು ಶೈಲೇಶ್ವರ ದೇವಸ್ಥಾನ, ಶಂಭುಕಲ್ಲು ಇದರ ವಠಾರ  – ಮಹಿಮೆದ ಮಂತ್ರದೇವತೆ 
ಶ್ರೀ ಮಡಾಮಕ್ಕಿ ಮೇಳಹಾಲಾಡಿ – ಪಾಪಣ್ಣ ವಿಜಯ, ಗುಣಸುಂದರಿ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಆವರ್ಸೆ ಬಣಸಾಲೆ ಶ್ರೀ ಭದ್ರಮಹಾಕಾಳಿ ದೇವಸ್ಥಾನ – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳನೆಲ್ಯಾಡಿ ಕೌಕ್ರಾಡಿ ಅಯ್ಯಪ್ಪ ದೇವಸ್ಥಾನ – ಮಾಯೊದ ಅಜ್ಜೆ (ತುಳು ಕಾಲಮಿತಿ)
ಶ್ರೀ ಶನೀಶ್ವರ ಮೇಳ ಸಿದ್ಧಾಪುರ ಕಾಸನಕಟ್ಟೆ 
ಶ್ರೀ ಸಿಗಂದೂರು ಮೇಳಶ್ರೀ ಕ್ಷೇತ್ರದಲ್ಲಿ
ಶ್ರೀ ನೀಲಾವರ ಮೇಳ ಸಿದ್ದಾಪುರ ಐದು ಸೆಂಟ್ಸ್  
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ಹೊದ್ಲ 
ಶ್ರೀ ಮೇಗರವಳ್ಳಿ ಮೇಳ ಕುಡುಮಲ್ಲಿಗೆಯಲ್ಲಿ – ಮಧುರ ಮನಸ್ವಿ  

ಪುರುಷ ಪಾತ್ರಗಳಲ್ಲೂ ಪ್ರಸಿದ್ಧಿಯನ್ನು ಪಡೆದ ಖ್ಯಾತ ಸ್ತ್ರೀ ವೇಷಧಾರಿ – ಕುಂಬಳೆ ಶ್ರೀಧರ ರಾವ್ 

ಶ್ರೀ ಧರ್ಮಸ್ಥಳ ಮೇಳದ ರಂಗಸ್ಥಳ. ಶ್ರೇಷ್ಠ ಕಲಾವಿದರ ಒಡನಾಟದಲ್ಲಿ ಕುಂಬಳೆ ಶ್ರೀಧರ ರಾಯರು ಸ್ತ್ರೀ ಪಾತ್ರಗಳನ್ನು ಮಾಡುತ್ತಾ ರಂಜಿಸುತ್ತಿದ್ದ ದಿನಗಳವು. ಈಗಲೂ ನೆನಪಾಗುತ್ತದೆ. ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳ್ತಿ, ಲಕ್ಷ್ಮಿ, ಸುಭದ್ರೆ, ಸತ್ಯಭಾಮೆ ಅಲ್ಲದೆ ಪ್ರಮೀಳೆ, ಶಶಿಪ್ರಭೆ, ಮಹಾಕಲಿ ಮಗದೇಂದ್ರ ಪ್ರಸಂಗದ ವಜ್ರಲೇಖೆ ಮೊದಲಾದ ಕಸೆ ಸ್ತ್ರೀವೇಷಗಳನ್ನೂ ಮಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಸ್ತ್ರೀ ಪಾತ್ರಗಳಿಗೆ ಜೀವತುಂಬಿದ ಕುಂಬಳೆ ಶ್ರೀಧರ ರಾಯರು ಈಗ ಅದೇ ರಂಗಸ್ಥಳದಲ್ಲಿ ಪುರುಷ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ವಯಸ್ಸು ಮತ್ತು ದೇಹದ ಭಾಷೆ ತೊಡಕಾಗುವ ಮೊದಲೇ ಸ್ತ್ರೀ ಪಾತ್ರಗಳ ನಿರ್ವಹಣೆಯನ್ನು ಬಿಟ್ಟು ಪುರುಷ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ ಚತುರಮತಿ ಇವರು.

 ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪು ಕುಂಬಳೆ ಶ್ರೀಧರ ರಾಯರ ಹುಟ್ಟೂರು. 1948ನೇ ಇಸವಿ ಜುಲೈ 23ರಂದು ಮಾಲಿಂಗ ಮುಕಾರಿ ಮತ್ತು ಕಾವೇರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನನ. ಸೂರಂಬೈಲು ಸರಕಾರೀ ಶಾಲೆಯಲ್ಲಿ 4ನೇ ತರಗತಿಯ ವರೇಗೆ ವಿದ್ಯಾಭ್ಯಾಸ. ಎಳವೆಯಲ್ಲಿ ಬಡತನದ ಬೇಗೆ. ಹೊಟ್ಟೆಗೆ ಬಟ್ಟೆಗೆ ಇಲ್ಲದೆ ಕಷ್ಟವನ್ನನುಭವಿಸಿದ ದಿನಗಳು. ಶಾಲೆ ಅನಿವಾರ್ಯವಾಗಿ ಬಿಡಬೇಕಾಯಿತು. ಪ್ರಸಿದ್ಧ ಕಲಾವಿದರಾದ ಶ್ರೀ ಕುಂಬಳೆ ಸುಂದರ ರಾಯರ ತೀರ್ಥರೂಪರು ಶ್ರೀ ಕುಂಞಕಣ್ಣ ಚೆಟ್ಟಿಯಾರರಿಂದ ಬಟ್ಟೆ ನೇಯುವ ಕೆಲಸವನ್ನು ಶ್ರೀಧರ ರಾಯರು ಕಲಿತರು. ಜತೆಗೆ ಕುಂಬಳೆ ಚಂದ್ರಶೇಖರರಿಂದ (ಕುಂಬಳೆ ಚಂದು) ಮತ್ತು ಕುಂಬಳೆ ಹಾಸ್ಯಗಾರ ಕಮಲಾಕ್ಷ ನಾಯಕ್ (ವಿಟ್ಲ ಜೋಯಿಸರ ಸಮಕಾಲೀನರು) ರಿಂದ ಯಕ್ಷಗಾನ ನಾಟ್ಯವನ್ನು ಅಭ್ಯಸಿಸಿದರು.

ಕುಂಬಳೆ ಚಂದುರವರು ಆ ಕಾಲದಲ್ಲಿ ನೃತ್ಯ ರೂಪಕ ಪ್ರದರ್ಶನವನ್ನು ನಿರ್ದೇಶಿಸಿ ಆಯೋಜಿಸುವುದರಲ್ಲಿ ಪ್ರಸಿದ್ಧರಾಗಿದ್ದರಂತೆ. ಅದೇ ಸಮಯದಲ್ಲಿ (1962) ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳ ಕುಂಬಳೆಗೆ ಬಂದಿದ್ದಾಗ ಕುಂಬಳೆ ಶ್ರೀಧರ ರಾಯರು ಬಾಲಕಲಾವಿದನಾಗಿ ಸೇರ್ಪಡೆಗೊಂಡರು. ಯಕ್ಷಗಾನದ ಭೀಷ್ಮ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರ ಶಿಷ್ಯನಾಗಿ ಬೆಳೆದರು. ಮುಂದಿನ ವರ್ಷಗಳಲ್ಲಿ ನೂಜಿಪ್ಪಾಡಿ ಶಂಕರನಾರಾಯಣಪ್ಪಯ್ಯ ಯಜಮಾನಿಕೆಯ ಕುತ್ಯಾಳ ಗೋಪಾಲಕೃಷ್ಣ ಮೇಳದಲ್ಲಿ ಶೇಣಿಯವರ ಒಡನಾಟದಲ್ಲಿ ಕಲಾವಿದನಾಗಿ ಕಾಣಿಸಿಕೊಂಡರು.


                      1965ನೇ ಇಸವಿ ಖಾವಂದರಾದ ಶ್ರೀ ರತ್ನವರ್ಮ ಹೆಗಡೆಯವರು ಮೇಳವನ್ನು ಶ್ರೀ ಕ್ಷೇತ್ರದಿಂದಲೇ ನಡೆಸುವ ತೀರ್ಮಾನಕ್ಕೆ ಬಂದಿದ್ದರು. (ಮೊದಲು ಕುರಿಯ ವಿಠಲ ಶಾಸ್ತ್ರಿಗಳು ನಡೆಸುತ್ತಿದ್ದರು) ಎರಡು ವರ್ಷ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯವನ್ನು ಮಾಡಿ ನಂತರ ಪೆರುವೊಡಿ ನಾರಾಯಣ ಭಟ್ಟರ ಸಂಚಾಲಕತ್ವದ ಮುಲ್ಕಿ ಮೇಳ ಮತ್ತೆ ಕೂಡ್ಲು ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿದರು. 1970ರಲ್ಲಿ ಮತ್ತೆ ಎರಡು ವರ್ಷಗಳ ಕಾಲ ಧರ್ಮಸ್ಥಳ ಮೇಳಕ್ಕೆ. ಮುಂದಿನ ಮೂರು ವರ್ಷಗಳ ಕಾಲ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ತಿರುಗಾಟ ನಡೆಸಿ ಕಳೆದ 44 ವರುಷಗಳಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ವೀರೇಂದ್ರ ಹೆಗಡೆಯವರು ಮತ್ತು ಡಿ. ಹರ್ಷೇಂದ್ರ  ಕುಮಾರರ ಆಶೀರ್ವಾದದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಹೀಗೆ ಕಲಾವಿದನಾಗಿ ಕುಂಬಳೆ ಶ್ರೀಧರ ರಾಯರದ್ದು 57 ವರುಷಗಳಿಗೂ ಮಿಕ್ಕಿದ ತಿರುಗಾಟ.

ಶೇಣಿ ಗೋಪಾಲಕೃಷ್ಣರಿಂದಲೇ ನಾನು ಮಾತುಗಾರಿಕೆ ಕಲಿತೆ. ಅವರು ಆಶೀರ್ವದಿಸಿದರು. ಅವರಿಂದಾಗಿಯೇ ನನಗೆ ಎಡನೀರು ಶ್ರೀಮಠ ಹತ್ತಿರವಾಯಿತು. ನಾನು ಶ್ರೀಮಠದ, ಶ್ರೀಗಳವರ ಭಕ್ತನೂ ಹೌದು ಶಿಷ್ಯನೂ ಹೌದು ಎಂದು ಹೇಳುವ ಕುಂಬಳೆ ಶ್ರೀಧರ ರಾಯರು ಕಲಾವಿದನಾಗಿ ಶ್ರೀಮಠದ ಯಕ್ಷಗಾನ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಕಡತೋಕಾ, ಅಗರಿ, ಮಂಡೆಚ್ಚರು, ಹೊಳ್ಳರು, ಮಯ್ಯರ ಭಾಗವತಿಕೆಗೆ ವೇಷಗಳನ್ನು ಮಾಡಿ ಸಂತೋಷವನ್ನು ಅನುಭವಿಸಿದ್ದೇನೆ. ಶೇಣಿಯವರೊಂದಿಗೆ ಮಂಡೋದರಿ, ತಾರೆ ಮೊದಲಾದ ಪಾತ್ರಗಳನ್ನು ಮಾಡಿದ ಧನ್ಯತೆಯಿದೆ. ಕುಂಬಳೆ ಸುಂದರ ರಾಯರ ಜತೆ ಲಕ್ಷ್ಮಿ, ಸತ್ಯಭಾಮೆ, ಕೆ. ಗೋವಿಂದ ಭಟ್ಟರ ಜತೆ ಹಲವು ವೇಷಗಳು, ನಯನ ಕುಮಾರರ ಬಾಹುಕ, ಬ್ರಾಹ್ಮಣ ಪಾತ್ರಗಳಿಗೆ ದಮಯಂತಿ, ದಾಕ್ಷಾಯಿಣಿ, ಅರುವ ಕೊರಗಪ್ಪ ಶೆಟ್ಟರ ಪುಷ್ಪಧ್ವಜ ಪಾತ್ರಕ್ಕೆ ಕನಕಮಾಲಿನಿಯಾಗಿ (ಪ್ರಸಂಗವೀರ ಪುಷ್ಪಧ್ವಜ) ಪುತ್ತೂರು ನಾರಾಯಣ ಹೆಗ್ಡೆಯವರ ಅಣ್ಣಪ್ಪ ಪಾತ್ರಕ್ಕೆ ಅಮ್ಮು ಬಲ್ಲಾಳ್ತಿಯಾಗಿ ಅಭಿನಯಿಸಿದ್ದು ಮರೆಯಲಾರದ ಅನುಭವ ಎಂದು ಶ್ರೀಧರರಾಯರು ಕಳೆದ ದಿನಗಳನ್ನು ನೆನಪಿಸುತ್ತಾರೆ.


                              ಮಳೆಗಾಲದಲ್ಲಿ ಕಳೆದ 30 ವರುಷಗಳಿಂದ ನಿಡ್ಲೆ ಗೋವಿಂದ ಭಟ್ಟರ ನೇತೃತ್ವದ  ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪ್ರಮುಖ ಕಲಾವಿದನಾಗಿ ಕುಂಬಳೆ ಶ್ರೀಧರ ರಾಯರು ತಿರುಗಾಟ ನಡೆಸುತ್ತಿದ್ದಾರೆ. 1988ರಲ್ಲಿ ದುಬಾೈ, ಅಬುದಾಭಿ, 1991ರಲ್ಲಿ ಬಹ್ರೈನ್, ಶಾರ್ಜಾದಲ್ಲಿ ನಡೆದ ಪ್ರದರ್ಶನಗಳಲ್ಲಿಯೂ ಭಾಗವಹಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ವೀರೇಂದ್ರ ಹೆಗಡ್ಡೆಯವರ ಪಟ್ಟಾಭಿಷೇಕೋತ್ಸವದ ಸಂದರ್ಭ ಸನ್ಮಾನಿತರಾಗಿದ್ದಾರೆ. ದೆಹಲಿ ಪಾರ್ಲಿಮೆಂಟು ಭವನದಲ್ಲಿ ನಡೆದ ಧರ್ಮಸ್ಥಳ ಮೇಳದ ಕಲಾವಿದರಿಂದ ನಡೆದ ಪ್ರದರ್ಶನದಲ್ಲಿ ಭಾಗವಹಿಸಿದ್ದಲ್ಲದೆ ಕುಂಬಳೆ ಶ್ರೀಧರ ರಾಯರನ್ನು ಅನೇಕ ಕಡೆಗಳಲ್ಲಿ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಮಂಗಳೂರು ಆಕಾಶವಾಣಿಗಾಗಿ ಶ್ರೀ ಸದಾನಂದ ಪೆರ್ಲ ಅವರು ನಡೆಸಿದ ತುಳು ಸಂದರ್ಶನ ಮತ್ತು ಸುದ್ದಿ ಟಿ. ವಿ.ಗಾಗಿ ಸೌಮ್ಯಾ ಮಾರ್ನಾಡು ಅವರು ನಡೆಸಿದ ಸಂದರ್ಶನದಲ್ಲೂ ಭಾಗವಹಿಸಿದ್ದಾರೆ.


              ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಹಿರಿಯ ಸಹೋದರ ಶಂಕರ ಮುಕಾರಿಯವರ ಸಹಕಾರವನ್ನು ಶ್ರೀಧರ ರಾಯರು ಸದಾ ಸ್ಮರಿಸುತ್ತಾರೆ. ಇವರ ತಮ್ಮ ಕುಂಬಳೆ ಗೋಪಾಲ ಅವರು ಬೆಂಗಳೂರಿನಲ್ಲಿ ಉದ್ಯೋಗಿ. ಹವ್ಯಾಸೀ ಉತ್ತಮ ಕಲಾವಿದ. ಕುಂಬಳೆ ಶ್ರೀಧರ ರಾಯರ ಪತ್ನಿ ಶ್ರೀಮತಿ ಸುಲೋಚನಾ ಶಾಂತಿನಗರ ಸರಕಾರೀ ಶಾಲೆಯಲ್ಲಿ ಅಧ್ಯಾಪಿಕೆ. ಶ್ರೀಧರ ರಾವ ದಂಪತಿಗಳಿಗೆ ಮೂವರು ಗಂಡು ಮಕ್ಕಳು. ಹಿರಿಯ ಪುತ್ರ ಗಣೇಶ್ ಪ್ರಸಾದ್ ಎಂ.ಎ. ಪದವೀಧರ. ಪತ್ರಿಕೋದ್ಯಮಿಯಾಗಿ ಕೆಲಸ ಮಾಡುತ್ತಿದಾರೆ. ದ್ವಿತೀಯ ಪುತ್ರ ಕೃಷ್ಣಪ್ರಸಾದ್ ಎಂ.ಎ., ಬಿ.ಎಡ್. ಪದವೀಧರ. ಕಿರಿಯ ಪುತ್ರ ದೇವೀಪ್ರಸಾದ್ ಬಿ.ಬಿ.ಎಂ. ಪದವೀಧರ.

ಲೇಖಕ: ರವಿಶಂಕರ್ ವಳಕ್ಕುಂಜ 

ಫೋಟೋ: ಕೋಂಗೋಟ್ ರಾಧಾಕೃಷ್ಣ ಭಟ್ 

ಚೆಂಡೆಯಲ್ಲಿಯೂ ಮಧುರ ಸ್ವರ ಹೊಮ್ಮಿಸುವ ದೇಲಂತಮಜಲು ಸುಬ್ರಹ್ಮಣ್ಯ ಭಟ್

ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ದೇಲಂತಮಜಲು ಎಂಬಲ್ಲಿ ಶ್ರೀಕೃಷ್ಣ ಭಟ್, ಪಾರ್ವತಿ ಅಮ್ಮ ದಂಪತಿಗಳಿಗೆ ಮಗನಾಗಿ ಮೇ 2, 1965ರಂದು ಜನಿಸಿದರು. ಜನತಾ ಹೈಸ್ಕೂಲ್ ಅಡ್ಯನಡ್ಕ ಮತ್ತು ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಜನೆ. ಇವರ ಮನೆಯವರು, ಕುಟುಂಬದವರೆಲ್ಲಾ ಕಲಾಸಕ್ತರೇ ಆಗಿದ್ದರು.

ಮದ್ದಳೆಗಾರರಾಗಿದ್ದ ಶಿರಂಕಲ್ಲು ರಾಮಕೃಷ್ಣ ಭಟ್ ಮತ್ತು ಶಿರಂಕಲ್ಲು ನಾರಾಯಣ ಭಟ್ಟರು ಇವರ ಸೋದರಮಾವಂದಿರು. ಸಹಜವಾಗಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರಿಗೆ ಎಳವೆಯಲ್ಲೇ ಯಕ್ಷಗಾನದಲ್ಲಿ ಆಸಕ್ತಿ ಹುಟ್ಟಿತು. ಶಾಲಾ ವಿದ್ಯಾರ್ಥಿಯಾಗಿರುವಾಗ ಪರಿಸರದಲ್ಲಿ ನಡೆಯುತ್ತಿದ್ದ ಕೂಟ, ಆಟಗಳನ್ನು ಬಿಟ್ಟವರಲ್ಲ. ನೋಡುತ್ತಾ, ಅನುಭವಿಸುತ್ತಾ ಇವರಲ್ಲಿ  ತಾನೂ ಕಲಾವಿದನಾಗಬೇಕೆಂಬ ಬಯಕೆಯು ಚಿಗುರೊಡೆಯಿತು. ಈ ಚಿಗುರಿಗೆ ಆಸರೆಯಾಯಿತು ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರ.


                                 ಧರ್ಮಸ್ಥಳದಲ್ಲಿ ಶ್ರೀ ನಿಡ್ಲೆ ನರಸಿಂಹ ಭಟ್ಟರ ಗರಡಿಯಲ್ಲಿ ಪಳಗಿದ ಸುಬ್ರಹ್ಮಣ್ಯ ಭಟ್ಟರು ಸಂಗೀತ ಮೃದಂಗ ಕಲಿಕೆಯಲ್ಲಿ ವಿದ್ವಾನ್ ಕುಕ್ಕಿಲ ಶಂಕರ ಭಟ್ಟರ ಶಿಷ್ಯರಾದರು. ಶ್ರೇಷ್ಠ ಗುರುದ್ವಯರಿಂದ ಕಲಿತು ದೇಲಂತಮಜಲು ಅವರು ಚೆಂಡೆ ಮತ್ತು ಮದ್ದಳೆವಾದನ ಎರಡರಲ್ಲೂ ಹೊಳೆದು ಕಾಣಿಸಿಕೊಂಡರು. ಮೊದಲು ನಾಲ್ಕು ವರ್ಷ ಹವ್ಯಾಸೀ ಆಟ, ಕೂಟಗಳಲ್ಲಿ ಭಾಗವಹಿಸಿ, ಆಮೇಲೆ ಕರ್ನೂರು ಕೊರಗಪ್ಪ ರೈ ಸಂಚಾಲಕತ್ವದ ಕದ್ರಿ ಮೇಳದಲ್ಲಿ ಪ್ರಧಾನ ಮದ್ದಳೆಗಾರರಾಗಿ ಮೂರು ವರ್ಷ ತಿರುಗಾಟ ನಡೆಸಿದರು. ಆಗ ಕುಬಣೂರು ಶ್ರೀಧರ ರಾವ್ ಮತ್ತು ಪುತ್ತಿಗೆ ರಘುರಾಮ ಹೊಳ್ಳರ ಒಡನಾಟ ಇವರಿಗೆ ಸಿಕ್ಕಿತ್ತು. ನಂತರ 15 ವರ್ಷಗಳ ಕಾಲ ಕರ್ನಾಟಕ ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು.

ಅಲ್ಲಿ ಹಿಮ್ಮೇಳ ಜತೆ ಮುಮ್ಮೇಳವೂ ಅತ್ಯಂತ ಪ್ರಬಲವಾಗಿತ್ತು. ದಿನೇಶ ಅಮ್ಮಣ್ಣಾಯ, ಪ್ರಭಾಕರ ಗೋರೆಯವರ ಒಡನಾಟದಿಂದ ದೇಲಂತಮಜಲು ಕಲಾವಿದರಾಗಿ ಪಕ್ವರಾದರು. ಹೆಚ್ಚಾಗಿ ತುಳುಪ್ರಸಂಗಗಳೇ ನಡೆಯುತ್ತಿದ್ದರೂ ಪುರಾಣ ಪ್ರಸಂಗಗಳ ಜ್ಞಾನವನ್ನು ಮಳೆಗಾಲದ ತಿರುಗಾಟ, ಆಟಗಳಲ್ಲಿ ಶ್ರೀ ಸುಬ್ರಹ್ಮಣ್ಯ ಭಟ್ಟರು ಪಡೆದರು. ಶ್ರೀ ನಿಡ್ಲೆ ಗೋವಿಂದ ಭಟ್ಟರ ಸಂಚಾಲಕತ್ವದ  ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಈ ತಂಡದಲ್ಲಿದ್ದು ಶ್ರೀ ರಾಮಕೃಷ್ಣ ಮಯ್ಯ ಮತ್ತು ಅನೇಕ ಅನುಭವೀ ಕಲಾವಿದರ ಒಡನಾಟದಿಂದ ನಾನು ಪುರಾಣ ಪ್ರಸಂಗಗಳ ಬಗೆಗೆ ಅನುಭವವನ್ನು ಪಡೆದುಕೊಂಡೆ ಎಂದು ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ವಿನೀತರಾಗಿಯೇ ಹೇಳುತ್ತಾರೆ.
                    ಶ್ರೀ ದಿನೇಶ ಅಮ್ಮಣ್ಣಾಯ, ಶ್ರೀ ಪ್ರಭಾಕರ ಗೋರೆಯವರ ಮಾರ್ಗದರ್ಶನ ಹಿಮ್ಮೇಳದ ಹಿರಿಯ, ಶ್ರೇಷ್ಠ ಕಲಾವಿದರುಗಳೆಲ್ಲ ನನಗೆ ಮಾರ್ಗದರ್ಶನ, ಸಹಕಾರ ನೀಡಿದ್ದಾರೆ. ಹಾಗಾಗಿಯೇ ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಅನುಕೂಲವಾಯಿತು ಎನ್ನುವ ದೇಲಂತಮಜಲು ಅವರು 13 ವರುಷಗಳ ಕಾಲ ಎಡನೀರು ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಶ್ರೀ ದಿನೇಶ ಅಮ್ಮಣ್ಣಾಯರ ಹಾಡು, ದೇಲಂತಮಜಲು ಅವರ ಚೆಂಡೆವಾದನ, ಮದ್ದಳೆವಾದನ ಇದನ್ನು ಎಡನೀರು ಮೇಳದಲ್ಲಿ ಪ್ರೇಕ್ಷಕರು ಆಸ್ವಾದಿಸಿದ್ದಾರೆ, ಆನಂದಿಸಿದ್ದಾರೆ. ತನ್ನ ಸಾಧನೆಗೆ ಪ್ರೋತ್ಸಾಹವನ್ನು ನೀಡಿ ಆಶೀರ್ವದಿಸುತ್ತಿದ್ದ  ಎಡನೀರು ಶ್ರೀಗಳನ್ನು ದೇಲಂತಮಜಲು ಯಾವಾಗಲೂ ನೆನಪಿಸುತ್ತಾರೆ. ಪ್ರಸ್ತುತ ಒಂದು ವರ್ಷದಿಂದ ಹನುಮಗಿರಿ ಮೇಳದಲ್ಲಿ ಮದ್ದಳೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೌದ್ರ, ವೀರ ರಸದ ಪ್ರತೀಕವಾದ ಚೆಂಡೆಯಲ್ಲಿಯೂ ಮುಧುರ ಸ್ವರ ಹೊಮ್ಮಿಸುವ ಕೌಶಲ್ಯತೆ ಸುಬ್ರಹ್ಮಣ್ಯ ಭಟ್ಟರ ವಿಶೇಷತೆಗಳಲ್ಲೊಂದು. 

ಪತ್ನಿ ಚಂದ್ರಕಲಾ ಮತ್ತು ಮಕ್ಕಳಾದ ಕೃಷ್ಣರಾಜ ಮತ್ತು ಪುಣ್ಯ ಇವರೊಂದಿಗಿನ ಸಂತೃಪ್ತ ಜೀವನ ಸುಬ್ರಹ್ಮಣ್ಯ ಭಟ್ಟರದು. ಹಲವಾರು ಸನ್ಮಾನ ಪ್ರಶಸ್ತಿಗಳನ್ನು ಪಡೆದ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ಭಾರತದಾದ್ಯಂತ ಅಲ್ಲದೆ ಬಹರೈನ್, ಕುವೈಟ್, ದುಬಾಯಿ ಮೊದಲಾದ ಕಡೆಗಳಲ್ಲೂ ಪ್ರದರ್ಶನಗಳಲ್ಲಿ ಭಾಗವಹಿಸಿ ಖ್ಯಾತರಾಗಿದ್ದಾರೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಫೋಟೋ: ನವೀನ್ ಕೃಷ್ಣ ಭಟ್ ಮತ್ತು ಎಸ್. ಎನ್ ಶರ್ಮ 

ಲೇಖಕ, ಕಲಾವಿದನ ಕಲ್ಪನೆಯಲ್ಲಿ ತೇಲಿಬಂದ ‘ಮುಸ್ಸಂಜೆಯ ಹೊಂಗಿರಣ’ – ಕೊರೋನಾ ಪೊಸಿಟಿವ್ ಭಯದ  ನಡುವೆಯೂ ನಾ.ಕಾರಂತರ ಧನಾತ್ಮಕ ಕೃತಿ 

ನಿರಾತಂಕವಾಗಿ ಎಗ್ಗಿಲ್ಲದೆ ಸಾಗುತ್ತಿದ್ದ ಬದುಕಿನಲ್ಲಿ ದಿಢೀರನೆ ಕಷ್ಟ ಕಾರ್ಪಣ್ಯಗಳು ಬಂದೆರಗಿ ದಾರಿ ಅಸ್ಪಷ್ಟವಾಗಿ, ಜೀವನವು ಸಂಜೆಯ ಪಥದತ್ತ ಸಾಗುತ್ತಿರುವಾಗ ಎಲ್ಲಿಂದಲೋ ಬಂದ ನೇಸರನ ಸಂಜೆಯ ಕಿರಣಗಳು ಪಥವನ್ನು ತೋರಿ ಮುನ್ನುಗ್ಗಲು ಪ್ರೇರಣೆಯಾಗುತ್ತವೆ. ಲೇಖಕ, ಕಲಾವಿದ ನಾ. ಕಾರಂತ ಪೆರಾಜೆಯವರ ‘ಮುಸ್ಸಂಜೆಯ ಹೊಂಗಿರಣ’ ಎಂಬ ಕೃತಿಯೂ ಕೂಡಾ ಅದೇ ರೀತಿಯ ಸಂದೇಶವನ್ನು ಸಾರುತ್ತದೆ. ಕೃತಿಯ ಹೆಸರಿನಂತೆ ಸಂಜೆಯ ಹೊತ್ತಿನಲ್ಲಿಯೂ ನಮಗೆ ಬದುಕುವ ದಾರಿ ತೋರುವ ಹಲವಾಲು ಕಿರಣ ಸದೃಶ ಸಂಗತಿಗಳು ಇವೆ. ಆದರೆ ನೋಡುವ ಒಳಗಣ್ಣಿನ ಶಕ್ತಿ ಬೇಕು. ಕಾರಂತರ ಒಳಗಣ್ಣಿನ ನೋಟಕ್ಕೆ ಅಂತಹಾ ಹಲವಾರು ಸಂಗತಿಗಳು ಗೋಚರಿಸಿವೆ. ಅದನ್ನೇ ಅವರು ಒಂದು ಸುಂದರ ಕೃತಿಯ ರೂಪದಲ್ಲಿ ಹೊರತಂದಿದ್ದಾರೆ. 

ಆ ಪುಸ್ತಕಕ್ಕೆ ‘ಮುಸ್ಸಂಜೆಯ ಹೊಂಗಿರಣ’ ಎಂಬ ಸುಂದರವಾದ ಅನ್ವರ್ಥನಾಮವನ್ನೇ ಇರಿಸಿದ್ದಾರೆ. ಕೊರೋನಾ ಭಯದಿಂದ ಲೋಕವೇ ಭಯದಿಂದ ಮುದುಡಿ ಮನೆಯ ಕೋಣೆ ಸೇರಿದ ಸಂದರ್ಭದಲ್ಲಿ ಹಲವು ಮನಸ್ಸುಗಳು ಧನಾತ್ಮಕವಾಗಿ ಚಿಂತಿಸಿದ್ದು ಮಾತ್ರವಲ್ಲದೆ ಆ ಯೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಿದುವು. ಅಂತಹಾ ಹಲವಾರು ನೈಜ ಘಟನೆಗಳ ಗೊಂಚಲಾಗಿ ಈ ಕೃತಿ ಮೂಡಿಬಂದಿದೆ. ಕೊರೋನಾ ಪಾಸಿಟಿವ್ ಭಯದಲ್ಲಿಯೂ ಧನಾತ್ಮಕ ಯೋಚನೆ (Positive thinking) ಹೇಗೆ ಮಾಡಹುದೆಂಬುದನ್ನು ಈ ಪುಸ್ತಕ ತಿಳಿಸಿಕೊಡುತ್ತದೆ. ಈ ಗ್ರಂಥ ನಾ. ಕಾರಂತರ ಒಂದು ಉತ್ತಮ ಪ್ರಯತ್ನದ ಫಲ. ಋಣಾತ್ಮಕ ವಿಚಾರಗಳ ನಡುವೆಯೂ ಧನಾತ್ಮಕವಾಗಿ ಹೇಗೆ ಕೆಲಸ ಮಾಡಬಹುದೆಂಬ ನಿರ್ದೇಶನವನ್ನು ನೀಡುತ್ತದೆ. 

ಪುಸ್ತಕದ ಲೇಖಕರ ವಿಳಾಸ: ನಾ ಕಾರಂತ ಪೆರಾಜೆ, ಉಪಸಂಪಾದಕರು, ಅಡಿಕೆ ಪತ್ರಿಕೆ, ಭಟ್ಸ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು (ಫೋನ್: 9448625794)

ಮೇಳಗಳ ಇಂದಿನ (09.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (09.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕಂದಾವರ ಮೂಡ್ಲಕಟ್ಟೆ MIT ಸಮೀಪ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಕಟೀಲು ಕ್ಷೇತ್ರ (1)
ಕಟೀಲು ಎರಡನೇ ಮೇಳ ಗುಡ್ಡೆರಮನೆ, ಬಡಗ ಎಕ್ಕಾರು 
ಕಟೀಲು ಮೂರನೇ ಮೇಳಒಕ್ಕಾಡಿಗೋಳಿ ವಯಾ ಸಿದ್ದಕಟ್ಟೆ, ಬೆಳ್ತಂಗಡಿ 
ಕಟೀಲು ನಾಲ್ಕನೇ ಮೇಳ ಮಾರ್ಲರಮನೆ, ಸೂರಿಂಜೆ 
ಕಟೀಲು ಐದನೇ ಮೇಳ ಕಟೀಲು ಕ್ಷೇತ್ರ (2)
ಕಟೀಲು ಆರನೇ ಮೇಳಕಟೀಲು ಗಿಡಿಗೆರೆ ಶ್ರೀ ನಿಕೇತನ 

ಮಂದಾರ್ತಿ ಒಂದನೇ ಮೇಳ ಜೀರಳಗುಡ್ಡೆಮನೆ, ಮುದ್ದುಮನೆ, ಶಿರೂರು 
ಮಂದಾರ್ತಿ ಎರಡನೇ ಮೇಳ ಬೆನಕನಬೀಡು, ಕೌರಿ ಯಡೂರು 
ಮಂದಾರ್ತಿ ಮೂರನೇ ಮೇಳ ವೀರಣ್ಣ ಮಕ್ಕಿಮನೆ ನಡೂರು – ಕೂಡಾಟ 
ಮಂದಾರ್ತಿ ನಾಲ್ಕನೇ ಮೇಳ ಉಂಟೂರುಕಟ್ಟೆ, ಕೈಮರ 
ಮಂದಾರ್ತಿ ಐದನೇ ಮೇಳ ವೀರಣ್ಣ ಮಕ್ಕಿಮನೆ ನಡೂರು – ಕೂಡಾಟ  
ಶ್ರೀ ಹನುಮಗಿರಿ ಮೇಳ ಶ್ರೀ ಕಾಶಿ ನಂದಿಕೇಶ್ವರ ಯಕ್ಷೀ ಮತ್ತು ಸಪರಿವಾರ ದೇವಸ್ಥಾನ, ಹಟ್ಟಿಕುದ್ರು – ಶುಕ್ರ ನಂದನೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಜಿಡಿಯಾರುಮನೆ, ಗುಡ್ದಾಮ್ಮಾಡಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಮೆಲ್ ಹೆದ್ದಾರಿಮನೆ, ಹೊಸೂರು 
ಶ್ರೀ ಮಾರಣಕಟ್ಟೆ ಮೇಳ ‘ಸಿ’11ನೇ ಉಳ್ಳೂರು, ಲಿಂಗಿಮನೆ 
ಶ್ರೀ ಪಾವಂಜೆ ಮೇಳ ಸಿದ್ಧಾಪುರ, ಅಜ್ರಿ – ಸೀತಾ ಪರಿತ್ಯಾಗ, ಕುಶಲವ (ಸಂಜೆ 6.45ರಿಂದ ರಾತ್ರಿ 12)
ಕಮಲಶಿಲೆ ಮೇಳ ‘ಎ’ದೇವಂಗಿ 
ಕಮಲಶಿಲೆ ಮೇಳ ‘ಬಿ’ಬೇಳೂರು ಬಡಾಬೆಟ್ಟು 
ಶ್ರೀ ಸಸಿಹಿತ್ಲು ಭಗವತೀ ಮೇಳ ಕುಂದಾಪುರ, ನಂದಿಬೆಟ್ಟು ಬಿ.ಎಚ್.ಎಂ ರಸ್ತೆ, ಶ್ರೀ ಮಾರಿಕಾಂಬಾ ದೇವಸ್ಥಾನದ ಬಳಿ, KSRTC ಬಸ್ ನಿಲ್ದಾಣ ಹಿಂಬದಿ  – ಶ್ರೀ ಭಗವತಿ ಮಹಾತ್ಮೆ 
ಶ್ರೀ ಅಮೃತೇಶ್ವರೀ ಮೇಳಬೊಬ್ಬರ್ಯ ಚಿಕ್ಕಮ್ಮ ದೇವಸ್ಥಾನ, ಅಚ್ಲಾಡಿ 

ಶ್ರೀ ಸೌಕೂರು ಮೇಳಕುಳ್ಳಂಬಳ್ಳಿ ಮಹಾಮಾಯಿ ದೇವಸ್ಥಾನ – ಪುಷ್ಪ ಚಂದನ 
ಶ್ರೀ ಹಾಲಾಡಿ ಮೇಳಆಲ್ಗದ್ದೆಕೇರಿ ಶಾಲಾ ವಠಾರ 
ಶ್ರೀ ಬೆಂಕಿನಾಥೇಶ್ವರ ಮೇಳ  ಕಾಪು ಮಜೂರು ಕೊಂಬಗುಡ್ಡೆ ಸತ್ಯದೇವತೆ ದೇವಸ್ಥಾನ – ಮಹಿಮೆದ ಮಂತ್ರದೇವತೆ 
ಶ್ರೀ ಮಡಾಮಕ್ಕಿ ಮೇಳಕುಂಭಾಶಿ ಚೌಡೇಶ್ವರಿ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕಲ್ಯಾಣಪುರ ಪಕ್ಕಿಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿ – ಸರ್ಪ ಶಪಥ 
ಶ್ರೀ ಹಿರಿಯಡಕ ಮೇಳಬಲ್ಯ ಹೊಸ್ಮಠ ಶ್ರೀ ಅಯ್ಯಪ್ಪ ಭಜನಾ ಮಂದಿರ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಕೊಬ್ಬುಕೋಣ್ ಮನೆ, ಹೊಯ್ಯಾಣ
ಶ್ರೀ ಸಿಗಂದೂರು ಮೇಳವಕ್ವಾಡಿ ಪಂಚಾಯತ್ ವಠಾರ 
ಶ್ರೀ ನೀಲಾವರ ಮೇಳ ಕೋಟಲಿಂಗೇಶ್ವರ ದೇವಸ್ಥಾನ, ರಥಬೀದಿ ಕೋಟೇಶ್ವರ 
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ಕೋಣಂದೂರು, ಮಕ್ಕಿಬೈಲು  
ಶ್ರೀ ಮೇಗರವಳ್ಳಿ ಮೇಳ ಖಂಡಕ – ನಾಗಶ್ರೀ