Sunday, March 15, 2026
Home Blog Page 103

ನಾಳೆಯಿಂದ ತಾಳಮದ್ದಳೆ ಸಪ್ತಾಹ – ಯಜ್ಞ ಸಂರಕ್ಷಣೆ-ಅಹಲ್ಯೋದ್ಧಾರ-ಸೀತಾಕಲ್ಯಾಣ, ವನಗಮನ-ಪಾದುಕಾಪ್ರದಾನ, ಮಾರೀಚನೀತಿ-ಸೀತಾಪಹಾರ, ರಾಮದರ್ಶನ-ಸುಗ್ರೀವಸಖ್ಯ, ವಾಲಿಮೋಕ್ಷ-ಚೂಡಾಮಣಿ-ವಿಭೀಷಣ ಪ್ರಪತ್ತಿ, ಕುಂಭಕರ್ಣ-ಅತಿಕಾಯ-ಇಂದ್ರಜಿತು-ರಾವಣವಧೆ, ಅಗ್ನಿಪರೀಕ್ಷೆ-ರಾಮೇಶ್ವರ ಕ್ಷೇತ್ರ ಮಹಾತ್ಮೆ-ನಿಜಪಟ್ಟಾಭಿಷೇಕ 

ನಾಳೆ ದಿನಾಂಕ 07.02.2023, ಮಂಗಳವಾರದಿಂದ ರಾಮಾಯಣದ ವಿವಿಧ ಪ್ರಸಂಗಗಳ ತಾಳಮದ್ದಳೆ ಸಪ್ತಾಹ ನಡೆಯಲಿದೆ.

ಅಶ್ವತ್ಥಪುರದ ಶ್ರೀ ಬಹ್ಮಾನಂದ ಸದನದಲ್ಲಿ ನಾಳೆಯಿಂದ ( 07.02.2023) ಏಳು ದಿನಗಳ ಕಾಲ ಪ್ರತಿದಿನ ಸಂಜೆ 4.45 ಘಂಟೆಗೆ ತಾಳಮದ್ದಳೆ ಆರಂಭವಾಗಲಿದೆ. 

ರಾಮಾಯಣದ ವಿವಿಧ ಪ್ರಸಂಗಗಳಾದ  ಯಜ್ಞ ಸಂರಕ್ಷಣೆ-ಅಹಲ್ಯೋದ್ಧಾರ-ಸೀತಾಕಲ್ಯಾಣ, ವನಗಮನ-ಪಾದುಕಾಪ್ರದಾನ, ಮಾರೀಚನೀತಿ-ಸೀತಾಪಹಾರ, ರಾಮದರ್ಶನ-ಸುಗ್ರೀವಸಖ್ಯ, ವಾಲಿಮೋಕ್ಷ-ಚೂಡಾಮಣಿ-ವಿಭೀಷಣ ಪ್ರಪತ್ತಿ, ಕುಂಭಕರ್ಣ-ಅತಿಕಾಯ-ಇಂದ್ರಜಿತು-ರಾವಣವಧೆ, ಅಗ್ನಿಪರೀಕ್ಷೆ-ರಾಮೇಶ್ವರ ಕ್ಷೇತ್ರ ಮಹಾತ್ಮೆ-ನಿಜಪಟ್ಟಾಭಿಷೇಕ ಎಂಬ ಕಥಾನಕಗಳು ತಾಳಮದ್ದಳೆ ರೂಪದಲ್ಲಿ ಪ್ರಸ್ತುತಿಯಾಗಲಿದೆ.

ಕಲಾವಿದರ ವಿವರಗಳಿಗೆ ಚಿತ್ರ ನೋಡಿ 

ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯ ಮೇಲೆ ಆಂಬ್ಯುಲೆನ್ಸ್‌ನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಆಸ್ಪತ್ರೆ ಸಿಬ್ಬಂದಿ ಬಂಧನ

ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದ ಮಹಿಳೆಯ ಮೇಲೆ ಆಂಬ್ಯುಲೆನ್ಸ್‌ನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

ತನ್ನ ಜೀವನವನ್ನು ಕೊನೆಗೊಳಿಸಲು ವಿಷ ಸೇವಿಸಿದ ಮಹಿಳೆ ಅಪರಿಚಿತನೊಬ್ಬನ ಕೈಯಲ್ಲಿ ಹೆಚ್ಚಿನ ಚಿತ್ರಹಿಂಸೆಯನ್ನು ಅನುಭವಿಸಿದ್ದಾಳೆ.

ತುರ್ತು ಕಾರ್ಯಾಚರಣೆಯಲ್ಲಿ ಚಲಿಸುತ್ತಿದ್ದ ಆಂಬ್ಯುಲೆನ್ಸ್‌ನಲ್ಲಿ ಈ ಭೀಕರ ಘಟನೆ ನಡೆದಿದೆ.

ತ್ರಿಶೂರ್ ಸಮೀಪ ನಡೆದ ಈ ಘಟನೆಯಲ್ಲಿ ಕೊಡುಂಗಲ್ಲೂರು ತಾಲೂಕು ಆಸ್ಪತ್ರೆಯಲ್ಲಿ ಹಂಗಾಮಿ ಸಿಬ್ಬಂದಿಯಾಗಿರುವ ದಯಾಲಾಲ್ ಅವರನ್ನು ಬಂಧಿಸಲಾಗಿದೆ.

16 ವರ್ಷದ ಬಾಲಕಿಯ ಮೇಲೆ ಶಾರ್ಕ್ ದಾಳಿ – ಬಾಲಕಿ ಸಾವು

0

ಡಾಲ್ಫಿನ್‌ಗಳೊಂದಿಗೆ ಈಜುವಾಗ 16 ವರ್ಷದ ಬಾಲಕಿಯು ಅಪಾಯಕಾರಿ ಜಲಚರ ಶಾರ್ಕ್‌ ದಾಳಿಯಿಂದ ಸಾವಿಗೀಡಾಗಿದ್ದಾಳೆ.

ಶಾರ್ಕ್ ದಾಳಿ ಸಂಭವಿಸಿದಾಗ ಹುಡುಗಿ ನದಿಯಲ್ಲಿ ಡಾಲ್ಫಿನ್‌ಗಳ ಪಾಡ್‌ನೊಂದಿಗೆ ಈಜಲು ಜೆಟ್ ಸ್ಕೀಯಿಂದ ಜಿಗಿದಿದ್ದಾಳೆ ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪ್ ಭಾನುವಾರ ವರದಿ ಮಾಡಿದೆ. ಪಶ್ಚಿಮ ಆಸ್ಟ್ರೇಲಿಯಾದ ರಾಜ್ಯ ರಾಜಧಾನಿ ಪರ್ತ್‌ನಲ್ಲಿ ನದಿಯಲ್ಲಿ ಶಾರ್ಕ್‌ನಿಂದ 16 ವರ್ಷದ ಬಾಲಕಿಯೊಬ್ಬಳು ಶನಿವಾರ ಸಾವನ್ನಪ್ಪಿದ್ದಾಳೆ.

ಶನಿವಾರ (0745 GMT) ಪರ್ತ್‌ನ ಫ್ರೀಮೆಂಟಲ್ ಬಂದರು ಪ್ರದೇಶದಲ್ಲಿ ಸ್ವಾನ್ ನದಿಯ ಸಂಚಾರ ಸೇತುವೆಯ ಬಳಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಾರ್ಕ್ ದಾಳಿ ಸಂಭವಿಸಿದಾಗ ಯುವತಿಯು ನದಿಯಲ್ಲಿ ಡಾಲ್ಫಿನ್‌ಗಳ ಪಾಡ್‌ನೊಂದಿಗೆ ಈಜಲು ಜೆಟ್ ಸ್ಕೀಯಿಂದ ಹಾರಿದ್ದರು ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪ್ ಭಾನುವಾರ ವರದಿ ಮಾಡಿದೆ.

ಯಾವ ರೀತಿಯ ಶಾರ್ಕ್ ಬಾಲಕಿಯ ಮೇಲೆ ದಾಳಿ ಮಾಡಿದೆ ಎಂದು ಅಧಿಕಾರಿಗಳಿಗೆ ಖಚಿತವಾಗಿಲ್ಲ ಎಂದು ಎಬಿಸಿ ವರದಿ ಮಾಡಿದೆ.

ಗುರುದಕ್ಷಿಣೆ, ಪಾಂಚಜನ್ಯ, ದಕ್ಷಯಜ್ಞ – ತೆಂಕುತಿಟ್ಟು, ಬಡಗುತಿಟ್ಟುಗಳ ಯಕ್ಷಗಾನ ಪ್ರದರ್ಶನ 

ಕರಾವಳಿ ಯಕ್ಷಗಾನ ಕೇಂದ್ರದ ಹನ್ನೆರಡನೆಯ ವಾರ್ಷಿಕೋತ್ಸವದ ಅಂಗವಾಗಿ  ತೆಂಕುತಿಟ್ಟು, ಬಡಗುತಿಟ್ಟುಗಳ  ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಗುರುದಕ್ಷಿಣೆ, ಪಾಂಚಜನ್ಯ, ದಕ್ಷಯಜ್ಞ ಎಂಬ ಪ್ರಸಂಗಗಳ ಪ್ರದರ್ಶನ ಮೈಸೂರಿನಲ್ಲಿ ನಡೆಯಲಿದೆ. ವಿವರಗಳಿಗಾಗಿ ಚಿತ್ರ ನೋಡಿ 

ಅಕ್ರಮ ಸಂಬಂಧ ಹಿನ್ನೆಲೆ, ಕತ್ತು ಹಿಸುಕಿ ಪತಿಯನ್ನು ಹತ್ಯೆ ಮಾಡಿದ ಪತ್ನಿ, ಪ್ರಿಯಕರನ ಪಾತ್ರದ ಶಂಕೆ ಬಗ್ಗೆ ತನಿಖೆ

ಪ್ರಿಯಕರನೊಂದಿಗೆ ಬಾಳಲು ಮಹಿಳೆಯೊಬ್ಬರು ತನ್ನ ಪತಿಯನ್ನೇ ಕತ್ತು ಹಿಸುಕಿ ಕೊಂದ ಘಟನೆಯಲ್ಲಿ ಪ್ರಿಯಕರನ ಪಾತ್ರವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ.

ಮಲಪ್ಪುರಂ ವೆಂಗಾರ ಇರಿಂಗಲ್ಲೂರು ಕೊಟ್ಟೈಕಲ್ ರಸ್ತೆಯ ಯರಮ್ ಪಾಡಿ ಪಿಕೆ ಕ್ವಾರ್ಟರ್ಸ್‌ನಲ್ಲಿ ವಾಸವಾಗಿರುವ ಬಿಹಾರ ಮೂಲದ ಪೂನಂ ದೇವಿ (30) ಎಂಬುವರು ಪತಿ ಸಂಜಿತ್ ಪಾಸ್ವಾನ್ (33) ಅವರನ್ನು ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ಜನವರಿ 31ರ ರಾತ್ರಿ ಈ ಘೋರ ಕೃತ್ಯ ನಡೆದಿದೆ.

ಶುಕ್ರವಾರ ಬಂಧಿತ ಮಹಿಳೆಯನ್ನು ರಿಮಾಂಡ್ ಮಾಡಲಾಗಿದ್ದು, ಮಂಜೇರಿ ಉಪ ಕಾರಾಗೃಹದಲ್ಲಿದ್ದಾರೆ. ಕೊಲೆಯ ಹಿಂದೆ ಮಹಿಳೆಯ ಕೈವಾಡವಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಬಿಹಾರದಲ್ಲಿರುವ ಆಕೆಯ ಪ್ರಿಯಕರನ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ವೆಂಗರಾ ವೃತ್ತ ನಿರೀಕ್ಷಕರು ತಿಳಿಸಿದ್ದಾರೆ.

ಪೂನಂ ದೇವಿ ಮದುವೆಯಾಗಿ ಮಕ್ಕಳಿರುವ ತನ್ನ ಊರಿನ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಈ ಸಂಬಂಧದಿಂದ ಪತ್ನಿಯನ್ನು ದೂರವಿಡಲು ಪಾಸ್ವಾನ್ ತನ್ನ ಪತ್ನಿ ಮತ್ತು ಐದು ವರ್ಷದ ಮಗನನ್ನು ಎರಡು ತಿಂಗಳ ಹಿಂದೆ ತನ್ನ ಕೆಲಸದ ಸ್ಥಳವಾದ ವೆಂಗಾರಾಕ್ಕೆ ಕರೆತಂದಿದ್ದ. ಆದರೂ ಸೀಕ್ರೆಟ್ ಫೋನ್ ಬಳಸಿ ಸಂಬಂಧ ಮುಂದುವರಿಸಿದ್ದಾಳೆ.

ಆಕೆ ಪತಿಯನ್ನು ಕೊಲ್ಲಲು ನಿರ್ಧರಿಸಿದ್ದಳು. ಅವನು ಮಲಗಿದ್ದಾಗ ಅವನ ಕೈಗಳನ್ನು ಟವೆಲ್‌ನಿಂದ ಕಟ್ಟಿ ನಂತರ ತನ್ನ ಸೀರೆಯನ್ನು ಬಳಸಿ ಗಂಟು ಹಾಕಿ ಕತ್ತು ಹಿಸುಕಿ ಸಾಯಿಸಿದ್ದಾಳೆ.

ಅವನನ್ನು ಹಾಸಿಗೆಯಿಂದ ಕೆಳಕ್ಕೆ ತಳ್ಳಿ, ಅವಳು ಅವನ ಸಾವನ್ನು ಖಚಿತಪಡಿಸಿದ ನಂತರ ಅವನ ಕುತ್ತಿಗೆ ಮತ್ತು ಕೈಗಳ ಗಂಟು ಬಿಚ್ಚಿ ಮತ್ತು ಅವನು ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಪಕ್ಕದ ಕೋಣೆಯಲ್ಲಿದ್ದ ಜನರಿಗೆ ತಿಳಿಸಿದಳು. ಅವರ ಸಹಾಯದಿಂದ ತಿರುರಂಗಡಿ ತಾಲೂಕು ಆಸ್ಪತ್ರೆಗೆ ಕರೆತಂದಾಗ ಮುಖ ಮತ್ತು ಹಣೆಯ ಮೇಲೆ ಗಾಯಗಳಾಗಿದ್ದು, ಕತ್ತು ಹಿಸುಕಿದ ಗುರುತು ಕಂಡುಬಂದಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಕತ್ತಿನ ಮೂಳೆ ಮುರಿದಿರುವುದು ಪತ್ತೆಯಾಗಿದೆ. ಪೊಲೀಸರು ಪೂನಂ ದೇವಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.

ಯಕ್ಷಗಾನ ಸಮ್ಮೇಳನ – 2023ರ ಆಮಂತ್ರಣ ಪತ್ರ

ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ಜರುಗಲಿರುವ  ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023ರ ಆಮಂತ್ರಣ ಪತ್ರವನ್ನು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜಿ.ಎಲ್. ಹೆಗಡೆಯವರು 02-02-2023ರಂದು ಸಮ್ಮೇಳನಾಧ್ಯಕ್ಷ ಡಾ. ಎಂ ಪ್ರಭಾಕರ ಜೋಶಿಯವರಿಗೆ ಅಧಿಕೃತವಾಗಿ‌ ನೀಡಿ ಆಮಂತ್ರಿಸಿದರು.

ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಕದ್ರಿ ನವನೀತ ಶೆಟ್ಟಿ, ನಾರಾಯಣ‌‌ ಎಂ. ಹೆಗಡೆ,  ಮುರಲಿ ಕಡೆಕಾರ್ ಹಾಗೂ ನಾಗೇಶ್ ಕಲ್ಲೂರು ಉಪಸ್ಥಿತರಿದ್ದರು.

ಪ್ರಥಮ ಯಕ್ಷಗಾನ ಸಮ್ಮೇಳನದ ಪ್ರಚಾರಾರ್ಥ ಬ್ಯಾನರ್ ಅನಾವರಣ

ಫೆಬ್ರವರಿ 11 ಮತ್ತು 12ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನದ ಪ್ರಚಾರಾರ್ಥವಾಗಿ ಸುಮಾರು 40 ವೃತ್ತಿ ಮೇಳಗಳಲ್ಲಿ ಬ್ಯಾನರನ್ನು ಅಳವಡಿಸಲಾಗುತ್ತಿದ್ದು, ನಿನ್ನೆ (26-01-2023) ಶಿರಿಯಾರದಲ್ಲಿ ಮಂದಾರ್ತಿ ಮೇಳದ ಚೌಕಿಯಲ್ಲಿ ಗಣಪತಿ ದೇವರ ಮುಂಭಾಗದಲ್ಲಿ ಹಾಗೂ ಕಲಾವಿದರ ಸಮ್ಮುಖದಲ್ಲಿ ಬ್ಯಾನರನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ.ಜಿ. ಎಲ್. ಹೆಗಡೆ, ಪ್ರಧಾನ ಸಂಚಾಲಕರಾದ ಪಿ. ಕಿಶನ್ ಹೆಗ್ಡೆ, ಮುರಲಿ ಕಡೆಕಾರ್ ಮತ್ತು ಮೇಳದ ಮೆನೇಜರ್, ನರಾಡಿ ಭೋಜರಾಜ್ ಶೆಟ್ಟಿ ಸಹಿತ ಉಳಿದ ಕಲಾವಿದರು ಉಪಸ್ಥಿತರಿದ್ದರು.

ಕಲಾವಿದರನ್ನು ಉದ್ದೇಶಿಸಿ ಮಾತನಾಡಿದ ಹೆಗಡೆಯವರು ಫೆಬ್ರವರಿ 11 ಮತ್ತು 12ರಂದು ಎಲ್ಲಾ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.

ಇಂದು ಆಟ ಎಲ್ಲೆಲ್ಲಿ? (20.01.2023, ಶುಕ್ರವಾರ)

ಮೇಳಗಳ ಇಂದಿನ (20.01.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮರವಂತೆ ಕಂಚಿಕೇರಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು 

ಕಟೀಲು ಎರಡನೇ ಮೇಳ == ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ ಬಡಗನ್ನೂರು ಪುತ್ತೂರು 

ಕಟೀಲು ಮೂರನೇ ಮೇಳ==  ಶ್ರೀ ರಾಮಾಶ್ರಮ ಕಾಲೇಜು ಮೈದಾನ ಕೊಂಚಾಡಿ 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಕೃಪಾ 7ನೇ ಬ್ಲಾಕ್ ಕೃಷ್ಣಾಪುರ ಕಾಟಿಪಳ್ಳ ಸುರತ್ಕಲ್ 

ಕಟೀಲು ಐದನೇ ಮೇಳ == ಕಿನ್ನಿಮಜಲು ಮಿಜಾರು 

ಕಟೀಲು ಆರನೇ ಮೇಳ == ಕಿಲೆಂಜೂರು 

ಮಂದಾರ್ತಿ ಒಂದನೇ ಮೇಳ  ==  ಕೋಣ್ಕಿ ಮನೆ ನಾಡಗುಡ್ಡೆಯಂಗಡಿ 

ಮಂದಾರ್ತಿ ಎರಡನೇ ಮೇಳ   == ಬೇಗುವಳ್ಳಿ 

ಮಂದಾರ್ತಿ ಮೂರನೇ ಮೇಳ  ==  ತ್ರಿಮೂರ್ತಿ ನಿಲಯ ಬಸವಾನಿ ತೀರ್ಥಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಕೊಂಬೆ ಹಣೆಗೋಡು ಬೇಳಂಜೆ ಹೆಬ್ರಿ 

ಮಂದಾರ್ತಿ ಐದನೇ ಮೇಳ  ==  ಗೋಳಿಯಂಗಡಿ ಕಾರಿಕೊಡ್ಲು ಹೈಕಾಡಿ ಹಿಲಿಯಾಣ 

ಹನುಮಗಿರಿ ಮೇಳ == ಮಾಣಿ ಗಾಂಧಿ ಮೈದಾನ – ಭಾರತ ಜನನಿ 

ಶ್ರೀ ಸಾಲಿಗ್ರಾಮ ಮೇಳ == ಕಾಲ್ತೋಡು ಶ್ರೀ ಮಹಾಲಸಾ ಮಾರಿಕಾಂಬಾ ಜಾತ್ರೆ – ಚಿತ್ರಾ ನಕ್ಷತ್ರ 

ಶ್ರೀ ಪೆರ್ಡೂರು ಮೇಳ == ತುಂಬ್ರಿ – ಪಾವನ ತುಳಸಿ

ಶ್ರೀ ಮಾರಣಕಟ್ಟೆ ಮೇಳ ‘ಎ’ == ಕೆಳಾ ಅರಿಕಲ್ಲು ಕದಳಿ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕೆಳಾ ಅರಿಕಲ್ಲು ಕದಳಿ ಹೊಸೂರು 

ಶ್ರೀ ಪಾವಂಜೆ ಮೇಳ == ಶ್ರೀ ಗುರುರಾಘವೇಂದ್ರ ಭಜನಾ ಮಂದಿರ ಜಯನಗರ ಗುರಿಪಳ್ಳ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ ==  ಶ್ರೀ ವೀರಭದ್ರ ದೇವಸ್ಥಾನ ಕಬೈಲು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕಾಶಿ ವಿಶ್ವೇಶ್ವರ ದೇವಸ್ಥಾನ ಕಾರ್ಕಡ ಸಾಲಿಗ್ರಾಮ 

ಶ್ರೀ ಸೌಕೂರು ಮೇಳ == ಕೋಡಿ – ಈಶ್ವರಿ ಪರಮೇಶ್ವರಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ವರಂಗ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ಮಠ – ಪಂಚಗಿರಿ ಪಂಜುರ್ಲಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಸ್ರೂರು ದೊಟ್ಟೆಕಾಲು ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ವಠಾರ 

ಶ್ರೀ ಹಿರಿಯಡಕ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ದೊಡ್ಡಬೀಸು ಹಳ್ಳಿಹೊಳೆ 

ಶ್ರೀ ಸಿಗಂದೂರು ಮೇಳ == ಶ್ರೀ ಶಂಕರನಾರಾಯಣ ದೇವಸ್ಥಾನ ಆವರ್ಸೆ

ಶ್ರೀ ನೀಲಾವರ ಮೇಳ  == ಕುಕ್ಕೆಹಳ್ಳಿ ಸಣ್ಣಬೀಡು – ನಾಗಕನ್ನಿಕೆ 

ಶ್ರೀ ಗುತ್ಯಮ್ಮ ಮೇಳ, ಶನಿವಾರಸಂತೆ, ಹೊಸಳ್ಳಿ ==  ಹೆದ್ದೂರು ವನಚೇತನ ನಿಸರ್ಗ ಆಶ್ರಮ ಸಭಾಭವನ – ಶ್ರೀಕೃಷ್ಣ ಲೀಲಾಮೃತ  

ಶ್ರೀ ಮೇಗರವಳ್ಳಿ ಮೇಳ ==  ಕೋಟ ಹಂದಟ್ಟು ಶ್ರೀ ದಾನಗುಂದು ದೈವಸ್ಥಾನ ವಠಾರ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಅರಮ ದೇವಸ್ಥಾನ ಪಡುಕರೆ – ದೀಕ್ಷಾ ಸಾಗರಿ 

ಶ್ರೀ ಹಾಲಾಡಿ ಮೇಳ == ಕಾಳಿಕಾಂಬಾ ನಗರ ಆಲೂರು – ಗಗನ ತಾರೆ 

ಶ್ರೀ ಬೋಳಂಬಳ್ಳಿ ಮೇಳ== ಏಳುಜೀತ ಗೋಳಿಬೇರು ಹಾಯಿಗುಳಿ ದೈವದ ಮನೆ ವಠಾರ

ಶ್ರೀ ಬಪ್ಪನಾಡು ಮೇಳ ==  ಶ್ರೀ ನಾಗಕನ್ನಿಕಾ, ಶ್ರೀ ರಕ್ತೇಶ್ವರಿ ವನ ಸೋಯಿಪೆಕಲ್ಲು ಮಜಿಬೈಲ್ – ಭಂಡಾರ ಚಾವಡಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುರಿಯಾಡಿ ಮಂಜಿಪಿಲ – ಭಾಗ್ಯವಂತೆರ್ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಬಿ.ಸಿ.ರೋಡ್ ಅಲೆತ್ತೂರು ಬಾಕಿಮಾರು ಗದ್ದೆ – ಶ್ರೀದೇವಿ ಲಲಿತೋಪಾಖ್ಯಾನ 

ಶ್ರೀ ಬಾಚಕೆರೆ ಮೇಳ == ಚಾರ್ವಕ – ಪುಂಚದ ಪುತ್ಥೊಳಿ 

ಶ್ರೀ ಗೆಜ್ಜೆಗಿರಿ ಮೇಳ == ಏಳಿಂಜೆ ಕುದ್ರಿಪದವು – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ 

ಅಂಬಲಪಾಡಿ ಯಕ್ಷಗಾನ ಮಂಡಳಿಯ 65ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ : ಶ್ರೀ ಲಕ್ಷ್ಮೀಜನಾರ್ದನಯಕ್ಷಗಾನ ಕಲಾಮಂಡಳಿ (ರಿ.) ಅಂಬಲಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಅಂಬಲಪಾಡಿ ಕ೦ಬ್ಳಕಟ್ಟ ಶ್ರೀ ಜನಾರ್ದನ ಮಂಟಪದಲ್ಲಿ 15-01-2023 ರಂದು 65ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರಗಿತು.

ಈ ಸಂದರ್ಭದಲ್ಲಿ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ನಿಟ್ಟೂರು ಶೀನಪ್ಪ ಸುವರ್ಣ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ಕೋಟ ರಾಜಶೇಖರ್ ಹಂದೆ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಆರ್ಗೋಡು ಮೋಹನ್‌ದಾಸ್ ಶೆಣೈ ಇವರಿಗೆ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ ವಿಜಯ ಬಲ್ಲಾಳರು ಪ್ರದಾನ ಮಾಡಿ ಗೌರವಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹಾಯಕ ನಿರ್ದೇಶಕ ಹಾಗೂ ಖ್ಯಾತ ಕಲಾವಿದ ಡಾ. ಕೋಳ್ಯೂರು ರಾಮಚಂದ್ರ ರಾಯರ ಪುತ್ರ ಶ್ರೀ ಶ್ರೀಧರ ಕೆ.ರಾವ್‌ ಅವರು ಮಾತನಾಡಿ ಅಂಬಲಪಾಡಿ ಮಂಡಳಿಯು ಕಳೆದ 65 ವರ್ಷಗಳಿಂದ ಸಾಂಪ್ರದಾಯಿಕ ಯಕ್ಷಗಾನದ ಉಳಿವು-ಬೆಳವಣಿಗೆಗಾಗಿ ತನ್ನನ್ನು ತೊಡಗಿಸಿಕೊಂಡ ಹೆಮ್ಮೆಯ ಸಂಸ್ಥೆಯಾಗಿದೆ. ಉಳಿದ ಹವ್ಯಾಸಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಮಾದರಿಯಾಗಿದೆ ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಭ್ಯಾಗತರಾದ ಡಾ.ರಾಜೇಶ್ ನಾವುಡ ಜಿ. ವಿ.ಮತ್ತು ಶ್ರೀ ಭವ್ಯಕುಮಾರ್ ಶುಭಾಶಂಸನೆಗೈದರು.ಮ೦ಡಳಿಯ ಅಧ್ಯಕ್ಷ ಕೆ.ಅಜಿತ್‌ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್ ಕುಮಾರ್ ವರದಿ ವಾಚಿಸಿದರು.

ಸಮ್ಮಾನಿತರ ಮತ್ತು ಅತಿಥಿಗಳ ಪರಿಚಯವನ್ನು ಮಂಡಳಿಯ ಹಿರಿಯ ಸದಸ್ಯರಾದ ಮುರಲಿ ಕಡೆಕಾರ್ ಮಾಡಿದರು. ಕೋಶಾಧಿಕಾರಿ ಎ.ನಟರಾಜ ಉಪಾಧ್ಯಾಯ ನಿರ್ವಹಣೆಗೈದ ಕಾರ್ಯಕ್ರಮದ ಕೊನೆಯಲ್ಲಿ ಎ.ಪ್ರವೀಣ್‌ ಉಪಾಧ್ಯ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದ ಬಳಿಕ ಕೋಟ ನರಸಿಂಹ ತುಂಗರ ನಿರ್ದೇಶನದಲ್ಲಿ ಮಂಡಳಿಯ ಬಾಲ ಕಲಾವಿದರಿಂದ ಮಾಯಾಪುರಿ-ವೀರಮಣಿ ಕಾಳಗ ಯಕ್ಷಗಾನ ಸೊಗಸಾಗಿ ಪ್ರಸ್ತುತಗೊಂಡಿತು.

“ಶರಸೇತು ಬಂಧನ” ಯಕ್ಷಗಾನ ಪ್ರದರ್ಶನ

ಶ್ರೀ ವಿಶ್ವವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಯಕ್ಷದೇಗುಲ ಬೆಂಗಳೂರು ಇವರ ಸಹಯೋಗದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ವಾರ್ಷಿಕ ಅವಭೃತ ಸ್ನಾನದ ಪ್ರಯುಕ್ತ ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ

ಸುದರ್ಶನ ಉರಾಳರ ಸಂಯೋಜನೆಯಲ್ಲಿ ದಿನಾಂಕ 17-01-2023 ರಂದು ಕೋಟದ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ನಾಗಪ್ಪಯ್ಯ ಹಂದೆ ರಂಗಮ0ಟಪದಲ್ಲಿ ಹಟ್ಟಿಯಂಗಡಿ ರಾಮ ಭಟ್ ವಿರಚಿತ “ಶರಸೇತು ಬಂಧನ” ಯಕ್ಷಗಾನ ಪ್ರದರ್ಶನ ನಡೆಯಿತು.


ಕಲಾವಿದರಾಗಿ ಸುಜಯೀಂದ್ರ ಹಂದೆ, ರಾಘವೇಂದ್ರ ಮಯ್ಯ, ಶಶಿಕಾಂತ ಶೆಟ್ಟಿ, ಮಹಾಬಲೇಶ್ವರ ಹೆಗಡೆ, ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಆದಿತ್ಯ ಹೆಗಡೆ, ಸುದೀಪ ಉರಾಳ್, ಉದಯ, ನವೀನ, ರಾಜು ಪೂಜಾರಿ, ಸುಹಾಸ್ ಇನ್ನೀತರು ಭಾಗವಹಿಸಿದರು.

ಕೋಟ ಸುದರ್ಶನ ಉರಾಳ
ಮೊ. 9448547237