Monday, August 31, 2026
Home Blog Page 226

ಡಾ. ರಾಜಕುಮಾರ್ ಅವರ ಹಳೆಯ, ಅತಿ ಅಪರೂಪದ ಭಾವಚಿತ್ರಗಳ ಸಂಗ್ರಹವನ್ನು ವೀಡಿಯೊ ರೂಪದಲ್ಲಿ ಪೋಸ್ಟ್ ಮಾಡಿದ ರಾಘವೇಂದ್ರ ರಾಜಕುಮಾರ್ – ವೀಡಿಯೊ 

ಕನ್ನಡ ಚಿತ್ರರಂಗ ಕಂಡ ಮಹಾನ್, ಮೇರುನಟ ಡಾ. ರಾಜಕುಮಾರ್. ಅವರ ಮೇರುವ್ಯಕ್ತಿತ್ವವನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.

ನಟರಾಗಿ ಎಷ್ಟು ಸಾಧನೆಯನ್ನು ಮಾಡಿದ್ದಾರೆಯೋ ಅಷ್ಟೇ ಜನಪ್ರಿಯತೆಯನ್ನು ಗಾಯಕರಾಗಿಯೂ ಪಡೆದುಕೊಂಡಿದ್ದಾರೆ. ನಟಸಾರ್ವಭೌಮ ಬಿರುದು, ಗೌರವ ಡಾಕ್ಟರೇಟ್ ಪದವಿ, ನಾಡೋಜ ಪದವಿ ಇವೆಲ್ಲಾ ಅವರ ಸಾಧನೆಗೆ ಸಂದ ಗೌರವಗಳು.

ಇತ್ತೀಚಿಗೆ ಅವರ ಸುಪುತ್ರ ರಾಘವೇಂದ್ರ ರಾಜಕುಮಾರ್ ಅವರು, ಡಾ. ರಾಜಕುಮಾರ್ ಅವರ ಹಾಗೂ ಕುಟುಂಬದ ಹಳೆಯ ಭಾವಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಫೋಟೋಗಳನ್ನು ನೋಡುವಾಗ ನೂರೆಂಟು ಭಾವನೆಗಳು ಮನಸಿನಲ್ಲಿ ಹಾದುಹೋಗುತ್ತವೆ. ಈ ಫೋಟೋಗಳು ವೀಡಿಯೊ ರೂಪದಲ್ಲಿದೆ. ವೀಡಿಯೊ ನೋಡಿ. 

ಯಕ್ಷಗಾನ ಹಾಸ್ಯ ಕಲಾವಿದ ಸಚ್ಚಿದಾನಂದ ಪ್ರಭು ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನದ ಗೌರವ 

ಯಕ್ಷಗಾನ ಹಾಸ್ಯ ಕಲಾವಿದ ಸಚ್ಚಿದಾನಂದ ಪ್ರಭು ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನದ ಗೌರವ ಲಭಿಸಿದೆ. ಇತ್ತೀಚಿಗೆ ತುಳು ಯಕ್ಷ ಜಾತ್ರೆ ಎಂಬ ಕಾರ್ಯಕ್ರಮದಲ್ಲಿ ಅವರು ಈ ಗೌರವಕ್ಕೆ ಪಾತ್ರರಾದರು. 

ಮಂಗಳೂರಿನಲ್ಲಿ ದಿನಾಂಕ 30.07.2022ರಿಂದ ಆರಂಭವಾದ ತುಳು ಯಕ್ಷ ಜಾತ್ರೆ 10.08.2022 ವರೆಗೆ  ನಡೆಯಲಿದೆ.

ಮಂಗಳೂರಿನ ಅಶೋಕನಗರದ ತುಳು ಭವನದಲ್ಲಿ ನಡೆಯುವ 12 ದಿನಗಳ  ತುಳು ಯಕ್ಷಗಾನ ಜಾತ್ರೆಯಲ್ಲಿ ಪ್ರತಿದಿನವೂ ಒಂದೊಂದು ತುಳು ಯಕ್ಷಗಾನ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತಿದೆ.

ಈ ತುಳು ಯಕ್ಷ ಜಾತ್ರೆ ಸಂದರ್ಭದಲ್ಲಿ  ಶ್ರೀ ಸಚ್ಚಿದಾನಂದ ಪ್ರಭು ಅವರು ಯಕ್ಷಗಾನ ರಂಗದಲ್ಲಿ ಸಲ್ಲಿಸಿದ ಸೇವೆ ಹಾಗೂ ತನ್ಮೂಲಕ ಅವರು ತುಳು ಭಾಷೆಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. 

ರಸ್ತೆಯಲ್ಲಿ ವಾಹನಗಳ ಸಾಲುಗಳ ನಡುವೆ ಕಾಡಿನ ರಾಜ ಸಿಂಹದ ಗಾಂಭೀರ್ಯದ ನಡಿಗೆ – ಬೆಚ್ಚಿಬಿದ್ದ ಪ್ರಯಾಣಿಕರು – ವೀಡಿಯೊ 

ಸಿಂಹ ಒಂದು ಕಾಡು ಪ್ರಾಣಿ. ಕಾಡು ಅದರ ನೈಸರ್ಗಿಕ ಆವಾಸಸ್ಥಾನವಾಗಿದೆ. ಅದರ ಬೃಹತ್ ಗಾತ್ರ ಮತ್ತು ಕಚ್ಚಾ ಶಕ್ತಿಯಿಂದಾಗಿ ಇದನ್ನು “ಕಾಡಿನ ರಾಜ” ಎಂದು ಕರೆಯಲಾಗುತ್ತದೆ.

ಇದು ಬಲವಾದ ಮೈಕಟ್ಟು, ನಾಲ್ಕು ಕಾಲುಗಳು, ಮೇನ್ (ಪುರುಷರಲ್ಲಿ), ಬಾಲ ಮತ್ತು ಎರಡು ಹೊಳೆಯುವ ಕಣ್ಣುಗಳನ್ನು ಹೊಂದಿರುವ ದೊಡ್ಡ ತಲೆಯನ್ನು ಹೊಂದಿದ್ದು ಅದು ಉಗ್ರವಾಗಿ ಕಾಣುತ್ತದೆ.

ಸಿಂಹವು ಘರ್ಜನೆ ಮತ್ತು ಬೇಟೆಯಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಅದು ‘ಹೆಮ್ಮೆ’ಯಲ್ಲಿ ಜೀವಿಸುತ್ತದೆ.

ಆದರೆ ಇಲ್ಲೊಂದು ಸಿಂಹ ರಸ್ತೆಯಲ್ಲಿ ಪ್ರಯಾಣಿಕರ ವಾಹನಗಳ ನಡುವೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಇರುವ ವೀಡಿಯೊ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

ಗಂಡು ಸಿಂಹವಾದ ಕಾರಣ ದೂರದಿಂದ ನೋಡುವಾಗ ಅದರ ಕೇಸರಿ (ಕೂದಲು) ಇರುವುದರಿಂದ ಬೃಹತ್ ಗಾತ್ರದ ಸಿಂಹದಂತೆ ಕಾಣುತ್ತದೆ. ಅದರ ಮೈ ಜುಮ್ಮೆನ್ನಿಸುವ ನಡಿಗೆಯ ವೀಡಿಯೊ ನೋಡಿ.

ನಾಳೆ ‘ತುಳು ಯಕ್ಷ ಜಾತ್ರೆ’ಯಲ್ಲಿ ಗಣೇಶ ಪಾಲೆಚ್ಚಾರ್ ನಿರ್ದೇಶನ ಹಾಗೂ ಸಂಯೋಜನೆಯಲ್ಲಿ ‘ಕನಕಾಂಗಿ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ 

ನಾಳೆ 03.08.2022ರ ಬುಧವಾರ ಮಧ್ಯಾಹ್ನ  2.30 ಘಂಟೆಗೆ ಮಂಗಳೂರಿನ ತುಳು ಯಕ್ಷ ಜಾತ್ರೆಯಲ್ಲಿ ಯಕ್ಷಗಾನ ಕಲಾವಿದರಾದ ಗಣೇಶ ಪಾಲೆಚ್ಚಾರ್ ನಿರ್ದೇಶನ ಹಾಗೂ ಸಂಯೋಜನೆಯಲ್ಲಿ ‘ ಕನಕಾಂಗಿ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಮಂಗಳೂರಿನಲ್ಲಿ ದಿನಾಂಕ 30.07.2022ರಿಂದ ಆರಂಭವಾದ ತುಳು ಯಕ್ಷ ಜಾತ್ರೆ 10.08.2022 ವರೆಗೆ  ನಡೆಯಲಿದೆ.

ಮಂಗಳೂರಿನ ಅಶೋಕನಗರದ ತುಳು ಭವನದಲ್ಲಿ ನಡೆಯುವ 12 ದಿನಗಳ  ತುಳು ಯಕ್ಷಗಾನ ಜಾತ್ರೆಯಲ್ಲಿ ಪ್ರತಿದಿನವೂ ಒಂದೊಂದು ತುಳು ಯಕ್ಷಗಾನ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತಿದೆ.

ನಾಳೆ ಅಂದರೆ 03.08.2022ರ ಬುಧವಾರ ಮಧ್ಯಾಹ್ನ  2.30 ಘಂಟೆಗೆ ಯಕ್ಷಗಾನ ಕಲಾವಿದರಾದ ಗಣೇಶ ಪಾಲೆಚ್ಚಾರ್ ನಿರ್ದೇಶನ ಹಾಗೂ ಸಂಯೋಜನೆಯಲ್ಲಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಪುತ್ತೂರು ಇವರಿಂದ ‘ ಕನಕಾಂಗಿ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಕಾರ್ಯಕ್ರಮವು ಪ್ರತಿದಿನ ಮಧ್ಯಾಹ್ನ 2.30 ಘಂಟೆಗೆ ಆರಂಭವಾಗಲಿದೆ.

ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಿ. 

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ರಕ್ಷಕ- ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 2022-23ನೇ ಸಾಲಿನ ಶಿಕ್ಷಕ- ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಹರಿಕಿರಣ್ ಕೆ ಆಯ್ಕೆಯಾಗಿದ್ದಾರೆ.

ರಕ್ಷಕ-ಶಿಕ್ಷಕ ಸಂಘದ ರಚನೆ ಕಾಲೇಜಿನ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನಡೆಯಿತು. ಸಂಘ ಸಭೆಯಲ್ಲಿ ಆಯ್ಕೆ ಪ್ರಕಿಯೆ ನೆರವೇರಿತು. ಉಪಾಧ್ಯಕ್ಷರಾಗಿ ಸಂದರ್ಶಕ ಪ್ರಾಧ್ಯಾಪಕ ಜಯನಂದ ಪೆರಾಜೆ ಮತ್ತು ಸುಳ್ಯದ ಕೊಡಿಬೈಲಿನ  ಅಶ್ವಿನಿ ಎಂ. ಜಿ ಆಯ್ಕೆಯಾದರು.

ಕಾರ್ಯದರ್ಶಿಯಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಮತ್ತು ಜೊತೆ ಕಾರ್ಯದರ್ಶಿಯಾಗಿ ಕನ್ಯಾನದ ಗುರು ಎಜುಕೇಷನ್ ಟ್ರಸ್ಟ್  ಶ್ರೀ ಸರಸ್ವತಿ ವಿದ್ಯಾಲಯದ ಅಧ್ಯಕ್ಷ ಈಶ್ವರ ಪ್ರಸಾದ್ ಯು. ಎಸ್ ಹಾಗೂ ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಕುಸುಮ ನೇಮಕಗೊಂಡರು. ಕೋಶಾಧಿಕಾರಿಯಾಗಿ ಕಾಸರಗೋಡಿನ ಉಕ್ಕಿನಡ್ಕದ ಕೃಷ್ಣಪ್ರಕಾಶ್ ಬಳ್ಳಂಬೆಟ್ಟು ಆಯ್ಕೆಯಾದರು. ಸುಮಾರು 25 ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. 

ರಕ್ಷಕ- ಶಿಕ್ಷಕ ಸಂಘದ ನೂತನ ಅಧ್ಯಕ್ಷ ಹರಿಕಿರಣ್ ಕೆ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಪೋಷಕರು ಹಾಗೂ ಶಿಕ್ಷಕರು ಸ್ಪಂದಿಸಲು ರಕ್ಷಕ-ಶಿಕ್ಷಕ ಸಂಘವು ಸದಾ ಕಾರ್ಯೋಮ್ಮುಖವಾಗಿರುತ್ತದೆ. ಕಾಲೇಜಿನ ಅಭಿವೃದ್ಧಿಗೆ ರಕ್ಷಕ-ಶಿಕ್ಷಕ ಸಂಘವು ಇನ್ನಷ್ಟು ಬಲ ತುಂಬುವ ಪ್ರಯತ್ನವನ್ನು ಮಾಡುತ್ತದೆ ಎಂದು ಎಲ್ಲರ ಸಹಕಾರವನ್ನು ಕೋರಿದರು. 

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ. ಗೋಪಾಲಕೃಷ್ಣ ಭಟ್  ಮಾತನಾಡಿ  ವಿದ್ಯಾರ್ಥಿ, ಪಾಲಕ, ಶಿಕ್ಷಕ, ಆಡಳಿತ ಮಂಡಳಿ ಮತ್ತು ಸಮಾಜ ಈ ನಾಲ್ಕು ವಿಭಾಗಗಳಿಂದ ಸಮಾನ ರೀತಿಯ ಆಸಕ್ತಿ ಮತ್ತು ಪ್ರೋತ್ಸಾಹ ಸಿಕ್ಕಿದಾಗ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಾಲೇಜಿನ ಆಡಳಿತ ಮಂಡಳಿ ವಿಶೇಷ ಅನುದಾನ ಮತ್ತು ಪ್ರೋತ್ಸಾಹ ನೀಡಲು ಸದಾ ಸಿದ್ದ ಎಂದರು. 2021-22ನೇ ಸಾಲಿನ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಕೆ. ಎಸ್ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಗತವರ್ಷದ ಆಯವ್ಯಯ, ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. 2022-23ನೇ ಶೈಕ್ಷಣಿಕ ವರ್ಷದಲ್ಲಿ ನಡೆಸಬಹುದಾದ ಕಾರ್ಯಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ,ಸದಸ್ಯರಾದ ಕೆ. ಎನ್ ಸುಬ್ರಹ್ಮಣ್ಯ, ವತ್ಸಲಾ ರಾಜ್ಞಿ, ಇಂದಿರಾ  ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉಪನ್ಯಾಸಕಿ ದಿವ್ಯಾ ಜಿ ನಿರೂಪಿಸಿದರು.  ಪ್ರಾಂಶುಪಾಲ ಮಹೇಶ ನಿಟಿಲಾಪುರ ಸ್ವಾಗತಿಸಿ ಉಪನ್ಯಾಸಕಿ ನವ್ಯ ವಿ ಪಿ ವಂದಿಸಿದರು.

ಕಟೀಲು ಮೇಳದ ಸಹೃದಯೀ ಪುಂಡುವೇಷಧಾರಿ ಶ್ರೀ ಆನಂದ ಕೊಕ್ಕಡ 

ಯಕ್ಷಗಾನ ಎಂಬ ಶ್ರೇಷ್ಠ ಕಲೆಯಲ್ಲಿ ಕಲಾವಿದನಾಗಬೇಕು ಎಂಬ ಆಸೆಯುಳ್ಳವರಿಗೆ ಅವರವರ ಅಭಿರುಚಿಗೆ ತಕ್ಕಂತೆ ಆಯ್ಕೆಗೆ ಅವಕಾಶಗಳಿವೆ. ಹಿಮ್ಮೇಳ ಕಲಾವಿದನಾಗಬೇಕೆಂಬ ಬಯಕೆಯುಳ್ಳವರಿಗೆ ಭಾಗವತನಾಗಿ, ಮದ್ದಳೆಗಾರನಾಗಿ ಕಲಾಸೇವೆಯನ್ನು ಮಾಡಬಹುದು. ಮುಮ್ಮೇಳ ಕಲಾವಿದನಾಗಿ ಕಲಾಸೇವೆಯನ್ನು ಮಾಡಬೇಕೆಂಬ ಆಸೆಯಿದ್ದವರಿಗೆ ಹಾಸ್ಯಗಾರನಾಗಿ, ಬಣ್ಣದ ವೇಷಧಾರಿಯಾಗಿ, ಕಿರೀಟ ವೇಷಧಾರಿಯಾಗಿ, ಪುಂಡು ವೇಷಧಾರಿಯಾಗಿ, ಸ್ತ್ರೀ ಪಾತ್ರಧಾರಿಯಾಗಿ ಕಾಣಿಸಿಕೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಬಹುದು.

ಪ್ರಸ್ತುತ ಪುಂಡು ವೇಷಧಾರಿಯಾಗಿ ಕಾಣಿಸಿಕೊಂಡು ಅನೇಕ ಪ್ರತಿಭಾನ್ವಿತರು ಕಲಾಭಿಮಾನಿಗಳ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಅಂತಹಾ ಕಲಾವಿದರ ಸಾಲಿನಲ್ಲಿ ಗುರುತಿಸಲ್ಪಡುವವರು  ಶ್ರೀ ಆನಂದ ಕೊಕ್ಕಡ. ಇವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. ನಗುಮೊಗದ ಸಹೃದಯೀ ಕಲಾವಿದ.

ಕಟೀಲು ಮೇಳದ ಪುಂಡುವೇಷಧಾರಿ ಶ್ರೀ ಆನಂದ ಪೂಜಾರಿ ಅವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ತೋಟದಮೂಲೆ. ಶ್ರೀ ಕೊರಗಪ್ಪ ಪೂಜಾರಿ ಮತ್ತು ಚೆನ್ನಮ್ಮ ದಂಪತಿಗಳ ಪುತ್ರನಾಗಿ ಜನನ. ವಿದ್ಯಾಭ್ಯಾಸ ಎಸ್ ಎಸ್ ಎಲ್ ಸಿ ವರೆಗೆ. ಕೊಕ್ಕಡದ ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೊಕ್ಕಡ ಸರಕಾರೀ ಪ್ರೌಢಶಾಲೆಯಲ್ಲಿ ವಿದ್ಯಾರ್ಜನೆ. ತೆಂಕುತಿಟ್ಟಿನ ಹಾಸ್ಯಗಾರರಾದ ಶ್ರೀ ಉಜಿರೆ ನಾರಾಯಣ ಅವರು ಆನಂದ ಕೊಕ್ಕಡ  ಬಂಧುಗಳು.

ಆನಂದ ಅವರ ತಂದೆ ತಾಯಂದಿರೂ ಯಕ್ಷಗಾನ ಕಲಾಸಕ್ತರಾಗಿದ್ದರು. ಪ್ರದರ್ಶನಗಳನ್ನು ನೋಡುವ ಹವ್ಯಾಸವಿದ್ದವರು. ಶ್ರೀ ಆನಂದ ಅವರು ಶಾಲಾ ವಿದ್ಯಾರ್ಥಿಯಾಗಿದ್ದಾಗ ಮಾತಾ ಪಿತೃಗಳ ಜೊತೆ ಹೋಗಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಹೀಗಾಗಿ ತಾನೂ ಕಲಾವಿದನಾಗಬೇಕೆಂಬ ಬಯಕೆಯು ಚಿಗುರೊಡೆದಿತ್ತು. ಇವರ ಕನಸು ನನಸಾಗುವುದಕ್ಕೆ ಕಲಾಮಾತೆಯ ಅನುಗ್ರಹದಿಂದ ಅವಕಾಶವೂ ದೊರೆತಿತ್ತು.

ಹತ್ತನೇ ತರಗತಿಯಲ್ಲಿ ಓದುತ್ತಿರುವಾಗ ಶಾಲಾ ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶನವನ್ನು ನಡೆಸಬೇಕೆಂದು ಶಾಲಾ ಆಡಳಿತ ಮಂಡಳಿಯು ನಿರ್ಣಯಿಸಿತ್ತು. ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲು ಶಾಲಾ ಅಧ್ಯಾಪಕರು ಖ್ಯಾತ ಕಲಾವಿದ ಅರಸಿನಮಕ್ಕಿ ಶ್ರೀ ಪರಮೇಶ್ವರ ಆಚಾರ್ಯರನ್ನು ಕರೆಸಿಕೊಂಡಿತ್ತು. ಕಟೀಲು ಮೇಳದ ಕಲಾವಿದ ಶ್ರೀ ಜನಾರ್ದನ ಕೊಕ್ಕಡ ಅವರೂ ಶ್ರೀ ಆನಂದ ಕೊಕ್ಕಡ ಅವರೂ ಶಾಲೆಯಲ್ಲಿ ಸಹಪಾಠಿಗಳು. ಇಬ್ಬರೂ ಜತೆಯಾಗಿ ಶ್ರೀ ಪರಮೇಶ್ವರ ಆಚಾರ್ಯರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತರು.

ಶಾಲಾ ಪ್ರದರ್ಶನದಲ್ಲಿ ಶ್ರೀ ಆನಂದ ಅವರು ಅಭಿಮನ್ಯು ಕಾಳಗ ಪ್ರಸಂಗದಲ್ಲಿ ಅಭಿಮನ್ಯುವಿನ ಸಾರಥಿಯಾಗಿ ರಂಗ ಪ್ರವೇಶ ಮಾಡಿದರು. ಅದೇ ವರ್ಷ ಶಾಲೆ ಬಿಟ್ಟು ಮೇಳಕ್ಕೆ ಸೇರುವುದೆಂಬ ನಿರ್ಣಯವನ್ನು ಮಾಡಿದ್ದರು. ಈ ಇಬ್ಬರಲ್ಲೂ ಯಕ್ಷಗಾನಾಸಕ್ತಿ ಅಷ್ಟು ಆಳವಾಗಿತ್ತು. ಅದಕ್ಕಾಗಿ ತಯಾರಿಯನ್ನು ನಡೆಸಿದರು. ಮಳೆಗಾಲದಲ್ಲಿ ಶ್ರೀ ಪರಮೇಶ್ವರ ಆಚಾರ್ಯರಿಂದ ಪೂರ್ವರಂಗದ ಎಲ್ಲಾ ಪಾತ್ರಗಳನ್ನು ನಿರ್ವಹಿಸುವ ಬಗೆಗೆ ತರಬೇತಿಯನ್ನು ಹೊಂದಿಯೇ ಮೇಳದ ತಿರುಗಾಟವನ್ನು ಆರಂಭಿಸಿದ್ದರು. 

ಶ್ರೀ ಆನಂದ ಕೊಕ್ಕಡ ಅವರ ತಿರುಗಾಟ ಕಟೀಲು ನಾಲ್ಕನೇ ಮೇಳದಲ್ಲಿ. ಕುಬಣೂರು ಶ್ರೀಧರ ರಾಯರ ಭಾಗವತಿಕೆ. ಪ್ರಾರಂಭದಲ್ಲಿ ಬಾಲಗೋಪಾಲನಾಗಿ ರಂಗಪ್ರವೇಶ. ಅಲ್ಲದೆ ಪ್ರಸಂಗಗಳಲ್ಲಿ ತಮ್ಮ ಪಾಲಿಗೆ ಬಂದ ವೇಷಗಳನ್ನು ಮಾಡುತ್ತಿದ್ದರು. ಸದಾ ಕಲಿಕಾಸಕ್ತರಾಗಿ ಕ್ಷಿಪ್ರ ಬೆಳವಣಿಗೆಯನ್ನು ಹೊಂದಿದ ಕಲಾವಿದರಿವರು. ಹದಿನೆಂಟು ವರ್ಷಗಳ ಕಾಲ ಕಟೀಲಿನ ನಾಲ್ಕನೇ ಮೇಳದಲ್ಲಿ ವ್ಯವಸಾಯ.

ಶ್ರೀ ವಿಷ್ಣು ಶರ್ಮ, ರವಿಶಂಕರ್ ವಳಕ್ಕುಂಜ, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ತೊಡಿಕಾನ ವಿಶ್ವನಾಥ ಗೌಡ, ಗಿರೀಶ್ ಕಾವು ಇವರ ಸಹಕಾರವೂ ದೊರೆತಿತ್ತು. ಈ ಸಮಯದಲ್ಲಿ ಎರಡನೇ ಸ್ತ್ರೀವೇಷ ಮತ್ತು ಪುಂಡುವೇಷಧಾರಿಯಾಗಿ ಬೆಳೆದಿದ್ದರು. ಅನಿವಾರ್ಯ ಸಂದರ್ಭಗಳಲ್ಲಿ 1ನೇ ಪುಂಡುವೇಷ ಮತ್ತು ಸ್ತ್ರೀ ಪಾತ್ರಗಳನ್ನೂ ನಿರ್ವಹಿಸಿದ್ದರು. ಹದಿನೆಂಟು ವರ್ಷಗಳ ಕಾಲ ಕಟೀಲು ನಾಲ್ಕನೇ ಮೇಳದಲ್ಲಿ ವ್ಯವಸಾಯ. ಬಳಿಕ ಒಂದನೇ ಪುಂಡುವೇಷಧಾರಿಯಾಗಿ ಭಡ್ತಿ ದೊರೆತಿತ್ತು.

ಕಟೀಲು 5ನೇ ಮೇಳದಲ್ಲಿ 1 ವರ್ಷ, ಬಳಿಕ 6ನೇ ಮೇಳದಲ್ಲಿ 2 ವರ್ಷ, ಬಳಿಕ ಮರಳಿ 4ನೇ ಮೇಳದಲ್ಲಿ 1 ವರ್ಷ, ಮರಳಿ 6ನೇ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಆನಂದ ಕೊಕ್ಕಡ  ಒಟ್ಟು ಇಪ್ಪತ್ತಮೂರು ತಿರುಗಾಟದ ಅನುಭವವನ್ನು ಹೊಂದಿರುತ್ತಾರೆ. ಹಿತ ಮಿತವಾದ ಕುಣಿತ ಮತ್ತು ಮಾತುಗಾರಿಕೆಯಿಂದ ವೇಷಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಕಲಾವಿದರಿವರು.

ನಗುಮೊಗದ ಸಹೃದಯೀ ಕಲಾವಿದ ಶ್ರೀ ಆನಂದ ಕೊಕ್ಕಡ ಅವರ ಪತ್ನಿ ಶ್ರೀಮತಿ ಅಶ್ವಿನಿ ಗೃಹಣಿ. ಅಶ್ವಿನಿ, ಆನಂದ ಕೊಕ್ಕಡ  ದಂಪತಿಗಳಿಗೆ ಇಬ್ಬರು ಪುತ್ರಿಯರು. ಕು| ಆದ್ಯ ಮತ್ತು ಕು| ಆರಾಧ್ಯ ಇಬ್ಬರೂ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಆನಂದ ಕೊಕ್ಕಡ ಅವರಿಗೆ ಸುದೀರ್ಘ ಕಾಲ ಕಲಾಸೇವೆಯನ್ನು ಮಾಡುವ ಭಾಗ್ಯವು ದೊರೆಯಲಿ. ಶ್ರೀ ದೇವರ ಅನುಗ್ರಹವು ಸದಾ ಇರಲಿ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನೆ

ರಾಜ್ಯಸಭಾ ಸದಸ್ಯರಾಗಿ ನಿಯುಕ್ತರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇವರನ್ನು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಬಂಟ್ವಾಳ ವತಿಯಿಂದ ದಿನಾಂಕ 1.8.2022 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಅಭಿನಂದಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ,ಸಹ ಸಂಚಾಲಕ ಭಾಸ್ಕರ ಬಾರ್ಯ, ಉಪಾಧ್ಯಕ್ಷರಾದ ಜಯರಾಮ ಭಂಡಾರಿ ಧರ್ಮಸ್ಥಳ, ಅನಂತ ಪ್ರಭು ನೇರಳಕಟ್ಟೆ, ಜಗದೀಶ ಅಧಿಕಾರಿ ಮೂಡಬಿದ್ರೆ, ಸೀತಾರಾಮ ಶೆಟ್ಟಿ ಉಜಿರೆ, ರಾಧಾಕೃಷ್ಣರಾವ್ ಧರ್ಮಸ್ಥಳ ,ಭವಾನಿ ಶಂಕರ್ ಪುತ್ತೂರು ರಾಮಕೃಷ್ಣ ನಾಯಕ್ ಕೋಕಳ, ಚಂದ್ರಶೇಖರ ಆಳ್ವ ಪುತ್ತೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೃತಿ ಸನೋನ್ – ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ ನಟಿಗೆ ಇನ್ಸ್ಟಾ ಗ್ರಾಮ್ ನಲ್ಲಿ 50 ಮಿಲಿಯನ್ ದಾಟಿದ ಫಾಲ್ಲೋವರ್ಸ್ 

ದಿಲ್ ವಾಲೆ, ಬರೇಲಿ ಕಿ ಬರ್ಫಿ ಮತ್ತು ಮಿಮಿಯಂತಹ ಹಿಟ್‌ ಸಿನಿಮಾಗಳ ಮೂಲಕ ನಟಿ ಕೃತಿ ಸನೋನ್ ಬಾಲಿವುಡ್‌ನಲ್ಲಿ ತಮ್ಮದೇ ಆದ ಹೆಸರನ್ನು ಗಳಿಸಿಕೊಂಡಿದ್ದಾರೆ.

ತನ್ನ ಬಹುಮುಖ ಪ್ರತಿಭೆಗಾಗಿ ಅಭಿಮಾನಿಗಳು ಮತ್ತು ಸಿನಿಪ್ರಿಯರಿಂದ ಪ್ರೀತಿಪಾತ್ರರಾದ ನಟಿ, ಅಂತಿಮವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ 50 ಮಿಲಿಯನ್ ಫಾಲೋವರ್ಸ್ ಮಾರ್ಕ್ ಅನ್ನು ಹೊಡೆದು ಮತ್ತೊಂದು ಸಾಧನೆಯನ್ನು ಸಾಧಿಸಿದ್ದಾರೆ, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರಂತಹ ಸೆಲೆಬ್ರಿಟಿಗಳ ನಡುವೆ ಜಾಗವನ್ನು ಮಾಡಿದ್ದಾರೆ.

ಸಂತೋಷದ ಸಂದರ್ಭದಲ್ಲಿ, ಕೃತಿ ತನ್ನ ಅಭಿಮಾನಿಗಳಿಗೆ ಘೋಷಣೆಯನ್ನು ನೀಡುವ ಹೃತ್ಪೂರ್ವಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ವೀಡಿಯೊ ತುಣುಕು ಆಕೆಯ ವೃತ್ತಿಜೀವನದ ಹಲವಾರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಾದ ಹೀರೋಪಂತಿ, ರಾಬ್ತಾ, ಲುಕಾ ಚುಪ್ಪಿ, ಪತಿ ಪಟ್ನಿ ಔರ್ ವೋ ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿನ ಆಕೆಯ ಅಭಿನಯದ ಹಲವಾರು ಗ್ಲಿಂಪ್ಸ್ ಮತ್ತು ದೃಶ್ಯಗಳನ್ನು ತೋರಿಸಿದೆ.

ಅಷ್ಟೇ ಅಲ್ಲ, ಆಕೆಯ ಯೂಟ್ಯೂಬ್ ಚಾನೆಲ್ ಮತ್ತು ಆಕೆಯ ದಿನನಿತ್ಯದ ಜೀವನದ ಕೆಲವು ಅಪರೂಪದ ದೃಶ್ಯಗಳನ್ನು ಸಹ ವೀಡಿಯೊ ಒಳಗೊಂಡಿದೆ. ಅವರು ಶೀರ್ಷಿಕೆಯಲ್ಲಿ “ಮಿಮಿ ಹೇಳುವಂತೆ “ಅಭಿಮಾನಿಗಳು ಹೈ ಮೇರಿ ಯಹಾನ್ ಪರ್ ಹಾನ್ ಅನುಸರಿಸುತ್ತಿದ್ದಾರೆ!” 50 ಮಿಲಿಯನ್ ಪ್ರೀತಿ ಮತ್ತು ಎಣಿಕೆಗಾಗಿ ಲವ್ ಯು ಗೈಸ್” ಎಂದು  ಬರೆದಿದ್ದಾರೆ,

ವೃತ್ತಿಪರವಾಗಿ, ಕೃತಿ ಸನೋನ್ ಮೊದಲ ಬಾರಿಗೆ ಶಾಹಿದ್ ಕಪೂರ್ ಮತ್ತು ದಿನೇಶ್ ವಿಜಾನ್ ಅವರೊಂದಿಗೆ ವಿಶಿಷ್ಟವಾದ ಪ್ರೇಮಕಥೆಯಲ್ಲಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ. 2022 ರ ಅಂತ್ಯದ ವೇಳೆಗೆ ಬೆಳ್ಳಿ ತೆರೆಗೆ ಬರುವ ನಿರೀಕ್ಷೆಯಿದೆ, ಬೆಳವಣಿಗೆಗೆ ಹತ್ತಿರವಿರುವ ಮೂಲವೊಂದು ಮಿಮಿ ನಟಿಯನ್ನು ನಾಯಕಿಯಾಗಿ ಮಾಡಲು ಅಂತಿಮಗೊಳಿಸಲಾಗಿದೆ ಎಂದು ಬಹಿರಂಗಪಡಿಸಿದೆ.

“ಇದೊಂದು ವಿಶಿಷ್ಟವಾದ ಪ್ರೇಮಕಥೆಯಾಗಿದ್ದು, ಹೊಸ ಕಾಸ್ಟಿಂಗ್‌ಗೆ ಕರೆ ನೀಡಲಾಗಿದೆ ಮತ್ತು ಶಾಹಿದ್ ಮತ್ತು ಕೃತಿಯನ್ನು ಮೊದಲ ಬಾರಿಗೆ ಒಟ್ಟಿಗೆ ಸೇರಿಸಲು ತಂಡವು ಸರ್ವಾನುಮತದಿಂದ ನಿರ್ಧರಿಸಿದೆ. ಅಕ್ಟೋಬರ್‌ನಿಂದ ಈ ಚಿತ್ರದ ಪ್ರಯಾಣವನ್ನು ಪ್ರಾರಂಭಿಸಲು ಇಬ್ಬರೂ ಉತ್ಸುಕರಾಗಿದ್ದಾರೆ. ಈ ವರ್ಷ ನವೆಂಬರ್. ಕೆಲವು ಸ್ಕ್ರಿಪ್ಟ್ ಓದುವ ಅವಧಿಗಳು ಮತ್ತು ಕಾರ್ಯಾಗಾರಗಳು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗುತ್ತವೆ. ಪ್ರತಿಭಾವಂತ ಜೋಡಿಯು ಉತ್ತಮ ಆನ್-ಸ್ಕ್ರೀನ್ ಜೋಡಿಯನ್ನು ಮಾಡುತ್ತದೆ.”

ಮುಂಬೈ, ದೆಹಲಿ ಮತ್ತು ಯುರೋಪಿಯನ್ ದೇಶಗಳಲ್ಲಿ 4 ರಿಂದ 5 ತಿಂಗಳ ಅವಧಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿದ ಅತಿದೊಡ್ಡ ಪ್ರೇಮಕಥೆ ಎಂದು ನಿರೀಕ್ಷಿಸಲಾಗಿದೆ, ಮಹತ್ವಾಕಾಂಕ್ಷೆಯ ಯೋಜನೆಯು ಹೊಸ ನಿರ್ದೇಶಕರಿಂದ ಹೆಲ್ಮ್ ಆಗಲಿದೆ.

ಈ ಹಿಂದೆ ಕೃತಿ ರಾಬ್ತಾ, ಲುಕಾ ಚುಪ್ಪಿ, ಅರ್ಜುನ್ ಪಟಿಯಾಲ, ಮಿಮಿ, ಹಮ್ ದೋ ಹಮಾರೆ ದೋ ಮತ್ತು ಭೇದಿಯಾ ಸೇರಿದಂತೆ ಆರು ಚಿತ್ರಗಳಿಗೆ ದಿನೇಶ್ ವಿಜನ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ನಟಿ ಪ್ರಸ್ತುತ ಕಾರ್ತಿಕ್ ಆರ್ಯನ್ ಎದುರು ಶೆಹಜಾದಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ನಿಟ್ಟೂರು ಪ್ರೌಢ ಶಾಲೆಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣ ಉದ್ಘಾಟನೆ

ಉಡುಪಿ :- ಉಡುಪಿ ನಿಟ್ಟೂರು ಪ್ರೌಢಶಾಲೆಯಲ್ಲಿ 01, ಆಗಸ್ಟ್ 2022ರಂದು ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣ ಮತ್ತು ವೇದಿಕೆಯ ಉದ್ಘಾಟನಾ ಸಮಾರಂಭ ಜರಗಿತು.

ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು, ದಾನಿಗಳು ಎಚ್.ಎಸ್. ಶೆಟ್ಟಿ ಎಂದೇ ಜನಪ್ರಿಯರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಶಾಲೆಯ ಅಭಿವೃದ್ಧಿಗೆ  ಒಂದು ಕೋಟಿ ಮೊತ್ತದ ಚೆಕ್‌ನ್ನು ಹಸ್ತಾಂತರಿಸಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ, ದೇಶವನ್ನು ಮುನ್ನಡೆಸುವ ಅನೇಕ ಮಹಾನಾಯಕರು ಹುಟ್ಟಿದ್ದು ಗ್ರಾಮೀಣ ಪ್ರದೇಶದಲ್ಲಿ  ಓದಿದ್ದು ತಮ್ಮ ಮಾತೃ ಭಾಷೆಯ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಲ್ಲಿ ಅದಮ್ಯ, ಆತ್ಮವಿಶ್ವಾಸವನ್ನು ತುಂಬುವ, ಸಂಪ್ರದಾಯ ಮತ್ತು ಸಂಸ್ಕೃತಿಯ ಸೊಗಡನ್ನು ಮೈಗೂಡಿಸುವ ಕೇಂದ್ರಗಳಾಗಿವೆ.

ಹಲವು ಕ್ಷೇತ್ರಗಳಲ್ಲಿ ದಾಖಲೆಗಳನ್ನು ನಿರ್ಮಿಸಿರುವ ನಿಟ್ಟೂರು ವಿದ್ಯಾಸಂಸ್ಥೆಗೆ ಧನಸಹಾಯ ಮಾಡುತ್ತಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತು ಸಂಸ್ಕೃತಿ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್  ಸರಕಾರಿ ಮತು ಅನುದಾನಿತ ಶಾಲೆಗಳ ಏಳಿಗೆಗಾಗಿ ಸರಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು,  ಈ ಹಿನ್ನಲೆಯಲ್ಲಿ ಎಚ್.ಎಸ್. ಶೆಟ್ಟಿಯವರಂತಹ ಮಹಾದಾನಿಗಳ ನೆರವು ಶ್ಲಾಘನೀಯ, ಈ ಧನಸಹಾಯ ಪಡೆದ ಜಿಲ್ಲೆಯ ಮಾದರಿ ವಿದ್ಯಾಸಂಸ್ಥೆಯಾದ ನಿಟ್ಟೂರು ಪ್ರೌಢಶಾಲೆ  ಭವಿಷ್ಯ ಉಜ್ವಲವಾಗಲಿ ಎಂದರು.

ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್ ಪ್ರಸ್ತಾವಿಕ ಮಾತುಗಳಾನ್ನಾಡುತ್ತಾ ದಾನಿ ಮತ್ತು ವಿದ್ಯಾಭಿಮಾನಿಗಳಾದ ಶ್ರೀ ಎಚ್.ಎಸ್. ಶೆಟ್ಟಿ ಯವರ ಕೊಡುಗೆಯನ್ನು ಸ್ಮರಿಸುತ್ತಾ ಶಾಲೆಯ ಇತಿಹಾಸದಲ್ಲಿ ಈ ದಿನ ಅವಿಸ್ಮರಣೀಯವಾಗಿದ್ದು, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಈ ಧನಸಹಾಯ  ಪೂರಕವಾಗಲಿದೆ ಎನ್ನುತ್ತಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಶ್ರೀ ಎಚ್.ಎಸ್. ಶೆಟ್ಟಿಯವರನ್ನು ಬೆಳ್ಳಿಯ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ವಿಜ್ಞಾನಿಗಳು ಮತ್ತು ಉದ್ಯಮ ತಜ್ಞರಾದ ಡಾ| ರಾಜಾ ವಿಜಯಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಉಪಾಧ್ಯಕ್ಷರಾದ ಎಚ್.ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿಶಾಲಾ ಹಳೆ ವಿದ್ಯಾರ್ಥಿಗಳ ನೆರವಿನೊಂದಿಗೆ ಗ್ಯಾಸ್ ಸಂಪರ್ಕವಿಲ್ಲದ 12 ವಿದ್ಯಾರ್ಥಿಗಳಿಗೆ ಉಚಿತವಾಗಿ ಎಲ್.ಪಿ.ಜಿ ಸಂಪರ್ಕ ಕಲ್ಪಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಎಸ್.ವಿ. ಭಟ್‌ ಸ್ವಾಗತಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯ ಶಿಕ್ಷಕಿ ಶ್ರೀಮತಿ ಅನಸೂಯ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದ ಪೂರ್ವದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದ ಜಟಾಯು ಮೋಕ್ಷ ಯಕ್ಷರೂಪಕ ಪ್ರದರ್ಶನಗೊಂಡಿತು.

ವಿದ್ಯಾಪೋಷಕ್ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ವಿದ್ಯಾರ್ಥಿನಿ ರಶ್ಮಿತಾ ಇವಳಿಗೆ ಜನ್ಸಾಲೆಯಲ್ಲಿ ಡಾ.ರಾಜಾ ವಿಜಯಕುಮಾರ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಮನೆಯ ಪ್ರವೇಶೋತ್ಸವ ಇಂದು (01-08-2022) ಜರಗಿತು.

ಡಾ. ರಾಜಾ ವಿಜಯಕುಮಾರ್ ಮತ್ತು ಶ್ರೀಮತಿ ರಜನಿ ಭಾರತೀ ಮಂಗಲಂ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಗತರಾಗಿ ಭಾಗವಹಿಸಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಶ್ರೀ ಎಚ್.ಎಸ್. ಶೆಟ್ಟಿ ಇವರು ಯಕ್ಷಗಾನ ಕಲಾರಂಗ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸರಕಾರೇತರ ಸಂಘಟನೆಯೆಂದು ಶ್ಲಾಘಿಸಿದರು.

ಡಾ. ವಿಜಯಕುಮಾರ್‌ ಅವರು ವೈದ್ಯಕೀಯ ವಿದ್ಯಾಭ್ಯಾಸ ಮಾಡಲಿಚ್ಛಿಸಿದ ರಶ್ಮಿತಾಳ ಕಲಿಕೆಗೆ ಪೂರ್ತಿ ಪ್ರಾಯೋಜಕತ್ವ ವಹಿಸುವುದಾಗಿ ಭರವಸೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಎಮ್.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು.

ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಕೊನೆಯಲ್ಲಿ ಪ್ರೊ.ನಾರಾಯಣ ಎಮ್. ಹೆಗಡೆ ವಂದಿಸಿದರು.

ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್,  ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಹೆಗ್ಗುಂಜೆ ರಾಜೀವ ಶೆಟ್ಟಿಚಾರಿಟೇಬಲ್ ಸೊಸೈಟಿಯ ಉಪಾಧ್ಯಕ್ಷ ಶ್ರೀ ಎಚ್. ನಾಗರಾಜ್ ಶೆಟ್ಟಿ, ಯು.ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ಮುಖ್ಯ ಶಿಕ್ಷಕ ಉದಯ ಗಾಂವ್ಕರ್, ಪರಶುರಾಮ್, ಉದಯ ಬಳೆಗಾರ್, ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ಮತ್ತು  ಹಿರಿಯ ಕಲಾವಿದ ಆರ್ಗೋಡು ಮೋಹನದಾಸ ಶೆಣೈ ಉಪಸ್ಥಿತರಿದ್ದರು.

ಸಂಸ್ಥೆಯ ಸದಸ್ಯರಾದ ಪ್ರೊ.ಕೆ.ಸದಾಶಿವ ರಾವ್, ಎಚ್.ಎನ್. ಶೃಂಗೇಶ್ವರ, ಭುವನಪ್ರಸಾದ್ ಹೆಗ್ಡೆ, ದಿನೇಶ್ ಪಿ.ಪೂಜಾರಿ. ಅಜಿತ್‌ಕುಮಾರ್, ಅನಂತರಾಜ ಉಪಾಧ್ಯ, ಕಿಶೋರ್ ಸಿ.ಉದ್ಯಾವರ, ಕೃಷ್ಣಮುರ್ತಿ ಭಟ್, ರಾಜೀವಿ ಭಾಗವಹಿಸಿದ್ದರು. ಇದು ಸಂಸ್ಥೆ ನಿರ್ಮಿಸಿದ 33ನೇ ಮನೆಯಾಗಿದ್ದು, ಇನ್ನೂ ನಾಲ್ಕು ಮನೆಗಳ ಹಸ್ತಾಂತರ ಸದ್ಯದಲ್ಲೇ ನಡೆಯಲಿದೆ.