Tuesday, May 12, 2026
Home Blog Page 194

ಬಿಜೆಪಿ ನಾಯಕ, ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನ

0

ಉತ್ತರ ಕರ್ನಾಟಕಕ್ಕೆ ರಾಜ್ಯ ರಚನೆಯ ಕನಸು ಕಂಡಿದ್ದ ಬಿಜೆಪಿ ನಾಯಕ, ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

61 ವರ್ಷದ ಕತ್ತಿ ಅವರನ್ನು ಡಾಲರ್ಸ್ ಕಾಲೋನಿ ನಿವಾಸಿಯಿಂದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಮೂಲಗಳ ಪ್ರಕಾರ, ಕತ್ತಿ ಅವರು ಇಲ್ಲಿನ ಡಾಲರ್ಸ್ ಕಾಲೋನಿ ನಿವಾಸದ ಸ್ನಾನಗೃಹದಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರ ಪ್ರಕಾರ ಉಮೇಶ ಕತ್ತಿಯವರನ್ನು ಆಸ್ಪತ್ರೆಗೆ ಕರೆತರುವಾಗ ನಾಡಿಮಿಡಿತ ಇರಲಿಲ್ಲ ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.

ಕತ್ತಿಯವರ ನಿಧನದಿಂದ ಬಿಜೆಪಿ ಹಾಗೂ ಬೆಳಗಾವಿ ಜಿಲ್ಲೆಗೆ ಅಪಾರ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

“ನನ್ನ ಆಪ್ತ ಸಹೋದ್ಯೋಗಿ ಕರ್ನಾಟಕ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಅವರ ನಿಧನದಿಂದ ರಾಜ್ಯವು ಒಬ್ಬ ನುರಿತ ರಾಜತಾಂತ್ರಿಕ, ಕ್ರಿಯಾಶೀಲ ನಾಯಕ ಮತ್ತು ನಿಷ್ಠಾವಂತ ಸಾರ್ವಜನಿಕ ಸೇವಕನನ್ನು ಕಳೆದುಕೊಂಡಿದೆ” ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿಗಳು ಆಸ್ಪತ್ರೆಗೆ ತೆರಳುತ್ತಿದ್ದಾರೆ.

ಅನುಭವೀ ಕಲಾವಿದ – ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ 

ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ ಅವರು ಕಟೀಲು ಮೇಳದ ಅನುಭವೀ ಕಲಾವಿದರಲ್ಲೊಬ್ಬರು. ಕಳೆದ ಹನ್ನೆರಡು ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶಾಲಾ ಬಾಲಕನಾಗಿದ್ದಾಗಲೇ ನಾಟ್ಯ ಕಲಿತು ವೇಷ ಮಾಡಲು ತೊಡಗಿದ್ದ ಇವರು ಯಕ್ಷಗಾನ ಕ್ಷೇತ್ರದಲ್ಲಿ ಅನುಭವೀ ಕಲಾವಿದರು. ಪ್ರಸ್ತುತ ಕಿರೀಟ ವೇಷ ಮತ್ತು ನಾಟಕೀಯ ವೇಷಗಳನ್ನು ಮಾಡುತ್ತಾ ಕಲಾಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಶ್ರೀ ಗಣೇಶ್ ಮೂಲ್ಯ ಅವರ ಹುಟ್ಟೂರು ಮಂಗಳೂರು ತಾಲೂಕಿನ ಮೆನ್ನಬೆಟ್ಟು ಗ್ರಾಮದ ಕೊಡೆತ್ತೂರು. ಸುಮಾರು 500 ವರ್ಷಗಳ ಇತಿಹಾಸವುಳ್ಳ ಇವರ ಮನೆ ಚಂದ್ರಮಂಡಲ ಮನೆ ಎಂದೇ ಕರೆಸಿಕೊಂಡಿದೆ. 1967 ನೇ ಇಸವಿ ಜುಲೈ 7ರಂದು ಶ್ರೀ ಕೋಟಿ ಮೂಲ್ಯ ಮತ್ತು ಶ್ರೀಮತಿ ಕಮಲ ದಂಪತಿಗಳ ಮಗನಾಗಿ ಜನನ. ( 7 ಮಂದಿ ಮಕ್ಕಳಲ್ಲಿ ಹಿರಿಯರು) ಶ್ರೀ ಗಣೇಶ್ ಅವರ ತಮ್ಮಂದಿರಲ್ಲಿ ಶ್ರೀ ಧನಂಜಯ ಕಿನ್ನಿಗೋಳಿ ಅವರು ಹಿಮ್ಮೇಳ ಕಲಿತು ಮದ್ದಳೆ ನುಡಿಸುತ್ತಾರೆ. ಇವರು ಬಹರೈನ್ ನಲ್ಲಿ ಉದ್ಯೋಗಿ. ಶ್ರೀ ಶಂಭುಕುಮಾರ್ ಕಟೀಲು ಮೇಳದ ಕಲಾವಿದರಾಗಿದ್ದರು. ಶ್ರೀ ವಿಕ್ರಮ ಕೃಷಿಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಶ್ರೀ ಗಣೇಶ್ ಚಂದ್ರಮಂಡಲ ಅವರು ಓದಿದ್ದು ಪಿಯುಸಿ ವರೆಗೆ. ಕಿನ್ನಿಗೋಳಿ ಸಂತ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ. ಬಳಿಕ ಹೈಸ್ಕೂಲ್ ಮತ್ತು ಪಿಯುಸಿ ಓದಿದ್ದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ವಿದ್ಯಾಸಂಸ್ಥೆಯಲ್ಲಿ. ಎಳವೆಯಲ್ಲೇ ಇವರು ಯಕ್ಷಗಾನ ಕಲಾಸಕ್ತರಾಗಿದ್ದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ನೋಡಿದ ಪ್ರದರ್ಶನಗಳನ್ನೂ ವೇಷಗಳನ್ನೂ ಈಗಲೂ ನೆನಪಿಸಿ ವರ್ಣಿಸುತ್ತಾರೆ.

ಕದ್ರಿ ವಿಷ್ಣು, ಬಣ್ಣದ ಕುಟ್ಯಪ್ಪು, ಪಡ್ರೆ ಚಂದು, ಕೇದಗಡಿ ಗುಡ್ಡಪ್ಪ ಗೌಡ, ಅರುವ ನಾರಾಯಣ ,ಶೆಟ್ಟಿ, ಸಂಪಾಜೆ ಶೀನಪ್ಪ ರೈ ಮೊದಲಾದವರು ಪಾತ್ರಗಳನ್ನು ನಿರ್ವಹಿಸುವ ರೀತಿಯು ಇವರನ್ನು ಆಕರ್ಷಿಸಿತ್ತು. ಅರುವ ಕೊರಗಪ್ಪ ರೈಗಳು ತುಳು ಪ್ರಸಂಗಗಳಲ್ಲಿ ಖಳನಾಯಕನಾಗಿ ಅಭಿನಯಿಸುವ ರೀತಿಗೆ ಮನಸೋತಿದ್ದರು. ಮಂಜೇಶ್ವರ ಜನಾರ್ದನ ಜೋಗಿ ಅವರ ತುಳು ಪ್ರಸಂಗಗಳಲ್ಲಿ ಕೋಟಿ, ದೇವಪೂಂಜ ಮೊದಲಾದ ಪಾತ್ರಗಳನ್ನು ನೋಡಿ ಸಂತೋಷಗೊಂಡಿದ್ದರು. ತಾನೂ ಕಲಾವಿದನಾಗಬೇಕೆಂಬ ಬಯಕೆಯೂ ಚಿಗುರೊಡೆದಿತ್ತು. ಹಿರಿಯ ಕಲಾವಿದರ ವೇಷಗಳನ್ನು ನೋಡಿಯೇ ಕುಣಿಯಲು ಅಭ್ಯಾಸ ಮಾಡಿದ್ದರು.

ಇವರ ವೇಷ ಮಾಡುವ ಆಸೆಗೆ ವೇದಿಕೆಯಾಗಿ ಒದಗಿದ್ದು ಕಿನ್ನಿಗೋಳಿಯ ಸರ್ವೋದಯ ಯುವಕ ಸಂಘದ ಪ್ರದರ್ಶನ. ಮದವೂರ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಗಣಪತಿಯ ಗಣಗಳಲ್ಲಿ ಒಬ್ಬನಾಗಿ ರಂಗಪ್ರವೇಶ ಮಾಡಿದ್ದರು. ಬಳಿಕ ಕೊಡೆತ್ತೂರು ದೇವಸ್ಯ ಮಠದ ಶ್ರೀ ವೇದವ್ಯಾಸ ಉಡುಪರು ನಾಟ್ಯ ಕಲಿಯಲು ಸಲಹೆ ನೀಡಿದ್ದರು. ಕಟೀಲು ಶಾಲಾ ಅಧ್ಯಾಪಕ, ವಿದ್ವಾಂಸ, ಕಲಾವಿದ, ತಾಳಮದ್ದಳೆ ಅರ್ಥಧಾರಿ ಕೊರ್ಗಿ ಶ್ರೀ ವೆಂಕಟೇಶ ಉಪಾಧ್ಯಾಯರಿಂದ ನಾಟ್ಯ ಕಲಿಕೆ. ಕಟೀಲು ಶಾಲಾ ಪ್ರದರ್ಶನ, ಸುಧನ್ವ ಮೋಕ್ಷ ಪ್ರಸಂಗದಲ್ಲಿ ಸುಧನ್ವನಾಗಿ ವೇಷ ಮಾಡುವ ಅವಕಾಶ ಸಿಕ್ಕಿತ್ತು. ಬಳಿಕ ಶಾಲಾ ಪ್ರದರ್ಶನ, ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲೂ ವೇಷ ಮಾಡುತ್ತಿದ್ದರು.

ಎಸ್ಸೆಸ್ಸೆಲ್ಸಿ ಓದುತ್ತಿರುವಾಗ ಖ್ಯಾತ ಕಲಾವಿದ ಕಟೀಲು ಶ್ರೀನಿವಾಸ ರಾಯರ (ಕಟೀಲು ಶೀನಯ್ಯ) ನಿರ್ದೇಶನ, ಸಹಕಾರದಿಂದ ಅತಿಕಾಯನಾಗಿ ಅಭಿನಯಿಸಿದರು. ಅವರು ಕೆಲವು ಪ್ರಸಂಗಗಳ ನಡೆಗಳನ್ನೂ ಗಣೇಶ ಅವರಿಗೆ ಹೇಳಿಕೊಟ್ಟಿದ್ದರು. ಶಾಲಾ ರಜಾ ದಿನಗಳಲ್ಲಿ ಅವರ ಜತೆ ತೆರಳಿ ಸುಂಕದಕಟ್ಟೆ ಮೇಳದಲ್ಲೂ ವೇಷ ಮಾಡುತ್ತಾ ಬೆಳೆದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದಾಗ ಶ್ರೀ ಕೊರ್ಗಿ ಅವರ ನಿರ್ದೇಶನದಲ್ಲಿ ಅರುಣಾಸುರನಾಗಿಯೂ ಅಭಿನಯಿಸಿದ್ದರು. ಮೇಳಕ್ಕೆ ಸೇರುವ ಮೊದಲೇ ಹಿರಿಯರ ನಿರ್ದೇಶನದಲ್ಲಿ ರುಕ್ಮಾಂಗದ, ಇಂದ್ರಜಿತು, ಶಿಶುಪಾಲ ಮೊದಲಾದ ಪಾತ್ರಗಳನ್ನೂ ಮಾಡುವ ಅವಕಾಶವಾಗಿತ್ತು.

ಶ್ರೀ ವಿಜಯ ಶೆಟ್ಟಿ ಮುಂಡ್ಕೂರು ಅವರ ನೇತೃತ್ವದ ತಲಕಳ ಟೆಂಟ್ ಮೇಳದಲ್ಲೂ ವೇಷ ಮಾಡಿದರು. ಮೇಳದ ತಿರುಗಾಟ ನಡೆಸುವ ಆಸೆ, ಅವಕಾಶಗಳಿದ್ದರೂ ಅದಕ್ಕೆ ಅನುಕೂಲವಾದ ವಾತಾವರಣವಿರಲಿಲ್ಲ. ತಾನು ಬಹುವಾಗಿ ಪ್ರೀತಿಸಿದ ಯಕ್ಷಗಾನ ಕಲೆಯಿಂದ ದೂರವಾಗಿ ಬದುಕುವ ಪರಿಸ್ಥಿತಿಯು ನಿರ್ಮಾಣವಾಗಿತ್ತು. ಮನೆಯಲ್ಲಿ ಬಡತನ. ಮನೆಯ ಹಿರಿಮಗನಾಗಿ ಹೊಣೆಗಾರಿಕೆಯೂ ಇತ್ತು. ಜೀವನೋಪಾಯಕ್ಕಾಗಿ ಉದ್ಯೋಗವನ್ನರಸಿ ಮುಂಬಯಿಗೆ ತೆರಳಿದರು. 

ಶ್ರೀ ಗಣೇಶ್ ಚಂದ್ರಮಂಡಲ ಅವರು 1998ರಿಂದ 2008ರ ವರೆಗೆ ಮುಂಬಯಿಯ ಹಲವೆಡೆ ಹೋಟೆಲ್ ಕ್ಯಾಶಿಯರ್ ಆಗಿ ದುಡಿದಿದ್ದರು. ಇವರ ಯಕ್ಷಗಾನ ಕಲಾಸಕ್ತಿಗೆ, ಕಲಾಸೇವೆಗೆ ಮುಂಬಯಿಯಲ್ಲೂ ವೇದಿಕೆ ದೊರೆತಿತ್ತು. ಮುಂಬಯಿ ಬಿಲ್ಲವ ಸಂಘದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಖಾಯಂ ಕಲಾವಿದನಾಗಿ ವೇಷ ಮಾಡುವ ಅವಕಾಶವು ಸಿಕ್ಕಿತ್ತು. ಅಸಾಲ್ಪದ ಗೀತಾಂಬಿಕಾ ಯಕ್ಷಗಾನ ಮಂಡಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲೂ ಭಾಗವಹಿಸಿದರು. ಇಲ್ಲಿ ಅನೇಕ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ವೇಷ ಮಾಡುತ್ತಾ ಸಾಗಿದರು.

ಊರಿನಿಂದ ಮೇಳಗಳು ಮುಂಬಯಿಗೆ ಬಂದಾಗ ಅವರ ಜತೆಯೂ ವೇಷ ಮಾಡಲು ಅವಕಾಶವಾಗಿತ್ತು. ಮುಂಬಯಿ ಬಿಲ್ಲವ ಸಂಘದ ಶ್ರೀ ಜಯ ಪಿ.ಸುವರ್ಣ ಮತ್ತು ಆಡಳಿತ ಮಂಡಳಿಯವರು ಶ್ರೀ ಗಣೇಶ್ ಅವರಿಗೆ ಸಹಕಾರ ನೀಡಿ ಪ್ರೋತ್ಸಾಹಿಸಿದ್ದರು. ಶ್ರೀ ಚಂದ್ರಹಾಸ ಅಮೀನ್, ಮಾಧವ ಅಮೀನ್, ಸಿ.ಟಿ ಸಾಲ್ಯಾನ್, ಕೂಸಪ್ಪನವರು, ಆನಂದ ಶೆಟ್ಟಿ ಐಕಳ, ಮನೋಜ್ ಕುಮಾರ್ ಅಸಾಲ್ಪ, ಶ್ರೀ ಗಣೇಶ್ ಶೆಟ್ಟಿ ಕಟೀಲು, ಪದ್ಮನಾಭ ಕಟೀಲು, ಪ್ರಕಾಶ್ ಪಣಿಯೂರು, ವಾಸು ಮಾರ್ನಾಡ್, ರಾಮಚಂದ್ರ, ನಾಗೇಶ್ ಪೊಳಲಿ, ಕಟೀಲು ಸದಾನಂದ, ಸಂತೋಷ್ ಕುಮಾರ್ ಮೊದಲಾದವರ ಸಹಕಾರವು ಗಣೇಶರಿಗೆ ದೊರೆತಿತ್ತು. ಅಲ್ಲಿನ ಸರ್ವಕಲಾವಿದರೂ ಸಹಕರಿಸಿದ್ದರು.

ಯಕ್ಷಗಾನ ವೇಷ ಮಾಡಲು ಅವಕಾಶವಾಗಿದ್ದರೂ, ವ್ಯವಹಾರದಲ್ಲಿ ಗಣೇಶ್ ಅವರು ಸೋತುಹೋಗಿದ್ದರು. ವ್ಯವಹಾರದಲ್ಲಿ ಸೋತು ಕೈಸುಟ್ಟುಕೊಳ್ಳುವಂತಾಗಿತ್ತು. ಆದರೂ ಮುಂಬಯಿಯಲ್ಲಿ ನೆಲೆಸಿದ್ದ ಊರ ಹಲವು ಮಹನೀಯರು ಇವರಿಗೆ ಸಹಾಯವನ್ನಿತ್ತು ಆಧರಿಸಿದ್ದರು. 2008ನೇ ಇಸವಿ ಮುಂಬಯಿ ನಗರಕ್ಕೆ ವಿದಾಯ ಹೇಳಿ ಊರಿಗೆ ಮರಳಿದ್ದರು. ಊರಿಗೆ ಬಂದವರೇ ಕಟೀಲು ಮಾತೆಗೆ ನಮಿಸಿ ಮಾಲೆ ಹಾಕಿ ವ್ರತಧಾರಿಯಾಗಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿ ಬಂದಿದ್ದರು. ಬಳಿಕ ಮೇಳದ ತಿರುಗಾಟದತ್ತ ಗಮನಹರಿಸಿದರು. 

2008ರಲ್ಲಿ ಗಣೇಶ ಚಂದ್ರಮಂಡಲ ಅವರು ಇಂದ್ರ ಜೈನ್ ಅವರ ಸಂಚಾಲಕತ್ವದ ಬಪ್ಪನಾಡು ಮೇಳಕ್ಕೆ ಸೇರಿದರು. ಅಲ್ಲಿ ಮೂರು ವರ್ಷಗಳ ಕಾಲ ತುಳು ಮತ್ತು ಪುರಾಣ ಪ್ರಸಂಗಗಳಲ್ಲಿ ಕಾಣಿಸಿಕೊಂಡರು. ಸದ್ರಿ ಮೇಳದಲ್ಲಿ ಮೂರು ವರ್ಷ ವ್ಯವಸಾಯ. 2011ರಲ್ಲಿ ಮುಂಡಾಜೆ ಸದಾಶಿವ ಶೆಟ್ಟರ ಕೇಳಿಕೆಯಂತೆ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಅಪ್ಪಣೆಯಂತೆ ಕಟೀಲು ಮೇಳಕ್ಕೆ ಸೇರಿ ಕಳೆದ ಹನ್ನೆರಡು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಕಟೀಲು ಮೂರನೆಯ ಮೇಳದಲ್ಲಿ 2 ವರ್ಷ, ನಾಲ್ಕನೆಯ ಮೇಳದಲ್ಲಿ 7 ವರ್ಷ, 6ನೇ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಕಳೆದ ವರ್ಷ 2ನೇ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ಅನೇಕ ಹಿರಿಯ ಕಿರಿಯ ಕಲಾವಿದರ ಒಡನಾಟವೂ ಸಹಕಾರವೂ ಸಿಕ್ಕಿತ್ತು.

ಇವರು ಕೃಷಿಯಲ್ಲೂ ಆಸಕ್ತರು. ಮಳೆಗಾಲದಲ್ಲಿ ಭತ್ತದ ಕೃಷಿ, ಜತೆಗೆ ಸ್ವಂತ ತ್ರಿಚಕ್ರ ವಾಹನವನ್ನೂ (ರಿಕ್ಷಾ) ನಡೆಸುತ್ತಿದ್ದಾರೆ. ಶ್ರೀ ಗಣೇಶ್ ಯಕ್ಷಗಾನ ಕಲಾವಿದನಾಗಿ ಐದು ಬಾರಿ ವಿದೇಶಯಾತ್ರೆಯನ್ನು ಕೈಗೊಂಡಿದ್ದಾರೆ. ಮೊಟ್ಟಮೊದಲು 2000ನೇ ಇಸವಿಯಲ್ಲಿ ಬಹರೈನ್ ಕನ್ನಡ ಸಂಘದವರು ಆಯೋಜಿಸಿದ ಪ್ರದರ್ಶನದಲ್ಲಿ. ಆ ಬಳಿಕ 2002ನೇ ಇಸವಿಯಲ್ಲಿ ಬಹರೈನ್ ನಲ್ಲಿ ನಡೆದ ಪ್ರದರ್ಶನ, 2006ರಲ್ಲಿ ಬಹರೈನ್ ಬಿಲ್ಲವ ಸಂಘದವರು ಆಯೋಜಿಸಿದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. 2009ರಲ್ಲಿ ಬಹರೈನ್ ನಲ್ಲಿ ತಾನೇ ನಿರ್ದೇಶಿಸಿದ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಮತ್ತೊಮ್ಮೆ ಬಹರೈನ್ ನಲ್ಲಿ ಯಕ್ಷ ತುಳುವರ ಕೂಟದವರು ಆಯೋಜಿಸಿದ ಕಾಡಮಲ್ಲಿಗೆ ಪ್ರಸಂಗದಲ್ಲಿ ಶ್ರೀ ಪಟ್ಲ ಸತೀಶ್ ಶೆಟ್ಟರ ತಂಡದ ಸದಸ್ಯನಾಗಿ ಭಾಗಿಯಾದರು.

2009ರಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಯಕ್ಷೋತ್ಸವದಲ್ಲಿ ಕಿರೀಟ ವೇಷಗಾರಿಕೆಯಲ್ಲಿ ಪ್ರಥಮ ಬಹುಮಾನ ಅಲ್ಲದೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದಾರೆ. 2014ರಲ್ಲಿ ಮುಂಬಯಿ ಬಿಲ್ಲವರ ಅಸೋಸಿಯೇಷನ್ ಸಂಯೋಜನೆಯ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಜಯ ಪಿ.ಸುವರ್ಣ ಅವರ ಮಾತೃಶ್ರೀಯವರ ಸ್ಮರಣಾರ್ಥ ನೀಡುವ ‘ಯಕ್ಷ ಕಲಾ ಪ್ರಶಸ್ತಿ’ ಯನ್ನು ಶ್ರೀ ಗಣೇಶ್ ಚಂದ್ರಮಂಡಲ ಅವರಿಗೆ ನೀಡಿ ಗೌರವಿಸಲಾಗಿತ್ತು. 

ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ ಅವರು ಕಟೀಲು ಶ್ರೀನಿವಾಸ್ ರಾವ್ ವೇದಿಕೆಯ ‘ಯಕ್ಷಜ್ಯೋತಿ’ ಸಂಸ್ಥೆಯಲ್ಲೂ ಸಕ್ರಿಯರು. ಕಟೀಲು ಶ್ರೀನಿವಾಸ ರಾಯರ ಪುತ್ರ ಶ್ರೀ ದೇವಿಪ್ರಸಾದ ಉಲ್ಲಂಜೆ ಅವರ ನೇತೃತ್ವದ ಸಂಸ್ಥೆಯಿದು. ಕಳೆದ ಎರಡು ವರ್ಷಗಳಿಂದ ಈ ಸಂಸ್ಥೆಯು ಕಲಾ ಚಟಿವಟಿಕೆಯಲ್ಲಿ ನಿರತವಾಗಿದೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಮಕ್ಕಳು ನಿರಂತರ ಚಟುವಟಿಕೆಯಿಂದ ಕ್ರಿಯಾಶೀಲರಾಗಿರಲು ವಿವಿಧ ಕಲಾ ಕಾರ್ಯಕ್ರಮಗಳನ್ನು ನಡೆಸಿದೆ. ಸರಕಾರದ ನಿಯಮಕ್ಕೆ ಭಂಗ ಬಾರದಂತೆ ಕಲಾ ಚಟುವಟಿಕೆಯು ಸಾಗಿತ್ತು.

ಈ ವರೆಗೆ ಒಟ್ಟು ಹದಿನೆಂಟು ತಾಳಮದ್ದಲೆಗಳನ್ನು ನಡೆಸಲಾಗಿ ಪರಿಸರದ ಮಕ್ಕಳು ಕ್ರಿಯಾಶೀಲರಾಗಲು ಕಾರಣರಾದರು. ಇದಕ್ಕೆ ಭಾಗವತರಾಗಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟರು ಸಹಕರಿಸಿದ್ದರು. ಮುಂದೆ ಕಟೀಲು ಶ್ರೀನಿವಾಸ ರಾವ್ ಸಂಸ್ಮರಣಾ ಪ್ರಶಸ್ತಿಯನ್ನು ಸಾಧಕರಿಗೆ ನೀಡುವ ಯೋಜನೆಯೂ ಈ ಸಂಸ್ಥೆಗಿದೆ. ಹೀಗೆ ಸಂಘಟನೆಯಲ್ಲೂ ತೊಡಗಿಸಿಕೊಂಡಿರುವ ಶ್ರೀ ಗಣೇಶ್ ಅವರು ಕಲಾವಿದನಾಗಿಯೂ ಸಾಂಸಾರಿಕವಾಗಿಯೂ ತೃಪ್ತರು.

ಇವರ ಪತ್ನಿ ಶ್ರೀಮತಿ ಭಾನುಮತಿ. (2002ರಲ್ಲಿ ವಿವಾಹ) ಗಣೇಶ್ ಚಂದ್ರಮಂಡಲ, ಭಾನುಮತಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕುಮಾರಿ ಸೃಷ್ಟಿ. ಕಟೀಲು ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪೂರೈಸಿ ಪ್ರಸ್ತುತ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಬಿ.ಸಿ.ಎ  ಶಿಕ್ಷಣವನ್ನು  ಪಡೆಯುತ್ತಿದ್ದಾರೆ. ರಾಜೇಶ್ ಕಟೀಲು ಅವರಿಂದ ನಾಟ್ಯ ಕಲಿತು ವೇಷ ಮಾಡುತ್ತಾರೆ. ಶ್ರೀ ದುರ್ಗಾ ಮಕ್ಕಳ ಮೇಳದ ಕಲಾವಿದೆ. ಈಗ ಭಾಗವತಿಕೆಯನ್ನೂ ಅಭ್ಯಾಸ ಮಾಡುತ್ತಿದ್ದಾಳೆ. ಪುತ್ರ ಮಾ| ಸೃಜನ್. ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿ. ರಾಜೇಶ್ ಅವರಿಂದ ನಾಟ್ಯ ಕಲಿತು ವೇಷ ಮಾಡುತ್ತಿದ್ದಾನೆ. ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಕಲಾವಿದ. ಯಕ್ಷಗಾನ ಹಿಮ್ಮೇಳವನ್ನು ಕಲಿಯುತ್ತಿದ್ದಾನೆ. (ಚೆಂಡೆ, ಮದ್ದಳೆ)

ಕುಮಾರಿ ಸೃಷ್ಟಿ ಮತ್ತು ಮಾಸ್ಟರ್ ಸೃಜನ್ ಅವರು ವಿದ್ವಾಂಸ, ತಾಳಮದ್ದಳೆಯ ಹಿರಿಯ ಅರ್ಥಧಾರಿ ಸರ್ಪಂಗಳ ಶ್ರೀ ಈಶ್ವರ ಭಟ್ ಅವರಿಂದ ಅರ್ಥಗಾರಿಕೆಯನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಕಿನ್ನಿಗೋಳಿ ಅನುಗ್ರಹ ಯೋಗ ಕೇಂದ್ರದ ಶ್ರೀಮತಿ ಕಾಂಚನಾ ಗಣೇಶ್ ಅವರಿಂದ ಯೋಗ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಮಕ್ಕಳಿಗೆ ಯಕ್ಷಗಾನ ಕಲಿಯಲು ಕಟೀಲು ಶಾಲೆಯ ದೈಹಿಕ ಶಿಕ್ಷಕ ಕೃಷ್ಣ ಕುಲಾಲ್ ಅವರ ಪ್ರೋತ್ಸಾಹವೂ ಇದೆ. ಇವರು ಶ್ರೀ ಗಣೇಶ್ ಚಂದ್ರಮಂಡಲ ಅವರ ಬಂಧುಗಳು. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ವಿದ್ಯಾಭಾರತಿ ಜ್ಞಾನವಿಜ್ಞಾನ ಮೇಳ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

0

ವಿದ್ಯಾಭಾರತಿ ಜ್ಞಾನವಿಜ್ಞಾನ ಮೇಳ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಗಳು ಆಗಸ್ಟ್ 26ರಂದು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ನಡೆಯಿತು. ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಶಿಶು ವರ್ಗದ ವಿಜ್ಞಾನ ರಸಪ್ರಶ್ನೆಯಲ್ಲಿ ರಚನಾ(4 ನೇ ತರಗತಿ) ಶರಧಿ(5ನೇ ತರಗತಿ) ಸ್ನೀಗ್ಧ (5 ನೇ ತರಗತಿ) ಇವರ ತಂಡ ತೃತೀಯ, ಇನ್ನೋವೇಟಿವ್ ಮಾದರಿಯಲ್ಲಿ  ಶಮಂತ (5 ನೇ ತರಗತಿ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.  

ಬಾಲವರ್ಗದ ವಿಜ್ಞಾನ ಮಾಡೆಲ್ ಸ್ಪರ್ಧೆಯಲ್ಲಿ 6ನೇ ತರಗತಿಯ ಅಮೃತ ರಶ್ಮಿ ಸೆನ್ಸರ್ ಬೇಸ್ಡ್ ಮಾಡೆಲ್ ವಿಷಯದಲ್ಲಿ ದ್ವಿತೀಯ, ಏಳನೆಯ ಅನನ್ಯ ಹಾಗೂ ನಿಲಿಶ್ಕ ತಂಡ ಲೈಟ್ ಅಂಡ್ ಇಟ್ಸ್ ಅಪ್ಲಿಕೇಶನ್ ವಿಷಯದಲ್ಲಿ ದ್ವಿತೀಯ, ವಿಜ್ಞಾನ ಪ್ರಯೋಗದಲ್ಲಿ ಲಕ್ಷ್ಮಿ ಯು(8ನೇ ತರಗತಿ) ಹಾಗೂ ಜಿ ವೈಷ್ಣವಿ ಪೈ(8ನೇ ತರಗತಿ)ವಿಜ್ಞಾನ ಪತ್ರ ವಾಚನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 

ಕಿಶೋರ ವರ್ಗದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇ ತರಗತಿಯ ಧನುಶ್ ರಾಮ್, ಅಭಿರಾಮ್ ಹಾಗೂ ಅಜಯ ರಾಮ್ ತಂಡವು ಪ್ರಥಮ, ವಿಜ್ಞಾನ ಪತ್ರವಾಚನ ಸ್ಪರ್ಧೆಯಲ್ಲಿ ಅರ್ಚನಾ ಕಿಣಿ (10ನೇ),ಇನ್ನೋವೇಟಿವ್ ಮಾಡೆಲ್ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಭು 10ನೇ ಪ್ರಥಮ ಸ್ಥಾನ ಪಡೆದು ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿಜ್ಞಾನ ಪ್ರಯೋಗದಲ್ಲಿ 10ನೆಯ ಅನ್ವಿತ್ ಎನ್ ತೃತೀಯ, ಅಪ್ಲಿಕೇಶನ್ ಆಫ್ spectrum ಆಫ್ ಲೈಟ್ ವಿಜ್ಞಾನಮಾದರಿಯಲ್ಲಿ ತ್ರಿಶೂಲ್  ಹಾಗೂ ಶ್ರೇಯಸ್ (9ನೇ) ಅವರ ತಂಡ ದ್ವಿತೀಯ, ಮಾನವ ವಿಸರ್ಜನಾಂಗ ಮಾದರಿಯಲ್ಲಿ ಒಂಬತ್ತನೆಯ ಸೃಷ್ಟಿ ತೃತೀಯ ಹಾಗೂ ಅಪ್ಲಿಕೇಶನ್ಸ್ ಆಫ್ ಸೌಂಡ್ ವೇವ್ ಮಾದರಿ ತಯಾರಿಯಲ್ಲಿ ಅಮೋಘ ನಾಯಕ್ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. 

ಶಿಶು ವರ್ಗದ ವೇದಗಣಿತ ರಸಪ್ರಶ್ನೆಯಲ್ಲಿ ಐದನೆ ತರಗತಿ ಯ ಧನಿಶ್, ಗೌರವ್, ಸಾನ್ವಿ ಅವರ ತಂಡ ದ್ವಿತೀಯ, ಗಣಿತ ಮಾದರಿಯಲ್ಲಿ ಲಿಖಿತ (5ನೇ) ಜಿಯೋಮೆಟ್ರಿಕ್ ಶೇಪ್ಸ್ ಮಾದರಿಯಲ್ಲಿ ಪ್ರಥಮ, ಸಿದ್ಧಿ (5 ನೇ) ಮಾಪನ ಮಾದರಿಯಲ್ಲಿ ಪ್ರಥಮ,ಪ್ರಾಪ್ತಿ (5 ನೇ) ಭಿನ್ನ ಮಿತಿಯ ಮಾದರಿಯಲ್ಲಿ ತೃತೀಯ ಹಾಗೂ ಗಣಿತ ಪ್ರಯೋಗದಲ್ಲಿ ಐದನೇ ತರಗತಿಯ ಭವಿಷ್ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. 

ಬಾಲ ವರ್ಗದ ವೇದಗಣಿತ ರಸಪ್ರಶ್ನೆಯಲ್ಲಿ ನಿರೀಕ್ಷಿತ್ ಹೆಗ್ಡೆ7ನೇತರಗತಿ, ಶ್ರೇಯಸ್ ವರಂಬಳಿತಾಯ(8ನೇ) ಸುಶಾಂತ್ ಎ (6ನೇ) ಅವರ ತಂಡ ಪ್ರಥಮ,  ಗಣಿತ ಮಾದರಿಯಲ್ಲಿ 7ನೇ ತರಗತಿಯ ಶಮನ್ ಕ್ಷೇತ್ರಫಲ ಹಾಗೂ ಆಯತನ ಮಿತಿಯ ಮಾದರಿಯಲ್ಲಿ ಪ್ರಥಮ, 8ನೇ ತರಗತಿಯ ವೇದ ವಿ ರೆಗ್ಯುಲರ್ ಪಾಲಿಗನ್ ಆಧಾರಿತ ಮಾದರಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.  ಹಾಗೂ 8 ನೇ ತರಗತಿಯ ಪ್ರೀತಿ ಪಿ ಪೈ ಗಣಿತ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಕಿಶೋರ ವರ್ಗದ ಗಣಿತ ಮಾದರಿ ಸ್ಪರ್ಧೆಯಲ್ಲಿ 10ನೇ ತರಗತಿಯ ವಸುಧ ಪೈಥಾಗರಸ್ ಥಿಯರಮ್ ಆಧಾರಿತ ಮಾದರಿಯಲ್ಲಿ ದ್ವಿತೀಯ, 9ನೇ ತರಗತಿಯ ಹರ್ಷಿಕ ಟ್ರಿಗನಾಮೆಟ್ರಿ ಆಧಾರಿತ ಮಾದರಿಯಲ್ಲಿ ಹಾಗೂ ಧನ್ವಿ (9ನೇ) ಇನ್ನೋವೇಟಿವ್ ಮಾದರಿಯಲ್ಲಿ ದ್ವಿತೀಯ, ಗಣಿತ ಪ್ರಯೋಗದಲ್ಲಿ 10ನೇ ತರಗತಿಯ ಧಾತ್ರಿ ಸಿ.ಹೆಚ್ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. 

ಕಥನ ಸ್ಪರ್ಧೆಯಲ್ಲಿ ಶಿಶು ವಿಭಾಗದ ಕ್ಷಮಾ ಭಟ್ ಹಾಗೂ ಬಾಲ ವರ್ಗದ ದೇವಿ ಪ್ರಣಮ್ಯ ಇವರು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. 

ಅಟಲ್ ಟಿಂಕರಿಂಗ್ ಮಾದರಿ ತಯಾರಿಯಲ್ಲಿ ಹತ್ತನೇ ತರಗತಿಯ ಯುಕ್ತ ಶ್ರೀ ಹಾಗೂ ನೇಹ ಇವರ ತಂಡ ಪ್ರಥಮ, ಎಂಟನೇ ತರಗತಿಯ ಚಿನ್ಮಯಿ ಎಲ್ ಹಾಗೂ ಹರ್ಷ ಇವರ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ಶಿಶುವರ್ಗದಲ್ಲಿ ಐದನೇ ತರಗತಿಯ ಅನಿಶ್ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅಕ್ರಮ ಪನೀರ್ ಕಾರ್ಖಾನೆಯೊಂದರ ಮೇಲೆ ದಾಳಿ, 1.98 ಲಕ್ಷ ರೂಪಾಯಿ ಮೌಲ್ಯದ ಸುಮಾರು 900 ಕೆಜಿ ಕಲಬೆರಕೆ ಪನೀರ್ ವಶ – ನಾವು, ನೀವು ತಿನ್ನುತ್ತಿರುವುದು ಶುದ್ಧ ಪನೀರ್ ಅಲ್ಲ !?

0

ಅಕ್ರಮ ಪನೀರ್ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿ 1.98 ಲಕ್ಷ ರೂಪಾಯಿ ಮೌಲ್ಯದ ಸುಮಾರು 900 ಕೆಜಿ ಕಲಬೆರಕೆ ಪನೀರ್ ವಶಪಡಿಸಿಕೊಳ್ಳಲಾಗಿದೆ.

ಭಾರತದಲ್ಲಿ ಆಹಾರದಲ್ಲಿ ವ್ಯಾಪಕವಾದ ಕಲಬೆರಕೆ ಮಾಡಲಾಗುತ್ತದೆ ಎಂದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಹಾಗಾದರೆ  ನಾವು, ನೀವು ತಿನ್ನುತ್ತಿರುವುದು ಶುದ್ಧ ಪನೀರ್ ಅಲ್ಲವೇ ಎಂಬ ಸಂಶವು ಎಲ್ಲರಲ್ಲಿಯೂ ಮೂಡಿದರೆ ಅದರಲ್ಲೇನೂ ಆಶ್ಚರ್ಯವಿಲ್ಲ.

ಪುಣೆಯ ಮಂಜರಿ ಖುರ್ದ್‌ನಲ್ಲಿರುವ ಅಕ್ರಮ ಕಾರ್ಖಾನೆಯೊಂದರ ಮೇಲೆ ಪುಣೆ ಎಫ್‌ಡಿಎ (ಆಹಾರ ಮತ್ತು ಔಷಧ ಆಡಳಿತ) ದಾಳಿ ನಡೆಸಿ 1.98 ಲಕ್ಷ ರೂಪಾಯಿ ಮೌಲ್ಯದ ಸುಮಾರು 900 ಕೆಜಿ ಕಲಬೆರಕೆ ಪನೀರ್ ಅನ್ನು ವಶಪಡಿಸಿಕೊಂಡಿದೆ.

2.24 ಲಕ್ಷ ಮೌಲ್ಯದ ಕೆನೆ ತೆಗೆದ ಹಾಲಿನ ಪುಡಿ ಮತ್ತು ಆರ್‌ಬಿಡಿ ಪ್ಯಾಮೊಲಿನ್ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪುಣೆಯ ಆಹಾರ ಮತ್ತು ಔಷಧ ಆಡಳಿತದ ಸಹಾಯಕ ಆಯುಕ್ತ ಸಂಜಯ್ ನರಗುಡೆ ತಿಳಿಸಿದ್ದಾರೆ. ಹೆಚ್ಚಿನ ವಿವರವನ್ನು ನಿರೀಕ್ಷಿಸಲಾಗುತ್ತದೆ.

ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ – ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ 

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ  ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ ನಡೆಯಲಿದೆ.  ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಮುಂದಿನ ಲೋಕಾರ್ಪಣೆಯ ವರೆಗೆ ವಿವಿಧ ಕಲಾ ಸಾಂಸ್ಕೃತಿಕ, ಸಾಹಿತ್ಯ ವೈಭವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇದರ ಅಂಗವಾಗಿ ಈ ಶನಿವಾರ ಅಂದರೆ ದಿನಾಂಕ 10.09.2022ನೇ ಶನಿವಾರ ಬೆಳಗ್ಗೆ 10ರಿಂದ  ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಶ್ರೀಪತಿ ಕಲ್ಲೂರಾಯ ಉದ್ಘಾಟಿಸಲಿರುವ ಕಾರ್ಯಕ್ರಮದಲ್ಲಿ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶ್ರೀ ಮುಕೇಶ್, ಶ್ರೀ ಎಸ್. ಎನ್. ರಾಮ ಶೆಟ್ಟಿ, ಶ್ರೀ ಜಯರಾಮ ರೈ, ಯಕ್ಷಗಾನ ತರಬೇತಿಯ ಮುಖ್ಯ ಶಿಕ್ಷಕರಾದ ಶ್ರೀ ಲಕ್ಷ್ಮಣ ಕುಮಾರ್ ಮರಕಡ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. 

ನೀರು ರಸ್ತೆಯ ನೆಲೆ ಸ್ಕೂಟಿ ಬಿದ್ದು ನೀರಿನಲ್ಲಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಬೆಂಗಳೂರಿನಲ್ಲಿ 23 ವರ್ಷದ ಯುವತಿ ಸಾವು – ಬೆಂಗಳೂರಿನ ಮಳೆಗೆ ಬಲಿಯಾದ ಅಖಿಲಾ 

0

ನೀರು ರಸ್ತೆಯ ನೆಲೆ ಸ್ಕೂಟಿ ಬಿದ್ದು ನೀರಿನಲ್ಲಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಬೆಂಗಳೂರಿನಲ್ಲಿ 23 ವರ್ಷದ ಯುವತಿ ಸಾವು – ಬೆಂಗಳೂರಿನ ಮಳೆಗೆ ಬಲಿಯಾದ ಅಖಿಲಾ 

ಬೆಂಗಳೂರಿನ ವೈಟ್‌ಫೀಲ್ಡ್ ಪಿಎಸ್ ವ್ಯಾಪ್ತಿಯ ಜಲಾವೃತ ರಸ್ತೆಯ ಮೇಲೆ ಸ್ಕೂಟಿ ಬಿದ್ದಿದ್ದರಿಂದ 23 ವರ್ಷದ ಅಖಿಲಾ ಎಂಬ ಯುವತಿ ವಿದ್ಯುತ್ ಕಂಬದ ಸ್ಪರ್ಶದಿಂದ ಸಾವನ್ನಪ್ಪಿದ್ದಾಳೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ನಿನ್ನೆ ರಾತ್ರಿ ಅಖಿಲಾ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಬರುತ್ತಿದ್ದಾಗ ರಸ್ತೆಯಲ್ಲಿ ತುಂಬಿದ ಮಳೆಯ ನೀರಿನಿಂದಾಗಿ ಸ್ಕೂಟಿ ಆಫ್ ಆಗಿತ್ತು. ರಸ್ತೆಯ ಬದಿಯಲ್ಲಿ ಸ್ಕೂಟಿ ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಿದ್ದಾಗ ಅಕಸ್ಮಾತ್ ವಿದ್ಯುತ್ ಕಂಬದ ತಂತಿ ಮುಟ್ಟಿದ್ದಾಳೆ.

ಕೂಡಲೇ ವಿದ್ಯುತ್ ಶಾಕ್ ಹೊಡೆದು ಅಖಿಲಾ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.  ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ವೀಡಿಯೊ – ಅದ್ಭುತ ಜಾದೂ ಪ್ರದರ್ಶನ,  ಮಾಯವಾದ ಜಾದೂಗಾರನನ್ನು ಹುಡುಕಿದಾಗ ಕಂಡ ದೃಶ್ಯವನ್ನು ನೋಡಿ ಬೆಚ್ಚಿಬಿದ್ದ ಯುವತಿಯರು!

0

ಅದ್ಭುತ ಜಾದೂ ಪ್ರದರ್ಶನವನ್ನು ವ್ಯಕ್ತಿಯೊಬ್ಬರು ನೀಡಿ ನೋಡುಗರನ್ನು ಬೆಚ್ಚಿಬೀಳುವಂತೆ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಜಾದೂಗಾರರೊಬ್ಬರು ಸಾರ್ವಜನಿಕವಾಗಿ ಒಂದು ಪ್ರದರ್ಶನವನ್ನು ನೀಡಿದ್ದಾರೆ. ಅಲ್ಲಿ ಇಬ್ಬರು ಸುಂದರವಾದ ಯುವತಿಯರನ್ನು ತನ್ನ ಬಳಿಗೆ ಬಂದು ನಿಲ್ಲುವಂತೆ ಹೇಳುತ್ತಾರೆ.

ಅವರು ಒಂದು ದೊಡ್ಡ ಕಪ್ಪು ವಸ್ತ್ರವನ್ನು ಅಡ್ಡವಾಗಿ ಹಿಡಿದು ವಸ್ತ್ರ ಕೆಳಕ್ಕೆ ಬೀಳುವಾಗ ತಾನೂ ಅಲ್ಲಿಂದ ಮರೆಯಾಗುತ್ತಾರೆ. ಯುವತಿಯರು ಆ ಜಾದೂಗಾರನಿಗಾಗಿ ಹುಡುಕಾಡುತ್ತಾರೆ.

ಆಗ ನಡೆದ ಘಟನೆಯನ್ನು ನೋಡಿ ಯುವತಿಯರು ಬೆಚ್ಚಿಬಿದ್ದು ಕಿರುಚಿಕೊಳ್ಳುತ್ತಾರೆ. ವೀಡಿಯೊ ನೋಡಿ. 

ವೀಡಿಯೊ – ಬೆಂಗಳೂರಿನಲ್ಲಿ ಭಾರೀ ಮಳೆ – ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆ 

0

ವೀಡಿಯೊ – ಬೆಂಗಳೂರಿನಲ್ಲಿ ಭಾರೀ ಮಳೆ – ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆ 

ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆ ಅಡಚಣೆಯುಂಟಾಗಿದೆ.  

ಭಾರೀ ಮಳೆಯಿಂದಾಗಿ ಬೆಂಗಳೂರಿನ ಮಾರತ್ತಹಳ್ಳಿ-ಸಿಲ್ಕ್ ಬೋರ್ಡ್ ರಸ್ತೆಯ ಹೊರವರ್ತುಲ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತು ಸಂಚಾರ ದಟ್ಟಣೆ ಮುಂದುವರಿದಿದೆ. ವೀಡಿಯೊ ನೋಡಿ.

ತೈಕೊಂಡೊ ಸ್ಫರ್ಧೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

0

ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ತಲಪಾಡಿಯ ಶಾರದಾ ವಿದ್ಯಾನಿಕೇತನ ಸಂಸ್ಥೆಯಲ್ಲಿ ನಡೆದ ನಡೆದ ಜಿಲ್ಲಾ ಮಟ್ಟದ ತೈಕೊಂಡೊ ಸ್ಫರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದೆ.


ಬಾಲಕರ ವಿಭಾಗದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿನಿಶ್ ಕುಮಾರ್, ಪ್ರೀತಂ ಎಸ್‌. ಎನ್‌. ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಂದನ್‌ ಗೌಡ ಬಿ. ಎಸ್‌ ಭಾಗವಹಿಸಿದ್ದರು.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಶಟಲ್ ಬ್ಯಾಡ್ಮಿಂಟನ್‌  ಪಂದ್ಯಾಟದಲ್ಲಿ  ವಿವೇಕಾನಂದ  ಪ.ಪೂ ಕಾಲೇಜಿನ ಬಾಲಕಿಯರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

0

ತೆಂಕಿಲದ ವಿವೇಕಾನಂದ ಆಂಗ್ಲ  ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ವಿವೇಕಾನಂದ   ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆಆಯ್ಕೆಯಾಗಿದೆ ಮತ್ತು ಬಾಲಕರ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ.


ಬಾಲಕಿಯರ ವಿಭಾಗದಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪುಣ್ಯ, ವಿಜ್ಞಾನ ವಿಭಾಗದ ನೇಹಾಲ್ ಮತ್ತು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಶ್ರೇಯಾ ಭಾಗವಹಿಸಿದ್ದರು.


ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಲವಿತ್ ಎಂ, ಸುಮಂತ್ ಮತ್ತು ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಯಶ್ವಿನ್ ಭಾಗವಹಿಸಿದ್ದರು.

ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್‌ಇ ವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.