ಗುರುವಾಯೂರು: ಅಷ್ಟಮಿರೋಹಿಣಿ ದಿನವಾದ ಬುಧವಾರ ಗುರುವಾಯೂರಪ್ಪನವರಿಗೆ ಚಿನ್ನದ ಕಿರೀಟವನ್ನು ಅರ್ಪಿಸಲಾಗುವುದು. ಕೊಯಮತ್ತೂರಿನ ಚಿನ್ನದ ವ್ಯಾಪಾರಿ ತ್ರಿಶೂರಿನ ಕೈನೂರ್ ತರವಾಡುವಿನ ಕೆವಿ ರಾಜೇಶ್ ಆಚಾರ್ಯ ಅವರು ಹುಟ್ಟುಹಬ್ಬದ ಉಡುಗೊರೆಯಾಗಿ ಇದನ್ನು ನೀಡುತ್ತಿದ್ದಾರೆ.
ಚಿನ್ನದ ಕಿರೀಟವು 38 ಸವರಮ್ ತೂಗುತ್ತದೆ. ಅಷ್ಟಮಿರೋಹಿಣಿಯ ದಿನದಂದು ಗುರುವಾಯೂರಪ್ಪನವರಿಗೆ ಕಿರೀಟವನ್ನು ಅರ್ಪಿಸಲಾಗುವುದು. ಆ ದಿನ ಕಾಣಿಕೆಯಾಗಿ ಸ್ವೀಕರಿಸಿದ ವಸ್ತುಗಳನ್ನು ವಿಗ್ರಹದ ಮೇಲೆ ಧರಿಸಲಾಗುತ್ತದೆ ಮತ್ತು ನಂತರ ದೇವಸ್ವಂನ ರಿಜಿಸ್ಟರ್‌ನಲ್ಲಿ ದಾಖಲಿಸಲಾಗುತ್ತದೆ ಮತ್ತು ಲಾಕರ್‌ಗೆ ವರ್ಗಾಯಿಸಲಾಗುತ್ತದೆ.
ಕಳೆದ ತಿಂಗಳು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಗುರುವಾಯೂರಪ್ಪನವರಿಗೆ 32 ಸವರನ್ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ಅರ್ಪಿಸಿದ್ದರು.
ಉದ್ಯಮಿ ಡಾ ರವಿ ಪಿಳ್ಳೈ ಅವರು ಸೆಪ್ಟೆಂಬರ್ 2021 ರಲ್ಲಿ 725 ಗ್ರಾಂ ಚಿನ್ನದ ಕಿರೀಟವನ್ನು ಒಂದೇ ಪಚ್ಚೆ ಕಲ್ಲಿನೊಂದಿಗೆ ಉಡುಗೊರೆಯಾಗಿ ನೀಡಿದ್ದರು.
ಹಲ್ಲೆಯ ಆಘಾತಕಾರಿ ವೀಡಿಯೊದಲ್ಲಿ, ಪತಿ ಎಂದು ಹೇಳಲಾದ ವ್ಯಕ್ತಿಯೊಬ್ಬರು ಮಹಿಳೆಯನ್ನು ತಮ್ಮ ಮನೆಯ ಹೊರಗೆ ವಿವಸ್ತ್ರಗೊಳಿಸುತ್ತಿರುವುದನ್ನು ಮತ್ತು ಪತ್ನಿ ಸಹಾಯಕ್ಕಾಗಿ ಕಿರುಚುತ್ತಿದ್ದಾಗ ಆಕೆಯನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವುದು ಕಂಡುಬಂದಿದೆ.
ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬರನ್ನು ಆಕೆಯ ಪತಿಯೇ ಥಳಿಸಿ, ವಿವಸ್ತ್ರಗೊಳಿಸಿ, ಆಕೆಯ ಗ್ರಾಮದ ಮೂಲಕ ಮೆರವಣಿಗೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಯ ಆಘಾತಕಾರಿ ವೀಡಿಯೊದಲ್ಲಿ, ಪತಿ ಎಂದು ಹೇಳಲಾದ ವ್ಯಕ್ತಿಯೊಬ್ಬರು 21 ವರ್ಷದ ಮಹಿಳೆಯನ್ನು ತಮ್ಮ ಮನೆಯ ಹೊರಗೆ ವಿವಸ್ತ್ರಗೊಳಿಸುತ್ತಿರುವುದನ್ನು ಮತ್ತು ಸಹಾಯಕ್ಕಾಗಿ ಕಿರುಚುತ್ತಿದ್ದಾಗ ಅವಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವುದು ಕಂಡುಬಂದಿದೆ.
ಪೊಲೀಸರ ಪ್ರಕಾರ, ಮಹಿಳೆ ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದ್ದು, ಇದು ಆಕೆಯ ಮೇಲೆ ಹಲ್ಲೆಗೆ ಕಾರಣವಾಯಿತು.
ಮೂವರನ್ನು ಬಂಧಿಸಲಾಗಿದ್ದು, ಕೆಲವೇ ಗಂಟೆಗಳಲ್ಲಿ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ಬೆಳಗ್ಗೆ ತಿಳಿಸಿದ್ದಾರೆ.
राजस्थान में अब महिलाओं पर अमानवीयता की सारी सीमाएं पार हो चुकी हैं।
धरियावद में एक नारी को निर्वस्त्र कर पीटा गया है, जिसका वीडियो वायरल है, लेकिन महिला सुरक्षा पर बड़े-बड़े दावे करने वाले गहलोत जी जाने किस राज्य के मुख्यमंत्री और गृहमंत्री हैं? दो दिन बीत गए पुलिस ने रिपोर्ट… pic.twitter.com/iQUt0PIdNQ
ಮದುವೆಯಾಗಿದ್ದರೂ ಮತ್ತೊಬ್ಬ ಪುರುಷನೊಂದಿಗೆ ವಾಸಿಸುತ್ತಿರುವುದಕ್ಕೆ ಅಸಮಾಧಾನಗೊಂಡ ಮಹಿಳೆಯ ಅತ್ತೆಯಂದಿರು ಆಕೆಯನ್ನು ಅಪಹರಿಸಿ ತಮ್ಮ ಗ್ರಾಮಕ್ಕೆ ಕರೆದೊಯ್ದು ಥಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ ಎಂದು ರಾಜಸ್ಥಾನದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ ಹೇಳಿದ್ದಾರೆ.
ತಿರುವನಂತಪುರಂ: ನವವಿವಾಹಿತೆಯೊಬ್ಬರು ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಪ್ಪತ್ಮೂರು ವರ್ಷದ ರೇಷ್ಮಾ ಇಂದು ಬೆಳಗಿನ ಜಾವ ಮೂರು ಗಂಟೆಗೆ ಬೆಡ್ ರೂಮ್ ನಲ್ಲಿ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಬೆಳಗ್ಗೆ ಕೊಠಡಿ ತೆರೆಯದಿರುವುದನ್ನು ಗಮನಿಸಿದ ಮನೆಯವರಿಗೆ ಸಾವಿನ ವಿಷಯ ತಿಳಿಯಿತು. ಆ ವೇಳೆ ಪತಿ ಅಕ್ಷಯ್ ರಾಜ್ ಇರಲಿಲ್ಲ. ರೇಷ್ಮಾ ಆತ್ಮಹತ್ಯೆ ಬಗ್ಗೆ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರೇಷ್ಮಾ ಮತ್ತು ಅಕ್ಷಯ್ ರಾಜ್ ಜೂನ್ 12 ರಂದು ವಿವಾಹವಾದರು. ಅವರ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಇತ್ತೀಚೆಗೆ ಅಕ್ಷಯ್ ರಾಜ್ ಬೇರೊಬ್ಬ ಮಹಿಳೆಗೆ ಫೋನ್ ಕರೆ ಮಾಡಿದ್ದರಿಂದ ರೇಷ್ಮಾ ಪ್ರಾಣ ತೆತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಇದು ಇನ್ನೂ ತನಿಖೆಯಿಂದ ತಿಳಿಯಬೇಕಿದೆ.
ಜಟಾಯುವಿನ ಪ್ರಾಣ ಅದರ ರೆಕ್ಕೆಯಲ್ಲಿಯೇ ಇದೆ ಎಂದು ರಾವಣನಿಗೆ ಮೊದಲೇ ಗೊತ್ತಿತ್ತು!
ಹೌದು. ಹಾಗಾದರೆ ಪ್ರಾಣದ ಮರ್ಮವನು ಅರಿತು ನಾವು ಹೋರಾಟ ನಡೆಸೋಣ ಎಂದು ರಾವಣ ಜಟಾಯುವಿನಲ್ಲಿ ಹೇಳಿದ್ದು ಯಾಕೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಅಷ್ಟು ಸುಲಭವಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸಬಹುದು.
ಆದರೆ ನಿಜವಾದ ಕಾರಣ ಏನು? ರಾವಣ ಜಟಾಯುವಿನಲ್ಲಿ ಯಾಕೆ ಆ ರೀತಿ ಹೇಳಿದ. ವಾಸ್ತವವಾಗಿ ಹಕ್ಕಿಗಳ ಪ್ರಾಣ ರೆಕ್ಕೆಯಲ್ಲಿ ಇರುತ್ತದೆ ಎಂದು ರಾವಣ ತಿಳಿಯದವನೇ? ಖಂಡಿತಾ ಅಲ್ಲ. ಹಾಗೆಂದುಕೊಂಡರೆ ನಮ್ಮಷ್ಟು ಮೂರ್ಖರು ಬೇರೆ ಯಾರೂ ಅಲ್ಲ.
ನಿಜವಾಗಿ ನೋಡಿದರೆ ರಾವಣ ಮಹಾಜ್ಞಾನಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಶಾಸ್ತ್ರ ಪಾರಂಗತನಾದ ರಾವಣನಿಗೆ ಜಟಾಯುವಿನಲ್ಲಿ ಸುಳ್ಳು ಹೇಳುವ ಅಥವಾ ಹಕ್ಕಿಗಳ ಪ್ರಾಣ ಇರುವುದು ರೆಕ್ಕೆಗಳಲ್ಲಿ ಎಂಬುದು ತಿಳಿಯದವನಂತೆ ನಟಿಸುವ ಅಗತ್ಯ ಯಾಕೆ ಬಂತು ಎಂಬುದು ನಿಗೂಢ ಸಂಗತಿಯೇನಲ್ಲ!
ರಾಮಾಯಣದ ಈ ಭಾಗ ಯಕ್ಷಗಾನದ ತಾಳಮದ್ದಳೆಯ ಒಂದು ರಸವತ್ತಾದ ಚರ್ಚೆಯ ಭಾಗ. ಕೆಲವೊಮ್ಮೆ ಜಟಾಯು ಪಾತ್ರಧಾರಿ ರಾವಣವ ಪಾತ್ರಧಾರಿಯೊಡನೆ “ಹಕ್ಕಿಗಳ ಪ್ರಾಣ ರೆಕ್ಕೆಯಲ್ಲಿ ಇದೆ ಎನ್ನುವ ವಿಚಾರ ತಿಳಿಯದಷ್ಟು ಹೆಡ್ಡ ನೀನು” ಎಂದು ಕೆಣಕುತ್ತಾರೆ.
ಅದಕ್ಕೆ ರಾವಣ ಪಾತ್ರಧಾರಿ “ನೀನು ಎಲ್ಲ ಹಕ್ಕಿಯಂತಲ್ಲ, ನಿನ್ನಲ್ಲಿ ವಿಶೇಷ ಶಕ್ತಿ, ಸಾಮರ್ಥ್ಯ ಇರುವುದರಿಂದಲೇ ನಿನ್ನ ಪ್ರಾಣದ ಮೂಲದ ಬಗ್ಗೆ ಕೇಳಿದೆ” ಎಂದು ತನ್ನನ್ನು (ರಾವಣನನ್ನು) ಸಮರ್ಥಿಸಿಕೊಳ್ಳುತ್ತಾರೆ.
ಆದರೆ ರಾವಣನು ಜಟಾಯುವಿನಲ್ಲಿ ಪ್ರಾಣದ ಮೂಲದ ಬಗ್ಗೆ ಕೇಳಲು ಬೇರೆಯೇ ಆದ ಕಾರಣವಿದೆ. ಆತನಿಗೆ ಜಟಾಯುವಿನ ಪ್ರಾಣ ಇರುವುದು ರೆಕ್ಕೆಯಲ್ಲಿ ಎಂದು ಖಚಿತವಾಗಿ ಗೊತ್ತಿತ್ತು.
ಆದರೂ ಈ ರೀತಿಯ ನಾಟಕ ಯಾಕೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಕೆಲವರಿಗಾದರೂ ಇದರ ಕಾರಣದ ಬಗ್ಗೆ ಅರಿವಿರಬಹುದು. ಆದರೆ ನಿಜವಾದ ಕಾರಣ ಏನು? ಇದರ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸೋಣ.
ತಿರುವನಂತಪುರಂನ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿಯ ಪೋಷಕರು ತಮ್ಮ ಶಾಲಾ ಶುಲ್ಕ ಬಾಕಿ ಇರುವ ಕಾರಣಕ್ಕಾಗಿ ಪ್ರಾಂಶುಪಾಲರು ತಮ್ಮ ಮಗನನ್ನು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಮಾಸಿಕ ಶುಲ್ಕ ಪಾವತಿಸಲು ವಿಫಲವಾದ ಕಾರಣ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂತೆ ಒತ್ತಾಯಿಸಲಾಗಿದೆ ಎಂದು ಖಾಸಗಿ ಶಾಲೆಯ ವಿದ್ಯಾರ್ಥಿಯ ಪೋಷಕರು ಶುಕ್ರವಾರ ಆರೋಪಿಸಿದ್ದಾರೆ.
ಘಟನೆಯ ಕುರಿತು ತನಿಖೆ ನಡೆಸುವಂತೆ ಕೇರಳದ ಸಾಮಾನ್ಯ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಶನಿವಾರ ಸಾಮಾನ್ಯ ಶಿಕ್ಷಣ ನಿರ್ದೇಶಕ (ಡಿಜಿಇ) ಶಾನವಾಸ್ ಎಸ್ ಅವರಿಗೆ ಸೂಚನೆ ನೀಡಿದ್ದಾರೆ.
ವಿಚಾರಣೆ ಆಧರಿಸಿ ವರದಿ ಸಲ್ಲಿಸುವಂತೆ ಡಿಜಿಇಗೆ ಸೂಚಿಸಲಾಗಿದೆ.
ಇಂದು ದಿನಾಂಕ 27-08-2023 ಆದಿತ್ಯವಾರ ಅಡ್ಯನಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಕರ್ಣಪರ್ವ’ ಎಂಬ ತಾಳಮದ್ದಳೆ ಕೂಟ ನಡೆಯಲಿದೆ.
ಕಾರ್ಯಕ್ರಮ ಮಧ್ಯಾಹ್ನ 2.30 ಘಂಟೆಗೆ ಆರಂಭವಾಗಲಿದೆ.
ಕರ್ಣ ಪರ್ವ ತಾಳಮದ್ದಳೆಯಲ್ಲಿ ಪ್ರಸಿದ್ಧ ಕಲಾವಿದರ ದಂಡೇ ಇದೆ. ಜೋಷಿ, ಸುಣ್ಣಂಬಳ, ಉಜಿರೆ, ಬಳಂತಿಮೊಗರು, ದೇವಕಾನ ಇವರಿಂದ ಅಮೋಘ ವಾಗ್ವೈಖರಿಯ ಮಾತಿನ ಸಮರ ನಡೆಯಬಹುದು ಎಂಬುದು ತಾಳಮದ್ದಳೆ ಪ್ರಿಯ ಪ್ರೇಕ್ಷಕರ ನಿರೀಕ್ಷೆ.
ಹೊಸದಿಲ್ಲಿ: ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡಿರುವುದನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿದರು.
ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ಗೆ ಭೇಟಿ ನೀಡಿ ಹಿಂದಿರುಗಿದ ಬಳಿಕ ದೆಹಲಿಯ ಪಾಲಂ ಏರ್‌ಬೇಸ್‌ನಲ್ಲಿ ಬೃಹತ್ ಜನಸಮೂಹವನ್ನುದ್ದೇಶಿಸಿ ಮೋದಿ ಮಾತನಾಡುತ್ತಿದ್ದರು.
ಅವರು ಮಾತನಾಡುವಾಗ ವಿಶೇಷ ರಕ್ಷಣಾ ಗುಂಪಿನ ಜವಾನ ತೀವ್ರ ಶಾಖದಿಂದಾಗಿ ಕುಸಿದು ಬೀಳುವುದನ್ನು ಗಮನಿಸಿದರು. ಮೋದಿ ತಕ್ಷಣವೇ ಆ ವ್ಯಕ್ತಿಗೆ ಸಹಾಯ ಮಾಡುವಂತೆ ತಮ್ಮ ವೈದ್ಯಕೀಯ ತಂಡವನ್ನು ಕೇಳಿಕೊಂಡರು.
ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸುತ್ತಿವೆ.
ವೀಡಿಯೋ ನೋಡಿ
#WATCH | Delhi: Prime Minister Narendra Modi asks his team of doctors to check on a person who collapsed during his address. pic.twitter.com/Stw4eL97CW
ಕರ್ನಾಟಕ ಸೇವಾ ಸಂಘ ಮೋಹನೆ ಆಶ್ರಯದಲ್ಲಿ ‘ಸ್ವಾಮಿ ಕೊರಗಜ್ಜ’ ತಾಳಮದ್ದಳೆ
ಯಕ್ಷಗಾನದಿಂದ ಸಂಸ್ಕೃತಿಯ ಉಳಿವು: ಹರೀಶ್ ಶೆಟ್ಟಿ ಶಿಮುಂಜೆ ಪರಾರಿ
ಮುಂಬೈ: ‘ಕರಾವಳಿಯ ಯಕ್ಷಗಾನ ಕಲೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ವಿಶೇಷವಾಗಿ ತುಳುನಾಡಿನಲ್ಲಿ ನಮ್ಮ ಹಿರಿಯರು ಅದನ್ನು ಪೋಷಿಸಿಕೊಂಡು ಬಂದಿದ್ದಾರೆ. ಮುಂಬೈಯಲ್ಲಿ ನೆಲೆಯೂರಿದ ನಾವೆಲ್ಲ ಇಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ತುಳು ಸಂಸ್ಕೃತಿ ಮತ್ತು ಯಕ್ಷಗಾನದ ಸೊಗಡನ್ನು ಪರಿಚಯಿಸುವ ಮೂಲಕ ಆ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ’ ಎಂದು ಕರ್ನಾಟಕ ಸೇವಾ ಸಂಘ (ರಿ.) ಮೊಹನೆ, ಕಲ್ಯಾಣ್ ಇದರ ಅಧ್ಯಕ್ಷ ಹರೀಶ್ ಶೆಟ್ಟಿ ಶಿಮುಂಜೆ ಪರಾರಿ ಹೇಳಿದ್ದಾರೆ.
ಕರ್ನಾಟಕ ಸೇವಾ ಸಂಘ ಮೋಹನೆ ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸಹಯೋಗದಲ್ಲಿ ಆಗಸ್ಟ್ 18ರಂದು ಆರ್.ಎಸ್.ಡೈರಿ ಫಾರ್ಮ್ ಮೋಹನೆ ಬಳಿಯ ದಿ.ರಾಜೀವಿ ಪದ್ಮನಾಭ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕತ್ವದಲ್ಲಿ ಏರ್ಪಡಿಸಿದ ತವರೂರ ನಾಮಾಂಕಿತ ಕಲಾವಿದರಿಂದ ‘ಸ್ವಾಮಿ ಕೊರಗಜ್ಜ’ ತುಳು ತಾಳಮದ್ದಳೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘದ ಗೌರವಾಧ್ಯಕ್ಷ ದಯಾಶಂಕರ ಪಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಸೇವಾ ಸಂಘದ ಸಂಚಾಲಕ ಪ್ರಕಾಶ್ ಆರ್.ಶೆಟ್ಟಿ, ಉಪಾಧ್ಯಕ್ಷರಾದ ನಾಗ ಕಿರಣ್ ಪಿ.ಶೆಟ್ಟಿ ,ಸಂದೇಶ್ ಜೆ. ಪೂಜಾರಿ, ಗೌರವ ಕಾರ್ಯದರ್ಶಿ ಶ್ರೀಕಾಂತ್ ಎಸ್. ಪೂಜಾರಿ, ಕೋಶಾಧಿಕಾರಿ ಕಲ್ಪೇಶ್ ಎಸ್. ಪೂಜಾರಿ, ಜೊತೆ ಕೋಶಾಧಿಕಾರಿ ನಿತೀಶ್ ಡಿ.ಸಾಲಿಯಾನ್, ಮಹಿಳಾ ಕಾರ್ಯಾಧ್ಯಕ್ಷೆ ಶೋಭಾ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನವೀನ್ ಜೆ. ಪೂಜಾರಿ, ಸಲಹೆಗಾರರಾದ ರಮೇಶ್ ಡಿ. ಮಡಿವಾಳ್, ಸೀತಾರಾಮ್ ಎಸ್. ಶೆಟ್ಟಿ ವೇದಿಕೆಯಲ್ಲಿದ್ದರು.
ಕಾರಣೀಕ ದೈವ ಕೊರಗಜ್ಜನ ಕಥೆ:
ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಸಂಯೋಜನೆಯಲ್ಲಿ ಊರಿನ ಪ್ರಸಿದ್ಧ ಕಲಾವಿದರಿಂದ ‘ಸ್ವಾಮಿ ಕೊರಗಜ್ಜ’ ತುಳು ಯಕ್ಷಗಾನ ತಾಳಮದ್ದಳೆ ಜರಗಿತು. ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಮಹಿಮೆಯನ್ನು ಸಾರುವ ಹರೀಶ್ ಶೆಟ್ಟಿ ಸೂಡ ವಿರಚಿತ ಈ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ದೇವಿ ಪ್ರಸಾದ್ ಆಳ್ವ ತಲಪಾಡಿ ಮತ್ತು ಚೆಂಡೆ ಮದ್ದಳೆಗಳಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಹಾಗೂ ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸೇವಾ ಸಂಘದ ವತಿಯಿಂದ ಕಲಾವಿದರನ್ನು ಗೌರವಿಸಲಾಯಿತು. ಸುಬ್ಬಣ್ಣ ಎ.ಶೆಟ್ಟಿ, ಚಿತ್ರಾ ಆರ್. ಶೆಟ್ಟಿ, ರವೀಂದ್ರ ವೈ.ಶೆಟ್ಟಿ, ಸುಬೋಧ್ ಬಿ. ಭಂಡಾರಿ, ಉದಯ್ ಕೆ. ಶೆಟ್ಟಿ, ಸದಾನಂದ ಶೆಟ್ಟಿ, ಸುಧೀರ್ ಜೆ.ಶೆಟ್ಟಿ, ರಾಜೇಶ್ ಜೆ. ಶೆಟ್ಟಿ, ಯೋಗೀಶ್ ಶೆಟ್ಟಿ, ಜಯಂತ್ ಶೆಟ್ಟಿ, ನಾಗರಾಜ್ ಶೆಟ್ಟಿ, ಗಿರೀಶ್ ಶೆಟ್ಟಿ, ಜಗದೀಶ್ ಶೆಟ್ಟಿ, ಅನಿಲ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ರಘು ಶೆಟ್ಟಿ, ಸೋಮನಾಥ ಶೆಟ್ಟಿ, ರಾಜಾ ಪೂಂಜಾ , ಅನಿಲ್ ಶೆಟ್ಟಿ ವಾಶಿ, ಪ್ರಶಾಂತ್ ಶೆಟ್ಟಿ ಕುಕ್ಕಿಕಟ್ಟೆ, ಬಿಲ್ಲವರ ಅಸೋಸಿಯೇಷನ್ ಕಲ್ಯಾಣ್ ನ ಕೃಷ್ಣ ಪೂಜಾರಿ, ಸದಾನಂದ ಸುವರ್ಣ, ಜಯಶ್ರೀ ಪೂಜಾರಿ ಮತ್ತಿತರ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು. ನಾಗ ಕಿರಣ್ ಶೆಟ್ಟಿ ಮತ್ತು ಅನಿಲ್ ಬಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಭಜನೆ – ಅನ್ನದಾನ :
ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಭಜನೆ ಹಾಗೂ ದಿ.ರಾಜೀವಿ ಪದ್ಮನಾಭ ಶೆಟ್ಟಿ ಅವರ ಸ್ಮರಣಾರ್ಥ ಮಕ್ಕಳಿಂದ ಅನ್ನದಾನ ಏರ್ಪಡಿಸಲಾಗಿತ್ತು. ನಂದೀಶ್ ಪೂಜಾರಿ ಅವರ ಪುಷ್ಪಾಲಂಕಾರ ಗಮನ ಸೆಳೆಯಿತು.
ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆಯ ವತಿಯಿಂದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಂದು ಆಕ್ಸಿಲಿಯಮ್ ನಿವಾಸದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ಮತ್ತು ಸಿಹಿತಿಂಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿರ್ವ ಆರೋಗ್ಯ ಮಾತಾ ಚರ್ಚಿನ ಮುಖ್ಯ ಧರ್ಮಗುರುಗಳು ಫಾ| ಲೆಸ್ಲಿ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಮೆಲ್ವಿನ್ ಅರಾನ್ನಾ, ಉದ್ಯಮಿ ಕೆ. ಶ್ರೀಧರ ಕಾಮತ್, ಕಾನ್ವೆಂಟಿನ ಮೇಲ್ವಿಚಾರಕಿ ಲೀಮಾ,
ಶಾಖಾ ವ್ಯವಸ್ಥಾಪಕರಾದ ಪ್ರಮೀಳಾ ಲೋಬೋ ಮತ್ತು ಕಾನ್ವೆಂಟಿನ ಧರ್ಮ ಭಗಿನಿಯರು ಹಾಗೂ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು.