Sunday, September 20, 2026
Home Blog Page 358

ಸರ್ವಸ್ವವನ್ನೂ ಯಕ್ಷಗಾನಕ್ಕೆ ಸಮರ್ಪಿಸಿದ ಕಲಾತಪಸ್ವಿ – ಹೊಸ್ತೋಟ ಮಂಜುನಾಥ ಭಾಗವತರು

ಯಕ್ಷಗಾನ ರಂಗದಲ್ಲಿ ಭೀಷ್ಮ ಪಿತಾಮಹನೆಂದೇ ಗುರುತಿಸಲ್ಪಟ್ಟ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ರಂಗದಲ್ಲಿ ಪರಿವ್ರಾಜಕನೆಂದೇ ಕರೆಯಲ್ಪಟ್ಟವರು. ಕಲಾತಪಸ್ವಿಯಾಗಿದ್ದ ಮಂಜುನಾಥ ಭಾಗವತರು ಯಕ್ಷಗಾನಕ್ಕಾಗಿ ಇಡೀ ಬದುಕನ್ನೇ ಸಮರ್ಪಿಸಿದವರು. ಉತ್ತರ ಕನ್ನಡ ಜಿಲ್ಲೆಯ ಹೊಸತೋಟದಲ್ಲಿ ಜನಿಸಿದವರಾದರೂ ಯಕ್ಷಗಾನದ ಅಭ್ಯುದಯಕ್ಕಾಗಿ ಊರೂರು ಅಲೆದವರು. ಜೀವನದ ಕೊನೆಯ ಕ್ಷಣದ ವರೆಗೂ ಯಕ್ಷಗಾನವೇ ಅವರ ಉಸಿರಾಗಿತ್ತು. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಾ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಸದಾ ಯಕ್ಷಗಾನದ ವಿಷಯವನ್ನೇ ಮಾತನಾಡುತ್ತಿದ್ದರು. ಯಕ್ಷಗಾನವನ್ನೇ ಧ್ಯಾನಿಸುತ್ತಿದ್ದರು.

ಅವರು ಸದಾ ತಪಸ್ವಿ. ಕಾವಿ ಬಟ್ಟೆ ತೊಡದೆ ಸನ್ಯಾಸಿಯಂತೆ ಬದುಕಿದವರು. ಬಾಲ್ಯದ ಕಷ್ಟಕಾಲದಲ್ಲಿ ಹಠಕ್ಕೆ ಬಿದ್ದ ಸನ್ಯಾಸಿಯಂತೆ ಜೀವಿಸಿದರು. ಅನೇಕ ಮಹಾನುಭಾವರ ಆಶ್ರಯದಲ್ಲಿ ಬೆಳೆಯಬೇಕಾಯಿತು. ಆದರೂ ಧೃತಿಗೆಡದೆ ಸಾಧನೆ ಮಾಡಿದ ಅಪೂರ್ವ ಸಾಧಕ. ಯಕ್ಷ ಋಷಿ ಎಂಬ ಬಿರುದು ಇವರಿಗೆ ಸಾರ್ಥಕ ಮಾತ್ರವಲ್ಲದೆ ಅದರಂತೆಯೇ ಬದುಕಿ ಬಾಳಿದವರು. ತನ್ನ ಇಡೀ ಬದುಕನ್ನೇ ಯಕ್ಷಗಾನಕ್ಕಾಗಿ ಸಮರ್ಪಿಸಿದ ಕಲಾತಪಸ್ವಿ ಹೊಸ್ತೋಟ ಮಂಜುನಾಥ ಭಾಗವತರು (80) 1940ರಲ್ಲಿ ಜನಿಸಿದವರು. ಬಾಲ್ಯದಲ್ಲೇ ಯಕ್ಷಗಾನದಲ್ಲಿ ಅತೀವ ಆಸಕ್ತಿ. ಭಾಗವತಿಕೆ, ನೃತ್ಯ, ಚಂಡೆ, ಮದ್ದಲೆ, ವೇಷಗಾರಿಕೆ, ಅರ್ಥಗಾರಿಕೆಯ ಸಹಿತ ಯಕ್ಷಗಾನದ ಪ್ರತಿಯೊಂದು ವಿಭಾಗಗಳಲ್ಲೂ ಪ್ರಾವೀಣ್ಯತೆಯನ್ನು ಹೊಂದಿದ್ದರು. ಇವರು ಬಾಳೆಹದ್ದ ಕೃಷ್ಣ ಭಾಗವತ ಹಾಗೂ ಕೆರೆಮನೆ ಮಹಾಬಲ ಹೆಗಡೆಯವರ ಶಿಷ್ಯರೂ ಆಗಿದ್ದರು.

ವಾಸಿಸಲು ಸ್ವಂತ ಮನೆಯನ್ನೂ ಕಟ್ಟಿಕೊಳ್ಳದೆ ಸನ್ಯಾಸಿಯಂತೆ ಬದುಕಿ ತನ್ನ ಇಡೀ ಬದುಕನ್ನು ಯಕ್ಷಗಾನಕ್ಕಾಗಿಯೇ ಮೀಸಲಾಗಿಟ್ಟರು. ಅನಿರೀಕ್ಷಿತವಾಗಿ ಯಕ್ಷಗಾನ ಕಲಿಸುವ ಸಂದರ್ಭವೊದಗಿತು. ಆಮೇಲೆ ಭಾಗವತರು ಹಿಂತಿರುಗಿ ನೋಡಲಿಲ್ಲ. ಅಲ್ಲಲ್ಲಿ ಯಕ್ಷಗಾನ ತರಗತಿಗಳಲ್ಲಿ ವಿದ್ಯಾದಾನ ಮಾಡತೊಡಗಿದರು. ಅದರ ಫಲವಾಗಿ ಸುಮಾರು 1500ಕ್ಕೂ ಹೆಚ್ಚು ಶಿಷ್ಯಂದಿರನ್ನು ಸಂಪಾದಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ತರಗತಿಗಳನ್ನು ನಡೆಸಿದ್ದಾರೆ. ಅವರು ರಚಿಸಿದ 300ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳಲ್ಲಿ ರಾಮ ನಿರ್ಯಾಣ, ಶ್ರೀರಾಮ ಮಹಿಮೆ, ಶ್ರೀಕೃಷ್ಣ ಮಹಿಮೆ, ಮಹಾಭಾರತ, ಹನುಮಾಯಣ, ಗೋಮಹಿಮೆ, ರಾಮಕೃಷ್ಣ ಚರಿತೆ, ಭಾಸವತಿ, ಮೇಘದೂತ, ಉತ್ತರರಾಮ ಚರಿತೆ, ಪ್ರತಿಜ್ಞಾಯೌಗಂಧರಾಯಣ, ಚಂಡ ಮಹಾಸೇನ, ಸುಹಾಸಿನಿ ಪರಿಣಯ ಮೊದಲಾದವುಗಳು ಸೇರಿವೆ. ಇವುಗಳಲ್ಲದೆ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಜಾನಪದ ಅಕಾಡೆಮಿಯ ವಿಶೇಷ ಪುರಸ್ಕಾರ, ಅಗ್ನಿ ಸೇವಾ ಟ್ರಸ್ಟ್‍ನ ಪರಮದೇವ ಪ್ರಶಸ್ತಿ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಮತ್ತು ವೀರಭದ್ರ ನಾಯಕ ಪ್ರಶಸ್ತಿ, ಸೀತಾನದಿ ಗಣಪಯ್ಯ ಭಾಗವತ ಪುರಸ್ಕಾರ, ಯಕ್ಷಗಾನ ಕಲಾರಂಗ ಉಡುಪಿ ನೀಡುವ ಉಪ್ಪೂರು ನಾರಾಯಣ ಭಾಗವತ ಪ್ರಶಸ್ತಿ, ರಾಮವಿಠ್ಠಲ ಪುರಸ್ಕಾರ, ಆಳ್ವಾಸ್ ನುಡಿಸಿರಿ ಪುರಸ್ಕಾರ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಭಾಗವತರು ಪಡೆದಿದ್ದಾರೆ. ಹೊಸ್ತೋಟ ಮಂಜುನಾಥ ಭಾಗವತರ ಅಭಿನಂದನಾ ಸಮಿತಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಪ್ರಕಟಿಸಿದ ‘ಯಕ್ಷ ಋಷಿ’, ಸಾಕೇತ ಟ್ರಸ್ಟ್ ಹೆಗ್ಗೋಡು ಪ್ರಕಟಿಸಿದ ‘ಷಷ್ಠ್ಯಬ್ಧಿ’ ಮತ್ತು ನಾರಾಯಣ ಜೋಶಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಪ್ರಕಟಿಸಿದ ‘ಬಹುಮುಖ’ ಮೊದಲಾದವುಗಳು ಅವರ ಬಗ್ಗೆ ಪ್ರಕಟ ಗೊಂಡಿರುವ ಅಭಿನಂದನಾ ಗ್ರಂಥಗಳು.


ತನಗಾಗಿ ಬಾಳದೆ ಜನರಿಗಾಗಿ ಬಾಳಿದ, ತನಗಾಗಿ ಸಂಪಾದಿಸದೆ ಎಲ್ಲವನ್ನೂ ಯಕ್ಷಗಾನಕ್ಕೆ ನೀಡಿದ, ತನ್ನ ಸರ್ವಸ್ವವನ್ನೂ ಹೆಚ್ಚೇಕೆ ತನ್ನ ಜೀವವನ್ನೇ ಯಕ್ಷಗಾನಕ್ಕಾಗಿ ಮುಂದಿನ ಪೀಳಿಗೆಗಾಗಿ ಸಮರ್ಪಿಸಿದ, ಗಂಧದ ಕೊರಡಿನಂತೆ ತನ್ನ ಜೀವನವನ್ನು ತೇದ ಹೊಸತೋಟ ಮಂಜುನಾಥ ಭಾಗವತರಂತವರನ್ನು ನಾವು ಮತ್ತೆ ಕಾಣಲಾರೆವು. ಅವರು ಎಲ್ಲವನ್ನೂ ಈ ರಂಗಕ್ಕೆ ಕೊಟ್ಟರು. ತನಗಾಗಿ ಏನನ್ನೂ ಉಳಿಸದೆ ಮರೆಯಾದರು.

ತರಬೇತಿ ಕೇಂದ್ರಕ್ಕೆ ಮೊದಲ ಬಾರಿ ಆಯ್ಕೆಯಾಗದಿದ್ದರೂ ಮತ್ತೆ ನಡೆಯಿತು ಅಚ್ಚರಿ – ಪದ್ಯಾಣ ಗಣಪತಿ ಭಟ್ ಗಾನ ಗಂಧರ್ವನಾದ ಯಶಸ್ಸಿನ ಕತೆ 

ಶೇಣಿಯವರಿಗೆ ಬಡಗಿನ ಶ್ರೇಷ್ಠ ಭಾಗವತರಾಗಿದ್ದ ಜಿ. ಆರ್. ಕಾಳಿಂಗ ನಾವಡ ಮತ್ತು ತೆಂಕಿನ ಶ್ರೇಷ್ಠ ಭಾಗವತರಾಗಿದ್ದ ಶ್ರೀ ದಾಮೋದರ ಮಂಡೆಚ್ಚರೆಂದರೆ ಅಚ್ಚುಮೆಚ್ಚು. ಕಾಳಿಂಗ ನಾವಡರಿಂದ ಪ್ರಶಂಸಿಸಲ್ಪಟ್ಟವರು ಪದ್ಯಾಣ ಗಣಪತಿ ಭಟ್ಟರು. ದಾಮೋದರ ಮಂಡೆಚ್ಚರು ಅವ್ಯಕ್ತ ಲೋಕವನ್ನು ಸೇರಿಕೊಂಡ ಮೇಲೆ ಆಟ, ಕೂಟಗಳಿಗೆ ಶೇಣಿಯವರು ಪದ್ಯಾಣರನ್ನೇ ಆಯ್ಕೆ ಮಾಡುತ್ತಿದ್ದರಂತೆ. ಇದು ಪದ್ಯಾಣ ಗಣಪತಿ ಭಟ್ಟರ ಪ್ರತಿಭೆಗೆ ಸಂದ ಗೌರವ. ಶೇಣಿ, ತೆಕ್ಕಟ್ಟೆ, ಅಗರಿ ರಘುರಾಮ ಭಾಗವತ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟದಿಂದ ಪಕ್ವರಾಗಿ ಶ್ರೀ ಪದ್ಯಾಣ ಗಣಪತಿ ಭಟ್ಟರು ರಂಗದಲ್ಲಿ ವಿಜೃಂಭಿಸಿದರು. ಸುರತ್ಕಲ್, ಮಂಗಳಾದೇವಿ, ಹೊಸನಗರ ಮೇಳಗಳಲ್ಲಿ ತಿರುಗಾಟ ನಡೆಸಿ ಪ್ರಸ್ತುತ ಶ್ರೀ ಹನುಮಗಿರಿ ಮೇಳದಲ್ಲಿ ಕಲಾಸೇವೆಯನ್ನು ನಡೆಸುತ್ತಿದ್ದಾರೆ.

 ‘‘ರಂಗವನ್ನು ಆಳುವ ಜಾಣ್ಮೆ ಪದ್ಯಾಣರಲ್ಲಿ ಮೈತುಂಬಿದೆ. ಅವರು ರಂಗದಲ್ಲಿದ್ದಷ್ಟು ಹೊತ್ತು ರಂಗದ ಎಲ್ಲಾ ಸೂಕ್ಷ್ಮ ಸಂಗತಿಗಳು ಅವರಿಗೆ ಶರಣಾಗುವ ಅವ್ಯಕ್ತ ಸಂಗತಿಯೊಂದು ಗೋಚರವಾಗುವುದು ಪದ್ಯಾಣರ ದೀರ್ಘಕಾಲದ ಅನುಭವದ ಪರಿಪಕ್ವ ಫಲವಾಗಿದೆ’’. ಸಂಪಾಜೆ ಯಕ್ಷೋತ್ಸವದ ರೂವಾರಿ, ಕಲಾಪೋಷಕ      ಡಾ. ಟಿ. ಶ್ಯಾಮ್ ಭಟ್ಟರು ಆಟಕೂಟಗಳಲ್ಲಿ ಭಾಗವತರಾಗಿ ಪದ್ಯಾಣ ಗಣಪತಿ ಭಟ್ಟರ ಪ್ರಸಂಗವನ್ನು ಮುನ್ನಡೆಸಿದ ರೀತಿಯನ್ನು ನೋಡಿ, ಅನುಭವಿಸಿ ಹೇಳಿದ ಮಾತಿದು. ಪದ್ಯಾಣ ಮನೆಯಲ್ಲಿ ಹೆಚ್ಚಿನವರೂ ಕಲಾವಿದರೆಂದೇ ಹೇಳಬಹುದು. ಪದ್ಯಾಣ ಗಣಪತಿ ಭಟ್ಟರ ಅಣ್ಣ ಪದ್ಯಾಣ ಪರಮೇಶ್ವರ ಭಟ್ ಮತ್ತು ತಮ್ಮ ಪದ್ಯಾಣ ಜಯರಾಮ ಭಟ್ಟರೂ ಮದ್ದಳೆಗಾರರು. ತೆಂಕುತಿಟ್ಟಿನ ಹಿರಿಯ ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ಟರು ಇವರ ಚಿಕ್ಕಪ್ಪ (ಸಣ್ಣಜ್ಜನ ಮಗ). ಯುವ ಮದ್ದಳೆಗಾರ ಚೈತನ್ಯಕೃಷ್ಣರೂ ಪದ್ಯಾಣ ಮನೆಯವರೇ. ಪದ್ಯಾಣ ಶಂಕರನಾರಾಯಣ ಭಟ್ಟರ ತಮ್ಮ ಶಿವರಾಮ ಭಟ್ಟರ ಪುತ್ರ. ಅನೇಕ ಹಿಮ್ಮೇಳ ಮುಮ್ಮೇಳ ಕಲಾವಿದರು ಪದ್ಯಾಣ ಮನೆತನದಲ್ಲಿ ಹುಟ್ಟಿ ಬೆಳೆದರು.

ಶ್ರೀ ಪದ್ಯಾಣ ಗಣಪತಿ ಭಟ್ಟರು 1955 ಜನವರಿ 21ರಂದು ಸುಳ್ಯ ತಾಲೂಕಿನ ಕಲ್ಮಡ್ಕದ ಸಮೀಪ ಗೋಳ್ತಜೆ ಎಂಬಲ್ಲಿ ಪದ್ಯಾಣ ತಿರುಮಲೇಶ್ವರ ಭಟ್, ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಚಿಕ್ಕ ಮಗುವಾಗಿದ್ದಾಗ ಬಾಲಪೀಡೆ ಎಂಬ ರೋಗಕ್ಕೆ ತುತ್ತಾಗಿ ಕಾಲನಾಲಯದ ಬಳಿಯವರೆಗೂ ಸಾಗಿ ಮೃತ್ಯುವನ್ನು ಜಯಿಸಿ ಬಂದಿದ್ದರು. ಒಂದು ರೀತಿಯಲ್ಲಿ ಪುನರ್ಜನ್ಮ. ಕಲ್ಮಡ್ಕ ಸರಕಾರೀ ಶಾಲೆಯಲ್ಲಿ 7ನೇ ತರಗತಿ ವರೇಗೆ ಓದಿ ಬಾಳಿಲ ವಿದ್ಯಾಬೋಧಿನೀ ಶಾಲೆಗೆ ಸೇರಿದ್ದರು. ಕಲಿಕೆಯಲ್ಲಿ ಇವರಿಗೆ ಅಷ್ಟು ಆಸಕ್ತಿಯಿರಲಿಲ್ಲ. ಹಿರಿಯರ ಒತ್ತಡಕ್ಕೆ ಮಣಿದು ಶಾಲೆಗೆ ಹೋಗುತ್ತಿದ್ದರು. ಶಾಲೆಯಲ್ಲಿ ಯಕ್ಷಗಾನ ತಂಡವು ಸಿದ್ಧವಾಗಿತ್ತು. ಆಗ ಶ್ರೀನಿವಾಸ ಉಡುಪರು ಮುಖ್ಯೋಪಾಧ್ಯಾಯರಾಗಿದ್ದರು. ಅವರ ಹೇಳಿಕೆಯಂತೆ ಶಾಲಾ ವಾರ್ಷಿಕೋತ್ಸವದ ಪ್ರದರ್ಶನ ಬಭ್ರುವಾಹನ ಕಾಳಗ ಪ್ರಸಂಗದಲ್ಲಿ ವೃಷಕೇತು ಪಾತ್ರವನ್ನು ಮಾಡಿದ್ದರು. ಗಣಪತಿ ಭಟ್ಟರು ಬಾಲಕನಾಗಿದ್ದಾಗ ಬಲು ತುಂಟರಾಗಿದ್ದರು. ಕಲಿಕೆಯಲ್ಲಿ ಹಿಂದೆ. ಯಕ್ಷಗಾನವನ್ನಾದರೂ ಕಲಿಯಲಿ ಎಂದು ಅವರಮ್ಮ ಹೇಳಿದರಂತೆ.

ಅದೇ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಆರಂಭವಾಗಿತ್ತು. ಯಕ್ಷಗಾನವು ಪದ್ಯಾಣ ಮನೆಯವರಿಗೆ  ರಕ್ತಗತವೇ ಆಗಿರುವ ವಿಚಾರ. ಗಣಪತಿ ಭಟ್ಟರ ಅಜ್ಜ ಪುಟ್ಟುನಾರಾಯಣ ಭಟ್ಟರು ಶ್ರೇಷ್ಠ ಭಾಗವತರಾಗಿದ್ದರು. ಹಿಮ್ಮೇಳದ ಮಹಾನ್ ಗುರು ಮಾಂಬಾಡಿ ನಾರಾಯಣ ಭಾಗವತರಿಗೂ ಗುರುಸದೃಶರಾಗಿದ್ದವರು. ಅವರಿಗೆ ಅನೇಕ ಪ್ರಸಂಗಗಳು ಕಂಠಪಾಠ. ಗಣಪತಿ ಭಟ್ಟರ ತಂದೆ ತಿರುಮಲೇಶ್ವರ ಭಟ್ಟರೂ ಒಳ್ಳೆಯ ಮದ್ದಳೆಗಾರರಾಗಿದ್ದರು. ಗಣಪತಿ ಭಟ್ಟರು ಧರ್ಮಸ್ಥಳದತ್ತ ಸಾಗಿದರು. ಮಾಂಬಾಡಿ ನಾರಾಯಣ ಭಾಗವತರು, ಕುರಿಯ ವಿಠಲ ಶಾಸ್ತ್ರಿಗಳು, ಪಡ್ರೆ ಚಂದುರವರು ಸಂದರ್ಶಕರಾಗಿದ್ದರು. ಗಣಪತಿ ಭಟ್ಟರು ಸಂದರ್ಶನದಲ್ಲಿ ಅನುತ್ತೀರ್ಣರಾಗಿದ್ದರು. ಪದ್ಯಾಣ ಮನೆಯವನೆಂದು ತಿಳಿದು ಸಂದರ್ಶಕರು ಮತ್ತೆ ಖಾವಂದರಲ್ಲಿ ಹೇಳಿ ತರಬೇತಿಗೆ ಸೇರಿಸಿಕೊಂಡರಂತೆ. ಈ ಘಟನೆಯೇ ಜೀವನದ ತಿರುವು. ಕಲಾಮಾತೆಯು ಶ್ರೇಷ್ಠ ಭಾಗವತನೊಬ್ಬನನ್ನು ಕಳೆದುಕೊಳ್ಳಲು ಸಿದ್ಧಳಿರಲಿಲ್ಲ.

ಶ್ರೀ ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ತರಬೇತಿ ಕೇಂದ್ರದಲ್ಲಿ ಮಾಂಬಾಡಿ ನಾರಾಯಣ ಭಟ್ಟರ ಶಿಷ್ಯನಾಗಿ ಕಲಿಕೆಯತ್ತ ಗಮನಹರಿಸಿದರು. ತರಬೇತಿ ಮುಗಿದು ಮನೆಗೆ ತೆರಳುವಾಗ ಸಂದರ್ಶನದಲ್ಲಿ ಅನುತ್ತೀರ್ಣನಾಗಿದ್ದ ನೀನು ಮನೆಗೆ ಹೋಗಿದ್ದರೆ, ನಿನ್ನಂತಹ ಶಿಷ್ಯನನ್ನು ಕಳೆದುಕೊಳ್ಳುತ್ತಿದ್ದೆ. ನಿನಗೂ ನಷ್ಟವಾಗುತ್ತಿತ್ತು ಎಂದು ಮಾಂಬಾಡಿ ನಾರಾಯಣ ಭಾಗವತರು ಹೇಳಿದ್ದರಂತೆ. ಧರ್ಮಸ್ಥಳ ಕಲಿಕಾ ಕೇಂದ್ರದಿಂದ ಮರಳಿದ ನಂತರ ಪದ್ಯಾಣ ಗಣಪತಿ ಭಟ್ಟರು ಕಲ್ಮಡ್ಕ ಪರಿಸರದಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಭಾಗವತರಾದ ದಾಸರಬೈಲು ಚನಿಯ ನಾಯ್ಕರ ಒಡನಾಟ ರಂಗದೊಳಗೆ ಪ್ರತ್ಯಕ್ಷ ಕಲಿಕೆಗೆ ವೇದಿಕೆಯಾಯಿತು. 1972-73ರ ಕಾಲ ಚೌಡೇಶ್ವರೀ ಮೇಳದ ಪ್ರದರ್ಶನ,    ಪೆರಾಜೆ, ಪೆರ್ನಾಜೆ ಮೊದಲಾದ ಸ್ಥಳಗಳಲ್ಲಿ ನಡೆಯುತ್ತಿದ್ದ ಆಟಕೂಟಗಳಲ್ಲಿ ಭಾಗವಹಿಸಿದರು. ದಾಸರಬೈಲು ಚನಿಯ ನಾಯ್ಕರು ಪ್ರಸಂಗವನ್ನು ಮುನ್ನಡೆಸುತ್ತಿದ್ದ ಕ್ರಮವನ್ನು ನೋಡಿ ಕಲಿತರು. ಚನಿಯ ನಾಯ್ಕ, ಪ್ರಸಂಗಕರ್ತ ಮಧುಕುಮಾರ್ ಭಾಗವತರ ಹಾಡುಗಳಿಗೆ ಚೆಂಡೆ ಮದ್ದಳೆ ವಾದಕನಾಗಿಯೂ ಭಾಗವಹಿಸಿದರು.

ಮುಂದೆ ಶಂಕರ ಭಟ್ಟ ‘ಟೂರಿಂಗೆ ಕ್ಯಾಂಪು’ ತಿರುಗಾಟ. ಭಾಗವತನಾಗಿ ಕಲಾಸೇವೆ. ಆ ತಂಡದಲ್ಲಿ ಶಿವರಾಮ ಜೋಗಿ, ಬಾಯಾರು ಪ್ರಕಾಶ್ಚಂದ್ರ ರಾವ್, ವೇಣೂರು ಸುಂದರ ಆಚಾರ್ಯ ಮೊದಲಾದ ಕಲಾವಿದರಿದ್ದರು. ಮುಂದಿನ ವರುಷ ಸುರತ್ಕಲ್ಲು ಮೇಳಕ್ಕೆ ಸಂಗೀತಗಾರರಾಗಿ ಬರಲು ಶಿವರಾಮ ಜೋಗಿಯವರು ಮತ್ತು ವೇಣೂರು ಸುಂದರ ಆಚಾರ್ಯರು ಆಹ್ವಾನಿಸಿದಾಗ ಗಣಪತಿ ಭಟ್ಟರು ಸಂತೋಷದಿಂದ ಒಪ್ಪಿಕೊಂಡಿದ್ದರು. ಅಗರಿ ಶ್ರೀನಿವಾಸ ರಾಯರು ಮತ್ತು ಅಗರಿ ರಘುರಾಮ ರಾಯರು ಭಾಗವತರಾಗಿದ್ದರು. ಗಣಪತಿ ಭಟ್ಟರು ಸಂಗೀತಗಾರನಾಗಿ ಪೂರ್ವರಂಗವನ್ನು ನಿರ್ವಹಿಸಿ ಪ್ರಸಂಗಕ್ಕೆ ಮದ್ದಳೆಯನ್ನೂ ಬಾರಿಸು ತ್ತಿದ್ದರು. ಮೂರು ತಿಂಗಳ ಬಳಿಕ ಅಗರಿ ರಘುರಾಮ ರಾಯರು ಮುಖ್ಯ ಭಾಗವತರಾಗಿದ್ದರು. ಸಂಗೀತದ ಬಳಿಕ ಪ್ರಸಂಗದಲ್ಲಿ ಪದ್ಯ ಹೇಳುವ ಅವಕಾಶವಿತ್ತು ಪ್ರೋತ್ಸಾಹಿಸಿದ್ದರು. ಬೆಳ್ಳಾರೆಯಲ್ಲಿ ಸುರತ್ಕಲ್ಲು ಮೇಳದ ಆಟ ಆಡಿಸಿ ಅಗರಿ ಶ್ರೀನಿವಾಸ ಭಾಗವತರನ್ನು ಸನ್ಮಾನಿಸಿದ್ದರು.

ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರರಾಮ, ರಾಜಾ ಯಯಾತಿ, ಸತೀ ಶೀಲವತಿ, ತುಳುನಾಡ ಬಲಿಯೇಂದ್ರೆ ಪದ್ಯಾಣ ಗಣಪತಿ ಭಟ್ಟರಿಗೆ ತಾರಾಮೌಲ್ಯವನ್ನು ತಂದಿತ್ತವು. ಯಶಸ್ವೀ ಯಜಮಾನರಾದ ಕಸ್ತೂರಿ ಪೈಗಳ ಸುರತ್ಕಲ್ಲು ಮೇಳವು ಗಜಮೇಳವಾಗಿ ವಿಜೃಂಭಿಸುತ್ತಿತ್ತು. ಶೇಣಿ, ತೆಕ್ಕಟ್ಟೆ, ಅಗರಿ ರಘುರಾಮ ಭಾಗವತರು, ಜಲವಳ್ಳಿ ಅಲ್ಲದೆ ಅನೇಕ ಹಿರಿಯ ಕಲಾವಿದರ ಒಡನಾಟ ಇವರಿಗೆ ದೊರಕಿತು. ರಾಮದಾಸ ಸಾಮಗರ ಜತೆ ತಿರುಗಾಟವೂ ಇತ್ತು. ಶೇಣಿಯವರು ತಿದ್ದಿ ತೀಡಿದರು. ಅಗರಿ ರಘುರಾಮ ಭಾಗವತರು ಹೆಚ್ಚು ಹೆಚ್ಚು ಹಾಡಲು ಅವಕಾಶವಿತ್ತು ಗಣಪತಿ ಭಟ್ಟರ ಪ್ರತಿಭೆ ಬೆಳಗಲು ಕಾರಣರಾದರು. ಅಗರಿಯವರ ನಿವೃತ್ತಿಯ ನಂತರ ಪ್ರಧಾನ ಭಾಗವತರಾಗಿ ಸುರತ್ಕಲ್ಲು ಮೇಳವನ್ನು ಮುನ್ನಡೆಸಿದರು. 

ಪ್ರಸ್ತುತ ಹೊಸನಗರ ಮೇಳದಲ್ಲಿ ಚಿಕ್ಕಪ್ಪ ಪದ್ಯಾಣ ಶಂಕರನಾರಾಯಣ ಭಟ್ ಅವರು ಜತೆಯಲ್ಲಿದ್ದಾರೆ. ಪೌರಾಣಿಕ ಪ್ರಸಂಗಗಳ ಪರಿಪೂರ್ಣ ಮಾಹಿತಿಯಿದ್ದು ನಡೆಗಳನ್ನು ಅರಿತವರು. ಅವರು ಜತೆಯಲ್ಲಿದ್ದರೆ ಭೀಮಬಲ ಬಂದಂತಾಗುತ್ತದೆ. ತಮ್ಮ ಜಯರಾಮ ಭಟ್ಟರೂ ಮನೆ ಸದಸ್ಯ ಭರವಸೆಯ ಯುವಪ್ರತಿಭೆ ಚೈತನ್ಯಕೃಷ್ಣರೂ ಕಲಾಜೀವನದಲ್ಲಿ ಸಹಕಲಾವಿದರಾಗಿ ಒದಗಿದುದು ಸಂತೋಷ ತಂದಿದೆ’’- ಹೀಗೆ ಶ್ರೀ ಪದ್ಯಾಣ ಗಣಪತಿ ಭಟ್ಟರು ಈ ವರೇಗಿನ ಕಲಾಬದುಕಿನ ಅನಿಸಿಕೆಗಳನ್ನು, ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ.

ಮಡದಿ ಶೀಲಾಶಂಕರಿ, ವಿದ್ಯಾವಂತರೂ, ಉದ್ಯೋಗಸ್ಥರೂ ವಿವಾಹಿತರೂ ಆದ ಇಬ್ಬರು ಮಕ್ಕಳು ಸ್ವಸ್ತಿಕ್ ಪದ್ಯಾಣ ಮತ್ತು ಕಾರ್ತಿಕ್ ಪದ್ಯಾಣ. ಹೀಗೆ ಸಾಂಸಾರಿಕವಾಗಿಯೂ ಅತ್ಯಂತ ತೃಪ್ತರು. 60ನೇ ವಯಸ್ಸು, 2016ರಲ್ಲಿ ಮಂಗಳೂರು ಪುರಭವನದಲ್ಲಿ “ಪದಯಾನ ಅಭಿನಂದನಾ ಸಮಿತಿ’’ ಪುತ್ತೂರು ಇವರು ಕಲಾಭಿಮಾನಿಗಳೆಲ್ಲರೂ ಸೇರಿ ಪದ್ಯಾಣ 60ರ ಸಂಭ್ರಮ ಕಾರ್ಯಕ್ರಮವನ್ನು ಆಚರಿಸಿದ್ದರು. ಶ್ರೀ ನಾ. ಕಾರಂತರ ಸಂಪಾದಕತ್ವದಲ್ಲಿ ‘ಪದಯಾನ’ ಎಂಬ ಕೃತಿಯೂ ಪ್ರಕಟಿಸಲ್ಪಟ್ಟಿತ್ತು. ವಿದ್ವಾಂಸರು, ಹಿರಿಯ, ಕಿರಿಯ ಕಲಾವಿದರುಗಳು ಪದ್ಯಾಣ ಗಣಪತಿ ಭಟ್ಟರ ಬಗೆಗೆ ಬರೆದ ಲೇಖನಗಳು ಈ ಪುಸ್ತಕದಲ್ಲಿವೆ. 

ಲೇಖಕ: ರವಿಶಂಕರ್ ವಳಕ್ಕುಂಜ 

ಮೇಳಗಳ ಇಂದಿನ (20.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (20.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕಾವ್ರಾಡಿ, ವಾಲ್ತೂರು ಮಡಿವಾಳರ ಮನೆ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಅನಂತಾಡಿ, ಬಂಟ್ರಂಜ 
ಕಟೀಲು ಎರಡನೇ ಮೇಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾವೂರು, ಮಂಗಳೂರು 
ಕಟೀಲು ಮೂರನೇ ಮೇಳಕಟೀಲು ಸೌಂದರ್ಯ ಪ್ಯಾಲೇಸ್ 
ಕಟೀಲು ನಾಲ್ಕನೇ ಮೇಳ ಎಕ್ಕಾರು ಶ್ರೀ ಕೊಡಮಣಿತ್ತಾಯ ದೇವಸ್ಥಾನದ ಬಳಿ 
ಕಟೀಲು ಐದನೇ ಮೇಳ ದೇಲಂತಬೆಟ್ಟು ಸೂರಿಂಜ 
ಕಟೀಲು ಆರನೇ ಮೇಳಕಟೀಲು ಕ್ಷೇತ್ರದಲ್ಲಿ
ಮಂದಾರ್ತಿ ಒಂದನೇ ಮೇಳ ಶ್ರೀ ಸನ್ನಿಧಿ, ಪುಟ್ಟುಗುಡ್ಡೆ ನಡೂರು – ಕೂಡಾಟ ಅಮೃತೇಶ್ವರಿ ಮೇಳದೊಂದಿಗೆ
ಮಂದಾರ್ತಿ ಎರಡನೇ ಮೇಳ ಹೊಸ್ಮನೆಬೆಟ್ಟು, ಗುಮ್ಮೊಲ, ಬೆಳ್ವೆ – ಕೂಡಾಟ 
ಮಂದಾರ್ತಿ ಮೂರನೇ ಮೇಳ ಮಂಡವಳ್ಳಿ ಮೇಳಿಗೆ 
ಮಂದಾರ್ತಿ ನಾಲ್ಕನೇ ಮೇಳ ಗುಮ್ಮೊಲ ಬೆಳ್ವೆ – ಕೂಡಾಟ 
ಮಂದಾರ್ತಿ ಐದನೇ ಮೇಳ ಒಳಗೇರಿ, ಮಾಳೂರು, ತೀರ್ಥಳ್ಳಿ 
ಶ್ರೀ ಹನುಮಗಿರಿ ಮೇಳ ಪಂಜ ಶಾಲೆಯ ಬಳಿ – ಮಹಾಕಲಿ ಮಗಧೇಂದ್ರ  
ಶ್ರೀ ಸಾಲಿಗ್ರಾಮ ಮೇಳಶಿರಿಯಾರ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಪೆರ್ಡೂರು ಮೇಳಮಹಾಲಸ ಮಾರಿಕಾಂಬ ದೇವಸ್ಥಾನ, ಕಾಲ್ತೋಡು – ಶಪ್ತ ಭಾಮಿನಿ 
ಶ್ರೀ ದೇಂತಡ್ಕ ಮೇಳಕೊಲ್ಲಮೊಗ್ರು – ಕನಕಾಂಗಿ ಕಲ್ಯಾಣ 
ಶ್ರೀ ಮಾರಣಕಟ್ಟೆ ಮೇಳ ‘ಎ’ಸಂಪದಮನೆ ನಾಗೋಡಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ನಡುಮನೆ ಗುಜ್ಜಾಡಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಕ್ಷೇತ್ರದಲ್ಲಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಪಾವಂಜೆ ಮೇಳ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಆಲಂಗಾರು – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ
ಶ್ರೀ ಹಟ್ಟಿಯಂಗಡಿ ಮೇಳಕಾಳಿಕಾಂಬ ನಗರ, ಆಲೂರು – ದಿವ್ಯ ಸನ್ನಿಧಿ 
ಕಮಲಶಿಲೆ ಮೇಳ ‘ಎ’ನಂಚಾರು 
ಕಮಲಶಿಲೆ ಮೇಳ ‘ಬಿ’ಶ್ರೀ ವೀರಭದ್ರ ದೇವಸ್ಥಾನ, ಕಬೈಲು, ಹೆಮ್ಮಾಡಿ 
ಶ್ರೀ ಬಪ್ಪನಾಡು ಮೇಳನಿಡ್ಪಳ್ಳಿ ಶಾಂತಾದುರ್ಗಾ ದೇವಸ್ಥಾನದ ವಠಾರ – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ವಠಾರ – ಕಂಚೀಲ್ದ ಪರಕೆ (ತುಳು)
ಶ್ರೀ ಅಮೃತೇಶ್ವರೀ ಮೇಳಪುಟ್ಟುಗುಡ್ಡೆ ನಡೂರು -ಕೂಡಾಟ ಮಂದಾರ್ತಿ ಒಂದನೇ ಮೇಳದೊಂದಿಗೆ 
ಶ್ರೀ ಬೋಳಂಬಳ್ಳಿ ಮೇಳ ಶ್ರೀ ಬಲರಾಮ ದೇವಸ್ಥಾನ, ವಡಭಾಂಡೇಶ್ವರ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಬ್ರಹ್ಮಯಕ್ಷಿ ದೇವಸ್ಥಾನ, ಸಿದ್ಧಾಪುರ ವಾರಾಹಿ ರಸ್ತೆ – ಶ್ರೀ ಹಳನಾಡು ಕ್ಷೇತ್ರ ಮಹಾತ್ಮೆ  
ಶ್ರೀ ಹಾಲಾಡಿ ಮೇಳಹೆಮ್ಮಾಡಿ ಶಾಲಾ ವಠಾರ – ಅಬ್ಬರದ ಬೊಬ್ಬರ್ಯೆ 
ಶ್ರೀ ಬೆಂಕಿನಾಥೇಶ್ವರ ಮೇಳ  ನಾಡಗುಡ್ಡೆ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳಬಿದ್ಕಲ್ ಕಟ್ಟೆ – ರಾಜವಂಶ ಗುಳಿಗ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಮಲ್ಪೆ ಹನುಮಾನ್ ನಗರ – ಶ್ರೀ ಹನುಮಾನ್ ಭಜನಾ ಮಂದಿರ 
ಶ್ರೀ ಹಿರಿಯಡಕ ಮೇಳಶಿವಪುರ ಶ್ರೀ ಲಕ್ಷ್ಮೀನರಸಿಂಹ ಸಭಾ ಭವನ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ನಾಡ ಗುಡ್ಡೆಯಂಗಡಿ ಸಂತೆ ಮಾರ್ಕೆಟ್ ಹತ್ತಿರ
ಶ್ರೀ ಸಿಗಂದೂರು ಮೇಳಮೂಕಾಂಬಿಕಾ ಕಾಲೋನಿ, ಶಾರ್ಕೆ, ವಂಡ್ಸೆ 
ಶ್ರೀ ನೀಲಾವರ ಮೇಳ ಸಿದ್ಧಿವಿನಾಯಕ ದೇವಸ್ಥಾನ, ಆನೆಗುಡ್ಡೆ 

ತೆಂಕು ಮತ್ತು ಬಡಗು, ಉಭಯ ತಿಟ್ಟುಗಳಲ್ಲೂ ಪ್ರಸಿದ್ಧಿಯನ್ನು ಪಡೆದ ಭಾಗವತ – ಸತ್ಯನಾರಾಯಣ ಪುಣಿಂಚತ್ತಾಯ ಪೆರ್ಲ

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಎಣ್ಮಕಜೆ ಗ್ರಾಮದ ಶಿರಂತಡ್ಕ ಎಂಬಲ್ಲಿ ಗಣಪತಿ ಪುಣಿಂಚತ್ತಾಯ ಮತ್ತು ಶ್ರೀಮತಿ ಗೀತಾ ದಂಪತಿಗಳಿಗೆ ಮಗನಾಗಿ 23-12-1971ರಂದು ಸತ್ಯನಾರಾಯಣ ಪುಣಿಂಚಿತ್ತಾಯರು ಜನಿಸಿದರು. ಇವರದು ಬಡ ಕೃಷಿ ಕುಟುಂಬ. ತಂದೆ ಗಣಪತಿ ಪುಣಿಂಚತ್ತಾಯರು ಉತ್ತಮ ಹವ್ಯಾಸಿ ಕಲಾವಿದ, ತಾಳಮದ್ದಳೆ ಅರ್ಥಧಾರಿ. ತಾಯಿ ಗೀತಾ ಅವರು ಪ್ರಸಂಗಕರ್ತ, ಹಿಮ್ಮೇಳ ಮುಮ್ಮೇಳ ಕಲಾವಿದರಾದ ಅಡೂರು ಸೂರ್ಯನಾರಾಯಣ ಕಲ್ಲೂರಾಯರ ಪುತ್ರಿ. ಹಾಗಾಗಿ ಯಕ್ಷಗಾನ ರಕ್ತಗತವಾಗಿಯೇ ಒಲಿದಿತ್ತು ಸತ್ಯನಾರಾಯಣ ಪುಣಿಂಚತ್ತಾಯರಿಗೆ.

ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ. ವರೇಗೆ ಓದು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಮತ್ತು ಇಲೆಕ್ಟ್ರಿಕಲ್ ವಿಚಾರಗಳು ಇವರ ಹವ್ಯಾಸವಾಗಿತ್ತು. ಬಜಕೂಡ್ಲು (ಪೆರ್ಲ ಸಮೀಪ) ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರರಾದ ಬಜಕೂಡ್ಲು ಶ್ರೀ ಕೃಷ್ಣ ಶ್ಯಾನುಬೋಗರಿಂದ (ಸುಬ್ರಾಯ ಶ್ಯಾನುಬೋಗರ ಮಗ) ಕಲಿತು ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲೇ ಪುಣಿಂಚಿತ್ತಾಯರು ತೀರ್ಥರೂಪರ ಜತೆ ಪೆರ್ಲ ಪರಿಸರದಲ್ಲಿ ರಾತ್ರಿ ನಡೆಯುತ್ತಿದ್ದ ಆಟಕೂಟಗಳಿಗೆ ಹೋಗುತ್ತಿದ್ದರು.

ಮನೆಯಿಂದ ತೋಟಕ್ಕೆ ಹೋಗುವಾಗಲೂ ಯಕ್ಷಗಾನದ ಹಾಡುಗಳನ್ನು ಹೇಳುತ್ತಿದ್ದರು. ಮಗನ ಯಕ್ಷಗಾನಾಸಕ್ತಿಯನ್ನು ಗಣಪತಿ ಪುಣಿಂಚತ್ತಾಯರು ಪ್ರೋತ್ಸಾಹಿಸಿದರು. ಹಾಡುಗಾರಿಕೆ ಕಲಿಯಲು ವ್ಯವಸ್ಥೆಯನ್ನೂ ಮಾಡಿದರು. ಹವ್ಯಾಸೀ ಭಾಗವತರಾಗಿದ್ದ ಕೋಟೆ (ಬೊಳ್ಳುರೋಡಿ) ನಾರಾಯಣ ಭಟ್ಟರಿಂದ ಅಭ್ಯಾಸ. ಅಣ್ಣ ಸತೀಶ ಪುಣಿಂಚತ್ತಾಯರೊಡನೆ ಮನೆಯಲ್ಲಿಯೇ ಕೋಟೆ ನಾರಾಯಣ ಭಟ್ಟರಿಂದ ಭಾಗವತಿಕೆ ಅಭ್ಯಾಸ. ಸತ್ಯನಾರಾಯಣ ಪುಣಿಂಚತ್ತಾಯರ ಅಣ್ಣ ಸತೀಶ ಪುಣಿಂಚತ್ತಾಯರು ಪ್ರಸ್ತುತ ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಅಧ್ಯಾಪಕ ಮತ್ತು ಉತ್ತಮ ಹವ್ಯಾಸೀ ಭಾಗವತರು. ಹವ್ಯಾಸೀ ಆಟಕೂಟಗಳಲ್ಲಿ ಪದ್ಯ ಹೇಳಲು ಆರಂಭ. ಪೆರ್ಲ, ಸ್ವರ್ಗ, ಕಾಟುಕುಕ್ಕೆ ಮೊದಲಾದೆಡೆ ಸತ್ಯನಾರಾಯಣ ಪುಣಿಂಚತ್ತಾಯರ ಹಾಡನ್ನು ಕೇಳಿದ ಪ್ರೇಕ್ಷಕರು, ನಿನಗೆ ಒಳ್ಳೆಯ ಭವಿಷ್ಯವಿದೆ. ಮೇಳಕ್ಕೆ ಸೇರು ಎಂದು ಪ್ರೋತ್ಸಾಹಿಸಿದರಂತೆ. ಇವರಿಗೂ ತಿರುಗಾಟ ಮಾಡುವ ಆಸೆ ಇತ್ತು. ಆದರೆ ಅದಕ್ಕೆ ಅನಾನುಕೂಲವಿತ್ತು.

 ಸತ್ಯನಾರಾಯಣ ಪುಣಿಂಚತ್ತಾಯರಿಗೆ ಬಡಗಿನ ಪ್ರದರ್ಶನಗಳನ್ನು ನೋಡುವ ಆಸಕ್ತಿ ಹೆಚ್ಚು. ಆಟ ನೋಡಲು ಭಟ್ಕಳದ ವರೇಗೂ ಹೋದದ್ದಿದೆ. ಬಚ್ಚಗಾರು ಮೇಳದ ‘ಚಿತ್ರಾಕ್ಷಿ ಕಲ್ಯಾಣ’ ಪ್ರಸಂಗ ನೋಡಿ ಊರಲ್ಲಿಯೂ ಮಾಡಬೇಕೆಂಬ ಆಸೆ ಚಿಗುರೊಡೆಯಿತು. ಪ್ರಸಿದ್ಧ ಕಲಾವಿದ ಕಾಟುಕುಕ್ಕೆ ಕುಂಞರಾಮ ಮಣಿಯಾಣಿಯವರ ನಿರ್ದೇಶನದಲ್ಲಿ ಅಭ್ಯಾಸ ಆರಂಭ. ಪ್ರದರ್ಶನದಲ್ಲಿ ಇಡೀ ರಾತ್ರಿ ಸತ್ಯನಾರಾಯಣ ಪುಣಿಂಚತ್ತಾಯರು ಹಾಡಿದ್ದರು. ಪ್ರದರ್ಶನವು ರಂಜಿಸಿದ ಕಾರಣ ಎಲ್ಲಾ ಕಡೆಗಳಿಂದಲೂ ಕರೆಬರಲಾರಂಭಿಸಿತು.

ಬಡಗಿನಲ್ಲಿ ಹಾಡುಗಾರಿಕೆಗಿರುವ ಅವಕಾಶ ಮತ್ತು ವೈವಿಧ್ಯತೆಗಳನ್ನು ಮೆಚ್ಚಿ ಸತ್ಯನಾರಾಯಣ ಪುಣಿಂಚತ್ತಾಯರು ಕಲಿಯುವ ಮನಮಾಡಿದರು. ಪತ್ರಿಕೆಯಲ್ಲಿ ಬಂದ ಜಾಹೀರಾತನ್ನು ನೋಡಿ ಖ್ಯಾತ ಸ್ತ್ರೀಪಾತ್ರಧಾರಿ ಆರಾಟೆ ಮಂಜುನಾಥರ ನಾಯಕತ್ವದ ಬಿದ್ಕಲ್‍ಕಟ್ಟೆ ಶ್ರೀ ಗಣೇಶ ಯಕ್ಷಕಲಾ ಸಂಘಕ್ಕೆ ಪ್ರವೇಶಕೋರಿ ಅಪೇಕ್ಷಾ ಪತ್ರ ಸಲ್ಲಿಸಿದರು. ಸಂದರ್ಶನಕ್ಕೆ ಕರೆಬಂತು. ಆ ಹಿಮ್ಮೇಳ ಕಲಿಕಾ ಕೇಂದ್ರಕ್ಕೆ ಹಳ್ಳಾಡಿ ಸುಬ್ರಾಯ ಮಲ್ಯರು ಮೃದಂಗ ಗುರುಗಳಾಗಿದ್ದರು. ಮನೆಯಲ್ಲಿ ಆರ್ಥಿಕ ಅಡಚಣೆ. ಕಷ್ಟಪಟ್ಟು ಹಣಹೊಂದಿಸಿ ಸಂದರ್ಶನಕ್ಕೆ ತೆರಳಿದರು. ಸಂದರ್ಶಕರಾಗಿ ವೈ. ಚಂದ್ರಶೇಖರ ಶೆಟ್ಟಿ, ಎಸ್.ವಿ. ಉದಯ ಕುಮಾರ ಶೆಟ್ಟಿ, ಸುಬ್ರಾಯ ಮಲ್ಯ, ಆರಾಟೆ ಮಂಜುನಾಥರು ಉಪಸ್ಥಿತರಿದ್ದರು. ಸತ್ಯನಾರಾಯಣ ಪುಣಿಂಚತ್ತಾಯರಲ್ಲಿ ಹಾಡಲು ಹೇಳಿದರಂತೆ.

ಮೊದಲು ಪಂಚವಟಿ ಪ್ರಸಂಗದ ನೋಡಿ ನಿರ್ಮಲ ಜಲ ಸಮೀಪದಿ ಎಂಬ ಪದ್ಯವನ್ನು ಹಾಡಿದಾಗಲೇ ಆಯ್ಕೆಯಾಗಿದ್ದರು! ನಂತರ ಬೇರೆ ಬೇರೆ ತಾಳಗಳಲ್ಲಿ ಹಲವು ಪದ್ಯಗಳನ್ನೂ ಹಾಡಿದರು. ಹಿಮ್ಮೇಳ ಕಲಿಕಾ ಕೇಂದ್ರದಲ್ಲಿ ಶ್ರೀ ಗೋಪಾಲ್ ವಿಠ್ಠಲ್ ಪಾಟೀಲ್ ಅವರಿಂದ ಒಂದು ವರ್ಷ ಬಡಗಿನ ಭಾಗವತಿಕೆಯ ಅಭ್ಯಾಸ. (ಜನ್ಸಾಲೆ ರಾಘವೇಂದ್ರ ಆಚಾರ್ಯ, ಹೆಬ್ರಿ ಗಣೇಶ್ ಕುಮಾರ್, ನಗರ ಸುಬ್ರಹ್ಮಣ್ಯ ಆಚಾರ್ ಕೂಡಾ ಗೋಪಾಲ್ ವಿಠ್ಠಲ್ ಪಾಟೀಲ್ ಅವರ ಶಿಷ್ಯರು). ಗೋಪಾಲ್ ವಿಠ್ಠಲ್ ಪಾಟೀಲ್‍ರು ಉಡುಪಿ ಕೇಂದ್ರದಲ್ಲೂ ಗುರುಗಳಾಗಿದ್ದರು. ಕೇಂದ್ರದಲ್ಲಿ ವಿದ್ಯಾರ್ಥಿಯಾಗಿದ್ದಾಗ ಮಂದಾರ್ತಿ 2ನೇ ಮೇಳ ಆರಂಭವಾಗಿತ್ತು.

ಮಂದಾರ್ತಿ ಮೇಳದಲ್ಲಿ ಅನೇಕ ವರ್ಷಗಳ ಕಲಾಸೇವೆಯನ್ನು ಮಾಡಿದ ಗುರು ಗೋಪಾಲ ವಿಠ್ಠಲ್ ಪಾಟೀಲ್‍ರ ಅಪೇಕ್ಷೆಯಂತೆ ಸಂಗೀತಗಾರನಾಗಿ ಮೇಳಕ್ಕೆ ಸೇರ್ಪಡೆ (ಅವರು ಅಪೇಕ್ಷಿಸಿದ್ದು ನನ್ನ ಭಾಗ್ಯವೂ ಹೌದು ಎಂದು ಪುಣಿಂಚತ್ತಾಯರು ಗುರುಗಳಿಗೆ ಗೌರವ ಸಲ್ಲಿಸುತ್ತಾರೆ). ಪ್ರಸಂಗದಲ್ಲೂ ಪದ್ಯ ಹೇಳಲು ಅವಕಾಶ ಸಿಗುತ್ತಿತ್ತು. ಮಂದಾರ್ತಿ ಮೇಳದಲ್ಲಿ ಆಗ ಸಾಮಾಜಿಕ ಪ್ರಸಂಗಗಳನ್ನೂ ಆಡುತ್ತಿದ್ದರು. (ಈಗ ಪುರಾಣ ಪ್ರಸಂಗಗಳು ಮಾತ್ರ). ಆಗ ಮುಖ್ಯ ಭಾಗವತರು ನೆಲ್ಲೂರು ಮರಿಯಪ್ಪ ಆಚಾರ್. ಪೆರ್ಡೂರು ಮೇಳದವರು ಆಡುತ್ತಿದ್ದ ಪ್ರಸಂಗಗಳನ್ನು ಮಂದಾರ್ತಿಯವರೂ ಆಡುತ್ತಿದ್ದರು. ಧಾರೇಶ್ವರರು, ಸುರೇಶ್ ಶೆಟ್ರು ಆಡಿಸುತ್ತಿದ್ದ ಆ ಪ್ರಸಂಗಗಳನ್ನು ನೋಡಿದ್ದ ಸತ್ಯನಾರಾಯಣ ಪುಣಿಂಚತ್ತಾಯರಿಗೆ ಇದರಿಂದ ಅನುಕೂಲವೇ ಆಯಿತು. ನೆಲ್ಲೂರು ಮರಿಯಪ್ಪ ಆಚಾರ್ ಅವರು ಉತ್ತಮ ಅವಕಾಶಗಳನ್ನೂ ಕೊಟ್ಟಿದ್ದರಂತೆ. ಮಂದಾರ್ತಿ ದೇವಸ್ಥಾನದ ಮೊಕ್ತೇಸರ ಶ್ರೀ ಧನಂಜಯ ಶೆಟ್ಟರೂ ಪ್ರೋತ್ಸಾಹಿಸಿದ್ದರಂತೆ.

ಸಂಘಟಕ ಶ್ರೀ ಸತ್ಯನಾರಾಯಣ ಭಟ್ ಗೋಳಿತ್ತಡ್ಕ ಅವರು ಪುಣಿಂಚತ್ತಾಯರಿಗೆ ಕಾಳಿಂಗ ನಾವಡರನ್ನೂ ಸುಬ್ರಹ್ಮಣ್ಯ ಧಾರೇಶ್ವರರನ್ನೂ ಮೊದಲೇ ಪರಿಚಯಿಸಿದ್ದರು. ಅವರಿಂದಲೂ ಮಾರ್ಗದರ್ಶನ ಪಡೆದ ಪುಣಿಂಚಿತ್ತಾಯರು 2 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ತಿರುಗಾಟ ನಡೆಸಿದರು. ವೈ. ಕರುಣಾಕರ ಶೆಟ್ರ ಸಂಚಾಲಕತ್ವ. ಧಾರೇಶ್ವರ, ಸುರೇಶ ಶೆಟ್ರ ಜತೆ ತಿರುಗಾಟ. ಮತ್ತೆ ಸಾಲಿಗ್ರಾಮ ಮೇಳಕ್ಕೆ ಸಹ ಭಾಗವತನಾಗಿ ಕರೆಬಂತು. ಕಿಶನ್ ಹೆಗ್ಡೆಯವರು ಸಂಚಾಲಕರು. ನಾರಾಯಣ ಶಬರಾಯ, ಕೊಳಗಿ ಕೇಶವ ಹೆಗಡೆ, ವಿದ್ವಾನ್ ಗಣಪತಿ ಭಟ್ಟರ ಜತೆ 4 ತಿರುಗಾಟ. ನಂತರ ಮನೆಯ ಸಮಸ್ಯೆಯಿಂದಾಗಿ ಯಕ್ಷಗಾನದಿಂದ ದೂರ ಉಳಿದ ಪುಣಿಂಚತ್ತಾಯರು ಪೆರ್ಲದಲ್ಲಿ ‘ಕೀರ್ತನ್ ಮ್ಯೂಸಿಕ್ಸ್’ ಎಂಬ ಸಂಸ್ಥೆಯನ್ನು ಆರಂಭಿಸಿದರು.

ಸುಮಾರು 60 ಭಕ್ತಿಗೀತೆಗಳ ಧ್ವನಿಸುರುಳಿಗಳಿಗೆ ನಿರ್ದೇಶನ, ಸಾಹಿತ್ಯ, ಸಂಗೀತ ಅಳವಡಿಸಿ ಹೊರತಂದ ಹಿರಿಮೆ ಶ್ರೀಯುತರದ್ದು. ಈಗಲೂ ಈ ಸಂಸ್ಥೆ ಕಾರ್ಯಾಚರಿಸುತ್ತಿದೆ.ಶ್ರೀ ಸತ್ಯನಾರಾಯಣ ಪುಣಿಂಚತ್ತಾಯರಿಗೆ ಬರೆಯುವ ಕಲೆಯೂ ಸಿದ್ಧಿಸಿತ್ತು. 100 ಧ್ವನಿಸುರುಳಿಗಳಿಗೆ ಸಾಹಿತ್ಯ ರಚಿಸಿ ಬಿಡುಗಡೆಗೊಂಡದ್ದು ಮಾತ್ರವಲ್ಲ ಅವುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. (ಬೇರೆ ಬೇರೆ ಕಂಪೆನಿಗಳ) ಸಾಹಿತ್ಯ ಸೇವೆಯನ್ನು ಈಗಲೂ ಹವ್ಯಾಸವಾಗಿ ಮಾಡುತ್ತಿದ್ದಾರೆ. ಎಸ್.ಪಿ., ಅಜಯ್ ವಾರಿಯರ್, ರಮೇಶ್‍ಚಂದ್ರ, ಕೆ. ಎಸ್. ಸುರೇಖ, ಅನುರಾಧಾ ಭಟ್ ಮೊದಲಾದವರ ಕಂಠದಿಂದ ಧ್ವನಿಸುರುಳಿಗಳಲ್ಲಿ ಇವರ ಸಾಹಿತ್ಯವು ಹೊರಹೊಮ್ಮಿದೆ. ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರು ಇವರ ಗರಡಿಯಲ್ಲೇ ಪಳಗಿದವರು. CD ಗಳು ಬಂದ ಮೇಲೆ ಆಡಿಯೋಗಳಿಗೆ ಬೇಡಿಕೆ ಕುಸಿಯಿತು. ಆದರೂ ಸಾಹಿತ್ಯ ರಚನೆಗಳಿಗೆ ಬೇಡಿಕೆಯಿರುವ ಕಾರಣ ಪುಣಿಂಚತ್ತಾಯರು ಸದ್ರಿ ಹವ್ಯಾಸವನ್ನು ಈಗಲೂ ಮಾಡುತ್ತಿದ್ದಾರೆ. ಮತ್ತೆ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಪುಣಿಂಚತ್ತಾಯರು ಮಂಗಳಾದೇವಿ ಮೇಳದಲ್ಲಿ ತಿರುಗಾಟ ಮಾಡಿದರು (ಬಡಗಿನಿಂದ ತೆಂಕಿಗೆ) ಕಿಶನ್ ಹೆಗ್ಡೆಯವರ ಕರೆಯಂತೆ ಶಬರಾಯರ ಜತೆ ಕಲಾಸೇವೆ. ಬಾರ್ಕೂರ ಬಂಗಾರಿ ಪ್ರಸಂಗ ರಂಜಿಸಿತು. ಶಬರಾಯರ ಜತೆ ಪುಣಿಂಚತ್ತಾಯರೂ ಮಿಂಚಿದರು.
                               

ಎಡನೀರು ಮಠಾಧೀಶರ ಆಶೀರ್ವಾದದೊಂದಿಗೆ ಎಡನೀರು ಮೇಳದಲ್ಲಿ ಪುಣಿಂಚತ್ತಾಯರು ಕಲಾಸೇವೆಯನ್ನು ಮಾಡಿದರು. 2 ವರ್ಷಗಳ ಕಾಲ ಎಡನೀರು ಶ್ರೀಗಳಿಂದ ನಿರ್ದೇಶನ ಪಡೆದ ಇವರಿಗೆ ಶ್ರೀ ದಿನೇಶ್ ಅಮ್ಮಣ್ಣಾಯ, ಪ್ರಭಾಕರ ಗೋರೆ, ದೇಲಂತ ಮಜಲು ಇವರ ಒಡನಾಟವೂ ಸಿಕ್ಕಿತ್ತು. ಕುಂಟಾರು ಮೇಳದಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾಗ ‘ನಾಗತಂಬಿಲ’ ಪ್ರಸಂಗವು ರಂಜಿಸಿತು. ‘ತುಳುನಾಡ ಸಿರಿದೇವಿ ತೂಲಯಾ’ ಎಂಬ ಹಾಡನ್ನು ಎಲ್ಲರೂ ಮೆಚ್ಚಿಕೊಂಡರು. ಗಾನ ವೈಭವಕ್ಕೆ ಪುಣಿಂಚತ್ತಾಯರಿಂದ ಈ ಪದ್ಯವನ್ನು ಈಗಲೂ ಹಾಡಿಸುವುದನ್ನು ನಾವು ಗಮನಿಸಬಹುದು. ‘ಬ್ರಾಣ ಜಾತಿದ ಬಾಲೆ ಕೇನಿಯಾ’ ಮತ್ತು ‘ಲೋಕ ತೆರಿಯಂದಿ ಬೇನೆನ್’ ಎಂಬ ಹಾಡುಗಳೂ ಕಲಾಭಿಮಾನಿಗಳಿಗೆ ಮೆಚ್ಚುಗೆಯಾಯಿತು. ಪ್ರಸ್ತುತ ಆರು ವರ್ಷಗಳಿಂದ ರಾಜೇಶ್ ಗುಜರನ್ ಸಂಚಾಲಕತ್ವದ, ದಯಾನಂದ ಗುಜರನ್ ವ್ಯವಸ್ಥಾಪಕತ್ವದ ಶ್ರೀ ಸಸಿಹಿತ್ತಿಲು ಮೇಳದಲ್ಲಿ ಸತ್ಯನಾರಾಯಣ ಪುಣಿಂಚತ್ತಾಯರು ಪ್ರಧಾನ ಭಾಗವತರಾಗಿದ್ದಾರೆ.

ಈಗಲೂ ಅತಿಥಿ ಭಾಗವತರಾಗಿ ಬಡಗಿನ ಮೇಳಗಳಲ್ಲೂ ಗಣಾಧಿರಾಜ ತಂತ್ರಿಗಳ ಕೊಲ್ಲಂಗಾನ ಮೇಳದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಪರಂಪರೆಗೆ ತೊಡಕಾಗದಂತೆ ಹೊಸತನ ಬೇಕು. ಇದು ಪರಿವರ್ತನಾಶೀಲ ಪ್ರಪಂಚ. ಬದಲಾವಣೆಗಳು ಅನಿವಾರ್ಯ. ಕವಿಯ ಮೂಲ ಆಶಯಕ್ಕೆ ತೊಡಕಾಗದಂತೆ, ಕೆಟ್ಟ ಸಂದೇಶಗಳು ಹೋಗದಂತೆ, ಉತ್ತಮ ಸಂದೇಶಗಳನ್ನು ರವಾನಿಸುವ ಬದಲಾವಣೆ ಯಕ್ಷಗಾನದ ಸೌಂದರ್ಯವನ್ನು ಹೆಚ್ಚಿಸಬಹುದು ಎನ್ನುವ ಪುಣಿಂಚತ್ತಾಯರು, ಅಭ್ಯಾಸಿಗಳಿಗೆ ನಿರಂತರ ಕಲಿಕೆ ಅಗತ್ಯ. ಹಿರಿಯರ ಮಾರ್ಗದರ್ಶನವೂ ಬೇಕು. ಯಕ್ಷಗಾನ ಕಲಿಕೆಯನ್ನು ತಪಸ್ಸಿನಂತೆ ಸ್ವೀಕರಿಸಿ ಅಭ್ಯಸಿಸಿದರೆ ಮಾತ್ರ ಕಲಾವಿದನಾಗಬಹುದೆಂಬ ಮಾತುಗಳನ್ನು ಹೇಳುತ್ತಾರೆ.

ಭಾಗವತ ಶ್ರೇಷ್ಠ ಶ್ರೀ ಬಲಿಪರು ಹುಟ್ಟಿ ಬೆಳೆದ ಊರಿನವನೆಂಬ ಹೆಮ್ಮೆಯಿದೆ ಎನ್ನುವ ಪುಣಿಂಚತ್ತಾಯರು 32 ವರುಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದು ಕೃಷಿ ಕಾರ್ಯಗಳಲ್ಲೂ ಆಸಕ್ತಿಯನ್ನು ಹೊಂದಿರುವರು. ತೆಂಕು ಮತ್ತು ಬಡಗಿನ ಎಲ್ಲಾ ಹಿರಿಯ, ಕಿರಿಯ ಹಿಮ್ಮೇಳ, ಮುಮ್ಮೇಳ ಕಲಾವಿದರು ನನ್ನ ಬೆಳವಣಿಗೆಗೆ, ಹೆಸರಿಗೆ ಕಾರಣರು. ಸಹಕಲಾವಿದರೇ ನಾನು ಕಾಣಿಸಿಕೊಳ್ಳುವುದಕ್ಕೆ ಕಾರಣರು ಎಂದು ಕೃತಜ್ಞರಾಗುವ ಇವರು ನಾಟ್ಯಗುರು ಸಬ್ಬಣಕೋಡಿ ರಾಮಭಟ್ಟರಿಂದ ತೆಂಕಿನ ಪೂರ್ವರಂಗ ಪಾಠವನ್ನು ಅಭ್ಯಸಿಸಿದ್ದಾರೆ.
                             

ಮುಂಬಯಿ, ದೆಹಲಿ, ಬೆಂಗಳೂರು ಮೊದಲಾದ ಕಡೆ ಪ್ರದರ್ಶನಗಳಲ್ಲಿ ಭಾಗವಹಿಸಿದ ಸತ್ಯನಾರಾಯಣ ಪುಣಿಂಚತ್ತಾಯರನ್ನು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ವಿದೇಶ ಪ್ರಯಾಣ- ಮಸ್ಕತ್ ಮತ್ತು ಬಹರೈನ್ ಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕಲಾವಿದನಾಗಿಯೂ, ಸಾಂಸಾರಿಕವಾಗಿಯೂ ತೃಪ್ತರು. ತಾಯಿ ಹಾಗೂ ಮಡದಿ ಮಕ್ಕಳೊಂದಿಗೆ ಪೆರ್ಲ ಸಮೀಪ ಶಿರಂತಡ್ಕದಲ್ಲಿ ವಾಸ. 2007ರಲ್ಲಿ ಆಶಾರನ್ನು ವಿವಾಹವಾದರು. ಸತ್ಯನಾರಾಯಣ ಪುಣಿಂಚತ್ತಾಯ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯವ ಸೌರಭ್ ಎಸ್. ಪುಣಿಂಚಿತ್ತಾಯ, 3ನೇ ತರಗತಿ ವಿದ್ಯಾರ್ಥಿ. ಕಿರಿಯವ ಸುನಾಧ ಎಸ್. ಪುಣಿಂಚಿತ್ತಾಯನಿಗೆ 5 ವರ್ಷ ಪ್ರಾಯ.

ಲೇಖಕ: ರವಿಶಂಕರ್ ವಳಕ್ಕುಂಜ

ಮೇಳಗಳ ಇಂದಿನ (19.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (19.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಬಸ್ರೂರು ಮೂಡುಕೇರಿ ಶ್ರೀ ಕೋಟಿ ಚೆನ್ನಯ್ಯ ಗರಡಿ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಗಾಂಧಿನಗರ, ಸುಳ್ಯ 
ಕಟೀಲು ಎರಡನೇ ಮೇಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ತೋಕೂರು, ವಯಾ ಹಳೆಯಂಗಡಿ 
ಕಟೀಲು ಮೂರನೇ ಮೇಳಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಸ್ಥಾನದ ವಠಾರ 
ಕಟೀಲು ನಾಲ್ಕನೇ ಮೇಳ ವಾಮದಪದವು ಶ್ರೀ ನೀಲಕಂಠೇಶ್ವರ ದೇವಸ್ಥಾನದ ವಠಾರ 
ಕಟೀಲು ಐದನೇ ಮೇಳ ದೆಪ್ಪುಣಿಗುತ್ತು, ಅತಿಕಾರಿಬೆಟ್ಟು, ಮೂಲ್ಕಿ 
ಕಟೀಲು ಆರನೇ ಮೇಳದೊಡ್ಡಬಾಲೆಪು ಹೌಸ್, ಪಂಜಿನಡ್ಕ, ಶಿಮಂತೂರು 
ಮಂದಾರ್ತಿ ಒಂದನೇ ಮೇಳ ಹೊಸಕಳಿ, ಕಟ್ ಬೆಲ್ತೂರು 
ಮಂದಾರ್ತಿ ಎರಡನೇ ಮೇಳ ಕುಳ್ಳುಂಜೆ, ಮಾವಿನಕೊಡ್ಲು 
ಮಂದಾರ್ತಿ ಮೂರನೇ ಮೇಳ ಕೆಳಕುಳಿ, ಸಿದ್ಧರಮಠ 
ಮಂದಾರ್ತಿ ನಾಲ್ಕನೇ ಮೇಳ ಶಾಂದ್ರಬೆಟ್ಟು ಮನೆ, ಶೇಡಿಮನೆ 
ಮಂದಾರ್ತಿ ಐದನೇ ಮೇಳ ಹಳಗ, ಮಂಡಗದ್ದೆ 
ಶ್ರೀ ಹನುಮಗಿರಿ ಮೇಳ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ – ಭೀಷ್ಮ ವಿಜಯ, ಕನಕಾಂಗಿ ಕಲ್ಯಾಣ
ಶ್ರೀ ಸಾಲಿಗ್ರಾಮ ಮೇಳಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ – ರಾಜಾ ರುದ್ರಕೋಪ, ಶ್ರೀಕೃಷ್ಣ ತುಲಾಭಾರ 
ಶ್ರೀ ಪೆರ್ಡೂರು ಮೇಳತೆಕ್ಕಟ್ಟೆ ಸುಬ್ರಹ್ಮಣ್ಯ ದೇವಸ್ಥಾನ – ಶಪ್ತ ಭಾಮಿನಿ 
ಶ್ರೀ ದೇಂತಡ್ಕ ಮೇಳಶ್ರೀ ಕ್ಷೇತ್ರದಲ್ಲಿ – ಶ್ರೀ ವನದುರ್ಗಾ ಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಶ್ರೀ ಬ್ರಹ್ಮಲಿಂಗೇಶ್ವರ ಕೃಪಾ, ನಿಟ್ಟೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಬೆಳೆಕೊಡ್ಲು, ಮೇಲ್ ಹೊಸೂರು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಬೆಟ್ಟಾಳಿಮನೆ. ನೂಜಾಡಿ 
ಶ್ರೀ ಪಾವಂಜೆ ಮೇಳ ಗೋಳಿದಡಿಗುತ್ತು ಗುರುಪುರ – ಶ್ರೀ ನಾಗವೃಜ ಕ್ಷೇತ್ರ ಮಹಾತ್ಮೆ  
ಶ್ರೀ ಹಟ್ಟಿಯಂಗಡಿ ಮೇಳಶಿವತಿಕೆರೆ ಈಶ್ವರ ದೇವಸ್ಥಾನ, ಕಾರ್ಕಳ – ಬೇಡರ ಕಣ್ಣಪ್ಪ, ಮೀನಾಕ್ಷಿ   
ಕಮಲಶಿಲೆ ಮೇಳ ‘ಎ’ಕೊಯಿಕಾಡಿಮನೆ, ಹಾಲಾಡಿ 
ಕಮಲಶಿಲೆ ಮೇಳ ‘ಬಿ’ಸಂಪಿಕಟ್ಟು
ಶ್ರೀ ಬಪ್ಪನಾಡು ಮೇಳಪೆರಾಬೆ ಶ್ರೀ ಶಾರದಾ ಭಜನಾ ಮಂದಿರ ಕುಂತೂರು – ಬಂಗಾರ್ ಬಾಲೆ 
ಶ್ರೀ ಅಮೃತೇಶ್ವರೀ ಮೇಳಸೂರುಹಿತ್ಲುಮನೆ, ಮಯಾಡಿ, ಬೈಂದೂರು 
ಶ್ರೀ ಬೋಳಂಬಳ್ಳಿ ಮೇಳ ಚಿಕ್ಕಮ್ಮ ದೇವಸ್ಥಾನ, ಕರ್ಕಿ
ಶ್ರೀ ಸೌಕೂರು ಮೇಳಶೆಟ್ರಕಟ್ಟೆ ಅರ್ಧನಾರೀಶ್ವರ ದೇವಸ್ಥಾನ – ಪುಷ್ಪಚಂದನ 
ಶ್ರೀ ಹಾಲಾಡಿ ಮೇಳಕಾಸನಮಕ್ಕಿ, ಹೆನ್ನಾಬೈಲು 
ಶ್ರೀ ಬೆಂಕಿನಾಥೇಶ್ವರ ಮೇಳ  ಅರೆಹೊಳೆ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ  – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳಕಕ್ಕುಂಜೆ ಕಂಬಿಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕೋಡಿಬೆಂಗ್ರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ದೇವು ಪೂಂಜ ಪ್ರತಾಪ 
ಶ್ರೀ ಶನೀಶ್ವರ ಮೇಳ ಶಾಂತೋಡಿ, ಶಿರೂರು ಕೆಳಪೇಟೆ – ಶನೀಶ್ವರ ಮಹಾತ್ಮೆ 
ಶ್ರೀ ಸಿಗಂದೂರು ಮೇಳಹೆಮ್ಮಾಡಿಕಟ್ಟು ಉಗ್ರಾಣಿ ಮನೆ 
ಶ್ರೀ ನೀಲಾವರ ಮೇಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಳ್ತೂರು

ಕಲಾ ಕದಂಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಪ್ರದರ್ಶಿಸಿದ ಯಕ್ಷಗಾನ ‘ದಕ್ಷಯಜ್ಞ’

“ಯಕ್ಷಗಾನ ಭರತನಾಟ್ಯ ಶಾಸ್ತ್ರೀಯ ಸಂಗೀತ ಮೊದಲಾದ ಭಾರತೀಯ ಕಲೆಗಳು ಮನಸ್ಸನ್ನು ಅಂತರ್ಮುಖಗೊಳಿಸಿ ಸಶಕ್ತರನ್ನಾಗಿಸುತ್ತವೆ. ದಕ್ಷಯಜ್ಞದಂಥ ಪ್ರಸಂಗಗಳು ಒಳಿತು ಮಾಡುವುದಕ್ಕೆ ಪ್ರಚೋದನೆ ನೀಡುವವಲ್ಲದೇ ಕೆಡಕು ಮಾಡಬಾರದೆಂಬ ಅರಿವು ಮೂಡಿಸುತ್ತವೆ. ಭಾರತೀಯ ಕಲೆಗಳ ಅನುಸಂಧಾನ, ಆಸ್ವಾದನೆ ಮಾಡಿದಂತೆಲ್ಲ ಜ್ಞಾನ ಹೆಚ್ಚುತ್ತದೆ, ಅಂತರಂಗ ಮುದಗೊಳ್ಳುತ್ತದೆ.

ಪಾಶ್ಚಾತ್ಯ ನೃತ್ಯ ಸಂಗೀತ ವಿಚಾರಧಾರೆಗಳು ಇಂದ್ರಿಯ ಮನಗಳನ್ನು ಹೊರಮುಖಕ್ಕೆ ಸೆಳೆದು ದಬ್ಬಿ ದೇಹ ಮನಶ್ಶಕ್ತಿಗಳನ್ನು ಕುಗ್ಗಿಸುತ್ತವೆ. ಆದರೆ ನಮ್ಮ ಭಾರತೀಯ ಕಲೆ ವಿಚಾರಧಾರೆಗಳು ದೇಹಮನಗಳನ್ನು ಪುಳಕಿತಗೊಳಿಸಿ, ಶಕ್ತಿಯನ್ನು ನೂರ್ಮಡಿಗೊಳಿಸುತ್ತವೆ”ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಸಂಜೆ (ದಿನಾಂಕ 17-01-2021) ಕೆಂಗೇರಿ ಉಪ ನಗರದ ಕೊಮ್ಮಘಟ್ಟದಲ್ಲಿ ಓಂಯೋಗಧಾಮ ಟ್ರಸ್ಟ್ ಏರ್ಪಡಿಸಿದ ಸಂಕ್ರಾಂತಿ ಕಲೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಲಾ ಕದಂಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಪ್ರದರ್ಶಿಸಿದ ಯಕ್ಷಗಾನವು ನಿಜಕ್ಕೂ ಒಂದು ಉತ್ತಮ ಪ್ರದರ್ಶನವಾಗಿ ಮೂಡಿ ಬಂದಿದೆ ನುರಿತ ಕಲಾವಿದರಂತೆ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಪ್ರಸಿದ್ದ ಯಕ್ಷಗಾನ ಕಲಾವಿದರಾದ ಡಾ.ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಮೂಡಿ ಬಂದ ಈ ಪ್ರಸಂಗ ಉರಾಳರ ಪ್ರತಿಭೆಗೆ ಸಾಟಿ ಇಲ್ಲಾ ಎಂಬುದು ನಿಜಕ್ಕೂ ಮೆಚ್ಚುವಂತದ್ದು ಎಂದು ಸ್ವಾಮೀಜಿಯವರು ಪ್ರಶಂಸೆ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯೊಂದಿಗೆ ಕಲಾಕದಂಬ ಆರ್ಟ ಸೆಂಟರ್ ನಿರ್ದೇಶಕ ಡಾ ರಾಧಾಕೃಷ್ಣ ಉರಾಳ್ ಅವರು ಪರಿಕಲ್ಪಿಸಿ ನಿರ್ದೇಶಿಸಿದ, ಮಧುಮಿತಾ, ಅದಿತಿ ಉರಾಳ್, ಪೂಜಾ ಆಚಾರ್, ಪೂರ್ಣಿಮಾ ಆಚಾರ್, ಮೊದಲಾದವರು ಅಭಿನಯಿಸಿ ಪ್ರದರ್ಶಿಸಿದ, ದಕ್ಷಯಜ್ಞ ಯಕ್ಷಗಾನ ಪ್ರಸಂಗ ಸಭಿಕರ, ಕಲಾಸಕ್ತರ ಮನಸೂರೆಗೊಂಡಿತು. ಓಂ ಯೋಗಧಾಮ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಸ್ವಪ್ನಾ ಪ್ರದೀಪ್, ಡಾ. ರಾಧಾಕೃಷ್ಣ ಉರಾಳ, ಕದಂಬ ಪ್ರತಿಷ್ಠಾನದ ಶ್ರೀ ದೇವರಾಜ ಕದಂಬ, ಮುರಳೀಧರ ನಾವಡ, ನಿತ್ಯಾನಂದ ನಾಯಕ್, ವಿಶ್ವನಾಥ ಉರಾಳ್, ನರಸಿಂಹ ಮೂರ್ತಿ, ಸಿ. ಎಚ್. ಕೃಷ್ಣಯ್ಯ ಮೊದಲಾದವರು ಉಪಸ್ಥಿತರಿದ್ದರು.

ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ – ಬಹುಮುಖ ಪ್ರತಿಭೆಯ ಸಂಗಮ ಅನ್ವಿತಾ ಭಟ್ 

ಅನ್ವಿತಾ ಭಟ್ ಆಲಂಕೋಡ್ಲು ಇವರು ಈ ಸಾಲಿನ ಅಂದರೆ 2020-21 ರ ವರ್ಷದಲ್ಲಿ ಕರ್ನಾಟಕ ಸೆಕೆಂಡರಿ ಎಜುಕೇಶನ್ ಎಕ್ಸಾಮಿನೇಷನ್ ಬೋರ್ಡ್ ನಡೆಸಿರುವ ಸೀನಿಯರ್ ಭರತನಾಟ್ಯ ಪರೀಕ್ಷೆಯಲ್ಲಿ ಶೇಕಡಾ 94.5 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. 

ಪ್ರಸ್ತುತ ಬೆಂಗಳೂರಿನ ಮಿತ್ರ ಅಕಾಡೆಮಿಯ ICSE ಶಾಲೆಯಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಅನ್ವಿತಾ ಭಟ್ 2018ರ ಮೇ ತಿಂಗಳಿನಲ್ಲಿ ಕರ್ನಾಟಕ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ 99 ಶೇಕಡಾ ಅಂಕಗಳೊಂದಿಗೆ ಕರ್ನಾಟಕ ರಾಜ್ಯದಲ್ಲಿಯೇ ಮೂರನೆಯ ರಾಂಕ್ ನೊಂದಿಗೆ ತೇರ್ಗಡೆ ಹೊಂದಿದ್ದಳು. ವೆಂಕಟ್ರಾಜ ಅಲಂಕೋಡ್ಲು ಮತ್ತು ಪ್ರಶಾಂತಿ ದಂಪತಿಗಳ ಪುತ್ರಿಯಾದ ಅನ್ವಿತಾ ಭಟ್ ಭರತನಾಟ್ಯವನ್ನು ಸುಮಾರು ಏಳು ವರ್ಷಗಳಿಂದ ವಿದುಷಿ ಶ್ರೀಮತಿ ಪೂರ್ಣಿಮಾ ಮೋಹನ್ ರಾಮ್ ಅವರಿಂದ ಅಭ್ಯಸಿಸುತ್ತಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಥಮವಾಗಿ ಅರುಣಾ ರಾಜಗೋಪಾಲ್ ಅವರಲ್ಲಿಯೂ ಆಮೇಲೆ ಸುಮಾರು ಎಂಟು ವರ್ಷಗಳ ಕಾಲ ವಿದುಷಿ ಲಕ್ಷ್ಮಿ ಆರ್. ರಾವ್ ಅವರಲ್ಲಿಯೂ ಅಭ್ಯಾಸ ಮಾಡಿ ಈಗ ಟಿ.ವಿ. ರಾಮಪ್ರಸಾದ್ ಅವರಲ್ಲಿ ತನ್ನ ಸಂಗೀತಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. 

ಯಕ್ಷಕಲಾ ಅಕಾಡೆಮಿ (ರಿ.) ಏರ್ಪಡಿಸಿದ ಯಕ್ಷಗಾನ ಉತ್ಸವ ಉದ್ಘಾಟನೆ – ಸಮಕಾಲೀನ ಪ್ರಸಂಗದ ಅವಶ್ಯಕತೆ: ಗೋಪಾಲಕೃಷ್ಣ ನಾಯರಿ

ಇಂದು ನಮ್ಮ ಸುತ್ತ ಮುತ್ತ ಎದ್ದು ಕಾಣುತ್ತಿರುವ ಸಾಮನ್ಯ ಸಾಮಾಜಿಕ ಪಿಡುಗುಗಳನ್ನು ಪ್ರತಿಬಿಂಬಿಸುವ ಹಾಗೂ ಅದಕ್ಕೆ ಪರಿಹಾರವನ್ನು ಕೂಡ ನೀಡುವಂತಹ ಸಮಕಾಲೀನ ಪ್ರಸಂಗದ ಅವಶ್ಯಕತೆ ಇದೆ ಎಂದು ದೇಸಿ ಪ್ರಸಿದ್ಧಿಯ ರಂಗ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ನಾಯರಿ ಅಭಿಪ್ರಾಯ ಪಟ್ಟರು.

ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಬೆಂಗಳೂರಿನ ಯಕ್ಷಕಲಾ ಅಕಾಡೆಮಿ (ರಿ.) ಏರ್ಪಡಿಸಿದ ಯಕ್ಷಗಾನ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ನಾಯರಿಯವರು, ಸಂಘಟಕರು ಆಯ್ಕೆ ಮಾಡುವಂತಹ ಪ್ರಸಂಗಗಳು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿರದೆ, ಜನರಲ್ಲಿರುವ ಮೌಢ್ಯತೆಯನ್ನು ಹೋಗಲಾಡಿಸಿ, ಸಾಮಾಜಿಕ ಅರಿವನ್ನು ಮೂಡಿಸುವಂತಹ ಪ್ರಸಂಗಗಳು ಸಾಂಪ್ರದಾಯಿಕ ಚೌಕಟ್ಟಿನ್ಲಲಿ ಹೊರಬರಬೇಕೆಂದು ಆಶಿಸಿದರು.

ಇನ್ನೋರ್ವ ಗಣ್ಯರಾದ ಬೆಂಗಳೂರಿನ ಶೇಖರ್‌ ಹಾಸ್ಪಿಟಲ್‌ನ ಸಂಸ್ಥಾಪಕ ನಿರ್ದೇಶಕರಾದ ಡಾ|| ಪಿ. ವಿ. ಐತಾಳರವರು ಮಾತನಾಡುತ್ತ, ವಿದ್ಯಾರ್ಥಿಗಳಲ್ಲಿ ಕಲಾ ಪ್ರಜ್ಞೆಯನ್ನು ಬೆಳೆಸಬೇಕಾದುದು ಸುಂದರ ಸಮಾಜದ ನಿರ್ಮಾಣದ ದೃಷ್ಟಿಯಿಂದ ಅತೀ ಅವಶ್ಯವಾದ ಕಾರ್ಯವಾಗಿದೆ. ಕಲೆಯನ್ನು ಶಿಕ್ಷಣದೊಂದಿಗೆ ಮೈಗೂಡಿಸಿಕೊಂಡವರಿಗೆ ಸಾಮಾಜಿಕ ಸಂವಹನವು ಸುಲಭವಾಗುತ್ತದೆ ಎಂದರು. ಹಂಗಾರಕಟ್ಟೆ ಯಕ್ಷಗಾನ   ಕಲಾಕೇಂದ್ರದ ಕಾರ್ಯದರ್ಶಿಯವರು ಮಾತನಾಡುತ್ತ ಮೌಲ್ಯಯುತ ಯಕ್ಷಗಾನ ಉಳಿಸಲು ಹಾಗೂ ಬೆಳೆಸಲು ಪ್ರೇಕ್ಷಕರ ಪಾತ್ರವೂ ಕೂಡ ಮಹತ್ವವಾದುದು. ಸಭೆಯಲ್ಲಿ ಸಭ್ಯ ರೀತಿಯ ವರ್ತನೆ, ಹಾಗೂ ಕಲಾವಿದರ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸುವ ಸಮಯದಲ್ಲಿ ಪ್ರೇಕ್ಷಕರ ಸಭ್ಯರೀತಿಯಲ್ಲಿ  ಪ್ರತಿಸ್ಪಂದನೆಯು ಅತೀ ಮಹತ್ವದ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಸುದರ್ಶನ ಉರಾಳರನ್ನು ಯಕ್ಷಕಲಾ ಅಕಾಡೆಮಿ ವತಿಯಿಂದ ಗೌರವಿಸಲಾಯಿತು.

ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರಾದ ಯಕ್ಷಗಾನ ಗುರುಗಳಾದ ಶ್ರೀ ಕೃಷ್ಣಮೂರ್ತಿ ತುಂಗರವರು ಸ್ವಾಗತಿಸಿದರು. ಸಂಸ್ಥೆಯು ಅಧ್ಯಕ್ಷರಾದ ಶ್ರೀಮತಿ ಅನುಸೂಯ ಕೆ ರವರು ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಾಮಚಂದ್ರ ಐತಾಳರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಸಂಸ್ಥೆಯ ಕಲಾವಿದರಿಂದ “ಭೀಷ್ಮ ಪ್ರತಿಜ್ಞೆ” ಎನ್ನುವ ಯಕ್ಷಗಾನ ಪ್ರದರ್ಶನ ನಡೆಯಿತು.

ಮೇಳಗಳ ಇಂದಿನ (18.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (18.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಆರೂರು ಕುಂಜಾಲು ಶ್ರೀ ದುರ್ಗಾನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಬಾಜುವಳ್ಳಿ, ಬೆಟ್ಟಂಪಾಡಿ, ಪುತ್ತೂರು 
ಕಟೀಲು ಎರಡನೇ ಮೇಳ ನಿಶ್ಮಿತಾ ಟವರ್ಸ್, ಮೂಡಬಿದ್ರಿ 
ಕಟೀಲು ಮೂರನೇ ಮೇಳಮಲ್ಲಿಗೆ ಅಂಗಡಿ, ಕಟೀಲು 
ಕಟೀಲು ನಾಲ್ಕನೇ ಮೇಳ ದೇಲಂತಬೆಟ್ಟು ವಯಾ ಶಿಬರೂರು 
ಕಟೀಲು ಐದನೇ ಮೇಳ ಪೆರೋಡಿ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ, ದೇವಂದಬೆಟ್ಟು, ಕಲ್ಲಿಗೆ, ಬಂಟ್ವಾಳ 
ಕಟೀಲು ಆರನೇ ಮೇಳಮಳಲಿ ಮಟ್ಟಿಮನೆ, ಬಡಗು ಉಳಿಪ್ಪಾಡಿ 
ಮಂದಾರ್ತಿ ಒಂದನೇ ಮೇಳ ಬರೇಗದ್ದೆ ಕೊಂಜಾಡಿ, ಆರ್ಡಿ – ಕೂಡಾಟ 
ಮಂದಾರ್ತಿ ಎರಡನೇ ಮೇಳ ಸಾಂತಗೋಡು, ಕುಚ್ಚೂರು, ಹೆಬ್ರಿ 
ಮಂದಾರ್ತಿ ಮೂರನೇ ಮೇಳ ರಥಬೀದಿ, ತೀರ್ಥಳ್ಳಿ 
ಮಂದಾರ್ತಿ ನಾಲ್ಕನೇ ಮೇಳ ಬರೇಗದ್ದೆ ಕೊಂಜಾಡಿ, ಆರ್ಡಿ – ಕೂಡಾಟ  
ಮಂದಾರ್ತಿ ಐದನೇ ಮೇಳ ಕೆಸರೆ, ಹುಂಚದಕಟ್ಟೆ 
ಶ್ರೀ ಹನುಮಗಿರಿ ಮೇಳ ಉಡುಪಿ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ – ಶ್ರೀನಿವಾಸ ಕಲ್ಯಾಣ, ಮಾಯಾ ಮಾರುತೇಯ 
ಶ್ರೀ ಸಾಲಿಗ್ರಾಮ ಮೇಳಕೋಟ ಹಂದಟ್ಟು ಹಂದೆ ದೇವಸ್ಥಾನದ ಬಳಿ – ಶ್ರೀ ಶನೀಶ್ವರ ಮಹಾತ್ಮೆ 
ಶ್ರೀ ಪೆರ್ಡೂರು ಮೇಳಮತ್ಯಾಡಿ – ಶಪ್ತ ಭಾಮಿನಿ 
ಶ್ರೀ ಮಾರಣಕಟ್ಟೆ ಮೇಳ ‘ಎ’ಕಳಿಬಾಗಲ್ ಬೆಟ್ಟು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಜನ್ನಾಲ್ ಮೇಲ್ಜೆಡ್ಡು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಯಳೂರು ಕೆರೆಮನೆ, ಹಕ್ಲಾಡಿ 
ಶ್ರೀ ಪಾವಂಜೆ ಮೇಳ ಜಲದುರ್ಗಾ ದೇವಸ್ಥಾನ, ಪೆರುವಾಜೆ, ಬೆಳ್ಳಾರೆ – ಶ್ರೀ ದೇವಿ ಲಲಿತೋಪಾಖ್ಯಾನ 
ಶ್ರೀ ಹಟ್ಟಿಯಂಗಡಿ ಮೇಳಧರ್ಮಸ್ಥಳ
ಕಮಲಶಿಲೆ ಮೇಳ ‘ಎ’ಆರೆಮಕ್ಕಿ ಚಿಕ್ಕುಪರಿವಾರ ದೇವಸ್ಥಾನ ನೇರಳಕಟ್ಟೆ, ಕರ್ಕುಂಜೆ, ದೊಡ್ಮನೆ 
ಕಮಲಶಿಲೆ ಮೇಳ ‘ಬಿ’ಶ್ರೀಕೃಷ್ಣ ನಿಲಯ, ಎಡಬೆಟ್ಟು, ಸಾಸ್ತಾನ 
ಶ್ರೀ ಸಸಿಹಿತ್ಲು ಭಗವತೀ ಮೇಳ ಪೇಪರ್ ಮಿಲ್ ಕೆಂಪ್ಲಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ರಂಗಸ್ಥಳ 
ಶ್ರೀ ಅಮೃತೇಶ್ವರೀ ಮೇಳಹೊಸಮನೆ ತೋಡ್ಕಟ್ಟು, ಪಾರಂಪಳ್ಳಿ 
ಶ್ರೀ ಬೋಳಂಬಳ್ಳಿ ಮೇಳ ವರಂಗ  – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಮೇಲ್ ಗಂಗೊಳ್ಳಿ ಗ್ರಾಮ ಜೆಟ್ಟಿಗೇಶ್ವರ
ಶ್ರೀ ಹಾಲಾಡಿ ಮೇಳಮುದೂರಿ 
ಶ್ರೀ ಬೆಂಕಿನಾಥೇಶ್ವರ ಮೇಳ  ಮರವಂತೆ ಬ್ರೇಕ್ ವಾಟರ್ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳಗರಡಿಮಜಲು  – ರಾಜವಂಶ ಗುಳಿಗ  
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಬೈಂದೂರು ಶಿರೂರು ಶ್ರೀ ವೀರ ಮಹಾಸತಿ ದೇವಸ್ಥಾನದ ವಠಾರ
ಶ್ರೀ ಹಿರಿಯಡಕ ಮೇಳಆತ್ರಾಡಿ ಮದಗ ತಿರುಮಂತೋಡಿ – ಹಿರಿಯಡಕ ಕ್ಷೇತ್ರ ಮಹಾತ್ಮೆ   
ಶ್ರೀ ಶನೀಶ್ವರ ಮೇಳ ಶ್ರೀ ನಂದಿಕೇಶ್ವರ ಅಮ್ಮನವರ ದೇವಸ್ಥಾನ, ಅರೇಶಿರೂರು 
ಶ್ರೀ ಸಿಗಂದೂರು ಮೇಳಧಾರೇಶ್ವರ  
ಶ್ರೀ ನೀಲಾವರ ಮೇಳ ಸಾಸ್ತಾನ ಪೇಟೆ 

ಕನ್ನಡ ಭಾಷೆಯ ನುಡಿಗಟ್ಟುಗಳನ್ನು ಯಥೇಚ್ಛವಾಗಿ ಬಳಸುವ ತೆಕ್ಕಟ್ಟೆ ಆನಂದ ಮಾಸ್ತರರ ಅರ್ಥಗಾರಿಕೆಯ ತುಣುಕು  

ಪದ್ಯ: ಎನಲು ಸಂಜಯ ನುಡಿದ ಎನ್ನೊಳು| ಇನಿತು ವೈರಾಗ್ಯಗಳು ಏತಕೆ| ಜನಪನವನಿಯ ಸೋತ ಮೇಲನುವರದೊಳು ಯುದ್ಧದ|| ಮೊನೆಯೊಳೀವುದು ಕ್ಷತ್ರಿಯ| ವಂಶದ ಗುಣದ ಪದ್ಧತಿ ಸತ್ಯವಿರ್ದರೆ| ಜನಪನನುವಾಗಲಿ ಎನಲೈ ತಂದೆ ತಾನೆಂದ ||

ಸಂಜಯ (ತೆಕ್ಕಟ್ಟೆ ಆನಂದ ಮಾಸ್ತರ್): ಧರ್ಮರಾಜಾ, ಉದ್ಯೋಗ ಪರ್ವ ಇದು. ಉದ್ಯಮಶೀಲನಾಗಿರುವವನು ಕರುಣೆಯ ಉದ್ವೇಗಗಳಿಗೆ ಒಳಗಾಗಬಾರದು. ಭಾವವಿವಶನಾಗಿ ಯಾವನು ಜೀವನದಲ್ಲಿ ಮುಂದೆ ಸಾಗುತ್ತಾನೋ ಅವನು ಹೆಜ್ಜೆ ಹೆಜ್ಜೆಗೂ ಸೋಲನ್ನೇ ಅನುಭವಿಸುತ್ತಾನೆಯೇ ಹೊರತು ಗೆಲುವನ್ನಲ್ಲ. ನಿನ್ನ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದವರು ನಾವು. ನಾವು ಅಂದರೆ ನಾನು ಒಬ್ಬನೇ. ಹಾಗಾದರೆ ನಾವು ಅಂತ ಯಾಕೆ ಹೇಳಿದೆ? ನಿನ್ನ ತಂದೆ, ದೊಡ್ಡತಂದೆ ಅವರ ಸಮಕಾಲೀನನೂ ಒಡನಾಡಿಯೂ ನಾನು.

ಸಾಮಾಜಿಕವಾದ ಸ್ಥಾನಮಾನಗಳಲ್ಲಿ ನಮಗೆ ಭಿನ್ನತೆ ಇದ್ದರೂ ಆಂತರಂಗಿಕವಾದ ಸೌಹಾರ್ದ, ಸ್ನೇಹಗಳಲ್ಲಿ ನಮ್ಮಲ್ಲಿ ವಿಭಿನ್ನತೆಯಿರಲಿಲ್ಲ. ಹಾಗಾದ್ದರಿಂದಲೇ ಇಲ್ಲಿಗೆ ಬರುವಾಗ ನಾನು ಏನನ್ನು ನಿರೀಕ್ಷೆ ಮಾಡಿಕೊಂಡಿದ್ದೆನೋ ಅದು ತಲೆ ಕೆಳಗಾಗಿ ಹೋಯಿತು. ಅಯ್ಯಾ, ಈ ಪಕ್ಷದ ಪ್ರಮುಖನೂ ಪ್ರಧಾನನೂ ನೀನು. ನೀನಾಗಲೀ ನಿನ್ನವರಾಗಲೀ ನನ್ನನ್ನು ಹೀಗೆ ಸ್ವಾಗತಿಸುತ್ತೀರಿ ಎಂದು ನಾನು ಎಣಿಸಿರಲಿಲ್ಲ. ಯಾಕೆ ಗೊತ್ತೋ? ‘ಕೋಣಕ್ಕೆ ಹುಣ್ಣಾದರೆ ಆಕಳಿಗೆ ಬರೆ’ ಎಳೆಯಲಾಗದಲ್ಲ? ಸುಯೋಧನನ ಬಗ್ಗೆ ನಿಮ್ಮವರ ಮನಸ್ಸಿನಲ್ಲಿ ಮೂಡಿರುವ ದ್ವೇಷ, ಈರ್ಷೆ, ಮಾತ್ಸರ್ಯ ಇವುಗಳನ್ನು ಅವನ ದೂತನಾಗಿ ಬಂದ ನನ್ನ ಮುಂದೆ ಆಡಿದರೆ, ತೋಡಿದರೆ ಫಲವೇನು ಹೇಳು.

ಒಂದು ಮಾತು ನಿಮಗೆ ಹೇಳ್ತೇನೆ. ‘ಕುಲ ನಾಲಿಗೆಯರುಹಿತು’. ನಿಮ್ಮ ಮಾತುಗಳಲ್ಲಿರುವ ವೀರ್ಯ, ನಿಮ್ಮ ಮಾತುಗಳಲ್ಲಿರುವ ಶೌರ್ಯ, ನಿಮ್ಮ ಮಾತುಗಳಲ್ಲಿರುವ ವ್ಯಂಗ್ಯ, ಪ್ರಯೋಜನಕಾರಿಯಲ್ಲ. ಮಾತು ಕೃತಿಯಾಗಿ ಮೂಡಿದಾಗಲೇ ಮನುಷ್ಯ ಮಹತ್ವನೆನಿಸಿಕೊಳ್ಳುತ್ತಾನೆ. ಹಾಗಾದರೆ ನೀನಾಗಲೀ ನಿನ್ನವರಾಗಲೀ ಕೇಳಿದ ಮಾತಿನ ವಾಚ್ಯಾರ್ಥ ನನಗೆ ಗ್ರಾಹ್ಯ ಅಲ್ಲವಷ್ಟೇ ? ಒಟ್ಟಾರೆ ಎಲ್ಲವರೂ ಸುಯೋಧನನ, ಸುಯೋಧನನ ಕಡೆಯವರ ಕ್ಷೇಮವನ್ನು ವಾಚ್ಯವಾಗಿ ಕೇಳಿದ್ದೀರಲ್ಲ. ಹಾಗಾದರೆ ವಾಚ್ಯಾರ್ಥ ಅಲ್ಲ. ನಿಮಗೆಲ್ಲರಿಗೂ ವೃಷ್ಟಿಯಾಗಿ ಸುಯೋಧನನ ಬಗ್ಗೆ ಅಂತರಂಗದಲ್ಲಿ ಮೂಡಿರುವ ದ್ವೇಷ, ಈರ್ಷ್ಯೆಗಳೇ, ಅವುಗಳ ವಾಸನೆಯೇ, ಅವುಗಳ ಕಂಪೇ ನಿಮ್ಮ ಮಾತಿನಲ್ಲಿದೆ. ಹಾಗಾಗಿ ಪ್ರಸ್ತುತ ಆ ಬಗ್ಗೆ ಉತ್ತರಿಸುವುದಕ್ಕೆ ನಾನು ಉತ್ತರದಾಯಿ ಅಲ್ಲ.

ಇನ್ನೊಬ್ಬ ನಿಮ್ಮಲ್ಲಿ ಒಳಗಿದ್ದೂ ಹೊರಗುಳಿಯುವವನು. ಹೊರಗಿದ್ರೂ ಒಳಗೆ ನಡೆಸುವವನು. ವಾಸುದೇವ. ಅವನ ಬಗ್ಗೂ ಅಷ್ಟೇ. ಶ್ರದ್ಧೆಯಿಂದ ನಮಸ್ಕಾರ ಕೊಟ್ಟೇನೆ ವಿನಃ ಬುದ್ಧಿಯಿಂದ ಪ್ರತ್ಯುತ್ತರ ನೀಡಲಾರೆ. ಯಾಕೆ? ನನಗದು ಉದ್ಯೋಗ ಅಲ್ಲ. ಈಗ ನಾನಿಲ್ಲಿಗೆ ಬಂದಿರುವುದು ಯಾವನನ್ನು ನೀವು ಪ್ರತಿಕಕ್ಷಿ ಎಂದು ಸ್ವೀಕರಿಸಿ, ಒಪ್ಪಿದ್ದೀರಿ, ನಿಮ್ಮ ಸುದೀರ್ಘವಾದ ಜೀವಮಾನದಲ್ಲಿ ಇದು ತನಕದ ನಿಮ್ಮ ಆಯುರ್ಮಾನವನ್ನು ಯಾರಾತನ ವಿರೋಧವನ್ನು ಸಾಧಿಸುವುದಕ್ಕಾಗಿ ನೀವು ಸವೆಸಿದ್ದೀರಿ, ಅಂತಹಾ ಸುಯೋಧನನಿಂದ ಆಜ್ಙಾಪಿತನಾಗಿ ಬಂದಿರುವ ರಾಜದೂತ ನಾನು.

ದೂತನಾದವನ ಕಾರ್ಯವ್ಯಾಪ್ತಿ ಎಷ್ಟು ಅಂತ ಅರಿಯದೆ ಇದ್ದ ಅಜ್ಞ, ಅಪ್ರಬುದ್ಧ ರಾಜಕಾರಣಿ ನೀನಲ್ಲ. ಈ ಭರವಸೆಯಿಂದ ನಿನಗೆ ಹೇಳುತ್ತಾ ಇದ್ದೇನೆ. ಸುಯೋಧನನಾಡಿದ ಮಾತುಗಳನ್ನೇ ಅನುವಾದ ರೂಪವಾಗಿ ನನ್ನ ನಾಲಗೆಯಿಂದ ಹೇಳ್ತೇನೆ. ಜೂಜಿನಲ್ಲಿ ನೀವು ಸೋತಿರಬಹುದು. ಸುಯೋಧನ ಗೆದ್ದಿರಬಹುದು. ಆ ಸೋಲಾಗಲೀ ಈ ಗೆಲುವಾಗಲೀ ನಿರ್ಣಾಯಕವಲ್ಲ. ಕ್ಷತ್ರಿಯನಾಗಿ ಹುಟ್ಟಿದವನು ಅವನಿಯನ್ನಾಳುವ ಅಧಿಕಾರವನ್ನು ಆಶಿಸ್ತಾನೆ ಅಂತಾದ್ರೆ ಅನವರದಲ್ಲಿ ವಿರೋಧಿಯನ್ನು ಸೋಲಿಸಿ ತಾನು ಗೆದ್ದು ಆಳಬೇಕಾದದ್ದು ಕ್ಷತ್ರಿಯಕ್ಕೆ ಭೂಷಣ. ಕ್ಷತ್ರಿಯನ ಧರ್ಮ.

ಹಾಗಾದ್ದರಿಂದ ನೀವಾಸೆಪಟ್ಟಿರುವ ರಾಜ್ಯವನ್ನು ಅಂದರೆ ನಿಮ್ಮ ಅರ್ಧರಾಜ್ಯವನ್ನಲ್ಲ, ಅಧಿಕಾರಕ್ಕೆ ಸಂಬಂಧಪಟ್ಟ ಚಂದ್ರವಂಶದ ರತ್ನಸಿಂಹಾಸನವನ್ನು ಆಯುಧದ ಮೊನೆಯಲ್ಲಿಟ್ಟಿದ್ದೇನೆ. ಶಕ್ತರಾದರೆ ಪಾಂಡವರು ಪಡೆಯಲಿ. ಅಶಕ್ತರಾದರೆ ಅಂಬೋಣ ಏನು ಅಂತ ತಿಳಿಯಿಸಲಿ. ಇದನ್ನು ಹೇಳುವುದಕ್ಕಾಗಿ, ಇದಕ್ಕೆ ಉತ್ತರ ಕೇಳುವುದಕ್ಕಾಗಿ ಬಂದವನು ನಾನು. ಅರಸನಾಗಿ, ಈ ಪಕ್ಷದ ಪ್ರಮುಖನಾಗಿ ಏನು ಹೇಳ್ತೀಯ?