Saturday, September 19, 2026
Home Blog Page 364

ಯಕ್ಷಗಾನ ಕಲಾರಂಗ ಪ್ರಶಸ್ತಿಗಳಿಗೆ ಕಲಾವಿದರ ಆಯ್ಕೆ – ದಿನೇಶ ಅಮ್ಮಣ್ಣಾಯ ಸಹಿತ 17 ಕಲಾವಿದರಿಗೆ ಪ್ರಶಸ್ತಿ

ಸಂಸ್ಥೆಯು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ನೀಡುವ 17 ಪ್ರಶಸ್ತಿಗಳಿಗೆ ತೆಂಕು ಬಡಗಿನ ಈ ಕೆಳಗಿನ ಹಿರಿಯ ಕಲಾವಿದರು ಆಯ್ಕೆಯಾಗಿದ್ದಾರೆ.

ಅನಂತ ಕುಲಾಲ ಕಕ್ಕುಂಜೆ,ಮಹಾಬಲ ನಾೈಕ್ ಬುಕ್ಕಿಗುಡ್ಡೆ, ರಾಮಕೃಷ್ಣ ಶೆಟ್ಟಿಗಾರ್ ಮಿಜಾರು, ಬಾಬು ಕುಲಾಲ ಹಳ್ಳಾಡಿ, ನಗ್ರಿ ಮಹಾಬಲ ರೈ, ಪ್ರಭಾಕರ ಹೆಗಡೆ ಚಿಟ್ಟಾಣಿ ಹೊನ್ನಾವರ, ರಾಮಕೃಷ್ಣ ಮಂದಾರ್ತಿ, ಮಂಜುನಾಥ ಭಟ್ ಬೆಳ್ಳಾರೆ, ತಿಮ್ಮಪ್ಪ ಹೆಗಡೆ ಶಿರಳಗಿ ಸಿದ್ದಾಪುರ, ಬಸವರಾಜ್ ಹುಣ್ಸೆಮಕ್ಕಿ, ರಾಮಚಂದ್ರ ಹೆಗಡೆ ಮೂರೂರು, ರಘುರಾಮ ಗೌಡ ಕೇಂಜ, ದಿನೇಶ ಅಮ್ಮಣ್ಣಾಯ ಅರಸಿನಮಕ್ಕಿ, ಉಮೇಶ ಹೆಬ್ಬಾರ್ ನಿಡ್ಲೆ, ಸಂಜಯಕುಮಾರ್ ಶೆಟ್ಟಿ ಗೋಣಿಬೀಡು, ಮಹಾದೇವ ಪಟಗಾರ ಕುಮಟಾ, ರಾಘವದಾಸ್ ಮುಡಿಪು.

ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 26, ಶನಿವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ

ಮತ್ತು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು 20,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ.

ಪ್ರೊ. ಕೆ. ಸದಾಶಿವ ರಾವ್‍ ಅವರಿಗೆ ‘ಯಕ್ಷಚೇತನ’ ಪ್ರಶಸ್ತಿ

ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯ ಹಿರಿಯ ಕಾರ್ಯಕರ್ತರಿಗೆ ನೀಡುವ ಯಕ್ಷಚೇತನ ಪ್ರಶಸ್ತಿಗೆ ವಿದ್ಯಾಪೋಷಕ್‍ ಕೋಶಾಧಿಕಾರಿ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಸದಾಶಿವ ರಾವ್‍ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 26, ಶನಿವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಮತ್ತು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಳಗಳ ಇಂದಿನ (21-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (21-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ21-12-2020ಹಂದಾಡಿ ಮರ್ಬು, ಬ್ರಹ್ಮಾವರ – ಸಂಪೂರ್ಣ ದೇವಿ ಮಹಾತ್ಮೆ 
ಕಟೀಲು ಒಂದನೇ ಮೇಳ21-12-2020ದಡ್ಡುಮನೆ, ನಿಡ್ಡೋಡಿ -ಶ್ರೀ ದೇವಿ ಮಹಾತ್ಮೆ 
ಕಟೀಲು ಎರಡನೇ ಮೇಳ 21-12-2020ಕಡೇಶಿವಾಲಯ, ಬಂಟ್ವಾಳ -ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ 
ಕಟೀಲು ಮೂರನೇ ಮೇಳ21-12-2020ಕಟೀಲು ಕ್ಷೇತ್ರದಲ್ಲಿ – ನಳ ದಮಯಂತಿ 
ಕಟೀಲು ನಾಲ್ಕನೇ ಮೇಳ 21-12-2020ಟೋಲ್ ಗೇಟ್ ಬಳಿ, ಹೆಜಮಾಡಿ – ಸೀತಾ ಕಲ್ಯಾಣ, ಜಾಂಬವತೀ ಕಲ್ಯಾಣ, ಮೀನಾಕ್ಷಿ ಕಲ್ಯಾಣ 
ಕಟೀಲು ಐದನೇ ಮೇಳ 21-12-2020ಉರಿಪಾದೆ ಮನೆ, ಪೊಳಲಿ – ಶಶಿಪ್ರಭಾ ಪರಿಣಯ- ಪುರುಷಾಮೃಗ-ಶ್ರೀನಿವಾಸ ಕಲ್ಯಾಣ 
ಕಟೀಲು ಆರನೇ ಮೇಳ21-12-2020ಉಲ್ಲಂಜೆ, ಮೆನ್ನಬೆಟ್ಟು – ಶ್ರೀ ದೇವಿ ಮಹಾತ್ಮೆ 
ಮಂದಾರ್ತಿ ಒಂದನೇ ಮೇಳ 21-12-2020ಮಕ್ಕಿಮನೆ ತಂತ್ರಾಡಿ – ಕೂಡಾಟ
ಮಂದಾರ್ತಿ ಎರಡನೇ ಮೇಳ 21-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 21-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 21-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 21-12-2020ಮಕ್ಕಿಮನೆ ತಂತ್ರಾಡಿ – ಕೂಡಾಟ
ಶ್ರೀ ತಳಕಲ ಮೇಳ21-12-2020ಶ್ರೀ ಕ್ಷೇತ್ರದಲ್ಲಿ – ಭಾರ್ಗವ ವಿಜಯ  
ಶ್ರೀ ಮಾರಣಕಟ್ಟೆ ಮೇಳ ‘ಎ’21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’21-12-2020ಕೋಣ್ಕಿ ಹೊಸಿಮನೆ  
ಶ್ರೀ ಮಾರಣಕಟ್ಟೆ ಮೇಳ ‘ಸಿ’21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 21-12-2020ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ – ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳ21-12-2020ಅರೆಹೊಳೆ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’21-12-2020ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಯಳಬೇರು 
ಕಮಲಶಿಲೆ ಮೇಳ ‘ಬಿ’21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಅಮೃತೇಶ್ವರೀ ಮೇಳ21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ 21-12-2020ಕುಂದಾಪುರ ವ್ಯಾಸರಾಯ ಮಠ 
ಶ್ರೀ ಸೌಕೂರು ಮೇಳ21-12-2020ಗುಲ್ವಾಡಿ ದೊಡ್ಮನೆ ಬಂಧುಗಳು – ನೂತನ ಪ್ರಸಂಗ 
ಶ್ರೀ ಹಾಲಾಡಿ ಮೇಳ21-12-2020ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಂಡ್ಕೋಡು, ಹಾಲಾಡಿ

ಮಹನೀಯರ ಮಹಾನುಡಿಗಳು(ಭಾಗ – 8) – ಶೇಣಿ ಗೋಪಾಲಕೃಷ್ಣ ಭಟ್ 

(ಡಾ. ಶೇಣಿ ಗೋಪಾಲಕೃಷ್ಣ ಭಟ್ – ‘ಯಕ್ಷಗಾನ ಮತ್ತು ನಾನು’ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ – 1981)  

‘ಭೀಷ್ಮ ವಿಜಯ’ ಪ್ರಸಂಗದಲ್ಲಿ ಅಂಬೆಯ ಪಾತ್ರಧಾರಿಯು “ಕೇಳು ಭೀಷ್ಮಾಚಾರ್ಯ ಬಿನ್ನಪವ” ಎಂಬ ಪದ್ಯವನ್ನವಲಂಬಿಸಿ ಮೊದಲ ಹಂತದಲ್ಲೇ, ಮದುವೆಯ ಹಂದರಕ್ಕೆ ಬ್ರಹ್ಮಚರ್ಯ ನಿಷ್ಠೆಯುಳ್ಳ ಭೀಷ್ಮನ ಪ್ರವೇಶದ ಸಾಧುತ್ವವನ್ನೂ ರಾಕ್ಷಸ ವಿವಾಹ ಕ್ರಮವೆಂದಾದರೆ ತಮ್ಮನ ಬದಲಿಗೆ ಅಣ್ಣನು ಬರುವ ಧರ್ಮಪದ್ಧತಿಯನ್ನೂ ಅಕ್ಷೇಪಿಸಿ ಭೀಷ್ಮವಿಜಯ ಪ್ರಸಂಗದ ಸಮಗ್ರ ವಿಚಾರಮಂಥನಕ್ಕೆ ತೊಡಗಿದರೆ, ಭೀಷ್ಮನ ಪಾತ್ರಧಾರಿಯು ಅಲ್ಲೇ ಎಲ್ಲಕ್ಕೂ ಉತ್ತರಿಸಬೇಕೇ? ಬೇಡವೇ? ಎಂಬ ಜಿಜ್ನಾಸೆಯು ಒಂದೆರಡು ಸಲ ನನ್ನಲ್ಲಿ ಮೂಡಿದೆ. ಕೆಲವೊಮ್ಮೆ ಅಂಬೆಯ ಪಾತ್ರಧಾರಿಗಳಲ್ಲಿ ಈ ಕಾರಣದಿಂದ ವಿರಸವೂ ಉಂಟಾಗಿದೆ. ಏಕೆಂದರೆ ಅಂಬೆಯ ಪಾತ್ರದ ಚೌಕಟ್ಟಿನ ಹೊರಗಿನ ವಿಷಯಗಳಿವು.

ಆದುದರಿಂದಲೇ ಮುಂದೆ ಪರಶುರಾಮ, ಭೀಷ್ಮರ ವಾಗ್ವಾದದಲ್ಲಿ ಇತ್ಯರ್ಥವಾಗುವ ವಿಷಯಗಳಾಗಿ ಇವು ಪ್ರಸಂಗದಲ್ಲಿ ನಿರೂಪಿಸಲ್ಪಟ್ಟಿವೆಯೆಂಬುದು ನನ್ನ ಅಭಿಪ್ರಾಯ. ಹೀಗೆ ಪರಶುರಾಮ, ಭೀಷ್ಮರ ವಾದದಲ್ಲಿ ನಿರ್ಣಯಿಸಲ್ಪಡಬೇಕಾದ, ಭೀಷ್ಮನ ವ್ಯಕ್ತಿತ್ವವನ್ನು ಅಂಬೆಯೇ ಒರೆಗಲ್ಲಿಗೆ ಹಚ್ಚುವ ಪ್ರಯತ್ನಕ್ಕೆ ಅರ್ಥಧಾರಿಯು ಸಮರ್ಥನೆಂಬುದರಿಂದ ಮುಂದಾಗುವ ಸಾಹಸವು ಯಕ್ಷಗಾನದ ಸುಗಮ ಪಂಥವಾಗಲಾರದು; ಮಾತ್ರವಲ್ಲ ಆಗಲೂಬಾರದು.


ಮಾಯಾಮೃಗದ ಪ್ರಕರಣದಲ್ಲಿ ರಾಮನು, “ಸರಸಿಜಾಂಬಕಿ ನಿನ್ನ ಮರುಳು ಮಾಡಲು ಬಂದ ದುರುಳರ ಕಪಟ ಕಣೆ” ಎಂಬ ಪದ್ಯಕ್ಕೆ ಅರ್ಥವಿಸುವಾಗ, “ರಾಕ್ಷಸನ ಕೃತ್ರಿಮವಿದಾದರೆ ದುಷ್ಟದಮನ ನಿಮಗೆ ಕರ್ತವ್ಯವೆ ಅಗಿದೆಯಲ್ಲವೇ? ಹಾಗಿರುವಾಗ ನನ್ನ ಬಯಕೆಗಾಗಿ ಅಲ್ಲವೆಂದಾದರೂ, ಅದನ್ನು ಬೆನ್ನಟ್ಟಿ ಕೊಲ್ಲಲೇಬೇಕಾಗಿರುವ ನೀವು ಸುಮ್ಮನೆ ನನ್ನಲ್ಲಿ ಚರ್ಚಿಸುತ್ತಾ ಹೊತ್ತು ಕಳೆಯುವುದು ಸರಿಯೇ” ಎಂಬ ಪ್ರಸ್ತಾವನೆಯಿಂದ ಸೀತೆಯ ಅರ್ಥಧಾರಿ ರಾಮನನ್ನು ಅಕ್ಷೇಪಿಸಿ ಮಾತಾಡತೊಡಗಿದರೆ ಪ್ರಸಂಗದ ಗುರಿಯೇನಾದಿತೆಂಬ ವಿವೇಚನೆಯಿಲ್ಲದೆ ಅರ್ಥಧಾರಿಯೂ, ಇಂಥ ಮಾತುಗಳಿಗೆ ಚಪ್ಪಾಳೆ ತಟ್ಟುವ ಪ್ರೇಕ್ಷಕರೂ ಯಕ್ಷಗಾನ ಕ್ಷೇತ್ರದಲ್ಲಿ ಅಪಾಯಕಾರಿಗಳೆಂಬ ಮಾತು ಸ್ವಲ್ಪ ನಿಷ್ಠುರವಾದರೂ ಸತ್ಯವೆಂಬುದನ್ನು ವಿವೇಕಿಗಳು ಮರೆಯಬಾರದು”.

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (20-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (20-12-2020)
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ20-12-2020ಬಾಳ -ಕಾನ , ಸುರತ್ಕಲ್ – ‘ಕನಕಾಂಗಿ ಕಲ್ಯಾಣ- ಪುರುಷಾಮೃಗ’
ಕಟೀಲು ಒಂದನೇ ಮೇಳ20-12-2020ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರ 
ಕಟೀಲು ಎರಡನೇ ಮೇಳ 20-12-2020ಮುಖ್ಯರಸ್ತೆ, ವಿಟ್ಲ 
ಕಟೀಲು ಮೂರನೇ ಮೇಳ20-12-2020ಪೂರ್ಣಗಿರಿ, ಮುಲಾರ ಕೊಣಾಜೆ 
ಕಟೀಲು ನಾಲ್ಕನೇ ಮೇಳ 20-12-2020ಕಟೀಲು ಸೌಂದರ್ಯ ಪ್ಯಾಲೇಸ್ 
ಕಟೀಲು ಐದನೇ ಮೇಳ 20-12-2020ಅಬುರಮನೆ, ತೆಂಕಕಜೆಕಾರು, ವಯಾ ಪುಂಜಾಲಕಟ್ಟೆ 
ಕಟೀಲು ಆರನೇ ಮೇಳ20-12-2020ಕಟೀಲು ಕ್ಷೇತ್ರದಲ್ಲಿ  
ಮಂದಾರ್ತಿ ಒಂದನೇ ಮೇಳ 20-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 20-12-2020ಹೆದ್ದಾರಿಮಕ್ಕಿ , ಆವರ್ಸೆ
ಮಂದಾರ್ತಿ ಮೂರನೇ ಮೇಳ 20-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 20-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 20-12-2020ಶ್ರೀ ಕ್ಷೇತ್ರದಲ್ಲಿ  
ಶ್ರೀ ತಳಕಲ ಮೇಳ20-12-2020ಶ್ರೀ ಕ್ಷೇತ್ರದಲ್ಲಿ – ವಾಲಿ ಮೋಕ್ಷ  
ಶ್ರೀ ಮಾರಣಕಟ್ಟೆ ಮೇಳ ‘ಎ’20-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’20-12-2020ಕಂಬಳಗದ್ದೆಮನೆ, ದೇವಲ್ಕುಂದ  
ಶ್ರೀ ಮಾರಣಕಟ್ಟೆ ಮೇಳ ‘ಸಿ’20-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 20-12-2020ಶ್ರೀ ಕ್ಷೇತ್ರದಲ್ಲಿ – ಪಂಚವಟಿ, ವಾಲಿ ಸುಗ್ರೀವ, ತರಣಿಸೇನ
ಕಮಲಶಿಲೆ ಮೇಳ ‘ಎ’20-12-2020ಚಕ್ರಮೈದಾನ – ಎರಡೂ ಮೇಳಗಳ ಕೂಡಾಟ
ಕಮಲಶಿಲೆ ಮೇಳ ‘ಬಿ’20-12-2020ಚಕ್ರಮೈದಾನ – ಎರಡೂ ಮೇಳಗಳ ಕೂಡಾಟ
ಶ್ರೀ ಸಸಿಹಿತ್ಲು ಭಗವತೀ ಮೇಳ 20-12-2020ಪೊಳಲಿ ದೇವಸ್ಥಾನದ ವಠಾರದಲ್ಲಿ – ಅಬ್ಬರದ ಬೊಬ್ಬರ್ಯೆ
ಶ್ರೀ ಅಮೃತೇಶ್ವರೀ ಮೇಳ20-12-2020ಮಣೂರು, ಪಡುಕೆರೆ  
ಶ್ರೀ ಸೌಕೂರು ಮೇಳ20-12-2020ನಾಯಕ್ ವಾಡಿ , ಬೆಣಗೇರಿ – ‘ಪುಷ್ಪಚಂದನ’
ಶ್ರೀ ಹಾಲಾಡಿ ಮೇಳ20-12-2020ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಹಾಲಾಡಿ – ನೂತನ ಪ್ರಸಂಗ

ಬಡಗುತಿಟ್ಟು ಯಕ್ಷಗಾನದ ಹಾರಾಡಿ ತಿಟ್ಟು ಹಾಗೂ ಮಟಪಾಡಿ ತಿಟ್ಟುಗಳ ದಾಖಲೀಕರಣ – ಕರ್ನಾಟಕ ಯಕ್ಷಗಾನ ಅಕಾಡೆಮಿಯ ವಿಶಿಷ್ಟ ಕಾರ್ಯಕ್ರಮ 

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಮಿತ್ರ ಸಂಗಮ (ರಿ), ಬೀಜಾಡಿ, ಗೋಪಾಡಿ ಇದರ ಸಹಯೋಗದೊಂದಿಗೆ ವಿಶಿಷ್ಟವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಬಡಗು ತಿಟ್ಟು ಯಕ್ಷಗಾನ ಪರಂಪರೆಯ ಹಾರಾಡಿ ತಿಟ್ಟು ಮತ್ತು ಮಟಪಾಡಿ ತಿಟ್ಟುಗಳ ದಾಖಲೀಕರಣ ಪ್ರಕ್ರಿಯೆಯನ್ನು ಮೇಲಿನ ಎರಡೂ ಸಂಸ್ಥೆಗಳ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮ ೨೦. ೧೨. ೨೦೨೦ ರ ಆದಿತ್ಯವಾರದಂದು ಮದ್ಯಾಹ್ನ ಘಂಟೆ ೨. ೩೦ ರಿಂದ ಆರಂಭವಾಗಲಿದ್ದು ಉದ್ಘಾಟನಾ ಸಮಾರಂಭ, ಸಭಾ ಕಾರ್ಯಕ್ರಮಗಳ ನಂತರ ವಿಷಯ ಮಂಡನೆ, ಉಭಯ ತಿಟ್ಟುಗಳ ಪ್ರಾತ್ಯಕ್ಷಿಕೆ ನಡೆಯಲಿದ್ದು ಕೊನೆಯಲ್ಲಿ ಬಡಗು ತಿಟ್ಟಿನ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಕಾರ್ಯಕ್ರಮವು ಕುಂದಾಪುರದ ವಡೇರ ಹೋಬಳಿಯಲ್ಲಿರುವ ಶ್ರೀ ವ್ಯಾಸರಾಜ ಮಠದಲ್ಲಿ ನಡೆಯಲಿದೆ. ಕಲಾಸಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ, ದೇಲಂಪಾಡಿ, ಕಾಸರಗೋಡು ಸಂಸ್ಥೆಗೆ ‘ಶ್ರೀ ವಿಶ್ವೇಶತೀರ್ಥ’ ಪ್ರಶಸ್ತಿ

ಯಕ್ಷಗಾನ ಕಲಾರಂಗ (ರಿ.), ಉಡುಪಿ ಸಂಸ್ಥೆಯ ಆಶ್ರಯದಾತರಾಗಿದ್ದ, ಯತಿಶ್ರೇಷ್ಠ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹೆಸರಿನಲ್ಲಿ ನೀಡುತ್ತಾ ಬಂದ ಪ್ರಶಸ್ತಿಗೆ ಯಕ್ಷಗಾನ ಸಂಶೋಧನೆ, ಪ್ರದರ್ಶನ, ಕಾರ್ಯಗಾರಗಳ ಮೂಲಕ ನಿರಂತರ ಕ್ರಿಯಾಶೀಲವಾಗಿರುವ ಕಾಸರಗೋಡಿನ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಆಯ್ಕೆಯಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 26, ಶನಿವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಂಪನ್ನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ರೂಪಾಯಿ 50,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ.

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (19-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (19-12-2020)
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ19-12-2020ಗುರುವಾಯನಕೆರೆ, ಬದ್ಯಾರು, ಹಂಸಗಿರಿ – ಶಿವ ಕಾರುಣ್ಯ
ಕಟೀಲು ಒಂದನೇ ಮೇಳ19-12-2020ಕಿನ್ನಿಗೋಳಿ ಬಸ್ ಸ್ಟಾಂಡ್ 
ಕಟೀಲು ಎರಡನೇ ಮೇಳ 19-12-2020ಕೈಕಂಬ, ಗುರುಪುರ 
ಕಟೀಲು ಮೂರನೇ ಮೇಳ19-12-2020ಸಾದೂರು, ಅಡ್ಡೂರು
ಕಟೀಲು ನಾಲ್ಕನೇ ಮೇಳ 19-12-2020ತೆಂಕುಳಿಪಾಡಿ, ಮಳಲಿ 
ಕಟೀಲು ಐದನೇ ಮೇಳ 19-12-2020ಯೆಯ್ಯಾಡಿ 
ಕಟೀಲು ಆರನೇ ಮೇಳ19-12-2020ಉಜ್ಜೋಡಿ, ಗೋರಿಗುಡ್ಡೆ  
ಮಂದಾರ್ತಿ ಒಂದನೇ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ  
ಶ್ರೀ ತಳಕಲ ಮೇಳ19-12-2020ಶ್ರೀ ಕ್ಷೇತ್ರದಲ್ಲಿ – ಕುಶ ಲವ ಕಾಳಗ 
ಶ್ರೀ ಸುಂಕದಕಟ್ಟೆ ಮೇಳ 19-12-2020ಮೂಡುಶೆಡ್ಡೆ, ಎದುರುಪದವು – ಬಪ್ಪನಾಡು ಕ್ಷೇತ್ರ ಮಹಾತ್ಮೆ  
ಶ್ರೀ ಮಾರಣಕಟ್ಟೆ ಮೇಳ ‘ಎ’19-12-2020ಮುಳ್ಳುಗುಡ್ಡೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’19-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’19-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ – ಕುಮಾರ ವಿಜಯ
ಶ್ರೀ ಹಟ್ಟಿಯಂಗಡಿ ಮೇಳ19-12-2020ನೆಲ್ಲಿಕಟ್ಟೆ  –  ‘ದಿವ್ಯ ಸನ್ನಿಧಿ’ 
ಕಮಲಶಿಲೆ ಮೇಳ ‘ಎ’19-12-2020ಬೆಳ್ವೆ 
ಕಮಲಶಿಲೆ ಮೇಳ ‘ಬಿ’19-12-2020ಅಗ್ರಹಾರ, ಆರ್ಗ, ತೀರ್ಥಹಳ್ಳಿ 
ಶ್ರೀ ಬಪ್ಪನಾಡು ಮೇಳ19-12-2020ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮುಗುಳಿ, ಸಜಿಪಮುನ್ನೂರು – ಬಂಗಾರ್ ಬಾಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ 19-12-2020ಕುತ್ತೆತ್ತೂರು ಆಶ್ರಯ ಕಾಲನಿ ಮುಂಭಾಗದ ಮೈದಾನ – ಮುಕುಂದ ಮುರಾರಿ 
ಶ್ರೀ ಬೋಳಂಬಳ್ಳಿ ಮೇಳ 19-12-2020ಖಂಬದಕೋಣೆ 
ಶ್ರೀ ಸೌಕೂರು ಮೇಳ19-12-2020ಸೌಕೂರು ಭಂಡಾರರ ಮನೆ – ‘ಪುಷ್ಪಚಂದನ’
ಶ್ರೀ ಹಾಲಾಡಿ ಮೇಳ19-12-2020ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಾರಿಕಾನು – ನೂತನ ಪ್ರಸಂಗ 

ತೆಂಕುತಿಟ್ಟು ಯಕ್ಷಗಾನದ ಹವ್ಯಾಸಿ ಭಾಗವತರು  ಡಾ. ಸುಬ್ರಹ್ಮಣ್ಯ ಪದ್ಯಾಣ 

“ಆ ಕಿರೀಟಿಯು ನುಡಿದುದಂ ಕೇಳ್ದು ನಗುತ ಕರುಣಾಕರಂ ಪೇಳ್ದ” ಎಂದು ಕರ್ಣ ಪರ್ವದ ಈ ಪದ್ಯವನ್ನು ಪಿಕವ ನಾಚಿಸುವ ತೆರದಿ ಕಲ್ಯಾಣಿ, ಚಾರುಕೇಶಿ ರಾಗದಲ್ಲಿ ತನ್ನ ಕೋಗಿಲೆಯ ಕಂಠದಿಂದ ಹಾಡಿದರೆ ನಾವು ಎಷ್ಟೊಂದು ತಲ್ಲೀನತೆಯಿಂದ ಕೇಳುತ್ತೇವೆ. ತಮ್ಮ ಸುಮಧುರವಾದ ಗಾಯನದಿಂದ ಎಂತಹ ಕಲ್ಲು ಮನಸ್ಸಿನವರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಶಕ್ತಿ ಯಕ್ಷಗಾನಕ್ಕಿದೆ. ಅಂತಹ ಶೃತಿ, ಲಯ ಬದ್ದ ಪರಂಪರೆಯ ಹವ್ಯಾಸಿ ಭಾಗವತರಾಗಿ ಡಾ.  ಸುಬ್ರಹ್ಮಣ್ಯ ಪದ್ಯಾಣರವರನ್ನು ಕಾಣಬಹುದು. ಪದ್ಯಾಣ ಕುಟುಂಬದಲ್ಲಿ ಇರುವವರು ಎಲ್ಲರೂ ಸಂಗೀತ, ಗಮಕ, ಭಜನೆ, ಯಕ್ಷಗಾನ ಮುಂತಾದ ಕಲಾ ಪ್ರಕಾರದಲ್ಲಿ ಇರುವುದು ಹೆಮ್ಮೆಯ ವಿಷಯವಾಗಿದೆ. 


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಹವ್ಯಕ ಬ್ರಾಹ್ಮಣ ಮನೆತನದ ಪದ್ಯಾಣ ತಿಮ್ಮಣ್ಣ ಭಟ್ ಮತ್ತು ತಾಯಿ ಈಶ್ವರಿಯವರ ಮೂರು ಜನ ಮಕ್ಕಳಲ್ಲಿ ಹಿರಿಯವರಾಗಿ 02-08-1971ರಲ್ಲಿ ಜನಿಸಿದರು. ಪ್ರಾಥಮಿಕ ವಿಧ್ಯಾಭಾಸವನ್ನು ಕನ್ಯಾನ, ಮಿತ್ತನಡ್ಕ ಶಾಲೆ, ಪ್ರೌಢ ಶಿಕ್ಷಣವನ್ನು ಮಂಗಳೂರು ರಾಮಕೃಷ್ಣ ಆಶ್ರಮದಲ್ಲಿದ್ದು ಅಲ್ಲಿ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಕಾಸ್ಸಿಯಾ ಪ್ರೌಢ ಶಾಲೆಯಲ್ಲಿ ಕಲಿತು, ನಂತರ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಪೂರ್ವ ಹಾಗು ಬಿಎಸ್ಸಿ ಪದವಿಯನ್ನು ಪಡೆದರು. ಕೊಪ್ಪ ಆರೂರು ಲಕ್ಷ್ಮೀ ನಾರಾಯಣ ರಾವ್ ಮೆಮೋರಿಯಲ್ ಆಯುರ್ವೇದ ಕಾಲೇಜಿನಲ್ಲಿ ಬಿಎಯಂಯಸ್ ಪದವಿ, ಹೈದರಾಬಾದ್ ನ ಸರಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಎನ್. ಟಿ. ಆರ್. ಆರೋಗ್ಯ ವಿಶ್ವ ವಿದ್ಯಾನಿಲಯದಿಂದ ಎಂ.ಡಿ. ಪದವಿಯನ್ನೂ,  ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಪಿಎಚ್ ಡಿ ( ಡಾಕ್ಟರೇಟ್) ಪದವಿಯನ್ನು ಪಡೆದವರಲ್ಲಿ ಮೊದಲಿಗರು ಎಂಬ ಖ್ಯಾತಿಯನ್ನು ಪಡೆದಿದ್ದಾರೆ. 

2001ರಿಂದ ಮೂಡಬಿದರೆಯ ಅಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ದ್ರವ್ಯಗುಣ  ವಿಭಾಗದಲ್ಲಿ ಉಪನ್ಯಾಸ ವೃತ್ತಿಯನ್ನು ಮಾಡುತ್ತಿದ್ದರು. ಪ್ರಸ್ತುತ ಅದೇ ಕಾಲೇಜಿನ ರಿಸರ್ಚ್ ಸೆಂಟರಿನ ನಿರ್ದೇಶಕರಾಗಿ, ದ್ರವ್ಯಗುಣ ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಔಷಧೀಯ ಸಸ್ಯಗಳ ಆಳವಾದ ಅಧ್ಯಯನ, ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವ ದಾಖಲೀಕರಣ,  ಸಂಶೋಧನೆ ಅಲ್ಲದೇ, ಮೂಡಬಿದಿರೆಯ ಅಭಿರಾಮ ಆಯುರ್ವೇದ ಕ್ಲಿನಿಕ್ ನಲ್ಲಿ ವಿವಿಧ ವ್ಯಾಧಿಗಳಿಗೆ ಶುದ್ಧ ಆಯುರ್ವೇದ ಚಿಕಿತ್ಸೆಯನ್ನೂ ನೀಡುತ್ತಾ ಜನಾನುರಾಗಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. 


ಶ್ರೀಯುತರು ಎಳವೆಯಲ್ಲೇ ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.  ತನ್ನ ತಂದೆ, ಚಿಕ್ಕಪ್ಪಂದಿರಿಂದ ಸಂಗೀತ ಕೇಳಿ ಅನುಭವಿಸಿ ವಿವಿಧ ರಾಗಗಳನ್ನು ಸಿದ್ಧಿಸಿ ಯಕ್ಷಗಾನದಲ್ಲಿ ಪ್ರಾಯೋಗಿಕವಾಗಿ ಯಶಸ್ಸನ್ನು ಕಂಡರು. ಇವರು ಮಾಂಬಾಡಿ ನಾರಾಯಣ ಭಾಗವತರಿಂದ ಯಕ್ಷಗಾನ ಭಾಗವತಿಕೆಯ ಮೊದಲ ಪಾಠವನ್ನು ಆರಂಭಿಸಿ ಮುಂದೆ ಅವರ ಮಗ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರವರಿಂದ  ಯಕ್ಷಗಾನ ಭಾಗವತಿಕೆಯನ್ನು ಕಲಿತರು.

ತೆಂಕುತಿಟ್ಟಿನ ಹೆಜ್ಜೆಯನ್ನು ಸಹ ಕಲಿತು, ತನ್ನ ಮೊದಲ ಯಕ್ಷಗಾನ ವೇಷವನ್ನು ತಾನು ಬಾಲಕನಾಗಿದ್ದಾಗ ಮಿತ್ತನಡ್ಕ ಶಾಲೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಕರಾಕ್ಷ ಕಾಳಗದ “ದುರ ದುರಂಧರನೆ ಕೇಳು” ಎಂದು ದೊಡ್ಡಪ್ಪ ರಾವಣೇಶ್ವರನಲ್ಲಿ ಪ್ರತಿಜ್ಞಾ ಬದ್ಧನಾಗಿ ಯುದ್ಧಕ್ಕೆ ಹೋಗುವ ಕಲಿ ಮಕರಾಕ್ಷನ ಪಾತ್ರದಲ್ಲಿ ರಂಗಸ್ಥಳ ಪ್ರವೇಶ ಮಾಡಿ ಪ್ರಥಮ ಪ್ರದರ್ಶನದಲ್ಲೇ ತನ್ನ ಸಾಮರ್ಥ್ಯದ ಅನಾವರಣ ಮಾಡಿದರು. ಮುಂದೆ ಕಾಲೇಜು ಜೀವನ ಹಾಗೂ ನಂತರದಲ್ಲಿ ದೇವೇಂದ್ರ, ಮುರಾಸುರ, ಅರ್ಜುನ ಮುಂತಾದ ಕಿರೀಟ ವೇಷಗಳನ್ನು ಮಾಡಿ ವಿಜೃಂಭಿಸಿದರು.

ಪ್ರಸಿದ್ಧ ಗಮಕಿಗಳಾದ ಚಿಕ್ಕಪ್ಪ ಗಣಪತಿ ಪದ್ಯಾಣ ಹಾಗೂ ಮಧೂರು ಮೋಹನ ಕಲ್ಲೂರಾಯರಿಂದ ಗಮಕ ಅಭ್ಯಸಿಸಿ ಕರ್ನಾಟಕ ಗಮಕ ಕಲಾ ಪರಿಷತ್ ನಡೆಸುವ ಗಮಕ ಪಾರೀಣ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಮಂಗಳೂರು ಆಕಾಶವಾಣಿಯಲ್ಲಿ ಗಮಕ ಕಲಾವಿದರಾಗಿ ಕಾರ್ಯಕ್ರಮ ನೀಡುತ್ತಾ ಸರ್ವಮಾನ್ಯರಾಗಿದ್ದಾರೆ. ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಗಣಪತಿ ಭಟ್, ಬಲಿಪ ನಾರಾಯಣ ಭಾಗವತರು, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಕುರಿಯ ಗಣಪತಿ ಶಾಸ್ತ್ರಿಗಳು ಹಾಗೂ ಪದ್ಯಾಣ ಕುಟುಂಬದವರ ಸಮಗ್ರ ಪ್ರೋತ್ಸಾಹ,  ಮಾರ್ಗದರ್ಶನದಿಂದ ಯಕ್ಷಗಾನ ಭಾಗವತರಾಗಿ ರೂಪಗೊಂಡರು.

ಶ್ರೀಯುತರು ನಾಟಿ, ಕಾಂಬೋಧಿ, ಹಿಂದೋಳ, ಮದುವಂತಿ, ಆರಭಿ, ಮಧ್ಯಮಾವತಿ, ಅಠಾಣ, ಕೇದಾರಗೌಳ,  ಶಂಕರಾಭರಣ ಸಿಂಧೂ ಭೈರವಿ, ಭೈರವಿ, ಆನಂದ ಭೈರವಿ,  ಹಂಸಧ್ವನಿ,  ಕಲ್ಯಾಣಿ, ಮೋಹನ, ಶುದ್ಧ ಸಾವೇರಿ, ಸಾರಂಗ, ಶುಭ ಪಂತುವರಾಳಿ, ಸಿಂಹೇಂದ್ರ ಮಧ್ಯಮ, ಖರಹರ ಪ್ರಿಯ,  ವೃಂದಾವನ ಸಾರಂಗ, ಯಮನ್‌ ಕಲ್ಯಾಣಿ, ರೇವತಿ, ಚಾರುಕೇಶಿ, ಶಿವರಂಜಿನಿ, ರೇವತಿ, ಸಾರಮತಿ, ಕಲ್ಯಾಣ ವಸಂತ, ದೇಶ್,  ತೋಡಿ, ಕಾನಡ, ದೇವಗಾಂಧಾರ, ಬೇಗಡೆ,  ಬೇಹಾಗ್ ಮುಂತಾದ ನೂರಕ್ಕೂ ಹೆಚ್ಚು ರಾಗಗಳ ಜ್ಞಾನವನ್ನು ಹೊಂದಿದ್ದು ನವರಸಗಳಲ್ಲಿ ಸಂದರ್ಭಾನುಸಾರ ಹಾಡುವುದರಲ್ಲಿ ನಿಷ್ಣಾತರು.  ಶ್ರೀಯುತರು “ಸತ್ಯ ಹರಿಶ್ಚಂದ್ರ” ಪ್ರಸಂಗದಲ್ಲಿ “ಎಂದು ಪೇಳುತ ಭೂಪನಂದು ತಾನಾಳ್ವ ಸುಂಧರೆ ದ್ರವ್ಯಗಳ|” ಎಂದು ಕೇಧಾರಗೌಳ ರಾಗದ ಮಟ್ಟಿನಲ್ಲಿ ಅಷ್ಟತಾಳದಲ್ಲಿ ಹಾಡಿದರೆ ಪ್ರೇಕ್ಷಕರು ಮಂತ್ರ ಮುಗ್ದರಾಗುತ್ತಾರೆ.

ಅಲ್ಲದೆ ಶನೀಶ್ವರ ಮಹಾತ್ಮೆಯ ಪ್ರಸಂಗದ “ಏನಿದು ಶನಿರಾಯ ನಿನ್ನನು ಕಾಣೆನು ಮಹನೀಯ” ಎಂದು ಸುರುಟಿ ರಾಗದ ಮಟ್ಟಿನಲ್ಲಿ ಏಕತಾಳದಲ್ಲಿ ಹಾಡಿದರೆ ಕರ್ಣಾನಂದಕರವಾಗಿರುತ್ತದೆ. ಶ್ರೀರಾಮ ನಿರ್ಯಾಣ ಪ್ರಸಂಗದ “ಜನಪ ಕುಲಮಣಿ ರಾಮಚಂದ್ರನು” ಇತ್ಯಾದಿಯಾಗಿ ಒಂದೇ ಪದ್ಯವನ್ನು ಸೌರಾಷ್ಟ್ರ, ನಾಟಿ ಅಥವಾ ಕಲ್ಯಾಣಿ ಆದಿ ವಿವಿಧ ರಾಗಗಳಲ್ಲಿ ಭಾವ, ರಸಗಳಿಗೆ ಚ್ಯುತಿ ಬರದಂತೆ ಹಾಡಿ ತೋರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. 
 

ಹಾಡುಗಾರಿಕೆಯಲ್ಲಿ ಯಾರದೇ ಅನುಕರಣೆಯಿಲ್ಲದೆ ಮಾಂಬಾಡಿ ಮಟ್ಟು, ಪದ್ಯಾಣ ಗಣಪತಿ ಭಟ್ಟರ ಛಾಯೆಯಿದ್ದರೂ ರಾಗ ಸಂಯೋಜನೆ, ಹಾಡಿನಲ್ಲಿ ತನ್ನದೇ ಆದ ಸ್ವಂತಿಕೆಯನ್ನೂ ಬಿಂಬಿಸುತ್ತಾರೆ. ಅದಕ್ಕಾಗಿ ಇವರು ವಿಶೇಷವೆನಿಸಿದ್ದಾರೆ. ಶ್ರೀಯುತರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ. ಮೋಹನ್ ಆಳ್ವರ ಪ್ರೋತ್ಸಾಹ, ಹಾಗಯೇ ಮೂಡಬಿದರೆಯಲ್ಲಿ ಯಕ್ಷೋಪಾಸನಮ್ ಸಂಘದ ಕಲಾವಿದರು, ಎಂ. ಶಾಂತಾರಾಮ ಕುಡ್ವರು, ದೇವಾನಂದ ಭಟ್ ಮುಂತಾದವರ ಒಡನಾಟ  ಮತ್ತು ಪ್ರಭಾಕರ ಜೋಷಿ,  ಸುಣ್ಣಂಬಳ ವಿಶ್ವೇಶ್ವರ ಭಟ್, ವಿಟ್ಲ ಶಂಭು ಶರ್ಮ, ಉಜಿರೆ ಅಶೋಕ ಭಟ್, ವಾಸುದೇವ ರಂಗ ಭಟ್, ಸುಬ್ರಾಯ ಹೊಳ್ಳ,  ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ಎಂ. ವಾಸುದೇವ ಸಾಮಗರು  ಮುಂತಾದವರೊಂದಿಗೆ ಆಟ-ಕೂಟಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು ಅಲ್ಲದೇ ಅವರೆಲ್ಲರೂ ಶ್ರೀಯುತರ ಭಾಗವತಿಕೆಗೆ ಸ್ಪೂರ್ತಿಯಾದರು.

ಯಕ್ಷಗಾನವನ್ನು ಪ್ರವೃತ್ತಿಯಾಗಿ ತೆಗೆದುಕೊಂಡು ವಾರದಲ್ಲಿ ಎರಡು ದಿನ ಕಲೆಗೆ ಮೀಸಲಿಟ್ಟಿದ್ದೇನೆ ಎಂದು ಡಾ. ಪದ್ಯಾಣರು ಸಂತೋಷದಿಂದ ಹೇಳುತ್ತಿದ್ದರು. ಇವರ ಪ್ರತಿಭೆಯನ್ನು ಗುರುತಿಸಿ ಅಲ್ಲಲ್ಲಿ ಸಂಘ ಸಂಸ್ಥೆಗಳು ಸನ್ಮಾನ, ಗೌರವಗಳು ಅರಸಿ ಬಂದಿದೆ. ಹೊಸನಗರದ ರಾಘವೇಶ್ವರ ಶ್ರೀಗಳು ಹಾಗು ಒಡಿಯೂರಿನ ಶ್ರೀ ಗುರು ದೇವಾನಂದ ಸ್ವಾಮಿಗಳಿಂದ, ಮತ್ತು ಅಖಿಲ ಹವ್ಯಕ ಸಭಾ ಮುಂತಾದವರಿಂದ ಆಶೀರ್ವಾದ ಪೂರ್ವಕ ಸನ್ಮಾನ ಗಳು ನಡೆದಿವೆ. ಡಾ. ಸೌಮ್ಯ ಸರಸ್ವತಿ ಅವರನ್ನು ಪಾಣಿಗ್ರಹಣ ಮಾಡಿ ಕುಲದೀಪಕರಾದ ಪ್ರಣವ ಭಟ್ ಹಾಗು ಆತ್ರೇಯ ಭಟ್ ರೊಂದಿಗೆ ಮೂಡಬಿದರೆಯಲ್ಲಿ ಸುಖಿ ಜೀವನ ನಡೆಸುತ್ತಿದ್ದಾರೆ.  

ಡಾ. ಪದ್ಯಾಣರ ಸಂಪರ್ಕ ದೂರವಾಣಿ ಸಂಖ್ಯೆ – 9448327156

ಲೇಖಕ: ಚಾರ ಪ್ರದೀಪ ಹೆಬ್ಬಾರ್

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (18-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (18-12-2020)
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ18-12-2020ಚಂದ್ಕೂರು ದೇವಸ್ಥಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳ18-12-2020ಕಾವೂರು 
ಕಟೀಲು ಎರಡನೇ ಮೇಳ 18-12-2020ಕಟೀಲು ಕ್ಷೇತ್ರದಲ್ಲಿ 
ಕಟೀಲು ಮೂರನೇ ಮೇಳ18-12-2020ಶ್ರೀನಿವಾಸ ನಗರ, ಸುರತ್ಕಲ್ 
ಕಟೀಲು ನಾಲ್ಕನೇ ಮೇಳ 18-12-2020ಪಂಜ ಕೊಯಿಕುಡೆ,ಸ್ ವಯಾ ಹಳೆಯಂಗಡಿ 
ಕಟೀಲು ಐದನೇ ಮೇಳ 18-12-2020ಕೊರಗಜ್ಜ ಮಂತ್ರದೇವತೆ ಸನ್ನಿಧಿ, ಉಲ್ಲಂಜೆ, ಕಟೀಲು 
ಕಟೀಲು ಆರನೇ ಮೇಳ18-12-2020ಸಂಶುದ್ದೀನ್ಕು ಸರ್ಕಲ್ ಬಳಿ, ಕುತ್ತೆತ್ತೂರು, ಕಾಟಿಪಳ್ಳ 
ಮಂದಾರ್ತಿ ಒಂದನೇ ಮೇಳ 18-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 18-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 18-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 18-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 18-12-2020ಶ್ರೀ ಕ್ಷೇತ್ರದಲ್ಲಿ  
ಶ್ರೀ ಮಾರಣಕಟ್ಟೆ ಮೇಳ ‘ಎ’18-12-2020ಶ್ರೀ ಕ್ಷೇತ್ರದಲ್ಲಿ -ಎರಡೂ ಮೇಳಗಳ ಕೂಡಾಟ 
ಶ್ರೀ ಮಾರಣಕಟ್ಟೆ ಮೇಳ ‘ಬಿ’18-12-2020ಶ್ರೀ ಕ್ಷೇತ್ರದಲ್ಲಿ -ಎರಡೂ ಮೇಳಗಳ ಕೂಡಾಟ 
ಶ್ರೀ ಮಾರಣಕಟ್ಟೆ ಮೇಳ ‘ಸಿ’18-12-2020ಶ್ರೀ ಕ್ಷೇತ್ರದಲ್ಲಿ -ಎರಡೂ ಮೇಳಗಳ ಕೂಡಾಟ 
ಶ್ರೀ ಪಾವಂಜೆ ಮೇಳ 18-12-2020ಶ್ರೀ ಕ್ಷೇತ್ರದಲ್ಲಿ – ಕೃಷ್ಣಲೀಲೆ, ಕಂಸವಧೆ, ಕೃಷ್ಣಾರ್ಜುನ
ಶ್ರೀ ಹಟ್ಟಿಯಂಗಡಿ ಮೇಳ18-12-2020ಶ್ರೀ ಮಹಾಗಣಪತಿ ದೇವಸ್ಥಾನ, ಹೆರಗುಳಿ –  ‘ದಿವ್ಯ ಸನ್ನಿಧಿ’ 
ಕಮಲಶಿಲೆ ಮೇಳ ‘ಎ’18-12-2020ಮಹಾಕಾಳಿ ದೇವಸ್ಥಾನ, ರಾಮನಕೂಡ್ಲು 
ಕಮಲಶಿಲೆ ಮೇಳ ‘ಬಿ’18-12-2020ಸ್ಫೂರ್ತಿ ಯುವಕ ಮಂಡಾಳ, ಹೊಸಬಾಳು 
ಶ್ರೀ ಸಸಿಹಿತ್ಲು ಭಗವತೀ ಮೇಳ 18-12-2020ಶ್ರೀ ಕ್ಷೇತ್ರದಲ್ಲಿ – ಅಪ್ಪೆಭೂಮಿ (ತುಳು
ಶ್ರೀ ಅಮೃತೇಶ್ವರೀ ಮೇಳ18-12-2020ಶ್ರೀ ಕ್ಷೇತ್ರದಲ್ಲಿ – ಪ್ರಥಮ ದೇವರ ಸೇವೆ ಆಟ
ಶ್ರೀ ಬೋಳಂಬಳ್ಳಿ ಮೇಳ 18-12-2020ಶ್ರೀ ಕ್ಷೇತ್ರದಲ್ಲಿ – ದೇವರ ಸೇವೆ
ಶ್ರೀ ಸೌಕೂರು ಮೇಳ18-12-2020ಶ್ರೀ ಕ್ಷೇತ್ರದಲ್ಲಿ – ದೇವರ ಸೇವೆ ಆಟ 
ಶ್ರೀ ಹಾಲಾಡಿ ಮೇಳ18-12-2020ಶ್ರೀ ಕ್ಷೇತ್ರದಲ್ಲಿ – ಪ್ರಥಮ ದೇವರ ಸೇವೆ ಆಟ