Monday, March 16, 2026
Home Blog Page 130

ಶ್ರದ್ಧಾ ಅವರ ಮೃತದೇಹದ ಭಾಗಗಳು ಫ್ರಿಡ್ಜ್‌ನಲ್ಲಿರುವಾಗಲೇ ಮನೆಗೆ ಬೇರೆ ಬೇರೆ ಹುಡುಗಿಯರನ್ನು ಕರೆತಂದ ಅಫ್ತಾಬ್

0

ಅಫ್ತಾಬ್ ಅಮೀನ್ ಪೂನಾವಾಲಾ, ತನ್ನ ಲಿವ್-ಇನ್ ಪಾಲುದಾರ ಶ್ರದ್ಧಾಳನ್ನು ಕೊಂದ ನಂತರ, ಡೇಟಿಂಗ್ ಅಪ್ಲಿಕೇಶನ್ ಮೂಲಕ ತನ್ನ ಮನೆಗೆ ಇನ್ನೊಬ್ಬ ಹುಡುಗಿಯನ್ನು ಕರೆತಂದನು. ಆಫ್ತಾಬ್ ಬಾಲಕಿಯನ್ನು ಆಹ್ವಾನಿಸುವ ಮೊದಲು ಶ್ರದ್ಧಾಳ ದೇಹದ ಭಾಗಗಳನ್ನು ಕಬೋರ್ಡ್ ಮತ್ತು ರೆಫ್ರಿಜರೇಟರ್‌ನಲ್ಲಿ ಮರೆಮಾಡಿದ್ದ.

ಶ್ರದ್ಧಾಳನ್ನು ಕೊಂದ 15-20 ದಿನಗಳ ನಂತರ, ಅಫ್ತಾಬ್ ಪೂನಾವಾಲಾ ಅದೇ ಆ್ಯಪ್‌ನಲ್ಲಿ ಮತ್ತೊಬ್ಬ ಮಹಿಳೆಯನ್ನು ಭೇಟಿಯಾಗಿ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಇಂದು ತಿಳಿಸಿವೆ. ಶ್ರದ್ಧಾಳ ಶವದ ಅವಶೇಷಗಳು ಅಪಾರ್ಟ್‌ಮೆಂಟ್‌ನಲ್ಲಿಯೇ ಇರುವಾಗಲೇ ಆತ ಮಹಿಳೆಯನ್ನು ಆಗಾಗ್ಗೆ ಮನೆಗೆ ಕರೆದುಕೊಂಡು ಬರುತ್ತಿದ್ದ.

ಅಪಾರ್ಟ್‌ಮೆಂಟ್‌ನಲ್ಲಿ ಶ್ರದ್ಧಾ ಅವರ ದೇಹದ ಭಾಗಗಳಿದ್ದಾಗ ಹೆಚ್ಚಿನ ಮಹಿಳೆಯರನ್ನು ಮನೆಗೆ ಕರೆತಂದಿದ್ದಾರಾ ಮತ್ತು ಅವರಲ್ಲಿ ಯಾರಾದರೂ ಕೊಲೆಗೆ ಪ್ರಚೋದನೆ ನೀಡಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಫೋರೆನ್ಸಿಕ್ ತನಿಖೆಯ ಸಮಯದಲ್ಲಿ ಡಿಎನ್‌ಎ ಮಾದರಿಯನ್ನು ತಪ್ಪಿಸುವ ಸಲುವಾಗಿ ರಕ್ತದ ಕಲೆಗಳನ್ನು ತೆಗೆದುಹಾಕಲು ಆರೋಪಿಯು ಸಲ್ಫರ್ ಹೈಪೋಕಲೋರಿಕ್ ಆಸಿಡ್ ಅನ್ನು ಅಂತರ್ಜಾಲದಲ್ಲಿ ಕಲಿತು ಬಳಸಿದ್ದನು.

ಹೊಸದಾಗಿ ಖರೀದಿಸಿದ 300-ಲೀಟರ್ ರೆಫ್ರಿಜರೇಟರ್‌ನಲ್ಲಿ ಅದನ್ನು ಸಂಗ್ರಹಿಸುವ ಮೊದಲು ಆಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದನು. ನಂತರ, 16 ದಿನಗಳ ಅವಧಿಯಲ್ಲಿ ದೆಹಲಿ ಅರಣ್ಯ ಪ್ರದೇಶದಲ್ಲಿ ಆಕೆಯ ದೇಹದ ಭಾಗಗಳನ್ನು ಎಸೆದಿದ್ದಾನೆ.

28 ವರ್ಷದ ಅಫ್ತಾಬ್ ಪೂನಾವಾಲಾ ಮತ್ತು 26 ವರ್ಷದ ಶ್ರದ್ಧಾ ವಾಕರ್ ಮೂರು ವರ್ಷಗಳ ಕಾಲ ಒಟ್ಟಿಗೆ ಇದ್ದರು, ಮುಂಬೈನಲ್ಲಿ ಪ್ರಾರಂಭವಾದ ಪ್ರಣಯವು ದೆಹಲಿಯಲ್ಲಿ ಭೀಕರ ಕೊಲೆಯಲ್ಲಿ ಕೊನೆಗೊಂಡಿತು.

ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. “ಅವನು ಯಾರೊಂದಿಗೂ ಬೆರೆಯುತ್ತಿರಲಿಲ್ಲ, ಯಾವಾಗಲೂ ದೂರ ಇರುತ್ತಿದ್ದನು. ಅವರ ಮನೆಯಲ್ಲಿ ಪಾರ್ಟಿಗಳು ನಡೆಯುತ್ತಿದ್ದವು, ಆದರೆ ಯಾವಾಗಲೂ ಗೇಟ್‌ಗಳನ್ನು ಮುಚ್ಚಲಾಗುತ್ತಿತ್ತು.

ಎರಡು-ಮೂರು ವಾರಗಳ ಹಿಂದೆಯೂ ಸಹ ಅನೇಕ ಮಹಿಳೆಯರು ಅವನ ಮನೆಗೆ ಬರುತ್ತಿದ್ದರು. 3-4 ದಿನಗಳ ಅವಧಿಯಲ್ಲಿ ಐದಾರು ಮಹಿಳೆಯರು ಒಳಗೆ ಬರುತ್ತಿದ್ದರು” ಎಂದು ನೆರೆಯ ಮಹಿಳೆಯೊಬ್ಬರು ಹೇಳಿದರು.

ಪಾರಂಪರಿಕವಾದ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ – ಡಾ. ಎಚ್. ಎಸ್. ಬಲ್ಲಾಳ್

0

ಯಕ್ಷಗಾನ ಕೇಂದ್ರ ಇಂದ್ರಾಳಿ, ಮಾಹೆ, ಕನ್ನಡ ಮತ್ತು  ಸಂಸ್ಕೃತಿ  ಇಲಾಖೆ ಸಹಯೋಗದಲ್ಲಿ ದಿನಾಂಕ 12.11.2022 ಶನಿವಾರದಂದು ಯಕ್ಷಗಾನ ಕೇಂದ್ರ, ಇಂದ್ರಾಳಿ ಇಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್  ಅವರು ಕೇಂದ್ರವು  ಆರಂಭದಿ೦ದಲೂ ಎಂ.ಜಿ.ಎ0 ಕಾಲೇಜಿನ ಭಾಗವಾಗಿತ್ತು.

ಇತ್ತೀಚೆಗೆ ಮಾಹೆ ಅದರ ಪೂರ್ಣಜವಾಬ್ದಾರಿಯನ್ನು ವಹಿಸಿಕೊಂಡಿದೆ. ಯಕ್ಷಗಾನ ಚಟುವಟಿಕೆಗಳಿಗೆ ಮಾಹೆ ಸದಾ ಪ್ರೋತ್ಸಾಹ ನೀಡುತ್ತದೆ. ಪಾರಂಪರಿಕವಾದ ಕಲೆ ಮತ್ತು  ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಯಕ್ಷಗಾನದೊಂದಿಗೆ  ಶಿಸ್ತಿನ ಶಿಕ್ಷಣ ಸಿಗುತ್ತಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕೇಂದ್ರದ ಸಲಹಾಸಮಿತಿ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಾಹೆ ಕುಲಪತಿ ಡಾ. ನಾರಾಯಣ ಸಭಾಹಿತ್, ಕನ್ನಡ ಮತ್ತು  ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅತಿಥಿಗಳಾಗಿ ಉಪಸ್ಥಿತರಿದ್ದರು.  

ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಶ್ರೀ ಬಿ. ಭುವನಪ್ರಸಾದ್ ಹೆಗ್ಡೆ, ಶ್ರೀ ಮಂಜುನಾಥ ಮಯ್ಯ ಉಪಸ್ಥಿತರಿದ್ದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಕೇಂದ್ರದ ಸಲಹಾ ಸಮಿತಿ ಸದಸ್ಯ ಮಂಜುನಾಥ ಮಯ್ಯ ವಂದಿಸಿದರು. ಎಂ.ಜಿ.ಎ೦ ಕಾಲೇಜಿನ ಕನ್ನಡ ಪ್ರಾಧ್ಯಾಪಕ ರಾಘವೇಂದ್ರ  ತುಂಗ ಕಾರ್ಯಕ್ರಮ ನಿರೂಪಿಸಿದರು.

ಸಭಾಕಾರ್ಯಕ್ರಮದ ಆರಂಭದಲ್ಲಿ ಕೇಂದ್ರದ ವಿದ್ಯಾರ್ಥಿಗಳು ಯಕ್ಷಗಾನ ಪೂರ್ವರಂಗ ಪ್ರದರ್ಶಿಸಿದರು. ರಾತ್ರಿ ಕೇಂದ್ರದ ವಿದ್ಯಾರ್ಥಿಗಳು, ಕಲಾವಿದರು, ಅತಿಥಿ ಕಲಾವಿದರ ಕೂಡುವಿಕೆಯಲ್ಲಿ  ರುಕ್ಮಾವತಿ ಕಲ್ಯಾಣ ಪ್ರಸಂಗವನ್ನು ಪ್ರಸ್ತುತ ಪಡಿಸಲಾಯಿತು.

ಯಕ್ಷ ಕವಿ ವಾಮನ ಪುರೋಹಿತರ ಸಂಸ್ಮರಣಾ ಕಾರ್ಯಕ್ರಮ – ‘ವೀರ ವೈಷ್ಣವ’ ತಾಳಮದ್ದಳೆ

ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ಕೊಯ್ಯುರು ಆಶ್ರಯದಲ್ಲಿ ಶ್ರೀ ಪಂಚದುರ್ಗ ಯಕ್ಷಗಾನ ಕಲಾಸಂಘ ಕೊಯ್ಯುರು ಸಂಘಟಿಸಿದ ಯಕ್ಷಗಾನ ತಾಳಮದ್ದಲೆ ಪಂಚಾಹ 2022 ರ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಕೀರ್ತಿ ಶೇಷ ಯಕ್ಷ ಕವಿ ವಾಮನ ಪುರೋಹಿತರ ಸಂಸ್ಮರಣಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಕಲಾಪೋಷಕರಾದ ಶ್ರೀಶ ಮುಚ್ಚಿನ್ನಾಯ ಬೆಳ್ತಂಗಡಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಸಂಸ್ಮರಣೆ ಮತ್ತು ಸನ್ಮಾನ: ಸಂಸ್ಮರಣ ನುಡಿಗಳನ್ನಾಡಿದ  ದಿವಾಕರ ಆಚಾರ್ಯ ಗೇರುಕಟ್ಟೆ ಪುರೋಹಿತರಾಗಿ ಮತ್ತು ಯಕ್ಷ ಕವಿಯಾಗಿ ವಾಮನಾಚಾರ್ಯರ ಸಾಧನೆಯನ್ನು ತಿಳಿಸಿ ಅವರ ಪ್ರಕಟಿತ ಕೃತಿಗಳಾದ ವೀರವರ್ಮ ವಿಜಯ ಮತ್ತು ಭಕ್ತಿ ಕುಸುಮಾಂಜಲಿಯು  ಅವರ ಕೃತಿ ರಚನಾ ಸಾಮರ್ಥ್ಯಕ್ಕೆ ಕೈಗನ್ನಡಿಯಾಗಿದೆ ಎಂದರು.

ಹೇಮ ವಿಕ್ರಮ, ಮಾಣಿಕ್ಯ ಪ್ರಭಾ ವಿಜಯ ,ಶ್ರೀದೇವಿ ದುರ್ಗಾಂಬಿಕಾ ಮಹಾತ್ಮೆ, ಸೂರ್ಯದತ್ತ ಚರಿತ್ರೆ, ಶ್ರೀ ಕೊಯ್ಯುರು ಕ್ಷೇತ್ರ ಮಹಾತ್ಮೆ ಮೊದಲಾದ ಅಪ್ರಕಟಿತ ಪ್ರಸಂಗಗಳು ಪ್ರಕಾಶನಗೊಂಡರೆ ಕೊಯ್ಯೂರಿನಂತಹ ಗ್ರಾಮೀಣ ಪ್ರದೇಶವು ಯಕ್ಷಗಾನ ಕ್ಷೇತ್ರಕ್ಕೇ ದೊಡ್ಡ ಕೊಡುಗೆ ನೀಡಿದಂತಾಗುವುದೆಂದು ತಿಳಿಸಿದರು.

ವಾಮನ ಪುರೋಹಿತರ ಧರ್ಮಪತ್ನಿ ಶ್ರೀಮತಿ ಕುಸುಮ ಇವರನ್ನು ದೇವಳದ ಆಡಳಿತ ಮೊಕ್ತೇಸರ ಕೆ.ಬಿ .ಹರಿಶ್ಚಂದ್ರ ಬಳ್ಳಾಲ್ , ಪ್ರಧಾನ ಅರ್ಚಕರಾದ ಅಶೋಕ ಕುಮಾರ್ ಭಾಂಗಿನ್ನಾಯ ಮತ್ತು ಯಕ್ಷಗಾನ ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯ ಕೋಡಿಯೇಲು ಸನ್ಮಾನಿಸಿದರು.

ವಾಮನ ಪುರೋಹಿತರ ಸಹೋದರ ಯಕ್ಷಗಾನ ಕವಿ ಚಂದ್ರಯ್ಯ ಆಚಾರ್ಯ ಪುರೋಹಿತ್ ಇವರನ್ನು ಗೌರವಿಸಲಾಯಿತು. ಪುರುಷೋತ್ತಮ್ ಆಚಾರ್ ಕನ್ನಾಜೆ ಸಂಸ್ಮರಣಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಗಣೇಶ್ ಭಟ್ ಕಾಂತಾಜೆ, ರವೀಂದ್ರನಾಥ ಗೌಡ, ಲೋಕೇಶ್ ಗೌಡ , ಪ್ರಕಾಶ್ ಪುರೋಹಿತ್ ವೇಣೂರು ಶಿವಪ್ರಸಾದ್ ಪುರೋಹಿತ ಸವಣಾಲು ಮತ್ತು ವಾಮನ ಪುರೋಹಿತರ ಬಂಧುಗಳು ಉಪಸ್ಥಿತರಿದ್ದರು. ಶಿಕ್ಷಕ ವಿಜಯಕುಮಾರ್ ಸ್ವಾಗತಿಸಿ ದಿನೇಶ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ವೀರ ವೈಷ್ಣವ ತಾಳಮದ್ದಳೆ ಜರಗಿತು. ಭಾಗವತರಾಗಿ ರಮೇಶ್ ಭಟ್ ಪುತ್ತೂರು ಹಿಮ್ಮೇಳದಲ್ಲಿ ಜನಾರ್ಧನ ತೋಳ್ಪಾಡಿತ್ತಾಯ, ಶ್ರೇಯಸ್ ಪಾಳಂದೆ, ವಿಶ್ವನಾಥ ಗೌಡ ಪಾಂಬೇಲ್ ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್ ,ನಾ. ಕಾರಂತ ಪೆರಾಜೆ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ದಿನೇಶ ಶರ್ಮ ಕೊಯ್ಯುರು ಭಾಗವಹಿಸಿದ್ದರು.

ಹಿರಿಯರ ಕ್ರೀಡಾಕೂಟದಲ್ಲಿ ಸಂಸ್ಕೃತ ಶಿಕ್ಷಕ ಶ್ರೀ ವೆಂಕಟೇಶ್ ಪ್ರಸಾದ್ ಪ್ರಥಮ ಸ್ಥಾನ

0

ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕುಗಳ ಹಿರಿಯರ ಕ್ರೀಡಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸೈಂಟ್ ಜೋಕಿಮ್ಸ್ ಶಿಕ್ಷಣ ಸಂಸ್ಥಾ ಕ್ರೀಡಾಂಗಣದಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ,

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಶಿಕ್ಷಕ ಶ್ರೀ ವೆಂಕಟೇಶ್ ಪ್ರಸಾದ್ ಇವರು 45ರ ವಯೋಮಾನ ವಿಭಾಗದ ಎತ್ತರ ಜಿಗಿತದಲ್ಲಿ ಪ್ರಥಮ, ಉದ್ದ ಜಿಗಿತ ಮತ್ತು ಜಾವೆಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ನವೆಂಬರ್ 27ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈಯವರು ಈ ವಿಷಯವನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

‘ಕನಸುಗಳು’ ಕಾರ್ಯಕ್ರಮ – ಡಾ. ನಾ. ಸೋಮೇಶ್ವರ ಜೊತೆ ವಿಶೇಷ ಸಂವಾದ

0

ಮಗು ಹುಟ್ಟಿದ ಕ್ಷಣದಿಂದ ಹೊಸ ಹೊಸ ವಿಚಾರಗಳನ್ನು ಕಲಿತುಕೊಂಡು ಹೋಗುತ್ತದೆ. ಬಾಲ್ಯದಿಂದಲೇ ಒಳ್ಳೆಯದು ಹಾಗೂ ಕೆಟ್ಟದನ್ನು, ಹಿತಕರ ಮತ್ತು ಅಹಿತಕರವಾದ ಸೂಕ್ಷ್ಮ ವಿಚಾರಗಳನ್ನು ಗ್ರಹಿಸುವ ಸಾಮರ್ಥ್ಯ ಮಗುವಿಗೆ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗಾಗಿ ಸದಾ ಜಾಗೃತರಾಗಬೇಕು ಎಂದು ದೂರದರ್ಶನದ ಚ0ದನ ವಾಹಿನಿಯ ಖ್ಯಾತ ರಸಪ್ರಶ್ನೆ ‘ಥಟ್‌ ಅ0ತ ಹೇಳಿ’ ಕಾರ್ಯಕ್ರಮ ನಿರೂಪಕ ಡಾ. ನಾ. ಸೋಮೇಶ್ವರ ಹೇಳಿದರು.


ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆ ನೀಡುವ ಕನಸುಗಳು-2022 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಹುಟ್ಟಿನಿಂದಲೇ ನಾವು ಬುದ್ದಿವಂತರು. ಆದರೆ ನಾವು ಬೆಳೆಯುವ ಪರಿಸರದ ಆಧಾರದ ಮೇಲೆ ನಮ್ಮಗುಣ, ನಡತೆ ಮತ್ತು ವರ್ತನೆ ಬದಲಾವಣೆಯಾಗುತ್ತದೆ. ಜಂಕ್ ಫುಡ್ ಗಳನ್ನು ತ್ಯಜಿಸಿ, ಆರೋಗ್ಯಕ್ಕೆ ಹಿತಕರವಾದ ಆಹಾರವನ್ನು ಸೇವಿಸಬೇಕು. ವಿದ್ಯಾರ್ಥಿಗಳು ಓದುವುದರ ಜೊತೆಗೆ ಇನ್ನಿತರ ಚಟುವಟಿಕೆಯನ್ನು ರೂಢಿಸಿಕೊಳ್ಳಬೇಕು. ನಿರಂತರವಾಗಿ ಅಧ್ಯಯನ ಮಾಡುವುದರ ಮೂಲಕ ಜ್ಞಾನ ವೃದ್ಧಿ ಮಾಡಿಕೊಳ್ಳಬೇಕು. ವಿದ್ಯಾರ್ಜನೆ ವಿದ್ಯಾರ್ಥಿಯ ಬದುಕಿನ ಏಕೈಕ ನಿರ್ಧಾರವಾಗಬೇಕೆಂದರು.


ಕಾರ್ಯಕ್ರಮದಲ್ಲಿ ವಿವೇಕಾನ0ದ ಆ0ಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್‌ರೈ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿ ಭಾಗ್ಯಶ್ರೀ ನಿರೂಪಿಸಿದರು.

ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

0

ಪುತ್ತೂರು: ಮನುಷ್ಯ ಆರೋಗ್ಯವಂತನಾಗಿ ಇರಬೇಕಾದರೆ ದೈಹಿಕ ಸದೃಢತೆ ಮುಖ್ಯ. ದೈಹಿಕ ಸಾಮರ್ಥ್ಯ ಮಾನಸಿಕ ದೃಢತೆ ಇವೆಲ್ಲವೂ ಶಾರೀರಿಕ ಶಿಕ್ಷಣದ ಮೂಲಕ ಸಾಧ್ಯ. ಹಾಗಾಗಿ ಈಗಿನ ಶೈಕ್ಷಣಿಕ ನೀತಿಯಲ್ಲಿ ಯೋಗ ಹಾಗೂ ಶಾರೀರಿಕ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ ಎಂದು ಜಿಡೆಕಲ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಸೇಸಪ್ಪ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.


ಕ್ರೀಡೆಯಲ್ಲಿ ಎರಡು ವಿಧ ಇದೆ. ಒಂದು ಆಡಿ ಅನುಭವಿಸುವುದು ಇನ್ನೊಂದು ನೋಡಿ ಅನುಭವಿಸುವುದು. ಆಡಿ ಅನುಭವಿಸುವುದು ಕಷ್ಟದ ಕೆಲಸ. ಆದರೆ ಅದರಿಂದ ನಮ್ಮ ಬುದ್ಧಿ ಶಕ್ತಿ ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲದೆ ದೈಹಿಕ ಸಾಮರ್ಥ್ಯವೂ ಕೂಡ ಬೆಳವಣಿಗೆಯಾಗುತ್ತದೆ. ಹೀಗಾಗಿ ಆಡುವ ಮೂಲಕ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕ್ರೀಡೆ ಶಿಕ್ಷಣಕ್ಕೆ ಅವಶ್ಯಕ, ಸಣ್ಣ ಮಗು ಯಾವಾಗ ತನ್ನನ್ನು ತಾನು ಆಟಕ್ಕೆ ಅಳವಡಿಸಿಕೊಳ್ಳುತ್ತದೋ ಆಗ ಮನೋವಿಕಾಸವಾಗುತ್ತದೆ. ಆದರೆ ಇಂದು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಸಿಕ್ಕ ಹಾಗೆ ಆಟಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ. ಕ್ರೀಡೆಯಲ್ಲಿ ಒಗ್ಗಟ್ಟಿದೆ. ಆದ್ದರಿಂದ ಧನಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿಕೊಂಡು ಮುಂದುವರಿಯಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಅಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ, ಶಾಲಾ ನಾಯಕಿ ಸಂಸ್ಕೃತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಜಯಲಕ್ಷ್ಮಿ, ಸೂರ್ಯ, ಮನ್ವಿತ್ ಕ್ರೀಡಾ ಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.


ಅಂಬಿಕ ವಿದ್ಯಾಲಯದ ಐರಾವತ, ಕಲ್ಪವೃಕ್ಷ, ಕಾಮಧೇನು, ಅಮೃತ ತಂಡದ ವಿದ್ಯಾರ್ಥಿಗಳು ಪಥಸಂಚನದಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಮೆರುಗು ತಂದರು. ದೈಹಿಕ ಶಿಕ್ಷಕಿ ಸುಚಿತ್ರಾ ಸ್ವಾಗತಿಸಿ, ಪ್ರಾಂಶುಪಾಲೆ ಮಾಲತಿ.ಡಿ ಭಟ್ ವಂದಿಸಿದರು. ವಿದ್ಯಾರ್ಥಿಗಳಾದ ಅರುಂಧತಿ, ಅನಘ ವಿ. ಪಿ ಕಾರ್ಯಕ್ರಮ ನಿರ್ವಹಿಸಿದರು.

“ಕಾನೂನಿನ ಅಜ್ಞಾನವು ಕ್ಷಮಿಸತಕ್ಕದ್ದಲ್ಲ” – ನ್ಯಾಯಾಧೀಶೆ ಅರ್ಚನಾ ಕೆ

0

ಪುತ್ತೂರು: ಕಾನೂನಿನ ಅಜ್ಞಾನವು ಕ್ಷಮಿಸತಕ್ಕದ್ದಲ್ಲ. ಕಾನೂನು ಜೀವನದಲ್ಲಿ ಅಮ್ಮನ ಗರ್ಭದಲ್ಲಿರುವಾಗಲೇ ಪ್ರಾರಂಭವಾಗುತ್ತದೆ ಮತ್ತು ಮನುಷ್ಯ ಗೋರಿಯನ್ನು ತಲುಪುವವರೆಗೂ ಕಾನೂನು ಮನುಷ್ಯನನ್ನು ಕಾಪಾಡುತ್ತದೆ ಎಂದು ಪುತ್ತೂರಿನ ಪ್ರಧಾನ ವ್ಯಾವಹಾರಿಕ ನ್ಯಾಯಾಧೀಶೆ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅರ್ಚನಾ ಕೆ ಉಣ್ಣಿತಾನ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಇ ಯಲ್ಲಿ ಕಾನೂನು ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಕಾನೂನು ಏಕೆ ಮುಖ್ಯ ಎಂಬ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದರು.


ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಪುತ್ತೂರಿನ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಇವರು ಮಾತನಾಡಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕಾನೂನಿನ ಸುಪರ್ದಿಯಲ್ಲಿ ಇರುತ್ತೇವೆ. ಯಾರು ತೊಂದರೆಗೆ ಒಳಗಾಗುತ್ತಾರೋ ಅವರನ್ನು ರಕ್ಷಿಸುವುದೇ ಕಾನೂನು. ಕಾನೂನಿನ ಹಿಂದೆ ಅನೇಕ ಉದ್ದೇಶಗಳಿರುತ್ತದೆ ಎಂದರು.


ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯದ ಕುರಿತು ಇರುವ ಕಾಯಿದೆಯೇ ಪೋಕ್ಸೋ. ಮಕ್ಕಳ ದೈಹಿಕ ಮಾನಸಿಕ ವಿಕಾಸಕ್ಕೆ ತಡೆ ಆಗದಂತೆ ಜಾರಿಗೆ ಬಂದ ಕಾಯ್ದೆ ಇದಾಗಿದ್ದು, ಸಂತ್ರಸ್ತ ಮಕ್ಕಳಿಗೆ ಪರಿಹಾರವನ್ನು ನೀಡುತ್ತದೆ. ಏನಾದರೂ ಸಮಸ್ಯೆಗಳಾದರೆ ಮಕ್ಕಳು ಸಹಾಯವಾಣಿಯ ಮೊರೆ ಹೋಗಬಹುದು.

ಪೋಕ್ಸೋ ಪ್ರಕರಣವನ್ನು ವಿಚಾರಣೆ ಮಾಡಲೆಂದೇ ವಿಶೇಷವಾಗಿ ಮಕ್ಕಳ ಸ್ನೇಹಿ ನ್ಯಾಯಾಲಯ ಇರುತ್ತದೆ ಹಾಗೂ ಯಾವುದೇ ಕಾರಣಕ್ಕೂ ಪೋಕ್ಸೋ ವಿಷಯಕ್ಕೆ ಸಂಬ0ಧಪಟ್ಟ0ತೆ ಮಾಧ್ಯಮದಲ್ಲಿ ವರದಿ ಮಾಡುವಂತಿಲ್ಲ. ಯಾರಿಗೆ ತೊಂದರೆ ಆಗಿದೆಯೋ ಅಂಥವರಿಗೆ ರಕ್ಷಣೆ ನೀಡುವ ಹೊಣೆ ಸರ್ಕಾರದ್ದಾಗಿದೆ ಎಂದು ಪೋಕ್ಸೋ ಕಾಯ್ದೆಯ ನಿಯಮದ ಕುರಿತು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನೈತಿಕವಾದ ಮೌಲ್ಯಗಳು ನಮ್ಮಲ್ಲಿ ಇರಬೇಕು. ಸಮಾಜ ಸೇವೆಯ ಗುರಿ ನಮ್ಮದಾಗಬೇಕು. ಅಷ್ಟೇ ಅಲ್ಲ ನಮ್ಮ ಸುತ್ತಮುತ್ತಲು ಆಗುವ ಘಟನೆಗಳಿಗೆ ನಾವು ಸ್ಪಂದಿಸಬೇಕು ಎಂದು ತಿಳಿಸಿದರು.


ಶಾಲೆಯ ಪ್ರಾಂಶುಪಾಲೆ ಮಾಲತಿ ಡಿ ಭಟ್ ಸ್ವಾಗತಿಸಿ, ಪುತ್ತೂರಿನ ವಕೀಲರ ಸಂಘದ ಜೊತೆ ಕಾರ್ಯದರ್ಶಿ ಹಾಗೂ ಅಂಬಿಕಾ ಸಿ ಬಿ ಎಸ್.ಇ ಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್ ವಂದಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಶ್ರೀಚಿನ್ಮಯಿ ರೈ ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.

2022ರ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭ

ಉಡುಪಿಯ ಯಕ್ಷಗಾನ ಕಲಾರ೦ಗದ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ನವಂಬರ್ 13ರಂದು ಜರಗಿತು. ದಿನಪೂರ್ತಿ ನಡೆದ ಈ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಡಾ.ಎಂ.ಪ್ರಭಾಕರ ಜೋಶಿಯವರು ಕಲಾರಂಗ ತನ್ನ ಕಾರ್ಯಚಟುವಟಿಕೆಗಳಿಂದ ಸಾಂಸ್ಕೃತಿಕ ಸಾಮಾಜಿಕ ಸಂಘಟನೆಗೆ ಮಾದರಿಯಾಗಿದೆ ಎಂದರು.

ಡಾ. ಪದ್ಮನಾಭ ಕಾಮತ್‌ರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದಲ್ಲಿ ಪ್ರೊ.ಎ೦.ಎಲ್. ಸಾಮಗ, ಶ್ರೀ ಕೃಷ್ಣಪ್ರಸಾದ್‌ ಅಡ್ಯಂತಾಯ, ಶ್ರೀ ಕದ್ರಿ ನವನೀತ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು.


ಪೂರ್ವಾಹ್ನ ಮೊದಲ ಗೋಷ್ಠಿಯಾಗಿ‘ಇತಿಹಾಸಕ್ಕೆ ಸಂದುಹೋದ ತೆ೦ಕುತಿಟ್ಟಿನ ಯಕ್ಷಗಾನ ಮೇಳಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಜರಗಿತು. ಬಳಿಕ ಸಂಘಟನೆಗಳ ಕುರಿತ ಅನುಭವವನ್ನುಆಯ್ದ ಸಂಘಟಕರು ಮಾತುಕತೆಯಲ್ಲಿ ಹಂಚಿಕೊ೦ಡರು.


ಸAಜೆ 4.00ಕ್ಕೆ ಸಂಪನ್ನಗೊ೦ಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ನೀಡಿದ ಅನುಗ್ರಹ ಸಂದೇಶದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಕಳಕಳಿಗೆ ಸ್ಪಂದಿಸುವುದೇ ಭಗವಂತನಿಗೆ ಸಲ್ಲಿಸುವ ಪೂಜೆ ಎಂದು ನುಡಿದರು.

ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ.ಟಿ ಶ್ಯಾಮ್ ಭಟ್‌ ಅಧ್ಯಕ್ಷತೆ ವಹಿಸಿದ್ದರು.ಉಡುಪಿಯ ಶಾಸಕರಾದ ಶ್ರೀ ಕೆ.ರಘುಪತಿ ಭಟ್‌ ಸಂಸ್ಥೆಯ ವೆಬ್‌ಸೈಟ್‌  www.yakshaganakalaranga.com  ಲೋಕಾರ್ಪಣೆಗೈದರು.  ಪ್ರಶಸ್ತಿ ಪುರಸ್ಕೃತ ಕಲಾವಿದರ ಕುರಿತ ಸಾಕ್ಷ್ಯಚಿತ್ರವನ್ನು ಶ್ರೀ ಹರಿಕೃಷ್ಣ ಪುನರೂರು ಅನಾವರಣಗೊಳಿಸಿದರು.

ಮುಖ್ಯ ಅಭ್ಯಾಗತರಾಗಿ ಮಂಗಳೂರಿನ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಪ್ರೊ.ಎಂ. ಬಿ. ಪುರಾಣಿಕ್, ಶ್ರೀ ಪ್ರದೀಪಕುಮಾರ್‌ ಕಲ್ಕೂರ, ಪ್ರೊ.ಜಿ. ಆರ್. ರೈ, ಶ್ರೀ ಪಿ. ಗೋಕುಲನಾಥ ಪ್ರಭು, ಡಾ.ಜೆ. ಎನ್. ಭಟ್, ಶ್ರೀ ಲೀಲಾಕ್ಷ ಕರ್ಕೆರ, ಶ್ರೀ ಪಣಂಬೂರು ವಾಸುದೇವ ಐತಾಳ್ ಮತ್ತು ಸಿಎ ಶಿವಾನಂದ ಪೈ ಭಾಗವಹಿಸಿದ್ದರು. ನಿವೃತ್ತ ರಾಜ್ಯಪಾಲ ಯು.ಪದ್ಮನಾಭ ಆಚಾರ್ಯ, ಯು.ವಿಶ್ವನಾಥ ಶೆಣೈ, ಸಂಸ್ಥೆಯ ಉಪಾಧ್ಯಕ್ಷರುಗಳಾದ ಪಿ.ಕಿಶನ್ ಹೆಗ್ಡೆ ಹಾಗೂ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.

ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತ೦ಡಕ್ಕೆ ನೀಡಲಾಯಿತು. ವಿವಿಧ ಗಣ್ಯರ ಸ್ಮರಣಾರ್ಥ-ಗೌರವಾರ್ಥ ನೀಡುವ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗಳನ್ನು ಡಿ. ಮನೋಹರ್‌ ಕುಮಾರ್, ಕೃಷ್ಣಸ್ವಾಮಿ ಜೋಯಿಸ, ಮಲವಳ್ಳಿ ನಾರಾಯಣ ಭಟ್, ಅಣ್ಣಪ್ಪಕುಲಾಲ್ ನೀರ್ಜಡ್ಡು, ರಾಮಜೋಗಿ ಜೋಡುಕಲ್ಲು, ಮುಂಡ್ಕೂರು ಕೃಷ್ಣ ಶೆಟ್ಟಿ, ಉಮೇಶ್ ಭಟ್ ಬಾಡ, ಐರ್‌ಬೈಲ್‌ ಆನಂದ ಶೆಟ್ಟಿ, ಮಹಮ್ಮದ್‌ ಗೌಸ್, ಜೋಗು ಕುಲಾಲ್, ವೆಂಕಪ್ಪ ಆಚಾರ್, ಸಜಿಪ ಚೆನ್ನಪ್ಪ ಗೌಡ, ಲಕ್ಷ್ಮೀಶ ಅಮ್ಮಣ್ಣಾಯ, ವಿದ್ವಾನ್‌ ಗಣಪತಿಭಟ್, ಕೂಟೇಲು ಬಾಲಕೃಷ್ಣ ಭಟ್, ಮಾರ್ವಿ ನಿತ್ಯಾನಂದ ಹೆಬ್ಬಾರ್, ಯು. ಆನಂದ್ ಮತ್ತು ಶಿವರಾಮ ಪಣಂಬೂರು ಸ್ವೀಕರಿಸಿದರು.

ಸಂಸ್ಥೆಯ ಕಾರ್ಯಕರ್ತರಿಗೆ ನೀಡುವ ಯಕ್ಷಚೇತನ ಪ್ರಶಸ್ತಿಯನ್ನು ಎಚ್.ಎನ್. ಶೃಂಗೇಶ್ವರ್‌ರಿಗೆ ಪ್ರದಾನ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗ೦ಗಾಧರರಾವ್ ಸ್ವಾಗತಿಸಿದರು. ಎ. ನಟರಾಜ ಉಪಾಧ್ಯಾಯ ವಂದಿಸಿದರು. ಪ್ರೊ.ನಾರಾಯಣ ಎಂ.ಹೆಗಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕುರಿತ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.


ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವದಲ್ಲಿ ಅಪರಾಹ್ನ 2.00 ರಿಂದ ತೆ೦ಕುತಿಟ್ಟಿನ ಯಕ್ಷಗಾನ ರೂಪಕ ‘ಶ್ರೀ ಮನೋಹರ ಸ್ವಾಮಿ ಪರಾಕು’ ಮತ್ತು ಸಂಜೆ 6.00 ರಿಂದ ಬಡಗುತಿಟ್ಟಿನ ಯಕ್ಷಗಾನ ‘ಚಕ್ರಚಂಡಿಕೆ’ ಪ್ರದರ್ಶನಗೊಂಡವು.

ಶ್ರದ್ಧಾ ವಾಕರ್ ಘೋರ ಹತ್ಯೆಯ ನಂತರದ ಅನುಮಾನವನ್ನು ತಪ್ಪಿಸಲು ಶ್ರದ್ಧಾ ಅವರ ಸಾಮಾಜಿಕ ಜಾಲತಾಣವನ್ನು ಉಪಯೋಗಿಸುತ್ತಿದ್ದ ಆಫ್ತಾಬ್ –  ರಕ್ತ ಶುದ್ಧೀಕರಣದ ವಿಧಾನಗಳನ್ನು  ಮತ್ತು ಮಾನವ ಅಂಗರಚನಾಶಾಸ್ತ್ರದ ಬಗ್ಗೆ ಗೂಗಲ್‌ನಲ್ಲಿ ಓದಿದ್ದ!

0

ಶ್ರದ್ಧಾ ವಾಕರ್ ಘೋರ ಹತ್ಯೆಯ ನಂತರದ ಅನುಮಾನವನ್ನು ತಪ್ಪಿಸಲು ಶ್ರದ್ಧಾ ಅವರ ಸಾಮಾಜಿಕ ಮಾಧ್ಯಮದಲ್ಲಿ ಆಫ್ತಾಬ್ ಸಕ್ರಿಯನಾಗಿದ್ದ ಎಂದು ತಿಳಿದುಬಂದಿದೆ. ಆರೋಪಿ ಅಫ್ತಾಬ್ ಪೂನವಾಲಾ ಅನುಮಾನವನ್ನು ತಪ್ಪಿಸಲು ಮತ್ತು ತನ್ನ ಲೈವ್-ಇನ್ ಪಾಲುದಾರನ ಭೀಕರ ಹತ್ಯೆಯನ್ನು ಮರೆಮಾಚುವ ಪ್ರಯತ್ನದಲ್ಲಿ ಶ್ರದ್ಧಾ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಉಪಯೋಗಿಸುತ್ತಿದ್ದ.

ಶ್ರದ್ಧಾಳನ್ನು ಆಕೆಯ ಗೆಳೆಯ ಆಫ್ತಾಬ್ ಕೊಂದು ನಂತರ ಆಕೆಯ ದೇಹವನ್ನು ಅನೇಕ ತುಂಡುಗಳಾಗಿ ಕತ್ತರಿಸಲಾಯಿತು. ಸದ್ಯ ಅವನು 5 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಅಪಾರ್ಟ್‌ಮೆಂಟ್‌ನಲ್ಲಿನ ದುರ್ನಾತವನ್ನು ಎದುರಿಸಲು, ಅಫ್ತಾಬ್ ಅಗರಬತ್ತಿಗಳನ್ನು ಬೆಳಗಿಸುತ್ತಿದ್ದ. ಅಮೆರಿಕದ ಕ್ರೈಂ ಶೋ ‘ಡೆಕ್ಸ್ಟರ್’ ನಿಂದ ಅವನು ಸ್ಫೂರ್ತಿ ಪಡೆದಿದ್ದ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಶ್ರದ್ಧಾ ಅವರನ್ನು ಹತ್ಯೆ ಮಾಡಿದ ನಂತರ ಅವನು ರಕ್ತ ಶುದ್ಧೀಕರಣದ ವಿಧಾನಗಳನ್ನು ಗೂಗಲ್‌ನಲ್ಲಿ ಓದಿದ್ದ ಮತ್ತು ಮಾನವ ಅಂಗರಚನಾಶಾಸ್ತ್ರದ ಬಗ್ಗೆ ಓದಿದ್ದ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಮೂಲಗಳ ಪ್ರಕಾರ, ಇಬ್ಬರೂ ಮೇ 15 ರಂದು ದಕ್ಷಿಣ ದೆಹಲಿಯ ಛತ್ತರ್‌ಪುರ ಪಹಾಡಿ ಪ್ರದೇಶದ ಫ್ಲಾಟ್‌ಗೆ ತೆರಳಿದರು, ನಂತರ ಅವರ ಸಂಬಂಧವು ಹದಗೆಟ್ಟಿತು ಮತ್ತು ಅವರು ಯಾವಾಗಲೂ ಜಗಳವಾಡುತ್ತಿದ್ದರು.

ಮೂರು ದಿನಗಳ ನಂತರ, ಶ್ರದ್ಧಾಳನ್ನು ಆಕೆಯ ಗೆಳೆಯ ಕತ್ತು ಹಿಸುಕಿ, ಕೊಲೆ ಮಾಡಿ, 35 ತುಂಡುಗಳಾಗಿ ಕತ್ತರಿಸಿದ್ದಾನೆ. ಆಕೆಯನ್ನು ಕೊಂದ ನಂತರವೂ, ಅಫ್ತಾಬ್ ಆಕೆಯ ಸಾಮಾಜಿಕ ಜಾಲತಾಣದ ಆ್ಯಪ್‌ಗಳಲ್ಲಿ ಶ್ರದ್ಧಾ ವಾಕರ್‌ನಂತೆ ಇತರರ ಜೊತೆ ಚಾಟ್ ಮಾಡುತ್ತಿದ್ದ ಮತ್ತು ಜೂನ್ 9 ರವರೆಗೆ ಅವರ ಸ್ನೇಹಿತರೊಂದಿಗೆ ಚಾಟ್ ಮಾಡುತ್ತಿದ್ದ,

ಇದರಿಂದ ಅವರು ಅನುಮಾನಿಸುವುದಿಲ್ಲ ಎಂದು ಹಾಗೆ ಮಾಡುತ್ತಿದ್ದ, ನಂತರ ಆಕೆಯ ಸ್ಥಿತಿಯು ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದಾಗ, ಆಕೆಯ ಸ್ನೇಹಿತರು ಆಕೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು, ಅವರು ಪೊಲೀಸರನ್ನು ಸಂಪರ್ಕಿಸಿದರು.

ಶ್ರದ್ಧಾಳನ್ನು ಕೊಂದ ಕೋಣೆಯಲ್ಲಿ ಅದೇ ದಿನ ಆಫ್ತಾಬ್ ಮಲಗಿದ್ದ. ಆಕೆಯನ್ನು ಕತ್ತರಿಸುತ್ತಿರುವ ದಿನವೂ ಅಲ್ಲಿಯೇ ಮಲಗಿದ್ದ. ಕೊಲೆ ಮಾಡಿದ ಮರುದಿನ, ಗರಗಸ ಮತ್ತು 300-ಲೀಟರ್ ರೆಫ್ರಿಜರೇಟರ್ ಅನ್ನು ಖರೀದಿಸಿದ, “ಅವನು ಅವಳ ದೇಹವನ್ನು ಎರಡು ದಿನಗಳವರೆಗೆ ಕತ್ತರಿಸಿದನು” ಮತ್ತು ಅದರೊಳಗೆ ಅವುಗಳನ್ನು ಸಂಗ್ರಹಿಸಿದ ಎಂದು ಅಧಿಕಾರಿಯೊಬ್ಬರು ಹೇಳಿದರು.

ಎಂ.ಕೆ. ರಮೇಶಾಚಾರ್ಯರಿಗೆ ಯಕ್ಷಾಂಗಣ ಗೌರವ ಪ್ರಶಸ್ತಿ – ಯಕ್ಷಾಂಗಣದಿಂದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ: ತಾಳಮದ್ದಳೆ ಸಪ್ತಾಹ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ

ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿ.ವಿ. ಮತ್ತು ಕರ್ನಾಟಕ ಯಕ್ಷ ಭಾರತಿ(ರಿ.) ಪುತ್ತೂರು ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುವ ಹತ್ತನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದಲ್ಲಿ ನೀಡುವ ಯಕ್ಷಾಂಗಣ ಗೌರವ ಪ್ರಶಸ್ತಿಗೆ 2021-22ನೇ ಸಾಲಿನಲ್ಲಿ ಯಕ್ಷಗಾನ ರಂಗದ ಹಿರಿಯ ಸ್ತ್ರೀ ವೇಷಧಾರಿ ಮತ್ತು ಪ್ರಸಂಗಕರ್ತ ಎಂ.ಕೆ.ರಮೇಶ ಆಚಾರ್ಯ ಆಯ್ಕೆಯಾಗಿದ್ದಾರೆ.

ನವೆಂಬರ 21ರಿಂದ 27ರವರೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಜರಗುವ ಯಕ್ಷಾಂಗಣ ದಶಮಾನ ಸಡಗರದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.

ಎಂ ಕೆ ರಮೇಶ ಆಚಾರ್ಯ:

         ತೆಂಕು-ಬಡಗು ತಿಟ್ಟಿನ ಅಗ್ರಮಾನ್ಯ ಸ್ತ್ರೀ ಪಾತ್ರಧಾರಿಗಳಲ್ಲಿ ಎಂ.ಕೆ.ರಮೇಶಾಚಾರ್ಯ ಪ್ರಮುಖರು. ತೀರ್ಥಹಳ್ಳಿ ಸಮೀಪ ಮಂಗಳಾಗಾರದಲ್ಲಿ ಕೃಷ್ಣಾಚಾರ್ಯ – ರುಕ್ಮಿಣಿಯಮ್ಮ ದಂಪತಿಗೆ 1949,ಅಕ್ಟೋಬರ್ 31 ರಂದು ಜನಿಸಿದ ರಮೇಶ ಆಚಾರ್ಯ ತಮ್ಮ ತಂದೆಯವರ ಶ್ರೀ ಜಗದಾಂಬ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಹಿಷಿಯಲ್ಲಿ 13ನೇ ವಯಸ್ಸಿನಲ್ಲೇ ತಿರುಗಾಟ ಆರಂಭಿಸಿದರು.

ಬಳಿಕ ಗುರು ವೀರಭದ್ರ ನಾಯಕರಿಂದ ಬಡಗಿನ ನಾಟ್ಯ ಕಲಿತು ಮಂದಾರ್ತಿ ಮೇಳ ಸೇರಿದರು. ಕುರಿಯ ವಿಠಲ ಶಾಸ್ತ್ರಿಗಳಿಂದ ತೆಂಕಿನ ನಾಟ್ಯಾಭ್ಯಾಸ ಮಾಡಿ ಮೂರು ವರ್ಷ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದರು. 1976ರಲ್ಲಿ ಸುರತ್ಕಲ್ ಮೇಳ ಸೇರಿ ಶೇಣಿ, ತೆಕ್ಕಟ್ಟೆ, ಅಗರಿ, ಪದ್ಯಾಣರ ಒಡನಾಟದಲ್ಲಿ ಸತತ 24 ವರ್ಷ ಅಪ್ರತಿಮ ಸ್ತ್ರೀ ಪಾತ್ರಧಾರಿಯಾಗಿ ಜನಪ್ರಿಯರಾದರು.

         ದಾಕ್ಷಾಯಿಣಿ, ಕೈಕೆ, ಮಂಡೋದರಿ, ದಮಯಂತಿ, ಸತ್ಯಭಾಮೆ,ರುಕ್ಮಿಣಿ, ಶಶಿಪ್ರಭೆ, ಮೋಹಿನಿ, ತಾರೆ,ಚಂದ್ರಮತಿ, ಅಂಬೆ, ದೇವಯಾನಿ, ಸೀತೆ, ದ್ರೌಪದಿ, ಸುಭದ್ರೆ,ಪ್ರಭಾವತಿ, ವಾಸವದತ್ತೆ, ಶಾಂತಲೆ, ಮಾತಂಗಿ ಮುಂತಾದ ಪಾತ್ರಗಳಲ್ಲಿ ಅಭಿನಯ ಮಾತುಗಾರಿಕೆಯಲ್ಲಿ ಪ್ರೇಕ್ಷಕರ ಮನಗೆದ್ದರು. ಯಕ್ಷಗಾನ ಪ್ರಸಂಗ ರಚನೆಯಲ್ಲೂ ಅಪಾರ ಪರಿಣತಿ ಸಾಧಿಸಿದ ರಮೇಶಾಚಾರ್ಯರು ಅನಸೂಯೋಪಾಖ್ಯಾನ, ಶ್ರೀಕೃಷ್ಣ ತುಲಾಭಾರ, ಸಮಗ್ರ ವಿಶ್ವಾಮಿತ್ರ,ಮಹಾಮಾತೆ ಕುಂತಿ, ಸುರಥ ಚಿತ್ರಾಂಗದ, ನಾಟ್ಯರಾಣಿ ಶಾಂತಲಾ, ಛತ್ರಪತಿ ಶಿವಾಜಿ, ಸತ್ಯಾಂತರಂಗ ಮೊದಲಾದ ಸ್ವತಂತ್ರ ಪ್ರಸಂಗಗಳಲ್ಲದೆ 20 ಕ್ಕೂ ಮಿಕ್ಕಿ ಕ್ಷೇತ್ರ ಮಹಾತ್ಮೆಗಳು, 50ಕ್ಕೂ ಮಿಕ್ಕಿದ ಕಾಲ್ಪನಿಕ ಕನ್ನಡ-ತುಳು ಪ್ರಸಂಗಗಳನ್ನು ರಚಿಸಿ ಖ್ಯಾತರಾದರು.

      ತೆಂಕಿನಲ್ಲಿ 33 ವರ್ಷ ಹಾಗೂ ಬಡಗಿನಲ್ಲಿ 24 ವರ್ಷ ಸೇರಿದಂತೆ ಒಟ್ಟು 57 ವರ್ಷ ತಿರುಗಾಟ ಮಾಡಿರುವ ಎಂ.ಕೆ. ಮಂದಾರ್ತಿ, ಧರ್ಮಸ್ಥಳ, ಸಾಲಿಗ್ರಾಮ, ನೀಲಾವರ, ಮಂಗಳಾದೇವಿ, ತಳಕಲ, ಸುಂಕದಕಟ್ಟೆ, ಹನುಮಗಿರಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಯಕ್ಷಗಾನ ತಾಳಮದ್ದಳೆಯಲ್ಲೂ ಸಮರ್ಥ ಅರ್ಥಧಾರಿಯಾಗಿರುವ ಅವರು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿ ಬಾನುಲಿ ತಂಡದೊಂದಿಗೆ ಕಳೆದ 30 ವರ್ಷಗಳಿಂದ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. 

      ಪಾತಾಳ ಪ್ರಶಸ್ತಿ, ಶೇಣಿ ಜನ್ಮ ಶತಾಬ್ದಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಕುರಿಯ ಪ್ರಶಸ್ತಿ, ಜಾನಪದ ಶ್ರೀ, ಪಟ್ಟಾಜೆ ಪ್ರಶಸ್ತಿ, ಕಲಾರಂಗ ಪ್ರಶಸ್ತಿ, ಕಡಂದೇಲು ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿಗಳು ಅವರಿಗೆ ಸಂದಿವೆ. 2020ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಮೇಶಾಚಾರ್ಯರಿಗೆ 2021 ಅಕ್ಟೋಬರ 2ರಂದು ಉಡುಪಿಯಲ್ಲಿ ಸಾರ್ವಜನಿಕ ಸನ್ಮಾನ ಮತ್ತು ‘ಯಕ್ಷಾಂಗನೆ’ ಅಭಿನಂದನ ಗ್ರಂಥ ಸಮರ್ಪಣೆಯಾಗಿದೆ. ಪತ್ನಿ ವಿಶಾಲಾಕ್ಷಿ ಮಕ್ಕಳಾದ ಮನೋಜ, ಆಶಾಲತಾ, ತನುಜಾ ಇವರನ್ನೊಳಗೊಂಡ ಸಂತೃಪ್ತ ಸಂಸಾರ ಅವರದು.

ಪ್ರಶಸ್ತಿ ಪ್ರದಾನ:

   ನವೆಂಬರ್ 27ರಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗುವ ತಾಳಮದ್ದಳೆ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ರಾಜ್ಯ ಕನ್ನಡ ಸಂಸ್ಕೃತಿ ಮತ್ತು ಇಂಧನ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಬಳಿಕ ‘ಸಪ್ತ ವಿಜಯ’ ಸರಣಿಯ ಕೊನೆಯ ಪ್ರಸಂಗ ‘ಯಕ್ಷಲೋಕ ವಿಜಯ’ ತಾಳಮದ್ದಲೆ ಜರಗುವುದು ಎಂದು ಯಕ್ಷಾಂಗಣದ ಪ್ರಕಟಣೆ ತಿಳಿಸಿದೆ.