Sunday, March 15, 2026
Home Blog Page 287

ಇಂದು ಆಟ ಎಲ್ಲೆಲ್ಲಿ? – 27-12-2021

ಮೇಳಗಳ ಇಂದಿನ (27.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥಬೀದಿ – ಬ್ರಹ್ಮಕಪಾಲ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ == ‘ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕೃಷ್ಣಾರ್ಜುನ ಕಾಳಗ, ಶ್ರೀನಿವಾಸ ಕಲ್ಯಾಣ 

ಕಟೀಲು ಎರಡನೇ ಮೇಳ == ಪಣಿಯೂರು ಲೇಔಟ್ ಬೆಳಪು, ಪಣಿಯೂರು – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ಮೂರನೇ ಮೇಳ== ಕಟೀಲು ಕ್ಷೇತ್ರ ಸರಸ್ವತಿ ಸದನ – ಗರುಡೋದ್ಭವ 

ಕಟೀಲು ನಾಲ್ಕನೇ ಮೇಳ  == ಪಂಜ ಕೊಯಿಕುಡೆ ವಯಾ ಹಳೆಯಂಗಡಿ – ಭಕ್ತ ಅಂಬರೀಷ, ವೀರಮಣಿ ಕಾಳಗ, ಸ್ವಯಂಪ್ರಭಾ ಪರಿಣಯ 

ಕಟೀಲು ಐದನೇ ಮೇಳ == ಕೊಡಂಬೆಟ್ಟು ವಾಮದಪದವು ಬಂಟ್ವಾಳ – ಉತ್ತಮ ಸೌದಾಮಿನಿ 

ಕಟೀಲು ಆರನೇ ಮೇಳ == ‘ಓಂಕಾರೇಶ್ವರ ಭಜನಾ ಮಂದಿರ, ದುರ್ಗಾನಗರ ಕರಿಯಂಗಳ ವಯಾ ಪೊಳಲಿ – ಶ್ರೀ ದೇವಿ ಮಹಾತ್ಮ್ಯೆ

ಮಂದಾರ್ತಿ ಒಂದನೇ ಮೇಳ  ==  ದೋಣಗೇರಿಮನೆ ಹೊಂಚಾಡಿ ಹುಣ್ಸೆಮಕ್ಕಿ 

ಮಂದಾರ್ತಿ ಎರಡನೇ ಮೇಳ   == ಆಲೂರು ಕುಂಜಾಲು 

ಮಂದಾರ್ತಿ ಮೂರನೇ ಮೇಳ  == ದುರ್ಗಕೃಪಾ ನಾಯಕವಾಡಿ ಗುಜ್ಜಾಡಿ 

ಮಂದಾರ್ತಿ ನಾಲ್ಕನೇ ಮೇಳ   == ಹುಲಗುಂಡಿ ಮಕ್ಕಿಬೈಲು ಕೋಣಂದೂರು 

ಮಂದಾರ್ತಿ ಐದನೇ ಮೇಳ  == ಪ್ರತಿಮಾ ನಿಲಯ ಮೊಗೆಬೆಟ್ಟು ಬೇಳೂರು 

ಹನುಮಗಿರಿ ಮೇಳ == ಕರ್ನಿರೆ ಕೊಪ್ಪಳ ತೋಟ ಮನೆಯ ವಠಾರದಲ್ಲಿ – ಮಾನಿಷಾದ 

ಶ್ರೀ ಸಾಲಿಗ್ರಾಮ ಮೇಳ == ಗೇರುಸೊಪ್ಪನಗರ ಸೀಮಾ ಮುಖ್ಯಪ್ರಾಣ ದೇವಸ್ಥಾನ ವಠಾರ  – ರಾಮಾಂಜನೇಯ, ಕೃಷ್ಣಾರ್ಜುನ, ಅಭಿಮನ್ಯು 

ಶ್ರೀ ಪೆರ್ಡೂರು ಮೇಳ == ಕಿರಿಮಂಜೇಶ್ವರ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಅರಳೀಕಟ್ಟೆಮನೆ ಚಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹಳೆಯಮ್ಮ ದೈವದಮನೆ ವಠಾರ ನೈಕಂಬ್ಳಿ 

ಶ್ರೀ ಪಾವಂಜೆ ಮೇಳ  == ಕೊಡೆತ್ತೂರು ಮಾಗಣೆ – ಮೇಘ ಮಯೂರಿ 

ಕಮಲಶಿಲೆ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ‘ವಕ್ವಾಡಿ ಪಂಚಾಯತ್ ವಠಾರ – ಪ್ರೇಮ ಸಂಘರ್ಷ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ – ಶ್ರೀ ಶಬರಿಮಲೆ ಅಯ್ಯಪ್ಪ 

ಶ್ರೀ ಮಡಾಮಕ್ಕಿ ಮೇಳ == ಕೋಟೇಶ್ವರ ಹಳೆ ಅಳಿವೆ ಹಾಯಿಗುಳಿ ಬೊಬ್ಬರ್ಯ ದೈವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬ್ರಹ್ಮಾವರ ವಾರಂಬಳ್ಳಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಪಡುಕೋಣಾಜೆ ಓಂ ಶ್ರೀ ಮೈದಾನ – ಮಂತ್ರಭೈರವಿ 

ಶ್ರೀ ಸಿಗಂದೂರು ಮೇಳ == ಹರೇಗೋಡು (ಹೆಮ್ಮಾಡಿ) 

ಶ್ರೀ ನೀಲಾವರ ಮೇಳ  == ಶ್ರೀಮಹಾಲಿಂಗೇಶ್ವರ ದೇವಸ್ಥಾನ ಹೇರೂರು – ಸ್ವಾಮೀ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಯಡ್ಯಾಡಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಬಾರಂಬಾಡಿ ಮಾಸ್ತಿಕಟ್ಟೆ – ಮೇಘ ರಂಜಿನಿ 

ಮನಮೋಹಕ ಕೂಚಿಪೂಡಿ ನೃತ್ಯ – Kuchipudi, a beauty of dance

ಕೂಚಿಪೂಡಿ ಎಂಬುದು ಒಂದು ಊರಿನ ಹೆಸರು. ಅವಿಭಜಿತ ಆಂಧ್ರಪ್ರದೇಶ ರಾಜ್ಯದ ಶಾಸ್ತ್ರೀಯ ನೃತ್ಯಪದ್ಧತಿಯಾದ  ಕೂಚಿಪೂಡಿ  ನೃತ್ಯವು ಭರತನಾಟ್ಯವನ್ನು ಹೋಲುವ ಒಂದು ಉತ್ತಮ ಶಾಸ್ತ್ರೀಯ ನೃತ್ಯ ಕಲೆಯಾಗಿದೆ.  ದಕ್ಷಿಣ ಭಾರತದ ಇತರೆಡೆಯೂ ಸಹ ಈ ನೃತ್ಯವು ಜನಪ್ರಿಯತೆಯನ್ನು ಪಡೆದಿದೆ.  

ಆಂಧ್ರಪ್ರದೇಶದ ಬಂಗಾಳ ಕೊಲ್ಲಿ ತೀರದ ಕೃಷ್ಣಾ ಜಿಲ್ಲೆಯ ದಿವಿ ತಾಲೂಕಿನ ಗ್ರಾಮದ ಹೆಸರು  ಕೂಚಿಪೂಡಿ . ಆ ಗ್ರಾಮದಲ್ಲಿರುವ ಬ್ರಾಹ್ಮಣ ಸಮುದಾಯ ಈ ನೃತ್ಯವನ್ನು ಅಭ್ಯಸಿಸಿ ಪ್ರದರ್ಶಿಸುತ್ತಿದ್ದುದರಿಂದ ಈ ನಾಟ್ಯಕಲೆಗೆ ಈ ಹೆಸರು ಬಂತು ಎಂದು ಚರಿತ್ರೆಯಿಂದ ತಿಳಿದುಬರುತ್ತದೆ. 

ಈ ನೃತ್ಯವು ಸಂಪೂರ್ಣವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅವಲಂಬಿಸಿದೆ. ಭರತನಾಟ್ಯದ ಹೋಲಿಕೆಯನ್ನು ಪಡೆದಿದ್ದರೂ ತನ್ನದೇ ಆದ ಹಲವು ಅಂಶಗಳನ್ನು  ಕೂಚಿಪೂಡಿ  ನೃತ್ಯ ಒಳಗೊಂಡಿದೆ. ಎರಡೂ ತರಹದ ನೃತ್ಯಗಳಿಗೆ ಸಂಬಂಧಿತ ವಸ್ತ್ರವಿನ್ಯಾಸಗಳಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ.

ಸಾಮಾನ್ಯವಾಗಿ, ಭರತನಾಟ್ಯಂ ಉಡುಪುಗಳಿಗೆ ವಿವಿಧ ಉದ್ದನೆಯ ಮೂರು ಮಡಿಕೆಗಳಿರುತ್ತವೆ. ಕೂಚಿಪೂಡಿ ನೃತ್ಯದಲ್ಲಿ, ಕೇವಲ ಒಂದೇ ಮಡಿಕೆಯಿದ್ದು, ಭರತನಾಟ್ಯ ಉಡುಪಿನ ಮೂರು ಮಡಿಕೆಗಳಲ್ಲಿ ಅತಿಯುದ್ದದ ಮಡಿಕೆಗಿಂತಲೂ ಉದ್ದವಾಗಿರುತ್ತದೆ.   ಕೂಚಿಪುಡಿ ಮತ್ತು ಭರತನಾಟ್ಯ ಹೆಜ್ಜೆಗಳ ನಡುವಿನ ಬೇರೆ-ಬೇರೆ ಶೈಲಿಗಳಲ್ಲದೆ, ಕೂಚಿಪೂಡಿಯಲ್ಲಿಯೇ ಅಪೂರ್ವವಾದ ಹಲವು ವಿಶಿಷ್ಟ ನೃತ್ಯರೂಪಗಳಿವೆ.

ಹಾವಭಾವಗಳುಳ್ಳ ಭಾಮ ಕಲಾಪಂ ನೃತ್ಯ-ನಾಟಕದಲ್ಲಿ ಕೃಷ್ಣನ ರಾಣಿ ಸತ್ಯಭಾಮಾಳ ಪಾತ್ರವನ್ನು ನೃತ್ಯಕಲಾವಿದರು ಅಮೋಘವಾಗಿ ಚಿತ್ರಿಸುತ್ತಾರೆ. ಅದರ ವೀಡಿಯೊ ಲಿಂಕ್ ಇಲ್ಲಿದೆ. 

ಭರತನಾಟ್ಯ, ಕೂಚಿಪೂಡಿ ಮತ್ತು ಒಡಿಸ್ಸಿ ನೃತ್ಯಗಳ ಹೋಲಿಕೆಯ ವೀಡಿಯೊ ಲಿಂಕ್ 

ಭರತನಾಟ್ಯ ಮತ್ತು ಕೂಚಿಪೂಡಿ ನೃತ್ಯಗಳ ಹೋಲಿಕೆಯ ವೀಡಿಯೊ ಲಿಂಕ್ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು (26-12-2021)

ಕಟೀಲು ಒಂದನೇ ಮೇಳ == ‘ಮೂಡುಪೆರಾರ ಶಾಸ್ತಾವು ಮುರ – ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಕೊಟಿಪಾಡಿ, ಮದ್ಯ, ಸುರತ್ಕಲ್ – ವೀರ ಮಾರುತಿ 

ಕಟೀಲು ಮೂರನೇ ಮೇಳ== ಚೇಳಾಯೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಬೊಂಡಾಲ ಶಾಲಾ ಬಳಿ, ಶಂಭೂರು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ‘ಹರಿಕೃಪಾ ಹೌಸ್, ಓಡಿಲ್ನಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ‘ದೇರಾಡಿ ಮನೆ ಹನ್ನೆರಡು ಕವಲು, ತಾಕೋಡೆ ವಯಾ ಮೂಡುಬಿದ್ರಿ – ಶ್ರೀ ದೇವಿ ಮಹಾತ್ಮ್ಯೆ 

ಜನವರಿ 6ರ ವರೆಗೆ ಯಕ್ಷಗಾನ ಪ್ರದರ್ಶನ ರದ್ದು? – ಕರ್ನಾಟಕ ರಾಜ್ಯದಲ್ಲಿ 10 ದಿನಗಳ ಕಾಲ ನೈಟ್ ಕರ್ಫ್ಯೂ

ಇದೀಗ ಕರ್ನಾಟಕ ರಾಜ್ಯದಲ್ಲಿ ಡಿಸೇಂಬರ್ 28ರಿಂದ ಜನವರಿ 6ರ ವರೆಗೆ ರಾತ್ರಿ ಕರ್ಫ್ಯೂ ಘೋಷಿಸಿ ಸರಕಾರ ಆದೇಶ ಹೊರಡಿಸಿದೆ. ರಾತ್ರಿ 10 ಘಂಟೆಯ ನಂತರ ಜನರು ಮನೆಯಿಂದ ಹೊರಗಡೆ ಬರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಹಗಲು ಹೊತ್ತಿನಲ್ಲೂ ಹೋಟೆಲ್, ಬಾರ್, ಪಬ್ ಗಳಲ್ಲಿ 50:50ರ ಅನುಪಾತದಲ್ಲಿ ಜನರಿಗೆ ಅನುಮತಿ ನೀಡಲಾಗಿದೆ. 

ಈ ಕಾರಣಗಳಿಂದ ಈ 10 ದಿನಗಳ ಅವಧಿಯಲ್ಲಿ ರಾತ್ರಿ ನಡೆಯಬೇಕಾದ ಯಕ್ಷಗಾನ ಬಯಲಾಟಗಳು ನಡೆಯುವುದು ಕಷ್ಟಸಾಧ್ಯ. ಆದುದರಿಂದ ಎಲ್ಲಾ ಮೇಳಗಳು ರಾತ್ರಿ 10 ಘಂಟೆಯ ಒಳಗೆ ತಮ್ಮ ಪ್ರದರ್ಶನಗಳನ್ನು ಮುಗಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ. 

ಇಂದು ಆಟ ಎಲ್ಲೆಲ್ಲಿ? (26-12-2021)

ಮೇಳಗಳ ಇಂದಿನ (26.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಾಸ್ತಾನ  ಮೂಡಹಡು – ಶ್ರೀ ದೇವಿ ಮಹಾತ್ಮೆ 

ಕಟೀಲು ಒಂದನೇ ಮೇಳ == ‘ಮೂಡುಪೆರಾರ ಶಾಸ್ತಾವು ಮುರ – ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಕೊಟಿಪಾಡಿ, ಮದ್ಯ, ಸುರತ್ಕಲ್ – ವೀರ ಮಾರುತಿ 

ಕಟೀಲು ಮೂರನೇ ಮೇಳ== ಚೇಳಾಯೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಬೊಂಡಾಲ ಶಾಲಾ ಬಳಿ, ಶಂಭೂರು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ‘ಹರಿಕೃಪಾ ಹೌಸ್, ಓಡಿಲ್ನಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ‘ದೇರಾಡಿ ಮನೆ ಹನ್ನೆರಡು ಕವಲು, ತಾಕೋಡೆ ವಯಾ ಮೂಡುಬಿದ್ರಿ – ಶ್ರೀ ದೇವಿ ಮಹಾತ್ಮ್ಯೆ 

ಹನುಮಗಿರಿ ಮೇಳ == ಅಂಪಾರು 

ಶ್ರೀ ಸಾಲಿಗ್ರಾಮ ಮೇಳ == ಬೈಲ್ ಚಿಕ್ಕು – ದಕ್ಷ ಯಜ್ಞ, ಮಣಿಕಂಠ 

ಶ್ರೀ ಪೆರ್ಡೂರು ಮೇಳ == ಬೆಣಗಲ್ – ಶೂದ್ರ ತಪಸ್ವಿನಿ 

ಶ್ರೀ ಪಾವಂಜೆ ಮೇಳ  == ಶ್ರೀ ಗೋಪಾಲಕೃಷ್ಣ ಸೇವಾ ಸಂಘ ಕಟ್ಟತ್ತಿಲ ಮಠ – ಧರ್ಮ ಸಿಂಹಾಸನ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ‘ಹಳ್ನಾಡು – ಶ್ರೀ ಹಳ್ನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮಂಚಿ ಕಟ್ಟೆ 

ಶ್ರೀ ಮಡಾಮಕ್ಕಿ ಮೇಳ == ಹೇರಡ್ಕ ಗಣಪತಿ ಮಂದಿರ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಪ್ಪಿನಕೋಟೆ ಗುಡೇಬೆಟ್ಟು ಗರಡಿ 

ಶ್ರೀ ಹಿರಿಯಡಕ ಮೇಳ == ಮದ್ದಡ್ಕ ರಾಮ ಭಜನಾ ಮಂದಿರ 

ಶ್ರೀ ಸಿಗಂದೂರು ಮೇಳ == ಯಳಜಿತ್ ಮುಲ್ಲಿಗದ್ದೆ 

ಶ್ರೀ ಹಾಲಾಡಿ ಮೇಳ == ಕಾಳಾವರ – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ‘ಅಯೋಧ್ಯನಗರ ಸಬಳೂರು 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ನೆಲ್ಲಿಗುಡ್ಡೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು (25-12-2021)

ಕಟೀಲು ಒಂದನೇ ಮೇಳ == ‘ಪೂಮಾವರಗುತ್ತು ಹೌಸ್ ಅಶ್ವತ್ಥಪುರ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಕಿನ್ನಿಗೋಳಿ ಕಂಬಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ, ಸರಸ್ವತಿ ಸದನ – ಶಶಿಪ್ರಭಾ ಪರಿಣಯ, ಕುಶಲವ 

ಕಟೀಲು ನಾಲ್ಕನೇ ಮೇಳ  == ಪಕ್ಷಿಕೆರೆ ವಯಾ ಹಳೆಯಂಗಡಿ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಐದನೇ ಮೇಳ == ಬೋಳಂತೂರುಗುತ್ತು ಮಂಚಿ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ‘ಸುಶೀಧಾಮ, ಪಂಬೆಮೊಗರು ಕೂಳೂರು ಬೀಡಿನ ಬಳಿ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ 

ಡೊಳ್ಳು ಕುಣಿತ – ಕರ್ನಾಟಕದ ಶಾಸ್ತ್ರೀಯ ಜಾನಪದ ಕಲೆ – Dollu Kunitha, a Classical and Folk art of Karnataka

ಡೊಳ್ಳು ಕುಣಿತ ಪುರುಷರಿಗೆ ಮಿಸಲಾದ ಕಲೆ ಎನ್ನುವುದಕ್ಕಾಗಿ ಅದನ್ನು ಗಂಡುಕಲೆ ಎಂದೇ ಕರೆಯುತ್ತಾರೆ. ಇದೊಂದು ಜಾನಪದ ಕಲೆಯೂ ಹೌದು. ಶಾಸ್ತ್ರೀಯ ಕಲೆಯೂ ಹೌದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಡೊಳ್ಳು ಕುಣಿತದಲ್ಲಿ ಭಾಗವಹಿಸುವುದು ಹೇರಳವಾಗಿ ಕಂಡುಬರುತ್ತದೆ. ಒಳ್ಳೆಯ ದೇಹದಾರ್ಡ್ಯತೆ ಮತ್ತು ಶಕ್ತಿ ಇರುವ ಕಲಾವಿದರು ಮಾತ್ರ ಈ ಕಲೆಯನ್ನು ಉತ್ತಮವಾಗಿ ಪ್ರದರ್ಶಿಸಬಲ್ಲರು.

ಉತ್ತರಕರ್ನಾಟಕದ ಬಹುತೇಕ ಜಿಲ್ಲೆಗಳು ಮತ್ತು ಮಧ್ಯ ಕರ್ನಾಟಕದ ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ  ಪ್ರಚಲಿತವಿರುವ  ಡೊಳ್ಳು ಕುಣಿತ ತನ್ನ ವಿಶಿಷ್ಟವಾದ ನೃತ್ಯಗಾರಿಕೆಗೆ ಹೆಸರುವಾಸಿಯಾಗಿದೆ.  ಡೊಳ್ಳು  ಬಾರಿಸಿಕೊಂಡು  ಕುಣಿಯುವುದರಿಂದ  ಇದಕ್ಕೆ  ಡೊಳ್ಳು ಕುಣಿತ ಎಂಬ ಹೆಸರು ಬಂದಿರಬಹುದು ಎಂದೆನಿಸುತ್ತದೆ.

ಕುರುಬ ಜನಾಂಗದ ಕಲೆಯಾಗಿರುವ ಡೊಳ್ಳು ಕುಣಿತ ಹಳ್ಳಿಯ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ.  ಡೊಳ್ಳು ಕುಣಿತದ ತಂಡದಲ್ಲಿ ಸಾಮಾನ್ಯವಾಗಿ ನಾಲ್ಕು ಜನರಿರುತ್ತಾರೆ ಕೆಲವು ಬಾರಿ ಇಷ್ಟೆ ಜನರಿರಬೇಕು ಎಂಬ ನಿಯಮವಿಲ್ಲ. ಹಿನ್ನೆಲೆಯಲ್ಲಿ  ತಾಳ, ತಪ್ಪಡಿ,ಕಹಳೆ ಜಾಗಟೆ, ಕೊಳಲು ಬಳಸುತ್ತಾರೆ. ಪದ ಹೇಳಿಕೊಂಡು ಡೊಳ್ಳನ್ನು ಬಾರಿಸುತ್ತಾರೆ. 

ಪದಕ್ಕೆ ಪ್ರತ್ಯೇಕವಾದ ಕೈಪಟ್ಟು ಬಳಸುತ್ತಾರೆ ಡೊಳ್ಳು ಬಾರಿಸುವಾಗ ಬಲಗೈಯಲ್ಲಿ ಮಾತ್ರ ಕೋಲಿರುತ್ತದೆ. ಒಮ್ಮೆ ಕೋಲಿನಿಂದ  ಬಾರಿಸಿದರೆ ಎಡಗೈಯಲ್ಲಿ ಒಂದು ಪೆಟ್ಟು ಕೊಡಬೇಕು. ವೃತ್ತಾಕಾರವಾಗಿ ನಿಂತು ಸಜ್ಜುಗೊಂಡ ತಂಡದ ಸದಸ್ಯರು ನಿಧಾನವಾಗಿ  ಡೊಳ್ಳು ಭಾರಿಸಲು ತೊಡಗುವುದರೊಂದಿಗೆ ಸುತ್ತಲು ಪ್ರಾರಂಭಿಸುತ್ತಾರೆ. ಹಿಮ್ಮಳವೂ ಜೊತೆಗೂಡುತ್ತದೆ. ಕ್ರಮೇಣ ಗತ್ತು ಹೋದಂತೆ ಡೊಳ್ಳನ್ನು ಶಕ್ತಿ ಮೀರಿ ಕೇಳುವವರ ಕಿವಿ ಗಡಗುಟ್ಟುವಂತೆ ಬಾರಿಸುತ್ತಾರೆ. 

ಒಂದು ಗತ್ತು ಶಿಖರವನ್ನು ಮುಟ್ಟಿದ ಬಳಿಕ ನಿಧಾನವಾಗಿ ಬೇರೊಂದು ಪ್ರಕಾರದ ಬಡಿತ ಆರಂಭವಾಗುತ್ತದೆ.  ಬಾರಿಸುವ ವಿಧಾನ ಎಲ್ಲಾ ಗತ್ತುಗಳಲ್ಲಿಯು ಒಂದೇ ರೀತಿ ಇರುತ್ತದೆ. ಲೆಕ್ಕದಲ್ಲಿ ಬಾರಿಸುವಿಕೆ ಹೊಡೆತಗಳ ಸಂಖ್ಯೆಯನ್ನು ಜೊಡಿಸುತ್ತದೆ. ಒಂದು ಗುಣಿ  ಎಂದರೆ ಮೊದಲ ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು  ಕೋಲು  ಬಲಕ್ಕೆ  ಒಂದು  ಪೆಟ್ಟು  ಎಡಕ್ಕೆ. ಇದೇ ಕ್ರಮೇಣ  ಹೆಚ್ಚುತ್ತಾ ಹೊಗುತ್ತದೆ. ಹೆಚ್ಚು ಗುಣಿಯನ್ನು ಬಾರಿಸುವಾಗ ಜೊಡಿ ಕಲಾವಿದರು ಎದುರು ಬದುರು ಬಂದು ನಿಂತುಕೊಂಡು  ಬಲಗಾಲು ಮುಂದಿಟ್ಟು ಬಾಗಿ ಪೈಪೊಟಿಯಿಂದ ಗತ್ತು ಬಾರಿಸುತ್ತಾರೆ. 

ಆಗ ಕಲಾವಿದರ ಭಂಗಿ, ಬಾರಿಸುವ ಗತ್ತುಗಾರಿಕೆ ನೋಡಲು ರಂಜನಿಯ. ಕೊಲಿನ ಪೆಟ್ಟು ಏರಿಕೆಯಲ್ಲಿಯೇ ಮುಂದುವರಿದು ಮುಕ್ತಾಯಕ್ಕೆ ಬರುತ್ತೆ. ಇದಕ್ಕೆ ಕಲಬುರಗಿ (ಗುಲ್ಬರ್ಗಾ) ಜಿಲ್ಲೆಯಲ್ಲಿ ಹೆಜ್ಜೆಗೆ ಪಾವುದಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಕುರುಬರು ಮೈಗೆ ಕಂಬಳಿ ಸುತ್ತಿ ಡೊಳ್ಳು ಬಾರಿಸುತ್ತಾರೆ. ಮಧ್ಯದಲ್ಲಿ ವೀರಗಾರನೊಬ್ಬ ಕಾವಿ ಉಟ್ಟಿರುತ್ತಾನೆ. ಈತ ಡೊಳ್ಳು ಬಾರಿಸುವುದಿಲ್ಲ ಬದಲಿಗೆ ತಾಳ ನುಡಿಸುತ್ತಾ ಹಾಡು ಹೇಳುತ್ತಾನೆ. ಈತ ಮೆಳಕ್ಕೆ ಸೂತ್ರದಾರನಿದ್ದಂತೆ. ಕಾಲಿನ ಗೆಜ್ಜೆಯ ಸದ್ದು ಕೂಡ ಹಿನ್ನೆಲೆಯಾಗುತ್ತದೆ. 

ವಿವಿಧ ಬಗೆಯ ಡೊಳ್ಳು ಕುಣಿತಗಳು : ೧. ಕುಳಿತು ಭಾರಿಸುವುದು, ೨. ಲಾಗ ಹಾಕುವುದು  ೩. ಹಾರಿ ಬಾರಿಸುವುದು ೪. ಮಂಡಿ ಬಡಿತ  ೫. ಮರಗಾಲು ಬಡಿತ ೬. ಗಾಡಿ ಚಕ್ರದ ಬಡಿತ

ಕುಳಿತು ಭಾರಿಸುವುದು – ಕುಕ್ಕರ ಗಾಲಿನಲ್ಲಿ ಕುಳಿತು ಡೊಳ್ಳು ಬಡಿಯುತ್ತಾ ಕುಪ್ಪಳಿಸುವುದು. ಸುಂದರವಾದ ಶೈಲಿ 

ಲಾಗ ಹಾಕುವುದು- ಡೊಳ್ಳು ಬಾರಿಸುವಾಗಲೇ ಗತ್ತಿಗೆ ತಕ್ಕಂತೆ ಲಾಗ ಹಾಕುವುದು, ಮತ್ತೆ ನೇರ ಸ್ಥಿತಿಗೆ ಬಂದು ಗತ್ತು ತಪ್ಪದೆ ಪೆಟ್ಟು ಹಾಕುವುದು. 

ಹಾರಿ ಬಾರಿಸುವುದು- ಡೊಳ್ಳು ಬಾರಿಸುವಾಗ ಎರಡು ಅಥವಾ ಮೂರು ಅಡಿ ಮೇಲೆ ಹಾರಿ ಕುಣಿಯುವುದು. ಮತ್ತೆ ಬಾರಿಸುವುದು. 

ಮಂಡಿ ಬಡಿತ- ಜೊತೆ ಕಲಾವಿದರು ಎಡಗಾಲು ಮಂಡಿಯನ್ನು ನೇಲಕ್ಕೆ ಒತ್ತಿ ಬಲಗಾಲನ್ನು ಊರಿಕೊಂಡು ಡೊಳ್ಳು ಬಾರಿಸುವುದು.ಮರಗಾಲು ಬಡಿತ- ಒಂದು ಅಥವಾ ಎರಡು ಅಡಿ ಎತ್ತರದ ಮರಗಾಲನ್ನು ಕಟ್ಟಿಕೊಂಡು ಡೊಳ್ಳನ್ನು ಬಾರಿಸುವುದು. ಗಾಡಿ ಚಕ್ರದ ಬಡಿತ: ಕಬ್ಬಿಣದ ಅಚ್ಚಿನ ಮೇಲೆ ಎತ್ತಿನ ಗಾಡಿಯ ಚಕ್ರವನ್ನಿಟ್ಟು ಅದರ ಮೇಲೆ ನಿಂತುಕೊಂಡು ತಲೆಯ ಮೇಲೆ  ತುಂಬಿದ ಕೊಡವನ್ನಿಟ್ಟುಕೊಂಡು ಡೊಳ್ಳು ಬಾರಿಸುವುದು. 

ಇನ್ನಿತರ  ಶೈಲಿಗಳು : ಕಲಾವಿದನ ಹಿಂಭಾಗ ಹಾಗೂ ಮುಂಭಾಗಗಳಿಗೆ ಒಂದೊಂದು ಡೊಳ್ಳನ್ನು ಕಟ್ಟಿ ಅ ಡೊಳ್ಳಿನ ಮೇಲೆ ಚಿಕ್ಕ ಬಾಲಕರನ್ನು ಕೂರಿಸಿಕೊಂಡು ಎರಡು ಡೊಳ್ಳುಗಳನ್ನು ಬಾರಿಸುವುದು. ಅಲ್ಲದೆ ಒಂದ್ಹೆಜ್ಜೆ ಕುಣಿತ, ಎರಡ್ಡೆಜ್ಜೆ ಕುಣಿತ, ಮಂಡಲ ಕುಣಿತ, ಜೋಡು ಕುಣಿತ ಮುಂತಾದ ಗತ್ತುಗಳಿವೆ. ಜೊಡುಪಾಯಿಲಿ ಎಂದರೆ ಎದುರು ಬದುರು ಕುಳಿತುಕೊಂಡು ಎದೆಯ ಮೇಲೆ ಡೊಳ್ಳು ಕಟ್ಟಿಕೊಂಡು ಹಿಂಬಾಗದಲ್ಲಿ ನೆಲದ ಮೇಲೆ ಇಟ್ಟಿರುವ ಕೊಬ್ಬರಿಯನ್ನೊ ಅಥವಾ ರೂಪಾಯಿ ನೋಟನ್ನೊ ಬಾಯಲ್ಲಿ ತೆಗೆಯುವುದು. ಡೊಳ್ಳು ಕುಣಿತದಲ್ಲಿ ಮತ್ತೊಂದು ರೀತಿ ಲವಳ ಹಾಕುವುದು. ಕೆಲವು ಕಡೆ ಇದನ್ನು ಜಡೆ ಹೆಣೆಯುವುದು ಎಂದು ಕರೆಯತ್ತಾರೆ. ಈ  ಕಲೆಯಲ್ಲಿ ಕುಣಿತವಷ್ಟೆ ಅಲ್ಲ ಒಳ್ಳೆಯ ಸಾಹಿತ್ಯವೂ ಇದೆ. 

ಇಂದು ಆಟ ಎಲ್ಲೆಲ್ಲಿ? (25-12-2021)

ಮೇಳಗಳ ಇಂದಿನ (25.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕುಂದಬಾರಂಬಾಡಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ‘ಪೂಮಾವರಗುತ್ತು ಹೌಸ್ ಅಶ್ವತ್ಥಪುರ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಕಿನ್ನಿಗೋಳಿ ಕಂಬಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ, ಸರಸ್ವತಿ ಸದನ – ಶಶಿಪ್ರಭಾ ಪರಿಣಯ, ಕುಶಲವ 

ಕಟೀಲು ನಾಲ್ಕನೇ ಮೇಳ  == ಪಕ್ಷಿಕೆರೆ ವಯಾ ಹಳೆಯಂಗಡಿ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಐದನೇ ಮೇಳ == ಬೋಳಂತೂರುಗುತ್ತು ಮಂಚಿ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ‘ಸುಶೀಧಾಮ, ಪಂಬೆಮೊಗರು ಕೂಳೂರು ಬೀಡಿನ ಬಳಿ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  ==  ಮಂಜುನಾಥ ನಿಲಯ ಕೂಡಾಲು ಎಡಾಡಿ ಮತ್ಯಾಡಿ – ಐದು ಮೇಳಗಳ ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಮಂಜುನಾಥ ನಿಲಯ ಕೂಡಾಲು ಎಡಾಡಿ ಮತ್ಯಾಡಿ – ಐದು ಮೇಳಗಳ ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಮಂಜುನಾಥ ನಿಲಯ ಕೂಡಾಲು ಎಡಾಡಿ ಮತ್ಯಾಡಿ – ಐದು ಮೇಳಗಳ ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಮಂಜುನಾಥ ನಿಲಯ ಕೂಡಾಲು ಎಡಾಡಿ ಮತ್ಯಾಡಿ – ಐದು ಮೇಳಗಳ ಕೂಡಾಟ 

ಮಂದಾರ್ತಿ ಐದನೇ ಮೇಳ  == ಮಂಜುನಾಥ ನಿಲಯ ಕೂಡಾಲು ಎಡಾಡಿ ಮತ್ಯಾಡಿ – ಐದು ಮೇಳಗಳ ಕೂಡಾಟ 

ಹನುಮಗಿರಿ ಮೇಳ == ಶ್ರೀ ಅಯ್ಯಪ್ಪ ಸೇವಾ ಸಂಘ ಮಾನ್ಯ – ದಕ್ಷಾಧ್ವರ, ಮಾರಣಾಧ್ವರ, ಮೀನಾಕ್ಷಿ ಕಲ್ಯಾಣ  

ಶ್ರೀ ಸಾಲಿಗ್ರಾಮ ಮೇಳ == ಕುಂದಾಪುರ ನೆಹರೂ ಮೈದಾನ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಉಡುಪಿ ಬೈಪಾಸ್ – ವೀರ ಬರ್ಬರೀಕ, ಚಂದ್ರಾವಳಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ದೇವಲ್ಕುಂದ ಪಠೇಲರಮನೆ ಚಿತ್ತೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ದುರ್ಗಾ ಸದನ, ದಾಸನಡಿ ಹೌಸ್, ಶಿರೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಉಪ್ರಳ್ಳಿ ಕೆಳಾಮನೆ ಉಳ್ಳೂರು – 11

ಶ್ರೀ ಪಾವಂಜೆ ಮೇಳ  == ಧರ್ಮಶಾಸ್ತಾ ಅಯ್ಯಪ್ಪ ಮಂದಿರ ಕಜಪದವು, ಬಜ್ಪೆ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ  == ನಾಗೇಶ ಮಯ್ಯ ವಾಟಾರು 

ಶ್ರೀ ಅಮೃತೇಶ್ವರೀ ಮೇಳ == 9ನೇ ಮೈಲುಕಲ್ಲು, ಅಲ್ಟಾಡಿ 

ಶ್ರೀ ಸೌಕೂರು ಮೇಳ == ‘ಕೂಡ್ಲು ಬಾಡಬೆಟ್ಟು ಸ್ವಾಮಿ ಮನೆ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಸೂರಿಮಣ್ಣು ಲಕ್ಷ್ಮೀನಾರಾಯಣ ದೇವಸ್ಥಾನ – ಚಿತ್ರಾಕ್ಷಿ ಕಲ್ಯಾಣ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಗುಂಡ್ಮಿ ರಥಬೀದಿ – ಪಾಪಣ್ಣ ವಿಜಯ, ಗುಣಸುಂದರಿ, ಶ್ವೇತಕುಮಾರ 

ಶ್ರೀ ಹಿರಿಯಡಕ ಮೇಳ == ಮುಂಡಾಜೆ ಮಂಜುಶ್ರೀ ನಗರ – ಕಾವ್ಯ ಕನ್ನಿಕ  

ಶ್ರೀ ಶನೀಶ್ವರ ಮೇಳ ==  ಕವನ ನಿಲಯ ಬಣ್ಣದಬೈಲು ತೆಕ್ಕಟ್ಟೆ 

ಶ್ರೀ ಸಿಗಂದೂರು ಮೇಳ == ದೇವಿಕಾನ ತಾಳಮಕ್ಕಿ ಮಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ 

ಶ್ರೀ ನೀಲಾವರ ಮೇಳ  == ಬಿ.ಸಿ. ರೋಡ್ ಬೈಕಾಡಿ ರಿಕ್ಷಾ ನಿಲ್ದಾಣದ ಬಳಿ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಉಡುಪಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಐರ್ ಬೈಲು – ರಾಜಾ ರುದ್ರಕೋಪ, ಕನಕಾಂಗಿ ಕಲ್ಯಾಣ 

ಶ್ರೀ ಬೋಳಂಬಳ್ಳಿ ಮೇಳ==  ಹಂದಕುಂದ ಶಾಲಾ ವಠಾರ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ‘ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಅಡ್ಡೂರು ಕಳತಗುರಿ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುತ್ತೆತ್ತೂರು ಬಜಾವು – ಕಂಚಿಲ್ದ ಪರಕೆ 

ಶ್ರೀ ತಲಕಳ ಮೇಳ == ಶ್ರೀ ಕೃಷ್ಣ ಭಜನಾ ಮಂದಿರ ಕರೀಮಜಲು ಕೆದಿಲ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ನಾಳ ಮೇಳ == ಉಜಿರೆ, ಪೆರ್ಲ ಶ್ರೀ ಲಕ್ಷ್ಮೀಜನಾರ್ದನ ಸ್ವಾಮೀ ದೇವಸ್ಥಾನ – ದೈವ ಸಂಕಲ್ಪ 

ಶ್ರೀ ಮಂಗಳಾದೇವಿ ಮೇಳ == ಶ್ರೀ ಅಯ್ಯಪ್ಪಮಂದಿರ ಎಕ್ಕೂರು ಹಿಂದೂಪುರ – ಶ್ರೀ ಮಂಗಳಾದೇವಿ ಕ್ಷೇತ್ರ ಮಹಾತ್ಮೆ (ತುಳು-ಕನ್ನಡ)

ವಿದುಷಿ ರಂಜನಿ ಮತ್ತು ವಿದುಷಿ ಗಾಯತ್ರಿ ಸಹೋದರಿಯರ ಅದ್ಭುತ ಶಾಸ್ತ್ರೀಯ ಸಂಗೀತದ ಗಾಯನ

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದುಷಿ ರಂಜನಿ ಮತ್ತು ವಿದುಷಿ ಗಾಯತ್ರಿ ಸಹೋದರಿಯರದು ಪ್ರಖ್ಯಾತಿಯನ್ನು ಪಡೆದ ಜೋಡಿ. ಅವರ ಹಾಡುಗಾರಿಕೆಯ ವೀಡಿಯೊ ಒಂದು ಗಮನ ಸೆಳೆಯಿತು.

 ಆಸಕ್ತಿಯಿದ್ದವರು ನೋಡಿ ಕೇಳಿ ಆನಂದಿಸಬಹುದು. ಲಿಂಕ್ ಇಲ್ಲಿದೆ. 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು (24-12-2021)

ಕಟೀಲು ಒಂದನೇ ಮೇಳ == ‘ಪ್ರಸಾದ್ ನಿವಾಸ’ ಕಿನ್ನಿಕಂಬಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ನಿತ್ಯಾನಂದ ನಿವಾಸ, ಸಾಣೂರು ಕಾರ್ಕಳ – ಗರುಡೋದ್ಭವ 

ಕಟೀಲು ಮೂರನೇ ಮೇಳ== ದಯಾಕೃಪಾ ನಿವಾಸ, ದಡ್ಡುಮನೆ ನಿಡ್ಡೋಡಿ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ, ಸರಸ್ವತಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಐದನೇ ಮೇಳ == “ನಂದಿನಿ” , ತಾಳಿಪಾಡಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ‘ಪ್ರತೀಥಿ’ ಅಲೆತ್ತೂರು ಬಿ.ಸಿ.ರೋಡ್, ಜೋಡುಮಾರ್ಗ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ