Monday, September 21, 2026
Home Blog Page 328

ವಸಂತಿ ಆರ್. ಭಟ್ ಇವರಿಗೆ ‘ನಿಡಂಬೂರು ಶ್ರೀ’ ಪ್ರಶಸ್ತಿ ಪ್ರದಾನ

ನಿಡಂಬೂರು ಮಾಗಣೆಯ ಶ್ರೇಷ್ಠ ಸಾಧಕರಿಗೆ ನೀಡುವ ‘ನಿಡಂಬೂರು ಶ್ರೀ’ ಪ್ರಶಸ್ತಿಯನ್ನು ಈ ಬಾರಿ ಕಿದಿಯೂರಿನ ಖ್ಯಾತ ವಯಲಿನ್ ವಾದಕಿ  ವಿದ್ವಾನ್ ವಸಂತಿ ರಾಮ ಭಟ್ ಇವರಿಗೆ ಏಪ್ರಿಲ್ ಹನ್ನೊಂದರಂದು ಅಂಬಲಪಾಡಿಯ ಭವಾನಿ ಮಂಟಪದಲ್ಲಿ ನಡೆದ ಮಧೂರು ಮಾಧುರ್ಯ ಸಮಾರಂಭದ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.

ವಸಂತಿ ರಾಮ ಭಟ್ ನೂರಾರು ವಿದ್ಯಾರ್ಥಿಗಳಿಗೆ ಬಹಳ ಪ್ರೀತಿಯಿಂದ ವಯಲಿನ್ ವಿದ್ಯೆಯನ್ನು  ಕಲಿಸಿ ಅವರನ್ನು ಕಲಾವಿದರನ್ನಾಗಿಸಿ ಸಮಾಜಕ್ಕೆ ನೀಡಿದ ಮಹಾನ್ ಗುರುಗಳಾಗಿದ್ದಾರೆ. ಸ್ವತಃ ಶ್ರೇಷ್ಠ ವಯಲಿನ್ ವಾದಕಿಯಾಗಿರುವ ವಸಂತಿ ಭಟ್ರು ನಮ್ಮ ನಿಡಂಬೂರು ಮಾಗಣೆ ಹೆಮ್ಮೆಪಡುವ ಸಾಧಕಿ. ಈ ಬಾರಿಯ ನಿಡಂಬೂರು ಶ್ರೀ ಪ್ರಶಸ್ತಿಯನ್ನು ಇವರಿಗೆ ನೀಡುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂಬುದಾಗಿ ಪ್ರಶಸ್ತಿಯ ಸ್ಥಾಪಕರಾದ ಡಾಕ್ಟರ್ ನಿಡಂಬೂರು ಬೀಡು ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಿ ನುಡಿದರು.

ಈ ಸಂದರ್ಭದಲ್ಲಿ ಡಾಕ್ಟರ್ ಅರ್ಜುನ್ ಬಲ್ಲಾಳ್, ಡಾಕ್ಟರ್ ಶ್ರುತಿ ಅರ್ಜುನ್ ಬಲ್ಲಾಳ್, ವಿದ್ವಾನ್ ಮದ್ವೇಶ ಭಟ್ ಹಾಗೂ  ಶ್ರೀಮತಿ ಜ್ಯೋತಿ ಸತೀಶ್ ಭಟ್ ಉಪಸ್ಥಿತರಿದ್ದರು. ಕಳೆದ ಬಾರಿ ಈ ಪ್ರಶಸ್ತಿಯನ್ನು ಅಂಬಲಪಾಡಿಯ ಹಿರಿಯ ಸಮಾಜಸೇವಕರಾದ ವಿಶು ಶೆಟ್ಟಿ ಅವರಿಗೆ ನೀಡಲಾಗಿತ್ತು.

ಮನ ಮುಟ್ಟಿದ ಹಿಮ್ಮೇಳ ಕಲಾವಿದರ “ಕರ್ಣ ಭೇದನ”

ಮನ ಮುಟ್ಟಿದ “ಕರ್ಣ ಭೇದನ” ಕಣ್ಣಿಗೆ ಕಟ್ಟುವ ಹಾಗೂ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ಪ್ರಸ್ತುತ ಗೊಂಡಿದ್ದು ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದರಾದ ದೇವರಾಜ ಕರಬರ ಸಂಯೋಜನೆಯಲ್ಲಿ ಡಾ. ರಾಧಾಕೃಷ್ಣ ಉರಾಳರ ನಿರ್ದೇಕಶಕತ್ವದ ಕಲಾಕದಂಬ ಆರ್ಟ್ ಸೆಂಟರ್ ನಿನ್ನೆ (ದಿನಾಂಕ 10-04-2021) ಉಲ್ಲಾಳ ಉಪನಗರದ ವಿಶ್ವೇಶ್ವರಯ್ಯ ಬಡಾವಣೆಯ 4 ನೇ ವಿಭಾಗದ ಕಲಾಗುಡಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ “ಗುಡಿ ನಡೆ” ಶೀರ್ಷಿಕೆಯ ವಿಶಿಷ್ಟ ಪರಿಕಲ್ಪನೆಯ ಶ್ರೀ ದೇವಿದಾಸ ವಿರಚಿತ ‘ಕರ್ಣ ಭೇದನ’ ತಾಳಮದ್ದಲೆಯಲ್ಲಿ.

ಈ ಒಂದು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಹಿರಿಯ ಪತ್ರಕರ್ತರಾದ ರವೀಂದ್ರ ಜಿ ಭಟ್ ಯಕ್ಷಗಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ಶಿವರಾಮ ಕಾರಂತರ ಕಾಲದಿಂದಲೂ ನಡೆಯುತ್ತಿದೆ. ಇದಕ್ಕೆ ಹಲಾವಾರು ವಿರೋಧಗಳು ವ್ಯಕ್ತವಾದರೂ ಯಕ್ಷಗಾನ ಚೌಕಟ್ಟಿನಲ್ಲಿ ಅದನ್ನು ಅಳವಡಿಸಿದರೆ ತಪ್ಪಿಲ್ಲ . ಅಲ್ಲದೇ ನಮ್ಮ ನಾಡಿನ ಹಲವಾರು ಕವಿಗಳ ಕವಿತೆಗಳನ್ನೂ ಕೂಡ ಯಕ್ಷಗಾನ ಸಂಗೀತಕ್ಕೆ ಅಳವಡಿಸುವ ಪ್ರಯತ್ನವೂ ಆಗಲಿ ಎಂದು ಹಾರೈಸಿದರು.

ಮತ್ತೊಬ್ಬ ಅತಿಥಿ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ಮುಖ್ಯಸ್ಥರೂ ಗೋಪಾಲ ಕೃಷ್ಣ ಅಡಿಗರ ಸಹೋದರರು ಆದ ಜಯರಾಮ ಅಡಿಗರು ಮಾತನಾಡಿ ಕವಿ ಗೋಪಾಲ ಕೃಷ್ಣ ಅಡಿಗರು ಯಕ್ಷಗಾನದ ಸೊಗಡಿನ ಛಾಯೆಯ ಹಲವಾರು ಕವನಗಳನ್ನು ರಚಿಸಿದರು. ಆ ಮೂಲಕ ಸಮಾಜದ ಅಂಕುಡೊಂಕುಗಳನ್ನು ಎತ್ತಿ ತೋರಿಸಿದರು. ಹಾಗಾಗಿ ಯಕ್ಷಗಾನದ ಮೂಲಕ ಸಮಾಜದ ಜಾಗೃತಿ ಕೂಡ ಸಾಧ್ಯ ಎಂದು ಅಭಿಪ್ರಾಯಪಟ್ಟದಲ್ಲದೆ ಕಲಾಕದಂಬ ಆರ್ಟ್ ಸೆಂಟರ್ ನ ಈ ಒಂದು ವಿಶಿಷ್ಟ ಪ್ರಯತ್ನ ಯಶಸ್ವೀಯಾಗಲಿ ಎಂದು ಹಾರೈಸಿದರು.

ಮತ್ತೊಬ್ಬ ಅತಿಥಿ ಹಿರಿಯ ಕಲಾವಿದರಾದ ಶ್ರೀ ಸೂರ್ಯನಾರಾಯಣರವರು ರಂಗಭೂಮಿಗೂ ಯಕ್ಷಗಾನಕ್ಕೂ ವಿಶಿಷ್ಟ ನಂಟಿದೆ, ಪ್ರಾಕಾರಗಳು ಬೇರೆಯಾದರು ಜನರ ಮನಮುಟ್ಟುವಲ್ಲಿ ಒಂದು ಯಶಸ್ವೀ ಕಲಾಮಾಧ್ಯಮ ಎಂದರಲ್ಲದೇ ಈ ಬಡಾವಣೆಯಲ್ಲಿ ಕಲಾಕದಂಬ ಆರ್ಟ್ ಸೆಂಟರ್ ಸಾಂಸ್ಕೃತಿಕ ಲೋಕವನ್ನು ತೆರೆಯುವಲ್ಲಿ ಯಶಸ್ವೀಯಾಗಲಿ ಈ ಗುಡಿ ನಡೆ ಪ್ರತಿ ಮನೆ ಮನಗಳನ್ನು ಬೆಳಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಯಕ್ಷಗಾನ ಕಲಾವಿದರಾದ ವಿದ್ವಾನೆ ಎ.ಪಿ.ಪಾಟಕ್ ಹಾಗು ಈ ಕಾರ್ಯಕ್ರಮದ ಸಂಯೋಜಕರಾದ ದೇವರಾಜ ಕರಬರು ಉಪಸ್ಥಿತರಿದ್ದರು.


ಕೃಷ್ಣನಾಗಿ ಹಾಗೂ ಮದ್ದಲೆಯ ವಾದಕರಾಗಿ ಡಾ.ಪ್ರದೀಪ್ ಸಾಮಗ ತಮ್ಮ ತಂದೆಯವರಾದ ಯಕ್ಷಗಾನದ ಪ್ರಸಿದ್ದ ಕಲಾವಿದರಾದ ದಿವಂಗತ ವಾಸುದೇವ ಸಾಮಗರ ನೆನಪಿಸುವ ರೀತಿಯಲ್ಲಿ ತಮ್ಮ ಮಾತಿನ ಮೂಲಕ ಮೋಡಿ ಮಾಡಿದರು ಅಲ್ಲದೇ ತಮ್ಮ ಮಾತಿನೊಂದಿಗೆ ಮದ್ದಲೆಯ ನಿನಾದವನ್ನು ಹರಿಸಿ ತಮ್ಮ ವಿಶಿಷ್ಟ ಪ್ರತಿಭೆಯನ್ನು ಮೆರೆದರು.

ಕರ್ಣನ ಅಸಹಾಯಕತೆ ಆತನ ಮಿತ್ರತ್ವದ ಮಹತ್ವವನ್ನು ವ್ಯಕ್ತಪಡಿಸಿದವರು ಪತ್ರಕರ್ತರು ಹಾಗೂ ಯಕ್ಷಗಾನ ಕಲಾವಿದರೂ ಆದ ಅಂಬರೀಷ್ ಭಟ್. ತಮ್ಮ ಸುಲಲಿತ ತೂಕಭರಿತ ಮಾತುಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸಿದಲ್ಲದೆ ಪ್ರೇಕ್ಷಕರ ಕಣ್ಣಂಚಿನಲ್ಲಿ ಕಣ್ಣೀರು ಜಿನುಗುವಂತೆ ಮಾಡಿದ್ದು ಕರ್ಣನು ಜನಮಾನಸದಲ್ಲಿ ಎಷ್ಟು ಪ್ರಭಾವ ಬೀರಿದ್ದಾನೆಂಬುದು ಸಾಕ್ಷೀಕರಿಸಿತು.

ಸೂರ್ಯ ಪಾತ್ರಧಾರಿಯಾಗಿ ವಿದ್ವಾನ್ ಎ.ಪಿ.ಪಾಠಕ್ ಚಂಡೆಯನ್ನು ನುಡಿಸುತ್ತಲೇ ಆ ಪಾತ್ರದಲ್ಲಿ ತಮ್ಮನ್ನು ಲೀನವಾಗಿಸಿಕೊಂಡು ಯಕ್ಷಗಾನ ರಂಗದ ಎಲ್ಲಾ ವಿಭಾಗಗಳಲ್ಲಿಯೂ ಸೈ ಎಂಬುದನ್ನು ಎತ್ತಿ ತೋರಿಸಿದರು. ಭಾಗವತಿಕೆಯಲ್ಲಿ ಹಾಗೂ ಕುಂತಿ ಪಾತ್ರಧಾರಿಯಾಗಿ ಸುಬ್ರಾಯ ಹೆಬ್ಬಾರ್ ತಮ್ಮ ಗಾಯನ ಹಾಗೂ ತಾಯಿಯ ಮಮತೆಯ ಮಾತುಗಳಿಂದ ನೆರೆದ ಪ್ರೇಕ್ಷಕರ ಮನಸೂರೆಗೊಂಡರು. ಈ ಎಲ್ಲಾ ಕಲಾವಿದರು ತಮ್ಮ ಪಾತ್ರದೊಂದಿಗೆ ಹಿಮ್ಮೇಳದ ವಾದ್ಯ ಪರಿಕರಗಳನ್ನು ನುಡಿಸಿಕೊಂಡು ಈ ಒಂದು ಹೊಸ ಪ್ರಯೋಗದ ಯಶಸ್ಸಿಗೆ ಕಾರಣೀಭೂತರಾದರು

ಕಾರ್ಯಕ್ರಮದ ನಿರೂಪಣೆಯನ್ನು ಮುರಳೀಧರ ನಾವಡ ನಿರ್ವಹಿಸಿದರು, ನೇಪಥ್ಯದಲ್ಲಿ ವಿಶ್ವನಾಥ ಉರಾಳ, ಅದಿತಿ ಉರಾಳ, ಮಧುಮಿತ, ಜಿ.ಟಿ.ಗೌಡ, ಸುಹಾಸ್, ರಜತ್, ಮಮತ ಉರಾಳ ಸಹಕರಿಸಿದರು.

‘ರೇಡಿಯೋ ಸಾರಂಗ್’ ಸಮುದಾಯ ಬಾನುಲಿಯಲ್ಲಿ ನೆಲ-ಜಲ ಜಾಗೃತಿಯ ಯಕ್ಷಗಾನ ‘ಭೂ – ಜಲ ಸಂರಕ್ಷಣ’

ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಶ್ರಯದಲ್ಲಿ ‘ಶುದ್ಧಜಲ ಸ್ವಚ್ಛ ನೆಲ; ಆರೋಗ್ಯವಾಗಿರಲಿ ಜೀವಸಂಕುಲ’ ಎಂಬ ಘೋಷವಾಕ್ಯದೊಂದಿಗೆ ನಡೆಯುವ ಜಾಗೃತಿ ಕಾರ್ಯಕ್ರಮಗಳಲ್ಲಿ ಇದೀಗ ಯಕ್ಷಗಾನ ಮಾಧ್ಯಮವನ್ನೂ ಪ್ರಯೋಗಾತ್ಮಕವಾಗಿ ಬಳಸಿಕೊಳ್ಳಲಾಗುತ್ತಿದೆ. ನಗರದ ಸಂತ ಅಲೋಶಿಯಸ್ ಕಾಲೇಜಿನ ಸಮುದಾಯ ಬಾನುಲಿ ‘ರೇಡಿಯೋ ಸಾರಂಗ್’ 107.8 ಎಫ್.ಎಂ. ಸಿದ್ಧಪಡಿಸಿರುವ ‘ಭೂ – ಜಲ ಸಂರಕ್ಷಣ’ ಎಂಬ ಯಕ್ಷಗಾನ ಕಾರ್ಯಕ್ರಮ ಸರಕಾರದ ಆಶಯಗಳನ್ನು ಸಂದೇಶ ರೂಪದಲ್ಲಿ ಜನರಿಗೆ ತಲುಪಿಸುವ ಉದ್ದೇಶ ಹೊಂದಿದೆ.     

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಗಾನ ಅರ್ಥದಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಕಥಾ ಸಂಯೋಜನೆಗೆ ಯುವ ಪ್ರಸಂಗಕರ್ತ, ಪ್ರಾಧ್ಯಾಪಕ ಡಾ. ದಿನಕರ ಎಸ್.ಪಚ್ಚನಾಡಿ ಪ್ರಸಂಗ ರಚನೆ ಮಾಡಿದ್ದಾರೆ. ಯಕ್ಷಗಾನದ ವಿವಿಧ ಪಾತ್ರಗಳ ಮೂಲಕ ನೀರಿನ ಮಿತ ಬಳಕೆ, ಮಾಲಿನ್ಯ ತಡೆಗಟ್ಟುವಿಕೆ, ಜಲ ಮರು ಪೂರಣ, ಮಳೆ ನೀರಿನ ಸಂಗ್ರಹ, ಅಂತರ್ಜಲ ವೃದ್ಧಿ , ಸ್ವಚ್ಛತಾ ಕಾರ್ಯ, ತ್ಯಾಜ್ಯ ವಿಲೇವಾರಿ , ಸಂಸ್ಕರಣೆ,ಪರಿಸರ ರಕ್ಷಣೆ ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ‘ನೆಲ-ಜಲ ಸಂರಕ್ಷಣ’ ಎಬ ಈ ಪ್ರಸಂಗದಲ್ಲಿ ಜಿಲ್ಲೆಯ ಹೆಸರಾಂತ ಕಲಾವಿದರು ಭಾಗವಹಿಸಿದ್ದಾರೆ.


ಪಾತ್ರ ಸಂವಾದ : ಪರಿಸರ ರಕ್ಷಕ ನಂದನ, ಭಕ್ಷಕ ದುರ್ಮದ, ಜಲದೇವ ವರುಣ ಮತ್ತು ನೆಲದವ್ವ ಭೂದೇವಿಯ ಭೂಮಿಕೆಗಳಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಡಾ. ದಿನಕರ ಎಸ್.ಪಚ್ಚನಾಡಿ ಪಾತ್ರ ಸಂವಾದ ನಡೆಸಿ ಯಕ್ಷಗಾನದ ಚೌಕಟ್ಟಿನೊಳಗೆ ‘ಶುದ್ಧ ಜಲ – ಸ್ವಚ್ಛ ನೆಲ’ ಜಾಗೃತಿ ಸಂದೇಶ ನೀಡಿದ್ದಾರೆ. ಭಾಗವತ ಮತ್ತು ಸಂಗೀತ ನಿರ್ದೇಶಕ ತೋನ್ಸೆ ಪುಷ್ಕಳ ಕುಮಾರ್ ಅವರ ಹಾಡುಗಾರಿಕೆಗೆ ರೋಹಿತ್ ಉಚ್ಚಿಲ್ ಮತ್ತು ಮಯೂರ ನಾಯಗ ಚೆಂಡೆ – ಮದ್ದಳೆಗಳಲ್ಲಿ ಹಿಮ್ಮೇಳ ಒದಗಿಸಿದ್ದಾರೆ.

ಸಾರಂಗ್ ತಂಡದ ಅಭಿ಼ಷೇಕ್ ಶೆಟ್ಟಿ, ಎಡ್ವರ್ಡ್ ಲೋಬೋ, ಸೈಫುಲ್ಲಾ, ಬಿಂದಿಯಾ ಕುಲಾಲ್, ಶ್ವೇತಾ ನಿರ್ಮಾಣದಲ್ಲಿ ಸಹಕರಿಸಿದ್ದಾರೆ.   ‌‌‌‌  ‘ರೇಡಿಯೋ ಸಾರಂಗ್ 107.8 FM  ಹಾಗೂ ಯೂಟ್ಯೂಬ್ ಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುವುದೆಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಹಾಗೂ ಸಮುದಾಯ ಬಾನುಲಿ ನಿರ್ದೇಶಕ ಫಾ.ಮೆಲ್ವಿನ್ ಪಿಂಟೊ ತಿಳಿಸಿದ್ದಾರೆ.

ಮೇಳಗಳ ಇಂದಿನ (12.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (12.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಾವೂರು ತೋಡ್ಲಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀ ಕ್ಷೇತ್ರ ಕಟೀಲು ‘ಮಹಾಲಕ್ಷ್ಮಿ ಸದನ’

ಕಟೀಲು ಎರಡನೇ ಮೇಳ == ಕೆಯ್ಯರಬೈಲು ಮರಕಡ, ಮರವೂರು ಸೇತುವೆ ಬಳಿ 

ಕಟೀಲು ಮೂರನೇ ಮೇಳ== ‘ಶ್ರೀ ಕಲ್ಯಾಣಿ’ ತಡಂಬೈಲು ಸುರತ್ಕಲ್ 

ಕಟೀಲು ನಾಲ್ಕನೇ ಮೇಳ  == ‘ಆಸರೆ’ ಚೋನಾಲಿ, ಜನ್ಸಾಲೆ ಸಿದ್ಧಾಪುರ 

ಕಟೀಲು ಐದನೇ ಮೇಳ ==  ಕುಡುಪಾಲ್ ಹೌಸ್, ಪೆರಿಂಜೆ ವಯಾ ವೇಣೂರು 

ಕಟೀಲು ಆರನೇ ಮೇಳ == ಬಜಾಲು, ಕರ್ಮಾರ್ ಶ್ರೀ ಮಹಾದೇವಿ ಭಜನಾ ಮಂದಿರದ ಬಳಿ 

ಮಂದಾರ್ತಿ ಒಂದನೇ ಮೇಳ  == ಆದಿಶಕ್ತಿ ದೇವಿನಿಲಯ ಜಡ್ಡಿನಮನೆ, ಪಡಿಮಂಡು ಶಿರಿಯಾರ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಬಡಾಕಾವಡಿ, ಕಾವಡಿ 

ಮಂದಾರ್ತಿ ಮೂರನೇ ಮೇಳ  == ಆದಿಶಕ್ತಿ ದೇವಿನಿಲಯ ಜಡ್ಡಿನಮನೆ, ಪಡಿಮಂಡು ಶಿರಿಯಾರ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಹೊಸ್ಮನೆ ಹೆಮ್ಮಣ್ಣು ರಟ್ಟಾಡಿ 

ಮಂದಾರ್ತಿ ಐದನೇ ಮೇಳ  == ಹಾಡಿಮನೆ ಮೆಟ್ಟಿನಹೊಳೆ ಕಾಲ್ತೋಡು 

ಶ್ರೀ ಹನುಮಗಿರಿ ಮೇಳ  == ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶುಕ್ರನಂದನ (ರಾತ್ರಿ 6ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ‘ಗಂಧರ್ವ’ ತೋಟದಮನೆ ತ್ರಾಸಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಗಂಧರ್ವ’ ತೋಟದಮನೆ ತ್ರಾಸಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕಾಜಿಹಿತ್ಲು ಬಿಜೂರು 

ಶ್ರೀ ಪಾವಂಜೆ ಮೇಳ  ==   ಅಂಬ್ಲಮುಗೇರು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಸುಳುಗೋಡು 

ಕಮಲಶಿಲೆ ಮೇಳ ‘ಬಿ‘ ==  ದೇಲಟ್ಟು ಬೆಳೂರು 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಬೊಬ್ಬರ್ಯ ಚಿಕ್ಕಮ್ಮ ದೇವಸ್ಥಾನ ಅಡಾರುಮನೆ ಅಚ್ಲಾಡಿ 

ಶ್ರೀ ಸೌಕೂರು ಮೇಳ == ನೆಲ್ಲಿಕಟ್ಟೆ ಬಲಾಡಿ ಫ್ರೆಂಡ್ಸ್ – ಪುಷ್ಪ ಚಂದನ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಸನ್ಯಾಸಿಬಲ್ಲೆ ಕಂಚುಗೋಡು – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಪಾಂಡೇಶ್ವರ ಶ್ರೀ ರಕ್ತೇಶ್ವರಿ ನತ್ತು ನಾಗಾದಿ ಪರಿವಾರ ದೇವಸ್ಥಾನ (ಸಾಸ್ತಾನ) – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಕೊರಂಗ್ರಪಾಡಿ ಭೀಮನಗರ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಅತ್ತೂರು ಭಾರತ್ ಬೀಡಿ ಕಾಂಪೌಂಡ್ – ಪವಿತ್ರ ಫಲ್ಗುಣಿ 

ಶ್ರೀ ಸಿಗಂದೂರು ಮೇಳ ==  ಮೊಳಹಳ್ಳಿ ಉಲ್ಕೆಲ್ ಕೆರೆ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ 

ಶ್ರೀ ನೀಲಾವರ ಮೇಳ  == ಕೂಡ್ಲಿ ಶ್ರೀ ದುರ್ಗಾಂಬಾ ಗದ್ದುಗೆ ಅಮ್ಮನವರ ದೇವಸ್ಥಾನ ರಂಗನೆಕೆರೆ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಕಟ್ಟಿಹಕ್ಲು 

ಶ್ರೀ ಮೇಗರವಳ್ಳಿ ಮೇಳ == ಕಿಗ್ಗ ಕೋಗಿನ ಬೈಲ್, ಮಾಸ್ತಿ ಕೊಟ್ಟಿಗೆ – ಕಾಳಿದಾಸ, ಮಧುರ ಮನಸ್ವಿ 

ಶ್ರೀ ಹಾಲಾಡಿ ಮೇಳ == ಹೆರಟೆ ಶಾಲಾ ಮೈದಾನ – ನಾಗಶ್ರೀ, ಕನಕಾಂಗಿ 

ಶ್ರೀ ಬಪ್ಪನಾಡು ಮೇಳ == ಶಿವಗಿರಿ ಕಾಂಪ್ಲೆಕ್ಸ್ ಸಂಪಿಗೆ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ತಳಕಲ ಮೇಳ == ಮುರನಗರ – ಶಾಂಭವಿ ವಿಲಾಸ 

ಶ್ರೀ ಸುಂಕದಕಟ್ಟೆ ಮೇಳ  == ನ್ಯೂಯಿದಗೋಳಿ ಕರಿಮಣೇಲು – ಸರ್ಪ ಸಂಬಂಧ 

ಮೇಳಗಳ ಇಂದಿನ (10.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (10.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮಣಿನಾಲ್ಕೂರು ಕೊಲ್ಯ  – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀರಾಮ ಭಜನಾ ಮಂದಿರ ಕುಂಬ್ರ ವಯಾ ಪುತ್ತೂರು 

ಕಟೀಲು ಎರಡನೇ ಮೇಳ == ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ವಠಾರ 

ಕಟೀಲು ಮೂರನೇ ಮೇಳ== ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಂದಳಿಕೆ ವಯಾ ಬೆಳ್ಮಣ್ಣು 

ಕಟೀಲು ನಾಲ್ಕನೇ ಮೇಳ  == ಪಚ್ಚನಾಡಿ ಬೋಂದೆಲ್ 

ಕಟೀಲು ಐದನೇ ಮೇಳ ==  ಶ್ರೀ ಕ್ಷೇತ್ರ ಕಟೀಲು ‘ಮಹಾಲಕ್ಷ್ಮಿ ಸದನ’

ಕಟೀಲು ಆರನೇ ಮೇಳ == ಶ್ರೀ ಕ್ಷೇತ್ರ ಕಟೀಲು ‘ಸರಸ್ವತಿ ಸದನ’

ಮಂದಾರ್ತಿ ಒಂದನೇ ಮೇಳ  == ಲಕ್ಷ್ಮಿ ನಿವಾಸ ಮಠದಬೆಟ್ಟು ಹೆಬ್ರಿ 

ಮಂದಾರ್ತಿ ಎರಡನೇ ಮೇಳ   == ಬಾರಾಳಿ 

ಮಂದಾರ್ತಿ ಮೂರನೇ ಮೇಳ  == ಹಯ್ಯಂಗಾರು ಶೇಡಿಮಕ್ಕಿ ಕೆರಾಡಿ 

ಮಂದಾರ್ತಿ ನಾಲ್ಕನೇ ಮೇಳ   == ಆಮ್ರಕಲ್ಲು ಹಿಲಿಯಾಣ 

ಮಂದಾರ್ತಿ ಐದನೇ ಮೇಳ  == 76ನೇ ಬಡಗುಬೆಟ್ಟು ಬೈಲೂರು ಉಡುಪಿ 

ಶ್ರೀ ಹನುಮಗಿರಿ ಮೇಳ  == ಪ್ರತಾಪನಗರ ಶಿವಶಕ್ತಿ ಮೈದಾನ – ಹಿರಣ್ಯಾಕ್ಷ, ಕಂಸ ವಿವಾಹ , ಮಾಯಾ ಮಾರುತೇಯ(ರಾತ್ರಿ 7ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕುಂದಾಪುರ ಬೈಲ್ ಚಿಕ್ಕು ದೇವಸ್ಥಾನ ವಠಾರ(ಬಸ್ರೂರು ಮೂರುಕೈ ಬಳಿ)- ಕುಶಲವ, ರುದ್ರಕೋಪ, ಬಬ್ರುವಾಹನ ಕಾಳಗ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ಶೂದ್ರ ತಪಸ್ವಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನಂದನಮನೆ ಕಾಕ್ತೋಟ ಉಳ್ಳೂರು-11

ಶ್ರೀ ಮಾರಣಕಟ್ಟೆ ಮೇಳ ‘ಬಿ == ನಾರ್ಕಳಿ ಗುಡಿಮನೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನಾರ್ಕಳಿ ಹಕ್ಲಮನೆ

ಶ್ರೀ ಪಾವಂಜೆ ಮೇಳ  ==   ತಿರುವಾಜೆ, ಇರಾ – ಅಭಿಮನ್ಯು, ಗದಾಯುದ್ಧ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಕೂಡೇರಿ 

ಕಮಲಶಿಲೆ ಮೇಳ ‘ಬಿ‘ ==  ಸಂಪೆಕಟ್ಟೆ 

ಶ್ರೀ ಅಮೃತೇಶ್ವರೀ ಮೇಳ == ಬಾಳೆಬೆಟ್ಟು 

ಶ್ರೀ ಸೌಕೂರು ಮೇಳ == ಕೂಡ್ಲು ಯಕ್ಷೇಶ್ವರಿ ದೇವಸ್ಥಾನ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಶಾಂತಿರಾಜ ಕಾಲನಿ ಪುಚ್ಚಮೊಗರು – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ತಾರಿಕಟ್ಟೆ ಸೂರ್ಗೋಳಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಶ್ರೀ ಕ್ಷೇತ್ರ ಗೋಳಿಗರಡಿ

ಶ್ರೀ ಹಿರಿಯಡಕ ಮೇಳ == ಕಕ್ಕುಂಜೆ ಸಸಿಗೋಳಿ ನಂದಿಕೇಶ್ವರ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಸಿಗಂದೂರು ಮೇಳ ==  ಹೆಮ್ಮಾಡಿ ಹರೇಗೋಡು ಶ್ರೀ ನಂದಿಕೇಶ್ವರ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಗೋಳಿಕಟ್ಟೆ ಮುನ್ನೋಳಿಗುಜ್ಜಿ – ದೈವ ಮಂಟಪ 

ಶ್ರೀ ಮೇಗರವಳ್ಳಿ ಮೇಳ == ಶಾಂತಿನಗರ ಮಧುವನ – ಕುಲದೈವ ಪಂಜುರ್ಲಿ  

ಶ್ರೀ ಹಾಲಾಡಿ ಮೇಳ == ಆಜ್ರಿ ಮಾಂಜೂರುಮನೆ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಉಳಾಯಿಬೆಟ್ಟು – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಕ್ಷಿಕೆರೆ ಬಸ್ ನಿಲ್ದಾಣದ ಬಳಿ – ರಂಗಸ್ಥಳ 

ಶ್ರೀ ಸುಂಕದಕಟ್ಟೆ ಮೇಳ  == ಜೋಕಟ್ಟೆ – ಅಬ್ಬರದ ಬೊಬ್ಬರ್ಯ

ಶ್ರೀ ಬಾಚಕೆರೆ ಮೇಳ == ಕಳಂಜ, ವಿಷ್ಣುನಗರ ವಯಾ ಬೆಳ್ಳಾರೆ – ತುಳಸಿ ಜಲಂಧರ (ಕನ್ನಡ), ಸೂರ್ಯಕಾಂತಿ (ತುಳು)

ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ == ಮುರನಗರ – ಭಸ್ಮಾಸುರ ಮೋಹಿನಿ 

ಮಂತ್ರಾಲಯದಲ್ಲಿ ಶ್ರೀ ಮಾತಾ ಹವ್ಯಕ ಭಜನಾ ಸಂಘದ ಸದಸ್ಯರಿಂದ ಭಜನಾ ಸೇವೆ

ಶ್ರೀ ಮಾತಾ ಹವ್ಯಕ ಭಜನಾ ಸಂಘ, ಬದಿಯಡ್ಕ ದ ಸದಸ್ಯರಿಂದ ಭಜನಾ ಸೇವೆಯು ಮಂತ್ರಾಲಯದಲ್ಲಿ ಭಜನಾ ಗುರುಗಳಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ನೇತೃತ್ವದಲ್ಲಿ ಭಜನಾ ಸಮರ್ಪಣೋತ್ಸವವು ಮಾರ್ಚ್ 26 ಶುಕ್ರವಾರ ಹಾಗೂ 27 ಶನಿವಾರದಂದು ನಡೆಯಿತು.

(ಶ್ರೀ ಗುರು ಸಾರ್ವಭೌಮ ದಾಸಸಾಹಿತ್ಯಪ್ರಾಜೆಕ್ಟಿನ ಭಜನಾ ಮಂಡಳಿಯವರಾದ ದಕ್ಷಿಣಕನ್ನಡ,ಮತ್ತು ಕೇರಳದ ಕಾಸರಗೋಡು ಭಜನಾ ಮಂಡಳಿಯ 500 ಕ್ಕಿಂತ ಅಧಿಕ ಸದಸ್ಯರು, ಮಂತ್ರಾಲಯಕ್ಕೆ ಬಂದು ಶ್ರೀಶ್ರೀಸುಬುಧೇಂದ್ರತೀರ್ಥಶ್ರೀಪಾದಂಗಳವರ ಘನಾಧ್ಯಕ್ಷತೆಯಲ್ಲಿ, ನಿರ್ದೇಶಕರಾದ ಶ್ರೀಅಪ್ಪಣ್ಣಾಚಾರ್ಯರ ನೇತೃತ್ವದಲ್ಲಿ, ಶ್ರೀ ಗುರುರಾಯರಿಗೆ ಸಮರ್ಪನೋತ್ಸವ ಕಾರ್ಯಕ್ರಮವು ಸುಸಂಪನ್ನವಾಯಿತು)

ನಾಳೆ (ಏಪ್ರಿಲ್ 10) ಯಕ್ಷಗಾನದ ಸಹಚಿಂತನೆ ಮತ್ತು ಸಂವಾದದ ಜೊತೆಗೆ ‘ಮ್ಯಾಕ್ ಬೆತ್’ ಯಕ್ಷರೂಪಕ 

ವರ್ತಮಾನದ ಬೆಳಕಿನಲ್ಲಿ ಯಕ್ಷಗಾನದ ಮರುಚಿಂತನೆ – ಸಹಚಿಂತನೆ ಮತ್ತು ಸಂವಾದದ ಜೊತೆಗೆ ‘ಮ್ಯಾಕ್ ಬೆತ್’ ಯಕ್ಷರೂಪಕ  ಕಾರ್ಯಕ್ರಮವು ಏಪ್ರಿಲ್ 10 ಶನಿವಾರದಂದು ಸಂತ ಅಲೋಸಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ನಡೆಯಲಿದೆ. ‘ಯಕ್ಷಗಾನ: ವರ್ತಮಾನದ ಬೆಳಕಿನಲ್ಲಿ ಮರುಚಿಂತನೆ’ ಎಂಬ ವಿಷಯದ ಬಗ್ಗೆ ವಿವಿಧ ವಿದ್ವಾಂಸರಿಂದ ವಿಚಾರಗೋಷ್ಠಿಗಳು ನಡೆದ ನಂತರ ಸಂಜೆ 6 ಘಂಟೆಗೆ ಸೂರಿಕುಮೇರಿ ಗೋವಿಂದ ಭಟ್ ವಿರಚಿತ ‘ಮ್ಯಾಕ್ ಬೆತ್’ ಎಂಬ ಯಕ್ಷರೂಪಕ ನಡೆಯಲಿದೆ. ಕಾರ್ಯಕ್ರಮದ ವಿವರ ಕೆಳಗೆ ಲಗತ್ತಿಸಲಾಗಿದೆ. 

ಮೇಳಗಳ ಇಂದಿನ (09.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (09.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೆಲ್ಲಪುತ್ತಿಗೆ (ಬೆಳುವಾಯಿ) – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕುರಾಯ ಬಂದಾರು ಬೆಳ್ತಂಗಡಿ 

ಕಟೀಲು ಎರಡನೇ ಮೇಳ == ‘ಶ್ರೀ ರಕ್ಷಿತ’ ಕನಕೂರು ಹೌಸ್, ಕೋಣಾಜೆ  

ಕಟೀಲು ಮೂರನೇ ಮೇಳ== ಸರಕಾರಿಗುಡ್ಡೆ ಕುಂಜಾರುಗಿರಿ ಕ್ರಾಸ್ ಬಳಿ ಕಟಪಾಡಿ 

ಕಟೀಲು ನಾಲ್ಕನೇ ಮೇಳ  == ಶ್ರೀ ಶಾರದಾ ರೆಡ್ ರಾಕ್ ಹಿಲ್ ಟಾಪ್ ಲೇಔಟ್, ಈಶ್ವರಕಟ್ಟೆ   ಕೊಳಂಬೆ ಕಿನ್ನಿಕಂಬಳ 

ಕಟೀಲು ಐದನೇ ಮೇಳ ==  ಶ್ರೀದೇವಿ ಕಾಂಪೌಂಡ್, ಕಾಯರ್ಗೋಳಿ ಮುಡಿಪು 

ಕಟೀಲು ಆರನೇ ಮೇಳ == ಸತ್ಯದೇವತೆ ಚಾರಿಟೇಬಲ್ ಟ್ರಸ್ಟ್ ನರಿಕೊಂಬು ಪಾಣೆಮಂಗಳೂರು 

ಮಂದಾರ್ತಿ ಒಂದನೇ ಮೇಳ  == ಹ್ಯಾಗುಳಿಕೊಡ್ಲು ಹೆಗ್ಗುಂಜೆ 

ಮಂದಾರ್ತಿ ಎರಡನೇ ಮೇಳ   == ಕಮಲಶಿಲೆ ದೇವಸ್ಥಾನ 

ಮಂದಾರ್ತಿ ಮೂರನೇ ಮೇಳ  == ಬಂಡಾಡಿ ಪಟೇಲರಮನೆ ತಲ್ಲೂರು ಕನ್ಯಾನ  

ಮಂದಾರ್ತಿ ನಾಲ್ಕನೇ ಮೇಳ   == ಕೊಯಿಗದ್ದೆಮನೆ ಕುಂಟೂರು ಕೂರಾಡಿ 

ಮಂದಾರ್ತಿ ಐದನೇ ಮೇಳ  == ಗಿರಿಜಾ ಕಲ್ಯಾಣ ಮಂದಿರದ ಹತ್ತಿರ ಸಾಲಿಗ್ರಾಮ 

ಶ್ರೀ ಹನುಮಗಿರಿ ಮೇಳ  ==  ಸರ್ವೋದಯ ಮೈದಾನ ಕಡಾರು – ಶುಕ್ರನಂದನೆ (ರಾತ್ರಿ 7ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕೊಪ್ಪದಮಕ್ಕಿ(ಉ.ಕ) ಶ್ರೀ ವನದುರ್ಗಿ ದೇವಿ ಅಮ್ಮ ದೇವಸ್ಥಾನ – ದ್ರೌಪದಿ ವಸ್ತ್ರಾಪಹಾರ, ಸುದರ್ಶನ, ತರಣಿಸೇನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೋಣ್ಕಿ ನಾಡ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ನಲ್ಮುಡ್ಕ ಹಾರ್ಮಣ್ – ಕಮಲಶಿಲೆ ಮೇಳದೊಂದಿಗೆ ಕೂಡಾಟ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಅರೆಕಲ್ಲುಮನೆ ನೈಕಂಬ್ಳಿ ಚಿತ್ತೂರು 

ಶ್ರೀ ಪಾವಂಜೆ ಮೇಳ  ==   ಶ್ರೀ ಕ್ಷೇತ್ರ ಎಡನೀರು ಮಠ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ ==  ಹಾರ್ಮಣ್ಣು – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ 

ಕಮಲಶಿಲೆ ಮೇಳ ‘ಬಿ‘ ==  ಮುದ್ದುಮನೆ 

ಶ್ರೀ ಅಮೃತೇಶ್ವರೀ ಮೇಳ == ಹರ್ತಟ್ಟು 

ಶ್ರೀ ಸೌಕೂರು ಮೇಳ == ಮೂಡ್ಲಕಟ್ಟೆ ಜಡ್ಡಿನಕೊಡ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಯೆಯ್ಯಾಡಿ ಇಂಡಸ್ಟ್ರಿಯಲ್ ಏರಿಯಾ  – ಶ್ರೀ ನಾಗದೇವತೆ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ಪೌರಾಣಿಕ ಪ್ರಸಂಗ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಜಯಪುರ ಮಡುವಿನಕೆರೆ ಸರಕಾರೀ ಶಾಲಾ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಈದು ಶ್ರೀ ವನದುರ್ಗಾ ದೇವಸ್ಥಾನ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ ==  ಶಿರೂರು ಪೇಟೆತೊಪ್ಲು ಮುಲ್ಲಿಮನೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ತಂಬಡಿಕೊಪ್ಪ 

ಶ್ರೀ ಮೇಗರವಳ್ಳಿ ಮೇಳ == ಬನ್ನೇರಲಕಟ್ಟೆ – ಕುಲದೈವ ಪಂಜುರ್ಲಿ  

ಶ್ರೀ ಹಾಲಾಡಿ ಮೇಳ == ಶ್ರೀ ಬ್ರಹ್ಮಯಕ್ಷಿ ದೇವಸ್ಥಾನ, ಸೆಳ್ಕೋಡು ಮರ್ಲ್ ಕಾನ್, ಹುಲಿಪಾರೆ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಕೆಲಿಂಜೂರ ಅಮನಬೆಟ್ಟು – ಶ್ರೀ ದೇವಿ ಮಹಾತ್ಮೆ 

ಮೇಳಗಳ ಇಂದಿನ (08.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (08.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹೆಬ್ರಿ ಚಾರ ಕುರ್ನಾಲುಕಲ್ಲು ಮಾತೃಶ್ರೀ ನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’

ಕಟೀಲು ಎರಡನೇ ಮೇಳ ==  ಆನಂದಿ ನಿವಾಸ ಅಡ್ವೆ ನಂದಿಕೂರು 

ಕಟೀಲು ಮೂರನೇ ಮೇಳ== ಮಿಷನ್ ಕಂಪೌಂಡ್, ಮಂಕಿ ಸ್ಟಾಂಡ್ ಅತ್ತಾವರ ಮಂಗಳೂರು 

ಕಟೀಲು ನಾಲ್ಕನೇ ಮೇಳ  == ‘ರಥಿಚಾಯ’ ರಾಯಿಕಟ್ಟೆ ಕೂಳೂರು 

ಕಟೀಲು ಐದನೇ ಮೇಳ ==  ಕಟೀಲು – ಗಿಡಿಗೆರೆ ‘ಶ್ರೀನಿಕೇತನ’ 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮಿ ಸದನ’

ಮಂದಾರ್ತಿ ಒಂದನೇ ಮೇಳ  == ಮೆಕ್ಕೆಕಟ್ಟು ದೇವಸ್ಥಾನ 

ಮಂದಾರ್ತಿ ಎರಡನೇ ಮೇಳ   == ಲಕ್ಷ್ಮಿ ನಿಲಯ ಹುಣ್ಸೆ ಅಡಿ, ಮಾಲಾಡಿ ಸೌಡ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ತಾರಾಪತಿ ಉಪ್ಪುಂದ ಬೈಂದೂರು 

ಮಂದಾರ್ತಿ ನಾಲ್ಕನೇ ಮೇಳ   == ಮಾರಾಳಿ ಕಲ್ಮನೆ ನಾಲ್ಕೂರು ಮುದ್ದೂರು 

ಮಂದಾರ್ತಿ ಐದನೇ ಮೇಳ  ==   ಲಕ್ಷ್ಮಿ ನಿಲಯ ಹುಣ್ಸೆ ಅಡಿ, ಮಾಲಾಡಿ ಸೌಡ – ಕೂಡಾಟ 

ಶ್ರೀ ಹನುಮಗಿರಿ ಮೇಳ  ==  ಶ್ರೀ ಚಿಕ್ಕಮ್ಮ ದೇವಸ್ಥಾನ ಕೋಡಿಮಕ್ಕಿ ನಡೂರು – ಶುಕ್ರನಂದನೆ (ರಾತ್ರಿ 6.30ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಡಾರ್ ಬೈಲು, ಹರಾವರಿ ವಂಡ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬಡಾರ್ ಬೈಲು, ಹರಾವರಿ ವಂಡ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನಗರಿಹಳ್ಳ ಕೋಟತಟ್ಟು ಹಂದಟ್ಟು 

ಶ್ರೀ ಪಾವಂಜೆ ಮೇಳ  ==   ಮುಳ್ಳೇರಿಯಾ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಹುಳಿಗದ್ದೆ ಶಿವಪುರ 

ಕಮಲಶಿಲೆ ಮೇಳ ‘ಎ‘ ==  ಯಳಬೇರು 

ಕಮಲಶಿಲೆ ಮೇಳ ‘ಬಿ‘ == ಶ್ರೀ ಉಮಾಮಹೇಶ್ವರ ದೇವಸ್ಥಾನ ತೆಂಕಬೈಲು ತೀರ್ಥಹಳ್ಳಿ 

ಶ್ರೀ ಅಮೃತೇಶ್ವರೀ ಮೇಳ == ಕೋಟತಟ್ಟು ಬಾರಿಕೆರೆ 

ಶ್ರೀ ಬೋಳಂಬಳ್ಳಿ ಮೇಳ== ಮೂಡುಗೋಪಾಡಿ – ಪದ್ಮಾವತಿ ಮೀನಾಕ್ಷಿ 

ಶ್ರೀ ಸೌಕೂರು ಮೇಳ == ಚಿತ್ತೂರು ಮಾರಣಕಟ್ಟೆ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ತೆಂಕೂರು – ಪೌರಾಣಿಕ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಶ್ರೀ ನಾಗ ಮತ್ತು ಸ್ವಾಮಿಯ ಸಹಪರಿವಾರ ದೇವಸ್ಥಾನ, ಚೆಂಪಣ್ಣತೊಪ್ಪಲು ಆನಗಳ್ಳಿ – ಚಕ್ರ ಚಂಡಿಕಾ, ಕನಕಾಂಗಿ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಶ್ರೀ ಕ್ಷೇತ್ರ ಕಳವಾರು – ನೂತನ ಪ್ರಸಂಗ

ಶ್ರೀ ಮಡಾಮಕ್ಕಿ ಮೇಳ == ಬಜಗೋಳಿ ದಿಡಿಂಬಿರಿ – ಮಹಾಶಕ್ತಿ ಮಂತ್ರದೇವತೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಅರಳಸುರುಳಿ ಶ್ರೀ ಸುಬ್ರಹ್ಮಣ್ಯ ದೇವಾಲಯ ಇಂದಿರಾನಗರ – ಸಿರಿವಂತ ಶಿವರಾಯ 

ಶ್ರೀ ಹಿರಿಯಡಕ ಮೇಳ == ನಲ್ಲೂರು ಚಂಡೆಗಾಣದ ಬೆಟ್ಟು ಚಿತ್ರ ದೇವಾಡಿಗರ ಬಾಕಿಮಾರು ಗದ್ದೆ – ಮಾಯೊದ ಅಜ್ಜೆ  

ಶ್ರೀ ಶನೀಶ್ವರ ಮೇಳ == ನೆಲ್ಲಿಗೆದ್ದೆ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಸಿಗಂದೂರು ಮೇಳ ==  ಹಟ್ಟಿಕುದ್ರು ಚಿಪ್ಪೆಗುಡಿಮನೆ 

ಶ್ರೀ ನೀಲಾವರ ಮೇಳ  == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾರಾಡಿ  

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಬಿದಿರಳ್ಳಿ ಶ್ರೀ ಈಶ್ವರ ದೇವಸ್ಥಾನ 

ಶ್ರೀ ಮೇಗರವಳ್ಳಿ ಮೇಳ == ಜಡ್ಕಲ್ ಗಾಣದಕೊಡ್ಲು – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ 

ಇಂದು (07.04.2021) ಕನ್ಯಾನದಲ್ಲಿ ಕಟೀಲು ಮೇಳದ ಆಟ

ಇಂದು (07.04.2021) ಕನ್ಯಾನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರು ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ. ಯಕ್ಷಗಾನ ಪ್ರದರ್ಶನವು ರಾತ್ರಿ 9.30 ಘಂಟೆಗೆ ಸರಿಯಾಗಿ ಕನ್ಯಾನದ ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಆರಂಭವಾಗಲಿದೆ ಎಂದು ಸೇವಾಕರ್ತರು ತಿಳಿಸಿದ್ದಾರೆ.