Sunday, January 19, 2025
Home Blog Page 7

ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ

0

ತಾನು ಹೆತ್ತ ಇಬ್ಬರು ಮಕ್ಕಳನ್ನು ತಾಯಿ ಕೊಲೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ತನ್ನ ಮಕ್ಕಳನ್ನ ಕೊಂದ ನಂತರ ತಾನೂ ಕೊರಳನ್ನು ಸೀಳಿ ಆತ್ಮಹತ್ಯೆಗೆ ಆ ಮಹಿಳೆ ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತನ್ನ ಮಕ್ಕಳಾದ ಸುಭಂ (7), ಸಿಯಾ (3) ರನ್ನು ಮೊದಲು ಮಹಿಳೆ ದಾರದಿಂದ ಕತ್ತು ಹಿಸುಕಿ ಕೊಲೆ ಮಾಡಿದಳು. ನಂತರ ತಾನೂ ಆತ್ಮಹತ್ಯೆಗೆ ಮುಂದಾಗಿದ್ದಾಳೆ.

“ಮಕ್ಕಳ ಅಮ್ಮನೇ ಕೊಲೆ ಮಾಡಿರುವ ಸಂಶಯ ಇದೆ. ಆ ದಿಸೆಯಲ್ಲಿ ತನಿಖೆಯನ್ನ ಮಾಡುತ್ತೇವೆ. ಮಕ್ಕಳ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಮ್ಮಿಬ್ಬರ ಅಂದರೆ ಗಂಡ ಹೆಂಡತಿ ನಡುವೆ ಜಗಳ ಆಗುತ್ತಿದೆ. ಅದಕ್ಕಾಗಿ ಗಂಡ ಕೊಲೆ ಮಾಡಿದ್ದಾನೆ ಎಂದು ಹೆಂಡತಿ ಹೇಳುತ್ತಿದ್ದಾಳೆ” ಎಂದು ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಹೇಳಿದ್ದಾರೆ.

ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ

0

ಕಾಸರಗೋಡು ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಅಧಿಕಾರಿಯನ್ನು ಪತಿಯೇ ಕಡಿದು ಕೊಂದಿದ್ದಾರೆ.

ಮಹಿಳಾ ಪೊಲೀಸ್ ಅಧಿಕಾರಿಯನ್ನು ಆಕೆಯ ಪತಿಯೇ ಕಡಿದು ಕೊಂದಿರುವ ಘಟನೆ ಗುರುವಾರ ನಡೆದಿದೆ. ಕಣ್ಣೂರಿನ ಕರಿವೆಳ್ಳೂರು ಪಳಿಯೇರಿ ಮೂಲದ ದಿವ್ಯಶ್ರೀ ಕೊಲೆಯಾದವರು.

ಕೆಲ ದಿನಗಳಿಂದ ದಿವ್ಯಾ ಪತಿ ರಾಜೇಶ್‌ನಿಂದ ದೂರವಾಗಿ ಸ್ವಂತ ಜೀವನ ನಡೆಸುತ್ತಿದ್ದರು. ಇಂದು ಈ ಮನೆಗೆ ರಾಜೇಶ್ ಮಚ್ಚು ಸಮೇತ ಆಗಮಿಸಿ ದಿವ್ಯಾ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಮುಖ ಮತ್ತು ಕುತ್ತಿಗೆಗೆ ಕ್ರೂರ ಗಾಯಗಳಾಗಿವೆ.

ದಿವ್ಯಾಳ ತಂದೆ ವಾಸು ಅವಳನ್ನು ರಕ್ಷಿಸಲು ಬಂದರು ಆದರೆ ದಾಳಿಯಲ್ಲಿ ಮತ್ತು ಅವರ ಸೊಂಟಕ್ಕೆ ಗಾಯಗಳಾಗಿವೆ. ದಿವ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ವಾಸು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಿವ್ಯಾ ಅವರು ಕಾಸರಗೋಡು ಚಂದೇರ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪೊಲೀಸ್ ಅಧಿಕಾರಿಯಾಗಿದ್ದರು. ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ದಿವ್ಯಾ ಅವರ ಪತಿ ರಾಜೇಶ್ ಆಟೋ ಚಾಲಕರಾಗಿದ್ದಾರೆ.ರಾಜೇಶ್ ಮತ್ತು ದಿವ್ಯಶ್ರೀ ಅವರಿಗೆ ಒಂದು ಮಗುವಿದೆ. ಸಾಂದರ್ಭಿಕವಾಗಿ ಸಣ್ಣಪುಟ್ಟ ಜಗಳಗಳಿದ್ದರೂ, ಅವರು ಇನ್ನೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿರಲಿಲ್ಲ .

ಇಬ್ಬರ ನಡುವಿನ ವಿಚಾರಗಳು ಬಿಗಡಾಯಿಸಿದ ನಂತರ ದಿವ್ಯಾ ಪ್ರತ್ಯೇಕ ಮನೆಗೆ ತೆರಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.,

ರಾಜೇಶ್ ಈ ಕ್ರೂರ ಅಪರಾಧ ನಡೆಸಲು ಕಾರಣವೇನು ಎಂಬ ಬಗ್ಗೆ ಯಾವುದೇ ವರದಿ ಇಲ್ಲ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?

0

ನವವಿವಾಹಿತೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವರದಕ್ಷಿಣೆ ಬೇಡಿಕೆಗೆ ರೋಸಿಹೋಗಿ ನವವಿವಾಹಿತೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗುಮ್ಮನಹಳ್ಳಿಯಲ್ಲಿ ಘಟಿಸಿದೆ.

ರೂಪಾ (29) ಆತ್ಮಹತ್ಯೆ ಮಾಡಿಕೊಂಡ ಯುವತಿ. 2 ವರ್ಷಗಳ ಹಿಂದೆ ಸುರೇಶ್‌ ಎಂಬ ಯುವಕನನ್ನು ಪ್ರೇಮ ವಿವಾಹವಾಗಿದ್ದಳು. ಸುರೇಶ್‌ ಸಾಸಲು ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟಿಂಗ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ರೂಪಾ ಬರೆದಿಟ್ಟ ಡೆತ್‌ ನೋಟ್‌ ನಲ್ಲಿ, ನನ್ನ ಸಾವಿಗೆ ಗಂಡ ಸುರೇಶ್, ಮಾವ ನರಸಿಂಹಮೂರ್ತಿ ಅತ್ತೆ ದೇವಮ್ಮ ಕಾರಣ ಎಂದು ಬರೆಯಲಾಗಿದೆ. ದೊಡ್ಡಬೆಳವಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವ ಪೊಲೀಸರು ಆರೋಪಿ ಸುರೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.

ಮದುವೆ ಸಮಯದಲ್ಲಿ ರೂಪಾ ಕುಟುಂಬದವರು 100 ಗ್ರಾಂ ಚಿನ್ನದ ಒಡವೆ ನೀಡಿದ್ದರು ಎಂದು ತಿಳಿದುಬಂದಿದೆ. ಸುರೇಶ್‌ ಮನೆಯವರು ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ.

ಆ ಹಣವನ್ನು ಕೊಡಬೇಕು ಎಂದು ಆಕೆಗೆ ಒತ್ತಡ ಹೇರಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ರೂಪಾ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ.

ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ

0


ಆಸ್ಕರ್ ವಿಜೇತ ಮತ್ತು ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ಅವರ ವಿಚ್ಛೇದನವನ್ನು ನಿನ್ನೆ ಘೋಷಿಸಲಾಯಿತು. ಸೈರಾ ಅವರ ವಕೀಲ ವಂದನಾ ಶಾ ದಂಪತಿಯ 29 ವರ್ಷಗಳ ಸುದೀರ್ಘ ವೈವಾಹಿಕ ಜೀವನಕ್ಕೆ ವಿಚ್ಛೇದನವನ್ನು ಘೋಷಿಸಿದರು.

ಈ ನಿರ್ಧಾರವನ್ನು ದಂಪತಿಗಳು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪ್ರಕಟಿಸಿದ್ದು, ಸಂಬಂಧವನ್ನು ಮುಂದುವರಿಸದಿರುವ ಬಗ್ಗೆ ಭಾವನಾತ್ಮಕ ಒತ್ತಡವನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದೀಗ ರೆಹಮಾನ್ ತಮ್ಮ ವಿಚ್ಛೇದನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಮೂವತ್ತು ವರ್ಷಗಳ ವಿವಾಹ ಸಂಬಂಧವನ್ನು ಪೂರ್ಣಗೊಳಿಸುವ ನಿರೀಕ್ಷೆಯಲ್ಲಿದ್ದರು ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ನಾವು ಗ್ರ್ಯಾಂಡ್ ಥರ್ಟಿ ತಲುಪಲು ಆಶಿಸಿದ್ದೆವು. ಆದರೆ ಎಲ್ಲಾ ವಿಷಯಗಳು ಕೆಲವೊಮ್ಮೆ ಕಾಣದ ಅಂತ್ಯವನ್ನು ಹೊಂದಿವೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಛಿದ್ರಗೊಳಿಸುವಿಕೆಯಲ್ಲಿ, ನಾವು ಅರ್ಥವನ್ನು ಹುಡುಕುತ್ತೇವೆ,

ಆದರೂಆದರೂ ತುಣುಕುಗಳು ಮತ್ತೆ ತಮ್ಮ ಸ್ಥಾನವನ್ನು ಕಂಡುಕೊಳ್ಳುವುದಿಲ್ಲ. ನಾವು ಈ ದುರ್ಬಲವಾದ ಅಧ್ಯಾಯದ ಮೂಲಕ ನಡೆಯುವಾಗ ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ,’ ನಮ್ಮ ಸ್ನೇಹಿತರಿಗೆ, ನಿಮ್ಮ ದಯೆಗೆ ಧನ್ಯವಾದಗಳು ಎಂದು ರೆಹಮಾನ್ X ನಲ್ಲಿ ಬರೆದಿದ್ದಾರೆ.

ಎ ಆರ್ ರೆಹಮಾನ್ ಮತ್ತು ಸಾಯಿರಾ 1995 ರಲ್ಲಿ ವಿವಾಹವಾದರು, ಇದು ಅರೇಂಜ್ಡ್ ಮ್ಯಾರೇಜ್ ಎಂದು ರೆಹಮಾನ್ ಈ ಹಿಂದೆ ಹೇಳಿದ್ದರು ಮತ್ತು ಸಾಯಿರಾ ಅವರು ರೆಹಮಾನ್ ಅವರ ತಾಯಿ ಹುಡುಕಿದ ವಧುವಾಗಿದ್ದರು.

ಪತ್ನಿಗೆ ಸಂಬಂಧಿಸಿದಂತೆ ಮೂರು ಷರತ್ತುಗಳನ್ನು ತಾಯಿಗೆ ಹೇಳಿದ್ದೆ ಎಂದು ರೆಹಮಾನ್ ಈ ಹಿಂದೆ ಹೇಳಿಕೆ ನೀಡಿದ್ದರು. ಸಂಗೀತವನ್ನು ಗೌರವಿಸುವ ಮತ್ತು ಮಾನವೀಯತೆ ಹೊಂದಿರುವ ಮತ್ತು ವಿದ್ಯಾವಂತ ಹೆಂಡತಿ ರೆಹಮಾನ್ ಗೆ ಬೇಕಾಗಿತ್ತು.

ಹುಡುಕಾಟದ ನಂತರ ಸಾಯಿರಾ ಅವರನ್ನು ವಧುವಾಗಿ ಆಯ್ಕೆ ಮಾಡಲಾಯಿತು. ರೆಹಮಾನ್ ಮತ್ತು ಸೈರಾ ಅವರಿಗೆ ಖತೀಜಾ ರೆಹಮಾನ್, ರಹೀಮಾ ರೆಹಮಾನ್ ಮತ್ತು ಎ ಆರ್ ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ

0

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಸಭೆಯು ದಿನಾಂಕ 09-11-2024ನೇ ಶನಿವಾರ ನಡೆಯಿತು.

ಈ ಸಭೆಯಲ್ಲಿ 2024-25 ಸಾಲಿಗೆ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಶ್ರೀ ಪ್ರಶಾಂತ್ ಆಚಾರ್, ಉಪಾಧ್ಯಕ್ಷರುಗಳಾಗಿ ಶ್ರೀ ಕೃಷ್ಣ ಕುಮಾರ್, ಶ್ರೀಮತಿ ಅಶ್ವಿನಿ ಮತ್ತು ಶ್ರೀ ಸುರೇಶ್ ಕುಮಾರ್ ಆಯ್ಕೆಯಾದರು.

ಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ, ಸಂಚಾಲಕರಾದ ಶ್ರೀ ರವಿನಾರಾಯಣ, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಎಲ್.ಕೆ.ಜಿ ಯಿಂದ 10ನೇ ತರಗತಿಯವರೆಗೆ ಆಯ್ಕೆಯಾದ ತರಗತಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು

0

ಬೆಂಗಳೂರಿನ ಡಾ ರಾಜ್‌ಕುಮಾರ್ ರಸ್ತೆಯಲ್ಲಿರುವ ಎಲೆಕ್ಟ್ರಿಕ್ ವೆಹಿಕಲ್ ಶೋರೂಂನಲ್ಲಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡು 20 ವರ್ಷದ ಯುವತಿಯೊಬ್ಬರು ಸುಟ್ಟು ಕರಕಲಾಗಿದ್ದು, 45 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಕರಕಲಾಗಿವೆ.

ಮೃತ ಯುವತಿಯನ್ನು ಶೋರೂಂ ಸೇಲ್ಸ್ ಎಕ್ಸಿಕ್ಯೂಟಿವ್ ಪ್ರಿಯಾ (20) ಎಂದು ಗುರುತಿಸಲಾಗಿದ್ದು, ಆಕೆ ಸರಿಯಾದ ಸಮಯಕ್ಕೆ ಹೊರಬಂದು ಪರಸ್ಪರ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನವರಂಗ್ ಜಂಕ್ಷನ್ ಬಳಿಯ MY EV ಸ್ಟೋರ್‌ನಲ್ಲಿ ಸಂಜೆ 5.30 ರ ಸುಮಾರಿಗೆ ಸಂಭವಿಸಿದ ಈ ಘಟನೆಯು ಅಂಗಡಿಯೊಳಗಿನ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ಬೆಂಕಿಯ ಜ್ವಾಲೆಯು ಆವರಣವನ್ನು ಆವರಿಸುತ್ತಿದ್ದಂತೆ, ಐವರು ಸಿಬ್ಬಂದಿಗಳು ಸುರಕ್ಷಿತವಾಗಿ ಪಾರಾಗುವಲ್ಲಿ ಯಶಸ್ವಿಯಾದರು. ಆದರೆ, ಒಳಗೆ ಸಿಕ್ಕಿಹಾಕಿಕೊಂಡಿದ್ದ ಪ್ರಿಯಾ ಸಕಾಲದಲ್ಲಿ ಹೊರಬರಲು ಸಾಧ್ಯವಾಗದೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾಳೆ.

ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಕೂಡಲೇ ಕಾರ್ಯಪ್ರವೃತ್ತವಾಗಿದ್ದು, ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಕ್ಕಪಕ್ಕದ ಕಟ್ಟಡಗಳಿಂದ ನಿವಾಸಿಗಳು ಮತ್ತು ಅಂಗಡಿ ಮಾಲೀಕರನ್ನು ಸ್ಥಳದಿಂದ ಹೊರಹೋಗುವ ವ್ಯವಸ್ಥೆಯನ್ನು ಮಾಡಲಾಯಿತು.

ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ‌ ಶಿಕ್ಷೆ ಇಲ್ಲ

0

ಕಾಸರಗೋಡು: ಮಸೀದಿ ಸಮಿತಿ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ‌ ವಿಧಿಸಲಾಗಿದೆ. ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳನ್ನು ಶಿಕ್ಷೆಯಿಂದ ಹೊರಗಿಡಲಾಗಿದೆ

ಬೇಡಿಕೆಯಂತೆ ಕಬ್ರಿಸ್ತಾನ್ ಪ್ರದೇಶದಲ್ಲಿ ಮಣ್ಣು ತೆಗೆದ ಜೆಸಿಬಿ ಮಾಲೀಕರಿಗೆ ಕಂದಾಯ ಅಧಿಕಾರಿಗಳು 45 ಲಕ್ಷ ರೂ. ದಂಡ ವಿಧಿಸಿದರು.

ಜೌಗು ಪ್ರದೇಶಕ್ಕೆ ಮಣ್ಣು ತುಂಬಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜಮೀನಿನ ಮಾಲೀಕರಾಗಿರುವ ಮಸೀದಿ ಮಾಲೀಕರಿಗೆ ಎಲ್ಲ ಆರೋಪಗಳಿಂದ ವಿನಾಯಿತಿ ನೀಡಲಾಗಿದ್ದು, ಜೆಸಿಬಿ ಮಾಲೀಕರಿಗೆ ಮಾತ್ರ ಶಿಕ್ಷೆ ವಿಧಿಸಲಾಗಿದೆ.

ಆರಂಭದಲ್ಲಿ 12 ಲಕ್ಷ ರೂ.ಗಳಿದ್ದ ದಂಡವನ್ನು ನಂತರ 45 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ನಂತರ ಜಿಲ್ಲಾಧಿಕಾರಿ ಜೆಸಿಬಿ ಜಪ್ತಿ ಮಾಡಿದರು. ಚೆರುವತ್ತೂರಿನ ಕೈತಕ್ಕಾಡ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಈರೋಡ್‌ ಮೂಲದ ಎನ್‌ ತಂಗರಾಜ್‌ ಎಂಬುವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಜ್ರತ್-ಉಲ್-ಇಸ್ಲಾಂ ಜಮಾತ್ ಮಸೀದಿಯ ಪೂರ್ವ ಭಾಗದಲ್ಲಿದ್ದ ಕಬ್ರಿಸ್ತಾನದಲ್ಲಿ ಆವರಿಸಿರುವ ಮಣ್ಣನ್ನು ತೆಗೆಯಲು ಮಸೀದಿ ಸಮಿತಿ ಸದಸ್ಯರು 2023ರ ಜೂನ್‌ 24ರಂದು ತಂಗರಾಜ್‌ ಅವರನ್ನು ಕರೆಸಿದ್ದರು.

ಮರಳು ತೆಗೆಯುತ್ತಿರುವ ವಿಷಯ ತಿಳಿದ ಚಂದೇರ ಎಸ್ ಐ ಎಂ.ವಿ.ಶ್ರೀದಾಸ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜೆಸಿಬಿಯನ್ನು ಠಾಣೆಗೆ ಕರೆತಂದರು. ನಂತರ ಕಂದಾಯ ಇಲಾಖೆ 12 ಲಕ್ಷ ದಂಡ ವಿಧಿಸಿದೆ.

ಮಸೀದಿ ಸಮಿತಿ ಸದಸ್ಯರು ಎನ್.ಎ.ನೆಲ್ಲಿಕ್ಕುನ್ನು ಶಾಸಕರೊಂದಿಗೆ ಕಲೆಕ್ಟರೇಟ್‌ಗೆ ತೆರಳಿ ದೂರು ನೀಡಿದರೂ ದಂಡದ ಮೊತ್ತವನ್ನು 2024ರ ಜೂನ್ 14ರಂದು 45 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.ಜೆಸಿಬಿ ಬೆಲೆ 29.9 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಅದರ ಒಂದೂವರೆ ಪಟ್ಟು ದಂಡವನ್ನು ವಿಧಿಸಲಾಗಿದೆ.

ಮಣ್ಣು ಮಾತ್ರ ತೆಗೆದಿದ್ದು, ಅದು ಅಲ್ಲೇ ಬಿದ್ದಿದೆ. 20 ಮೀಟರ್ ಉದ್ದ ಮತ್ತು 12 ಮೀಟರ್ ಅಗಲದಲ್ಲಿ 60 ಲೋಡ್ ಮಣ್ಣನ್ನು ತುಂಬಿದ್ದಕ್ಕಾಗಿ ಭತ್ತದ ಗದ್ದೆ ಜೌಗು ಪ್ರದೇಶ ಸಂರಕ್ಷಣಾ ಕಾಯ್ದೆಯಡಿ ದಂಡ ವಿಧಿಸಲಾಗಿದೆ.

ದಂಡ ಪಾವತಿಸದ ಕಾರಣ 2024ರ ಜುಲೈ 27ರಂದು ಜೆಸಿಬಿಯನ್ನು ಜಿಲ್ಲಾಧಿಕಾರಿ ಕೆ.ಇಂಬಶೇಖರನ್ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡರು. ಮಸೀದಿ ಸಮಿತಿ ಸದಸ್ಯರು ತಂಗರಾಜ್ ಅವರನ್ನು ಸಂಕಷ್ಟದ ಸಮಯದಲ್ಲಿ ಕೈಬಿಟ್ಟರು

ಜೆಸಿಬಿ, ಕಳೆದ 18 ತಿಂಗಳಿಂದ ಚಂದೇರ ಪೊಲೀಸ್ ಠಾಣೆ ಆವರಣದಲ್ಲಿ ತುಕ್ಕು ಹಿಡಿಯುತ್ತಿದೆ. ಪತ್ನಿ ಸುಚಿತ್ರಾ, ಅವಳಿ ಹೆಣ್ಣುಮಕ್ಕಳು ಸೇರಿದಂತೆ ತಂಗರಾಜ್ ಕುಟುಂಬ ಆದಾಯವಿಲ್ಲದೇ ಆತ್ಮಹತ್ಯೆಯ ಬಗ್ಗೆ ಮಾತನಾಡುತ್ತಾರೆ.

ಮಸೀದಿ ಸಮಿತಿಯು ತನ್ನನ್ನು ದಾರಿ ತಪ್ಪಿಸಿದೆ ಎಂದು ಆರೋಪಿಸಿ ತಂಗರಾಜ್ ಮತ್ತು ಕುಟುಂಬದವರು ಕಾಸರಗೋಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕುಟುಂಬಸ್ಥರು ಕಂದಾಯ ಸಚಿವರಿಗೆ ದೂರು ನೀಡಿದ್ದಾರೆ.‘

ಮಸೀದಿಗಾಗಿ ಕೆಲಸ ಮಾಡಿದ್ದರೂ ‘ನನ್ನನ್ನು ಕೆಲಸಕ್ಕೆ ಕರೆದಿಲ್ಲ, ದಂಡ ಕಟ್ಟಲು ತಮ್ಮ ಬಳಿ ಹಣವಿಲ್ಲ ಎಂದು ಹೇಳಿ ಮಸೀದಿ ಕಮಿಟಿ ಸದಸ್ಯರು ನನ್ನನ್ನು ಕೈಬಿಟ್ಟರು. ಈಗ ಎಲ್ಲಾ ತಪ್ಪುಗಳನ್ನು ನನ್ನ ಮೇಲೆ ಹೊರಿಸಿದ್ದಾರೆ ” ಎಂದು ಎನ್ ತಂಗರಾಜ್ (ಜೆಸಿಬಿ ಮಾಲೀಕರು) ಹೇಳಿದ್ದಾರೆ.

ಶ್ರೀಧರ ಪಾಂಡಿ ಸಂಸ್ಮರಣಾ  ಪ್ರಶಸ್ತಿ ಪ್ರದಾನ – ಭೀಷ್ಮ ವಿಜಯ ತಾಳಮದ್ದಳೆ

0

ಕಾರ್ಕಳ:  ತನ್ನ ಶೈಕ್ಷಣಿಕ ಹಂತದಿಂದ ಯಕ್ಷಗಾನ ಕಲೆಯ ಅಪಾರ ಆಸಕ್ತಿ ಹೊಂದಿ ಅಗ್ರಮಾನ್ಯ ಕಲಾವಿದರಿಂದ ನಾಟ್ಯಭ್ಯಾಸಗೈದು ವೇಷದಾರಿಯಾಗಿ ಮೆರೆದು ಜೊತೆಗೆ ಉತ್ತಮ ಪ್ರಸಂಗಕರ್ತರೂ ಆದ   ಜೈನ ಕವಿ ಸಾಣೂರು ಶ್ರೀಧರ ಪಾಂಡಿಯವರ ಹದಿಮೂರನೇ “ಸಾವಿರದ ನೆನಪು”  ಸಮಾರಂಭದಲ್ಲಿ ಯಕ್ಷಗಾನದ   ಹಿರಿಯ ಕಲಾವಿದ  ನಾಟ್ಯ ಗುರು ಕಾಂತಾವರ ಮಹಾವೀರ ಪಾಂಡಿಯವರಿಗೆ ಶ್ರೀಧರ ಪಾಂಡಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೂಡಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು  ಶ್ರೀಧರ ಪಾಂಡಿಯವರ ಕಲಾಜೀವನದ ಆದರ್ಶಗಳನ್ನು ನೆನಪಿಸಿ ಆಶೀರ್ವಚನ ನೀಡಿದರು.

ಯಕ್ಷಗಾನ ವಿದ್ವಾಂಸ ರಾಘವ ನಂಬಿಯಾರ್ ಅದ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಕೆ.ಗುಣಪಾಲ ಕಡಂಬ, ಇರ್ವತ್ತೂರು ಉದಯ ಕುಮಾರ್ ಜೈನ್,  ಹಾಗೂ ಮದ್ರಬೆಟ್ಟು ವಸಂತ ಅಧಿಕಾರಿ, ಜಗದೀಶ ಅಧಿಕಾರಿ, ಶ್ರೀಮತಿ ವಿಜಯ ಶ್ರೀಧರ ಪಾಂಡಿ,   ಪುತ್ರಿ ಶ್ರೀಮತಿ ಶ್ರೀಶಾ,  ಪುತ್ರ ಶ್ರೀಕಾಂತ್ ಕುಮಾರ್  ಉಪಸ್ಥಿತರಿದ್ದರು.

ಅಧ್ಯಾಪಕ, ವಾಗ್ಮಿ ಮುನಿರಾಜ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು ಮೂಡಬಿದಿರೆಯ ಪ್ರಾಂಶುಪಾಲ ಪ್ರಭಾತ್ ಬಲ್ನಾಡ್ ವಂದಿಸಿದರು.

ನಂತರ ಪ್ರಸಿದ್ಧ ಕಲಾವಿದರಿಂದ ಗಾನ ವೈಭವ, ಬೀಷ್ಮ ವಿಜಯ ತಾಳಮದ್ದಳೆ ಜರಗಿತು.

ಖ್ಯಾತ ಕಲಾಪೋಷಕ ಸೀತಾರಾಮ ಶೆಟ್ಟಿ ನಿಧನ

0

ಯಕ್ಷಗಾನ ಕಲಾರಂಗ ಸಂಸ್ಥೆಯ ಆಜೀವ ಸದಸ್ಯರಾದ ಎನ್. ಸೀತಾರಾಮ ಶೆಟ್ಟಿ (70) ಇವರು ಅಲ್ಪಕಾಲದ ಅಸೌಖ್ಯದಿಂದ 17-11-2024ರಂದು ದೈವಾಧೀನರಾದರು.

ಬಿಲ್ಲಾಡಿಯ ಯಕ್ಷಕೃಪಾ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಸಂಸ್ಥಾಪಕರಾದ ಇವರು ಯಕ್ಷಗಾನದ ಬಗ್ಗೆ ಅತೀವ ಒಲವುಳ್ಳವರಾಗಿದ್ದರು.

ಯಕ್ಷಗಾನ ಕಲಾರಂಗದ ಬಗ್ಗೆ ವಿಶೇಷೆ ಗೌರವಾದರಗಳನ್ನು ಹೊಂದಿದವರಾಗಿದ್ದ ಇವರು ವಿದ್ಯಾಪೋಷಕ್‌ಗೆ ನಿರಂತರವಾಗಿ ದೊಡ್ಡ ಮೊತ್ತದ ದೇಣಿಗೆ ನೀಡುತ್ತಾ ಬಂದಿದ್ದರು.

ನೂತನ ಕಟ್ಟಡದ ಉದ್ಘಾಟನೆಯ ಸಮಾರಂಭಕ್ಕೂ ಇವರ ಕೊಡುಗೆ ದೊಡ್ಡದು. ಯಕ್ಷಗಾನವನ್ನು ಪ್ರೀತಿಸುವ ಇವರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಸಂಖ್ಯೆಯ ಬಂಧುಬಾಂಧವರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

0

ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭವು ಸಂಸ್ಥೆಯ ನೂತನ ಕಟ್ಟಡದ ಐವೈಸಿ ಸಭಾಂಗಣದಲ್ಲಿ 17.11.2024 ರಂದು ಅತ್ಯಂತ ಯಶಸ್ವಿಯಾಗಿ ಜರಗಿತು.

ಯಕ್ಷಗಾನ ಲೋಕ ಶಿಕ್ಷಣವನ್ನು ಕೊಡುವ ಶ್ರೇಷ್ಠವಾದ ಕಲಾಪ್ರಕಾರವೆಂದು ಪ್ರಶಸ್ತಿ ಪ್ರದಾನ ಮಾಡಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.

ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಹರ್ಷೇಂದ್ರ ಕುಮಾರ್ ಅವರು ಆರ್.ಎಲ್ ಭಟ್- ವಾರಿಜಾಕ್ಷಿ ಆರ್ ಭಟ್ ಗೌರವಾರ್ಥ ಅವರ ಸುಪುತ್ರ ಹರಿಪ್ರಸಾದ್ ಭಟ್ ಪ್ರಾಯೋಜಿಸಿದ ಬಣ್ಣದ ಕೋಣೆಯನ್ನು ಉದ್ಘಾಟಿಸಿದರು.

ಹಾಗೆಯೇ ಸಿಸಿಟಿವಿಯ ಉದ್ಘಾಟನೆಯನ್ನು ದಾನಿ ಎಂ. ಸಿ. ಕಲ್ಕೂರ ಅವರು ಮಾಡಿದರು. ಹರೀಶ್ ರಾಯಸ್ ಅವರು ತಮ್ಮ ತೀರ್ಥ ರೂಪರ ಹೆಸರಿನಲ್ಲಿ ಸ್ಥಾಪಿಸಿದ ಯಕ್ಷಗಾನ ಕಲಾರಂಗ ಪ್ರಶಸ್ತಿಯ ನಿಧಿಯನ್ನು ಹಸ್ತಾಂತರಿಸಿದರು. ಶಾಸಕ ಯಶ್‌ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ದಾನಿ ಕೆ. ಸದಾಶಿವ ಭಟ್ ಅಭ್ಯಾಗತರಾಗಿ ಭಾಗವಹಿಸಿದ್ದರು.

ಕಲಾವಿದರಾದ ಎಚ್. ನಾರಾಯಣ ಶೆಟ್ಟಿ ಕೊಳ್ಕೆಬೈಲ್, ದೇವದಾಸ ರಾವ್ ಕೂಡ್ಲಿ, ಸುರೇಶ ಕುಪ್ಪೆ ಪದವು, ಪುರಂದರ ಹೆಗಡೆ ನಾಗರಕೊಡಿಗೆ, ಗುಂಡಿಬೈಲ್ ನಾರಾಯಣ ಭಟ್, ಸರಪಾಡಿ ಅಶೋಕ ಶೆಟ್ಟಿ, ಕಿಗ್ಗ ಹಿರಿಯಣ್ಣ ಆಚಾರ್ಯ, ಥಂಡಿಮನೆ ಶ್ರೀಪಾದ ಭಟ್, ಮೊಗೆಬೆಟ್ಟು ಹೆರಿಯ ನಾಯ್ಕ್, ತೊಡಿಕ್ಕಾನ ಕೆ. ಬಾಬು ಗೌಡ, ಹಾಲಾಡಿ ಕೃಷ್ಣ ಮರಕಾಲ, ಚಕ್ರಮೈದಾನ ಕೃಷ್ಣ ಪೂಜರಿ, ಹಾವಂಜೆ ಮಂಜುನಾಥ ರಾವ್, ಹೆರಂಜಾಲು ಗೋಪಾಲ್ ಗಾಣಿಗ,

ಚೇರ್ಕಾಡಿ ರಾಧಾಕೃಷ್ಣ ನಾಯಕ್, ಶೇಣಿ ಸುಬ್ರಹ್ಮಣ್ಯ ಭಟ್, ಸರಪಾಡಿ ಶಂಕರನಾರಾಯಣ, ಹೊಡಬಟ್ಟೆ ವೆಂಕಟ ರಾವ್, ಕಟೀಲು ರಮಾನಂದ ರಾವ್, ನರಸಿಂಹ ಮಡಿವಾಳ, ಎಲ್ಲೂರು ಕೆ. ಶ್ರೀನಿವಾಸ ಉಪಾಧ್ಯಾಯ, ಅಂಬಾಪ್ರಸಾದ ಪಾತಾಳ, ಗಜಾನನ ಸತ್ಯನಾರಾಯಣ ಭಂಡಾರಿ ಈ 23 ಕಲಾವಿದರನ್ನು ತಲಾ ರೂ. 20 ಸಾವಿರ ನಗದು ಸಹಿತ ಫಲಕ ನೀಡಿ ಸಂಮಾನಿಸಲಾಯಿತು.

ಯಶಸ್ವಿ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಗೆ ಶ್ರೀ ವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ರೂ. 1,00,000/- ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿಯವರು ಪ್ರಶಸ್ತಿ ಸ್ವೀಕರಿಸಿದರು. ಯಕ್ಷಗಾನ ಕಲಾರಂಗದ ನಿಕಟಪೂರ್ವ ಅಧ್ಯಕ್ಷರಾದ ಕೆ. ಗಣೇಶ್ ರಾವ್ ಅವರಿಗೆ ಬೆಳ್ಳಿಯ ಹರಿವಾಣದಲ್ಲಿ ಫಲವಸ್ತು ನೀಡಿ ‘ಯಕ್ಷ ಚೇತನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಇತ್ತೀಚಿಗೆ ನಿಧನರಾದ ಕಪ್ಪೆಕೆರೆ ಮಾಧವ ಹೆಗಡೆ, ಪೇತ್ರಿ ಮಾಧವ ನಾಯ್ಕ್, ಬಂಟ್ವಾಳ ಜಯರಾಮ ಆಚಾರ್ಯ ಇವರ ಕುಟುಂಬದವರಿಗೆ ತಲಾ 30,000/- ಸಾಂತ್ವನ ನಿಧಿಯನ್ನು ನೀಡಲಾಯಿತು. ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಯಕ್ಷಗಾನ ಕಲಾವಿದರ 75 ಮಕ್ಕಳಿಗೆ ರೂ. 6,59,000/- ಸಹಾಯಧನವನ್ನು ಸಾಂಕೇತಿಕವಾಗಿ ವಿತರಿಸಿದರು.

ವಾಸುದೇವ ಸಾಮಗರ 30 ಪ್ರಸಂಗಗಳ ಯಕ್ಷ ರಸಾಯನ ಪುಸ್ತಕವನ್ನು ಸ್ವಾಮೀಜಿಯವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಡಾ. ಪ್ರದೀಪ ವಿ. ಸಾಮಗ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಸ್. ವಿ. ಭಟ್ ಮತ್ತು ವಿ. ಜಿ. ಶೆಟ್ಟಿಯವರು ಸ್ವಾಮೀಜಿಯವರಿಗೆ ಫಲ-ಪುಷ್ಪ ಸಮರ್ಪಿಸಿದರು. ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಸ್ಮರಣಿಕೆ ನೀಡಿ ಮತ್ತು ಗೌರವಾನ್ವಿತರ ಕುರಿತು ಪರಿಚಯಿಸಿದರು. ಎಚ್. ಎನ್. ಶ್ರಂಗೇಶ್ವರ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

ಸಭೆಯ ಪೂರ್ವದಲ್ಲಿ ವಿದ್ಯಾಪ್ರಸಾದ್ ಅವರು ಸಂಯೋಜಿಸಿದ ತೆಂಕುತಿಟ್ಟು ಹಿಮ್ಮೇಳದ ನವರಸಾಯನ-ಯಕ್ಷಗಾಯನ ಪ್ರಸ್ತುತಗೊಂಡಿತು. ಬಳಿಕ ಸುಜಯೀಂದ್ರ ಹಂದೆಯವರ ಸಂಯೋಜನೆಯಲ್ಲಿ ಬಡಗುತಿಟ್ಟು ಯಕ್ಷಗಾನ ಬಭ್ರುವಾಹನ ಕಾಳಗ ಜರಗಿತು.