Saturday, January 25, 2025
Home Blog Page 336

ಕನ್ನಡ ಭಾಷೆಯ ನುಡಿಗಟ್ಟುಗಳನ್ನು ಯಥೇಚ್ಛವಾಗಿ ಬಳಸುವ ತೆಕ್ಕಟ್ಟೆ ಆನಂದ ಮಾಸ್ತರರ ಅರ್ಥಗಾರಿಕೆಯ ತುಣುಕು  

ಪದ್ಯ: ಎನಲು ಸಂಜಯ ನುಡಿದ ಎನ್ನೊಳು| ಇನಿತು ವೈರಾಗ್ಯಗಳು ಏತಕೆ| ಜನಪನವನಿಯ ಸೋತ ಮೇಲನುವರದೊಳು ಯುದ್ಧದ|| ಮೊನೆಯೊಳೀವುದು ಕ್ಷತ್ರಿಯ| ವಂಶದ ಗುಣದ ಪದ್ಧತಿ ಸತ್ಯವಿರ್ದರೆ| ಜನಪನನುವಾಗಲಿ ಎನಲೈ ತಂದೆ ತಾನೆಂದ ||

ಸಂಜಯ (ತೆಕ್ಕಟ್ಟೆ ಆನಂದ ಮಾಸ್ತರ್): ಧರ್ಮರಾಜಾ, ಉದ್ಯೋಗ ಪರ್ವ ಇದು. ಉದ್ಯಮಶೀಲನಾಗಿರುವವನು ಕರುಣೆಯ ಉದ್ವೇಗಗಳಿಗೆ ಒಳಗಾಗಬಾರದು. ಭಾವವಿವಶನಾಗಿ ಯಾವನು ಜೀವನದಲ್ಲಿ ಮುಂದೆ ಸಾಗುತ್ತಾನೋ ಅವನು ಹೆಜ್ಜೆ ಹೆಜ್ಜೆಗೂ ಸೋಲನ್ನೇ ಅನುಭವಿಸುತ್ತಾನೆಯೇ ಹೊರತು ಗೆಲುವನ್ನಲ್ಲ. ನಿನ್ನ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದವರು ನಾವು. ನಾವು ಅಂದರೆ ನಾನು ಒಬ್ಬನೇ. ಹಾಗಾದರೆ ನಾವು ಅಂತ ಯಾಕೆ ಹೇಳಿದೆ? ನಿನ್ನ ತಂದೆ, ದೊಡ್ಡತಂದೆ ಅವರ ಸಮಕಾಲೀನನೂ ಒಡನಾಡಿಯೂ ನಾನು.

ಸಾಮಾಜಿಕವಾದ ಸ್ಥಾನಮಾನಗಳಲ್ಲಿ ನಮಗೆ ಭಿನ್ನತೆ ಇದ್ದರೂ ಆಂತರಂಗಿಕವಾದ ಸೌಹಾರ್ದ, ಸ್ನೇಹಗಳಲ್ಲಿ ನಮ್ಮಲ್ಲಿ ವಿಭಿನ್ನತೆಯಿರಲಿಲ್ಲ. ಹಾಗಾದ್ದರಿಂದಲೇ ಇಲ್ಲಿಗೆ ಬರುವಾಗ ನಾನು ಏನನ್ನು ನಿರೀಕ್ಷೆ ಮಾಡಿಕೊಂಡಿದ್ದೆನೋ ಅದು ತಲೆ ಕೆಳಗಾಗಿ ಹೋಯಿತು. ಅಯ್ಯಾ, ಈ ಪಕ್ಷದ ಪ್ರಮುಖನೂ ಪ್ರಧಾನನೂ ನೀನು. ನೀನಾಗಲೀ ನಿನ್ನವರಾಗಲೀ ನನ್ನನ್ನು ಹೀಗೆ ಸ್ವಾಗತಿಸುತ್ತೀರಿ ಎಂದು ನಾನು ಎಣಿಸಿರಲಿಲ್ಲ. ಯಾಕೆ ಗೊತ್ತೋ? ‘ಕೋಣಕ್ಕೆ ಹುಣ್ಣಾದರೆ ಆಕಳಿಗೆ ಬರೆ’ ಎಳೆಯಲಾಗದಲ್ಲ? ಸುಯೋಧನನ ಬಗ್ಗೆ ನಿಮ್ಮವರ ಮನಸ್ಸಿನಲ್ಲಿ ಮೂಡಿರುವ ದ್ವೇಷ, ಈರ್ಷೆ, ಮಾತ್ಸರ್ಯ ಇವುಗಳನ್ನು ಅವನ ದೂತನಾಗಿ ಬಂದ ನನ್ನ ಮುಂದೆ ಆಡಿದರೆ, ತೋಡಿದರೆ ಫಲವೇನು ಹೇಳು.

ಒಂದು ಮಾತು ನಿಮಗೆ ಹೇಳ್ತೇನೆ. ‘ಕುಲ ನಾಲಿಗೆಯರುಹಿತು’. ನಿಮ್ಮ ಮಾತುಗಳಲ್ಲಿರುವ ವೀರ್ಯ, ನಿಮ್ಮ ಮಾತುಗಳಲ್ಲಿರುವ ಶೌರ್ಯ, ನಿಮ್ಮ ಮಾತುಗಳಲ್ಲಿರುವ ವ್ಯಂಗ್ಯ, ಪ್ರಯೋಜನಕಾರಿಯಲ್ಲ. ಮಾತು ಕೃತಿಯಾಗಿ ಮೂಡಿದಾಗಲೇ ಮನುಷ್ಯ ಮಹತ್ವನೆನಿಸಿಕೊಳ್ಳುತ್ತಾನೆ. ಹಾಗಾದರೆ ನೀನಾಗಲೀ ನಿನ್ನವರಾಗಲೀ ಕೇಳಿದ ಮಾತಿನ ವಾಚ್ಯಾರ್ಥ ನನಗೆ ಗ್ರಾಹ್ಯ ಅಲ್ಲವಷ್ಟೇ ? ಒಟ್ಟಾರೆ ಎಲ್ಲವರೂ ಸುಯೋಧನನ, ಸುಯೋಧನನ ಕಡೆಯವರ ಕ್ಷೇಮವನ್ನು ವಾಚ್ಯವಾಗಿ ಕೇಳಿದ್ದೀರಲ್ಲ. ಹಾಗಾದರೆ ವಾಚ್ಯಾರ್ಥ ಅಲ್ಲ. ನಿಮಗೆಲ್ಲರಿಗೂ ವೃಷ್ಟಿಯಾಗಿ ಸುಯೋಧನನ ಬಗ್ಗೆ ಅಂತರಂಗದಲ್ಲಿ ಮೂಡಿರುವ ದ್ವೇಷ, ಈರ್ಷ್ಯೆಗಳೇ, ಅವುಗಳ ವಾಸನೆಯೇ, ಅವುಗಳ ಕಂಪೇ ನಿಮ್ಮ ಮಾತಿನಲ್ಲಿದೆ. ಹಾಗಾಗಿ ಪ್ರಸ್ತುತ ಆ ಬಗ್ಗೆ ಉತ್ತರಿಸುವುದಕ್ಕೆ ನಾನು ಉತ್ತರದಾಯಿ ಅಲ್ಲ.

ಇನ್ನೊಬ್ಬ ನಿಮ್ಮಲ್ಲಿ ಒಳಗಿದ್ದೂ ಹೊರಗುಳಿಯುವವನು. ಹೊರಗಿದ್ರೂ ಒಳಗೆ ನಡೆಸುವವನು. ವಾಸುದೇವ. ಅವನ ಬಗ್ಗೂ ಅಷ್ಟೇ. ಶ್ರದ್ಧೆಯಿಂದ ನಮಸ್ಕಾರ ಕೊಟ್ಟೇನೆ ವಿನಃ ಬುದ್ಧಿಯಿಂದ ಪ್ರತ್ಯುತ್ತರ ನೀಡಲಾರೆ. ಯಾಕೆ? ನನಗದು ಉದ್ಯೋಗ ಅಲ್ಲ. ಈಗ ನಾನಿಲ್ಲಿಗೆ ಬಂದಿರುವುದು ಯಾವನನ್ನು ನೀವು ಪ್ರತಿಕಕ್ಷಿ ಎಂದು ಸ್ವೀಕರಿಸಿ, ಒಪ್ಪಿದ್ದೀರಿ, ನಿಮ್ಮ ಸುದೀರ್ಘವಾದ ಜೀವಮಾನದಲ್ಲಿ ಇದು ತನಕದ ನಿಮ್ಮ ಆಯುರ್ಮಾನವನ್ನು ಯಾರಾತನ ವಿರೋಧವನ್ನು ಸಾಧಿಸುವುದಕ್ಕಾಗಿ ನೀವು ಸವೆಸಿದ್ದೀರಿ, ಅಂತಹಾ ಸುಯೋಧನನಿಂದ ಆಜ್ಙಾಪಿತನಾಗಿ ಬಂದಿರುವ ರಾಜದೂತ ನಾನು.

ದೂತನಾದವನ ಕಾರ್ಯವ್ಯಾಪ್ತಿ ಎಷ್ಟು ಅಂತ ಅರಿಯದೆ ಇದ್ದ ಅಜ್ಞ, ಅಪ್ರಬುದ್ಧ ರಾಜಕಾರಣಿ ನೀನಲ್ಲ. ಈ ಭರವಸೆಯಿಂದ ನಿನಗೆ ಹೇಳುತ್ತಾ ಇದ್ದೇನೆ. ಸುಯೋಧನನಾಡಿದ ಮಾತುಗಳನ್ನೇ ಅನುವಾದ ರೂಪವಾಗಿ ನನ್ನ ನಾಲಗೆಯಿಂದ ಹೇಳ್ತೇನೆ. ಜೂಜಿನಲ್ಲಿ ನೀವು ಸೋತಿರಬಹುದು. ಸುಯೋಧನ ಗೆದ್ದಿರಬಹುದು. ಆ ಸೋಲಾಗಲೀ ಈ ಗೆಲುವಾಗಲೀ ನಿರ್ಣಾಯಕವಲ್ಲ. ಕ್ಷತ್ರಿಯನಾಗಿ ಹುಟ್ಟಿದವನು ಅವನಿಯನ್ನಾಳುವ ಅಧಿಕಾರವನ್ನು ಆಶಿಸ್ತಾನೆ ಅಂತಾದ್ರೆ ಅನವರದಲ್ಲಿ ವಿರೋಧಿಯನ್ನು ಸೋಲಿಸಿ ತಾನು ಗೆದ್ದು ಆಳಬೇಕಾದದ್ದು ಕ್ಷತ್ರಿಯಕ್ಕೆ ಭೂಷಣ. ಕ್ಷತ್ರಿಯನ ಧರ್ಮ.

ಹಾಗಾದ್ದರಿಂದ ನೀವಾಸೆಪಟ್ಟಿರುವ ರಾಜ್ಯವನ್ನು ಅಂದರೆ ನಿಮ್ಮ ಅರ್ಧರಾಜ್ಯವನ್ನಲ್ಲ, ಅಧಿಕಾರಕ್ಕೆ ಸಂಬಂಧಪಟ್ಟ ಚಂದ್ರವಂಶದ ರತ್ನಸಿಂಹಾಸನವನ್ನು ಆಯುಧದ ಮೊನೆಯಲ್ಲಿಟ್ಟಿದ್ದೇನೆ. ಶಕ್ತರಾದರೆ ಪಾಂಡವರು ಪಡೆಯಲಿ. ಅಶಕ್ತರಾದರೆ ಅಂಬೋಣ ಏನು ಅಂತ ತಿಳಿಯಿಸಲಿ. ಇದನ್ನು ಹೇಳುವುದಕ್ಕಾಗಿ, ಇದಕ್ಕೆ ಉತ್ತರ ಕೇಳುವುದಕ್ಕಾಗಿ ಬಂದವನು ನಾನು. ಅರಸನಾಗಿ, ಈ ಪಕ್ಷದ ಪ್ರಮುಖನಾಗಿ ಏನು ಹೇಳ್ತೀಯ? 

ಬಣ್ಣದ ವೇಷದ ದೈತ್ಯ ಪ್ರತಿಭೆ – ಶ್ರೀ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್

ಬಣ್ಣದ ವೇಷಗಳು ರೌದ್ರ, ಭಯಾನಕ, ಬೀಭತ್ಸ ಮೊದಲಾದ ರಸಗಳನ್ನು ಸೃಷ್ಠಿಸುತ್ತವೆ. ರಾಜಬಣ್ಣ, ಹೆಣ್ಣುಬಣ್ಣ, ಕಾಟುಬಣ್ಣ ಹೀಗೆ ಈ ವಿಭಾಗದಲ್ಲಿ ವೈವಿಧ್ಯತೆಗಳು. ಹಿಂದಿನ ತಲೆಮಾರಿನ ಅನೇಕ ಕಲಾವಿದರು ನೇಪಥ್ಯದಲ್ಲಿ ಮತ್ತು ರಂಗಸ್ಥಳದಲ್ಲಿ ಅರ್ಪಣಾಭಾವದಿಂದ ದುಡಿದು ಪ್ರಸಿದ್ಧರಾದರು. ಯಕ್ಷಗಾನದಲ್ಲಿ ಬಣ್ಣದ ವೇಷಗಳಿಗೆ ಜೀವ ತುಂಬಿದರು. ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಅವರ ಶ್ರಮ, ಸಾಧನೆಯು ಹಿರಿದಾದುದು ಮತ್ತು ಪ್ರಶಂಸನೀಯವಾದುದು. ಪ್ರಸ್ತುತ ಅನೇಕ ಹಿರಿಯ ಮತ್ತು ಯುವ ಕಲಾವಿದರು ಬಣ್ಣದ ವೇಷಧಾರಿಗಳಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಅಂತವರಲ್ಲೊಬ್ಬರು ಶ್ರೀ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್. ಇವರು ಹನುಮಗಿರಿ ಮೇಳದಲ್ಲಿ ಪ್ರಸ್ತುತ ತಿರುಗಾಟ ನಡೆಸುತ್ತಿದ್ದಾರೆ.

`ಯಕ್ಷಗಾನ’ ದಲ್ಲಿ “ಬಣ್ಣದ ವೇಷಗಳು’’ ಎಂಬ ವಿಭಾಗಕ್ಕೆ ವಿಶೇಷ ಸ್ಥಾನವಿದೆ. ತೆಂಕುತಿಟ್ಟಿನಲ್ಲಂತೂ ಮುಖವರ್ಣಿಕೆ, ಅಟ್ಟಹಾಸ, ರಂಗಪ್ರವೇಶಿಸುವ ರೀತಿ, ಒಡ್ಡೋಲಗ ವೈಭವ, ಕುಣಿತಗಳಿಂದ ಈ ಪಾತ್ರಗಳು ವಿಜೃಂಭಿಸುತ್ತವೆ. ನೇಪಥ್ಯದಲ್ಲಿ (ಚೌಕಿಯಲ್ಲಿ) ಇವರಿಗೆ ದುಡಿಮೆ ಹೆಚ್ಚು. ಹಾಗೆಂದು ರಂಗದಲ್ಲಿ ದುಡಿಮೆ ಕಡಿಮೆಯೇನಲ್ಲ. ಪಾತ್ರಕ್ಕನುಗುಣವಾಗಿ ಮೆರೆಯುವ ಅವಕಾಶಗಳು ಇದ್ದೇ ಇದೆ. ಕೆಲವೊಂದು ಪಾತ್ರಗಳಿಗೆ ರಂಗದಲ್ಲಿ ಕೆಲಸ ಕಡಿಮೆಯಾದರೂ ಪ್ರೇಕ್ಷಕರ ಮನಸೂರೆಗೊಳ್ಳುವ ಸಾಮರ್ಥ್ಯವಿದೆ.

ನಾಟ್ಯ ಕಲಿತದ್ದು ಖ್ಯಾತ ಕಲಾವಿದರಾದ ರೆಂಜಾಳ ರಾಮಕೃಷ್ಣ ರಾಯರಿಂದ. ಬಣ್ಣಗಾರಿಕೆ ಮತ್ತು ರಂಗದ ನಡೆಗಳನ್ನು ಅಭ್ಯಸಿಸಿದ್ದು ಪ್ರಸಿದ್ಧ ಬಣ್ಣದ ವೇಷಧಾರಿಯಾಗಿ ಮೆರೆದ ಬಣ್ಣದ ಮಹಾಲಿಂಗ ಅವರಿಂದ.
ಶ್ರೀ ಸದಾಶಿವ ಶೆಟ್ಟಿಗಾರರ ಹುಟ್ಟೂರು ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆ. ಇವರು 1965 ಡಿಸೆಂಬರ್ 17ರಂದು ಶ್ರೀ ಬಾಬು ಶೆಟ್ಟಿಗಾರ್ ಮತ್ತು ಗಿರಿಯಮ್ಮ ದಂಪತಿಗಳ ಮಗನಾಗಿ ಜನಿಸಿದರು. ಓದಿದ್ದು ಸಿದ್ಧಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 6ನೇ ತರಗತಿಯ ವರೇಗೆ. ಶಾಲಾ ಬಾಲಕನಾಗಿದ್ದಾಗಲೇ ಯಕ್ಷಗಾನಾಸಕ್ತಿ ಇತ್ತು. ತಂದೆ ತಾಯಿಯವರ ಜತೆ ಆಟ ನೋಡಲು ಹೋಗುತ್ತಿದ್ದರು.

ಪರಿಸರದಲ್ಲಿ ಸುರತ್ಕಲ್, ಕರ್ನಾಟಕ, ಆದಿಸುಬ್ರಹ್ಮಣ್ಯ, ಪುತ್ತೂರು ಮೇಳಗಳ ಕಲಾಪ್ರದರ್ಶನಗಳು ನಡೆಯುತ್ತಿತ್ತು. ಟೆಂಟ್ ಮೇಳಗಳ ಪ್ರದರ್ಶನ. ಬಡತನದ ಕಾರಣ ಟಿಕೇಟು ಖರೀದಿಸಲು ಕಷ್ಟವಿತ್ತು. ಹಾಗೆಂದು ಆಟ ನೋಡಲು ಮನಸ್ಸು ಹಾತೊರೆಯುತ್ತಿತ್ತು. ಯಾರಿಗೂ ತಿಳಿಯದಂತೆ ಟೆಂಟ್‍ನ ಪರದೆಯೊಳಗೆ ನುಸುಳಿ ಕುಳಿತು ಆಟ ನೋಡುತ್ತಿದ್ದರಂತೆ! 7ನೇ ತರಗತಿಗೆ ಸೇರಿ ಕೆಲವಾರು ದಿನಗಳ ನಂತರ ಬಡತನದ ಮತ್ತು ಮನೆಯ ಸಮಸ್ಯೆಗಳ ಕಾರಣದಿಂದ ಶಾಲೆ ಬಿಡಬೇಕಾಗಿ ಬಂದಿತ್ತು. ಮನೆಯವರ ಒಪ್ಪಿಗೆ ಪಡೆದು ಸದಾಶಿವ ಶೆಟ್ಟಿಗಾರರು ಭಾವೀ ಬದುಕಿನ ಹೊಂಗನಸುಗಳನ್ನು ಹೊತ್ತು ಮುಂಬಯಿಗೆ ತೆರಳಿದರು. ಮುಂಬಯಿಯಲ್ಲಿ 3 ವರ್ಷ ಹೋಟೆಲ್ ಕೆಲಸ. ನಂತರ ಮರಳಿ ಊರಿಗೆ. ಮತ್ತೆ ಹುಬ್ಬಳ್ಳಿಯ ಹೋಟೆಲ್‍ನಲ್ಲಿ 1 ವರ್ಷ ಕೆಲಸ. ಅಲ್ಲಿಂದಲೇ ಪುನಃ ಮುಂಬಯಿಗೆ. ಹೋಟೆಲ್‍ನಲ್ಲಿ 2 ವರ್ಷ ದುಡಿಮೆ. ಮರಳಿ ಊರಿಗೆ. ಉಜಿರೆಯ ಹೋಟೆಲೊಂದರಲ್ಲಿ 6 ತಿಂಗಳು ಕೆಲಸ. ಹೋಟೆಲುಗಳಲ್ಲಿ ದುಡಿಯುತ್ತಿರುವಾಗಲೂ ಯಕ್ಷಗಾನದ ಹುಚ್ಚು ತೀವ್ರವಾಗಿತ್ತು. ಯಕ್ಷಗಾನದ ಹಾಡುಗಳನ್ನು ಹೇಳುವುದು, ಚೆಂಡೆಯ ಬಾಯಿತಾಳಗಳನ್ನು ಹೇಳುತ್ತಾ ಕುಪ್ಪಿಯ ಗ್ಲಾಸುಗಳನ್ನೂ, ಪ್ಲೇಟ್‍ಗಳನ್ನೂ ಬಡಿಯುತ್ತಿದ್ದರು. ಇವರ ತಾಳಕ್ಕೆ ಕುಪ್ಪಿಯ ಗ್ಲಾಸುಗಳನೇಕ ಪುಡಿಯಾಗಿದ್ದವು! ಹೋಟೆಲ್ ಸಾಹುಕಾರರಿಂದ ಬೈಗುಳದ ಸುರಿಮಳೆಯಾಗುತ್ತಿತ್ತು. ಅವಕಾಶ ಸಿಕ್ಕಿದಾಗಲೆಲ್ಲಾ ಆಟಗಳನ್ನು ಬಿಡದೆ ನೋಡುತ್ತಿದ್ದರು.

ಕೆಲಸ ಮಾಡುತ್ತಿರುವಾಗಲೇ ತಾನೂ ವೇಷ ಮಾಡಬೇಕು, ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆಯು ಚಿಗುರೊಡೆದಿತ್ತು. ನಾಟ್ಯ ಕಲಿತು ವೇಷ ಮಾಡಲು ನಿರ್ಧರಿಸಿಯೇ ಬಿಟ್ಟರು. ಆಗ ಪತ್ತನಾಜೆಯ ಸಮಯ. ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನ ನಡೆಯುತ್ತಿತ್ತು. ಆ ಸಂದರ್ಭದಲ್ಲೇ ಕಲಿಕಾಸಕ್ತರಿಗೆ ಲಲಿತಕಲಾ ಕೇಂದ್ರದಲ್ಲಿ ಸಂದರ್ಶನ ನಡೆಯುತ್ತಿತ್ತು. ಕಲಾವಿದನಾಗುವ ಬಯಕೆಯು ಸಾಕಾರಗೊಳ್ಳುತ್ತದೆ ಎಂಬ ಸಂತಸದಿಂದ ತೆರಳಿದರು. (18ನೇ ವರ್ಷ) ಆಗಲೇ ದೃಢಕಾಯರಾಗಿದ್ದ ಶೆಟ್ಟಿಗಾರರು ಸಂದರ್ಶನದಲ್ಲಿ ಆಯ್ಕೆಯಾಗಿರಲಿಲ್ಲ. ಹೋಟೆಲ್ ಕೆಲಸದ ಸಂದರ್ಭ ದಿನವೂ ವ್ಯಾಯಾಮ ಮಾಡಿ ಗಟ್ಟಿಮುಟ್ಟಾಗಿ ಬೆಳೆದಿದ್ದರು ಶೆಟ್ಟಿಗಾರರು. ಇವರ ದೇಹವೇ ಆಯ್ಕೆಯಾಗುವುದಕ್ಕೆ ತೊಡಕಾಗಿತ್ತು. 

ರೆಂಜಾಳದವರು ಕಲ್ಲಾಡಿ ಶ್ರೀ ವಿಠಲ ಶೆಟ್ಟರಲ್ಲಿ ಮಾತನಾಡಿ ಕಟೀಲು ಮೇಳಕ್ಕೆ ಸೇರಿಸಿದರು. (ನೇಪಥ್ಯ ಕಲಾವಿದನಾಗಿ) ಆಗ ಮೂರು ಮೇಳಗಳು ಕಾರ್ಯಾಚರಿಸುತ್ತಿತ್ತು. ಇವರು ಸೇರಿದ್ದು 2ನೇ ಮೇಳಕ್ಕೆ. ಪ್ರಥಮ ವರ್ಷವೇ ಬಣ್ಣದ ಮಹಾಲಿಂಗ ಅವರಿಗೆ ವೇಷಕಟ್ಟುವ ಭಾಗ್ಯ ಒದಗಿತ್ತು. ಮೇಕಪ್ ಮಾಡುವಾಗ ದೂರದಿಂದಲೇ ಗಮನಿಸಿ ಗ್ರಹಿಸುತ್ತಿದ್ದರು. ನಂತರ ಅವರಿಗೆ ವೇಷ ಕಟ್ಟುತ್ತಿದ್ದರು. ತಿರುಗಾಟ ಮುಗಿಸಿ ಮಳೆಗಾಲ ಕಟೀಲಿನಲ್ಲಿ ನಡೆಯುವ ಯಕ್ಷಗಾನ ಸಪ್ತಾಹಕ್ಕೆ ನೇಪಥ್ಯ ಕಲಾವಿದನಾಗಿ ಬಂದ ಸಂದರ್ಭ. ಅಲ್ಲಿ ನಾಟ್ಯ ಕಲಿಯಲು ತೀರ್ಮಾನ. ಅಲ್ಲಿಯೇ ಇದ್ದ ರೆಂಜಾಳ ರಾಮಕೃಷ್ಣ ರಾಯರಿಂದ ನಾಟ್ಯಾಭ್ಯಾಸ. ಕಟೀಲು ಗೋಪಾಲಕೃಷ್ಣ ಆಸ್ರಣ್ಣರು ಆ ಕಾಲದಲ್ಲಿ ಯಕ್ಷಗಾನವನ್ನೂ ಕಲಾವಿದರನ್ನೂ ಪ್ರೀತಿಸಿ ಪ್ರೋತ್ಸಾಹಿಸುತ್ತಿದ್ದರಂತೆ. ಅವರ ನಿರ್ದೇಶನದಲ್ಲಿ ಆಗ ಆಟಕೂಟಗಳು  ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದ್ದುವು. ಸಪ್ತಾಹದ ಸಮಯದಲ್ಲಿ ರೆಂಜಾಳದವರಿಂದ ನಾಟ್ಯ ಕಲಿತರು. ಶೆಟ್ಟಿಗಾರರು ನಾಟ್ಯ ಕಲಿತುದು 7 ದಿನಗಳು ಮಾತ್ರ. ಆದರೂ ಕಲಾವಿದನಾಗುವ ಛಲ ಇರುವವರಿಗೆ ಅಷ್ಟು ಸಾಕು. ಮೇಳದ ತಿರುಗಾಟದಲ್ಲಿ ಮತ್ತಷ್ಟು ಕಲಿಯಲು ಇದು ಭದ್ರ ವೇದಿಕೆಯಾಗಿ ಪರಿಣಮಿಸಿತ್ತು. “ಕಟೀಲಿನಲ್ಲಿ ನಡೆಯುವ ಯಕ್ಷಗಾನ ಸಪ್ತಾಹವು ನಾಟ್ಯ, ಮುಖವರ್ಣಿಕೆ, ನೇಪಥ್ಯ ಕೆಲಸ ಮಾಡಲು ಅಭ್ಯಾಸಿಗಳಿಗೆ ಅನುಕೂಲವಾಗಿತ್ತು. ಒಂದರ್ಥದಲ್ಲಿ ‘ಕಟೀಲು ಸಪ್ತಾಹ’ವು `ಕಲಿಕಾಕೇಂದ್ರ’ವೇ ಆಗಿತ್ತು.’’ ಇದು ಸದಾಶಿವ ಶೆಟ್ಟಿಗಾರರು ಅನುಭವಿಸಿ ಆಡಿದ ಮಾತುಗಳು.

(ಫೋಟೋ ಕೃಪೆ: ಎಸ್. ಎನ್. ಶರ್ಮ ನೀರ್ಚಾಲ್ )

2ನೇ ವರ್ಷವೂ ಕಟೀಲು 2ನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ. ಶೆಟ್ಟಿಗಾರರು ತನ್ನ ಕರ್ತವ್ಯ ಮುಗಿದ ನಂತರದಲ್ಲಿ ನಿದ್ರಿಸುತ್ತಿರಲಿಲ್ಲ. ಪ್ರದರ್ಶನಗಳನ್ನು ನೋಡುತ್ತಿದ್ದರು. ಚೌಕಿಯ ಹಿಂದೆ, ರಂಗಸ್ಥಳದ ಹಿಂದೆ ಕುಣಿಯುತ್ತಿದ್ದರು. ಹಗಲು ಬಿಡಾರದಲ್ಲೂ ಕೂಡಾ ಈ ಅಭ್ಯಾಸ ಮುಂದುವರಿದಿತ್ತು. ಅಣಕು ಪ್ರದರ್ಶನ ನಿರಂತರ ನಡೆಯುತ್ತಿತ್ತು. ಇದನ್ನು ಬಣ್ಣದ ಮಹಾಲಿಂಗನವರು ಗಮನಿಸುತ್ತಿದ್ದರು. ಶೆಟ್ಟಿಗಾರರಲ್ಲಿ ಅಡಗಿದ್ದ ಪ್ರತಿಭೆಯನ್ನು ಅವರು ಗುರುತಿಸಿಯೂ ಇದ್ದರು. ಕಲಿಯುತ್ತಿಯಾ? ಎಂದು ಕೇಳಿ ಹೇಳಿಕೊಡಲಾರಂಭಿಸಿದರಂತೆ. ಮುಖವರ್ಣಿಕೆ, ಬಣ್ಣದ ವೇಷಗಳ ಸ್ವಭಾವ, ನಡೆ, ಸಂಭಾಷಣೆಗಳ ಬಗೆಗೆ ಪಾಠ ಆರಂಭವಾಯಿತು. ಅಲ್ಲದೆ ಹುಡುಗನಿಗೆ ವೇಷ ಮಾಡುವ ಆಸಕ್ತಿ ಇದೆ. ಮಾಡಿಸಿ ಎಂಬ ಸೂಚನೆಯನ್ನೂ ಬಲಿಪ ಭಾಗವತರಿಗೆ ನೀಡಿದ್ದರು. ಬಲಿಪರು ಕೇಳಿದಾಗ ಶೆಟ್ಟಿಗಾರರ ಸಂತಸಕ್ಕೆ ಪಾರವೇ ಇರಲಿಲ್ಲ. ಸಿದ್ಧಕಟ್ಟೆಯಲ್ಲಿ ನಡೆದ ಕಟೀಲು ಮೇಳದ ಪ್ರದರ್ಶನ. ಪ್ರಸಂಗ ಶ್ರೀ ಮಹಾದೇವೀ ಲಲಿತೋಪಾಖ್ಯಾನ. ಊರಲ್ಲೇ ಮೊದಲ ವೇಷ ಮಾಡುವ ಅವಕಾಶ. `ಕಾಮೇಶ್ವರ’ನಾಗಿ ಶೆಟ್ಟಿಗಾರರು ರಂಗವೇರಿದರು. ಸದಾಶಿವನಿಗೆ ಸದಾಶಿವನಾಗಿಯೇ ಅಭಿನಯಿಸುವ ಭಾಗ್ಯ. ನಂತರ ದೇವೀ ಮಹಾತ್ಮ್ಯೆ ಪ್ರಸಂಗದಲ್ಲಿ ಶಂಖದುರ್ಗರು ಉಳಿದ ಪ್ರಸಂಗಗಳಲ್ಲಿ ರಾಕ್ಷಸ ಬಲಗಳಾಗಿ ವೇಷ ನಿರ್ವಹಣೆ.

2ನೇ ಮೇಳದಲ್ಲಿ ಬಲಿಪರು, ಪೆರುವಾಯಿ ನಾರಾಯಣ ಭಟ್, ಸಂಪಾಜೆ ಶೀನಪ್ಪ ರೈ, ರೆಂಜಾಳ, ಪೆರುವಾಯಿ ನಾರಾಯಣ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್, ಬೆಳ್ಳಾರೆ ಸುಬ್ಬಯ್ಯ ಶೆಟ್ಟಿ, ಬಣ್ಣದ ಮಹಾಲಿಂಗ, ಸುಬ್ರಾಯ ಸಂಪಾಜೆ, ಗುಂಡಿಮಜಲು ಗೋಪಾಲ ಭಟ್, ಪಡ್ರೆ ಕುಮಾರ ಮೊದಲಾದ ಕಲಾವಿದರ ಒಡನಾಟ ಸಿಕ್ಕಿತ್ತು. ಬೆಳ್ಳಾರೆ ಮಂಜುನಾಥ ಭಟ್ಟರೂ ಮುಖವರ್ಣಿಕೆ ಬಗೆಗೆ ಮಾಹಿತಿಯನ್ನು ನೀಡಿದ್ದರು. ವೇಷ ಕಟ್ಟಿದ ಮೇಲೆ ಸದಾಶಿವ ಶೆಟ್ಟಿಗಾರರು ಚಕ್ರತಾಳ ಬಾರಿಸಲು ಓಡುತ್ತಿದ್ದರು. ಮದ್ಲೆಗಾರರಾದ ಪೆರುವಾಯಿ ನಾರಾಯಣ ಭಟ್ಟರು ಅವಕಾಶವಿತ್ತು ಪ್ರೋತ್ಸಾಹಿಸುತ್ತಿದ್ದರು. ನಾಟ್ಯದಲ್ಲಿ ಹಿಡಿತ ಸಾಧಿಸಲು ಇದರಿಂದ ಅವಕಾಶವಾಗಿತ್ತು. ಈ ತಿರುಗಾಟದ ಎಪ್ರಿಲ್ ತಿಂಗಳಲ್ಲಿ ಮೇಳ ಬಿಡಬೇಕಾದ ಸಂದರ್ಭ ಬಂದಿತ್ತು. ರಾತ್ರೆ ಬಡಕಬೈಲಿನಿಂದ ಸಿದ್ಧಕಟ್ಟೆಗೆ ನಡೆದೇ ಬಂದಿದ್ದರು. ಆದರೂ ಕಲಾವಿದನಾಗುವ ಭಾಗ್ಯ ಅಳಿಯದೆ ಉಳಿದಿತ್ತು.
ಮುಂದಿನ ಮಳೆಗಾಲ ಕಟೀಲು ಸಪ್ತಾಹದ ಸಂದರ್ಭ- ಕಿನ್ನಿಗೋಳಿ ಮೋಹಿನೀ ಕಲಾಸಂಪದದ ಯಜಮಾನರ ನೇತೃತ್ವದಲ್ಲಿ ಪದ್ಮಶಾಲೀ ಬಳಗದ ವತಿಯಿಂದ ನಡೆದ ಆಟ- ಶಶಿಪ್ರಭಾ ಪರಿಣಯ ಪ್ರಸಂಗದ ಘೋರರೂಪಿಯಾಗಿ ಅಭಿನಯ. ಪಾತ್ರನಿರ್ವಹಣೆಯನ್ನು ನೋಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಮೇಳಕ್ಕೆ ಬರುವೆಯಾ ಎಂದು ಕೇಳಿದ್ದರು. ಶೆಟ್ಟಿಗಾರರಿಗೆ ಸಂತಸವಾಗಿತ್ತು. ಕಟೀಲು 1ನೇ ಮೇಳಕ್ಕೆ 3ನೇ ಬಣ್ಣದ ವೇಷಧಾರಿಯಾಗಿ ಸೇರಿದರು.

                         ಇರಾ ಗೋಪಾಲಕೃಷ್ಣರು 1ನೇ ಮೇಳದ ಭಾಗವತರಾಗಿದ್ದ ಕಾಲ. ಮುಖವರ್ಣಿಕೆಯಲ್ಲಿ ಶೆಟ್ಟಿಗಾರರು ಆಗಲೇ ಪಳಗಿದ್ದರು. ಬಣ್ಣದ ಮಹಾಲಿಂಗನವರ ಗರಡಿಯಲ್ಲಿ ಅಭ್ಯಸಿಸಿದ್ದು ಸಾರ್ಥಕವಾಗಿತ್ತು. ಆಗಲೇ ತುಂಬಾ ಉದ್ದ ಚಿಟ್ಟಿ ಇಡುವ ಕಲೆಯು ಕರಗತವಾಗಿತ್ತು. ಮೊದಲ ಮೂರು ತಿಂಗಳು ಮಾತ್ರ 3ನೇ ಬಣ್ಣದ ವೇಷ ನಿರ್ವಹಿಸಿದ್ದರು. ತಿರುಗಾಟದ 4ನೇ ತಿಂಗಳಿನಲ್ಲಿ 1ನೇ ಬಣ್ಣ ಮಾಡುವ ಅವಕಾಶ ಸಿಕ್ಕಿತ್ತು. ಶುಂಭಾಸುರನ ಪಾತ್ರ ಮಾಡಿ ಅದು ಶೆಟ್ಟಿಗಾರರೇ ತಿರುಗಾಟದುದ್ದಕ್ಕೂ ನಿರ್ವಹಿಸುವಂತಾಗಿತ್ತು. 2ನೇ ವರ್ಷದಲ್ಲಿ ಶುಂಭಾಸುರ ಅಲ್ಲದೆ, 1ನೇ ಮತ್ತು 2ನೇ ಬಣ್ಣಕ್ಕೆ ಸಂಬಂಧಿಸಿದ ಹೆಚ್ಚಿನ ಎಲ್ಲಾ ವೇಷಗಳನ್ನೂ ನಿರ್ವಹಿಸಿದ್ದರು. ಇರಾ ಭಾಗವತರ ಮತ್ತು ಸುಣ್ಣಂಬಳ ವಿಶ್ವೇಶ್ವರ ಭಟ್ಟರ ನಿರ್ದೇಶನದಲ್ಲಿ ಶೆಟ್ಟಿಗಾರರು ಕಲಾವಿದರಾಗಿ ಮಿಂಚತೊಡಗಿದರು- “ಎಲ್ಲಾ ವೇಷಗಳ ನಡೆ ಮತ್ತು ಸಂಭಾಷಣೆಗಳನ್ನೂ ಸುಣ್ಣಂಬಳದವರು ಹೇಳಿಕೊಡುತ್ತಿದ್ದರು. ಅವರಲ್ಲಿ ಕೇಳಿಯೇ ನಾನು ರಂಗಪ್ರವೇಶ ಮಾಡುತ್ತಿದ್ದೆ. ಇರಾ ಭಾಗವತರ ನಿರ್ದೇಶನದಲ್ಲೇ ನಾನು ಮೊತ್ತಮೊದಲು ಮಹಿಷಾಸುರ, ರುದ್ರಭೀಮ, ಗದಾಯುದ್ಧದ ಭೀಮ, ಅಜಮುಖಿ, ಶೂರ್ಪನಖಿ ಮೊದಲಾದ ವೇಷಗಳನ್ನು ನಿರ್ವಹಿಸಿದೆ. ಸರಳ, ಸಜ್ಜನರಾದ ಇವರುಗಳು ಕೇಳಿದಾಗ ಪ್ರೀತಿಯಿಂದ ಹೇಳಿಕೊಟ್ಟಿದ್ದಾರೆ. ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದಾರೆ. ಹಾಗಾಗಿ ಇರಾ ಭಾಗವತರು ಮತ್ತು ಸುಣ್ಣಂಬಳದವರು ನನಗೆ ಗುರುಸಮಾನರು ಎಂದು ಹೇಳುವ ಮೂಲಕ ಶೆಟ್ಟಿಗಾರರು ಅವರೀರ್ವರನ್ನೂ ಗೌರವಿಸುತ್ತಾರೆ.

1ನೇ ಮೇಳದ 3ನೇ ತಿರುಗಾಟದಲ್ಲಿ ಮಹಿಷಾಸುರ ಪಾತ್ರವನ್ನು ನಿರ್ವಹಿಸುವ ಅವಕಾಶವೂ ಒದಗಿತ್ತು. ಅದೂ ತನ್ನ 23ನೇ ವಯಸ್ಸಿನಲ್ಲಿ. ರಾಮಕುಂಜದಲ್ಲಿ ನಡೆದ ಪ್ರದರ್ಶನ- ಅನಿವಾರ್ಯವಾಗಿ ಮಹಿಷಾಸುರ ಮಾಡುವ ಅವಕಾಶ. ಮೊದಲ ಪ್ರಯೋಗದಲ್ಲೇ ಗೆದ್ದಿದ್ದರು. ಮರುದಿನ ತಲಪಾಡಿಯಲ್ಲಿ ಮತ್ತೆ 2ನೇ ಅವಕಾಶ. ಅಂದು ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ವಿಠಲ ಶೆಟ್ಟರು ಬಂದಿದ್ದರು. ಮೇಕಪ್, ವೇಷ ಕಟ್ಟುವಲ್ಲಿಂದ ತೊಡಗಿ ಪ್ರದರ್ಶನದ ಕೊನೆತನಕವೂ ನೋಡಿ ಹೋಗಿದ್ದರು. ಮಹಿಷಾಸುರನ ವೇಷವು ಶೆಟ್ಟಿಗಾರರೇ ಮಾಡಬೇಕೆಂದು ಹೇಳಿಯೂ ಇದ್ದರು. “ಕಲ್ಲಾಡಿ ವಿಠಲ ಶೆಟ್ಟರು ಸಹಕರಿಸಿದ್ದಾರೆ, ಪ್ರೋತ್ಸಾಹಿಸಿದ್ದಾರೆ ಅಲ್ಲದೆ ವೇಷಗಳನ್ನು ನಿರ್ವಹಿಸುವಲ್ಲಿ ನಿರ್ದೇಶನವನ್ನೂ ನೀಡಿದ್ದಾರೆ’’. ಇದು ಶೆಟ್ಟಿಗಾರರು ಅವರ ಬಗೆಗೆ ಆಡುವ ಮಾತುಗಳು. ಕಟೀಲು ಮೇಳದ ತಿರುಗಾಟವು ಮರೆಯಲಾಗದ ಅನುಭವ. ನನಗೆ ಪ್ರಸಿದ್ಧಿಯನ್ನು ನೀಡಿತು. ಕಲಾವಿದನಾಗಿ ನಾನು ಕಾಣಿಸಿಕೊಂಡದ್ದು ಕಟೀಲು ಮೇಳದಲ್ಲಿ. ಕಟೀಲು ಮೇಳಗಳು ಕಲಿಕಾಸಕ್ತರಿಗೆ ಪಾಠಶಾಲೆ ಇದ್ದಂತೆ. ಅಲ್ಲಿ ಕಲಾವಿದರು ತಯಾರಾಗುತ್ತಾರೆ ಎಂಬ ಅಭಿಪ್ರಾಯವನ್ನು ಸದಾಶಿವ ಶೆಟ್ಟಿಗಾರರು ಹೊಂದಿರುತ್ತಾರೆ.

ಕಟೀಲು ಮೇಳದ ತಿರುಗಾಟದ ಸಂದರ್ಭ- ಮಳೆಗಾಲದಲ್ಲಿ ಬೆಳ್ಳಾರೆಯಲ್ಲೊಂದು ಪ್ರದರ್ಶನ. ದುಶ್ಶಾಸನ ವಧೆ ಪ್ರಸಂಗ. ಬಣ್ಣದ ಮಹಾಲಿಂಗನವರ ರುದ್ರಭೀಮ. ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರ ದುಶ್ಶಾಸನ. ಆಗ ಶೆಟ್ಟಿಗಾರರ ವಯಸ್ಸು 23. ಗುರುಶಿಷ್ಯರೊಂದಾಗಿ ಅಭಿನಯಿಸಿದ್ದರು. ಸಂತೋಷಗೊಂಡ ಬಣ್ಣದ ಮಹಾಲಿಂಗನವರು ನೀನು ಒಳ್ಳೆಯ ಪ್ರಸಿದ್ಧ ವೇಷಧಾರಿಯಾಗುವೆ ಎಂದು ಆಲಿಂಗಿಸಿ ಆಶೀರ್ವದಿ ಸಿದ್ದರು. ಅದುವೇ ನನಗೆ ರಕ್ಷಾಕವಚವಾಗಿರಲಿ ಎಂದು ಶೆಟ್ಟಿಗಾರರು ಆತ್ಮೀಯರಲ್ಲಿ ಹೇಳುವುದನ್ನು ನಾವು ಗಮನಿಸಬಹುದು. ಬದುಕಿನಲ್ಲಿ ಮರೆಯಲಾರದ ಘಟನೆಯಾಗಿ ಅದನ್ನು ಶೆಟ್ಟಿಗಾರರು ಆಗಾಗ ನೆನಪಿಸುತ್ತಾರೆ. ಕಟೀಲು 1ನೇ ಮೇಳದಲ್ಲಿ 8 ವರ್ಷಗಳ ತಿರುಗಾಟ. ನಂತರ 13 ವರ್ಷಗಳ ಕಾಲ ತಿರುಗಾಟ ಧರ್ಮಸ್ಥಳ ಮೇಳದಲ್ಲಿ. ಖಾವಂದರ, ಹರ್ಷೇಂದ್ರ ಕುಮಾರರ ಸಹಕಾರ ಆಶೀರ್ವಾದಗಳಿತ್ತು.                                             

(ಫೋಟೋ ಕೃಪೆ: ಎಸ್. ಎನ್. ಶರ್ಮ ನೀರ್ಚಾಲ್ )

ಸಹಕಲಾವಿದರೆಲ್ಲರು ಸಹಕಾರ ನೀಡಿದ್ದರು. ಭಾಗವತರು ಮತ್ತು ಚಿಪ್ಪಾರು ಅವರ ಚೆಂಡೆಗೆ ವೇಷಗಳು ರಂಜಿಸುತ್ತಿತ್ತು. ಗೋವಿಂದ ಭಟ್ ನಯನಕುಮಾರರ ಜತೆ ವೇಷ ಮಾಡಿ ಪ್ರೌಢ ಸಂಭಾಷಣೆಗಳ ಕ್ರಮವೂ ಸಿದ್ಧಿಸಿತ್ತು. ಪುತ್ತಿಗೆ ರಘುರಾಮ ಹೊಳ್ಳರ ಮತ್ತು ರಾಮಕೃಷ್ಣ ಮಯ್ಯರ ಹಾಡುಗಳಲ್ಲಿ ಮತ್ತು ಸಹಕಲಾವಿದರೆಲ್ಲರ ಸಹಕಾರದಲ್ಲಿ ವೇಷಗಳನ್ನು ನಿರ್ವಹಿಸಿದ್ದೆ. ನಯನಕುಮಾರರ ಜತೆಗಿನ ಸಂಭಾಷಣೆಗಳಲ್ಲಿ ಪ್ರೌಢ ರಾಜಹಾಸ್ಯವು ಹೊರಹೊಮ್ಮುತ್ತಿತ್ತು. ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ ಪ್ರಸಂಗದ ಕುಕ್ಕಿತ್ತಾಯ, ಕಾಳರಾಹು, ಗಣಮಣಿ ಪಾತ್ರಗಳನ್ನು, ಅನೇಕ ಪ್ರಸಂಗದ ಬಣ್ಣದ ವೇಷಗಳನ್ನು ನಿರ್ವಹಿಸುವ ಅವಕಾಶವೂ ಸಿಕ್ಕಿತ್ತು.’’ ಧರ್ಮಸ್ಥಳ ಮೇಳದ ತಿರುಗಾಟದ ಬಗೆಗೆ ಸದಾಶಿವ ಶೆಟ್ಟಿಗಾರರ ಅನಿಸಿಕೆಗಳು ಹೀಗೆ ಸಾಗುತ್ತದೆ.

ನಂತರ ಹೊಸನಗರ ಮೇಳದಲ್ಲಿ 10 ತಿರುಗಾಟ. ಮತ್ತೆ 1 ವರ್ಷ ಎಡನೀರು. ಪ್ರಸ್ತುತ 3 ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ವ್ಯವಸಾಯ. ಈ ಸಂದರ್ಭದಲ್ಲಿ ಶೆಟ್ಟಿಗಾರರು ಕಲಾಪೋಷಕರಾದ ಡಾ. ಟಿ. ಶ್ಯಾಮ ಭಟ್ಟರ ಸಹಕಾರವನ್ನು ನೆನಪಿಸುತ್ತಾರೆ. ಕಲೆಯನ್ನೂ, ಕಲಾವಿದರನ್ನೂ ಪ್ರೀತಿಸಿ ಗೌರವಿಸುವ ಶ್ಯಾಮ್ ಭಟ್ಟರನ್ನು ಕಲಾವಿದರ ರಕ್ಷಕರೆಂದೂ ಅನ್ನದಾತರೆಂದೂ ಗೌರವಿಸುತ್ತಾರೆ. ಹನುಮಗಿರಿ ಮೇಳದ ಹಿಮ್ಮೇಳ ಮುಮ್ಮೇಳದ ಸರ್ವ ಕಲಾವಿದರಿಂದಲೂ ನನಗೆ ಸಹಕಾರ, ಉತ್ತೇಜನ ಸಿಕ್ಕಿದೆ ಎನ್ನುವ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರಿಗೆ ಇನ್ನಷ್ಟು ಕಲಾಸೇವೆಯನ್ನು ಮಾಡುವ ಬಯಕೆಯಿದೆ. ಅಲ್ಲದೆ ಕುಂಭಕರ್ಣ ಕಾಳಗ ಪ್ರಸಂಗ ಕುಂಭಕರ್ಣನ ವೇಷ ಅಲ್ಲದೆ ಇನ್ನಿತರ ಕೆಲವು ವೇಷಗಳನ್ನು ನನ್ನಿಂದ ಮೊದಲು ಮಾಡಿಸಿದ್ದು ಅಗರಿ ಶ್ರೀನಿವಾಸ ಭಾಗವತರು. ಅವರೊಬ್ಬ ಸಮರ್ಥ ನಿರ್ದೇಶಕನೆಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾರೆ.

ಬಣ್ಣಕ್ಕೆ ಸಂಬಂಧಿಸಿದ ಪಾತ್ರಗಳು ಮುಖವರ್ಣಿಕೆ, ವೇಷಭೂಷಣಗಳು, ಅಟ್ಟಹಾಸ, ಒಡ್ಡೋಲಗ ವೈಭವಗಳಿಂದ ಪ್ರೇಕ್ಷಕರನ್ನು ಬಹುಬೇಗನೆ ತಲುಪಿ ಆಕರ್ಷಿಸುತ್ತವೆ. ಬೆಳಗ್ಗಿನ ನಿದ್ದೆ ಆವರಿಸುವ ಹೊತ್ತಲ್ಲೂ ಪ್ರೇಕ್ಷಕರನ್ನು ಬಡಿದೆಬ್ಬಿಸುತ್ತವೆ. ಸಹಜವಾಗಿ ನಾನು ಬಾಲ್ಯದಲ್ಲೇ ಅದರತ್ತ ಆಕರ್ಷಿತನಾದೆ. ಅದಕ್ಕೆ ಸರಿಯಾಗಿ ಬಣ್ಣದ ಮಹಾಲಿಂಗನವರಿಂದ ಕಲಿಯುವ ಅವಕಾಶವೂ ಸಿಕ್ಕಿತು ಎನ್ನುವ ಸಿದ್ಧಕಟ್ಟೆ ಸದಾಶಿವ ಶೆಟ್ಟರು ತಾನು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಇವರಿಂದ ಕಲಿತವರಲ್ಲಿ ಸತೀಶ ನೈನಾಡು, ಶಬರೀಶ ಮಾನ್ಯ, ಮನೀಷ್ ಪಾಟಾಳಿ, ಮಧುರಾಜ್ ಪಾಟಾಳಿ, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಸಚಿನ್ ಪಾಟಾಳಿ, ಶ್ರೀಶ ಮಣಿಲ, ರಂಜಿತ್ ಗೋಳಿಯಡ್ಕ ಮೊದಲಾದವರು ಪ್ರಮುಖರು. ಮಾಹಿತಿಗಳನ್ನು ಕೇಳಿದ ಹಲವರಿಗೆ ಹೇಳಿಕೊಟ್ಟಿರುತ್ತಾರೆ. ಪುರಾಣ ಪ್ರಸಂಗಗಳನ್ನೇ ಮೆಚ್ಚುವ ಶೆಟ್ಟಿಗಾರರು ಅವುಗಳನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಪುರಾಣ ಪ್ರಸಂಗಗಳಲ್ಲಿ ಹೆಚ್ಚಿನ ವಿಚಾರಧಾರೆಗಳು ಮತ್ತು ಸಂದೇಶಗಳು ಇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ-
                     

“ರಂಗದ್ರೋಹ ಸಲ್ಲದು. ಆತ್ಮವಿಶ್ವಾಸ ಅತ್ಯಗತ್ಯ. ಸಹನಾಶೀಲರಾಗಿರಬೇಕು. ಮುಖವರ್ಣಿಕೆ ಮತ್ತು ವೇಷ ಕಟ್ಟಿ ರಂಗವೇರಿ ಅಭಿನಯಿಸುವಲ್ಲಿ ಶ್ರದ್ಧೆ ಮತ್ತು ಭಕ್ತಿಯು ಬೇಕು. ಬಣ್ಣಗಾರಿಕೆ ಮಾಡುವಾಗ ಇನ್ನು ಸಾಕಪ್ಪ ಎಂದು ಎಣಿಸಬಾರದು. ವೇಷಕ್ಕೆ ಬೇಕಾದಂತೆ ಮುಖವರ್ಣಿಕೆ ಮಾಡಲೇ ಬೇಕು. ಔದಾಸೀನ್ಯ ಮಾಡಲೇಬಾರದು. ವೇಷದ ಸ್ವಭಾವ ತಿಳಿದು ಸಂಭಾಷಣೆಗಳನ್ನು ಸಿದ್ಧಗೊಳಿಸಿಯೇ ರಂಗವೇರಬೇಕು’’. ಅಭ್ಯಾಸಿಗಳಿಗೆ ಶೆಟ್ಟಿಗಾರರ ಸಂದೇಶವಿದು. ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಅಯೋಧ್ಯೆ, ಕಾಶಿ, ಕೋಲ್ಕತ್ತಾ, ಕೇರಳ, ಹರಿದ್ವಾರ ಮೊದಲಾದೆಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಅರಸಂಕಲ ಪ್ರಶಸ್ತಿಗಳನ್ನು ಪಡೆದುದಲ್ಲದೆ ಹರೇಕಳ ಪಾವೂರು, ಬಿ. ಸಿ. ರೋಡಿನಲ್ಲಿ ಅಲ್ಲದೆ ಇನ್ನೂ ಅನೇಕ ಕಡೆ ಸನ್ಮಾನಿತರಾಗಿದ್ದಾರೆ. ಪತ್ನಿ ಶ್ರೀಮತಿ ಕಲಾವತಿ ಮತ್ತು ಪುತ್ರರೊಂದಿಗೆ ಪ್ರಸ್ತುತ ಸಿದ್ಧಕಟ್ಟೆಯಲ್ಲಿ ವಾಸವಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ 36ಕ್ಕೂ ಹೆಚ್ಚಿನ ವರ್ಷಗಳ ಕಾಲ ವ್ಯವಸಾಯವನ್ನು ಮಾಡಿರುತ್ತಾರೆ.

ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರೂ ಸಾಂಸಾರಿಕವಾಗಿಯೂ ತೃಪ್ತರು. ಸದಾಶಿವ ಶೆಟ್ಟಿಗಾರ್ ದಂಪತಿಗಳಿಗೆ ಮೂವರು ಮಕ್ಕಳು (ಎರಡು ಗಂಡು ಮತ್ತು 1 ಹೆಣ್ಣು).ಹಿರಿಯ ಪುತ್ರ ದಿಲೀಪ್ ಕುಮಾರ್ ಮತ್ತು ಕಿರಿಯ ಪುತ್ರ ಪದ್ಮನಾಭ ಇಬ್ಬರೂ ಉದ್ಯೋಗಿಗಳು. ಪುತ್ರಿ ಕವಿತಾ ವಿವಾಹಿತೆ. ಅಳಿಯ ಶ್ರೀ ಯಶವಂತ ಉದ್ಯೋಗಿ- ಮೊಮ್ಮಗ ಹರ್ಧಿಕ್‍ಗೆ ಒಂದುವರೆ ವರ್ಷ ಪ್ರಾಯ. ಇವರು ಕೊಣಾಜೆ ನಿವಾಸಿಗಳು. ಕಲಾಬದುಕಿನುದ್ದಕ್ಕೂ ಪತ್ನಿ ಮತ್ತು ಮಕ್ಕಳ ಸಹಕಾರ ಪ್ರೋತ್ಸಾಹವಿತ್ತು ಎನ್ನುವ ಸದಾಶಿವ ಶೆಟ್ಟಿಗಾರರಿಗೆ ಇನ್ನಷ್ಟು ಕಲಾಸೇವೆಯನ್ನು ಮಾಡುವ ಅವಕಾಶ ಒದಗಲಿ.

ಲೇಖಕ: ರವಿಶಂಕರ್ ವಳಕ್ಕುಂಜ

ಮೇಳಗಳ ಇಂದಿನ (17.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (17.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಹಳ್ಳಾಡಿ ಹೆಗ್ಡೆಕೆರೆ ಶ್ರೀ ನಂದಿಕೇಶ್ವರ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಎಕ್ಕಾರು ಪೆಟ್ರೋಲ್ ಪಂಪ್ ಬಳಿ 
ಕಟೀಲು ಎರಡನೇ ಮೇಳ ಏಳಿಂಜೆ ಭಂಡಸಾಲೆ ದೈವಸ್ಥಾನದ ಬಳಿ 
ಕಟೀಲು ಮೂರನೇ ಮೇಳಇಡ್ಯಾ ಸುರತ್ಕಲ್ 
ಕಟೀಲು ನಾಲ್ಕನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಐದನೇ ಮೇಳ ಸುಂಕದಕಟ್ಟೆ, ಕೊಳಂಬೆ ವಯಾ ಬಜಪೆ 
ಕಟೀಲು ಆರನೇ ಮೇಳಕಾಪಿಕಾಡು ಶಾಲೆ ಬಳಿ, ಮಂಗಳೂರು 
ಮಂದಾರ್ತಿ ಒಂದನೇ ಮೇಳ ಗುಡ್ಡೆಯಂಗಡಿ, ಸುರ್ಗೋಳಿ, ಬೆಳ್ವೆ 
ಮಂದಾರ್ತಿ ಎರಡನೇ ಮೇಳ ಶಿರೂರು, ಮುದ್ದುಮನೆ 
ಮಂದಾರ್ತಿ ಮೂರನೇ ಮೇಳ ಬಾಳೆಕೊಪ್ಪ, ದೇವಂಗಿ 
ಮಂದಾರ್ತಿ ನಾಲ್ಕನೇ ಮೇಳ ಕಂಬಳಗದ್ದೆಮನೆ, ಕುಮ್ರಿ, ಕೋಟೇಶ್ವರ 
ಮಂದಾರ್ತಿ ಐದನೇ ಮೇಳ ಕುಣಿಗದ್ದೆ, ಮಿಟ್ಲಗೋಡು, ಅರಗ 
ಶ್ರೀ ಹನುಮಗಿರಿ ಮೇಳ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ, ನೇತ್ರಾವತಿ ನದಿ ತೀರದ  ವಟವೃಕ್ಷದ ಬಳಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಸಾಲಿಗ್ರಾಮ ಮೇಳಸಾಲಿಗ್ರಾಮ ಜಾತ್ರೆ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳಅಜೆಕಾರು ಎಣ್ಣೆಹೊಳೆ ಬಟ್ಟಿಕಂಬಳ – ಚಂದ್ರಹಾಸ, ಚಿತ್ರಾಕ್ಷಿ ಪರಿಣಯ  
ಶ್ರೀ ಮಾರಣಕಟ್ಟೆ ಮೇಳ ‘ಎ’ಕದೋಳಿ, ಮದ್ಲೆಕಂಬ, ಹೊಸೂರು – ಎರಡೂ ಮೇಳಗಳ ಕೂಡಾಟ – ಶ್ರೀ ಕ್ಷೇತ್ರ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಬಿ’ಕದೋಳಿ, ಮದ್ಲೆಕಂಬ, ಹೊಸೂರು – ಎರಡೂ ಮೇಳಗಳ ಕೂಡಾಟ – ಶ್ರೀ ಕ್ಷೇತ್ರ ಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಕ್ಷೇತ್ರದಲ್ಲಿ – ಶ್ರೀ ಕ್ಷೇತ್ರ ಮಹಾತ್ಮೆ   
ಶ್ರೀ ಪಾವಂಜೆ ಮೇಳ ಮಾಣಿ ಗಾಂಧಿ ಮೈದಾನ – ಗಜೇಂದ್ರ ಮೋಕ್ಷ, ಸುದರ್ಶನ ಗರ್ವಭಂಗ, ಭಾರ್ಗವ ವಿಜಯ 
ಶ್ರೀ ಹಟ್ಟಿಯಂಗಡಿ ಮೇಳನಿಡಿಗಲ್, ಕಲ್ಮಂಜ, ಉಜಿರೆ – ಪಟ್ಟಾಭಿಷೇಕ, ಮೀನಾಕ್ಷಿ 
ಕಮಲಶಿಲೆ ಮೇಳ ‘ಎ’ಕಾಲ್ತೋಡು 
ಕಮಲಶಿಲೆ ಮೇಳ ‘ಬಿ’ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸುರ್ಗೇಹಾಡಿ, ದೈವದಮನೆ 
ಶ್ರೀ ಬಪ್ಪನಾಡು ಮೇಳತೆಂಕ ಎರ್ಮಾಳ್ ಕಡಲ ತೀರದಲ್ಲಿ  – ಬಂಗಾರ್ ಬಾಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ಪೊಳಲಿ, ವರಕೋಡಿ – ಮುಕುಂದ ಮುರಾರಿ (ತುಳು)
ಶ್ರೀ ಅಮೃತೇಶ್ವರೀ ಮೇಳಕೊತ್ತೂರು, ಬೊಮ್ಮಾಡಿ, ಹೆಗ್ಗುಂಜೆ 
ಶ್ರೀ ಬೋಳಂಬಳ್ಳಿ ಮೇಳ ಮಂದಾರಜೆಡ್ಡು – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಸೌಕೂರು ಕೆತ್ತೆಮಕ್ಕಿ – ಶ್ರೀ ಸೌಕೂರು ಕ್ಷೇತ್ರ ಮಹಾತ್ಮೆ 
ಶ್ರೀ ಹಾಲಾಡಿ ಮೇಳಭದ್ರ ಮಹಾಕಾಳಿ ದೇವಸ್ಥಾನ, ಕಟ್ ಬೆಳ್ತೂರು 
ಶ್ರೀ ಬೆಂಕಿನಾಥೇಶ್ವರ ಮೇಳ  ಕಿರಿಮಂಜೇಶ್ವರ ಕಾನವೀರ ಮಾಸ್ತಿ ನಾಯಿರಿ ಮಿತ್ರ ಬಳಗ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳಬೆಳ್ವೆ ಯಳಂತೂರು  – ರಾಜವಂಶ ಗುಳಿಗ  
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಅಂಪಾರು – ಪಂಚದೈವ ಪ್ರತಾಪ 
ಶ್ರೀ ಹಿರಿಯಡಕ ಮೇಳಹಿರೇಬೆಟ್ಟು, ಅಂಗಡಿಬೆಟ್ಟು – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ವಸ್ರೆ – ತಾಟಕ ಮೋಕ್ಷ 
ಶ್ರೀ ಸಿಗಂದೂರು ಮೇಳಮರತ್ತೂರು ಶಾಲಾ ವಠಾರ 
ಶ್ರೀ ನೀಲಾವರ ಮೇಳ ಕಾವಡಿ ಹೈಸ್ಕೂಲ್ ಬಳಿ 

ಮೇಳಗಳ ಇಂದಿನ (16.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (16.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಪೆರ್ಮುದೆ, ಬಜಪೆ  – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳನಿಡ್ಡೋಡಿ – ಶ್ರೀ ದೇವಿ ಮಹಾತ್ಮೆ
ಕಟೀಲು ಎರಡನೇ ಮೇಳ ಎನ್.ಐ.ಟಿ.ಕೆ,  ಶ್ರೀನಿವಾಸನಗರ, ಸುರತ್ಕಲ್ – ಪಂಚಕಲ್ಯಾಣ
ಕಟೀಲು ಮೂರನೇ ಮೇಳಉಳ್ಳೂರು ಶ್ರೀ ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ, ಮೂಡ್ಲಕಟ್ಟೆ ಕುಂದಾಪುರ – ದಶಾವತಾರ 
ಕಟೀಲು ನಾಲ್ಕನೇ ಮೇಳ ಅಡ್ಯಾರು ಗುತ್ತು, ಅಡ್ಯಾರು ಮಂಗಳೂರು – ಶ್ರೀ ದೇವಿ ಮಹಾತ್ಮೆ 
ಕಟೀಲು ಐದನೇ ಮೇಳ ಮಳಲಿ, ಮಟ್ಟಿಬಡಗ, ಉಳಿಪಾಡಿ – ಸಮುದ್ರ ಮಥನ 
ಕಟೀಲು ಆರನೇ ಮೇಳಹೊಯ್ಗೆಗದ್ದೆಪುದು, ವಯಾ ಮಾರಿಪಳ್ಳ – ಸಮುದ್ರ ಮಥನ 
ಮಂದಾರ್ತಿ ಒಂದನೇ ಮೇಳ ಕುಕುಂಜೆಬೈಲು, ಕೆಂಜೂರು 
ಮಂದಾರ್ತಿ ಎರಡನೇ ಮೇಳ ಮಹಾಗಣಪತಿ ದೇವಸ್ಥಾನ ಬಾರಾಳಿ, ಹೆಗ್ಗುಂಜೆ 
ಮಂದಾರ್ತಿ ಮೂರನೇ ಮೇಳ ಅರಮನೆ ತೋಟ, ಕಮ್ಮರಡಿ 
ಮಂದಾರ್ತಿ ನಾಲ್ಕನೇ ಮೇಳ ಮುಂಡಾಡಿಮನೆ, ಗೋಕುಲ, ಚಾರ ಹೆಬ್ರಿ 
ಮಂದಾರ್ತಿ ಐದನೇ ಮೇಳ ಖಂಡಕ, ನೊಣಬೂರು 
ಶ್ರೀ ಹನುಮಗಿರಿ ಮೇಳ ದಾಮಸ್ ಕಟ್ಟೆ – ಬೇಡರ ಕಣ್ಣಪ್ಪ, ಅಭಿಮನ್ಯು 
ಶ್ರೀ ಸಾಲಿಗ್ರಾಮ ಮೇಳಕಾರ್ಕಳ ಬೊಂಬೆತಡ್ಕ – ರಾಜಾ ಉಗ್ರಸೇನ, ದಮಯಂತಿ, ವೀರಮಣಿ ಕಾಳಗ 
ಶ್ರೀ ಪೆರ್ಡೂರು ಮೇಳರಾಗಿಹಕ್ಲು – ಮಾಗಧ ವಧೆ, ರಾಣಿ ಶಶಿಪ್ರಭೆ 
ಶ್ರೀ ಸುಂಕದಕಟ್ಟೆ ಮೇಳ ಅರ್ಚನಾ ಕೃಪ, ಕೊಳಂಬೆ, ತಲ್ಲದಬೈಲು – ಶ್ರೀ ದೇವಿ ಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಶ್ರೀ ಕ್ಷೇತ್ರದಲ್ಲಿ ಜಾತ್ರೆ ಸೇವೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಜನ್ನಾಲ್ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಹಕ್ಲುಮನೆ, ಹೆಮ್ಮುಂಜೆ, ನಾಡ 
ಶ್ರೀ ಪಾವಂಜೆ ಮೇಳ ಹಳೆ ಬಸ್ ನಿಲ್ದಾಣ, ಮಂಗಳೂರು – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಅಜೆಕಾರು 8-1  – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’ನಂಚಾರು 
ಕಮಲಶಿಲೆ ಮೇಳ ‘ಬಿ’ಶ್ರೀ ಮೂಡಾಡಮ್ಮ ದೇವಸ್ಥಾನ, ನುಕ್ಸಾಲ್, ಕೊಲ್ಲೂರು 
ಶ್ರೀ ಬಪ್ಪನಾಡು ಮೇಳಪೊರ್ಕೋಡಿ ಕಾಂಜಗೋಳಿ  ಮಹಮ್ಮಾಯಿ ಮೈದಾನ – ಬಂಗಾರ್ ಬಾಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ತೋಕೂರು ಶೇಡಿಗುರಿ ಮೈದಾನ ಪಿಲಿಚಾಮುಂಡಿ ದೈವಸ್ಥಾನ ವಠಾರದಲ್ಲಿ – ಶ್ರೀ ಭದ್ರಕಾಳಿ ಮಹಾತ್ಮೆ  
ಶ್ರೀ ಅಮೃತೇಶ್ವರೀ ಮೇಳಸಾಲಿಗ್ರಾಮದಲ್ಲಿ  ಗುರುನರಸಿಂಹ ಜಾತ್ರೆ ಪ್ರಯುಕ್ತ ಕಾಲಮಿತಿ ಮತ್ತು ನಂತರ ಮಕ್ಕಿಮನೆ ಬೆಳ್ವೆಯಲ್ಲಿ 
ಶ್ರೀ ಬೋಳಂಬಳ್ಳಿ ಮೇಳ ಮುದ್ರಾಡಿ, ಭೀಮನಗರ, ಕೆಲಕಿಲ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಸೌಕೂರು ದೇವಸ್ಥಾನದ ವಠಾರ – ಶ್ವೇತಕುಮಾರ, ರತಿ ಕಲ್ಯಾಣ
ಶ್ರೀ ಹಾಲಾಡಿ ಮೇಳಬೆಳಂಜೆ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ   
ಶ್ರೀ ಬೆಂಕಿನಾಥೇಶ್ವರ ಮೇಳ  ಕಾರ್ಕಳ ಕಾಬೆರಡ್ಕ ಅಯೋಧ್ಯ ನಗರ – ಮಹಿಮೆದ ಮಂತ್ರದೇವತೆ 
ಶ್ರೀ ಮಡಾಮಕ್ಕಿ ಮೇಳಕೋಟೇಶ್ವರ ಹಳೆ ಅಳಿವೆ ಚಿಕ್ಕಮ್ಮ ಸಪರಿವಾರ ದೇವಸ್ಥಾನ – ರಾಜವಂಶ ಗುಳಿಗ  
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಉಳ್ಳೂರು – II,  ಶ್ರೀ ಕೋಟಿ ಚೆನ್ನಯ್ಯ ಗರಡಿ ವಠಾರ – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳಹಿರಿಯಡಕ ಬೊಮ್ಮರಬೆಟ್ಟು ಮುಂಡುಜೆ ಶಾಲಾ ವಠಾರ – ಮಾಯೊದ ಅಜ್ಜೆ 
ಶ್ರೀ ಶನೀಶ್ವರ ಮೇಳ ಚಾತ್ರಬೆಟ್ಟು, ಬೀಜಾಡಿ – ಶನೀಶ್ವರ ಮಹಾತ್ಮೆ 
ಶ್ರೀ ಸಿಗಂದೂರು ಮೇಳಶಿರೂರು ಜೈನ ಶೇಡಿವೀರ ದೇವಸ್ಥಾನ 
ಶ್ರೀ ನೀಲಾವರ ಮೇಳ ಬಸ್ರೂರು ಪೇಟೆ – ಕುಲದೈವ ಪಂಜುರ್ಲಿ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ಕೋಣಂದೂರು 

ಪಡುಪೆರಾರ ಲಕ್ಷ್ಮಣ ಕೋಟ್ಯಾನ್ – ಯಾವುದೇ ವೇಷಗಳನ್ನು ನಿರ್ವಹಿಸಬಲ್ಲ ಬಣ್ಣದ ವೇಷಧಾರಿ 

ಶ್ರೀ ಲಕ್ಷ್ಮಣ ಕೋಟ್ಯಾನ್ ಅವರು ಪ್ರಸ್ತುತ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದ. ಈಗ ಅವರಿಗೆ ವಯಸ್ಸು ಎಪ್ಪತ್ತು ಆದರೂ ಯುವಕರಂತೆ ಉತ್ಸಾಹದಿಂದ ರಂಗವೇರುತ್ತಾರೆ.

ಇವರು ಬಣ್ಣದ ವೇಷಧಾರಿ. ಮಹಿಷಾಸುರ, ವರಾಹ, ಮತ್ಸ್ಯ, ಕುಂಭಕರ್ಣ, ಕಿರಾತ, ತಾರಕಾಸುರ, ಶೂರಪದ್ಮ, ಅಲ್ಲದೆ ಹೆಣ್ಣು ಬಣ್ಣಗಳನ್ನು ನಿರ್ವಹಿಸಬಲ್ಲರು. ಇವರ ಕಿರೀಟ ವೇಷಗಳೂ ಆಕರ್ಷಕ. ನಾಟಕೀಯ ಪಾತ್ರಗಳನ್ನು ಕೂಡಾ ಮಾಡುತ್ತಾರೆ. ಇವರು 1949ನೇ ಇಸವಿ ಡಿಸೆಂಬರ್ ತಿಂಗಳಿನಲ್ಲಿ ಮಂಗಳೂರು ತಾಲ್ಲೂಕು ಪಡುಪೆರಾರದ ಚಿನ್ನಯ್ಯ ಪೂಜಾರಿ ಮತ್ತು ಮುತ್ತು ಪೂಜಾರಿ ದಂಪತಿಗಳ ಮಗನಾಗಿ ಜನಿಸಿದರು. ಕಿನ್ನಿಕಂಬಳ ಶಾಲೆಯಲ್ಲಿ ಐದನೇ ತರಗತಿವರೇಗೆ ಓದಿದರು. ಆ ಸಂದರ್ಭದಲ್ಲಿ ಖ್ಯಾತ ಪುಂಡು ವೇಷಧಾರಿ ಕ್ರಿಶ್ಚನ್ ಬಾಬು ಅವರಿಂದ ನಾಟ್ಯ ಕಲಿತು ವೇಷ ಮಾಡಲು ಪ್ರಾರಂಭಿಸಿದರು.

ನಂತರ ಜೀವನೋಪಾಯಕ್ಕಾಗಿ ಮುಂಬೈ ನಗರವನ್ನು ಸೇರಿಕೊಂಡ ಲಕ್ಷ್ಮಣ ಕೋಟ್ಯಾನ್ ಹದಿನೆಂಟು ವರ್ಷಗಳ ಕಾಲ ಸಿಐಡಿ ಕ್ಯಾಂಟೀನ್‍ನಲ್ಲಿ ಕೆಲಸ ಮಾಡಿದ್ದರು. ಮುಂಬೈಯಲ್ಲಿ ಕಲಾಸೇವೆಯನ್ನು ಮುಂದುವರಿಸಲು ಅವಕಾಶಗಳು ಇದ್ದು, ಅನೇಕ ಮಂಡಳಿಗಳು ಕಾರ್ಯಾಚರಿಸುತ್ತಿದ್ದು, ಅವುಗಳಲ್ಲೊಂದು ಶ್ರೀ ಗುರು ನಾರಾಯಣ ಮಂಡಳಿ. ವೇಷ ಮಾಡುವುದರ ಜತೆಗೆ ನಾಟ್ಯದ ತರಬೇತಿಯನ್ನು ನೀಡಿದರು. ಇವರು ಕ್ರೀಡೆಯಲ್ಲೂ ಆಸಕ್ತರು. ಫುಟ್ಬಾಲ್ ಕ್ರೀಡೆಯ ತರಬೇತಿಯನ್ನು ಹೊಂದಿ, ಆಟಗಾರನಾಗಿಯೂ, ತರಬೇತುದಾರನಾಗಿಯೂ ಕಾಣಿಸಿಕೊಂಡರು. ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ಇವರಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗವೂ ಸಿಕ್ಕಿತ್ತು. ಆದರೆ ಮನೆ ಸಮಸ್ಯೆಯಿಂದಾಗಿ ಊರಿಗೆ ಬರಬೇಕಾಯಿತು. ಜೀವನೋಪಾಯಕ್ಕಾಗಿ ತಾನು ಮೊದಲು ಕಲಿತ ಯಕ್ಷಗಾನವನ್ನೇ ಅವಲಂಬಿಸಬೇಕಾಯಿತು.
                         

ತಲಕಳ ಮತ್ತು ಕದ್ರಿ ಮೇಳಗಳಲ್ಲಿ ತಲಾ ಒಂದು ವರ್ಷ ತಿರುಗಾಟ ನಡೆಸಿ ಕಳೆದ ಮೂವತ್ತು ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಮುಂಬೈನಲ್ಲಿ ಹುಟ್ಟಿಕೊಂಡ ಫುಟ್ಬಾಲ್ ನಂಟು ಊರಿಗೆ ಬಂದರೂ ಕೋಟ್ಯಾನ್‍ರನ್ನು ಬಿಡಲಿಲ್ಲ. ಸರಕಾರಿ ಕಾಲೇಜು ಮಂಗಳೂರು, ಕೆಎಂಸಿ ಫುಟ್ಬಾಲ್ ತಂಡ ಮತ್ತು ಸ್ಪೋರ್ಟಿಂಗ್ ಕ್ಲಬ್‍ನಲ್ಲಿ ಕೋಚ್ ಆಗಿ ತರಬೇತಿ ನೀಡಿದರು. ಅನೇಕ ಸನ್ಮಾನ ಗೌರವಗಳನ್ನು ಪಡೆದುಕೊಂಡರು. ಸದಾ ನಗುನಗುತ್ತಾ ಎಲ್ಲರನ್ನೂ ಮಾತನಾಡಿಸುವ ಶ್ರೀ ಲಕ್ಷ್ಮಣ ಕೋಟ್ಯಾನ್ ಸರಳ, ಸಜ್ಜನ, ನಿಗರ್ವಿ ಕಲಾವಿದ. ಯಾವ ವೇಷವನ್ನೂ ನಿರ್ವಹಿಸಬಲ್ಲರು.

ವರ್ಷವಿಡಿ ಒಂದೇ ಸೆಟ್ಟಿನಲ್ಲೇ ತಿರುಗಾಟ ಮಾಡುತ್ತೇನೆ ಎಂಬ ಹಟಕ್ಕೆ ಬೀಳುವವರಲ್ಲ. ಅನಿವಾರ್ಯವಾದರೆ ಸಂಚಾಲಕರ ಅಪ್ಪಣೆಯಂತೆ ಆರು ಮೇಳಗಳಲ್ಲಿ ಯಾವ ಮೇಳದಲ್ಲೂ ವೇಷ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಶ್ರೀ ಲಕ್ಷ್ಮಣ ಕೋಟ್ಯಾನ್ ಸಾಂಸಾರಿಕವಾಗಿಯೂ ಕಲಾವಿದನಾಗಿಯೂ ತೃಪ್ತರು. ಮಡದಿ ಶ್ರೀಮತಿ ಚಂದ್ರಾವತಿ ಗೃಹಣಿ. ಮಗಳು ಮಂಜುಳಾ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುತ್ತಾರೆ. ಪ್ರಸ್ತುತ ಪಾಂಪೈ ಕಾಲೇಜಿನಲ್ಲಿ ಉಪನ್ಯಾಸಕಿ. 

ಲೇಖಕ: ರವಿಶಂಕರ್ ವಳಕ್ಕುಂಜ 

ಗತ್ತುಗಾರಿಕೆ, ಲಾಲಿತ್ಯ, ಭಾವಾಭಿನಯ, ಲಯಸಿದ್ಧಿ ಮೇಳೈಸಿದ ಅಭಿನಯ ಚತುರ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ

ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಬಡಗುತಿಟ್ಟಿನ ಶ್ರೇಷ್ಠ ಕಲಾವಿದ. ಪ್ರದರ್ಶನಗಳನ್ನು ನೋಡುತ್ತಾ ಅಭಿನಯಿಸುತ್ತಾ ತನ್ನ ಪರಿಶ್ರಮ ಮತ್ತು ಹಿರಿಯ ಕಲಾವಿದರ ಒಡನಾಟ, ನಿರ್ದೇಶನಗಳಿಂದ ಬೆಳೆದು ಪಕ್ವರಾದವರು. ತನ್ನ ಹನ್ನೆರಡನೆಯ ವರ್ಷದಿಂದ ಆರಂಭಿಸಿ, ಸತತ 40 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಾ ಕಲಾಭಿಮಾನಿಗಳ ಮನಸೂರೆಗೊಂಡಿದ್ದಾರೆ.

ಕೊಂಡದಕುಳಿಯವರು ಇದ್ದಾರಾ? ಅವರೇನು ವೇಷ ಮಾಡ್ತಾರೆ ಇಂದು? ಎಂದು ಕೇಳುವಷ್ಟು ಪ್ರೇಕ್ಷಕರ ಮನದಲ್ಲಿ ತುಂಬಿಕೊಂಡಿದ್ದಾರೆ. ಪ್ರಸಂಗ ಗೊತ್ತಾದರೆ ಸಾಕು, ಕೊಂಡದಕುಳಿಯವರು ಇಂತಹ ವೇಷವನ್ನೇ ಮಾಡುತ್ತಾರೆ ಎಂದು ಕಲಾಭಿಮಾನಿಗಳು ನಿರ್ಣಯಿಸುವಷ್ಟು ಪ್ರಸಿದ್ಧರಿವರು. ಗತ್ತುಗಾರಿಕೆ, ಲಾಲಿತ್ಯ, ಭಾವಾಭಿನಯ, ಲಯಸಿದ್ಧಿ ಎಲ್ಲವೂ ಇವರ ವೇಷಗಳಲ್ಲಿ ತುಂಬಿಕೊಂಡಿವೆ. ಲಯ ಮತ್ತು ಅಭಿನಯದಲ್ಲಿ ಖಚಿತತೆ ಇರುವ ಕಾರಣದಿಂದ ಕೊಂಡದಕುಳಿಯವರ ವೇಷಗಳಿಗೆ ಪದ್ಯ ಹೇಳುವುದು ಸುಲಭವೆಂದು ಭಾಗವತರುಗಳನೇಕರ ಅಭಿಪ್ರಾಯವೂ ಹೌದು.

‘‘ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ (ರಿ.) ಕುಂಭಾಶಿ’’ ಎಂಬ ಸಂಸ್ಥೆಯ ಸ್ಥಾಪಕರಾದ ಶ್ರೀಯುತರು ಯಕ್ಷಗಾನ ಕ್ಷೇತ್ರದಲ್ಲಿ ತೋರಿದ ಸಾಧನೆಯು ಪ್ರಶಂಸನೀಯವಾದುದು.ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಬೇರಂಕಿ ಗ್ರಾಮದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಹುಟ್ಟೂರು. 1961ನೇ ಇಸವಿ ಜೂನ್ 26ರಂದು ಶ್ರೀ ಗಣೇಶರಾಮ ಹೆಗಡೆ ಮತ್ತು ಶ್ರೀ ಕಮಲಾ ದಂಪತಿಗಳ ಮಗನಾಗಿ ಜನಿಸಿದರು. ಓದಿದ್ದು ಎಸ್.ಎಸ್. ಎಲ್.ಸಿ. ವರೇಗೆ. 1ನೇ ತರಗತಿಯಿಂದ 7ರ ವರೇಗೆ ಬೇರಂಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು 10ನೇ ತರಗತಿ ವರೇಗೆ ಅನಿಲಗೋಡ ಜನತಾ ವಿದ್ಯಾಲಯದಲ್ಲಿ.

ಕೊಂಡದಕುಳಿಯವರ ತೀರ್ಥರೂಪರು ಗಣೇಶರಾಮ ಹೆಗಡೆಯವರು ಕೃಷಿಕರು. ಕಲಾವಿದರಲ್ಲದಿದ್ದರೂ ಕಲಾಸಕ್ತರೇ ಆಗಿದ್ದರು. ಅಜ್ಜ ಕೊಂಡದಕುಳಿ ಶ್ರೀ ರಾಮ ಹೆಗಡೆ ಮತ್ತು ಸಣ್ಣಜ್ಜ ಶ್ರೀ ಲಕ್ಷ್ಮಣ ಹೆಗಡೆಯವರು ಆ ಕಾಲದ ಪ್ರಸಿದ್ಧ ಕಲಾವಿದರಾಗಿದ್ದರು. (ನಾರಾಯಣ ಹೆಗಡೆಯವರ ಅವಳಿ ಮಕ್ಕಳು). ಇಬ್ಬರೂ ವಾಕ್ಚಾತುರ್ಯವನ್ನು ಹೊಂದಿ ವೇಷಧಾರಿಗಳೂ, ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದರು. ಕೃಷಿಕುಟುಂಬ. ಜತೆಗೆ ಯಕ್ಷಗಾನ ಕಲಾವಿದರಾಗಿಯೂ ಮೆರೆದಿದ್ದರು.

ಇವರು ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೊಂಡದಕುಳಿ ಈ ಮೇಳವನ್ನು ನಡೆಸುತ್ತಿದ್ದರು. ಖ್ಯಾತ ಕಲಾವಿದರಾಗಿದ್ದ ಜಲವಳ್ಳಿ ಶ್ರೀ ವೆಂಕಟೇಶ ರಾಯರು ಸದ್ರಿ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿ ತಿರುಗಾಟ ನಡೆಸಿದ್ದರಂತೆ. ಕೊಂಡದಕುಳಿ ರಾಮ ಹೆಗಡೆಯವರಿಗೆ ವಾಲಿ, ಕೌರವ ಮೊದಲಾದ ಪಾತ್ರಗಳು ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಲಕ್ಷ್ಮಣ ಹೆಗಡೆಯವರು ಹನೂಮಂತ ಅಲ್ಲದೆ ಹಲವಾರು ಒಡ್ಡೋಲಗ ಪಾತ್ರಗಳಲ್ಲಿ ಹೆಸರು ಗಳಿಸಿದ್ದರು. ಲಕ್ಷ್ಮಣ ಹೆಗಡೆಯವರು 68ನೇ ವಯಸ್ಸಿನಲ್ಲೂ ರಾಮ ಹೆಗಡೆಯವರು 78ನೇ ವಯಸ್ಸಿನಲ್ಲಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಕೊಂಡದಕುಳಿ ಶ್ರೀ ರಾಮ ಹೆಗಡೆಯವರು ರಾಜ್ಯ ಪ್ರಶಸ್ತಿ ವಿಜೇತ ಕಲಾವಿದರಾಗಿದ್ದರು.

ಕಲಾವಿದರ ಮನೆ. ತಂದೆ ಕಲಾವಿದರಲ್ಲದಿದ್ದರೂ ಅಜ್ಜಂದಿರಿಬ್ಬರಿಂದ ಕೊಂಡದಕುಳಿ ರಾಮಚಂದ್ರ ಹೆಗ್ಗಡೆಯವರಿಗೆ ಯಕ್ಷಗಾನವು ಬಳುವಳಿಯಾಗಿ ಬಂದಿತ್ತು. ಕಲೆಯು ರಕ್ತಗತವಾಗಿತ್ತು. ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಆಟಗಳನ್ನು ನೋಡುತ್ತಾ 20 ಪ್ರಸಂಗಗಳ ನಡೆ, ಪದ್ಯ ಕಂಠಪಾಠವಾಗಿತ್ತು! ಎಸ್.ಎಸ್.ಎಲ್.ಸಿ. ವಿದ್ಯಾರ್ಜನೆ ಪೂರೈಸಿದಾಗಲೇ ಶ್ರೀ ಮಹಾ ಗಣಪತಿ ಯಕ್ಷಗಾನ ತಾಳಮದ್ದಳೆ ಸಂಘವನ್ನೂ ಸ್ಥಾಪಿಸಿದ್ದರು. ಪ್ರತೀ ಭಾನುವಾರ ಬೇರಂಕಿ ಶಾಲೆಯಲ್ಲಿ ತಾಳಮದ್ದಳೆ ನಡೆಸುತ್ತಿದ್ದರು.

ಬಹುಷಃ ಇವರಿಗೆ ಸಂಘಟನಾ ಚಾತುರ್ಯವೂ ಅಜ್ಜಂದಿರಿಬ್ಬರಿಂದ ಒದಗಿ ಬಂದಿರಬೇಕು. ಮೇಳವನ್ನು ಕಟ್ಟಿ ನಡೆಸಿದವರು ತಾನೆ? ಬಾಲಕನಾಗಿದ್ದಾಗ ರಾತ್ರೆಯಿಡೀ ಆಟ ನೋಡಿ ರಾಮಚಂದ್ರ ಹೆಗಡೆಯವರು ಹಗಲು ಮುಖಕ್ಕೆ ಬಣ್ಣ ಹಾಕಿ ಗೇರುಬೆಟ್ಟದಲ್ಲಿ ಕುಣಿದು ಅಭಿನಯಿಸುತ್ತಿದ್ದರು. ಆಗಲೇ ಕಲಾವಿದನೊಬ್ಬ ಅವರೊಳಗೆ ಅಡಗಿ ಕುಳಿತಿದ್ದ. ಅಜ್ಜ ರಾಮ ಹೆಗಡೆಯವರು ಮೊಮ್ಮಗನ ಏಕಪಾತ್ರಾಭಿನಯವನ್ನು ದಿನವೂ ಇವರಿಗರಿಯದಂತೆ ನೋಡುತ್ತಿದ್ದರು.

ಒಂದು ದಿನ ಚಿಟ್ಟಾಣಿಯವರ ಭಸ್ಮಾಸುರನ ಪಾತ್ರವನ್ನು ನೋಡಿ ಗುಡ್ಡದಲ್ಲಿ ಕೊಂಡದಕುಳಿಯವರು ಕುಣಿಯುತ್ತಿರುವಾಗ ನೋಡಿದ ಅಜ್ಜ ಕರೆದು ಏ ಮಾಣೀ… ಯಕ್ಷಗಾನ ಕಲಿಯುತ್ತಿಯಾ? ಎಂದು ಕೇಳಿದ್ದರು. ಮುರ್ಡೇಶ್ವರದಿಂದ ಕೆಲಸ ನಿಮಿತ್ತ ಬೇರಂಕಿ ಗ್ರಾಮಕ್ಕೆ ಬಂದಿದ್ದ ಮಹನೀಯರೊಬ್ಬರು ತೋಟದಲ್ಲಿ ಇವರ ಕುಣಿತವನ್ನು ನೋಡಿ- ಏ… ರಾಮಚಂದ್ರಾ ಒಂದು ತಾಸಿನಿಂದ ಕುಣೀತಾ ಇದ್ದಿಯಾ. ಏನು ಕಲಾವಿದನಾಗೋ ಆಸೆಯಾ? ಎಂದಿದ್ದರಂತೆ. ಅಂದಿನ ದಿನದಿಂದಲೇ ಅಜ್ಜ ರಾಮ ಹೆಗಡೆಯವರಿಂದ ಮನೆಯಲ್ಲಿಯೇ ಪಾಠ ಆರಂಭ. ಇವರ ಜತೆ ತಮ್ಮ ಗಣಪತಿಯೂ ಸೇರಿಕೊಂಡ. ಮೊಮ್ಮಕ್ಕಳಿಬ್ಬರಿಗೆ ಅಜ್ಜನಿಂದ ಯಕ್ಷಗಾನ ಪಾಠ ಶುರುವಾಗಿತ್ತು. ನಾಟ್ಯ ಮತ್ತು ಮಾತುಗಾರಿಕೆಗೆ ಅಜ್ಜ ರಾಮ ಹೆಗಡೆಯವರೇ ಮೊದಲ ಗುರುಗಳು.

ರುಕ್ಮಾಂಗದ ಚರಿತ್ರೆ ಪ್ರಸಂಗದ ಧರ್ಮಾಂಗದನಾಗಿ ಕೊಂಡದಕುಳಿಯವರು ರಂಗವೇರಿದರು. (ಮೊದಲ ಭಾಗ ಭರತನ ಸನ್ನಿವೇಶದ ವರೇಗೆ). ಅಂದು ಅವರ ತಮ್ಮ ಗಣಪತಿ  ಹೆಗಡೆಯವರು ಭರತನ ಪಾತ್ರವನ್ನು ಮಾಡಿದ್ದರು. ಗಣಪತಿ  ಹೆಗಡೆಯವರು ಸ್ನಾತಕೋತ್ತರ ಪದವೀಧರರೂ, ಉತ್ತಮ ಸಾಹಿತ್ಯ ರಚನಾಕಾರರೂ ಆಗಿದ್ದಾರೆ. ಹೀಗೆ ಆರಂಭವಾದುದು ಕೊಂಡದಕುಳಿಯವರ ಯಕ್ಷಯಾತ್ರೆ. ಎಸ್.ಎಸ್.ಎಲ್.ಸಿ. ಆದ ನಂತರ ಮೂರು ವರ್ಷಗಳು ಮನೆಯಲ್ಲಿಯೇ ಇದ್ದು ಕೃಷಿ ಚಟುವಟಿಕೆ, ಮರ ಹತ್ತುವುದು, ಗೊನೆ ತೆಗೆಯುವುದು, ಸೊಪ್ಪು ಗೊಬ್ಬರ ಹಾಕುವುದು ಜತೆಗೆ ಆಟ ನೋಡುವುದು ಹೀಗೆ ಸಾಗಿತ್ತು ಜೀವನ. ಮತ್ತೆ ಮೇಳಕ್ಕೆ ಹೋಗಿ ಕಲಾವಿದನಾಗುವ ಬಯಕೆ ಚಿಗುರೊಡೆಯಿತು. ಅಜ್ಜನ ಬಳಿ ಪ್ರಸ್ತಾಪ. ಗುಂಡಬಾಳಾ ಮೇಳಕ್ಕೆ ಹೋಗು ಎಂದರಂತೆ.

ಕೊಂಡದಕುಳಿಯವರು ಅಮೃತೇಶ್ವರೀ ಮೇಳಕ್ಕೆ ಹೋಗುತ್ತೇನೆ ಎಂದರಂತೆ. ಕಾರಣ… ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿರುವ ಮೇಳ ಅದು. ಕೊಂಡದಕುಳಿಯವರು ಅವರ ಅಭಿಮಾನಿಯಾಗಿದ್ದರು. ಚಿಟ್ಟಾಣಿಯವರನ್ನು ವಿನೋದಕ್ಕಾಗಿ ಯಾರಾದರೂ ಬೈದರೂ ಸಿಟ್ಟಾಗುತ್ತಿದ್ದರಂತೆ. ಅವರಿಗೆ ಹೊಡೆಯಲು ಹೋಗುತ್ತಿದ್ದರಂತೆ ಕೊಂಡದಕುಳಿಯವರು. ಹಾಗೆ 1979 ನವೆಂಬರ್ ನಲ್ಲಿ  ಮೇಳದ ತಿರುಗಾಟ ಆರಂಭ. ಈಗಿನ ಪ್ರಸಿದ್ಧ ಭಾಗವತ ಹೆರಂಜಾಲು ಗೋಪಾಲ ಗಾಣಿಗರೂ ಇವರು ಬಾಲಗೋಪಾಲರಾಗಿ ತಿರುಗಾಟ ಶುರು ಆಗಿತ್ತು. ಆಗ ಉಪ್ಪೂರರೂ, ಕಡತೋಕ ಕೃಷ್ಣ ಭಾಗವತರೂ ಅಮೃತೇಶ್ವರೀ ಮೇಳದಲ್ಲಿ ಭಾಗವತರುಗಳಾಗಿದ್ದರು. ವೇಷ ಕಟ್ಟಲು, ಬಣ್ಣ ಹಾಕಲು ತಿಳಿಯದ ಕಾರಣ ಕುಣಿಯುವಾಗ ಕೊಂಡದಕುಳಿಯವರನ್ನು ನೋಡಿದವರೆಲ್ಲಾ ನಗಾಡುತ್ತಿದ್ದರಂತೆ.

ಭಾಗವತರಾದ ಶ್ರೀ ನಾರ್ಣಪ್ಪ ಉಪ್ಪೂರರು ಕರೆದು ಏ ಮಾಣೀ ವೇಷ ಸುಖ ಇಲ್ಲೆ ಅಂತ ಗದರಿಸಿದ್ದರು. ಕೋಲಿನ ಪೆಟ್ಟಿಗಿಂತಲೂ ಮಾತಿನ ಪೆಟ್ಟೇ ಪರಿಣಾಮ ಬೀರಿತು. 15 ದಿನಗಳಲ್ಲೇ ಮೇಳ ಬಿಟ್ಟು ಕೊಂಡದಕುಳಿಯವರು ಮನೆಗೆ ಹೋಗಿದ್ದರು. “ಆಟ ಸಾಕು. ತೋಟವೇ ಅಡ್ಡಿ ಇಲ್ಲೆ’’ ಎಂದು ಅಜ್ಜನಲ್ಲಿ ಹೇಳಿದ್ದರು. ತೋಟಕ್ಕೆ ಹೋದಾಗಲೂ ಚಿಂತೆ ಇದುವೆ. ಕೇದಗೆ ಮುಂದಲೆ ಕಟ್ಟಲು ನನಗೇಕೆ ಆಗುವುದಿಲ್ಲ? ಇದೇನು ಒಂದು ಬ್ರಹ್ಮವಿದ್ಯೆಯಾ? ಎಂದು ನಿರ್ಧರಿಸಿ ಅಭ್ಯಾಸಕ್ಕೆ ಪ್ರಾರಂಭಿಸಿದರು. ಜಾಣನಿಗೆ ಉಪ್ಪೂರರು ಮಾತಿನ ಹೊಡೆತವನ್ನೇ ನೀಡಿದ್ದರು. ಪರಿಣಾಮವೂ ಮೂಡಿತ್ತು. ಕನ್ನಡಿ ಮುಂದೆ ಕುಳಿತು ಬಣ್ಣ ಹಾಕಲು, ಕಿರೀಟ ಕಟ್ಟಲು ಅಭ್ಯಸಿಸಿದರು. ಆ ಕಲೆಯು ಕರಗತವೂ ಆಯಿತು. ಮತ್ತೆ ಅಜ್ಜನ ಬಳಿ ಮೇಳಕ್ಕೆ ಹೋಗುತ್ತೇನೆ ಎಂಬ ಹಠ. ಮೊದಲೇ ಗುಂಡಬಾಳಾ ಮೇಳಕ್ಕೆ ಹೋಗು ಎಂದಿದ್ದ ರಾಮ ಹೆಗಡೆಯವರು ಮೊಮ್ಮಗನಿಗೆ ಬೈದಿದ್ದರು. ಆದರೂ ಮೇಳಕ್ಕೆ ಸೇರಲು ಸಮ್ಮತಿ ಸೂಚಿಸಿದರು.

ಅದೇ ವರ್ಷ ಜನವರಿ 26ಕ್ಕೆ ಗುಂಡಬಾಳಾ ಮೇಳಕ್ಕೆ (1979). ಸದ್ರಿ ಮೇಳದಲ್ಲಿ ಹಿರಿಗದ್ದೆ ಶಂಕರ ಭಾಗವತ್ ಭಾಗವತರಾಗಿದ್ದರು. ಮೊದಲ ಬಾರಿಗೆ ಲಕ್ಷ್ಮಣನಾಗಿ ಗೆದ್ದರು. ಅಂದು ಬಳ್ಕೂರು ರಾಮಚಂದ್ರ ಯಾಜಿ (ಬಳ್ಕೂರು ಕೃಷ್ಣ ಯಾಜಿಯವರ ಅಣ್ಣ) ಶ್ರೀರಾಮನಾಗಿಯೂ, ಬಳ್ಕೂರು ವಿಷ್ಣು ಆಚಾರ್ ಅವರು ಮಾಯಾ ಶೂರ್ಪನಖಿಯಾಗಿಯೂ ಅಭಿನಯಿಸಿದ್ದರು.  ಸದ್ರಿ ಮೇಳದಲ್ಲಿ 3 ವರ್ಷಗಳ ತಿರುಗಾಟ. ಕೊಂಡದಕುಳಿಯವರು ಸುಧನ್ವ, ಶ್ರೀಕೃಷ್ಣ, ಹನೂಮಂತ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಂಡರು. ಮಾತುಗಾರಿಕೆಯ ಬಗೆಗಿನ ಎಚ್ಚರಿಕೆಯನ್ನು ಅಜ್ಜ ರಾಮ ಹೆಗಡೆಯವರು ಹೇಳಿದ್ದರು. ಅಲ್ಲದೆ ಶೇಣಿ, ಸಾಮಗ, ಕುಂಬಳೆಯವರ ಆಡಿಯೋ ಕ್ಯಾಸೆಟ್‍ಗಳನ್ನು ಕೇಳಿ ಪಾತ್ರಕ್ಕೆ ಸಂಭಾಷಣೆಗಳನ್ನು ಅಳವಡಿಸುತ್ತಿದ್ದರು. ಮೇಳದಲ್ಲಿ ಬಳ್ಕೂರು ರಾಮಚಂದ್ರ ಯಾಜಿಯವರೂ ಹೇಳಿಕೊಡುತ್ತಿದ್ದರು. ಚೆನ್ನಾಗಿ ಹೇಳಿಕೊಡುತ್ತಿದ್ದರು ಎಂದು ಹೇಳಿ ನೆನಪಿಸುವ ಮೂಲಕ ಕೊಂಡದಕುಳಿಯವರು ಅವರನ್ನು ಗೌರವಿಸುತ್ತಾರೆ.

ಗುಂಡಬಾಳಾ ಮೇಳದಲ್ಲಿ ಮೂರೂರು ವಿಷ್ಣು ಭಟ್, ಹಡಿನಬಾಳಾ ಶ್ರೀಪಾದ ಹೆಗಡೆ, ಗುಂಡಿಬೈಲು ಸುಬ್ರಾಯ ಭಟ್ ಮೊದಲಾದವರು ಸಹ ಕಲಾವಿದರಾಗಿದ್ದರು. ಮೇಳದ ಸಂಚಾಲಕರಾಗಿ, ಕಲಾವಿದರಾಗಿ ಹಡಿನಬಾಳ ಶ್ರೀ ಸತ್ಯ ಹೆಗಡೆಯವರ ಪ್ರೋತ್ಸಾಹವೂ ಇತ್ತು. 1982ರಲ್ಲಿ ಪಳ್ಳಿ ಸೋಮನಾಥ ಹೆಗ್ಡೆಯವರ ಸಾಲಿಗ್ರಾಮ ಮೇಳಕ್ಕೆ. 18 ವರ್ಷಗಳ ತಿರುಗಾಟ. ಕಾಳಿಂಗ ನಾವಡರ ಭಾಗವತಿಕೆಯಲ್ಲಿ 6 ವರ್ಷ. ನಂತರ ಶ್ರೀ ನಾರಾಯಣ ಶಬರಾಯ ಮತ್ತು ವಿದ್ವಾನ್ ಗಣಪತಿ ಭಟ್ಟರ ಭಾಗವತಿಕೆ. ಸದ್ರಿ ಮೇಳದಲ್ಲಿ ಮೊದಲ ಮೂರು ವರ್ಷ ಒಂದು ರಾತ್ರೆಯಲ್ಲಿ ನಾಲ್ಕೈದು ವೇಷಗಳ ನಿರ್ವಹಣೆ. ಬೆಳಗಿನ ವರೆಗೂ ವೇಷ. ಇದರಿಂದ ಬೆಳೆಯಲು, ಕಲಿಯಲು ಅನುಕೂಲವಾಯಿತು. ಪುಂಡುವೇಷ ಮತ್ತು ಒಡ್ಡೋಲಗ ವೇಷಗಳಲ್ಲಿ ರಂಜಿಸಿದರು.  

ಕಲಿತರು, ಬೆಳೆದರು. ಎಷ್ಟು ಬೆಳೆದರೆಂದರೆ ಜಲವಳ್ಳಿಯವರು ರಜೆಯಾದರೆ ಶನಿ, ಸಾಮಗರು ರಜೆಯಾದರೆ ವಿಕ್ರಮಾದಿತ್ಯ, ಬೆಳಿಯೂರು ರಜೆಯಾದರೆ ನಂದಿಶೆಟ್ಟಿ, ಮುಖ್ಯಪ್ರಾಣ ರಜೆಯಾದರೆ ಕುದುರೆ ವ್ಯಾಪಾರಿ ಮಾಡುವಷ್ಟು ಬೆಳೆದರು! ಮುಖ್ಯ ಕಲಾವಿದರ ಅನುಪಸ್ಥಿತಿಯಲ್ಲಿ ಅವರು ನಿರ್ವಹಿಸುತ್ತಿದ್ದ ಪಾತ್ರಗಳನ್ನು ಆಕಸ್ಮಿಕವಾಗಿ ಮಾಡಿ  ರಂಜಿಸಿದರು. ಕೆಲವು ಪ್ರಸಂಗಗಳಲ್ಲಿ ಅನಿವಾರ್ಯವಾಗಿ ಪಾತ್ರಗಳನ್ನು ನಿರ್ವಹಿಸಿ, ಆ ಪಾತ್ರಗಳು ಇವರಿಗೆ ಖಾಯಂ ಆಗಿತ್ತು. ಶ್ರೀ ಸಾಲಿಗ್ರಾಮ ಮೇಳದ ತಿರುಗಾಟದ ನಂತರ (18 ವರ್ಷ) ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಶ್ರೀ ಪಂಚಲಿಂಗೇಶ್ವರ ಮೇಳಕ್ಕೆ (ಶಿರಸಿ) ಸೇರಿದರು. ಪುರ್ಲೆ ಶ್ರೀ ರಾಮಚಂದ್ರ ಹೆಗಡೆಯವರ ಯಾಜಮಾನ್ಯ. ನೆಬ್ಬೂರು ಶ್ರೀ ನಾರಾಯಣ ಭಾಗವತ, ಕೆ. ಪಿ. ಹೆಗಡೆ, ವಿದ್ವಾನ್ ಗಣಪತಿ ಭಟ್, ಕೆಪ್ಪೆಕೆರೆ ಸುಬ್ರಾಯ ಭಾಗವತ, ಹೊಳೆಗೆದ್ದೆ ಗಜಾನನ ಭಂಡಾರಿ, ಶಂಕರ ಭಾಗವತ್ ಯಲ್ಲಾಪುರ ಅಲ್ಲದೆ ವೇಷಕ್ಕೆ ಕೆಪ್ಪೆಕೆರೆ ಮಹಾದೇವ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ ಮೊದಲಾದ ಶ್ರೇಷ್ಠರ ಜತೆ ತಿರುಗಾಟ.

ಸದ್ರಿ ಮೇಳದಲ್ಲಿ ಮಹಾಬಲ ಹೆಗಡೆಯವರ ಜಮದಗ್ನಿ, ಕೊಂಡದಕುಳಿ ಅವರ ಪರಶುರಾಮ, ಮಹಾಬಲ ಹೆಗಡೆಯವರ ಅರ್ಜುನನಿಗೆ ಕೃಷ್ಣ (ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ), ಬ್ರಹ್ಮಕಪಾಲ ಪ್ರಸಂಗದಲ್ಲಿ ಮನ್ಮಥ ಮಾಡಿ ಯಕ್ಷಿಣಿ ಭಾಗದಿಂದ ಈಶ್ವರ, ಪಟ್ಟಾಭಿಷೇಕ ಭರತಾಗಮನ ಪ್ರಸಂಗದಲ್ಲಿ ಶಂಭು ಹೆಗಡೆಯವರ ದಶರಥ ಕೊಂಡದಕುಳಿ ಅವರ ಭರತ- ಹೀಗೆ ಬೆಳೆಯುತ್ತಾ ಸಾಗಿದ ಕೊಂಡದಕುಳಿಯವರಿಗೆ ಮಳೆಗಾಲದಲ್ಲಿ ಚಿಟ್ಟಾಣಿಯವರ ಜತೆ ಅಭಿನಯಿಸುವ ಅವಕಾಶಗಳೂ ಸಿಕ್ಕಿತ್ತು. ಪುಂಡು ವೇಷದಲ್ಲಿ ರಂಜಿಸಿ ಬಹುಬೇಗನೇ ರಾಜವೇಷಗಳನ್ನು ನಿರ್ವಹಿಸುವ ಪ್ರಬುದ್ಧತೆಯು ಸಿದ್ಧಿಸಿತ್ತು. ತನ್ನ 25ನೇ ವಯಸ್ಸಿನಲ್ಲಿ ಗದಾಯುದ್ಧದ ಕೌರವ, 26ನೆಯ ವಯಸ್ಸಿಗೆ ಭೀಷ್ಮ, 30ನೆಯ ವಯಸ್ಸಿನಲ್ಲಿ ಪಟ್ಟಾಭಿಷೇಕ ಪ್ರಸಂಗದ ದಶರಥನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ರಂಪಾಟದ ಪ್ರಸಂಗಗಳಿಗಿಂತಲೂ ಭಾವನಾತ್ಮಕ ಪ್ರಸಂಗಗಳೇ ಇಷ್ಟ. ಮೈಮರೆತು ಅಭಿನಯಿಸಲು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತದೆ ಎನ್ನುವ ಕೊಂಡದಕುಳಿಯವರು ನಳ, ಹರಿಶ್ಚಂದ್ರ, ರಾಮ, ರಾವಣ, ಹನೂಮಂತ, ವಾಲಿ, ದಶರಥ, ಭರತ, ಕಾರ್ತವೀರ್ಯ, ಕೀಚಕ, ವಲಲ, ದಕ್ಷ, ಸುಗ್ರೀವ, ಭಸ್ಮಾಸುರ, ದುಷ್ಠಬುದ್ಧಿ, ಚಂದ್ರಹಾಸ, ಭೀಷ್ಮ, ದುಷ್ಯಂತ, ರುಕ್ಮಾಂಗದ, ಉಗ್ರಸೇನ, ವತ್ಸಾಖ್ಯ ಧರ್ಮಾಂಗದ, ವಿಕ್ರಮ ಮೊದಲಾದ ಪಾತ್ರಗಳಲ್ಲಿ ರಂಜಿಸಿದರು. ಋತುಪರ್ಣನನ್ನೂ ಮಾಡಬಲ್ಲರು. ಬಾಹುಕನಾಗಿಯೂ ಅಭಿನಯಿಸಬಲ್ಲರು. ಮೋಹಿನಿ, ಮೇನಕೆ, ಚಂದ್ರಾವಳೀ, ಚಿತ್ರಾಕ್ಷಿ, ಪ್ರಮೀಳೆ, ನಾರದ, ಅಕ್ರೂರ, ವಿದುರ ಮೊದಲಾದ ಪಾತ್ರಗಳನ್ನೂ ಜನ ಮೆಚ್ಚುವಂತೆ ನಿರ್ವಹಿಸಿದರು. ಹಾಸ್ಯ ಪಾತ್ರಗಳಲ್ಲೂ ಸೈ ಎನಿಸಿಕೊಂಡರು.

2000ನೇ ಇಸವಿ ನವಂಬರ್ 16ರಂದು ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ (ರಿ.) ಕುಂಭಾಶಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಸದ್ರಿ ಸಂಸ್ಥೆಯಡಿಯಲ್ಲಿ ಪ್ರದರ್ಶನಗಳನ್ನು ನೀಡುತ್ತಿರುವ ಹಿರಿಮೆ ಕೊಂಡದಕುಳಿ ರಾಮಚಂದ್ರ ಹೆಗಡೆಯವರದು. ಈ ತಂಡವು ಭಾರತ ದೇಶದ ನಾನಾ ಕಡೆ ಮತ್ತು ವಿದೇಶಗಳಲ್ಲಿ ಪ್ರದರ್ಶನಗಳನ್ನು ನೀಡಿದೆ (ಸಿಂಗಾಪುರ, ದುಬೈ, ಶಾರ್ಜಾ, ಅಬುದಾಭಿ ಮತ್ತು ಅಮೇರಿಕಾದಲ್ಲಿ). ಪ್ರಸ್ತುತ 22 ವರ್ಷಗಳಿಂದ ಕುಂಭಾಶಿಯಲ್ಲಿ ವಾಸ್ತವ್ಯ. ಇವರ ಬಾಳಸಂಗಾತಿಯಾಗಿ ಬಂದವರು ಪೂರ್ಣಿಮಾ. ಪತಿಯ ನೆರಳಾಗಿ ಬದುಕಿದವರು ಶ್ರೀಮತೀ ಪೂರ್ಣಿಮಾ ರಾಮಚಂದ್ರ ಹೆಗಡೆಯವರು. ಕಲಾಸಕ್ತೆಯೂ ಆಗಿದ್ದರು. 2010ರಲ್ಲಿ ಅವರು ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದರು.

ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ದಂಪತಿಗಳಿಗೆ ಮೂವರು ಮಕ್ಕಳು (ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ). ಹಿರಿಯ ಪುತ್ರಿ ಶ್ರೀಮತಿ ಅಶ್ವಿನಿ ಕೊಂಡದಕುಳಿ M.Sc. ಓದಿದವರು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಕಲಾವಿದೆಯಾಗಿ, ಸಂಘಟಕಿಯಾಗಿ ಪ್ರಸಿದ್ಧರು. ಇವರು ಬಡಗಿನ ಉದಯೋನ್ಮುಖ ಕಲಾವಿದ ಶ್ರೀ ಉದಯ ಕಡಬಾಳರ ಪತ್ನಿ. ಕಿರಿಯ ಪುತ್ರಿ ಅಕ್ಷತಾ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರ ಗುರುಗಣೇಶ ಪದವಿ ವಿದ್ಯಾರ್ಥಿ. ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಸಂಸ್ಥೆಯಡಿಯಲ್ಲಿ ತನ್ನ ಅಜ್ಜ ಕೊಂಡದಕುಳಿ ಶ್ರೀ ರಾಮ ಹೆಗಡೆಯವರ ಹೆಸರಿನ ಪ್ರಶಸ್ತಿಯನ್ನು ವಿವಿಧ ವಿಭಾಗಗಳಲ್ಲಿ ಸಾಧಕರಾಗಿ ಮೆರೆದವರಿಗೆ ನೀಡುತ್ತಾ ಬಂದಿದ್ದಾರೆ (31 ವರ್ಷಗಳಿಂದ) ಶ್ರೀಯುತರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರಾಗಿಯೂ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.

ಒಟ್ಟು 40 ವರ್ಷಗಳ ಕಲಾಸೇವೆ ಇವರದು. ಶ್ರೇಷ್ಠ ಕಲಾವಿದ, ತಾಳಮದ್ದಳೆ ಅರ್ಥಧಾರಿ, ಸಂಯಮಂ ತಂಡದ ರೂವಾರಿ ಶ್ರೀ ವಾಸುದೇವ ಸಾಮಗರು ನನ್ನ ಅಘೋಷಿತ ಗುರು ಎಂದೂ, ಸರಳವಾಗಿ ಸಂಭಾಷಣೆಗಳನ್ನು ಹೇಳಿಕೊಡುತ್ತಾರೆ, ಕೊಟ್ಟಿರುತ್ತಾರೆ, ಈಗಲೂ ಹೊಸ ಪಾತ್ರಗಳು ಬಂದಾಗ ಅವರಲ್ಲಿ ಕೇಳುತ್ತೇನೆ ಎಂದು ಹೇಳುವ ಮೂಲಕ ಅವರನ್ನು ಕೊಂಡದಕುಳಿಯವರು ಗೌರವಿಸುತ್ತಾರೆ. ಪ್ರಸ್ತುತ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಪತ್ನಿ ಚೇತನಾ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಮೇಳಗಳ ಇಂದಿನ (15.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (15.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳತೋಟತ್ತಾಡಿ ದೇವಸ್ಯ, ಕಕ್ಕಿಂಜೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳದೇವುಕುದ್ರು ಹೌಸ್, ಕೊಂಪದವು, ಕುಕ್ಕುದಕಟ್ಟೆ, ಅಣ್ಣಪ್ಪನಗರ 
ಕಟೀಲು ಎರಡನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಮೂರನೇ ಮೇಳಮೂಡುಬೆಟ್ಟುಮನೆ, ವಡ್ಡರ್ಸೆ, ಉಡುಪಿ 
ಕಟೀಲು ನಾಲ್ಕನೇ ಮೇಳ ಕಳಂಜ, ಬೆಳ್ಳಾರೆ 
ಕಟೀಲು ಐದನೇ ಮೇಳ ಕನ್ನಿಕಾ ನಿಲಯ, ಪೆರ್ಮುದೆ, ಬಜಪೆ 
ಕಟೀಲು ಆರನೇ ಮೇಳಕೆ.ಸಿ ಫಾರ್ಮ್ ಬಳಿ, ಕೊಯಿಲ ವಯಾ ಉಪ್ಪಿನಂಗಡಿ 
ಮಂದಾರ್ತಿ ಒಂದನೇ ಮೇಳ ಹೇರಾಡಿ ಬಾರ್ಕೂರು 
ಮಂದಾರ್ತಿ ಎರಡನೇ ಮೇಳ ಕುಣಿಗದ್ದೆಮನೆ, ಅಂಪಾರು 
ಮಂದಾರ್ತಿ ಮೂರನೇ ಮೇಳ ಕೆರೆಬೈಲು, ಹೊಸಗದ್ದೆ, ತೀರ್ಥಹಳ್ಳಿ 
ಮಂದಾರ್ತಿ ನಾಲ್ಕನೇ ಮೇಳ ಐರೋಡಿ, ಪಡುಮನೆ, ಸಾಸ್ತಾನ 
ಮಂದಾರ್ತಿ ಐದನೇ ಮೇಳ ರಾಘವೇಂದ್ರ ನಗರ, ಬಿದನೂರು ಕ್ಯಾಶ್ಯೂ ಇಂಡಸ್ಟ್ರೀಸ್, ಚಿಕ್ಕಪೇಟೆ ನಗರ 
ಶ್ರೀ ಹನುಮಗಿರಿ ಮೇಳ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಠಾರ – ನಳದಮಯಂತಿ, ಗದಾಯುದ್ಧ, ರಕ್ತರಾತ್ರಿ 
ಶ್ರೀ ಸಾಲಿಗ್ರಾಮ ಮೇಳನಾಗೂರು ಶಿಂಗಾರ ಗರಡಿ – ಧರ್ಮ ಸಂಕ್ರಾಂತಿ 
ಶ್ರೀ ಪೆರ್ಡೂರು ಮೇಳಶ್ರೀ ಕಾಳಿಕಾಂಬಾ ದೇವಸ್ಥಾನ, ದೊಂಬೆ ಶಿರೂರು – ಶಪ್ತ ಭಾಮಿನಿ 
ಶ್ರೀ ಮಾರಣಕಟ್ಟೆ ಮೇಳ ‘ಎ’ಇಡೂರು, ಕುಂಜ್ಞಾಡಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ನಾರ್ಕಳಿ ನಡುಬೆಟ್ಟು ದೈವದ ಮನೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಸಂಜನಾ ಮನೆ, ಮಣೂರು, ಪಡುಕೆರೆ 
ಶ್ರೀ ಪಾವಂಜೆ ಮೇಳ ಶ್ರೀ ಕ್ಷೇತ್ರದಲ್ಲಿ – ಪ್ರಚಂಡ ಭಾರ್ಗವ
ಶ್ರೀ ಹಟ್ಟಿಯಂಗಡಿ ಮೇಳಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ, ಕಳವಾಡಿ  – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’ಕಮಲಶಿಲೆ 
ಕಮಲಶಿಲೆ ಮೇಳ ‘ಬಿ’ಕಡ್ರಿ, ಸಿದ್ಧಾಪುರ 
ಶ್ರೀ ಬಪ್ಪನಾಡು ಮೇಳಶ್ರೀ ವೀರ ಹನುಮಾನ್ ಮಂದಿರ, ಸುಜೀರು, ದತ್ತನಗರ – ಬಂಗಾರ್ ಬಾಲೆ 
ಶ್ರೀ ಅಮೃತೇಶ್ವರೀ ಮೇಳಶ್ರೀ ಶಿರಸಿ ಅಮ್ಮನವರ ದೇವಸ್ಥಾನ ಕೋಟತಟ್ಟು, ಪಡುಕರೆ 
ಶ್ರೀ ಬೋಳಂಬಳ್ಳಿ ಮೇಳ ಮೆಟ್ಟಿನಹೊಳೆ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಸೌಕೂರು ನಂದಿಕೇಶ್ವರ ಸಪರಿವಾರ ದೇವಸ್ಥಾನ – ರಕ್ತಸಂಬಂಧ
ಶ್ರೀ ಹಾಲಾಡಿ ಮೇಳಶೇಡ್ ಬರಿ ಶ್ರೀ ಜಟ್ಟಿಗೇಶ್ವರ ಮಹಾಸತಿ ದೇವಸ್ಥಾನ, ಹೆಬಲೆ, ಭಟ್ಕಳ 
ಶ್ರೀ ಬೆಂಕಿನಾಥೇಶ್ವರ ಮೇಳ  ಶಿರ್ತಾಡಿ ಜಂಕ್ಷನ್ – ಮಹಿಮೆದ ಮಂತ್ರದೇವತೆ 
ಶ್ರೀ ಮಡಾಮಕ್ಕಿ ಮೇಳಮುಳ್ಳಿಕಟ್ಟೆ ಹೊಸಾಡು ಗಾನದಮಕ್ಕಿ ಚಿಕ್ಕು ಅಮ್ಮ ದೈವಸ್ಥಾನ ಜಾತ್ರೆ – ರಾಜವಂಶ ಗುಳಿಗ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕೋಲೂರು ಜಾರಂದಾಡಿ, ಹಕ್ಲಾಡಿ – ಪ್ರಚಂಡ ಪಂಜುರ್ಲಿ 
ಶ್ರೀ ಹಿರಿಯಡಕ ಮೇಳಕಂಬದಕೋಣೆ ಜಟ್ಟಿಗೇಶ್ವರ ದೇವಸ್ಥಾನ – ಶ್ರೀಕೃಷ್ಣ ಲೀಲೆ, ಕಂಸವಧೆ 
ಶ್ರೀ ಶನೀಶ್ವರ ಮೇಳ ಹುಣಸೆಮಕ್ಕಿ ಬನಶಂಕರಿ ಕಾಂಪ್ಲೆಕ್ಸ್ ಎದುರು  
ಶ್ರೀ ಸಿಗಂದೂರು ಮೇಳನಾಯಕವಾಡಿ ಶೃತಿ ಕಾಂಪ್ಲೆಕ್ಸ್ ವಠಾರ 
ಶ್ರೀ ನೀಲಾವರ ಮೇಳ ಶ್ರೀರಾಮ ಭಜನಾ ಮಂದಿರ, ಗಂಗೆಬೈಲು, ಕೊಡೇರಿ 
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ ಮೃಗವಧೆ 
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ಮೂಗುಡ್ತಿ 

ಮೇಳಗಳ ಇಂದಿನ (14.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (14.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಬದ್ಯಾರು ಹಿಬರೋಡಿ ಅನುಗ್ರಹ ನಿಲಯದ ವಠಾರ – ಬ್ರಹ್ಮ ಕಪಾಲ, ಗಿರಿಜಾ ಕಲ್ಯಾಣ 
ಕಟೀಲು ಒಂದನೇ ಮೇಳಬೋಳ್ಳಾರು ಮನೆ ಸೂರಿಂಜೆ,  ಬೋಳ್ಳಾರು ಶಾಲಾ ಹಿಂಬದಿ 
ಕಟೀಲು ಎರಡನೇ ಮೇಳ ಶ್ರೀ ಸೀತಾರಾಮ ಭಜನಾ ಮಂದಿರದ ಬಳಿ, ಫರಂಗಿಪೇಟೆ 
ಕಟೀಲು ಮೂರನೇ ಮೇಳಕಟೀಲು ಕ್ಷೇತ್ರದಲ್ಲಿ 
ಕಟೀಲು ನಾಲ್ಕನೇ ಮೇಳ ಮಾಡಾವು ಕಟ್ಟೆ, ವಯಾ ಕುಂಬ್ರ, ಪುತ್ತೂರು 
ಕಟೀಲು ಐದನೇ ಮೇಳ ಚೆರ್ಕಳ ಮನೆ, ಪೂಂಜಾಲಕಟ್ಟೆ, ಬಂಟ್ವಾಳ 
ಕಟೀಲು ಆರನೇ ಮೇಳಶ್ರೀ ರಾಮ ಮಂದಿರ, ಕಲ್ಲಡ್ಕ, ಬಂಟ್ವಾಳ
ಮಂದಾರ್ತಿ ಒಂದನೇ ಮೇಳ ಸಬ್ಬಾಗಿಲು, ಕಾಸಾಡಿ, ಹೈಕಾಡಿ – ಕೂಡಾಟ 
ಮಂದಾರ್ತಿ ಎರಡನೇ ಮೇಳ ನಂದಿಕೇಶ್ವರ ದೇವಸ್ಥಾನ ಮೂರೂರು 
ಮಂದಾರ್ತಿ ಮೂರನೇ ಮೇಳ ಚೌಕ, ಮೇಗರವಳ್ಳಿ 
ಮಂದಾರ್ತಿ ನಾಲ್ಕನೇ ಮೇಳ ಸಬ್ಬಾಗಿಲು, ಕಾಸಾಡಿ, ಹೈಕಾಡಿ – ಕೂಡಾಟ  
ಮಂದಾರ್ತಿ ಐದನೇ ಮೇಳ ಹೊಳೆಗದ್ದೆ, ಯಡೂರು 
ಶ್ರೀ ಹನುಮಗಿರಿ ಮೇಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉದಯಗಿರಿ, ಮುಂಡೂರು(ಪುತ್ತೂರು) – ಶ್ರೀ ಶಬರಿಮಲೆ ಅಯ್ಯಪ್ಪ
ಶ್ರೀ ಸಾಲಿಗ್ರಾಮ ಮೇಳಶ್ರೀ ಕ್ಷೇತ್ರದಲ್ಲಿ – ದೇವರ ಸೇವೆ ಆಟ
ಶ್ರೀ ಪೆರ್ಡೂರು ಮೇಳಶ್ರೀ ಕ್ಷೇತ್ರದಲ್ಲಿ – ದೇವರ ಸೇವೆ ಆಟ – ಪಾಂಡವಾಶ್ವಮೇಧ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರ ತಳಕಲದಲ್ಲಿ – ಉಳ್ಳಾಲ ಮೇಳ ಮತ್ತು ತಳಕಲ ಮೇಳ ಜೋಡಾಟ – ಮಹಿಷಮರ್ದಿನಿ 
ಶ್ರೀ ಸುಂಕದಕಟ್ಟೆ ಮೇಳ ಬೋಳಾರ ಮಾರಿಗುಡಿ – ಶ್ರೀ ದೇವಿಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಜಾತ್ರೆ ಸೇವೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಜಾತ್ರೆ ಸೇವೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಜಾತ್ರೆ ಸೇವೆ 
ಶ್ರೀ ಪಾವಂಜೆ ಮೇಳ ಮಾರಣಕಟ್ಟೆ ದೇವಸ್ಥಾನ – ಗಜೇಂದ್ರ ಮೋಕ್ಷ, ಮಾನಿಷಾದ, ಅಗ್ರಪೂಜೆ 
ಶ್ರೀ ಹಟ್ಟಿಯಂಗಡಿ ಮೇಳಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಗುಡ್ದಮ್ಮಾಡಿ  – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’ಕಮಲಶಿಲೆ 
ಕಮಲಶಿಲೆ ಮೇಳ ‘ಬಿ’ಕಡ್ರಿ, ಸಿದ್ಧಾಪುರ 
ಶ್ರೀ ಬಪ್ಪನಾಡು ಮೇಳಕಜೆಪದವು – ಬಂಗಾರ್ ಬಾಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ನೇರಳಕಟ್ಟೆ (ಮಾಣಿ) ಗಣೇಶನಗರ ಶ್ರೀ ಅಯ್ಯಪ್ಪಮಂದಿರದ ಬಳಿ – ಶ್ರೀ ಭಗವತೀ ಮಹಾತ್ಮೆ 
ಶ್ರೀ ಅಮೃತೇಶ್ವರೀ ಮೇಳಶ್ರೀ ಚಿಕ್ಕು ಹಾಗೂ ಪರಿವಾರ ದೇವಸ್ಥಾನ ಮೂಡುಗಿಳಿಯಾರು  
ಶ್ರೀ ಬೋಳಂಬಳ್ಳಿ ಮೇಳ ನಾವುಂದ ಬಡಾಕರೆ ಲಕ್ಷ್ಮೀ ಜನಾರ್ದನ ದೇವಸ್ಥಾನ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಕೋಣ್ಕಿ ಸಿರಿಬೆಟ್ಟು ಹಳೆಯಮ್ಮ ಸಪರಿವಾರ ದೇವಸ್ಥಾನ
ಶ್ರೀ ಹಾಲಾಡಿ ಮೇಳಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಾರಿಕಾನ – ಕಂಸ ದಿಗ್ವಿಜಯ, ಕಂಸ ವಧೆ 
ಶ್ರೀ ಬೆಂಕಿನಾಥೇಶ್ವರ ಮೇಳ  ಬೊಳಿಯಾರ್ ಲಕ್ಷ್ಮೀನರಸಿಂಹ ದೇವಸ್ಥಾನ ಜಾತ್ರೆ – ಮಹಿಮೆದ ಮಂತ್ರದೇವತೆ 
ಶ್ರೀ ಮಡಾಮಕ್ಕಿ ಮೇಳಕುಂದಾಪುರ ವಿಠಲವಾಡಿ – ಶ್ರೀ ಮಡಾಮಕ್ಕಿ ಕ್ಷೇತ್ರ ಮಹಾತ್ಮೆ  
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಬೈಂದೂರು ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ 
ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ ಶ್ರೀ ಕ್ಷೇತ್ರ ತಳಕಲದಲ್ಲಿ – ಉಳ್ಳಾಲ ಮೇಳ ಮತ್ತು ತಳಕಲ ಮೇಳ ಜೋಡಾಟ – ಮಹಿಷಮರ್ದಿನಿ 
ಶ್ರೀ ಹಿರಿಯಡಕ ಮೇಳನಾಗರತಿ ದೇವಸ್ಥಾನ, ಚೋರಾಡಿ – ನಾಗನಿಧಿ 
ಶ್ರೀ ಶನೀಶ್ವರ ಮೇಳ ಪಂಜುರ್ಲಿ ದೇವಸ್ಥಾನ ವಠಾರ, ಮುಂಬಾರು  – ತಾಟಕ ಮೋಕ್ಷ 
ಶ್ರೀ ಸಿಗಂದೂರು ಮೇಳಜಾತ್ರಾ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಸೇವೆ
ಶ್ರೀ ನೀಲಾವರ ಮೇಳ ನಾಗೂರು ಹಳೆಗೆರೆ 

ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಕು| ರೂಪಾ ಕನಕಪಾಡಿಯವರಿಗೆ ಪ್ರಥಮ ಶ್ರೇಣಿ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಭರತನಾಟ್ಯ ವಿದ್ವತ್ ಅಂತಿಮ ದರ್ಜೆ ಪರೀಕ್ಷೆಯಲ್ಲಿ ಕು| ರೂಪಾ ಕನಕಪಾಡಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ರೂಪಾ ಕನಕಪಾಡಿಯವರು ಭರತನಾಟ್ಯ ಕಲಾವಿದೆಯೂ ಭರತನಾಟ್ಯ ಗುರುಗಳೂ ಆದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಶಿಷ್ಯೆ. ಹಾಗೂ ಶ್ರೀ ಉದಯಶಂಕರ್ ಕನಕಪಾಡಿ ಮತ್ತು ಶ್ರೀಮತಿ ಸುಗುಣಾ ಉದಯಶಂಕರ್ ಅವರ ಪುತ್ರಿ.

ಯಕ್ಷಕಲಾ ಅಕಾಡೆಮಿಯವರಿಂದ ಯಕ್ಷಗಾನ ಉತ್ಸವ

ಬೆಂಗಳೂರಿನ ಹೆಸರಾಂತ ತಂಡವಾದ ಯಕ್ಷಕಲಾ ಅಕಾಡೆಮಿಯು ಇದೀಗ  ಯಕ್ಷಗಾನ ಉತ್ಸವವನ್ನು ಹಮ್ಮಿಕೊಂಡಿದೆ. ಇದೇ ತಿಂಗಳ 15 ರ ಸಂಜೆ  6.30 ಕ್ಕೆ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. 

ಅಂದು  ಮುಖ್ಯ ಅಭ್ಯಾಗತರಾಗಿ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ನಟ ಗೋಪಾಲಕೃಷ್ಣ ನಾಯರಿ ಹಾಗೂ ವೃತ್ತಿಯಲ್ಲಿ ವೈದ್ಯರಾದರೂ ಕೂಡಾ, ಸಾಹಿತ್ಯದಲ್ಲಿ ಅಭಿರುಚಿಯನ್ನು ಹೊಂದಿ, ಕಲಾಕ್ಷೇತ್ರದಲ್ಲಿ ಸಾಕಷ್ಟು ಪಳಗಿರುವ ಬೆಂಗಳೂರಿನ ಶೇಖರ್ ಹಾಸ್ಪಿಟಲಿನ ಸಂಸ್ಥಾಪಕ ನಿರ್ದೇಶಕರಾಗಿರುವ ಡಾ. ಪಿ.ವಿ.ಐತಾಳರು, ಹಾಗೂ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸಕ್ರಿಯ ಕಾರ್ಯದರ್ಶಿಯೂ , ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರೂ ಆದ ಶ್ರೀ ರಾಜಶೇಖರ್ ಹೆಬ್ಬಾರ್ ಅವರು ಪಾಲುಗೊಳ್ಳಲಿದ್ದಾರೆ.

ತದನಂತರ ತಂಡದ  ಕಲಾವಿದರಿಂದ ‘ಭೀಷ್ಮ ಪ್ರತಿಜ್ಞೆ’ ಎನ್ನುವ ಕಥಾನಕವು ಪ್ರದರ್ಶನಗೊಳ್ಳಲಿದೆ ಎಂದು  ಯಕ್ಷಗಾನ ಗುರುಗಳಾದ ಶ್ರೀ ಕೃಷ್ಣಮೂರ್ತಿ ತುಂಗರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.