Sunday, August 2, 2026
Home Blog Page 83

ಸುನಾದ ಸಂಗೀತ ಕಲಾ ಶಾಲೆಯಲ್ಲಿಂದು ಕರ್ನಾಟಕ ಶಾಸ್ತ್ರೀಯ ಸಂಗೀತ

ಪುತ್ತೂರಿನ ಪಡೀಲ್ ನಲ್ಲಿರುವ ಸುನಾದ ಆಡಿಟೋರಿಯಂ ನಲ್ಲಿ ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಇಂದು 27.08.2023 ಅಪರಾಹ್ನ 4.30 ಘಂಟೆಗೆ ಸಂಗೀತ ಕಾರ್ಯಕ್ರಮ ಆರಂಭವಾಗಲಿದೆ.

ವಿದ್ವಾನ್ ಕಾಂಚನ ಈಶ್ವರ ಭಟ್ಟರ ಶಿಷ್ಯವೃಂದದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಮಾ| ಅದ್ವೈತ್, ಶ್ರೀಮತಿ ಅಖಿಲಾ ಅಡಿಕೆಹಿತ್ತಿಲು ಮತ್ತು ಕು| ಅನೂಷಾ ಚೇಕೋಡು ಇವರು ಹಾಡುಗಾರಿಕೆಯಲ್ಲಿ ಭಾಗವಹಿಸಲಿದ್ದಾರೆ. ವಿವರಗಳಿಗೆ ಚಿತ್ರ ನೋಡಿ.

ಜಟಾಯುವಿನ ಪ್ರಾಣ ಅದರ ರೆಕ್ಕೆಯಲ್ಲಿಯೇ ಇದೆ ಎಂದು ರಾವಣನಿಗೆ ಮೊದಲೇ ಗೊತ್ತಿತ್ತು!

ಜಟಾಯುವಿನ ಪ್ರಾಣ ಅದರ ರೆಕ್ಕೆಯಲ್ಲಿಯೇ ಇದೆ ಎಂದು ರಾವಣನಿಗೆ ಮೊದಲೇ ಗೊತ್ತಿತ್ತು!

ಹೌದು. ಹಾಗಾದರೆ ಪ್ರಾಣದ ಮರ್ಮವನು ಅರಿತು ನಾವು ಹೋರಾಟ ನಡೆಸೋಣ ಎಂದು ರಾವಣ ಜಟಾಯುವಿನಲ್ಲಿ ಹೇಳಿದ್ದು ಯಾಕೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಅಷ್ಟು ಸುಲಭವಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸಬಹುದು.

ಆದರೆ ನಿಜವಾದ ಕಾರಣ ಏನು? ರಾವಣ ಜಟಾಯುವಿನಲ್ಲಿ ಯಾಕೆ ಆ ರೀತಿ ಹೇಳಿದ. ವಾಸ್ತವವಾಗಿ ಹಕ್ಕಿಗಳ ಪ್ರಾಣ ರೆಕ್ಕೆಯಲ್ಲಿ ಇರುತ್ತದೆ ಎಂದು ರಾವಣ ತಿಳಿಯದವನೇ? ಖಂಡಿತಾ ಅಲ್ಲ. ಹಾಗೆಂದುಕೊಂಡರೆ ನಮ್ಮಷ್ಟು ಮೂರ್ಖರು ಬೇರೆ ಯಾರೂ ಅಲ್ಲ.

ನಿಜವಾಗಿ ನೋಡಿದರೆ ರಾವಣ ಮಹಾಜ್ಞಾನಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಶಾಸ್ತ್ರ ಪಾರಂಗತನಾದ ರಾವಣನಿಗೆ ಜಟಾಯುವಿನಲ್ಲಿ ಸುಳ್ಳು ಹೇಳುವ ಅಥವಾ ಹಕ್ಕಿಗಳ ಪ್ರಾಣ ಇರುವುದು ರೆಕ್ಕೆಗಳಲ್ಲಿ ಎಂಬುದು ತಿಳಿಯದವನಂತೆ ನಟಿಸುವ ಅಗತ್ಯ ಯಾಕೆ ಬಂತು ಎಂಬುದು ನಿಗೂಢ ಸಂಗತಿಯೇನಲ್ಲ!

ರಾಮಾಯಣದ ಈ ಭಾಗ ಯಕ್ಷಗಾನದ ತಾಳಮದ್ದಳೆಯ ಒಂದು ರಸವತ್ತಾದ ಚರ್ಚೆಯ ಭಾಗ. ಕೆಲವೊಮ್ಮೆ ಜಟಾಯು ಪಾತ್ರಧಾರಿ ರಾವಣವ ಪಾತ್ರಧಾರಿಯೊಡನೆ “ಹಕ್ಕಿಗಳ ಪ್ರಾಣ ರೆಕ್ಕೆಯಲ್ಲಿ ಇದೆ ಎನ್ನುವ ವಿಚಾರ ತಿಳಿಯದಷ್ಟು ಹೆಡ್ಡ ನೀನು” ಎಂದು ಕೆಣಕುತ್ತಾರೆ.

ಅದಕ್ಕೆ ರಾವಣ ಪಾತ್ರಧಾರಿ “ನೀನು ಎಲ್ಲ ಹಕ್ಕಿಯಂತಲ್ಲ, ನಿನ್ನಲ್ಲಿ ವಿಶೇಷ ಶಕ್ತಿ, ಸಾಮರ್ಥ್ಯ ಇರುವುದರಿಂದಲೇ ನಿನ್ನ ಪ್ರಾಣದ ಮೂಲದ ಬಗ್ಗೆ ಕೇಳಿದೆ” ಎಂದು ತನ್ನನ್ನು (ರಾವಣನನ್ನು) ಸಮರ್ಥಿಸಿಕೊಳ್ಳುತ್ತಾರೆ.

ಆದರೆ ರಾವಣನು ಜಟಾಯುವಿನಲ್ಲಿ ಪ್ರಾಣದ ಮೂಲದ ಬಗ್ಗೆ ಕೇಳಲು ಬೇರೆಯೇ ಆದ ಕಾರಣವಿದೆ. ಆತನಿಗೆ ಜಟಾಯುವಿನ ಪ್ರಾಣ ಇರುವುದು ರೆಕ್ಕೆಯಲ್ಲಿ ಎಂದು ಖಚಿತವಾಗಿ ಗೊತ್ತಿತ್ತು.

ಆದರೂ ಈ ರೀತಿಯ ನಾಟಕ ಯಾಕೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಕೆಲವರಿಗಾದರೂ ಇದರ ಕಾರಣದ ಬಗ್ಗೆ ಅರಿವಿರಬಹುದು. ಆದರೆ ನಿಜವಾದ ಕಾರಣ ಏನು? ಇದರ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸೋಣ.

ಬರಹ: ಯಕ್ಷಚಿಂತಕ

ಶಾಲಾ ಶುಲ್ಕ ಬಾಕಿ – ವಿದ್ಯಾರ್ಥಿಯನ್ನು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂತೆ ಹೇಳಿದ ಶಿಕ್ಷಕರು – ತನಿಖೆಗೆ ಆದೇಶ


ತಿರುವನಂತಪುರಂನ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿಯ ಪೋಷಕರು ತಮ್ಮ ಶಾಲಾ ಶುಲ್ಕ ಬಾಕಿ ಇರುವ ಕಾರಣಕ್ಕಾಗಿ ಪ್ರಾಂಶುಪಾಲರು ತಮ್ಮ ಮಗನನ್ನು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.


ಕೇರಳದ ತಿರುವನಂತಪುರಂನಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಮಾಸಿಕ ಶುಲ್ಕ ಪಾವತಿಸಲು ವಿಫಲವಾದ ಕಾರಣ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂತೆ ಒತ್ತಾಯಿಸಲಾಗಿದೆ ಎಂದು ಖಾಸಗಿ ಶಾಲೆಯ ವಿದ್ಯಾರ್ಥಿಯ ಪೋಷಕರು ಶುಕ್ರವಾರ ಆರೋಪಿಸಿದ್ದಾರೆ.

ಘಟನೆಯ ಕುರಿತು ತನಿಖೆ ನಡೆಸುವಂತೆ ಕೇರಳದ ಸಾಮಾನ್ಯ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಶನಿವಾರ ಸಾಮಾನ್ಯ ಶಿಕ್ಷಣ ನಿರ್ದೇಶಕ (ಡಿಜಿಇ) ಶಾನವಾಸ್ ಎಸ್ ಅವರಿಗೆ ಸೂಚನೆ ನೀಡಿದ್ದಾರೆ.

ವಿಚಾರಣೆ ಆಧರಿಸಿ ವರದಿ ಸಲ್ಲಿಸುವಂತೆ ಡಿಜಿಇಗೆ ಸೂಚಿಸಲಾಗಿದೆ.

ಇಂದು ಮಧ್ಯಾಹ್ನ ಅಮೋಘ ತಾಳಮದ್ದಳೆ: ಕರ್ಣ ಪರ್ವ – ಜೋಷಿ, ಸುಣ್ಣಂಬಳ, ಉಜಿರೆ, ಬಳಂತಿಮೊಗರು, ದೇವಕಾನ: ಮಾತಿನ ಸಮರದ ನಿರೀಕ್ಷೆಯಲ್ಲಿ ಪ್ರೇಕ್ಷಕರು

ಇಂದು ದಿನಾಂಕ 27-08-2023 ಆದಿತ್ಯವಾರ ಅಡ್ಯನಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಕರ್ಣಪರ್ವ’ ಎಂಬ ತಾಳಮದ್ದಳೆ ಕೂಟ ನಡೆಯಲಿದೆ.

ಕಾರ್ಯಕ್ರಮ ಮಧ್ಯಾಹ್ನ 2.30 ಘಂಟೆಗೆ ಆರಂಭವಾಗಲಿದೆ.

ಕರ್ಣ ಪರ್ವ ತಾಳಮದ್ದಳೆಯಲ್ಲಿ ಪ್ರಸಿದ್ಧ ಕಲಾವಿದರ ದಂಡೇ ಇದೆ. ಜೋಷಿ, ಸುಣ್ಣಂಬಳ, ಉಜಿರೆ, ಬಳಂತಿಮೊಗರು, ದೇವಕಾನ ಇವರಿಂದ ಅಮೋಘ ವಾಗ್ವೈಖರಿಯ ಮಾತಿನ ಸಮರ ನಡೆಯಬಹುದು ಎಂಬುದು ತಾಳಮದ್ದಳೆ ಪ್ರಿಯ ಪ್ರೇಕ್ಷಕರ ನಿರೀಕ್ಷೆ.

ವಿವರಗಳಿಗೆ ಚಿತ್ರ ನೋಡಿ.

ಅಸ್ವಸ್ಥಗೊಂಡ ವ್ಯಕ್ತಿ ಕುಸಿದು ಬೀಳುತ್ತಿರುವುದನ್ನು ಕಂಡು ಭಾಷಣ ನಿಲ್ಲಿಸಿದ ಪ್ರಧಾನಿ ಮೋದಿ – ವೈದ್ಯರಲ್ಲಿ ಸಹಾಯ ಮಾಡುವಂತೆ ಮನವಿ – ವೀಡಿಯೋ

ಹೊಸದಿಲ್ಲಿ: ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡಿರುವುದನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿದರು.

ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ಗೆ ಭೇಟಿ ನೀಡಿ ಹಿಂದಿರುಗಿದ ಬಳಿಕ ದೆಹಲಿಯ ಪಾಲಂ ಏರ್‌ಬೇಸ್‌ನಲ್ಲಿ ಬೃಹತ್ ಜನಸಮೂಹವನ್ನುದ್ದೇಶಿಸಿ ಮೋದಿ ಮಾತನಾಡುತ್ತಿದ್ದರು.

ಅವರು ಮಾತನಾಡುವಾಗ ವಿಶೇಷ ರಕ್ಷಣಾ ಗುಂಪಿನ ಜವಾನ ತೀವ್ರ ಶಾಖದಿಂದಾಗಿ ಕುಸಿದು ಬೀಳುವುದನ್ನು ಗಮನಿಸಿದರು. ಮೋದಿ ತಕ್ಷಣವೇ ಆ ವ್ಯಕ್ತಿಗೆ ಸಹಾಯ ಮಾಡುವಂತೆ ತಮ್ಮ ವೈದ್ಯಕೀಯ ತಂಡವನ್ನು ಕೇಳಿಕೊಂಡರು.

ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸುತ್ತಿವೆ.

ವೀಡಿಯೋ ನೋಡಿ

‘ಸ್ವಾಮಿ ಕೊರಗಜ್ಜ’ ತಾಳಮದ್ದಳೆ 

ಕರ್ನಾಟಕ ಸೇವಾ ಸಂಘ ಮೋಹನೆ ಆಶ್ರಯದಲ್ಲಿ ‘ಸ್ವಾಮಿ ಕೊರಗಜ್ಜ’ ತಾಳಮದ್ದಳೆ 

ಯಕ್ಷಗಾನದಿಂದ ಸಂಸ್ಕೃತಿಯ ಉಳಿವು:  ಹರೀಶ್ ಶೆಟ್ಟಿ ಶಿಮುಂಜೆ ಪರಾರಿ

 ಮುಂಬೈ: ‘ಕರಾವಳಿಯ ಯಕ್ಷಗಾನ ಕಲೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ವಿಶೇಷವಾಗಿ ತುಳುನಾಡಿನಲ್ಲಿ ನಮ್ಮ ಹಿರಿಯರು ಅದನ್ನು ಪೋಷಿಸಿಕೊಂಡು ಬಂದಿದ್ದಾರೆ. ಮುಂಬೈಯಲ್ಲಿ ನೆಲೆಯೂರಿದ ನಾವೆಲ್ಲ ಇಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ತುಳು ಸಂಸ್ಕೃತಿ ಮತ್ತು ಯಕ್ಷಗಾನದ  ಸೊಗಡನ್ನು ಪರಿಚಯಿಸುವ ಮೂಲಕ ಆ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ’ ಎಂದು ಕರ್ನಾಟಕ ಸೇವಾ ಸಂಘ (ರಿ.) ಮೊಹನೆ, ಕಲ್ಯಾಣ್ ಇದರ ಅಧ್ಯಕ್ಷ ಹರೀಶ್ ಶೆಟ್ಟಿ ಶಿಮುಂಜೆ ಪರಾರಿ ಹೇಳಿದ್ದಾರೆ.

          ಕರ್ನಾಟಕ ಸೇವಾ ಸಂಘ ಮೋಹನೆ ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸಹಯೋಗದಲ್ಲಿ ಆಗಸ್ಟ್ 18ರಂದು ಆರ್.ಎಸ್.ಡೈರಿ ಫಾರ್ಮ್ ಮೋಹನೆ ಬಳಿಯ ದಿ.ರಾಜೀವಿ ಪದ್ಮನಾಭ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕತ್ವದಲ್ಲಿ ಏರ್ಪಡಿಸಿದ ತವರೂರ ನಾಮಾಂಕಿತ ಕಲಾವಿದರಿಂದ ‘ಸ್ವಾಮಿ ಕೊರಗಜ್ಜ’ ತುಳು ತಾಳಮದ್ದಳೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘದ ಗೌರವಾಧ್ಯಕ್ಷ ದಯಾಶಂಕರ ಪಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

     ಕರ್ನಾಟಕ ಸೇವಾ ಸಂಘದ ಸಂಚಾಲಕ ಪ್ರಕಾಶ್ ಆರ್.ಶೆಟ್ಟಿ, ಉಪಾಧ್ಯಕ್ಷರಾದ ನಾಗ ಕಿರಣ್ ಪಿ.ಶೆಟ್ಟಿ ,ಸಂದೇಶ್ ಜೆ. ಪೂಜಾರಿ, ಗೌರವ ಕಾರ್ಯದರ್ಶಿ ಶ್ರೀಕಾಂತ್ ಎಸ್. ಪೂಜಾರಿ, ಕೋಶಾಧಿಕಾರಿ ಕಲ್ಪೇಶ್ ಎಸ್. ಪೂಜಾರಿ, ಜೊತೆ ಕೋಶಾಧಿಕಾರಿ ನಿತೀಶ್ ಡಿ.ಸಾಲಿಯಾನ್, ಮಹಿಳಾ ಕಾರ್ಯಾಧ್ಯಕ್ಷೆ ಶೋಭಾ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನವೀನ್ ಜೆ. ಪೂಜಾರಿ, ಸಲಹೆಗಾರರಾದ ರಮೇಶ್ ಡಿ. ಮಡಿವಾಳ್, ಸೀತಾರಾಮ್ ಎಸ್. ಶೆಟ್ಟಿ ವೇದಿಕೆಯಲ್ಲಿದ್ದರು.

ಕಾರಣೀಕ ದೈವ ಕೊರಗಜ್ಜನ ಕಥೆ:

          ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಸಂಯೋಜನೆಯಲ್ಲಿ ಊರಿನ ಪ್ರಸಿದ್ಧ ಕಲಾವಿದರಿಂದ ‘ಸ್ವಾಮಿ ಕೊರಗಜ್ಜ’ ತುಳು ಯಕ್ಷಗಾನ ತಾಳಮದ್ದಳೆ ಜರಗಿತು. ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಮಹಿಮೆಯನ್ನು ಸಾರುವ ಹರೀಶ್ ಶೆಟ್ಟಿ ಸೂಡ ವಿರಚಿತ ಈ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ದೇವಿ ಪ್ರಸಾದ್ ಆಳ್ವ ತಲಪಾಡಿ ಮತ್ತು ಚೆಂಡೆ ಮದ್ದಳೆಗಳಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಹಾಗೂ ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸಿದರು.

         ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಶಿವಯೋಗಿ – ಪಂಜಂದಾಯ ದೈವ), ಸದಾಶಿವ ಆಳ್ವ ತಲಪಾಡಿ (ಕೊರಗ ತನಿಯ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಬೈರಕ್ಕೆ ಬೈದೆದಿ), ದಿನೇಶ್ ಶೆಟ್ಟಿ ಕಾವಳಕಟ್ಟೆ (ಅರಸು ಮಂಜಿಷ್ಣಾಯ ದೈವ), ಹರಿರಾಜ ಶೆಟ್ಟಿಗಾರ್ ಕಿನ್ನಿಗೋಳಿ (ಮೈಸಂದಾಯ)  ಅರ್ಥಧಾರಿಗಳಾಗಿದ್ದರು.

       ಇದೇ ಸಂದರ್ಭದಲ್ಲಿ ಕರ್ನಾಟಕ ಸೇವಾ ಸಂಘದ ವತಿಯಿಂದ ಕಲಾವಿದರನ್ನು ಗೌರವಿಸಲಾಯಿತು. ಸುಬ್ಬಣ್ಣ ಎ.ಶೆಟ್ಟಿ, ಚಿತ್ರಾ ಆರ್. ಶೆಟ್ಟಿ, ರವೀಂದ್ರ ವೈ.ಶೆಟ್ಟಿ, ಸುಬೋಧ್ ಬಿ. ಭಂಡಾರಿ, ಉದಯ್ ಕೆ. ಶೆಟ್ಟಿ, ಸದಾನಂದ ಶೆಟ್ಟಿ, ಸುಧೀರ್ ಜೆ.ಶೆಟ್ಟಿ, ರಾಜೇಶ್ ಜೆ. ಶೆಟ್ಟಿ, ಯೋಗೀಶ್ ಶೆಟ್ಟಿ, ಜಯಂತ್ ಶೆಟ್ಟಿ, ನಾಗರಾಜ್ ಶೆಟ್ಟಿ, ಗಿರೀಶ್ ಶೆಟ್ಟಿ, ಜಗದೀಶ್ ಶೆಟ್ಟಿ, ಅನಿಲ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ರಘು ಶೆಟ್ಟಿ, ಸೋಮನಾಥ ಶೆಟ್ಟಿ, ರಾಜಾ ಪೂಂಜಾ , ಅನಿಲ್ ಶೆಟ್ಟಿ ವಾಶಿ, ಪ್ರಶಾಂತ್ ಶೆಟ್ಟಿ ಕುಕ್ಕಿಕಟ್ಟೆ, ಬಿಲ್ಲವರ ಅಸೋಸಿಯೇಷನ್ ಕಲ್ಯಾಣ್ ನ ಕೃಷ್ಣ ಪೂಜಾರಿ, ಸದಾನಂದ ಸುವರ್ಣ, ಜಯಶ್ರೀ ಪೂಜಾರಿ ಮತ್ತಿತರ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು. ನಾಗ ಕಿರಣ್ ಶೆಟ್ಟಿ ಮತ್ತು ಅನಿಲ್ ಬಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 ಭಜನೆ – ಅನ್ನದಾನ :

        ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಭಜನೆ ಹಾಗೂ ದಿ.ರಾಜೀವಿ ಪದ್ಮನಾಭ ಶೆಟ್ಟಿ ಅವರ ಸ್ಮರಣಾರ್ಥ ಮಕ್ಕಳಿಂದ ಅನ್ನದಾನ ಏರ್ಪಡಿಸಲಾಗಿತ್ತು. ನಂದೀಶ್ ಪೂಜಾರಿ ಅವರ ಪುಷ್ಪಾಲಂಕಾರ ಗಮನ ಸೆಳೆಯಿತು.

ವಿದ್ಯಾರ್ಥಿಗಳಿಗೆ ಅಗತ್ಯ ವಸ್ತು ಮತ್ತು ಸಿಹಿತಿಂಡಿ ವಿತರಣೆ

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆಯ ವತಿಯಿಂದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಂದು ಆಕ್ಸಿಲಿಯಮ್ ನಿವಾಸದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ಮತ್ತು ಸಿಹಿತಿಂಡಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಿರ್ವ ಆರೋಗ್ಯ ಮಾತಾ ಚರ್ಚಿನ ಮುಖ್ಯ ಧರ್ಮಗುರುಗಳು ಫಾ| ಲೆಸ್ಲಿ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಮೆಲ್ವಿನ್ ಅರಾನ್ನಾ, ಉದ್ಯಮಿ ಕೆ. ಶ್ರೀಧರ ಕಾಮತ್, ಕಾನ್ವೆಂಟಿನ ಮೇಲ್ವಿಚಾರಕಿ ಲೀಮಾ,

ಶಾಖಾ ವ್ಯವಸ್ಥಾಪಕರಾದ ಪ್ರಮೀಳಾ ಲೋಬೋ ಮತ್ತು ಕಾನ್ವೆಂಟಿನ ಧರ್ಮ ಭಗಿನಿಯರು ಹಾಗೂ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು.

ತಲ್ಲೂರು ಕನಕಾ- ಅಣ್ಣಯ್ಯ ಶೆಟ್ಟಿ ಸಂಸ್ಮರಣ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’: ಹಿರಿಯ ಮೃದಂಗ ವಾದಕ ವಿದ್ವಾನ್ ಕೆ. ಬಾಬು ರೈ ಅವರಿಗೆ – ಶತಮಾನದ ಶ್ರೇಷ್ಠ ಕಲಾವಿದ ಕೆ. ಬಾಬು ರೈ – ಶ್ರೀ ಶ್ರೀ ಸಚ್ಚಿದಾನಂದ ಭಾರತೀ

ಶತಮಾನದ ಶ್ರೇಷ್ಠ ಕಲಾವಿದ ಕೆ. ಬಾಬು ರೈ – ಶ್ರೀ ಶ್ರೀ ಸಚ್ಚಿದಾನಂದ ಭಾರತೀ


ಉಡುಪಿಯ ಯಕ್ಷಗಾನ ಕಲಾರಂಗವು ಪ್ರತೀ ವರ್ಷ ವಿದ್ವಾಂಸರಿಗೆ ನೀಡುವ 40,000 ರೂಪಾಯಿ ನಿಧಿಯನ್ನೊಳಗೊಂಡಿರುವ ತಲ್ಲೂರು ಕನಕಾ- ಅಣ್ಣಯ್ಯ ಶೆಟ್ಟಿ ಸಂಸ್ಮರಣ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಹಿರಿಯ ಮೃದಂಗ ವಾದಕ ವಿದ್ವಾನ್ ಕೆ. ಬಾಬು ರೈ ಅವರಿಗೆ ಆಗಸ್ಟ್ 15, 2023ರಂದು ಎಡನೀರು ಮಠದಲ್ಲಿ ಕೆ. ಬಾಬು ರೈಯವರ ಶತಮಾನೋತ್ಸವ ಆಚರಣೆಯ ಸಂದರ್ಭ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಶ್ರೀಗಳು ತಮ್ಮ ಅನುಗ್ರಹ ಸಂದೇಶದಲ್ಲಿ ಬಾಬು ರೈಗಳು ಶತಾಯುಷಿ ಕಲಾವಿದರಷ್ಟೇ ಅಲ್ಲ ಶತಮಾನದ ಶ್ರೇಷ್ಠ ಕಲಾವಿದರು. ಅವರ ವಿನಯಗುಣ, ಸರಳತೆ, ಜೀವನೋತ್ಸಾಹ ಕಿರಿಯರಿಗೆ ಮಾದರಿಯಾಗಿದೆ. ಸಾಮಾಜಿಕ, ಸಾಂಸ್ಕೃತಿಕ ಕಾಳಜಿಯಿಂದ ಕೆಲಸ ಮಾಡುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗ ಅಭಿನಂದನಾರ್ಹ ಸಂಸ್ಥೆ ಎಂದು ನುಡಿದರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಶ್ರೀಮತಿ ಗಿರಿಜಾ ಶಿವರಾಮ ಶೆಟ್ಟಿ, ಪ್ರದೀಪ ಕುಮಾರ್ ಕಲ್ಕೂರ, ಕೆ. ಬಾಬು ರೈ ಶತಮಾನೋತ್ಸವ ಸಮೀತಿಯ ಅಧ್ಯಕ್ಷ ರಾಮಪ್ರಸಾದ ಕಾಸರಗೋಡು, ಕಾರ್ಯದರ್ಶಿ ಶಿವರಾಮ ಕಾಸರಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಮೀಜೀಯವರಿಗೆ ಫಲವಸ್ತು ಸಮರ್ಪಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದನೆಯ ಮಾತುಗಳನ್ನಾಡಿದರು.

ಸಂಸ್ಥೆಯ ದಾನಿಗಳಾದ ಡಾ. ಜೆ. ಎನ್. ಭಟ್, ಯು. ಎಸ್. ರಾಜಗೋಪಾಲ ಆಚಾರ್ಯ ಹಾಗೂ ಉಪಾಧ್ಯಕ್ಷ ಎಸ್. ವಿ. ಭಟ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಮತ್ತು ಸದಸ್ಯರುಗಳಾದ ಎಂ. ಎಲ್. ಸಾಮಗ, ಪ್ರತಿಭಾ ಎಂ. ಎಲ್. ಸಾಮಗ, ವಿದ್ಯಾಪ್ರಸಾದ್, ರಾಜೀವಿ, ಸುದರ್ಶನ್ ಬಾಯರಿ ಉಪಸ್ಥಿತರಿದ್ದರು.

ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಉತ್ತರ ಪ್ರದೇಶದ: ಕುಶಿನಗರ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆರೋಪಿ ಎಂದು ಹೆಸರಿಸಲಾದ 15 ವರ್ಷದ ಬಾಲಕನನ್ನು ಶುಕ್ರವಾರ ಬಂಧಿಸಲಾಗಿದೆ.


ಎಫ್‌ಐಆರ್‌ನಲ್ಲಿ ಮಾಡಲಾದ ಆರೋಪಗಳನ್ನು ಪ್ರಾಥಮಿಕವಾಗಿ ನಿಜವೆಂದು ಕಂಡುಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಬಾಲಕಿಯನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ (ಸಿಎಚ್‌ಸಿ) ದಾಖಲಿಸಲಾಗಿದೆ.


ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಬಾಲಕಿ ತನ್ನ ನಿವಾಸದಲ್ಲಿ ಆಟವಾಡುತ್ತಿದ್ದಳು ಆಕೆಯ ಪೋಷಕರು ಮಾರುಕಟ್ಟೆಗೆ ಹೋಗಿದ್ದರು, ಆಕೆಯ ಅಜ್ಜಿ ಪಕ್ಕದ ಮನೆಯಲ್ಲಿದ್ದರು.

ನೆರೆಯ 15 ವರ್ಷದ ಹುಡುಗ ಅವಳೊಂದಿಗೆ ಆಟವಾಡಲು ಪ್ರಾರಂಭಿಸಿದನು. ಅವನು ಹುಡುಗಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದನು” ಎಂದು ಎಸ್‌ಎಚ್‌ಒ ಉಪಾಧ್ಯಾಯ ಹೇಳಿದರು.


ನಂತರ ಮನೆಗೆ ತಲುಪಿದ ಆಕೆ ರಕ್ತಸ್ರಾವದಿಂದ ಪ್ರಜ್ಞಾಹೀನಳಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ ಬಾಲಕಿಯನ್ನು ದುಧಿಯಲ್ಲಿರುವ ಸ್ಥಳೀಯ ಸಿಎಚ್‌ಸಿಗೆ ಕರೆದೊಯ್ದಿದೆ. ಬಾಲಕಿಗೆ ಪ್ರಜ್ಞೆ ಬಂದ ನಂತರ ಆಕೆ ತನ್ನ ತಂದೆ ತಾಯಿ ಮತ್ತು ಅಜ್ಜಿಯ ಬಳಿ ತನಗಾದ ಕಷ್ಟವನ್ನು ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಜ್ಜಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶುಕ್ರವಾರ ಆತನನ್ನು ಬಂಧಿಸಿದ್ದಾರೆ.

ಅವನಿ ಎಸ್ ನಾಯಕ್ ವಿದ್ಯಾಭಾರತಿ ಕ್ಷೇತ್ರ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆ

ವಿವೇಕಾನಂದ ಪ.ಪೂ ಕಾಲೇಜಿನ ಅವನಿ ಎಸ್ ನಾಯಕ್ ವಿದ್ಯಾಭಾರತಿ ಕ್ಷೇತ್ರ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆ

ಪುತ್ತೂರು, ಅ 13: ಕಲ್ಲಡ್ಕದ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಅವನಿ ಎಸ್ ನಾಯಕ್ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿ

ಪ್ರಥಮ ಸ್ಥಾನವನ್ನು ಪಡೆದು ಹೈದರಾಬಾದ್‌ನಲ್ಲಿ ನಡೆಯಲಿರುವ ಕ್ಷೇತ್ರ ಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಈಕೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸುಮರವರ ಪುತ್ರಿ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.