ಕೇರಳವು ಮೊದಲಿಂದಲೂ ಸಾರಿಗೆ ವ್ಯವಸ್ಥೆ ಮತ್ತು ಅಲ್ಲಿನ ಉತ್ತಮ ರಸ್ತೆಗಳಿಗೆ ಹೆಸರುವಾಸಿ. ಇದಕ್ಕೆ ಅಪವಾದವೆಂಬಂತೆ ಒಳಪ್ರದೇಶಗಳಲ್ಲಿ ಕೆಲವು ಹೊಂಡಮಯ ರಸ್ತೆಗಳೂ ಇವೆ. ಆದರೆ ಅದು ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ತುಂಬಾ ಕಡಿಮೆ.
ದಕ್ಷಿಣ ಕನ್ನಡ ಪುತ್ತೂರು, ವಿಟ್ಲ ಮಾರ್ಗವಾಗಿ ಹೋಗುತ್ತಿರುವಾಗ ಅಡ್ಕಸ್ಥಳದಿಂದ ಚೆರ್ಕಳದ ರಸ್ತೆ ಉತ್ತಮ ಗುಣಮಟ್ಟವನ್ನು ಹೊಂದಿದೆ. ರಸ್ತೆಗಳಲ್ಲಿ ಹೊಂಡಗಳೇ ಬಹಳ ಅಪರೂಪ. ಇದಕ್ಕೆ ಅವರನ್ನು ಅಭಿನಂದಿಸಬೇಕು.
ಆದರೆ ರಸ್ತೆಗಳ ಬದಿಯಲ್ಲಿ ಇಕ್ಕೆಲಗಳಲ್ಲಿಯೂ ನೋಡುವುದಕ್ಕೆ ಹೋಗಬೇಡಿ. ನೀವು ದ್ವಿಚಕ್ರ ವಾಹನಗಳಲ್ಲಿ ಹೋಗುವುದಾದರೆ ನಿಮಗೆ ಹಲವಾರು ದೃಶ್ಯಗಳು ಕಾಣಸಿಗುತ್ತವೆ. ವಾಸ್ತವವಾಗಿ ರಸ್ತೆ ಚೆನ್ನಾಗಿದ್ದರೂ ರಸ್ತೆಬದಿಯನ್ನು ಹೊಲಸು ಮಾಡುವವರಿಗೆ ಏನೆನ್ನಬೇಕು?
ಅಡ್ಕಸ್ಥಳದಿಂದ ಸಂಚರಿಸುವಾಗ ಎಡನೀರು ವರೆಗೂ ನಿಮಗೆ ಅಲಲ್ಲಿ ಕಸದ ರಾಶಿಗಳನ್ನು ರಸ್ತೆ ಬದಿಯಲ್ಲಿ ಎಸೆದಿರುವುದು ಕಂಡುಬರುತ್ತದೆ. ಮಾಂಸದ ಅಂಗಡಿಗಳ ತ್ಯಾಜ್ಯಗಳು ಇದರಲ್ಲಿ ಸಿಂಹಪಾಲು. ಮಾಂಸದ ತ್ಯಾಜ್ಯಗಳನ್ನು ಗೋಣಿಗಳಲ್ಲಿ ತುಂಬಿಸಿ ಎಸೆಯಲಾಗಿದೆ. ಇದೆಲ್ಲಾ ರಾತ್ರಿಯ ಹೊತ್ತಿನಲ್ಲಿ ನಡೆಯುವ ಕಾರುಬಾರು.
ಎಲ್ಲಿ ಜನಸಂಚಾರ ಇಲ್ಲವೋ ಅಂತಹ ಪ್ರದೇಶದಲ್ಲಿ ಈ ಕಸದ ರಾಶಿಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಪ್ರದೇಶದಲ್ಲಿ ಸಂಚರಿಸುವಾಗ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿಯಿದೆ. ಇಂತಹ ತ್ಯಾಜ್ಯಗಳನ್ನು ಹಲವಾರು ಕಡೆಗಳಲ್ಲಿ ಎಸೆಯಲಾಗಿದೆ. ಕೆಳಗಿನ ಕೆಲವು ಸ್ಯಾಂಪಲ್ಗಳನ್ನು ನೋಡಿ.
ಈ ಪ್ರದೇಶ ಉಕ್ಕಿನಡ್ಕದಿಂದ ಸ್ವಲ್ಪ ಮುಂದೆ ಪರ್ತಿಕ್ಕಾರಿಗೆ ಇಳಿಯುವ ಸಮೀಪದಲ್ಲೇ ಇದೆ. ಇಲ್ಲಿ ನಿಜವಾಗಿಯೂ ‘ತ್ಯಾಜ್ಯ ವಸ್ತುಗಳನ್ನು ಬಿಸಾಡಬೇಡಿ’ ಎಂಬ ಬೋರ್ಡ್ ಕೂಡ ಹಾಕಿದ್ದಾರೆ. ಆದರೂ ಇಲ್ಲೇ ತಂದು ಎಸೆಯುತ್ತಾರೆ. ಯಾಕೆಂದರೆ ಕಸ ಎಸೆಯುವವರಿಗೆ ಇದೊಂದು ಸೇಫ್ ಜಾಗ!
ಇದು ಬದಿಯಡ್ಕದ ಬೀಜಂತಡ್ಕ ಹಾಗೂ ನೆಕ್ರಾಜೆಯ ನಡುವೆ. ಇಲ್ಲಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸದ ರಾಶಿ, ತ್ಯಾಜ್ಯ ತುಂಬಿದ ಗೋಣಿಗಳು ಕಾಣಸಿಗುತ್ತವೆ.
ಈ ಪ್ರದೇಶ ಇರುವುದು ಎದುರ್ತೋಡಿನಿಂದ ಮುಂದೆ ಎಡನೀರಿಗೆ ಹೋಗುವಾಗ ಇಳಿಜಾರಾದ ತಿರುವು ಪ್ರದೇಶ. ಇಲ್ಲಿ ಕೂಡಾ ನಾಮಫಲಕವನ್ನು ಹಾಕಲಾಗಿದೆ. ಬಹುಶಃ ಯಾವುದೋ ದೈವಸಾನ್ನಿಧ್ಯ ಇರುವ ಪ್ರದೇಶ ಎಂದು ಬೋರ್ಡ್ ಹಾಕಿರಬಹುದು. ಆದರೂ ಅದರ ಬುಡದಲ್ಲಿಯೇ ತ್ಯಾಜ್ಯ ತುಂಬಿದ ಲಕೋಟೆಗಳನ್ನು ತಂದು ಸುರಿದಿದ್ದಾರೆ.
ಇದು ಕೇವಲ ಒಂದೆರಡು ಉದಾಹರಣೆಗಳಷ್ಟೇ. ಇಂತಹವು ಅಲ್ಲಲ್ಲಿ ನಮಗೆ ಕಾಣಸಿಗುತ್ತವೆ. ಇಷ್ಟು ಒಳ್ಳೆಯ ರಸ್ತೆಯ ಇಕ್ಕೆಲಗಳನ್ನು ಯಾಕೆ ಹೀಗೆ ಹಾಳು ಮಾಡುತ್ತಾರೆ ಎಂಬುದನ್ನು ಯೋಚಿಸಿ ಖೇದವಾಗುತ್ತದೆ. ನಾವು ಬರೀ ಆಡಳಿತವನ್ನು, ಸರಕಾರವನ್ನು ದೂರಿದರೆ ಸಾಲದು. ಉತ್ತಮ ನಾಗರಿಕರಾಗಿ ಪರಿಸರವನ್ನು ಸುವ್ಯವಸ್ಥಿತವಾಗಿ, ಸ್ವಚ್ಛವಾಗಿ ಇಡುವ ಮನೋಸ್ಥಿತಿ ನಮ್ಮಲ್ಲಿರಬೇಕು.
ಹನ್ನೊಂದನೆಯ ವರ್ಷದ ಸರ್ಪಂಗಳ ಯಕ್ಷೋತ್ಸವ ಮತ್ತು ಸರ್ಪಂಗಳ ಪ್ರಶಸ್ತಿ ಪ್ರದಾನ ಸಮಾರಂಭವು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಇಂದು, ಅಕ್ಟೋಬರ್ 15, 2022 ರಂದು ರಾತ್ರಿ 9.00 ಗಂಟೆಗೆ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಜರಗಲಿದೆ.
ಸಂಜೆ 6.00 ರಿಂದ 11.00ರವರೆಗೆ ‘ಹನುಮೋದ್ಭವ ಮಾರಣಾಧ್ವರ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.
2022ನೆಯ ಸಾಲಿನ‘ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ಯನ್ನು ಪಿ.ಟಿ. ಜಯರಾಮ ಭಟ್ ಅವರಿಗೆ ನೀಡಲಾಗುತ್ತಿದೆ. ಪ್ರಸಿದ್ಧ ಪದ್ಯಾಣ ಮನೆತನದ ಜಯರಾಮ ಭಟ್ಟರು ಸುಮಾರು ಮೂರು ದಶಕಗಳ ಕಾಲ ವಿವಿಧ ಮೇಳಗಳಲ್ಲಿ ಭಾಗವತರಾಗಿ, ಮದ್ದಲೆವಾದಕರಾಗಿ ತಿರುಗಾಟ ನಡೆಸಿದ ಅನುಭವ ಉಳ್ಳವರು.
ಈ ವರ್ಷದ ‘ಸರ್ಪಂಗಳ ಕಲಾಸೇವಾ ಪುರಸ್ಕಾರ’ವನ್ನು ಕಟೀಲು ಮೇಳದಲ್ಲಿ ಸುಮಾರು ಐದು ದಶಕಗಳ ಕಾಲ ನೇಪಥ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ ಪುತ್ತು ನಾಯ್ಕ ಬಸಕೋಡಿ ಇವರಿಗೆ ನೀಡಲಾಗುತ್ತಿದೆ.
ಇಂದು ಒಂದು ಅತ್ಯುತ್ತಮ ಯಕ್ಷಗಾನದ ನಿರೀಕ್ಷೆಯಲ್ಲಿ ಯಕ್ಷಗಾನದ ಅಭಿಮಾನಿಗಳಿದ್ದಾರೆ. ಒಂದನೇ ಹಾಗೂ ಎರಡನೇ ಪ್ರಸಂಗದಲ್ಲಿ ನುರಿತ, ಸುಪ್ರಸಿದ್ಧ ಕಲಾವಿದರೇ ಇದ್ದಾರೆ. ಎರಡನೇ ಪ್ರಸಂಗ ‘ಮಾರಣಾಧ್ವರ’ ಉತ್ತಮ ಪ್ರದರ್ಶನ ಕಾಣಲಿದೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಅದರಲ್ಲೂ ಸುಣ್ಣಂಬಳರ (ಹನುಮಂತ) ಮತ್ತು ಸುಬ್ರಾಯ ಹೊಳ್ಳರ (ಇಂದ್ರಜಿತು) ಅತ್ಯುತ್ತಮ ನಿರ್ವಹಣೆಯನ್ನು ಕಾಣುವುದಂತೂ ಖಂಡಿತ.
ಇನ್ನೂ ಒಂದು ಕುತೂಹಲದ ಅಂಶವೆಂದರೆ ಗುಂಡಿಮಜಲು ಗೋಪಾಲ ಭಟ್ಟರ ಲಕ್ಷ್ಮಣ. ಕಲಾರಸಿಕರು ಪ್ರದರ್ಶನದ ಸಮಯದ ನಿರೀಕ್ಷೆಯಲ್ಲಿದ್ದಾರೆ. ಎಲ್ಲಾ ವಿವರಗಳಿಗೆ ಚಿತ್ರ ನೋಡಿ
ತಿರುವನಂತಪುರಂ: ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಆತ್ಮಕಥೆಯಿಂದ ಹೆಚ್ಚಿನ ಮಾಹಿತಿ ಹೊರಬಿದ್ದಿದೆ.
ಐಎಎಸ್ ಅಧಿಕಾರಿ ಶಿವಶಂಕರ್ ಅವರು ಸ್ವಪ್ನಾ ಜೊತೆಗಿನ ಸಂಬಂಧದ ಬಗ್ಗೆ ಪತ್ನಿಗೆ ಹೇಳಿದಾಗ ಅವರು ಯಾವುದೇ ಚಿಂತೆಯಿಲ್ಲದೆ ಶುಭ ಹಾರೈಸಿದರು ಎಂದು ಸ್ವಪ್ನಾ ಬಹಿರಂಗಪಡಿಸಿದ್ದಾರೆ.
‘ನನ್ನ ಜೊತೆಗಿನ ಸಂಬಂಧದ ಬಗ್ಗೆ ಐಎಎಸ್ ಅಧಿಕಾರಿ ಶಿವಶಂಕರ್ ಪತ್ನಿಗೆ ಹೇಳಿದಾಗ ಯಾವುದೇ ಸಮಸ್ಯೆ ಇರಲಿಲ್ಲ. ಅವನು (ಶಿವಶಂಕರ್) ನನ್ನಲ್ಲಿ (ಸ್ವಪ್ನಾ) ಕೆಲವು ಗುಣಗಳನ್ನು ಕಂಡಿರಬಹುದು ಎಂದು ಶಿವಶಂಕರ್ ಪತ್ನಿ ಹೇಳಿದ್ದಳು.
ಇದಾದ ನಂತರ ಐಎಎಸ್ ಅಧಿಕಾರಿ ಶಿವಶಂಕರ್ ಮನೆಯಿಂದ ಹೊರಬಂದು ಹೀದರ್ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ಗೆ ಸ್ಥಳಾಂತರಗೊಂಡರು. ನಮ್ಮ ನಂತರದ ಭೇಟಿಗಳೆಲ್ಲಾ ಫ್ಲಾಟ್‌ನಲ್ಲಿಯೇ ನಡೆದವು’ ಎಂದು ಸ್ವಪ್ನಾ ಬರೆದುಕೊಂಡಿದ್ದಾರೆ.
ಕೋಯಿಕ್ಕೋಡು: ವಿಲಕ್ಷಣ ಅಪಘಾತದಲ್ಲಿ, ಮೂರು ವರ್ಷದ ಬಾಲಕಿ ತನ್ನ ತಾಯಿ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾಳೆ.
ಶುಕ್ರವಾರ ಬೆಳಗ್ಗೆ ಇಲ್ಲಿನ ಕೊಡುವಳ್ಳಿಯಲ್ಲಿರುವ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕಿ ಅಪಘಾತಕ್ಕೀಡಾಗಿದ್ದಾಳೆ.
ಮೃತರನ್ನು ಈಂಗಪುಳ ಮೂಲದ ನಜೀರ್ ಮತ್ತು ನೆಲ್ಲಂಕಂಡಿ ಮೂಲದ ಲುಬ್ನಾ ಫೆಬಿನಿ ಅವರ ಪುತ್ರಿ ಮರಿಯಂ ನಜೀರ್ ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ ಮಗುವಿನ ತಾಯಿ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದಿದೆ. ಕೂಡಲೇ ಬಾಲಕಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ನಂತರ ಮುಂದಿನ ಕ್ರಮಕ್ಕಾಗಿ ಮೃತದೇಹವನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.
ನಾಳೆ ದಿನಾಂಕ 15.10.2022ರಂದು ಶನಿವಾರ ಸಂಜೆ 6 ಘಂಟೆಗೆ ಸರಿಯಾಗಿ ಮೂಡಲಪಾಯ ಯಕ್ಷಗಾನ – ಶ್ರೀ ದೇವಿ ಮಹಾತ್ಮೆ ಪ್ರದರ್ಶನಗೊಳ್ಳಲಿದೆ.
ಮಂಡ್ಯ, ಹಾಸನ ಮತ್ತು ತುಮುಕೂರು ಉತ್ಸವವು, ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಅಂಗವಾಗಿ ನಡೆಯಲಿದೆ.
ಕಾರ್ಯಕ್ರಮವು ಶನಿವಾರ ಮತ್ತು ಭಾನುವಾರ ಎರಡುದಿನ ನಡೆಯಲಿದ್ದು ನಾಳೆ ದಿನಾಂಕ 15.10.2022ರಂದು ಸಂಜೆ 6 ಘಂಟೆಗೆ ಸರಿಯಾಗಿ ಶ್ರೀ ದೇವಿ ಮಹಾತ್ಮೆ ಎಂಬ ಮೂಡಲಪಾಯ ಯಕ್ಷಗಾನ ಪ್ರದರ್ಶನವು ದೆಹಲಿ ಕರ್ನಾಟಕ ಸಭಾಂಗಣದಲ್ಲಿ ನಡೆಯಲಿದೆ.
ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರಿಯ ವಲಯ ಮತ್ತು ಶ್ರೀವಿದ್ಯಾರಣ್ಯ ಆವಾಸ ವಿದ್ಯಾಲಯ, ಹೈದರಾಬಾದ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಒಳಗೊಂಡ ದಕ್ಷಿಣ ಮಧ್ಯ ಕ್ಷೇತ್ರಿಯ ಮಟ್ಟದ ಗಣಿತ-ವಿಜ್ಞಾನ ಮೇಳವು ಹೈದರಾಬಾದಿನ ಶ್ರೀ ವಿದ್ಯಾರಣ್ಯ ಆವಾಸ ವಿದ್ಯಾಲಯದಲ್ಲಿ ಅಕ್ಟೋಬರ್11ರಿಂದ ಅಕ್ಟೋಬರ್13ರ ವರೆಗೆ ನಡೆಯಿತು.
ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಾದ ಶಮನ್. ಎನ್ ಹಾಗೂ ಪ್ರೀತಿ.ಪಿ.ಪ್ರಭು ಭಾಗವಹಿಸಿರುತ್ತಾರೆ.
14ರ ವಯೋಮಾನದ ಬಾಲವರ್ಗದ ವಿಭಾಗದ ಗಣಿತ ಮಾದರಿ ತಯಾರಿಯಲ್ಲಿ 7ನೇ ತರಗತಿಯ ಶಮನ್. ಎನ್ (ಶ್ರೀ ನಿತ್ಯಾನಂದ.ಕೆ ಮತ್ತು ಶ್ರೀಮತಿ ಸಂಧ್ಯಾ.ಕೆ ಇವರ ಪುತ್ರ) ಪ್ರಥಮ ಸ್ಥಾನ ಪಡೆದು ಉತ್ತರ ಪ್ರದೇಶದ ಪ್ರಯಾಗ್‍ರಾಜ್ ನಲ್ಲಿ ನವೆಂಬರ್ 3ರಂದು ನಡೆಯಲಿರುವ ರಾಷ್ಟ್ರೀಯ ಮಟ್ಟದ ಗಣಿತ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುತ್ತಾರೆ.
7ನೇ ತರಗತಿಯ ಪ್ರೀತಿ.ಪಿ.ಪ್ರಭು (ಶ್ರೀ ಪುಂಡಲೀಕ ಪ್ರಭು ಮತ್ತು ನಾಗಮಣಿ ಪ್ರಭು ಇವರ ಪುತ್ರಿ) ಗಣಿತ ಪ್ರಯೋಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳು ತಮ್ಮ ಮಾದರಿಗಳನ್ನು ಶಾಲಾ ಗಣಿತ ಮತ್ತು ವಿಜ್ಞಾನ ಶಿಕ್ಷಕಿಯರ ಮಾರ್ಗದರ್ಶನದಲ್ಲಿ ತಯಾರಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಒಡಿಶಾದ ಕಲಹಂಡಿ ಜಿಲ್ಲೆಯ ಅರ್ಚನಾ ನಾಗ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ತಮ್ಮ ಖಾಸಗಿ ಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಗಣ್ಯ ವ್ಯಕ್ತಿಗಳನ್ನು ಬೆದರಿಸಿ ಸುಲಿಗೆ ಮಾಡಿದ ಆರೋಪ ಹೊರಿಸಿದ್ದಾರೆ. ಒಡಿಶಾದ ಕಲಹಂಡಿ ಜಿಲ್ಲೆಯ ಮಹಿಳೆಯನ್ನು ಅಕ್ಟೋಬರ್ 6 ರಂದು ಬಂಧಿಸಲಾಯಿತು ಮತ್ತು ಸುಲಿಗೆ ಆರೋಪ ಹೊರಿಸಲಾಯಿತು.
ಅರ್ಚನಾ ನಾಗ್ (26) ಅವರು ರಾಜಕಾರಣಿಗಳು, ಉದ್ಯಮಿಗಳು ಮತ್ತು ಚಲನಚಿತ್ರ ನಿರ್ಮಾಪಕರು ಸೇರಿದಂತೆ ರಾಜ್ಯದ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳಿಂದ ತಮ್ಮ ಆತ್ಮೀಯ ಕ್ಷಣಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾಳೆ.
‘ಬ್ಲ್ಯಾಕ್‌ಮೇಲರ್’ ಯಾರು?:
ಅರ್ಚನಾ ಕಲಹಂಡಿಯ ಲಾಂಜಿಗಢದಲ್ಲಿ ಜನಿಸಿದರು ಮತ್ತು ಕೆಸಿಂಗದಲ್ಲಿ ಬೆಳೆದರು. 2015ರಲ್ಲಿ ಭುವನೇಶ್ವರಕ್ಕೆ ಬಂದಿದ್ದಳು. ಪೊಲೀಸರ ಪ್ರಕಾರ, ಅರ್ಚನಾ ಆರಂಭದಲ್ಲಿ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ನಂತರ ಬ್ಯೂಟಿ ಪಾರ್ಲರ್‌ಗೆ ಸೇರಿಕೊಂಡರು ಅಲ್ಲಿ ಅವರು ಜಗಬಂಧು ಚಂದ್ ಅವರನ್ನು ಭೇಟಿಯಾಗಿ 2018 ರಲ್ಲಿ ಅವರನ್ನು ವಿವಾಹವಾದರು.
ಅವರು ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವಾಗ ಸೆಕ್ಸ್ ರಾಕೆಟ್ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆಕೆಯ ಪತಿ ಜಗಬಂಧು ಅವರು ಹೊಟೇಲ್ ಶೋ ರೂಂ ನಡೆಸುತ್ತಿದ್ದರು ಮತ್ತು ಶ್ರೀಮಂತ ವ್ಯಕ್ತಿಗಳ ಪರಿಚಯವಿದ್ದರು. ಕೆಲವು ಶಾಸಕರು ಸೇರಿದಂತೆ ಪ್ರಭಾವಿ ವ್ಯಕ್ತಿಗಳೊಂದಿಗೆ ದಂಪತಿಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದಕ್ಕೆ ಕಾರಣವಾಗಿವೆ.
ಅರ್ಚನಾ ಅವರು ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿದರು ಮತ್ತು ಅವರಿಗೆ ಸ್ತ್ರೀಯರನ್ನು ಒದಗಿಸಿದರು. ಆಮೇಲೆ ಹುಡುಗಿಯರೊಂದಿಗಿನ ಈ ಜನರ ಚಿತ್ರಗಳನ್ನು ತೆಗೆದುಕೊಂಡು ನಂತರ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರ ನಿರ್ಮಾಪಕರೊಬ್ಬರು ನಯಾಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅರ್ಚನಾ ಅವರು ಕೆಲವು ಹುಡುಗಿಯರೊಂದಿಗೆ ತನ್ನ ಚಿತ್ರವನ್ನು ತೋರಿಸಿದ ನಂತರ ಆತನಿಂದ 3 ಕೋಟಿ ರೂ. ಗೆ ಬೇಡಿಕೆಯಿಟ್ಟಿದ್ದಳು.
ಅರ್ಚನಾ ತನ್ನನ್ನು ತನ್ನ ದಂಧೆಗೆ ಬಳಸಿಕೊಂಡಿದ್ದಾಳೆ ಎಂದು ಹುಡುಗಿಯೊಬ್ಬಳು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. 2018 ರಿಂದ 2022 ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ದಂಪತಿಗಳು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸಿನ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಲು ಪೊಲೀಸರು ಆರ್ಥಿಕ ಅಪರಾಧ ವಿಭಾಗವನ್ನು ಕೋರಿದ್ದಾರೆ. ಅರ್ಚನಾ ನಾಗ್ ಆಸ್ತಿಗಳಲ್ಲಿ ಆಮದು ಮಾಡಿದ ಒಳಾಂಗಣ ಅಲಂಕಾರಗಳು, ಐಷಾರಾಮಿ ಕಾರುಗಳು, ನಾಲ್ಕು ಉನ್ನತ ತಳಿ ನಾಯಿಗಳು ಮತ್ತು ಬಿಳಿ ಕುದುರೆಯೊಂದಿಗೆ ಅರಮನೆಯ ಮನೆ ಸೇರಿವೆ.
ಭುವನೇಶ್ವರ್ ಡಿಸಿಪಿ ಪ್ರತೀಕ್ ಸಿಂಗ್, ಈ ಸಂಬಂಧ ಅರ್ಚನಾ ವಿರುದ್ಧ ಕೇವಲ ಎರಡು ಪ್ರಕರಣಗಳನ್ನು ಮಾತ್ರ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇತರ ಸಂತ್ರಸ್ತರು ಆಕೆಯ ವಿರುದ್ಧ ದೂರು ನೀಡಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು. ಸದ್ಯ ಅರ್ಚನಾ ಅವರ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಬ್ಲ್ಯಾಕ್‌ಮೇಲ್ ಪ್ರಕರಣವು ರಾಜಕೀಯ ಕೋನವನ್ನು ಸಹ ಹೊಂದಿದೆ ಎಂದು ಬಿಜೆಪಿ ಭುವನೇಶ್ವರ ಘಟಕದ ಅಧ್ಯಕ್ಷ ಬಾಬು ಸಿಂಗ್ ಅವರು 18 ಶಾಸಕರು ಮತ್ತು ಸಚಿವರು ಸೇರಿದಂತೆ 25 ರಾಜಕೀಯ ನಾಯಕರು, ಬಿಜೆಡಿಗೆ ಸೇರಿದ ಹೆಚ್ಚಿನವರು ಅರ್ಚನಾ ಜಾಲದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಆಡಳಿತಾರೂಢ ಬಿಜೆಡಿ ಶಾಸಕರು ಮತ್ತು ಸಚಿವರೊಂದಿಗಿನ ಅವರ ಸಂಪರ್ಕವನ್ನು ಬಹಿರಂಗಪಡಿಸಿದರೆ, ಒಡಿಶಾದಲ್ಲಿ 22 ವರ್ಷದ ನವೀನ್ ಪಟ್ನಾಯಕ್ ಸರ್ಕಾರ ಪತನಕ್ಕೆ ಕಾರಣವಾಗಬಹುದು ಎಂದು ಕಾಂಗ್ರೆಸ್ ಶಾಸಕಿ ಎಸ್ ಎಸ್ ಸಲೂಜಾ ಹೇಳಿದ್ದಾರೆ. ಏತನ್ಮಧ್ಯೆ, ಆಡಳಿತಾರೂಢ ಬಿಜೆಡಿ ಆರೋಪಗಳಿಗೆ ಪ್ರತಿಕ್ರಿಯಿಸಿದೆ ಮತ್ತು ಈ ವಿಷಯದಲ್ಲಿ ತನ್ನ ನಾಯಕರು ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ನೀಡುವಂತೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಕೇಳಿದೆ.
ಅರ್ಚನಾ ನಾಗ್ ಅವರ ಕಥೆ ಮತ್ತು ಅವರು ಚಿಂದಿ ಬಟ್ಟೆಯಿಂದ ಶ್ರೀಮಂತಿಕೆಗೆ ಹೇಗೆ ಏರಿದರು ಎಂಬುದು ಒಡಿಯಾ ಚಲನಚಿತ್ರ ನಿರ್ಮಾಪಕ ಶ್ರೀಧರ್ ಮಾರ್ಥಾಗೆ ಸ್ಫೂರ್ತಿ ನೀಡಿದೆ. ಶ್ರೀಧರ್ ಅವರ ಜೀವನ ಚರಿತ್ರೆಯನ್ನು ಚಿತ್ರ ಮಾಡುವ ಯೋಜನೆ ಇದೆ ಎಂದರು.
ಜ್ಞಾನವಾಪಿ ಮಸೀದಿ ಸಮಸ್ಯೆಯ ಬಗ್ಗೆ ಇದೀಗ ವಾರಣಾಸಿ ನ್ಯಾಯಾಲಯ ತೀರ್ಪು ನೀಡಿದೆ.
ಮಸೀದಿ ಸಂಕೀರ್ಣದಲ್ಲಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ಮತ್ತು ವೈಜ್ಞಾನಿಕ ತನಿಖೆಯನ್ನು ಕೋರಿ ಹಿಂದೂ ಕಡೆಯ ಬೇಡಿಕೆಯನ್ನು ವಾರಣಾಸಿ ನ್ಯಾಯಾಲಯ ತಿರಸ್ಕರಿಸಿದೆ.
ಈ ಬೇಡಿಕೆಯನ್ನು ವಾರಣಾಸಿ ನ್ಯಾಯಾಲಯವು ಅಮಾನ್ಯಗೊಳಿಸಿದೆ. ಈ ಮೊದಲು ಹಿಂದೂ ಮುಖಂಡರು ಸಲ್ಲಿಸಿದ್ದ ಅರ್ಜಿಯ ಮೇಲೆ ವಾರಣಾಸಿ ನ್ಯಾಯಾಲಯವು ವಾದ ಪ್ರತಿವಾದಗಳನ್ನು ಆಲಿಸಿ ತನ್ನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಇದೀಗ ಬಂದ ತೀರ್ಪಿನ ಪ್ರಕಾರ ಮಸೀದಿ ಸಂಕೀರ್ಣದಲ್ಲಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ಮತ್ತು ವೈಜ್ಞಾನಿಕ ತನಿಖೆಯನ್ನು ಕೋರಿ ಹಿಂದೂ ಕಡೆಯ ಬೇಡಿಕೆಯನ್ನು ವಾರಣಾಸಿ ನ್ಯಾಯಾಲಯ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
Gyanvapi Mosque issue: Varanasi Court rejects Hindu side's demand seeking carbon dating and scientific investigation of 'Shivling' in the mosque complex#UttarPradeshpic.twitter.com/UdFFgZz3Bj
Puttur: Pavitra.G, a first year MBA student of Vivekananda College of Engineering and Technology, Puttur will participate in the 61st Open National Athletic Championship.
She will be represent the state of Karnataka in the triple jump event at the National Games which will be held from October 15 to 19 at Kanteerava Stadium, Bangalore.
She won the gold medal in the recently held state level Dussehra sports meet with a new meet record.
Principal of the college Dr. Mahesh Prasanna. K said that she is doing well under the guidance of Balachandra Gowda Bharthikumeru, Director of Physical Education of the college.