Monday, September 21, 2026
Home Blog Page 327

ಗೀಳು ರೋಗ – ಈ ಮಾನಸಿಕ ಸ್ಥಿತಿಯಿಂದ ಹೊರಬರುವುದು ಹೇಗೆ? ಡಾ. ಸ್ನೇಹಾ ಏನು ಹೇಳುತ್ತಾರೆ? ಈ ವೀಡಿಯೋ ನೋಡಿ 

ಗೀಳು ರೋಗ – ಈ ಮಾನಸಿಕ ಸ್ಥಿತಿಯಿಂದ ಹೊರಬರುವುದು ಹೇಗೆ ಎನ್ನುವುದರ ಬಗ್ಗೆ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಮಾನಸಿಕ ತಜ್ಞೆ ಡಾ. ಸ್ನೇಹಾ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ವೀಡಿಯೋ ನೋಡಿ 

ಯಕ್ಷಗಾನ ಕಲಾರಂಗದ “ಕಲಾಂತರಂಗ 2020” ಬಿಡುಗಡೆ

ಯಕ್ಷಗಾನ ಕಲಾರಂಗದ ಒಂದು ವರ್ಷದ ಚಟುವಟಿಕೆಗಳ ಕುರಿತ ಅಪೂರ್ವ ಮಾಹಿತಿವುಳ್ಳ “ಕಲಾಂತರಂಗ 2020”ನ್ನು ನಿಟ್ಟೂರು ಪ್ರೌಢಶಾಲೆಯ ರಜತ ಸಭಾಭವನದಲ್ಲಿ ಎಪ್ರಿಲ್ 16, 2021ರಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ.ಎಸ್. ಮತ್ತು ಶಾಸಕರಾದ ಕೆ. ರಘುಪತಿ ಭಟ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾಬಲೇಶ್ವರ ಎಂ.ಎಸ್. ಕಲಾರಂಗ ಎಲ್ಲಾ ಸಂಸ್ಥೆಗಳಿಗೂ ಮಾದರಿಯಾಗಿದ್ದು, ಕರ್ಣಾಟಕ ಬ್ಯಾಂಕ್‍ ಕಲಾರಂಗದ ಚಟುವಟಿಕೆಗಳಿಗೆ ತನ್ನಿಂದಾದ ನೆರವನ್ನು ನೀಡಲು ಸದಾ ಸಿದ್ಧವಿದೆ ಎಂದರು.

ಶಾಲಾ ಸಂಚಾಲಕರಾದ ಕೆ.ರಘುಪತಿ ಭಟ್‍ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಧ್ಯಕ ಎಂ. ಗಂಗಾಧರ ರಾವ್ ವಂದಿಸಿದರು. ಕಲಾರಂಗದ ನಿಕಟ ಪೂರ್ವಅಧ್ಯಕ್ಷ ಕೆ. ಗಣೇಶ್‍ ರಾವ್ , ಪಿ. ಸದಾಶಿವ ರಾವ್, ಕೋಶಾಧಿಕಾರಿ ಕೆ ಮನೋಹರ್, ಕಲಾರಂಗದ ಉಪಾಧ್ಯಕ್ಷ ವಿ.ಜಿ ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ, ಹೆಚ್. ಎನ್. ಶೃಂಗೇಶ್ವರ, ಬಿ. ನಾರಾಯಣ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಅಜಿತ್‍ಕುಮಾರ್, ದಿನೇಶ್ ಪೂಜಾರಿ, ಅಶೋಕ್ ಎಂ, ಮತ್ತು ಮುಖ್ಯೋಪಾಧ್ಯಾಯಿನಿ ಶ್ರಿಮತಿ ಅನಸೂಯ ಉಪಸ್ಥಿತರಿದ್ದರು.

ಅದ್ವಿತೀಯ ಕಲಾವಿದ ಕೊಪ್ಪಾಟೆ ಮುತ್ತ ಗೌಡ – ಸಂಕ್ಷಿಪ್ತ ಮಾಹಿತಿ (Sri Koppate Mutha Gowda)

ಹೆಸರು: ಶ್ರೀ ಕೊಪ್ಪಾಟೆ ಮುತ್ತ ಗೌಡ  

ಜನನ:  1945

ಜನನ ಸ್ಥಳ:   ಕುಂದಾಪುರ ತಾಲೂಕು ಬೈಂದೂರು ಸಮೀಪದ ಕಾಲ್ತೋಡು

ಬೆಳೆದ ಊರು: ಕುಂದಾಪುರ ತಾಲೂಕು ಆಲೂರು ಗ್ರಾಮದ ಕೊಪ್ಪಾಟೆ     

ತಂದೆ: ಶ್ರೀ ಅಣ್ಣಪ್ಪ ಗೌಡ ತಾಯಿ: ಶ್ರೀಮತಿ ಅಕ್ಕಣಿ ಅಮ್ಮ 

ವಿದ್ಯಾಭ್ಯಾಸ: ಮೂರನೇ ತರಗತಿ 

ಯಕ್ಷಗಾನ ಗುರುಗಳು: ಗುರು ಶ್ರೀ ವೀರಭದ್ರ ನಾಯಕ್ 

ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ 
ಅನುಭವ: ಬಡಗುತಿಟ್ಟು ರಂಗಸ್ಥಳದಲ್ಲಿ ಒಟ್ಟು 49 ವರ್ಷಗಳ ಕಾಲ ವೇಷಧಾರಿಯಾಗಿ ಮೆರೆದಿದ್ದರು. 21 ವರ್ಷ ಮಾರಣಕಟ್ಟೆ ಮೇಳ, ಇನ್ನುಳಿದಂತೆ ಸಾಲಿಗ್ರಾಮ, ಪೆರ್ಡೂರು, ಇಡಗುಂಜಿ, ಕಳವಾಡಿ, ಮಂದಾರ್ತಿ ಮತ್ತು ಸೌಕೂರು ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ ಅನುಭವ. 

ತಾಳಮದ್ದಳೆ ಕೂಟಗಳಲ್ಲಿ: ಪ್ರಸಿದ್ಧ ವೇಷಧಾರಿಯಾಗಿದ್ದುದು ಮಾತ್ರವಲ್ಲದೆ ಅಪ್ರತಿಮ ವಾಕ್ಪಟುವಾಗಿದ್ದ ಇವರು ತಾಳಮದ್ದಳೆ ಕೂಟಗಳಲ್ಲೂ ಭಾಗವಹಿಸುತ್ತಿದ್ದರು. ಕುಂದಾಪುರ ಪರಿಸರದಲ್ಲಿ ನಡೆಯುತ್ತಿದ್ದ ಹೆಚ್ಚಿನ ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. 

ನಿರ್ವಹಿಸಿದ ಪಾತ್ರಗಳು: ನಾಯಕ ಪ್ರತಿನಾಯಕ ಎರಡೂ ಪಾತ್ರಗಳಲ್ಲೂ ಮಿಂಚಿದರು. ಗದಾಯುದ್ಧದ ಕೌರವ ಮತ್ತು ಭೀಮ, ವಾಲೀ ವಧೆಯ ವಾಲಿ ಮತ್ತು ಸುಗ್ರೀವ, ಅಂಗದ ಸಂಧಾನದ ಅಂಗದ ಮತ್ತು ಪ್ರಹಸ್ತ, ಭೀಷ್ಮ ಮತ್ತು ಪರಶುರಾಮ, ರಾಮ ಮತ್ತು ರಾವಣ ಮೊದಲಾದ ಖಳ ಮತ್ತು ಸಾತ್ವಿಕ ಪಾತ್ರಗಳಲ್ಲೂ ಸಮಾನ ಪ್ರಭುತ್ವವನ್ನು ಸಾಧಿಸಿದ್ದರು. ಅಲ್ಲದೆ ಅರ್ಜುನ, ಹನುಮಂತ, ಕೀಚಕ, ಶಲ್ಯ, ಅತಿಕಾಯ, ಇಂದ್ರಜಿತು, ವಿಭೀಷಣ, ಅಗ್ನಿ ಮೊದಲಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. 

ರಚಿಸಿದ ಪ್ರಸಂಗಗಳು: ಪುಷ್ಕಳ ಪುನರ್ಜನ್ಮ, ಮಾರಿಕಾಂಬಾ ಮಹಾತ್ಮೆ, ನಂದಿಕೇಶ್ವರ ಮಹಾತ್ಮೆ, ಮಿತ್ರದ್ರೋಹ 
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಹಲವಾರು ಸನ್ಮಾನ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.  ಅದರಲ್ಲಿ ಯಕ್ಷಗಾನ ಕಲಾರಂಗದ ಬೆಳ್ಳಿಹಬ್ಬ ಸನ್ಮಾನ, ಗೋರ್ಪಾಡಿ ವಿಠಲ ಪಾಟೀಲ ಪ್ರಶಸ್ತಿ, ಎಂ.ಎಂ.ಹೆಗಡೆ ಪ್ರಶಸ್ತಿ, ಕಲಾರತ್ನ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಸನ್ಮಾನಗಳು. 

ನಿಧನ: 04.01.2020

ಮೇಳಗಳ ಇಂದಿನ (16.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (16.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹಳ್ಳಿಹೊಳೆ ದೋಣಿಕಡವು – ಮಹಾಕಲಿ ಮಗಧೇಂದ್ರ 

ಕಟೀಲು ಒಂದನೇ ಮೇಳ == ವಸಂತಿ ನಿವಾಸ, ಪಿತ ಮೊಗರುಗುತ್ತು, ಕಂದಾವರ ಗುರುಪುರ 

ಕಟೀಲು ಎರಡನೇ ಮೇಳ == ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ 

ಕಟೀಲು ಮೂರನೇ ಮೇಳ== ಮುಕ್ಕಾಲ್ದಿಮನೆ ಎಕ್ಕಾರು 

ಕಟೀಲು ನಾಲ್ಕನೇ ಮೇಳ  == ಹೊಸಂಗಡಿ ಮನೆ, ಹೇರಾಡಿ ಗ್ರಾಮ, ಬಾರ್ಕೂರು ಬ್ರಹ್ಮಾವರ 

ಕಟೀಲು ಐದನೇ ಮೇಳ ==  ನಡಿಬೀಡು, ಹೊಸಮನೆ ಕೆಂಜಾರು ಬಜಪೆ  

ಕಟೀಲು ಆರನೇ ಮೇಳ == ಬಾಕಿಮಾರುಗುತ್ತು ಸೂರಿಂಜೆ 

ಮಂದಾರ್ತಿ ಒಂದನೇ ಮೇಳ  == ಶ್ರೀ ದುರ್ಗಾನಿಲಯ, ಕೊಡ್ಲಬೈಲು ಶಿರಿಯಾರ  – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಶ್ರೀ ದುರ್ಗಾನಿಲಯ, ಕೊಡ್ಲಬೈಲು ಶಿರಿಯಾರ  – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಸೌಡ, ಶಂಕರನಾರಾಯಣ 

ಮಂದಾರ್ತಿ ನಾಲ್ಕನೇ ಮೇಳ   == ಅರೆಕಲ್ಲುಮನೆ ಕೀರ್ತಿನಗರ ಆಲುಂಜೆ ಆರೂರು 

ಮಂದಾರ್ತಿ ಐದನೇ ಮೇಳ  == ಕೆರೆಕಟ್ಟು ಹೌಸ್ ಬಸ್ರೂರು  

ಶ್ರೀ ಹನುಮಗಿರಿ ಮೇಳ  == ಮಂಚಿ ನೂಜಿಬೈಲು ಶಾಲಾ ಕ್ರೀಡಾಂಗಣ – ಶ್ರೀ ದೇವಿ ಮಹಾತ್ಮೆ  (ಸಂಜೆ 5 ರಿಂದ)

ಶ್ರೀ ಸಾಲಿಗ್ರಾಮ ಮೇಳ == ತೆಕ್ಕಟ್ಟೆ ಕರಿಕಲ್ ಕಟ್ಟೆ ಚಿತ್ತಾರಿ ಶ್ರೀ ಬ್ರಹ್ಮಲಿಂಗೇಶ್ವರ ಉತ್ಸವ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಸಂತಾನ ಗೋಪಾಲಕೃಷ್ಣ ದೇವಸ್ಥಾನ ಕೂಡು, ಹಾಲ್ಕುತ್ತೂರು (ಕೊಪ್ಪ ತಾಲೂಕು) – ಧರ್ಮಾಂಗದ ದಿಗ್ವಿಜಯ, ಸತ್ಯಹರಿಶ್ಚಂದ್ರ, ರತ್ನಾವತಿ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಐರ್ ಬೈಲು, ಹೊಂಬಾಡಿಮನೆ ಉಳ್ಳೂರು – 74

ಶ್ರೀ ಮಾರಣಕಟ್ಟೆ ಮೇಳ ‘ಬಿ == ಅಲ್ಸಾಡಿ ಬೈರಿಮನೆ ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಆಲಂದೂರು ತೋಟದಮನೆ ಶಿರೂರು ಬೈಂದೂರು 

ಶ್ರೀ ಪಾವಂಜೆ ಮೇಳ  ==   ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಹಾಡಿಮನೆ ತೊಂಬಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ – (ಶ್ರೀ ಗೋಳಿಗರಡಿ ಮೇಳದೊಂದಿಗೆ ಕೂಡಾಟ) ಚತುರ್ಜನ್ಮ ಮೋಕ್ಷ 

ಕಮಲಶಿಲೆ ಮೇಳ ‘ಬಿ‘ ==  ಉಳುಕೊಪ್ಪ 

ಶ್ರೀ ಅಮೃತೇಶ್ವರೀ ಮೇಳ == ಕದ್ರಿಕಟ್ಟು 

ಶ್ರೀ ಸೌಕೂರು ಮೇಳ == ಗುಲ್ವಾಡಿ ಮಾಲತಿ ಅಮ್ಮ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == 62ನೇ ತೋಕೂರು MSEZ ಕಾಲನಿ ಹಾಲ್ ಹತ್ತಿರ – ಶ್ರೀ ನಾಗದೇವತೆ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಬೈಂದೂರು ಮಯ್ಯಾಡಿ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ – ರಾಮಾಂಜನೇಯ, ರೇಣುಕಾ ಮಹಾತ್ಮೆ (ರಾತ್ರಿ 8.30ರಿಂದ)

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಾಡಿಮನೆ ತೊಂಬಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ – (ಕಮಲಶಿಲೆ ಮೇಳದೊಂದಿಗೆ ಕೂಡಾಟ) ಚತುರ್ಜನ್ಮ ಮೋಕ್ಷ 

ಶ್ರೀ ಹಿರಿಯಡಕ ಮೇಳ == ವೇಣೂರು ಬಾಹುಬಲಿ ಸಭಾಭವನದ ಬಳಿ – ಪವಿತ್ರ ಫಲ್ಗುಣಿ  

ಶ್ರೀ ಶನೀಶ್ವರ ಮೇಳ == ಕೊಡುರು ಬುಡ್ಕನ್ ಮಲ್ಲಿ 

ಶ್ರೀ ಸಿಗಂದೂರು ಮೇಳ == ನಾಡಾ ಗುಡ್ಡೆಯಂಗಡಿ ತೆಂಕಬೈಲು 

ಶ್ರೀ ನೀಲಾವರ ಮೇಳ  == ಎರೆಕೋಣ್ ಪೇಟೆ – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಮೇಳಿಗೆ

ಶ್ರೀ ಮೇಗರವಳ್ಳಿ ಮೇಳ == ಕೊಕ್ಕರ್ಣೆ ಶಾಸ್ತಾವು ಯಕ್ಷಮಿತ್ರರು – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ದಬ್ಬೆಕಟ್ಟೆ – ದಿವ್ಯ ಸನ್ನಿಧಿ (ರಾತ್ರಿ 8.30ರಿಂದ)

ಶ್ರೀ ಹಾಲಾಡಿ ಮೇಳ == ಬ್ರಹ್ಮಾವರ – ನೂತನ ಪ್ರಸಂಗ (ರಾತ್ರಿ 7.30ರಿಂದ)

ಶ್ರೀ ಬಪ್ಪನಾಡು ಮೇಳ == ಚೇತರ್ಕಾಡಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ (ರಾತ್ರಿ 7ರಿಂದ)

ಶ್ರೀ ಸಸಿಹಿತ್ಲು ಭಗವತೀ ಮೇಳ == ನಾವೂರ ಮೈಂದಾಳ (ಬಂಟ್ವಾಳ) ಶ್ರೀ ಮಹಾದೇವಿ ಭಜನಾ ಮಂದಿರದ ವಠಾರ – ಕೋರ್ದಬ್ಬು ಬಾರಗ 

ಶ್ರೀ ದೇಂತಡ್ಕ ಮೇಳ == ಶ್ರೀ ಹಾಯಿಗುಳಿ ಬೊಬ್ಬರ್ಯ ಸಹಪರಿವಾರ ದೈವಸ್ಥಾನ ವಠಾರ ಅರಾಲ್ ಗುಡ್ಡೆ ಹಳಅಳಿವೆ – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಬಡಗು ತಿಟ್ಟಿನ ಹಿರಿಯ ಸ್ತ್ರೀ ವೇಷಧಾರಿ ಎಂ. ಎ. ನಾಯ್ಕ ಅವರ ಸಂಕ್ಷಿಪ್ತ ಪರಿಚಯ (Biography of M. A. Naik)

ಹೆಸರು:  ಎಂ. ಎ. ನಾಯ್ಕ (ಮಂದಾರ್ತಿ ಅಣ್ಣು ನಾಯ್ಕ)
ಜನನ ಸ್ಥಳ: ಮಂದಾರ್ತಿ 
ತಂದೆ ತಾಯಿ: ಶ್ರೀ ಕರಿಯ ಮರಕಾಲ, ಶ್ರೀಮತಿ ಬುಡ್ದು 

ರಂಗಪ್ರವೇಶ: 1964
ಅನುಭವ: 40 ವರ್ಷಕ್ಕೂ ಮೇಲ್ಪಟ್ಟು (ಅಮೃತೇಶ್ವರಿ ಮೇಳದಲ್ಲಿ 16 ವರ್ಷ, ಮಂದಾರ್ತಿ ಮೇಳದಲ್ಲಿ 15 ವರ್ಷ, ಮೂಲ್ಕಿ ಮೇಳ, ಶಿರಸಿ ಮೇಳವೇ ಮೊದಲಾದ ಮೇಳಗಳಲ್ಲಿ)

ವಿದೇಶ ಪ್ರವಾಸ: ಎರಡು ಬಾರಿ ಸ್ವಿಟ್ಜರ್ಲೆಂಡ್ ಹಾಗೂ ಹಾಂಕಾಂಗ್, ಜರ್ಮನಿ, ಪೋಲೆಂಡ್ ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. 
ಜನಮೆಚ್ಚುಗೆ ಗಳಿಸಿದ ಪಾತ್ರಗಳು: ಸೀತೆ, ಮಂಡೋದರಿ, ಚಂದ್ರಮತಿ, ಸಾವಿತ್ರಿ, ದಮಯಂತಿ ಮೊದಲಾದ ಸೌಮ್ಯ ಸ್ತ್ರೀ ಪಾತ್ರಗಳು ಮತ್ತು ರುಚಿಮತಿ, ರುಕ್ಮಿಣಿ, ದಾಕ್ಷಾಯಣಿ, ದ್ರೌಪದಿ 
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಕೋಟ ವೈಕುಂಠ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಬಿ.ವಿ. ಆಚಾರ್ಯ ಪ್ರಶಸ್ತಿ, ಅರಾಟೆ ಮಂಜುನಾಥ ಸಂಸ್ಮರಣಾ ಪ್ರಶಸ್ತಿ ಮೊದಲಾದ ಹಲವಾರು ಪ್ರಶಸ್ತಿ ಸನ್ಮಾನಗಳು 

ಮೇಳಗಳ ಇಂದಿನ (15.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (15.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಗ್ವಾಡಿ ಹೊಳೇಕೆರೆ ಸಪರಿವಾರ ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ == ಚೆನ್ನಮ್ಮ ಸದನ, ಪಂಜ ಬಾಕಿಮಾರುಗುತ್ತು ವಯಾ ಪಕ್ಷಿಕೆರೆ ಹಳೆಯಂಗಡಿ 

ಕಟೀಲು ಎರಡನೇ ಮೇಳ == ನೀಲಕಂಠ ಉಮಾಮಹೇಶ್ವರಿ ದೇವಸ್ಥಾನ ವಠಾರ ದೈವಂಗಳ ಗುಡ್ಡೆ 

ಕಟೀಲು ಮೂರನೇ ಮೇಳ== ಸುಳ್ಯ 

ಕಟೀಲು ನಾಲ್ಕನೇ ಮೇಳ  == ಮಟ್ಟಿಮನೆ, ನಗರ, ಹೊಸನಗರ ಶಿವಮೊಗ್ಗ 

ಕಟೀಲು ಐದನೇ ಮೇಳ ==  ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಬಳಿ, ಅರಳ, ಬಂಟ್ವಾಳ 

ಕಟೀಲು ಆರನೇ ಮೇಳ == ‘ಮೊಗಪಾಡಿ ಪಂಜ ವಯಾ ಪಕ್ಷಿಕೆರೆ ಹಳೆಯಂಗಡಿ  

ಮಂದಾರ್ತಿ ಒಂದನೇ ಮೇಳ  == ಸೋಮನಾಥ ನಿಲಯ ಕಾರ್ಕಡ ಸಾಲಿಗ್ರಾಮ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಸೋಮನಾಥ ನಿಲಯ ಕಾರ್ಕಡ ಸಾಲಿಗ್ರಾಮ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಮಂದಾರ್ತಿ ಕಲ್ಯಾಣ ಮಂದಿರ 

ಮಂದಾರ್ತಿ ನಾಲ್ಕನೇ ಮೇಳ   == ಕಾವ್ರಾಡಿ 

ಮಂದಾರ್ತಿ ಐದನೇ ಮೇಳ  == ದೇವಿಕೃಪಾ ನಿಲಯ ನಾಯಕವಾಡಿ ಗುಜ್ಜಾಡಿ  

ಶ್ರೀ ಹನುಮಗಿರಿ ಮೇಳ  == ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ – ಶುಕ್ರನಂದನೆ (ರಾತ್ರಿ 9 ರಿಂದ)

ಶ್ರೀ ಸಾಲಿಗ್ರಾಮ ಮೇಳ == ಶಿರೂರು ಮೂರುಕೈ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಶ್ರೀ ಕಾವೇರಿಕೃಪಾ ಕೊಡಪಾಡಿ ಗುಜ್ಜಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಬ್ರಹ್ಮಶ್ರೀ’ ನಾರ್ಕಾಳಿ ಗುಡಿಮನೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನಾಗೂರು    

ಶ್ರೀ ಪಾವಂಜೆ ಮೇಳ  ==   ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಕಲ್ಯಾಣೋತ್ಸವ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಚೋನಮನೆ ಆಜ್ರಿ 

ಕಮಲಶಿಲೆ ಮೇಳ ‘ಬಿ‘ ==  ಕೋಣೆಮನೆ ಕೊಡ್ಲಾಡಿ  

ಶ್ರೀ ಅಮೃತೇಶ್ವರೀ ಮೇಳ == ಪಾರಂಪಳ್ಳಿ 

ಶ್ರೀ ಸೌಕೂರು ಮೇಳ == ಹೂವಿನಕೆರೆ – ಮೇಘ ಮಯೂರಿ 

ಶ್ರೀ ಬೆಂಕಿನಾಥೇಶ್ವರ ಮೇಳ  == ಫರಂಗಿಪೇಟೆ ಸೇವಾಂಜಲಿ (ರಿ) –   ಸತ್ಯೊದ ಸ್ವಾಮಿ ಕೊರಗಜ್ಜ (ಸಂಜೆ 6.30)

ಶ್ರೀ ಮಡಾಮಕ್ಕಿ ಮೇಳ == ಕೊಂಡಳ್ಳಿ (ಬೈಲೂರು) – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತೀರ್ಥಹಳ್ಳಿ ಆರಗ ಗುಡ್ಡೆಕೊಪ್ಪ – ನಾಗಮಂಡಲ 

ಶ್ರೀ ಹಿರಿಯಡಕ ಮೇಳ == ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಉಪ್ಪಿನಕುದ್ರು ಶ್ರೀ ವಿನಾಯಕ ದೇವಸ್ಥಾನ 

ಶ್ರೀ ಸಿಗಂದೂರು ಮೇಳ ==  ನಾಯ್ಕನಕಟ್ಟೆ ಮೊಗೇರಿ 

ಶ್ರೀ ನೀಲಾವರ ಮೇಳ  == ಪಾವನ ಕಾಂಪ್ಲೆಕ್ಸ್ ಬಳಿ, ಚಿತ್ತೂರು ಆಲೂರು ಕ್ರಾಸ್ – ದೈವ ಮಂಟಪ 

 ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಶಂಕಾಪುರ 

ಶ್ರೀ ಮೇಗರವಳ್ಳಿ ಮೇಳ == ಬೆಳ್ವೆ, ಬೂಮ್ಮಳ ಗಣೇಶ್ ಕ್ಯಾಶ್ಯೂಸ್ ಗೇರುಬೀಜ ಕಾರ್ಖಾನೆ ವಠಾರ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಬೊಬ್ಬರ್ಯ ದೇವಸ್ಥಾನ – ಭಸ್ಮಾಸುರ ಮೋಹಿನಿ 

ಶ್ರೀ ಹಾಲಾಡಿ ಮೇಳ == ಸಿದ್ದಾಪುರ ಪೇಟೆ – ನೂತನ ಪ್ರಸಂಗ (ಕಾಲಮಿತಿ)

ಶ್ರೀ ಬೋಳಂಬಳ್ಳಿ ಮೇಳ== ಕೋಟ್ನಕಟ್ಟೆ ಹಿರಿಯಡ್ಕ – ಪದ್ಮಾವತಿ, ಮೀನಾಕ್ಷಿ 

ಶ್ರೀ ಬಪ್ಪನಾಡು ಮೇಳ == ಪ್ರಗತಿ ಫ್ರೆಂಡ್ಸ್ ದೊಡ್ಡತೋಟ – ಬಂಗಾರ್ ಬಾಲೆ (ರಾತ್ರಿ 7) 

ಮೇಳಗಳ ಇಂದಿನ (14.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (14.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಾಸ್ತಾನ ಅಣಲಾಡಿ ಮಠದ ಆವರಣ – ರಾಮ ರಾಮಾ ಶ್ರೀರಾಮ 

ಕಟೀಲು ಒಂದನೇ ಮೇಳ == ಸಿರಿಗುಂಡದಪಾಡಿ ಮೂಡುಪಡುಕೋಡಿ ವಯಾ ವಾಮದಪದವು 

ಕಟೀಲು ಎರಡನೇ ಮೇಳ == ‘ಓಂಕಾರ’ MSEZ ಕಾಲನಿ ರೋಡ್, ಕೋಡಿಕೆರೆ ಕುಳಾಯಿ 

ಕಟೀಲು ಮೂರನೇ ಮೇಳ== ಪಾರೆಂಕಿ ವಯಾ ಮಡಂತ್ಯಾರು ಬೆಳ್ತಂಗಡಿ 

ಕಟೀಲು ನಾಲ್ಕನೇ ಮೇಳ  == ಶ್ರೀ ಆದಿಶಕ್ತಿ ಸುಬ್ರಹ್ಮಣ್ಯ ದುರ್ಗಾಪರಮೇಶ್ವರಿ ದೇವಸ್ಥಾನ ಕನ್ನಂಗಿ ತೀರ್ಥಹಳ್ಳಿ 

ಕಟೀಲು ಐದನೇ ಮೇಳ ==  ದೇವಿಕೃಪಾ, ಎರ್ನೋಡಿ ಉಜಿರೆ ಬೆಳ್ತಂಗಡಿ 

ಕಟೀಲು ಆರನೇ ಮೇಳ == ‘ಮೂಲ್ಕಿ ಕೊಳಚಿಕಂಬ್ಳ 

ಮಂದಾರ್ತಿ ಒಂದನೇ ಮೇಳ  == ರಶ್ಮಿ’, ದಾಸಬೆಟ್ಟು ಹಾವಂಜೆ 

ಮಂದಾರ್ತಿ ಎರಡನೇ ಮೇಳ   == ಹಳ್ಳಿ ನಡುಮನೆ ಹೆನ್ನಿ ಕೊಕ್ಕರ್ಣೆ  

ಮಂದಾರ್ತಿ ಮೂರನೇ ಮೇಳ  == ತಗ್ಗಿನಬೈಲು ಗುಂಡ್ಮಿ ಸಾಸ್ತಾನ  

ಮಂದಾರ್ತಿ ನಾಲ್ಕನೇ ಮೇಳ   == ಬೇಳೂರು ಮನೆ ಮಣೂರು ಪಡುಕೆರೆ 

ಮಂದಾರ್ತಿ ಐದನೇ ಮೇಳ  == ಹೆನಬೇರು ಕೆರೆಜೆಡ್ಡು ಪಡುವರಿ ಬೈಂದೂರು 

ಶ್ರೀ ಹನುಮಗಿರಿ ಮೇಳ  == ಕಾರ್ಯಸಿದ್ಧಿ ಶ್ರೀ ವೀರಾಂಜನೇಯ ಕ್ಷೇತ್ರ ರತ್ನಗಿರಿ ಮಡಂತ್ಯಾರು – ಶ್ರೀ ದೇವಿ ಮಹಾತ್ಮೆ (ರಾತ್ರಿ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ತೊಟ್ಟಂ ಬೀಚ್ ರಸ್ತೆ ‘ಅಮ್ಮ’ ಮನೆಯ ಆವರಣ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಉಳ್ಳೂರುಮನೆ ಹಡವು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೈಲ್ಕೆರೆ ಜಪ್ತಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮದ್ಲಿಕಂಬ ಹೊಸೂರು   

ಶ್ರೀ ಪಾವಂಜೆ ಮೇಳ  ==   ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ನಡುಬೆಟ್ಟು ಮಣೂರು  

ಕಮಲಶಿಲೆ ಮೇಳ ‘ಬಿ‘ ==  ಮಾರ್ಡಿ ಕೊಡ್ಲಾಡಿ   

ಶ್ರೀ ಅಮೃತೇಶ್ವರೀ ಮೇಳ == ಹಾಡಿಕೆರೆ ಕೋಟ ಗ್ರಾಮಸ್ಥರು 

ಶ್ರೀ ಸೌಕೂರು ಮೇಳ == ಕೌಂಜೂರು ಕೆಳಾಂಗಡಿ ಮನೆ ಶ್ರೀ ದುರ್ಗಾ ನಿಲಯ – ಸಂಪೂರ್ಣ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ಗೋಳಿತೊಟ್ಟು –   ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಬೇಳಿಂಜೆ ಪೋಸ್ಟ್ ಆಫಿಸ್ ಬಳಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮರವಂತೆ ನಡುಬೆಟ್ಟು ಶ್ರೀ ಬೈಲುಸ್ವಾಮಿ ಸೇವಾ ಸಮಿತಿ, ಸಾಧನಾ ಮಾರ್ಗ – ಶ್ರೀ ಮೂಡುತಾರಿಬೇರು ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಹಿರಿಯಡ್ಕ 

ಶ್ರೀ ಸಿಗಂದೂರು ಮೇಳ ==  ಸೌಡ ಅಮ್ಮನವರ ದೇವಸ್ಥಾನದ ವಠಾರ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಅರಸಾಳು

ಶ್ರೀ ಮೇಗರವಳ್ಳಿ ಮೇಳ == ಕಿಗ್ಗ  

ಶ್ರೀ ಹಾಲಾಡಿ ಮೇಳ == ಬೆಳ್ಳಿಗದ್ದೆ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಕುದ್ರಿಪದವು – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ  == ಸಿದ್ದಕಟ್ಟೆ ಸಂಗಬೆಟ್ಟು – ವಜ್ರ ಕೋಗಿಲೆ 

ಮೇಳಗಳ ಇಂದಿನ (13.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (13.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮುಕ್ಕಾ ಶ್ರೀ ಸತ್ಯಧರ್ಮ ದೇವೀ ದೇವಸ್ಥಾನದ ಆವರಣ – ಶ್ರೀ ಶಿವಪಂಚಾಕ್ಷರೀ ಮಹಾತ್ಮೆ 

ಕಟೀಲು ಒಂದನೇ ಮೇಳ == ಕಡಂದಲೆ ಶ್ರೀ ನಾಗಬ್ರಹ್ಮಸ್ಥಾನದ ಬಳಿ 

ಕಟೀಲು ಎರಡನೇ ಮೇಳ == ಸುಂಕದಕಟ್ಟೆ ಬಜಪೆ 

ಕಟೀಲು ಮೂರನೇ ಮೇಳ== ರಾಮನಗರ, ಕಪಿತಾನಿಯೊ, ಮರೋಳಿ, ನಾಗುರಿ 

ಕಟೀಲು ನಾಲ್ಕನೇ ಮೇಳ  == ಚೌಕ, ಕರುಣಾಪುರ, ಮೇಗರವಳ್ಳಿ ತೀರ್ಥಹಳ್ಳಿ 

ಕಟೀಲು ಐದನೇ ಮೇಳ ==  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಲ್ಲಬೆಟ್ಟು, ನಯನಾಡು, ಬಂಟ್ವಾಳ 

ಕಟೀಲು ಆರನೇ ಮೇಳ == ‘ವಸುಮತಿ’ ಶಿವದುರ್ಗ ಕಾಂಪೌಂಡ್, ಉಲ್ಲಂಜೆ, ಮಜಿಲ 

ಮಂದಾರ್ತಿ ಒಂದನೇ ಮೇಳ  == ನೀರ್ಕೊಡ್ಲು ಮನೆ, ಹನೆಹಳ್ಳಿ ಬಾರ್ಕೂರು 

ಮಂದಾರ್ತಿ ಎರಡನೇ ಮೇಳ   == ಹುಂಚನಿ ಗೋಳಿಹೊಳೆ ಬೈಂದೂರು 

ಮಂದಾರ್ತಿ ಮೂರನೇ ಮೇಳ  == ನಟರಾಜ ನಿಲಯ ಜನತಾ ಕಾಲನಿ ವಕ್ವಾಡಿ 

ಮಂದಾರ್ತಿ ನಾಲ್ಕನೇ ಮೇಳ   == ಮಾತೃಕೃಪಾ ನಾವುಂದ – ಕೂಡಾಟ 

ಮಂದಾರ್ತಿ ಐದನೇ ಮೇಳ  == ಮಾತೃಕೃಪಾ ನಾವುಂದ – ಕೂಡಾಟ  

ಶ್ರೀ ಹನುಮಗಿರಿ ಮೇಳ  == ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರ  – ಶುಕ್ರನಂದನೆ (ರಾತ್ರಿ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ಆವರ್ಸಾ ಬೀದಿಬೀರ ದೇವಸ್ಥಾನ (ಉ.ಕ) – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಹರಿಷೆ – ಕಾಳಿದಾಸ, ಚಂದ್ರಹಾಸ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ‘ಪದ್ಮಾವತಿ ಸಹಪಾರಿವಾರ ದೇವಸ್ಥಾನ ಬೊಬ್ಬರ್ಯನಹಿತ್ಲು ನಾವುಂದ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮೆಟ್ಸಂಕಾ ಆಜ್ರಿ – ಕಮಲಶಿಲೆ ಮೇಳದೊಂದಿಗೆ ಕೂಡಾಟ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕಟ್ ಮೇಲ್ಮನೆ ಹೆಮ್ಮಾಡಿ  

ಶ್ರೀ ಪಾವಂಜೆ ಮೇಳ  ==   ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಅಭಿಮನ್ಯು, ಗದಾಯುದ್ಧ, ರಕ್ತರಾತ್ರಿ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಮೆಟ್ಸಂಕಾ ಆಜ್ರಿ – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ 

ಕಮಲಶಿಲೆ ಮೇಳ ‘ಬಿ‘ ==  ಕಮಲಶಿಲೆ  

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಅರಮೇಶ್ವರ ದೇವಸ್ಥಾನ ಕೋಟತಟ್ಟು ಪಡುಕೆರೆ  

ಶ್ರೀ ಸೌಕೂರು ಮೇಳ == ಕೆಂಚನೂರು ಮಾವಿನಕೆರೆ ಆರ್ಮ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  == ಕಳವಾರು MSEZ ಕಾಲನಿ – ಶ್ರೀ ದೇವಿ ಅಗ್ನಿ ಕಲ್ಲುರ್ಟಿ  

ಶ್ರೀ ಮಡಾಮಕ್ಕಿ ಮೇಳ == ಕಾರ್ಕಡ ತೆಂಕು ಹೋಳಿ ಸುಬ್ರಹ್ಮಣ್ಯ ನಿಲಯ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶಿರೂರು ಮುದ್ದುಮನೆ ಶ್ರೀ ಅಬ್ಬಕ್ಕ ಶ್ರೀ ಧಾರಕೇಶ್ವರಿ/ ಶ್ರೀ ಬ್ರಹ್ಮಬೈದರ್ಕಳ ಗರಡಿ ನಾಯರಬೆಟ್ಟು – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಬೆಪ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಶಂಕರನಾರಾಯಣ ಕಾಲೇಜು ಎದುರು 

ಶ್ರೀ ಸಿಗಂದೂರು ಮೇಳ ==  ಮಾವಿನಕೊಡ್ಲು ಅಂಗಡಿ ವಠಾರ 

ಶ್ರೀ ನೀಲಾವರ ಮೇಳ  == ಹೊಸಾಳ ನಾಗರಮಠ ಕ್ರಾಸ್ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಅರಳಸುರುಳಿ 

ಶ್ರೀ ಮೇಗರವಳ್ಳಿ ಮೇಳ == ನಿಡ್ ಗಲ್ ಯಕ್ಷಾಭಿಮಾನಿಗಳು – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ಬೀಯಾಳಿ ಅಶ್ವಥ್ ಕಟ್ಟೆ – ದಿವ್ಯ ಸನ್ನಿಧಿ 

ಶ್ರೀ ಹಾಲಾಡಿ ಮೇಳ == ಏಳಿಗೆ ಕಿರಾತೋಡಿ – ಶರಸೇತು, ನಾಗಶ್ರೀ

ಶ್ರೀ ಬೋಳಂಬಳ್ಳಿ ಮೇಳ== ಶ್ರೀ ವಿಶ್ವರೂಪ ಅನಂತಪದ್ಮನಾಭ ದೇವಸ್ಥಾನ ಮುತ್ತೂರು ಹಿರಿಯಡ್ಕ – ನಾಗ ಸುನೇತ್ರೆ 

ಶ್ರೀ ಬಪ್ಪನಾಡು ಮೇಳ == ರಿವರ್ ಲ್ಯಾಂಡ್ ಫ್ರೆಂಡ್ಸ್ ಮೂಡುಕುದ್ರು ಕಲ್ಯಾಣಪುರ – ನಾಗಾನಂದಿನಿ(ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ದೊಂತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರ  (ಕಡಬ ತಾಲೂಕು) – ಶ್ರೀ ಭಗವತೀ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ  == ಕಾಟಿಪಳ್ಳ ಕೃಷ್ಣಾಪುರ 6th ಬ್ಲಾಕ್ ಚಕ್ರವರ್ತಿ ಮೈದಾನ – ಸರ್ಪ ಸಂಬಂಧ (ಕಾಲಮಿತಿ)

ಶ್ರೀ ದೇಂತಡ್ಕ ಮೇಳ == ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಲಾಯ್ಲ – ಕಪಿಲ ಕಾತ್ಯಾಯಿನಿ (ಕಾಲಮಿತಿ ರಾತ್ರಿ 7.30 ರಿಂದ) 

ಐನೂರು ಪತ್ನಿಯರೊಂದಿಗೆ ನೀರಾಟವಾಡಿದ ರಸಿಕ ಭೂಪ – ಯಕ್ಷಗಾನ ವೀಡಿಯೋ 

ಐನೂರು ಮಂದಿ ಪತ್ನಿಯರೊಂದಿಗೆ ನೀರಾಟವಾಡಿದ ರಸಿಕ ಕಾರ್ತವೀರ್ಯ, ರಾವಣನ ಪೂಜಾಭಂಗ (ಯಕ್ಷಗಾನ – ಭಾರ್ಗವ ವಿಜಯ ಭಾಗ – 3) ವೀಡಿಯೋ ನೋಡಿ.