Monday, March 16, 2026
Home Blog Page 128

ಚಿಣ್ಣರ ಕ್ರೀಡೋತ್ಸವ-2022

0

ದಿನಾಂಕ 18-11-2022ನೇ ಶುಕ್ರವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಎಳೆಯ ಮಕ್ಕಳಲ್ಲಿ ಚೈತನ್ಯ ತುಂಬುವ ಸಲುವಾಗಿ  ಪೂರ್ವ ಪ್ರಾಥಮಿಕ ವಿಭಾಗ – ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೆ ಹಾಗೂ 1ನೇ ಯಿಂದ 4ನೇ ತರಗತಿಯ ಪುಟಾಣಿ ಮಕ್ಕಳಿಗೆ ಚಿಣ್ಣರ ಕ್ರೀಡೋತ್ಸವ-2022 ವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಶಾಂತಿ ಶೆಣೈ ಉದ್ಘಾಟಿಸಿ, ಪುಟಾಣಿ ಮಕ್ಕಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ ವಹಿಸಿ, ಕ್ರೀಡೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು, ಸದೃಢ ಶರೀರವನ್ನು ಪಡೆದು ಸತ್ಪ್ರಜೆಗಳಾಗಲು ಕ್ರೀಡೆ ಪೂರಕ ಎಂದು ಹೇಳಿ ಪುಟಾಣಿ ಮಕ್ಕಳಿಗೆ ಶುಭ ಕೋರಿದರು.

ನಂತರ ಪುಟಾಣಿ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ರವಿನಾರಾಯಣ.ಎಂ, ರಕ್ಷಕ-ಶಿಕ್ಷಕ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಜಯಕುಮಾರ್ ಜೈನ್ ಹಾಗೂ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಭಾಸ್ಕರ ಗೌಡ ಉಪಸ್ಥಿತಸಿದ್ದರು. 

ಶ್ರೀಮತಿ ಸಂಧ್ಯಾ ಸ್ವಾಗತಿಸಿ, ಪೂರ್ವಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ ವಂದಿಸಿ, ಶ್ರೀಮತಿ ಸಹನಾ ಪೈ ಕಾರ್ಯಕ್ರಮ ನಿರೂಪಿದರು.

ಇಂದು ತಲಪಾಡಿ ಯಕ್ಷೋತ್ಸವ – ಸಮರಸೌಗಂಧಿಕಾ, ಬಬ್ರುವಾಹನ  ಮತ್ತು ಶೇಷವಿಜಯ – ಡಾ. ರಮಾನಂದ ಬನಾರಿಯವರಿಗೆ ಸನ್ಮಾನ

ಯಕ್ಷಮಿತ್ರ ಸೇವಾ ಬಳಗ ತಲಪಾಡಿ ಅರ್ಪಿಸುವ ಈ ಬಾರಿಯ ಅಂದರೆ  8 ನೆಯ ವರ್ಷದ ತಲಪಾಡಿ ಯಕ್ಷೋತ್ಸವವು ಇಂದು ದಿನಾಂಕ 20-11-2022 ಆದಿತ್ಯವಾರ ಮಧ್ಯಾಹ್ನ 12 ರಿಂದ ರಾತ್ರಿ 9 ಗಂಟೆಯ ವರೆಗೆ ನಡೆಯಲಿದೆ.

ಈ ಕಾರ್ಯಕ್ರಮವು ಮಂಗಳೂರಿನ  ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.  ತೆಂಕು-ಬಡಗು ತಿಟ್ಟುಗಳ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಪರೂಪದ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ಹಿರಿಯ ಯಕ್ಷಗಾನ ಸಾಹಿತಿ, ಅರ್ಥಧಾರಿ ಹಾಗೂ ವೈದ್ಯರಾದ  ಡಾ. ರಮಾನಂದ ಬನಾರಿಯವರಿಗೆ ಸನ್ಮಾನ ನಡೆಯಲಿದೆ. 

ಮೊದಲನೇ ಪ್ರಸಂಗ ಸಮರಸೌಗಂಧಿಕಾ ಹಾಗೂ ಎರಡನೇ ಪ್ರಸಂಗ ‘ಬಬ್ರುವಾಹನ  ಮತ್ತು ಶೇಷವಿಜಯ’  ಪಾತ್ರವರ್ಗ ಮತ್ತು ಕಲಾವಿದರ ವಿವರಗಳಿಗೆ ಆಹ್ವಾನಪತ್ರಿಕೆಯ ಚಿತ್ರವನ್ನು ನೋಡಿ.

ಈ ಅಪರೂಪದ ಪ್ರದರ್ಶನಗಳಿಗೆ ಯಕ್ಷಾಭಿಮಾನಿಗಳನ್ನು, ಯಕ್ಷಮಿತ್ರ ಸೇವಾ ಬಳಗದ  ಸಂತೋಷ್ ಅಲಂಕಾರಗುಡ್ಡೆ ಹಾಗೂ ಎಲ್ಲಾ ಸದಸ್ಯರು ಆದರದಿಂದ ಆಮಂತ್ರಿಸಿದ್ದಾರೆ. 

ಸಂತೋಷ್ ಅಲಂಕಾರಗುಡ್ಡೆ (8722369514)

ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ

0

ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರಗಿತು.

ಶ್ರೀ ಕ್ಷೇತ್ರದ ಪ್ರಬಂಧಕ  ಸೀತಾರಾಮ ಬಳ್ಳುಳ್ಳಾಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ” ಸಂಗೀತವು ನಮ್ಮ ಸಂಸ್ಕೃತಿಯಾಗಿದೆ. ಸಂಗೀತದ ನಿರಂತರ ಆಸ್ವಾದನೆಯು ಪ್ರತಿಯೊಂದು ಜೀವಿಯ ಆರೋಗ್ಯಕ್ಕೆ ಪೂರಕವಾಗಿದೆ. ಸಂಗೀತದ ಮೂಲಕ ದೇವರ ನಾಮಸ್ಮರಣೆ ನಿರಂತರ ನಡೆಯುತ್ತಿರಲಿ “ಎಂದು ಶುಭಕೋರಿದರು. 

        ನಂತರ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸುಮಧುರವಾದ ಸಂಗೀತ ಉಪಾಸನೆ ಜರಗಿತು. ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ಗುರುಗಳಾದ ವಿದುಷಿ ಉಷಾ ಈಶ್ವರ ಭಟ್ ಅವರು ಸಂಗೀತ ಕಚೇರಿ ನಡೆಸಿಕೊಟ್ಟರು.

ಪಿಟೀಲಿನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ಮೃದಂಗದಲ್ಲಿ ವಿದ್ವಾನ್ ಅನಿಲಕ್ಕಾಡ್ ಡಾ ಆರ್ ಜಯಕೃಷ್ಣನ್, ಘಟಂ ನಲ್ಲಿ ವಿದ್ವಾನ್ ಬಿ.ಜಿ. ಈಶ್ವರ ಭಟ್ ಜೊತೆಗೂಡಿದರು. 

    ಕಾರ್ಯಕ್ರಮದ ಕೊನೆಗೆ ಸಂಗೀತ ಕಲಾವಿದರನ್ನು ಶ್ರೀ ಕ್ಷೇತ್ರ ಪ್ರಧಾನ ಅರ್ಚಕ ಅನಂತಪದ್ಮನಾಭ ಮಯ್ಯ ಗೌರವಿಸಿದರು. ಗೋವಿಂದ ಬಳ್ಳಮೂಲೆ ಸ್ವಾಗತಿಸಿ, ರಾಘವನ್ ಬೆಳ್ಳಿಪ್ಪಾಡಿ ಧನ್ಯವಾದವಿತ್ತರು. ಶಾಸ್ತಾ ಕುಮಾರ ನಿರೂಪಣೆ ಮಾಡಿದರು.

ಯಕ್ಷಗಾನ ಕಲಾವಿದ, ಕಲಾಸೇವಕ ದಿನೇಶ್ ಶೆಟ್ಟಿ ವಿಕ್ರೋಲಿ ನಿಧನ 

0

ಮುಂಬಯಿ : ನ.16 ಯಕ್ಷಗಾನ ಕಲಾವಿದ , ಕಲಾಸೇವಕ ದಿನೇಶ್ ಶೆಟ್ಟಿ ವಿಕ್ರೋಲಿ ನಿಧರಾಗಿದ್ದಾರೆ.

ಅವರು ನಗರದ ಜನಪ್ರಿಯಾ ಯಕ್ಷಗಾನ ಗುರು , ಸಂಘಟಕ  ಬಾಲಕೃಷ್ಣ ಶೆಟ್ಟಿ ಅಜೆಕಾರು ಇವರ ಮುಂದಾಳತ್ವದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಹಾಗೂ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಅಸಲ್ಪ ಘಾಟ್ಕೋಪರ್  ಈ ಕಲಾ ಸಂಸ್ಥೆಗಳ ಮುಖಾಂತರ ಜರಗುತ್ತಿದ್ದ ಎಲ್ಲಾ ಯಕ್ಷಗಾನ ಪ್ರದರ್ಶನಗಳಿಗೆ ಹಿನ್ನಲೆ ಸಹಕಾರವನ್ನು ನೀಡುತ್ತಿದ್ದ

ಮತ್ತು ಸಮಯ ಸಂದರ್ಭಕ್ಕನುಗಣವಾಗಿ ಸಣ್ಣ , ಪುಟ್ಟ ವೇಷವನ್ನು ಮಾಡಿ ಈ‌ ಮೂಲಕ ಯಕ್ಷಗಾನ ಕಲಾಸೇವಾ ನಿರತರಾಗಿದ್ದರು. ದಿನೇಶ್ ಶೆಟ್ಟಿ ವಿಕ್ರೋಲಿ ಇವರು ಇಂದು ಅಂದರೆ ನ.16 ರ ಬುಧವಾರ ದೈವಾಧೀನರಾದರು.

ಅವರ ಆತ್ಮಕ್ಕೆ ಭಗವಂತನು, ಕಲಾಮಾತೆ ಸರಸ್ವತಿಯು ಚಿರಶಾಂತಿಯನ್ನು ಕರುಣಿಸಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. 

ಸತ್ತುಹೋದ ಗೆಳತಿಗೆ ನ್ಯಾಯ ಕೊಡಿಸುವಂತೆ ಕೋರಿ ಮುಂಬೈಯ ಮಂತ್ರಾಲಯ ಕಚೇರಿಯ 6ನೇ ಮಹಡಿಯಿಂದ ಜಿಗಿದ ವ್ಯಕ್ತಿ – ವೀಡಿಯೊ

0

43 ವರ್ಷದ ವ್ಯಕ್ತಿಯೊಬ್ಬರು ದಕ್ಷಿಣ ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಛೇರಿಯಾದ ಮಂತ್ರಾಲಯದ 6 ನೇ ಮಹಡಿಯಿಂದ ಜಿಗಿದರು, ಆದರೆ ಅವರು ಅಲ್ಲಿ ಅಳವಡಿಸಿದ್ದ ಸುರಕ್ಷತಾ ನೆಟ್ (ಬಲೆ) ನಲ್ಲಿ ಸಿಲುಕಿಕೊಂಡು ರಕ್ಷಿಸಲ್ಪಟ್ಟರು.

ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. 43 ವರ್ಷದ ವ್ಯಕ್ತಿಯೊಬ್ಬರು ಗುರುವಾರ ದಕ್ಷಿಣ ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಚೇರಿಯಾದ ಮಂತ್ರಾಲಯದ 6 ನೇ ಮಹಡಿಯಿಂದ ಜಿಗಿದಿದ್ದಾರೆ. ಜಿಗಿಯುವಾಗ ಪ್ಲೈವುಡ್‌ಗೆ ತಗುಲಿದ ಕಾರಣ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾದರೂ, ಸುರಕ್ಷತಾ ಜಾಲದಿಂದಾಗಿ ಆತ ಬದುಕುಳಿದಿದ್ದಾನೆ.

ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿದ್ದು, ನಂತರ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಾಪು ನಾರಾಯಣ ಮೊಕಾಶಿ ಎಂದು ಗುರುತಿಸಲಾದ ವ್ಯಕ್ತಿ ಬೀಡ್ ಜಿಲ್ಲೆಯ ನಿವಾಸಿಯಾಗಿದ್ದು, ತನ್ನ ಗೆಳತಿ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಹೇಳಿಕೊಂಡಿದ್ದಾನೆ, ನಂತರ ಅವಳು 2018 ರಲ್ಲಿ ನೇಣು ಹಾಕಿಕೊಂಡಿದ್ದಾಳೆ.

ಅಂದಿನಿಂದ, ಅವನು ತನ್ನ ಗೆಳತಿಗೆ ನ್ಯಾಯವನ್ನು ಪಡೆಯಲು ನಿರಂತರವಾಗಿ ಕಚೇರಿಗಳಿಗೆ ಅಲೆಯುತ್ತಿದ್ದನು. ಆದರೆ ಯಾವುದೇ ನ್ಯಾಯವನ್ನು ಪಡೆಯಲು ವಿಫಲನಾಗಿದ್ದನು. ಪ್ರಕರಣದ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದನು.

ಹೀಗಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಲು ಗುರುವಾರ ಮಧ್ಯಾಹ್ನ 3 ಗಂಟೆಗೆ ಮಂತ್ರಾಲಯ ತಲುಪಿದ್ದರು ಆದರೆ ಸಂಪುಟ ಸಭೆಯ ಕಾರಣ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.

ವ್ಯಕ್ತಿ ಜಿಗಿದ ಆದರೆ ಅದೃಷ್ಟವಶಾತ್ ಕಟ್ಟಡದ ಒಳಗೆ ತೆರೆದ ಅಂಗಳವನ್ನು ಆವರಿಸಿರುವ ಸುರಕ್ಷತಾ ಜಾಲದ ಬಲೆಯ ಮೇಲೆ ಬಿದ್ದನು. ಎಡ ಹಣೆಯ ಮೇಲೆ ಗಾಯಗಳಾಗಿದ್ದು ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಜಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ವಿಶ್ವವಿದ್ಯಾನಿಲಯ ಮಟ್ಟದ ಮಂಗಳೂರು ವಿಭಾಗದ ವಾಲಿಬಾಲ್ ಪಂದ್ಯಾಟ

0

ಪುತ್ತೂರು: ವ್ಯಕ್ತಿಯೊಬ್ಬ ಯಾವುದೇ ವಿಷಯದಲ್ಲಿ ಪರಿಪೂರ್ಣನಾಗಬೇಕಾದರೆ ನಿರಂತರ ಅಭ್ಯಾಸ ಅಗತ್ಯ. ಏಕಾಗ್ರತೆಯಿಂದ ಕೂಡಿದ ಪ್ರಯತ್ನದಿಂದ ಮಾತ್ರ ಯಶಸ್ಸು ಸಿದ್ದಿಸುತ್ತದೆ ಎಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್.ವಿ.ಎಸ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ೦ಗ್ ಎಂಡ್ ಟೆಕ್ನಾಲಜಿಯ  ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧೆಯಲ್ಲ್ಲಿ ಎಲ್ಲರೂ ಗೆಲ್ಲುವುದು ಸಾಧ್ಯವಿಲ್ಲ ಹಾಗಾಗಿ ಆಟವನ್ನು ಕ್ರೀಡಾಸ್ಪೂರ್ತಿಯಿಂದ ಆಡಬೇಕು ಮತ್ತು ಅಲ್ಲಿನ ಕಹಿ ಘಟನೆಗಳನ್ನು ಕ್ರೀಡಾಂಗಣದಿ೦ದ ಹೊರ ಹೋಗುವಾಗ ಮರೆತುಬಿಡಬೇಕು ಎಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್.ಶೆಣೈ ಮಾತನಾಡಿ ಹವ್ಯಾಸಗಳು ನಮ್ಮ ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತವೆ. ದೈನಂದಿನ ಜಂಜಾಟಗಳಿ೦ದ ಹೊರ ಬರಲು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಇದು ಶಾರೀರಿಕ ದೃಡತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.

ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕ ಪ್ರೋತ್ಸಾಹವನ್ನು ನೀಡುವ ಕೆಲಸವನ್ನು ನಮ್ಮ ಸಂಸ್ಥೆಯು ನಿರಂತರವಾಗಿ ಮಾಡುತ್ತಿದೆ ಎಂದು ನುಡಿದರು. ಮಂಗಳೂರು ವಿಭಾಗದ ವಿವಿಧ ಇಂಜಿನಿಯರಿ೦ಗ್ ಕಾಲೇಜುಗಳ 18 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿವೆ.


ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಸ್ವಾಗತಿಸಿ. ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ.ಬಿ.ಎಸ್ ವಂದಿಸಿದರು. ಭಾವನಾ.ಎಂ.ಆರ್ ಕಾರ್ಯಕ್ರಮ ನಿರ್ವಹಿಸಿದರು.

‘ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ – ಯಕ್ಷತರಂಗ ಬೆಂಗಳೂರು ಇವರಿಂದ ‘ದಕ್ಷಿಣ ಕನ್ನಡಿಗರ ಸಂಘ’ ಆಯೋಜಿಸುತ್ತಿರುವ ಕರಾವಳಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಯಕ್ಷಗಾನ ಪ್ರದರ್ಶನ  

ಯಕ್ಷತರಂಗ ಬೆಂಗಳೂರು ಇವರಿಂದ  ‘ಕನಕಾಂಗಿ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ದಿನಾಂಕ 20.11.2022 ನೇ ಆದಿತ್ಯವಾರ 4 ಘಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ,

ಬೆಂಗಳೂರಿನ ‘ದಕ್ಷಿಣ ಕನ್ನಡಿಗರ ಸಂಘ’ ಆಯೋಜಿಸುತ್ತಿರುವ ಕರಾವಳಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಈ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಎಲ್ಲಾ ವಿವರಗಳಿಗಾಗಿ ಚಿತ್ರ ನೋಡಿ. 

ಹೆಡ್‌ಫೋನ್‌ಗಳನ್ನು ಉಪಯೋಗಿಸುವ ಮುನ್ನ ಎಚ್ಚರ – 100 ಕೋಟಿಗೂ ಅಧಿಕ ಜನರಿಗೆ ಕಿವಿಡುತನದ ಸಮಸ್ಯೆ

0

ಹೆಡ್‌ಫೋನ್‌ಗಳಿಂದಾಗಿ 100 ಕೋಟಿಗೂ ಹೆಚ್ಚು ಯುವಕರು ಶ್ರವಣ ನಷ್ಟದ ಅಪಾಯದಲ್ಲಿದ್ದಾರೆ ಎಂದು ಅಧ್ಯಯನವೊಂದರ ವರದಿ ತಿಳಿಸಿದೆ.

BMJ ಗ್ಲೋಬಲ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಒಂದು ಶತಕೋಟಿ ಹದಿಹರೆಯದವರು ಮತ್ತು ಯುವಜನರು ಹೆಡ್‌ಫೋನ್‌ಗಳು ಮತ್ತು ಇಯರ್‌ಬಡ್‌ಗಳ ಬಳಕೆ ಮತ್ತು ಜೋರಾಗಿ ಸಂಗೀತದ ಸ್ಥಳಗಳಲ್ಲಿ ಹಾಜರಾತಿಯಿಂದಾಗಿ ಶ್ರವಣ ದೋಷದ ಅಪಾಯವನ್ನು ಎದುರಿಸುತ್ತಿದ್ದಾರೆ.

“ಸರ್ಕಾರಗಳು, ಉದ್ಯಮ ಮತ್ತು ನಾಗರಿಕ ಸಮಾಜವು ಸುರಕ್ಷಿತ ಆಲಿಸುವ ಅಭ್ಯಾಸಗಳನ್ನು ಉತ್ತೇಜಿಸುವ ಮೂಲಕ ಜಾಗತಿಕ ಶ್ರವಣ ನಷ್ಟ ತಡೆಗಟ್ಟುವಿಕೆಗೆ ಆದ್ಯತೆ ನೀಡುವ ತುರ್ತು ಅವಶ್ಯಕತೆಯಿದೆ” ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜಿನ ಪ್ರಕಾರ ಪ್ರಪಂಚದಾದ್ಯಂತ 430 ಮಿಲಿಯನ್ ಜನರು ಪ್ರಸ್ತುತ ಶ್ರವಣ ದೋಷವನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.

ಸ್ಮಾರ್ಟ್‌ಫೋನ್‌ಗಳು, ಹೆಡ್‌ಫೋನ್‌ಗಳು ಮತ್ತು ಇಯರ್‌ಬಡ್‌ಗಳಂತಹ ವೈಯಕ್ತಿಕ ಆಲಿಸುವ ಸಾಧನಗಳ (ಪಿಎಲ್‌ಡಿ) ಬಳಕೆ ಮತ್ತು ಕಳಪೆ ನಿಯಂತ್ರಕ ಹೊಂದಿದ ಸೌಂಡ್ ಸಿಸ್ಟಮ್ ನಡುವೆ ಜೋರಾಗಿ ಸಂಗೀತದ ಸ್ಥಳಗಳಲ್ಲಿ ಹಾಜರಾತಿಯಿಂದಾಗಿ ಯುವಕರು ವಿಶೇಷವಾಗಿ ದುರ್ಬಲರಾಗಿದ್ದಾರೆ ಎಂದು ಅವರು ಹೇಳಿದರು.

ಹಿಂದೆ ಪ್ರಕಟವಾದ ಸಂಶೋಧನೆಯು PLD ಬಳಕೆದಾರರು ಸಾಮಾನ್ಯವಾಗಿ 105 ಡೆಸಿಬಲ್ (dB) ವರೆಗಿನ ಪರಿಮಾಣಗಳನ್ನು ಆಯ್ಕೆ ಮಾಡುತ್ತಾರೆ ಎಂದು ಸೂಚಿಸುತ್ತದೆ ಆದರೆ ಮನರಂಜನಾ ಸ್ಥಳಗಳಲ್ಲಿ ಸರಾಸರಿ ಧ್ವನಿ ಮಟ್ಟಗಳು 104 ರಿಂದ 112 dB ವರೆಗೆ ಇರುತ್ತದೆ. ವಯಸ್ಕರಿಗೆ 80 ಡೆಸಿಬಲ್ ಮತ್ತು ಮಕ್ಕಳಿಗೆ 75 ಡೆಸಿಬಲ್ ಯ ಅನುಮತಿಸುವ ಧ್ವನಿ ಮಟ್ಟವಾಗಿದೆ.

ಸಂಶೋಧಕರು 2022 ರಲ್ಲಿ 12-34 ವರ್ಷ ವಯಸ್ಸಿನ ಅಂದಾಜು ಜಾಗತಿಕ ಜನಸಂಖ್ಯೆಯನ್ನು (2.8 ಶತಕೋಟಿ) ಮತ್ತು PLD ಗಳು ಅಥವಾ ಜೋರಾಗಿ ಮನರಂಜನೆಯಿಂದ ಅಸುರಕ್ಷಿತ ಆಲಿಸುವ ಅಭ್ಯಾಸಗಳಿಗೆ ಒಡ್ಡಿಕೊಳ್ಳುವ ಅತ್ಯುತ್ತಮ ಸ್ಥಳಗಳನ್ನು, ಪರಿಗಣಿಸುವ ಮೂಲಕ ಶ್ರವಣ ನಷ್ಟದ ಅಪಾಯದಲ್ಲಿರುವ ಜನರ ಸಂಖ್ಯೆಯನ್ನು ಅಂದಾಜು ಮಾಡಿದ್ದಾರೆ.

ಸಂಶೋಧಕರು ಅಂದಾಜಿಸುವಂತೆ ಹದಿಹರೆಯದವರು ಮತ್ತು ಯುವ ವಯಸ್ಕರ ಜಾಗತಿಕ ಸಂಖ್ಯೆಯು 0.67 ರಿಂದ 1.35 ಶತಕೋಟಿ ವರೆಗೆ ಶ್ರವಣ ನಷ್ಟದ ಅಪಾಯವನ್ನು ಹೊಂದಬಹುದು.

ಯಕ್ಷಮಿತ್ರರು (ರಿ) ಪೊರ್ಕೋಡಿ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ

0

ಯಕ್ಷಮಿತ್ರರು (ರಿ) ಪೊರ್ಕೋಡಿ ದಿನಾಂಕ :13.11.2022 ಆದಿತ್ಯವಾರದಂದು ಅಷ್ಠಮ ವಾರ್ಷಿಕೋತ್ಸವ ನಡೆಯಿತು. ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವನ್ನು ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಮ್ಮ ಯಕ್ಷಮಿತ್ರರು (ರಿ) ಪೊರ್ಕೋಡಿ ಸಂಸ್ಥೆಯ ವಿದ್ಯಾರ್ಥಿಗಳು ಆಡಿ ತೋರಿಸಿದರು.

ಸಭಾ ಕಾರ್ಯಕ್ರಮ ಸಂಜೆ 05:00 ಗಂಟೆಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಶ್ರೀಮಾನ್ ಅರುಣ್ ಕುಮಾರ್ ಕಾಟಿಪಳ್ಳ ಇವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ  ವೆಂಕಟರಮಣ ಅಸ್ರಣ್ಣರು ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಕಟೀಲು ಇವರು  ಆಶೀರ್ವಚನ ನೀಡಿದರು.

ವೇದಮೂರ್ತಿ ಪಿ ಕೃಷ್ಣ ಭಟ್  ಪ್ರಧಾನ ಅರ್ಚಕರು ಶ್ರೀ ಸೋಮನಾಥೇಶ್ವರ ದೇವಸ್ಥಾನ  ಪೊರ್ಕೋಡಿ ಪೇಜಾವರ ಉಪಸ್ಥಿತರಿದ್ದರು. ವೇದಮೂರ್ತಿ ಎಂ ಗಣೇಶ್ ಭಟ್ ಜ್ಯೋತಿಷಿ  ಮರಕಡ ಉಪಸ್ಥಿತರಿದ್ದರು. ಶ್ರೀಮಾನ್ ಕೃಷ್ಣಪ್ಪ ಪೂಜಾರಿ ಅಧ್ಯಕ್ಷರು ಶ್ರೀ ದೇವಿ ಭಕ್ತ ಸಂಘ ಕೆಂಜಾರು ಕಾನ, ಶ್ರೀಮತಿ ನಳಿನಿ ಜಿ ಶೆಟ್ಟಿ ಅಧ್ಯಕ್ಷರು ಸಿಂಚನ ಮಹಿಳಾ ಮಂಡಲ ಮತ್ತು ಬೆಥನಿ ಸಾಮಾಜ ಸೇವಾ ಕಾರ್ಯಕರ್ತೆ ಉಪಸ್ಥಿತರಿದ್ದರು.

ಎಸ್ ಎಸ್ ಎಲ್ ಸಿ ಯಲ್ಲಿ 85% ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸನ್ಮಾನ ಪತ್ರವನ್ನು ಶ್ರೀಮತಿ ನಿರ್ಮಲ ಟೀಚರ್ ಪ್ರಾಸ್ತಾವಿಸಿದರು. ಶ್ರೀಮತಿ ಎಂ ಲಕ್ಷ್ಮಿ .ಕೆ. ಕುಮಾರ್ ಇವರು ಸ್ವಾಗತಿಸಿ ಧನ್ಯವಾದಗೈದರು.

ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0

ಪುತ್ತೂರು, ನ17: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಹಾವೇರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್‌ಕೆ.ಜೆ(ಪುತ್ತೂರಿನ ನೆಹರೂ ನಗರದ ಪಿಎಮ್‌ಜಿಎಸ್‌ವೈ ಇಂಜಿನಿಯರ್‌ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ),

ಮನ್ನಿತ್‌ ಎನ್‌ ಗೌಡ (ಬನ್ನೂರಿನ ರಮೇಶ ಗೌಡ ಎನ್ ಮತ್ತು ನಳಿನಿ ದಂಪತಿ ಪುತ್ರ)

ಮತ್ತು ಸಾಗರಿ (ಮೈಸೂರಿನ ನೂತನ್‌ ಕುಮಾರ್ ಮತ್ತು ಸುಚಿತ್ರಾ ರೈ ದಂಪತಿ ಪುತ್ರಿ)ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.