Friday, March 13, 2026
Home Blog Page 84

ನಾಳೆಯಿಂದ ರಾಮಾಯಣ ಮಾಸಾಚರಣೆ ಮತ್ತು ತಾಳಮದ್ದಳೆ ಸಪ್ತಾಹ

11/08/2023 ಶುಕ್ರವಾರ ಮಧ್ಯಾಹ್ನ 2-30 ರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ರಾಮಾಯಣ ಮಾಸಾಚರಣೆ ಮತ್ತು ತಾಳಮದ್ದಳೆ ಸಪ್ತಾಹ ನಡೆಯಲಿದೆ.

ರಾಮಾಯಣ ಮಾಸಾಚರಣೆ ಪ್ರಯುಕ್ತ ತಾಳಮದ್ದಳೆ ಸಪ್ತಾಹ
ಉದ್ಘಾಟನೆ:
ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ
ಧರ್ಮದರ್ಶಿ
ಶ್ರೀ ಅಭಯಲಕ್ಷ್ಮೀನೃಸಿಂಹ ದೇವಸ್ಥಾನ ಹಾದಿಗಲ್ಲು
ತೀರ್ಥಹಳ್ಳಿ ತಾಲೂಕು
ಶಿವಮೊಗ್ಗ ಜಿಲ್ಲೆ


ಅದ್ಯಕ್ಷತೆ : ಡಾ.ಶಿವರಾಮ ಶೆಟ್ಟಿ ತಲ್ಲೂರು, ಅಧ್ಯಕ್ಷರು, ತಲ್ಲೂರು ಫೇಮಿಲಿ ಟ್ರಸ್ಟ್, ಉಡುಪಿ
ಅತಿಥಿಗಳು: ಶ್ರೀ ದಿವಾಣ ಗೋವಿಂದ ಭಟ್, ನಿರ್ದೇಶಕರು,ಅನನ್ಯ ಫೀಡ್ಸ್, ತಾರಿಹಳ್ಳ, ಹುಬ್ಬಳ್ಳಿ

ಶ್ರೀ ಅವಿನಾಶ್ ರಾವ್ ಬರಂಗಾಯ, ಧರ್ಮಸ್ಥಳ.
ಕಲಾಪೋಷಕರು
ಶ್ರೀ ರಮೇಶ್ ಮಂಜೇಶ್ವರ. ಮಾಜಿ ಉಪಾಧ್ಯಕ್ಷರು, ಕನ್ನಡ ಸಂಘ, ಬೆಹರೈನ್

ತಾಳಮದ್ದಳೆ: ಪಾರ್ತಿಸುಬ್ಬ ವಿರಚಿತ
ಪಟ್ಟಾಭಿಷೇಕ
ಭಾಗವತರು: ಶ್ರೀ ರಮೇಶ್ ಭಟ್ ಪುತ್ತೂರು
ಚೆಂಡೆ: ಮದ್ದಲೆ; ಶ್ರೀ ಮುರಾರಿ ಕಡಂಬಳಿತ್ತಾಯ,ಶ್ರೀ ಲಕ್ಷ್ಮೀಶ ಬೆಂಗ್ರೋಡಿ
ದಶರಥ:ಶ್ರೀ ರಾಧಾಕೃಷ್ಣ ಕಲ್ಚಾರ್
ಕೈಕೇಯಿ:ಶ್ರೀ ಹರೀಶ್ ಬಳಂತಿಮೊಗರು
ಮಂಥರೆ: ಶ್ರೀ ಬಾಲಕೃಷ್ಣ ಮಣಿಯಾಣಿ ಮವ್ವಾರು
ಶ್ರೀರಾಮ: ಡಾ.ಶ್ರುತಕೀರ್ತಿರಾಜ್ ಉಜಿರೆ
ಲಕ್ಷ್ಮಣ ;ಶ್ರೀ ಲಕ್ಷ್ಮಣ ಕುಮಾರ್ ಮರಕಡ

ಕಲಾಪೋಷಕ ಜಯರಾಮ ಭಟ್ಟರ ನಿಧನಕ್ಕೆ ಸಿರಿಬಾಗಿಲು ಪ್ರತಿಷ್ಠಾನ ಸಂತಾಪ

ಕರ್ಣಾಟಕ ಬ್ಯಾಂಕ್ ನ ಮಾಜಿ ಯಂ.ಡಿ. ಕಲಾಪೋಷಕ ಶ್ರೀ ಪಿ. ಜಯರಾಮ ಭಟ್ ರವರ ಅಗಲುವಿಕೆ ತುಂಬಲಾರದ ನಷ್ಟ. ಎಂದು ಸಿರಿಬಾಗಿಲು ಪ್ರತಿಷ್ಠಾನ ತನ್ನ ಸಂತಾಪ ವ್ಯಕ್ತಪಡಿಸಿದೆ.

ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚು ಆರ್ಥಿಕ ಸಹಕಾರ ಬೇಂಕ್ ನಿಂದ ಕೊಡಿಸಿ ಯಕ್ಷಗಾನ ಹಾಗು ಇನ್ನುಳಿದ ಕಲೆ, ಸಾಹಿತ್ಯ ಹೆಚ್ಚು ಪ್ರದರ್ಶನ ಗೊಳ್ಳುವಲ್ಲಿ ಪ್ರಧಾನವಾಗಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ ಚಟುವಟಿಕೆ ಪ್ರೋತ್ಸಾಹಿಸಿದ ಉದಾರಿಗಳು. ಭಗವಂತ ಅವರ ಆತ್ಮಕ್ಕೆ ಸದ್ಘತಿ ಕರುಣಿಸಲಿ ಎಂದು ಸಿರಿಬಾಗಿಲು ಪ್ರತಿಷ್ಠಾನದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. .

ಮಗಳಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಾವನ್ನು ಕೋಣೆಯೊಳಗೆ ಎಸೆದು ವ್ಯಕ್ತಿಯನ್ನು ಕೊಲ್ಲಲು ಯತ್ನಿಸಿದ ಯುವಕನ ಬಂಧನ

ಮಗಳಿಗೆ ಕಿರುಕುಳ ನೀಡಿದ್ದಕ್ಕೆ ಪ್ರಶ್ನಿಸಿದ್ದಕ್ಕೆ ಹಾವನ್ನು ಕೋಣೆಯೊಳಗೆ ಎಸೆದು ವ್ಯಕ್ತಿಯನ್ನು ಕೊಲ್ಲಲು ಯತ್ನಿಸಿದ ಯುವಕನ ಬಂಧನ


ತಿರುವನಂತಪುರ: ಹಾವು ಬಳಸಿ ವ್ಯಕ್ತಿಯೊಬ್ಬನನ್ನು ಕೊಲ್ಲಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಟ್ಟಕ್ಕಡದಲ್ಲಿ ನಡೆದ ಘಟನೆಯಲ್ಲಿ ಗುಂಡುರಾವ್ ಅಲಿಯಾಸ್ ಕಿಚ್ಚು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.


ಅಂಬಲತಿಂಕಲ ಮೂಲದ ರಾಜು ಎಂಬಾತನನ್ನು ಕಿಚ್ಚು ಕೊಲೆಗೆ ಯತ್ನಿಸಿದ್ದ.

ಕಿಚ್ಚು ತನ್ನ ಮಗಳಿಗೆ ಕಿರುಕುಳ ನೀಡಿದ್ದಕ್ಕೆ ರಾಜು ಪ್ರಶ್ನಿಸಿದ್ದ. ಇದಕ್ಕೆ ಪ್ರತೀಕಾರವಾಗಿ ಕಿಚ್ಚು ರಾಜು ಕೊಲೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಆರೋಪಿಗಳು ಹಾವನ್ನು ಕಿಟಕಿಯ ಮೂಲಕ ರಾಜು ಅವರ ಕೋಣೆಗೆ ಎಸೆದಿದ್ದಾರೆ.

ಆರೋಪಿ ಪೊಲೀಸರ ಬಳಿ ಅಪರಾಧ ಒಪ್ಪಿಕೊಂಡಿದ್ದಾನೆ. ತದನಂತರ ಅವನನ್ನು ಬಂಧಿಸಲಾಯಿತು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ

ವಿದ್ಯಾಭಾರತಿ ಕರ್ನಾಟಕ ವತಿಯಿಂದ ದಿನಾಂಕ 28-07-2023ರಂದು ನಡೆದ ಜಿಲ್ಲಾ ಮಟ್ಟದ ವಿದ್ಯಾಭಾರತಿ ಯೋಗಾಸನ ಸ್ಪರ್ಧೆ ಸರಸ್ವತಿ ವಿದ್ಯಾಲಯ ಕಡಬ, ಇಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.


ರಿದಮಿಕ್ ಯೋಗ(ನೃತ್ಯ)ದಲ್ಲಿ ಬಾಲವರ್ಗದ ಬಾಲಕರ ವಿಭಾಗದಲ್ಲಿ ಸ್ಮರಣ್, 7ನೇ ತರಗತಿ(ಶ್ರೀ ರಾಮಕೃಷ್ಣ ಮತ್ತು ಶ್ರೀಮತಿ ರವಿಕಲಾ ದಂಪತಿ ಪುತ್ರ) ದ್ವಿತೀಯ ಸ್ಥಾನ ಹಾಗೂ ಬಾಲವರ್ಗ ಬಾಲಕಿಯರ ವಿಭಾಗದಲ್ಲಿ ಮೋಕ್ಷ, 8ನೇ ತರಗತಿ ( ಶ್ರೀ ಕಿಶೋರ್ ಕುಮಾರ್.ಬಿ ಮತ್ತು ಶ್ರೀಮತಿ ರತ್ನ ದಂಪತಿ ಪುತ್ರಿ) ದ್ವಿತೀಯ ಸ್ಥಾನ ಪಡೆದಿರುತ್ತಾರೆ.


ಬಾಲವರ್ಗದ ಬಾಲಕಿಯರ ತಂಡದಲ್ಲಿ : ಅಪೇಕ್ಷಾ, 8ನೇ ತರಗತಿ(ಶ್ರೀ ವೆಂಕಟರಮಣ ಕಾರಂತ್ ಮತ್ತಿ ಶ್ರೀಮತಿ ಸಂಧ್ಯಾ ದಂಪತಿ ಪುತ್ರಿ), ಚೈತ್ರಾ, 7ನೇ ತರಗತಿ(ಶ್ರೀ ಕೃಷ್ಣಕುಮಾರ್ ಮತ್ತು ಶ್ರೀಮತಿ ಪ್ರೇಮ ದಂಪತಿ ಪುತ್ರಿ), ಸಾನ್ವಿ, 6ನೇ ತರಗತಿ(ಶ್ರೀ ಜಯರಾಮ ಮತ್ತು ಶ್ರೀಮತಿ ಉಷಾಲತ ದಂಪತಿ ಪುತ್ರ), ಪಾರ್ವತಿ, (ಶ್ರೀ ಈಶ್ವರ ಪ್ರಕಾಶ್ ಮತ್ತು ಶ್ರೀಮತಿ ಚೈತನ್ಯ ಪ್ರಕಾಶ್ ದಂಪತಿ ಪುತ್ರಿ), ಅನ್ವಿ, 7ನೇ ತರಗತಿ(ಶ್ರೀ ವಿಜಯ ಕುಮಾರ್ ಮತ್ತು ಶ್ರೀಮತಿ ನವ್ಯ ದಂಪತಿ ಪುತ್ರಿ)
ಕಿಶೋರ ವರ್ಗದ ಬಾಲಕರ ತಂಡದಲ್ಲಿ ಜೀವನ್, 8ನೇ ತರಗತಿ(ಶ್ರೀ ಧರ್ಮಪಾಲ ಮತ್ತು ಶ್ರೀಮತಿ ವಾರಿಜ ದಂಪತಿ ಪುತ್ರ‍್ರ),

ತನುಷ್, 9ನೇ ತರಗತಿ(ಶ್ರೀ ಹರೀಶ್ ಮತ್ತು ಶ್ರೀಮತಿ ಗೀತಾ ದಂಪತಿ ಪುತ್ರ), ಸನ್ಮಿತ್, 9ನೇ ತರಗತಿ(ಶ್ರೀ ಸುರೇಶ್ ಮತ್ತು ಶ್ರೀಮತಿ ಉಷಾ ಸುರೇಶ್ ದಂಪತಿ ಪುತ್ರ), ಮತ್ತು ಜೀತನ್, 9ನೇ ತರಗತಿ(ಶ್ರೀ ಲಿಂಗಪ್ಪ ಮತ್ತು ಶ್ರೀಮತಿ ನಯನ ದಂಪತಿ ಪುತ್ರ).


ಬಾಲವರ್ಗದಲ್ಲಿ ಗುಂಪು ಸ್ಪರ್ಧೆಯಲ್ಲಿ ಸೃಜನ್, 8ನೇ ತರಗತಿ (ಶ್ರೀ ರಾಮಕೃಷ್ಣ ಮತ್ತು ಶ್ರೀಮತಿ ರವಿಕಲಾ ದಂಪತಿ ಪುತ್ರ) – 5ನೇ ಸ್ಥಾನ ಹಾಗೂ ಕಿಶೋರ ವರ್ಗದಲ್ಲಿ – ಪ್ರಣೀತಕೃಷ್ಣ, 9ನೇ ತರಗತಿ(ಶ್ರೀ ಮುರಳೀಧರ.ಕೆ ಮತ್ತು ಶ್ರೀಮತಿ ಪ್ರಿಯದರ್ಶಿನಿ ದಂಪತಿ ಪುತ್ರ) – 5ನೇ ಸ್ಥಾನ ಪಡೆದಿದ್ದು,

ಬಾಲವರ್ಗದಲ್ಲಿ ಬಾಲಕಿಯರು ಹಾಗೂ ಕಿಶೋರ ವರ್ಗದಲ್ಲಿ ಬಾಲಕರು ದ್ವಿತೀಯ ಸಮಗ್ರ ಪ್ರಶಸ್ತಿ ಗಳಿಸಿ, ಆಗಸ್ಟ್ 17 ಮತ್ತು 18ರಂದು ಬೆಳಗಾಂನಲ್ಲಿ ನಡೆಯಲಿರುವ ಪ್ರಾಂತ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಿರಿಬಾಗಿಲು ಪ್ರತಿಷ್ಠಾನದಲ್ಲಿ ರಾಮಾಯಣ ಮಾಸಾಚರಣೆ

ಸಿರಿಬಾಗಿಲು ಪ್ರತಿಷ್ಠಾನದಲ್ಲಿ ರಾಮಾಯಣ ಮಾಸಾಚರಣೆ
ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವು ಚಟುವಟಿಕೆ ಯ ಮೂಲಕ ಜನಪ್ರಿಯವಾಗಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಇದೇ ತಿಂಗಳ 11 ನೇ ತಾರೀಕಿನಿಂದ 17 ರ ವರೇಗೆ ರಾಮಾಯಣ ಮಾಸಾಚರಣೆ ಪ್ರಯುಕ್ತ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.

ಪ್ರತಿದಿನವೂ ಮಧ್ಯಾಹ್ನ 2-30 , ಕ್ಕೆ ರಾಮಾಯಣ ಕೃತಿಯ ಯಕ್ಷಗಾನ ತಾಳಮದ್ದಳೆ, ಸಂಜೆ 6 ರಿಂದ ಭಜನೆ, 7 ರಿಂದ ಪ್ರವಚನ- ರಾಮನಾಮ ಜಪಯಜ್ನ ನಡೆಯಲಿದೆ.

ಪ್ರತಿದಿನ ಶ್ರೀ ಪುಂಡರೀಕಾಕ್ಷ ಬೆಳ್ಳೂರು, ಯೋಗಾಚಾರ್ಯ ಇವರಿಂದ ಪ್ರವಚನ ನಡೆಯಲಿದೆ. 11 ರಂದು ಹಾಗು 17 ರಂದು ಪ್ರಸಿದ್ದ ಕಲಾವಿದರಿಂದ, ಹಾಗುಉಳಿದ ದಿನಗಳಲ್ಲಿ ಸಂಘ ಸಂಸ್ಥೆಗಳ ತಾಳಮದ್ಲೆ ನಡೆಯಲಿರುವುದು.


ಈ ಕಾರ್ಯಕ್ರಮದ ಉಧ್ಘಾಟನೆಯ ನ್ನು ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ ಧರ್ಮದರ್ಶಿ
ಶ್ರೀ ಅಭಯಲಕ್ಷ್ಮೀನೃಸಿಂಹ ದೇವಸ್ಥಾನ ಹಾದಿಗಲ್ಲು
ತೀರ್ಥಹಳ್ಳಿ ತಾಲೂಕು
ಶಿವಮೊಗ್ಗ ಜಿಲ್ಲೆ ಇವರು ನೆರವೇರಿಸಲಿರುವರು.


ಅದ್ಯಕ್ಷತೆ : ಡಾ.ಶಿವರಾಮ ಶೆಟ್ಟಿ ತಲ್ಲೂರು, ಅಧ್ಯಕ್ಷರು, ತಲ್ಲೂರು ಫೇಮಿಲಿ ಟ್ರಸ್ಟ್, ಉಡುಪಿ
ಅತಿಥಿಗಳು: ಶ್ರೀ ದಿವಾಣ ಗೋವಿಂದ ಭಟ್, ನಿರ್ದೇಶಕರು,ಅನನ್ಯ ಫೀಡ್ಸ್, ತಾರಿಹಳ್ಳ, ಹುಬ್ಬಳ್ಳಿ
ಶ್ರೀ ಅವಿನಾಶ್ ರಾವ್ ಬರಂಗಾಯಿ, ಧರ್ಮಸ್ಥಳ.
ಕಲಾಪೋಷಕರು.


ತದನಂತರ ಪ್ರಸಿದ್ದ ಕಲಾವಿದರಿಂದ

ಪಾರ್ತಿಸುಬ್ಬ ವಿರಚಿತ
ಪಟ್ಟಾಭಿಷೇಕ
ಭಾಗವತರು: ಶ್ರೀ ರಮೇಶ್ ಭಟ್ ಪುತ್ತೂರು
ಚೆಂಡೆ: ಮದ್ದಲೆ; ಶ್ರೀ ಮುರಾರಿ ಕಡಂಬಳಿತ್ತಾಯ,ಶ್ರೀ ಲಕ್ಷ್ಮೀಶ ಬೆಂಗ್ರೋಡಿ
ದಶರಥ:ಶ್ರೀ ರಾಧಾಕೃಷ್ಣ ಕಲ್ಚಾರ್
ಕೈಕೇಯಿ:ಶ್ರೀ ಹರೀಶ್ ಬಳಂತಿಮೊಗರು
ಮಂಥರೆ:ಶ್ರೀ ವೈಕುಂಠ ಹೇರ್ಳೆ ಸಾಸ್ತಾನ
ಶ್ರೀರಾಮ: ಡಾ.ಶ್ರುತಕೀರ್ತಿರಾಜ್ ಉಜಿರೆ
ಲಕ್ಷ್ಮಣ ;ಶ್ರೀ ಲಕ್ಷ್ಮಣ ಕುಮಾರ್ ಮರಕಡ

ಪ್ರತಿ ದಿನವೂ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ. ಎಂದು ಸಿರಿಬಾಗಿಲು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ನರ್ಸ್ ವೇಷದಲ್ಲಿ ಬಂದು ಖಾಲಿ ಸಿರಿಂಜ್ ಚುಚ್ಚಿ ಸ್ನೇಹಿತನ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸಿದ ಯುವತಿ – ಬಂಧನ

ನರ್ಸ್ ವೇಷದಲ್ಲಿ, ಬಂದ ಮಹಿಳೆಯೊಬ್ಬಳು ಖಾಲಿ ಸಿರಿಂಜ್ ಅನ್ನು ಚುಚ್ಚುವ ಮೂಲಕ ರೋಗಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ. ಅವಳನ್ನು ಬಂಧಿಸಲಾಗಿದೆ

ಹೆರಿಗೆಯಾಗಿ ಆಸ್ಪತ್ರೆಯಲ್ಲಿದ್ದ ಮಹಿಳೆಯನ್ನು ಖಾಲಿ ಸಿರಿಂಜ್ ಹಾಕಿ ಕೊಲೆ ಮಾಡಲು ಯತ್ನಿಸಿದ ಮಹಿಳೆಯನ್ನು ಬಂಧಿಸಲಾಗಿದೆ.

ಖಾಲಿ ಸಿರಿಂಜ್ ನಲ್ಲಿ ಇರುವ ಗಾಳಿ ದೇಹದೊಳಕ್ಕೆ ಹೋದರೆ ಹೃದಯಾಘಾತದಿಂದ ಸಾಯುವ ಸಂಭವವಿದೆ ಎಂದು ಆರೋಪಿ ಯುವತಿಗೆ ತಿಳಿದಿತ್ತು.

ಪುಲ್ಲುಕುಳಂಗರ ಮೂಲದ ಅನುಷಾ (25) ಬಂಧಿತ ಆರೋಪಿ ಕಾಯಂಕುಲಂ ನಿವಾಸಿ ಸ್ನೇಹಾ (24) ಎಂಬಾಕೆಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪಿ. ಪತ್ತನಂತಿಟ್ಟದ ಪರುಮಲ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅನುಷಾ ಸ್ನೇಹಾಳ ಗಂಡನ ಸ್ನೇಹಿತೆ.

ಈ ಪ್ರಕರಣದಲ್ಲಿ ಆರೋಪಿಯ ಸ್ನೇಹಿತನ ಅಂದರೆ ಸ್ನೇಹಾಳ ಗಂಡನ ಪಾತ್ರವಿದೆಯೇ ಎಂಬುದನ್ನು ಕೂಡಾ ಪೋಲೀಸರು ತನಿಖೆ ನಡೆಸಬೇಕಾಗುತ್ತದೆ ಎಂದು ತಿಳಿದುಬಂದಿದೆ.


ನಾಲ್ಕು ದಿನಗಳ ಹಿಂದೆ ಸ್ನೇಹಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮೂರು ಗಂಟೆ ಸುಮಾರಿಗೆ ಅನುಷಾ ನರ್ಸ್ ಸೋಗಿನಲ್ಲಿ ಆಸ್ಪತ್ರೆಗೆ ಬಂದಿದ್ದಳು. ಬಳಿಕ ಹೆರಿಗೆಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಸ್ನೇಹಾಳ ಕೊಠಡಿಗೆ ತೆರಳಿ ಖಾಲಿ ಸಿರಿಂಜ್ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾಳೆ.

ವೃತ್ತಿಯಲ್ಲಿ ಫಾರ್ಮಸಿಸ್ಟ್ ಆಗಿರುವ ಅನುಷಾ ಅವರು ಅಪಧಮನಿಯೊಳಗೆ ಗಾಳಿ ಪ್ರವೇಶಿಸಿದರೆ ಅದರಿಂದ ಜೀವಕ್ಕೆ ಅಪಾಯವಿದೆ ಎಂದು ಅರಿತು ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.


ಏರ್ ಇಂಜೆಕ್ಷನ್ ನಂತರ ಸ್ನೇಹಾಗೆ ಹೃದಯಾಘಾತವಾಗಿತ್ತು, ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಆರೋಪಿ ಕೊಠಡಿಯಿಂದ ಹೊರಗೆ ಹೋಗುತ್ತಿದ್ದಾಗ ಅನುಮಾನಗೊಂಡ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಆಕೆಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಚೆಸ್ ಪಂದ್ಯಾಟದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ

ಭರತಾಗಮನ ಮತ್ತು ಭೃಗು ಶಾಪ – ಯಕ್ಷಗಾನ ಪ್ರದರ್ಶನ
https://yakshadeepa.com/2023/08/04/bharatagamana/
ಯಕ್ಷದೀಪ ವಾಟ್ಸಾಪ್ ಗ್ರೂಪಿಗೆ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇
https://chat.whatsapp.com/IRH7MXWIoNjLE0gBgDO63W

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸುಶ್ಮಿತಾ.ಟಿ.ರಾವ್

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ.ಜಿಲ್ಲಾ ಪಂಚಾಯತ್, ಮಂಗಳೂರು ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟವು ದಿನಾಂಕ 03-08-2023ರಂದು ನಡೆಯಿತು.

ಈ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅದರಲ್ಲಿ 10ನೇ ತರಗತಿಯ ಸುಶ್ಮಿತಾ ಟಿ. ರಾವ್ (ಶ್ರೀ ತ್ರಿವಿಕ್ರಮ್ ರಾವ್ ಮತ್ತು ಶಾರದಾ.ಜಿ ದಂಪತಿ ಪುತ್ರಿ) ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.