ದೀಪ ಎನ್ನುವುದು ಪ್ರತಿಯೊಬ್ಬರ ಹೃದಯಾಂತರಾಳದಲ್ಲಿ ಒಂದಲ್ಲ ಒಂದು ರೂಪದಲ್ಲಿಯೋ ಭಾವದಲ್ಲಿಯೋ ಬೆಳಗುತ್ತಿರುತ್ತದೆ. ಕಲಾಜ್ಯೋತಿಯೂ ಹಾಗೆಯೇ. ನಮ್ಮ ಸಂಸ್ಕೃತಿಯಲ್ಲಿ ದೀಪದಂತೆ ಪ್ರಜ್ವಲಿಸುತ್ತಿರುವ ಸಂಗೀತಾದಿ ಅದೆಷ್ಟೋ ಕಲೆಗಳಿಗೆ ಮಾರುಹೋಗದ ಮಾನವ ಹೃದಯಗಳಿಲ್ಲ. ಅಂತಹಾ ಕಲೆಗಳಿಗೆ ವೇದಿಕೆಯನ್ನೊದಗಿಸುವ ಸಣ್ಣ ಪ್ರಯತ್ನವೇ ಈ ಯಕ್ಷದೀಪ ಎಂಬ ಆನ್ಲೈನ್ ಸಾಮಾಜಿಕ ಸುದ್ದಿತಾಣ. ಈ ಅಂತರ್ಜಾಲ ಸುದ್ದಿ ತಾಣದ ಮೂಲಕ ನಾವು ನಿಮ್ಮೆಲ್ಲರ ಮನಸ್ಸು ಹೃದಯಗಳಲ್ಲಿ ನೆಲೆ ನಿಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ಸುದ್ದಿ ತಾಣ ಎಲ್ಲ ವಿಭಾಗದ ಸಂಗೀತ, ಕಲೆಗಳಿಗೆ ಮೀಸಲು. ವ್ಯಕ್ತಿಗಿಂತ ಕಲೆ ದೊಡ್ಡದು. ರಾಷ್ಟ್ರದ ಹಿತ ಕಾಯುವ ಕಲೆಯನ್ನು ಎಂದೂ ಗೌರವಿಸುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ಪ್ರೋತ್ಸಾಹಿಸುತ್ತಿರುವ ಓದುಗರಿಗೆ ತುಂಬು ಹೃದಯದ ಕೃತಜ್ಞತೆಗಳು. ನೀವು ನಮ್ಮ ಪತ್ರಿಕೆಯ ಚಂದಾದಾರರಾಗಿರದಿದ್ದಲ್ಲಿ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹರೂಪವಾಗಿ ಕೈಜೋಡಿಸಿ ಸ್ವ ಇಚ್ಛೆಯಿಂದ ಧನಸಹಾಯ ಮಾಡಿದಲ್ಲಿ ಸಂತೋಷದಿಂದ ಸ್ವೀಕರಿಸುತ್ತೇವೆ. ಅಥವಾ ಇನ್ನಿತರ ರೀತಿಯಲ್ಲಿ ಸಹಾಯಮಾಡುವುದಾದರೆ ನಮ್ಮ ಲೇಖನದ ಲಿಂಕ್ ಗಳನ್ನು ಹೆಚ್ಚು ಜನರಿಗೆ ಫಾರ್ವರ್ಡ್ ಮಾಡಿ ತಲುಪಿಸುವ ಕಾರ್ಯವನ್ನೂ ಮಾಡಬಹುದು. ಹೆಚ್ಚು ಹೆಚ್ಚು ಗ್ರೂಪ್ ಗಳಿಗೆ ನಮ್ಮ ಕಲಾಸಂಬಂಧಿ ಲೇಖನಗಳನ್ನು ತಲುಪಿಸಿ ನಮ್ಮ ಜೊತೆ ಕೈಜೋಡಿಸಬಹುದು.
ಕಟೀಲು ಮೇಳ ಎಂದರೆ ಫಕ್ಕನೆ ನೆನಪಿಗೆ ಬರುವುದು ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗ. ಯಾವ ಕಲಾವಿದರು ಯಾವ ಪಾತ್ರ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದದ್ದೇ. ಹಾಗಾದರೆ ಈ ಸಾಲಿನ ತಿರುಗಾಟದಲ್ಲಿ ಅನಿವಾರ್ಯ ಬದಲಾವಣೆಗಳನ್ನು ಹೊರತುಪಡಿಸಿದರೆ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗದಲ್ಲಿ ಆರೂ ಮೇಳಗಳಲ್ಲಿ ಕ್ರಮವಾಗಿ ಯಾರ್ಯಾರು ಯಾವ್ಯಾವ ವೇಷ ಮಾಡುತ್ತಾರೆ ಎಂದು ತಿಳಿಯೋಣ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(01.122021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಆರಂಭವಾಗಿವೆ. ಈ ಬಾರಿಯೂ ಮೇಳಗಳ ಕಲಾವಿದರ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳು, ಸ್ಥಾನಪಲ್ಲಟಗಳು ಗೋಚರಿಸಿವೆ. ಎಲ್ಲಾ ಆರು ಮೇಳಗಳ ಕಲಾವಿದರ ವಿವರಗಳು ಈ ಕೆಳಗಿನಂತಿದೆ.
(ವಿ.ಸೂ. ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ. ಇತ್ತೀಚೆಗಿನ ಬದಲಾವಣೆಗಳನ್ನು ಅಪ್ ಡೇಟ್ ಮಾಡಲಾಗುವುದು)
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(30.112021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(29.112021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ.