ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇವರು ಪ್ರಸ್ತುತಪಡಿಸುವ ದಿನಾಂಕ 11.10.2020 ಭಾನುವಾರ ಸಂಜೆ 5.00 ರಿಂದ ಯಕ್ಷಗಾನ ತಾಳಮದ್ದಲೆ ವಿಭೀಷಣ ನೀತಿ.. ಯಕ್ಷಗಾನ ತಾಳಮದ್ದಲೆ ಲೈವ್ ಕಾರ್ಯಕ್ರಮ. ಲಿಂಕ್ ಕೆಳಗಿದೆ
ಮಾತಂಗ ಕನ್ಯೆ, ಶ್ರೀರಾಮ ದರ್ಶನ – ಪೊಳಲಿಯಲ್ಲಿ ಅಪೂರ್ವ ಯಕ್ಷಗಾನ ಪ್ರದರ್ಶನ
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ 17.10.2020 ಶನಿವಾರದಂದು ಸಂಜೆ ಘಂಟೆ 6ರಿಂದ ರಾತ್ರಿ ಘಂಟೆ 2ರ ವರೆಗೆ ‘ಮಾತಂಗ ಕನ್ಯೆ – ಶ್ರೀರಾಮ ದರ್ಶನ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪ್ರಸಿದ್ಧ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿರುವರು.
ಅಮೃತ ಸೋಮೇಶ್ವರ ಅವರಿಗೆ ಬಾಲವನ ಪ್ರಶಸ್ತಿ – 2020
ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆ ಪ್ರಯುಕ್ತ ನೀಡಲಾಗುವ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ – 2020 ನ್ನು ಈ ಬಾರಿ ಖ್ಯಾತ ಜಾನಪದ ಹಾಗೂ ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ, ಸಾಹಿತಿ, ನಿವೃತ್ತ ಉಪನ್ಯಾಸಕರಾದ ಪ್ರೊ| ಅಮೃತ ಸೋಮೇಶ್ವರ ಅವರಿಗೆ ಕೋಟೆಕಾರಿನಲ್ಲಿರುವ ಅವರ ಮನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ನೀಡಿ ಗೌರವಿಸಿದರು.

ಕುರಿಯ ಮನೆಯಂಗಳದಲ್ಲಿ ರಂಗನಾಯಕ ಕುರಿಯ ಗಣಪತಿ ಶಾಸ್ತ್ರಿ ದಂಪತಿಗೆ ಸಮ್ಮಾನ
ಯಕ್ಷಮೇನಕಾ ಮೂಡಬಿದಿರೆ, ರಂಗಸ್ಥಳ ಮಂಗಳೂರು (ರಿ), ಯಕ್ಷಚೈತನ್ಯ (ರಿ) ಅಶ್ವತ್ಥಪುರ ಎಂಬ ಮೂರು ಯಕ್ಷಸಂಘಟನೆಗಳಿಂದ ಕುರಿಯ ಗಣಪತಿ ಶಾಸ್ತ್ರಿ ದಂಪತಿಗೆ ಕುರಿಯ ಮನೆಯಂಗಳದಲ್ಲಿ ಸಮ್ಮಾನ



ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ಶ್ರದ್ಧಾಂಜಲಿ ಸಭೆ
ಇತ್ತೀಚಿಗೆ ಪರಮೈಕ್ಯರಾದ ಹಿರಿಯ ವಿದ್ವಾಂಸರೂ ಯಕ್ಷಗಾನ ಕಲಾವಿದರೂ ಆದ ಉಡುಪುಮೂಲೆ ಶ್ರೀ ಗೋಪಾಲಕೃಷ್ಣ ಭಟ್, ಹಿರಿಯ ಯಕ್ಷಗಾನ ಭಾಗವತರಾದ ತೆಂಕಬಯಲು ತಿರುಮಲೇಶ್ವರ ಶಾಸ್ತ್ರಿ , ಪ್ರಸಿದ್ಧ ಯಕ್ಷಗಾನ ಕಲಾವಿದರಾದ ರಘುರಾಮ ಗೋಳಿಯಡ್ಕ ಅವರಿಗೆ ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ ಸಮರ್ಪಿಸಿ ಅವರ ದಿವ್ಯಾತ್ಮಕ್ಕೆ ಚಿರ ಶಾಂತಿ ದೊರೆಯುವಂತೆ ಪ್ರಾರ್ಥಿಸಲಾಯಿತು.ಕೋವಿದ್ 19 ರ ಮಾನದಂಡಗಳನ್ನು ಪಾಲಿಸಿಕೊಂಡು ಸಭೆ ಜರಗಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ ಕಾರ್ಯಕ್ರಮ ಜರಗಿತು. ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಹೇಳುತ್ತಾ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರು ನುಡಿ ನಮನದ ಮಾತುಗಳನ್ನಾಡಿದರು. ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಮೆನೇಜರ್ ಶ್ರೀ ಸೀತಾರಾಮ ಬಳ್ಳುಳ್ಳಾಯ , ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ, ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ , ಸಹಕಾರ್ಯದರ್ಶಿ ಡಾ. ಶಿವಕುಮಾರ್ ಅಡ್ಕ ನುಡಿನಮನಗಳನ್ನು ಅರ್ಪಿಸಿದರು.ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಸ್ವಾಗತಿಸಿ ಕೋಶಾಧಿಕಾರಿ ಕೃಷ್ಣ ಭಟ್ ಅಡ್ಕ ಧನ್ಯವಾದ ಸಮರ್ಪಿಸಿದರು.
ವಿಶೇಷ ಚೇತನ ಮಕ್ಕಳ ಬಗ್ಗೆ ಅರಿವು ಮೂಡಿಸಲು ಸಿರಿಬಾಗಿಲು ಪ್ರತಿಷ್ಠಾನದಿಂದ ‘ಜಡಭರತ’ ಯಕ್ಷಗಾನ
ನಮ್ಮ ನಡುವೆ ಇರುವ ಹಾಗೂ ಆಕಸ್ಮಿಕವಾಗಿ ಹುಟ್ಟುವ ವಿಶೇಷ ಚೇತನ ಮಕ್ಕಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಅವರ ಬಗ್ಗೆ ಕುತ್ಸಿತ ಭಾವನೆ ತಾಳದೆ ಸಮಾಜದಲ್ಲಿ ಅವರಿಗೂ ಬದುಕಲು ಹಕ್ಕಿದೆ ಎಂಬುದನ್ನು ತಿಳಿ ಹೇಳುವ ಪ್ರಯತ್ನವೆಂಬಂತೆ ಕುತೂಹಲಕಾರೀ ಕಥಾ ಹಂದರವುಳ್ಳ “ಜಡಭರತ” ಎಂಬ ಯಕ್ಷಗಾನ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಬುದ್ದಿಮಾಂದ್ಯ ಮಕ್ಕಳ ಶಾಲೆಯಾದ ಅಮರ ಸೌಂದರ್ಯ ಫೌಂಡೇಶನ್ ಬೆಂಗಳೂರು ಇವರ ಸಹಕಾರದೊಂದಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಈ ವಿಶಿಷ್ಟ ರೀತಿಯ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮ 11. 10. 2020 ರ ಆದಿತ್ಯವಾರ ರಾತ್ರಿ 8.30 ಘಂಟೆಗೆ ಯು ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಆಗಲಿದೆ. ಕಾರ್ಯಕ್ರಮದ ವಿವರ ಲಗತ್ತೀಕರಿಸಲಾಗಿದೆ.

ಭಾಗವತರು- ಸಿರಿಬಾಗಿಲು ರಾಮಕೃಷ್ಣ ಮಯ್ಯ, ತಲ್ಪಣಾಜೆ ವೆಂಕಟ್ರಮಣ ಭಟ್ ಚೆಂಡೆ- ಲಕ್ಮೀನಾರಾಯಣ ರಾವ್ ಅಡೂರು
ಮದ್ದಳೆ- ಲಕ್ಮೀಶ ಬೆಂಗ್ರೊಡಿ, ಉದಯ ಕಂಬಾರ್
ಚಕ್ರತಾಳ- ರವಿಶಂಕರ ಶೆಟ್ಟಿ
ಜಡಭರತ- ಸುಣ್ಣಂಬಳ ವಿಶ್ವೇಶ್ವರ ಭಟ್
ವೃಷಲ- ರಾಧಾಕೃಷ್ಣ ನಾವಡ.ಮಧೂರು
ರಹೂಗಣ- ರವಿರಾಜ ಪನೆಯಾಲ
ದೂತ- ಪೆರುವೊಡಿ ಸುಬ್ರಹ್ಮಣ್ಯ ಭಟ್
ಚಂಡಿ- ಬಾಲಕೃಷ್ಣ ಸೀತಾಂಗೊಳಿ
ಭರತ ಸಹೊದರರು- ಪ್ರಕಾಶ್ ನಾಯಕ್ ನೀರ್ಚಾಲ್, ಶಿವಾನಂದ ಪೆರ್ಲ,
ಬೊವಿಗಳು- ಪ್ರಕಾಶ್ ನಾಯಕ್ ನೀರ್ಚಾಲ್, ಶಿವಾನಂದ ಪೆರ್ಲ, ಶ್ರೀಗಿರಿ ಅನಂತಪುರ.
ವೇಷಭೂಷಣ- ಕೊಲ್ಲಂಗಾನ ಮೇಳ
ವಿಡಿಯೋ ಚಿತ್ರೀಕರಣ- ಉದಯ ಕಂಬಾರ್, ವರ್ಣ ಸ್ಟಡಿಯೋ, ನೀರ್ಚಾಲ್ ಮತ್ತು
ಶ್ರೀವತ್ಸ ಕುಂಚಿನಡ್ಕ
ಛಾಯಾಗ್ರಹಣ- ಶ್ಯಾಮ್ ಕುಂಚಿನಡ್ಕ
ಇಂಗ್ಲಿಷ್ ಸಬ್ ಟೈಟಲ್- ಸುಮನ್ ರಾಜ್ ನೀಲಂಗಳ
ಎಡಿಟಿಂಗ್- ಶ್ರೀಮುಖ ಯಸ್. ಆರ್.ಮಯ್ಯ, ಸಿರಿಬಾಗಿಲು
ಈ ಕಾರ್ಯಕ್ರಮದ ಯು ಟ್ಯೂಬ್ ಲಿಂಕ್ ಈ ಕೆಳಗಡೆ ಕೊಡಲಾಗಿದೆ.
Channel Link
youtube.com/c/svvision
‘ಕರ್ಣ ಪರ್ವ’ ಯಕ್ಷಗಾನ ತಾಳಮದ್ದಳೆ ನೇರ ಪ್ರಸಾರ
ಯಕ್ಷಮೇನಕಾ ಮೂಡಬಿದಿರೆ, ರಂಗಸ್ಥಳ ಮಂಗಳೂರು (ರಿ), ಯಕ್ಷಚೈತನ್ಯ (ರಿ) ಅಶ್ವತ್ಥಪುರ ಎಂಬ ಮೂರು ಯಕ್ಷಸಂಘಟನೆಗಳಿಂದ ಕುರಿಯ ಗಣಪತಿ ಶಾಸ್ತ್ರಿ ದಂಪತಿಗಳಿಗೆ ಸಮ್ಮಾನ ಮತ್ತು ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಕರ್ಣ ಪರ್ವ’ ಎಂಬ ಯಕ್ಷಗಾನ ತಾಳಮದ್ದಳೆ ಇಂದು 10.10.2020ರಂದು ಅಪರಾಹ್ನ 4 ಘಂಟೆಗೆ ಆರಂಭವಾಗಲಿದೆ. ಕಾರ್ಯಕ್ರಮದ ನೇರ ಪ್ರಸಾರದ ಲಿಂಕ್ ಇಲ್ಲಿದೆ.

