Tuesday, September 1, 2026
Home Blog Page 233

ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ

ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ 64ನೇ ವಾರ್ಷಿಕ ಮಹಾಸಭೆ ಕೆ. ಅಜಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 22, 2022ರಂದು ಜರಗಿತು. ಜಯ ಕೆ. ಗತಸಭೆ ವರದಿ ಮಂಡಿಸಿದರು.

ಎ. ನಟರಾಜ ಉಪಾಧ್ಯರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಿಎ ಗಣೇಶ್ ಹೆಬ್ಬಾರ್‌ರನ್ನು ಲೆಕ್ಕಪರಿಶೋಧಕರಾಗಿ ನಿಯುಕ್ತಿಗೊಳಿಸಲಾಯಿತು.


2022-23ನೇ ಸಾಲಿಗೆ ಈ ಕೆಳಗಿನ ಆಡಳಿತ ಮಂಡಳಿಯನ್ನು ಆರಿಸಲಾಯಿತು.


ಅಧ್ಯಕ್ಷ : ಕೆ. ಅಜಿತ್ ಕುಮಾರ್, ಉಪಾಧ್ಯಕ್ಷ : ಕೆ. ಜೆ. ಗಣೇಶ್, ಕಾರ್ಯದರ್ಶಿ : ಸುನಿಲ್ ಕುಮಾರ್, ಜತೆಕಾರ್ಯದರ್ಶಿ : ಜಯ ಕೆ., ಕೋಶಾಧಿಕಾರಿ : ಎ. ನಟರಾಜ ಉಪಾಧ್ಯ,

ಸದಸ್ಯರು : ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ಪ್ರವೀಣ್ ಉಪಾಧ್ಯ, ಕೆ. ಜೆ. ಕೃಷ್ಣ, ಪ್ರಕಾಶ್ ಹೆಬ್ಬಾರ್, ಡಾ. ಗಣಪತಿ ಭಟ್, ಮಂಜುನಾಥ ತೆಂಕಿಲ್ಲಾಯ, ರಮೇಶ ಸಾಲಿಯಾನ್, ಕೆ. ಜೆ. ಸುಧೀಂದ್ರ, ವಸಂತ ಪಾಲನ್, ನಚಿಕೇತ

ಸಲಹಾ ಸಮಿತಿ : ಎಸ್. ವಿ. ಭಟ್, ಶ್ರೀರಮಣ ಆಚಾರ್ಯ, ವಿಜಯ್ ಕುಮಾರ್, ವಿಠಲ ಗಾಣಿಗ, ವಿದ್ಯಾಪ್ರಸಾದ್, ಅರವಿಂದ ಆಚಾರ್ಯ, ಪ್ರಶಾಂತ್ ಕೆ. ಎಸ್., ಎ. ಸತ್ಯಜಿತ್ ಉಪಾಧ್ಯ


ಗೌರವ ಸಲಹೆಗಾರ : ಎ. ರಾಘವೇಂದ್ರ ಉಪಾಧ್ಯ. ಕಾರ್ಯದರ್ಶಿ ಸುನಿಲ್ ಕುಮಾರ್ ಧನ್ಯವಾದ ಸಮರ್ಪಿಸಿದರು.

ಫೋಟೋ ಹಂಚಿಕೊಂಡ ನಟಿ ಸ್ವಾತಿಷ್ಠ ಕೃಷ್ಣನ್ – ಫೋಟೋದ ಕೆಳಗೆ “ಏನಾದರೂ ಕೇಳಿ” ಎಂದು ಅಭಿಮಾನಿಗಳನ್ನು ಪರೀಕ್ಷೆಗೊಡ್ಡಿದ ಬೆಡಗಿ

ತಮಿಳು ಸಿನಿಮಾ ಇಂಡಸ್ಟ್ರಿಯ ಮೋಹಕ ನಟಿ ಸ್ವಾತಿಷ್ಠ ಕೃಷ್ಣನ್. ತನ್ನ ಮೋಹಕ ನಗು ಮತ್ತು ಭಂಗಿಯಿಂದಲೇ ಎಂತಹಾ ಅರಸಿಕರನ್ನೂ ಮರುಳು ಮಾಡುವ ಸುಂದರಿ.

ಸ್ವಾತಿಷ್ಠ ಕೃಷ್ಣನ್ ನಿನ್ನೆ ಟ್ವಿಟ್ಟರ್ ನಲ್ಲಿ ತನ್ನ ಮಾದಕ ಭಂಗಿಯ ಅಂಗಾಂಗಗಳ ಫೋಟೋವೊಂದನ್ನು ಹಂಚಿಕೊಂಡರು.

ಹಂಚಿಕೊಂಡ ನಂತರ ತನ್ನ ಅಭಿಮಾನಿಗಳ ಮನಸ್ಸನ್ನು ಒರೆಗೆ ಹಚ್ಚಿ ಪರೀಕ್ಷಿಸಲು ಫೋಟೋದ ಜೊತೆಗೆ “ಏನಾದರೂ ಕೇಳಿ” (Ask Something) ಎಂದು ಬರೆದಿದ್ದಾರೆ.

ಇದಕ್ಕೆ ಹೆಚ್ಚಿನವರು ಪ್ರಬುದ್ಧ ಉತ್ತರವನ್ನೇ ಕೊಟ್ಟರು. ಕೆಲವು ಮಂದಿ ಕೀಟಲೆಯ ಉತ್ತರವನ್ನೂ ಕೊಟ್ಟರು.  ಆ ಫೋಟೋ ನೋಡಿ. 

ಲ|ವಿ. ಜಿ. ಶೆಟ್ಟಿಯವರಿಂದ ಸಮಾಜಮುಖಿ ಕಾರ್ಯಗಳಿಗೆ ಆರ್ಥಿಕ ನೆರವು

ಉದ್ಯಮಿ, ಮಾಜಿ ಲಯನ್‌ಗವರ್ನರ್ ಲ| ವಿ.ಜಿ. ಶೆಟ್ಟಿಯವರು ಉಡುಪಿ ಮಿಡ್‌ಟೌನ್ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಯಕ್ಷಗಾನ ಕಲಾರ0ಗ, ಇನ್ನಂಜೆ ಶಾಲಾ ಮಕ್ಕಳ ಯುನಿಫಾರ್ಮ್ ಮತ್ತು ಇನ್ನಂಜೆ ಆ0ಗ್ಲಮಾಧ್ಯಮ ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಅನುಕ್ರಮವಾಗಿ ರೂ. 2,00,000/-, ರೂ. 62,000/- ಮತ್ತು ರೂ.50,000/- ಸಹಾಯಧನದ ಚೆಕ್ ವಿತರಿಸಿದರು.

ಯಕ್ಷಗಾನ ಕಲಾರಂಗದ ಪರವಾಗಿ ಚೆಕ್ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಎಮ್.ಗಂಗಾಧರ ರಾವ್ ನಮ್ಮ ಸಂಸ್ಥೆಯ ಉಪಾಧ್ಯಕ್ಷರೂ ಹೆಮ್ಮೆಯ ಕಾರ್ಯಕರ್ತರಾದ ವಿ.ಜಿ. ಶೆಟ್ಟಿಯಂಥವರಿ0ದ ಸಂಸ್ಥೆ ಸಮಾಜಪರ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಸಂಸ್ಥೆ ಮಾಡುತ್ತಿರುವ ಕಾರ್ಯಕ್ರಮಗಳ ಕಿರು ಪರಿಚಯ ಮಾಡಿದರು.

ಈ ಸಂದರ್ಭದಲ್ಲಿ ಕಲಾರ0ಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಪ್ರೊ. ನಾರಾಯಣ ಎಮ್. ಹೆಗಡೆ, ಎ. ನಟರಾಜ ಉಪಾಧ್ಯಾಯರು ಉಪಸ್ಥಿತರಿದ್ದರು.

ವಿ. ಜಿ. ಶೆಟ್ಟಿಯವರು ಕಳೆದ ಕೆಲವು ವರ್ಷಗಳಿಂದ ಯಕ್ಷಗಾನ ಕಲಾರಂಗ ಮತ್ತು ತಾನು ಕಲಿತ ಶಾಲೆಗೆ ನಿರಂತರ ಸಹಾಯಧನ ನೀಡುತ್ತಾ ಬಂದಿರುತ್ತಾರೆ.

ಪ್ರೊ. ಎಮ್. ಸುಧಾಕರ ರಾವ್ ನಿಧನ

ಉಡಪಿ : ಎಮ್.ಸುಧಾಕರ ರಾವ್(84 ವರ್ಷ)ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಕೆ.ಎಂ. ಸಿ. ಆಸ್ಪತ್ರೆಯಲ್ಲಿ ಇಂದು(25-07-2022) ಪೂರ್ವಾಹ್ನ 8.30ಕ್ಕೆ ನಿಧನರಾದರು.

ಬೀಡಿನಗುಡ್ಡೆಯಲ್ಲಿ ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನೆರವೇರಿತು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮೂವತ್ತೇಳು ವರ್ಷಗಳ ಕಾಲ ಉಪನ್ಯಾಸಕರಾಗಿ, ಒಂದು ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.

ಜೀವಶಾಸ್ತ್ರದ ಬಗ್ಗೆ ಅಪಾರ ಪಾಂಡಿತ್ಯವನ್ನು ಹೊಂದಿದ ಸುಧಾಕರ್‌ ರಾಯರು ಬರೆದ ಪುಸ್ತಕ ಪದವಿಪೂರ್ವ ವಿದ್ಯಾರ್ಥಿಗಳಿಗೆ ಪಠ್ಯವಾಗಿ, ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಪ್ರಸಿದ್ಧವಾಗಿದೆ.

ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಮತ್ತು ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಕಾಲೇಜಿನ ಪ್ರಾಂಶುಪಾಲ ಡಾ.ಎ. ರಾಘವೇಂದ್ರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷಡಾ. ಬಿ.ಎಮ್ .ಸೋಮಯಾಜಿ, ಕಾರ್ಯದರ್ಶಿ ತೇಜಸ್ವಿ ಶಂಕರ್ ಹಾಗೂ ಅಪಾರ ಸಂಖ್ಯೆಯ ಶಿಷ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಪ್ರಾದೇಶಿಕ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಆಯ್ಕೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ ಕೊಣಾಜೆಯಲ್ಲಿ 23.07.2022ರಂದು ನಡೆದ ದ.ಕ.ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಾಸುಕಿ ಮತ್ತು ತಂಡ ರನ್ನರ್ಸ್ ಟ್ರೋಫಿಯನ್ನು ಪಡೆದು ಮೈಸೂರಿನಲ್ಲಿ ನಡೆಯಲಿರುವ ಪ್ರಾದೇಶಿಕ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತದೆ.

ಸೈಂಟ್ ಅಲೋಷಿಯಸ್ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ನೋಯೆಲ್ ಸರ್ ಮತ್ತು ಅಧ್ಯಾಪಕ ವೃಂದದವರಿಗೆ ಕೃತಜ್ಞತೆಗಳು.

ವಿಜೇತರಾಗಿ ಆಯ್ಕೆಯಾದವರಿಗೆ ಹೃದಯಸ್ಪರ್ಶಿ ಅಭಿನಂದನೆಗಳು

ರಸ್ತೆಯ ಎರಡೂ ಬದಿಯ ವಾಹನಗಳನ್ನು ನಿಲ್ಲಿಸಿ ಹುಲಿಯನ್ನು ರಸ್ತೆ ದಾಟಿಸಿದ ಅರಣ್ಯಾಧಿಕಾರಿಗಳು – ಮೈ ಜುಂ ಎನ್ನಿಸುವ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್

ರಸ್ತೆಯೊಂದರಲ್ಲಿ ಹುಲಿಯನ್ನು ಆ ಬದಿಯಿಂದ ಈಚೆ ಕಡೆಗೆ ದಾಟಿಸುವ ದೃಶ್ಯದ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. 

ರಸ್ತೆಯ ಎರಡೂ ಬದಿಯ ವಾಹನಗಳನ್ನು ನಿಲ್ಲಿಸಿ ಹುಲಿಯನ್ನು  ಅರಣ್ಯಾಧಿಕಾರಿಗಳು ರಸ್ತೆ ದಾಟಿಸಿದ್ದಾರೆ. ಹುಲಿಯು ಏನೂ ಆಗದಂತೆ ನಿರ್ವಿಕಾರವಾಗಿ ನಿರ್ಲಿಪ್ತತೆಯಿಂದ ರಸ್ತೆ ದಾಟುತ್ತಿದೆ.

ಅರಣ್ಯಾಧಿಕಾರಿಯೊಬ್ಬರು ಹತ್ತಿರ ಹೋಗದಂತೆ ಜನರಿಗೆ ಕಿವಿಮಾತು ಹೇಳುತ್ತಿದ್ದಾರೆ. ಈ ದೃಶ್ಯ ನೋಡಲು ರುದ್ರ ರಮಣೀಯವಾಗಿದೆ. ಎಷ್ಟು ಸುಂದರವೋ ಅಷ್ಟೇ  ಅಪಾಯಕಾರಿಯೂ ಕೂಡಾ.

ಈ ವೀಡಿಯೊವನ್ನು IFS ಅಧಿಕಾರಿ ಪ್ರವೀಣ್ ಕಾಸ್ವಾನ್ (ಐಎಫ್ಎಸ್, ಭಾರತೀಯ ಅರಣ್ಯ ಸೇವೆ) ಎಂಬ ಅರಣ್ಯಾಧಿಕಾರಿಯೊಬ್ಬರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. 

ಕಾಲೇಜಿಗೆಂದು ತೆರಳಿದ್ದ ಒಂದೇ ಕಾಲೇಜಿನ ನಾಲ್ಕು ವಿದ್ಯಾರ್ಥಿನಿಯರು ನಾಪತ್ತೆ – ಕೇಸು ದಾಖಲು, ಪತ್ತೆಗೆ ವಿಶೇಷ ತಂಡ

ಕಾಲೇಜಿಗೆಂದು ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ.

ಪೋಷಕರಲ್ಲಿ ತೀವ್ರ ಆತಂಕ ಮನೆಮಾಡಿದೆ. ಇವರು ನಾಲ್ವರೂ ಕೂಡಾ ಸ್ಟೇಷನ್ ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

ಇಬ್ಬರು ಶಕ್ತಿನಗರದ ವಿದ್ಯಾರ್ಥಿಗಳು ಹಾಗೂ ಇನ್ನಿಬ್ಬರು ರಾಯಚೂರಿನ ವಿದ್ಯಾರ್ಥಿಗಳು. ನಾಲ್ವರು ವಿದ್ಯಾರ್ಥಿನಿಯರ ಪೋಷಕರಲ್ಲಿ ಒಬ್ಬರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾಹಿತಿ ಆಧರಿಸಿ ಸದರಬಜಾರ್ ಠಾಣೆ ಪಿಎಸ್ ಐ ಹಾಗೂ ಮಹಿಳಾ ಠಾಣೆ ಪಿಎಸ್ ಐ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿದೆ.

ಪಾಲಕರಲ್ಲಿ ಆತಂಕ ಹೆಚ್ಚಿದ್ದರೆ, ಕಾಲೇಜಿನ ಇತರ ಪೋಷಕರೂ ಕಂಗಾಲಾಗಿದ್ದಾರೆ. ಪೊಲೀಸರು ಎರಡು ತಂಡಗಳಲ್ಲಿ ತೀವ್ರ ಪರಿಶೀಲನೆ, ಹುಡುಕಾಟ ನಡೆಸುತ್ತಿದ್ದಾರೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್‌ ದಂಪತಿಗೆ ಸಾಮಾಜಿಕ ಮಾಧ್ಯಮದ ಮೂಲಕ ಜೀವ ಬೆದರಿಕೆ – ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಬಾಲಿವುಡ್ ನಟರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್‌ಗೆ ಸಾಮಾಜಿಕ ಮಾಧ್ಯಮದ ಮೂಲಕ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಟ ವಿಕ್ಕಿ ಮತ್ತು ಕತ್ರಿನಾಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮನರಂಜನಾ ಉದ್ಯಮದಲ್ಲಿ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಬ್ಬರು. ಇಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಹೊಂದಿದ್ದಾರೆ. ಮತ್ತು ಪ್ರಮುಖ ಜೋಡಿ ಗುರಿಗಳನ್ನು ನೀಡಲು ಎಂದಿಗೂ ವಿಫಲರಾಗುವುದಿಲ್ಲ.

ಆದಾಗ್ಯೂ, ಇಬ್ಬರು ಬಾಲಿವುಡ್ ತಾರೆಗಳಿಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಇದೆ ಎಂದು ವರದಿಯಾಗಿದೆ, ಅವರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಎನ್‌ಐ ಇತ್ತೀಚಿನ ವರದಿಯ ಪ್ರಕಾರ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್‌ಗೆ ಸಾಮಾಜಿಕ ಮಾಧ್ಯಮದ ಮೂಲಕ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಇದೆ.

ದಂಪತಿಗಳು ಇತ್ತೀಚೆಗೆ ತಮ್ಮ ಮಾಲ್ಡೀವ್ಸ್ ರಜೆಯಿಂದ ಮರಳಿದರು ಮತ್ತು ಪ್ರಸ್ತುತ ತಮ್ಮ ಕೆಲಸದ ಬದ್ಧತೆಗಳಲ್ಲಿ ನಿರತರಾಗಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ, ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಇತ್ತೀಚೆಗೆ ಅವರ ಹುಟ್ಟುಹಬ್ಬವನ್ನು ಆಚರಿಸಲು ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಗುಂಪಿನೊಂದಿಗೆ ಮಾಲ್ಡೀವ್ಸ್ ಬೀಚ್ ವಿಹಾರಕ್ಕೆ ತೆರಳಿದ್ದರು.

ದಂಪತಿಗಳು ಕಳೆದ ವಾರ ತಮ್ಮ ಪ್ರವಾಸದಿಂದ ಹಿಂದಿರುಗಿದರು ಮತ್ತು ಶೀಘ್ರದಲ್ಲೇ ತಮ್ಮ ಯೋಜನೆಗಳಲ್ಲಿ ಮತ್ತು ಸಿನಿಮಾಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.

ಅಂತಾರಾಷ್ಟ್ರೀಯ ಒಲಿಂಪಿಯಾಡ್‌ನಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ವಿಶೇಷ ಸಾಧನೆ

2021-22ನೆ ಸಾಲಿನ ಅಂತಾ ರಾಷ್ಟ್ರೀಯ  ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮವಾದ ಸಾಧನೆಗಳನ್ನು ಮಾಡಿದ್ದಾರೆ.


8ನೇ ತರಗತಿಯ ಚಿನ್ಮಯಿ.ಎಲ್(ಡಾ.ಕೃಷ್ಣಪ್ರಸಾದ್ ಮತ್ತು ಡಾ.ಅಮೃತಪ್ರಸಾದ್ ದಂಪತಿಗಳ ಪುತ್ರಿ) ಅವರು ಅಂತಾ ರಾಷ್ಟ್ರೀಯ  ಇಂಗ್ಲಿಷ್, ಸಾಮಾನ್ಯಜ್ಞಾನ, ಗಣಿತ, ಸಮಾಜ ಅಧ್ಯಯನ ಹಾಗೂ  ರಾಷ್ಟ್ರೀಯ  ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ 3 ಚಿನ್ನ, 2 ಬೆಳ್ಳಿಯ ಪದಕಗಳನ್ನು ಪಡೆದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿರುವ ಅತ್ಯುತ್ತ ರ‍್ಯಾಂಕ್‌ಗಾಗಿ ನೀಡಲ್ಪಡುವ ವಿಶೇಷ  ಬಹುಮಾನ ಗಿಫ್ಟ್ ವೋಚರ್ ಮತ್ತು ಅಕಾಡೆಮಿಕ್‌ ಎಕ್ಸ್ಲೆನ್ಸಿ ಅವಾರ್ಡ್ ಗಳನ್ನು ಪಡೆದಿರುತ್ತಾರೆ.


5ನೇ ತರಗತಿಯ ನೇಶ ಕಾವ್ಯ ಮುಗೇರ್(ರಮೇಶ್ ಮುಗೇರ್‌ ರಾವ್ ಮತ್ತು ಕೃಪಾರಾಣಿ.ಎಸ್ ದಂಪತಿಗಳ ಪುತ್ರಿ) , 3ನೇ ತರಗತಿಯ ಶಶಾಂಕ್.ಟಿ.ಆರ್(ಟಿ.ಎಸ್.ರಘುರಾಮ ಮತ್ತು ದೀಪ್ತಿ.ಆರ್.ಭಟ್ ದಂಪತಿಗಳ ಪುತ್ರ), 7ನೇ ತರಗತಿಯ ಯತಿನ್ ಬಿ.ಎಸ್(ಶೇಷಪ್ಪಗೌಡ.ಎಚ್ ಮತ್ತು ಹೇಮಾವತಿ.ಜಿ ದಂಪತಿಗಳ ಪುತ್ರಿ), 2ನೇ ತರಗತಿಯ ತನ್ವಿ.ಎಲ್(ಡಾ.ಕೃಷ್ಣಪ್ರಸಾದ್ ಮತ್ತುಡಾ.ಅಮೃತಪ್ರಸಾದ್ ದಂಪತಿಗಳ ಪುತ್ರಿ) ಇವರುಚಿನ್ನ, ಬೆಳ್ಳಿ ಹಾಗೂ ಗಿಫ್ಟ್ ವೋಚರ್‌ಗಳನ್ನು ಪಡೆದಿರುತ್ತಾರೆ.


ಕಳೆದ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಾದ ಆತ್ಮೀಯ.ಎಂ.ಕಶ್ಯಪ್, ಶಿವಚೇತನ್ ಹಳಮನಿ, ಅಭೀಜ್ಞ.ಆರ್, ರಾಮಮೋಹನ ಮತ್ತು ಪಂಕಜ್ ಭಟ್‌ ಇವರು ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನ, ಬೆಳ್ಳಿ ಹಾಗೂ ಗಿಫ್ಟ್ ವೋಚರ್‌ಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಬ್ಬು ಸಾಗಿಸುವ ಲಾರಿಯನ್ನು ಅಡ್ಡಗಟ್ಟಿ ರಸ್ತೆ ತೆರಿಗೆಗಾಗಿ ಪೀಡಿಸಿದ ಆನೆಗಳು! – ಕಬ್ಬುಗಳ ಕಟ್ಟುಗಳನ್ನು ಆನೆಗಳಿಗೆ ನೀಡಿದ ಮಾಲಕ, ವೀಡಿಯೊ ವೈರಲ್

ಆನೆ ಮತ್ತು ಮರಿಯಾನೆಗಳು ಕಬ್ಬು ಸಾಗಿಸುವ ಲಾರಿಯನ್ನು ತಡೆದು ನಿಲ್ಲಿಸಿದ ವೀಡಿಯೊ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

ಆನೆಗಳು ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸುತ್ತವೆ. ಆಮೇಲೆ ಅದರಲ್ಲಿ ತುಂಬಿರುವ ಕಬ್ಬಿನ ಕೋಲುಗಳಿಗಾಗಿ ಆಗ್ರಹಿಸುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು.

ಲಾರಿಯಲ್ಲಿದ್ದ ಕಬ್ಬುಗಳ ರಾಶಿಯ ಮಾಲಕನು ಕಬ್ಬಿನ ಕಟ್ಟುಗಳನ್ನು ಆನೆಯತ್ತ ರಸ್ತೆಗೆ ಎಸೆಯುತ್ತಾನೆ. ಈ ವೀಡಿಯೊವನ್ನು ಪ್ರವೀಣ್ ಕಾಸ್ವಾನ್ (ಐಎಫ್ಎಸ್, ಭಾರತೀಯ ಅರಣ್ಯ ಸೇವೆ) ಎಂಬ ಅರಣ್ಯಾಧಿಕಾರಿಯೊಬ್ಬರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ,

ಕೊನೆಯಲ್ಲಿ ಅವರು ” ನಾನು ತಿಳಿಸಲು ಬಯಸುವ ಸಂದೇಶ. ಇದು ನೋಡಲು ಸುಂದರವಾಗಿರುತ್ತದೆ ಆದರೆ ಕಾಡು ಪ್ರಾಣಿಗಳಿಗೆ ಆಹಾರವನ್ನು ನೀಡುವುದು ಸರಿಯಲ್ಲ. ಸಹಾನುಭೂತಿ ಆಧಾರಿತ ಸಂರಕ್ಷಣೆ ವನ್ಯಜೀವಿಗಳ ಶತ್ರು. ಅವರು ಸುಲಭ ಮತ್ತು ಮಸಾಲೆಯುಕ್ತ ಆಹಾರಕ್ಕೆ ಒಗ್ಗಿಕೊಳ್ಳುತ್ತಾರೆ. ಪರಿಣಾಮವಾಗಿ ರಸ್ತೆಗಳ ಸುತ್ತಲೂ ಮತ್ತು ಅವರ ಆವಾಸಸ್ಥಾನದ ಹೊರಗೆ ತಿರುಗುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯ ಅಪಘಾತಗಳು ಈ ರೀತಿಯಲ್ಲಿ ಸಂಭವಿಸುತ್ತವೆ. ಅವುಗಳು ಕಾಡಿನಲ್ಲೇ ಉಳಿಯಲಿ” ಎಂಬ ಎಚ್ಚರಿಕೆಯ ಸಂದೇಶವನ್ನು ಬರೆದಿದ್ದಾರೆ.