Monday, March 16, 2026
Home Blog Page 125

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್  ಕ್ರೀಡಾಕೂಟದಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ  ಬೆಳ್ಳಿಯ ಮತ್ತು ಕಂಚಿನ ಪದಕಗಳು 

0

ಪುತ್ತೂರು,ನ22: ಹರಿಯಾಣದ ಕುರುಕ್ಷೇತ್ರದಲ್ಲಿ ನವೆಂಬರ್ 19 ರಿಂದ 23ರ ವರೆಗೆ ನಡೆಯುತ್ತಿರುವ ವಿದ್ಯಾಭಾರತಿ ರಾಷ್ಟ್ರ ಮಟ್ಟದ  ಅಥ್ಲೆಟಿಕ್ಸ್  ಕ್ರೀಡಾಕೂಟದಲ್ಲಿ  ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ  ಮಾಡಿದ್ದಾರೆ.


100ಮೀಟರ್‌ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಜತ್‌ ಆರ್‌ ಭಟ್‌ ಕಂಚಿನ ಪದಕವನ್ನು ಪಡೆದುಕೊ೦ಡಿದ್ದಾರೆ. ಈತನು ವಿಟ್ಲದ ರಾಜೇಶ್ ಭಟ್ ಮತ್ತು ರಾಧಿಕಾ ಭಟ್‌ ದಂಪತಿ ಪುತ್ರ.


ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ನಿಹಾಲ್‌ರಾಜ್‌ ಕಂಚಿನ ಪದಕದೊ೦ದಿಗೆ ತೃತೀಯ ಸ್ಥಾನವನ್ನುಪಡೆದುಕೊಂಡಿದ್ದಾರೆ. ಈತನು ಕಬಕದ ನಾಗರಾಜ್ ಹೆಗ್ಡೆ ಮತ್ತು ಭಾನುಮತಿ ದಂಪತಿ  ಪುತ್ರ.


4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ರಜತ್‌ ಆರ್‌ ಭಟ್, ಪವನ್‌ ಕುಮಾರ್, ಪ್ರಮಥ್‌ ರೈ ಮತ್ತು ಧನುಷ್‌ ರವರನ್ನು ಒಳಗೊಂಡ ತಂಡವು ಕ೦ಚಿನ ಪದಕವನ್ನು ಪಡೆದುಕೊ೦ಡಿದೆ.

ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ವಿವೇಕಾನ೦ದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ನಿಹಾಲ್‌ ರಾಜ್‌ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈತನು ಕಬಕದ ನಾಗರಾಜ್ ಹೆಗ್ಡೆ ಮತ್ತು ಭಾನುಮತಿ ದಂಪತಿ  ಪುತ್ರ.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್‌ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಶ್ರೀವರ್ಣಾ. ಪಿ.ಡಿ ರಾಷ್ಟ್ರಮಟ್ಟಕ್ಕೆ ಮತ್ತು ಕೃತಿ.ಕೆ ರಾಜ್ಯಮಟ್ಟಕ್ಕೆ ಆಯ್ಕೆ

0

 ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿನಿ ಶ್ರೀವರ್ಣಾ. ಪಿ.ಡಿ ರಾಷ್ಟ್ರಮಟ್ಟಕ್ಕೆ ಆಯ್ಕೆ.

ವಿದ್ಯಾಭಾರತಿ ಕರ್ನಾಟಕ, ಹಾಗೂ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಇವರ ಜಂಟಿ ಆಶ್ರಯದಲ್ಲಿ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 13, 14ರಂದು ಕರ್ನಾಟಕ ಆಂಧ್ರ ಪ್ರದೇಶ, ತೆಲಂಗಣ ರಾಜ್ಯವನ್ನು ಒಳಗೊಂಡ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿನಿ ಶ್ರೀವರ್ಣಾ.ಪಿ.ಡಿ (ಪಾಲೆತ್ತಡಿ ಧರ್ಣಪ್ಪ ಗೌಡ, ಮಮತಾ.ಪಿ. ದಂಪತಿ ಪುತ್ರಿ)

ಎತ್ತರ ಜಿಗಿತ, 80 ಮೀಟರ್ ಹರ್ಡಲ್ಸ್, ಉದ್ದ ಜಿಗಿತ , 4*100 ಮೀಟರ್ ರಿಲೇ -ಪ್ರಥಮ ಸ್ಥಾನ ಪಡೆದುಕೊಂಡಿದ್ದು,  ನವೆಂಬರ್ 19ರಿಂದ 23ರವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ  ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾಳೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ, ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು, ಸರಕಾರಿ ಪ್ರೌಢಶಾಲೆ ಅತ್ತಾವರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ  ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನವಂಬರ್ 15 ಮತ್ತು 16 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದ,

14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ  ಮಾಧ್ಯಮ ಶಾಲೆಯ  8ನೇ ತರಗತಿಯ ಕೃತಿ.ಕೆ (ಬನ್ನೂರು ಕೊರಗಪ್ಪ ಗೌಡ ಮತ್ತು ವನಿತಾ.ಎ ದಂಪತಿ ಪುತ್ರಿ) 400 ಮೀ ಪ್ರಥಮ, 600ಮೀ ಪ್ರಥಮ, 200ಮೀ ತೃತೀಯ ಹೀಗೆ 3 ಚಿನ್ನ ಹಾಗೂ 1 ಕಂಚಿನ ಪದಕಗಳೊಂದಿಗೆ ಪುತ್ತೂರು ತಾಲೂಕಿನಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು,

ಪುತ್ತೂರು ತಾಲೂಕಿನಿಂದ ಭಾಗವಹಿಸಿರುವ ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಚಾಂಪಿಯಾನ್‍ಶಿಪ್‍ಗೆ ಭಾಜನರಾಗಿರುವ ಏಕೈಕ ವಿದ್ಯಾರ್ಥಿನಿ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರಜಾಗೃತಿ ಬಗೆಗೆ ಉಪನ್ಯಾಸ “ಶಿಕ್ಷಣ ಯುವಸಮುದಾಯದಲ್ಲಿ ರಾಷ್ಟ್ರಭಕ್ತಿಯ ಕಿಚ್ಚನ್ನು ಹಚ್ಚಬೇಕು”: ಸುಬ್ರಹ್ಮಣ್ಯ ನಟ್ಟೋಜ

0

ಪುತ್ತೂರು: ಶಿಕ್ಷಣವೆನ್ನುವುದು ಕೇವಲ ಪಠ್ಯಪುಸ್ತಕ ಹಾಗೂ ಅಂಕಪಟ್ಟಿಗೆ ಸೀಮಿತವಾಗಿರದೆ ರಾಷ್ಟ್ರಭಕ್ತಿಯ ಕಿಚ್ಚನ್ನು ವಿದ್ಯಾರ್ಥಿಗಳ ಧಮನಿ ಧಮನಿಗಳಲ್ಲಿ ಹರಿಸುವ ವ್ಯವಸ್ಥೆಯಾಗಬೇಕು. ವಿದ್ಯಾರ್ಥಿಗಳು ದೇಶಕ್ಕಾಗಿ ತುಡಿಯುವಂತಗಾಬೇಕು. ಸ್ವಾರ್ಥವನ್ನು ತ್ಯಜಿಸಿ, ದೇಶಕ್ಕೋಸ್ಕರ ಪ್ರಾಣವನ್ನೂ ತ್ಯಾಗ ಮಾಡುವ ಸಮರ್ಪಣಾ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಬೆಳೆಯಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರದಂದು ರಾಷ್ಟ್ರಜಾಗೃತಿ ಬಗೆಗೆ ವಿಶೇಷ ಉಪನ್ಯಾಸ ನೀಡಿದರು.


ಭಾರತ ಹಾಗೂ ಇಸ್ರೇಲ್ ಅವಿನಾಭಾವ ಸಂಬಂಧವನ್ನು ಹೊಂದಿದೆ. ನಂಬಿಕೆ, ಬಹುದೇವತಾರಾಧನೆ, ಸಂಸ್ಕೃತಿ ಮುಂತಾದ ವಿಚಾರಗಳಲ್ಲಿ ಸಾಮ್ಯತೆಯನ್ನು ಹೊಂದಿದೆ. ಇಸ್ರೇಲ್ ರಾಷ್ಟ್ರದ ಪ್ರಜೆಗಳು ತಮ್ಮ ಜನಾಂಗದ ಮೇಲೆ ಸಾವಿರ ನರಮೇಧಗಳು ನಡೆದರೂ, ಸ್ವಾಭಿಮಾನ ಹಾಗೂ ರಾಷ್ಟ್ರಭಕ್ತಿಯಿಂದಾಗಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡರು. ಕೃಷಿ, ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ, ಹಣಕಾಸು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರಿದು ಜಗತ್ತಿಗೆ ಕೊಡುಗೆಯನ್ನು ನೀಡಿದರು. ಪುಟ್ಟ ರಾಷ್ಟ್ರ ಇಸ್ರೇಲ್‌ನ ಪ್ರಜೆಗಳ ಒಗ್ಗಟ್ಟು ಭಾರತೀಯರಿಗೆ ಪ್ರೇರಣೆಯಾಗಬೇಕು ಎಂದರು.


ಉತ್ತಮ ನಾಯಕ ಮಾತ್ರ ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯ. ಚುನಾವಣೆಯಲ್ಲಿ ಪ್ರಜೆಗಳು ಎಚ್ಚರವಹಿಸಿ ನಾಯಕನನ್ನು ಆಯ್ಕೆಮಾಡಬೇಕು. ಹಾಗೆಯೇ, ದೇಶದ ನಾಗರಿಕರು ರಾಷ್ಟ್ರಕ್ಕೆ ಬದ್ಧರಾಗಿರಬೇಕು. ನಾನಿರುವಂತದ್ದೇ ದೇಶಕ್ಕಾಗಿ ಎಂಬ ಪರಿಕಲ್ಪನೆಯು ಜಾಗೃತಗೊಳ್ಳಬೇಕು. ಏಕತೆಯಿಂದ ಮಾತ್ರ ರಾಷ್ಟ್ರ ಉಳಿಯಲು ಸಾಧ್ಯ ಎಂದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಅಂಬಿಕಾ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪದವಿ ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.

ಬಹುಮುಖ ಪ್ರತಿಭೆಯ ಯಕ್ಷತಾರೆ – ಉಂಡೆಮನೆ ಶ್ರೀಕೃಷ್ಣ ಭಟ್ 

ಶ್ರೀ ಉಂಡೆಮನೆ ಶ್ರೀಕೃಷ್ಣ ಭಟ್ಟರು ಬಹುಮುಖ ಪ್ರತಿಭೆಯ ಯಕ್ಷಗಾನ ಕಲಾವಿದರು. ಇವರು ಯಕ್ಷಗಾನದ ಎಲ್ಲಾ ಅಂಗಗಳನ್ನೂ ಬಲ್ಲವರು. ಭಾಗವತರಾಗಿ, ವೇಷಧಾರಿಯಾಗಿ ಗುರುತಿಸಿಕೊಂಡರೂ ಅಗತ್ಯ ಬಿದ್ದರೆ ಚೆಂಡೆ ಮದ್ದಳೆಗಳನ್ನೂ ನುಡಿಸಬಲ್ಲರು. ಅರ್ಥಧಾರಿಯಾಗಿ ತಾಳಮದ್ದಳೆ ಕ್ಷೇತ್ರದಲ್ಲೂ ತೊಡಗಿಸಿಕೊಂಡ ಅನುಭವಿ ಇವರು. ಯಕ್ಷಗಾನ ಗುರುವಾಗಿ ತಾನು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಟ್ಟಿದ್ದಾರೆ. ಇವರಿಂದ ಕಲಿತ ಅನೇಕರು ಇಂದು ಮೇಳಗಳಲ್ಲಿ ವ್ಯವಸಾಯ ಮಾಡುತ್ತಿರುವುದನ್ನು ನಾವು ಕಾಣಬಹುದು.

ಕರ್ನಾಟಕ ಸಂಗೀತದ ಜ್ಞಾನವನ್ನು ಹೊಂದಿದ ಇವರು ಭಾಗವತರಾಗಿಯೂ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಸ್ವರಭಾರವನ್ನು ಹೊಂದಿದ ಇವರು ಇಳಿ ಶೃತಿಯಲ್ಲೂ, ಏರು ಶೃತಿಯಲ್ಲೂ ಸಮಾನವಾಗಿ ಹಾಡಬಲ್ಲರು. ಮೀನಾಕ್ಷಿ ಕಲ್ಯಾಣ ಎಂಬ ಪ್ರಸಂಗದಲ್ಲಿ ಇವರು ಹಾಡಿದ “ಗೆಲುವನೆಂಬುತ್ಸಾಹದಿ ಬರಲು ದೂರದಿ …” ಎಂಬ ಹಾಡು ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರಚಾರವನ್ನು ಪಡೆದಿತ್ತು. ಅವರು ಹಾಡಿದ ಈ ಹಾಡನ್ನು ಕೆಲವರು ತಮ್ಮ ಮೊಬೈಲ್ ನ ರಿಂಗ್ ಟೋನ್ ಆಗಿಯೂ ಬಳಸಿಕೊಂಡಿದ್ದರು. ದಂಡಯಾತ್ರೆಯನ್ನು ಕೈಗೊಂಡ ಮೀನಾಕ್ಷಿಯು ಕೈಲಾಸಪರ್ವತವನ್ನು ಕಂಡು ಹೊಗಳುತ್ತಿರುವ ಹಾಡು ಇದು.  ಉಂಡೆಮನೆ ಶ್ರೀಕೃಷ್ಣ ಭಟ್ಟರು ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ನಲುವತ್ತು ವರ್ಷಗಳ ಅನುಭವಿ. 

ಉಂಡೆಮನೆ ಎಂಬುದು ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದ ಒಂದು ಹಳ್ಳಿ. ಕುಂಬಳೆ ಸೀಮೆಯೊಳಗಣ ಒಂದು ಊರಿದು. ಉಂಡೆಮನೆ ಶ್ರೀ ಶಂಕರ ಭಟ್ಟ ಮತ್ತು ಶ್ರೀಮತಿ ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರನಾಗಿ ಶ್ರೀಕೃಷ್ಣ ಭಟ್ಟರ ಜನನ.  ಉಂಡೆಮನೆ ಶಂಕರ ಭಟ್ಟರ ಐದು ಮಂದಿ ಮಕ್ಕಳಲ್ಲಿ ಇವರು ಕಿರಿಯವರು. (ಮೂರು ಗಂಡು ಮತ್ತು ಇಬ್ಬರು ಹೆಣ್ಣು)  ಉಂಡೆಮನೆ ಶಂಕರ ಭಟ್ಟರು ಶಾಲಾ ಅಧ್ಯಾಪಕರು. ನಾಟಕದಲ್ಲಿ ವೇಷಗಳನ್ನೂ ಮಾಡುತ್ತಿದ್ದರು. ಇವರು ಪುರಾಣ ವಿಚಾರಗಳ ಜ್ಞಾನವನ್ನೂ ಹೊಂದಿದ್ದರು. 

ಉಂಡೆಮನೆ ಶ್ರೀಕೃಷ್ಣ ಭಟ್ಟರ ಅಜ್ಜನ ಮನೆ ಕುಂಟಿಕಾನ ಮಠ. ಈ ಮನೆಯವರೆಲ್ಲಾ ಯಕ್ಷಗಾನಾಸಕ್ತರು. ಶ್ರೀಕೃಷ್ಣ ಭಟ್ ಅವರು ಓದಿದ್ದು ಹತ್ತನೆಯ ತರಗತಿಯ ವರೆಗೆ. ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್ ಪೆರಡಾಲ, ನೀರ್ಚಾಲು ಎಂಬ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಕಲಾಸಕ್ತಿ ಇತ್ತು. ಆಟ ಮತ್ತು ತಾಳಮದ್ದಳೆ ಎಂಬ ಎರಡು ವಿಭಾಗಗಳಲ್ಲೂ ಆಸಕ್ತಿಯನ್ನು ಹೊಂದಿದ್ದರು. ಊರ ಪರವೂರ ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆಯಾಗಿತ್ತು. ಮನೆಯವರ ಮತ್ತು ಅಜ್ಜನ ಮನೆಯವರ ಪ್ರೋತ್ಸಾಹವೂ ಇತ್ತು. ವಿಶೇಷವಾಗಿ ಸೋದರ ಮಾವಂದಿರ ಪ್ರೋತ್ಸಾಹವೂ ಸಿಕ್ಕಿತ್ತು.

ಐದನೇ ಕ್ಲಾಸಿನಲ್ಲಿ ಓದುತ್ತಿರುವಾಗ ಕುಂಟಿಕಾನ ಮಠದಲ್ಲಿ ನಡೆದ ತಾಳಮದ್ದಳೆಯಲ್ಲಿ ಅರ್ಥ ಹೇಳಲು ಅವಕಾಶವಾಗಿತ್ತು. ಆರನೇ ತರಗತಿಯ ವಿದ್ಯಾರ್ಥಿಯಾಗಿರುವಾಗ ಇಕ್ಕೇರಿ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆದ ಪ್ರದರ್ಶನದಲ್ಲಿ ದೇವೇಂದ್ರನ ಬಲ ವೇಷ ಧರಿಸಿ ರಂಗವೇರಲು ಅವಕಾಶವಾಗಿತ್ತು. ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗ ಕುಂಬಳೆ ಸೇಸಪ್ಪ ಅವರ ಉಪ್ಪಳ ಮೇಳದಲ್ಲಿ ವೇಷ ಮಾಡುತ್ತಿದ್ದರು. ಊರಲ್ಲಿ ನಡೆಯುತ್ತಿದ್ದ ತಾಳಮದ್ದಳೆ ಕೂಟಗಳಲ್ಲೂ ಅರ್ಥ ಹೇಳುವ ಅವಕಾಶಗಳು ಸಿಕ್ಕಿತ್ತು. 

ಉಂಡೆಮನೆ ಶ್ರೀಕೃಷ್ಣ ಭಟ್ಟರು ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗ ಯಕ್ಷಗಾನ ಹಿಮ್ಮೇಳ ವಿದ್ಯೆಯನ್ನು ಕಲಿತಿದ್ದರು. ನೆಲ್ಲಿಕುಂಜೆ ನಡುಮನೆ ಶ್ರೀ ಜತ್ತಪ್ಪ ರೈಗಳಿಂದ ಭಾಗವತಿಕೆಯನ್ನೂ, ಏರಿಕ್ಕಳ ಶ್ರೀನಿವಾಸ ರಾಯರಿಂದ ಚೆಂಡೆ ಮದ್ದಳೆ ಬಾರಿಸುವ ಕ್ರಮವನ್ನೂ ಅಭ್ಯಸಿಸಿದ್ದರು. ಕುಬಣೂರು ಶ್ರೀಧರ ರಾಯರ ಹಾಡುಗಾರಿಕೆಗೆ ಮೊತ್ತಮೊದಲು ಚೆಂಡೆ ಬಾರಿಸುವ ಭಾಗ್ಯವು ಇವರದಾಗಿತ್ತು. ಈ ಸಮಯದಲ್ಲಿ ಹಿಮ್ಮೇಳಕ್ಕಿಂತಲೂ ಮುಮ್ಮೇಳದಲ್ಲಿ ಆಸಕ್ತಿಯು ಹೆಚ್ಚಿತ್ತು. ವೇಷ ಮಾಡಲು, ತಾಳಮದ್ದಳೆಯಲ್ಲಿ ಅರ್ಥ ಹೇಳಲು ಬಯಸುತ್ತಿದ್ದರು. ಆದುದರಿಂದ ಶಾಸ್ತ್ರೀಯವಾಗಿ ನಾಟ್ಯ ಕಲಿಯಲು ನಿರ್ಧರಿಸಿದ್ದರು. 

ಉಂಡೆಮನೆ ಶ್ರೀಕೃಷ್ಣ ಭಟ್ಟರು ಯಕ್ಷಗಾನ ಹೆಜ್ಜೆಗಾರಿಕೆ ಕಲಿತದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ. ಶ್ರೀ ಕೆ.ಗೋವಿಂದ ಭಟ್ ಮತ್ತು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ತರಬೇತಿ. ಆಗ ನೆಡ್ಲೆ ನರಸಿಂಹ ಭಟ್ಟರು ತರಬೇತಿ ಕೇಂದ್ರದ ಹಿಮ್ಮೇಳ ಗುರುವಾಗಿದ್ದರು. ತರಬೇತಿ ಕೇಂದ್ರದಲ್ಲಿ ಬಾಯಾರು ರಮೇಶ ಭಟ್, ಉಮಾಮಹೇಶ್ವರ ಶರ್ಮ, ಚಾರ್ಮಾಡಿ ಬಾಬು ಗೌಡ, ನಾರಾಯಣ ಸುವರ್ಣ, ದಾಮೋದರ ಪಾಟಾಳಿ, ಲಕ್ಷ್ಮಣ ಕಲ್ಲಗುಡ್ಡೆ ಅವರು  ಉಂಡೆಮನೆ ಶ್ರೀಕೃಷ್ಣ ಭಟ್ಟರ ಸಹಪಾಠಿಗಳಾಗಿದ್ದರು. ತರಬೇತಿ ಕೇಂದ್ರದಲ್ಲಿ ನಡೆದ ಮೂರು ಪ್ರದರ್ಶನಗಳಲ್ಲಿ ಅರ್ಜುನ, ಇಂದ್ರಜಿತು, ಕಾರ್ತವೀರ್ಯ ಪಾತ್ರಗಳನ್ನು ಮಾಡುವ ಅವಕಾಶವು ಸಿಕ್ಕಿತ್ತು.

ವ್ಯವಸಾಯ ಆರಂಭಿಸಿದ್ದು ಕಟೀಲು ಮೇಳದಲ್ಲಿ. ಸದ್ರಿ ಮೇಳದಲ್ಲಿ ಆರು ವರ್ಷ ತಿರುಗಾಟ. ಮೊದಲ ಮೂರು ವರ್ಷ ವೇಷಧಾರಿಯಾಗಿ ತಿರುಗಾಟ. ಮುಂದಿನ ಮೂರು ವರ್ಷಗಳ ಕಾಲ ಸಂಗೀತಗಾರನಾಗಿ ವ್ಯವಸಾಯ. ಈ ಸಂದರ್ಭದಲ್ಲಿ ಬಲಿಪ ನಾರಾಯಣ ಭಾಗವತರು ಪಸಂಗದಲ್ಲಿ ಹಾಡಲೂ ಅವಕಾಶವಿತ್ತು ಪ್ರೋತ್ಸಾಹಿಸಿದ್ದರು. ಕಟೀಲು ಎರಡನೇ ಮೇಳದಲ್ಲಿ ಆರು ವರ್ಷಗಳ ವ್ಯವಸಾಯದ ಬಳಿಕ ಮೇಳದ ತಿರುಗಾಟಕ್ಕೆ ವಿದಾಯ.

ಬಳಿಕ ಹವ್ಯಾಸಿ ಕಲಾವಿದನಾಗಿ ಆಟ ಕೂಟಗಳಲ್ಲಿ ಭಾಗವತನಾಗಿ, ವೇಷಧಾರಿಯಾಗಿ ಭಾಗವಹಿಸುತ್ತಾ ಬಂದಿರುತ್ತಾರೆ. ಉಪ್ಪಳ, ಬಪ್ಪನಾಡು, ಮಲ್ಲ, ಕೊಲ್ಲಂಗಾನ, ಕೂಡ್ಲು, ಸಸಿಹಿತ್ಲು ಮೊದಲಾದ ಮೇಳಗಳ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಉಂಡೆಮನೆ ಶ್ರೀಕೃಷ್ಣ ಭಟ್ಟರು ದೇಂತಡ್ಕ ಮೇಳದ ಕಲಾವಿದನಾಗಿ ವ್ಯವಸಾಯ ಮಾಡುತ್ತಿದ್ದಾರೆ.

ಯಕ್ಷಗಾನ ಗುರುವಾಗಿ ಇವರು ನೀರ್ಚಾಲು, ಬೇಳ, ಕುಂಟಿಕಾನ ಶಾಲೆ, ಬದಿಯಡ್ಕ, ಕಲ್ಲಕಟ್ಟ, ಕಿದೂರು, ಮುಂಡ್ಯತ್ತಡ್ಕ, ಎಡನೀರಿನ ಸಮೀಪದ ಪಾಂಡಿ, ಕೀರಿಕ್ಕಾಡು, ಆರ್ಯಾಪು ಖಂಡಿಗೆ, ಕಬಕ, ಕೇಪು, ಅಡ್ಯನಡ್ಕ ಮೊದಲಾದ ಕಡೆಗಳಲ್ಲಿ ತರಬೇತಿಯನ್ನೂ ನೀಡಿರುತ್ತಾರೆ. ವೇದ ಮಂತ್ರಗಳನ್ನು ಕಲಿತು ಕಳೆದ ಇಪ್ಪತ್ತೈದು ವರ್ಷಗಳಿಂದ ಪೌರೋಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಇವರು ಪತ್ನಿ ಮತ್ತು ಪುತ್ರಿಯ ಜತೆ ನೇರಳಕಟ್ಟೆ ಎಂಬಲ್ಲಿ ವಾಸವಾಗಿದ್ದಾರೆ. ಇವರ ಪತ್ನಿ ಶ್ರೀಮತಿ ಸುಮಾ. ಇವರು ಗೃಹಣಿ. ಪುತ್ರಿ ಕುಮಾರಿ ಸ್ವರ್ಣಲಕ್ಷ್ಮಿ. ಇವರಿ ಸ್ನಾತಕೋತ್ತರ ಪದವೀಧರೆ.  ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಅವರಿಗೆ ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಉಂಡೆಮನೆ ಶ್ರೀಕೃಷ್ಣ ಭಟ್, ಮೊಬೈಲ್: 9448108767

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083

ಇಂದು ಧ್ವನಿವರ್ಧಕರಹಿತ ತಾಳಮದ್ದಳೆ – ಈಗ ಅತಿ ಅಪರೂಪದ ಮೈಕ್ ಇಲ್ಲದ ತಾಳಮದ್ದಳೆ, ಕಳೆದ ಶತಮಾನದ ಮೈಕ್ ಇಲ್ಲದ ತಾಳಮದ್ದಳೆಗಳು ಹೇಗಿರಬಹುದು ಎಂಬ ಪ್ರಶ್ನೆಗೆ ಉತ್ತರರೂಪವಾಗಿ ಇಂದು ಮೈಕ್ ಲೆಸ್ ತಾಳಮದ್ದಳೆ!

ಇಂದು ಒಂದು ವಿಶೇಷವಾದ ತಾಳಮದ್ದಳೆ ನಡೆಯಲಿದೆ.

ಇದರ ವಿಶೇಷತೆಯೇನೆಂದರೆ ಈ ತಾಳಮದ್ದಳೆಯಲ್ಲಿ ಮೈಕ್ (ಧ್ವನಿವರ್ಧಕ) ಇರುವುದಿಲ್ಲ. ಈಗಿನ ದಿನಗಳಲ್ಲಿ ಮೈಕ್ ಇಲ್ಲದ ತಾಳಮದ್ದಲೆಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ  ನಿರ್ಮಾಣವಾಗಿದೆ. ಆದರೂ ಅದನ್ನು ಸಾಧ್ಯವಾಗಿಸುವ ಪ್ರಯತ್ನವೇ ಈ ತಾಳಮದ್ದಳೆಯ ಆಯೋಜನೆ.

ಮೈಕ್ ಇಲ್ಲದ ತಾಳಮದ್ದಳೆಗಳು ನಡೆಯುತ್ತಿದ್ದುದು ಕಳೆದ ಶತಮಾನದಲ್ಲಿ. ಆದರೆ ಈ ಶತಮಾನದಲ್ಲಿಯೂ ಅದನ್ನು ಸಾಧ್ಯವಾಗಿಸುವ ಪ್ರಯತ್ನ ಇಲ್ಲಿದೆ. 

‘ವರ್ಣಕಲಾವಿದ ಪಣಂಬೂರು ಶ್ರೀ ರಾಘವರಾಯರ ಜನ್ಮ ಶತಮಾನೋತ್ಸವ 2022-23 ಕಾರ್ಯಕ್ರಮದ ಅಂಗವಾಗಿ ಇಂದು, 22.11.2022ನೇ ಮಂಗಳವಾರ ರಾತ್ರಿ ಘಂಟೆ 8.38ಕ್ಕೆ ಸರಿಯಾಗಿ ರಾಮಾಯಣದ ಆಯ್ದ ಭಾಗಗಳ ಪ್ರಸಂಗಗಳ ತಾಳಮದ್ದಳೆ ಕೂಟ ನಡೆಯಲಿದೆ.

ಶ್ರೀ ಮಧುಕರ ಭಗವತ್, ಶ್ರೀಮತಿ ಸುಧಾ ಮಧುಕರ, ಶ್ರೀಮತಿ ಶಾಂಭವಿ ರಾಘವ ರಾವ್ ಅವರು ಕಾರ್ಯಕ್ರಮಕ್ಕೆ ಕಲಾಭಿಮಾನಿಗಳನ್ನು ಆದರದಿಂದ ಸ್ವಾಗತಿಸಿದ್ದಾರೆ.  ಪ್ರಸಂಗ, ಕಲಾವಿದರ ವಿವರಗಳಿಗೆ ಚಿತ್ರ ನೋಡಿ. 

ಮಂಗಳೂರು ಸ್ಪೋಟದ ಆರೋಪಿ ಶಾರೀಕ್  ಕುಟುಂಬದವರ ಅಕೌಂಟ್‍ಗೆ ಲಕ್ಷ ಗಟ್ಟಲೆ ಹಣ! ಅಷ್ಟೊಂದು ಹಣ ಟ್ರಾನ್ಸ್‌ಫರ್ ಆಗುತ್ತಿದ್ದುದು ಎಲ್ಲಿಂದ?  ಭಾರತವನ್ನು ಇಸ್ಲಾಮ್ ರಾಷ್ಟ್ರವನ್ನಾಗಿ ರೂಪಿಸುವ ಕನಸು ಕಂಡಿದ್ದ ಶಾರೀಕ್ 

0

ಶಾರೀಕ್ ತನ್ನ ಗುರು ಯಾಸೀನ್, ಸ್ನೇಹಿತ ಮಾಝ್ ಬಂಧನದ ಸೇಡಿಗೆ ಪ್ರತೀಕಾರ ತೀರಿಸಿಕೊಳ್ಳಲು ಮಂಗಳೂರು ಸ್ಪೋಟದ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

ಅದೂ ಅಲ್ಲದೆ ಈ ಮೂವರೂ ಸೇರಿ ಭಾರತವನ್ನು ಇಸ್ಲಾಮ್ ರಾಷ್ಟ್ರವನ್ನಾಗಿ ರೂಪಿಸುವ ಕನಸು ಕಂಡಿದ್ದರು ಎಂದು ಆ ಗುರಿಯನ್ನು ಹೊಂದಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ.

ತನಿಖೆಯ ವೇಳೆಯಲ್ಲಿ ಮತ್ತಷ್ಟು ಮಾಹಿತಿಗಳು ಬಹಿರಂಗವಾಗುತ್ತಾ ಇದೆ. ಪೊಲೀಸ್ ತನಿಖೆಯಲ್ಲಿ ಮಹತ್ವದ ವಿಚಾರವೊಂದು ತಿಳಿದುಬಂದಿದೆ. ಶಾರೀಕ್  ತನ್ನ ಸಹೋದರಿಯರ ಅಕೌಂಟ್ ಗೆ ಲಕ್ಷಗಟ್ಟಲೆ ಹಣವನ್ನು ವರ್ಗಾಯಿಸಿರುವುದು ಗೋಚರಿಸಿದೆ.

ಇಷ್ಟೆಲ್ಲಾ ಅಗಾಧ ಪ್ರಮಾಣದ ಮೊತ್ತ ಶಾರೀಕ್ ಗೆ ಎಲ್ಲಿಂದ ಬರುತ್ತಿತ್ತು? ವಿದೇಶಿ ಮೂಲಗಳಿಂದ ಭಾರತದ ವಿರುದ್ಧ ಕಾರಸ್ಥಾನ ನಡೆಸಲು ಈ ಮೊತ್ತ ಬರುತ್ತಿದೆಯಾ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.

ಪೊಲೀಸರು ಈ ಬಗ್ಗೆ ಇನ್ನಷ್ಟು ಚುರುಕಿನ ತನಿಖೆಯನ್ನು ಕೈಗೊಂಡಿದ್ದಾರೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರಕಲಿದೆ. 

“ಸತ್ಯೇಂದ್ರ ಜೈನ್‍ಗೆ ಜೈಲಿನಲ್ಲಿ ಮಸಾಜ್ ಮಾಡಿದ್ದು ಅಲ್ಲ, ಅದು ಫಿಸಿಯೋಥೆರಪಿ”: ಕೇಜ್ರಿವಾಲ್ ಮತ್ತೊಮ್ಮೆ ಸುಳ್ಳು? –  “ಮಸಾಜ್ ಮಾಡಿದ್ದು ಅತ್ಯಾಚಾರ ಪ್ರಕರಣದಲ್ಲಿ ಖೈದಿಯಾಗಿದ್ದ ರಿಂಕು, ಆತ ಫಿಸಿಯೋಥೆರಪಿಸ್ಟ್ ಅಲ್ಲ”: ತಿಹಾರ್ ಜೈಲಿನ ಅಧಿಕೃತ ಮೂಲಗಳ ಹೇಳಿಕೆ, ಕೇಜ್ರಿವಾಲ್ ಗೆ ತೀವ್ರ  ಮುಖಭಂಗ  

0

ಜೈಲು ಸೇರಿರುವ ಅಕ್ರಮ ಹಣ ವರ್ಗಾವಣೆ ಆರೋಪಿ ಮತ್ತು ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ ಎಂದು ಬಿಜೆಪಿ ವೀಡಿಯೊ ಬಿಡುಗಡೆ ಸಹಿತ ಆರೋಪಿಸಿತ್ತು.

ಇದಕ್ಕೆ ದೆಹಲಿಯ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಅವರು, ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ಫಿಸಿಯೋಥೆರಪಿ ಮಾಡಲಾಗಿದೆ.  ಅದು ಮಸಾಜ್ ಅಲ್ಲ ಎಂದು ಬಿಜೆಪಿ ಆರೋಪವನ್ನು ಲೇವಡಿ ಮಾಡಿದ್ದಾರೆ.

ಆದರೆ ಇದೀಗ ಕೇಜ್ರಿವಾಲ್ ಮತ್ತೊಮ್ಮೆ ತೀವ್ರ ಮುಖಭಂಗ ಅನುಭವಿಸಿದ್ದಾರೆ. ತಿಹಾರ್ ಜೈಲಿನ ಅಧಿಕೃತ ಮೂಲಗಳ ಪ್ರಕಾರ ಜೈಲಿನಲ್ಲಿರುವ ದೆಹಲಿಯ ಮಂತ್ರಿ ಸತ್ಯೇಂದ್ರ ಜೈನ್‌ಗೆ ಮಸಾಜ್ ಸೇವೆ ಮಾಡಿದ್ದು ಕೈದಿಯಾಗಿರುವ ರಿಂಕು.

ಅವನು ಅತ್ಯಾಚಾರ ಪ್ರಕರಣದಲ್ಲಿ ಖೈದಿಯಾಗಿದ್ದಾನೆ. ಆತನ ಮೇಲೆ (ಮಸಾಜ್ ಮಾಡಿದ ರಿಂಕು ಮೇಲೆ) ಪೋಕ್ಸೋ ಕಾಯಿದೆಯ 6 ಮತ್ತು IPC ಯ 376, 506 ಮತ್ತು 509 ರ ಆರೋಪಗಳನ್ನು ಹೊರಿಸಲಾಗಿದೆ. ಆತ ಫಿಸಿಯೋಥೆರಪಿಸ್ಟ್ ಅಲ್ಲ ಎಂದು ತಿಹಾರ್ ಜೈಲಿನ ಅಧಿಕೃತ ಮೂಲಗಳು ಹೇಳಿವೆ.

ಇದರಿಂದ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಸುಳ್ಳು ಹೇಳಿಕೆಗಳಿಂದ ತೀವ್ರ ಮುಜುಗರ ಅನುಭವಿಸಿದ್ದಾರೆ.

ಶಿಕ್ಷಕ ಹುದ್ದೆಗೆ ಆಯ್ಕೆಯಾದ ಮಂಗಳಮುಖಿ ಪೂಜಾ 

0

ಕರ್ನಾಟಕ ಸರ್ಕಾರಿ ಶಾಲೆಗಳಿಗೆ 3 ತೃತೀಯಲಿಂಗಿ ಶಿಕ್ಷಕರು ಆಯ್ಕೆಯಾಗಿದ್ದಾರೆ.

ಕರ್ನಾಟಕ ಸರ್ಕಾರವು 13,363 ಹೊಸದಾಗಿ ನೇಮಕಗೊಂಡ ಶಿಕ್ಷಕರ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದಂತೆ ಸರ್ಕಾರಿ ಶಾಲೆಗಳಲ್ಲಿ ತೃತೀಯಲಿಂಗಿ ಸಮುದಾಯದಿಂದ ಮೂವರು ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಶನಿವಾರ ಪ್ರಕಟಿಸಿದೆ. ರಾಜ್ಯದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

15,000 ಹುದ್ದೆಗಳಲ್ಲಿ ತೃತೀಯಲಿಂಗಿ ಸಮುದಾಯಕ್ಕೆ ಶೇ 1ರಷ್ಟು ಮೀಸಲಾತಿ ನೀಡಲಾಗಿದೆ. ಅವರ ಪೋಸ್ಟ್, “ಲಿಂಗ ಅಲ್ಪಸಂಖ್ಯಾತರಿಗೆ ಶಿಕ್ಷಕರ ನೇಮಕಾತಿಯಲ್ಲಿ 1% ಮೀಸಲಾತಿ ನೀಡಲಾಗಿದೆ. ಮೊದಲ ಬಾರಿಗೆ ಮೂರು ಲಿಂಗ ಅಲ್ಪಸಂಖ್ಯಾತರನ್ನು ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ.

ವರದಿಯ ಪ್ರಕಾರ, ಒಟ್ಟು 10 ಟ್ರಾನ್ಸ್‌ಜೆಂಡರ್‌ಗಳು ಪರೀಕ್ಷೆಗೆ ಹಾಜರಾಗಿದ್ದರು, ಅವರಲ್ಲಿ ಮೂವರನ್ನು ಅಂತಿಮ ನೇಮಕಾತಿಯಲ್ಲಿ ಆಯ್ಕೆ ಮಾಡಲಾಗಿದೆ. ಸುರೇಶ್ ಬಾಬು, ರವಿ ಕುಮಾರ್ ವೈ ಆರ್ ಮತ್ತು ಅಶ್ವತ್ಥಾಮ(ಪೂಜಾ) ಮೂವರು ತೃತೀಯಲಿಂಗಿಗಳಾಗಿದ್ದರೆ, ಬಾಬು ಇಂಗ್ಲಿಷ್ ಮತ್ತು ಇತರ ಇಬ್ಬರು ವ್ಯಕ್ತಿಗಳು ಸಮಾಜ ವಿಜ್ಞಾನ ವಿಷಯಗಳನ್ನು ಬೋಧಿಸಲಿದ್ದಾರೆ ಎಂದು ವರದಿ ತಿಳಿಸಿದೆ.  

ಮಾನ್ವಿ ತಾಲೂಕಿನ ನೀರಮಾನ್ವಿಯ ಅಶ್ವಥಾಮ ಬೆಳೆಯುತ್ತಾ ಪೂಜಾ ಆಗಿ ಬದಲಾಗಿದ್ದಾರೆ.  ಪೂಜಾ ತೃತೀಯ ಲಿಂಗ ಮೀಸಲಾತಿಯಲ್ಲಿ ಪರೀಕ್ಷೆ ಬರೆದು 6 ರಿಂದ 8 ನೇ ತರಗತಿ ಸಮಾಜ ವಿಜ್ಞಾನ ವಿಷಯದ ಶಿಕ್ಷಕಿ ಆಗಿ ಆಯ್ಕೆಯಾಗಿದ್ದಾರೆ.  

ರಾಯಚೂರಿನಲ್ಲಿ ಬಿಎಡ್ ಪೂರ್ಣಗೊಳಿಸಿದ ಅಶ್ವಥಾಮ ಓದು ಪೂರ್ಣಗೊಳ್ಳುತ್ತಲೇ ದೈಹಿಕ ಬದಲಾವಣೆಯಿಂದಾಗಿ  ಪೂಜಾ ಆಗಿ ಬದಲಾಗಿದ್ದಾರೆ. 14 ನೇ ವಯಸ್ಸಿನ ಬಳಿಕ ತನ್ನ ದೈಹಿಕ ಏರುಪೇರುಗಳ  ಕಾರಣಕ್ಕೆ 4 ವರ್ಷಗಳ ಕಾಲ ಮನೆ ಬಿಟ್ಟು ಹೋಗಿದ್ದರು, ಬಳಿಕ ಮನೆಯವರು ಕರೆದುಕೊಂಡು ಬಂದಿದ್ದರು. ಮರಳಿ ಬಂದು ಓದು ಮುಂದುವರೆಸಿ ಹುದ್ದೆಗೆ ಆಯ್ಕೆಯಾಗಿ ಯಶಸ್ಸನ್ನು ಸಾಧಿಸಿದ್ದಾರೆ. 

ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಶಾಲಾ ಶಿಕ್ಷಕಿ ಮೃತ್ಯು

0

ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ.

ಹತ್ಯೆಗೀಡಾದವರನ್ನು ಕೇರಳದ ಅಲಪ್ಪುಳದ ಕಾಯಂಕುಲಂ ಎಸ್ ಎನ್ ಶಾಲೆಯ ಶಿಕ್ಷಕಿ ಸುಮಂ (51) ಎಂದು ಗುರುತಿಸಲಾಗಿದೆ. ಈಕೆ ಭರಣಿಕಾವು ತೆಕ್ಕೆಕರ ಪಾಲಮುಟ್ಟೋಮ್‌ನ ಸ್ಥಳೀಯ ನಿವಾಸಿಯಾಗಿದ್ದರು ಎಂದು ತಿಳಿದುಬಂದಿದೆ.

ಕಾಯಂಕುಲಂ ಥಟ್ಟರಂಬಲಂ ರಸ್ತೆಯ ತಟ್ಟವಾಝಿ ಜಂಕ್ಷನ್‌ನಲ್ಲಿ ಸೋಮವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಅವರು ಮನೆಯಿಂದ ತನ್ನ ಸ್ಕೂಟರಿನಲ್ಲಿ ಎಂದಿನಂತೆ ಶಾಲೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

ಪುತ್ತೂರು ಮೂಲದ ಹಿಂದೂ ಯುವತಿಯೊಂದಿಗೆ ಬೆಂಗಳೂರಿನಲ್ಲಿ ಮುಸ್ಲಿಂ ಯುವಕನ ಮದುವೆ – ಮತ್ತೊಂದು ಲವ್ ಜಿಹಾದ್ ಆರೋಪ

0

ನಮ್ಮ ದೇಶದಲ್ಲಿ ಪ್ರತಿದಿನವೂ ಲವ್ ಜಿಹಾದ್ ಗೆ ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ. ಎಷ್ಟೋ ಯುವತಿಯರ ಹೆಣಗಳು ಬೀಳುತ್ತಿದ್ದರೂ ಹುಡುಗಿಯರಿಗೆ ಬುದ್ದಿ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಿಂದೂಗಳಲ್ಲಿ ಸ್ತ್ರೀಯರಿಗೆ ಇರುವ ಅತಿಯಾದ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರವೇ ಇದಕ್ಕೆ ಕಾರಣ.

ಅವರಿಗೆ ಯೋಗ್ಯ ಸಂಸ್ಕಾರವನ್ನು ನೀಡದಿರುವುದು ಇದಕ್ಕೆ ಪ್ರಬಲವಾದ ಕಾರಣವಾಗಿ ಗೋಚರಿಸುತ್ತಿದೆ. ಚಿತ್ರವಿಚಿತ್ರ ಚಿಕಿತ್ಸೆಗಳನ್ನು ಮಾಡಿಕೊಂಡು ತಾತ್ಕಾಲಿಕ ಕಾರಣದಿಂದ ಉಂಟಾಗುವ ದೀರ್ಘ ದೈಹಿಕ ಸಾಮರ್ಥ್ಯಕ್ಕೆ ಮರುಳಾಗಿ ಸ್ತ್ರೀಯರು ಪುರುಷರ ಹಿಂದೆ ಬೀಳುತ್ತಿರುವುದು ಹಲವಾರು ಪ್ರಕರಣಗಳಲ್ಲಿ ಸ್ಪಷ್ಟವಾಗುತ್ತಾ ಬರುತ್ತಿದೆ. 

ಇದೀಗ ಇನ್ನೊಂದು ಪ್ರಕರಣದಲ್ಲಿ ಹಿಂದೂ ಹುಡುಗಿಯೊಬ್ಬಳು ಬೆಂಗಳೂರಿನಲ್ಲಿ ಮುಸ್ಲಿಂ ಮಧ್ಯವಯಸ್ಕನನ್ನು ಮದುವೆಯಾಗುತ್ತಿದ್ದಾಳೆ. ಬೆಂಗಳೂರಿನಲ್ಲಿ ನೆಲೆಸಿರುವ ದಕ್ಷಿಣ ಕನ್ನಡದ ಪುತ್ತೂರಿನ ಹುಡುಗಿಯೊಬ್ಬಳು 44 ವರ್ಷದ ಶೇಕ್ ಮೊಹಮ್ಮದ್ ಸಲೀಂ ಎಂಬಾತನನ್ನು ಮದುವೆಯಾಗುತ್ತಿದ್ದಾಳೆ.

ಈ ಬಗ್ಗೆ ಬೆಂಗಳೂರಿನ ಬೊಮ್ಮನಹಳ್ಳಿಯ ವಿವಾಹ ನೋಂದಣಿ ಕಚೇರಿಯಲ್ಲಿ ಈಗಾಗಲೇ ಸೂಚನಾ ಫಲಕದಲ್ಲಿ ಇಬ್ಬರ ವಿವರಗಳನ್ನು ಫೋಟೋ ಸಹಿತ ಲಗತ್ತಿಸಲಾಗಿದೆ. ಈ ನೋಟೀಸ್ ಬೋರ್ಡಿನಲ್ಲಿ ಅಂಟಿಸಲಾದ ಸೂಚನಾ ಪತ್ರದ  ಪ್ರಕಾರ ಬೆಂಗಳೂರಿನ  44 ವರ್ಷದ ಶೇಕ್ ಮೊಹಮ್ಮದ್ ಸಲೀಂ ಎಂಬಾತನನ್ನು ಪುತ್ತೂರಿನ ದರ್ಬೆಯ 34 ವರ್ಷದ ಅಕ್ಷತಾ ಎಂಬಾಕೆ ಮದುವೆಯಾಗಲಿದ್ದಾಳೆ.

ಹಿಂದೂ ಸಂಘಟನೆಗಳು ಈ ಬಗ್ಗೆ ಆಕ್ರೋಶ ಹೊರಹಾಕಿವೆ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. “ನಾವೇನು ಬರೀ ಆಕ್ರೋಶ, ರೋಷ ವ್ಯಕ್ತಪಡಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದೇವೆ. ರಾಜ್ಯದಲ್ಲಿ ಹಿಂದೂ ಪರ ಸರಕಾರವಿದ್ದರೂ ಹಿಂದೂಗಳಿಗೆ ನ್ಯಾಯ ಒದಗಿಸಲಾಗದೆ ಕೈ ಕಟ್ಟಿ ಕುಳಿತಿದೆ” ಎಂದು ಹಿಂದೂಗಳು ತೀವ್ರ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.