Tuesday, January 21, 2025
Home Blog Page 358

ಕನ್ಯಾ ರಾಶಿ – ನವೆಂಬರ್ 2020

ಕನ್ಯಾ ರಾಶಿ – ನವೆಂಬರ್ 2020

ಈ ರಾಶಿಯ ಕೆಲವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಲಾಭ ಉಂಟಾಗಬಹುದಾದ ಸಾಧ್ಯತೆಯಿದೆ. ಇನ್ನು ಕೆಲವರಿಗೆ ಸ್ತ್ರೀ ಮೂಲದಿಂದ ಸಂಪತ್ತು ಹರಿದುಬರುವ ಸೂಚನೆಗಳು ಕಂಡು ಬರುತ್ತವೆ. ಸ್ವಂತ, ಭೂಮಿ, ಮನೆಗಳಿಗೆ ಪ್ರಯತ್ನಿಸಲು ಇದು ಸಕಾಲ. ಅಧಿಕಾರಿಗಳಿಗೆ ಕಾರ್ಯಕ್ಷೇತ್ರದಲ್ಲಿ ಸುಧಾರಣೆ ಕಂಡುಬರುತ್ತದೆ, ನ್ಯಾಯ ಮಾರ್ಗದಲ್ಲಿ ಮಾತ್ರ ಹಣ ಸಂಪಾದನೆ ಮಾಡಿ. ಇಲ್ಲದಿದ್ದರೆ ತೊಂದರೆಗಳಿಗೆ ಸಿಲುಕುವಿರಿ.

ನಿಮ್ಮ ಮುಂಗೋಪ, ದುಡುಕುಗಳನ್ನು ಬಿಡದಿದ್ದರೆ ವಿವಾಹ ಜೀವನದಲ್ಲಿ ಅಶಾಂತಿ ಉಂಟಾಗುವ ಸಂಭವವಿದೆ. ಯಾವುದೇ ಕಾರ್ಯಕ್ಕೆ ಇಳಿಯುವ ಮುನ್ನ ಸಾಕಷ್ಟು ಯೋಚಿಸಿ, ಪರಿಶ್ರಮದಿಂದ ಮಾಡಿದರೆ ಯಶಸ್ಸು ನಿಮ್ಮದಾಗಬಹುದು. ಮನೆಯಲ್ಲಿ ಅಥವಾ ಕುಟುಂಬದಲ್ಲಿ ಉಂಟಾಗುವ ಸಣ್ಣ ಸಣ್ಣ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ.

ಕನ್ಯಾ ರಾಶಿ

ಮಕ್ಕಳ ಬಗ್ಗೆ ಕಾಳಜಿ, ಗಮನ ಕೊಡಿ. ವಿದ್ಯಾರ್ಥಿಗಳು ಮನೆಯಲ್ಲಿದ್ದರೂ ಅವರ ಕಲಿಯುವಿಕೆಯ ಬಗ್ಗೆ ಹೆಚ್ಚಿನ ಗಮನ ಕೊಡಿ. ಉದ್ಯೋಗದಲ್ಲಿ ಪ್ರಗತಿಯನ್ನು ಕಂಡರೂ ಬ್ಯಾಂಕ್ ಹಾಗೂ ಕೋರ್ಟ್ ವ್ಯವಹಾರಗಳಲ್ಲಿ ಕಷ್ಟ ಎದುರಾಗಬಹುದು. ಅಪರಿಚಿತರೊಡನೆ ಸ್ನೇಹವನ್ನು ಮಾಡುವುದರ ಮೊದಲು ಅವರ ಬಗ್ಗೆ ಮೊದಲು ತಿಳಿಯಲು ಯತ್ನಿಸಿ. ಇಲ್ಲದಿದ್ದರೆ ತೊಂದರೆಗೆ ಸಿಲುಕಬಹುದು. 

ಮಹನೀಯರ ಮಹಾ ನುಡಿ-ಭಾಗ 4 (ಯಕ್ಷಗಾನದಲ್ಲಿ ಹಾಡುಗಾರಿಕೆ – ಶೇಣಿ ಗೋಪಾಲಕೃಷ್ಣ ಭಟ್)

ಯಕ್ಷಗಾನದಲ್ಲಿ ಹಾಡುಗಾರಿಕೆ – ಶ್ರೀ ಶೇಣಿ ಗೋಪಾಲಕೃಷ್ಣ ಭಟ್. (ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘ, ಮಧೂರು ಈ ಸಂಸ್ಥೆಯ ರಜತ ಮಹೋತ್ಸವ ಸ್ಮರಣ ಸಂಚಿಕೆ ‘ಸುಧಾ ಕಲಶ’ ಪುಸ್ತಕದಲ್ಲಿ)

“ಶಾಸ್ತ್ರೀಯವಾದ ರಾಗ, ತಾಳ ಬದ್ಧತೆಯುಳ್ಳ ಹಾಡುಗಳನ್ನೇ ಆದರೂ, ದೇಶ ಕಾಲಗಳ ಮರ್ಯಾದೆಯನ್ನು ಗಮನಿಸಿ ಹಾಡುವುದೇ ಪಾಂಡಿತ್ಯಕ್ಕೆ ಭೂಷಣ. ಔಚಿತ ಭೋಧವಿಲ್ಲದಿದ್ದರೆ ವೃಥಾ ಶ್ರಮವೂ ಅಭಾಸವೂ ಆಗದಿರದು. ಮುಖ್ಯವಾಗಿ ಯಕ್ಷಗಾನದ ಹಿಮ್ಮೇಳಗಳಾದ ಚೆಂಡೆ ಮದ್ದಳೆಗಳಿರುವುದು ಕುಣಿಕೆಯ ನಿರ್ದೇಶನಕ್ಕಾಗಿ. ನಾಟ್ಯದ ಸ್ವಂತಿಕೆಗೆ ಈ ವಾದನವು ಪೂರಕವಾಗಿದೆಯೆಂಬ ಸತ್ಯವನ್ನು ಕಡೆಗಣಿಸಬಾರದು. ತಾಳ ವಾದ್ಯಗಳ ನಿರ್ದಿಷ್ಟ ಸೊಲ್ಲುಗಳ ಬದಲಾವಣೆಯಾದರೆ, ಶೈಲಿಯೂ ವಿರೂಪಗೊಳ್ಳುವುದೆಂಬ ನೆನಪು ವಾದ್ಯದವರಿಗೆ ಇರುವಷ್ಟು ಕಾಲ ಬೆರಕೆಯ ಭಯ ದೂರವಾಗಿಯೂ ಉಳಿಯುವುದು. ಈ ಮರ್ಮವನ್ನರಿಯದ ಭಾಗವತನು ಸಂಗೀತ ಸಾಮ್ರಾಟ ಪದವೀಧರನಾದರೂ ಯಕ್ಷಗಾನಕ್ಕೆ ಹಾಡುಗಾರನಾಗಲಾರ. ರಾಗ ಪ್ರಧಾನವಲ್ಲದ, ತಾಳ ಪ್ರಧಾನಗೇಯ ಪ್ರಬಂಧಗಳನ್ನು ಹಾಡುವ ಚಾಕಚಕ್ಯತೆಯೇ ಇಲ್ಲಿ ಎದ್ದು ಕಾಣಬೇಕಾದ ಪ್ರಧಾನ ಗುಣವಾಗಿರಬೇಕು. ಈ ಪದ್ಧತಿಯೂ ಶಾಸ್ತ್ರೀಯ ಸಂಗೀತವೆಂದೇ ಅಂಗೀಕೃತವಾಗಿದೆ.

ಜಾಹೀರಾತು

ಒಂದೇ ಹಾಡಿನಲ್ಲಿ ಶೋಕ, ಕ್ರೋಧ, ಹಾಸ್ಯಾದಿಗಳನ್ನು ಬಿಂಬಿಸುವ ನುಡಿಗಟ್ಟುಗಳಿರಬಹುದಾದ ಸಂದರ್ಭಗಳಲ್ಲಿ ಹಾಡುಗಾರನು ಈ ಸಂಚಾರೀ ಭಾವಗಳಿಗೆ ತಾನೇ ಸ್ಪಂದಿಸಿ, ರಾಗಮಾಲಿಕೆಯನ್ನೋ, ತಾಳಮಾಲಿಕೆಯನ್ನೋ ಮಾಡಿದರೆ ತನ್ನ ಅಜ್ಞಾನವನ್ನು ತಾನೇ ಉದ್ಘಾಟಿಸಿಕೊಂಡಂತಾಯಿತು. ಭಾಗವತಿಕೆಯು ಸೂತ್ರಧಾರಿಕೆಯಲ್ಲದೆ, ಪಾತ್ರ ನಿರ್ವಹಣೆಯಲ್ಲವಲ್ಲ? ರಸಭಾವ ಪ್ರಕಟಣೆ ಸೂತ್ರಧಾರಿಯ ಹೊಣೆಯಾದ್ದರಿಂದ ಸ್ಫೂರ್ತಿ ನೀಡುವ ಹಿನ್ನಲೆಯನ್ನೊದಗಿಸುವ ಕರ್ತವ್ಯ ಹಿಮ್ಮೇಳಕ್ಕಿದ್ದರೆ ಸಾಕು. ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಇರುವ ಈ ಸಾಂಪ್ರದಾಯಿಕ ಅಚ್ಚುಕಟ್ಟುತನವೇ ಯಕ್ಷಗಾನದ ತನ್ನತನ. ಸಂಗೀತ ಶಾಸ್ತ್ರದಲ್ಲಿ ಗುರುತಿಸಲ್ಪಟ್ಟ ಜನ್ಯ ಜನಕ ರಾಗಗಳ ಪಾಠವಿದ್ದು, ಯಕ್ಷಗಾನ ರಚನೆಗಳಲ್ಲಿ ನಮೂದಿಸಿರುವ ರಾಗಗಳನ್ನು ಶುದ್ಧವಾಗಿ ಬಳಸುವ ಅಗತ್ಯದೊಂದಿಗೆ ಇತಿಮಿತಿಯನ್ನರಿತು, ಸಾಹಿತ್ಯವನ್ನು ಸ್ಪಷ್ಟ ಉಚ್ಚಾರದೊಂದಿಗೆ ನಾದತರಂಗವನ್ನು ಸೃಷ್ಟಿಸಿ, ಬಯಲು ರಂಗಮಂಟಪವನ್ನು ಇಂದ್ರಲೋಕವೋ, ಚಂದ್ರಲೋಕವೋ ಆಗಿಸುವ ಭಾಗವತಿಕೆಯೇ ಯಕ್ಷಗಾನದ ಉಳಿವಿಗೆ ಅಗತ್ಯವೆನಿಸುತ್ತದೆ. ಈ ರೀತಿಯ ಲಕ್ಷ್ಯ, ಲಕ್ಷಣಗಳು ಜಾನಪದವೆಂಬ ಹಿಮ್ಮೇಳ ಮುಮ್ಮೇಳಗಳಲ್ಲಿ ಹುಡುಕಿದರೂ ದೊರಕಲಾರವು”.

ಸಿಂಹ ರಾಶಿ – ನವೆಂಬರ್ 2020

ಸಿಂಹ ರಾಶಿ – ನವೆಂಬರ್ 2020

ಸಿಂಹ ರಾಶಿಯವರಿಗೆ ನವೆಂಬರ್ ತಿಂಗಳು ಸಾಕಷ್ಟು ಉತ್ತಮ ಫಲಗಳನ್ನು ಪಡೆಯುವ ಅವಕಾಶಗಳಿವೆ. ಹಾಗಿದ್ದೂ ಅಂತಹ ಅವಕಾಶಗಳನ್ನು ಸದುಪಯೋಗಿಸಿಕೊಳ್ಳುವ ಜಾಣ್ಮೆ ನಿಮ್ಮಲ್ಲಿರಬೇಕು. ಈ ತಿಂಗಳಲ್ಲಿ ಭೂಮಿ, ಮನೆ, ಆಸ್ತಿ ಮಾಡಿಕೊಳ್ಳುವ ಯೋಗಗಳಿವೆ. ಕೆಲವರಿಗೆ ಮಾಡಿದ ಸತ್ಕಾರ್ಯಗಳಿಗೆ, ಕಠಿಣ ಶ್ರಮಕ್ಕೆ ಪ್ರತಿಫಲ ದೊರಕಬಹುದು. ಸಾರ್ವಜನಿಕ ವಲಯದಲ್ಲಿ ಗೌರವವೂ ದೊರಕಬಹುದು. ಆದರೆ ನಿಮ್ಮ ಆತುರ, ಗಡಿಬಿಡಿಯ ಸ್ವಭಾವಗಳಿಂದಾಗಿ ಮನೆಯಲ್ಲಿ ಶಾಂತಿಯಿಂದ ಇರಲು ಅಸಾಧ್ಯವಾಗಬಹುದು.

ಕೆಲವರಿಗೆ ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಉಂಟಾಗಬಹುದು. ಸಾಕಷ್ಟು ಸಂಪಾದನೆಯಿದ್ದರೂ ಅದರ ಸದ್ವಿನಿಯೋಗ ಮಾಡದಿದ್ದರೆ ಅಥವಾ ಬೇಡವಾದ ಖರ್ಚುಗಳನ್ನು ಮಾಡಿದರೆ ಹಣ ಉಳಿಯುವುದು ಕಷ್ಟ. ಹಣದ ವಿಚಾರದಲ್ಲಿ ಬಹಳಷ್ಟು ಜಾಗ್ರತೆ ಅವಶ್ಯ. ಸಾಲ ಕೊಟ್ಟ ದುಡ್ಡಿನ ವಸೂಲಾತಿ ಕಷ್ಟವಾಗಬಹುದು.

ಸಿಂಹ ರಾಶಿ

ಮನೆಯಲ್ಲಿ ಮಂಗಲಕಾರ್ಯಗಳು ನಡೆಯಬಹುದು. ಸ್ತ್ರೀ ಮೂಲದಿಂದ ಧನಲಾಭ ಉಂಟಾಗಬಹುದು. ಮನೆಯವರ ಆರೋಗ್ಯದಲ್ಲಿ ಹೆಚ್ಚುಕಡಿಮೆ ಉಂಟಾಗಬಹುದು. ನೀವು ಮನೆಯವರೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಪ್ರಯತ್ನಿಸಿ ಮತ್ತು ಕುಟುಂಬ ಸದಸ್ಯರೊಂದಿಗೆ ಹೊಂದಾಣಿಕೆಯಿಂದಿರುವುದರಿಂದ ನಿಮಗೆ ಸಾಕಷ್ಟು ಪ್ರಯೋಜನಗಳು ಉಂಟಾಗಲಿದೆ. 

ಕರ್ಕಾಟಕ ರಾಶಿ – ನವೆಂಬರ್ 2020

ಕರ್ಕಾಟಕ ರಾಶಿ  ನವೆಂಬರ್ 2020

ಈ ರಾಶಿಯವರಿಗೆ ಈ ತಿಂಗಳು ಸ್ವಲ್ಪ ಅನುಕೂಲವಾಗಿರುತ್ತದೆ. ಆರ್ಥಿಕವಾಗಿ ನಿಮ್ಮ ಸ್ಥಿತಿ ಉತ್ತಮವಾಗಿದ್ದರೂ ಅದನ್ನು ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಮನಸಿನಲ್ಲಿ ಹೊಸ ಹೊಸ ಯೋಚನೆಗಳು ಬರುತ್ತವೆ.

ಕರ್ಕಾಟಕ

ಆರ್ಥಿಕ ಅನುಕೂಲವು ನಿಮ್ಮನ್ನು ಹೊಸ ವ್ಯವಹಾರಕ್ಕೆ ಇಳಿಯುವಂತೆ ಪ್ರೇರೇಪಿಸಬಹುದು. ಆದರೆ ಯಾವುದೇ ಹೊಸತನ್ನು ಆರಂಭಿಸುವ ಮೊದಲು ನಿಮಗದು ಸಾಧಕವಾಗುವಂತೆ ಪ್ರಯತ್ನಿಸಿ. ಅರೋಗ್ಯ ಸಮಸ್ಯೆ ಅಷ್ಟಾಗಿ ಕಾಡದಿದ್ದರೂ ನರದ ಸಂಬಂಧೀ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸಿ. ಒಂದು ರೀತಿಯ ಆಲಸ್ಯ ನಿಮ್ಮನ್ನು ಕಾಡುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಹೆಚ್ಚಿನ ಪ್ರಯತ್ನ ಪಡುವುದರಿಂದ ಯಶಸ್ಸು ಸಿಗಲು ಸಾಧ್ಯ.

ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುವ ಕಾರಣ ಹೂಡಿಕೆ ಮಾಡುವತ್ತ ನಿಮ್ಮ ಮನಸ್ಸು ವಾಲಬಹುದಾದರೂ ಸರಿಯಾದ ಲಾಭದಾಯಕ ಸಂಸ್ಥೆಯಲ್ಲಿ ಹೂಡಿಕೆ ಮಾಡಿ. ಮಕ್ಕಳ ಕಡೆ ಗಮನ ಅಗತ್ಯ. ಕೈಯಲ್ಲಿ ಹಣವಿದೆ ಎಂದು ಕೇಳಿದ್ದನ್ನೆಲ್ಲ ಕೊಡಿಸೋಕೆ ಹೋಗಬೇಡಿ. ಈ ತಿಂಗಳು ಕುಟುಂಬದೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. 

ಮಿಥುನ ರಾಶಿ – ನವೆಂಬರ್ 2020

ಮಿಥುನ ರಾಶಿ – ನವೆಂಬರ್ 2020

ಮಿಥುನ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಹಣಕಾಸಿನ ತೊಂದರೆ ಎದುರಾಗುವ ಸಾಧ್ಯತೆಯಿದೆ. ನಿಮ್ಮ ಖರ್ಚು ವೆಚ್ಚಗಳನ್ನು ನೀವು ನಿಯಂತ್ರಣದಲ್ಲಿಡದಿದ್ದರೆ ಸ್ವಲ್ಪ ಮಟ್ಟಿಗೆ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ. ವ್ಯಾಪಾರವ ವ್ಯವಹಾರಗಳು ಸಾಮಾನ್ಯ ಗತಿಯಲ್ಲಿ ಸಾಗುತ್ತಿರುವುದಾದರೂ ಆದಾಯಕ್ಕಿಂತ ಖರ್ಚು ವೆಚ್ಚಗಳೇ ಹೆಚ್ಚಾಗುತ್ತವೆ.  

ಮಿಥುನ ರಾಶಿ

ವಿದ್ಯಾಭ್ಯಾಸ, ಇಂಟರ್ವ್ಯೂ ಗಳಲ್ಲಿ ಯಶಸ್ಸು ಉಂಟಾಗುತ್ತದೆ. ಮನೆಯ ಅಥವಾ ಕುಟುಂಬದ ಸದಸ್ಯರ ನಡುವೆ ಸಮಸ್ಯೆಗಳು ತಲೆದೋರುವ ಸಾಧ್ಯತೆಯಿದ್ದು ತಾಳ್ಮೆ ವಹಿಸುವುದು ಉತ್ತಮ.

ಜಾಹೀರಾತು

ಯಾವುದೇ ವಿವಾದಗಳಿದ್ದರೂ ಸದಸ್ಯರೆಲ್ಲರೂ ಕುಳಿತು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸುವುದು ಉತ್ತಮ. ಈ ರಾಶಿಯ ವಿವಾಹಿತರಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನ ನೆಮ್ಮದಿಯಿಂದ ಕೂಡಿರುತ್ತದೆ. ಅರೋಗ್ಯ ವಿಷಯದಲ್ಲಿ ಹೇಳುವುದಾದರೆ ಮೂಳೆಗಳಿಗೆ ಸಂಬಂಧಪಟ್ಟ ತೊಂದರೆಗಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸುವುದು ಉತ್ತಮ. 

ವೃಷಭ ರಾಶಿ – ನವೆಂಬರ್ 2020

ಈ ರಾಶಿಯವರಿಗೆ ವ್ಯಾಪಾರ ವ್ಯವಹಾರಗಳನ್ನು ಮಾಡಲು ಆರ್ಥಿಕ ಮೂಲಗಳನ್ನು ಹುಡುಕಬೇಕಾಗಿ ಬರಬಹುದು. ಆದರೆ ಚಿಂತಿಸಬೇಕಾದ ಅಗತ್ಯವಿಲ್ಲ.

ಕೆಲವೊಂದು ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ ಅಥವಾ ಸಾಲ ಸೌಲಭ್ಯಗಳು ದೊರಕುವ ಸಂಭಾವ್ಯತೆಗಳು ಕಾಣಿಸುತ್ತಿವೆ. ನೀವು ನಿರೀಕ್ಷಿಸದೆ ಇದ್ದ ಕಡೆಯಿಂದ ಹಣದ ಮೂಲಧನ ಒದಗಿ ಬರಲಿದೆ. ಆದರೆ ಎಚ್ಚರ. ಹಣ ಪಡೆಯುವುದು ದೋಡ್ಡದಲ್ಲ. ಹಿಂದಿರುಗಿಸುವ ದಾರಿಗಳ ಬಗ್ಗೆಯೂ ಸ್ವಲ್ಪ ಯೋಚಿಸಿ.

ನಿಮ್ಮ ಒಟ್ಟು ಕುಟುಂಬದಲ್ಲಿ ಅಥವಾ ಸಂಸಾರದಲ್ಲಿ ಕೆಲವೊಂದು ಜವಾಬ್ದಾರಿಗಳನ್ನು ನೀವೇ ವಹಿಸಬೇಕಾಗಿ ಬರಬಹುದು. ಇದರಿಂದ ನಿಮಗೆ ಆರ್ಥಿಕವಾಗಿ ಸ್ವಲ್ಪ ಹೆಚ್ಚಿನ ಹೊರೆಯಾದಂತೆ ಅನಿಸಬಹುದು. ದೂರದೂರಿನ ಶಿಕ್ಷಣ ಪಡೆಯಬೇಕೆಂದು ಯತ್ನಿಸುವ ವಿದ್ಯಾರ್ಥಿಗಳು ಯೋಚಿಸಿ ಮುಂದಡಿ ಇಡುವುದು ಒಳ್ಳೆಯದು.

ನಿಮ್ಮ ಅರೋಗ್ಯ ಹಾಗೂ ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರವಿರಲಿ. ದೃಷ್ಟಿಯ ಸಂಬಂಧಿತ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡಿ. ಸಂಗಾತಿಯ ಬಗ್ಗೆ ಅನಗತ್ಯ ಅಸಡ್ಡೆಯನ್ನು ತೋರುವುದನ್ನು ಬಿಟ್ಟುಬಿಡಿ.

ಮೇಷ ರಾಶಿ – ನವೆಂಬರ್ 2020

ನಿಮ್ಮ ವ್ಯಾಪಾರ ವ್ಯವಹಾರಗಳನ್ನು ಕಾನೂನು ಬದ್ಧವಾಗಿ ಮಾಡಿ. ಇಲ್ಲದಿದ್ದರೆ ನೀವು ವೃಥಾ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ವೃತ್ತಿ ಕ್ಷೇತ್ರದಲ್ಲಿ ತಂತ್ರಗಾರಿಕೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಾಕಷ್ಟು ಯೋಚಿಸಿ.

ಯಾವುದೇ ಕ್ಷೇತ್ರದಲ್ಲಿ ತಂಡವಾಗಿ ಕೆಲಸ ಮಾಡುವುದರಿಂದ ಯಶಸ್ಸು ಬೇಗನೆ ದೊರಕಲು ಸಾಧ್ಯವಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ತಾಳ್ಮೆಯಿಂದ ಮುಂದುವರಿದಲ್ಲಿ ವೃತ್ತಿಕ್ಷೇತ್ರದಲ್ಲಿ ಮುನ್ನಡೆಯಿದೆ. ನೀವು ಮಾಡಿದ ಸೇವೆಗೆ ತಕ್ಕ ಪ್ರತಿಫಲವನ್ನು ಪಡೆಯುವಿರಿ. ಹಾಗೂ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ.

ಸಂಸಾರ ಜೀವನದಲ್ಲಿ ಹೊಂದಾಣಿಕೆಯಿಂದ ಇರದಿದ್ದಲ್ಲಿ ಕಲಹ ಸಂಭವಿಸುವ ಸಾಧ್ಯತೆಯಿದೆ. ಕೆಲವರಿಗೆ ಹೊಸ ಭೂಮಿ, ಮನೆ ಖರೀದಿಸುವ ಆಸಕ್ತಿ ಮೂಡಬಹುದು. . ಧಾಖಲೆಪತ್ರಗಳನ್ನು ಪರಿಶೀಲಿಸಿ ಮುಂದುವರಿಯಿರಿ. ಬಹಳಕಾಲದಿಂದ ದೂರವಾಗಿದ್ದ ಸಂಬಂಧಿಕರನ್ನು ಮತ್ತೆ ಭೇಟಿಯಾಗುವ ಭಾಗ್ಯ ಅನಿರೀಕ್ಷಿತವಾಗಿ  ಎದುರಾಗಬಹುದು. ಪ್ರೇಮಿಗಳು ಜಗಳವಾಡುವ ಮನೋಸ್ಥಿತಿಯಿಂದ ಹೊರಬರುವುದು ಉತ್ತಮ. ವಿದ್ಯಾರ್ಥಿಗಳಿಗೆ ಈ ಕಾಲ ಸಂತೋಷವನ್ನು ಕೊಡಬಹುದಾದರೂ ಹೆತ್ತವರು ಸೂಕ್ತ ನಿಗಾ ವಹಿಸಿ ಅವರ  ವಿದ್ಯಾಭ್ಯಾಸ ಹಳಿ ತಪ್ಪದಂತೆ ಎಚ್ಚರ ವಹಿಸುವುದು ಉತ್ತಮ. 

ಕೋಲುಳಿ ಸುಬ್ಬ ಮತ್ತು ಬಣ್ಣದ ವೇಷ (ಮಹನೀಯರ ಮಹಾ ನುಡಿ-ಭಾಗ 3)

(ಶ್ರೀ ಅಳಿಕೆ ರಾಮಯ್ಯ ರೈ ಕೋಲುಳಿ ಸುಬ್ಬನ ಬಗ್ಗೆ – ತನ್ನ ಆತ್ಮಕಥನ ‘ಅಳಿಕೆ ಸ್ಮೃತಿ – ಕೃತಿ’ಯಲ್ಲಿ )

 
“ಬಣ್ಣದ ವೇಷದ ಸುಬ್ಬ ಕೋಲುಳಿ ಸುಬ್ಬನೆಂದೇ  ಖ್ಯಾತ. ಇವನದು ಈಡು ಜೋಡಿಲ್ಲದ ಬಣ್ಣದ ವೇಷಗಾರಿಕೆ. ಅಪ್ರತಿಮ ವಾಗ್ವಾದ ನಿಪುಣ. ಇವನ ಮುಖದ ಚಿಟ್ಟಿ, ಬಣ್ಣದ ವೇಷದ ಅಟ್ಟಹಾಸಕ್ಕೆ ಹೆದರಿ ಮೂರ್ಛೆ ಹೋದವರೂ ಲೆಕ್ಕವಿಲ್ಲದಷ್ಟು ಮಂದಿ.

ಕೆಲೆವೆಡೆಗಳಲ್ಲಿ ಮಕ್ಕಳೂ ಹೆಂಗಸರೂ ಹೆದರಿಕೊಳ್ಳದಂತೆ ಸುಬ್ಬನ ವೇಷ ಬರುವುದೆಂದು ಮುನ್ನೆಚ್ಚರಿಕೆ ಕೊಡುವ ಸಂಪ್ರದಾಯವಿತ್ತು. ನನ್ನ ಜೀವಮಾನದಲ್ಲಿ ಇಂತಹ ಮನಸ್ಸಿನಿಂದ ಮಾಯದ ಬಣ್ಣದ ವೇಷವನ್ನು ನೋಡಿಲ್ಲವೆಂದು ಪ್ರಾಂಜಲವಾಗಿ ಹೇಳುವೆ”

‘ಮಹಾ ಬಲ’ – ಕೆರೆಮನೆ ಮಹಾಬಲ ಹೆಗಡೆ ಜೀವನ ಚರಿತ್ರೆ

ಶೀರ್ಷಿಕೆಯೇ ಸೂಚಿಸುವಂತೆ ಈ ಕೃತಿಯು ಬಡಗುತಿಟ್ಟು ಯಕ್ಷಗಾನದ ಮೇರು ಕಲಾವಿದ ಶ್ರೀ ಮಹಾಬಲ ಹೆಗಡೆಯವರ ಜೀವನ ಚರಿತ್ರೆಯು. ಯಕ್ಷಗಾನ ಕಲೆಯಲ್ಲಿ ಮಹಾ ಬಲಶಾಲಿಯಾಗಿ ಬೆಳೆದು ಕಾಣಿಸಿಕೊಂಡವರು ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು. ‘ಯಕ್ಷಗಾನ ಸಂಗೀತವನ್ನು ರಾಗಜ್ಞಾನ ಸಹಿತವಾಗಿ ಕಿವಿಗೆ ಹಿತವಾಗಿ ಹಾಡಬಲ್ಲ ನರ್ತಕರು ಇಂದು ಇದ್ದರೆ ಅವರೇ’ ಈ ರೀತಿಯಾಗಿ ಡಾ. ಶಿವರಾಮ ಕಾರಂತರಿಂದ ಹೊಗಳಿಸಿಕೊಂಡವರು.

ಶ್ರೀಯುತರ ಜೀವನ ಚರಿತ್ರೆ ‘ಮಹಾ ಬಲ’ ಎಂಬ ಈ ಹೊತ್ತಗೆಯು ಪ್ರಕಟವಾದುದು 2008ರಲ್ಲಿ. ಪ್ರಕ್ಷಕರು ಸುಮುಖ ಪ್ರಕಾಶನ, ಬೆಂಗಳೂರು. ಲೇಖಕರು ಶ್ರೀ ಎಲ್.ಎಸ್.ಶಾಸ್ತ್ರಿಗಳು. ಮೊದಲಿಗೆ ಶ್ರೀ ಸಚ್ಚಿದಾನಂದ ಹೆಗಡೆ ಅವರ ಲೇಖನವಿದೆ. ‘ಲೇಖಕನಾಗಿ ಹೇಳಬೇಕೆನಿಸಿದ್ದು’ ಎಂಬ ಶೀರ್ಷಿಕೆಯಡಿ  ಶ್ರೀ ಎಲ್.ಎಸ್.ಶಾಸ್ತ್ರಿಗಳು ತಮ್ಮ ಮನದ ಮಾತುಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ಒಟ್ಟು ನೂರಾ ಒಂಭತ್ತು ಪುಟಗಳಿಂದ ಕೂಡಿದ ಹೊತ್ತಗೆಯಿದು. ಕೆರೆಮನೆ ಶ್ರೀ ಮಹಾಬಲ ಹೆಗಡೆಯವರ ಜೀವನ ಚರಿತ್ರೆ ‘ಮಹಾ ಬಲ’ ಎಂಬ ಈ ಕೃತಿಯು ಒಟ್ಟು ಹನ್ನೆರಡು ವಿಭಾಗಗಳಡಿ ಮೂಡಿಬಂದಿರುತ್ತದೆ.

ಹುಡುಗಾಟದ ಹುಡುಗ, ಕುಮಾರ ಪರ್ವ, ಕಾರಂತರ ಒಡನಾಟದಲ್ಲಿ, ಪಾತ್ರ ಪ್ರಪಂಚ, ಸಂಗೀತ-ಸಾಹಿತ್ಯ-ನೃತ್ಯ, ದೃಷ್ಟಿ-ಧೋರಣೆ, ಕೊಡುಗೆಗಳು, ಅವರು-ಇವರು ಕಂಡಂತೆ, ಮಾನ ಸನ್ಮಾನ, ಮೇಳಗಳು-ಕಲಾವಿದರು, ಕೆಲ ವಿಶಿಷ್ಟ ಘಟನೆಗಳು, ಕೌಟುಂಬಿಕ ನೆಲೆ, ವ್ಯಕ್ತಿತ್ವ ಎಂಬ ವಿಭಾಗಗಳಡಿ ಮಾಹಿತಿಗಳನ್ನು ನೀಡಲಾಗಿದೆ. ಬಳಿಕ ಕೆರೆಮನೆ ಮಹಾಬಲ ಹೆಗಡೆ- ಕೆಲವು ಮುಖ್ಯ ಮಾಹಿತಿಗಳು ಮತ್ತು ಗ್ರಂಥ ಋಣ ಎಂಬ ವಿಚಾರಗಳ ಬಗೆಗೆ ವಿವರಗಳನ್ನು ನೀಡಿರುತ್ತಾರೆ. ಕೃತಿಯ ಹೊರ ಆವರಣದಲ್ಲಿ ಗೌರೀಶ ಕಾಯ್ಕಿಣಿ, ದೇರಾಜೆ ಸೀತಾರಾಮಯ್ಯ, ಪೆರ್ಲ ಕೃಷ್ಣ ಭಟ್ಟ, ನಾರ್ಣಪ್ಪ ಉಪ್ಪೂರ, ಹಿರಿಯಡ್ಕ ಗೋಪಾಲ ರಾವ್, ವೀರಭದ್ರ ನಾಯಕ, ಕೆರೆಮನೆ ಶಂಭು ಹೆಗಡೆ, ಇವರುಗಳ ನಲ್ನುಡಿಗಳನ್ನು ನೀಡಲಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ 

ದಿ|ಐರೋಡಿ ಸದಾನಂದ ಹೆಬ್ಬಾರ ಪ್ರಶಸ್ತಿ – 2020

ಯಕ್ಷಗಾನ ಕಲಾಕೇಂದ್ರ (ರಿ)  ಹಂಗಾರಕಟ್ಟೆ –  ಐರೋಡಿ ಇವರು ಸಂಯೋಜಿಸುತ್ತಿರುವ ದಿ| ಸದಾನಂದ ಹೆಬ್ಬಾರ ಸಂಸ್ಮರಣಾ ಕಾರ್ಯಕ್ರಮ ಮತ್ತು ಸದಾನಂದ ಪ್ರಶಸ್ತಿ ಪ್ರಧಾನ ಸಮಾರಂಭ-2020 ಕಾರ್ಯಕ್ರಮಗಳು ಇದೇ ಬರುವ ದಿನಾಂಕ 25.10.2020ರ ಆದಿತ್ಯವಾರ ಸಂಜೆ 5 ಘಂಟೆಗೆ ಉಡುಪಿಯ ಅಂಬಾಗಿಲು ಎಂಬಲ್ಲಿರುವ ವಾಸುಕೀ ನಗರದಲ್ಲಿ ನಡೆಯಲಿದೆ.

ಈ ಬಾರಿಯ ಸದಾನಂದ ಪ್ರಶಸ್ತಿಗೆ ಯಕ್ಷಗಾನ ವಿದ್ವಾಂಸರಾದ ಶ್ರೀ ಗುಂಡ್ಮಿ ಸದಾನಂದ ಐತಾಳರು ಆಯ್ಕೆಯಾಗಿದ್ದಾರೆ ಎಂದು ಕಲಾಕೇಂದ್ರದ ಪ್ರಕಟಣೆ ತಿಳಿಸಿದೆ.