Saturday, March 14, 2026
Home Blog Page 95

ಭಾರತ ರತ್ನ, ಗಿರಿಜಾ ಕಲ್ಯಾಣ – ಇಂದು ಯಕ್ಷಗಾನ ಪ್ರದರ್ಶನ 

ಇಂದು ಆದಿತ್ಯವಾರ, ದಿನಾಂಕ 16.04.2023ರಂದು ಸಂಜೆ ಘಂಟೆ 5.45ರಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ  ‘ಭಾರತ ರತ್ನ, ಗಿರಿಜಾ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ನಡೆಯಲಿರುವ ಈ ಪ್ರದರ್ಶನವು ಸಂಜೆ  ಘಂಟೆ 5.45ಕ್ಕೆ ಆರಂಭವಾಗಲಿದ್ದು ರಾತ್ರಿ ಘಂಟೆ 12.30ರ ತನಕ ನಡೆಯಲಿದೆ. 

ಸಂಜೆ  ಘಂಟೆ 5.45ಕ್ಕೆ ಚೌಕಿ ಪೂಜೆ ನೆರವೇರಲಿದೆ. ರಾತ್ರಿ ಘಂಟೆ 7.30ಕ್ಕೆ ಅನ್ನಸಂತರ್ಪಣೆ ಆರಂಭವಾಗಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳನ್ನು ಯಕ್ಷಗಾನದ ಸೇವಾಕರ್ತರು ಆದರದಿಂದ ಆಮಂತ್ರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮೇಲಿನ ಕರಪತ್ರದ ಚಿತ್ರವನ್ನು ಗಮನಿಸಿ. 

ಇಂದು ಚಿತ್ರಸೇನ ಕಾಳಗ, ದುಶ್ಶಾಸನ ವಧೆ, ರಕ್ತರಾತ್ರಿ ಯಕ್ಷಗಾನ ಬಯಲಾಟ 

ಕಟೀಲು ಶ್ರೀದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಕಲಾಮಂಡಳಿಯವರಿಂದ 28ನೇ ವರ್ಷದ ಸೇವಾ ಬಯಲಾಟವಾಗಿ “ಚಿತ್ರಸೇನ ಕಾಳಗ, ದುಶ್ಶಾಸನ ವಧೆ, ರಕ್ತರಾತ್ರಿ” ಯಕ್ಷಗಾನ ಬಯಲಾಟ ಇಂದು, ತಾ.15.04.2023ನೇ ಶನಿವಾರ ಸಂಜೆ ಗಂಟೆ 6.00ಕ್ಕೆ  ಕನ್ಯಾನದ ಸರಸ್ವತೀ ವಿದ್ಯಾಲಯದ ವಠಾರದಲ್ಲಿ ನಡೆಯಲಿದೆ. 

ಈ ಸಂದರ್ಭದಲ್ಲಿ ಸಂಜೆ 5.30ಗಂಟೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. 

ಶ್ರೀಗಳಾದ –  ಜಿನ್ನಪ್ಪ ನಾಯ್ಕ ಪೆರ್ನೆಮೊಗರು (ಮಾಜಿ ಯೋಧ), ದೇವಸ್ಯ ಕುಂಙ್ಙಣ್ಣಶೆಟ್ಟಿ (ದೈವಪಾತ್ರಿ), ಗಂಗಯ್ಯ ನಲಿಕೆ ಮರ್ತನಾಡಿ (ದೈವನರ್ತಕ), ಎಂ.ಟಿ.ಎಸ್. ಕುಲಾಲ್ (ಯಕ್ಷಗಾನ ಹಾಗೂ ಚಲನಚಿತ್ರ ನಟ) ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು. ವಿವರಗಳಿಗೆ ಮೇಲಿನ ವೀಡಿಯೊವನ್ನು ನೋಡಿ 

ಬಸ್ ನಾಲೆಗೆ ಬಿದ್ದು 13 ಮಂದಿ ಸಾವು, 25ಕ್ಕೂ ಹೆಚ್ಚು ಮಂದಿ ಗಾಯ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪುಣೆ-ರಾಯಗಡ ಗಡಿಯಲ್ಲಿ ಈ ಅವಘಡ ಸಂಭವಿಸಿದೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಶನಿವಾರ ನಸುಕಿನ ವೇಳೆಯಲ್ಲಿ ಬಸ್ ಕಂದಕಕ್ಕೆ ಬಿದ್ದ ಪರಿಣಾಮ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಣೆ-ರಾಯಗಢ ಗಡಿಯಲ್ಲಿ ಮುಂಜಾನೆ 4:30ಕ್ಕೆ ಬಸ್ ಪುಣೆಯ ಪಿಂಪಲ್ ಗುರವ್‌ನಿಂದ ಗೋರೆಗಾಂವ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಬಸ್‌ನಲ್ಲಿ 41 ಮಂದಿ ಪ್ರಯಾಣಿಕರಿದ್ದರು. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಟ್ವಿಟರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಪಘಾತವನ್ನು “ದುರದೃಷ್ಟಕರ” ಎಂದು ಬಣ್ಣಿಸಿದ್ದಾರೆ ಮತ್ತು ಸ್ಥಳೀಯ ಆಡಳಿತವು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.

ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಪೊಲೀಸರು ಮತ್ತು ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತ ಸಂಭವಿಸಿದ ಸ್ಥಳದ ಸಮೀಪ ರಸ್ತೆ ಬದಿಯಲ್ಲಿ ಆಂಬ್ಯುಲೆನ್ಸ್ ಹಾಗೂ ಪೊಲೀಸ್ ವಾಹನಗಳು ಸಾಲುಸಾಲಾಗಿ ನಿಂತಿರುವುದು ಕಂಡು ಬಂದಿದೆ.

ಪ್ರೀತಿಸಿದ ಹುಡುಗಿಯ ಹುಟ್ಟುಹಬ್ಬ ಆಚರಿಸಿದ ಬಳಿಕ ಚಾಕುವಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಿಯಕರ

ಪ್ರೀತಿಸಿದ ಹುಡುಗಿಯ ಹುಟ್ಟುಹಬ್ಬ ಆಚರಿಸಿ, ಕೇಕ್ ಕತ್ತರಿಸಿ ಬಳಿಕ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.

ನವ್ಯಾ (24) ಕೊಲೆಯಾದ ಯುವತಿ. ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯಾ ಕಳೆದ ಆರು ವರ್ಷಗಳಿಂದ ಪ್ರಶಾಂತ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ನವ್ಯಾ ಮತ್ತು ಪ್ರಶಾಂತ್ ಕನಕಪುರದ ದೂರದ ಸಂಬಂಧಿಗಳು.

ಕಳೆದ ಮಂಗಳವಾರ ನವ್ಯಾ ಅವರ ಹುಟ್ಟುಹಬ್ಬವಿತ್ತು. ಅಂದು ಬ್ಯುಸಿಯಾಗಿದ್ದೆ ಎಂದು ಹೇಳಿದ್ದ ಪ್ರಶಾಂತ್ ನಿನ್ನೆ (ಏ.14) ಬರ್ತ್ ಡೇ ಸೆಲೆಬ್ರೇಷನ್ ಗೆ ಪ್ಲಾನ್ ಮಾಡಿದ್ದು, ಅದರಂತೆ ರಾತ್ರಿಯೇ ಕೇಕ್ ರೆಡಿ ಮಾಡಿ ಕೇಕ್ ತಿನ್ನಿಸಿದ್ದಾರೆ.

ಬಳಿಕ ಹರಿತವಾದ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮೃತ ಯುವತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತೀಚೆಗೆ ಮೃತ ಯುವತಿ ನವ್ಯಾ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದಾಳೆಂದು ಪ್ರಶಾಂತ್ ಅನುಮಾನ ವ್ಯಕ್ತಪಡಿಸಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು ಎಂದು ತಿಳಿದುಬಂದಿದೆ. ಕೊಲೆಗೆ ಇದೆ ಕಾರಣವಿರಬಹುದೆಂದು ಅನುಮಾನಿಸಲಾಗಿದೆ.

ಮೃತ ಯುವತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಬಲೆಗೆ ಬಿದ್ದ 1500 ಕೆಜಿ ತೂಕದ ಸ್ಟಿಂಗ್ರೇ ಮೀನು – ಈ ಒಂದು ಮೀನಿನ ಬೆಲೆ ಎಷ್ಟು ಗೊತ್ತಿದೆಯೇ?

ಮೀನುಗಾರರ ಬಲೆಗೆ ಸುಮಾರು 1500 ಕೆಜಿ ತೂಕದ ಸ್ಟಿಂಗ್ರೇ ಮೀನು ಬಿದ್ದಿದೆ.

ಕೊಲ್ಲಂ ನೀಂದಕರ ಕಡಲತೀರದಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯ ಬಲೆಗೆ 1500 ಕೆಜಿ ತೂಕದ ಸ್ಟಿಂಗ್ರೇ ಸಿಲುಕಿದೆ.

ಕೊಡಂಕರ ಬಂದರಿನಲ್ಲಿ ನೆರೆದಿದ್ದ ಜನಸಮೂಹದಿಂದ ಕಿಕ್ಕಿರಿದಿದ್ದ ಧ್ವನಿ ಹರಾಜಿನಲ್ಲಿ ಶಕ್ತಿಕುಲಂಗರ ಮೂಲದ ಬಾಬು ಎಂಬುವರು 27000 ರೂ. ಕೊಟ್ಟು ಈ ಮೀನನ್ನು ತನ್ನದಾಗಿಸಿಕೊಂಡರು.

ಈ ಬೃಹತ್ ಸಮುದ್ರ ದೆವ್ವವನ್ನು ನಂತರ ಟುಟಿಕೋರಿನ್ ಫಿಶ್ ಪ್ಲಾಂಟ್ ಗೆ ವರ್ಗಾಯಿಸಲಾಯಿತು. ಈ ಬಾರಿ ಬಲೆ ಹೆಚ್ಚು ತೂಕವಿತ್ತು ಎಂದು ಮೀನುಗಾರರು ನೆನಪಿಸಿಕೊಳ್ಳುತ್ತಾರೆ.

ಭಾರವಾದದನ್ನು ದೋಣಿಗೆ ಎತ್ತುವ ಎಲ್ಲಾ ಶ್ರಮ ವ್ಯರ್ಥವಾಯಿತು. ಅದನ್ನು ಬಂದರಿಗೆ ಎಳೆದೊಯ್ದು ನಂತರ ಕ್ರೇನ್ ಸಹಾಯದಿಂದ ಮೇಲೆ ತರಲಾಯಿತು.

ವರದಕ್ಷಿಣೆಗಾಗಿ ಮಾವನಿಂದ ಅಮಾನುಷವಾಗಿ ಥಳಿಸಲ್ಪಟ್ಟ ಮಹಿಳೆ – ಮಾವನ ಬಂಧನ

ಕೇಳಿದಷ್ಟು ವರದಕ್ಷಿಣೆ ನೀಡದ ಕಾರಣ ಸೊಸೆಯನ್ನು ಮನೆ ಬಿಟ್ಟು ಹೋಗುವಂತೆ ಹೇಳಿ ವ್ಯಕ್ತಿಯೊಬ್ಬ ದೊಣ್ಣೆಯಿಂದ ಥಳಿಸಿದ ಘಟನೆ ನಡೆದಿದೆ.

ಪರಶುವಕ್ಕಲ್‌ನ ಕಿಳಕ್ಕೆ ಪುತ್ತನ್‌ ವೇದಿಕೆಯ ಸ್ಟೀಫನ್‌ ಎಂಬುವರ ಪತ್ನಿ ಎ.ಎಲ್‌.ಪ್ರೇಮಲತಾ (42) ಅವರಿಗೆ ಮಾವ ರಾಮಚಂದ್ರನ್‌ (68) ಥಳಿಸಿದ್ದಾರೆ.

ಪ್ರೇಮಲತಾ ಅವರ 14 ವರ್ಷದ ಕಿರಿಯ ಮಗ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಾವಳಿಯಿಂದ ಈ ಘಟನೆ ಹೊರಬಿದ್ದಿದೆ. ದೃಶ್ಯಗಳ ಸಮೇತ ಪ್ರೇಮಲತಾ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಮಚಂದ್ರನನ್ನು ವಶಕ್ಕೆ ಪಡೆದಿದ್ದಾರೆ.

ದೃಶ್ಯಗಳಲ್ಲಿ ಪ್ರೇಮಲತಾ ಅವರ ಮುಖಕ್ಕೆ ಪದೇ ಪದೇ ಕಪಾಳಮೋಕ್ಷ ಮಾಡಿದ್ದು, ರಾಮಚಂದ್ರನ್ ದೊಣ್ಣೆಯಿಂದ ಥಳಿಸಿದ್ದಾರೆ.

‘ಮಾಯಾಪುರಿ ಮಹಾತ್ಮೆ’ ಯಕ್ಷಗಾನ

ಹಾದಿಗಲ್ಲು ಶ್ರೀ ಅಭಯಲಕ್ಷ್ಮಿ ನರಸಿಂಹ ದೇವಾಲಯದ ವರ್ಧಂತ್ಯುತ್ಸವದ ಪ್ರಯುಕ್ತ 11-04-2023ರಂದು ಜರಗಿದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲಾ ಕಾರ್ಯಕ್ರಮದಲ್ಲಿ ಶ್ರೀ   ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಅಂಬಲಪಾಡಿ (ಅಧ್ಯಕ್ಷ ಕೆ. ಅಜಿತ್‌ಕುಮಾರ್)

ಹಾಗೂ ಹಿರಿಯ ಯಕ್ಷಗಾನ ಕಲಾವಿದ ಶಿವಶಂಕರ ಕೆ.ಎಸ್. ಭಟ್‌ ಇವರಿಗೆ ತಲಾ ರೂ.10,000/- ಹಮ್ಮಿಣಿಯೊಂದಿಗೆ ‘ಶ್ರೀವಾದಿರಾಜಾನುಗ್ರಹ’ ಪ್ರಶಸ್ತಿಯನ್ನು ದೇವಳದ ಧರ್ಮದರ್ಶಿ ಹಾದಿಗಲ್ಲು  ಲಕ್ಷ್ಮೀನಾರಾಯಣರು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಎಸ್. ವಿ.ಭಟ್, ಮುರಲಿ ಕಡೆಕಾರ್ ನಾರಾಯಣ ಎಂ. ಹೆಗಡೆ ಹಾಗೂ ಭಾಗವತರಾದ ಕೆ.ಜೆ. ಗಣೇಶ್‌ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ನರಸಿಂಹ ತುಂಗರ ನಿರ್ದೇಶನದಲ್ಲಿ ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯ ಬಾಲಕಲಾವಿದರಿಂದ ‘ಮಾಯಾಪುರಿ ಮಹಾತ್ಮೆ’ ಯಕ್ಷಗಾನ ಪ್ರಸ್ತುತಗೊಂಡಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ – ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಠಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ

ಕರಾವಳಿಯ ಗಂಡು ಮೆಟ್ಟಿನಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನ ಇಂದು ಯಾವುದೇ ವಯೋಮಾನದವರು ಕಲಿಯುವ ಕಲೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಆಧ್ಯತೆ ಕೊಡುತ್ತಾ ಬಂದಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಯಕ್ಷಪ್ರದೀಪ” ಎಂಬ ತಂಡವಿದ್ದು,  ಯುಕೆಜಿಯಿಂದ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಸುಮಾರು 70ಕ್ಕೂ ಅಧಿಕ ವಿದ್ಯಾರ್ಥಿಗಳು ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.

ಕಲಿತ ವಿದ್ಯೆಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ, ಕಟ್ಟೆಪೂಜೆ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶಾಲಾ ಆವರಣದಲ್ಲಿ  ಯಕ್ಷಗಾನ ರಂಗಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ ದೀಪ ಬೆಳಗಿಸಿ ಚಾಲನೆ ನೀಡಿದರು. 

ಯಕ್ಷಗುರು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ನಿರ್ದೇಶನದಲ್ಲಿ ಹಾಗೂ ಶಾಲಾ ಸಂಸ್ಕೃತ ಅಧ್ಯಾಪಕ ಶ್ರೀ ವೆಂಕಟೇಶ್ ಪ್ರಸಾದ್ ಇವರ ಮಾರ್ಗದರ್ಶನದಲ್ಲಿ 64 ಪುಟಾಣಿಗಳು ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುತ್ತಾ “ರಾಜಾ ದಿಲೀಪ, ಏಕಾದಶೀ ಮಹಾತ್ಮೆ, ರಾಜಾ ವೈಖಾನಸ” ಎಂಬ ಪುಣ್ಯ ಕಥಾಭಾಗಗಳ ಯಕ್ಷಗಾನ ಪ್ರದರ್ಶನ ನಡೆಯಿತು.

ಯಕ್ಷಗಾನದ ಬಳಿಕ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಂದ ಸುಮಾರು ಎರಡೂವರೆ ಗಂಟೆಗಳ ಭಜನಾ ಕಾರ್ಯಕ್ರಮ ನೆರವೇರಿತು.

ದೇವರ ಕಟ್ಟೆ ಪೂಜೆಯ ಸಂದರ್ಭದಲ್ಲಿ ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹಾಗೂ ಕೋಶಾಧಿಕಾರಿ ಶ್ರೀ ಅಚ್ಯುತ ನಾಯಕ್, ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ರವಿನಾರಾಯಣ.ಎಂ ಮತ್ತು ಆಡಳಿತ ಮಂಡಳಿಯ ಸದಸ್ಯರು, ಶಾಲಾ ಪೋಷಕ ವೃಂದ, ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಇಂದು ಪುತ್ತೂರಿನಲ್ಲಿ ಪಾವಂಜೆ ಮೇಳದವರಿಂದ ಆಟ – ಶ್ರೀ ದೇವಿ ಮಹಾತ್ಮೆ

ಇಂದು ( ದಿನಾಂಕ 10-04-2023) ಪುತ್ತೂರಿನಲ್ಲಿ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಸವಾರಿಯ ಪ್ರಯುಕ್ತ ಪುತ್ತೂರು ಮಂಜಲ್ಪಡ್ಪು ಎಂಬಲ್ಲಿ ಕೊಡಿಪ್ಪಾಡಿ ದೇವಸ್ಥಾನದ ದ್ವಾರದ ಸಮೀಪ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಂಜೆ 6. 30 ಘಂಟೆಗೆ ಶ್ರೀ ದೇವಿ ಮಹಾತ್ಮೆ ಪ್ರಸಂಗದ ಪ್ರದರ್ಶನ ಆರಂಭವಾಗಲಿದೆ.

ಕಲಾಭಿಮಾನಿಗಳೆಲ್ಲರನ್ನೂ ಆಯೋಜಕರು ಆಯೋಜಕರು ಆದರದಿಂದ ಆಮಂತ್ರಿಸಿದ್ದಾರೆ. ಕಾರ್ಯಕ್ರಮದ ವಿವರಗಳಿಗೆ ಕರಪತ್ರ ನೋಡಿ.

ಬೆಂಗಳೂರಿನಲ್ಲಿ 35 ವರ್ಷದ ಮಹಿಳೆಯ ಕೊಲೆ

ಬೆಂಗಳೂರು: ರಾಯಚೂರು ಮೂಲದ ಅಂಬಿಕಾ (35) ಕೆಆರ್ ಪುರಂನ ಟಿಸಿ ಪಾಳ್ಯದಲ್ಲಿರುವ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮೃತರು ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ಮನೆಯಲ್ಲಿ ಒಂಟಿಯಾಗಿ ವಾಸವಿದ್ದು, ಇಬ್ಬರು ಮಕ್ಕಳು ಹಾಸ್ಟೆಲ್‌ನಲ್ಲಿದ್ದರು.

“ಹತ್ಯೆ ಮಾಡಿದ ನಂತರ ದುಷ್ಕರ್ಮಿಗಳು ಹೊರಗಿನಿಂದ ಬಾಗಿಲು ಹಾಕಿದ್ದರು. 2-3 ದಿನಗಳ ಹಿಂದೆ ಕೊಲೆ ನಡೆದಿದ್ದು, ಅನೇಕ ಇರಿತದ ಗಾಯಗಳು ಪತ್ತೆಯಾಗಿವೆ.

ಮೇಲ್ನೋಟಕ್ಕೆ ಸಂತ್ರಸ್ತೆಗೆ ತಿಳಿದಿರುವ ಯಾರೋ ಕೊಲೆಯ ಹಿಂದೆ ಇದ್ದಾರೆ. ಆರೋಪಿಯನ್ನು ಬಂಧಿಸಿದ ನಂತರವಷ್ಟೇ ಕೊಲೆಗೆ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಆಕೆಯ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿ ಒಳ ನುಗ್ಗಿ ಕೊಳೆತ ಸ್ಥಿತಿಯಲ್ಲಿದ್ದುದನ್ನು ಪತ್ತೆ ಹಚ್ಚಿದ್ದಾರೆ