Saturday, August 29, 2026
Home Blog Page 348

ಮೇಳಗಳ ಇಂದಿನ (19.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (19.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಳಸ ಸಮೀಪ ಹಳುವಳ್ಳಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣ – ಹಿರಣ್ಯಾಕ್ಷ, ಶ್ರೀನಿವಾಸ ಕಲ್ಯಾಣ 

ಕಟೀಲು ಒಂದನೇ ಮೇಳ = ಕಟೀಲು ಕ್ಷೇತ್ರ (1)

ಕಟೀಲು ಎರಡನೇ ಮೇಳ ==   ಬೊಂಡಾಲ ಬಂಟ್ವಾಳ  

ಕಟೀಲು ಮೂರನೇ ಮೇಳ= ಶಿವಕೃಪಾ ಆಡಿಟೋರಿಯಂ, ಪರ್ಪುಂಜ  ಪುತ್ತೂರು 

ಕಟೀಲು ನಾಲ್ಕನೇ ಮೇಳ  == ಸುಂಕದಕಟ್ಟೆ ಆರ್ಟ್ಸ್, ಸುಂಕದಕಟ್ಟೆ ಬಜಪೆ 

ಕಟೀಲು ಐದನೇ ಮೇಳ == ಮೇಲೆಕ್ಕಾರು, ಪೆರ್ಮುದೆ ವಯಾ ಬಜಪೆ 

ಕಟೀಲು ಆರನೇ ಮೇಳ == ಗಾಂಧಿನಗರ, ಮೂಡುಬಿದ್ರೆ 

ಮಂದಾರ್ತಿ ಒಂದನೇ ಮೇಳ  ==  ದೋರ್ ಗಲ್ಲು ಹಿರೇಕೊಡಿಗೆ ಕೊಪ್ಪ 

ಮಂದಾರ್ತಿ ಎರಡನೇ ಮೇಳ   ==   ನೀರ್ಜೆಡ್ಡು, ಹೆಗ್ಗುಂಜೆ ಕೂಡಾಟ 

ಮಂದಾರ್ತಿ ಮೂರನೇ ಮೇಳ  ==   ನೀರ್ಜೆಡ್ಡು, ಹೆಗ್ಗುಂಜೆ ಕೂಡಾಟ    

ಮಂದಾರ್ತಿ ನಾಲ್ಕನೇ ಮೇಳ   ==  ತೋಟದಬೆಟ್ಟು ಅಸೋಡು  

ಮಂದಾರ್ತಿ    ಐದನೇ ಮೇಳ  ==  ದುರ್ಗಾನಿಲಯ ಕುದ್ರೆಬೆಟ್ಟು ಉಪ್ಪೂರು 

ಶ್ರೀ ಹನುಮಗಿರಿ ಮೇಳ  ==  ಅಡ್ವೆ ಶ್ರೀ ಮಹಾಗಣಪತಿ ದೇವಸ್ಥಾನ – ಮಹಾಕಲಿ ಮಗಧೇಂದ್ರ  

ಶ್ರೀ ಸಾಲಿಗ್ರಾಮ ಮೇಳ == ಆಗುಂಬೆ ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಕುಮಟಾ ಮಣಕಿ ಗ್ರೌಂಡ್ – ಸುಧನ್ವಾರ್ಜುನ, ಚಂದ್ರಾವಳಿ, ಸುದರ್ಶನ 

ಶ್ರೀ ಸುಂಕದಕಟ್ಟೆ ಮೇಳ  ==  ಕರ್ಪೆ ನೆಕ್ಲಾಜೆ – ಅಬ್ಬರದ ಬಬ್ಬರ್ಯ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಾಡಿಮನೆ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹಾಡಿಮನೆ ಮುದೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶಿವಪಾರ್ವತಿ ಸದನ, ರಾಮಮಂದಿರ ಹತ್ತಿರ, ಮುಖ್ಯ ರಸ್ತೆ ಉಪ್ಪಿನಕುದ್ರು 

ಶ್ರೀ ಪಾವಂಜೆ ಮೇಳ  ==  ಕಾಂತಾವರ ಅಂಬೋಡಿಮಾರ್ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ಅರ್ಪಾಲು ಕಮಲಶಿಲೆ 

ಕಮಲಶಿಲೆ ಮೇಳ ‘ಬಿ‘ == ಕೆರ್ಕಾಡು 

ಶ್ರೀ ಬಪ್ಪನಾಡು ಮೇಳ == ಚಿತ್ರಾಪು ಶಾಲಾ ವಠಾರ – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ == ಶಂಕರ ಮರಕಾಲರ ಮನೆ, ವಡ್ಡರ್ಸೆ 

ಶ್ರೀ ಸೌಕೂರು ಮೇಳ == ಕೆದೂರು ಧರ್ಮದಗೋಳಿ ಹಳೆಯಮ್ಮ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಜಂಬಳ್ಳಿ ಸರ್ಕಲ್ ಹೊಸನಗರ – ಶ್ರೀ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ಕಾರ್ಕಳ ಅಯ್ಯಪ್ಪನಗರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಹಿರೆಬೆಟ್ಟು ಚಿಂಟಿಕೆರೆ – ಶಶಿಪ್ರಭಾ, ಕಂಸವಧೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಾರ್ಕೂರು ಹನೇಹಳ್ಳಿ ತೆಂಕುಮಕ್ಕಿ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಗುಂಡ್ಯಡ್ಕ 5 ಸೆಂಟ್ಸ್ ಅಂಗನವಾಡಿ ಬಳಿ – ಮಾಯೊದ ಅಜ್ಜೆ  

ಶ್ರೀ ಶನೀಶ್ವರ ಮೇಳ == ಮಳಲು ತಾಯಿ ದೇವಸ್ಥಾನ ಮಣೂರು 

ಶ್ರೀ ಸಿಗಂದೂರು ಮೇಳ == ನಾಡಾ ಸಂಸಾಡಿ ಶುಭ ನಿಲಯ 

ಶ್ರೀ ನೀಲಾವರ ಮೇಳ  == ಗೋಪಾಲಕೃಷ್ಣ ನಗರ ಹೊಂಬಾಡಿ ಹುಣ್ಸೆಮಕ್ಕಿ 

ಶ್ರೀ ಮಂಗಳಾದೇವಿ ಮೇಳ == ಮೂಡುಶೆಡ್ಡೆ – ಬಾಲೆ ಮಾಣಿಮಾಂಧವೆ (ತುಳು)

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ದೆಮ್ಲಾಪುರ 

ಶ್ರೀ ಮೇಗರವಳ್ಳಿ ಮೇಳ ==  ನಿಲುವಾಗಿಲು – ಕುಲದೈವ ಪಂಜುರ್ಲಿ 

ಯಕ್ಷಾಗಸದ ಚಂದಿರ, ಯಕ್ಷರಂಗದ ಅಭಿಮನ್ಯು ಡಾ. ಪುತ್ತೂರು ಶ್ರೀಧರ ಭಂಡಾರಿ ಇನ್ನಿಲ್ಲ (Puttur Sridhara Bhandari no more)

ಈ ವರ್ಷ ಯಕ್ಷರಂಗಕ್ಕೆ ಅನಿರೀಕ್ಷಿತಗಳ ಮೇಲೆ ಅನಿರೀಕ್ಷಿತಗಳೇ ಸಂಭವಿಸುತ್ತಿವೆ. ಇದೀಗ ಮತ್ತೊಂದು ರಾತ್ರಿ ಆಘಾತದ ಸುದ್ದಿ ಬಂದಿದೆ. ಯಕ್ಷರಂಗದ ಅಭಿಮನ್ಯು, ಯಕ್ಷಾಗಸದಲ್ಲಿ ಚಂದಿರನಂತೆ ಬೆಳಗಿದ ಪ್ರಸಿದ್ಧ ತೆಂಕು ತಿಟ್ಟಿನ ಪ್ರಸಿದ್ಧ ಪುಂಡುವೇಷಧಾರಿಯಾಗಿದ್ದ ಡಾ. ಪುತ್ತೂರು ಶ್ರೀಧರ ಭಂಡಾರಿಯವರು ನಿನ್ನೆ  ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಯಕ್ಷಗಾನ ಕ್ಷೇತ್ರದಲ್ಲಿ ಶ್ರೀಧರ ಭಂಡಾರಿಯವರ ಹೆಸರು ಕೇಳದವರಿಲ್ಲ.  ಓದಿದ್ದು ಕೇವಲ 5ನೇ ತರಗತಿ. ಆದರೆ ಯಾರೂ ಊಹಿಸದೆ ಇದ್ದ ಎತ್ತರಕ್ಕೆ ಏರಿ ಗೌರವ ಡಾಕ್ಟರೇಟ್ ಪದವಿಯನ್ನು ತನ್ನದಾಗಿಸಿಕೊಂಡ ಸಾಧಕ. 

ಯಕ್ಷಗಾನದ ಅಗ್ರಪಂಕ್ತಿಯ ಕಲಾವಿದರಲ್ಲೊಬ್ಬರಾದ ಶ್ರೀ ಬಳ್ಳಂಬೆಟ್ಟು ಶೀನಪ್ಪ ಭಂಡಾರಿ, ಶ್ರೀಮತಿ ಸುಂದರಿ ದಂಪತಿಗಳ ಪುತ್ರನಾಗಿ 1945ರಲ್ಲಿ ಜನನ. ಮನೆಯ ಪರಿಸರ ತುಂಬೆಲ್ಲಾ ಯಕ್ಷಗಾನ ಪರಂಪರೆಯ ಸುವಾಸನೆ ಘಮಘಮಿಸುತ್ತಿತ್ತು. ಈ ಕಲಾ ಸುಗಂಧದಿಂದ ಪ್ರೇರಿತನಾದ ಬಾಲಕ ಶ್ರೀಧರ ಭಂಡಾರಿ ಇಷ್ಟು ಎತ್ತರಕ್ಕೆ ಏರಿದ್ದು ಈಗ ಇತಿಹಾಸ.   ಶ್ರೀಧರ ಭಂಡಾರಿಯವರ ಪರಂಪರೆಯೇ ಯಕ್ಷಗಾನದ್ದು. ಅಜ್ಜ ಅಂದರೆ ತಂದೆಯವರ ಮಾವ ಬಳ್ಳಂಬಟ್ಟಿನ ಸಮೀಪದ ಜತ್ತಪ್ಪ ರೈಗಳು ಆ ಕಾಲದಲ್ಲಿ ದೊಡ್ಡ ಭಾಗವತರು.

ಭಾಗವತರಾದ ಮೈಂದಪ್ಪ ರೈಗಳು ಶ್ರೀಧರ ಭಂಡಾರಿಯವರ ತಂದೆಯವರಾದ ಶೀನಪ್ಪ ಭಂಡಾರಿಗಳ  ಭಾವ,  ಹೀಗೆ ಯಕ್ಷಗಾನದ ದೊಡ್ಡ ಸಂಬಂಧವೇ ಇತ್ತು. ತಂದೆಯವರಾದ ದಿ| ಶೀನಪ್ಪ ಭಂಡಾರಿಗಳು ಪುತ್ತೂರಿಗೆ ಬಂದು ನೆಲಸಿದರು. ಪುತ್ತೂರಿನಲ್ಲಿ ಮೊದಲಿಗೆ ಬಳ್ಳಂಬೆಟ್ಟು ಮೇಳ ಎಂಬ ಹೆಸರಿನಲ್ಲಿ ಮೇಳ ಮಾಡಿದ್ದರು. ಆ ನಂತರ ಆದಿ ಸುಬ್ರಹ್ಮಣ್ಯ ಮೇಳ ಎಂದು ಪ್ರಾರಂಭಿಸಿದರು.

ತುಂಬಾ ಕಲಾವಿದರು, ಶಿಷ್ಯಂದಿರು ಶೀನಪ್ಪ ಭಂಡಾರಿಯವರ ಗರಡಿಯಲ್ಲಿ ಕಲಿತು ಪಳಗಿದವರು. ಇವರ ಅಣ್ಣನನ್ನು ತಂದೆಯವರೇ ನಾಟ್ಯ ಕಲಿಸಿ ತಯಾರಿ ಮಾಡಿ ಯಕ್ಷಗಾನದಲ್ಲೇ ತೊಡಗುವಂತೆ ಮಾಡಿದ್ದರು. ಆದರೆ ಶ್ರೀಧರ ಭಂಡಾರಿಯವರನ್ನುಮಾತ್ರ ಯಕ್ಷಗಾನ ಬೇಡವೆಂದು ಶಾಲೆಗೆ ಕಳಿಸಿ ವಿದ್ಯಾವಂತನನ್ನಾಗಿ ಮಾಡಬೇಕೆಂಬ ಅಭಿಲಾಷೆ ಶೀನಪ್ಪ ಭಂಡಾರಿಯವರಿಗಿತ್ತು. ಆದರೆ ಆಟದ ವ್ಯಾಮೋಹ, ಯಕ್ಷಗಾನದ ಆಸಕ್ತಿಯಿಂದಾಗಿ ಬಾಲ್ಯದಲ್ಲಿರುವಾಗಲೇ ಯಕ್ಷಗಾನದ ಪ್ರಸಂಗ ಪುಸ್ತಕದ ಪದ್ಯಗಳನ್ನು ಬಾಯಿಪಾಠ ಮಾಡಿ ಹೇಳುತ್ತಿದ್ದ ಬಾಲಕ ಶ್ರೀಧರನಿಗೆ ಶಾಲೆಗೆ ಹೋಗುವಾಗಲೇ ಅಭಿಮನ್ಯು, ಕರ್ಣಪರ್ವ, ಗದಾಪರ್ವ, ಶೂರ್ಪನಖಾ ಮಾನಭಂಗ, ಇಂದ್ರಜಿತು ಕಾಳಗವೇ ಮೊದಲಾದ ಪ್ರಸಂಗದ ಪದ್ಯಗಳು ಬಾಯಿಪಾಠ ಬರುತ್ತಿತ್ತು.

ಆಟಕ್ಕೆ ಬರದಂತೆ ನಿರ್ಬಂಧಿಸಿದರೂ ಆಗಾಗ ಕದ್ದುಮುಚ್ಚಿ ಆಟ ನೋಡಲು ಹೋಗುತ್ತಿದ್ದರು. ಮುಚ್ಚೂರು ಮೇಳ ಎಂಬ ಮೇಳವಿತ್ತು. ಶೀನಪ್ಪ ಭಂಡಾರಿಯವರ ಬಳ್ಳಂಬೆಟ್ಟು ಮೇಳಕ್ಕೂ ಮುಚ್ಚೂರು ಮೇಳಕ್ಕೂ ಪುತ್ತೂರಿನಲ್ಲಿ ಒಂದು ಜೋಡಾಟ ನಡೆಯಿತು. ಆ ಸಮಯದಲ್ಲಿ ಮುಚ್ಚೂರು ಮೇಳದಲ್ಲಿ ಕ್ರಿಶ್ಚಿಯನ್ ಬಾಬು ಎಂಬ ಕಲಾವಿದರಿದ್ದರು. ಪಾಂಡವಾಶ್ವಮೇಧ ಪ್ರಸಂಗದಲ್ಲಿ ಬಭ್ರುವಾಹನ ಪಾತ್ರವನ್ನು ಕ್ರಿಶ್ಚಿಯನ್ ಬಾಬು ಮಾಡಿದ್ದರು. ಕ್ರಿಶ್ಚಿಯನ್ ಬಾಬು ಅವರ ಅದ್ಭುತ ನಾಟ್ಯವನ್ನು ನೋಡಿ ಜನರು ಬೆರಗಾಗಿ ‘ಏನು ನಾಟ್ಯ’ ಎಂದು ಉದ್ಘರಿಸಿದಾಗ ಬಾಲಕ ಶ್ರೀಧರ ಭಂಡಾರಿಯವರಿಗೆ ‘ನನಗೇಕೆ ಈ ಸಾಧನೆ ಸಿದ್ಧಿಸಲಾರದು, ಅವರಂತೆ  ನನಗೇಕೆ ಸಾಧ್ಯವಿಲ್ಲ’ ಎಂಬ ಹಠ ಮೂಡಿತು.

ಆದಕಾರಣ ಮನಸ್ಸಿನಲ್ಲೇ ಕಲ್ಪಿಸಿಕೊಂಡರೂ ತಂದೆಯವರೊಡನೆ ಹೇಳುವ ಧೈರ್ಯವಿರಲಿಲ್ಲ. ಆದರೆ ಮಗನ ಯಕ್ಷಗಾನದ ಆಸಕ್ತಿ, ಚರ್ಯೆಗಳನ್ನು ಗಮನಿಸಿದ ತಂದೆಯವರಾದ ಶೀನಪ್ಪ ಭಂಡಾರಿಯವರು, ‘ಏನು ಮಾಡುವುದು’ ಎಂದು ಆಲೋಚಿಸಿ ಪುತ್ತೂರಿನ ಭರತನಾಟ್ಯದ ಕಲಾವಿದ, ಗುರುಗಳಾಗಿದ್ದ ಕುದ್ಕಾಡಿ ವಿಶ್ವನಾಥ ರೈ ಅವರಲ್ಲಿ ಪ್ರಸ್ತಾಪಿಸಿದಾಗ ಅವರು ತಮ್ಮ ಮನೆಗೆ ಕಳುಹಿಸಿ ಕೊಡುವಂತೆ ಹೇಳಿದ್ದರು. 1960ರ ಸುಮಾರಿಗೆ ಆಗ ಪರ್ಲಡ್ಕದಲ್ಲಿದ್ದ ಕುದ್ಕಾಡಿ ವಿಶ್ವನಾಥ ರೈಗಳ ಮನೆಗೆ ಪ್ರತಿದಿನ ಬೆಳಿಗ್ಗೆ ಭರತನಾಟ್ಯ ಕಲಿಯಲು ಹೋಗುತ್ತಿದ್ದರು.

ಪ್ರತಿನಿತ್ಯವೂ ಪಾಠ ಆಗುತ್ತಿತ್ತು. ಭರತನಾಟ್ಯದ ತರಗತಿಗಳು ಮುಗಿದ ನಂತರ ಗುರುಗಳ ಜೊತೆಗೆ ಭರತನಾಟ್ಯ ಪ್ರದರ್ಶನ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಕಾಳಿಂಗಮರ್ದನದ ಕೃಷ್ಣನೇ ಮೊದಲಾದ ಹಲವಾರು ಪಾತ್ರಗಳ ಭರತನಾಟ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಒಮ್ಮೆ ಕೇರಳದ ಎರ್ನಾಕುಲಂನಲ್ಲಿ ಒಂದು ಯಕ್ಷಗಾನ ಕಾರ್ಯಕ್ರಮ ನಿಗದಿಯಾಗಿತ್ತು. ಆ ದಿನ ಭಂಡಾರಿಯವರು ತಮ್ಮ ತಂದೆಯವರ ಜೊತೆ ಎರ್ನಾಕುಲಂಗೆ ಹೋಗಿದ್ದರು. ಪ್ರಥಮವಾಗಿ ಅಲ್ಲಿ ಕೃಷ್ಣನ ಪಾತ್ರಮಾಡಿದರು. ಗೆಜ್ಜೆ ಕಟ್ಟಿದ ದಿನ ಎರ್ನಾಕುಲಂನಲ್ಲಿ ಆಗಿತ್ತು.

ಸುಮಾರು ಒಂದೆರಡು ವರ್ಷಗಳ ವರೆಗೆ ತಂದೆಯವರ ಜೊತೆಯೇ ವೇಷಗಳನ್ನು ಮಾಡುತ್ತಿದ್ದರು . ಹೀಗೆ ಯಕ್ಷಗಾನ ವೇಷಗಳನ್ನು ಮಾಡಿ ಅನುಭವವಾಗಿತ್ತು. ತುಂಬಾ ತಿಳುವಳಿಕೆ ಬೇಕಾದ ಪಾತ್ರಗಳಲ್ಲದಿದ್ದರೂ ಬಾಲ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ‘ತ್ರಿಜನ್ಮ ಮೋಕ್ಷ’ ಪ್ರಸಂಗದಲ್ಲಿ ಪ್ರಹ್ಲಾದನ ಪಾತ್ರಕ್ಕೆ ಸೂಕ್ತ ಹುಡುಕಾಟದಲ್ಲಿದ್ದ ಧರ್ಮಸ್ಥಳ ಮೇಳದ ಶೇಣಿ ಗೋಪಾಲಕೃಷ್ಣ ಭಟ್ಟರು, ವಿಟ್ಲ ಗೋಪಾಲಕೃಷ್ಣ ಜೋಷಿ, ಪಾತಾಳ ವೆಂಕಟ್ರಮಣ ಭಟ್ಟರೇ ಮೊದಲಾದವರು ಇವರ  ತಂದೆಯವರನ್ನು ಸಂಪರ್ಕಿಸಿ ಧರ್ಮಸ್ಥಳ ಮೇಳದ ಸುಳ್ಯದ ಜಾತ್ರೆಯ ಆಟಕ್ಕೆ ಶ್ರೀಧರ ಭಂಡಾರಿಯವರು ಆ ಮೇಳವನ್ನು ಸೇರಿಕೊಳ್ಳುವಂತೆ ಮಾಡಿದರು.

ಹೀಗೆ 1963ರಲ್ಲಿ ಧರ್ಮಸ್ಥಳ ಮೇಳ ಸೇರಿದರು. ಅಲ್ಲಿಂದ ಮೊದಲ್ಗೊಂಡು ದಿಗ್ಗಜರ ಜೊತೆ ಶ್ರೀಧರ ಭಂಡಾರಿಯವರ ತಿರುಗಾಟ ಪ್ರಾರಂಭವಾಯಿತು. ಶೇಣಿ, ಪಾತಾಳ, ವಿಟ್ಲ ಜೋಷಿ, ಹೊಸಹಿತ್ಲು ಮಹಾಲಿಂಗ ಭಟ್, ಕುಡಾನ ಗೋಪಾಲಕೃಷ್ಣ ಭಟ್ ಮೊದಲಾದವರ ಮಾರ್ಗದರ್ಶನದಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಹೋದರು.  ಅದೇ ಸಮಯದಲ್ಲಿ ಭಂಡಾರಿಯವರ ತಂದೆಯವರ ಗುರುಗಳೂ ಆದ ಕುರಿಯ ವಿಠಲ ಶಾಸ್ತ್ರಿಗಳಲ್ಲಿಗೆ ಹೋಗಿ ಸುಮಾರು ಆರು ತಿಂಗಳುಗಳ ಕಾಲ ಅಲ್ಲಿದ್ದು ಅವರಿಂದ ಯಕ್ಷಗಾನದ ಹೆಚ್ಚಿನ ತರಬೇತಿಯನ್ನು ಪಡೆದರು.

ಭರತನಾಟ್ಯವನ್ನು ಕಲಿತವನಾಗಿದ್ದರೂ ಅದನ್ನು ಪ್ರದರ್ಶಿಸುವ ಹಾಗೂ ಪ್ರಯೋಗ ಮಾಡುವ ಅವಕಾಶ ಅಷ್ಟಾಗಿ ಆಗದಿದ್ದರೂ ಭರತನಾಟ್ಯದ ಕಲಿಕೆಯಿಂದ ಅನುಕೂಲ ತುಂಬಾ ಆಗಿತ್ತು. ಅಭಿನಯಕ್ಕೆ ಹಾಗೂ ಸಣ್ಣ ಸಣ್ಣ ಹೆಜ್ಜೆಗಾರಿಕೆಯನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಭಾರತನಾಟ್ಯದ ಕಲಿಕೆ ಶ್ರೀಧರ ಭಂಡಾರಿಯವರಿಗೆ ಸಹಾಯವಾಯಿತು.

ಶ್ರೀಧರ ಭಂಡಾರಿಯವರ ಮಳೆಗಾಲದ ತಿರುಗಾಟದ ಮೇಳವಾದ  ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯು  ಕರ್ನಾಟಕದಾದ್ಯಂತ ಹೆಚ್ಚಿನ ಎಲ್ಲಾ ಕಡೆಗಳಿಗೆ ಮಳೆಗಾಲದ ತಿರುಗಾಟವನ್ನು ವಿಸ್ತರಿಸಿ ತಿರುಗಾಟದ ತನ್ನ 29 ವರ್ಷವನ್ನು ಪೂರೈಸಿತ್ತು.  

1980ರಲ್ಲಿ ಪುತ್ತೂರು ಮೇಳ ಮಾಡಿದ್ದರು. ಮೊದಲ ಎರಡು ಮೂರು ವರ್ಷಗಳು ಆರ್ಥಿಕವಾಗಿ ಮೇಳ ಮುನ್ನಡೆಯ ಹಾದಿಯಲ್ಲಿತ್ತು. ಆದರೆ ಕ್ರಮೇಣ ಕಲೆಕ್ಷನ್ ಕಡಿಮೆಯಾಗಿ ಆರ್ಥಿಕವಾಗಿ ಕೈಸುಟ್ಟುಕೊಂಡರು. ಕಲಾವಿದರ ಸಂಘಟನೆ ಒಳ್ಳೆಯದಿತ್ತು. ಒಳ್ಳೆಯ ಹೆಸರೂ ಇತ್ತು. ಆದರೆ ನಿರ್ವಹಣೆಗೆ ಆರ್ಥಿಕ ಬಲ ಇರಲಿಲ್ಲ. ಆಮೇಲೆ 1987ರಲ್ಲಿ ಕಾಂತಾವರ ಮೇಳ ಮಾಡಿದರು.

1990ರಲ್ಲಿ ಮೇಳದ ನಿರ್ವಹಣೆಯಿಂದ ನಷ್ಟವನ್ನನುಭವಿಸಿ ಬೇಸತ್ತು ಸ್ವಂತ ಮೇಳವನ್ನು ಕೈಬಿಟ್ಟು ಪುನಃ ಧರ್ಮಸ್ಥಳ ಮೇಳಕ್ಕೆ ಸೇರಿದರು. ಅಲ್ಲಲ್ಲಿ ನಾಟ್ಯ ತರಗತಿಗಳು, ಮಳೆಗಾಲದ ಪ್ರದರ್ಶನಗಳು ಮೊದಲಾದುವುಗಳು ಭಂಡಾರಿಯವರಿಗೆ ಹೆಸರು ತಂದುಕೊಟ್ಟಿತು. ಆರ್ಥಿಕವಾಗಿಯೂ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಂಡರು. ಈಗಂತೂ ಮಳೆಗಾಲದಲ್ಲಿ ಇವರ ಯಕ್ಷಗಾನ ತಂಡವನ್ನು ನೋಡಿಯೇ ಅನೇಕ ಕಾರ್ಯಕ್ರಮಗಳು ಸಿಗುತ್ತವೆ. ಸಮಯಾವಕಾಶವಿಲ್ಲದಷ್ಟು ಆಟಗಳು ಸಿಗುತ್ತವೆ. ಸಮಯ, ದಿನಗಳ ಹೊಂದಿಸುವಿಕೆ ಕಷ್ಟಸಾಧ್ಯವಾಗಿ ಕೆಲವನ್ನು ಬಿಟ್ಟದ್ದೂ ಉಂಟು ಎಂದು ಶ್ರೀಧರ ಭಂಡಾರಿಯವರು ಹೇಳುತ್ತಿದ್ದರು. 

“ನನ್ನನ್ನು  ರಂಗದಲ್ಲಿ ಬೆಳೆಸಿದ್ದು ಹೊಸಹಿತ್ಲು ಮಹಾಲಿಂಗ ಭಟ್ಟರು” ಎಂದು ಅವರನ್ನು ನೆನಪಿಸಿಕೊಳ್ಳುತ್ತಿದ್ದ  ಶ್ರೀಧರ ಭಂಡಾರಿಯವರು ಪುತ್ತೂರಿನಲ್ಲಿ ಎರಡು ಮೂರು ಕಡೆ ನಾಟ್ಯ ತರಗತಿಗಳನ್ನು ನಡೆಸುತ್ತಿದ್ದರು. ಮುಂಬಯಿಯಲ್ಲಿ ಹಲವಾರು ಕಡೆ ನಾಟ್ಯ ನಿರ್ದೇಶನ, ತರಗತಿಗಳನ್ನು ಮಾಡಿದ್ದಾರೆ. 

ಯಕ್ಷಗಾನದಲ್ಲಿ ಒಬ್ಬ ವ್ಯಕ್ತಿಯಾಗಿ ಏನೆಲ್ಲಾ ಸಾಧನೆಗಳನ್ನು ಮಾಡಬಹುದೆಂದು ಇತರ ಕಲಾವಿದರಿಗೆ ತೋರಿಸಿಕೊಟ್ಟ ಒಬ್ಬ ಮಹಾನ್ ಕಲಾವಿದ ಶ್ರೀಧರ ಭಂಡಾರಿಯವರು ಈಗ ನಮ್ಮೊಂದಿಗಿಲ್ಲ ಎನ್ನುವುದು ಎಂಬುದು ಅತೀವ ದುಃಖವನ್ನು ನೀಡುವ ವಿಚಾರ. ಅವರಂತಹ ಅನರ್ಘ್ಯ ರತ್ನವನ್ನು ಕಳೆದುಕೊಂಡು ಯಕ್ಷರಂಗ ಬಡವಾಗಿದೆ. ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ನೀಡಲೆಂದು ಸಮಸ್ತ ಯಕ್ಷಾಭಿಮಾನಿಗಳ ಪರವಾಗಿ ಪ್ರಾರ್ಥನೆ.  

ಲಂಕಾದಹನ-ಪ್ರಮೀಳಾರ್ಜುನ- ಕನಕಾಂಗಿ ಕಲ್ಯಾಣ – ಮಂದರ್ತಿ ಮೇಳದ ಯಕ್ಷಗಾನ ಬಯಲಾಟ

ಮಂದರ್ತಿ ಮೇಳದ ಯಕ್ಷಗಾನ ಬಯಲಾಟವು  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾವೂರು, ಮಂಗಳೂರು ಇಲ್ಲಿ  ನಾಡಿದ್ದು  ದಿನಾಂಕ 20-2-2021ರಂದು ಶನಿವಾರ  ರಾತ್ರಿ 8.30ರಿಂದ ಬೆಳಗಿನ ತನಕ ನಡೆಯಲಿದೆ. 
ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳ, ಮಂದರ್ತಿ

 ಪ್ರಸಂಗಗಳು – ಲಂಕಾದಹನ-ಪ್ರಮೀಳಾರ್ಜುನ- ಕನಕಾಂಗಿ ಕಲ್ಯಾಣ


 ಸ್ಥಳ : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾವೂರು, ಮಂಗಳೂರು.


 ದಿನಾಂಕ:  20-2-2021, ಶನಿವಾರ. ರಾತ್ರಿ 8.30ರಿಂದ. 

ಕಲಾಭಿಮಾನಿಗಳಿಗೆ ಆದರದ ಸ್ವಾಗತ.  ಆಟದ ನಡುವೆ ಭಾಷಣ, ಸನ್ಮಾನ ಇತ್ಯಾದಿ ತಡೆಗಳಿರುವುದಿಲ್ಲ. ಮತ್ತು ಪ್ರೇಕ್ಷಕರಿಗೆ ಶೌಚಾಲಯ ವ್ಯವಸ್ಥೆ ಇದೆ ಹಾಗೂ ಬಯಲಾಟವು ದೇವಾಲಯದ ಹೊರಾಂಗಣದಲ್ಲಿ ನಡೆಯುತ್ತದೆ ಎಂದು ಆಯೋಜಕರಾದ ಶ್ರೀ ದೇವು ಹನೆಹಳ್ಳಿ, ಶ್ರೀಮತಿ ಗೀತಾ ಹನೆಹಳ್ಳಿ ಮತ್ತು ಕುಟುಂಬದವರು ತಿಳಿಸಿದ್ದಾರೆ.

ರಾಜ್ಯಮಟ್ಟದ ಆರನೆಯ ಅರೆಹೊಳೆ ನಾಟಕೋತ್ಸವ – 18.02.2021ರಿಂದ 22-02-2021ರ ವರೆಗೆ 

18.02.2021 ಗುರುವಾರ
ರಂಗಪಯಣ, ಬೆಂಗಳೂರು  ಇವರಿಂದ ಶ್ರೀನಿವಾಸ ವೈದ್ಯರ ಕಥೆಗಳ ಆಧಾರಿತ ನಾಟಕ ‘ಶ್ರದ್ಧಾ’
ನಿ- ರಾಜ್ ಗುರು
ರಾಜ್ ಗುರು ಅವರಿಗೆ ಅರೆಹೊಳೆ ರಂಗಭೂಮಿ ಪ್ರಶಸ್ತಿ‌ಪ್ರದಾನ

19.02.2021, ಶುಕ್ರವಾರ
ಸೌಗಂಧಿಕಾ ರಂಗ ತಂಡ, ಪುತ್ತೂರು ಇವರಿಂದ ರವೀಂದ್ರನಾಥ ಠಾಗೋರರ ಸಣ್ಣ ಕಥೆಗಳ ಆಧಾರಿತ ನಾಟಕ
‘ಲಿವಿಂಗ್ & ದ ಡೆಡ್’
ನಿ- ಪ್ರವೀಣ್ ಎಡಮಂಗಲ
ಅರೆಹೊಳೆ ಯುವ ರಂಗ ಸನ್ಮಾನ – ಪೃಥ್ವಿ ಎಸ್ ರಾವ್

20-02-2021, ಶನಿವಾರ

ಮಂದಾರ (ರಿ) ಬ್ರಹ್ಮಾವರ ಅಭಿನಯಿಸುವ ಕನ್ನಡ ನಾಟಕ ‘ಕೊಳ್ಳಿ’
ರ-ಜಿ ಎಸ್ ಭಟ್, ಸಾಗರ. ನಿ- ರೋಹಿತ್ ಎಸ್ ಬೈಕಾಡಿ
ಅರೆಹೊಳೆ ಯುವ ರಂಗ ಸನ್ಮಾನ- ಪ್ರಶಾಂತ್ ಉದ್ಯಾವರ

21-02-2021,ಬಾನುವಾರ
ಲೋಗೋಸ್ ಥಿಯೇಟರ್ ಟ್ರೂಪ್, ರೆ.ಫಾ.ಆಲ್ವಿನ್ ಸೆರಾವೋ ರಚಿಸಿದ  ಕೊಂಕಣಿ ನಾಟಕ ‘ಗೀತ್’
ರಂಗದಲ್ಲಿ- ಕ್ರಿಸ್ಟೋಫರ್ ನೀನಾಸಂ/ಝೀನಾ ಬ್ರ್ಯಾಗ್ಸ್
ಅರೆಹೊಳೆ ಯುವ ರಂಗ ಸನ್ಮಾನ- ಕ್ಲೆನ್ ವಿನ್ ಫೆರ್ನಾಂಡಿಸ್

22-02-2021,ಸೋಮವಾರ
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇವರಿಂದ ಭಾವನಾ ಕೆರೆಮಠ ಅಭಿನಯಿಸುವ ಏಕವ್ಯಕ್ತಿ ನಾಟಕ ‘ಅಹಲ್ಯಾ’
ನಿ- ರವಿರಾಜ್ ಹೆಚ್ ಪಿ
ಅರೆಹೊಳೆ ಯುವ ರಂಗ ಸನ್ಮಾನ- ವಿಜಯ್ ಮಯ್ಯ ಐಲ

ಇದೇ ದಿನ ಅರೆಹೊಳೆ ಪ್ರತಿಷ್ಠಾನದ ವೆಬ್ ಸೈಟ್ ಲೋಕಾರ್ಪಣೆ

ಪ್ರತೀ ನಾಟಕಕ್ಕೂ ಪ್ರವೇಶ ಉಚಿತ

ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವಳದ ಜಾತ್ರೆ – ನಾಳೆ (19.01.2021) ಸಾಂಸ್ಕೃತಿಕ ಕಾರ್ಯಕ್ರಮ, ರಥೋತ್ಸವ ಮತ್ತು ಸುಡುಮದ್ದು ಸೇವೆ 

ಪುತ್ತೂರಿಗೆ ಸಮೀಪದ ಕಬಕ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ರಥೋತ್ಸವ ಕಾರ್ಯಕ್ರಮ ನಿನ್ನೆ 17.01.2020 ರಂದು ಆರಂಭವಾಗಿದೆ.

ಈ ಕಾರ್ಯಕ್ರಮ  17.01.2020ರಿಂದ 20.01.2021ರ ತನಕ ನಡೆಯಲಿದೆ. ಪ್ರತಿದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.  

ನಾಳೆ 19.01.2021ರಂದು ರಥೋತ್ಸವ ಮತ್ತು ಸುಡುಮದ್ದು ಸೇವೆ ನಡೆಯಲಿದೆ. 

ಕೊನೆಯ ದಿನ ಅಂದರೆ  20.01.2021ರಂದು ದೂಮಾವತಿ ಗುಳಿಗ ದೈವಗಳ ತಂಬಿಲ ಸೇವೆ, ಭಂಡಾರ ತೆಗೆಯುವುದು ಮತ್ತು ದೈವಗಳ ನೇಮ ನಡೆಯಲಿದೆ. 

ಸೂಚನಾ ಫಲಕದ ಬುಡದಲ್ಲಿಯೇ ತ್ಯಾಜ್ಯದ ರಾಶಿ – ಕಸ ಎಸೆಯುತ್ತಿರುವವರು ಯಾರು? ವೀಡಿಯೊ ನೋಡಿ 

‘ಇಲ್ಲಿ ಯಾವುದೇ ಭಿತ್ತಿಪತ್ರಗಳನ್ನು ಅಂಟಿಸಬಾರದು’ ಎಂಬ ಸೂಚನೆಯುಳ್ಳ ಬರಹದ ಸಮೀಪದಲ್ಲಿಯೇ ಭಿತ್ತಿಪತ್ರಗಳನ್ನು ಅಂಟಿಸುತ್ತಾರೆ. ಇಲ್ಲಿ ಮೂತ್ರ ಶಂಕೆ ಮಾಡಬಾರದು ಎಂದು ಬರೆದ ಬರಹದ ಬುಡದಲ್ಲಿಯೇ ಮೂತ್ರಬಾಧೆ ತೀರಿಸಿಕೊಳ್ಳುತ್ತಾರೆ. ಇದು ಕೆಲವು ಜನರ ವಿಕೃತ ಮನೋಭಾವ.

ನಿಜವಾಗಿ ನೋಡಿದರೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹಾ ಕೆಲಸಗಳನ್ನು ಮಾಡಬಾರದು ಎಂದು ತಿಳುವಳಿಕೆಯುಳ್ಳವರಿಗೆ ಅರ್ಥ ಆಗಬೇಕು. ಅದಕ್ಕೆ ಸೂಚನೆಯ ಅಗತ್ಯವಿಲ್ಲ.

ಆದರೆ ಸೂಚನೆಯನ್ನು ನೋಡಿಯೂ ನೋಡದವರಂತೆ ಅದನ್ನು ಉಲ್ಲಂಘಿಸುತ್ತಾರೆ ಎಂದಾದರೆ ಅದು ಉದ್ಧಟತನ. ಇಂತಹಾ ಘಟನೆಗಳಿಗೆ ನಿದರ್ಶನಗಳು ಹೇರಳ.  ಇಲ್ಲಿ ಅದಕ್ಕೊಂದು ಸಾಕ್ಷಿ.  

ಮಡಿಕೇರಿ -ಮಂಗಳೂರು ಹೆದ್ದಾರಿಯಲ್ಲಿ ಮಾಣಿ ಪೇಟೆಯ ಸಮೀಪ ರಸ್ತೆ ಬದಿಯಲ್ಲಿ ಸೂಚನಾ ಫಲಕವೊಂದನ್ನು ಅಳವಡಿಸಿದ್ದಾರೆ. “ನಾಗನ ಸಾನ್ನಿಧ್ಯ ಇರುವುದರಿಂದ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು” ಎಂದು ಸ್ಪಷ್ಟವಾಗಿ ಫಲಕದಲ್ಲಿ  ಉಲ್ಲೇಖಿಸಿದ್ದಾರೆ.

ಆದರೂ ಸೂಚನಾ ಫಲಕದ ಬುಡದಲ್ಲಿಯೇ ತ್ಯಾಜ್ಯದ ರಾಶಿ ಬಂದು ಬಿದ್ದಿದೆ.(ವೀಡಿಯೋ ನೋಡಿ) ನಾಗನ ಬಗ್ಗೆ ಭಯ ಭಕ್ತಿಯಿರುವ ಆಸ್ತಿಕ ಬಂದವರು ಯಾರೂ ಈ ಕೆಲಸ ಮಾಡಲು ಸಾಧ್ಯವಿಲ್ಲ. ಅಕ್ಕಪಕ್ಕದಲ್ಲಿ ಕಸ, ತ್ಯಾಜ್ಯಗಳಿಲ್ಲ. ಈ ಬೋರ್ಡಿನ ಬುಡದಲ್ಲಿ ಮಾತ್ರ ಕಾಣುತ್ತಿದೆ. ಹಾಗಾದರೆ ಇಲ್ಲಿ ಈ ಕೆಲಸ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಈ ಪ್ರದೇಶದ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಾ ಇದೆ. 

ಮೇಳಗಳ ಇಂದಿನ (18.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (18.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಎನ್.ಆರ್. ಪುರ ತಾಲೂಕು ಮೇಗರಮಕ್ಕಿ ಅರೇಹಳ್ಳಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ = ಮಾಪಲಾಜೆಮನೆ, ನಿಡ್ಲೆ, ಬೆಳ್ತಂಗಡಿ 

ಕಟೀಲು ಎರಡನೇ ಮೇಳ ==   ಬೊಂಡಾಲ ರಸ್ತೆ ಬದಿ, ಶಂಭೂರು ಗ್ರಾಮ, ಬಂಟ್ವಾಳ 

ಕಟೀಲು ಮೂರನೇ ಮೇಳ= ಜಯನಗರ, ಸುಳ್ಯ 

ಕಟೀಲು ನಾಲ್ಕನೇ ಮೇಳ  == ಶ್ರೀ ರಾಧಾಕೃಷ್ಣ ಭಜನಾ ಮಂದಿರದ ವಠಾರ, ಕಿನ್ನಿಕಂಬಳ 

ಕಟೀಲು ಐದನೇ ಮೇಳ == ಕುರುಂಬಿಲ್ ಗುತ್ತು, ಐಕಳ 

ಕಟೀಲು ಆರನೇ ಮೇಳ == ಶಕ್ತಿನಗರ, ಕಾನಡ್ಕ ಶಾಲಾ ಮೈದಾನದಲ್ಲಿ 

ಮಂದಾರ್ತಿ ಒಂದನೇ ಮೇಳ  ==  ಹೊನ್ನೆಕಟ್ಟೆ, ಕುದಿನಲ್ಲಿ, ಹಾಲ್ಮುತ್ತೂರು 

ಮಂದಾರ್ತಿ ಎರಡನೇ ಮೇಳ   ==   ಕೊಟ್ಟಬಚ್ಚಲು, ಶಿರಿಯಾರ 

ಮಂದಾರ್ತಿ ಮೂರನೇ ಮೇಳ  ==  ಹೊಸಮನೆ, ಬೈದೆಬೆಟ್ಟು, ಕೆಂಜೂರು 

ಮಂದಾರ್ತಿ ನಾಲ್ಕನೇ ಮೇಳ   ==  ಹುಳಬೆಟ್ಟು ಕಾಡೂರು, ಕೊಕ್ಕರ್ಣೆ 

ಮಂದಾರ್ತಿ    ಐದನೇ ಮೇಳ  ==  ಜೋರಾಡಿಕೊಡಿಮನೆ, ಹಾಲಾಡಿ 

ಶ್ರೀ ಹನುಮಗಿರಿ ಮೇಳ  ==  ದುರ್ಗಾನಿವಾಸ, ಕೈಲಾಜೆ, ದೂಪದಕಟ್ಟೆ (ಕಾರ್ಕಳ) – ರುಕ್ಮಿಣಿ ಕಲ್ಯಾಣ, ಕದಂಬ ಕೌಶಿಕೆ 

ಶ್ರೀ ಸಾಲಿಗ್ರಾಮ ಮೇಳ == ಹೆಬ್ರಿ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ವಜ್ರಳ್ಳಿ – ಭೀಷ್ಮ ವಿಜಯ, ಕುಶಲವ 

ಶ್ರೀ ಸುಂಕದಕಟ್ಟೆ ಮೇಳ  ==  ಸರಪಾಡಿ ಶ್ರೀ ವೆಂಕಟರಮಣ ದೇವಸ್ಥಾನದ ಬೀದಿಯಲ್ಲಿ – ಶ್ರೀ ಕೃಷ್ಣ ಲೀಲಾಮೃತಂ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಳ್ಳಿ ಮೇಲ್ ಜನ್ಮನೆ, ಆಲೂರು (ಎರಡೂ ಮೇಳಗಳ ಕೂಡಾಟ)

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮಾರಣಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಹಳ್ಳಿ ಮೇಲ್ ಜನ್ಮನೆ, ಆಲೂರು (ಎರಡೂ ಮೇಳಗಳ ಕೂಡಾಟ)

ಶ್ರೀ ಪಾವಂಜೆ ಮೇಳ  ==  ದೂಮಾವತಿ ದೈವಸ್ಥಾನ, ಅಲೆವೂರು, ಉಡುಪಿ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ಶ್ರೀ ಚಿಕಮ್ಮ ದೈವಸ್ಥಾನ, ನೈಲಾಡಿ 

ಕಮಲಶಿಲೆ ಮೇಳ ‘ಬಿ‘ == ಕಟ್ಟೆ ನಾಗಬನ, ಮಣೂರು, ಕೋಟ 

ಶ್ರೀ ಬಪ್ಪನಾಡು ಮೇಳ == ಮೂರ್ಜೆ, ಪೆಲತ್ತಕಟ್ಟೆ – ಬಂಗಾರ್ ಬಾಲೆ 

ಶ್ರೀ ಅಮೃತೇಶ್ವರೀ ಮೇಳ == ‘ಕದ್ರಿಕಟ್ಟು ಕೋಳ 

ಶ್ರೀ ಸೌಕೂರು ಮೇಳ == ಮರತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಗುಬ್ಬಿಹಾಡಿ, ಅಂಪಾರು – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  == ಪುತ್ತೂರು ಪುರುಷರಕಟ್ಟೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಅಜೆಕಾರು ಗುಡ್ಡೆಯಂಗಡಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಪಡುಕೋಣೆ ಶ್ರೀ ಪಂಜುರ್ಲಿ ಗರಡಿ ವಠಾರ 

ಶ್ರೀ ಹಿರಿಯಡಕ ಮೇಳ == ಎಡಪದವು ರಾಮಮಂದಿರ – ಮಾಯೊದ ಅಜ್ಜೆ  

ಶ್ರೀ ಶನೀಶ್ವರ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೇರಂಜೆ

ಶ್ರೀ ಸಿಗಂದೂರು ಮೇಳ == ಬೈಂದೂರು ಹೊಸಾಡು 

ಶ್ರೀ ನೀಲಾವರ ಮೇಳ  == ಬ್ರಹ್ಮಾವರ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಸ್ಟ್ಯಾಂಡ್ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ತೂದೂರು 

ಶ್ರೀ ಮೇಗರವಳ್ಳಿ ಮೇಳ ==  ಸೊನಲೆ – ಕುಲದೈವ ಪಂಜುರ್ಲಿ 

ಪೆರ್ಮುದೆ ಜಯಪ್ರಕಾಶ ಶೆಟ್ಟಿ –  ಆಟಕ್ಕೂ ಸೈ, ಕೂಟಕ್ಕೂ ಸೈ 

ಇಂದು ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆ ಎಂಬ ಎರಡೂ ವಿಭಾಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಕಲಾವಿದರನೇಕರಿದ್ದಾರೆ. ಕೆಲವರು ಅನುಭವಿಗಳಾಗಿ ಮೆರೆಯುತ್ತಿದ್ದರೆ, ಉದಯೋನ್ಮುಖರೂ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಆಟ-ಕೂಟಗಳೆರಡರಲ್ಲಿ ಪ್ರಸ್ತುತ ಚಲಾವಣೆಯಲ್ಲಿರುವ ಕಲಾವಿದರಲ್ಲೊಬ್ಬರು ಪೆರ್ಮುದೆ ಜಯಪ್ರಕಾಶ ಶೆಟ್ಟಿ. (ಕುಡಾಲು ಭಂಡಾರಗುತ್ತು) ಪ್ರಸ್ತುತ ಶ್ರೀ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.


ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರು ಕಾಸರಗೋಡು ಜಿಲ್ಲೆಯ ಕುಡಾಲ್ ಮೇರ್ಕಳ ಗ್ರಾಮದ ಕುಡಾಲುಗುತ್ತು ಮನೆಯಲ್ಲಿ 1975ನೇ ಇಸವಿ ಎಪ್ರಿಲ್ 26ನೇ ತಾರೀಕಿನಂದು ಕುಡಾಲುಗುತ್ತು ಬಾಲಕೃಷ್ಣ ಶೆಟ್ಟಿ ಮತ್ತು ಲೀಲಾವತಿ ಶೆಟ್ಟಿ ದಂಪತಿಗಳಿಗೆ ಮಗನಾಗಿ ಜನಿಸಿದರು. ಬಾಲಕೃಷ್ಣ ಶೆಟ್ಟಿಯವರು ಹವ್ಯಾಸೀ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಇವರ ಸೋದರಮಾವ ಕುಡಾಲುಗುತ್ತು ಬಾಬು ಶೆಟ್ಟಿಯವರೂ ಹವ್ಯಾಸೀ ಅರ್ಥಧಾರಿಯಾಗಿದ್ದರು.

ಖ್ಯಾತ ಕಲಾವಿದರಾದ ಗುಂಪೆ ರಾಮಯ್ಯ ರೈಗಳೂ (ತಂದೆಯ ಮಾವ), ಪೆರುವಾಯಿ ನಾರಾಯಣ ಶೆಟ್ಟಿಯವರೂ (ಗುರು ಮತ್ತು ಮಾವ) ಜಯಪ್ರಕಾಶ ಶೆಟ್ಟಿಯವರ ಬಂಧುಗಳೇ ಆಗಿದ್ದರು. 4ನೇ ತರಗತಿಯವರೇಗೆ ಕುಡಾಲು ಶಾಲೆಯಲ್ಲಿ ಓದು. 5ರಿಂದ 10ನೇ ತರಗತಿ ವರೇಗೆ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹೈಸ್ಕೂಲಿನಲ್ಲಿ ಓದುತ್ತಿರುವಾಗ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು.

ಇವರ ತಂದೆಯ ಸೋದರಮಾವ ಕುಡಾಲುಗುತ್ತು ಬಾಬು ಶೆಟ್ಟಿಯವರು ಪೆರ್ಮುದೆಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಅಲ್ಲಿ ವಾರಕ್ಕೊಂದು ಕೂಟ ನಿರಂತರ ನಡೆಯುತ್ತಿತ್ತು. ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಪ್ರತಿ ಕಾರ್ಯಕ್ರಮಕ್ಕೂ ತೆರಳಿ ಹಾರ್ಮೋನಿಯಂ ಬಾರಿಸುತ್ತಿದ್ದರು. ಮತ್ತು ಗಮನವಿಟ್ಟು ನೋಡುತ್ತಿದ್ದರು. ಅರ್ಥಗಾರಿಕೆಯನ್ನು ಕೇಳುತ್ತಿದ್ದರು.

ಪ್ರಸಂಗಜ್ಞಾನ, ಶ್ರುತಿಜ್ಞಾನ, ರಂಗನಡೆಗಳ ಬಗ್ಗೆ ತಿಳಿದುಕೊಳ್ಳಲು ಇದು ಅವಕಾಶವಾಯಿತು ಆಗಲೇ ಮಾತುಗಾರಿಕೆಯತ್ತ ಗಮನಹರಿಸಿದ್ದರು.  5ನೇ ಕ್ಲಾಸಿನಲ್ಲಿ ಓದುತ್ತಿರುವಾಗ ತಾಳಮದ್ದಳೆಯಲ್ಲಿ ಮೊದಲ ಪಾತ್ರವನ್ನು ನಿರ್ವಹಿಸಿದ್ದರು. ಸೀತಾಪಹಾರ ಪ್ರಸಂಗದ ಮಾರೀಚನಾಗಿ. ವೇಷಧಾರಿಯಾಗಿ ಮೊದಲು ರಂಗಪ್ರವೇಶ ಮಾಡಿದ್ದು 7ನೇ ಕ್ಲಾಸಿನ ವಿದ್ಯಾರ್ಥಿಯಾಗಿದ್ದಾಗ.

ಎಸ್.ಎಸ್. ಎಲ್.ಸಿ. ಓದಿನ ನಂತರ ರಜೆಯಲ್ಲಿ 27 ದಿನಗಳ ಕಾಂತಾವರ ಮೇಳದಲ್ಲಿ ತಿರುಗಾಟವನ್ನೂ ನಡೆಸಿದರು. ಇವರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಕಲಿಕಾಕೇಂದ್ರಕ್ಕೆ ಸೇರಿಸಿದವರು ಅಧ್ಯಾಪಕರಾದ ನಡುಗುಡ್ಡೆ ಜಯಂತ ಮಾಸ್ತರ್. ಕೋಳ್ಯೂರು ಅವರಿಂದ ನಾಟ್ಯಾಭ್ಯಾಸ. ನರೇಂದ್ರ ಮಾಸ್ತರ್ ಅವರಿಂದ ಬಣ್ಣಗಾರಿಕೆಯ ಪಾಠ. ಜತೆಗೆ ಠಾಕೂರ್ ಅವರ ಸಲಹೆ ನಿರ್ದೇಶನಗಳು.

ಧರ್ಮಸ್ಥಳ ಪರಿಸರದಲ್ಲಿ ನಡೆಯುತ್ತಿದ್ದ ಆಟ-ಕೂಟಗಳಿಗೆ ಗುರುಗಳಾದ ಕೋಳ್ಯೂರು ರಾಮಚಂದ್ರ ರಾಯರ ಜತೆ ಜಯಪ್ರಕಾಶ ಶೆಟ್ಟಿಯವರೂ ಹೋಗುತ್ತಿದ್ದರು. “1991ನೇ ಸಾಲಿನ ಆ ತಂಡದಲ್ಲಿ 24 ಮಂದಿ ವಿದ್ಯಾರ್ಥಿಗಳಿದ್ದರು. ಅಭ್ಯಾಸ ಮುಗಿದ ನಂತರ 9 ಮಂದಿಯನ್ನು ವಿವಿಧ ಮೇಳದವರು ಆಯ್ಕೆ ಮಾಡಿ ಕರೆದು ಕೊಂಡು ಹೋಗಿದ್ದರಂತೆ. ಕಟೀಲು ಮೇಳದಲ್ಲಿ ಆಗ ಸಂಗೀತಗಾರರಾಗಿದ್ದ ಇಳಂತಿಲ ಪದ್ಮನಾಭ ಎಂಬವರು ನನ್ನನ್ನು ಕರೆದೊಯ್ದು ಕಟೀಲು ಮೇಳಕ್ಕೆ ಸೇರುವಂತೆ ಮಾಡಿದರು’’ ಎಂದು ಅಂದಿನ ದಿನಗಳನ್ನು ಪೆರ್ಮುದೆಯವರು ನೆನಪಿಸಿಕೊಳ್ಳುತ್ತಾರೆ.

ಮೊದಲು 1ನೇ ಮೇಳಕ್ಕೆ ಆಯ್ಕೆಯಾಗಿದ್ದರು. ಆದರೆ ಅನಿವಾರ್ಯವಾಗಿ ಪೆರ್ಮುದೆಯವರನ್ನು 2ನೇ ಮೇಳಕ್ಕೆ ಕಳುಹಿಸಲಾಯಿತು. ಬಲಿಪ ಭಾಗವತರೂ, ಶ್ರೇಷ್ಠ ಕಲಾವಿದರೂ ಇದ್ದ ಮೇಳ, ಪೆರುವಾಯಿ ನಾರಾಯಣ ಶೆಟ್ಟಿಯವರ ಮರುಪ್ರವೇಶ ಹೀಗೆ ಮೊದಲ ವರ್ಷವೇ ಎರಡು ಭಾಗ್ಯಗಳು ನನಗೆ ಜತೆಯಾಗಿ ಬಂತು ಎಂಬುದು ಜಯಪ್ರಕಾಶ ಶೆಟ್ಟಿಯವರ ಅಭಿಪ್ರಾಯ. ಮೊದಲ 2 ವರ್ಷ ನಿತ್ಯವೇಷದಿಂದ ತೊಡಗಿ ಬೆಳಗಿನ ವರೇಗೂ ಸಣ್ಣಪುಟ್ಟ ವೇಷಗಳು.

ತನ್ನ ಕಲಾಜೀವನದ ಆರಂಭದ ದಿನಗಳು ಹೇಗಿದ್ದವು ಎಂಬುದನ್ನು ಪೆರ್ಮುದೆಯವರು ನಗುನಗುತ್ತಲೇ ಹೀಗೆ ಹೇಳುತ್ತಾರೆ- ‘‘ಮನೆಯಲ್ಲಿ ಬಡತನ ಇತ್ತು. ಜೀವನೋಪಾಯಕ್ಕಾಗಿ ಯಕ್ಷಗಾನವನ್ನು ಆಶ್ರಯಿಸಿದೆ. ಇವನಿಗೆ ಆಟ ಬೇಕಾ? ಮಂಗನ ವೇಷಕ್ಕೆ ಆದೀತು ಎಂದು ಹೀಯಾಳಿಸಿದವರೂ ಇದ್ದಾರೆ. ಹಾಗಾಗಿ ಸಾಧಿಸಬೇಕೆಂಬ ಛಲ ಬಂತು. ಸಹಕಾರ ಪ್ರೋತ್ಸಾಹ ನೀಡಿದವರೂ ಇದ್ದಾರೆ. ಆಟ ನೋಡುತ್ತಿದ್ದೆ. ಓದುತ್ತಿದ್ದೆ. ಹಿರಿಯ ಕಲಾವಿದರ ಸೇವೆ ಮಾಡುತ್ತಿದ್ದೆ. ಕಲಿಕೆಯ ವಿಚಾರದಲ್ಲಿ ರಾಜಿ ಇರುತ್ತಿರಲಿಲ್ಲ. ನಿದ್ದೆ ಮಾಡದೆ ಅಭ್ಯಾಸ ಮಾಡುತ್ತಿದ್ದೆ. ಹಾಸ್ಯ, ಸ್ತ್ರೀವೇಷ, ಬಣ್ಣದ ವೇಷಗಳನ್ನು ಬಿಟ್ಟು ಉಳಿದ ಎಲ್ಲಾ ವೇಷಗಳನ್ನೂ ಮಾಡುವ ಅವಕಾಶ ಸಿದ್ಧಿಸಿದೆ. ನಿತ್ಯವೇಷದಿಂದ ಎದುರುವೇಷದ ವರೇಗೆ ಕಟೀಲು ಮೇಳದಲ್ಲೇ ಬೆಳೆದ ಸಂತೋಷ ಇದೆ.’’

ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಸತತ ಅಧ್ಯಯನದಿಂದ ಕ್ಷಿಪ್ರ ಬೆಳವಣಿಗೆ ಹೊಂದಿದವರು. ಪ್ರಹ್ಲಾದ, ಚಂಡ ಮುಂಡರು, ವಿಷ್ಣು, ಕೃಷ್ಣ ಮೊದಲಾದ ಪುಂಡು ವೇಷಗಳನ್ನು ಮಾಡುತ್ತಾ ಕಿರೀಟ ವೇಷಧಾರಿಯಾಗಿ ತೇರ್ಗಡೆಗೊಂಡರು. 2006ರ ವರೇಗೆ 2ನೇ ಮೇಳದಲ್ಲಿ ವ್ಯವಸಾಯ. 1998ರಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿಯೂ ಕಾಣಿಸಿಕೊಂಡರು. 

2006-2007ರ ತಿರುಗಾಟ ಕಟೀಲು ನಾಲ್ಕನೇ ಮೇಳದಲ್ಲಿ. ಕುಬಣೂರು ಶ್ರೀಧರ ರಾಯರ ಭಾಗವತಿಕೆ. ಪೆರ್ಮುದೆಯವರ ಹೆಚ್ಚಿನ ಎಲ್ಲಾ ವೇಷಗಳಿಗೆ ಸಹಕಲಾವಿದನಾಗಿ ಅಭಿನಯಿಸಿದ್ದೇನೆ. ಸಹಕಲಾವಿದರೊಡನೆ ಉತ್ತಮವಾಗಿ ಸಂಭಾಷಿಸುತ್ತಾರೆ ಎಂಬ ಅನುಭವವಾಗಿದೆ. 2007ರಿಂದ ನಿರಂತರ 9 ವರ್ಷ ಹೊಸನಗರ ಮೇಳ, ಮತ್ತೆ 1 ವರ್ಷ ಎಡನೀರು ಮೇಳ. ಈಗ ಹನುಮಗಿರಿ ಮೇಳದಲ್ಲಿ ತಿರುಗಾಟ. ಹೀಗೆ- ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಕಳೆದ 30 ವರ್ಷಗಳಿಂದ ವೃತ್ತಿಕಲಾವಿದನಾಗಿ ವ್ಯವಸಾಯ ಮಾಡುತ್ತಿದ್ದಾರೆ.
ಕಟೀಲು ಮೇಳದ ತಿರುಗಾಟದಲ್ಲಿ ಆಸ್ರಣ್ಣ ಬಂಧುಗಳ, ಕಲ್ಲಾಡಿ ವಿಠಲ ಶೆಟ್ಟಿಯವರ ಆಶೀರ್ವಾದ, ಸಹಕಾರಗಳಿತ್ತು.

“ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ 2 ವರ್ಷ, ಪುತ್ತೂರು ಶ್ರೀಧರ ಭಂಡಾರಿಗಳ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯಲ್ಲಿ 5 ವರ್ಷ ತಿರುಗಾಟ ನಡೆಸಿದ್ದೇನೆ. ಮಳೆಗಾಲದ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶವನ್ನು ಕಟೀಲು ಪದ್ಮನಾಭರೂ, ಅನೇಕ ಸಂಘಟಕರೂ ಒದಗಿಸಿದ್ದಾರೆ. ಕಟೀಲು ಮೇಳದ ತಿರುಗಾಟದಲ್ಲಿ ಶಿವಾಜಿ ಶೆಟ್ಟಿಯವರೂ ಸಹಕರಿಸಿದ್ದಾರೆ. ಕಷ್ಟದ ದಿನಗಳಲ್ಲಿ ಸಹಾಯವಿತ್ತವರು. ಕಲಾಫೋಷಕ ಡಾ. ಟಿ. ಶ್ಯಾಮ ಭಟ್ ಮತ್ತು ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರು. ಮಾನಸಿಕವಾಗಿ ಕುಂದಿರುವಾಗ ಮರೆಯಲಾಗದ ಸಹಾಯ ಮಾಡಿದ್ದಾರೆ. ಧೈರ್ಯತುಂಬಿ ಪ್ರೋತ್ಸಾಹಿಸಿದ್ದಾರೆ. ತಾಳಮದ್ದಳೆ ಕ್ಷೇತ್ರದಲ್ಲಿ ವಾಸುದೇವ ರಂಗಾಭಟ್ಟರೂ ಸಹಕರಿಸಿ, ಪ್ರೋತ್ಸಾಹಿಸಿದ್ದಾರೆ. ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಪ್ರೋತ್ಸಾಹಿಸಿದ್ದಾರೆ. ಪ್ರೀತಿಸಿದ್ದಾರೆ. ಅಲ್ಲದೆ ಹನುಮಗಿರಿ ಮೇಳದ ತಿರುಗಾಟದಲ್ಲಿ ಕಲಾವಿದರೂ, ತೋಡುಗುಳಿ ಮಹಾಬಲ ಭಟ್ಟರೂ, ಅರವಿಂದ ಹೊಳ್ಳರೂ ಪ್ರೋತ್ಸಾಹಿಸಿದ್ದಾರೆ. ಜೀವನೋಪಾಯಕ್ಕಾಗಿ ಯಕ್ಷಗಾನವನ್ನು ನಂಬಿದ್ದೇನೆ. ಕಲಾ ಮಾತೆಯು ಅನುಗ್ರಹಿಸಿದ್ದಾಳೆ ಎಂಬ ತೃಪ್ತಿ ಇದೆ. ಯಕ್ಷಗಾನದಲ್ಲಿ ಪರಿಪೂರ್ಣನಾಗಲು ಸಾಧ್ಯವಿಲ್ಲ. ನಾನು ಪೂರ್ಣಕಲಾವಿದನಲ್ಲ. ಅರ್ಧ ಕಲಾವಿದ” ಎಂಬುದು ಜಯಪ್ರಕಾಶ ಶೆಟ್ಟಿಯವರ ಅನಿಸಿಕೆ. 

ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಪುರಾಣಜ್ಞಾನ, ಪ್ರಸಂಗನಡೆಗಳನ್ನು ತಿಳಿದು ಮಾತುಗಾರಿಕೆಯಲ್ಲೂ ಪಳಗಿದ ಕಾರಣ ಕೂಟಗಳಲ್ಲೂ ಬೇಡಿಕೆಯ ಕಲಾವಿದರು.

ಲೇಖಕ: ರವಿಶಂಕರ್ ವಳಕ್ಕುಂಜ 

ಕವಿ, ಸಾಹಿತಿ ‘ಮುನಿಸು ತರವೆ’ ಖ್ಯಾತಿಯ ಸುಬ್ರಾಯ ಚೊಕ್ಕಾಡಿ ಅವರಿಗೆ ಈ ಬಾರಿಯ ‘ಮಾಸ್ತಿ ಪ್ರಶಸ್ತಿ’

ಪ್ರಸಿದ್ಧ ಸಾಹಿತಿ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿನಲ್ಲಿ ನೀಡಲಾಗುವ ‘ಮಾಸ್ತಿ ಪ್ರಶಸ್ತಿ’ಗೆ ಕನ್ನಡದ ಪ್ರಸಿದ್ಧ ಕವಿ, ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿ ಅವರು ಆಯ್ಕೆಯಾಗಿದ್ದಾರೆ.

ಶ್ರೀ ಸುಬ್ರಾಯ ಚೊಕ್ಕಾಡಿ ಅವರು ತನ್ನ ನವಿರಾದ ಕಾವ್ಯ ಶೈಲಿಯಿಂದ ಕನ್ನಡ ಸಾರಸ್ವತ ಲೋಕದಲ್ಲಿ ಮನೆಮಾತಾಗಿದ್ದರೂ ಅವರ ಹೆಸರು ಕೇಳಿದೊಡನೆ ಜನರಿಗೆ ಫಕ್ಕನೆ ನೆನಪಾಗುವುದು ಅವರ ‘ಮುನಿಸು ತರವೆ ಮುಗುದೆ, ಹಿತವಾಗಿ ನಗಲು ಬಾರದೆ’ ಎಂಬ ಜನಪ್ರಿಯ ಕವನ. 

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಯು ಈ ಬಾರಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಮಂದಿ ಗಣ್ಯರಿಗೆ ನೀಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಲ್ಲಿ ಸುಬ್ರಾಯ ಚೊಕ್ಕಾಡಿ (ಕಾವ್ಯ), ಸಂಧ್ಯಾ ಎಸ್.ಪೈ (ಶಿಶು ಸಾಹಿತ್ಯ), ಎಸ್.ಆರ್.ವಿಜಯಶಂಕರ (ವಿಮರ್ಶೆ), ಪುರುಷೋತ್ತಮ ಬಿಳಿಮಲೆ (ಸಂಶೋಧನೆ), ಕೇಶವರೆಡ್ಡಿ ಹಂದ್ರಾಳ (ಕಥೆ), ಸ.ರಘುನಾಥ (ಸೃಜನಶೀಲ) ಒಳಗೊಂಡಿದ್ದಾರೆ. ಪ್ರಶಸ್ತಿಯು ತಲಾ ರೂ. 25,000/- ನಗದು, ಮಾಸ್ತಿ ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿದೆ.

ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಮಾರ್ಚ್ 27ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು  ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಏರಿಕೆ – ಸತತ 9ನೇ ದಿನವೂ ಬೆಲೆಯಲ್ಲಿ ಹೆಚ್ಚಳ 

ತೈಲ ಸಂಸ್ಥೆಗಳು ಬುಧವಾರ ಕೂಡ ತೈಲ ಬೆಲೆಯನ್ನು ಏರಿಕೆ ಮಾಡಿದ್ದು, ಸತತ 9ನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ದರವು ಏರಿಕೆಯನ್ನು ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 25 ಪೈಸೆ ಹೆಚ್ಚಾಗಿ 89.54 ರೂಪಾಯಿಗೆ ಏರಿದೆ.

ಡೀಸೆಲ್ ದರವು ಕೂಡ ಲೀಟರ್‌ಗೆ 25 ಪೈಸೆ ಏರಿಕೆಗೊಂಡು 79.95 ರೂಪಾಯಿ ತಲುಪಿದೆ.  ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್ ಮತ್ತು ರೂಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ.

ಎಲ್ಲಾ ದಿನವೂ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಸರ್ಕಾರಿ ತೈಲ ಸಂಸ್ಥೆಗಳು ಪ್ರಕಟಿಸುತ್ತವೆ. ಪೆಟ್ರೋಲ್, ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ದೇಶದ ಪ್ರಮುಖ ನಾಲ್ಕು  ನಗರಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಕೆಳಗೆ ಕೊಡಲಾಗಿದೆ. 

ಬೆಂಗಳೂರು –  ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17: 92.54 (26 ಪೈಸೆ ಏರಿಕೆ) ಫೆಬ್ರವರಿ 16: 92.28 ಫೆಬ್ರವರಿ 15: 88.99 ಫೆಬ್ರವರಿ 14-  88.73ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17-  84.75 (26 ಪೈಸೆ ಏರಿಕೆ) ಫೆಬ್ರವರಿ 16-  84.49 ಫೆಬ್ರವರಿ 15 –  79.35 ಫೆಬ್ರವರಿ 14 – 79.06

ನವದೆಹಲಿ-  ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17 – 89.54 (25 ಪೈಸೆ ಏರಿಕೆ) ಫೆಬ್ರವರಿ 19 – 89.29 ಫೆಬ್ರವರಿ 15: 88.99 ಫೆಬ್ರವರಿ 14 – 88.73 ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17 – 79.95 (25 ಪೈಸೆ ಏರಿಕೆ) ಫೆಬ್ರವರಿ 16 – 79.70 ಫೆಬ್ರವರಿ 15 – 79.35 ಫೆಬ್ರವರಿ 14 – 79.06

ಮುಂಬೈ – ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17 – 96.00 (25 ಪೈಸೆ ಏರಿಕೆ) ಫೆಬ್ರವರಿ 16 – 95.75 ಫೆಬ್ರವರಿ 15 – 95.46 ಫೆಬ್ರವರಿ 14 – 95.21 ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17 – 86.98 (26 ಪೈಸೆ ಏರಿಕೆ) ಫೆಬ್ರವರಿ 16 – 86.72 ಫೆಬ್ರವರಿ 15 – 86.34 ಫೆಬ್ರವರಿ 14 – 86.04


ಚೆನ್ನೈ – ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17 – 91.68 (16 ಪೈಸೆ ಏರಿಕೆ) ಫೆಬ್ರವರಿ 16 – 91.45 ಫೆಬ್ರವರಿ 15 – 91.19 ಫೆಬ್ರವರಿ 14 – 90.96 ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17 – 85.01 (18 ಪೈಸೆ ಏರಿಕೆ) ಫೆಬ್ರವರಿ 16 – 84.77 ಫೆಬ್ರವರಿ 15 – 84.44 ಫೆಬ್ರವರಿ 14 – 84.1