Friday, July 31, 2026
Home Blog Page 129

ವಿಶ್ವವಿದ್ಯಾನಿಲಯ ಮಟ್ಟದ ಮಂಗಳೂರು ವಿಭಾಗದ ವಾಲಿಬಾಲ್ ಪಂದ್ಯಾಟ

0

ಪುತ್ತೂರು: ವ್ಯಕ್ತಿಯೊಬ್ಬ ಯಾವುದೇ ವಿಷಯದಲ್ಲಿ ಪರಿಪೂರ್ಣನಾಗಬೇಕಾದರೆ ನಿರಂತರ ಅಭ್ಯಾಸ ಅಗತ್ಯ. ಏಕಾಗ್ರತೆಯಿಂದ ಕೂಡಿದ ಪ್ರಯತ್ನದಿಂದ ಮಾತ್ರ ಯಶಸ್ಸು ಸಿದ್ದಿಸುತ್ತದೆ ಎಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್.ವಿ.ಎಸ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ೦ಗ್ ಎಂಡ್ ಟೆಕ್ನಾಲಜಿಯ  ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧೆಯಲ್ಲ್ಲಿ ಎಲ್ಲರೂ ಗೆಲ್ಲುವುದು ಸಾಧ್ಯವಿಲ್ಲ ಹಾಗಾಗಿ ಆಟವನ್ನು ಕ್ರೀಡಾಸ್ಪೂರ್ತಿಯಿಂದ ಆಡಬೇಕು ಮತ್ತು ಅಲ್ಲಿನ ಕಹಿ ಘಟನೆಗಳನ್ನು ಕ್ರೀಡಾಂಗಣದಿ೦ದ ಹೊರ ಹೋಗುವಾಗ ಮರೆತುಬಿಡಬೇಕು ಎಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್.ಶೆಣೈ ಮಾತನಾಡಿ ಹವ್ಯಾಸಗಳು ನಮ್ಮ ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತವೆ. ದೈನಂದಿನ ಜಂಜಾಟಗಳಿ೦ದ ಹೊರ ಬರಲು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಇದು ಶಾರೀರಿಕ ದೃಡತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.

ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕ ಪ್ರೋತ್ಸಾಹವನ್ನು ನೀಡುವ ಕೆಲಸವನ್ನು ನಮ್ಮ ಸಂಸ್ಥೆಯು ನಿರಂತರವಾಗಿ ಮಾಡುತ್ತಿದೆ ಎಂದು ನುಡಿದರು. ಮಂಗಳೂರು ವಿಭಾಗದ ವಿವಿಧ ಇಂಜಿನಿಯರಿ೦ಗ್ ಕಾಲೇಜುಗಳ 18 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿವೆ.


ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಸ್ವಾಗತಿಸಿ. ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ.ಬಿ.ಎಸ್ ವಂದಿಸಿದರು. ಭಾವನಾ.ಎಂ.ಆರ್ ಕಾರ್ಯಕ್ರಮ ನಿರ್ವಹಿಸಿದರು.

‘ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ – ಯಕ್ಷತರಂಗ ಬೆಂಗಳೂರು ಇವರಿಂದ ‘ದಕ್ಷಿಣ ಕನ್ನಡಿಗರ ಸಂಘ’ ಆಯೋಜಿಸುತ್ತಿರುವ ಕರಾವಳಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಯಕ್ಷಗಾನ ಪ್ರದರ್ಶನ  

ಯಕ್ಷತರಂಗ ಬೆಂಗಳೂರು ಇವರಿಂದ  ‘ಕನಕಾಂಗಿ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ದಿನಾಂಕ 20.11.2022 ನೇ ಆದಿತ್ಯವಾರ 4 ಘಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ,

ಬೆಂಗಳೂರಿನ ‘ದಕ್ಷಿಣ ಕನ್ನಡಿಗರ ಸಂಘ’ ಆಯೋಜಿಸುತ್ತಿರುವ ಕರಾವಳಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಈ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಎಲ್ಲಾ ವಿವರಗಳಿಗಾಗಿ ಚಿತ್ರ ನೋಡಿ. 

ಹೆಡ್‌ಫೋನ್‌ಗಳನ್ನು ಉಪಯೋಗಿಸುವ ಮುನ್ನ ಎಚ್ಚರ – 100 ಕೋಟಿಗೂ ಅಧಿಕ ಜನರಿಗೆ ಕಿವಿಡುತನದ ಸಮಸ್ಯೆ

0

ಹೆಡ್‌ಫೋನ್‌ಗಳಿಂದಾಗಿ 100 ಕೋಟಿಗೂ ಹೆಚ್ಚು ಯುವಕರು ಶ್ರವಣ ನಷ್ಟದ ಅಪಾಯದಲ್ಲಿದ್ದಾರೆ ಎಂದು ಅಧ್ಯಯನವೊಂದರ ವರದಿ ತಿಳಿಸಿದೆ.

BMJ ಗ್ಲೋಬಲ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಒಂದು ಶತಕೋಟಿ ಹದಿಹರೆಯದವರು ಮತ್ತು ಯುವಜನರು ಹೆಡ್‌ಫೋನ್‌ಗಳು ಮತ್ತು ಇಯರ್‌ಬಡ್‌ಗಳ ಬಳಕೆ ಮತ್ತು ಜೋರಾಗಿ ಸಂಗೀತದ ಸ್ಥಳಗಳಲ್ಲಿ ಹಾಜರಾತಿಯಿಂದಾಗಿ ಶ್ರವಣ ದೋಷದ ಅಪಾಯವನ್ನು ಎದುರಿಸುತ್ತಿದ್ದಾರೆ.

“ಸರ್ಕಾರಗಳು, ಉದ್ಯಮ ಮತ್ತು ನಾಗರಿಕ ಸಮಾಜವು ಸುರಕ್ಷಿತ ಆಲಿಸುವ ಅಭ್ಯಾಸಗಳನ್ನು ಉತ್ತೇಜಿಸುವ ಮೂಲಕ ಜಾಗತಿಕ ಶ್ರವಣ ನಷ್ಟ ತಡೆಗಟ್ಟುವಿಕೆಗೆ ಆದ್ಯತೆ ನೀಡುವ ತುರ್ತು ಅವಶ್ಯಕತೆಯಿದೆ” ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜಿನ ಪ್ರಕಾರ ಪ್ರಪಂಚದಾದ್ಯಂತ 430 ಮಿಲಿಯನ್ ಜನರು ಪ್ರಸ್ತುತ ಶ್ರವಣ ದೋಷವನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.

ಸ್ಮಾರ್ಟ್‌ಫೋನ್‌ಗಳು, ಹೆಡ್‌ಫೋನ್‌ಗಳು ಮತ್ತು ಇಯರ್‌ಬಡ್‌ಗಳಂತಹ ವೈಯಕ್ತಿಕ ಆಲಿಸುವ ಸಾಧನಗಳ (ಪಿಎಲ್‌ಡಿ) ಬಳಕೆ ಮತ್ತು ಕಳಪೆ ನಿಯಂತ್ರಕ ಹೊಂದಿದ ಸೌಂಡ್ ಸಿಸ್ಟಮ್ ನಡುವೆ ಜೋರಾಗಿ ಸಂಗೀತದ ಸ್ಥಳಗಳಲ್ಲಿ ಹಾಜರಾತಿಯಿಂದಾಗಿ ಯುವಕರು ವಿಶೇಷವಾಗಿ ದುರ್ಬಲರಾಗಿದ್ದಾರೆ ಎಂದು ಅವರು ಹೇಳಿದರು.

ಹಿಂದೆ ಪ್ರಕಟವಾದ ಸಂಶೋಧನೆಯು PLD ಬಳಕೆದಾರರು ಸಾಮಾನ್ಯವಾಗಿ 105 ಡೆಸಿಬಲ್ (dB) ವರೆಗಿನ ಪರಿಮಾಣಗಳನ್ನು ಆಯ್ಕೆ ಮಾಡುತ್ತಾರೆ ಎಂದು ಸೂಚಿಸುತ್ತದೆ ಆದರೆ ಮನರಂಜನಾ ಸ್ಥಳಗಳಲ್ಲಿ ಸರಾಸರಿ ಧ್ವನಿ ಮಟ್ಟಗಳು 104 ರಿಂದ 112 dB ವರೆಗೆ ಇರುತ್ತದೆ. ವಯಸ್ಕರಿಗೆ 80 ಡೆಸಿಬಲ್ ಮತ್ತು ಮಕ್ಕಳಿಗೆ 75 ಡೆಸಿಬಲ್ ಯ ಅನುಮತಿಸುವ ಧ್ವನಿ ಮಟ್ಟವಾಗಿದೆ.

ಸಂಶೋಧಕರು 2022 ರಲ್ಲಿ 12-34 ವರ್ಷ ವಯಸ್ಸಿನ ಅಂದಾಜು ಜಾಗತಿಕ ಜನಸಂಖ್ಯೆಯನ್ನು (2.8 ಶತಕೋಟಿ) ಮತ್ತು PLD ಗಳು ಅಥವಾ ಜೋರಾಗಿ ಮನರಂಜನೆಯಿಂದ ಅಸುರಕ್ಷಿತ ಆಲಿಸುವ ಅಭ್ಯಾಸಗಳಿಗೆ ಒಡ್ಡಿಕೊಳ್ಳುವ ಅತ್ಯುತ್ತಮ ಸ್ಥಳಗಳನ್ನು, ಪರಿಗಣಿಸುವ ಮೂಲಕ ಶ್ರವಣ ನಷ್ಟದ ಅಪಾಯದಲ್ಲಿರುವ ಜನರ ಸಂಖ್ಯೆಯನ್ನು ಅಂದಾಜು ಮಾಡಿದ್ದಾರೆ.

ಸಂಶೋಧಕರು ಅಂದಾಜಿಸುವಂತೆ ಹದಿಹರೆಯದವರು ಮತ್ತು ಯುವ ವಯಸ್ಕರ ಜಾಗತಿಕ ಸಂಖ್ಯೆಯು 0.67 ರಿಂದ 1.35 ಶತಕೋಟಿ ವರೆಗೆ ಶ್ರವಣ ನಷ್ಟದ ಅಪಾಯವನ್ನು ಹೊಂದಬಹುದು.

ಯಕ್ಷಮಿತ್ರರು (ರಿ) ಪೊರ್ಕೋಡಿ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ

0

ಯಕ್ಷಮಿತ್ರರು (ರಿ) ಪೊರ್ಕೋಡಿ ದಿನಾಂಕ :13.11.2022 ಆದಿತ್ಯವಾರದಂದು ಅಷ್ಠಮ ವಾರ್ಷಿಕೋತ್ಸವ ನಡೆಯಿತು. ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವನ್ನು ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಮ್ಮ ಯಕ್ಷಮಿತ್ರರು (ರಿ) ಪೊರ್ಕೋಡಿ ಸಂಸ್ಥೆಯ ವಿದ್ಯಾರ್ಥಿಗಳು ಆಡಿ ತೋರಿಸಿದರು.

ಸಭಾ ಕಾರ್ಯಕ್ರಮ ಸಂಜೆ 05:00 ಗಂಟೆಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಶ್ರೀಮಾನ್ ಅರುಣ್ ಕುಮಾರ್ ಕಾಟಿಪಳ್ಳ ಇವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ  ವೆಂಕಟರಮಣ ಅಸ್ರಣ್ಣರು ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಕಟೀಲು ಇವರು  ಆಶೀರ್ವಚನ ನೀಡಿದರು.

ವೇದಮೂರ್ತಿ ಪಿ ಕೃಷ್ಣ ಭಟ್  ಪ್ರಧಾನ ಅರ್ಚಕರು ಶ್ರೀ ಸೋಮನಾಥೇಶ್ವರ ದೇವಸ್ಥಾನ  ಪೊರ್ಕೋಡಿ ಪೇಜಾವರ ಉಪಸ್ಥಿತರಿದ್ದರು. ವೇದಮೂರ್ತಿ ಎಂ ಗಣೇಶ್ ಭಟ್ ಜ್ಯೋತಿಷಿ  ಮರಕಡ ಉಪಸ್ಥಿತರಿದ್ದರು. ಶ್ರೀಮಾನ್ ಕೃಷ್ಣಪ್ಪ ಪೂಜಾರಿ ಅಧ್ಯಕ್ಷರು ಶ್ರೀ ದೇವಿ ಭಕ್ತ ಸಂಘ ಕೆಂಜಾರು ಕಾನ, ಶ್ರೀಮತಿ ನಳಿನಿ ಜಿ ಶೆಟ್ಟಿ ಅಧ್ಯಕ್ಷರು ಸಿಂಚನ ಮಹಿಳಾ ಮಂಡಲ ಮತ್ತು ಬೆಥನಿ ಸಾಮಾಜ ಸೇವಾ ಕಾರ್ಯಕರ್ತೆ ಉಪಸ್ಥಿತರಿದ್ದರು.

ಎಸ್ ಎಸ್ ಎಲ್ ಸಿ ಯಲ್ಲಿ 85% ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸನ್ಮಾನ ಪತ್ರವನ್ನು ಶ್ರೀಮತಿ ನಿರ್ಮಲ ಟೀಚರ್ ಪ್ರಾಸ್ತಾವಿಸಿದರು. ಶ್ರೀಮತಿ ಎಂ ಲಕ್ಷ್ಮಿ .ಕೆ. ಕುಮಾರ್ ಇವರು ಸ್ವಾಗತಿಸಿ ಧನ್ಯವಾದಗೈದರು.

ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0

ಪುತ್ತೂರು, ನ17: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಹಾವೇರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್‌ಕೆ.ಜೆ(ಪುತ್ತೂರಿನ ನೆಹರೂ ನಗರದ ಪಿಎಮ್‌ಜಿಎಸ್‌ವೈ ಇಂಜಿನಿಯರ್‌ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ),

ಮನ್ನಿತ್‌ ಎನ್‌ ಗೌಡ (ಬನ್ನೂರಿನ ರಮೇಶ ಗೌಡ ಎನ್ ಮತ್ತು ನಳಿನಿ ದಂಪತಿ ಪುತ್ರ)

ಮತ್ತು ಸಾಗರಿ (ಮೈಸೂರಿನ ನೂತನ್‌ ಕುಮಾರ್ ಮತ್ತು ಸುಚಿತ್ರಾ ರೈ ದಂಪತಿ ಪುತ್ರಿ)ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಅನಿರೀಕ್ಷಿತವಾಗಿ ಯು-ಟರ್ನ್ ಹೊಡೆದ ಬೈಕ್ ಸವಾರ – ಮಹಿಳೆ ಸಾವು, ಆರೋಪಿ ಬಂಧನ

0

ಬೈಕ್ ಸವಾರನೊಬ್ಬ  ಅನಿರೀಕ್ಷಿತವಾಗಿ ಯು-ಟರ್ನ್ ಹೊಡೆದ ಮಹಿಳೆಯೊಬ್ಬಳ ಸಾವು ಸಂಭವಿಸಿದ ಘಟನೆ ನಡೆದಿದೆ.

ಕೊಚ್ಚಿ: ತ್ರಿಪುಣಿತುರಾದಲ್ಲಿ ಮಹಿಳೆ ಸಾವಿಗೆ ಕಾರಣವಾದ ಅಪಘಾತದಲ್ಲಿ ಭಾಗಿಯಾಗಿದ್ದ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ. ಕಂಜಿರಮಟ್ಟಂ ಮೂಲದ ವಿಷ್ಣು ಎಂಬಾತನನ್ನು ತ್ರಿಪುಣಿತುರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳಿಗ್ಗೆ 9ರ ಸುಮಾರಿಗೆ ತ್ರಿಪುಣಿತುರಾ ಎಸ್‌ಎನ್ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ. ಸ್ಕೂಟರ್ ನಲ್ಲಿ ಮಹಿಳೆಯ ಹಿಂದೆ ಬೈಕ್ ನಲ್ಲಿ ಬಂದ ಬೈಕ್ ಸವಾರ ಆಕೆಯನ್ನು ಓವರ್ ಟೇಕ್ ಮಾಡಿ ನಿರಾತಂಕವಾಗಿ ಯೂ ಟರ್ನ್ ಮಾಡಿದ್ದಾರೆ.

ಬೈಕ್‌ನ ಹಿಂಬದಿಗೆ ಡಿಕ್ಕಿ ಹೊಡೆದು ಯುವತಿ ಸ್ಕೂಟರ್‌ನಿಂದ ಬಿದ್ದಿದ್ದು, ಹಿಂದೆಯೇ ಬಂದ ಬಸ್ ಆಕೆಯ ದೇಹವನ್ನು ಹಾದು ಹೋಗಿದೆ. ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ. ಜೂನ್ 12ರಂದು ಆರೋಪಿ ವಿಷ್ಣು ಅವರ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಮೃತಪಟ್ಟಿದ್ದ.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ G20 ಶೃಂಗಸಭೆಯಲ್ಲಿ ಮಾತಿನ ಚಕಮಕಿ – ವೀಡಿಯೊ

0

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ನಡುವಿನ ಸಂಭಾಷಣೆಯ ವಿವರಗಳನ್ನು ಸೋರಿಕೆ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಂತರ ಮಾತಿನ ಚಕಮಕಿ ನಡೆಸಿದರು.

ಉಭಯ ನಾಯಕರ ನಡುವಿನ ಸಂಭಾಷಣೆಯ ವಿವರಗಳು “ಪತ್ರಿಕೆಗಳಿಗೆ ಸೋರಿಕೆಯಾಗುತ್ತಿವೆ” ಎಂದು ಕ್ಸಿ ಜಿನ್‌ಪಿಂಗ್ ಜಸ್ಟಿನ್ ಟ್ರುಡೊ ಅವರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು. ಘಟನೆಯ ವೀಡಿಯೊದಲ್ಲಿ ಕ್ಸಿ ಜಿನ್‌ಪಿಂಗ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ,

ಇಬ್ಬರ ನಡುವೆ ಚರ್ಚಿಸಲಾದ ಎಲ್ಲವೂ “ಪತ್ರಿಕೆ(ಗಳಿಗೆ) ಸೋರಿಕೆಯಾಗಿದೆ. “ಅದು ಸೂಕ್ತವಲ್ಲ ಮತ್ತು ಸಂಭಾಷಣೆಯನ್ನು ನಡೆಸುವ ಸರಿಯಾದ ರೀತಿ ಅಲ್ಲ” ಎಂದು ಕ್ಸಿ ಜಿನ್‌ಪಿಂಗ್ ಹೇಳುವುದನ್ನು ಕೇಳಬಹುದು.

ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟಿನ್ ಟ್ರುಡೊ, “ಕೆನಡಾದಲ್ಲಿ ನಾವು ಮುಕ್ತ ಮತ್ತು ಸ್ಪಷ್ಟವಾದ ಸಂಭಾಷಣೆಯನ್ನು ನಂಬುತ್ತೇವೆ ಮತ್ತು ಅದನ್ನೇ ನಾವು ಮುಂದುವರಿಸುತ್ತೇವೆ. ನಾವು ಒಟ್ಟಿಗೆ ರಚನಾತ್ಮಕವಾಗಿ ಕೆಲಸ ಮಾಡಲು ನೋಡುವುದನ್ನು ಮುಂದುವರಿಸುತ್ತೇವೆ, ಆದರೆ ನಾವು ಒಪ್ಪದ ವಿಷಯಗಳಿವೆ. ಎಂದು ಹೇಳಿದರು.

ಕೆನಡಾದ ಪಿಎಂ ಜಸ್ಟಿನ್ ಟ್ರುಡೊ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮೂರು ವರ್ಷಗಳ ನಂತರ ತಮ್ಮ ಮೊದಲ ಮಾತುಕತೆ ನಡೆಸಿದರು. ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಜಿ 20 ಸಭೆಯ ಹಿನ್ನೆಲೆಯಲ್ಲಿ ಉಭಯ ವಿಶ್ವ ನಾಯಕರ ನಡುವೆ ಚರ್ಚೆ ನಡೆಯಿತು.

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 10ನೇ ತರಗತಿ ವಿದ್ಯಾರ್ಥಿನಿ ವಂಶಿ.ಬಿ.ಕೆ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ವಿದ್ಯಾಭಾರತಿ ಕರ್ನಾಟಕ, ಹಾಗೂ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಇವರ ಜಂಟಿ ಆಶ್ರಯದಲ್ಲಿ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 13, 14ರಂದು ಕರ್ನಾಟಕ ಆಂಧ್ರ ಪ್ರದೇಶ್ ತೆಲಂಗಣ ರಾಜ್ಯವನ್ನು ಒಳಗೊಂಡ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 10ನೇ ತರಗತಿ ವಿದ್ಯಾರ್ಥಿನಿ ವಂಶಿ.ಬಿ.ಕೆ (ಬಪ್ಪಳಿಗೆ ಕಮಲಾಕ್ಷ, ಜಯಲತಾ ದಂಪತಿ ಪುತ್ರಿ): 100 ಮೀಟರ್ ಹರ್ಡಲ್ಸ್ -ದ್ವಿತೀಯ, 4*400 ಮೀಟರ್ ರಿಲೇ –ಪ್ರಥಮ ಸ್ಥಾನ ಪಡೆದುಕೊಂಡಿದ್ದು, 

ನವೆಂಬರ್ 19ರಿಂದ 23ರವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾಳೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬಪ್ಪಳಿಗೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಸಭೆ – “ಉದ್ಯೋಗಾವಕಾಶ ಕಲ್ಪಿಸುವ ಗುರಿಯೊಂದಿಗೆ ಶಿಕ್ಷಣ” : ರಾಜಶ್ರೀ ಎಸ್. ನಟ್ಟೋಜ

0

ಪುತ್ತೂರು: ಉತ್ತಮ ಶೈಕ್ಷಣಿಕ ಸಾಧನೆ ಮಾಡಬೇಕೆನ್ನುವುದರ ಜೊತೆಗೆ ಉದ್ಯೋಗಾವಕಾಶವೂ ಪ್ರಾಪ್ತವಾಗಬೇಕೆನ್ನುವ ನೆಲೆಯಲ್ಲಿ ಶಿಕ್ಷಣವನ್ನು ನೀಡಿದಾಗ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ದೊರಕುವುದಕ್ಕೆ ಸಾಧ್ಯ. ಆ ಕಾರಣದಿಂದಲೇ ಅಂಬಿಕಾ ಪದವಿ ಹಾಗೂ ಪದವಿಪೂರ್ವ ಸಂಸ್ತೆಗಳಲ್ಲಿ ಸಿ.ಎ., ಎಸ್.ಡಿ.ಎ, ಎಫ್.ಡಿ.ಎ, ಐಬಿಪಿಎಸ್ ಪರೀಕ್ಷೆ ಉತ್ತೀರ್ಣರಾಗಲು ಬೇಕಾಗಿರುವ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ತೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿದ್ಯಾರ್ಥಿಗಳ ಪೋಷಕರೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕ- ರಕ್ಷಕ ಸಂಘದ ಸಭೆಯಲ್ಲಿ ಮಾತನಾಡಿದರು.


ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಿಪೂರ್ಣ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ತರಬೇತುಗೊಳಿಸಬೇಕಿದೆ. ವಾಣಿಜ್ಯ ವಿಭಾಗದಲ್ಲಿ ವಿಫುಲ ಉದ್ಯೋಗವಾಕಾಶಗಳಿದ್ದು, ಕೌಶಲ ಹೊಂದಿದ ವಿದ್ಯಾರ್ಥಿಗಳ ಕೊರತೆಯಿದೆ. ಆದ್ದರಿಂದ ಕೌಶಲದೊಂದಿಗೆ ವಿದ್ಯೆ ನೀಡುವ ಕಾರ್ಯ ನಡೆದಾಗ ವಿದ್ಯಾರ್ಥಿಗಳು ಪರಿಪೂರ್ಣರೆನಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲ ರೀತಿಯ ತರಬೇತಿಗಳನ್ನು ನೀಡಬೇಕಿರುವುದು ವಿದ್ಯಾಸಂಸ್ಥೆಯ ಆದ್ಯತೆ ಎಂದರು.


ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ, ಪ್ರತೀ ವರ್ಷ ಬ್ಯಾಂಕಿ0ಗ್ ಕ್ಷೇತ್ರದಲ್ಲೇ ಸಾವಿರಾರು ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತಿದೆ. ಆದರೆ ವಿದ್ಯಾರ್ಥಿಗಳು ಪೂರ್ವ ತಯಾರಿ ಕೊರತೆಯಿಂದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುತ್ತಿಲ್ಲ. ಪದವಿ ಅಧ್ಯಯನ ನಡೆಸುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ದೊರಕಿದಾಗ ಹೆಚ್ಚಿನ ಸಾಧನೆ ವಿದ್ಯಾರ್ಥಿಗಳಿಂದ ಮೂಡಿಬರುವುದಕ್ಕೆ ಸಾಧ್ಯ ಎಂದು ನುಡಿದರು.


ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಶಿಕ್ಷಣಕ್ಕೆ ಪೂರಕವಾಗುವ ವಿಚಾರಗಳಿಗೆ ಬಳಸಿಕೊಂಡಲ್ಲಿ ಸಾಧನೆ ಮಾಡಲು ಸಾಧ್ಯ. ಆದರೆ ಅನೇಕ ಮಂದಿ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯ ಸುಳಿಗೆ ಸಿಲುಕಿ ಬಳಲುತ್ತಿದ್ದಾರೆ. ಹಾಗಾಗಿ ಉಪನ್ಯಾಸಕರ ಜೊತೆಗೆ ಪೋಷಕರೂ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನಹರಿಸುವುದು ಅತ್ಯಗತ್ಯ ಎಂದು ಹೇಳಿದರು.


ವಾಣಿಜ್ಯ ವಿಭಾಗ ಉಪನ್ಯಾಸಕಿ ಕಾವ್ಯ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗ ಮುಖ್ಯಸ್ಥೆ ಅಕ್ಷತಾ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾ ಸರಸ್ವತಿ ವಂದಿಸಿದರು.

ಶಿರೂರು ಫಣಿಯಪ್ಪಯ್ಯ ಸಂಸ್ಮರಣೆ, ಫಣಿಗಿರಿ ಪ್ರಶಸ್ತಿ ಪ್ರದಾನ, ಯಕ್ಷಗಾನ ಗಾನ ವೈಭವ 

0

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಆಯೋಜಿಸಿರುವ ಫಣಿಗಿರಿ ಪ್ರತಿಷ್ಠಾನ ಶಿರೂರು ಇವರ ‘ಶಿರೂರು ಫಣಿಯಪ್ಪಯ್ಯ ಸಂಸ್ಮರಣ’ ಕಾರ್ಯಕ್ರಮ ದಿನಾಂಕ 20.11.2022ರ ಆದಿತ್ಯವಾರದಂದು ‘ಗೊಂಬೆ ಮನೆ’ ಉಪ್ಪಿನಕುದ್ರು ಇಲ್ಲಿ ನಡೆಯಲಿದೆ.

ಈ ಬಾರಿಯ ಫಣಿಗಿರಿ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕವಿ ಕಂದಾವರ ಶ್ರೀ ರಘುರಾಮ ಶೆಟ್ಟಿಯವರಿಗೆ ನೀಡಲಾಗುವುದು ಎಂದು  ಫಣಿಗಿರಿ ಪ್ರತಿಷ್ಠಾನ ಶಿರೂರು ಪ್ರಕಟಿಸಿದೆ.

ಈ ಸಂದರ್ಭದಲ್ಲಿ ಫಣಿಯಪ್ಪಯ್ಯ ವಿರಚಿತ ಪ್ರಸಂಗ ಸಂಪುಟವೂ ಬಿಡುಗಡೆಯಾಗಲಿದೆ.  ಶಿರೂರು ಫಣಿಯಪ್ಪಯ್ಯ ಸಂಗ್ರಹಿತ ತಾಳೆಗರಿ ಹಸ್ತಪ್ರತಿ ಪ್ರದರ್ಶನ ಮತ್ತು ಪುಸ್ತಕ ಪ್ರದರ್ಶನವೂ ನಡೆಯಲಿದೆ.

ಬಳಿಕ ಹೆರಂಜಾಲು ಗೋಪಾಲ ಗಾಣಿಗ ಮತ್ತು ಸಂಗಡಿಗರಿಂದ  ಯಕ್ಷಗಾನ ಗಾನ ವೈಭವ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಚಿತ್ರ ನೋಡಿ.