Friday, March 13, 2026
Home Blog Page 325

ಈ ತಾಳಮದ್ದಳೆಯಲ್ಲಿ ಹಿಮ್ಮೇಳದವರೇ ಪಾತ್ರಧಾರಿಗಳು!


ಯಕ್ಷಗಾನ ರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಕರುನಾಡಲ್ಲಿ ಜನಪ್ರಿಯತೆಗೊಂಡ ಸಂಸ್ಥೆ ಡಾ. ರಾಧಾಕೃಷ್ಣ ಉರಾಳರ ನಿರ್ದೇಶಕತ್ವದ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್. ಮಾಸದ ಮೆಲುಕು ಎಂಬ ಶಿರೋನಾಮೆಯಡಿಯಲ್ಲಿ 110 ಕ್ಕೂ ಹೆಚ್ಚು ತಿಂಗಳು ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದ ಹೆಗ್ಗಳಿಕೆ ಈ ಸಂಸ್ಥೆಯದು.

ಯಕ್ಷಗಾನ ಮಾತ್ರವಲ್ಲದೇ ರಂಗಭೂಮಿ, ಚಲನಚಿತ್ರ, ಸಂಗೀತ, ನೃತ್ಯ ಈ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹಲವಾರು ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಾ ಬಂದಿದೆ. ಅಲ್ಲದೆ ಹಲವಾರು ಸಾಮಾಜಿಕ ಕೆಲಸಗಳಲ್ಲೂ ಕೂಡ ಸಕ್ರಿಯವಾಗಿದೆ. ಮಹಾನಗರ ಪಾಲಿಕೆಯವರ ಸ್ವಚ್ಚತಾ ಆಂದೋಲನದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರದರ್ಶಿಸಿದ ‘ ಕಂಟಕೀ ಕಸಾಸುರ” ಎನ್ನುವ ಬೀದಿ ನಾಟಕ ಅಪಾರ ಪ್ರಶಂಸೆಗೆ ಪಾತ್ರವಾಗಿದ್ದಲ್ಲದೇ ಪರಿಸರ ಪರ ಕಾಳಜಿಯನ್ನು ಜನರ ಮನಸಲ್ಲಿ ಬಿತ್ತುವಲ್ಲಿ ಯಶಸ್ವೀಯು ಆಯಿತು.

ಬೆಂಗಳೂರಿನ ಹೆಬ್ಬಾಳದ ಜೈನ್ ಹೆರಿಟೇಜ್ ಶಾಲೆ, ಚಿಕ್ಕಲ್ಲಸಂದ್ರದ ಶ್ರೀ ಸಿದ್ಧಿಗಣಪತಿ ದೇವಾಲಯ, ಗಿರಿನಗರದ ಅರ್ಬನ್ ಕಲಾ ಸ್ಟುಡಿಯೋ ಹಾಗೂ ಉಲ್ಲಾಳ ಉಪನಗರದ ವಿಶ್ವೇಶ್ವರ ಬಡಾವಣೆಯ 4 ನೇ ವಿಭಾಗದ ಕಲಾಗುಡಿಯಲ್ಲಿ ಯಕ್ಷಗಾನ, ಸುಗಮ ಸಂಗೀತ, ರಂಗಭೂಮಿಯ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ.

ಇದೇ ಬರುವ 10-04-2021 ರ ಶನಿವಾರ ಸಂಜೆ 5-30 ರ ಹಾಗೆ ಉಲ್ಲಾಳ ಉಪನಗರದ ವಿಶ್ವೇಶ್ವರ ಬಡಾವಣೆಯ 4 ನೇ ವಿಭಾಗದ ಕಲಾಗುಡಿಯಲ್ಲಿ “ ಗುಡಿ ನಡೆ’ ಎಂಬ ಶೀರ್ಷಿಕೆಯಲ್ಲಿ ಮತ್ತೊಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಲೋಕಕ್ಕೆ ಕಲಾಕದಂಬ ಆರ್ಟ್ ಸೆಂಟರ್ ತನ್ನನ್ನು ತೆರೆದುಕೊಳ್ಳುತ್ತಿದೆ. ಇದರ ಸಲುವಾಗಿ ವೇಷಭೂಷಣಗಳಿಲ್ಲದೆ, ಕುಣಿತಗಳಿಲ್ಲದೇ ಹಿಮ್ಮೇಳ ಹಾಗೂ ಅರ್ಥಗಾರಿಕೆಯ ಮುಮ್ಮೇಳದ ಸಮ್ಮಿಳಿತಗಳಿಂದ ಕೂಡಿದ ಯಕ್ಷಗಾನದ ಇನ್ನೊಂದು ರೂಪ ತಾಳಮದ್ದಲೆಯನ್ನು ಆಯೋಜಿಸಿದ್ದು ಪ್ರಸಂಗ ಕರ್ತ್ರ ಶ್ರೀ ದೇವಿದಾಸರ “ಕರ್ಣ ಭೇದನ” ಎಂಬ ಕಥಾನಕವು ಪ್ರದರ್ಶನಗೊಳ್ಳಲಿದೆ.

ಈ ಒಂದು ತಾಳಮದ್ದಲೆಯ ವೈಶಿಷ್ಟ್ಯತೆ ಏನೆಂದರೆ ಯಕ್ಷಗಾನದ ಹಿಮ್ಮೇಳದವರೇ ಪಾತ್ರಧಾರಿಗಳಾಗಿ ಮಾತಿನ ಮನೆ ಕಟ್ಟುವ ಯಕ್ಷಗಾನ ಕ್ಷೇತ್ರದಲ್ಲೊಂದು ವಿಶಿಷ್ಟ ವಿನೂತನ ಪ್ರಯೋಗ ನಡೆಯಲಿದೆ. ಯಕ್ಷಗಾನ ಕಲಾವಿದರಾದ ದೇವರಾಜ ಕರಬರು ಈ ಕಾರ್ಯಕ್ರಮದ ಸಂಯೋಜಕರಾಗಿದ್ದು, ಇದರ ಪರಿಕಲ್ಪನೆ ಹಾಗೂ ನಿರ್ದೇಶನ ಡಾ. ರಾಧಾಕೃಷ್ಣ ಉರಾಳರದ್ದಾಗಿದೆ. ಭಾಗವಹಿಸಲಿರುವ ಕಲಾವಿದರು ವಿದ್ವಾನ್ ಎ.ಪಿ.ಪಾಠಕ್, ಸುಬ್ರಾಯ ಹೆಬ್ಬಾರ್,ಅಂಬರೀಷ್ ಭಟ್ ಹಾಗೂ ಪ್ರದೀಪ್ ಸಾಮಗ.

ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಶ್ರೀ ರವೀಂದ್ರ ಭಟ್, ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ಶ್ರೀ ಜಯರಾಮ ಆಡಿಗ, ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಸಂಜಯ ಸೂರಿ, ಹಾಗೂ ರಂಗಕರ್ಮಿ ಶ್ರೀ ಶಶಿಧರ ಭಾರಿಘಾಟ್ ಉಪಸ್ಥಿತರಿರಲಿದ್ದಾರೆ.
ಕರೋನದ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಪಾಲಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 9448510582, 9886066732

ಮೇಳಗಳ ಇಂದಿನ (06.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (06.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಯಡಾಡಿ ಮತ್ಯಾಡಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ‘ಕಾಮಧೇನು, ವಿಶಾಲ್ ನಗರ, ಮಹಾವೀರ ಕಾಲೇಜು ಬಳಿ ಮೂಡುಬಿದ್ರಿ  

ಕಟೀಲು ಎರಡನೇ ಮೇಳ ==  ಬೈಲು ಬೀಡಿನ ಬಳಿ ಕೊಳಂಬೆ ಬಜಪೆ 

ಕಟೀಲು ಮೂರನೇ ಮೇಳ== ಕುಂಜಾಡಿ ತರವಾಡುಮನೆ ವಠಾರ ವಯಾ ಪಾಲ್ತಾಡಿ 

ಕಟೀಲು ನಾಲ್ಕನೇ ಮೇಳ  == ಹೊಸಬೆಟ್ಟು ಕುಳಾಯಿ, ಕೆಳಗಿನ ಪೊರ್ದೆ ಚೇಳಾಯೂರು 

ಕಟೀಲು ಐದನೇ ಮೇಳ ==  ‘ಶ್ರೀದುರ್ಗಾ’ ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದ ಬಳಿ  

ಕಟೀಲು ಆರನೇ ಮೇಳ == ‘ಐಗಳ ಹೌಸ್, ಅರಳಗುಡ್ಡೆ ರೋಡ್, ಹಂಗಳೂರು ಕುಂದಾಪುರ 

ಮಂದಾರ್ತಿ ಒಂದನೇ ಮೇಳ  == ಮುಡಾಯಿನಮನೆ ಕುದ್ರುಕೋಡು ನಾವುಂದ ಬೈಂದೂರು 

ಮಂದಾರ್ತಿ ಎರಡನೇ ಮೇಳ   == ಮೆಕ್ಕೆಮನೆ ಪಡುಮುಂಡು ಶಿರಿಯಾರ 

ಮಂದಾರ್ತಿ ಮೂರನೇ ಮೇಳ  == ಕುದ್ರುಮನೆ ಗರಡಿಮನೆ ಹೊಸಾಳ ಬಾರ್ಕೂರು 

ಮಂದಾರ್ತಿ ನಾಲ್ಕನೇ ಮೇಳ   == ಹೆರ್ಮಕ್ಕಿ ಆವರ್ಸೆ  

ಮಂದಾರ್ತಿ ಐದನೇ ಮೇಳ  ==  ಶಬರಿ ನಿಲಯ, ವೆಂಕಪ್ಪ ಶೆಟ್ಟಿ ಹೌಸ್,  ಬಿಜೂರು ಬೈಂದೂರು  

ಶ್ರೀ ಹನುಮಗಿರಿ ಮೇಳ  ==  ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿ – ಕುರುಕ್ಷೇತ್ರ (ರಾತ್ರಿ 7ರಿಂದ)

ಶ್ರೀ ಸಾಲಿಗ್ರಾಮ ಮೇಳ == ಆರಾಲು ಬೀಜಾಡಿ ನಾಲ್ಕುಪಾದ ಹಾಯಿಗುಳಿ ದೈವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ನಿಸ್ರಾಣಿ ಮಲ್ಲಮ್ಮ ದೇವಿಯ ಜಾತ್ರೆ – ನಾಗಶ್ರೀ, ಕುಶಲವ  

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಸಿದ್ಧಿನಿಲಯ, ಹಣಿನಮಕ್ಕಿ ದೇವಲ್ಕುಂದ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರ ಮಾರಣಕಟ್ಟೆ ಮರ್ಡಿಯವರ ಮನೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಸಿದ್ಧಿನಿಲಯ, ಹಣಿನಮಕ್ಕಿ ದೇವಲ್ಕುಂದ 

ಶ್ರೀ ಪಾವಂಜೆ ಮೇಳ  ==  ಗುಂಡಾಳ – ಚಕ್ರ ಚಂಡಿಕೆ, ಶ್ರೀನಿವಾಸ ಕಲ್ಯಾಣ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಗುಂಡ್ಮಿ ಸೀತಾರಾಮ ಉಪಾಧ್ಯಾಯರ ಮನೆಯ ಮುಂಭಾಗ – ಕೊರಾಳ ಚಿಕ್ಕಮ್ಮ ದೇವಿ ಮಹಾತ್ಮೆ 

ಕಮಲಶಿಲೆ ಮೇಳ ‘ಎ‘ ==  ಜನ್ಸಾಲೆ – ಕೂಡಾಟ  

ಕಮಲಶಿಲೆ ಮೇಳ ‘ಬಿ‘ == ಜನ್ಸಾಲೆ – ಕೂಡಾಟ 

ಶ್ರೀ ಬಪ್ಪನಾಡು ಮೇಳ == ಶ್ರೀ ಮಹಾಕಾಳಿ ನವದುರ್ಗಾ ದೇವಸ್ಥಾನ, ನೆಕ್ಕಿಲ ಮಾಲೆಮಾರ್  – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಅಲ್ಲಿಪಾದೆ ದೇವಸ್ಯ ಪಡೂರು ಪೆರಿಯಾರು ದೋಟ – ನಾಗ ತಂಬಿಲ 

ಶ್ರೀ ಅಮೃತೇಶ್ವರೀ ಮೇಳ == ‘ಶ್ರೀಶೈಲ’ ಕೋಟತಟ್ಟು, ಪಡುಕೆರೆ ಜಟ್ಟಿಗೇಶ್ವರ ದೇವಸ್ಥಾನದ ಹತ್ತಿರ – ಸಿಗಂದೂರು ಮೇಳದೊಂದಿಗೆ ಕೂಡಾಟ 

ಶ್ರೀ ಬೋಳಂಬಳ್ಳಿ ಮೇಳ== ನಂದಿಕೇಶ್ವರ ದೇವಸ್ಥಾನ ಅರೆಹೊಳೆ ಬೈಪಾಸ್ 

ಶ್ರೀ ಸೌಕೂರು ಮೇಳ == ಹುಣಸೆಮಕ್ಕಿ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ನೀರೇರಿ ಮಾರುತಿಪುರ ಬಾಣಿಗ – ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಮರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಕುತ್ಯಾರು ಯುವಕ ಮಂಡಲ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಅಲ್ಬಾಡಿ ಬಾರ್ಮಕ್ಕಿ ಮದಗ ವಠಾರ – ಸರ್ಪ ಶಪಥ

ಶ್ರೀ ಹಿರಿಯಡಕ ಮೇಳ == ಮಾಳಚೌಕಿ ಕೊಡಮಣಿತ್ತಾಯ ಭಜನಾ ಮಂದಿರ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಬ್ರಹ್ಮಾವರ ಶೃಂಗಾರ ಫ್ಯಾನ್ಸಿ ಎದುರು 

ಶ್ರೀ ಸಿಗಂದೂರು ಮೇಳ ==  ‘ಶ್ರೀಶೈಲ’ ಕೋಟತಟ್ಟು, ಪಡುಕೆರೆ ಜಟ್ಟಿಗೇಶ್ವರ ದೇವಸ್ಥಾನದ ಹತ್ತಿರ – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ    

ಶ್ರೀ ನೀಲಾವರ ಮೇಳ  == ಹಾರೇಗೋಡು – ದೈವ ಮಂಟಪ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಮೇಗೂರು ದುರ್ಗಾತೋಟ 

ಶ್ರೀ ಮೇಗರವಳ್ಳಿ ಮೇಳ == ನೇರಳಕಟ್ಟೆ – ಕುಲದೈವ ಪಂಜುರ್ಲಿ 

“ಪಾರ್ತಿಸುಬ್ಬ – ಬದುಕು ಬರಹ”

“ಪಾರ್ತಿಸುಬ್ಬ – ಬದುಕು ಬರಹ”
ಕವಿಯನ್ನು ಕುರಿತು ವಿಶೇಷ ಮಾಹಿತಿಗಳು ಒಂದೆಡೆ ಸಂಗ್ರಹಿತಗೊಂಡ ಕೃತಿ.
ಯಕ್ಷಗಾನ ಅಕಾಡೆಮಿ  ಪ್ರಕಟಿಸಿದ ಈ ಹೊತ್ತಗೆ ಗಾತ್ರದಲ್ಲಿ ಕಿರಿದು.(142 ಪುಟ) . ಹೂರಣದಲ್ಲಿ ಹಿರಿದು.


ಕಣ್ಣೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಯಕ್ಷಗಾನ ಅಕಾಡೆಮಿ ಕಳೆದ ವರ್ಷ (2020 ಫೆಬ್ರವರಿ 13,14) ಎರಡು ದಿನಗಳ ವಿಚಾರಗೋಷ್ಠಿಯನ್ನು ನಡೆಸಿತ್ತು. ಯಕ್ಷಗಾನ ಕವಿಯೊಬ್ಬನ  ಕೃತಿಗಳನ್ನು ಆಧರಿಸಿದ ವಿಶಿಷ್ಟ ಗೋ಼ಷ್ಠಿ ಇದು. ಎರಡು ದಿನಗಳ ಕಾಲ ಯಕ್ಷಗಾನದ ಹಿರಿಯ ಚಿಂತಕರುಗಳು ಪಾಲ್ಗೊಂಡು ಮಂಥನ ನಡೆಸಿದ್ದರು.ಆ ಚಿಂತನಗಳನ್ನೆಲ್ಲ ಕ್ರೋಢೀಕರಿಸಿ ಅಕಾಡೆಮಿ ಇತ್ತೀಚೆಗೆ ಪುಸ್ತಕ ಒಂದನ್ನು ಪ್ರಕಟಿಸಿದೆ.


ಈ ಗ್ರಂಥದಲ್ಲಿ ಡಾ.ಎಂ ಪ್ರಭಾಕರ ಜೋಶಿ, ಡಾ.ಪಾದೆಕಲ್ಲು ವಿಷ್ಣು ಭಟ್ಟರು, ಗಣರಾಜ ಕುಂಬ್ಳೆ, ಡಾ.ಚಂದ್ರಶೇಖರ ದಾಮ್ಲೆ, ವಾಸುದೇವ ರಂಗಾ ಭಟ್ಟರು, ಎಂ.ನಾ.ಚಂಬಲ್ತಿಮಾರ್, ಡಾ.ಯು ಶಂಕರನಾರಾಯಣ ಭಟ್ಟರು, ಡಾ.ಆನಂದರಾಮ ಉಪಾಧ್ಯ, ಡಾ.ಕೆ ಕಮಲಾಕ್ಷ, ಡಾ. ಧನಂಜಯ ಕುಂಬ್ಳೆ, ದಿವ್ಯಶ್ರೀ ಡೆಂಬಳ, ಡಾ.ಕೆ.ಎಂ.ರಾಘವ ನಂಬಿಯಾರ್ ಇವರುಗಳ ಸಂಶೋಧನಾತ್ಮಕ ಬರಹಗಳಿವೆ. ಯಕ್ಷಗಾನದ ಅಧ್ಯಯನದ ಆಸಕ್ತರಿಗೆ ಉಪಯುಕ್ತವಾದ ಆಕರ ಗ್ರಂಥ .


  ಪಾರ್ತಿಸುಬ್ಬನನ್ನು ಕುರಿತ ಪ್ರೌಢ ಚಿಂತನೆಗಳುಳ್ಳ ಕೃತಿ ಯಕ್ಷಗಾನಾಸಕ್ತರೆಲ್ಲ ಸಂಗ್ರಹಿಸಿಟ್ಟುಕೊಳ್ಳಬೇಕಾದ ಕೃತಿ.
ಪ್ರಕಾಶಕರು: ಕರ್ನಾಟಕ ಯಕ್ಷಗಾನ ಅಕಡೆಮಿ ಬೆಂಗಳೂರು.
ಬೆಲೆ ರೂ 75/
ಪುಟಗಳು 142

ಶ್ರೀಧರ ಡಿ.ಎಸ್.
ಕಿನ್ನಿಗೋಳಿ.

ಪೆರ್ಮುದೆ ಜಯಪ್ರಕಾಶ ಶೆಟ್ಟಿ ದುರ್ಜಯಾಸುರ, ಜಗದಾಭಿರಾಮ ಸ್ವಾಮಿ ಲೋಹಿತನೇತ್ರ ಹನುಮಗಿರಿ ಮೇಳದವರ ‘ಓಂ ನಮಃ ಶಿವಾಯ’ ವೀಡಿಯೋ

ಪೆರ್ಮುದೆ ಜಯಪ್ರಕಾಶ ಶೆಟ್ಟಿ ದುರ್ಜಯಾಸುರ, ಜಗದಾಭಿರಾಮ ಸ್ವಾಮಿ ಲೋಹಿತನೇತ್ರ ಹನುಮಗಿರಿ ಮೇಳದವರ ‘ಓಂ ನಮಃ ಶಿವಾಯ’   ಶ್ವೇತಕುಮಾರ ಚರಿತ್ರೆ (ಭಾಗ 5)  ದೊಡ್ಡಡ್ಕ ಪುತ್ತೂರಿನಲ್ಲಿ ಜರಗಿದ ಹನುಮಗಿರಿ ಮೇಳದವರಿಂದ ಯಕ್ಷಗಾನ ಪ್ರದರ್ಶನ ‘ಓಂ ನಮಃ ಶಿವಾಯ’ (ಶ್ವೇತಕುಮಾರ ಚರಿತ್ರೆ ) 

ಮೇಳಗಳ ಇಂದಿನ (05.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (05.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕುಂಭಾಶಿ ಕೊರವಡಿ ಕ್ರಾಸ್ ‘ಜ್ಯೋತಿ ನಿಲಯ’ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ‘ನಂದಿನಿ ನಿವಾಸ’ ಮುಂಡ್ಕೂರು  

ಕಟೀಲು ಎರಡನೇ ಮೇಳ ==  ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’

ಕಟೀಲು ಮೂರನೇ ಮೇಳ== ಕುಂಜತ್ತಬೈಲು ಶ್ರೀ ವಿಷುಮೂರ್ತಿ ದೇವಸ್ಥಾನ, ಕೊಂರ್ಗಿಬೈಲು 

ಕಟೀಲು ನಾಲ್ಕನೇ ಮೇಳ  == ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮಿ ಸದನ’ 

ಕಟೀಲು ಐದನೇ ಮೇಳ ==  ದೈಲಬೆಟ್ಟು ಬಾನಂಗಡಿ ಕಲ್ಲಮುಂಡ್ಕೂರು 

ಕಟೀಲು ಆರನೇ ಮೇಳ == ‘ಭಂಡಾರಮನೆ ಹರಿಪಾದೆ ಪಂಜಕೊಯಿಕುಡೆ 

ಮಂದಾರ್ತಿ ಒಂದನೇ ಮೇಳ  == ಪಾರ್ವತೀ ನಿಲಯ ಹೊಸಮಠ ಕೊರ್ಗಿ 

ಮಂದಾರ್ತಿ ಎರಡನೇ ಮೇಳ   == ಆದ್ರಿಜಾ ಹೌಸ್, ಸಾಣಗೇರಿ ತೊಂಭತ್ತು, ಹೆಂಗವಳ್ಳಿ 

ಮಂದಾರ್ತಿ ಮೂರನೇ ಮೇಳ  == ದಾಸನಕಟ್ಟೆ ಮಿಯ್ಯಾರು ನಾಲ್ಕೂರು 

ಮಂದಾರ್ತಿ ನಾಲ್ಕನೇ ಮೇಳ   == ಟೆಂಟಿಯರಮನೆ, ಹಾಲಾಡಿ – ಕೂಡಾಟ 

ಮಂದಾರ್ತಿ ಐದನೇ ಮೇಳ  ==  ಆಶ್ರಿತ್ ಕಾಲೇಜು ಹಿಂಭಾಗ, ಕೋಟ 

ಶ್ರೀ ಹನುಮಗಿರಿ ಮೇಳ  ==  ಶ್ರೀ ಸದಾಶಿವ ದೇವಸ್ಥಾನ ಶಿವಗಿರಿ, ಸಾಲೆತ್ತೂರು – ಶ್ರೀ ರಾಮ ಕಾರುಣ್ಯ (ರಾತ್ರಿ 9.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಬೇಳೂರು ಅರೆಬೈಲು ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಒಂದಾನೆ ಕರಿಬಾಳು – ಮಾಗಧವಧೆ, ಚಕ್ರಚಂಡಿಕೆ 

ಶ್ರೀ ಸುಂಕದಕಟ್ಟೆ ಮೇಳ  == ಮೂಡುಪೆರಾರ ಬಲವಾಂಡಿ ದೈವಸ್ಥಾನದ ಎದುರು ಉದಲಬೆಟ್ಟು – ವಜ್ರ ಕೋಗಿಲೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಭಂಡಾರಿಮನೆ ಮೇಲ್ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಟೆಂಟೇರ್ ಮನೆ ಹಾಲಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕುಕ್ಕಡ ಇಡೂರು ಕುಂಜ್ಞಾಡಿ 

ಶ್ರೀ ಪಾವಂಜೆ ಮೇಳ  ==  ಪೆರ್ಮುದೆ (ಸೋಮನಾಥ ಧಾಮ) ಕಲ್ಪವೃಕ್ಷ ಮನೆಯ ಮುಂಭಾಗ – ಮಾರಣಾಧ್ವರ, ಸುರ ಪಾರಿಜಾತ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಸಾಗರ ಬಿಳೇಕಲ್ ಕಣ್ಣಪ್ಪ ಶುಂಠಿ ಕಣ ಅದರಂತೆ- ದಿವ್ಯ ಸನ್ನಿಧಿ (ಕಾಲಮಿತಿ)

ಕಮಲಶಿಲೆ ಮೇಳ ‘ಎ‘ ==  ಕಟ್ಕೇರೆ 

ಕಮಲಶಿಲೆ ಮೇಳ ‘ಬಿ‘ == ಮುತ್ತಿನಕಟ್ಟೆ ರೋಡ್ ಹೊಸಂಗಡಿ – ಶ್ರೀ ಸಿಗಂದೂರು ಮೇಳದೊಂದಿಗೆ ಕೂಡಾಟ 

ಶ್ರೀ ಬಪ್ಪನಾಡು ಮೇಳ == ಮೂಡುಪೆರಾರ ತನ್ಯ ಬಾಕಿಮಾರು ಗದ್ದೆ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ವಠಾರ – ಮುಕುಂದ ಮುರಾರಿ (ಸಂಜೆ 6ರಿಂದ)

ಶ್ರೀ ಅಮೃತೇಶ್ವರೀ ಮೇಳ ==   ಗುಳ್ಳಾಡಿ ಪದ್ಮಯ್ಯ ಶೆಟ್ಟರ ಮನೆ 

ಶ್ರೀ ಸೌಕೂರು ಮೇಳ ==  ತೊಂಬತ್ತು ಸಾಣಗೇರಿ – ಮಂದಾರ್ತಿ ಮೇಳದೊಂದಿಗೆ ಕೂಡಾಟ 

ಶ್ರೀ ಹಾಲಾಡಿ ಮೇಳ == ಶ್ರೀ ಸೋಮಲಿಂಗೇಶ್ವರ ದೇವಸ್ಥಾನ ಹಾಲಂಬೇರು ಚಂದನ – ನೂತನ ಪ್ರಸಂಗ (ಕಾಲಮಿತಿ)

ಶ್ರೀ ಬೆಂಕಿನಾಥೇಶ್ವರ ಮೇಳ  ==  ಮೂಡುಬೆಟ್ಟು MSEZ ಕಾಲನಿ, ಕೋಡಿಕೆರೆ ರೈಲ್ವೆ ಬ್ರಿಜ್ ಹತ್ತಿರ  – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಹಿರಿಯಡಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಬಾಕಿಮಾರು ಗದ್ದೆ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉದ್ಯಾವರ ಬೊಳ್ವೆಗರಡಿ ವಠಾರ – ಸರ್ಪ ಶಪಥ (ಕಾಲಮಿತಿ)

ಶ್ರೀ ಹಿರಿಯಡಕ ಮೇಳ == ಬೋರ್ಕಟ್ಟೆ ರಾಮಪುರ ಶಾಲಾ ಬಳಿ – ಮಾಯೊದ ಅಜ್ಜೆ  

ಶ್ರೀ ಶನೀಶ್ವರ ಮೇಳ ==ಮಾಸ್ತಿಯಮ್ಮ ಹೈಗುಳಿ ಸಪರಿವಾರ ದೇವಸ್ಥಾನ ಕೆದೂರು ಬಡಬೆಟ್ಟು 

ಶ್ರೀ ಸಿಗಂದೂರು ಮೇಳ ==  ಮುತ್ತಿನಕಟ್ಟೆ ರೋಡ್ ಹೊಸಂಗಡಿ – ಶ್ರೀ ಕಮಲಶಿಲೆ ಮೇಳದೊಂದಿಗೆ ಕೂಡಾಟ    

ಶ್ರೀ ನೀಲಾವರ ಮೇಳ  == ನೀಲಾವರ ಸಣಗಾರಬೆಟ್ಟು – ದೈವ ಮಂಟಪ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಹಾಲುಗುಡ್ಡೆ 

ಶ್ರೀ ಮೇಗರವಳ್ಳಿ ಮೇಳ == ಉಪ್ಪೂರು ತೆಂಕಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಕುಲದೈವ ಪಂಜುರ್ಲಿ 

ಕಟೀಲು ಸಿತ್ಲ ಶ್ರೀಮಾ ನಿಲಯದ ಮುಂಭಾಗದಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ 

ದಿನಾಂಕ 25.04.2021ನೇ ಆದಿತ್ಯವಾರದಂದು ಸಂಜೆ ಘಂಟೆ 7ರಿಂದ ರಾತ್ರಿ ಘಂಟೆ 12ರ ವರೆಗೆ, ಕಟೀಲು ಸಿತ್ಲ ಶ್ರೀಮಾ ನಿಲಯದ ಮುಂಭಾಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. 

ಮಚ್ಚಾರು ಪಡೀಲಿನಲ್ಲಿ ಕಟೀಲು ಮೇಳದ ಯಕ್ಷಗಾನ ಪ್ರದರ್ಶನ 

ದಿನಾಂಕ 23.04.2021ನೇ ಶುಕ್ರವಾರದಂದು ಮಚ್ಚಾರು ಪಡೀಲು ಶ್ರೀ ದೇವಿಕೃಪಾ ಮನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. 

ಮೇಳಗಳ ಇಂದಿನ (04.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (04.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೊಡಪಾಡಿ – ಸುದರ್ಶನ ವಿಜಯ, ರುಕ್ಮಿಣಿ ಕಲ್ಯಾಣ 

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’ 

ಕಟೀಲು ಎರಡನೇ ಮೇಳ ==  ಕಲ್ಲಿಮಾರು ಕೊಣಾಜೆ 

ಕಟೀಲು ಮೂರನೇ ಮೇಳ== ಪೆರ್ಮುದೆ ಶ್ರೀ ಸೋಮನಾಥ ಧಾಮ 

ಕಟೀಲು ನಾಲ್ಕನೇ ಮೇಳ  == ಮಠದಬೈಲು ಗುರುಪುರ 

ಕಟೀಲು ಐದನೇ ಮೇಳ ==  ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮಿ ಸದನ’ 

ಕಟೀಲು ಆರನೇ ಮೇಳ == ‘ಲಕ್ಷ್ಮಿ ಪ್ರಸಾದ’ ತಡಂಬೈಲು ಸುರತ್ಕಲ್  

ಮಂದಾರ್ತಿ ಒಂದನೇ ಮೇಳ  == ಶ್ರೀದೇವಿ ನಿಲಯ, ಹೊನ್ನಿಕುಮ್ರಿ ಹೆಗ್ಗುಂಜೆ, ಮಂದಾರ್ತಿ – ಕೂಡಾಟ 

ಮಂದಾರ್ತಿ ಎರಡನೇ ಮೇಳ   ==  ಶ್ರೀದೇವಿ ನಿಲಯ, ಹೊನ್ನಿಕುಮ್ರಿ ಹೆಗ್ಗುಂಜೆ, ಮಂದಾರ್ತಿ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಕಾನಂಗಿ ದೇವಸ್ಥಾನ 

ಮಂದಾರ್ತಿ ನಾಲ್ಕನೇ ಮೇಳ   == ಹೆದ್ದಾರಿಗದ್ದೆ ಅಮವಾಸೆಬೈಲು 

ಮಂದಾರ್ತಿ ಐದನೇ ಮೇಳ  ==  ‘ವಾಣಿಶ್ರೀ’ ಹೊಸಬೆಂಗ್ರೆ ಕೋಡಿಕನ್ಯಾನ 

ಶ್ರೀ ಹನುಮಗಿರಿ ಮೇಳ  ==  ಒಡ್ಡೂರು ಶಾಲಾ ಮೈದಾನ – ಶುಕ್ರನಂದನೆ (ರಾತ್ರಿ 7ರಿಂದ)

ಶ್ರೀ ಸಾಲಿಗ್ರಾಮ ಮೇಳ == ಸೊನಲೆ – ಚಂದ್ರಮುಖಿ ಸೂರ್ಯಸಖಿ 

ಶ್ರೀ ತಳಕಲ ಮೇಳ == ಶ್ರೀ ಕ್ಷೇತ್ರದಲ್ಲಿ – ದಕ್ಷಾಧ್ವರ 

ಶ್ರೀ ಸುಂಕದಕಟ್ಟೆ ಮೇಳ  == ಮೂಡುಪೆರಾರ ಬಲವಾಂಡಿ ದೈವಸ್ಥಾನದ ಎದುರು ಉದಲಬೆಟ್ಟು – ವಜ್ರ ಕೋಗಿಲೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊಲ್ಲೂರು ಸೇವೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಪರಿಮಳ ಸ್ಟೋರ್ಸ್ ಹಂಗಳೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಆಲೂರು ಅಡಿಪಾಲ್ 

ಶ್ರೀ ಪಾವಂಜೆ ಮೇಳ  ==  ಜೈ ಹನುಮಾನ್ ಕಟ್ಟೆಕುಟ್ಟಿಕಳ, ಅಜಿಲಮೊಗರು ಬಳಿ  – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಸಾಗರ ತೆಂಗಿನಮಠ – ಚಂದ್ರಾವಳಿ, ಮೀನಾಕ್ಷಿ 

ಕಮಲಶಿಲೆ ಮೇಳ ‘ಎ‘ ==  ಸೂಲಕೇರಿ ಶ್ರೀ ನಂದಿಕೇಶ್ವರ ದೇವಸ್ಥಾನ, ಶ್ರೀ ವಿಶ್ವಬ್ರಾಹ್ಮಣಪುರ ವಕ್ವಾಡಿ 

ಕಮಲಶಿಲೆ ಮೇಳ ‘ಬಿ‘ == ಕೂಡ್ಲುಮನೆ 

ಶ್ರೀ ಬಪ್ಪನಾಡು ಮೇಳ == ಸಜೀಪ ಕೋಟೆಕಣಿ ಕೊಡಕಲ – ಮಾನಿಷಾದ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪುತ್ತಿಗೆ ಪದವು ಯುವಕ ಮಂಡಲದ ವಠಾರ (ಮೂಡುಬಿದ್ರೆ) – ರಂಗಸ್ಥಳ 

ಶ್ರೀ ಅಮೃತೇಶ್ವರೀ ಮೇಳ ==   ಹೊನ್ನಾರಿ ಬೊಬ್ಬರ್ಯ ದೇವಸ್ಥಾನ ಮೂಡುಗಿಳಿಯಾರು 

ಶ್ರೀ ಬೋಳಂಬಳ್ಳಿ ಮೇಳ== ಚಟ್ಕಲ್ಪಾದೆ ಮುನಿಯಾಲು  

ಶ್ರೀ ಸೌಕೂರು ಮೇಳ ==  ಸೌಕ್ಕೂರು ಮೆಕ್ಕೆ ಗ್ರಾಮಸ್ಥರು – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಗುಡೆ ಮಹಾಲಿಂಗೇಶ್ವರ ದೇವಸ್ಥಾನ ಹೆರಂಜಾಲು – ನೂತನ ಪ್ರಸಂಗ (ಕಾಲಮಿತಿ)

ಶ್ರೀ ಬೆಂಕಿನಾಥೇಶ್ವರ ಮೇಳ  ==  ಬಜಾಲ್ ಕಲ್ಲಗುಡ್ಡೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕುಚ್ಚೂರು ಕಾನ್ಬೆಟ್ಟು (ಹೆಬ್ರಿ) ಮುಂಡು ಕಾಡ್ಯ ಕಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪಾಂಡೇಶ್ವರ ಶಾಲಾ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ದೇಲಬೆಟ್ಟು – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಹಿರಿಯಡ್ಕ ಓಂತಿಬೆಟ್ಟು ಪೇಟೆ 

ಶ್ರೀ ಸಿಗಂದೂರು ಮೇಳ == ಜಡ್ಕಲ್ ರಾಮಮಂದಿರ ಶಾಲಾ ವಠಾರ 

ಶ್ರೀ ನೀಲಾವರ ಮೇಳ  == ಕಬ್ಬರ್ಗಿ ಕತಗಾಲ ಕುಮಟಾ – ದೈವ ಮಂಟಪ, ಮೀನಾಕ್ಷಿ ಕಲ್ಯಾಣ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಕತಗಾಲ್  ಮತ್ತು ನಂಜರವಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಹೇರೂರು 4ನೇ ಮಾರಿಕಟ್ಟೆ – ಕುಲದೈವ ಪಂಜುರ್ಲಿ 

ಕ್ಯಾಂಡ್ಯನ್ ನೃತ್ಯ – ಶ್ರೀಲಂಕಾದ ಸಾಂಪ್ರದಾಯಿಕ ಸಾಂಸ್ಕೃತಿಕ ನೃತ್ಯದ ವೀಡೀಯೋ 

ಕ್ಯಾಂಡ್ಯನ್ ನೃತ್ಯವು ಶ್ರೀಲಂಕಾದ ಉದಾರತ ಎಂದು ಕರೆಯಲ್ಪಡುವ ಮಧ್ಯ ಬೆಟ್ಟಗಳ ಪ್ರದೇಶದ ಕ್ಯಾಂಡಿ ಎಂದು ಕರೆಯಲ್ಪಡುವ ಪ್ರದೇಶಕ್ಕೆ ಜನಪ್ರಿಯ ಮತ್ತು ಸ್ಥಳೀಯ ವಿವಿಧ ನೃತ್ಯ ಪ್ರಕಾರಗಳನ್ನು ಒಳಗೊಂಡಿದೆ, ಕ್ಯಾಂಡ್ಯನ್ ನೃತ್ಯದ ವೀಡೀಯೋ.