Monday, September 21, 2026
Home Blog Page 330

ಕಟೀಲು ಸಿತ್ಲ ಶ್ರೀಮಾ ನಿಲಯದ ಮುಂಭಾಗದಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ 

ದಿನಾಂಕ 25.04.2021ನೇ ಆದಿತ್ಯವಾರದಂದು ಸಂಜೆ ಘಂಟೆ 7ರಿಂದ ರಾತ್ರಿ ಘಂಟೆ 12ರ ವರೆಗೆ, ಕಟೀಲು ಸಿತ್ಲ ಶ್ರೀಮಾ ನಿಲಯದ ಮುಂಭಾಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. 

ಮಚ್ಚಾರು ಪಡೀಲಿನಲ್ಲಿ ಕಟೀಲು ಮೇಳದ ಯಕ್ಷಗಾನ ಪ್ರದರ್ಶನ 

ದಿನಾಂಕ 23.04.2021ನೇ ಶುಕ್ರವಾರದಂದು ಮಚ್ಚಾರು ಪಡೀಲು ಶ್ರೀ ದೇವಿಕೃಪಾ ಮನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. 

ಮೇಳಗಳ ಇಂದಿನ (04.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (04.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೊಡಪಾಡಿ – ಸುದರ್ಶನ ವಿಜಯ, ರುಕ್ಮಿಣಿ ಕಲ್ಯಾಣ 

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’ 

ಕಟೀಲು ಎರಡನೇ ಮೇಳ ==  ಕಲ್ಲಿಮಾರು ಕೊಣಾಜೆ 

ಕಟೀಲು ಮೂರನೇ ಮೇಳ== ಪೆರ್ಮುದೆ ಶ್ರೀ ಸೋಮನಾಥ ಧಾಮ 

ಕಟೀಲು ನಾಲ್ಕನೇ ಮೇಳ  == ಮಠದಬೈಲು ಗುರುಪುರ 

ಕಟೀಲು ಐದನೇ ಮೇಳ ==  ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮಿ ಸದನ’ 

ಕಟೀಲು ಆರನೇ ಮೇಳ == ‘ಲಕ್ಷ್ಮಿ ಪ್ರಸಾದ’ ತಡಂಬೈಲು ಸುರತ್ಕಲ್  

ಮಂದಾರ್ತಿ ಒಂದನೇ ಮೇಳ  == ಶ್ರೀದೇವಿ ನಿಲಯ, ಹೊನ್ನಿಕುಮ್ರಿ ಹೆಗ್ಗುಂಜೆ, ಮಂದಾರ್ತಿ – ಕೂಡಾಟ 

ಮಂದಾರ್ತಿ ಎರಡನೇ ಮೇಳ   ==  ಶ್ರೀದೇವಿ ನಿಲಯ, ಹೊನ್ನಿಕುಮ್ರಿ ಹೆಗ್ಗುಂಜೆ, ಮಂದಾರ್ತಿ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಕಾನಂಗಿ ದೇವಸ್ಥಾನ 

ಮಂದಾರ್ತಿ ನಾಲ್ಕನೇ ಮೇಳ   == ಹೆದ್ದಾರಿಗದ್ದೆ ಅಮವಾಸೆಬೈಲು 

ಮಂದಾರ್ತಿ ಐದನೇ ಮೇಳ  ==  ‘ವಾಣಿಶ್ರೀ’ ಹೊಸಬೆಂಗ್ರೆ ಕೋಡಿಕನ್ಯಾನ 

ಶ್ರೀ ಹನುಮಗಿರಿ ಮೇಳ  ==  ಒಡ್ಡೂರು ಶಾಲಾ ಮೈದಾನ – ಶುಕ್ರನಂದನೆ (ರಾತ್ರಿ 7ರಿಂದ)

ಶ್ರೀ ಸಾಲಿಗ್ರಾಮ ಮೇಳ == ಸೊನಲೆ – ಚಂದ್ರಮುಖಿ ಸೂರ್ಯಸಖಿ 

ಶ್ರೀ ತಳಕಲ ಮೇಳ == ಶ್ರೀ ಕ್ಷೇತ್ರದಲ್ಲಿ – ದಕ್ಷಾಧ್ವರ 

ಶ್ರೀ ಸುಂಕದಕಟ್ಟೆ ಮೇಳ  == ಮೂಡುಪೆರಾರ ಬಲವಾಂಡಿ ದೈವಸ್ಥಾನದ ಎದುರು ಉದಲಬೆಟ್ಟು – ವಜ್ರ ಕೋಗಿಲೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊಲ್ಲೂರು ಸೇವೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಪರಿಮಳ ಸ್ಟೋರ್ಸ್ ಹಂಗಳೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಆಲೂರು ಅಡಿಪಾಲ್ 

ಶ್ರೀ ಪಾವಂಜೆ ಮೇಳ  ==  ಜೈ ಹನುಮಾನ್ ಕಟ್ಟೆಕುಟ್ಟಿಕಳ, ಅಜಿಲಮೊಗರು ಬಳಿ  – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಸಾಗರ ತೆಂಗಿನಮಠ – ಚಂದ್ರಾವಳಿ, ಮೀನಾಕ್ಷಿ 

ಕಮಲಶಿಲೆ ಮೇಳ ‘ಎ‘ ==  ಸೂಲಕೇರಿ ಶ್ರೀ ನಂದಿಕೇಶ್ವರ ದೇವಸ್ಥಾನ, ಶ್ರೀ ವಿಶ್ವಬ್ರಾಹ್ಮಣಪುರ ವಕ್ವಾಡಿ 

ಕಮಲಶಿಲೆ ಮೇಳ ‘ಬಿ‘ == ಕೂಡ್ಲುಮನೆ 

ಶ್ರೀ ಬಪ್ಪನಾಡು ಮೇಳ == ಸಜೀಪ ಕೋಟೆಕಣಿ ಕೊಡಕಲ – ಮಾನಿಷಾದ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪುತ್ತಿಗೆ ಪದವು ಯುವಕ ಮಂಡಲದ ವಠಾರ (ಮೂಡುಬಿದ್ರೆ) – ರಂಗಸ್ಥಳ 

ಶ್ರೀ ಅಮೃತೇಶ್ವರೀ ಮೇಳ ==   ಹೊನ್ನಾರಿ ಬೊಬ್ಬರ್ಯ ದೇವಸ್ಥಾನ ಮೂಡುಗಿಳಿಯಾರು 

ಶ್ರೀ ಬೋಳಂಬಳ್ಳಿ ಮೇಳ== ಚಟ್ಕಲ್ಪಾದೆ ಮುನಿಯಾಲು  

ಶ್ರೀ ಸೌಕೂರು ಮೇಳ ==  ಸೌಕ್ಕೂರು ಮೆಕ್ಕೆ ಗ್ರಾಮಸ್ಥರು – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಗುಡೆ ಮಹಾಲಿಂಗೇಶ್ವರ ದೇವಸ್ಥಾನ ಹೆರಂಜಾಲು – ನೂತನ ಪ್ರಸಂಗ (ಕಾಲಮಿತಿ)

ಶ್ರೀ ಬೆಂಕಿನಾಥೇಶ್ವರ ಮೇಳ  ==  ಬಜಾಲ್ ಕಲ್ಲಗುಡ್ಡೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕುಚ್ಚೂರು ಕಾನ್ಬೆಟ್ಟು (ಹೆಬ್ರಿ) ಮುಂಡು ಕಾಡ್ಯ ಕಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪಾಂಡೇಶ್ವರ ಶಾಲಾ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ದೇಲಬೆಟ್ಟು – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಹಿರಿಯಡ್ಕ ಓಂತಿಬೆಟ್ಟು ಪೇಟೆ 

ಶ್ರೀ ಸಿಗಂದೂರು ಮೇಳ == ಜಡ್ಕಲ್ ರಾಮಮಂದಿರ ಶಾಲಾ ವಠಾರ 

ಶ್ರೀ ನೀಲಾವರ ಮೇಳ  == ಕಬ್ಬರ್ಗಿ ಕತಗಾಲ ಕುಮಟಾ – ದೈವ ಮಂಟಪ, ಮೀನಾಕ್ಷಿ ಕಲ್ಯಾಣ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಕತಗಾಲ್  ಮತ್ತು ನಂಜರವಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಹೇರೂರು 4ನೇ ಮಾರಿಕಟ್ಟೆ – ಕುಲದೈವ ಪಂಜುರ್ಲಿ 

ಕ್ಯಾಂಡ್ಯನ್ ನೃತ್ಯ – ಶ್ರೀಲಂಕಾದ ಸಾಂಪ್ರದಾಯಿಕ ಸಾಂಸ್ಕೃತಿಕ ನೃತ್ಯದ ವೀಡೀಯೋ 

ಕ್ಯಾಂಡ್ಯನ್ ನೃತ್ಯವು ಶ್ರೀಲಂಕಾದ ಉದಾರತ ಎಂದು ಕರೆಯಲ್ಪಡುವ ಮಧ್ಯ ಬೆಟ್ಟಗಳ ಪ್ರದೇಶದ ಕ್ಯಾಂಡಿ ಎಂದು ಕರೆಯಲ್ಪಡುವ ಪ್ರದೇಶಕ್ಕೆ ಜನಪ್ರಿಯ ಮತ್ತು ಸ್ಥಳೀಯ ವಿವಿಧ ನೃತ್ಯ ಪ್ರಕಾರಗಳನ್ನು ಒಳಗೊಂಡಿದೆ, ಕ್ಯಾಂಡ್ಯನ್ ನೃತ್ಯದ ವೀಡೀಯೋ.

ದೊಡ್ಡಡ್ಕ ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರದ 28 ನೇ ವಾರ್ಷಿಕೋತ್ಸವ, ಧಾರ್ಮಿಕ ಕಾರ್ಯಕ್ರಮ, ಯಕ್ಷಗಾನ 

ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರ, ದೊಡ್ಡಡ್ಕ ಇದರ 28 ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಬೆಳಿಗ್ಗೆ ಗಣಪತಿ ಹವನ, ಮಹಾಲಕ್ಷ್ಮಿ ಪೂಜೆ, ಶ್ರೀ ನರಹರಿ ಭಟ್ ಪಾಲೆಚ್ಚಾರು ಇವರಿಂದ ಕಥಾವಾಚನ , ಮಹಾಪೂಜೆ, ಅನ್ನಸಂತರ್ಪಣೆ ,ಭಜನಾ ಕಾರ್ಯಗಳು ನಡೆದವು.


ಧಾರ್ಮಿಕ ಸಭಾ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ನಿವೃತ್ತ ಅಧ್ಯಾಪಕ ಶ್ರೀ ನರಹರಿ ಭಟ್ ಪಾಲೆಚ್ಚಾರು ವಹಿಸಿದ್ದರು. ಅತಿಥಿಗಳಾಗಿ ನ್ಯಾಯವಾದಿ ಶ್ರೀ ಚೇತನ್ ನಾಯಕ್ ಸಾಮೇತಡ್ಕ, ಸಂಚಾರಿ ಪೊಲೀಸ್ ಉಪ-ನಿರೀಕ್ಷಕರಾದ ಶ್ರೀ ರಾಮ ನಾಯ್ಕ ಗೆಣಸಿನಕುಮೇರು,
ಉಪಸ್ಥಿತರಿದ್ದರು.

ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಜಗದೀಶ್ ಭಂಡಾರಿ, ಗೆಣಸಿನ ಕುಮೇರು ಪ್ರಸ್ತಾವಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ವೆಂಕಟಕೃಷ್ಣ ಭಟ್  ವರದಿ ವಾಚಿಸಿ , ಲೆಕ್ಕಪತ್ರ  ಮಂಡಿಸಿದರು. ಮಂದಿರದ ಸೇವಾಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಸೇಸಪ್ಪ ನಾಯ್ಕ್ ವಂದನಾರ್ಪಣೆಗೈದರು. 

ಆ ಬಳಿಕ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ‘ಓಂ ನಮಃ ಶಿವಾಯ, ರಕ್ತರಾತ್ರಿ’ ಎಂಬ ಯಕ್ಷಗಾನ ಬಯಲಾಟ ಜರಗಿತು.

ಮೇಳಗಳ ಇಂದಿನ (03.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (03.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಆಲೂರು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ರಾಘವೇಂದ್ರ ನಿಲಯ ಲಾಯ್ಲ, ಬೆಳ್ತಂಗಡಿ 

ಕಟೀಲು ಎರಡನೇ ಮೇಳ ==  ಹಿರ್ಣೆ ಅರಳ ಬಂಟ್ವಾಳ   

ಕಟೀಲು ಮೂರನೇ ಮೇಳ== ಅಳಿಕೆ ಮನೆ ಮೂಡುಪೆರಾರ 

ಕಟೀಲು ನಾಲ್ಕನೇ ಮೇಳ  == ಹರೇಕಳ 

ಕಟೀಲು ಐದನೇ ಮೇಳ ==  ಅಸೈಗೋಳಿ ಕೋಣಾಜೆ 

ಕಟೀಲು ಆರನೇ ಮೇಳ == ಮಂಜಲ್ ಕಟ್ಟೆ. ಕಾವೂರು  

ಮಂದಾರ್ತಿ ಒಂದನೇ ಮೇಳ  == ಮೂಡುಬೆಟ್ಟು ವಂಡಾರು – ಐದೂ ಮೇಳಗಳ ಕೂಡಾಟ 

ಮಂದಾರ್ತಿ ಎರಡನೇ ಮೇಳ   ==  ಮೂಡುಬೆಟ್ಟು ವಂಡಾರು – ಐದೂ ಮೇಳಗಳ ಕೂಡಾಟ    

ಮಂದಾರ್ತಿ ಮೂರನೇ ಮೇಳ  == ಮೂಡುಬೆಟ್ಟು ವಂಡಾರು – ಐದೂ ಮೇಳಗಳ ಕೂಡಾಟ

ಮಂದಾರ್ತಿ ನಾಲ್ಕನೇ ಮೇಳ   == ಮೂಡುಬೆಟ್ಟು ವಂಡಾರು – ಐದೂ ಮೇಳಗಳ ಕೂಡಾಟ

ಮಂದಾರ್ತಿ ಐದನೇ ಮೇಳ  ==  ಮೂಡುಬೆಟ್ಟು ವಂಡಾರು – ಐದೂ ಮೇಳಗಳ ಕೂಡಾಟ

ಶ್ರೀ ಹನುಮಗಿರಿ ಮೇಳ  ==  ನಾಗಕನ್ನಿಕಾ ದೇವಸ್ಥಾನದ ಮೈದಾನ ದೇರೆಬೈಲು ಕೊಂಚಾಡಿ ಮಂಗಳೂರು – ಚೂಡಾಮಣಿ ಲಂಕಾದಹನ, ಚಕ್ರವ್ಯೂಹ, ಮಹಿಷಮರ್ದಿನಿ (ರಾತ್ರಿ 9.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಸಾಲ್ಕಣಿ ಓಣಿಕೇರಿ (ಉ.ಕ) – ದ್ರೌಪದಿ ವಸ್ತ್ರಾಪಹಾರ, ಶಿವ ಪಂಚಾಕ್ಷರಿ ಮಹಾತ್ಮೆ 

ಶ್ರೀ ಪೆರ್ಡೂರು ಮೇಳ == ಮಹಾವೀರ ರೈಸ್ ಮಿಲ್ ಆವರಣ ಶಶಿಗೋಳಿ – ಸೂರ್ಯಸಂಕ್ರಾಂತಿ  

ಶ್ರೀ ಸುಂಕದಕಟ್ಟೆ ಮೇಳ  == ಬೋಂದೆಲ್ ಕೃಷ್ಣನಗರ – ಶ್ರೀ ದೇವಿ ಪಂಚಾಮೃತ 

ಶ್ರೀ ದೇಂತಡ್ಕ ಮೇಳ == ಕುಕ್ಕುದಕಟ್ಟೆ ಕರಿಕುಮೇರ್ ಬಸ್ ನಿಲ್ದಾಣ ಬಳಿ – ಧರ್ಮದೈವ ಜಾರಂದಾಯ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೌಂಜೂರು ನೇರಳಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮೇರ್ಡಿಮನೆ ತಲ್ಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಅಕ್ಸಾಲಿಹಿತ್ಲು ನಾವುಂದ 

ಶ್ರೀ ಪಾವಂಜೆ ಮೇಳ  ==  ಉರ್ವ ಮಾರ್ಕೆಟ್ ಮೈದಾನ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಸಾಗರ ಗಾಂಧಿ ಮೈದಾನ (ಕಾಲಮಿತಿ) 

ಕಮಲಶಿಲೆ ಮೇಳ ‘ಎ‘ ==  ಶ್ರೀ ಬ್ರಾಹ್ಮೀ ಪಡುವರಿತಟ್ಟು ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ಹತ್ತಿರ – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ 

ಕಮಲಶಿಲೆ ಮೇಳ ‘ಬಿ‘ == ಜಂಬೆಟ್ಟು ಹೊಳೆಬಾಗಿಲು ಗರೋಡಿ ಮುದ್ದುಮನೆ 

ಶ್ರೀ ಬಪ್ಪನಾಡು ಮೇಳ == ಕಂಬಳಗುಡ್ಡೆ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂದಲೆ (ವಾಮಂಜೂರು) ಬಾಕಿಮಾರು ಗದ್ದೆ – ಅಬ್ಬರದ ಬಬ್ಬರ್ಯೆ 

ಶ್ರೀ ಅಮೃತೇಶ್ವರೀ ಮೇಳ ==   ಶ್ರೀ ಬ್ರಾಹ್ಮೀ ಪಡುವರಿತಟ್ಟು ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ಹತ್ತಿರ – ಕಮಲಶಿಲೆ ಮೇಳದೊಂದಿಗೆ ಕೂಡಾಟ 

ಶ್ರೀ ಬೋಳಂಬಳ್ಳಿ ಮೇಳ== ತ್ರಿಣಿವೆ ಹೊಸನಗರ ನಾಗರಕೊಡಿಗೆ 

ಶ್ರೀ ಸೌಕೂರು ಮೇಳ ==  ಅಂಕದಕಟ್ಟೆ ಬಡಾಕೇರಿ ಪಂಚವರ್ಣ ಹಾಯಿಗುಳಿ ಬೊಬ್ಬರ್ಯ ದೇವಸ್ಥಾನ – ಬೇಲ್ತೂರು ಕ್ಷೇತ್ರ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಮೊಳಹಳ್ಳಿ ಮೂಡುಮನೆ – ಪಾಪಣ್ಣ ವಿಜಯ, ಗುಣಸುಂದರಿ, ಜಾಂಬವತಿ ಕಲ್ಯಾಣ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ನಂತೂರು ಹಿಂದೂ ಜಾಗರಣ ವೇದಿಕೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಹೆಬ್ರಿ ಇಂದಿರಾನಗರ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೆಳ್ವೆಗುಮ್ಮಲ ಹೊನ್ಕಲ್ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಉಡುಪಿ ಗುಂಡಿಬೈಲ್ ಬಳೆಗಾರಬೆಟ್ಟು – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಗದ್ದೆಮನೆ ಹೊಳೆತೋಟ ಬಿಜೂರು – ಶನೀಶ್ವರ ಕ್ಷೇತ್ರ ಮಹಾತ್ಮೆ   

ಶ್ರೀ ಸಿಗಂದೂರು ಮೇಳ == ಹಕ್ಲಾಡಿ ಕೆಳಾಕಳಿ 

ಶ್ರೀ ನೀಲಾವರ ಮೇಳ  == ಗೋಳ್ಯಾಡಿ ಶ್ರೀ ನಂದಿಕೇಶ್ವರ ಹಾಗೂ ಶ್ರೀ ಚಿಕ್ಕಮ್ಮ ಸಪರಿವಾರ ದೈವಸ್ಥಾನ ಅಚ್ಲಾಡಿ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಮಂಗಳಾದೇವಿ ಮೇಳ == ನಾರಾವಿ ಗುಜ್ಜೊಟ್ಟು ಸಾವ್ಯ ಬಳಿ – ಬಾಲೆ ಮಾಣಿ ಮಾಯಂದಾಲ್ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕಾರ್ಕೊಡ್ಲ್ , ಮೇಲಿನ ಹಣಗೇರಿ 

ಶ್ರೀ ಮೇಗರವಳ್ಳಿ ಮೇಳ == ಪೆರ್ಡೂರು ಕೊಯಿತ್ಯಾರು ಜೋಗಿಬೆಟ್ಟು – ಕುಲದೈವ ಪಂಜುರ್ಲಿ 

ಯಕ್ಷಗಾನ ಕಲಿಕಾ ತರಗತಿ ಉದ್ಘಾಟನೆ

ಯಕ್ಷಗಾನ ನೃತ್ಯ ಕಲಿಕೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕಾರಣವಾಗುತ್ತದೆ. ಬದುಕಿಗೊಂದು ಶಿಸ್ತು ಕಲಿಸುತ್ತದೆ ಎಂದು ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಅಭಿಪ್ರಾಯಪಟ್ಟರು. ಅವರು ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ ನೂತನ ಕಟ್ಟಡ ‘ಶ್ರೀ ಜನಾರ್ದನ ಮಂಟಪ’ದಲ್ಲಿ ಜ್ಯೋತಿ ಬೆಳಗಿಸಿ ಯಕ್ಷಗಾನ ಕಲಿಕಾ ತರಗತಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ನೂತನ ಕಟ್ಟಡಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಮತ್ತು ಪೀಠೋಪಕರಣಗಳ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಇಂದಿರಾ ಶಿವರಾಯ ಪೊಲಿಟೆಕ್ನ್‍ನಿಕಲ್‍ ಕಾಲೇಜಿನ ನಿರ್ದೇಶಕ ಡಾ. ಮೋಹನ್‍ದಾಸ್ ಭಟ್‍ ಅಭ್ಯಾಗತರಾಗಿ ಭಾಗವಹಿಸಿದರು.

ಯಕ್ಷಗಾನ ಗುರು ನರಸಿಂಹ ತುಂಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಪ್ರತೀ ಭಾನುವಾರ ತರಗತಿ ನಡೆಸಲಾಗುತ್ತದೆ. ಎಲ್ಲ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಸ್ಥೆಯ ಸದಸ್ಯ ಮಂಜುನಾಥ ತೆಂಕಿಲಾಯ ವಂದಿಸಿದರು.

ಕೋಶಾಧಿಕಾರಿ ನಟರಾಜ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷ ಕೆ.ಅಜಿತ್‍ಕುಮಾರ್ ಸದಸ್ಯರುಗಳಾದ ಪ್ರೊ| ನಾರಾಯಣ ಎಂ. ಹೆಗಡೆ, ಜಯ ಕೆ., ಪ್ರವೀಣ ಉಪಾಧ್ಯ, ಪ್ರಕಾಶ್ ಹೆಬ್ಬಾರ್, ಸುನಿಲ್ ಕುಮಾರ್, ರಮೇಶ್ ಸಾಲ್ಯಾನ್ ಉಪಸ್ಥಿತರಿದ್ದರು.

ಮೇಳಗಳ ಇಂದಿನ (02.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (02.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == 74ನೇ ಉಳ್ಳೂರು ಜನನಿ ಕಟ್ಟಿನಬೈಲು ನಡುಮನೆ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕಲ್ಲುಮುಂಡ್ಕೂರು ದೈಲಬೆಟ್ಟು ದೇವಸ್ಥಾನದ ಬಳಿ 

ಕಟೀಲು ಎರಡನೇ ಮೇಳ ==  ‘ಶ್ರೀನಿಕೇತನ್’ ಶಾಂತಿನಗರ ಕಾವೂರು 

ಕಟೀಲು ಮೂರನೇ ಮೇಳ= ‘ಸುಬ್ರತ ನಿಲಯ’ ಮಾಯಿಲ ಪಂಜಿಮೊಗರು 

ಕಟೀಲು ನಾಲ್ಕನೇ ಮೇಳ  == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’

ಕಟೀಲು ಐದನೇ ಮೇಳ ==  ಹಿಂದೂ ಯುವ ಸೇನೆ, ಶ್ರೀ ದುರ್ಗಾ ಶಾಖೆ ಕಂಕನಾಡಿ ವಲಯ, ಮಂಗಳೂರು ಪಂಪ್ ವೆಲ್ ಬಳಿ 

ಕಟೀಲು ಆರನೇ ಮೇಳ == ಪೆಜೆತ್ತಬೆಟ್ಟು ಪಡುಬೊಂಡಂತಿಲ 

ಮಂದಾರ್ತಿ ಒಂದನೇ ಮೇಳ  == ಕಳ್ತೂರು ಸಂತೆಕಟ್ಟೆ 

ಮಂದಾರ್ತಿ ಎರಡನೇ ಮೇಳ   == ಕೊಂಡಳ್ಳಿ ಹಂಚಿನಮನೆ ಶಂಕರನಾರಾಯಣ  

ಮಂದಾರ್ತಿ ಮೂರನೇ ಮೇಳ  == ಬನ್ನೇರಳೆಕಟ್ಟೆ ಬಿಲ್ಲಾಡಿ ಜಾನುವಾರುಕಟ್ಟೆ 

ಮಂದಾರ್ತಿ ನಾಲ್ಕನೇ ಮೇಳ   == ”ಕೌಲೇಶ್ವರ’ ಹೊಸಾಳ ಬಾರ್ಕೂರು 

ಮಂದಾರ್ತಿ ಐದನೇ ಮೇಳ  ==  ಶ್ರೀದೇವಿ ಕೃಪಾ ಉಪಾಧ್ಯಾಯರಬೆಟ್ಟು ಪೇತ್ರಿ ಚೇರ್ಕಾಡಿ  

ಶ್ರೀ ಹನುಮಗಿರಿ ಮೇಳ  ==  ಮಹಾಲಕ್ಷ್ಮಿ ಭಜನಾ ಮಂಡಳಿ ದೊಡ್ಡಡ್ಕ ಪುತ್ತೂರು – ಓಂ ನಮಃ ಶಿವಾಯ, ರಕ್ತರಾತ್ರಿ (ರಾತ್ರಿ 8ರಿಂದ)

ಶ್ರೀ ಸಾಲಿಗ್ರಾಮ ಮೇಳ == ಬಾರೆ ಕಾಲನಿ (ಯಲ್ಲಾಪುರ) – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಸಂಪೆಕಟ್ಟೆ ಹೈಸ್ಕೂಲ್ ಮೈದಾನ – ವೀರ ಬರ್ಬರೀಕ, ಮಾಗಧ ವಧೆ 

ಶ್ರೀ ಸುಂಕದಕಟ್ಟೆ ಮೇಳ  == ತೋಕೂರು ಕೆಂಜಾರು – ಬ್ರಹ್ಮ ಬಲಾಂಡಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಜಡ್ಡಿನಮನೆ ಬೆಳ್ಳಾಡಿ ನಾಡ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ತ್ರಾಸಿ ಶ್ರೀರಾಮ ಭಜನಾ ಮಂದಿರ ಸಮೀಪ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ‘ಶ್ರೀ ಮೂಕಾಂಬಿಕಾ ಕೃಪಾ’ ಉದ್ರಿಮನೆ ಮೊವಾಡಿ ತ್ರಾಸಿ 

ಶ್ರೀ ಪಾವಂಜೆ ಮೇಳ  ==  ಶ್ರೀ ಕ್ಷೇತ್ರ ಪಾವಂಜೆ – ಜಾಂಬವತಿ, ಶ್ರೀನಿವಾಸ ಕಲ್ಯಾಣ  (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಸಾಗರ ಸಿರಿವಂತೆ – ಚಂದ್ರಾವಳಿ, ದಕ್ಷಯಜ್ಞ 

ಕಮಲಶಿಲೆ ಮೇಳ ‘ಎ‘ == ಕುಂಡ್ಲುಮನೆ 

ಕಮಲಶಿಲೆ ಮೇಳ ‘ಬಿ‘ == ನಂದಿಕೇಶ್ವರ ದೇವಸ್ಥಾನ, ಆಲೂಗುಡ್ಡೆ ತೆಕ್ಕಟ್ಟೆ  

ಶ್ರೀ ಬಪ್ಪನಾಡು ಮೇಳ == ಶನೀಶ್ವರ ಕಟ್ಟೆ ಫ್ರೆಂಡ್ಸ್, ಗುರಿಮಜಲು ಕಾವಳಮೂಡೂರು – ನಾಗ ನಂದಿನಿ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ದಡ್ಡಲಕಾಡು ಜಗದಾಂಬಿಕಾ, ಮಹಾಮಾಯ ಗುಳಿಗ, ಅಣ್ಣಪ್ಪ ಕ್ಷೇತ್ರದ ವಠಾರ – ರಂಗಸ್ಥಳ 

ಶ್ರೀ ಅಮೃತೇಶ್ವರೀ ಮೇಳ ==  ಬಳ್ಕೂರು ಸಸಿಹಿತ್ಲು ಮೂಡೂರನಮನೆ – ಸಿಗಂದೂರು ಮೇಳದೊಂದಿಗೆ ಕೂಡಾಟ 

ಶ್ರೀ ಸೌಕೂರು ಮೇಳ ==  ಜಡ್ಡಿನಕೊಡ್ಲು ಶ್ರೀ ದುರ್ಗಾ ನಿಲಯ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಚಿತ್ತೇರಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಠಾರ – ನೂತನ ಪ್ರಸಂಗ

ಶ್ರೀ ಬೆಂಕಿನಾಥೇಶ್ವರ ಮೇಳ  ==  ಸಾಣೂರು ಯುವಕ ಮಂಡಲದ ಮುಂಭಾಗ – ನಾಗ ತಂಬಿಲ (ಕಾಲಮಿತಿ ರಾತ್ರಿ 7ರಿಂದ)

ಶ್ರೀ ಮಡಾಮಕ್ಕಿ ಮೇಳ == ನೆಲ್ಲಿಕಟ್ಟೆ ಬಲಾಡಿಸ್ವಾಮಿ ಮನೆ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೋಟ ಮಣೂರು ನಡುಬೆಟ್ಟು – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಪಂಜಕೊಯಿಕುಡೆ ಅರಿಪಾದೆ ಜಾರಂದಾಯ ಯುವಕ ಮಂಡಲದ ಬಳಿ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಗದ್ದಿಗೆ ಅಮ್ಮ, ಚಾಂತಾರು     

ಶ್ರೀ ಸಿಗಂದೂರು ಮೇಳ == ಬಳ್ಕೂರು ಸಸಿಹಿತ್ಲು ಮೂಡೂರನಮನೆ – ಅಮೃತೇಶ್ವರೀ ಮೇಳದೊಂದಿಗೆ ಕೂಡಾಟ 

ಶ್ರೀ ನೀಲಾವರ ಮೇಳ  == ಬಾರಕೂರು ಪೇಟೆ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಹಳಗ 

ಶ್ರೀ ಮೇಗರವಳ್ಳಿ ಮೇಳ == ಕರ್ಜೆ ಯಕ್ಷಮಿತ್ರ ಬಳಗ – ಕುಲದೈವ ಪಂಜುರ್ಲಿ 

ಯಕ್ಷಗಾನ ಕಲಾವಿದ ಸತೀಶ್ ಹೆಗಡೆಯವರ ಕುಟುಂಬಕ್ಕೆ ಯಕ್ಷಗಾನ ಕಲಾರಂಗದಿಂದ ನೆರವು

35 ವರ್ಷಗಳ ಕಾಲ ವಿವಿಧ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿ, ಎರಡು ತಿಂಗಳ ಹಿಂದೆ ಅಕಾಲಿಕವಾಗಿ ನಿಧನರಾದ ಸತೀಶ್ ಹೆಗಡೆ, ಆನೆಗದ್ದೆ ಯವರ ಪತ್ನಿ ಶ್ರೀಮತಿ ಸಂಧ್ಯಾ ಇವರಿಗೆ ಯಕ್ಷಗಾನ ಕಲಾರಂಗದ ವತಿಯಿಂದ ರೂ. 50,000/- ಮೊತ್ತದ ನೆರವನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚದಲ್ಲಿರುವ ಅವರ ಮನೆಯಲ್ಲಿ ಬಾಳಗಾರು ಮಠಾಧೀಶರಾದ ಶ್ರೀ ಶ್ರೀ ರಘುಭೂಷಣತೀರ್ಥ ಶ್ರೀಪಾದರು ನೀಡಿ ಸಾಂತ್ವನದ ಮಾತುಗಳನ್ನಾಡಿ ಹರಸಿದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ಎಸ್.ವಿ ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಸತೀಶ್ ಹೆಗಡೆಯವರ ಕುಟುಂಬಕ್ಕೆ ಧೈರ್ಯದ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಅವರ ಪುತ್ರ ಸುದರ್ಶನ ಎಸ್ ಮತ್ತು ಪುತ್ರಿ ಸಿಂಚನಾ ಎಸ್ ಉಪಸ್ಥಿತರಿದ್ದರು.

ನಾಳೆ (02.04.2021) “ಹನುಮದ್ವಿಲಾಸ, ರಕ್ತಾಕ್ಷಿ ಕಲ್ಯಾಣ” ಯಕ್ಷಗಾನ ಪ್ರದರ್ಶನ

ನಾಳೆ (02.04.2021) ಶುಕ್ರವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಕಟೀಲು ಕ್ಷೇತ್ರದ ಶ್ರೀ ಸರಸ್ವತಿ ಸದನದಲ್ಲಿ “ಹನುಮದ್ವಿಲಾಸ, ರಕ್ತಾಕ್ಷಿ ಕಲ್ಯಾಣ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.