Thursday, March 12, 2026
Home Blog Page 329

ಮೇಳಗಳ ಇಂದಿನ ( 24.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 24.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಕುಂಟುವಾಣಿ – ವೀರಮಣಿ, ನರಕಾಸುರ ಮೋಕ್ಷ   

ಕಟೀಲು ಒಂದನೇ ಮೇಳ ==  ಗಣೇಶಪುರ ಕಾಟಿಪಳ್ಳ 

ಕಟೀಲು ಎರಡನೇ ಮೇಳ ==  ವಿನಯ ನಿವಾಸ, ಬಾನಂಗಡಿ, ಕಲ್ಲುಮುಂಡ್ಕೂರು  

ಕಟೀಲು ಮೂರನೇ ಮೇಳ= ಕಟೀಲು ಕ್ಷೇತ್ರ ‘ಸರಸ್ವತಿ ಸದನ’

ಕಟೀಲು ನಾಲ್ಕನೇ ಮೇಳ  ==  ನೀರಪಲ್ಕೆ ಚರ್ಚ್ ಬಳಿ, ಮೂಡುಪೆರಾರ 

ಕಟೀಲು ಐದನೇ ಮೇಳ ==  ನೆಲ್ಲಿಮಾರ್, ಬಡಗಬೆಳ್ಳೂರು 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ‘ಮಹಾಲಕ್ಷ್ಮಿ ಸದನ’

ಮಂದಾರ್ತಿ ಒಂದನೇ ಮೇಳ  == ಬಾಸ್ತಿ ಕಟ್ಟೇಹಕ್ಕಲು   

ಮಂದಾರ್ತಿ ಎರಡನೇ ಮೇಳ   ==  ಶಿವಾನುಗ್ರಹ, ಕತ್ ಗೋಡು, ರಟ್ಟಾಡಿ – ಅಮೃತೇಶ್ವರಿ ಮೇಳದೊಂದಿಗೆ  ಕೂಡಾಟ

ಮಂದಾರ್ತಿ ಮೂರನೇ ಮೇಳ  ==  ಕೈಮರ, ಎನ್.  ಆರ್.ಪುರ ತಾಲೂಕು 

ಮಂದಾರ್ತಿ ನಾಲ್ಕನೇ ಮೇಳ   ==  ಹಾಲ್ಮುತ್ತೂರು ಕೊಪ್ಪ 

ಮಂದಾರ್ತಿ    ಐದನೇ ಮೇಳ  ==  ಹೊಸಮಠ ಕೊರ್ಗಿ  

ಶ್ರೀ ಹನುಮಗಿರಿ ಮೇಳ  ==  ಸಾಲಿಗ್ರಾಮ ರಥಬೀದಿ – ದಕ್ಷ ಯಜ್ಞ, ಗಿರಿಜಾ ಕಲ್ಯಾಣ (ಸಂಜೆ 7ರಿಂದ)

ಶ್ರೀ ದೇಂತಡ್ಕ ಮೇಳ == ಬರಿಮಾರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಬಳಿ  – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಬ್ರಹ್ಮಲಿಂಗೇಶ್ವರ ನಿಲಯ, ಗಂಗೆಮನೆ, ಹಕ್ಲಾಡಿ  

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ತಾರಿಬೇರು, ಕೆಳಾಮನೆ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶಾರಾಳ  ಕೆಳಾಮನೆ, ಕರ್ಕುಂಜೆ 

ಶ್ರೀ ಪಾವಂಜೆ ಮೇಳ  ==  ಎಳ್ಳರ್, ಮುಲ್ಕಾಡು, ಮುನಿಯಾಲ್ – ದಕ್ಷಾಧ್ವರ, ಅಭಿಮನ್ಯು (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ನಾಗರಕೊಡ್ಗಿ  

ಕಮಲಶಿಲೆ ಮೇಳ ‘ಬಿ‘ ==  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬೆಳ್ಳಾಲ 

ಶ್ರೀ ಬಪ್ಪನಾಡು ಮೇಳ == ಬುಡೋಳಿ ಪಂಜಿಕಲ್ ನಿಂಗಲ್ ಬಾಕಿಮಾರು – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಕಿನ್ನಿಗೋಳಿ ಶ್ರೀರಾಮ ಮಂದಿರದ ವಠಾರ – ನಾಗತಂಬಿಲ (ಸಂಜೆ 6ರಿಂದ)

ಶ್ರೀ ಅಮೃತೇಶ್ವರೀ ಮೇಳ ==  ಶಿವಾನುಗ್ರಹ, ಕತ್ ಗೋಡು, ರಟ್ಟಾಡಿ  – ಮಂದಾರ್ತಿ ಮೇಳದೊಂದಿಗೆ  ಕೂಡಾಟ

ಶ್ರೀ ಸೌಕೂರು ಮೇಳ ==  ಆಲೂರು ಭಜನಾ ಮಂದಿರ – ಪುಷ್ಪ ಚಂದನ 

ಶ್ರೀ ಹಾಲಾಡಿ ಮೇಳ == ಆಂಜನೇಯ ದೇವಸ್ಥಾನ ರಾಮಚಂದ್ರಾಪುರ – ಮೇಘ ಮಂಜರಿ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಪುತ್ತೂರು ಮಜಲು ಮೊಟ್ಟೆತಡ್ಕ ಕ್ಷೇತ್ರ – ಶ್ರೀ ಮಜಲು ಕ್ಷೇತ್ರ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಕುಕ್ಕುಂದೂರು ಸಮಾಜ ಮಂದಿರ – ನೂತನ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲ್ಪೆ ಪಡುಕೆರೆ ಶ್ರೀ ಶನೇಶ್ವರ ಭಜನಾ ಮಂದಿರದ ವಠಾರ – ನಾಗ ಮಂಡಲ 

ಶ್ರೀ ಹಿರಿಯಡಕ ಮೇಳ == ಹೊಸ್ಮಾರು ನೆಲ್ಲಿಗುಡ್ಡೆ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ ==  ನಾಯಕವಾಡಿ 

ಶ್ರೀ ಸಿಗಂದೂರು ಮೇಳ == ಉಳ್ಳೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರ 

ಶ್ರೀ ನೀಲಾವರ ಮೇಳ  == ಮಾರ್ಕೋಡು  

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಗುತ್ತಿಗಾರು 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ತೆಕ್ಕಟ್ಟೆ  

ಶ್ರೀ ಮೇಗರವಳ್ಳಿ ಮೇಳ == ಕಾಗೆಹಳ್ಳ, ಸಾಗರ – ಅಭಿಮನ್ಯು, ನಾಗಶ್ರೀ 

4ನೇ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ನಟಿ ಕಂಗನಾ ರಾಣಾವತ್

‘ಮಣಿಕರ್ನಿಕಾ’, ‘ಪಂಗಾ’ ಚಿತ್ರಕ್ಕಾಗಿ ತನ್ನ 4 ನೇ ಬಾರಿ ನಟಿ ಕಂಗನಾ ರಾಣಾವತ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯಾಗಿದ್ದು, ಬಾಲಿವುಡ್ ತಾರೆ ಕಂಗನಾ ರನೌತ್ ಅವರು ಮಣಿಕರ್ಣಿಕಾ ಮತ್ತು ಪಂಗಾ ಚಿತ್ರದಲ್ಲಿನ ಅವರ ಪಾತ್ರಗಳಿಗಾಗಿ ಅತ್ಯುತ್ತಮ ನಟಿ ಎಂದು ಆಯ್ಕೆಯಾಗಿದ್ದಾರೆ.

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ತಾರೆ ಕಂಗನಾ ರನೌತ್ ಅವರು ಮಣಿಕರ್ಣಿಕಾ ಮತ್ತು ಪಂಗಾ ಅವರ ಪಾತ್ರಗಳಿಗಾಗಿ ಅತ್ಯುತ್ತಮ ನಟಿ ಎಂದು ಆಯ್ಕೆಯಾಗಿದ್ದಾರೆ. ಟ್ವಿಟ್ಟರ್ ವೀಡಿಯೊವೊಂದರಲ್ಲಿ, ಕಂಗನಾ ಎರಡೂ ಚಿತ್ರಗಳ ಎಲ್ಲಾ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

https://twitter.com/KanganaTeam/status/1373969980002291712?s=20

ಇಂದು ಅಂದರೆ ಮಾರ್ಚ್ 23 ರಂದು ಕಂಗನಾ ತನ್ನ ಜನ್ಮದಿನವನ್ನು ಆಚರಿಸುತ್ತಾರೆ. ಕಂಗನಾ ಈ ಹಿಂದೆ ಗೆದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿವರ:

ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – 2008 ರಲ್ಲಿ (ಫ್ಯಾಷನ್)

ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – 2014 ರಲ್ಲಿ (ಕ್ವೀನ್)

ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – 2015ರಲ್ಲಿ (ತನು ವೆಡ್ಸ್ ಮನು ರಿಟರ್ನ್ಸ್)

ನಾಳೆ (24.03.2021) ಕಟೀಲಿನಲ್ಲಿ “ದ್ರುಪದ ಗರ್ವಭಂಗ, ಚಂದ್ರಹಾಸ ಚರಿತ್ರೆ” ಯಕ್ಷಗಾನ ಪ್ರದರ್ಶನ 

ನಾಳೆ (24.03.2021) ಬುಧವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಕಟೀಲು ಶ್ರೀ ಸರಸ್ವತಿ ಸದನದಲ್ಲಿ “ದ್ರುಪದ ಗರ್ವಭಂಗ, ಚಂದ್ರಹಾಸ ಚರಿತ್ರೆ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಅಜೆಕಾರು ಕಲಾಭಿಮಾನಿ ಬಳಗಕ್ಕೆ ಹುಟ್ಟೂರಲ್ಲಿ ಚಾಲನೆ – ಕಲಾವಿದರಿಗೆ ತಾಯಿನಾಡಿನ ಋಣ ದೊಡ್ಡದು: ಅಜೆಕಾರು ಬಾಲಕೃಷ್ಣ ಶೆಟ್ಟಿ

‘ ನಮ್ಮ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಹೆತ್ತ ತಾಯಿ ಮತ್ತು ಹುಟ್ಟಿದ ಊರು ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಅದರಲ್ಲೂ ಕಲಾವಿದನಾದವನಿಗೆ ತಾಯಿನಾಡಿನ ಋಣ ಎಲ್ಲಕ್ಕಿಂತ ದೊಡ್ಡದು. ಯಾವುದಾದರೊಂದು ರೂಪದಲ್ಲಿ ಅದನ್ನು ತೀರಿಸುವ ಸಂದರ್ಭ ಬಂದಾಗ ನಾವದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಜೆಕಾರು ಕಲಾಭಿಮಾನಿ ಬಳಗ ಹೊರನಾಡಿನಲ್ಲಿ ಜನಪ್ರಿಯತೆ ಗಳಿಸಲು ಹುಟ್ಟೂರಿನ ಸಂಸ್ಕಾರವೇ ಕಾರಣ’ ಎಂದು ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.        

ಕಾರ್ಕಳ ತಾಲೂಕಿನ ಅಜೆಕಾರು ಶ್ರೀರಾಮ ಮಂದಿರದಲ್ಲಿ ಇತ್ತೀಚೆಗೆ ಜರಗಿದ ಅಜೆಕಾರು ಕಲಾಭಿಮಾನಿ ಬಳಗದ ಪ್ರಾದೇಶಿಕ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಕುಂಟಿನಿ ದೀಪ ಬೆಳಗಿ ನೂತನ ಸಮಿತಿಗೆ ಚಾಲನೆ ನೀಡಿದರು. ಉದ್ಯಮಿ ಅಜೆಕಾರು ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಬಳಗದ ಸಾಧನೆ: ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಯಕ್ಷಗಾನ ವಿದ್ವಾಂಸ ಮತ್ತು ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ ‘ಅಜೆಕಾರು ಕಲಾಭಿಮಾನಿ ಬಳಗವು ಕಳೆದ ಎರಡು ದಶಕಗಳಿಂದ ಮುಂಬಯಿಯಲ್ಲಿ ಸರಣಿ ತಾಳಮದ್ದಳೆ, ಯಕ್ಷಗಾನ ಬಯಲಾಟ, ಕಲಾವಿದರ ಸಮ್ಮಾನ, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ, ತರಬೇತಿ ಮತ್ತು ಗ್ರಂಥ ಪ್ರಕಟಣೆಗಳ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಇಂತಹ ಸತ್ಕಾರ್ಯಗಳನ್ನು ಹುಟ್ಟೂರಿನಲ್ಲೂ ವಿಸ್ತರಿಸುವ ಸಲುವಾಗಿ ಅಜೆಕಾರಿನಲ್ಲಿ ಪ್ರಾದೇಶಿಕ ಸಮಿತಿಯನ್ನು ರಚಿಸಲಾಗುತ್ತಿದೆ. ಇದು ಉತ್ತಮ ಮೇಲ್ಪಂಕ್ತಿ ‘ ಎಂದರು.

ಕಲಾ ಪೋಷಕರಾದ ಭೋಜ ಮಡಿವಾಳ ಪರಂಬರಬೆಟ್ಟು ಮತ್ತು ಹರೀಶ್ ನಾಯಕ್ ಶುಭಹಾರೈಸಿದರು.  ಮುಂಬೈಯ ಖ್ಯಾತ ಹೋಟೆಲು ಉದ್ಯಮಿ ಶಿವರಾಮ ಜಿ. ಶೆಟ್ಟಿ ದೇವಸ್ಯ ಅಜೆಕಾರು ಅವರು ಗೌರವಾಧ್ಯಕ್ಷರಾಗಿ ಹಾಗೂ ಅಜೆಕಾರು ವಿಜಯ ಶೆಟ್ಟಿ  ಅಧ್ಯಕ್ಷರಾಗಿರುವ ಅಜೆಕಾರು ಕಲಾಭಿಮಾನಿ ಬಳಗದ ನೂತನ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.

ಸಮಿತಿ ಸಂಚಾಲಕ ಪ್ರಶಾಂತ ಶೆಟ್ಟಿ ಕುಂಟಿನಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಶಂಕರ ಆಚಾರ್ಯ ಸ್ವಾಗತಿಸಿ, ಜತೆ ಕಾರ್ಯದರ್ಶಿ ರಾಘವೇಂದ್ರ ಪಾಟ್ಕರ್ ವಂದಿಸಿದರು. ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಮಜಲು ಮನೆ ನಿರೂಪಿಸಿದರು.

ಮೇಳಗಳ ಇಂದಿನ ( 23.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 23.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಆತವಾಡಿ – ಚಕ್ರವ್ಯೂಹ, ಶ್ರೀನಿವಾಸ ಕಲ್ಯಾಣ   

ಕಟೀಲು ಒಂದನೇ ಮೇಳ ==  ‘ಶ್ರೀನಿಧಿ’, ಪಳ್ಳಿ ನಿಂಜೂರು ಕಾರ್ಕಳ 

ಕಟೀಲು ಎರಡನೇ ಮೇಳ ==  ಪಾದೆಮನೆ ಪಂಜಕೊಯಿಕುಡೆ ವಯಾ ಹಳೆಯಂಗಡಿ 

ಕಟೀಲು ಮೂರನೇ ಮೇಳ= ಒಂಟಿಮಾರು ತೆಂಕಮಿಜಾರು, ಅಶ್ವತ್ಥಪುರ 

ಕಟೀಲು ನಾಲ್ಕನೇ ಮೇಳ  ==  ಕಟೀಲು ಕ್ಷೇತ್ರ ‘ಮಹಾಲಕ್ಷ್ಮಿ ಸದನ’

ಕಟೀಲು ಐದನೇ ಮೇಳ ==   ಕಟೀಲು ಕ್ಷೇತ್ರ ‘ಸರಸ್ವತಿ ಸದನ’

ಕಟೀಲು ಆರನೇ ಮೇಳ == ‘ಪಡೀಲು ಹೌಸ್, ಬೈಕಂಪಾಡಿ ಕುಳಾಯಿ 

ಮಂದಾರ್ತಿ ಒಂದನೇ ಮೇಳ  == ಗೋರ್ಗಲ್ಲು ಹಾರೋಗುಳಿಗೆ  

ಮಂದಾರ್ತಿ ಎರಡನೇ ಮೇಳ   ==  ಜಟ್ಟಿಗೇಶ್ವರ ದೇವಸ್ಥಾನ ಬಳಿ ಮಣೂರು ಪಡುಕೆರೆ – ಕೂಡಾಟ 

ಮಂದಾರ್ತಿ ಮೂರನೇ ಮೇಳ  ==  ಕೆಳಕುಳಿ ಸಿದ್ಧರಮಠ ಕೊಪ್ಪ 

ಮಂದಾರ್ತಿ ನಾಲ್ಕನೇ ಮೇಳ   ==  ಸಂಪಿಗೆಕೊಳಲು ಹಳುವಳ್ಳಿ ಮೂಡಿಗೆರೆ ಚಿಕ್ಕಮಗಳೂರು 

ಮಂದಾರ್ತಿ    ಐದನೇ ಮೇಳ  ==  ಜಟ್ಟಿಗೇಶ್ವರ ದೇವಸ್ಥಾನ ಬಳಿ ಮಣೂರು ಪಡುಕೆರೆ – ಕೂಡಾಟ 

ಶ್ರೀ ಹನುಮಗಿರಿ ಮೇಳ  ==  ಮುಚ್ಚೂರು ವಾಸ್ ಕಾಂಪ್ಲೆಕ್ಸ್ ಬಳಿ – ಪಾವನ ಪವನಜ (ಸಂಜೆ 7.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಹೊನ್ನೆಕಟ್ಟೆ ಹಾಲ್ ಮುತ್ತೂರು – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಅರೆಅಂಗಡಿ ಸಂತೆಗುಳಿ – ಕೃಷ್ಣಾರ್ಜುನ, ನರಕಾಸುರ ವಧೆ, ಶಶಿಪ್ರಭಾ 

ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ದೇಂತಡ್ಕ – ಕಾರ್ಣಿಕದ ಸ್ವಾಮಿ ಕೊರಗಜ್ಜ (ರಾತ್ರಿ 7ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ರೈಲ್ವೆ ಸ್ಟೇಷನ್ ಹತ್ತಿರ, ಸೇನಾಪುರ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ರೈಲ್ವೆ ಸ್ಟೇಷನ್ ಹತ್ತಿರ, ಸೇನಾಪುರ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಜನ್ಮನೆ ಕಮ್ಮಾರಕೋಣೆ ಗೋಳಿಹೊಳೆ 

ಶ್ರೀ ಪಾವಂಜೆ ಮೇಳ  ==  ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ವಠಾರ ಮಾಡದಗುಡ್ಡೆ, ಬೋಳಿಯಾರ್, ಮುಡಿಪು  – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.30ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಹೇರಾಡಿ – ದಿವ್ಯ ಸನ್ನಿಧಿ (ಕಾಲಮಿತಿ, ರಾತ್ರಿ 8.30ಕ್ಕೆ)

ಕಮಲಶಿಲೆ ಮೇಳ ‘ಎ‘ = ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೇಲ್ ಸುಂಕ  

ಕಮಲಶಿಲೆ ಮೇಳ ‘ಬಿ‘ ==  ತಲ್ಲೂರು ಗರೋಡಿಯ ವಠಾರ 

ಶ್ರೀ ಬಪ್ಪನಾಡು ಮೇಳ == ಶ್ರೀ ಲಕ್ಷ್ಮಿ ಅಂಬಾಭವಾನಿ ದೇವಸ್ಥಾನ ದುರ್ಗಾ ಕಾರ್ಕಳ – ಶ್ರೀ ದೇವಿ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಚ್ಚನಾಡಿ ಬಂದಲೆ ಮೂಡುಮನೆ ದೊಂಪದ ಬಳಿ ಮುಕುಂದ ಮುರಾರಿ (ಸಂಜೆ 6ರಿಂದ)

ಶ್ರೀ ಅಮೃತೇಶ್ವರೀ ಮೇಳ == ಮೂಡುಗಿಳಿಯಾರು  

ಶ್ರೀ ಬೋಳಂಬಳ್ಳಿ ಮೇಳ==  ಚಕ್ರ ಮೈದಾನ (ಕಾಲಮಿತಿ)

ಶ್ರೀ ಸೌಕೂರು ಮೇಳ ==  ಬೀಜಾಡಿ – ನೂತನ ಪ್ರಸಂಗ    

ಶ್ರೀ ಹಾಲಾಡಿ ಮೇಳ == ಚಕ್ರನಗರ ತುಮಕೋಡು – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ – ಶ್ರೀ ನಾಗದೇವತೆ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಉಳ್ಳೂರು 74 ಜನತಾ ಕಾಲನಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಮಧ್ವನಗರ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ನಾರಾವಿ ಮಂಜುನಗರ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಶ್ರೀ ಭದ್ರಮಹಾಕಾಳಿ ದೇವಸ್ಥಾನ ಕಟ್ ಬೆಲ್ತೂರು 

ಶ್ರೀ ಸಿಗಂದೂರು ಮೇಳ == ಕೊರ್ಗಿ ನವದುರ್ಗಿ ದೇವಸ್ಥಾನ   

ಶ್ರೀ ನೀಲಾವರ ಮೇಳ  == ಬೊಬ್ಬರ್ಯ ದೇವಸ್ಥಾನ ಗೋಪಾಡಿ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕಳಸೆ ಬೆಳ್ಳೂರು 

ಶ್ರೀ ಮೇಗರವಳ್ಳಿ ಮೇಳ == ಪುರಪ್ಪೆಮನೆ ಕಲ್ ಕೊಪ್ಪ – ಕುಲದೈವ ಪಂಜುರ್ಲಿ

ಮೇಳಗಳ ಇಂದಿನ ( 22.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 22.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಕರ್ಕಿಕೊಪ್ಪ, ಸಾಗರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ ==  ಆಶೀರ್ವಾದ, ಭಟ್ರಬೈಲು ನಿಡ್ಡೋಡಿ 

ಕಟೀಲು ಎರಡನೇ ಮೇಳ ==  ಕಾನ ಹೌಸ್, ನಿಲ್ಲೂರು ವಯಾ ನೀರುಮಾರ್ಗ 

ಕಟೀಲು ಮೂರನೇ ಮೇಳ= ಗಣೇಶಪುರ, ಕಾಟಿಪಳ್ಳ 

ಕಟೀಲು ನಾಲ್ಕನೇ ಮೇಳ  == ಮುಂಡಾರು, ಪಡ್ಡೋಡಿ, ಪೊರ್ಕೋಡಿ, ಬಜಪೆ  

ಕಟೀಲು ಐದನೇ ಮೇಳ ==  ದೇಲಂತಬೆಟ್ಟು, ಶಿಬರೂರು  

ಕಟೀಲು ಆರನೇ ಮೇಳ == ‘ಕಟೀಲು ಕ್ಷೇತ್ರ ಶ್ರೀ ಸರಸ್ವತಿ ಸದನ  

ಮಂದಾರ್ತಿ ಒಂದನೇ ಮೇಳ  == ಮೇಗರವಳ್ಳಿ ದುರ್ಗಾಪರಮೇಶ್ವರಿ ದೇವಸ್ಥಾನ  

ಮಂದಾರ್ತಿ ಎರಡನೇ ಮೇಳ   ==  ಮಂದಾರನಿಲಯ ಕಳಿನಜೆಡ್ಡು 74ನೇ ಉಳ್ಳೂರು 

ಮಂದಾರ್ತಿ ಮೂರನೇ ಮೇಳ  ==   ಸುಳುಗೋಡು ಗೌಟಾಣಿ  

ಮಂದಾರ್ತಿ ನಾಲ್ಕನೇ ಮೇಳ   ==  ಚಂದ್ರಗಿರಿ ಎಸ್ಟೇಟ್, ಗೌರಿಗುಂಡಿ ಸಂಗಮೇಶ್ವರಪೇಟೆ 

ಮಂದಾರ್ತಿ    ಐದನೇ ಮೇಳ  ==  ಯಶೋದಾ ನಿಲಯ ಪಡುಮಾನಂಬಳ್ಳಿ ಮಧುವನ 

ಶ್ರೀ ಹನುಮಗಿರಿ ಮೇಳ  ==  ಶರವು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ  – ಶುಕ್ರನಂದನೆ (ಸಂಜೆ 5.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ತುಂಬ್ರಿ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಚಿಕ್ಕಾಡಿ ಅಂಡಾರು = ಶ್ರೀ ಪೆರ್ಡೂರು ಕ್ಷೇತ್ರ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ  ==   ತಿರುವೈಲ್ ಬಿರ್ನಮಾರ್ ಗದ್ದೆ – ಶ್ರೀ ದೇವಿ ಪಂಚಾಮೃತ 

ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ದೇಂತಡ್ಕ – ಭಾರ್ಗವ ವಿಜಯ (ರಾತ್ರಿ 7ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೂಡಾಡಿ, ಕಾಲ್ತೋಡು

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ಮೂಡಾಡಿ, ಕಾಲ್ತೋಡು

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಉಳ್ಳೂರು – 11 

ಶ್ರೀ ಪಾವಂಜೆ ಮೇಳ  ==  ಶ್ರೀ ಭಗವತಿ ಕ್ಷೇತ್ರ, ಪನ್ನೆಬೀಡು, ಕೇರ್ಪಳ ಸುಳ್ಯ  – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಹುಣಸೆಕೆರೆ ನಾಗಬನ ಗುಂಡ್ಮಿ (ಕಾಲಮಿತಿ)

ಕಮಲಶಿಲೆ ಮೇಳ ‘ಎ‘ = ಗೋಳಿಬೈಲು, ದೋಣಿಹಕ್ಲು  

ಕಮಲಶಿಲೆ ಮೇಳ ‘ಬಿ‘ ==  ಕಾರ್ಕಡ 

ಶ್ರೀ ಬಪ್ಪನಾಡು ಮೇಳ == ಮಿಜಾರು ಕೊಪ್ಪದಕುಮೇರ್ ಶಾಲಾ ವಠಾರ – ಬಂಗಾರ್ ಬಾಲೆ(ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಲ್ಲೂರು ಕಿನ್ನಿಕಟ್ಟ ಅಂಡೆಬಲ್ಲಿ – ಅತಿ ನೂತನ ಪ್ರಸಂಗ (ತುಳು)

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಉದ್ದಿನಕೆರೆ 

ಶ್ರೀ ಬೋಳಂಬಳ್ಳಿ ಮೇಳ==  ಮುದೂರು (ಕಾಲಮಿತಿ)

ಶ್ರೀ ಸೌಕೂರು ಮೇಳ ==  ಯಡ್ತಾಡಿ ಬೀಡಿನಮನೆ ಶ್ರೀ ವಿರೂಪಾಕ್ಷ ದೇವಸ್ಥಾನ – ನೂತನ ಪ್ರಸಂಗ    

ಶ್ರೀ ಹಾಲಾಡಿ ಮೇಳ == ಮತ್ತಿಕೈ ಶಾಲಾ ವಠಾರ – ರುದ್ರಕೋಪ, ಕನಕಾಂಗಿ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಉದಯಗಿರಿ ಕಾಂತರಗೋಳಿ ಯರ್ಲಪಾಡಿ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಮೈರ್ಕೊಮೆ (ಕೊಕ್ಕರ್ಣೆ) – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೆಣ್ಣೆಕುದ್ರು ಕುದ್ರುಮನೆ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ವೇಣೂರು ಪಡಂಗಡಿ ಶ್ರೀ ಅಯ್ಯಪ್ಪ ಮಂದಿರದ ಬಳಿ – ಪವಿತ್ರ ಫಲ್ಗುಣಿ  

ಶ್ರೀ ಶನೀಶ್ವರ ಮೇಳ ==  ಹಾಲಾಡಿ 

ಶ್ರೀ ಸಿಗಂದೂರು ಮೇಳ == ಶಂಕರನಾರಾಯಣ ಕಾಲೇಜು ಸಮೀಪ ನೀರ್ಜೆಡ್ಡು  

ಶ್ರೀ ನೀಲಾವರ ಮೇಳ  == ಜಟ್ಟಿಗೇಶ್ವರ ಕರಿಬೆಟ್ಟಿನ ಹಾಯಿಗುಳಿ ಸಪರಿವಾರ ದೈವಸ್ಥಾನ ಉಪ್ಪರಹಳ್ಳಿ, 11ನೇ ಉಳ್ಳೂರು – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೆಮ್ಮನೆ 

ಶ್ರೀ ಮೇಗರವಳ್ಳಿ ಮೇಳ == ಹೆಗ್ಗರ್ಸೆ ಇಟ್ಟಕ್ಕಿ – ಮಧುರ ಮನಸ್ವಿ  

ಯಕ್ಷಗಾನ ತರಭೇತಿ ಶಿಬಿರದ ವಿದ್ಯಾರ್ಥಿಗಳು ಪ್ರದರ್ಶಿಸಿದ “ ಕೃಷ್ಣಗಾರುಡಿ” ಯಕ್ಷಗಾನ


ನಿನ್ನೆ ದಿನಾಂಕ 20-03-2021 ರ ಸಂಜೆ ಚಿಕ್ಕಲ್ಲಸಂದ್ರದ ಕೆ ಎಸ್ ಆರ್ ಟಿ ಸಿ ಬಡಾವಣೆಯ ಶ್ರೀ ಸಿದ್ಧಿ ಗಣಪತಿ ದೇವಾಲಯದ ಮನೋರಂಜಿನಿ ಸಭಾಂಗಣದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ನಡೆಸಿದ 2020-21 ರ ಸಾಲಿನ ಯಕ್ಷಗಾನ ತರಭೇತಿ ಶಿಬಿರದ ವಿದ್ಯಾರ್ಥಿಗಳು ಡಾ. ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಪ್ರದರ್ಶಿಸಿದ “ ಕೃಷ್ಣಗಾರುಡಿ” ಯಕ್ಷಗಾನದ ಪ್ರದರ್ಶನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಆಯುರ್ವೇದ ಪ್ರತಿಷ್ಟಾನ ದ ಅಧ್ಯಕ್ಷರಾದ ಡಾ. ಸಿ ಎ ಕಿಶೋರ್ ಮಾತನಾಡುತ್ತಾ ನಮ್ಮ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನವು ಹಲವಾರು ಪೌರಾಣಿಕ ಕಥೆಗಳನ್ನು ಮನದಟ್ಟು ಮಾಡಿಕೊಡುವುದರಲ್ಲಿ ಅಲ್ಲದೇ ನೀತಿ ಸಾರವನ್ನು ತಿಳಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರಲ್ಲಿ ಒಂದು ಪರಿಣಾಮಕಾರಿ ಕಲಾಮಾಧ್ಯಮವಾಗಿದ್ದು ಮಕ್ಕಳನ್ನು ಇಂತಹ ಕಲೆಗಳಲ್ಲಿ ತೊಡಗಿಸಿ ಒಂದು ಒಳ್ಳೆಯ ಕೆಲಸವನ್ನು ಕಲಾಕದಂಬ ಸಂಸ್ಥೆಯು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಮತ್ತೊಬ್ಬ ಅತಿಥಿ ಚಂದನ ವಾಹಿನಿಯ ನಿರೂಪಕಿ ಸ್ನೇಹಾ ನೀಲಪ್ಪಗೌಡ ಮಾತನಾಡುತ್ತ ಯಕ್ಷಗಾನ ಒಂದು ಗಂಡುಮೆಟ್ಟಿನ ಕಲೆಯಾಗಿದ್ದರು ಹೆಚ್ಚೆಚ್ಚು ಹೆಣ್ಣುಮಕ್ಕಳು ಈ ಕಲೆಯಲ್ಲಿಆಸಕ್ತಿ ತೋರಿಸಿ ಯಶಸ್ಸನ್ನು ಕಾಣುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಎಲ್ಲಾ ದೃಷ್ಯ ಮಾಧ್ಯಮಗಳು ಇಂತಹ ಒಂದು ಪ್ರಾಚೀನ ಕಲೆಯ ಪ್ರಸಾರಕ್ಕೆ ಹೆಚ್ಚು ಒತ್ತು ಕೊಟ್ಟು ಈ ಕಲೆಯ ಬೆಳವಣಿಗೆಗೆ ಸಹಕರಿಸಬೇಕು ಅಲ್ಲದೇ ಯಕ್ಷಗಾನದಲ್ಲಿ ರೈತಾಪಿ ವರ್ಗದವರ ಕುರಿತ ಕಥೆಗಳನ್ನು ಅಳವಡಿಸಿ ಪ್ರದರ್ಶಿಸುವ ನಿಟ್ಟಿನಲ್ಲಿ ಕಲಾಕದಂಬ ಸಂಸ್ಥೆಯು ಪ್ರಯತ್ನ ಪಡಲಿ ಎಂದು ಹಾರೈಸಿದರು.

ಕಲಾಕದಂಬದ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳರು ಕಲಾಕದಂಬ ಸಂಸ್ಥೆಯು ನಡೆದು ಬಂದ ದಾರಿ ಮುಂದಿನ ಯೋಜನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ವೇದಿಕೆಯಲ್ಲಿ ನಿರೂಪಕರಾದ ಕೆ.ಎನ್.ಅಡಿಗರು ಹಾಗೂ ಶ್ರೀ ಸಿದ್ಧಿ ಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಶ್ರಿ ಸಚ್ಚಿದಾನಂದ ಮೂರ್ತಿಯವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಮುರಳೀಧರ ನಾವಡ ನಿರ್ವಹಿಸಿದರು.

ಕೃಷ್ಣನಾಗಿ ಏಳರ ವಯಸ್ಸಿನ ಚಿತ್ಕಲ ಐತಾಳ್ ತನ್ನ ಕುಣಿತ ಹಾಗೂ ಅಭಿನಯದ ಮೂಲಕ ಗಮನ ಸೆಳೆದಳು. ಧರ್ಮರಾಯನಾಗಿ ಅನರ್ಘ್ಯ ಆಚಾರ್ಯ, ಭೀಮನಾಗಿ ವರ್ಷ, ಅರ್ಜುನನಾಗಿ ಶುಭದ, ನಕುಲ ಹಾಗೂ ಸಹದೇವರಾಗಿ ಶ್ರೀಹರಿ ಹೆಬ್ಬಾರ್ ಹಾಗೂ ಶ್ರೀ ವತ್ಸಹೆಗ್ದೆ, ನಾರದನಾಗಿ ಜಾಹ್ನವಿ ಕಾಮತ್, ಮೋಹಿನಿಯಾಗಿ ಪ್ರಣತಿ ಭಟ್, ಘೋರ ಮೋಹಿನಿಯಾಗಿ ಶರಣ್ಯ ಜಿ ರಾವ್ ಹಾಗೂ ಗಾರುಡಿಗಳಾಗಿ ಪೂಜಾ ಆಚಾರ್ಯ, ಪ್ರತೀಕ್ ಆಚಾರ್ಯ,ನಿತ್ಯಾ ಗೌಡ, ಚಿರಾಗ್, ತೇಜಸ್ ಪ್ರಶಂಸೆಗೆ ಪಾತ್ರರಾದರು.

ಈ ಒಂದು ಯಕ್ಷಗಾನ ಪ್ರಸಂಗಕ್ಕೆ ಹಿಮ್ಮೇಳ ಧ್ವನಿ ಮುದ್ರಣದಲ್ಲಿ ಭಾಗವತರಾಗಿ ಸುಬ್ರಾಯ ಹೆಬ್ಬಾರ್, ಮದ್ದಲೆಯಲ್ಲಿ ಅನಂತ ಪದ್ಮನಾಭ್ ಪಾಠಕ್ ಹಾಗೂ ಚಂಡೆಯಲ್ಲಿ ಶ್ರೀನಿವಾಸ ಪ್ರಭು ಸಹಕರಿಸಿದರು.


ಯಕ್ಷಗಾನ ಕಾರ್ಯಕ್ರಮಕ್ಕೂ ಮೊದಲು ಕಲಾಕದಂಬ ಆರ್ಟ್ ಸೆಂಟರ್ ನ ಕಲಾಗುಡಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಂಟಕಿ ಕಸಾಸುರ ಎನ್ನುವ ಪ್ರಹಸನವು ಮೆಚ್ಚುಗೆಯನ್ನು ಪಡೆಯುವುದರಲ್ಲಿ ಯಶಸ್ವೀಯಾಯಿತು. ನೇಪಥ್ಯದಲ್ಲಿ ವಿಶ್ವನಾಥ ಉರಾಳ, ಅದಿತಿ ಉರಾಳ, ಮಧುಮಿತ, ರಜತ್, ಸುರೇಶ್, ಪವನ್ ಸಹಕರಿಸಿದರು

ವಿಶ್ವದ ಬಲಿಷ್ಠ ಸೇನಾಪಡೆ – ಭಾರತಕ್ಕೆ ನಾಲ್ಕನೇ ಸ್ಥಾನ

ರಕ್ಷಣಾ ವೆಬ್‌ಸೈಟ್ ”ಮಿಲಿಟರಿ ಡೈರೆಕ್ಟ್” ಭಾನುವಾರ ಬಿಡುಗಡೆ ಮಾಡಿದ ಅಧ್ಯಯನದ ಪ್ರಕಾರ, ಚೀನಾ ವಿಶ್ವದ ಪ್ರಬಲ ಮಿಲಿಟರಿ ಪಡೆ ಹೊಂದಿದ್ದರೆ, ಭಾರತ ನಾಲ್ಕನೇ ಸ್ಥಾನದಲ್ಲಿದೆ. ಚೀನಾ ವಿಶ್ವದ ಪ್ರಬಲ ಮಿಲಿಟರಿಯನ್ನು ಹೊಂದಿದ್ದು, ಸೂಚ್ಯಂಕದಲ್ಲಿ 100 ರಲ್ಲಿ 82 ಅಂಕಗಳನ್ನು ಗಳಿಸಿದೆ ಎಂದು ಅದು ತಿಳಿಸಿದೆ.

“ಅಮೆರಿಕಾ, ತಮ್ಮ ಅಗಾಧ ಮಿಲಿಟರಿ ಬಜೆಟ್ ಹೊರತಾಗಿಯೂ, 74 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ, ರಷ್ಯಾ 69 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿ , ಭಾರತ 61 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ ಮತ್ತು ಫ್ರಾನ್ಸ್ 58 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಅಗ್ರ 10 ರೊಳಗೆ ಸ್ಥಾನ ಗಳಿಸಿದ್ದು, 43 ಅಂಕಗಳೊಂದಿಗೆ 9 ನೇ ಸ್ಥಾನದಲ್ಲಿದೆ ”ಎಂದು ಅಧ್ಯಯನ ಹೇಳಿದೆ.

ಬಜೆಟ್, ನಿಷ್ಕ್ರಿಯ ಮತ್ತು ಸಕ್ರಿಯ ಮಿಲಿಟರಿ ಸಿಬ್ಬಂದಿಗಳ ಸಂಖ್ಯೆ, ಒಟ್ಟು ಗಾಳಿ, ಸಮುದ್ರ, ಭೂಮಿ ಮತ್ತು ಪರಮಾಣು ಸಂಪನ್ಮೂಲಗಳು, ಸರಾಸರಿ ವೇತನಗಳು ಮತ್ತು ಸಲಕರಣೆಗಳ ತೂಕ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿದ ನಂತರ “ಅಂತಿಮ ಮಿಲಿಟರಿ ಶಕ್ತಿ ಸೂಚ್ಯಂಕ” ವನ್ನು ಲೆಕ್ಕಹಾಕಲಾಗಿದೆ ಎಂದು ಅಧ್ಯಯನ ಹೇಳಿದೆ.

“ಬಜೆಟ್, ಪುರುಷರು ಮತ್ತು ವಾಯು ಮತ್ತು ನೌಕಾಪಡೆಯ ಸಾಮರ್ಥ್ಯದಂತಹ ಈ ಅಂಕ‌ಗಳ ಆಧಾರದ ಮೇಲೆ, ಚೀನಾವು ಕಾಲ್ಪನಿಕ ಸೂಪರ್ ಸಂಘರ್ಷದಲ್ಲಿ ಅಗ್ರಸ್ಥಾಯಿಯಾಗಿ ಹೊರಬರಲಿದೆ ಎಂದು ಅದು ಸೂಚಿಸುತ್ತದೆ” ಎಂದು ಅದು ಉಲ್ಲೇಖಿಸಿದೆ. ವರ್ಷಕ್ಕೆ 732 ಬಿಲಿಯನ್ ಯುಎಸ್ ಡಾಲರ್ ಬಜೆಟ್ ಹೊಂದಿರುವ ವಿಶ್ವದ ಅತಿದೊಡ್ಡ ಮಿಲಿಟರಿ ವೆಚ್ಚವನ್ನು ಅಮೆರಿಕಾ ಮಾಡುತ್ತಿದೆ. ಚೀನಾ 261 ಬಿಲಿಯನ್ ಯುಎಸ್ ಡಾಲರ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು ಭಾರತವು ರಕ್ಷಣಾ ವೆಚ್ಚಗಳಿಗಾಗಿ 71 ಬಿಲಿಯನ್ ಯುಎಸ್ ಡಾಲರ್ ಖರ್ಚು ಮಾಡುತ್ತದೆ.

ಈ ಕಾಲ್ಪನಿಕ ಸಂಘರ್ಷದಲ್ಲಿ “ಚೀನಾ ಸಮುದ್ರದಿಂದ (ನೌಕಾಪಡೆ), ಅಮೆರಿಕಾ ಗಾಳಿಯ ಮೂಲಕ (ವಾಯುಪಡೆ) ಮತ್ತು ರಷ್ಯಾ ಭೂಮಿಯಿಂದ (ಭೂಸೇನೆ) ಗೆಲ್ಲುತ್ತದೆ” ಎಂದು ಅದು ಹೇಳಿದೆ.

“ಅಮೆರಿಕಾ ದಲ್ಲಿ ಒಟ್ಟು 14,141 ವಾಯುನೌಕೆಗಳಿವೆ. ರಷ್ಯಾ ಬಳಿ 4,682 ಮತ್ತು ಚೀನಾ 3,587 ಯುದ್ಧವಿಮಾನಗಳನ್ನು ಹೊಂದಿದೆ.

ರಷ್ಯಾದ ಒಕ್ಕೂಟವು 54,866 ಭೂಸೇನಾ ವಾಹನಗಳನ್ನು ಅಮೆರಿಕಾ 50,326 ವಾಹನಗಳನ್ನು ಮತ್ತು ಚೀನಾ 41,641 ಸೇನಾವಾಹನಗಳನ್ನು ಹೊಂದಿದೆ.

ಚೀನಾ 406 ಹಡಗುಗಳೊಂದಿಗೆ ರಷ್ಯಾ 278 ಮತ್ತು ಅಮೆರಿಕಾ ಮತ್ತು ಭಾರತ 202 ಹಡಗುಗಳನ್ನು ಹೊಂದಿದೆ.

ಫರೀದಾ ತರೀನ್ ಗೆ 36 ದಿನಗಳಲ್ಲಿ 4 ವರ್ಗಾವಣೆ

ಪಾಕಿಸ್ತಾನ ಅಧಿಕಾರಿ ಫರೀದಾ ತರೀನ್ ಗೆ 36 ದಿನಗಳಲ್ಲಿ 4 ವರ್ಗಾವಣೆಗಳನ್ನು ಮಾಡಲಾಗಿದೆ. ಆದರೆ ಇಮ್ರಾನ್ ಸರ್ಕಾರ ಈ ಪ್ರಕರಣದಲ್ಲಿ ತನ್ನ ಪಕ್ಷಪಾತವನ್ನು ನಿರಾಕರಿಸಿದೆ.

ಬಲೂಚಿಸ್ತಾನದ ಮಹಿಳಾ ಅಧಿಕಾರಿ ಫರೀದಾ ತರೀನ್ 36 ದಿನಗಳಲ್ಲಿ ನಾಲ್ಕು ವರ್ಗಾವಣೆಗಳಿಗೆ ಒಳಗಾಗಿದ್ದಾರೆ. ಫೆಬ್ರವರಿ 11 ರಿಂದ ಮಾರ್ಚ್ 16 ರವರೆಗೆ 4 ವಿಭಿನ್ನ ಸ್ಥಾನಗಳಿಗೆ ಆಕೆಯನ್ನು ವರ್ಗಾವಣೆ ಮಾಡಲಾಯಿತು. ಬಲೂಚಿಸ್ತಾನದ ಮಹಿಳಾ ಅಧಿಕಾರಿ ಫರೀದಾ ತರೀನ್ 36 ದಿನಗಳಲ್ಲಿ ನಾಲ್ಕು ವರ್ಗಾವಣೆಗಳಿಗೆ ಒಳಗಾಗಿದ್ದಾರೆ ಎಂದು ಎಎನ್‌ಐ ವರದಿಯಲ್ಲಿ ತಿಳಿಸಲಾಗಿದೆ.

ಪಾಕ್ ಅಧಿಕಾರಿ ಮೊದಲು ಫೆಬ್ರವರಿ 11 ರಂದು ಸಹಾಯಕ ಆಯುಕ್ತ ಕ್ವೆಟ್ಟಾ ಆಗಿ ನೇಮಕಗೊಂಡರು. ಮರುದಿನ ಅವರ ನೇಮಕಾತಿಯನ್ನು ರದ್ದುಪಡಿಸಲಾಯಿತು, ಮತ್ತು ಫೆಬ್ರವರಿ 16 ರಂದು ಅವರನ್ನು ಆಡಳಿತ ವಿಭಾಗದಲ್ಲಿ ಸೆಕ್ಷನ್ ಆಫೀಸರ್ ಥ್ರೀ ಆಗಿ ನೇಮಿಸಲಾಯಿತು. ತರುವಾಯ, ಫೆಬ್ರವರಿ 25 ರಂದು, ಅವರನ್ನು ಸೇವೆಗಳು ಮತ್ತು ಸಾಮಾನ್ಯ ಆಡಳಿತ ವಿಭಾಗದಲ್ಲಿ ಸೆಕ್ಷನ್ ಆಫೀಸರ್ ಒನ್ ಆಗಿ ನೇಮಿಸಲಾಯಿತು. ಅದರ ನಂತರ ಮಾರ್ಚ್ 16 ರಂದು ಆಕೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ಅಧಿಕಾರಿಯಾಗಿ ನೇಮಿಸಲಾಯಿತು ಎಂದು ವರದಿಗಳು ತಿಳಿಸಿವೆ.

ಸರ್ಕಾರದ ವಕ್ತಾರರು ಅಧಿಕಾರಿಯ ವಿರುದ್ಧ ತಾರತಮ್ಯದ ಪ್ರಕರಣವನ್ನು ನಿರಾಕರಿಸಿದರೂ, ಪಾಕಿಸ್ತಾನದ ಮಹಿಳೆಯರು ದೈನಂದಿನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಸಾಕ್ಷ್ಯಗಳು ತೋರಿಸುತ್ತವೆ. ಪಾಕಿಸ್ತಾನವನ್ನು ಗ್ಲೋಬಲ್ ಜೆಂಡರ್ ಗ್ಯಾಪ್ ಇಂಡೆಕ್ಸ್ 2018 ಮಹಿಳೆಯರಿಗಾಗಿ ವಿಶ್ವದ ಆರನೇ ಅತ್ಯಂತ ಅಪಾಯಕಾರಿ ರಾಷ್ಟ್ರವೆಂದು ಪರಿಗಣಿಸಿದೆ ಮತ್ತು ಲಿಂಗ ಸಮಾನತೆಯ ದೃಷ್ಟಿಯಿಂದ ವಿಶ್ವದ ಎರಡನೇ ಅತ್ಯಂತ ಕೆಟ್ಟ ದೇಶವಾಗಿದೆ (148 ನೇ ಸ್ಥಾನ) ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತೆ ಅನಿಲಾ ಗುಲ್ಜಾರ್ ‘ಪಾಕಿಸ್ತಾನ ಮತ್ತು ಚೀನಾದಲ್ಲಿ ಮಹಿಳೆಯರ ಜೀವನ’ ಎಂಬ ಲೇಖನವೊಂದರಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದ ಮಹಿಳೆಯರು ಕೆಲಸದ ಸ್ಥಳದಲ್ಲಿ, ಬೀದಿಯಲ್ಲಿ ಮತ್ತು ಕುಟುಂಬದಲ್ಲಿ ಪುರುಷ ಕುಟುಂಬ ಸದಸ್ಯರಿಂದ ಲೈಂಗಿಕ ಕಿರುಕುಳವನ್ನು ಎದುರಿಸುತ್ತಾರೆ ಎಂದು ಗುಲ್ಜಾರ್ ಹೇಳಿದ್ದಾರೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಂಕಿಅಂಶಗಳ ಪ್ರಕಾರ ಪುರುಷ ಮತ್ತು ಮಹಿಳಾ ಉದ್ಯೋಗಿಗಳ ನಡುವಿನ ಅಂತರವು ವಿಶ್ವದಲ್ಲೇ ಅತ್ಯಂತ ಹಿರಿದಾಗಿದೆ. ಒಂದೇ ರೀತಿಯ ನೌಕರಿಯಾದರೂ ಪಾಕಿಸ್ತಾನದ ಮಹಿಳೆಯರು ಪುರುಷರಿಗಿಂತ ಶೇಕಡಾ 34 ರಷ್ಟು ಕಡಿಮೆ ಆದಾಯ ಗಳಿಸುತ್ತಾರೆ.

ಮೇಳಗಳ ಇಂದಿನ ( 21.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 21.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಹರಿದ್ರಾವತಿ ಹೀಲ್ಗೋಡು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಪಡಂಗಡಿ ಒಡಿಲು 

ಕಟೀಲು ಎರಡನೇ ಮೇಳ ==  ಅಂಬೋಡಿಮಾರ್, ಬಡಗಬೆಳ್ಳೂರು 

ಕಟೀಲು ಮೂರನೇ ಮೇಳ= ಸ್ವಪ್ನನಗರ, ಮುಲುಂಡ್ ಬಪ್ಪನಾಡು ಮುಲ್ಕಿ 

ಕಟೀಲು ನಾಲ್ಕನೇ ಮೇಳ  == ಅಜಿಲಮೊಗರು ಸರಪಾಡಿ ಬಂಟ್ವಾಳ 

ಕಟೀಲು ಐದನೇ ಮೇಳ ==  ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ 

ಕಟೀಲು ಆರನೇ ಮೇಳ == ‘ ‘ಮುತ್ತುಶ್ರೀ’, ತಡಂಬೈಲ್ ಸುರತ್ಕಲ್ 

ಮಂದಾರ್ತಿ ಒಂದನೇ ಮೇಳ  == ಪಾರ್ವತೀ ನಿಲಯ ಕಾವ್ರಾಡಿ ನೆಲ್ಲಿಕಟ್ಟೆ 

ಮಂದಾರ್ತಿ ಎರಡನೇ ಮೇಳ   ==  ಹೊಸಬೀಡು ಕರಿಮನೆ ನಿಲ್ಸ್ ಕಲ್ 

ಮಂದಾರ್ತಿ ಮೂರನೇ ಮೇಳ  ==   ಹೊಸಮನೆ ಕಂಪ ತೆಂಗಿನಕೊಪ್ಪ 

ಮಂದಾರ್ತಿ ನಾಲ್ಕನೇ ಮೇಳ   ==  ರೋಟರಿ ಸರ್ಕಲ್ ಬಾಳೆಹೊನ್ನೂರು ಎನ್.ಆರ್.ಪುರ  

ಮಂದಾರ್ತಿ    ಐದನೇ ಮೇಳ  ==  ಚಿಕ್ಕಹಳ್ಳಿ, ಹರಳೀಮಠ ಹಾರೋಗುಳಿಗೆ 

ಶ್ರೀ ಹನುಮಗಿರಿ ಮೇಳ  ==  ರವೀಂದ್ರ ಕಲಾಕ್ಷೇತ್ರ, ಬೆಂಗಳೂರು – ಶುಕ್ರನಂದನೆ (ಮಧ್ಯಾಹ್ನ 2ರಿಂದ)

ಶ್ರೀ ಸಾಲಿಗ್ರಾಮ ಮೇಳ == ಬರ್ಗಿ ಹೊಸಗದ್ದೆ ಜಟ್ಟಿಗೇಶ್ವರ ದೇವಸ್ಥಾನ (ಉ.ಕ) – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಚಿಕ್ಕಾಡಿ ಅಂಡಾರು = ಶ್ರೀ ಪೆರ್ಡೂರು ಕ್ಷೇತ್ರ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ  ==   ವಗ್ಗ, ಕುಂಟಲ್ ಪಲ್ಕೆ – ಸರ್ಪ ಸಂಬಂಧ 

ಶ್ರೀ ದೇಂತಡ್ಕ ಮೇಳ == ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ, ಮಾಡತ್ತಾರು ಪೆರ್ನೆ   – ಕಾರ್ಣಿಕದ ಸ್ವಾಮಿ ಕೊರಗಜ್ಜ (ರಾತ್ರಿ 7ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಡಾಬೆಟ್ಟು ಹೊಸಮನೆ ಕೆದೂರು   

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾಡಿನಕೊಂಡ ಮೂಡ್ಲಕಟ್ಟೆ  

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಕಡಾಟೆ ಖಾನಾವಳಿ, ಕಾಲ್ತೋಡು 

ಶ್ರೀ ಪಾವಂಜೆ ಮೇಳ  ==  ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಬೊಬ್ಬರ್ಯೆಶ್ವರ ದೈವಸ್ಥಾನ, ಕೊಯಿಕೂರು ಮಣೂರು – ದಿವ್ಯ ಸನ್ನಿಧಿ 

ಕಮಲಶಿಲೆ ಮೇಳ ‘ಎ‘ = ಮುತ್ತಿನಕೊಪ್ಪ 

ಕಮಲಶಿಲೆ ಮೇಳ ‘ಬಿ‘ == ಹೊನ್ಕಲು ಬೆಳ್ವೆ 

ಶ್ರೀ ಬಪ್ಪನಾಡು ಮೇಳ == ಬೆಳಂದೂರು ಕಟ್ಟೆ – ಬಂಗಾರ್ ಬಾಲೆ(ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಕತ್ತಲ್ ಸಾರ್ ಪಡುಪೆರಾರ ಕಟ್ಟಸ್ಥಾನದ ಮುಂಭಾಗ – ಪುಣ್ಣಮೆದ ಪೊಣ್ಣು  

ಶ್ರೀ ಅಮೃತೇಶ್ವರೀ ಮೇಳ == ನಾಡಗುಡ್ಡೆಯಂಗಡಿ 

ಶ್ರೀ ಬೋಳಂಬಳ್ಳಿ ಮೇಳ==  ಗೋಳಿಹೊಳೆ – (ಕಾಲಮಿತಿ)

ಶ್ರೀ ಸೌಕೂರು ಮೇಳ ==  ಕೋಟೇಶ್ವರ, ಮಾರ್ಕೋಡು – ಚೆಲುವೆ ಚಿತ್ರಾವತಿ   

ಶ್ರೀ ಹಾಲಾಡಿ ಮೇಳ == ನಾಗಯಕ್ಷ ದೇವಸ್ಥಾನ ಹುಂಚರೋಡ್ – ಸುದರ್ಶನ ವಿಜಯ, ಅಭಿಮನ್ಯು(ದೊಂದಿ ಬೆಳಕು), ಕನಕಾಂಗಿ ಕಲ್ಯಾಣ  

ಶ್ರೀ ಬೆಂಕಿನಾಥೇಶ್ವರ ಮೇಳ  ==  ಶಿಬರೂರು ಶ್ರೀ ಕೊರಗಜ್ಜ ಕ್ಷೇತ್ರ, ರಾಜೀವನಗರ – ಸತ್ಯೊದ ಸ್ವಾಮಿ ಕೊರಗಜ್ಜ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಮೊಳಹಳ್ಳಿ ಇರ್ಜಿಕೊಡ್ಲು ಸ್ವಾಮೀ ಹಾಯಿಗುಳಿ ದೈವಸ್ಥಾನ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಗುಂಡ್ಮಿ ಮಾಣಿ ಶ್ರೀ ಚೆನ್ನಕೇಶವ ದೇವಸ್ಥಾನ – ಶ್ರೀ ಮೂಡುತಾರಿಬೇರು ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಕುದ್ಯಾಡಿ – ನಾಗ ಸಾನಿಧ್ಯ 

ಶ್ರೀ ಶನೀಶ್ವರ ಮೇಳ ==  ತೊಂಬತ್ತು ಶಾಲಾ ಗುಡ್ಡ ವಠಾರ 

ಶ್ರೀ ಸಿಗಂದೂರು ಮೇಳ == ತೀರ್ಥಳ್ಳಿ ಬೆಟ್ಟಮಕ್ಕಿ ಭೂತರಾಯ ಸೇವಾ ಸಮಿತಿ   

ಶ್ರೀ ನೀಲಾವರ ಮೇಳ  == ಶ್ರೀರಾಮ ಭಜನಾ ಮಂದಿರ, ಕಂಚಿಗೋಡು ತ್ರಾಸಿ  

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ತಲ್ಲೂರಂಗಡಿ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಬಾಳ್ ಗಾರ್ 

ಶ್ರೀ ಮೇಗರವಳ್ಳಿ ಮೇಳ == ಹಂಸ (ಕರುಣಾಪುರ) – ನೂತನ ಪ್ರಸಂಗ