Monday, May 11, 2026
Home Blog Page 193

ಈಶ್ವರಮಂಗಲದಲ್ಲಿ ಕುಡುಕನನ್ನು ಕಾಲಿನಿಂದ ಒದ್ದು ಬಸ್ಸಿನಿಂದ ಕೆಳಗೆ ಬೀಳಿಸಿದ ಬಸ್ ನಿರ್ವಾಹಕ – ಕಂಡಕ್ಟರ್ ನನ್ನು ಅಮಾನತುಗೊಳಿಸಿದ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ 

0

ಈಶ್ವರಮಂಗಲದಲ್ಲಿ ಸರಕಾರೀ ಬಸ್ ಹತ್ತುತ್ತಿದ್ದ ಕುಡುಕನನ್ನು ಬಸ್ ನಿರ್ವಾಹಕ ಕಾಲಿನಿಂದ ಒದ್ದು ಬಸ್ಸಿನಿಂದ ಕೆಳಗೆ ಬೀಳಿಸಿದ ಘಟನೆ ನಡೆದಿದೆ. ಬಸ್ ನಿರ್ವಾಹಕನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

KA 21 F0002 ಸಂಖ್ಯೆಯ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಕುಡುಕನನ್ನು ಬಸ್ಸಿನಿಂದ ಕೆಳಕ್ಕೆ ಇಳಿಸಲು ನಿರ್ವಾಹಕನಿಗೆ ಕಾರಣಗಳಿರಬಹುದು. ಆದರೆ ಆತ ಇಳಿಸಿದ ವಿಧಾನ ಅಮಾನವೀಯವಾಗಿದೆ.

ಕಾಲಿನಿಂದ ಎದೆಗೆ ಒದ್ದ ದೃಶ್ಯವನ್ನು ನೋಡಿದರೆ ಕುಡುಕ ಪ್ರಯಾಣಿಕ ಬದುಕುಳಿದದ್ದೇ ಆಶ್ಚರ್ಯ. ಇತರ ಪ್ರಯಾಣಿಕನಿಗೆ ತೊಂದರೆ ಮಾಡುತ್ತಿದ್ದಾನೆ ಎಂದೋ ಅಥವಾ ಆತನಲ್ಲಿ ಟಿಕೇಟಿನ ಹಣವಿರಲಿಲ್ಲ ಎಂಬಿತ್ಯಾದಿ ಕಾರಣಗಳಿಂದ ಬಸ್ಸಿನಿಂದ ಇಳಿಸಿದ್ದರೂ ಇಲ್ಲಿ ನಿರ್ವಾಹಕನ ವರ್ತನೆ ಆಕ್ಷೇಪಾರ್ಹವಾಗಿದೆ.

ಮಾತ್ರವಲ್ಲದೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಈ ಪ್ರಕರಣವನ್ನು ಕೆಎಸ್ಸಾರ್ಟಿಸಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.

ಮಾತ್ರವಲ್ಲದೆ ಈಗಾಗಲೇ ಬಸ್ ನಿರ್ವಾಹಕನನ್ನು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಅಮಾನತು ಮಾಡಲಾಗಿದೆ. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ. 

ವೀಡಿಯೊಗಳು – ಬಿಲಿಯನರ್ ಗಳ ಮನೆಗಳನ್ನೂ ಮುಳುಗಿಸಿದ ಬೆಂಗಳೂರಿನ ಮಳೆ – ಐಷಾರಾಮಿ ವಿಲ್ಲಾಗಳು ಜಲಾವೃತ 

0

ಸೋಮವಾರದಿಂದ ತೀವ್ರ ಜಲಾವೃತಗೊಂಡಿರುವ ನಗರದ ಯಮಲೂರು ಪ್ರದೇಶದಲ್ಲಿನ ಐಷಾರಾಮಿ ವಿಲ್ಲಾಕ್ಕೆ ನೀರು ನುಗ್ಗಿದ್ದರಿಂದ ಬೆಂಗಳೂರಿನಲ್ಲಿ ವಿಐಪಿ ಜನರನ್ನು ಕೂಡ ಸ್ಥಳಾಂತರಿಸಲಾಗಿದೆ. ಭಾನುವಾರದಿಂದ ಭಾರೀ ಮಳೆಯ ನಡುವೆ ಬೆಂಗಳೂರಿನ ಮನೆಗಳು ಮತ್ತು ಖಾಸಗಿ ವಿಲ್ಲಾಗಳಿಗೆ ನೀರು ನುಗ್ಗಿದ್ದರಿಂದ ಗಣ್ಯರು ಮತ್ತು ವಿಐಪಿಗಳು ಸೇರಿದಂತೆ ಕರ್ನಾಟಕ ರಾಜಧಾನಿಯಲ್ಲಿ ಮಳೆ ಯಾರನ್ನೂ ಸುಮ್ಮನೆ ಬಿಡಲಿಲ್ಲ.

ನಗರದಾದ್ಯಂತದ ಆಘಾತಕಾರಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಪ್ರವಾಹದ ರೀತಿಯಲ್ಲಿಯೇ ಹರಿದಾಡಿದವು, ವಿಶೇಷವಾಗಿ ಉತ್ತರ ಮತ್ತು ಪೂರ್ವ ಬೆಂಗಳೂರಿನಲ್ಲಿ ಎಡೆಬಿಡದ ಮಳೆಯಿಂದ ಆಸ್ತಿಗೆ ಹಾನಿಯಾಗಿದೆ. ಯೆಮಲೂರಿನ ಎಪ್ಸಿಲಾನ್‌ನಲ್ಲಿರುವ ಖಾಸಗಿ ವಿಲ್ಲಾದ ಲಿವಿಂಗ್ ರೂಮ್‌ನ ಐಷಾರಾಮಿ ಪೀಠೋಪಕರಣಗಳು ಮತ್ತು ಅಲಂಕಾರಗಳು ಕೆಸರು ಮಳೆ ನೀರಿನಲ್ಲಿ ಅರ್ಧದಷ್ಟು ಮುಳುಗಿದವು.

ಮಾರತ್ತಹಳ್ಳಿ ಬಳಿ ಇರುವ ಆಸ್ತಿಗೆ ತೀವ್ರ ಜಲಾವೃತವಾಗಿದೆ. ಬೆಂಗಳೂರಿನ ಬಹುತೇಕ ಮಿಲಿಯನೇರ್‌ಗಳ ತವರು. ಸಂಪೂರ್ಣ ಆಸ್ತಿಯನ್ನು ಸರೋವರದ ಹಾಸಿಗೆಯ ಮೇಲೆ ನಿರ್ಮಿಸಲಾಗಿದೆ, ಹಲವಾರು ಕೆರೆಗಳಿದ್ದ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ನಿಜವಾಗಿಯೂ ಬೆಂಗಳೂರು ಮುಳುಗಿದ್ದು ಆಶ್ಚರ್ಯವಾಗಲಿಲ್ಲ.

ದುರಾಸೆಯ ರಿಯಲ್ ಎಸ್ಟೇಟ್ ಕಂಪನಿಗಳು ಡೆವಲಪರ್ ಅನ್ನು ನಂಬಿ ಇಂತಹಾ ಪ್ರದೇಶಗಳಲ್ಲಿ ಮನೆ ಕಟ್ಟುವ ಕೆಲಸ ಮಾಡಿದವು. ಬೆಂಗಳೂರು ಯಾವುತ್ತಾದರೂ ಕೆರೆ ಹಾಸಿನ ಮೇಲೆ ಮನೆ ಕಟ್ಟುವಂತೆ ಕೇಳಲಿಲ್ಲ. ಇದಕ್ಕೆ ಹಲವಾರು ಜನರ ದುರಾಸೆಯೇ ಕಾರಣ. ಜೌಗು ಪ್ರದೇಶಗಳು, ಸರೋವರಗಳು, ಉಕ್ಕಿ ಹರಿಯುವ ಪ್ರದೇಶಗಳಲ್ಲಿ ಆಸ್ತಿಗಳನ್ನು ಖರೀದಿಸುವ, ಅಭಿವೃದ್ಧಿಪಡಿಸುವ ಜನರು ವಿಪತ್ತನ್ನು ಆಹ್ವಾನಿಸುವುದು ಅನಿವಾರ್ಯ.

ಕೆಲವು ದೃಶ್ಯಗಳಲ್ಲಿ ಕಾಣಿಸುವಂತೆ ಕುಮಾರಕೃಪಾ ರಸ್ತೆಯ ಬಳಿಯಿರುವ ವಸಂತನಗರದ ಅಂಡರ್‌ಪಾಸ್‌ನಲ್ಲಿ ಮಳೆ ನೀರು ತುಂಬಿ ಸಾರ್ವಜನಿಕ ಬಳಕೆಗಾಗಿ ನಿರ್ಬಂಧಿಸಲಾಗಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ನಿವಾಸದಿಂದ 300 ಮೀಟರ್ ದೂರದಲ್ಲಿದೆ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಯಿಂದ 200 ಮೀಟರ್ ದೂರದಲ್ಲಿದೆ.

ಈ ಪ್ರದೇಶವು ಎಂಟು ಕ್ಯಾಬಿನೆಟ್ ಮಂತ್ರಿಗಳನ್ನು ಹೊಂದಿತ್ತು ಮತ್ತು ಇನ್ನೊಂದು ಬದಿಯಲ್ಲಿ ಗಣ್ಯ ಗಾಲ್ಫ್ ಕ್ಲಬ್ ಅನ್ನು ಹೊಂದಿತ್ತು.

ಕಳೆದ ಎರಡು ದಿನಗಳಿಂದ ಸತತ ಮಳೆಯಿಂದ ಬೆಂಗಳೂರು ನಗರದಲ್ಲಿ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದ್ದು, ಅಧಿಕಾರಿಗಳು ಹಿಂದಿನ ಸರ್ಕಾರದತ್ತ ಬೆರಳು ತೋರುತ್ತಿದ್ದಾರೆ.

ಹಿಂದಿನ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಸಂಪೂರ್ಣ ಯೋಜಿತವಲ್ಲದ ಆಡಳಿತದಿಂದಾಗಿ ಇದು (ಬೆಂಗಳೂರಿನಲ್ಲಿ ಪ್ರವಾಹ ಮತ್ತು ಇತರ ಸಮಸ್ಯೆಗಳು) ಸಂಭವಿಸಿದೆ. ಅವರು (ಕಾಂಗ್ರೆಸ್) ಕೆರೆಗಳು, ಟ್ಯಾಂಕ್ ಬಂಡ್‌ಗಳು, ಬಫರ್ ಜೋನ್‌ಗಳಲ್ಲಿ ಬಲ, ಎಡ, ಮಧ್ಯ (ನಿರ್ಮಾಣಕ್ಕೆ) ಅನುಮತಿ ನೀಡಿದ್ದಾರೆ. , ಇದಕ್ಕೆ ಕಾರಣ’ ಎಂದು ಸಿಎಂ ಬೊಮ್ಮಾಯಿ ಮಂಗಳವಾರ ಮಧ್ಯಾಹ್ನ ಹೇಳಿದರು.

8ನೆಯ ತರಗತಿಯ ವಿದ್ಯಾರ್ಥಿಯ ಕಾಲು ಮುರಿತ, ಪ್ರಾಂಶುಪಾಲರು ಥಳಿಸಿದ ಆರೋಪ – ತನಿಖೆಗೆ ಆದೇಶ 

0

8ನೆಯ ತರಗತಿಯ ವಿದ್ಯಾರ್ಥಿಯ ಕಾಲು ಮುರಿತ, ಪ್ರಾಂಶುಪಾಲರು ಥಳಿಸಿದ ಆರೋಪ – ತನಿಖೆಗೆ ಆದೇಶ 

8ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗುವಿಗೆ ಥಳಿಸಿದ್ದಾರೆ ಎಂದು ಕುಟುಂಬವೊಂದು ಆರೋಪಿಸಿದೆ.

ಉತ್ತರ ಪ್ರದೇಶದ ಜೈ ಜವಾನ್ ಜೈ ಕಿಸಾನ್ ಇಂಟರ್ ಕಾಲೇಜಿನ ಪ್ರಾಂಶುಪಾಲರು 8ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗುವಿಗೆ ಥಳಿಸಿದ್ದಾರೆ ಎಂದು ಆ ಕುಟುಂಬ ಹೇಳಿದ್ದು ನ್ಯಾಯ ಒದಗಿಸುವಂತೆ ದೂರು ನೀಡಿದೆ.

ಮಗುವಿಗೆ ಮುರಿತಗಳಿವೆ; ವೈದ್ಯಕೀಯ ವರದಿಗಳೂ ಇದನ್ನೇ ಸೂಚಿಸುತ್ತವೆ. ನಾನು 2 ದಿನಗಳಲ್ಲಿ ಈ ವಿಷಯವನ್ನು ತನಿಖೆ ಮಾಡಲು SDM, CO ಮತ್ತು DRS ತಂಡವನ್ನು ರಚಿಸುತ್ತಿದ್ದೇನೆ ಎಂದು ಶಾಮ್ಲಿ ಜಿಲ್ಲಾಧಿಕಾರಿ ಜಸ್ಜಿತ್ ಕೌರ್ ಹೇಳಿಕೆ ನೀಡಿದ್ದಾರೆ.

“ಸುದರ್ಶನ ವಿಜಯ” ಯಕ್ಷಗಾನ ಪ್ರದರ್ಶನ – ಬೆಂಗಳೂರಿನ ಯಕ್ಷದೇಗುಲದ ಕಾರ್ಯಕ್ರಮ

ಕಳೆದ 40 ವರ್ಷದಿಂದ ಸದಾಚಟುವಟಿಕೆಯಿಂದಿರುವ ಕೆ. ಮೋಹನ್ ನಿರ್ದೇಶನದ ಬೆಂಗಳೂರಿನ ಯಕ್ಷದೇಗುಲ ತಂಡದವರ ಈ ವರ್ಷದ ಗಣೇಶೋತ್ಸವ ಕಾರ್ಯಕ್ರಮ ದಿನಾಂಕ 02-09-2022ರಂದು ಸಂಜೆ 7:00ಕ್ಕೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನ, ಬೈಂದೂರು ಇಲ್ಲಿ “ಕೃಷ್ಣಾರ್ಜುನ” ಯಕ್ಷಗಾನ ಪ್ರದರ್ಶನ ನಡೆಯಿತು.

ದಿನಾಂಕ 04-09-2022ರಂದು ಬೆಂಗಳೂರಿನ ಜೆ.ಪಿ. ನಗರದ ಶ್ರೇಯಸ್ ಕಾಲನಿಯಲ್ಲಿ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಂಜೆ 6:00ಕ್ಕೆ “ಸುದರ್ಶನ ವಿಜಯ” ಯಕ್ಷಗಾನ ಪ್ರದರ್ಶನ ನಡೆಯಿತು.

ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಕಲಾವಿದರಾಗಿ ಸುಜಯೀಂದ್ರ ಹಂದೆ ಎಚ್, ಲಂಬೋದರ ಹೆಗಡೆ, ಶಿವಾನಂದ ಕೋಟ, ಉದಯ ಕಡಬಾಳ, ರಾಘವೇಂದ್ರ ಹೆಗಡೆ, ಮಂಜುನಾಥ ನಾವುಡ,  ಸ್ಫೂರ್ತಿ ಭಟ್, ತಮ್ಮಣ್ಣ ಗಾಂವ್ಕರ್, ರಾಮಕೃಷ್ಣ ಭಟ್, ಆದಿತ್ಯ ಹೆಗಡೆ, ಗಣೇಶ ಉಪ್ಪುಂದ, ವಿಜಯ ಬೀಜನಮಕ್ಕಿ, ಉದಯ ಬೋವಿ, ಗೋವಿಂದ, ನವೀನ್‌ ಕೋಟ, ರಾಜು ಪೂಜಾರಿ ಇನ್ನಿತರರು ಭಾಗವಹಿಸಿದರು.

ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳಿಗೆ ಚಾಲನೆ – ಭಾಷಾ ಸಂರಚನೆಯ ಕ್ರಮವನ್ನು ಅರಿಯಬೇಕು : ಶಕುಂತಲಾ ನಾಯಕ್

0

ಪುತ್ತೂರು: ಪ್ರತಿಯೊಂದು ಭಾಷೆಗೂ ಅದರದ್ದೇ ಆದ ರಚನೆ ಇರುತ್ತದೆ. ಆ ಸಂರಚನೆಯ ಕ್ರಮವನ್ನು ಅರಿತಾಗ ಭಾಷಾ ಕಲಿಕೆ ಸುಲಭಸಾಧ್ಯವೆನಿಸುತ್ತದೆ. ಗ್ರಾಮಾಂತರ ಭಾಗದ ಮಕ್ಕಳು ಇಂಗ್ಲಿಷ್ ಭಾಷಾ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ತನ್ಮೂಲಕ ಉತ್ಕೃಷ್ಟ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದು ಪುತ್ತೂರಿನ ನಿವೃತ್ತ ಮುಖ್ಯ ಶಿಕ್ಷಕಿ ಶಕುಂತಲಾ ನಾಯಕ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.


ಇಂಗ್ಲಿಷ್ ಭಾಷೆಯನ್ನು ಕಲಿಯಬಯಸುವವರು ಇಂಗ್ಲಿಷ್‌ನಲ್ಲಿ ಆಲೋಚಿಸುವುದನ್ನು ರೂಢಿಸಿಕೊಳ್ಳಬೇಕು. ಕನ್ನಡದಲ್ಲಿ ಆಲೋಚಿಸಿ, ಇಂಗ್ಲಿಷ್‌ಗೆ ಅನುವಾದಿಸಿ ಮಾತನಾಡುವುದರಿಂದ ಭಾಷೆಯನ್ನು ಕರತಲಾಮಲಕಗೊಳಿಸುವುದು ಕಷ್ಟ. ಕ್ಲಿಷ್ಟ ಎನಿಸಿದರೂ ಇಂಗ್ಲಿಷ್‌ನಲ್ಲಿ ವ್ಯವಹರಿಸುವುದನ್ನು ಬೆಳೆಸಿಕೊಳ್ಳಬೇಕು. ಆಗ ಭಾಷೆಯ ಹಿಡಿತ ತನ್ನಿಂತಾನಾಗಿ ಒಡಮೂಡುವುದಕ್ಕೆ ಸಾಧ್ಯ ಎಂದು ಅಬಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾಷೆ ಅತ್ಯಂತ ಅಗತ್ಯವಾದ ವಿಚಾರ. ಔದ್ಯೋಗಿಕ ಕ್ಷೇತ್ರಕ್ಕಂತೂ ಇಂಗ್ಲಿಷ್ ಭಾಷೆಯ ಅಗತ್ಯ ತುಂಬಾ ಇದೆ. ಕಾಲೇಜು ಶಿಕ್ಷಣದ ಜತೆಜತೆಗೆ ಇಂಗ್ಲಿಷ್ ಕಲಿಕಾ ಪ್ರಕ್ರಿಯೆಗೆ ತಮ್ಮನ್ನು ತಾವು ಒಡ್ಡಿಕೊಂಡರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಲಾಭ ದೊರಕುವುದಕ್ಕೆ ಸಾಧ್ಯ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಇಂಗ್ಲಿಷ್ ಸಂಸ್ಕೃತಿ ನಮಗೆ ಬೇಕಾಗಿಲ್ಲ ಆದರೆ ಭಾಷೆಯ ಅಗತ್ಯವಿದೆ. ಭಾರತೀಯತೆಯನ್ನು ಜಗತ್ತಿನಾದ್ಯಂತ ಪಸರಿಸುವುದಕ್ಕೆ ಮಾಧ್ಯಮವಾಗಿ ಇಂಗ್ಲಿಷ್ ಭಾಷೆಯನ್ನು ಬಳಸಿಕೊಳ್ಳಬೇಕು. ಹಾಗೆಂದು ಭಾಷೆಯನ್ನೂ ಭಾರತೀಯ ನೆಲೆಗಟ್ಟಿನಲ್ಲಿ ಬಳಸುವ ಸಾಧ್ಯತೆಯ ಬಗೆಗೆ ಆಲೋಚಿಸಬೇಕು. ಮಿಸ್ಟರ್, ಮಿಸ್ ಬಳಕೆಯ ಬದಲಾಗಿ ಶ್ರೀ, ಶ್ರೀಮತಿ ಬಳಕೆಯನ್ನು ಇಂಗ್ಲಿಷ್‌ನಲ್ಲೂ ಚಾಲ್ತಿಗೆ ತರಬೇಕಿದೆ ಎಂದರು.


ವಿದ್ಯಾರ್ಥಿನಿಯರಾದ ಮಹಿಮಾ ಹೆಗಡೆ ಹಾಗೂ ಅಂಕಿತ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ವಂದಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ ಪ್ರಸಾದ್ ಎ ಕಾರ್ಯಕ್ರಮ ನಿರ್ವಹಿಸಿದರು.

ಓಣಂ ಆಚರಣೆಯಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ ಬೃಹತ್ ಪೂಕಳಂ

0

ಪುತ್ತೂರು: ಕೇರಳದ ಅತ್ಯಂತ ಹಳೆಯ ಹಾಗೂ ಸಾಂಪ್ರದಾಯಿಕ ಹಬ್ಬವಾದ ಓಣಂ ಈಗ ಶ್ರದ್ದೆ ಭಕ್ತಿಯಿಂದ ವಿಶ್ವದೆಲ್ಲೆಡೆ ಆಚರಿಸಲ್ಪಡುತ್ತಿದ್ದು ಇದೊಂದು ಕೇರಳಿಗರ ಪ್ರೀತಿಯ ಹಬ್ಬ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯ ರಿಂಗ್  ಎಂಡ್ ಟೆಕ್ನಾಲಜಿಯಯಲ್ಲಿ ನಡೆದ ಓಣಂ ಆಚರಣೆಯಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ ಬೃಹತ್ ಪೂಕಳಂನ ಮುಂಭಾಗದಲ್ಲಿ ದೀಪ ಬೆಳಗಿಸಿ ಮಾತಾಡಿದರು. ಮಹಾಬಲಿಯು ಪ್ರತಿವರ್ಷವೂ ಓಣಂ ಸಂದರ್ಭದಲ್ಲಿ ಭೂಮಿಗೆ ಮರಳಿ ಬಂದು ಜನರ ಕಷ್ಟಗಳನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ಇದೆ.

ಇದರಿಂದಾಗಿ ಈ ಹಬ್ಬವು ಅತ್ಯಂತ ಮಹತ್ವದ್ದಾಗಿದೆ. ವಿಷ್ಣುವಿನ ವಾಮನ ಅವತಾರದ ಐತಿಹ್ಯವನ್ನೂ ಇದು ತಿಳಿಸುತ್ತದೆ ಎಂದರು. ಓಣಂ ಎಲ್ಲರಿಗೂ ಶುಭವನ್ನು ತರಲಿ ಎಂದು ಹಾರೈಸಿದರು.


ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್ ಅನೇಕತೆಯಲ್ಲಿ ಏಕತೆಯನ್ನು ಸಾರುವ ಇಂತಹ ಹಬ್ಬಗಳು ಎಲ್ಲೆಡೆಯೂ ಆಚರಿಸುವಂತಾಗಬೇಕು ಎಂದು ಶುಭ ಹಾರೈಸಿದರು.


ಓಣಂ ಹಬ್ಬದ ಹಿನ್ನೆಲೆಯನ್ನು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿದರು. ಕೇರಳದ ಸಾಂಪ್ರದಾಯಿಕ ನೃತ್ಯ ತಿರುವತ್ತಿರ ಕಳಿಯನ್ನು ವಿದ್ಯಾರ್ಥಿನಿಯರು ಅಭಿನಯಿಸಿದರು.


ವಿದ್ಯಾರ್ಥಿಗಳಾದ ಸಿಬಿನ್ ರವೀಂದ್ರ ಸ್ವಾಗತಿಸಿ, ವರುಣ್ ವಂದಿಸಿದರು. ವಿಶ್ಮಿತಾ ಮತ್ತು ಭಾವನಾ ಕಾರ್ಯಕ್ರಮ ನಿರ್ವಹಿಸಿದರು.

ಬಡಗುತಿಟ್ಟಿನ ಯುವ ಭಾಗವತ – ಶ್ರೀ ಪ್ರಸನ್ನ ಭಟ್ ಬಾಳ್ಕಲ್ 

ಶ್ರೀ ಪ್ರಸನ್ನ ಭಟ್ ಬಾಳ್ಕಲ್  ಅವರು  ಬಡಗುತಿಟ್ಟಿನ ಯುವ ಭಾಗವತರು. ಬಡಗು ತಿಟ್ಟಿನ ಹೆಚ್ಚಿನ ಎಲ್ಲಾ ಮೇಳಗಳಲ್ಲೂ ಆಹ್ವಾನಿತ ಭಾಗವತರಾಗಿ ವ್ಯವಸಾಯ ಮಾಡಿದ ಕಲಾವಿದರಿವರು. 1998-99ರಲ್ಲಿ ಮೇಳದ ವ್ಯವಸಾಯ ಆರಂಭಿಸಿದರೂ ಯಕ್ಷಗಾನ ಭಾಗವತಿಕೆಯಲ್ಲಿ ಇವರು ಇಪ್ಪತ್ತಾರು ವರ್ಷಗಳ ಅನುಭವಿ. ಕಳೆದ ನಾಲ್ಕು ವರ್ಷಗಳಿಂದ ಪೆರ್ಡೂರು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಯಕ್ಷಗಾನ ಕ್ಷೇತ್ರದಲ್ಲಿ  ಭಾಗವತನಾಗಿ ತಮ್ಮ ಹಾಡುಗಾರಿಕೆಯಿಂದ ಕಲಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 

ನಗುಮೊಗದ ಯುವ ಭಾಗವತ  ಶ್ರೀ ಪ್ರಸನ್ನ ಭಟ್ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಂಪ್ಲಿ ಗ್ರಾಮದ ಬಾಳ್ಕಲ್. 1977ನೇ ಇಸವಿ ಫೆಬ್ರವರಿ 25ರಂದು ಶ್ರೀ ಪದ್ಮನಾಭ ಭಟ್ ಬಾಳ್ಕಲ್ ಮತ್ತು ಶ್ರೀಮತಿ ಪಾರ್ವತಿ ಭಟ್ ದಂಪತಿಗಳ ಪುತ್ರನಾಗಿ ಜನನ. ಪ್ರಸನ್ನ ಭಟ್ ಅವರ ತಂದೆ ಶ್ರೀ ಪದ್ಮನಾಭ ಭಟ್ಟರು ಯಕ್ಷಗಾನ ಕಲಾವಿದನಾಗಿ ಮೇಳದ ತಿರುಗಾಟ ನಡೆಸಿದ ಅನುಭವಿ. ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ತಾಳಮದ್ದಳೆ ಅರ್ಥಧಾರಿಯೂ ಆಗಿದ್ದರು. ಶ್ರೀ ಶೇಣಿ ಗೋಪಾಲಕೃಷ್ಣ ಭಟ್ ಮತ್ತು ತೆಕ್ಕಟ್ಟೆ ಶ್ರೀ ಆನಂದ ಮಾಸ್ತರರ ಜತೆ ಅರ್ಥ ಹೇಳಿದವರು. ಕೆಲಸಮಯ (1989-90) ಸಾಲಿಗ್ರಾಮ ಮೇಳದ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದರು.

ಅಜ್ಜ (ತಾಯಿಯ ತಂದೆ) ಶ್ರೀ ಸುಬ್ರಾಯ ಹೆಗಡೆಯವರು ಸಮಾಜ ಸೇವಕರಾಗಿ, ಸಹಕಾರೀ ಧುರೀಣರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಯಕ್ಷಗಾನ ಸಂಘಟಕರಾಗಿ ಪ್ರಸಿದ್ಧರು. ಅವರು ಶ್ರೀ ರಾಜರಾಜೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ಹುಟ್ಟುಹಾಕಿ ಮುನ್ನಡೆಸಿದ್ದರು. ಈ ಮೇಳದಲ್ಲಿ ಮೂರೂರು ಶ್ರೀ ದೇವರು ಹೆಗಡೆ, ಕೊಳಗಿ ಶ್ರೀ ಅನಂತ ಹೆಗಡೆ, ಮೊದಲಾದವರು ವ್ಯವಸಾಯ ಮಾಡಿದ್ದರು.

ಪ್ರಸನ್ನ ಭಟ್ಟರ ತಂದೆ ಶ್ರೀ ಪದ್ಮನಾಭ ಭಟ್ಟರು ಈ ಮೇಳದಲ್ಲಿ ಸಕ್ರಿಯರಾಗಿದ್ದರು. ಪ್ರಸನ್ನ ಭಟ್ಟರ  ಇಬ್ಬರು ಸೋದರ ಮಾವಂದಿರೂ ಯಕ್ಷಗಾನ  ಕಲಾವಿದರು. ಶ್ರೀ ರಾಮಕೃಷ್ಣ ಹೆಗಡೆ ಮಳಿಗೆಮನೆ ಅವರು ವೇಷಧಾರಿಯಾಗಿ ಪ್ರಾಚಾರ್ಯ ಭಾಗವತ ಶ್ರೀ ನಾರ್ಣಪ್ಪ ಉಪ್ಪೂರರೊಂದಿಗೆ ವ್ಯವಸಾಯ ಮಾಡಿದವರು. ಇನ್ನೋರ್ವ ಸೋದರ ಮಾವ ಶ್ರೀ ಗಜಾನನ ಹೆಗಡೆ ಮಳಿಗೆಮನೆ ಹವ್ಯಾಸೀ ಭಾಗವತರು. 

ಶ್ರೀ ಪ್ರಸನ್ನ ಭಟ್ ಅವರು ಸ್ನಾತಕೋತ್ತರ ಪದವೀಧರರು. ಏಳನೇ ತರಗತಿ ವರೆಗೆ ಓದಿದ್ದು ತುಂಬೆಬೀಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಹತ್ತನೇ ತರಗತಿ ವರೆಗೆ ಮಂಚಿಕೇರಿ ಶ್ರೀ ರಾಜರಾಜೇಶ್ವರೀ ಶಾಲೆಯಲ್ಲಿ. ಬಳಿಕ ಇಡಗುಂಜಿ ಶ್ರೀ ಮಹಾಗಣಪತಿ ದೇವಳದ ಸಂಸ್ಕೃತ ಮತ್ತು ವೇದಪಾಠಶಾಲೆಯಲ್ಲಿ ಓದಿದ್ದರು. ಇಲ್ಲಿ ಸಂಸ್ಕೃತದಲ್ಲಿ ‘ಪ್ರಥಮ’ ಮತ್ತು ‘ಕಾವ್ಯ’ ಎಂಬ ವಿಚಾರವನ್ನೂ ಮಂತ್ರವನ್ನೂ ಕಲಿತಿದ್ದರು. ಬಳಿಕ ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಎಂ. ಎ  (ಸಾಹಿತ್ಯ ಮತ್ತು ಜ್ಯೋತಿಷ್ಯ ಪೂರ್ವ ವಿದ್ವತ್) ಓದಿದ್ದರು.

ಇವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ತಾಯಿಯ ಕಡೆಯಿಂದಲೂ ತಂದೆಯ ಕಡೆಯಿಂದಲೂ ಯಕ್ಷಗಾನವು ರಕ್ತಗತವಾಗಿಯೇ ಬಂದಿತ್ತು. ತಾಯಿ ಶ್ರೀಮತಿ ಪಾರ್ವತಿ ಭಟ್ ಭಜನೆ ಮೊದಲಾದ ಹಾಡುಗಳನ್ನು ಅಂದವಾಗಿ ಹೇಳುತ್ತಿದ್ದರು. ತಂದೆ ತಾಯಿಯರ ಜತೆ ಪ್ರಸನ್ನ ಭಟ್ಟರು ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಖ್ಯಾತ ಕಲಾವಿದ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಅವರ ಜತೆ ಬಂಧುತ್ವವು ಬೆಸೆದ ಮೇಲೆಯಂತೂ ಯಕ್ಷಗಾನಾಸಕ್ತಿಯು ಹೆಚ್ಚಾಗಿತ್ತು.

ಯಕ್ಷಗಾನ ನೋಡುವ ಆಸೆಯು ಕಲಿಯುವ ಆಸೆಯಾಗಿ ಬದಲಾಗಿತ್ತು. ತಾನೂ ಕಲಾವಿದನಾಗಬೇಕೆಂಬ ಆಸೆಯು ಹುಟ್ಟಿಕೊಂಡಿತ್ತು. ಯಕ್ಷಗಾನದ ಹಾಡುಗಳನ್ನು ಕೇಳುತ್ತಾ ಕುಣಿಯುವ ಹವ್ಯಾಸವೂ ಇತ್ತು. ಎಲ್ಲಾ ಭಾಗವತರ ಶೈಲಿಯಲ್ಲಿಯೂ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. (ಮಿಮಿಕ್ರಿ) ಬಾವನಾದ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಭಾಗವತಿಕೆಯನ್ನು ಸರಿಯಾಗಿ ಅಭ್ಯಸಿಸಲು ಸಲಹೆ ನೀಡಿದ್ದರು. ಮೊದಲ ಪಾಠ ಅವರಿಂದಲೇ ಆಗಿತ್ತು. ಅವರಿಂದ ತಾಳ ಮತ್ತು ಮಟ್ಟುಗಳನ್ನು ಪ್ರಸನ್ನ ಭಟ್ಟರು ಕಲಿತಿದ್ದರು. 

ಶ್ರೀ ಪ್ರಸನ್ನ ಭಟ್ ಅವರು ಉಡುಪಿ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ  ಹೆಚ್ಚಿನ ಕಲಿಕೆಗೆ ಅವಕಾಶವಾಗಿತ್ತು. ಉಡುಪಿ ಯಕ್ಷಗಾನ ಕೇಂದ್ರವನ್ನು ಸೇರಿ ಶ್ರೀ ಗೋಪಾಲ ವಿಠ್ಠಲ ಪಾಟೀಲರಿಂದ ಭಾಗವತಿಕೆಯನ್ನು ಕಲಿತರು. ಶ್ರೀ ನೀಲಾವರ ಲಕ್ಷ್ಮೀನಾರಾಯಣಯ್ಯ ಅವರಿಂದಲೂ ಕಲಿಕೆಗೆ ಅವಕಾಶವಾಗಿತ್ತು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನಿರಂತರ ಎರಡು ವರ್ಷಗಳ ತರಬೇತಿ. ಉಡುಪಿ ಸಂಸ್ಕೃತ ಕಾಲೇಜಿನ ಪ್ರದರ್ಶನ. ಪ್ರಸಂಗ ‘ಸತ್ಯಸೇನ ವಧಃ'(ಸಂಸ್ಕೃತದಲ್ಲಿ) ದಲ್ಲಿ ಪ್ರಸನ್ನ ಭಟ್ ಅವರು ಭಾಗವತರಾಗಿ ರಂಗಪ್ರವೇಶ ಮಾಡಿದ್ದರು. ಅಂದು ಪ್ರೇಕ್ಷಕರ ಸಾಲಿನಲ್ಲಿದ್ದ ಪೂಜ್ಯ ಪೇಜಾವರ ಶ್ರೀಗಳವರು ಮೆಚ್ಚಿ ಪ್ರಸನ್ನ ಭಟ್ಟರಿಗೆ ತಾಳವನ್ನು ನೀಡಿ ಆಶೀರ್ವದಿಸಿದ್ದರು.

ಬಳಿಕ ಅನೇಕ ಪ್ರದರ್ಶನಗಳಲ್ಲಿ ಭಾಗವತನಾಗಿ ಕಾಣಿಸಿಕೊಂಡಿದ್ದರು. ಶೃಂಗೇರಿಯ ಸಂಸ್ಕೃತ ವಿದ್ಯಾಲಯದ ಸದ್ವಿದ್ಯಾ ಸಂಜೀವಿನೀ ಸವೇದ ಪಾಠಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸಂಸ್ಕೃತ ಭಾಷೆಯಲ್ಲಿ ಪ್ರದರ್ಶನ ನೀಡಿದ್ದರು. 2007ರಲ್ಲಿ ಶೃಂಗೇರಿ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಅವರಿಂದ ದಿಲ್ಲಿ ಸಂಸ್ಕೃತ ಭವನದಲ್ಲಿ ಸುಧನ್ವ ಮೋಕ್ಷ ಪ್ರದರ್ಶನವನ್ನು ನಡೆಸಿದ್ದರು. 

ಶ್ರೀ ಪ್ರಸನ್ನ ಭಟ್ ಬಾಳ್ಕಲ್ ಅವರ ಮೊದಲ ತಿರುಗಾಟ ಸಾಲಿಗ್ರಾಮ ಮೇಳದಲ್ಲಿ. (1998-99) 1999-2000ನೇ ಸಾಲಿನಲ್ಲಿ ಸಾಲಿಗ್ರಾಮ ಮೇಳದಲ್ಲಿ ಸುಮಾರು ಐವತ್ತು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದರು. (ಬದಲಿ ಭಾಗವತನಾಗಿ) ಆಗ ಕೊಳಗಿ ಶ್ರೀ ಕೇಶವ ಹೆಗಡೆ ಮತ್ತು ಶ್ರೀ ಸತ್ಯನಾರಾಯಣ ಪುಣಿಂಚತ್ತಾಯರು ಸಾಲಿಗ್ರಾಮ ಮೇಳದ ಭಾಗವತರಾಗಿದ್ದರು. ಬಳಿಕ, ಮಂದರ್ತಿ, ಸೌಕೂರು, ಕಮಲಶಿಲೆ, ಹಿರಿಯಡಕ, ಹಾಲಾಡಿ ಮೊದಲಾದ ಮೇಳಗಳಲ್ಲಿ ಆಹ್ವಾನಿತ ಭಾಗವತನಾಗಿ ವ್ಯವಸಾಯ. ಬಡಗಿನ ಬಹುತೇಕ ಹೆಚ್ಚಿನ ಎಲ್ಲಾ ಮೇಳಗಳಲ್ಲಿ ಭಾಗವತನಾಗಿ ಇವರು ಕಾಣಿಸಿಕೊಂಡಿದ್ದಾರೆ.

2015-16ನೇ ಸಾಲಿನಲ್ಲಿ ನೀಲಾವರ ಮೇಳದಲ್ಲಿ ಶ್ರೀ ಸುಬ್ರಹ್ಮಣ್ಯ ಧಾರೇಶ್ವರರ ಜತೆ ವ್ಯವಸಾಯ ಮಾಡಿದ್ದರು. 2017-18 ಮತ್ತು 2018-19 ನೇ ಸಾಲಿನಲ್ಲಿ ಜಲವಳ್ಳಿ ಶ್ರೀ ವಿದ್ಯಾಧರ ರಾವ್ ಅವರ ಜಲವಳ್ಳಿ ಮೇಳದಲ್ಲಿ ವ್ಯವಸಾಯ. ಕಳೆದ ನಾಲ್ಕು ವರ್ಷಗಳಿಂದ ಪೆರ್ಡೂರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. (2019ರಿಂದ ತೊಡಗಿ) ಶ್ರೀ ಪ್ರಸನ್ನ ಭಟ್ಟರು ತಮ್ಮ ಬಾವ ನೆಂಟನಾದ ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಸಂಚಾಲಕತ್ವದ ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ (ರಿ) ಕುಂಭಾಶಿ ಈ ತಂಡದ ಪ್ರದರ್ಶನಗಳಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಈ ತಂಡದ ಮುಖ್ಯ ಭಾಗವತನಾಗಿದ್ದ ವಿದ್ವಾನ್ ಶ್ರೀ ಗಣಪತಿ ಭಟ್ಟರ ಜತೆ ಸಹ ಭಾಗವತನಾಗಿ ಕಾಣಿಸಿಕೊಂಡಿದ್ದರು. ಅವರ ಒಡನಾಟವು ಕಲಿಕೆಗೆ ಅವಕಾಶವಾಗಿತ್ತು. ಶ್ರೀ ಪ್ರಸನ್ನ ಭಟ್ಟರು ವಿದ್ವಾನ್ ಶ್ರೀ ಗಣಪತಿ ಭಟ್ಟರ ಹಾಡುಗಾರಿಕೆಯಿಂದ ಪ್ರಭಾವಿತರಾಗಿದ್ದರು.

ವೃತ್ತಿ ಜೀವನದುದ್ದಕ್ಕೂ ಚಿಟ್ಟಾಣಿ ರಾಮಚಂದ್ರ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ವಿದ್ಯಾಧರ ಜಲವಳ್ಳಿ, ತೋಟಿಮನೆ ಗಣಪತಿ ಹೆಗಡೆ, ಕಣ್ಣಿಮನೆ ಗಣಪತಿ ಭಟ್, ಮೂರೂರು ರಮೇಶ ಭಂಡಾರಿ, ಥಂಡಿಮನೆ ಶ್ರೀಪಾದ ಭಟ್, ನೀಲ್ಕೋಡು ಶಂಕರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ ಮೊದಲಾದ ಹಿರಿಯ ಕಲಾವಿದರ ಒಡನಾಟವು ದೊರೆತಿತ್ತು. 

ಶ್ರೀ ಪ್ರಸನ್ನ ಭಟ್ ಬಾಳ್ಕಲ್ ಅವರು ಶತಾವಧಾನಿ ಡಾ. ಆರ್. ಗಣೇಶ್ ಅವರ ಪರಿಕಲ್ಪನೆಯ, ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಮಂಟಪ ಶ್ರೀ ಪ್ರಭಾಕರ ಉಪಾಧ್ಯರ ಯುಗಳ ಯಕ್ಷಗಾನ ”ವಿಜಯ ವಿಲಾಸ” ಎಂಬ ಪ್ರದರ್ಶನದಲ್ಲಿ ವಿದ್ವಾನ್ ಶ್ರೀ ಗಣಪತಿ ಭಟ್ಟರ ಜತೆ ಭಾಗವತನಾಗಿ ಭಾಗವಹಿಸಿದ್ದರು. ಅವರಿಗೆ ಇದು ಒಂದು ವಿಶೇಷ ಅನುಭವವಾಗಿತ್ತು.  ಶ್ರೀ ಪ್ರಸನ್ನ ಭಟ್ ಅವರು 2012ರಲ್ಲಿ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನದ  ಸಿಂಗಾಪೂರ್ ನಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿದ್ದರು.

ಮುಂಬೈ, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ತಮ್ಮ ಹಾಡುಗಾರಿಕೆಯಿಂದ ಯಕ್ಷಗಾನ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ. ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದಾರೆ. ಪ್ರಸ್ತುತ ಇವರು ಕಿರಿಮಂಜೇಶ್ವರದಲ್ಲಿ ಸ್ವಂತ ಸ್ಥಳ ಮತ್ತು ಮನೆಯನ್ನು ಹೊಂದಿ ತಾಯಿ ಮತ್ತು ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ಬಡಗು ತಿಟ್ಟಿನ ಯುವ ಭಾಗವತ  ಶ್ರೀ ಪ್ರಸನ್ನ ಭಟ್ ಬಾಳ್ಕಲ್  ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಭಾಗವತರಾಗಿ ವ್ಯವಸಾಯವನ್ನು ಮಾಡುವಲ್ಲಿ ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಪ್ರಸನ್ನ ಭಟ್ ಬಾಳ್ಕಲ್. ಮೊಬೈಲ್: 8762783763

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಉಪ್ಪಿನಂಗಡಿ ರೋಟರಿ ಕ್ಲಬ್ : ಶಿಕ್ಷಕರ ದಿನಾಚರಣೆ

0

ಉಪ್ಪಿನಂಗಡಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಶಿಕ್ಷಕ ದಿನಾಚರಣೆಯ ನಿಮಿತ್ತ ರಾಷ್ಟ್ರಪ್ರಶಸ್ತಿ ಪುರಸ್ಕೃತ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ರೋ.P H F ದಿವಾಕರ ಆಚಾರ್ಯ ಗೇರುಕಟ್ಟೆ, ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿ ಉಪ್ಪಿನಂಗಡಿ ರೋಟರಿ ಕ್ಲಬ್ಬಿನ ಮಾಜಿ ಅಧ್ಯಕ್ಷ ರವೀಂದ್ರ ದರ್ಬೆ, ಉಪ್ಪಿನಂಗಡಿ ಮಾದರಿ ಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಂದನಾ ಮತ್ತು ಇಂದ್ರಪ್ರಸ್ಥ ವಿದ್ಯಾಲಯದ ಶಿಕ್ಷಕಿ ಶ್ರೀಮತಿ ಆಶಾಲತಾ ನಾಯಕ್ ಇವರನ್ನು ಗೌರವಿಸಲಾಯಿತು.

ರೋಟರಿ ಅಧ್ಯಕ್ಷ ಜಗದೀಶ್ ನಾಯಕ್, ಕಾರ್ಯದರ್ಶಿ ಗಿರಿಧರ ನಾಯಕ್, ಮಾಜಿ ಅಧ್ಯಕ್ಷರಾದ ಅಜೀಜ್ ಬಸ್ತಿ ಕಾರ್, ವಿಜಯಕುಮಾರ್ ಕಲ್ಲಳಿಕೆ, ನಿವೃತ್ತ ಬಿಎಸ್ಎಫ್ ಕಮಾಂಡೆಂಟ್  ರೋ. ಡಿ. ಸಿ .ಚಂದಪ್ಪ ಮೂಲ್ಯ, ಅಬೂಬಕ್ಕರ್ ಪುತ್ತ, ಇಸ್ಮಾಯಿಲ್  ಇಕ್ಬಾಲ್, ನಿಕಟ ಪೂರ್ವ ಕಾರ್ಯದರ್ಶಿ ನವೀನ್  ಬ್ರಾಗ್ಸ್, ಸ್ವರ್ಣೇಶ ಗಾಣಿಗ, ಮತ್ತು  ಕ್ಲಬ್ಬಿನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸನ್ಮಾನಿತರಾದ ನಾಲ್ವರು ಶಿಕ್ಷಕರು ಶಿಕ್ಷಕ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿ ಗುರುವೃಂದದ ಮೇಲಿನ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ರೋಟರಿ ಕ್ಲಬ್ಬಿನ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಯೂನಿಕ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಜಗದೀಶ್ ನಾಯಕ್ ಸ್ವಾಗತಿಸಿ ಕಾರ್ಯದರ್ಶಿ ಗಿರಿಧರ್ ನಾಯಕ್ ವಂದಿಸಿದರು.

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ – NIA ಅಧಿಸೂಚನೆ ಪತ್ರಿಕಾ ಪ್ರಕಟಣೆ ಬಿಡುಗಡೆ – ಹತ್ಯೆಗೆ ಪಿಎಫ್ಐ ನಂಟು ಬಹಿರಂಗ

0

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಎನ್‌ಐಎ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ಈ ಸಂಬಂಧ ಇಂದು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಅದರ ವಿವರ ಕೆಳಗಿದೆ.

ಇಂದು (06.09.2022), ಮೈಸೂರು, ಕೊಡಗು ಮತ್ತು ದಕ್ಷಿಣದ ಮೂವತ್ಮೂರು (33) ಸ್ಥಳಗಳಲ್ಲಿ NIA ಶೋಧ ನಡೆಸಿತು. ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಕರ್ನಾಟಕದ ಕನ್ನಡ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ಅದನ್ನು ಎನ್‌ಐಎ ಗೆ ವರ್ಗಾಯಿಸಲಾಗಿತ್ತು.

ಆರೋಪಿಗಳೆಲ್ಲರೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸಕ್ರಿಯ ಸದಸ್ಯರಾಗಿದ್ದಾರೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ಪ್ರವೀಣ್ ನೆಟ್ಟಾರು ಹತ್ಯೆಯ ಮೂಲಕ ಸಮಾಜದ ಒಂದು ವಿಭಾಗದ ಜನರನ್ನು ಭಯೋತ್ಪಾದನೆಗೆ ಒಳಪಡಿಸುವ ದೊಡ್ಡ ಪಿತೂರಿಯ ಭಾಗವಾಗಿ ಯೋಜಿಸಿ ನಡೆಸಿದ್ದರು.

ಆ ಮೂಲಕ ಒಂದು ವರ್ಗದ ಜನರಲ್ಲಿ ಭಯವನ್ನು ಹುಟ್ಟಿಸುವುದು ಅವರ ಮುಖ್ಯ ಉದ್ದೇಶ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಆರೋಪಿಗಳು ಮತ್ತು ಶಂಕಿತರ ಆವರಣದಲ್ಲಿ ಇಂದು ನಡೆಸಿದ ಶೋಧಗಳಲ್ಲಿ, ಡಿಜಿಟಲ್ ಸಾಧನಗಳು, ಬಳಸಿದ ಮದ್ದುಗುಂಡುಗಳು, ಸುಧಾರಿತ ಶಸ್ತ್ರಾಸ್ತ್ರಗಳು, ನಗದು, ದೋಷಾರೋಪಣೆಯ ದಾಖಲೆಗಳು, ಕರಪತ್ರಗಳು ಮತ್ತು ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆಗಳು ಪ್ರಗತಿಯಲ್ಲಿವೆ.

ಶಿಕ್ಷಕರ ದಿನಾಚರಣೆ

0

ಪುತ್ತೂರು: ಸಮಾಜವು ಶಿಕ್ಷಕನಿಂದ ಬಹಳವಾಗಿ ನಿರೀಕ್ಷಿಸುತ್ತದೆ ಆ ನಿರೀಕ್ಷೆಗಳನ್ನು ಹುಸಿಗೊಳಿಸದೆ ಶಿಕ್ಷಕನು ಸಮಾಜಕ್ಕೆ ಬೆಳಕು ನೀಡುವ ಆದರ್ಶ ವ್ಯಕ್ತಿತ್ವವಾಗಬೇಕು ಎಂದು ಸುಳ್ಯದ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕಿ ಡಾ.ಯಶೋದಾ ರಾಮಚಂದ್ರ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಆಶ್ರಯದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲ ಒಂದು ವಿಷಯದ ಜ್ಞಾನ ಹುದುಗಿರುತ್ತದೆ ಅದನ್ನು ಹೊರಗೆಡಹುವ ಕ್ರಿಯಾಶಕ್ತಿ ಅಧ್ಯಾಪಕನಲ್ಲಿರಬೇಕು. ಅಧ್ಯಾಪನ ಮಾತ್ರವಲ್ಲದೆ ವ್ಯಕ್ತಿತ್ವ ನಿರ್ಮಾಣವೂ ಅವನ ಧ್ಯೇಯವಾಗಬೇಕು ಎಂದರು. ಮೆಖಾಲೆ ಶಿಕ್ಷಣ ಪದ್ದತಿಯ ಫಲವನ್ನು ನಾವೆಲ್ಲರೂ ಅನುಭವಿಸುವಂತಾಗಿದೆ. ಸಾಮರ್ಥ್ಯ ಇದ್ದರೂ ಸೌಜನ್ಯ ಇಲ್ಲದ ವಿದ್ಯಾರ್ಥಿಗಳನ್ನು ನಾವು ಕಾಣುವಂತಾಗಿದೆ ಎಂದರು. ಶಿಕ್ಷಕನ ಬಗೆಗಿನ ಬದಲಾದ ಸಾಮಾಜಿಕ ದೃಷ್ಟಿಕೋನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ರಾಜಕೀಯದ ಪ್ರವೇಶದಿಂದಾಗಿ ಶಿಕ್ಷಕನಿಗೆ ಯಾವುದೇ ಪ್ರಾಶಸ್ತ್ಯವಿಲ್ಲದಂತಾಗುತ್ತಿರುವುದು ದುರಂತ ಎಂದು ಅಭಿಪ್ರಾಯ ಪಟ್ಟರು.


ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ, ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ. ಕೃಷ್ಣಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿಷಯವಾರು ಉತ್ತಮ ಫಲಿತಾಂಶವನ್ನು ದಾಖಲಿಸಿದ ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು, ಹಾರು ಬೂದಿಯಿಂದ ಕಾಂಕ್ರೀಟ್ ಬೀಮ್‌ಗಳ ತಯಾರಿಕೆಯ ಬಗ್ಗೆ ಪೇಟೆಂಟ್ ಪಡೆದಿರುವ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುರೇಖ ಅವರನ್ನು ಸನ್ಮಾನಿಸಲಾಯಿತು.

ಕೆಎಸ್‌ಸಿಎಸ್‌ಟಿ ಪ್ರಾಜೆಕ್ಟ್ ಪ್ರದರ್ಶನದಲ್ಲಿ ರಾಜ್ಯಮಟ್ಟದ ಉತ್ತಮ ಪ್ರಾಜೆಕ್ಟ್ ಪ್ರಶಸ್ತಿಗಳಿಸಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ಪ್ರೊ. ಜೀವಿತ ಹಾಗೂ ಪ್ರೊ. ರೇಶ್ಮಾ ಪೈ ಅವರನ್ನು ಗೌರವಿಸಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ಕಾಲೇಜು ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದ ಕಾಲೇಜಿನ ತಂಡಕ್ಕೆ ಮಾರ್ಗದರ್ಶನವನ್ನು ನೀಡಿದ್ದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಅವರನ್ನು ಸನ್ಮಾನಿಸಲಾಯಿತು.


ವಿದ್ಯಾರ್ಥಿಗಳಾದ ವಿಶ್ಮಿತಾ.ಕೆ.ಶೆಟ್ಟಿ ಸ್ವಾಗತಿಸಿ, ಸಂತೃಪ್ತಿ.ಎಸ್ ವಂದಿಸಿದರು. ವರುಣ್ ಕಾರ್ಯಕ್ರಮ ನಿರ್ವಹಿಸಿದರು.