Friday, May 15, 2026
Home Blog Page 227

ಇಂದು ಶ್ರೀ ಎಡನೀರು ಮಠದಲ್ಲಿ ಯಕ್ಷಗಾನ ಪ್ರದರ್ಶನ – ಶ್ರೀ ದೇವಿ ಅಂಬಿಕಾ ಮಹಾತ್ಮ್ಯೆ

ಕಾಸರಗೋಡು ಜಿಲ್ಲೆಯ ಎಡನೀರಿನಲ್ಲಿರುವ ಶ್ರೀ ಎಡನೀರು ಮಠ ಸಾಂಸ್ಕೃತಿಕ ಕಲೆಗಳಿಗೆ ಯಾವಾಗಲೂ ಪ್ರೋತ್ಸಾಹ ಕೊಡುತ್ತಾ ಬಂದಿದೆ.

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಪ್ರಯುಕ್ತ ಈ ವರ್ಷವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅದರಂತೆ ಇಂದು ದಿನಾಂಕ 28.07.2022ನೇ ಗುರುವಾರ ಸಂಜೆ ಘಂಟೆ 6 ಕ್ಕೆ ಸರಿಯಾಗಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ವಿರಚಿತ “ಶ್ರೀ ದೇವಿ ಅಂಬಿಕಾ ಮಹಾತ್ಮ್ಯೆ” ಎಂಬ ಯಕ್ಷಗಾನ ಪ್ರದರ್ಶನವು ನಡೆಯಲಿದೆ.

ದಕ್ಷಿಣ ಕನ್ನಡ, ಕಾಸರಗೋಡು ಉಭಯ ಜಿಲ್ಲೆಗಳ ಪ್ರಸಿದ್ಧ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವು ಸಂಜೆ ಘಂಟೆ 6 ಕ್ಕೆ ಸರಿಯಾಗಿ ಆರಂಭವಾಗುವುದೆಂದು ತಿಳಿಸಲಾಗಿದೆ. 

ಒಂದು ತಿಂಗಳಿನಲ್ಲಿ 3,419 ಕೋಟಿ ರೂ. ವಿದ್ಯುತ್ ಬಿಲ್! – ಬಿಲ್ ನೋಡಿ ಅಸ್ವಸ್ಥಗೊಂಡು ಮನೆ ಯಜಮಾನ ಆಸ್ಪತ್ರೆಗೆ ದಾಖಲು

ಮಧ್ಯಪ್ರದೇಶದ ಗ್ವಾಲಿಯರ್‌ನ ಶಿವ ವಿಹಾರ್ ಕಾಲೋನಿಯ ನಿವಾಸಿ ಪ್ರಿಯಾಂಕಾ ಗುಪ್ತಾ ಜುಲೈನಲ್ಲಿ ತಮ್ಮ ಮನೆಗೆ ವಿದ್ಯುತ್ ಬಿಲ್ ಬಂದಾಗ ಆಘಾತಕ್ಕೊಳಗಾಗಿದ್ದರು. 3,419 ಕೋಟಿ ವಿದ್ಯುತ್ ಬಳಕೆಯಾಗಿದೆ ಎಂದು ಅದರಲ್ಲಿ ನಮೂದಿಸಲಾಗಿತ್ತು.

ಕುಟುಂಬದ ಪ್ರತಿಯೊಬ್ಬರೂ ತಮ್ಮ ಕಣ್ಣುಗಳು ತಮಗೆ ಮೋಸ ಮಾಡುತ್ತಿವೆಯೇ ಎಂದು ಪರೀಕ್ಷಿಸಲು ಬಿಲ್ ಅನ್ನು ಮತ್ತೆ ಮತ್ತೆ ನೋಡಿದರು.

ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಪ್ರಿಯಾಂಕಾ ಗುಪ್ತಾ ಅವರು 3,419 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಅನ್ನು ಸ್ವೀಕರಿಸಿದಾಗ ಆಘಾತಕ್ಕೆ ಒಳಗಾಗಿದ್ದರು, ಇದರಿಂದಾಗಿ ಆಕೆಯ ಮಾವ ಅನಾರೋಗ್ಯಕ್ಕೆ ಒಳಗಾಗಿದ್ದರು.

ಮಧ್ಯಪ್ರದೇಶ ಸರ್ಕಾರ ನಡೆಸುತ್ತಿರುವ ವಿದ್ಯುತ್ ಕಂಪನಿಯು “ಮಾನವ ದೋಷ” ವನ್ನು ದೂಷಿಸಿದೆ ಮತ್ತು 1,300 ರೂಪಾಯಿಗಳ ಸರಿಪಡಿಸಿದ ಬಿಲ್ ಅನ್ನು ನೀಡಿತು, ಇದು ನಗರದ ಶಿವ ವಿಹಾರ್ ಕಾಲೋನಿಯ ನಿವಾಸಿಗಳ ಆತಂಕದಲ್ಲಿರುವ ಗುಪ್ತಾ ಕುಟುಂಬವನ್ನು ಸಮಾಧಾನಪಡಿಸಿದೆ.

ಗುಪ್ತಾ ಅವರ ಪತಿ ಸಂಜೀವ್ ಕಂಕಣೆ ಅವರು ಜುಲೈ ತಿಂಗಳ ಮನೆಯ ಬಳಕೆಗಾಗಿ ವಿದ್ಯುತ್ ಬಿಲ್‌ನಲ್ಲಿನ ದೊಡ್ಡ ಅಂಕಿಅಂಶವನ್ನು ನೋಡಿದ ನಂತರ ಅವರ ತಂದೆ ಅನಾರೋಗ್ಯಕ್ಕೆ ಒಳಗಾದರು.

ಎಂಪಿಎಂಕೆವಿವಿಸಿ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್ ಮಾನವ ದೋಷದಿಂದ ಭಾರಿ ವಿದ್ಯುತ್ ಬಿಲ್ ಬರಲು ಕಾರಣವಾಗಿದ್ದು, ಸಂಬಂಧಪಟ್ಟ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.

‘‘ಸಾಫ್ಟ್‌ವೇರ್‌ನಲ್ಲಿ ಬಳಕೆಯಾದ ಘಟಕಗಳ ಜಾಗದಲ್ಲಿ ನೌಕರನೊಬ್ಬ ಗ್ರಾಹಕರ ಸಂಖ್ಯೆಯನ್ನು ನಮೂದಿಸಿದ್ದರಿಂದ ಹೆಚ್ಚಿನ ಮೊತ್ತದ ಬಿಲ್‌ ಬಂದಿದೆ. ವಿದ್ಯುತ್‌ ಗ್ರಾಹಕರಿಗೆ 1,300 ರೂ. ಸರಿಪಡಿಸಿದ ಬಿಲ್‌ ನೀಡಲಾಗಿದೆ,’’ ಎಂದರು.

ದೋಷವನ್ನು ಸರಿಪಡಿಸಲಾಗಿದ್ದು, ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶೂ ಕಾಲುಚೀಲದೊಳಗೆ ಚಿನ್ನ ಕಳ್ಳಸಾಗಾಣಿಕೆ – ವಾರಣಾಸಿ ವಿಮಾನನಿಲ್ದಾಣದಲ್ಲಿ 27 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಕಸ್ಟಮ್ಸ್ ವಶಕ್ಕೆ – ವೀಡಿಯೊ 

ಶಾರ್ಜಾದಿಂದ ಆಗಮಿಸಿದ ಪ್ರಯಾಣಿಕರ ಕಾಲುಚೀಲದೊಳಗೆ ಅಕ್ರಮ ಚಿನ್ನ ಪತ್ತೆಯಾಗಿದೆ. 

ಜುಲೈ 27 ರಂದು ವಾರಣಾಸಿಯ ಕಸ್ಟಮ್ಸ್ ಎಲ್‌ಬಿಎಸ್‌ಐ ವಿಮಾನ ನಿಲ್ದಾಣವು ಶಾರ್ಜಾದಿಂದ ಬಂದ ಪ್ಯಾಕ್ಸ್‌ನಿಂದ 27,33,105 ರೂ ಮೌಲ್ಯದ 99.50% ಶುದ್ಧ ವಿದೇಶಿ ಮೂಲದ 530 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ.

ಶಾರ್ಜಾದಿಂದ ಬಂದಿದ್ದ ಪ್ರಯಾಣಿಕರಿಂದ 530 ಗ್ರಾಂ ವಿದೇಶಿ ಮೂಲದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದು ಪ್ರಯಾಣಿಕನ ಕಾಲುಚೀಲದೊಳಗೆ ಮರೆಮಾಡಲಾಗಿತ್ತು. (ವೀಡಿಯೊ ನೋಡಿ)

ಚಿನ್ನವನ್ನು ಕಂದು ಬಣ್ಣದ ಪೇಸ್ಟ್ ರೂಪದಲ್ಲಿ 2 ಕಪ್ಪು ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಲಾಗಿತ್ತು ಮತ್ತು ಅವುಗಳನ್ನು ತನ್ನ ಪಾದಗಳ ಪ್ರತಿ ಅಡಿಭಾಗದಿಂದ ಅಂಟಿಸಿ ಮರೆಮಾಡಲಾಗಿದೆ.

ಉತ್ತರ ಪ್ರದೇಶದ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡವೊಂದು ಪ್ರಯಾಣಿಕರೊಬ್ಬರಿಂದ 530 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಯಾಣಿಕನು ಶಾರ್ಜಾದಿಂದ ಆಗಮಿಸಿದ್ದು, ಎರಡು ಕಪ್ಪು ಪ್ಲಾಸ್ಟಿಕ್ ಪೌಚ್‌ಗಳಲ್ಲಿ ಕಂದು ಬಣ್ಣದ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಇಟ್ಟುಕೊಂಡಿದ್ದ.

ತುಳುನಾಡ ಬೆಡಗಿ ಮಿಸ್ ಇಂಡಿಯಾ ಸಿನಿ ಶೆಟ್ಟಿ ಸೀರೆಯಲ್ಲಿ ಮಿರಿ ಮಿರಿ ಮಿಂಚು   

ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡ ತುಳುನಾಡ ಸುಂದರಿ ಸಿನಿ ಶೆಟ್ಟಿಯವರಿಗೆ ಸೀರೆಗಳು ಅಂದರೆ ಪಂಚಪ್ರಾಣವಂತೆ. 

ಮಿಸ್ ಇಂಡಿಯಾ ಸಿನಿ ಶೆಟ್ಟಿ ಸೀರೆಗಳ ಮೇಲಿನ ತನ್ನ ಆಸಕ್ತಿಯನ್ನು ಪುನರುಜ್ಜೀವನಗೊಳಿಸಿಕೊಂಡು ಬಂದಿದ್ದಾರೆ ಮತ್ತು ಸೀರೆಯನ್ನು ಮದುವೆಗೆ ಮಾತ್ರ ಮೀಸಲಿಡಬಾರದು ಎಂಬುದು ಅವರ ನಿಲುವಾಗಿದೆ.

“ನಿಮಗೆ ಬೇಕಾದ ಉಡುಗೆಯನ್ನು ಧರಿಸಿ ಆದರೆ ಸೀರೆ ಮಾತ್ರ ನಿಜವಾದ ಸೌಂದರ್ಯ ಮತ್ತು ಸೊಬಗನ್ನು ಹೊರತರುತ್ತದೆ’ ಎಂದು ಅವರು ಹೇಳುತ್ತಾರೆ.

ಬೆಲೆಬಾಳುವ ಕಾಂಜೀವರಂ ಸೀರೆಯಲ್ಲಿ ಬುಟ್ಟಿ ವರ್ಕ್ ಕೆಂಪು ಕುಪ್ಪಸದೊಂದಿಗೆ

ಬೆಲೆಬಾಳುವ ಕಾಂಜೀವರಂ ಸೀರೆಯಲ್ಲಿ ಬುಟ್ಟಿ ವರ್ಕ್ ಕೆಂಪು ಕುಪ್ಪಸದೊಂದಿಗೆ

ಮಧ್ಯಪ್ರದೇಶದ ಚಂದೇರಿ, ವ್ಯತಿರಿಕ್ತ ಹಳದಿ ತೋಳಿಲ್ಲದ ಕುಪ್ಪಸದೊಂದಿಗೆ.

ಮಧ್ಯಪ್ರದೇಶದ ಚಂದೇರಿ, ವ್ಯತಿರಿಕ್ತ ಹಳದಿ ತೋಳಿಲ್ಲದ ಕುಪ್ಪಸದೊಂದಿಗೆ.

ಭಾರವಾದ ಕಂಜೀವರಂ ರೇಷ್ಮೆ ಸೀರೆಯಲ್ಲಿ

ಭಾರವಾದ ಕಂಜೀವರಂ ರೇಷ್ಮೆ ಸೀರೆಯಲ್ಲಿ

ಚಿನ್ನದಿಂದ ಟ್ರಿಮ್ ಮಾಡಿದ ಅಲಂಕೃತವಾದ ರೇಷ್ಮೆ ಸೀರೆಯಲ್ಲಿ

ಚಿನ್ನದಿಂದ ಟ್ರಿಮ್ ಮಾಡಿದ ಅಲಂಕೃತವಾದ ರೇಷ್ಮೆ ಸೀರೆಯಲ್ಲಿ

‘ಮೋಹಿನಿ ಏಕಾದಶಿ’ – ಇಂದು ಉಜಿರೆಯ ಯಕ್ಷ ಸಪ್ತಾಹದಲ್ಲಿ ತಾಳಮದ್ದಳೆ

ಉಜಿರೆಯಲ್ಲಿ ನಡೆಯುತ್ತಿರುವ ಯಕ್ಷ ಸಪ್ತಾಹದ ಏಳು ದಿನಗಳಲ್ಲಿ ವಿವಿಧ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.

ಕೊನೆಯ ದಿನ ಯಕ್ಷನೃತ್ಯ ಕಾರ್ಯಕ್ರಮವೂ ನಡೆಯಲಿದೆ. ಈ ತಾಳಮದ್ದಳೆ ಜುಲೈ 22ರಿಂದ ಜುಲೈ 29ರ ತನಕ ಪ್ರತಿದಿನ ಸಂಜೆ ಘಂಟೆ 5.45ರಿಂದ ಆರಂಭವಾಗಲಿದೆ.

ಇಂದು ‘ಮೋಹಿನಿ ಏಕಾದಶಿ’ ಎಂಬ ಪ್ರಸಂಗದ ತಾಳಮದ್ದಳೆ  ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳ ಯೂಟ್ಯೂಬ್ ನೇರ ಪ್ರಸಾರ ಲಭ್ಯವಿದೆ. ಬೆಳ್ತಂಗಡಿಯ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ.

ಜುಲೈ 27 ರಂದು ಸಂಜೆ 5.45  ಗಂಟೆಗೆ, ಪ್ರಸಂಗ – ಮೋಹಿನಿ ಏಕಾದಶಿ

ಹಿಮ್ಮೇಳ:  ರಾಘವೇಂದ್ರ ಆಚಾರ್ ಜನ್ಸಾಲೆ, ಸುನಿಲ್ ಭಂಡಾರಿ ಕಡತೋಕ, ಸುಜನ್ ಕುಮಾರ್ ಹಾಲಾಡಿ

ಮುಮ್ಮೇಳ:  ಉಜಿರೆ ಅಶೋಕ ಭಟ್, ಶಶಿಕಾಂತ ಶೆಟ್ಟಿ ಕಾರ್ಕಳ, ವಿಷ್ಣುಶರ್ಮ ವಾಟೆಪಡ್ಪು, ಬಾಲಕೃಷ್ಣ ಭಟ್ ಪುತ್ತಿಗೆ

ನೇರಪ್ರಸಾರ ಯೂಪ್ಲಸ್ ಟಿವಿ, ಯೂಟ್ಯೂಬ್ ಹಾಗೂ ಫೇಸ್ಬುಕ್ ನಲ್ಲಿ ಲಭ್ಯವಿದೆ. 

ಪ್ರವೀಣ್ ನೆಟ್ಟಾರ್ ಅಂತಿಮಯಾತ್ರೆ – ಮೆರವಣಿಗೆಯಲ್ಲಿ ಭಾಗಿಯಾದ ಸಾವಿರಾರು ಜನರ ಕಂಬನಿದುಂಬಿದ ವಿದಾಯ – ಶಂಕಿತರು ಪೊಲೀಸರ ವಶದಲ್ಲಿ, ತೀವ್ರ ವಿಚಾರಣೆ 

ಪುತ್ತೂರು: ನಿನ್ನೆ ಬೆಳ್ಳಾರೆಯಲ್ಲಿ ಅಪರಿಚಿತರಿಂದ ಹತ್ಯೆಗೀಡಾದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು.

ಬಿಜೆಪಿ ಕಾರ್ಯಕರ್ತರು ಹಾಗೂ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಈಗಾಗಲೇ ಕೆಲವು ಶಂಕಿತರನ್ನು ವಶಕ್ಕೆ ಪಡೆಯಲಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.  

ಇತ್ತೀಚಿಗೆ ನಡೆದ ಬೆಳ್ಳಾರೆಯ ಮಸೂದ್ ಹತ್ಯೆಯ ನಂತರದ ಪ್ರತಿಭಟನೆಯ ಸಂದರ್ಭದಲ್ಲಿ ಕೆಲವು ಯುವಕರು ಪ್ರತೀಕಾರದ, ದ್ವೇಷದ ಮಾತುಗಳನ್ನು ಆಡಿದ್ದರು ಎಂಬುದು ಕೆಲವು ಮೂಲಗಳ ಅಂಬೋಣವಾಗಿತ್ತು.   

ಕೊಲೆಗಡುಕರು ಕೇರಳಕ್ಕೆ ಪರಾರಿ ಶಂಕೆ – ಪ್ರವೀಣ್ ನೆಟ್ಟಾರ್ ಹತ್ಯೆ ಕೇಸ್ 

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಕೊಲೆಗಡುಕರು ಕೇರಳಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಈ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. 

“ಈ ಘಟನೆ ಕೇರಳ ಗಡಿಯ ಸಮೀಪ ನಡೆದಿರುವುದರಿಂದ ನಮ್ಮ ಪೊಲೀಸರು ಕೇರಳ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ. ಕರ್ನಾಟಕ ಡಿಜಿಪಿ ಅವರು ಕೇರಳ ಸಹೋದ್ಯೋಗಿಯೊಂದಿಗೆ ಮಾತನಾಡಲಿದ್ದು, ಮಂಗಳೂರು ಎಸ್ಪಿ ಕಾಸರಗೋಡು ಎಸ್ಪಿ ಅವರೊಂದಿಗೆ ಮಾತನಾಡಿದ್ದಾರೆ. ಇದು ಪೂರ್ವ ಯೋಜಿತ ಘಟನೆಯಂತೆ ಕಾಣುತ್ತಿದ್ದು ಇತರ ಪ್ರಕರಣಗಳಿಗೆ ಹೋಲಿಕೆಯಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

 “ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಕೇರಳಕ್ಕೆ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಅಲ್ಲಿನ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಹತ್ಯೆ ರಾಜಕೀಯ ಪ್ರೇರಿತವೇ ಅಥವಾ ಬೇರೆ ಕಾರಣವೇ ಎಂಬುದನ್ನು ತನಿಖೆಯಿಂದ ಬಹಿರಂಗಪಡಿಸಬೇಕು” ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಇಂದು ಎಡನೀರು ಮಠದಲ್ಲಿ ‘ನಾಗೋದ್ಧರಣ’ ಯಕ್ಷಗಾನ ಪ್ರದರ್ಶನ –  ಲೈವ್

ಇಂದು ಎಡನೀರು ಮಠದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಈ ಯಕ್ಷಗಾನ ಪ್ರದರ್ಶನ ಜರಗಲಿದೆ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇವರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಇಂದು ದಿನಾಂಕ 27.07.2022ರ ಬುಧವಾರ ಘಂಟೆ 6ಕ್ಕೆ ಸರಿಯಾಗಿ ಪ್ರದರ್ಶನ ಆರಂಭವಾಗಲಿದೆ. ವಿವರಗಳಿಗೆ ಕರಪತ್ರ ನೋಡಿ. 

ಪ್ರವೀಣ್ ನೆಟ್ಟಾರ್ ಹತ್ಯೆ ಹಿಂದೆ ಮತಾಂಧ ಶಕ್ತಿಗಳ ಕೈವಾಡ – ಹಿಂದೂ ನಾಯಕರ ಅಭಿಮತ – ವೀಡಿಯೊ 

ಬಿಜೆಪಿಯ ಯುವ ನಾಯಕ ಪ್ರವೀಣ್ ನೆಟ್ಟಾರ್  ಹತ್ಯೆಯ ಹಿಂದೆ ಮತಾಂಧ ಶಕ್ತಿಗಳ ಕೈವಾಡ ಇದೆ ಎಂದು ಹಿಂದೂ ಸಂಘಟನೆಯ ನಾಯಕರು  ಆರೋಪಿಸಿದ್ದಾರೆ. 

ನಿನ್ನೆ ನಡೆದ ಪ್ರವೀಣ್ ನೆಟ್ಟಾರು ಹತ್ಯೆಗೆ ಹಿಂದೂ ಕಾರ್ಯಕರ್ತರು ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ರಾತ್ರಿ ಪುತ್ತೂರಿನ ಪ್ರಗತಿ ಆಸ್ಪತ್ರೆಯ ಮುಂದೆ ಸಾಕಷ್ಟು ಜನರು ಸೇರಿ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತ್ತು.

ಇಂದು ಪ್ರವೀಣ್ ನೆಟ್ಟಾರ್ ಅವರ ಮೃತದೇಹವನ್ನು ಇರಿಸಿರುವ ಪುತ್ತೂರು ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಮತ್ತು ಜನಪ್ರಿಯ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ  ಮತ್ತು ಭಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಪ್ರವೀಣ್ ನೆಟ್ಟಾರ್  ಹತ್ಯೆಯ ಹಿಂದೆ ಮತಾಂಧ ಶಕ್ತಿಗಳ ಕೈವಾಡ ಇದೆ ಎಂದು ಹೇಳಿದರು.

ಇತ್ತೀಚಿಗೆ ನಡೆದ ಬೆಳ್ಳಾರೆಯ ಮಸೂದ್ ಹತ್ಯೆಯ ನಂತರದ ಪ್ರತಿಭಟನೆಯ ಸಂದರ್ಭದಲ್ಲಿ ಕೆಲವು ಯುವಕರು ಪ್ರತೀಕಾರದ, ದ್ವೇಷದ ಮಾತುಗಳನ್ನು ಆಡಿದ್ದರು ಎಂಬುದು ಕೆಲವು ಮೂಲಗಳ ಅಂಬೋಣವಾಗಿತ್ತು. 

ಪ್ರವೀಣ್ ನೆಟ್ಟಾರು ಭೀಕರ ಹತ್ಯೆ – ಇಂದು ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಸ್ವಯಂಪ್ರೇರಿತ ಬಂದ್ 

ನಿನ್ನೆ ರಾತ್ರಿ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲ್ಲಲ್ಪಟ್ಟ ಪ್ರವೀಣ್ ನೆಟ್ಟಾರು ಅವರ ಹತ್ಯೆಗೆ ಇಡೀ ಕರ್ನಾಟಕವೇ ಬೆಚ್ಚಿ ಬಿದ್ದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಹಲವಾರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ, ಪುತ್ತೂರು, ಕಡಬ, ಸುಳ್ಯ ತಾಲೂಕುಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. 

ಪ್ರವೀಣ್‌ ನೆಟ್ಟಾರು (32 ) ಹತ್ಯೆಯ ಬಳಿಕ ಕರಾವಳಿಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಡಿಜಿ ಐಜಿಪಿ ಪ್ರವೀಣ್‌ ಸೂದ್‌ ಅವರು ದಕ್ಷಿಣ ಕನ್ನಡ ಜಿಲಾ ಎಸ್‌ಪಿ ಸೂಚನೆ ನೀಡಿ ಪುತ್ತೂರಿನಾದ್ಯಂತ ಸೆಕ್ಷನ್‌ 144 ಜಾರಿಗೊಳಿಸಲು ಸೂಚನೆ ನೀಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.

ಘಟನೆ ನೆಡೆದ ಕೂಡಾಲೇ ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು. ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ. ಓಂ ಶಾಂತಿಃ” ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆಗೆ ಹಿಂದೂ ಕಾರ್ಯಕರ್ತರು ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ರಾತ್ರಿ ಪುತ್ತೂರಿನ ಪ್ರಗತಿ ಆಸ್ಪತ್ರೆಯ ಮುಂದೆ ಸಾಕಷ್ಟು ಜನರು ಸೇರಿ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತ್ತು.  

ಜಿಲ್ಲಾಧಿಕಾರಿಗಳು ಬರುವವರೆಗೆ ಮೃತದೇಹ ಕೊಂಡೊಯ್ಯಲು ಬಿಡುವುದಿಲ್ಲವೆಂದು ಬಿಜೆಪಿ ಪಕ್ಷದ ಕಾರ್ಯಕರ್ತರು, ಹಿಂದೂಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. “ಕೇಂದ್ರ ಸರಕಾರವು ನಮ್ಮದೇ, ರಾಜ್ಯ ಸರಕಾರವು ನಮ್ಮದೇ, ಕೊನೆಗೆ ಸಾವು ನಮ್ಮದೇʼʼ ಎಂಬ ಪೋಸ್ಟರ್‌ಗಳೂ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. 

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್‌ ಹತ್ಯೆ ಖಂಡಿಸಿ ಇಂದು (27.07.2022) ಪುತ್ತೂರು, ಕಡಬ, ಸುಳ್ಯ ತಾಲೂಕಿನಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಹಿಂದೂ ನಾಯಕರು ಕರೆ ನೀಡಿದ್ದಾರೆ.