Friday, August 28, 2026
Home Blog Page 362

ಮೇಳಗಳ ಇಂದಿನ (04.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (04.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ04.01.2021ತ್ರಾಸಿ – ಕಂಸ ವಿವಾಹ, ಇಂದ್ರಜಿತು ಕಾಳಗ 
ಕಟೀಲು ಒಂದನೇ ಮೇಳ04.01.2021ಕಟೀಲು ಕ್ಷೇತ್ರದಲ್ಲಿ 
ಕಟೀಲು ಎರಡನೇ ಮೇಳ 04.01.2021ಒಡ್ಡೂರು, ವಯಾ ಗಂಜಿಮಠ 
ಕಟೀಲು ಮೂರನೇ ಮೇಳ04.01.2021ಕಟೀಲು ಸೌಂದರ್ಯ ಪ್ಯಾಲೇಸ್ 
ಕಟೀಲು ನಾಲ್ಕನೇ ಮೇಳ 04.01.2021ಕುಲ್ಲಂಗಾವು ಕೋಟೆ, ಸೂರಿಂಜೆ 
ಕಟೀಲು ಐದನೇ ಮೇಳ 04.01.2021ನಾಯರ್ ಜಪ್ಪು, ತಾಳಿಪಾಡಿ, ಐಕಳ 
ಕಟೀಲು ಆರನೇ ಮೇಳ04.01.2021ಕಾಪಿಕಾಡುಗುಡ್ಡೆ, ಕೆಂಜಾರು ಜೋಕಟ್ಟೆ  
ಮಂದಾರ್ತಿ ಒಂದನೇ ಮೇಳ 04.01.2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 04.01.2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 04.01.2021ಕಾಜ್ರಳ್ಳಿ, ಕಾಲ್ಬೆಟ್ಟು, ಶಿರಿಯಾರ 
ಮಂದಾರ್ತಿ ನಾಲ್ಕನೇ ಮೇಳ 04.01.2021ಹಾನಾಡಿ ಹಾದಿಮನಿ, ಬೇಳಂಜೆ 
ಮಂದಾರ್ತಿ ಐದನೇ ಮೇಳ 04.01.2021ಶ್ರೀ ಕ್ಷೇತ್ರದಲ್ಲಿ 
ಶ್ರೀ ಹನುಮಗಿರಿ ಮೇಳ 04.01.2021ಪುತ್ತೂರು ನಟರಾಜ ವೇದಿಕೆ – ಶುಕ್ರನಂದನೆ 
ಶ್ರೀ ತಳಕಲ ಮೇಳ04.01.2021ಶ್ರೀ ಕ್ಷೇತ್ರದಲ್ಲಿ – ಕರ್ಣಾರ್ಜುನ 
ಶ್ರೀ ಮಾರಣಕಟ್ಟೆ ಮೇಳ ‘ಎ’04.01.2021ಕೆಳಾಮನೆ, ಆಲೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’04.01.2021ಕೆಳಾಮನೆ, ಕಾಲ್ತೋಡು 
ಶ್ರೀ ಮಾರಣಕಟ್ಟೆ ಮೇಳ ‘ಸಿ’04.01.2021ಮಲ್ಲಾರಿ ಕೆಂಚನೂರು 
ಶ್ರೀ ಪಾವಂಜೆ ಮೇಳ 04.01.2021ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಕುರಿಯ, ಪುತ್ತೂರು – ಮಾತಂಗ ಕನ್ಯೆ 
ಶ್ರೀ ಹಟ್ಟಿಯಂಗಡಿ ಮೇಳ04.01.2021ಶ್ರೀ ಅಯ್ಯಪ್ಪ ಸನ್ನಿಧಿ, ಗಾಂಧಿಮೈದಾನ, ಬ್ರಹ್ಮಾವರ – ಕೊರಾಳ ಚಿಕ್ಕಮ್ಮ
ಕಮಲಶಿಲೆ ಮೇಳ ‘ಎ’04.01.2021ಸಿದ್ಧಾಪುರ
ಕಮಲಶಿಲೆ ಮೇಳ ‘ಬಿ’04.01.2021ಹುಣಸೆಮಕ್ಕಿ
ಶ್ರೀ ಬಪ್ಪನಾಡು ಮೇಳ04.01.2021ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ – ಶ್ರೀನಿವಾಸ ಕಲ್ಯಾಣ 
ಶ್ರೀ ಅಮೃತೇಶ್ವರೀ ಮೇಳ04.01.2021ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ, ಬೆಣ್ಣೆಕುದ್ರು, ಬಾರ್ಕೂರು 
ಶ್ರೀ ಬೋಳಂಬಳ್ಳಿ ಮೇಳ 04.01.2021ನೈಕನಕಟ್ಟೆ 
ಶ್ರೀ ಸೌಕೂರು ಮೇಳ04.01.2021ಗುಡ್ಡೆಯಂಗಡಿ ಯಡಾಡಿ, ಮತ್ಯಾಡಿ – ಬೇಲ್ತೂರು ಕ್ಷೇತ್ರ ಮಹಾತ್ಮೆ
ಶ್ರೀ ಹಾಲಾಡಿ ಮೇಳ04.01.2021ಕಟ್ಕೇರಿ ಶಾಲಾ ವಠಾರ 
ಶ್ರೀ ಬೆಂಕಿನಾಥೇಶ್ವರ ಮೇಳ  04.01.2021ಕುಂಭಾಶಿ ಬಬ್ಬರ್ಯ ದೈವಸ್ಥಾನದ ವಠಾರದಲ್ಲಿ – ಶ್ರೀ ದೇವಿ ಲೀಲಾಮೃತಂ 
ಶ್ರೀ ಮಡಾಮಕ್ಕಿ ಮೇಳ04.01.2021ಮಾಂಡಿಮೂರುಕೈ ಶಾಲಾ ವಠಾರ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ04.01.2021ಬಡಾನಿಡಿಯೂರು ಕದಿಕೆ – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳ04.01.2021ಶ್ರೀ ಕ್ಷೇತ್ರದಲ್ಲಿ ಸೇವೆ ಆಟ 

ಮಜ್ಜಿಗೆಬೈಲು ಆನಂದ ಶೆಟ್ಟಿಯವರಿಗೆ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ 2021

ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲೋರ್ವರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ 2021 ರ ಸಾಲಿನ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದರಾದ ಮಜ್ಜಿಗೆಬೈಲು ಆನಂದ ಶೆಟ್ಟಿಯವರಿಗೆ ನೀಡಿ ಗೌರವಿಸಲಾಗುವುದು.

ಸಾಲಿಗ್ರಾಮ ಮಕ್ಕಳ ಮೇಳ ಟ್ರಸ್ಟ್ ನ ಕಾರ್ಯಾಧ್ಯಕ್ಷ ಕೆ. ಮಹೇಶ ಉಡುಪ ಮಂದರ್ತಿ, ಅಧ್ಯಕ್ಷ ಬಲರಾಮ ಕಲ್ಕೂರ, ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆಯವರನ್ನೊಳಗೊಂಡ ಸಮಿತಿ, ಉಡುಪ ಪ್ರಶಸ್ತಿಗೆ ಆನಂದ ಶೆಟ್ಟಿಯವರನ್ನು ಆಯ್ಕೆಮಾಡಿದೆ.

ಸುಮಾರು 76 ರ ಹರಯದ ಆನಂದ ಶೆಟ್ಟಿಯವರು ಕೊಡವೂರು, ಪೆರ್ಡೂರು, ಗೋಳಿಗರಡಿ, ಅಮೃತೇಶ್ವರಿ, ಸಾಲಿಗ್ರಾಮ, ಮಾರಣಕಟ್ಟೆ, ಮಂದರ್ತಿ ಮೇಳಗಳಲ್ಲಿ ಸುಮಾರು 50 ವರ್ಷಗಳ ಕಾಲ ಹಾರಾಡಿ-ಮಟ್ಪಾಡಿ ಯಕ್ಷ ತಿಟ್ಟುಗಳ ಸಮನ್ವಯ ಸಾಧಿಸಿ ರಂಗದಲ್ಲಿ ಮೆರೆದವರು. ಮೇಳದಿಂದ ನಿವೃತ್ತರಾದರೂ ಅವರ ಪುಷ್ಕಳ, ಕೃಷ್ಣ, ಜಾಂಬವ, ಕರ್ಣ, ಮಾರ್ತಾಂಡ ತೇಜ, ರಾವಣ, ಚಿತ್ರಸೇನ ಮೊದಲಾದ ಪಾತ್ರ ಜನಮಾನಸದಲ್ಲಿ ನೆಲೆನಿಂತಿವೆ.

ಜನವರಿ 14, 2021 ಗುರುವಾರದಂದು ಗಣ್ಯರ ಸಮ್ಮುಖದಲ್ಲಿ ಆನಂದ ಶೆಟ್ಟಿಯವರನ್ನು ಗೌರವ ಧನದೊಂದಿಗೆ ಉಡುಪ ಪ್ರಶಸ್ತಿಯಿತ್ತು ಗೌರವಿಸಲಾಗುವುದೆಂದು ಸಾಲಿಗ್ರಾಮ ಮಕ್ಕಳ ಮೇಳ ಟ್ರಸ್ಟ್ ಕಾರ್ಯದರ್ಶಿ ಸುಜಯೀಂದ್ರ ಹಂದೆ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಳಗಳ ಇಂದಿನ (03.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (03.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ03.01.2021ಬಸ್ರೂರು ಮಾರ್ಗೋಳಿ ಶ್ರೀ ಲಕ್ಷ್ಮಿ ನರಸಿಂಹ  ಕಾರ್ಖಾನೆ ವಠಾರ – ಹನುಮೋದ್ಭವ -ಚೂಡಾಮಣಿ-ಲಂಕಾದಹನ 
ಕಟೀಲು ಒಂದನೇ ಮೇಳ03.01.2021ಮಾಡೂರು,ಕೋಟೆಕಾರ್ ಬೀರಿ 
ಕಟೀಲು ಎರಡನೇ ಮೇಳ 03.01.2021ಕಟೀಲು ಸೌಂದರ್ಯ ಪ್ಯಾಲೇಸ್ 
ಕಟೀಲು ಮೂರನೇ ಮೇಳ03.01.2021ಶಿವನಗರ, ಮೂಡಿಶೆಡ್ಡೆ, ವಾಮಂಜೂರು 
ಕಟೀಲು ನಾಲ್ಕನೇ ಮೇಳ 03.01.2021ನಾಯಿಲ, ಮುರ್ದೋಳಿ, ಪಾಣೆಮಂಗಳೂರು 
ಕಟೀಲು ಐದನೇ ಮೇಳ 03.01.2021ಮೂಡುಪೆರಾರ ಚರ್ಚ್ ಬಳಿ 
ಕಟೀಲು ಆರನೇ ಮೇಳ03.01.2021ಪೆರ್ಮನ್ನೂರು, ಕುತ್ತಾರು ವಯಾ ತೊಕ್ಕೊಟ್ಟು 
ಮಂದಾರ್ತಿ ಒಂದನೇ ಮೇಳ 03.01.2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 03.01.2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 03.01.2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 03.01.2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಐದನೇ ಮೇಳ 03.01.2021ಶ್ರೀ ಕ್ಷೇತ್ರದಲ್ಲಿ 
ಶ್ರೀ ಹನುಮಗಿರಿ ಮೇಳ 03.01.2021ಪುತ್ತೂರು ನಟರಾಜ ವೇದಿಕೆ – ದಮಯಂತಿ ಪುನಃ ಸ್ವಯಂವರ, ಗದಾಯುದ್ಧ, ರಕ್ತರಾತ್ರಿ 
ಶ್ರೀ ತಳಕಲ ಮೇಳ03.01.2021ಶ್ರೀ ಕ್ಷೇತ್ರದಲ್ಲಿ – ಪಾಪಣ್ಣ ವಿಜಯ ಗುಣಸುಂದರಿ (ಕೂಡಾಟ – ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ)
ಶ್ರೀ ಮಾರಣಕಟ್ಟೆ ಮೇಳ ‘ಎ’03.01.2021ಅಮ್ಮ ಹೌಸ್, ಬಣ್ಣದಬೈಲು ಮಣೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’03.01.2021ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’03.01.2021ಬೋಳಂಬಳ್ಳಿ, ಕಾಲ್ತೋಡು
ಶ್ರೀ ಪಾವಂಜೆ ಮೇಳ 03.01.2021ಕಡಾರಿ ಬಜಗೋಳಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳ03.01.2021ಹೆನ್ನಾಬೈಲ್ – ದಿವ್ಯಸನ್ನಿಧಿ 
ಕಮಲಶಿಲೆ ಮೇಳ ‘ಎ’03.01.2021ಅಕ್ಕಿನಕೊಡ್ಲು 
ಕಮಲಶಿಲೆ ಮೇಳ ‘ಬಿ’03.01.2021ನಾಲ್ಕೂರು 
ಶ್ರೀ ಬಪ್ಪನಾಡು ಮೇಳ03.01.2021ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ – ನಾಗತಂಬಿಲ
ಶ್ರೀ ಸಸಿಹಿತ್ಲು ಭಗವತೀ ಮೇಳ 03.01.2021ಸಾಣೂರು(ಕಾರ್ಕಳ) ಮಾಂಗಾಡಿ ಮಾತೃಛಾಯಾ ಮನೆ – ಕಂಚೀಲ್ದ ಪರಕೆ 
ಶ್ರೀ ಅಮೃತೇಶ್ವರೀ ಮೇಳ03.01.2021ಕೋಡಿಕನ್ಯಾಣ 
ಶ್ರೀ ಬೋಳಂಬಳ್ಳಿ ಮೇಳ 03.01.2021ಚಂದಾಣ, ಬೈಂದೂರು – ನಾಗ ಸುನೇತ್ರೆ
ಶ್ರೀ ಸೌಕೂರು ಮೇಳ03.01.2021ಹಸಿನಾಡಿ ಮನೆ – ಪುಷ್ಪಚಂದನ 
ಶ್ರೀ ಹಾಲಾಡಿ ಮೇಳ03.01.2021ಮಾವಿನಕೊಡ್ಲು 
ಶ್ರೀ ಬೆಂಕಿನಾಥೇಶ್ವರ ಮೇಳ  03.01.2021ಹೆಮ್ಮಾಡಿ ಶ್ರೀ ಗೋಪಾಲಕೃಷ್ಣ  ಮಹಾಗಣಪತಿ ದೇವಸ್ಥಾನ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳ03.01.2021ಪಡುಕೂಡೂರು – ಚೆಲುವೆ ಚಿತ್ರಾವತಿ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ03.01.2021ಬ್ರಹ್ಮಾವರ ಬಸ್ ಸ್ಟಾಂಡ್ ಬಳಿ – ನೂತನ ಪ್ರಸಂಗ 
ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ 03.01.2021ಶ್ರೀ ಕ್ಷೇತ್ರ ತಳಕಲದಲ್ಲಿ – ಪಾಪಣ್ಣ ವಿಜಯ ಗುಣಸುಂದರಿ (ಕೂಡಾಟ – ಶ್ರೀ ತಳಕಲ ಮೇಳ)

ಮೃದು ಮನಸಿನ ಸಹೃದಯಿ ಕಲಾಸೇವಕ, ಮದ್ದಳೆಗಾರ – ಶ್ರೀ ಸದಾನಂದ ಶೆಟ್ಟಿಗಾರ್ ಮಿಜಾರು

ಕೇರಳದ ಕಾಸರಗೋಡಿನಿಂದ ತೊಡಗಿ ಕರ್ನಾಟಕದ ಕರಾವಳೀ ಪ್ರದೇಶದ ದಕ್ಷಿಣ ಕನ್ನಡ, ಉತ್ತರ ಕನ್ನಡ ಅಲ್ಲದೆ ಮಲೆನಾಡು ಪ್ರದೇಶದ ಜನರು ಯಕ್ಷಗಾನ ಕಲೆಯನ್ನು ಆರಾಧಿಸುತ್ತಾರೆ. ಅವರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ ಈ ಶ್ರೇಷ್ಠ ಕಲೆ. ಪ್ರತಿಯೊಂದು ಮನೆಯಲ್ಲೂ ಕಲಾವಿದರೋ, ಕಲಾಭಿಮಾನಿಗಳೋ, ಸಂಘಟಕರೋ ಇದ್ದೇ ಇರುತ್ತಾರೆ. ಹಗಲು ತಮ್ಮ ದೈನಂದಿನ ಕರ್ತವ್ಯಗಳನ್ನು ಮುಗಿಸಿ ರಾತ್ರಿ ಯಕ್ಷಗಾನ ಪ್ರದರ್ಶನವನ್ನು ನೋಡಿ ಸಂತೋಷಪಡುತ್ತಾರೆ.

ಯಕ್ಷಗಾನವಿಲ್ಲದ ಬದುಕನ್ನು ಈ ಪ್ರದೇಶದ ಜನರು ಕನಸಿನಲ್ಲೂ ಕಲ್ಪಿಸಿಕೊಳ್ಳಲಾರರು. ಉತ್ತಮ ಸಂದೇಶಗಳನ್ನು ನೀಡುವ ಈ ಮೇರು ಕಲೆಯು ಅಷ್ಟೊಂದು ಗಾಢ ಪರಿಣಾಮವನ್ನು ಅವರ ಮೇಲೆ ಬೀರಿ ಬೇರೂರಿ ನೆಲೆನಿಂತಿದೆ. ಪ್ರದರ್ಶನಗಳನ್ನು ನೋಡಿ ಬಂದು ಯಕ್ಷಗಾನ ಹಾಡುಗಳನ್ನು ಗುನುಗುನಿಸುತ್ತಾ ದೈನಂದಿನ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರೂ ಇದ್ದಾರೆ.

ಇತರ ಪ್ರದೇಶದ ಜನರಾದರೆ ಸಿನಿಮಾ ಹಾಡುಗಳನ್ನು ಹೇಳುತ್ತಾರೆ. ಆದರೆ ಈ ಭಾಗದ ಜನರ ಬಾಯಲ್ಲಿ ಯಕ್ಷಗಾನದ ಹಾಡುಗಳು! ತೋಟದಲ್ಲಿ ದುಡಿಯುವ ರೈತಾಪಿ ಜನರ ಬಾಯಲ್ಲೂ ಯಕ್ಷಗಾನ ಪ್ರಸಂಗಗಳ ಪದ್ಯಗಳು! ಪ್ರಸಂಗ ಪುಸ್ತಕ ನೋಡಿ ಬಾಯಿಪಾಠ ಮಾಡಿ ಹೇಳುವುದಲ್ಲ ಅವರು. ಪ್ರದರ್ಶನಗಳನ್ನು ನೋಡಿ ಭಾಗವತರು ಹೇಳಿದ ಹಾಡುಗಳನ್ನು ಕೇಳಿಯೇ ಕಂಠಸ್ಥವಾದುದು! ಅದೆಂತಹಾ ಯಕ್ಷಗಾನಾಸಕ್ತಿ! ಯಕ್ಷಗಾನವನ್ನು ಇವರೆಷ್ಟು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಅನ್ನುವುದಕ್ಕೆ ಇದುವೇ ನಿದರ್ಶನ. ಇದು ನಮ್ಮ ಹೆಮ್ಮೆಯ ಕಲೆಯೆಂಬ ಅಭಿಮಾನ ಅವರಿಗೆ.

ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯು ಎಲ್ಲರಿಗೂ ಇರುತ್ತದೆ. ತಾನು ಭಾಗವತನಾಗಬೇಕು ಮದ್ದಳೆಗಾರನಾಗಬೇಕು, ಹಾಸ್ಯಗಾರನಾಗಬೇಕು, ಸ್ತ್ರೀವೇಷಧಾರಿಯಾಗಬೇಕು, ಪುಂಡುವೇಷಧಾರಿಯಾಗಬೇಕು ಹೀಗೆ ಒಬ್ಬೊಬ್ಬರ ಆಸೆಗಳು ಒಂದೊಂದು. ಆದರೆ ಎಲ್ಲರಿಗೂ ಆ ಭಾಗ್ಯ ಸಿದ್ಧಿಸುವುದಿಲ್ಲ. ಅವಕಾಶ ಸಿಕ್ಕಿದವರೆಲ್ಲಾ ಹೊಳೆದು ಕಾಣಿಸಿಕೊಳ್ಳುವುದೂ ಇಲ್ಲ. ಅದಕ್ಕೂ ಯೋಗ ಬೇಕು. ಆದರೂ ಯಕ್ಷಗಾನ ಕಲೆಯ ಒಂದು ಅಂಗವಾಗಿ ಕಾಣಿಸಿಕೊಳ್ಳಲು ಅವಕಾಶ ಸಿಕ್ಕಿದರೆ ಸಹಜವಾಗಿ ಸಂತೋಷವಾಗುತ್ತದೆ. ಹೀಗೆ ಅವಕಾಶಗಳು ಒದಗಿ ವೃತ್ತಿ ಕಲಾವಿದರಾಗಿಯೋ ಅನೇಕರು ಇಂದು ಈ ಗಂಡು ಕಲೆಯ ಒಂದು ಅಂಗವಾಗಿ ವ್ಯವಸಾಯ ಮಾಡುತ್ತಿದ್ದಾರೆ. ಅಂತವರಲ್ಲೊಬ್ಬರು ಶ್ರೀ ಮಿಜಾರು ಸದಾನಂದ ಶೆಟ್ಟಿಗಾರ. ವೃತ್ತಿ ಕಲಾವಿದ. ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. 

ಮಿಜಾರು ಸದಾನಂದ ಶೆಟ್ಟಿಗಾರರು ಮೃದು ಮನಸ್ಸಿನ ಸಹೃದಯೀ ಕಲಾವಿದರು. ಪ್ರಾರಂಭದಲ್ಲಿ ವೇಷ ಮಾಡುತ್ತಿದ್ದ ಇವರು ಹಿಮ್ಮೇಳ ಕಲಾವಿದರಾಗಿ ಕಾಣಿಸಿಕೊಂಡರು (ಮದ್ದಳೆಗಾರರಾಗಿ). ಶ್ರೀಯುತರು ಮಂಗಳೂರು ತಾಲೂಕು ತೆಂಕಮಿಜಾರು ಗ್ರಾಮದ ಪೂಮಾರಪದವು ಎಂಬಲ್ಲಿ 1968 ಫೆಬ್ರವರಿ 17ರಂದು ಶ್ರೀ ರಾಮ ಶೆಟ್ಟಿಗಾರ ಮತ್ತು ವಾರಿಜ ದಂಪತಿಗಳಿಗೆ ಮಗನಾಗಿ ಜನಿಸಿದರು. ಬಾಲಕನಾಗಿದ್ದಾಗಲೇ ಯಕ್ಷಗಾನದಲ್ಲಿ ಆಸಕ್ತಿಯನ್ನು ಹೊಂದಿ ಪ್ರದರ್ಶನಗಳನ್ನು ನೋಡುತ್ತಿದ್ದರು. ಓದಿದ್ದು 9ನೇ ತರಗತಿಯ ವರೆಗೆ. ಎಡಪದವು ಸ್ವಾಮಿ  ವಿವೇಕಾನಂದ ಹೈಸ್ಕೂಲಿನಲ್ಲಿ.

ನೇಯ್ಗೆಗಾರಿಕೆಯು ಇವರ ಕುಲ ಕಸುಬು. ಇದು ಹಿರಿಯರಿಂದ ಬಳುವಳಿ. ಶಾಲೆ ಬಿಟ್ಟ ನಂತರ ನೇಯ್ಗೆ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಖ್ಯಾತ ಕಲಾವಿದ ಮುಚ್ಚೂರು ಹರೀಶ ಶೆಟ್ಟಿಗಾರರಿಂದ ನಾಟ್ಯಾಭ್ಯಾಸ. ಹರೀಶ ಶೆಟ್ಟಿಗಾರರು  ವೇಷಧಾರಿಯೂ ಅರ್ಥಧಾರಿಯೂ ಆಗಿದ್ದರು.  ಕಲಿಕಾಸಕ್ತರಿಗೆ ಚೆನ್ನಾಗಿ ಹೇಳಿಕೊಡುವುದು ಮಾತ್ರವಲ್ಲ, ಸಂಭಾಷಣೆಗಳನ್ನೂ ಬರೆದು ಕೊಡುತ್ತಿದ್ದವರು. ಅವರಿಂದ ಕಲಿತು ಸದಾನಂದ ಶೆಟ್ಟಿಗಾರರು ಶಾಲೆ ಮತ್ತು ಊರಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ವೇಷ ಮಾಡಲಾರಂಭಿಸಿದರು. ಆ ಸಂದರ್ಭದಲ್ಲಿ ಗುರುಪುರ ಶ್ರೀ ಅಣ್ಣಿ ಭಟ್ಟರಿಂದ ಹಿಮ್ಮೇಳ ಅಭ್ಯಾಸ.    

ಸದಾನಂದ ಶೆಟ್ಟಿಗಾರರ ಮೊದಲ ತಿರುಗಾಟ ತಲಕಳದಲ್ಲಿ. ವೇಷಧಾರಿಯಾಗಿ ಮತ್ತು ಮದ್ದಳೆಗಾರರಾಗಿ ಮೂರು ವರ್ಷ ತಿರುಗಾಟ. ಹಿಮ್ಮೇಳ ಮತ್ತು ನಾಟ್ಯವನ್ನೂ ಕಲಿತು ವೇಷ ಮಾಡಿದುದು ಇವರಿಗೆ ಅನುಕೂಲವೇ ಆಗಿತ್ತು. ಪ್ರಸಂಗ ಜ್ಞಾನ, ರಂಗ ನಡೆ, ಲಯಸಿದ್ಧಿಯೂ ಸಿದ್ಧಿಸಿತ್ತು. ನಂತರ ಸಸಿಹಿತ್ಲು ಮೇಳದಲ್ಲಿ ಮದ್ದಳೆಗಾರನಾಗಿ 2 ವರ್ಷ ತಿರುಗಾಟ. ನಂತರ ಬಪ್ಪನಾಡು ಮೇಳದಲ್ಲಿ 8 ವರ್ಷ ವ್ಯವಸಾಯ. ಹೀಗೆ ಹಿರಿಯ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರ ಒಡನಾಟದಿಂದಾಗಿ ಸದಾನಂದ ಶೆಟ್ಟಿಗಾರರು ಪಕ್ವರಾಗಿದ್ದರು. ನಂತರ ಸುಂಕದಕಟ್ಟೆ ಮೇಳದಲ್ಲಿ 4 ವರ್ಷ, ಕಟೀಲು ಮೇಳದಲ್ಲಿ 2 ವರ್ಷ. ಮತ್ತೆ ಬಪ್ಪನಾಡು ಮೇಳದಲ್ಲಿ ಮತ್ತು ಸುಂಕದಕಟ್ಟೆ ಮೇಳಗಳಲ್ಲಿ 5 ವರ್ಷ. ಪ್ರಸ್ತುತ 4 ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿಯಲ್ಲಿ ಮದ್ದಳೆಗಾರನಾಗಿ ವ್ಯವಸಾಯ ಮಾಡುತ್ತಿದ್ದಾರೆ.

ಮಿಜಾರು ಸದಾನಂದ ಶೆಟ್ಟಿಗಾರರ ಜತೆ ತಿರುಗಾಟವಿದ್ದ ಕಾರಣ ನಾನು ಅವರನ್ನು ಹತ್ತಿರದಿಂದಲೇ ಬಲ್ಲೆ. ಮೃದು ಮನಸ್ಸಿನ ಸಹೃದಯೀ ಸಜ್ಜನ ಕಲಾವಿದರಿವರು. ಪ್ರದರ್ಶನಗಳಿಗೆ ಸದಾ ಸಿದ್ಧರಾಗಿಯೇ ಬರುತ್ತಾರೆ. ಪ್ರಸಂಗ ನಡೆಗಳ ಬಗ್ಗೆ ಭಾಗವತರು, ಕಲಾವಿದರೊಡನೆ ಚರ್ಚಿಸಿಯೇ ರಂಗವೇರುತ್ತಾರೆ. ಪ್ರದರ್ಶನಗಳು ಹಾಳಾಗಬಾರದು. ರಂಜಿಸಬೇಕು. ತಂಡವಾಗಿ ಶ್ರಮಿಸಿ ಎಲ್ಲಾ ಕಲಾವಿದರೂ ಪ್ರಸಂಗದ ಗೆಲುವಿಗೆ ಕಾರಣರಾಗಬೇಕು ಎಂಬ ಅಭಿಪ್ರಾಯವನ್ನು ಹೊಂದಿರುವ ಕಲಾವಿದರಿವರು. ಯಾರೊಡನೆಯೂ ಹೆಚ್ಚು ಬೆರೆಯುವವರಲ್ಲ. ಹಾಗೆಂದು ಏಕಾಂಗಿಯಾಗಿ ಇರುವವರಲ್ಲ. ವಿನೋದಪ್ರಿಯರಾದ ಇವರು ರಸಮಯವಾದ ಸನ್ನಿವೇಶಗಳು ಸೃಷ್ಟಿಯಾದಾಗ ಅವುಗಳಿಗೆ ಸ್ಪಂದಿಸಿ ಎಲ್ಲರೊಡನೆ ಸಂತಸವನ್ನು ಅನುಭವಿಸುತ್ತಾರೆ.

ತನಗೆ ನೀಡಿದ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿ ಮುಗಿಸುವ ಇವರು ಕಲಾವಿದರೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಚೆಂಡೆ ಮತ್ತು ಮದ್ದಳೆ ಎರಡನ್ನೂ ನುಡಿಸುವುದರಲ್ಲಿ ನಿಪುಣರು. ಪರಂಪರೆಯ ರೀತಿಗಳಿಗೆ ಧಕ್ಕೆಯಾಗದೆ ರಂಗದಲ್ಲಿ ಎಲ್ಲವೂ ಇರಬೇಕು ಎನ್ನುವ ಇವರು ಅದಕ್ಕೆ ಕೊರತೆಯಾದರೆ ಬೇಸರಿಸುತ್ತಾರೆ. ತೆರೆದುಕೊಳ್ಳುವ ಸ್ವಭಾವವು ಇವರದಲ್ಲ. ತಾನಾಯಿತು, ತನ್ನ ಕೆಲಸವಾಯಿತು. ಹಾಗಾಗಿ ಪ್ರಚಾರದಿಂದ ದೂರ ಉಳಿದರೇನೋ ಎಂದು ಅನಿಸಿದರೆ ತಪ್ಪಲ್ಲ. ಇವರು ಕಲಿಕಾಸಕ್ತರಿಗೆ ತರಬೇತಿಯನ್ನೂ ನೀಡುತ್ತಾರೆ. ಪ್ರಸ್ತುತ ಮಾರಿಕಾಂಬಾ ಯಕ್ಷಗಾನ ಮಂಡಳಿ ನೀರ್ಕೆರೆ ಮೊದಲಾದೆಡೆ ನಾಟ್ಯ ತರಬೇತಿಯನ್ನೂ ಕೊಡುತ್ತಿದ್ದಾರೆ. 1998ರಲ್ಲಿ ವಿವಾಹಿತರಾದ ಇವರು ಪತ್ನಿ ಶ್ರೀಮತಿ ಚಂದ್ರಾವತಿ ಜೊತೆ ಮಿಜಾರು ಸಮೀಪ ನೆಲೆಸಿರುತ್ತಾರೆ. ಮಿಜಾರು ಶ್ರೀ ಸದಾನಂದ ಶೆಟ್ಟಿಗಾರ್ ದಂಪತಿಗಳಿಗೆ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಮದ್ದಳೆಗಾರ ಸದಾನಂದ ಶೆಟ್ಟಿಗಾರರಿಂದ ಇನ್ನಷ್ಟು ಕಲಾ ಸೇವೆಯು ನಡೆಯಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ಮೇಳಗಳ ಇಂದಿನ (02.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (02.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ02.01.2021ಹಟ್ಟಿಯಂಗಡಿ ಬಾಚಿನಕೂಡ್ಲು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ02.01.2021ಕುಲಶೇಖರ ಕಲ್ಪನೆ ಮೈದಾನ 
ಕಟೀಲು ಎರಡನೇ ಮೇಳ 02.01.2021ವಿದ್ಯಾನಗರ, ಕುಳಾಯಿ 
ಕಟೀಲು ಮೂರನೇ ಮೇಳ02.01.2021ಕಟೀಲು ಕ್ಷೇತ್ರದಲ್ಲಿ  
ಕಟೀಲು ನಾಲ್ಕನೇ ಮೇಳ 02.01.2021ಕಟ್ಟಪುಣಿ ಮನೆ, ಕೆಂಜಾರು 
ಕಟೀಲು ಐದನೇ ಮೇಳ 02.01.2021ಶ್ರೀರಾಮಶ್ರಮ ಕಾಲೇಜು ಮೈದಾನ – ಯೆಯ್ಯಾಡಿ ಮತ್ತು ಕೊಂಚಾಡಿ ಹತ್ತು ಸಮಸ್ತರು 
ಕಟೀಲು ಆರನೇ ಮೇಳ02.01.2021ಗಣೇಶಪುರ ಒಂದನೇ ಬ್ಲಾಕ್, ಕಾಟಿಪಳ್ಳ 
ಮಂದಾರ್ತಿ ಒಂದನೇ ಮೇಳ 02.01.2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 02.01.2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 02.01.2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 02.01.2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಐದನೇ ಮೇಳ 02.01.2021ಶ್ರೀ ಕ್ಷೇತ್ರದಲ್ಲಿ 
ಶ್ರೀ ಹನುಮಗಿರಿ ಮೇಳ 02.01.2021ಪುತ್ತೂರು ನಟರಾಜ ವೇದಿಕೆ – ಹಿರಣ್ಯಾಕ್ಷ, ಹಿರಣ್ಯಕಶಿಪು ಸ್ವಯಂಪ್ರಭೆ  
ಶ್ರೀ ತಳಕಲ ಮೇಳ02.01.2021ಶ್ರೀ ಕ್ಷೇತ್ರದಲ್ಲಿ – ಚೌತಿಯ ಚಂದ್ರ  
ಶ್ರೀ ಮಾರಣಕಟ್ಟೆ ಮೇಳ ‘ಎ’02.01.2021ಉಳ್ಳೂರು , ಕಂದಾವರ 
ಶ್ರೀ ಮಾರಣಕಟ್ಟೆ ಮೇಳ ‘ಬಿ’02.01.2021ವಾಸುಕೀ ಸಭಾಭವನ, ಮಾರಣಕಟ್ಟೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’02.01.2021ಬಳಗೇರಿ, ವಂಡ್ಸೆ 
ಶ್ರೀ ಪಾವಂಜೆ ಮೇಳ 02.01.2021ಪಟ್ಲ ಫೌಂಡೇಶನ್, ಕಳಸ ಘಟಕ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳ02.01.2021ಮುಳ್ಳುಗುಡ್ಡೆ ಗುಡಿಬೆಟ್ಟು  
ಕಮಲಶಿಲೆ ಮೇಳ ‘ಎ’02.01.2021ಹೈಕಾಡಿ 
ಕಮಲಶಿಲೆ ಮೇಳ ‘ಬಿ’02.01.2021ಅರಮನೆಕೂಡ್ಲು, ಹಳ್ಳಿಹೊಳೆ
ಶ್ರೀ ಬಪ್ಪನಾಡು ಮೇಳ02.01.2021ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ – ಸರ್ವಮಂಗಳ ಮಾಂಗಲ್ಯೇ 
ಶ್ರೀ ಸಸಿಹಿತ್ಲು ಭಗವತೀ ಮೇಳ 02.01.2021ಕಟಪಾಡಿ ಮಟ್ಟು ಶ್ರೀ ಮಹಾಕಾಳಿ ಮಂತ್ರದೇವತೆ ಸನ್ನಿಧಿಯಲ್ಲಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಅಮೃತೇಶ್ವರೀ ಮೇಳ02.01.2021ಕಾಡೂರು ಶಾಲೆ ಹತ್ತಿರ 
ಶ್ರೀ ಬೋಳಂಬಳ್ಳಿ ಮೇಳ 02.01.2021ಯೋಜನಾ ನಗರ ಬೈಂದೂರು    – ನಾಗ ಸುನೇತ್ರೆ
ಶ್ರೀ ಸೌಕೂರು ಮೇಳ02.01.2021ಹೆಂಗವಳ್ಳಿ ಮಲ್ನಾಡ್ ಕ್ಯಾಶ್ಯೂಸ್ – ನೂತನ ಪ್ರಸಂಗ 
ಶ್ರೀ ಹಾಲಾಡಿ ಮೇಳ02.01.2021ಗುಮ್ಮಹೊಲ ಗಜಾನನ ಗೇರುಬೀಜ ಕಾರ್ಖಾನೆ ಬಳಿ 
ಶ್ರೀ ಬೆಂಕಿನಾಥೇಶ್ವರ ಮೇಳ  02.01.2021ಪರ್ಕಳ  – ಸತ್ಯೋದ ಸ್ವಾಮಿ ಕೊರಗಜ್ಜ 
ಶ್ರೀ ಮಡಾಮಕ್ಕಿ ಮೇಳ02.01.2021ಹಿರ್ಗಾನ ಮಿತ್ರ ಸ್ಟೋರ್ ಬಳಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ02.01.2021ಆಲೂರು ಮೂಡುತಾರಿಬೇರು – ಶ್ರೀ  ಮೂಡುತಾರಿಬೇರು ಕ್ಷೇತ್ರ ಮಹಾತ್ಮೆ 
ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ 02.01.2021ಶ್ರೀ ಕ್ಷೇತ್ರದಲ್ಲಿ – ಭಾರ್ಗವ ವಿಜಯ 

ಮೇಳಗಳ ಇಂದಿನ (31-12-2020) ಯಕ್ಷಗಾನ ಪ್ರದರ್ಶನಗಳ ವಿವರ

0

ಮೇಳಗಳ ಇಂದಿನ (31-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ31-12-2020ಉಪ್ಪುಂದ ಹೊಸಗುಮೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ31-12-2020ಕುಕ್ಕುಂದೂರು ಕಾರ್ಕಳ
ಕಟೀಲು ಎರಡನೇ ಮೇಳ 31-12-2020ಪಡೀಲ್, ಬಲ್ಲಾಳ್ ಭಾಗ್, ಮಂಗಳೂರು
ಕಟೀಲು ಮೂರನೇ ಮೇಳ31-12-2020ಮಣಿನಾಲ್ಕೂರು, ಬಂಟ್ವಾಳ
ಕಟೀಲು ನಾಲ್ಕನೇ ಮೇಳ 31-12-2020ಕಟೀಲು ಕ್ಷೇತ್ರದಲ್ಲಿ
ಕಟೀಲು ಐದನೇ ಮೇಳ 31-12-2020ಕೌಡೂರು ಪಳ್ಳಿಬೈಲೂರು
ಕಟೀಲು ಆರನೇ ಮೇಳ31-12-2020ಗಾಂಧಿನಗರ, ಕಾವೂರು
ಮಂದಾರ್ತಿ ಒಂದನೇ ಮೇಳ 31-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 31-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 31-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 31-12-2020ಗುಜ್ಜಾಡಿ
ಮಂದಾರ್ತಿ ಐದನೇ ಮೇಳ 31-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಹನುಮಗಿರಿ ಮೇಳ 31-12-2020ಶ್ರೀ ಎಡನೀರು ಮಠದಲ್ಲಿ- ಶುಕ್ರ ನಂದನೆ
ಶ್ರೀ ತಳಕಲ ಮೇಳ31-12-2020ಶ್ರೀ ಕ್ಷೇತ್ರದಲ್ಲಿ – ಜಾಂಬವತಿ ಕಲ್ಯಾಣ
ಶ್ರೀ ಮಾರಣಕಟ್ಟೆ ಮೇಳ ‘ಎ’31-12-2020ಶ್ರೀ ಕ್ಷೇತ್ರದಲ್ಲಿ – ಎರಡೂ ಮೇಳಗಳ ಕೂಡಾಟ
ಶ್ರೀ ಮಾರಣಕಟ್ಟೆ ಮೇಳ ‘ಬಿ’31-12-2020ಯಳಂತೂರು ಹೊಸಮನೆ, ಬೆಳ್ವೆ
ಶ್ರೀ ಮಾರಣಕಟ್ಟೆ ಮೇಳ ‘ಸಿ’31-12-2020ಶ್ರೀ ಕ್ಷೇತ್ರದಲ್ಲಿ – ಎರಡೂ ಮೇಳಗಳ ಕೂಡಾಟ
ಶ್ರೀ ಪಾವಂಜೆ ಮೇಳ 31-12-2020ಬಾಳೆಹೊಳೆ – ಶ್ರೀ ದೇವಿ ಮಹಾತ್ಮೆ  
ಶ್ರೀ ಹಟ್ಟಿಯಂಗಡಿ ಮೇಳ31-12-2020ಮೊಳಹಳ್ಳಿ ಕೊರಾಳದಲ್ಲಿ – ಕೊರಾಳ ಶ್ರೀ ಚಿಕ್ಕಮ್ಮ ದೇವಿ ಮಹಾತ್ಮೆ
ಕಮಲಶಿಲೆ ಮೇಳ ‘ಎ’31-12-2020ಆರ್ಗೋಡು
ಕಮಲಶಿಲೆ ಮೇಳ ‘ಬಿ’31-12-2020ಹೆಮ್ಮಾಡಿ
ಶ್ರೀ ಅಮೃತೇಶ್ವರೀ ಮೇಳ31-12-2020ಕೊಳಂಬೆ ಮಾರಿಕಟ್ಟೆ
ಶ್ರೀ ಬೋಳಂಬಳ್ಳಿ ಮೇಳ 31-12-2020ಗಣಪತಿಕಟ್ಟೆ- ಸುದರ್ಶನ, ಪದ್ಮಾವತಿ
ಶ್ರೀ ಸೌಕೂರು ಮೇಳ31-12-2020ಬಿಜ್ರಿ – ಶ್ರೀ ದೇವಿ ಮಹಾತ್ಮೆ
ಶ್ರೀ ಹಾಲಾಡಿ ಮೇಳ31-12-2020ಶ್ರೀ ಜಟ್ಟಿಗೇಶ್ವರ ದೇವಸ್ಥಾನ, ಜಡ್ಕಲ್
ಶ್ರೀ ಬೆಂಕಿನಾಥೇಶ್ವರ ಮೇಳ  31-12-2020ಉಡುಪಿ ಅಂಬಾಗಿಲು ಸಂತೋಷನಗರ – ಮಹಿಮೆದ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳ31-12-2020ಉಪ್ಪಳ ಶಾಲಾ ವಠಾರ – ಶ್ರೀ ದೇವಿ ಮಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ31-12-2020ಸಾಸ್ತಾನ ಪೇಟೆಯಲ್ಲಿ – ಅಬ್ಬರದ ಹ್ಯಾಗುಳಿ

ಶೇಣಿ ವಾಗ್ವೈಭವ – ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯ ತುಣುಕು – 1

ಪದ್ಯ: ಲಾಲಿಸು ಮಯತನುಜೆ ಮಚ್ಛರಿತವ |
ಕ್ಷೀರಾಬ್ಧಿಶಯನನೋಲಗದಿ | ನಾವು |
ದ್ವಾರಪಾಲಕರಾಗಿ ಮುದದಿ | ಇರೆ |
ಮಾರಮಣನ ಕಾಂಬುತ್ಸಾಹದಿ |
ಮುನಿಜರು ಸನಕ ಸನಂದರೈತರೆ |
ಮದ|ವೇರಿ ಧಿಕ್ಕಾರದೊಳ್ ಅಡ್ಡಗಟ್ಟಿದೆವು


ಅರ್ಥ: “ಮಂಡೋದರಿ… ಕೊನೆಯ ಉಸಿರಿನ ವರೆಗೂ ಈ ರಹಸ್ಯವನ್ನು ಬಯಲುಪಡಿಸಲಾಗದು ಅಂತ ನಿರ್ಧಾರ ತಳೆದಿದ್ದೆ. ಆದರೆ ಆ ನಿರ್ಧಾರವನ್ನು ನೀನು ಸಡಿಲಿಸಿದೆ. ಇದು ನಿನ್ನ ವೈಯಕ್ತಿಕವಾದ ಜಯ. ಮಂಡೋದರಿ, ಶ್ರೀರಾಮನು ಯಾರು? ಏನು ಮತ್ತು ವರ್ತಮಾನ ಕಾಲದಲ್ಲಿ ಮನುಷ್ಯಾಕೃತಿಯಿಂದ ಸಂಚರಿಸುತ್ತಾನೆ ಯಾಕೆ ಎಂಬುದನ್ನೂ ನನ್ನ ಹಿರಿಯರು ಮತ್ತು ತಮ್ಮನಾದ ವಿಭೀಷಣನೋ ಅಥವಾ ನೀವೆಲ್ಲರೋ ಹೇಳಿ ತಿಳಿಯಬೇಕಾದ ಪ್ರಮೇಯವೇ ನನಗಿಲ್ಲ. ಈಗ ಕೇಳು. ವೇದಾಧ್ಯಯನ ಮಾಡಿದ ಪ್ರಭಾವ, ನಾನು ಸಾಧಿಸಿದ ಅಣಿಮಾದಿ ಅಷ್ಟಸಿದ್ಧಿ ಯೋಗಗಳ ಪ್ರಭಾವ, ಶಿವನ ಅನುಗ್ರಹದ ಪ್ರಸಾದ ಎಲ್ಲವೂ ನನ್ನ ಜೀವನದಲ್ಲಿ ಸುತ್ತಮುತ್ತಲೂ ಬೆಳಕಾಗಿ, ಬೆಂಬಲವಾಗಿ ಇರುವುದರಿಂದ ನಾನು ಗುರುತಿಸಿಕೊಳ್ಳಬಲ್ಲೆ, ನಾನು ಏನಾಗಿದ್ದೆ ಎಂದು. ಸಾಧಾರಣ ಜನರಿಗೆ ಇದು ಸಾಧ್ಯವಿಲ್ಲ. ಯೋಗನಿರತರಾದಂತಹ ತ್ರಿಕಾಲ ಜ್ಞಾನಿಗಳಿಗೆ ಮಾತ್ರವೇ ಇದು ಸಾಧ್ಯ. ಈ ಸಾಧ್ಯತೆ ನಿನ್ನ ಗಂಡ ಸಾಧಿಸಿಕೊಂಡಿದ್ದಾನೆ ಎಂಬುದು ನಿನ್ನ ಬದುಕಿಗೆ ಹೆಮ್ಮೆಯಾಗಲಿ. ಜನ ಏನೋ ಹೇಳಲಿ, ಮೂರ್ಖ, ಮದಾಂಧ ರಾಕ್ಷಸ. ಆದರೆ ಅದು ಒಂದೂ ಅಲ್ಲ ಎಂಬ ಆತ್ಮತೃಪ್ತಿ ನಿನಗುಂಟಾಗುವುದಕ್ಕಾಗಿಯೂ ಈ ಗುಟ್ಟನ್ನು ಹೊರಹಾಕುತ್ತಿದ್ದೇನೆ.

ಆ ವೈಕುಂಠದಲ್ಲಿ ಲಕ್ಷ್ಮೀಸಹಿತನಾದಂತಹ ಶ್ರೀಹರಿ ಶೇಷಸಾಯಿಯಾಗಿದ್ದ ಹೊತ್ತಿನಲ್ಲಿ ದರ್ಶನಾಕಾಂಕ್ಷಿಯಿಂದ ಸನಕಾದಿ ಋಷಿಗಳು ಒಂದು ಶುಭಮುಹೂರ್ತದಲ್ಲಿ ಬಂದರು. ಆ ಶುಭಮುಹೂರ್ತದಲ್ಲಿ ಅವರು ಬಂದಾಗ ಅಲ್ಲಿ ಜಯ-ವಿಜಯರು ಎಂಬ ದ್ವಾರಪಾಲಕರಿದ್ದರು. ಅವರಿಗೆ ಏನಾಯಿತೋ ಗೊತ್ತಿಲ್ಲ. ಬಹುಶಃ ಪೂರ್ಣತೆ ಪ್ರಾಪ್ತಿಯಾಗಬೇಕಾದರೆ ನಾರಾಯಣತ್ವವೇ ಬರಬೇಕೋ ಏನೋ ಆದುದರಿಂದ ಮಾರ್ಗವಿರೋಧ ಮಾಡಿದರು ಜಯ-ವಿಜಯರು. ಬಹುಶಃ ಅಹಂಕಾರ ಮೂಲದಿಂದಲೇ ಆ ಜಯ-ವಿಜಯರು ತಡೆದದ್ದಕ್ಕೆ ಪ್ರಾಯಶ್ಚಿತ್ತ ಅಥವಾ ಶಿಕ್ಷಾ ಎಂಬ ರೂಪದಿಂದ ಋಷಿಗಳು ಶಪಿಸಿದರು. ಪ್ರಪಂಚದಲ್ಲಿ ದುಷ್ಟ ದಾನವರೋ, ರಾಕ್ಷಸರೋ, ಆಸುರೀ ಪ್ರವೃತ್ತಿಯವರೋ ಆಗಿ ಹುಟ್ಟಿ ಎಂದು ಶಪಿಸ ಲ್ಪಟ್ಟಂತಹ ಜಯ-ವಿಜಯರು ಶ್ರೀಹರಿಯನ್ನೇ ಪಶ್ಚಾತ್ತಾಪದಿಂದ ಪ್ರಾರ್ಥಿಸಿದರು.

ಮಂಡೋದರೀ, ವಿವೇಕಿಯಾದವರಿಗೆ ಪಶ್ಚಾತ್ತಾಪಪಡುವುದಕ್ಕೋ, ಹೃದಯ ನಿವೇದನೆ ಮಾಡುವುದಕ್ಕೆ ಜಗದೀಶ್ವರನಲ್ಲದೆ ಬೇರೆ ಯಾರಿರುತ್ತಾರೆ ಹೇಳು. ಪಾಮರರಾದವರು ಕಂಡ ಕಂಡವರ ಮುಂದೆ ಎಲ್ಲಾ ಪಶ್ಚಾತ್ತಾಪಪಟ್ಟು ಹೀಗಾಯಿತಲ್ಲಾ ಎಂದು ಕಣ್ಣೀರಿಳಿಸಬಹುದು. ಆದರೆ ಜಯ-ವಿಜಯರಂತಹವರು ಸ್ವಾಮಿಯಲ್ಲಿ ಪ್ರಾರ್ಥಿಸಿದಾಗ ಒಳ್ಳೆಯದು, ಅಹಂಕಾರ ನಿಮ್ಮಲ್ಲಿ ಇದ್ದುದು ನಿಜ. ಅದರ ಪರಿಮಾರ್ಜನೆ ಆಗದೆ ವೈಕುಂಠದ ಸತ್ಪ್ರಜೆಗಳಾಗುವುದಕ್ಕೋ ಅಥವಾ ನನ್ನ ಆತ್ಯಂತಿಕ ಭಕ್ತರಾಗುವುದಕ್ಕೋ ನಿಮಗೆ ಪರಿಶುದ್ಧತೆ ಸಾಕಾಗುವುದಿಲ್ಲ. ಎಲ್ಲಾ ಪ್ರಾಯಶ್ಚಿತ್ತಕ್ಕೂ ಮರ್ತ್ಯಲೋಕದಲ್ಲಿ ಹುಟ್ಟುವುದೇ, ಕರ್ಮಭೂಮಿ ಎನಿಸುತ್ತದೆ ಅದು. ಆದಕಾರಣ ಕರ್ಮಭೂಮಿಯಲ್ಲಿ ಮೂರು ಜನ್ಮದಲ್ಲಿ ನನ್ನಲ್ಲೇ ವಿರೋಧವನ್ನು ಸಾಧಿಸಿ ಅಂದರೆ ಆ ವಿರೋಧ ಅಷ್ಟು ಪ್ರಬಲವಾಗಿರಬೇಕು. ವಿಚಿತ್ರವಾದದ್ದು ಇದು. ಮಂಡೋದರೀ… ಭಗವಂತನಲ್ಲಿ ಆದರೂ ತೀವ್ರವಾದ ವಿರೋಧವನ್ನು ಬೆಳೆಸಬೇಕು, ಇಟ್ಟುಕೊಳ್ಳಬೇಕು ಆಗಿದ್ದರೆ ಬಾಕಿ ಇದ್ದ ವಿಷಯಗಳಲ್ಲಿ ಇವನಿಗೆ ವೈರಾಗ್ಯ ಬರಬೇಕೋ ಬೇಡವೇ ಹೇಳು. ಪ್ರೇಮ ಹೇಗೆ? ಭಗವಂತನ ಕುರಿತಾಗಿ ಉತ್ಕಟವಾಗಿ, ತದೇಕಚಿತ್ತವಾಗಿ ಇರಬೇಕೋ ಹಾಗೆಯೇ ವಿರೋಧವೂ ಕೂಡಾ ಹಾಗೆಯೇ ಇರಬೇಕಲ್ಲ. ಭಗವಂತನ ಕುರಿತಾಗಿ ಪ್ರೇಮವಾದರೇನು, ವಿರೋಧವಾದರೇನು? ಪ್ರೇಮ, ಕ್ರೋಧ, ಲೋಭ ಇವೆಲ್ಲಾ ಮಾನಸಿಕವಾದಂತಹ ವಿಚಾರಗಳು ತಾನೆ? ಹಾಗಾಗಿ ವಿರೋಧವನ್ನೇ ಮಾಡಿ. ಈ ವಿರೋಧದಿಂದ ಒಂದು ಪರಮ ಲಾಭ ಇದೆ. ಏನು? ಆ ವಿರೋಧವನ್ನು ನೀವು ಸಾಧಿಸಿದಾಗ ನಿಮಗೆ ಅನುಗ್ರಹರೂಪವಾದ ಮರಣವನ್ನು ಕೊಡುವುದಕ್ಕಾಗಿ ನಾನೇ ಆವಿರ್ಭವಿಸುತ್ತೇನೆ. ಭೂಮಂಡಲದಲ್ಲಿ. ಎಂದು ಭಗವಂತನ ಅಪ್ಪಣೆಯಾಯಿತು.

ಆಲೋಚಿಸು… ಈ ಅಪ್ಪಣೆ ಪಡೆದ ಜಯ-ವಿಜಯರು ವೈಕುಂಠದಿಂದ ನಿರ್ಗಮಿಸಿದರು. ಪ್ರಥಮ ಜನ್ಮದಲ್ಲಿ ಹುಟ್ಟಿದರು ಹಿರಣ್ಯಾಕ್ಷ, ಹಿರಣ್ಯಕಶಿಪುವಾಗಿ. ಎರಡನೇ ಜನ್ಮವೇ ಇದು. ರಾವಣ ಮತ್ತು ಕುಂಭಕರ್ಣ, ನಾನೇ ಜಯ, ಅಳಿದ ಕುಂಭಕರ್ಣನೇ ವಿಜಯ. ಇನ್ನೊಂದು ಜನ್ಮ ಮೀಸಲಾಗಿದೆ. ಅದು ಏನೋ ಗೊತ್ತಿಲ್ಲ. ಹೀಗೆ ಮೂರು ಜನ್ಮದಲ್ಲಿ ವಿರೋಧವನ್ನು ಸಾಧಿಸುವುದು. ಅದು ಒಂದೇ ಏಕಾಗ್ರ ಬುದ್ಧಿ, ಇಲ್ಲಿಯ ವರೆಗೆ ನಾನು ಉಳಿಸಿಕೊಂಡು ಬಂದಿದ್ದೇನೆ ಎಂಬುದು ನನಗೆ ಆತ್ಮಕಲ್ಯಾಣಕ್ಕೆ ಇದ್ದಂತಹ ಬಲು ದೊಡ್ಡದಾದಂತಹ ಮಾರ್ಗ ಎಂಬ ನಿರ್ಣಯ ಇದ್ದದ್ದರಿಂದ ರಾಮನನ್ನು ವಿರೋಧಿಸುತ್ತೇನೆ. ವಿರೋಧಿಸುತ್ತೇನೆ, ಮನಸಾ ವಿರೋಧಿಸುತ್ತೇನೆ. ಕೇವಲ ಸೋಗಿನಿಂದ ಅಲ್ಲ. ಹಾಗಾದರೆ ರಾಮನನ್ನು ವಿರೋಧಿಸುವಾಗ ಆ ವಿರೋಧಕ್ಕೆ ಇನ್ನಷ್ಟು ಒತ್ತುಕೊಡುವುದಕ್ಕೆ ಬೇಕಾಗಿ ರಾಮನ ಹೃದಯರೂಪಿಣಿಯಾದ ಸೀತೆಯನ್ನು ನಾನು ಕಾಮಿಸುತ್ತೇನೆ. ಈ ಕಾಮ ಯಾಕೆ ಅಂತ ಅಂದರೆ ಆ ಕ್ರೋಧಕ್ಕೆ ಪೂರಕವೇ ಹೊರತು ಬೇರೇನಲ್ಲ. ಶಾಸ್ತ್ರವೂ ಹಾಗೆ. ಮನಸಿನಲ್ಲಿ ಹುಟ್ಟಿದಂತಹಾ ಕಾಮ. ಆ ಕಾಮವೇ ಕ್ರೋಧವಾಗಿ ಪರಿಣಮಿಸುತ್ತದೆ. ಆ ಕ್ರೋಧ ಬುದ್ಧಿ ನಷ್ಟಗೊಳಿಸುತ್ತದೆ ಬಾಕಿ ಉಳಿದವರಿಗೆ. ನಮಗೆ ವಿವೇಕವನ್ನು ಜಾಗೃತಗೊಳಿಸುತ್ತದೆ.

ರಾಮನ ಮುಂದೆ ಆಗಲೀ ಸೀತೆಯ ಮುಂದೆ ಆಗಲಿ ನಾನು ನಡೆದಂತಹ ನಡತೆಯೆಲ್ಲಿ. ಈ ಉದ್ದೇಶದಿಂದಲೆ ಹೊರತು ಮತ್ತೇನೂ ಅಲ್ಲ. ಮಂಡೋದರೀ… ಈಗ ಹೇಳು, ಆಡಿ ತಪ್ಪಲು ಬಹುದೆ? ಓಡಿ ಸಿಕ್ಕಲು ಬಹುದೆ? ಆದಕಾರಣ ಭಗವಂತನು ಲಕ್ಷ್ಮೀಸಹಿತನಾಗಿ ಏನು ಅಪ್ಪಣೆ ಕೊಟ್ಟಿದ್ದಾನೆ. ಅದರಂತೆ ಕಾಯೇನ ವಾಚಾ ಮನಸಾ ಆ ರಾಮನು ಎಲ್ಲಿದ್ದಾನೆ ಎಂದು ಹುಡುಕುತ್ತಾ ಹುಡುಕುತ್ತಾ ಹುಡುಕುತ್ತಾ ಎಲ್ಲಿಯೂ ಸಿಕ್ಕದಿದ್ದಾಗ ಕೊನೆಗೆ ಗೊತ್ತಾಯಿತು. ಶೂರ್ಪನಖಿಯ ಕರ್ಣ ನಾಸಾಛೇದನ ಯಾವಾಗ ಆಯಿತೋ ಆವಾಗ ನಮ್ಮ ಶತ್ರುವೊಬ್ಬ ಹುಟ್ಟಿದ್ದಾನೆ. ಇದು ಶ್ರೀರಾಮನು ಆಧ್ಯಾತ್ಮಿಕವಾಗಿ ನನಗೆ ಕೊಟ್ಟಂತಹ ಸೂಚನೆ. ಅಂದಿನಿಂದಲೇ ನಿನ್ನ ಮಾತನ್ನೂ ತಿರಸ್ಕರಿಸಿದೆ. ನಾನು ಪ್ರಪಂಚದಲ್ಲಿ ಗೊತ್ತಾಗುವ ಹಾಗೆ ಸೀತೆಯಲ್ಲಿ ಕಾಮ ಸಂಬಂಧದಿಂದ ವ್ಯವಹರಿಸುತ್ತೇನೆಯೇ ಹೊರತು ಬೇರೇನೂ ಅಲ್ಲ.

ಇದು ನನಗೆ ಮಾತ್ರ. ಆದ್ದರಿಂದ ರಾವಣನಾದದ್ದಂತಹ ನಡತೆ ಬಾಕಿ ಇದ್ದವರಿಗೆ ಆದರ್ಶವೂ ಅಲ್ಲ. ಈ ವಿಶಿಷ್ಟ ಕೆಲವು ಜೀವಾತ್ಮರಿಗೆ ಯಾವುದೋ ಒಂದು ಶಾಪ ಕಾರಣವಾಗಿ ಈ ಪ್ರಪಂಚದಲ್ಲಿ ಹುಟ್ಟು ಸಂಭವಿಸಿದಾಗ ಅವರ ನಡತೆಯೂ ವಿಚಿತ್ರವಾಗಿರುತ್ತದೆ. ಹಿರಣ್ಯಕಶ್ಯಪು, ಹಿರಣ್ಯಾಕ್ಷನ ಸಂಹಾರಕ್ಕೆ ಶ್ರೀಮನ್ನಾರಾಯಣ ನರಸಿಂಹನೋ, ವರಾಹನೋ ಆದ. ನಮ್ಮ ಸಂಹಾರಕ್ಕಾಗಿ ಲೋಕಾಭಿರಾಮ ಶ್ರೀರಾಮನಾದ. ಮುಂದೆ ಏನಾಗುತ್ತಾನೋ ಗೊತ್ತಿಲ್ಲ. ಅದು ಭಗವಂತನ ಚಿತ್ತ. ಈಗ ಹೇಳು… ತಪ್ಪಿದೆನೇ ನಾನು. ತಪ್ಪಿದೆನೇ… ಸಾಂತ್ವನಗೊಂಡೆ ತಾನೇ? ಒಬ್ಬ ಗೃಹಸ್ಥನಾಗಿ ಈ ವರೆಗಿನ ಬದುಕಿನಲ್ಲಿ ಇದು ಬಲು ದೊಡ್ಡ ಜಯ ಎಂದು ತಿಳಿದುಕೊಂಡಿದ್ದೇನೆ. ಸ್ವಲ್ಪ ವಿಶ್ರಮಿಸಿಕೊಳ್ಳುತ್ತೇನೆ.”

ಮೇಳಗಳ ಇಂದಿನ (29-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (29-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ29-12-2020ನೇರಳಕಟ್ಟೆ, ಹಿಲ್ಕೋಡು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ29-12-2020ಕೊರಗಜ್ಜ ಮಂತ್ರದೇವತೆ ಸನ್ನಿಧಿ, ಕಟೀಲು
ಕಟೀಲು ಎರಡನೇ ಮೇಳ 29-12-2020ನಂದಾವರ ದೇವಸ್ಥಾನದ ಬಳಿ 
ಕಟೀಲು ಮೂರನೇ ಮೇಳ29-12-2020ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು 
ಕಟೀಲು ನಾಲ್ಕನೇ ಮೇಳ 29-12-2020ಕಡಪಲ್ಲಗುರಿಮನೆ, ಅಶ್ವತ್ಥಪುರ 
ಕಟೀಲು ಐದನೇ ಮೇಳ 29-12-2020ಕಟೀಲು ಕ್ಷೇತ್ರದಲ್ಲಿ 
ಕಟೀಲು ಆರನೇ ಮೇಳ29-12-2020ಮುಲ್ಕಾಜೆ ಮಾಡ, ಬಂಟ್ವಾಳ
ಮಂದಾರ್ತಿ ಒಂದನೇ ಮೇಳ 29-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 29-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 29-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 29-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಐದನೇ ಮೇಳ 29-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಹನುಮಗಿರಿ ಮೇಳ 29-12-2020ಶರವು ಶ್ರೀ ಮಹಾಗಣಪತಿ ದೇವಸ್ಥಾನಡಾ ರಾಜಾಂಗಣ – ಇಂದ್ರಕೀಲಕ – ಊರ್ವಶಿ ಶಾಪ – ಮಕರಾಕ್ಷ ಕಾಳಗ 
ಶ್ರೀ ತಳಕಲ ಮೇಳ29-12-2020ಶ್ರೀ ಕ್ಷೇತ್ರದಲ್ಲಿ – ಬೇಡರ ಕಣ್ಣಪ್ಪ 
ಶ್ರೀ ಮಾರಣಕಟ್ಟೆ ಮೇಳ ‘ಎ’29-12-2020ಖಾರ್ವಿಕೇರಿ, ಕುಂದಾಪುರ 
ಶ್ರೀ ಮಾರಣಕಟ್ಟೆ ಮೇಳ ‘ಬಿ’29-12-2020ಹೇರೂರು, ಬ್ರಹ್ಮಾವರ 
ಶ್ರೀ ಮಾರಣಕಟ್ಟೆ ಮೇಳ ‘ಸಿ’29-12-2020ನಾವುಂದ ಚಾತನಕೇರಿ ಬೊಬ್ಬರ್ಯ ದೇವಸ್ಥಾನ    
ಶ್ರೀ ಪಾವಂಜೆ ಮೇಳ 29-12-2020ಹೊಸನಗರ ತಾಲೂಕು ನಗರ ಹೈಸ್ಕೂಲ್ ಮೈದಾನ – ಕೆಳದಿ ಸಾಮ್ರಾಜ್ಯ 
ಶ್ರೀ ಹಟ್ಟಿಯಂಗಡಿ ಮೇಳ29-12-2020ಶಂಕರನಾರಾಯಣ – ದಿವ್ಯ ಸನ್ನಿಧಿ 
ಕಮಲಶಿಲೆ ಮೇಳ ‘ಎ’29-12-2020ಜಡ್ಡಿನಬೈಲು ಶ್ರೀ ನಂದಿಕೇಶ್ವರ ದೇವಸ್ಥಾನ ಸಿದ್ಧಾಪುರ 
ಕಮಲಶಿಲೆ ಮೇಳ ‘ಬಿ’29-12-2020ಮೋರ್ಟು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ   
ಶ್ರೀ ಬಪ್ಪನಾಡು ಮೇಳ29-12-2020ಮೀನಂಗೂರು, ಮರ್ಕಂಜ, ಸುಳ್ಯ – ಬನತ ಬಂಗಾರ್ 
ಶ್ರೀ ಅಮೃತೇಶ್ವರೀ ಮೇಳ29-12-2020ಶ್ರೀ ಯಕ್ಷೇಶ್ವರೀ ದೇವಸ್ಥಾನ, ಅಚ್ಲಾಡಿ, ಗಾಣಿಗರಬೆಟ್ಟು 
ಶ್ರೀ ಬೋಳಂಬಳ್ಳಿ ಮೇಳ 29-12-2020ಗಣಪತಿ ಕಟ್ಟೆ   – ನಾಗ ಸುನೇತ್ರೆ
ಶ್ರೀ ಸೌಕೂರು ಮೇಳ29-12-2020ದಾಸರಬೆಟ್ಟು ಮನೆಯವರು  – ಹಳನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಹಾಲಾಡಿ ಮೇಳ29-12-2020ನಾವುಂದ – ನೂತನ ಪ್ರಸಂಗ 
ಶ್ರೀ ಬೆಂಕಿನಾಥೇಶ್ವರ ಮೇಳ  29-12-2020ಕಾಟಿಪಳ್ಳ ಮಹಾಗಣಪತಿ ದೇವಸ್ಥಾನದ ರಾಜಾಂಗಣ – ಕಾರ್ನಿಕದ ಕಲ್ಕುಡ ಕಲ್ಲುರ್ಟಿ
ಶ್ರೀ ಮಡಾಮಕ್ಕಿ ಮೇಳ29-12-2020ಮಡಾಮಕ್ಕಿ ದೇವಸ್ಥಾನದ ವಠಾರ – ರಾಜವಂಶ ಗುಳಿಗ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ29-12-2020ಬಾಳ್ಕುದ್ರು ಹೆಗ್ಡೇರ್ ಮನೆ – ಎರಡನೇ ಸೇವೆ 

ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಶ್ರೀಧರ್ ಡಿ.ಎಸ್. ಆಯ್ಕೆ – ನಿಸ್ವಾರ್ಥ ಕಾಯಕಕ್ಕೆ ಸಂದ ಗೌರವ 

ಕರ್ನಾಟಕ ಯಕ್ಷಗಾನ ಅಕಾಡೆಮಿಯ 2020ನೇ ಸಾಲಿನ ಪ್ರಶಸ್ತಿಗಳ ಘೋಷಣೆ ಮಾಡಲಾಗಿದೆ. ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’ಯು ಯಕ್ಷಗಾನ ಪ್ರಸಂಗಕರ್ತ, ತಾಳಮದ್ದಳೆ ಅರ್ಥಧಾರಿ, ನಿವೃತ್ತ ಉಪನ್ಯಾಸಕ ಶ್ರೀಧರ ಡಿ.ಎಸ್ ಅವರಿಗೆ ಒಲಿದಿದೆ. 

ಶ್ರೀಧರ್ ಡಿ. ಎಸ್. ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ನಿಟ್ಟೂರು ಸಮೀಪದ ಧರೆಮನೆ ಎಂಬಲ್ಲಿ ಶ್ರೀಪಾದಯ್ಯ ಮತ್ತು ಸರಸ್ವತಿ ಅಮ್ಮ ದಂಪತಿಗಳಿಗೆ ಮಗನಾಗಿ 1950ನೇ ಇಸವಿ ಆಗಸ್ಟ್ 25ರಂದು ಜನಿಸಿದರು. ಶ್ರೀಧರ್ ಡಿ. ಎಸ್. ಇವರು ಹೆಬ್ಬಿಗೆ ಸರಕಾರೀ ಶಾಲೆಯಲ್ಲಿ 7ನೇ ತರಗತಿಯ ವರೇಗೆ ಓದಿ ಹೆಚ್ಚಿನ ವಿದ್ಯಾರ್ಜನೆಗೆ ಉಡುಪಿಯನ್ನು ಆಶ್ರಯಿಸಿದರು. ಹೆಬ್ಬಿಗೆ ಶಾಲೆಯಲ್ಲಿ ಓದುತ್ತಿರುವಾಗ ತೆಂಕಿನ ಮುಲ್ಕಿ ಮತ್ತು ಕೂಡ್ಲು ಮೇಳಗಳ ಆಟಗಳನ್ನು ಸಾಗರ ಪರಿಸರದಲ್ಲಿ ನೋಡುವ ಅವಕಾಶ ಸಿಕ್ಕಿತ್ತು. 

ಯಕ್ಷಗಾನವೆಂಬ ಆವರಣದಲ್ಲೇ ಬೆಳೆದ ಕಾರಣ ಇವರಿಗೆ ಸಹಜವಾಗಿ ಆಸಕ್ತಿ ಹುಟ್ಟಿಕೊಂಡಿತ್ತು. ಶ್ರೀಧರ್ ಡಿ. ಎಸ್.ರು ಪಾಠೇತರ ಚಟುವಟಿಕೆಗಳಲ್ಲೂ ಚುರುಕು. 6ನೇ ತರಗತಿಯಲ್ಲಿರುವಾಗಲೇ ಕುಮಾರವ್ಯಾಸ ಭಾರತವನ್ನು ಓದಿ ಮುಗಿಸಿದ್ದರು. ಯಕ್ಷಗಾನದ ಜತೆಗೆ ಓದುವ ಹವ್ಯಾಸವೂ ಇತ್ತು. ಈ ಸಂದರ್ಭ ನಾಟಕವೊಂದನ್ನು ರಚಿಸಿ, ನಿರ್ದೇಶಿಸಿ ಅಭಿನಯಿಸಿದ ಪ್ರತಿಭಾವಂತರು. 9ನೇ ತರಗತಿಯಲ್ಲಿ ಕಲಿಯುತ್ತಿರುವಾಗ ತಾಳಮದ್ದಳೆಗೆ ರಂಗಪ್ರವೇಶ- ಕರ್ಣಪರ್ವದ ವೃಷಸೇನನ ಪಾತ್ರದಲ್ಲಿ. 

ಉಡುಪಿಯಲ್ಲಿ ಹೈಸ್ಕೂಲ್ ಓದುತ್ತಿದ್ದಾಗ ಸಕ್ರಿಯವಾಗಿ ಯಕ್ಷಗಾನದಲ್ಲಿ ಭಾಗವಹಿಸಲಿಲ್ಲವಾದರೂ ಪಿ. ಯು. ಸಿ. ಓದುತ್ತಿರುವಾಗ ಅವಕಾಶಗಳು ಅರಸಿಬಂದವು. ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ, ನರಹರಿ ಭಟ್ (ಇವರು ಶ್ರೀಧರ್ ಡಿ. ಎಸ್. ಅವರ ಭಾವ), ತೋಕೂರು ರಾಮಚಂದ್ರ ಭಟ್ ಮತ್ತು ದೇವರು ನಾರಾಯಣ ಹೆಗಡೆಯವರ ಒಡನಾಟದಿಂದ ಮತ್ತೆ ಯಕ್ಷಗಾನದತ್ತ ಸೆಳೆಯಲ್ಪಟ್ಟರು. ಪಿ.ಯು.ಸಿ. ವಿದ್ಯಾರ್ಥಿಯಾಗಿರುವಾಗ ನಾಟ್ಯಾಭ್ಯಾಸ. ಸಕ್ಕಟ್ಟು ಸೀತಾರಾಮಯ್ಯನವರು ಉಡುಪಿ ಪರಿಸರದಲ್ಲಿ ನಾಟ್ಯ ತರಬೇತಿ ನೀಡುತ್ತಿದ್ದರು.

ಶ್ರೀಯುತರು ಬಡಗಿನ ಪ್ರಸಿದ್ಧ ಬಣ್ಣದ ವೇಷಧಾರಿ ಲಕ್ಷ್ಮೀನಾರಾಯಣಯ್ಯ ಸಕ್ಕಟ್ಟು ಇವರ ತಮ್ಮ ಅಧ್ಯಾಪಕರಾಗಿದ್ದ ಸೀತಾರಾಮಯ್ಯನವರಿಂದ ನಾಟ್ಯಾಭ್ಯಾಸ. ತೆಂಕಿನಲ್ಲೂ ಬಡಗಿನಲ್ಲೂ ಶ್ರೀಧರ್ ಡಿ. ಎಸ್. ವೇಷ ಮಾಡಲಾರಂಭಿಸಿದರು. ಪ್ರಸ್ತುತ ಈಗಲೂ ಕಾರ್ಯಾಚರಿಸುತ್ತಿರುವ ಉಡುಪಿ ವಿದ್ಯಾದಾಯಿನೀ ಯಕ್ಷಗಾನ ಸಭಾ ಸಂಸ್ಥೆಯು ಪ್ರತೀ ಭಾನುವಾರ ನಡೆಸುವ ತಾಳಮದ್ದಳೆಗಳಲ್ಲೂ ಭಾಗವಹಿಸುವ ಅವಕಾಶ ಸಿಕ್ಕಿತು. ಈ ಸಂಸ್ಥೆಯು ಕಲಿಕಾಸಕ್ತರಿಗೆ ಒಂದು ಪ್ರಾಥಮಿಕ ಶಾಲೆ ಇದ್ದಂತೆ ಎಂಬುದು ಶ್ರೀಧರ್ ಡಿ. ಎಸ್.ರವರ ಅಭಿಪ್ರಾಯ. 

ಪ್ರಸಂಗಜ್ಞಾನ, ರಂಗನಡೆಗಳನ್ನು ಅಭ್ಯಸಿಸಿದ ಶ್ರೀಯುತರು ಪಿ.ಯು.ಸಿ.ಯಲ್ಲಿರುವಾಗಲೇ ಪ್ರಸಂಗ ರಚನೆಗೆ ತೊಡಗಿದವರು. ವೀರಚಿತ್ರಧ್ವಜ ಎಂಬ ಕಾಲ್ಪನಿಕ ಪ್ರಸಂಗವನ್ನು, ಕೆಳದಿ ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ ಮತ್ತು ಶ್ರೀರಂಗರಾಯಭಾರ ಎಂಬ ಐತಿಹಾಸಿಕ ಪ್ರಸಂಗಗಳನ್ನೂ ರಚಿಸಿದರು. ಆದರೆ ಇವುಗಳೆಲ್ಲಾ ಅನಿರೀಕ್ಷಿತವಾಗಿ ಇವರ ಕೈಯಿಂದ ನಷ್ಟವಾದುದು ಬೇಸರದ ವಿಚಾರವೇ ಹೌದು. ಪದವಿ ಓದುತ್ತಿರುವಾಗ ಶ್ರೀಧರ್ ಡಿ. ಎಸ್.ರ ಪದ್ಯ ರಚನೆಯ ತುಡಿತಕ್ಕೆ ನೀರೆರೆದು ಸಾರವಿತ್ತವರು ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರು (ಕೊರ್ಗಿ ವೆಂಕಟೇಶ ಉಪಾಧ್ಯಾಯರ ತೀರ್ಥರೂಪರು.) ಇವರು ಖ್ಯಾತ ವಿದ್ವಾಂಸ, ಕವಿ, ಪುರೋಹಿತ, ಜೋತಿಷ್ಯರಾಗಿದ್ದರು. ಆದರೂ ಆರ್ಥಿಕವಾಗಿ ದುರ್ಬಲರಾಗಿದ್ದರು. ಇವರ ಪದ್ಯರಚನಾ ಕೌಶಲವು ಅದ್ಭುತ. ಅವರ ಸಲಹೆ ಸೂಚನೆಗಳಂತೆ ಶ್ರೀಧರ್ ಅವರು ಪ್ರಸಂಗ ರಚನಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಪಿ.ಯು.ಸಿ.ಯಲ್ಲಿರುವಾಗ ರುಕ್ಮಿಣೀ ಕಲ್ಯಾಣ ಪ್ರಸಂಗದಲ್ಲಿ ರುಕ್ಮಿಣಿಯಾಗಿ ರಂಗಪ್ರವೇಶ. ಪದವಿ ಓದುತ್ತಿರುವಾಗಲೂ, ಆಟಕೂಟಗಳಲ್ಲಿ ಭಾಗವಹಿಸುವಿಕೆ, ಪ್ರಸಂಗ ರಚನೆ ಹೀಗೆ ಕಲಾಸಂಬಂಧೀ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಪದವಿ ಶಿಕ್ಷಣ ಪೂರೈಸಿದ ಬಳಿಕ ಉಡುಪಿ ರಾಘವೇಂದ್ರ ಪುಸ್ತಕ ಭಂಡಾರದಲ್ಲಿ ಉದ್ಯೋಗಿಯಾಗಿದ್ದುಕೊಂಡು ಅಂಚೆ ತೆರಪಿನ ಶಿಕ್ಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದ ಶ್ರೀಧರ್ ಡಿ.ಎಸ್.ರು ಕೆಮ್ಮಣ್ಣು ಮತ್ತು ಕೋಟ ವಿದ್ಯಾಸಂಸ್ಥೆಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ದುಡಿದವರು. ಈ ಸಂದರ್ಭದಲ್ಲಿ ಯಕ್ಷಗಾನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಇವರೊಳಗೆ ಕವಿಯೊಬ್ಬ ಅವ್ಯಕ್ತವಾಗಿ ಕುಳಿತಿದ್ದ. ಆಸಕ್ತಿಯೂ ಇತ್ತು. ಹಾಗಾಗಿ ಪ್ರಸಂಗ ರಚನೆ ಮಾಡಬೇಕೆಂಬ ಹಂಬಲ ಉಂಟಾಯಿತು.

ಇವರಿಗೆ ಕಾಲೇಜಿನಲ್ಲಿ ಗುರುಗಳಾಗಿದ್ದವರು- ಉದ್ಯಾವರ ಮಾಧವ ಆಚಾರ್ಯ,  ಪ್ರೊ| ಎಂ. ರಾಜಗೋಪಾಲ ಆಚಾರ್ಯ, ರಾಮದಾಸ್ (ಕವಿ, ನಾಟಕಕಾರ). ಇವರ ಪ್ರೋತ್ಸಾಹ, ಸಹಕಾರವೂ ಸಿಕ್ಕಿತು. ಕರ್ನಾಟಕದಲ್ಲಿ ಉಡುಪಿಯು ಪ್ರತಿಭಾ ಬೆಳವಣಿಗೆಗೆ ಉತ್ತಮ ಸ್ಥಳ. ನನ್ನ ಬದುಕನ್ನೂ, ಜೀವನಕ್ಕೊಂದು ಸಾಂಸ್ಕೃತಿಕ ವಲಯವನ್ನೂ ನಿರ್ಮಿಸಿತು ಎಂದು ಶ್ರೀಧರ್ ಡಿ. ಎಸ್.ರು ಹೇಳುತ್ತಾರೆ. 1991ರಲ್ಲಿ ಕಿನ್ನಿಗೋಳಿ ಪೊಂಪೇ ಕಾಲೇಜಿಗೆ ಪೂರ್ಣಕಾಲಿಕ ಉಪನ್ಯಾಸಕನಾಗಿ ಸೇರ್ಪಡೆ. ಪರಿಸರದ ಜನರು ಯಕ್ಷಗಾನಾಸಕ್ತರು. ಸಮಾನಮನಸ್ಕರೆಲ್ಲಾ ತಾಳಮದ್ದಳೆ ಪ್ರದರ್ಶನಕ್ಕೆ ಸಂಘಟನೆಯೊಂದರ ಅವಶ್ಯಕತೆಯನ್ನು ಮನಗಂಡರು. ಗೋಪಾಲ ಶೆಟ್ರು, ರಾಧಾಕೃಷ್ಣ ಭಟ್ ಪೆರ್ಲ, ನಾರಾಯಣ ಹೆಗಡೆ ಮೊದಲಾದವರ ಜತೆ ಸೇರಿ ‘ಯಕ್ಷಲಹರಿ’ ಸಂಸ್ಥೆಯು ಚಿಗುರೊಡೆಯಲು ಕಾರಣರಾದರು.

ದಿ| ಇ. ಶ್ರೀನಿವಾಸ ಭಟ್ಟರು ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿ ಅನೇಕ ವರ್ಷಕಾಲ ಸದ್ರಿ ಹುದ್ದೆಯನ್ನು ನಿರ್ವಹಿಸಿದ್ದರು. ಯಕ್ಷಲಹರಿಯ ಯಶಸ್ವೀ ಕಾರ್ಯಕ್ರಮಗಳಿಗೆ ಶ್ರೀಧರ್ ಡಿ. ಎಸ್. ಅವರ ಪರಿಶ್ರಮವೂ ಕಾರಣವಾಗಿದೆ. 24 ವರ್ಷಗಳ ಕಾಲ ಈ ಸಂಸ್ಥೆಯ ಕಾರ್ಯದರ್ಶಿಯಾಗಿ ಪ್ರದರ್ಶನಗಳಲ್ಲಿ ಶಿಸ್ತಿಗೂ ಒಂದು ಆಕೃತಿಯನ್ನು ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ. ಪ್ರಸಂಗಗಳನ್ನು ಜೋಡಿಸಿ ಕಥಾಸರಣಿ, ಸಪ್ತಾಹ, ಅಷ್ಟಾಹ, ದಶಾಹ, ಏಕಾದಶಾಹ ಅಲ್ಲದೆ ಯಕ್ಷಪಕ್ಷ ಕಾರ್ಯಕ್ರಮಗಳನ್ನೂ ಯಕ್ಷಲಹರಿ ಸಂಸ್ಥೆಯು ನಡೆಸಿದೆ.

ಶ್ರೀಧರ್ ಡಿ.ಎಸ್. ಅವರು ಬರೆದ ಪ್ರಸಂಗಗಳು ಒಟ್ಟು 34. 2011ರಲ್ಲಿ ಪ್ರಸಂಗಮಾಲಿಕಾ ಎಂಬ ಹೆಸರಲ್ಲಿ ಯಕ್ಷಗಾನ ಕೇಂದ್ರ ಉಡುಪಿ ಇವರಿಂದ ಲೋಕಾರ್ಪಣೆಗೊಂಡಿತು. ಇದು 13 ಪ್ರಸಂಗಗಳನ್ನೊಳಗೊಂಡಿದೆ. ಅಲ್ಲದೆ ಜಡಭರತ (ಪೌರಾಣಿಕ) ಎಂಬ ಕಾದಂಬರಿ ಶ್ರೀರಾಮಚಂದ್ರಾಪುರ ಮಠದಿಂದ ಪ್ರಕಟಣೆಯಾಗಿ ಧರ್ಮಭಾರತಿ ಪುಸ್ತಕದಲ್ಲಿ ಧಾರಾವಾಹಿಯಾಗಿ ಬಂದಿತ್ತು. ವೀರತಪಸ್ವಿ ಎಂಬ ಕಾದಂಬರಿಯು ಧರ್ಮಭಾರತೀ ಪುಸ್ತಕದಲ್ಲಿ ಧಾರಾವಾಹಿಯಾಗಿ ಪ್ರಸ್ತುತ ಪ್ರಕಟವಾಗುತ್ತಿದೆ. ಅಲ್ಲದೆ ಶ್ರೀಧರ್ ಡಿ. ಎಸ್. ಅವರು ಗೋವಿಪ್ರ (ಕಿರುಕಾದಂಬರಿ), ಅಸುರಗುರು (ಬೃಹತ್ ಕಾದಂಬರಿ) ಎಂಬ ಪುಸ್ತಕವನ್ನು ಬರೆದಿರುತ್ತಾರೆ. ಇವುಗಳನ್ನು ಖ್ಯಾತ ಪ್ರಕಾಶನ ಸಂಸ್ಥೆ- ಸಾಹಿತ್ಯ ಭಂಡಾರ ಬೆಂಗಳೂರು ಇವರು ಪ್ರಕಟಿಸುತ್ತಿದ್ದಾರೆ. ಶುಕ್ರಾಚಾರ್ಯ, ದ್ರೋಣಾಚಾರ್ಯ, ಮಹಾಮುನಿ ಶುಕ ಎಂಬ ಮೂವರ ಜೀವನ ಚಿತ್ರಗಳು ಶ್ರೀರಾಮಚಂದ್ರಾಪುರ ಮಠದ ಸಂಸ್ಥೆಯಾದ ಭಾರತೀ ಪ್ರಕಾಶನ- ಶ್ರೀರಾಮಾಶ್ರಮ ಬೆಂಗಳೂರು ಇವರು ಪ್ರಕಟಿಸಿದ್ದಾರೆ.

‘ಬಸ್ಸು ಜಟಕಾ ಬಂಡಿ’ ಎಂಬ ಹಾಸ್ಯ ಲೇಖನಗಳ ಸಂಕಲನವನ್ನು ಕಿನ್ನಿಗೋಳಿಯ ಯುಗಪುರುಷ ಸಂಸ್ಥೆಯು ಪ್ರಕಟಿಸಿದೆ. ಹೀಗೆ ಶ್ರೀಧರ್ ಡಿ. ಎಸ್.ರ 42 ಪುಸ್ತಕಗಳು ಪ್ರಕಟವಾಗಿವೆ. ಕಟೀಲು ತಾಳಮದ್ದಳೆ ಕಥಾಸರಣಿಗಾಗಿ ಪೃಥುಯಜ್ಞ, ನೈಮಿಷಾರಣ್ಯ ಎಂಬ ಎರಡು ಪ್ರಸಂಗಗಳನ್ನೂ ರಚಿಸಿ ಕೊಟ್ಟಿದ್ದರು. ಇವರು ರಚಿಸಿದ ಮಹಾಪ್ರಸ್ಥಾನ ಪ್ರಸಂಗದ ಒಂದು ಭಾಗ ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ಎರಡನೇ ವರ್ಷದ ಕನ್ನಡ ಪಠ್ಯವಾಗಿತ್ತು. ಹೀಗೆ ಶ್ರೀಧರ್ ಡಿ. ಎಸ್. ಅವರು ಯಕ್ಷಗಾನಕ್ಕೆ ಅನೇಕ ಕೊಡುಗೆಗಳನ್ನಿತ್ತವರು. 2016ರಲ್ಲಿ ಕೆರೆಮನೆಯಲ್ಲಿ ‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ. ಅಲ್ಲದೆ ಅನೇಕ ತಾಳಮದ್ದಳೆ, ಕಮ್ಮಟಗಳಲ್ಲಿ ಅವಲೋಕನಕಾರರಾಗಿ ಭಾಗವಹಿಸಿದ ಹಿರಿಮೆ ಶ್ರೀಧರ್ ಡಿ. ಎಸ್. ಅವರದು. 

ಪೊಂಪೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೆಚ್ಚುಗೆಯ ಉಪನ್ಯಾಸಕನಾಗಿ ಸದ್ಯ ಕಿನ್ನಿಗೋಳಿಯಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಾ ಜತೆಗೆ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಕಲಾವಿದನಾಗಿ, ಉಪನ್ಯಾಸಕನಾಗಿ, ಕಲಾಸಂಘಟಕನಾಗಿ, ಲೇಖಕನಾಗಿ, ಪ್ರಸಂಗಕರ್ತನಾಗಿ ಗುರುತಿಸಿಕೊಂಡು ಕೀರ್ತಿಯನ್ನು ಗಳಿಸಿದರು. ಇವರು ಬರೆದ ಪ್ರಸಂಗಗಳು ‘ಯಕ್ಷಗಾನ ಪ್ರಸಂಗ ಮಾಲಿಕಾ’ ಸಂಪುಟವಾಗಿ ಪ್ರಕಟಗೊಂಡಿದ್ದು, ಈ ಕೃತಿಗೆ 2011ನೇ ಸಾಲಿನ ಯಕ್ಷಗಾನ ಬಯಲಾಟ ಅಕಾಡಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿಯೂ ಬಂದಿತ್ತು. 2016ನೇ ಇಸವಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು. ಯಕ್ಷಗಾನ ಮತ್ತು ಇತರ ಪತ್ರಿಕೆಗಳಿಗೆ ಇವರು ಬರೆದ ಲೇಖನಗಳು ಸುಮಾರು 475ಕ್ಕೂ ಮಿಕ್ಕಿ. ಯಕ್ಷಗಾನ ಕವಿಗಳ ಬಗ್ಗೆ ಇವರು ಬರೆದ ಲೇಖನಗಳು 25. ನಾಟಕಗಳ ಬಗ್ಗೆ ಅಲ್ಲದೆ ಉದಯವಾಣಿ, ಹೊಸದಿಗಂತ, ತುಷಾರ ಮೊದಲಾದ ಪತ್ರಿಕೆಗಳಲ್ಲಿ ಇವರು ಬರೆದ ಲೇಖನಗಳು ಪ್ರಕಟವಾಗಿದೆ. ಶ್ರೀಧರ ಡಿ.ಎಸ್. ಅವರಿಗೆ  ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’ಯು ಅರ್ಹವಾಗಿಯೇ ಸಂದಿದೆ. 

ಲೇಖಕ: ರವಿಶಂಕರ್ ವಳಕ್ಕುಂಜ 

ಮೇಳಗಳ ಇಂದಿನ (28-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (28-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ28-12-2020ತೆಕ್ಕಟ್ಟೆಕೊಮೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ28-12-2020ನಡುಗೋಡು ಕಿನ್ನಿಗೋಳಿ – ಕೊಲ್ಲೂರು ಕ್ಷೇತ್ರ ಮಹಾತ್ಮೆ
ಕಟೀಲು ಎರಡನೇ ಮೇಳ 28-12-2020ಕಟೀಲು ಕ್ಷೇತ್ರದಲ್ಲಿ – ಸುಂದೋಪಸುಂದರ ಕಾಳಗ, ಇಂದ್ರಜಿತು ಕಾಳಗ, ರಕ್ತರಾತ್ರಿ
ಕಟೀಲು ಮೂರನೇ ಮೇಳ28-12-2020ದಂಡೆಮಾರು ಮನೆ, ಬೋಳಂತೂರು, ಬಂಟ್ವಾಳ – ಶ್ರೀ ದೇವಿ ಮಹಾತ್ಮೆ   
ಕಟೀಲು ನಾಲ್ಕನೇ ಮೇಳ 28-12-20205ನೇ ಬ್ಲಾಕ್, ಕಾಟಿಪಳ್ಳ, ಸುರತ್ಕಲ್ – ಶ್ರೀ ದೇವಿ ಮಹಾತ್ಮೆ  
ಕಟೀಲು ಐದನೇ ಮೇಳ 28-12-2020ಕೆಲೆಂಜಾರು, ಕುಪ್ಪೆಪದವು – ಶ್ರೀ ದೇವಿ ಮಹಾತ್ಮೆ  
ಕಟೀಲು ಆರನೇ ಮೇಳ28-12-2020ಪಂಜ ಕೊಯಿಕುಡೆ, ವಯಾ ಹಳೆಯಂಗಡಿ – ಕುರುಕ್ಷೇತ್ರ 
ಮಂದಾರ್ತಿ ಒಂದನೇ ಮೇಳ 28-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 28-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 28-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 28-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಐದನೇ ಮೇಳ 28-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಹನುಮಗಿರಿ ಮೇಳ 28-12-2020ಶ್ರೀ ಕ್ಷೇತ್ರದಲ್ಲಿ ಸೇವೆ ಆಟ – ಪಾಂಡವಾಶ್ವಮೇಧ
ಶ್ರೀ ತಳಕಲ ಮೇಳ28-12-2020ಶ್ರೀ ಕ್ಷೇತ್ರದಲ್ಲಿ – ಸೀತಾ ಕಲ್ಯಾಣ 
ಶ್ರೀ ಮಾರಣಕಟ್ಟೆ ಮೇಳ ‘ಎ’28-12-2020ಶ್ರೀ ಕ್ಷೇತ್ರದಲ್ಲಿ  
ಶ್ರೀ ಮಾರಣಕಟ್ಟೆ ಮೇಳ ‘ಬಿ’28-12-2020ಸಿಪಾಯಿಮನೆ, ಕನ್ಯಾನ 
ಶ್ರೀ ಮಾರಣಕಟ್ಟೆ ಮೇಳ ‘ಸಿ’28-12-2020ಜಟ್ನಾಡಿ, ಎಳಜಿತ್ 
ಶ್ರೀ ಪಾವಂಜೆ ಮೇಳ 28-12-2020ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪುತ್ತೂರು, ಉಡುಪಿ – ಮಹಾಕಲಿ ಮಗಧೇಂದ್ರ   
ಶ್ರೀ ಹಟ್ಟಿಯಂಗಡಿ ಮೇಳ28-12-2020ಗೋಳಿಯಂಗಡಿ – ದಿವ್ಯ ಸನ್ನಿಧಿ 
ಕಮಲಶಿಲೆ ಮೇಳ ‘ಎ’28-12-2020ಹೊರಳಿಜಡ್ಡು, ರಟ್ಟಾಡಿ 
ಕಮಲಶಿಲೆ ಮೇಳ ‘ಬಿ’28-12-2020ಲಕ್ಷ್ಮಿ ವೆಂಕಟರಮಣ ದೇವರ ಸನ್ನಿಧಿ, ನೇರಳಕಟ್ಟೆ  
ಶ್ರೀ ಸಸಿಹಿತ್ಲು ಭಗವತೀ ಮೇಳ 28-12-2020ಶ್ರೀ ಕ್ಷೇತ್ರದಲ್ಲಿ – ಶ್ರೀ ಭಗವತೀ ಮಹಾತ್ಮೆ 
ಶ್ರೀ ಅಮೃತೇಶ್ವರೀ ಮೇಳ28-12-2020ಹರ್ತಟ್ಟು, ಕೋಟ
ಶ್ರೀ ಬೋಳಂಬಳ್ಳಿ ಮೇಳ 28-12-2020ಬಾಳಿಕೆರೆ – ನಾಗ ಸುನೇತ್ರೆ
ಶ್ರೀ ಸೌಕೂರು ಮೇಳ28-12-2020ಹಳ್ನಾಡು ಹೊಲಾಡಮ್ಮ ದೇವಸ್ಥಾನ – ಹಳನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಹಾಲಾಡಿ ಮೇಳ28-12-2020ಮೆಟ್ಟಿನಹೊಳೆ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ  28-12-2020ಕಾಟಿಪಳ್ಳ ಮಹಾಗಣಪತಿ ದೇವಸ್ಥಾನ – ಮಹಿಮೆದ ಮಂತ್ರದೇವತೆ  
ಶ್ರೀ ಮಡಾಮಕ್ಕಿ ಮೇಳ28-12-2020ಶ್ರೀ ಕ್ಷೇತ್ರದಲ್ಲಿ ಪ್ರಥಮ ದೇವರ ಸೇವೆ ಆಟ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ28-12-2020ಶ್ರೀ ಕ್ಷೇತ್ರದಲ್ಲಿ ಪ್ರಥಮ ಸೇವೆಯಾಟ